Fitness secret: ಯಾವಾಗಲೂ ಫಿಟ್‌ ಆಗಿರುತ್ತಾರಲ್ಲ, ಅವರ ದಿನಚರಿಯ ಈ 10 ಅಭ್ಯಾಸ ನೋಡಿದಿರಾ? - Vistara News

ಆರೋಗ್ಯ

Fitness secret: ಯಾವಾಗಲೂ ಫಿಟ್‌ ಆಗಿರುತ್ತಾರಲ್ಲ, ಅವರ ದಿನಚರಿಯ ಈ 10 ಅಭ್ಯಾಸ ನೋಡಿದಿರಾ?

ಫಿಟ್‌ ಆಗಿರುವ ದೇಹ ಹೊಂದಿರುವ ವ್ಯಕ್ತಿಗಳು ಆನಂದವಾಗಿಯೂ ಇದ್ದರೆ, ಖಂಡಿತವಾಗಿಯೂ ಅವರು ಅನುಸರಿಸುವ ಈ ಕೆಳಗಿನ ಕೆಲವು Fitness secret ಅದಕ್ಕೆ ಕಾರಣವಾಗಿರುತ್ತವೆ.

VISTARANEWS.COM


on

fitness
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವರಿರುತ್ತಾರೆ, ವರ್ಷದ ಯಾವ ಕಾಲವೇ ಬರಲಿ, ಏನೇ ಆಗಲಿ, ಸದಾ ಒಂದೇ ಆಕಾರದಲ್ಲಿರುತ್ತಾರೆ. ಅವರು ಎಷ್ಟೇ ತಿಂದರೂ, ಎಷ್ಟೇ ತಿರುಗಾಡಿದರೂ ಏನೇ ಮಾಡಿದರೂ ಯಾವಾಗಲೂ ಅವರ ಮುಖದಲ್ಲೊಂದು ಕಾಂತಿ ಚಿಮ್ಮುತ್ತಿರುತ್ತದೆ. ಕೆಲವರು ಏನೇ ವರ್ಕೌಟ್‌ ಮಾಡಿದರೂ, ಏನೇ ಕಸರತ್ತು ಮಾಡಿದರೂ ಅಂದುಕೊಂಡ ಆಕಾರಕ್ಕೆ ದೇಹವನ್ನು ತರಲಾಗುವುದಿಲ್ಲ. ಹೀಗಾದಾಗ ಬಹಳ ಸಾರಿ, ಫಿಟ್‌ ಆಗಿ ಸದಾ ಲವಲವಿಕೆಯಿಂದ ಮುಖದಲ್ಲಿ ಕಾಂತಿ ತುಳುಕಿಸಿಕೊಂಡು ಓಡಾಡುವವರನ್ನು ಕಂಡಾಗ, ಈ ಫಿಟ್‌ನೆಸ್‌ ಅನ್ನೋದು ಬಿಡಿಸಲಾಗದ ಗಂಟು ಎಂದು ಅನಿಸತೊಡಗುತ್ತದೆ.

ಕೇವಲ ವರ್ಕೌಟ್‌ ಅಷ್ಟೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬ ಬಹುತೇಕರ ಎಣಿಕೆ ತಪ್ಪಾಗುತ್ತದೆ. ಹಾಗಾದರೆ, ಫಿಟ್ನೆಸ್‌ ಕಾಯ್ದುಕೊಳ್ಳುವ ಜೊತೆಗೆ ಸದಾ ಖುಷಿಯ ಬುಗ್ಗೆಗಳಾಗಿ ಕಾಣಿಸುವ ಮಂದಿಯ ೧೦ ಉತ್ತಮ ಅಭ್ಯಾಸಗಳು ಯಾವುದಿದ್ದೀತು ಎಂಬುದನ್ನು ಇಲ್ಲಿ ತಿಳಿಯೋಣ.

೧. ಅವರು ವ್ಯಾಯಾಮಕ್ಕಿಂತ ಹೆಚ್ಚು ವ್ಯಾಯಾಮದಿಂದ ಸಿಗುವ ಸಂತೋಷವನ್ನು ಬಯಸುತ್ತಾರೆ. ಮಾಡುವ ಸಣ್ಣ ಮಟ್ಟಿನ ವ್ಯಾಯಾಮವನ್ನು ಖುಷಿಯಿಂದ ಮಾಡುತ್ತಾರೆ. ಬಹುಶಃ ಅವರು ತಮ್ಮ ದುಗುಡವನ್ನು ಕಳೆಯಲು ವರ್ಕೌಟ್‌ ಮಾಡುತ್ತಿರಬಹುದು ಅಥವಾ ಜಸ್ಟ್‌ ಫಾರ್‌ ಎ ಚೇಂಜ್‌ ಅಂತ ವರ್ಕೌಟ್‌ ಮಾಡುತ್ತಿರಬಹುದು.

೨. ಅವರು ಯಾವುದನ್ನು ತಿನ್ನಬಾರದು ಎಂದು ಯಾವಾಗಲೂ ಯೋಚಿಸುವ ಬದಲು ಯಾವುದನ್ನೆಲ್ಲ ತಿನ್ನಬಹುದು ಎಂಬ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಸಕ್ಕರೆ ರಹಿತ, ಕಡಿಮೆ ಕಾರ್ಬೋಹೈಡ್ರೇಟ್‌ ಡಯಟ್‌ ಬಗ್ಗೆ ಯೋಚಿಸುತ್ತಲೇ ತಲೆಬಿಸಿ ಮಾಡಿಕೊಂಡು ತಿನ್ನದಿರುವ ವಸ್ತುಗಳನ್ನು ಯೋಚನೆ ಮಾಡಿಕೊಂಡು ಅದನ್ನೊಂದು ಶಿಕ್ಷೆಯಂತೆ ಭಾವಿಸಿ ಪಾಲಿಸುವ ಮಂದಿಯ ಎದುರು ಇವರು ಭಿನ್ನ. ಖುಷಿಯಿಂದ ಯಾವುದನ್ನೆಲ್ಲ ತಿನ್ನಬಹುದು ಎಂದು ಯೋಚಿಸಿ ತಿನ್ನುವ ಈ ಮಂದಿಯ ಪಾಸಿಟಿವ್‌ ಗುಣವೇ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ.

೩. ಜಿಮ್‌ಗೆ ಹೋದರಷ್ಟೇ ವ್ಯಾಯಾಮ ಎಂಬ ಮನಸ್ಥಿತಿ ಅವರಲ್ಲಿರುವುದಿಲ್ಲ. ಜಿಮ್‌ ಹೊರತಾಗಿ ಸಾಕಷ್ಟು ಚುರುಕಾಗಿ ಓಡಾಡಿಕೊಂಡಿರುವ ಅವರಿಗೆ, ಇತರೆ ಕೆಲಸ ಕಾರ್ಯಗಳಿಂದಲೇ ಸಾಕಷ್ಟು ವ್ಯಾಯಾಮ ದೊರೆತಿರುತ್ತದೆ.

೪. ಎಷ್ಟು ವರ್ಕೌಟ್‌ ಮಾಡಿದ್ದೇವೆ ಎಂಬುದರ ಮೇಲಷ್ಟೆ ಫಿಟ್ನೆಸ್‌ ಅವಲಂಬಿಸಿದೆ ಎಂದು ಅಂದುಕೊಂಡರೆ ಅದು ತಪ್ಪು. ಅವರು ವರ್ಕೌಟ್‌ ಬಗ್ಗೆ ಗಮನ ಕೊಟ್ಟಷ್ಟೇ ವಿರಾಮಕ್ಕೂ ಆದ್ಯತೆ ನೀಡುತ್ತಾರೆ.

೫. ಅವರಿಗೆ ಅತಿಯಾಗಿ ಹಸಿವಾಗುವುದಿಲ್ಲ ಅಥವಾ ಅವರು ಎಂದಿಗೂ ಅತಿಯಾಗಿ ತಿನ್ನುವುದಿಲ್ಲ. ಡಯಟ್‌ ಹೆಸರಿನಲ್ಲಿ ಹೆಚ್ಚು ಹಸಿವು ಮಾಡಿಕೊಳ್ಳುವುದು ಹಾಗೂ ಆ ಹಸಿವಿನಿಂದಾಗಿ ಹೆಚ್ಚು ತಿನ್ನುವುದು ಶೇಪ್‌ನಲ್ಲಿರುವುದಕ್ಕೆ ಯಾವಾಗಲೂ ತಡೆಯಾಗುವ ಅಂಶ. ಆದರೆ ಇವರು ಆಗಾಗ ಸ್ವಲ್ವ ಸ್ವಲ್ಪ ತಿನ್ನುತ್ತಾರೆ ಮತ್ತು ಎಂದಿಗೂ ಹಸಿವಿನಿಂದ ಬಳಲುವುದಿಲ್ಲ.

೬. ಇವರು ಬಗೆಬಗೆಯ ಡಯಟ್‌ಗಳ ಮೊರೆ ಹೋಗುವುದಿಲ್ಲ. ತಮ್ಮ ದೇಹದ ಮಾತು ಕೇಳುತ್ತಾರೆ. ಆರೋಗ್ಯದ ದೃಷ್ಟಿಯಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಯೋಚಿಸಿ ತಮ್ಮ ಡಯಟ್‌ ಬಗ್ಗೆ ನಿರ್ಧರಿಸುತ್ತಾರೆ.

ಇದನ್ನೂ ಓದಿ: 40 ವರ್ಷ ವಯಸ್ಸಾದ ಮೇಲೆ ಆಹಾರದಲ್ಲಿ ಇವು ಇರಲೇಬೇಕು!

೭. ಅವರು ತುಂಬ ನೀರು ಕುಡಿಯುತ್ತಾರೆ. ಮಾನವನ ದೇಹ ಶೇಕಡಾ ೬೦ಕ್ಕಿಂತಲೂ ಹೆಚ್ಚು ಭಾಗ ನೀರನ್ನು ಹೊಂದಿದೆ. ಹಾಗಾಗಿ ದೇಹಕ್ಕೆ ನೀರು ಅತೀ ಅಗತ್ಯ. ನೀರು ಸರಿಯಾಗಿ ಪೂರೈಕೆ ಮಾಡುತ್ತಿಲ್ಲವಾದರೆ ಅದು ನಿಮ್ಮ ಆರೋಗ್ಯದ ಮೂಲಕ ತಿಳಿಯುತ್ತದೆ.

೮. ಅವರ ಜೀವನದಲ್ಲಿ ಶಿಸ್ತು ಇರುತ್ತದೆ. ಅವರು ದಿನನಿತ್ಯದಲ್ಲಿ ಕೆಲವು ಸಿಂಪಲ್‌ ಆಹಾರ ಅಭ್ಯಾಸಗಳನ್ನು ಪಾಲಿಸುತ್ತಿರುತ್ತಾರೆ. ಬೆಳಗಿನ ಹಾಗೂ ರಾತ್ರಿಯ ಆಹಾರದ ಶಿಸ್ತು ಅವರಲ್ಲಿ ಖಂಡಿತಾ ಇರುತ್ತದೆ.

೯. ಅವರು ಆಸಕ್ತಿಕರವಾಗಿ ಬದುಕುತ್ತಿರುತ್ತಾರೆ. ತಮ್ಮ ಇಷ್ಟದ ಸಂಗತಿಗಳನ್ನು ಮಾಡುತ್ತಿರುತ್ತಾರೆ. ಬದುಕಿನ ಸಣ್ಣ ಸಣ್ಣ ಸಂಗತಿಗಳಿಗೆ ಮಹತ್ವ ನೀಡುತ್ತಾರೆ ಹಾಗೂ ತಮ್ಮ ಆಸಕ್ತಿಯ ವಿಷಯಗಳಿಗೆ ಹವ್ಯಾಸಗಳಿಗೆ ಸಮಯ ನೀಡುತ್ತಿರುತ್ತಾರೆ.

೧೦. ತಮಗೇನು ಬೇಕು ಹಾಗೂ ತಮಗೇನು ಪಡೆಯಲು ಹಕ್ಕಿದೆ ಎಂಬ ಬಗ್ಗೆ ಇವರಿಗೆ ಸರಿಯಾಗಿ ಗೊತ್ತಿರುತ್ತದೆ. ಇವರು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ತಮ್ಮ ದೇಹದ ಆಕಾರಕ್ಕಿಂತಲೂ ಇವರು ಪ್ರದರ್ಶಿಸುವ ಆತ್ಮವಿಶ್ವಾಸವೇ ಅವರ ವ್ಯಕ್ತಿತ್ವಕ್ಕೊಂದು ತೂಕ ನೀಡುವುದರಿಂದ ಸುಂದರವಾಗಿಯೂ ಕಾಂತಿಯುಕ್ತವಾಗಿಯೂ ಕಾಣುತ್ತಾರೆ.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

ನಿದ್ದೆ ಹಾಳಾಗುವುದಕ್ಕೆ ಕಾರಣಗಳು (Sleeping Tips) ಸಾವಿರ ಇರಬಹುದು. ಆದರೆ ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು. ನಿದ್ದೆ ಹಾಳಾಗುವುದಕ್ಕೆ ಕಾರಣಗಳು ಸಾವಿರ ಇರಬಹುದು. ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು, ದೇಹ-ಮನಸ್ಸುಗಳನ್ನು ಸ್ವಸ್ಥವಾಗಿ ಇರಿಸಿಕೊಳ್ಳಬಹುದು.

VISTARANEWS.COM


on

Sleeping Tips
Koo

ಕುಂಭಕರ್ಣನ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವನನ್ನು ಎಬ್ಬಿಸುವದಕ್ಕೆ ರಾವಣನ ಸೈನ್ಯವೇ ಒದ್ದಾಡಿದರೂ ತಬ್ಬಿದ ನಿದ್ರಾಂಗನೆಯನ್ನು ಆತ ಬಿಡುತ್ತಿರಲಿಲ್ಲವಂತೆ. ಈಗಿನವರೂ ಒಂಥರಾ ಕುಂಭಕರ್ಣರೇ! ಆದರೆ ಎಬ್ಬಿಸಲಿಕ್ಕಲ್ಲ, ನಿದ್ರಿಸುವುದಕ್ಕೇ ಹರಸಾಹಸ ಪಡಬೇಕು. ಲೋಕವೆಲ್ಲಾ ಬಂದು ಲಾಲಿ ಹಾಡಿದರೂ ನಿದ್ದೆ ಮಾತ್ರ ಸಾಧ್ಯವಿಲ್ಲ (Sleeping Tips) ಇಂದಿನವರಿಗೆ. ದಿಂಬಿಗೆ ತಲೆ ಕೊಡುವ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಬೇಗನೇ ʻಹಾಸಿಗೆ ಹಿಡಿಯುವುದುʼ ಸತ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. ಭಾರತೀಯರಲ್ಲಿ ದಿನಕ್ಕೆ 6 ತಾಸುಗಳ ಗಾಢ ನಿದ್ರೆಗೂ ಗತಿಯಿಲ್ಲದವರು ಶೇ. 61 ಮಂದಿ ಎನ್ನುತ್ತದೆ ಇತ್ತೀಚಿನ ಸಮೀಕ್ಷೆಯೊಂದು. ಶೇ. 34ರಷ್ಟು ಜನ 4 ತಾಸುಗಳ ಗಾಢ ನಿದ್ದೆ ಮಾಡುತ್ತೇವೆ ಎಂದಿದ್ದರೆ ಉಳಿದವರಿಗೆ ಅದೂ ಅಲಭ್ಯವಾಗಿದೆ. ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ 2022ಕ್ಕೆ ಹೋಲಿಸಿದರೆ, 2023ರಲ್ಲಿ ನಿದ್ದೆಬಿಡುವವರು, ನಿದ್ದೆಗೆಡುವವರ ಸಂಖ್ಯೆ ಶೇ. 50ರಷ್ಟು ಹೆಚ್ಚಾಗಿರುವುದು. ಈ ಪ್ರಮಾಣ 2024ಕ್ಕೆ ಮತ್ತೂ ಏರುತ್ತಿರುವುದಂತೂ ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ನಿದ್ದೆಗೆಟ್ಯೊ ಬುದ್ಧಿಗೆಟ್ಯೊ ಎನ್ನುವ ಹಳೆಯ ಜನರ ಮಾತನ್ನು ಮರೆಯುವಂತಿಲ್ಲ ಈಗ. ನಿದ್ದೆ ಹಾಳಾಗುವುದಕ್ಕೆ ಕಾರಣಗಳು ಸಾವಿರ ಇರಬಹುದು. ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು, ದೇಹ-ಮನಸ್ಸುಗಳನ್ನು ಸ್ವಸ್ಥವಾಗಿ ಇರಿಸಿಕೊಳ್ಳಬಹುದು. ಯಾವುದು ಆ ಬದಲಾವಣೆಗಳು? ಏನನ್ನು ಬದಲಿಸಿಕೊಳ್ಳಬೇಕು?

Sleeping alaram

ನಿದ್ದೆಗೊಂದು ಅಲರಾಂ

ಅಂದರೆ ಬೆಳಗ್ಗೆ ಏಳುವುದಕ್ಕೆ ಅಲರಾಂ ಇಡುವುದರ ಬಗ್ಗೆ ಅಲ್ಲ. ರಾತ್ರಿ ಮಲಗುವುದಕ್ಕೆ ಅಲರಾಂ ಇಡುವ ಬಗ್ಗೆ ಇಲ್ಲಿ ಹೇಳುತ್ತಿರುವುದು. ಹೌದು. ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದಲ್ಲ, ಸಾಧ್ಯವಾದಷ್ಟೂ ನಿಗದಿತ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ. ರಾತ್ರಿ ತೀರಾ ತಡವಾಗಿ ಮಲಗುವುದು, ಇದಕ್ಕೆ ಬದಲಿಗೆ ಹಗಲಿಗೆ ಒಂದೆರಡು ತಾಸು ನಿದ್ರಿಸುವುದು ಸರಿಯಲ್ಲ. 7 ತಾಸುಗಳ ಗಾಢ ನಿದ್ರೆ ರಾತ್ರಿಯೇ ದೊರೆಯುವಂತೆ ನಿಮ್‌ ಕೆಲಸಗಳನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ದೇಹದ ಸರ್ಕೇಡಿಯನ್‌ ಲಯಕ್ಕೆ ತೊಂದರೆಯಾಗದೆ, ಸ್ವಾಸ್ಥ್ಯ ಸುಧಾರಿಸುತ್ತದೆ.

Savasana Yoga Asanas For Best Sleep

ರಿಲ್ಯಾಕ್ಸ್‌ ಪ್ಲೀಸ್!

ಮಲಗುವ ಮುನ್ನ ಭಯಾನಕ ಸಿನೆಮಾಗಳನ್ನು ನೋಡುವುದು, ಮನಸ್ಸನ್ನು ಅಶಾಂತಗೊಳಿಸುವ ಸುದ್ದಿಗಳನ್ನು ಹೇಳಿ-ಕೇಳುವುದು- ಇಂಥ ಯಾವುದೇ ಸಂಗತಿಗಳನ್ನು ನಿದಿರೆಯನ್ನು ಹಾಳು ಮಾಡಬಲ್ಲವು. ಹಾಗಾಗಿ ಮಲಗುವ ಮುನ್ನ ದೇಹವನ್ನು ಮಾತ್ರವೇ ಅಲ್ಲ, ಮನಸ್ಸನ್ನು ವಿಶ್ರಾಂತಿಗೆ ದೂಡಿ. ಬೆವರು ಹರಿಸಿ ವ್ಯಾಯಾಮ ಮಾಡುವುದು ಸಹ ಮಲಗುವ ಮೊದಲು ಬೇಡ. ಬದಲಿಗೆ, ಹಗಲು ಹೊತ್ತಿನಲ್ಲಿ ಚೆನ್ನಾಗಿ ವ್ಯಾಯಾಮ ಮಾಡಿ. ಮಲಗುವ ಮುನ್ನ ಹದವಾದ ಬಿಸಿ ನೀರಿನ ಸ್ನಾನ, ದೀರ್ಘ ಉಸಿರಾಟ, ಸಂಗೀತ ಕೇಳುವುದು, ಏನನ್ನಾದರು ಓದುವುದು, ತಂಗಾಳಿಯಲ್ಲಿ ಹತ್ತಾರು ನಿಮಿಷ ಲಘುವಾಗಿ ಓಡಾಡುವುದು ಇತ್ಯಾದಿಗಳು ನಿದ್ದೆಗೆ ಪೂರಕ.

ಮಲಗುವ ಸ್ಥಳ

ಇದು ಸಹ ಮುಖ್ಯವಾಗುತ್ತದೆ. ಸ್ವಚ್ಛವಾದ, ಗಾಳಿಯಾಡುವ ಸ್ಥಳದಲ್ಲಿ ಮಲಗುವುದು ಒಳ್ಳೆಯದು. ಸೊಳ್ಳೆಗಳ ಉಪದ್ರವಿದ್ದರೆ ಪರದೆ ಬಳಸಿ. ಗಲಾಟೆಯಿಲ್ಲದ ಮಂದ ಬೆಳಕಿನ ವಾತಾವರಣ ಏರ್ಪಡಿಸಿಕೊಳ್ಳಿ. ಹಾಸಿಗೆ ಮತ್ತು ದಿಂಬುಗಳು ಕೂಡಾ ಆರಾಮದಾಯಕವಾಗಿರಲಿ. ಒಂದೊಮ್ಮೆ ಹೊರಗಿನ ಗಲಾಟೆಗೆ ನಿದ್ದೆ ಬರುತ್ತಿದ್ದ ಎಂದಾದರೆ, ಅದನ್ನು ಮರೆಮಾಚುವುದಕ್ಕೆ ನಿಮ್ಮಿಷ್ಟದ ಮೆಲು ಸಂಗೀತ ಹಾಕಿಕೊಳ್ಳಿ. ಅದು ಬೇಡದಿದ್ದರೆ, ಇಯರ್‌ ಪ್ಲಗ್‌ ಬಳಕೆ ಸಾಧ್ಯವೇ ನೋಡಿ.

Sleeping Tips

ನೀಲಿ ಬೆಳಕು ಬೇಡ

ಯಾವುದೇ ಎಲೆಕ್ಟ್ರಾನಿಕ್‌ ಉಪಕರಣದಿಂದ ಸೂಸುವ ನೀಲಿ ಬೆಳಕು ನಿದ್ದೆಯ ಶತ್ರುವಿದ್ದಂತೆ. ಮಲಗುವ ಒಂದು ತಾಸು ಮೊದಲೇ ಇವುಗಳಿಂದ ಸನ್ಯಾಸ ತೆಗೆದುಕೊಳ್ಳಿ. ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಮುಂತಾದವು ದೇಹದ ಆಂತರಿಕ ಗಡಿಯಾರಕ್ಕೆ ತೊಂದರೆ ನೀಡುತ್ತವೆ. ಮಲಗುವ ಹಾಸಿಗೆಯಲ್ಲಿ ಫೋನ್‌ ಇರಿಸಿಕೊಳ್ಳುವ ತಪ್ಪನ್ನಂತೂ ಮಾಡಲೇಬೇಡಿ.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಆಹಾರ

ಊಟ ಮಾಡಿ ಕೈ ತೊಳೆಯುತ್ತಿದ್ದಂತೆ ಹಾಸಿಗೆ ಸೇರಿದರೆ ನಿದ್ದೆಯೂ ಹಾಳು, ಹೊಟ್ಟೆಗೂ ಗೋಳು! ರಾತ್ರಿಯೂಟವನ್ನು ಆದಷ್ಟೂ ಸರಳವಾಗಿಡಿ, ಕೊಬ್ಬು, ಖಾರದ ವಸ್ತುಗಳನ್ನು ರಾತ್ರಿ ಕಡಿಮೆ ಮಾಡಿ. ರಾತ್ರಿ ಮಲಗುವ ಮೂರು ತಾಸುಗಳ ಮುನ್ನ ಊಟ ಮಾಡುವುದು ಸರಿಯಾದ ಕ್ರಮ. ಆನಂತರ ಕಾಫಿ, ಚಹಾ ಸೇರಿದಂತೆ ಯಾವುದೇ ಕೆಫೇನ್‌ ಸೇವನೆ ಸಲ್ಲದು. ಆಲ್ಕೋಹಾಲ್‌ ಸೇವನೆಯನ್ನು ರೂಢಿಸಿಕೊಂಡರೆ ಕ್ರಮೇಣ ನಿದ್ದೆ ಹಾಳಾಗುತ್ತದೆ.

Continue Reading

ಆರೋಗ್ಯ

Tooth Decay: ನಮ್ಮ ಈ ದುರಭ್ಯಾಸಗಳು ಹಲ್ಲಿನ ಹುಳುಕಿಗೆ ಕಾರಣವಾಗುತ್ತವೆ

ಎಲ್ಲರನ್ನೂ ಒಂದಲ್ಲ ಒಂದು ದಿನ ಕಾಡುವ ಸಾರ್ವಕಾಲಿಕ ತೊಂದರೆಯೆಂದರೆ ಅದು ಹಲ್ಲು ನೋವು. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ನಿತ್ಯವೂ ಬಾಯಿಯ ಸ್ವಚ್ಛತೆ ಬಗ್ಗೆ ಹಾಗೂ ನಮ್ಮ ಜೀವನಶೈಲಿಯ ಬಗ್ಗೆ ಗಮನ ಹರಿಸಿದರೆ ಹಲ್ಲಿನ ಆರೋಗ್ಯ ಚೆನ್ನಾಗಿ ಇಡಬಹುದು. ನಮ್ಮ ಯಾವ ಯಾವ ನಿರ್ಲಕ್ಷ್ಯಗಳಿಂದ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ ಹಾಗೂ ನಾವು ಇದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಇಲ್ಲಿದೆ (tooth decay) ಮಾಹಿತಿ.

VISTARANEWS.COM


on

Tooth Decay
Koo

ಹಲ್ಲು ಹುಳುಕಾಗುವುದು ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಸಾಮಾನ್ಯ ತೊಂದರೆ. ವಯಸ್ಸಿನ ಭೇದವಿಲ್ಲದೆ, ಬಡವ ಶ್ರೀಮಂತನೆಂಬ ಹಂಗಿಲ್ಲದೆ, ಎಲ್ಲರನ್ನೂ ಒಂದಲ್ಲ ಒಂದು ದಿನ ಕಾಡುವ ಸಾರ್ವಕಾಲಿಕ ತೊಂದರೆಯಿದು. ಆದರೆ, ಅಷ್ಟೇ ನಿರ್ಲಕ್ಷ ವಹಿಸುವ ಆರೋಗ್ಯವೂ ಕೂಡಾ ಇದೇ. ಆದರೆ, ನಿತ್ಯವೂ ಬಾಯಿಯ ಸ್ವಚ್ಛತೆ ಹಾಗೂ ಆಹಾರದ ಬಗ್ಗೆ, ನಮ್ಮ ಜೀವನಶೈಲಿಯ ಬಗ್ಗೆ ಗಮನ ಹರಿಸಿದರೆ ಹಲ್ಲಿನ ಆರೋಗ್ಯ ಚೆನ್ನಾಗಿಟ್ಟಿರಬಹುದು. ಬನ್ನಿ, ನಮ್ಮ ಯಾವ ಯಾವ ನಿರ್ಲಕ್ಷ್ಯಗಳಿಂದ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ ಹಾಗೂ ನಾವು ಇದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು (tooth decay) ಎಂಬುದನ್ನು ನೋಡೋಣ.

Young Man Suffering from Acute Toothache and Touching Cheek with Grimace of Pain

ಬಾಯಿಯ ಆರೋಗ್ಯದ ಕಾಳಜಿ ಸರಿಯಾಗಿ ಮಾಡದೇ ಇರುವುದು

ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಮಾಡದೆ ಇದ್ದರೆ, ಸರಿಯಾಗಿ ಕಾಳಜಿ ವಹಿಸದಿದ್ದರೆ, ಹಲ್ಲಿನ ಸಮಸ್ಯೆಗಳು ಬಹುಬೇಗನೆ ಬರುತ್ತವೆ. ಹಲ್ಲು ಹುಳುಕಾಗಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದು.

Selection of Colorful Sweets

ಸಕ್ಕರೆಯುಕ್ತ ಆಹಾರ ಅಥವಾ ಸಿಹಿತಿಂಡಿಗಳ ಅತಿಯಾದ ಸೇವನೆ

ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಹಲ್ಲು ಬಹುಬೇಗನೆ ಹುಳುಕಾಗುತ್ತದೆ. ಸಕ್ಕರೆಯುಕ್ತ ಆಹಾರಗಳಿಂದ ಬಾಯಿಯಲ್ಲಿ ಬಹಳ ಹೊತ್ತಿನವರೆಗೆ ಬ್ಯಾಕ್ಟೀರಿಯಾ ಇರುವುದರಿಂದ ಹಲ್ಲು ಹುಳುಕಿಗೆ ಕಾರಣವಾಗುತ್ತದೆ.

ಆಗಾಗ ದಂತವೈದ್ಯರನ್ನು ಭೇಟಿಯಾಗದೆ ಇರುವುದು

ಆಗಾಗ ದಂತವೈದ್ಯರನ್ನು ಸಂಪರ್ಕಿಸಿ ಹಲ್ಲಿನ ಆರೋಗ್ಯದ ಕಾಳಜಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಹಲ್ಲಿನ ಕ್ಲೀನಿಂಗ್‌ ಇರಬಹುದು, ಸಣ್ಣ ಹುಳುಕಾದಾಗ ಫಿಲ್ಲಿಂಗ್‌ ಇರಬಹುದು ಅಥವಾ ಆಯಾ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಆಗಾಗ ಕಂಡುಕೊಳ್ಳುವುದರಿಂದ ಮುಂದಿನ ಪರಿಣಾಮ ಘೋರವಾಗಿರುವುದಿಲ್ಲ. ಕ್ಲೀನಿಂಗ್‌ ಆಗಾಗ ಮಾಡಿಸಿಕೊಳ್ಳುವುದು, ಹಲ್ಲಿನ ಸಂದುಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಹಾರದ ಸಣ್ಣ ತುಣುಕುಗಳನ್ನು ತೆಗೆದು ಕ್ಲೀನ್‌ ಮಾಡುವುದು ಬಹಳ ಮುಖ್ಯ. ಇದರಿಂದ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ. ಹುಳುಕು ಹತ್ತಿರ ಸುಳಿಯುವುದಿಲ್ಲ.

Smoking Heart Attack Causes

ಧೂಮಪಾನ ಹಾಗೂ ತಂಬಾಕಿನ ಸೇವನೆ

ಧೂಮಪಾನಕ್ಕೂ ಹಲ್ಲು ಹುಳುಕಿಗೂ ಏನು ಸಂಬಂಧ ಎಂದು ಯೋಚಿಸಬೇಡಿ. ಹಲ್ಲು ಹುಳುಕಾಗುವುದಕ್ಕೆ ಇನ್ನೊಂದು ಮುಖ್ಯ ಕಾರಣ ಎಂದರೆ ಧೂಮಪಾನ ಹಾಗೂ ತಂಬಾಕಿನ ಬಳಕೆ. ತಂಬಾಕಿನ ಯಾವುದೇ ವಸ್ತುಗಳನ್ನು ಬಳಸಿದರೂ ಕೂಡಾ, ಹಲ್ಲಿನ ಆರೋಗ್ಯ ಹದಗೆಡುತ್ತದೆ. ಹಲ್ಲು, ಸವಡು ಸೇರಿದಂತೆ ಬಾಯಿಯ ಆರೋಗ್ಯ ಹಾಳಾಗುತ್ತದೆ.

Drunk Man Drinking Alcohol and Smoking Cigarette Stomach Bloating Relief

ಆಲ್ಕೋಹಾಲ್‌ ಸೇವನೆ

ಮದ್ಯಪಾನ ಮಾಡುವುದರಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತದೆ. ಹೆಚ್ಚು ಆಲ್ಕೋಹಾಲ್‌ ಕುಡಿಯುವುದರಿಂದ ಬಾಯಿ ಒಣಗಿದಂತಾಗಿ, ಬಾಯಿಯ ಜೊಲ್ಲಿನ ಉತ್ಪತ್ತಿ ಕಡಿಮೆಯಾಗುತ್ತದೆ. ಕಡಿಮೆ ಸಲೈವಾ ಉತ್ಪತ್ತಿಯಾದಾಗ ಸಹಜವಾಗಿಯೇ ಹಲ್ಲಿನ ಹುಳುಕು ಹೆಚ್ಚುತ್ತದೆ.

ಹಲ್ಲನ್ನು ಉಪಕರಣವಾಗಿ ಬಳಸುವುದರಿಂದ

ಹಲ್ಲು ಗಟ್ಟಿಯಾಗಿದೆ ಎಂದುಕೊಂಡು ಗಟ್ಟಿ ಕವಚವಿರುವ ಬೀಜಗಳನ್ನು ಒಡೆಯಲು, ಯಾವುದಾದರೂ ಪ್ಯಾಕೆಟ್ಟನ್ನು ಬಿಡಿಸಲು ಹಲ್ಲಿನಿಂದ ಕಚ್ಚುವ ಮೂಲಕ ಹಲ್ಲಿನ ಸಹಾಯವನ್ನು ತೆಗೆದುಕೊಳ್ಳುತ್ತೇವೆ. ಇದರಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಹಲ್ಲಿನ ಆರೋಗ್ಯ ಹೆಚ್ಚಿಸಲು ಏನು ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.

Tooth brushing

ದಿನಕ್ಕೆ ಎರಡು ಬಾರಿ ಹಲ್ಲಿಜ್ಜಿ

ಇದು ಹಲ್ಲು ಹುಳುಕಾಗಿಸುವುದನ್ನು ತಪ್ಪಿಸುತ್ತದೆ. ಹಲ್ಲಿನ ಸಂದಿನಲ್ಲಿ ಸೇರಿದ ಕೊಳೆ ಹೊರಟು ಹೋಗಿ, ಹಲ್ಲು ಆರೋಗ್ಯಪೂರ್ಣವಾಗಿ ಇರುತ್ತದೆ. ಹಲ್ಲುಜ್ಜಲು ಯಾವಾಗಲೂ ಫ್ಲೋರೈಡ್‌ ಟೂತ್‌ಪೇಸ್ಟ್‌ ಹಾಗೂ ಮೆತ್ತಗಿನ ಬ್ರಷ್‌ ಅನ್ನು ಬಳಸುವುದು ಒಳ್ಳೆಯದು.

ಹಲ್ಲನ್ನು ಆಗಾಗ ಫ್ಲಾಸ್‌ ಮಾಡುವುದು ಒಳ್ಳೆಯದು

ಟೂತ್‌ ಬ್ರಷ್‌ನಿಂದ ತೆಗೆಯಲು ಸಾಧ್ಯವಾಗದ, ಹಲ್ಲಿನ ಸಂದಿಯಲ್ಲಿ ಸೇರಿಕೊಂಡಿರುವ ಆಹಾರ ಹಳೆಯ ತುಣುಕುಗಳುಫ್ಲಾಸ್‌ ಮಾಡುವ ಮೂಲಕ ಮಾತ್ರ ತೆಗೆಯಬಹುದು.

Sweet CANDAY

ಅಸಿಡಿಕ್‌ ಹಾಗೂ ಸಕ್ಕರೆಯುಕ್ತ ಆಹಾರಗಳ ಸೇವನೆ ಕಡಿಮೆ ಮಾಡಿ

ಸೋಡಾಗಳು, ಹಣ್ಣಿನ ಜ್ಯೂಸ್‌ಗಳು, ಕ್ಯಾಂಡಿ ಇತ್ಯಾದಿಗಳನ್ನು ತಿಂದಾಗ ಅಥವಾ ಕುಡಿದಾಗ ಬಾಯಿಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.

ಆಗಾಗ ಏನಾದರೊಂದು ಜಗಿಯುತ್ತಿರುವ ಅಭ್ಯಾಸವಿದ್ದರೆ ಬಿಡಿ

ಆಗಾಗ ಏನಾದರೂ ತಿನ್ನುವುದರಿಂದ ಬಾಯಿಯಲ್ಲಿ ಆಹಾರಗಳು ಹಾಗೆಯೇ ಉಳಿದುಹೋಗುತ್ತವೆ. ಈ ತುಣುಕುಗಳು ಹಲ್ಲಿನ ಆರೋಗ್ಯವನ್ನು ಹಾಳುಗೆಡವುತ್ತದೆ.

Chewing gum

ಚ್ಯೂಯಿಂಗ್‌ ಗಮ್‌ ತಿನ್ನುವ ಮೂಲಕ ಬಾಯಿಯನ್ನು ಫ್ರೆಶ್‌ ಆಗಿರಿಸಬಹುದು

ಆದರೆ, ಸಿಹಿಯಾದ ಚ್ಯೂಯಿಂಗ್‌ಗಮ್‌ ಒಳ್ಳೆಯದಲ್ಲ. ಪುದಿನಯುಕ್ತ ಸಕ್ಕರೆ ರಹಿತ ಚ್ಯೂಯಿಂಗ್‌ ಗಮ್‌ ಯಾವಾಗಲಾದರೊಮ್ಮೆ ಅಗತ್ಯ ಬಿದ್ದಾಗ ಬಳಸಬಹುದು.

ಆಗಾಗ ದಂತ ವೈದ್ಯರನ್ನು ಭೇಟಿಯಾಗಿ

ಹಲ್ಲಿನ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಿ. ಅಗತ್ಯ ಬಿದ್ದಾಗ ಕ್ಲೀನಿಂಗ್‌ ಮಾಡಿಸಿಕೊಳ್ಳಿ.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Continue Reading

ದೇಶ

Vitamin D: ಎಚ್ಚರ..ಎಚ್ಚರ! ಕ್ಯಾನ್ಸರ್‌ಗೂ ಕಾರಣವಾಗುತ್ತೆ ವಿಟಮಿನ್‌ ಡಿ ಕೊರತೆ

Vitamin D:ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌ಗೆ ಕಾರಣವಾಗಲಿದೆ ಎಂಬ ಶಾಕಿಂಗ್‌ ವರದಿಯೊಂದು ಹೊರ ಬಿದ್ದಿದೆ. ವಿವಿಧ ಅಧ್ಯಯನಗಳ ವರದಿ ಪ್ರಕಾರ ವಿಟಮಿನ್‌ ಡಿ ಕೊರತೆಯಿಂದ ಓವರಿಯನ್‌, ಸ್ತನ ಸೇರಿದಂತೆ ವಿವಿಧ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ.

VISTARANEWS.COM


on

Foods rich in vitamin D
Koo

ನವದೆಹಲಿ:ವಿಟಮಿನ್‌ ಡಿ(Vitamin D) ಕೊರತೆ ಎಂಬುದು ಪ್ರಪಂಚಾದ್ಯಂತ ಹೆಚ್ಚಿನ ಜನರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಪೌಷ್ಟಿಕಾಂಶ ಕೊರತೆ(Nutrient shortages)ಯಾಗಿದೆ. ಇದು ಸಾಮಾನ್ಯವಾಗಿ 65 ವರ್ಷ ಮೇಲ್ಪಟ್ಟ ಜನರಲ್ಲಿ ಕಂಡು ಬರುವ ಪೌಷ್ಠಿಕಾಂಶ ಕೊರತೆ. ಪ್ರಪಂಚದ ಶೇ.13ರಷ್ಟು ಜನರಲ್ಲಿ ವಿಟಮಿನ್‌ ಡಿ ಕೊರತೆ ಕಂಡು ಬರುತ್ತದೆ. ವಿಟಮಿನ್‌ ಡಿ ಕೊರತೆಯಿಂದ ಎಲುಬು, ಗಂಟು ನೋವು, ಸಂಧು ನೋವು, ಮೂಡ್‌ ಚೇಂಜ್‌ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದರೆ ಇದೀಗ ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌(Cancer)ಗೆ ಕಾರಣವಾಗಲಿದೆ ಎಂಬ ಶಾಕಿಂಗ್‌ ವರದಿಯೊಂದು ಹೊರ ಬಿದ್ದಿದೆ. ವಿವಿಧ ಅಧ್ಯಯನಗಳ ವರದಿ ಪ್ರಕಾರ ವಿಟಮಿನ್‌ ಡಿ ಕೊರತೆಯಿಂದ ಓವರಿಯನ್‌, ಸ್ತನ ಸೇರಿದಂತೆ ವಿವಿಧ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ.

ವಿಟಮಿನ್‌ ಡಿ ಕೊರತೆ ಹೇಗೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ?

ವಿಟಮಿನ್‌ ಡಿ 3 ಮತ್ತು ಕ್ಯಾಲ್ಸಿಯಂ ಮಾತ್ರೆ ಸೇವನೆಯಿಂದ ಕ್ಯಾನ್ಸರ್‌ ತಡೆಯಲು ಸಾಧ್ಯವಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. ವಿಟಮಿನ್‌ ಡಿ ಕ್ಯಾನ್ಸರ್‌ ಸೆಲ್‌ಗಳ ವಿಡಿಜನ್‌ ಮತ್ತು ಅವುಗಳ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ . ಅದರ ಕೊರತೆ ಆದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್‌ಗೆ ತುತ್ತಾಗು ಸಾಧ್ಯತೆ ಹೆಚ್ಚಿರುತ್ತದೆ. ವೈದ್ಯರ ಹೇಳುವ ಪ್ರಕಾರ ವಿಟಮಿನ್‌ ಡಿ ಮನುಷ್ಯನ ಎಲುಬುಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೇ ದೇಹದಲ್ಲಿರುವ ದೋಷಯುಕ್ತ ಜೀನ್‌ಗಳನ್ನು ಸರಿಪಡಿಸುವ ಪ್ರಕ್ರಿಯೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಗೆ MMR ಎಂದು ಕರೆಯಲಾಗಿದ್ದು, ಇದಕ್ಕೆ ವಿಟಮಿನ್‌ ಡಿ ಅಗತ್ಯ ಹೆಚ್ಚಾಗಿದೆ. ಇನ್ನು ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌ ಗೆ ಕಾರಣವಾಗುತ್ತದೇಯೇ ಎಂಬ ವಿಷಯದ ಬಗ್ಗೆ ಮತ್ತಷ್ಟು ಅಧ್ಯಯನ ಮುಂದುವರೆದಿದೆ.

ವಿಟಮಿನ್ ಡಿ ಕೊರತೆ ಉಂಟಾಗದಿರಲು ಏನು ಮಾಡಬೇಕು?

1. ವಿಟಮಿನ್ ಡಿ ಕೊರತೆಗೆ ಪ್ರಮುಖ ಮದ್ದು ಎಂದರೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲುವುದು. ತ್ವಚೆಯ ಮೇಲೆ ಯುವಿ-ಬಿ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್ ವಿಟಮಿನ್ ಡಿ ಆಗಿ ಪರಿವರ್ತನೆ ಆಗುವುದು. ನಿಮ್ಮ ತ್ವಚೆಯ ಬಣ್ಣದ ಮೇಲೆ ನೀವು ಬಿಸಿಲಿನಲ್ಲಿ ನಿಲ್ಲುವ ಸಮಯಲ್ಲಿ ವ್ಯತ್ಯಾಸವಿರುತ್ತದೆ. ಕಪ್ಪು ಬಣ್ಣದ ತ್ವಚೆಯವರು ಬಿಳಿ ಬಣ್ಣದ ತ್ವಚೆಯವರಿಗಿಂತ ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಲ್ಲಬೇಕು. ಇನ್ನು ವಯಸ್ಸು ಹೆಚ್ಚಾದಂತೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಂತರೆ ಒಳ್ಳೆಯದು.

ಇದನ್ನೂ ಓದಿ:IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

2. ಮೀನು ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆ. ಬೂತಾಯಿ, ಮೃದ್ವಂಗಿಗಳು, ಸಿಗಡಿ, ಬಂಗುಡೆ ಈ ಮೀನುಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ.

3. ಬೆಳಸುವ ಅಣಬೆಗಳಿಗಿಂತ ನೈಸರ್ಗಿಕವಾಗಿ ಸಿಗುವ ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕವಿರುತ್ತದೆ.

4. ಮೀನು ತಿನ್ನದವರು ಮೊಟ್ಟೆಯನ್ನು ತಿಂದರೆ ಅದರಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಡಿ ದೊರೆಯುವುದು. ಮೊಟ್ಟೆಯ ಬಿಳಿ ಜತೆಗೆ ಅರಿಶಿಣ ಕೂಡ ತಿನ್ನಿ.

5. ಇನ್ನು ದನದ ಹಾಲು ಕುಡಿಯುವುದು, ಸೋಯಾ ಹಾಲು, ಕಿತ್ತಳೆ ಜ್ಯೂಸ್‌ ಇವುಗಳನ್ನು ಕೂಡ ಡಯಟ್‌ನಲ್ಲಿ ಸೇರಿಸಿ.
ಓಟ್‌ಮೀಲ್ ಹಾಗೂ ಧಾನ್ಯಗಳಲ್ಲಿ ಕೂಡ ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಡಿ ಇರುತ್ತದೆ.

Continue Reading

ಆರೋಗ್ಯ

Outdoor Exercise: ಹೊರಾಂಗಣ ವ್ಯಾಯಾಮ ಖಿನ್ನತೆಯನ್ನು ದೂರ ಮಾಡುವುದೇ?

Outdoor Exercise: ಆರೋಗ್ಯವಾಗಿರಲು ವ್ಯಾಯಾಮ ಬಹು ಮುಖ್ಯ. ವ್ಯಾಯಾಮ ಮಾಡುವ ಪ್ರತಿಯೊಂದು ವಿಧಾನಗಳು ಮಾನಸಿಕ ಆರೋಗ್ಯ ಕಾಪಾಡಲು ನಮಗೆ ಸಹಕಾರಿಯಾಗುತ್ತದೆ. ಆದರಲ್ಲೂ ಹೊರಗಣ ವ್ಯಾಯಾಮ ಮಾಡುವುದರಿಂದ ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಅದು ಹೇಗೆ ಗೊತ್ತೇ? ಈ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Outdoor Exercise
Koo

ಆರೋಗ್ಯವಾಗಿರಲು (healthy) ವ್ಯಾಯಾಮ (exercise) ಬಹುಮುಖ್ಯ. ಪ್ರತಿಯೊಂದು ರೀತಿಯ ವ್ಯಾಯಾಮವೂ ದೇಹ, ಮನಸ್ಸಿನ ಆರೋಗ್ಯಕ್ಕೆ ತನ್ನದೇ ಆದ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರಲ್ಲೂ ಹೊರಾಂಗಣ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೆ (mental health) ಬಹು ಪ್ರಯೋಜನಕಾರಿಯಾಗಿದೆ.

ಹೊರಾಂಗಣದಲ್ಲಿ ವ್ಯಾಯಾಮ (Outdoor Exercise) ಖಿನ್ನತೆಯ (depression) ಅಪಾಯವನ್ನು ಕಡಿಮೆ ಮಾಡುವುದು ಮಾತ್ರವಲ್ಲ ವಿವಿಧ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ತಜ್ಞರು. ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೊರಾಂಗಣ ವ್ಯಾಯಾಮ ಮಾಡುವುದರಿಂದ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಅಂಶಗಳು.

ಇದನ್ನೂ ಓದಿ: Vampire Facial: ಹೆಣ್ಣುಮಕ್ಕಳೇ ಎಚ್ಚರ; ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ!


ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು

ಸೂರ್ಯನ ಬೆಳಕು ನಮ್ಮ ದೇಹದ ಸಿರೊಟೋನಿನ್ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನರಗಳ ಯೋಗಕ್ಷೇಮ ಮತ್ತು ಸಂತೋಷದ ಭಾವನೆಗಳಿಗೆ ಸೂರ್ಯನ ಬೆಳಕು ಸಾಕಷ್ಟು ಕೊಡುಗೆ ನೀಡುತ್ತದೆ. ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (ಎಸ್‌ಎಡಿ) ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಸಾಮಾನ್ಯವಾಗಿ ಮನಸ್ಥಿತಿಯನ್ನು ಸುಧಾರಿಸುತ್ತದೆ.

ವಿಟಮಿನ್ ಡಿ ಉತ್ಪಾದನೆ

ಸೂರ್ಯನ ಬೆಳಕಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಅನ್ನು ಉತ್ಪಾದಿಸಲು ಚರ್ಮಕ್ಕೆ ಉತ್ತೇಜಿನ ಸಿಕ್ಕಂತಾಗುತ್ತದೆ. ಮೆದುಳಿನ ಕಾರ್ಯವನ್ನು ಒಳಗೊಂಡಂತೆ ಒಟ್ಟಾರೆ ಆರೋಗ್ಯಕ್ಕೆ ನಿರ್ಣಾಯಕವಾಗಿದೆ. ಕಡಿಮೆ ಮಟ್ಟದ ವಿಟಮಿನ್ ಡಿ ಖಿನ್ನತೆ ಮತ್ತು ಇತರ ಮಾನಸಿಕ ಅಸ್ವಸ್ಥತೆಗಳನ್ನು ದೂರ ಮಾಡುತ್ತದೆ.

ದೈಹಿಕ ಚಟುವಟಿಕೆ

ವ್ಯಾಯಾಮ ಎಂಡಾರ್ಫಿನ್ ಗಳನ್ನು ಬಿಡುಗಡೆ ಮಾಡುತ್ತದೆ. ಮೆದುಳಿನಲ್ಲಿ ನೈಸರ್ಗಿಕ ನೋವು ನಿವಾರಕಗಳು ಮತ್ತು ಮೂಡ್ ಎಲಿವೇಟರ್ ಗಳಾಗಿ ಇದು ಕಾರ್ಯನಿರ್ವಹಿಸುವ ರಾಸಾಯನಿಕಗಳು. ಹೊರಾಂಗಣ ವ್ಯಾಯಾಮವು ಚಲನೆ ಮತ್ತು ದೈಹಿಕ ಪರಿಶ್ರಮವನ್ನು ಉತ್ತೇಜಿಸುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಸಾಮಾಜಿಕ ಸಂವಹನ

ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ಸಾಮಾನ್ಯವಾಗಿ ನಡಿಗೆ, ಜಾಗಿಂಗ್ ಅಥವಾ ತಂಡದ ಕ್ರೀಡೆಗಳಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಇದನ್ನು ಇತರರೊಂದಿಗೆ ಮಾಡಬಹುದಾಗಿದೆ. ಮಾನಸಿಕ ಆರೋಗ್ಯಕ್ಕೆ ಸಾಮಾಜಿಕ ಸಂವಹನವು ಅತ್ಯಗತ್ಯ. ಏಕೆಂದರೆ ಇದು ಒಂಟಿತನದ ಭಾವನೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ.


ಪ್ರಕೃತಿಯೊಂದಿಗೆ ಸಂಪರ್ಕ

ಪರಿಸರದ ಮಧ್ಯೆ ಇರುವುದು ಮನಸ್ಸನ್ನು ಶಾಂತಗೊಳಿಸುತ್ತದೆ. ಹೊರಾಂಗಣ ವ್ಯಾಯಾಮವನ್ನು ಉದ್ಯಾನವನ, ಅರಣ್ಯ ಅಥವಾ ಕಡಲತೀರದಲ್ಲಿ ಅಥವಾ ಮನೆಯ ಬಾಲ್ಕನಿಯಲ್ಲಿ ಮಾಡುವುದರಿಂದ ಪ್ರಕೃತಿಯ ದೃಶ್ಯಗಳು, ಶಬ್ದಗಳು ಮತ್ತು ವಾಸನೆಗಳು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಒತ್ತಡ ಕಡಿಮೆ ಮಾಡುವುದು

ಹೊರಾಂಗಣ ವ್ಯಾಯಾಮವು ಮನಸ್ಸಿಗೆ ಸಾವಧಾನತೆಯನ್ನು ಒದಗಿಸುತ್ತದೆ. ಯಾಕೆಂದರೆ ಇದು ನಮ್ಮ ಸುತ್ತಮುತ್ತಲಿನ ಮತ್ತು ದೈಹಿಕ ಸಂವೇದನೆಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಸಾವಧಾನತೆಯು ಒತ್ತಡ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮನಸ್ಸಿನ ಶಾಂತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ.

ಹೊಸ ಅನುಭವ

ಹೊರಾಂಗಣದಲ್ಲಿ ವ್ಯಾಯಾಮವು ದೃಶ್ಯಾವಳಿಗಳ ಬದಲಾವಣೆ ಹೊಸ ಅನುಭವಗಳನ್ನು ನೀಡುತ್ತದೆ. ಇದು ಒಳಾಂಗಣ ಜೀವನಕ್ರಮಗಳ ಏಕತಾನತೆಯನ್ನು ಹೋಗಲಾಡಿಸುತ್ತದೆ. ವ್ಯಾಯಾಮದ ದಿನಚರಿಗಳಲ್ಲಿನ ವೈವಿಧ್ಯತೆಯು ಬೇಸರವನ್ನು ದೂರ ಮಾಡುತ್ತದೆ ಮತ್ತು ಹೆಚ್ಚಿನ ಪ್ರೇರಣೆಯನ್ನು ನೀಡುತ್ತದೆ.


ಉತ್ತಮ ನಿದ್ರೆ

ನಿಯಮಿತ ವ್ಯಾಯಾಮವನ್ನು ವಿಶೇಷವಾಗಿ ಹೊರಾಂಗಣದಲ್ಲಿ ಮಾಡಿದಾಗ ಉತ್ತಮ ನಿದ್ರೆ ಆವರಿಸುವುದು. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಅತ್ಯಗತ್ಯ, ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ವಾಭಿಮಾನವನ್ನು ಹೆಚ್ಚಿಸುತ್ತದೆ

ಹೊರಾಂಗಣ ವ್ಯಾಯಾಮದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಇದರಿಂದ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಸಾಧನೆ ಮತ್ತು ಸಮರ್ಥ ಭಾವನೆಯು ಖಿನ್ನತೆಗೆ ಸಂಬಂಧಿಸಿದ ನಿಷ್ಪ್ರಯೋಜಕತೆ ಅಥವಾ ಅಸಮರ್ಪಕತೆಯ ಭಾವನೆಗಳನ್ನು ಹೋಗಲಾಡಿಸುತ್ತದೆ.

ನಕಾರಾತ್ಮಕ ಆಲೋಚನೆಗಳಿಂದ ಮುಕ್ತಿ

ಹೊರಾಂಗಣ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಖಿನ್ನತೆಗೆ ಕಾರಣವಾಗುವ ಒತ್ತಡಗಳು ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಾಗಬಹುದು. ದೈಹಿಕ ಚಟುವಟಿಕೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದರಿಂದ ಮನಸ್ಸು ನಕಾರಾತ್ಮಕ ಯೋಚನೆಗಳನ್ನು ಮಾಡುವುದನ್ನು ಬಿಡುತ್ತದೆ.

Continue Reading
Advertisement
S M Krishna
ಕರ್ನಾಟಕ4 mins ago

S M Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ವೈರಲ್ ನ್ಯೂಸ್8 mins ago

Viral Video: ಪಾಪಿ ಮಗನಿಂದ ತಂದೆ ಮೇಲೆ ಇದೆಂಥಾ ಕ್ರೌರ್ಯ! ವಿಡಿಯೋ ನೋಡಿ

facebook whatsapp instagram
ಪ್ರಮುಖ ಸುದ್ದಿ11 mins ago

WhatsApp Exit India: ವಾಟ್ಸ್ಯಾಪ್‌ ಜೊತೆಗೇ ಭಾರತ ತೊರೆಯಲಿವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ?

Dubai Airport
EXPLAINER21 mins ago

Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

IPL 2024 Points Table
ಕ್ರೀಡೆ32 mins ago

IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

Minister Lakshmi hebbalkar Latest statement in Belagavi
ಬೆಳಗಾವಿ51 mins ago

Lakshmi Hebbalkar: ಪ್ರಜ್ವಲ್ ಹಗರಣದ ಬಗ್ಗೆ ಬಿಜೆಪಿ ನಾಯಕರ ಮೌನವೇಕೆ? ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ

Sahil Khan Travelled 1,800 km In 4 Days To Avoid Arrest
ಬಾಲಿವುಡ್54 mins ago

Sahil Khan: ಪೊಲೀಸರಿಂದ ತಪ್ಪಿಸಿಕೊಳ್ಳಲು 1,800 ಕಿ.ಮೀ ಪ್ರಯಾಣಿಸಿದ್ದ ನಟ ಸಾಹಿಲ್ ಖಾನ್!

Hassan Pen Drive Case Deve Gowda refuses to expel Prajwal and What is the reason
ಕರ್ನಾಟಕ1 hour ago

Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

Pro-Khalistan slogan
Latest1 hour ago

Pro-Khalistan slogan : ಕೆನಡಾ ಪ್ರಧಾನಿ ಟ್ರುಡೊ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ!

prachi nigam online troll
ವೈರಲ್ ನ್ಯೂಸ್1 hour ago

Prachi Nigam: “ನಾನು ಟಾಪ್‌ ಬರಲೇಬಾರದಿತ್ತು…” ಮೀಸೆಯಿಂದಾಗಿ ಟ್ರೋಲ್‌ಗೊಳಗಾದ ಬೋರ್ಡ್‌ ಎಕ್ಸಾಮ್‌ ಟಾಪರ್‌ ಹುಡುಗಿಯ ನೋವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20242 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ10 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202423 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌