Fitness secret: ಯಾವಾಗಲೂ ಫಿಟ್‌ ಆಗಿರುತ್ತಾರಲ್ಲ, ಅವರ ದಿನಚರಿಯ ಈ 10 ಅಭ್ಯಾಸ ನೋಡಿದಿರಾ? - Vistara News

ಆರೋಗ್ಯ

Fitness secret: ಯಾವಾಗಲೂ ಫಿಟ್‌ ಆಗಿರುತ್ತಾರಲ್ಲ, ಅವರ ದಿನಚರಿಯ ಈ 10 ಅಭ್ಯಾಸ ನೋಡಿದಿರಾ?

ಫಿಟ್‌ ಆಗಿರುವ ದೇಹ ಹೊಂದಿರುವ ವ್ಯಕ್ತಿಗಳು ಆನಂದವಾಗಿಯೂ ಇದ್ದರೆ, ಖಂಡಿತವಾಗಿಯೂ ಅವರು ಅನುಸರಿಸುವ ಈ ಕೆಳಗಿನ ಕೆಲವು Fitness secret ಅದಕ್ಕೆ ಕಾರಣವಾಗಿರುತ್ತವೆ.

VISTARANEWS.COM


on

fitness
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವರಿರುತ್ತಾರೆ, ವರ್ಷದ ಯಾವ ಕಾಲವೇ ಬರಲಿ, ಏನೇ ಆಗಲಿ, ಸದಾ ಒಂದೇ ಆಕಾರದಲ್ಲಿರುತ್ತಾರೆ. ಅವರು ಎಷ್ಟೇ ತಿಂದರೂ, ಎಷ್ಟೇ ತಿರುಗಾಡಿದರೂ ಏನೇ ಮಾಡಿದರೂ ಯಾವಾಗಲೂ ಅವರ ಮುಖದಲ್ಲೊಂದು ಕಾಂತಿ ಚಿಮ್ಮುತ್ತಿರುತ್ತದೆ. ಕೆಲವರು ಏನೇ ವರ್ಕೌಟ್‌ ಮಾಡಿದರೂ, ಏನೇ ಕಸರತ್ತು ಮಾಡಿದರೂ ಅಂದುಕೊಂಡ ಆಕಾರಕ್ಕೆ ದೇಹವನ್ನು ತರಲಾಗುವುದಿಲ್ಲ. ಹೀಗಾದಾಗ ಬಹಳ ಸಾರಿ, ಫಿಟ್‌ ಆಗಿ ಸದಾ ಲವಲವಿಕೆಯಿಂದ ಮುಖದಲ್ಲಿ ಕಾಂತಿ ತುಳುಕಿಸಿಕೊಂಡು ಓಡಾಡುವವರನ್ನು ಕಂಡಾಗ, ಈ ಫಿಟ್‌ನೆಸ್‌ ಅನ್ನೋದು ಬಿಡಿಸಲಾಗದ ಗಂಟು ಎಂದು ಅನಿಸತೊಡಗುತ್ತದೆ.

ಕೇವಲ ವರ್ಕೌಟ್‌ ಅಷ್ಟೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬ ಬಹುತೇಕರ ಎಣಿಕೆ ತಪ್ಪಾಗುತ್ತದೆ. ಹಾಗಾದರೆ, ಫಿಟ್ನೆಸ್‌ ಕಾಯ್ದುಕೊಳ್ಳುವ ಜೊತೆಗೆ ಸದಾ ಖುಷಿಯ ಬುಗ್ಗೆಗಳಾಗಿ ಕಾಣಿಸುವ ಮಂದಿಯ ೧೦ ಉತ್ತಮ ಅಭ್ಯಾಸಗಳು ಯಾವುದಿದ್ದೀತು ಎಂಬುದನ್ನು ಇಲ್ಲಿ ತಿಳಿಯೋಣ.

೧. ಅವರು ವ್ಯಾಯಾಮಕ್ಕಿಂತ ಹೆಚ್ಚು ವ್ಯಾಯಾಮದಿಂದ ಸಿಗುವ ಸಂತೋಷವನ್ನು ಬಯಸುತ್ತಾರೆ. ಮಾಡುವ ಸಣ್ಣ ಮಟ್ಟಿನ ವ್ಯಾಯಾಮವನ್ನು ಖುಷಿಯಿಂದ ಮಾಡುತ್ತಾರೆ. ಬಹುಶಃ ಅವರು ತಮ್ಮ ದುಗುಡವನ್ನು ಕಳೆಯಲು ವರ್ಕೌಟ್‌ ಮಾಡುತ್ತಿರಬಹುದು ಅಥವಾ ಜಸ್ಟ್‌ ಫಾರ್‌ ಎ ಚೇಂಜ್‌ ಅಂತ ವರ್ಕೌಟ್‌ ಮಾಡುತ್ತಿರಬಹುದು.

೨. ಅವರು ಯಾವುದನ್ನು ತಿನ್ನಬಾರದು ಎಂದು ಯಾವಾಗಲೂ ಯೋಚಿಸುವ ಬದಲು ಯಾವುದನ್ನೆಲ್ಲ ತಿನ್ನಬಹುದು ಎಂಬ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಸಕ್ಕರೆ ರಹಿತ, ಕಡಿಮೆ ಕಾರ್ಬೋಹೈಡ್ರೇಟ್‌ ಡಯಟ್‌ ಬಗ್ಗೆ ಯೋಚಿಸುತ್ತಲೇ ತಲೆಬಿಸಿ ಮಾಡಿಕೊಂಡು ತಿನ್ನದಿರುವ ವಸ್ತುಗಳನ್ನು ಯೋಚನೆ ಮಾಡಿಕೊಂಡು ಅದನ್ನೊಂದು ಶಿಕ್ಷೆಯಂತೆ ಭಾವಿಸಿ ಪಾಲಿಸುವ ಮಂದಿಯ ಎದುರು ಇವರು ಭಿನ್ನ. ಖುಷಿಯಿಂದ ಯಾವುದನ್ನೆಲ್ಲ ತಿನ್ನಬಹುದು ಎಂದು ಯೋಚಿಸಿ ತಿನ್ನುವ ಈ ಮಂದಿಯ ಪಾಸಿಟಿವ್‌ ಗುಣವೇ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ.

೩. ಜಿಮ್‌ಗೆ ಹೋದರಷ್ಟೇ ವ್ಯಾಯಾಮ ಎಂಬ ಮನಸ್ಥಿತಿ ಅವರಲ್ಲಿರುವುದಿಲ್ಲ. ಜಿಮ್‌ ಹೊರತಾಗಿ ಸಾಕಷ್ಟು ಚುರುಕಾಗಿ ಓಡಾಡಿಕೊಂಡಿರುವ ಅವರಿಗೆ, ಇತರೆ ಕೆಲಸ ಕಾರ್ಯಗಳಿಂದಲೇ ಸಾಕಷ್ಟು ವ್ಯಾಯಾಮ ದೊರೆತಿರುತ್ತದೆ.

೪. ಎಷ್ಟು ವರ್ಕೌಟ್‌ ಮಾಡಿದ್ದೇವೆ ಎಂಬುದರ ಮೇಲಷ್ಟೆ ಫಿಟ್ನೆಸ್‌ ಅವಲಂಬಿಸಿದೆ ಎಂದು ಅಂದುಕೊಂಡರೆ ಅದು ತಪ್ಪು. ಅವರು ವರ್ಕೌಟ್‌ ಬಗ್ಗೆ ಗಮನ ಕೊಟ್ಟಷ್ಟೇ ವಿರಾಮಕ್ಕೂ ಆದ್ಯತೆ ನೀಡುತ್ತಾರೆ.

೫. ಅವರಿಗೆ ಅತಿಯಾಗಿ ಹಸಿವಾಗುವುದಿಲ್ಲ ಅಥವಾ ಅವರು ಎಂದಿಗೂ ಅತಿಯಾಗಿ ತಿನ್ನುವುದಿಲ್ಲ. ಡಯಟ್‌ ಹೆಸರಿನಲ್ಲಿ ಹೆಚ್ಚು ಹಸಿವು ಮಾಡಿಕೊಳ್ಳುವುದು ಹಾಗೂ ಆ ಹಸಿವಿನಿಂದಾಗಿ ಹೆಚ್ಚು ತಿನ್ನುವುದು ಶೇಪ್‌ನಲ್ಲಿರುವುದಕ್ಕೆ ಯಾವಾಗಲೂ ತಡೆಯಾಗುವ ಅಂಶ. ಆದರೆ ಇವರು ಆಗಾಗ ಸ್ವಲ್ವ ಸ್ವಲ್ಪ ತಿನ್ನುತ್ತಾರೆ ಮತ್ತು ಎಂದಿಗೂ ಹಸಿವಿನಿಂದ ಬಳಲುವುದಿಲ್ಲ.

೬. ಇವರು ಬಗೆಬಗೆಯ ಡಯಟ್‌ಗಳ ಮೊರೆ ಹೋಗುವುದಿಲ್ಲ. ತಮ್ಮ ದೇಹದ ಮಾತು ಕೇಳುತ್ತಾರೆ. ಆರೋಗ್ಯದ ದೃಷ್ಟಿಯಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಯೋಚಿಸಿ ತಮ್ಮ ಡಯಟ್‌ ಬಗ್ಗೆ ನಿರ್ಧರಿಸುತ್ತಾರೆ.

ಇದನ್ನೂ ಓದಿ: 40 ವರ್ಷ ವಯಸ್ಸಾದ ಮೇಲೆ ಆಹಾರದಲ್ಲಿ ಇವು ಇರಲೇಬೇಕು!

೭. ಅವರು ತುಂಬ ನೀರು ಕುಡಿಯುತ್ತಾರೆ. ಮಾನವನ ದೇಹ ಶೇಕಡಾ ೬೦ಕ್ಕಿಂತಲೂ ಹೆಚ್ಚು ಭಾಗ ನೀರನ್ನು ಹೊಂದಿದೆ. ಹಾಗಾಗಿ ದೇಹಕ್ಕೆ ನೀರು ಅತೀ ಅಗತ್ಯ. ನೀರು ಸರಿಯಾಗಿ ಪೂರೈಕೆ ಮಾಡುತ್ತಿಲ್ಲವಾದರೆ ಅದು ನಿಮ್ಮ ಆರೋಗ್ಯದ ಮೂಲಕ ತಿಳಿಯುತ್ತದೆ.

೮. ಅವರ ಜೀವನದಲ್ಲಿ ಶಿಸ್ತು ಇರುತ್ತದೆ. ಅವರು ದಿನನಿತ್ಯದಲ್ಲಿ ಕೆಲವು ಸಿಂಪಲ್‌ ಆಹಾರ ಅಭ್ಯಾಸಗಳನ್ನು ಪಾಲಿಸುತ್ತಿರುತ್ತಾರೆ. ಬೆಳಗಿನ ಹಾಗೂ ರಾತ್ರಿಯ ಆಹಾರದ ಶಿಸ್ತು ಅವರಲ್ಲಿ ಖಂಡಿತಾ ಇರುತ್ತದೆ.

೯. ಅವರು ಆಸಕ್ತಿಕರವಾಗಿ ಬದುಕುತ್ತಿರುತ್ತಾರೆ. ತಮ್ಮ ಇಷ್ಟದ ಸಂಗತಿಗಳನ್ನು ಮಾಡುತ್ತಿರುತ್ತಾರೆ. ಬದುಕಿನ ಸಣ್ಣ ಸಣ್ಣ ಸಂಗತಿಗಳಿಗೆ ಮಹತ್ವ ನೀಡುತ್ತಾರೆ ಹಾಗೂ ತಮ್ಮ ಆಸಕ್ತಿಯ ವಿಷಯಗಳಿಗೆ ಹವ್ಯಾಸಗಳಿಗೆ ಸಮಯ ನೀಡುತ್ತಿರುತ್ತಾರೆ.

೧೦. ತಮಗೇನು ಬೇಕು ಹಾಗೂ ತಮಗೇನು ಪಡೆಯಲು ಹಕ್ಕಿದೆ ಎಂಬ ಬಗ್ಗೆ ಇವರಿಗೆ ಸರಿಯಾಗಿ ಗೊತ್ತಿರುತ್ತದೆ. ಇವರು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ತಮ್ಮ ದೇಹದ ಆಕಾರಕ್ಕಿಂತಲೂ ಇವರು ಪ್ರದರ್ಶಿಸುವ ಆತ್ಮವಿಶ್ವಾಸವೇ ಅವರ ವ್ಯಕ್ತಿತ್ವಕ್ಕೊಂದು ತೂಕ ನೀಡುವುದರಿಂದ ಸುಂದರವಾಗಿಯೂ ಕಾಂತಿಯುಕ್ತವಾಗಿಯೂ ಕಾಣುತ್ತಾರೆ.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Weight Loss Tips Kannada: ಈ ಐದರಲ್ಲಿ ಒಂದು ಜ್ಯೂಸ್‌ ಕುಡಿಯುತ್ತಿದ್ದರೂ ಸಾಕು, ನಿಮ್ಮ ದೇಹ ತೂಕ ಇಳಿಯುತ್ತದೆ!

ಒಮ್ಮೆ ಹೆಚ್ಚಾದ ತೂಕವನ್ನು ನಿಯಂತ್ರಿಸುವುದು ಬಹು ಕಷ್ಟ. ಆದರೆ ನಿತ್ಯ ಈ ಐದು ಪಾನೀಯಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದೊಂದಿಗೆ ದೇಹದ ತೂಕ ನಷ್ಟವನ್ನು (Weight Loss Tips Kannada) ಸುಲಭವಾಗಿ ಮಾಡಬಹುದು. ತೂಕ ಇಳಿಸುವ ಸುಲಭ ವಿಧಾನಗಳ ಪರಿಚಯ ಇಲ್ಲಿದೆ.

VISTARANEWS.COM


on

By

Weight Loss Tips kannada
Koo

ದೇಹದ ತೂಕವನ್ನು ಸಮತೋಲನದಲ್ಲಿ ಇರಿಸುವುದು ಸುಲಭದ ಕೆಲಸವೇನಲ್ಲ. ಅದಕ್ಕಾಗಿ ನಾವು ತಿನ್ನುವ ಆಹಾರ (food), ನಿತ್ಯದ ದೈಹಿಕ ಚಟುವಟಿಕೆ (exercise) ಕೂಡ ಕಾರಣವಾಗುತ್ತದೆ. ಒಮ್ಮೆ ತೂಕ ಹೆಚ್ಚಾದರೆ ಅದನ್ನು ಇಳಿಸುವುದು ಸುಲಭದ ಪ್ರಕ್ರಿಯೆಯಲ್ಲ. ದೇಹದ ತೂಕ ಹೆಚ್ಚಳವು ಸಾಮಾನ್ಯವಾಗಿ ಆತಂಕ ಉಂಟು ಮಾಡುತ್ತದೆ. ಆದರೆ ಸರಿಯಾದ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದ ದೇಹದ ತೂಕವನ್ನು ನಿಯಂತ್ರಿಸಿ (Weight Loss Tips Kannada) ಮತ್ತೆ ಹಿಂದಿನಂತೆ ಸ್ಮಾರ್ಟ್ ಆಂಡ್ ಸ್ಲಿಮ್ (smart and slim) ಆಗಲು ಸಾಧ್ಯವಿದೆ.

ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಒಂದು ಆಹಾರದ ಸಲಹೆಯನ್ನು ನಿತ್ಯ ಪಾಲಿಸಿದರೆ ಆರೋಗ್ಯವಾಗಿಯೂ ಇರಬಹುದು ಮತ್ತು ದೇಹದ ತೂಕವನ್ನು ಸಮತೋಲನದಲ್ಲಿಯೂ ಇರಿಸಬಹುದು. ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಗೆ ಕೆಲವು ಫ್ರೆಶ್ ಜ್ಯೂಸ್‌ಗಳನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾದ ಫೈಬರ್, ಖನಿಜಾಂಶ ಮತ್ತು ವಿಟಮಿನ್‌ ಗಳನ್ನು ಪಡೆಯಬಹುದು. ಅಲ್ಲದೇ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ದೇಹದ ತೂಕ ಇಳಿಸಬೇಕು ಎನ್ನುವ ಯೋಜನೆ ಇದ್ದರೆ ನಿತ್ಯವೂ ಕುಡಿಯಬೇಕಾದ ಕೆಲವು ಅದ್ಭುತ ಜ್ಯೂಸ್‌ ಗಳಿವೆ.


ಕೊತ್ತಂಬರಿ ನೀರು

ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಒಂದು ಲೋಟ ಕೊತ್ತಂಬರಿ ಸೊಪ್ಪಿನ ನೀರನ್ನು ಸೇವಿಸಿ. ಕೊತ್ತಂಬರಿ ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ದೇಹದಲ್ಲಿ ನೀರಿನ ಧಾರಣವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಯಕೃತ್ತಿನ ಆರೋಗ್ಯ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚಯಾಪಚಯವನ್ನು ಧನಾತ್ಮಕವಾಗಿ ವೃದ್ಧಿಸುತ್ತದೆ.


ನಿಂಬೆ ನೀರು

ತೂಕ ನಷ್ಟ ಮಾಡಬೇಕು ಎಂದು ಬಯಸುವವರು ನಿಂಬೆ ನೀರಿನ ಬಗ್ಗೆ ಸಾಕಷ್ಟು ಕೇಳಿರುತ್ತಾರೆ. ಆದರೆ ಬಹುತೇಕ ಮಂದಿ ಪ್ರಯೋಗ ಮಾಡಿರುವುದಿಲ್ಲ. ಮಾಡಿದ್ದರೂ ಒಂದೆರಡು ದಿನ ಮಾಡಿ ಸುಮ್ಮನಾಗಿರುತ್ತಾರೆ. ನಿಂಬೆ ನೀರು ತೂಕವನ್ನು ಅತ್ಯಂತ ವೇಗವಾಗಿ ನಷ್ಟ ಮಾಡುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.


ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಚಯಾಪಚಯವನ್ನು ಉತ್ತೇಜಿಸಲು ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಬಯಸುವವರು ಆರೋಗ್ಯಕರ ಚಯಾಪಚಯವನ್ನು ಹೊಂದಿರುವುದು ಅಗತ್ಯ. ನೈಸರ್ಗಿಕ ಸಕ್ಕರೆಯ ರೂಪದಲ್ಲಿ ಒಂದು ಹನಿ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಅದು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.


ಹಾಗಲಕಾಯಿ ಜ್ಯೂಸ್

ಹಾಗಲಕಾಯಿಯ ರಸವು ತೂಕ ನಷ್ಟಕ್ಕೆ ಉತ್ತಮವಾದ ಕೊಬ್ಬನ್ನು ಸುಡುವ ರಸಗಳಲ್ಲಿ ಒಂದಾಗಿದೆ. ಹಾಗಲಕಾಯಿ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಚಯಾಪಚಯ ಕ್ರಿಯೆಯಲ್ಲಿ ಸುಧಾರಣೆಯಾಗುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ತೂಕವನ್ನು ಕಳೆದುಕೊಳ್ಳಲು ಸಾಕಷ್ಟು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ

ಸೌತೆಕಾಯಿ ಜ್ಯೂಸ್

ನೀರು ಸಮೃದ್ಧವಾಗಿರುವ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಸೌತೆಕಾಯಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅದ್ಭುತವಾದ ಆಹಾರ. ಇದರಲ್ಲಿರುವ ಅತಿಯಾದ ನೀರು ಮತ್ತು ನಾರಿನಂಶವು ನಿಮ್ಮನ್ನುದೀರ್ಘಕಾಲದವರೆಗೆ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಅನಗತ್ಯ ಕಡುಬಯಕೆಗಳನ್ನು ನಿಯಂತ್ರಿಸಿ ದೇಹದ ತೂಕ ನಿರ್ವಹಣೆ ಮಾಡಬಹುದು.

Continue Reading

ಆರೋಗ್ಯ

No Diet Day: ಬೇಕಾಬಿಟ್ಟಿ ಡಯಟ್‌ ಮಾಡಿದರೆ ಏನಾಗುತ್ತದೆ? ಈ ಸಂಗತಿ ತಿಳಿದಿರಲಿ

ಹಲವರು ತಪ್ಪು ಸಲಹೆಗಳಿಂದ ಡಯಟ್‌ ಮಾಡಲು ಹೋಗಿ ಬೇಗ ತೂಕ ಇಳಿಸಿಕೊಳ್ಳುವ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಡಯಟ್ ಮಾಡುವುದು ಮುಖ್ಯ, ಆದರೆ ಪರಿಶೀಲಿಸದೆ ವಾಟ್ಸಾಪ್ ಅಥವಾ ಬೇರೆ ಎಲ್ಲೋ ಕೇಳಿದ ಮಾಹಿತಿಯನ್ನು ಅನುಸರಿಸುವುದಕ್ಕಿಂತ, ನಿಪುಣ ಆಹಾರ ತಜ್ಞರು ಅಥವಾ ವೈದ್ಯರ ಶಿಫಾರಸ್ಸುಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ಈ ಕುರಿತು (No Diet Day) ತಜ್ಞ ವೈದ್ಯರ ಸಲಹೆ ಇಲ್ಲಿದೆ.

VISTARANEWS.COM


on

No Diet Day
Koo

ಡಯಟ್‌ ಎಂಬುದು ಇಂದಿನ ಜೀವನಶೈಲಿಯ ಭಾಗವಾಗಿ ಮಾರ್ಪಟ್ಟಿದೆ. ಏನು ತಿನ್ನಬೇಕು? ಏಷ್ಟು ತಿನ್ನಬೇಕು..? ಎಂಬುದರ ಕುರಿತಂತೆ ತರಹೇವಾರಿ ಪುಕ್ಕಟೆ ಸಲಹೆಗಳು ಇಂಟರ್‌ನೆಟ್‌ ತುಂಬಾ ಹರದಾಡುತ್ತವೆ. ಇಂಥ ಸಮಯದಲ್ಲಿ ಹಲವರು ತಪ್ಪು ಸಲಹೆಗಳಿಂದ ಬೇಗ ತೂಕ ಇಳಿಸಿಕೊಳ್ಳುವ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ, ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಡಯಟ್ ಮಾಡುವುದು ಮುಖ್ಯ, ಆದರೆ ಪರಿಶೀಲಿಸದೆ ವಾಟ್ಸಾಪ್ ಅಥವಾ ಬೇರೆ ಎಲ್ಲೋ ಕೇಳಿದ ಮಾಹಿತಿಯನ್ನು ಅನುಸರಿಸುವುದಕ್ಕಿಂತ, ನಿಪುಣ ಆಹಾರ ತಜ್ಞರು ಅಥವಾ ವೈದ್ಯರ ಶಿಫಾರಸ್ಸುಗಳನ್ನು ಪಾಲಿಸುವುದು (No Diet Day) ಮುಖ್ಯವಾಗಿರುತ್ತದೆ.

Girl having a cheat day

ಪ್ರತಿ ವರ್ಷ ಮೇ 6 ರಂದು ಅಂತಾರಾಷ್ಟ್ರೀಯ ನೋ ಡಯಟ್ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಉತ್ತಮ ಆಹಾರ ಸೇವನೆಯೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುವುದಾಗಿದೆ. ಈ ಕುರಿತಂತೆ ಕಿಂಡರ್‌ ಆಸ್ಪತ್ರೆಯ ಡಯಟಿಷಿಯನ್ ತಜ್ಞೆ ಆಗಿರುವ ಡಾ. ಸಂಜನಾ ಪ್ರೇಮಲಾಲ್‌ ಮಾತನಾಡಿ, ಎಲ್ಲದಕ್ಕೂ ಡಯಟ್‌ ನೆಪವೊಡ್ಡಿ ನಿರಾಕರಿಸುವುದಕ್ಕಿಂತ ಸಮತೋಲಿತ ಪೋಷಣೆಯುಳ್ಳ ಆಹಾರ ಸೇವನೆಯ ಬಗ್ಗೆ ಈ ದಿನ ಅರಿವು ಮೂಡಿಸುವುದಾಗಿದೆ.
ಸಾಮಾನ್ಯವಾಗಿ ಬಹುಪಾಲು ಜನರ ಡಯಟ್‌ ಕೆಲ ದಿನ, ತಿಂಗಳು ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಅಥವಾ ಸಮಾಜದಲ್ಲಿ ದೈಹಿಕ ಸೌಂದರ್ಯಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬ ಕಾರಣಕ್ಕೆ. ಆದ್ರೆ ನೋ ಡಯಟ್‌ ಡೇ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದರ ಜೊತೆಗೆ ಕೆಟ್ಟ ಡಯಟ್‌ ಪದ್ಧತಿಗಳನ್ನ ತಿರಸ್ಕರಿಸುವ ಕುರಿತಂತೆ ಜಾಗೃತಿ ಮೂಡಿಸುತ್ತದೆ ಎಂದವರು ಹೇಳುತ್ತಾರೆ.

Diet women

ಅಸಂಬದ್ಧ ಡಯಟ್‌ನಿಂದ ಆಸ್ಪತ್ರೆ ಸೇರಬಹುದು

ಹಲವು ಕಾರಣಗಳಿಗಾಗಿ ಆರೋಗ್ಯಕರವಲ್ಲದ ಡಯಟ್‌ ಮಾಡಿ ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಸಾಮಾನ್ಯ ಸನ್ನಿವೇಶಗಳಲ್ಲಿ ಅಗತ್ಯ ಪೋಷಕಾಂಶಗಳನ್ನ ಸೇವಿಸದೆ, ಕ್ಯಾಲೋರಿಗಳುಳ್ಳ ಆಹಾರದಿಂದ ದೂರ ಉಳಿಯುವ ಮೂಲಕ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಇದಲ್ಲದೆ, ಬಹುಅಂಗಾಂಗ ವೈಫಲ್ಯ ಉಂಟಾಗಬಹುದು. ಎಲೆಕ್ಟ್ರೋಲೈಟ್‌ ಅಸಮತೋಲನ, ಹೃದಯಾಘಾತ ಹಾಗೂ ಮೂತ್ರಪಿಂಡದ ಸಮಸ್ಯೆಗಳು ಕೂಡ ಎದುರಾಗುತ್ತವೆ. ಅಗತ್ಯ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ, ನಿರ್ಜಲೀಕರಣ, ದೌರ್ಬಲ್ಯ, ವಾಕರಿಕೆ, ಮಲಬದ್ಧತೆ ಜೊತೆಗೆ ವಿಟಮಿನ್ಸ್‌ ಹಾಗೂ ಖನಿಜಗಳ ಅಸರ್ಮಕ ಸೇವನೆಯಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಉತ್ತಮ ಆಹಾರ ಸೇವನೆಯನ್ನು ಬಿಡುವುದು ಎಂದರೆ ದೇಹದ ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುವುದಾಗಿದೆ. ಉತ್ತಮ ಆಹಾರ ಪದ್ದತಿ ದೀರ್ಘಕಾಲ ಪರಿಣಾಮಕಾರಿಯಾಗುವುದರ ಜೊತೆಗೆ ಸಮತೋಲಿತ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಡಾ. ಸಂಜನಾ ಪ್ರೇಮ್‌ಲಾಲ್‌ ಹೇಳಿದರು.

ಸೇವನೆಯಲ್ಲಿ ತಪ್ಪಾದ ಕ್ರಮಗಳು

ಅತಿಯಾದ ಡಯಟ್‌ನಿಂದಾಗಿ ಅನೋರೆಕ್ಸಿಯಾ ನರ್ವೋಸಾ ಅಥವಾ ಬುಲಿಮಿಯಾ ನರ್ವೋಸಾದಂತಹ ಸೇವನೆಯ ಅಸ್ವಸ್ಥತೆ ಉಂಟಾಗುತ್ತದೆ. ಇದರಿಂದ ಗಂಭೀರವಾದ ದೈಹಿಕ ಮತ್ತು ಮಾನಸಿಕ ಪರಿಣಾಮಗಳು ಉಂಟಾಗುತ್ತವೆ. ಆಗ ವೈದ್ಯರ ಸಲಹೆ ಹಾಗೂ ಚಿಕಿತ್ಸೆಯ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಅಸಮರ್ಪಕ ಪೋಷಣೆಯೊಂದಿಗೆ ಅತಿಯಾದ ವ್ಯಾಯಾಮದಿಂದ ಗಾಯಗಳು, ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನ ಕೂಡ ಉಂಟಾಗುತ್ತದೆ. ಆಗ ವೈದ್ಯರನ್ನ ಕಾಣಬೇಕಾಗುತ್ತದೆ. ತಪ್ಪಾದ ಡಯಟ್ನಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ನಿಪುಣ ಆರೋಗ್ಯ ತಜ್ಞರಿಂದ ಮಾಗರ್ದರ್ಶನ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಜೊತೆಗೆ ಪೋಷಣೆ ಹಾಗೂ ತೂಕ ನಿರ್ವಹಣೆಗೆ ಸಮತೋಲಿತ ಆಹಾರ ಸೇವನೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಾ. ಸಂಜನಾ ಪ್ರೇಮ್‌ಲಾಲ್ ಸಲಹೆ ನೀಡುತ್ತಾರೆ.

Woman dieting and eating a salad

ಋಣಾತ್ಮಕ ಪರಿಣಾಮಗಳು

ತಪ್ಪಾದ ಡಯಟ್‌ ಅನುಸರಿಸುವುದು ಹಾಗೂ ಕಡಿಮೆ ಕ್ಯಾಲೋರಿ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮಗಳು ಉಂಟಾಗುತ್ತವೆ. ಅತೃಪ್ತಿ, ಸ್ವಗೌರವ ಕಡಿಮೆ ಆಗುವುದು, ತಿನ್ನುವ ಅಸ್ವಸ್ಥತೆ, ಮಾಂಸಖಂಡಗಳು ಬಲಹೀನವಾಗುವುದು, ಮೂಳೆಗಳು ದುರ್ಬಲಗೊಳ್ಳುವುದು, ಹೃದ್ರೋಗ ಹಾಗೂ ಹಾರ್ಮೋನ್‌ಗಳ ಅಸಮತೋಲನದಂತಹ ಹಾನಿಕಾರಕ ಅಡ್ಡಪರಿಣಾಮಗಳು ಎದುರಾಗುತ್ತವೆ. ಇವುಗಳನ್ನು ತಡೆಗಟ್ಟಲು ಕೆಟೋಜೆನಿಕ್‌ ಆಹಾರವನ್ನು ಸೇವಿಸುವುದು ಉತ್ತಮ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ ತುಂಬಾ ದಿನಗಳ ಕಾಲ ಸೇವಿಸುವುದರಿಂದ ಹೆಪಾಟಿಕ್ ಸ್ಟೀಟೋಸಿಸ್, ಮೂತ್ರಪಿಂಡದ ಕಲ್ಲುಗಳು, ಹೈಪೋಪ್ರೋಟೀನೆಮಿಯಾ ಮತ್ತು ವಿಟಮಿನ್ ಕೊರತೆಯಂತಹ ದೀರ್ಘಕಾಲಿಕ ಪರಿಣಾಮಗಳು ಎದುರಾಗುತ್ತವೆ. ಆಗ ಕೆಟೋಜೆನಿಕ್‌ ಆಹಾರ ಸೇವಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಡಾ.. ಸಂಜನಾ ಪ್ರೇಮ್‌ಲಾಲ್‌ ಹೇಳುತ್ತಾರೆ

ಇದನ್ನೂ ಓದಿ: Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

ಪರಿಪೂರ್ಣ ಆರೋಗ್ಯ

ತಪ್ಪಾದ ಡಯಟ್ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಮೇಲೆ ದುಷ್ಪಾರಿಣಾಮವನ್ನು ಬೀರುತ್ತದೆ. ಹೀಗಾಗಿ ಜೀವಶೈಲಿಗೆ ಅನುಗುಣವಾಗಿ ಪೋಷಣೆಗೆ ಬೇಕಾದಂತಹ ಸಮತೋಲಿತ ಆಹಾರ ಸೇವಿಸುವ ವಿಧಾನಕ್ಕೆ ಆದ್ಯತೆ ನೀಡಿದರೆ ಹಲವು ಆರೋಗ್ಯಕರ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಎನ್ನುತ್ತಾರೆ ಡಾ. ಸಂಜನಾ ಪ್ರೇಮ್‌ಲಾಲ್‌.

Continue Reading

ಆರೋಗ್ಯ

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

ಸಮಾಜದಲ್ಲಿ ಎಲ್ಲರೂ ಒಪ್ಪುವಂಥ, ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ (No Diet Day 2024) ಆಸೆ ಜನರಿಗೆ ಇರುತ್ತದೆ. ಹಾಗಾಗಿ, ಹೇಗೆಹೇಗೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇದನ್ನು ತಡೆದು ದೇಹದ ಬಗ್ಗೆ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲೆಂದು ʻಡಯೆಟ್‌ ರಹಿತ ದಿನʼ ಆಚರಿಸಲಾಗುತ್ತದೆ. ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

No Diet Day 2024
Koo

ಪ್ರತಿಯೊಬ್ಬರಿಗೂ ಲೋಕದ ಅತಿ ಸುಂದರ (No Diet Day 2024) ಕಾಯವನ್ನೇ ಹೊಂದಬೇಕೆಂಬ ಅಭಿಲಾಷೆ ಇದ್ದರೆ, ಅದೇನು ಅತಿಯಲ್ಲ. ಫ್ಯಾಷನ್‌ ನಿಯತಕಾಲಿಕಗಳಲ್ಲಿ ಫೋಟೋಶಾಪ್‌ ಮಾಡಿದ ತಾರೆಗಳ ಚಿತ್ರಗಳು ಇದಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತವೆ. ಹುಡುಗಿಯರಿಗೆ ಬೆನ್ನು-ಹೊಟ್ಟೆ ಒಂದಾಗಿರುವಂತೆ, ಬಳುಕುವ ದೇಹ ಹೊಂದುವ ಮಹದಾಸೆಯಿದ್ದರೆ, ಹುಡುಗರಿಗೆ ದೇಹದ ನರ-ನರಗಳೆಲ್ಲ ಎದ್ದುಬರುವಂತೆ ಸ್ನಾಯುಗಳನ್ನು ಬೆಳೆಸಬೇಕೆಂಬ ಬಯಕೆ ಇರುತ್ತದೆ. ಇವುಗಳ ಹಿಂದೆ ಫಿಟ್‌ನೆಸ್‌ ಉದ್ದೇಶ ಇದ್ದರೆ ಒಂದು ಲೆಕ್ಕ. ಹೆಚ್ಚಿನ ಬಾರಿ ಹಾಗಾಗುವುದೇ ಇಲ್ಲ. ಬದಲಿಗೆ, ಸಮಾಜದಲ್ಲಿ ಎಲ್ಲರೂ ಒಪ್ಪುವಂಥ ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ ಆಸೆ ಇದರ ಹಿಂದಿರುತ್ತದೆ. ಹಾಗಾಗಿ, ಹುಕಿಗೆ ಬಿದ್ದವರಂತೆ ಏನಕ್ಕೇನೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಅಥವಾ ಜೀವವನ್ನೇ ಕಳೆದುಕೊಳ್ಳುತ್ತಾರೆ. ಇಂಥ ಅನಾರೋಗ್ಯಕರ ಪ್ರವೃತ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ʻಅಂತಾರಾಷ್ಟ್ರೀಯ ಡಯೆಟ್‌ ರಹಿತ ದಿನʼವನ್ನಾಗಿ ಮೇ ತಿಂಗಳ 6ನೇ ದಿನವನ್ನು ಗುರುತಿಸಲಾಗಿದೆ.

Girl having a cheat day

ಏನಿದರರ್ಥ?

ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ನಮ್ಮ ದೇಹದ ಬಗೆಗಿನ ಕೀಳರಿಮೆಯನ್ನು ಬಿಟ್ಟು, ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ನಾವಿದ್ದಂತೆಯೇ ನಮ್ಮನ್ನು ಒಪ್ಪಿಕೊಳ್ಳುವುದು ಸಕಾರಾತ್ಮಕ ಜೀವನಕ್ಕೆ ಎಷ್ಟು ಮುಖ್ಯ ಎಂಬ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಸೌಂರ್ಯದ ಹೆಸರಿನಲ್ಲಿ ಎಲ್ಲರೂ ಒಂದೇ ಮಾನದಂಡಕ್ಕೆ ಒಳಪಡುವುದು ಸಾಧ್ಯವಿಲ್ಲ. ಬದಲಿಗೆ, ವಿವಿಧತೆಯೇ ಸೌಂದರ್ಯ ಎಂಬ ಸರಳ ಸೂತ್ರ ಇದರ ಹಿಂದಿದೆ.

ಯಾಕೆ ಬಂತು ಈ ದಿನ?

ಇದು ಪ್ರಾರಂಭವಾಗಿದ್ದು ಬ್ರಿಟನ್‌ನಲ್ಲಿ 1992ರಲ್ಲಿ. ಅಲ್ಲಿನ ಮೇರಿ ಇವಾನ್ಸ್‌ ಯಂಗ್‌ ಈ ದಿನವನ್ನು ಮೊದಲಿಗೆ ಉದ್ದೇಶಿಸಿದ್ದು. ತನ್ನ ದೇಹ ಇರುವ ರೀತಿಯನ್ನು ಒಪ್ಪಿಕೊಳ್ಳಲಾರದೆ, ಆಹಾರ ಕ್ರಮವನ್ನು ಸಿಕ್ಕಾಪಟ್ಟೆ ಏರುಪೇರಾಗಿಸಿಕೊಂಡು, ಅದರಿಂದ ಅನೊರೆಕ್ಸಿಯ ರೋಗಕ್ಕೆ ಆಕೆ ತುತ್ತಾಗಿದ್ದರು. ಇದರಿಂದ ಚೇತರಿಸಿಕೊಂಡ ನಂತರ, ಸೌಂದರ್ಯದ ಹೆಸರಿನಲ್ಲಿ ಅವೈಜ್ಞಾನಿಕ ಡಯೆಟ್‌ಗಳನ್ನು ಪಾಲಿಸುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ, ಲಂಡನ್‌ನ ಹೈಡ್‌ ಪಾರ್ಕ್‌ನಲ್ಲಿ ಇದನ್ನು ಪ್ರಾರಂಭಿಸಿದರು. ಅದೊಂದು, ಹತ್ತಿಪ್ಪತ್ತು ಮಂದಿ ಮಹಿಳೆಯರು ಭಾಗವಹಿಸಿದ್ದ, ಸಣ್ಣ ಪಿಕ್‌ನಿಕ್‌ ರೂಪದಲ್ಲಿ ಮೊದಲಾಯಿತು. ಡಯೆಟ್‌ ಹೆಸರಿನಲ್ಲಿ ತಲೆಬುಡವಿಲ್ಲದ ಆಹಾರ ಕ್ರಮಗಳಿಂದ ದೇಹ-ಮನಸ್ಸುಗಳ ಮೇಲೆ ಆಗುವ ವಿಪರೀತ ಪರಿಣಾಮಗಳನ್ನು ತಿಳಿಸುವುದು ಅಂದಿನ ಉದ್ದೇಶವಾಗಿತ್ತು. ತೂಕದ ವಿಷಯಕ್ಕೆ ಅತಿ ಮಹತ್ವ ನೀಡುವುದು, ಯಾವುದೋ ಒಪ್ಪಿತ ಅಳತೆಗಳಿಗೆ ಒಗ್ಗದವರತ್ತ ತಾರತಮ್ಯ ಮಾಡುವುದು ಇಂಥವನ್ನೆಲ್ಲ ಬಿಟ್ಟು, ಆಹಾರದೊಂದಿಗೆ ಆರೋಗ್ಯಕರ ನಂಟು ಬೆಳೆಸಿಕೊಳ್ಳುವುದು ಅಗತ್ಯ. ಇದನ್ನೇ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಡಯೆಟ್‌ ಮಾಡಬಾರದೆಂದರೆ ಏನೆಂಬುದನ್ನು ಇನ್ನಷ್ಟು ನಿಖರವಾಗಿ ಸ್ಪಷ್ಟಪಡಿಸುವ ಅಗತ್ಯವಿದೆ. ಹಾಗಲ್ಲದಿದ್ರೆ ತಪ್ಪು ಕಲ್ಪನೆಗಳಿಗೆ ಎಡೆಯಾಗಬಹುದು.

Woman dieting and eating a salad

ಏನು ಮಾಡಬೇಕು?

ಮನಸ್ಸಿಗೆ ಬಂದಿದ್ದೆಲ್ಲ ತಿನ್ನುವುದನ್ನು ಪ್ರಚಾರ ಮಾಡುವ ದಿನವಲ್ಲ ಇದು. ಬದಲಿಗೆ ಆರೋಗ್ಯಕರ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಅಂದು ಪ್ರೋತ್ಸಾಹ ನೀಡುವುದು ಮಹತ್ವದ್ದು. ದೇಹ-ಮನಸ್ಸಿಗೆ ಚೈತನ್ಯ ನೀಡುವಂಥ ಸಮತೋಲಿತ ಆಹಾರವನ್ನು ಸೇವಿಸುವುದಕ್ಕಿಂತ ದೇಹದ ತೂಕ, ಸಪೂರ ಕಾಣುವುದು ಮುಖ್ಯವಲ್ಲ. ದೇಹದ ತೂಕ ಕೆಲವೊಮ್ಮೆ ಆನುವಂಶಿಕವಾಗಿ ಬರಬಹುದು, ಹಾರ್ಮೋನುಗಳ ಏರುಪೇರಿನಿಂದ ಬರಬಹುದು, ಔಷಧಿಗಳ ಅಡ್ಡ ಪರಿಣಾಮಗಳಾಗಿರಬಹುದು. ಹಾಗಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕದೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವತ್ತ ಗಮನ ಕೊಡಿ. ಯಾರದ್ದೋ ಫೋಟೋಶಾಪ್‌ ಮಾಡಿದ ದೇಹಗಳಂತೆ ತಮ್ಮದಿಲ್ಲ ಎಂದು ಕೊರಗಬೇಡಿ. ಒತ್ತಡ ರಹಿತವಾಗಿ ಬದುಕುವತ್ತ ಗಮನ ನೀಡಿ. ಧನಾತ್ಮಕ ಸಿಂತನೆಗಳನ್ನು ಬೆಳೆಸಿಕೊಳ್ಳಿ. ಆರೋಗ್ಯವಂತ ದೇಹದ ಸುಂದರ ನಗುವಿಗಿಂತ ಸುಂದರವಾಗಿದ್ದು ಲೋಕದಲ್ಲಿ ಇನ್ನಾವುದೂ ಇಲ್ಲ.

ಇದನ್ನೂ ಓದಿ: Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

Continue Reading

ಆರೋಗ್ಯ

Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರ ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗುವ ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಈ ಕುರಿತ (Cooking oils) ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Cooking Oils
Koo

ಎಣ್ಣೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವ ಸತ್ಯವೇ ಆದರೂ, ಸಾಕಷ್ಟು ಆಹಾರಗಳಲ್ಲಿ ಇಂದು ವ್ಯಾಪಕವಾಗಿ ಎಣ್ಣೆಯ ಬಳಕೆಯಾಗುತ್ತದೆ. ಅದರಲ್ಲೂ ಕೆಲವು ಅಗ್ಗದ ಎಣ್ಣೆಗಳು ಇಂದು ಸಂಸ್ಕರಿಸಿದ ಆಹಾರಗಳ ಮೂಲಕ ನಮ್ಮ ಹೊಟ್ಟೆ ಸೇರುವುದು ನಮಗೆ ಗೊತ್ತೇ ಆಗುವುದಿಲ್ಲ. ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದು ನಾವು ಅಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರಗಳು ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗು ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಬನ್ನಿ, ಯಾವೆಲ್ಲ ಎಣ್ಣೆಗಳನ್ನು ನಾವು ನಮ್ಮ ಆಹಾರದಲ್ಲಿ ನಿತ್ಯವೂ ಬಳಸಬಾರದು (Cooking oils) ಎಂಬುದನ್ನು ನೋಡೋಣ.

Palm oil

ಪಾಮ್‌ ಎಣ್ಣೆ

ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸಂಸ್ಕರಿಸಿದ ಆಹಾರಗಳಲ್ಲಿ, ಪ್ಯಾಕೇಟ್‌ಗಳಲ್ಲಿ ಬಳಸುವ ಎಣ್ಣೆ ಬಹುಪಾಲು ಪಾಮ್‌ ಎಣ್ಣೆ ಎಂಬುದು ನಿಜವಾದರೂ, ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವ ಎಣ್ಣೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಕಡಿಮೆ ದರ ಹಾಗೂ ಸುಲಭವಾಗಿ ದೊರೆಯಬಲ್ಲ ಅಗ್ಗದ ಎಣ್ಣೆ ಇದಾಗಿರಿವುದರಿಂದ ಇದನ್ನು ಇಂದು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಇದರಲ್ಲಿ ಅತ್ಯಂತ ಹೆಚ್ಚು ಸ್ಯಾಚುರೇಟೆಡ್‌ ಫ್ಯಾಟ್‌ ಇರುವುದರಿಂದ ಇದು ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಕೆಟ್ಟದ್ದು.

Soybean oil

ಸೋಯಾಬೀನ್‌ ಎಣ್ಣೆ

ಕಡಿಮೆ ವಾಸನೆಯುಳ್ಳ ಹಾಗೂ ಅತ್ಯಂತ ಕಡಿಮೆ ಬೆಲೆಗೆ ವ್ಯಾಪಕವಾಗಿ ದೊರೆಯುವ ಸೋಯಾಬೀನ್‌ ಎಣ್ಣೆಯಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಒಮೆಗಾ 3 ಫ್ಯಾಟಿ ಆಸಿಡ್‌ನ ಅದೇ ಗುಣಗಳನ್ನು ಇದೂ ಹೊಂದಿರುವುದರಿಂದ ಹಾಗೂ ಉರಿಯೂತವನ್ನು ಹೆಚ್ಚಿಸುವ ಸಂಭವ ಇದರಲ್ಲಿ ಹೆಚ್ಚಿರುವುದರಿಂದ ಈ ಎಣ್ಣೆಯ ಬಳಕೆ ಅತಿಯಾಗಬಾರದು. ಒಮೆಗಾ 3 ಫ್ಯಾಟಿ ಆಸಿಡ್‌ನ ಮೂಲಗಳ ಜೊತೆಗೆ ಸಮತೋಲನದಲ್ಲಿ ಇದನ್ನು ಸೇಔಇಸುವುದು ಉತ್ತಮ. ಇದರ ಅತಿಯಾದ ಬಳಕೆ ಸಲ್ಲದು.

Cottonseed oil

ಹತ್ತಿಬೀಜದ ಎಣ್ಣೆ

ಹತ್ತಿಯನ್ನು ತೆಗೆದ ಮೇಳೆ ಅದರ ಬೀಜದಿಂದ ಮಾಡುವ ಎಣ್ಣೆಯಾದ ಕಾಟನ್‌ ಸೀಡ್‌ ಆಯಿಲ್‌ ಅಥವಾ ಹತ್ತಿಬೀಜದ ಎಣ್ಣೆ ಬಹಳಷ್ಟು ಸಂಸ್ಕರಿಸಿದ ಆಹಾರಗಳಲ್ಲಿ ವ್ಯಾಪಕವಾಗಿ ಇಂದು ಬಳಕೆಯಾಗುತ್ತಿದೆ. ಇದರಲ್ಲಿಯೂ ಒಮೆಗಾ 6 ಫ್ಯಾಟಿ ಆಸಿಡ್‌ ಹೇರಳವಾಗಿದೆ. ಹಾಗಾಗಿ ಇದನ್ನು ಅತಿಯಾಗಿ ಬಳಸುವುದರಿಂದ ಉರಿಯೂತ ಹಾಗೂ ಇತರ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ವೆಜಿಟೆಬಲ್‌ ಆಯಿಲ್

ಈ ಸಾಮಾನ್ಯೀಕರಿಸಿದ ಹೆಸರಿಂದ ಬಹುತೇಕರು ಮೋಸಕ್ಕೆ ಒಳಗಾಗುವುದೇ ಹೆಚ್ಚು. ವೆಜಿಟೆಬಲ್‌ ಆಯಿಲ್‌ ಅಂದಾಕ್ಷಣ, ಆರೋಗ್ಯಕ್ಕೆ ಸಮಸ್ಯೆಯೇನಿಲ್ಲ ಎಂದು ಅಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದರೂ, ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ, ಸೋಯಾಬೀನ್‌ ಹಾಗೂ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತದೆ. ತೀರಾ ಕೆಟ್ಟದ್ದೇನೂ ಅಲ್ಲದಿದ್ದರೂ, ರಿಫೈನ್ಡ್‌ ಎಣ್ಣೆ ಇದಾಗಿರುವುದರಿಂದ ಹಾಗೂ ಸಾಕಷ್ಟು ರಾಸಾಯನಿಕಗಳು ಈ ಸಂದರ್ಭ ಬಳಕೆಯಾಗಿರುವುದರಿಂದ, ಒಮೆಗಾ 6 ಫ್ಯಾಟಿ ಆಸಿಡ್‌ ಹೆಚ್ಚಿರುವುದರಿಂದ ಈ ಎಣ್ಣೆಯೂ ಹೆಚ್ಚು ಬಳಕೆ ಮಾಡುವುದು ಒಳ್ಳೆಯದಲ್ಲ. ನಿತ್ಯದ ಉಪಯೋಗಕ್ಕೆ ಈ ಎಣ್ಣೆ ಅಷ್ಟು ಯೋಗ್ಯವಲ್ಲ.

Hydrogenated oils

ಹೈಡ್ರೋಜಿನೇಟೆಡ್‌ ಆಯಿಲ್‌ಗಳು

ಹೈಡ್ರೋಜಿನೇಷನ್‌ ಎಂಬ ಪ್ರಕ್ರಿಯೆಗೆ ಒಳಪಡಿಸುವ ಎಣ್ಣೆಗಳು ಇದಾಗಿದ್ದು, ಇದರಲ್ಲಿ ದ್ರವರೂಪದ ಎಣ್ಣೆಯನ್ನು ಘನರೂಪಕ್ಕೆ ಪರಿವರ್ತಿಸಲಾಗುತ್ತದೆ. ಇಂತಹ ಎಣ್ಣೆಗಳಲ್ಲಿ ಟ್ರಾನ್ಸ್‌ ಫ್ಯಾಟ್‌ ಅಧಿಕವಾಗಿರುವುದಲ್ಲದೆ, ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಇದು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

Continue Reading
Advertisement
Chinese Scientists
ವಿಜ್ಞಾನ1 min ago

Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ

Ranchi Cash
ದೇಶ3 mins ago

12 ತಾಸು, 6 ಮಷೀನ್‌ಗಳಿಂದ 30 ಕೋಟಿ ರೂ. ಎಣಿಕೆ; ಕಾಂಗ್ರೆಸ್‌ ಮುಖಂಡನ ಪಿಎ ಮನೆಯಲ್ಲಿ ಹಣದ ರಾಶಿ!

Weight Loss Tips kannada
ಲೈಫ್‌ಸ್ಟೈಲ್8 mins ago

Weight Loss Tips Kannada: ಈ ಐದರಲ್ಲಿ ಒಂದು ಜ್ಯೂಸ್‌ ಕುಡಿಯುತ್ತಿದ್ದರೂ ಸಾಕು, ನಿಮ್ಮ ದೇಹ ತೂಕ ಇಳಿಯುತ್ತದೆ!

Laborer died by falling tree in Somawarpet
ಕೊಡಗು9 mins ago

Kodagu News: ಸೋಮವಾರಪೇಟೆಯಲ್ಲಿ ಮರ ಬಿದ್ದು ಕಾರ್ಮಿಕ ಸಾವು

Akshaya Tritiya-2024
ಲೈಫ್‌ಸ್ಟೈಲ್14 mins ago

Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

Rahul Gandi
ದೇಶ18 mins ago

Rahul Gandhi : ಸುಳ್ಳು ಹರಡಬೇಡಿ, ಸುಮ್ಮನಿರಿ; ರಾಹುಲ್​ ಗಾಂಧಿಗೆ ಬಹಿರಂಗ ಪತ್ರ ಬರೆದು ಕುಟುಕಿದ ಯೂನಿವರ್ಸಿಟಿಗಳ ಕುಲಪತಿಗಳು

Lok Sabha Election 2024
ಬಾಗಲಕೋಟೆ27 mins ago

Lok Sabha Election 2024: ಚುನಾವಣಾ ಕರ್ತವ್ಯದ ಮೇಲೆ ತೆರಳುತ್ತಿದ್ದ ಮುಖ್ಯ ಶಿಕ್ಷಕ ಹೃದಯಾಘಾತದಿಂದ ಸಾವು

The Goat Life OTT Release Date Fix
ಒಟಿಟಿ36 mins ago

The Goat Life: ಪೃಥ್ವಿರಾಜ್ ಸುಕುಮಾರನ್ ಅಭಿನಯದ ʻಆಡುಜೀವಿತಂʼ ಒಟಿಟಿ ರಿಲೀಸ್‌ ಎಲ್ಲಿ?

No Diet Day
ಆರೋಗ್ಯ36 mins ago

No Diet Day: ಬೇಕಾಬಿಟ್ಟಿ ಡಯಟ್‌ ಮಾಡಿದರೆ ಏನಾಗುತ್ತದೆ? ಈ ಸಂಗತಿ ತಿಳಿದಿರಲಿ

Dead Body Found
ಕ್ರೈಂ42 mins ago

Dead Body Found: ಕಾಫಿ ತೋಟದ ಮಧ್ಯೆ ನೇತಾಡುತ್ತಿತ್ತು ವ್ಯಕ್ತಿ ಶವ; ಕೆರೆಯಲ್ಲಿ ತೇಲಿ ಬಂದ ಅಪರಿಚಿತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ22 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ23 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ24 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ4 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ5 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌