Prerane | ಚಲನೆ ಶಾಶ್ವತವಾದುದಲ್ಲ, ನಿಶ್ಚಲತೆಯು ಚಿರಂತನವಾದುದು - Vistara News

ಧಾರ್ಮಿಕ

Prerane | ಚಲನೆ ಶಾಶ್ವತವಾದುದಲ್ಲ, ನಿಶ್ಚಲತೆಯು ಚಿರಂತನವಾದುದು

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಇಂದು ಸದ್ಗುರು ಜಗ್ಗಿ ವಾಸುದೇವ್‌ ಅವರು ಬದುಕಿನ ಧ್ಯಾನದ ಕುರಿತು ವಿಶ್ಲೇಷಿಸಿದ್ದಾರೆ.

VISTARANEWS.COM


on

Prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸದ್ಗುರು ಜಗ್ಗಿ ವಾಸುದೇವ್‌
ಈ ವಿಶ್ವದಲ್ಲಿ, ಚಲಿಸುವಂತಹ ಎಲ್ಲವನ್ನೂ ಅಂತಿಮವಾಗಿ ಹೇಗಿದ್ದರೂ ನಿಲುಗಡೆಗೆ ತರಲಾಗುತ್ತದೆ, ಆದರೆ ನಿಶ್ಚಲವಾಗಿ ಇರುವಂತದ್ದು ಸದಾಕಾಲಕ್ಕೂ ಹಾಗೆಯೇ ಇರುತ್ತದೆ. ಅಸ್ತಿತ್ವದಲ್ಲಿನ ಯಾವುದೇ ಚಲನೆ ಶಾಶ್ವತವಾದುದಲ್ಲ. ಕೆಲವು ವಿಷಯಗಳು ದೀರ್ಘಕಾಲದವರೆಗೆ ಸಕ್ರಿಯವಾಗಿರಬಹುದು ಆದರೆ ಎಂದಿಗೂ ಶಾಶ್ವತವಾಗಲ್ಲ. ಚಲಿಸುವಂತದ್ದೆಲ್ಲವೂ ತಮ್ಮ ಚಲನೆಯ ಶಕ್ತಿಯನ್ನು ಎಂದಾದರೂ ಬರಿದುಮಾಡಿಕೊಂಡು ನಿಂತುಹೋಗುತ್ತವೆ, ಆದರೆ ನಿಶ್ಚಲವಾಗಿರುವಂತದ್ದು ಎಂದೆಂದಿಗೂ ಹಾಗೇ ಇರುತ್ತದೆ.

ಎಲ್ಲೆಡೆ ಜನಪ್ರಿಯವಾಗಿರುವ, ಮತ್ತು ನಾವು ಧ್ಯಾನವೆಂದು ಕರೆಯುವ ಪ್ರಕ್ರಿಯೆಯು ಆ ಸ್ಥಿರತೆಯ ಕಡೆ ಸಾಗುವುದಕ್ಕೇ ಆಗಿದೆ. ಧ್ಯಾನವು ನಾವು ಅಸ್ತಿತ್ವದ ಜೀವಾಳದಂತಾಗುವ ಸಲುವಾಗಿದೆ. ನೀವು ಹಾಗಾಗಲು ಶ್ರಮಿಸಬೇಕು ಎಂದಲ್ಲ. ಇದು ನೀವು ಬುದ್ಧಿಯಿಂದ ಭೇದಿಸುವಂತದ್ದಲ್ಲ. ಇದು ನೀವು ಮಾಡುವಂತಹ ವಿಷಯವಲ್ಲ, ಏಕೆಂದರೆ ಏನನ್ನಾದರೂ ಮಾಡುವುದೆಂದರೆ ಅದು ಚಲನೆ. ಧ್ಯಾನವೆಂದರೆ ನೀವು ಮೂಲಕ್ಕೆ ಹಿಂದಿರುಗುವುದು ಎಂದರ್ಥ, ಏಕೆಂದರೆ ಆ ನಿಶ್ಚಲವಾದ ಮೂಲದಿಂದಲೇ ಚಲನೆಯು ಹುಟ್ಟಿಕೊಂಡಿರುವುದು, ಆ ನಿಶ್ಚಲವಾದ ಮೂಲದಿಂದಲೇ ಮೇಲ್ಪದರವು ಚಲನೆಯ ಸ್ಥಿತಿಯಲ್ಲಿರುವುದು.

ಮೇಲ್ನೋಟದಲ್ಲಿ ಹಲವಾರು ಬಗೆಯ ಕ್ರಿಯೆಗಳು, ಅನೇಕ ವಿಧವಾದ ಬಣ್ಣಗಳು, ಹಲವು ರೀತಿಯ ತರಂಗಗಳಿವೆ. ಇವು ನಿಶ್ಚಲತೆಗೆ ವಿರುದ್ಧವಾದವಲ್ಲ. ನೀವು ಜೀವನವೆಂದು ಕರೆಯುವ ಹಾಗೂ ತಿಳಿದಿರುವ ಎಲ್ಲವೂ ಸಹ ಕೇವಲ ಮೇಲ್ಮೈಯ ತರಂಗಗಳಷ್ಟೆ, ಆದರೆ ಒಮ್ಮೆ ನೀವು ನಿಶ್ಚಲತೆಯ ರುಚಿಯನ್ನು ಕಂಡುಕೊಂಡರೆ, ನೀವು ಮೇಲ್ಗಡೆ ಆಡಲು ಬಯಸಿದರೆ ಆಡಬಹುದು; ಇಲ್ಲದಿದ್ದರೆ ನಿಶ್ಚಲತೆಯ ಮಡಿಲಿಗೆ ಮರಳಬಹುದು. ನಿಮಗೆ ಜೀವನದ ತಿರುಳು ತಿಳಿದಿಲ್ಲದಿದ್ದರೆ, ನೀವು ಆ ನಿಶ್ಚಲ ತಿರುಳಿನ ರುಚಿಯನ್ನೆಂದಿಗೂ ಸವಿಯದೇ ಇದ್ದರೆ, ನಿಮ್ಮ ಜೀವನವು ನಿರಂತರವಾಗಿ ಒಂದು ರೀತಿಯ ಅನಿಯಂತ್ರಿತ ಚಲನೆಯಲ್ಲಿರುತ್ತದೆ. ನಿಮ್ಮ ಜೀವನವು ಇದೀಗ ಎಷ್ಟೇ ರೋಮಾಂಚನಕಾರಿ ಎಂದು ನಿಮಗನಿಸಿದರೂ, ಒಂದು ದಿನ ನೀವು ಅದರಿಂದ ಬೇಸತ್ತು ಹೋಗುತ್ತೀರಿ.

Prerane

ನೀವು ಬೇಸತ್ತುಹೋದ ಕಾರಣ ನೀವು ಜೀವನದಿಂದ ದೂರಾಗದೇ ಇರಲಿ ಎಂದು ನಾನು ಆಶಿಸುತ್ತೇನೆ. ಜೀವನದಿಂದ ಮುಕ್ತರಾಗಬೇಕಾಗಿರುವುದು ಜೀವನದ ಪ್ರಕ್ರಿಯೆಯಿಂದ ನೀವು ಮಾಗಿ ಹಣ್ಣಾಗಿದ್ದರೆ. ಒಂದು ಹಣ್ಣು ಚೆನ್ನಾಗಿ ಮಾಗಿದ ನಂತರವೇ ಮರದಿಂದ ಕೆಳಕ್ಕೆ ಬೀಳಬೇಕೇ ಹೊರತು ಬೇಸತ್ತು ಉದುರಿಹೋಗಬಾರದು; ಏಕೆಂದರೆ ಹಣ್ಣು ಪಕ್ವವಾದಾಗ ಅದರ ಜೊತೆ ಸವಿಯೂ ಬರುತ್ತದೆ, ಮತ್ತು ಅದರ ಜೊತೆ ಹೊಸ ಸಾಧ್ಯತೆಯೂ ಸಹ ಬರುತ್ತದೆ. ನೀವು ಜೀವನದಿಂದ ಬೇಸತ್ತು ಬಿದ್ದುಹೋದರೆ, ಅದು ಜೀವನದಿಂದ ಮುಕ್ತವಾಗುವ ಸರಿಯಾದ ಮಾರ್ಗವಲ್ಲ.

ಹಾಗಾಗಿ ಧ್ಯಾನವು ಒಂದು ಆಯ್ಕೆಯಲ್ಲ, ಮತ್ತದು ಒಬ್ಬರ ಜೀವನದಲ್ಲಿ ಮಾಡಬಹುದಾದ ರಂಜನೀಯ ವಿಷಯವಲ್ಲ. ನಿಮಗೆ ನಿಶ್ಚಲವಾಗಿರುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ನೀವು ಕೇವಲ ಅಸ್ವಸ್ಥರಾಗಿರಬಹುದು ಅಷ್ಟೆ. ಬೇರೆ ದಾರಿಯೇ ಇಲ್ಲ. ನಿಮ್ಮ ಅನಾರೋಗ್ಯಕ್ಕೆ ವಿವಿಧ ಹೆಸರುಗಳನ್ನು ನೀವು ಇಟ್ಟುಕೊಂಡಿರಬಹುದು. ನಿಮಗಿದು ಗೊತ್ತೇ? 17 ನೇ ಶತಮಾನದಲ್ಲಿ ಕ್ಷಯರೋಗವನ್ನು ಹೊಂದುವುದು ಇಂಗ್ಲೆಂಡ್‌ನಲ್ಲಿ ಫ್ಯಾಷನ್ ಆಗಿತ್ತು? ನಿಜವಾಗಿಯೂ! ಅದೇ ರೀತಿ, ಇಂದು ಇತರ ಅನೇಕ ಕಾಯಿಲೆಗಳನ್ನು ಹೊಂದಿರುವುದು ಫ್ಯಾಷನ್ ಆಗಿಹೋಗಿದೆ. ಅದು ಎಷ್ಟೇ ನೋವು ಮತ್ತು ಯಾತನೆಯನ್ನು ಕೊಟ್ಟರೂ ಅದು ಫ್ಯಾಷನ್ ಆಗಿಬಿಟ್ಟಿದೆ. ಹಾಗೆಂದ ಮಾತ್ರಕ್ಕೆ ಕಾಯಿಲೆಗಳು ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ನಿಮಗಿರುವ ಆಯ್ಕೆಗಳು ಇಷ್ಟೆ – ಒಂದೋ ನೀವು ನಿಶ್ಚಲವಾಗಿರುವುದನ್ನು ಕಲಿಯುವುದು ಅಥವಾ ನೀವು ಒಂದಲ್ಲಾ ಒಂದು ರೀತಿಯ ಅನಾರೋಗ್ಯದಿಂದಿರುವುದು.

ಮನುಷ್ಯರಿಗೆ ನಿಶ್ಚಲವಾಗಿರುವುದು ಹೇಗೆಂದು ತಿಳಿದಿಲ್ಲದ ಕಾರಣ ಅವರು ರೋಗಗ್ರಸ್ಥರಾಗಿದ್ದಾರೆ. ಅವರಿಗೆ ನಿಶ್ಚಲವಾಗಿರುವುದು ಹೇಗೆಂದು ತಿಳಿದಿದ್ದರೆ, ದೇಹವು ಕೊಳೆಯುತ್ತಿದ್ದರೂ ಸಹ ಅವರು ಅಸ್ವಸ್ಥನಾಗಿರುವುದಿಲ್ಲ. ಆದ್ದರಿಂದ ನಿಶ್ಚಲವಾಗಿರುವುದು ನೀವು ಮಾಡಬಹುದಾದ ಒಂದು ಮೋಹಕವಾದ ಆಯ್ಕೆಯಲ್ಲ. ಅದು ಜೀವನದ ಮೂಲಭೂತ ಅಗತ್ಯತೆ.

PRERANE

ನಾವು ಜೀವನ ಮತ್ತು ಜೀವನದ ಪ್ರಕ್ರಿಯೆಯನ್ನು ಹತ್ತಿರದಿಂದ ಗಮನಿಸಿದರೆ, ಅದರೊಳಗೆ ಆಳವಾಗಿ ಇಳಿಯುವುದು ಒಂದು ನೈಸರ್ಗಿಕವಾದ ಪ್ರಕ್ರಿಯೆಯಾಗುತ್ತದೆ, ಮತ್ತು ಅದರ ಮೂಲವನ್ನು ಸ್ಪರ್ಶಿಸುವುದೇ ಯಶಸ್ಸು. ನಿಮಗೆ ವೈಫಲ್ಯವೇ ಜೀವನದ ಆದರ್ಶವಾಗಿದ್ದರೆ, ವೈಫಲ್ಯವು ಫ್ಯಾಷನ್ ಆಗಿದ್ದರೆ, ನೀವು ಜೀವನವನ್ನು ನಡೆಸದೇ ಇರುವುದೇ ಉತ್ತಮ. ಹಾಗಿದ್ದಾಗ ಅದನ್ನು ಮುನ್ನೆಡೆಸುವುದು ಯೋಗ್ಯವಾಗಿರುವುದಿಲ್ಲ; ಏಕೆಂದರೆ ಎಲ್ಲವೂ ಕೂಡ, ಒಂದು ಸಣ್ಣ ಇರುವೆಯೂ ಕೂಡ, ತನ್ನ ಜೀವನದಲ್ಲಿ ಅದರದ್ದೇ ಆದ ತಿಳುವಳಿಕೆಯ ಪ್ರಕಾರ ಯಶಸ್ವಿಯಾಗಲು ಪ್ರಯತ್ನಿಸುತ್ತಿದೆ. ಇಲ್ಲಿ ಸೋಲನ್ನು ಹುಡುಕುತ್ತಿರುವ ಯಾವುದೇ ಮನುಷ್ಯನಿಲ್ಲ. ತಾನು ಏನಾಗಿರುವನೋ ಅದೆಲ್ಲದಕ್ಕೂ ಸಂಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಂಡಾಗ ಮಾತ್ರವೇ ಒಬ್ಬ ಮನುಷ್ಯ ಯಶಸ್ವಿಯಾಗುತ್ತಾನೆ ಮತ್ತು ಅವನು ಧ್ಯಾನಸ್ಥನಾಗದೆಯೇ ಅದೆಂದಿಗೂ ಸಂಭವಿಸುವುದಿಲ್ಲ.

ನಾನು ಧ್ಯಾನಸ್ಥನಾಗುವುದು ಎಂದು ಹೇಳಿದಾಗ ಅದು ಅವಶ್ಯವಾಗಿ ಒಂದು ಸಂಘಟಿತವಾದ, ಸೂಚನೆಗಳಿಂದ ಕೂಡಿದ ಧ್ಯಾನ ಪ್ರಕ್ರಿಯೆಯೇ ಆಗಿರಬೇಕು ಎಂದು ಹೇಳುತ್ತಿಲ್ಲ. ಇಲ್ಲಿ ಮುಖ್ಯವಾದ ವಿಷಯವೆಂದರೆ, ನೀವು ಧ್ಯಾನಸ್ಥರಾಗಬೇಕು ಎನ್ನುವುದು. ಇಲ್ಲದೇ ಹೋದರೆ ನೀವು ನಿಮ್ಮ ಅಸ್ತಿತ್ವದ ಸ್ವರೂಪವನ್ನೆಂದಿಗೂ ತಿಳಿಯುವುದಿಲ್ಲ. ನೀವು ಯಾರೆಂಬುದರ ಸ್ವರೂಪವೇ ನಿಮಗೆ ತಿಳಿಯದಿದ್ದರೆ, ಅದಕ್ಕೆ ಸಂಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ | Prerane | ನಿಮ್ಮ ಸ್ವಂತಿಕೆ ನಿಮಗಿರಲಿ, ಅದುವೇ ನಿಮಗೆ ದಾರಿಯಾಗಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Pretha Maduve: ವಧುವಿನ ಆತ್ಮಕ್ಕೆ ದೊರೆತ ವರ, ಆಷಾಢದಲ್ಲಿ ʻಪ್ರೇತ ಮದುವೆ’ ಫಿಕ್ಸ್

Pretha Maduve: ಜಾಹೀರಾತು ಹಾಗೂ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ.

VISTARANEWS.COM


on

pretha maduve
Koo

ಮಂಗಳೂರು: ಕರ್ನಾಟಕ ಕರಾವಳಿಯ (karnataka Coastal) ತುಳುನಾಡಿನ (Tulunadu) ವಿಶಿಷ್ಟ ಆಚರಣೆಯಾದ ʼಪ್ರೇತ ಮದುವೆʼಗೆ (Pretha Maduve) ಸಜ್ಜಾಗಿದ್ದ ವಧುವಿಗೆ (bride) ವರ (groom) ಹಾಗೂ ದಿನಾಂಕ ಫಿಕ್ಸ್‌ ಆಗಿದೆ. ಆಷಾಢ (ಆಟಿ) ತಿಂಗಳಲ್ಲಿ ಮದುವೆ ನಡೆಯಲಿದೆ. ಇದು ಎರಡು ʼಆತ್ಮಗಳʼ (Souls) ಮದುವೆಯಾಗಿದ್ದು, ಸಾಂಪ್ರದಾಯಿಕ ಜಾನಪದ (Folk) ರೀತಿಯಲ್ಲಿ ನಡೆಯುತ್ತದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಧುವೊಬ್ಬಳಿಗೆ ʼವರ ಬೇಕಾಗಿದೆ’ ಎಂಬ ಜಾಹೀರಾತು ಭಾರಿ ಸುದ್ದಿಯಾಗಿತ್ತು. ಈ ʼವಧುʼ ಒಂದು ವಾರದ ಮಗುವಾಗಿದ್ದಾಗಲೇ ತೀರಿಕೊಂಡಿದ್ದಳು. ಇದು ನಡೆದು 30 ವರ್ಷಗಳು ಆಗಿವೆ. ಜ್ಯೋತಿಷ್ಯ ಪ್ರಕಾರ ನೋಡಿದಾಗ, ಹೆಣ್ಣುಮಗಳ ಆತ್ಮಕ್ಕೆ ವಿವಾಹ ಆಗಬೇಕು ಎಂದು ಕಂಡುಬಂದಿತ್ತು ಎನ್ನಲಾಗಿದೆ. ಈ ಮಗುವಿಗೆ ನಾಮಕರಣವೂ ಆಗಿರಲಿಲ್ಲ. ನಂತರ ಆಕೆಗೆ “ಪ್ರೇತ ಮದುವೆ’ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತು ಜಾಹೀರಾತು ಪ್ರಕಟಿಸಲಾಗಿತ್ತು.

Pretha Maduve

ಇದೀಗ ಈ ವಧುವಿಗೆ ಕಾಸರಗೋಡು ಸಮೀಪದ ಬಾಯಾರು ಕಡೆಯ “ವರ’ನೊಬ್ಬ ನಿಗದಿಯಾಗಿದ್ದಾನೆ. ಮುಂದಿನ “ಆಟಿ’ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ. “ಸುಮಾರು 30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಸದ್ಯ ಬೇಕಾಗಿದೆ” ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಕರೆ ಅದಾಗಿತ್ತು. ಬಳಿಕ ಸರಿಹೊಂದುವ ಸುಮಾರು 30ಕ್ಕೂ ಅಧಿಕ ಸಂಬಂಧದವರು ಸಂಪರ್ಕಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ವರ ಅಂತಿಮಗೊಳಿಸುವ ಬಗ್ಗೆ ಸಲಹೆ ಬಂದಿತ್ತು.

ಪ್ರೇತ ಮದುವೆಯಲ್ಲಿ, ಜೀವಂತ ಇರುವಾಗ ನಡೆಯದಿದ್ದ ಮದುವೆ ಕ್ರಮಗಳನ್ನು ಎರಡೂ ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತವೆ. ಮುಂದಿನ ರವಿವಾರ “ಪ್ರೇತ ವರ’ನ ಕಡೆಯವರು “ವಧು’ವಿನ ಮನೆಗೆ ಬರಲಿದ್ದಾರೆ. ಬಳಿಕ ನಾವು ಅವರ ಮನೆಗೆ ಹೋಗುತ್ತೇವೆ. ಬಳಿಕ ನಿಶ್ಚಿತಾರ್ಥ. ಆಟಿಯಲ್ಲಿ ಮದುವೆ ನಿಗದಿಯಾಗಿದೆ ಎನ್ನುತ್ತಾರೆ ಪುತ್ತೂರು ನಿವಾಸಿ.

ಜಾಹೀರಾತು ಹಾಗೂ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ. ವಿವಿಧ ಸಮಾಜದ ಬಂಧುಗಳು ಪ್ರತಿಕ್ರಿಯಿಸಿದ್ದಾರೆ. ನಮ್ಮ ಮನೆಗೆ ಪ್ರೇತ ವರ ಬೇಕಾಗಿದ್ದ ಹಾಗೆಯೇ ನೂರಾರು ಮನೆಗೆ ವಧು-ವರ ಬೇಕಾಗಿದ್ದ ವಿಚಾರ ಆ ಸಂದರ್ಭ ಬೆಳಕಿಗೆ ಬಂತು. ಈ ಕುರಿತು ಜಾಗೃತಿಯೊಂದು ಮೂಡಿದಂತಾಗಿದೆ ಎನ್ನುತ್ತಾರೆ ಸಂಬಂಧಪಟ್ಟ ಮನೆಯವರು.

ಇದನ್ನೂ ಓದಿ: Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

Continue Reading

ಬೆಂಗಳೂರು

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Bengaluru News: ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌.ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ ತಿಳಿಸಿದ್ದಾರೆ.

VISTARANEWS.COM


on

Sri Vedavyasa Jayanti programme at Bengaluru
Koo

ಬೆಂಗಳೂರು: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮವಾಗುತ್ತದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ (Bengaluru News) ಹೇಳಿದರು‌.

ಬೆಂಗಳೂರಿನ ಗಿರಿನಗರದ ಭಂಡಾರಕೇರಿ ಮಠದಲ್ಲಿ ಗುರುವಾರ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾವಿದ್ಯಾ ವಿಕಾಸ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಗುರು ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವ, ಶ್ರೀ ಮಾಧ್ವ ರಾದ್ಧಾತ ಸಂವರ್ಧಕ ಸಭಾದ 81ನೇ ಅಧಿವೇಶನ, ಶ್ರೀ ವೇದವ್ಯಾಸ ಜಯಂತಿ ಸರಣಿಯ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ ವಿಷಯ ಕುರಿತು ಪ್ರೌಢ ಉಪನ್ಯಾಸ ನೀಡಿದ ಅವರು, ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌. ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಹೇಳಿದರು.

ಹರಿಕಥಾಮೃತಸಾರವನ್ನು ಓದಿ ನಾವು ವಿಶಾಲರಾಗಬೇಕು. ಆ ಮೂಲಕ ದೊಡ್ಡವರಾಗಬೇಕು. ಬದುಕನ್ನು ಹಸನ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಅವರು ಬ್ಯಾಗವಟ್ಟಿಯ ನರಸಿಂಹ ದಾಸ ಕುಲಕರ್ಣಿ ಅವರು ನಡೆಸಿದ ಸಮಾಜಮುಖಿ ಚಟುವಟಿಕೆಗಳನ್ನು ವಿವರಿಸಿದರು.

ಮಾನವಿ ಜಗನ್ನಾಥದಾಸರ ಮನೆಯೇ ಮಂದಿರವಾದ ಕಥೆಯನ್ನು ಸುಂದರವಾಗಿ ನಿರೂಪಿಸಿದರು. ಹರಿಕಥಾಮೃತಸಾರ ರಚನೆ ಆದಂತಹ ಸಂದರ್ಭ, ಹಿರಿಯರು ಅವರ ಮೇಲೆ ಮಾಡಿದಂತಹ ಕೃಪೆ ಮತ್ತು ಜಗನ್ನಾಥದಾಸರ ಕಾರುಣ್ಯಗಳನ್ನು ಸಮರ್ಥವಾಗಿ ಅಪ್ಪಣ್ಣಾಚಾರ್ಯರು ವಿವರಿಸಿದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಸಂಜೆ ಮಹಾಭಾರತ ಕುರಿತು ವಿವಾದ-ಸಂವಾದ ಕಾರ್ಯಕ್ರಮ ನಡೆಯಿತು. ವಿದ್ವಾನ್ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

Continue Reading

ಕರ್ನಾಟಕ

Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

Udupi News: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಹಾಗೂ ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ ಎಂದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Udupi
ಉಡುಪಿ ಶ್ರೀ ಭಂಡಾರಕೇರಿ ಮಠದ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ದಾಮೋದರಾಚಾರ್ಯ, ವಿದ್ವಾನ್ ಮಧ್ವೇಶ ನಡಿಲ್ಲಾಯ, ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ.
Koo

ಉಡುಪಿ: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ (Udupi News) ತಿಳಿಸಿದ್ದಾರೆ.

ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಮೇ 20ರಂದು ಆಯೋಜಿಸಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಅಭಿನಂದನೆ, ಶ್ರೀ ವಿದ್ಯೇಶತೀರ್ಥರ 70ನೇ ವರ್ಧಂತಿ, ವಿದ್ವಾಂಸರಿಂದ ವಾಕ್ಯಾರ್ಥ ಗೋಷ್ಠಿ, ಶೋಭಾಯಾತ್ರೆ, ನರಸಿಂಹ ಮಂತ್ರಹೋಮವೂ ನೆರವೇರಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪ್ರಶಸ್ತಿಗೆ ಭಾಜನರಾದವರ ಪರಿಚಯ ಹೀಗಿದೆ:

ವಿದ್ವಾನ್ ದಾಮೋದರಾಚಾರ್ಯ

ಪ್ರತಿ ದಿನವೂ ಶಾಸ್ತ್ರ ವಿದ್ಯಾ ಅಧ್ಯಯನ, ಅಧ್ಯಾಪನ, ಅಗ್ನಿಹೋತ್ರ ನಡೆಸುತ್ತಾ, ಸನಾತನ ಭಾರತೀಯ ಪರಂಪರೆಯನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸಂಭ್ರಮದಿಂದಲೇ ನಿರ್ವಹಿಸುತ್ತಿರುವವರು ಈರೋಡಿನ ವಿದ್ವಾನ್ ದಾಮೋದರಾಚಾರ್ಯ. ವಿದ್ವಾನ್ ಪದ್ಮನಾಭಾಚಾರ್ಯ-ಜಾನಕೀಬಾಯಿ ಅವರ ಪುತ್ರರಾದ ಇವರು ತಂದೆಯಿಂದಲೇ ವ್ಯಾಕರಣ, ವೇದ, ಶಾಸ್ತ್ರಗಳನ್ನು ಕಲಿತರು. ಪವಿತ್ರ ಕ್ಷೇತ್ರ ರಂಗದ ಬಳಿಯ ಸಿರುಗಮಣಿ ಎಂಬ ಗ್ರಾಮದಲ್ಲಿ ತಂದೆಯವರೇ ಪ್ರಾರಂಭಿಸಿದ ವೇದರಕ್ಷಣ ವೇದವ್ಯಾಸ ಗುರುಕುಲದಲ್ಲಿ 12 ವರ್ಷ ವೇದ ಅಧ್ಯಯನ ಮಾಡಿದವರು. ನಂತರ ಕಾಂಚೀಪುರದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಂತ, ಘನ, ಐತರೇಯ ಬ್ರಾಹ್ಮಣ, ಗೃಹ್ಯಸೂತ್ರಗಳ ಸಹಿತ ವೇದಾಧ್ಯಯನ ನಡೆಸಿದರು.

ನಂತರ ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಹಿರಿಯ ವಿದ್ವಾಂಸ ಮಾಹುಲಿ ಗೋಪಾಲಾಚಾರ್ಯ ಮತ್ತು ವಿದ್ಯಾಸಿಂಹಾಚಾರ್ಯರ ಶಿಷ್ಯತ್ವ ಪಡೆದು 8 ವರ್ಷಗಳ ಕಾಲ ದ್ವೈತ ವೇದಾಂತ ಅಧ್ಯಯನ ನಡೆಸಿದರು. ಬಹು ವಿಶೇಷ ಎಂದರೆ ಇವರು ನಿತ್ಯ ಅಗ್ನಿಹೋತ್ರಿಗಳು, ಸೋಮಯಾಜಿಗಳು. ವಾಜಪೇಯ ಮಹಾಯಾಗ ಮಾಡಲು ಸಿದ್ಧರಾಗಿರುವ ಸಿದ್ಧಪುರುಷರು. ತಮ್ಮ ತಂದೆಯರು ಸ್ಥಾಪಿಸಿದ ಗುರುಕುಲವನ್ನು 2000ರಿಂದ ಈರೋಡಿನಲ್ಲಿ ಮುನ್ನಡೆಸುತ್ತಿರುವುದು ಬಹು ವಿಶೇಷ. ಚೆನ್ನೈನಲ್ಲಿರುವ ಶ್ರೀ ಕಾಂಚಿಪುರಂ ವೇದ ರಕ್ಷಣಾ ನಿಧಿ ಟ್ರಸ್ಟ್ ಸಹಾಯ ಪಡೆದು ಗುರುಕುಲವನ್ನು ಸುವ್ಯವಸ್ಥಿತ ವಿದ್ಯಾಕೇಂದ್ರ ಮಾಡಿರುವುದು ಹೆಮ್ಮೆಯ ವಿಚಾರ. ಪ್ರಸ್ತುತ ಎಂಟನೇ ತಂಡದ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ದಾಮೋದರಾಚಾರ್ಯ ನಾಡಿನ ಹಿರಿಮೆ. ಅಪರೂಪದಲ್ಲಿ ಅನುರೂಪ ವ್ಯಕ್ತಿತ್ವ ಹೊಂದಿದವರು.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ವಿದ್ವಾನ್ ಮಧ್ವೇಶ ನಡಿಲ್ಲಾಯ

ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥರ ಶಿಷ್ಯರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಈ ಯುವ ಪ್ರತಿಭೆ, ವಿದ್ಯಾರ್ಥಿ ದಿಸೆಯಲ್ಲಿಯೇ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 7 ಚಿನ್ನದ ಪದಕ, ತಿರುಪತಿಯ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 3 ಚಿನ್ನದ ಪದಕ, ರಾಜ್ಯ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 11 ಚಿನ್ನದ ಪದಕ ಪಡೆದ ಜ್ಞಾನ ಚೇತನ. 2021 ರಲ್ಲಿ ವಿವಿಧ ಮಾಧ್ವ ಪೀಠಾಧಿಪತಿಗಳ ಸಮ್ಮುಖ ಸಮಗ್ರ ಶ್ರೀಮನ್ ನ್ಯಾಯಸುಧಾ ಪರೀಕ್ಷೆ ನೀಡಿ ‘ಸುಧಾ ಪಂಡಿತ’ ಕೀರ್ತಿಗೆ ಭಾಜನರಾದವರು. ಸದ್ಯ ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಾಪಕರಾಗಿ ಮಧ್ವೇಶ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ ಅವರು ಶ್ರೀಧರಾಚಾರ್ಯ ಮತ್ತು ಧನ್ಯಾ ಅವರ ಪುತ್ರ. ದ್ವಿತೀಯ ಮಂತ್ರಾಲಯ ಹೊನ್ನಾಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸೇವೆ ಮಾಡಿ ವಿಶೇಷ ಅನುಗ್ರಹಿತರಾದ ಇವರು ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ 14 ವರ್ಷ ಅಧ್ಯಯನ ಮಾಡಿದರು. 2012 ರಲ್ಲಿ ಧಾರವಾಡದಲ್ಲಿ ಸುಧಾ ಪರೀಕ್ಷೆ ನೀಡಿ ಸುಧಾ ಪಂಡಿತರೆಂಬ ಕೀರ್ತಿಗೆ ಭಾಜನರಾದವರು.

ಇದನ್ನೂ ಓದಿ: Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

2015ರಲ್ಲಿ ಬೆಂಗಳೂರಿನಲ್ಲಿ ಸಮಗ್ರ ಶ್ರೀಮನ್ ನ್ಯಾಯ ಸುಧಾ ಎಂಬ ಕಠಿಣತಮ ಪರೀಕ್ಷೆ, 2017ರಲ್ಲಿ ಏಕಕಾಲದಲ್ಲಿ ವ್ಯಾಸತ್ರಯಗಳ ಪರೀಕ್ಷೆ ನೀಡಿದ ಪ್ರತಿಭಾ ಪುಂಜ. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿದ್ದ ವಿದ್ವತ್ ಸಭೆಯಲ್ಲಿ ಶ್ರೀ ಮನ್ ನ್ಯಾಯಸುಧಾಚಾರ್ಯ ಹಾಗೂ ವ್ಯಾಸತ್ರಯಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಯುವ ಚೇತನ. ತಿರುಪತಿಯಲ್ಲಿ ಖ್ಯಾತ ವಿದ್ವಾಂಸ ದೇವನಾಥಾಚಾರ್ಯರ ಬಳಿ ತರ್ಕ ಮತ್ತು ಮೀಮಾಂಸಾ ಶಾಸ್ತ್ರಗಳ ಅಧ್ಯಯನ ಮಾಡಿ, 2009- 2010ರಲ್ಲಿ ತೆನಾಲಿ ಪರೀಕ್ಷೆಯಲ್ಲೂ ಜಯಭೇರಿ ಬಾರಿಸಿದ ಜ್ಞಾನವಂತ. ವಯಸ್ಸು ಚಿಕ್ಕದಿದ್ದರೂ ಅಧ್ಯಯನ ಮತ್ತು ಅಧ್ಯಾಪನದಲ್ಲಿ ವಿಶೇಷ ಶ್ರದ್ಧೆ ಮತ್ತು ಆಸಕ್ತಿ ಹೊಂದಿದ್ದು, ಗುರುಸೇವೆಯಲ್ಲೇ ಪರಮ ಸುಖ ಕಾಣುವ ಸಾಧಕರಾಗಿರುವುದು ಗಮನಾರ್ಹ. ಪ್ರಸ್ತುತ ಉತ್ತರಾದಿ ಮಠದ ಸುಧಾ ಗ್ರಂಥ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಂತಿಮ ಹಂತದ ಪರೀಕ್ಷೆಗಾಗಿ ಉನ್ನತ ಮಟ್ಟದ ತರಬೇತಿ ನೀಡುವ ಗುರುತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವುದು ವಿಶೇಷ.

Continue Reading

ಬೆಂಗಳೂರು

Bengaluru News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ; ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

Bengaluru News: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು. ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.

VISTARANEWS.COM


on

Sri Vedavyasa Jayanti Madhva Raddhanta Samvardhak Sabha 81st session at Bengaluru
Koo

ಬೆಂಗಳೂರು: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ನಗರದ (Bengaluru News) ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ವ್ಯಾಸ ಮತ್ತು ದಾಸ ಸಾಹಿತ್ಯದಲ್ಲಿರುವ ವಿಶೇಷ ಜ್ಞಾನದ ಅರಿವು ಮೂಡಿದರೆ ಬದುಕು ಸಾರ್ಥಕವಾಗುತ್ತದೆ ಎಂದರು. ವ್ಯಾಸ ಸಾಹಿತ್ಯ ಪ್ರಖರ ಸೂರ್ಯನಂತೆ. ನಾವು ಅದರ ಪ್ರಭೆಯನ್ನು ನೇರವಾಗಿ ಪಡೆಯಲು ಅಸಾಧ್ಯ. ಆದರೆ ಅದೇ ಕಿರಣ ಚಂದ್ರಮಂಡಲದ ಮೇಲೆ ಬಿದ್ದು, (ದಾಸ ಸಾಹಿತ್ಯವಾಗಿ) ನಮಗೆ ಬಂದರೆ ಅದು ಸಂತೋಷ, ನೆಮ್ಮದಿ ಮತ್ತು ಸುಖವನ್ನು ನೀಡಬಲ್ಲದು. ಆದ ಕಾರಣ ಈ ಸಭಾದಲ್ಲಿ ದಾಸ ಸಾಹಿತ್ಯದ ಚಿಂತನ- ಮಂಥನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ, ಮಠದ ಹಿರಿಯ ಸ್ವಯಂಸೇವಕರಾದ ಗೋಪಾಲಕೃಷ್ಣ ಇತರರು ಇದ್ದರು. ಸಂಜೆ ವಾಲ್ಮೀಕಿ ರಾಮಾಯಣದ ವಿವಾದ-ಸಂವಾದದಲ್ಲಿ ವಿದ್ವಾಂಸರಾದ ಕೆ. ಕೃಷ್ಣರಾಜ ಭಟ್ ಮತ್ತು ಬಂಡಿ ಶ್ಯಾಮಾಚಾರ್ಯ ಪಾಲ್ಗೊಂಡಿದ್ದರು. ಮೇ 21ರವರೆಗೆ ನಿತ್ಯ ಶ್ರೀ ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನೆರವೇರಲಿದೆ.

ಏನೇನು ಕಾರ್ಯಕ್ರಮ?

ಮೇ 16ರಂದು ಬೆಳಗ್ಗೆ 9ಕ್ಕೆ ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ ಅವರು ‘ ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ’ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಕ್ಕೆ ಪಂಡಿತರಾದ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಮಹಾಭಾರತ- ವಾದ- ಸಂವಾದ- ನಡೆಸಿಕೊಡಲಿದ್ದಾರೆ.

ಮೇ 17ರಂದು ಬೆಳಗ್ಗೆ 9ರಿಂದ 12-ಸಂಜೆ 4ರಿಂದ 6ರವರೆಗೆ ವಾಕ್ಯಾರ್ಥ ಗೋಷ್ಠಿ ಸಂಪನ್ನಗೊಳ್ಳಲಿದೆ. ವಿದ್ವಾನ್ ಪಿ.ಎಸ್. ಶೇಷಗಿರಿ ಆಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸರಾದ ವೀರನಾರಾಯಣ ಪಾಂಡುರಂಗಿ, ಸತ್ತಿಗೇರಿ ವಾಸುದೇವ, ಕಟ್ಟಿ ನರಸಿಂಹ ಆಚಾರ್ಯ, ಪ್ರಹ್ಲಾದಾಚಾರ್ಯ ಜೋಷಿ, ಸುಧೀಂದ್ರಾಚಾರ್ಯ, ರಂಗನಾಥ ಗಣಾಚಾರಿ, ನಾಗರಾಜಾಚಾರ್ಯ, ಗುರುರಾಜ ಕಲ್ಕೂರ, ಶ್ರೀನಿವಾಸಮೂರ್ತಿ ಮತ್ತು ಮಾತರಿಶ್ವಾಚಾರ್ಯ ಭಾಗವಹಿಸಲಿದ್ದಾರೆ. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

ಮೇ 18ರಂದು ವರ್ಧಂತಿ ಮಹೋತ್ಸವ

ಮೇ 18ರಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರ 70ನೇ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಕ್ಕೆ ವಿವಿಧ ಹೋಮ, ಹರಿಕಥಾಮೃತ ಸಾರ ಪಾರಾಯಣ, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಎಚ್.ವಿ. ಸತ್ಯನಾರಾಯಣರಿಂದ ಉಪನ್ಯಾಸ (ವಾದಿರಾಜ ವಿರಚಿತ ವೈಕುಂಠ ವರ್ಣನೆ), ಸಂಜೆ ವಿವಿಧ ರಂಗದ ಗಣ್ಯರಿಗೆ ಸನ್ಮಾನವಿದೆ.

ಮೇ 19ರಂದು ಶ್ರೀ ವಿದ್ಯಾಮಾನ್ಯರ ಪುಣ್ಯಸ್ಮರಣೆ

ಉಡುಪಿ ಪಲಿಮಾರು- ಭಂಡಾರಕೇರಿ ಉಭಯ ಮಠದ ಪೀಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರ ಪುಣ್ಯಸ್ಮರಣೆ ಮೇ 19ರಂದು ನೆರವೇರಲಿದೆ. ಬೆಳಗ್ಗೆ 9ಕ್ಕೆ ಶ್ರೀ ವಿದ್ಯೇಶ ವಿಠಲಾಂಕಿತ ಕೃತಿಗಳ ಚಿಂತನ- ಮಂಥನ ನಡೆಯಲಿದ್ದು, ಹಲವು ವಿದ್ವಾಂಸರು ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ಶ್ರೀ ವಿದ್ಯೇಶತೀರ್ಥರಿಂದ ಅನುಗ್ರಹ ಸಂದೇಶವಿದೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

ಮೇ 20ರಂದು ಶೋಭಾಯಾತ್ರೆ- ಪೇಜಾವರ ಶ್ರೀ ಸಾನ್ನಿಧ್ಯ

ಮೇ 20 ರಂದು ವೇದವ್ಯಾಸ ಜಯಂತಿ ಮತ್ತು ವಿದ್ಯಾಮಾನ್ಯರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ, ಸಂಜೆ 6ಕ್ಕೆ ಸಭಾ ಕಾರ್ಯಕ್ರಮವಿದೆ. ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ವಿದ್ವಾಂಸ ಡಾ. ಆನಂದತೀರ್ಥ ನಾಗಸಂಪಿಗೆ ಉಪನ್ಯಾಸ ನೀಡಲಿದ್ದಾರೆ. ನಂತರ ಮಠದ ವಾರ್ಷಿಕ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading
Advertisement
Prajwal Revanna Case
ಪ್ರಮುಖ ಸುದ್ದಿ8 mins ago

Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್‌!

Holenarasipura sexual assault case SIT moves HC against HD Revanna bail order
ಕ್ರೈಂ14 mins ago

HD Revanna: ರೇವಣ್ಣಗೆ ಜಾಮೀನು ಸಿಕ್ಕರೂ ಸಿಗದ ರಿಲೀಫ್‌; ಎಸ್‌ಐಟಿಯಿಂದ ಹೈಕೋರ್ಟ್‌ ಮೊರೆ

Due to heavy rain in Shira water entered houses and shops
ತುಮಕೂರು21 mins ago

Heavy Rain: ಶಿರಾದಲ್ಲಿ ಭಾರೀ ಮಳೆಗೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು

Lok Sabha Election 2024 Shah Rukh Khan booth in Mumbai
ಬಾಲಿವುಡ್23 mins ago

Lok Sabha Election 2024: ಕುಟುಂಬದ ಜತೆ ಬಂದು ಮತ ಚಲಾಯಿಸಿದ ಶಾರುಖ್‌ ಖಾನ್‌

Trichy Tour
ಪ್ರವಾಸ29 mins ago

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

Money Guide
ಮನಿ-ಗೈಡ್33 mins ago

Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

Yamuna Bridge
ವೈರಲ್ ನ್ಯೂಸ್38 mins ago

Yamuna Bridge: ಯಮುನಾ ಸೇತುವೆಯ ಅದ್ಭುತ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ: ವಾವ್‌ ತಾಜ್‌ ಎಂದ ನೆಟ್ಟಿಗರು; ನೀವೂ ನೋಡಿ

KKR vs SRH Qualifier 1
ಕ್ರೀಡೆ53 mins ago

KKR vs SRH Qualifier 1: ಕೆಕೆಆರ್​-ಹೈದರಾಬಾದ್​ ಮುಖಾಮುಖಿ ದಾಖಲೆ, ಪಿಚ್​ ರಿಪೋರ್ಟ್​ ಹೇಗಿದೆ?

Road Accident
ಪ್ರಮುಖ ಸುದ್ದಿ57 mins ago

Road Accident: ಪಿಕ್‌ಅಪ್‌ ವಾಹನ ಕಂದಕಕ್ಕೆ ಬಿದ್ದು 18 ಕಾರ್ಮಿಕರ ದುರ್ಮರಣ; ಕೆಲಸಕ್ಕೆ ಹೊರಟವರು ಮಸಣಕ್ಕೆ!

theft case
ತುಮಕೂರು1 hour ago

Theft Case : ಕಳ್ಳತನವೂ ಈಗ ಪ್ರೊಫೆಷನಲ್‌; ಕದಿಯೋಕೆ ತಿಂಗಳ ಸ್ಯಾಲರಿ ಕೊಡುತ್ತಿದ್ದ ಪ್ರಳಯಾಂತಕ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌