ರವೀಂದ್ರನಾಥ ಟಾಗೋರ್‌ ಜನ್ಮದಿನಕ್ಕೆ ಅವರ 7 ಪುಟ್ಟ ಕವನಗಳು - Vistara News

ಕಲೆ/ಸಾಹಿತ್ಯ

ರವೀಂದ್ರನಾಥ ಟಾಗೋರ್‌ ಜನ್ಮದಿನಕ್ಕೆ ಅವರ 7 ಪುಟ್ಟ ಕವನಗಳು

ನಮಗೆ ರಾಷ್ಟ್ರಗೀತೆ ನೀಡಿದ ರವೀಂದ್ರನಾಥ ಟಾಗೋರರು ಜನಿಸಿ ಇಂದಿಗೆ (ಮೇ 7) 161 ವರ್ಷಗಳು (1861) ತುಂಬಿವೆ. ಅವರ ಕೆಲವು ಕವನಗಳ ಅನುವಾದ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಂದು

ಯಾವ ಹಾಡನ್ನು ಹಾಡಲೆಂದು ನಾನು ಬಂದೆನೋ ಅದನ್ನು ಇದುವರೆಗೂ ಹಾಡಲೇ ಇಲ್ಲ. ತನ್ನ ತಂಬೂರಿಯನ್ನು ಶ್ರುತಿಗೊಳಿಸುತ್ತ, ತಂತಿಗಳನ್ನು ಬಿಡಿಸುತ್ತ ಸೇರಿಸುತ್ತಲೇ ದಿನಗಳನ್ನು ಕಳೆದೆ. ಸಮಯ ಬಂದಿಲ್ಲ ಇನ್ನೂ, ಸರಿಯಾದ ಪದಗಳೂ ಸಿಕ್ಕಿಲ್ಲ. ಹಾತೊರೆಯುತ್ತಿರುವ ಹೃದಯ ಮಾತ್ರ ಯಾತನೆಯಲ್ಲಿದೆ. ಅವನ ಮುಖವನ್ನು ನಾನು ನೋಡಿಲ್ಲ, ಅವನ ದನಿಯನ್ನೂ ಕೇಳಿಲ್ಲ. ಆದರೆ ಮನೆಯ ಮುಂದಿನ ಹಾದಿಯಲ್ಲಿ ಅವನ ಹೆಜ್ಜೆಯ ಸಪ್ಪಳ ಕೇಳಿರುವೆ. ಮನೆಯೊಳಗೆ ದೀಪ ಹೊತ್ತಿಸಿಲ್ಲ, ಮನೆಯೊಳಗೆ ಕರೆದಿಲ್ಲ. ಅವನ ಭೇಟಿ ಮಾಡುವ ಭರವಸೆಯಲ್ಲೇ ಬದುಕಿರುವೆ, ಆ ಕ್ಷಣ ಬಂದಿಲ್ಲ.

ಎರಡು

ಮನಸ್ಸಿಗೆ ಎಲ್ಲಿ ಅಳುಕು ಇಲ್ಲವೋ, ನಿರ್ಭೀತಿಯಿಂದ ತಲೆಯೆತ್ತಿ ನಿಲ್ಲಬಲ್ಲೆವೋ, ಎಲ್ಲಿ ಜ್ಞಾನವು ಮುಕ್ತವಾಗಿರುವುದೋ, ಎಲ್ಲಿ ಕ್ಷುಲ್ಲಕ ಗೋಡೆಗಳ ನಡುವೆ ಜಗತ್ತು ಛಿದ್ರವಾಗಿ ಚದುರಿಲ್ಲವೋ, ಎಲ್ಲಿ ಆಳವಾದ ಸತ್ಯದ ಅರಿವಿನಿಂದ ಮಾತುಗಳು ಹೊರ ಬರುವವೋ, ಎಲ್ಲಿ ಪರಿಪೂರ್ಣತೆಯತ್ತ ಬಳಲಿಕೆಯಿಲ್ಲದೆ ಕಾಯಕದ ತೋಳುಗಳು ಮುಂದೊತ್ತುವುದೋ, ಎಲ್ಲಿ ನಿಸ್ತೇಜ ಜಡ ರೂಢಿಗಳ ಮರುಭೂಮಿಯ ನಡುವೆ ಕಳೆದುಹೋಗದೆ ಸಧಿಟಿಕ ಶುದ್ಧ ತಿಳಿವಿನ ತೊರೆ ಹರಿಯುವುದೋ, ವಿಸ್ತರದ ಚಿಂತನೆ ಮತ್ತು ಕ್ರಿಯೆಗಳ ವಿವೇಕದಿಂದ ಇವೆಲ್ಲ ಮುನ್ನಡೆದಿರುವಲ್ಲಿ, ಸ್ವಾತಂತ್ರ್ಯದ ಸ್ವರ್ಗದಲ್ಲಿ, ಓ ತಂದೆಯೇ ನಮ್ಮ ರಾಷ್ಟ್ರವು ಎಚ್ಚರವಾಗಲಿ.

ಮೂರು

ದಿನದಿನವೂ ನಾನು ನನ್ನ ಕಾಗದದ ದೋಣಿಗಳ ತೊರೆಯಲ್ಲಿ ತೇಲಿಬಿಡುವೆ. ದೊಡ್ಡ ಕಪ್ಪು ಅಕ್ಷರಗಳಲ್ಲಿ ನನ್ನ ಮತ್ತು ನಾನು ವಾಸಿಸುವ ಊರಿನ ಹೆಸರನ್ನು ಅದರಲ್ಲಿ ಬರೆಯುವೆ. ಎಲ್ಲೋ ಯಾವುದೋ ವಿಚಿತ್ರ ಊರಲ್ಲಿ ಯಾರೋ ಒಬ್ಬ ನನ್ನನ್ನು ಕಂಡುಹಿಡಿಯುವನೆಂಬ ಭರವಸೆ. ಆ ದೋಣಿಗಳಲ್ಲಿ ನನ್ನ ಉದ್ಯಾನದ ಪುಟ್ಟ ಹೂಗಳ ತುಂಬಿಸುವೆ. ಮುಂಜಾನೆ ಅರಳಿದ ಈ ಹೂಗಳು ರಾತ್ರಿ ಸುರಕ್ಷಿತವಾಗಿ ತಲುಪುವುದೆಂಬ ಆಸೆ. ದೋಣಿಗಳ ಬಿಡುವಾಗ ತಲೆ ಮೇಲೆತ್ತಿ ಆಕಾಶವನ್ನು ನೋಡುವೆ, ಪುಟ್ಟ ಮೋಡಗಳು ಒಟ್ಟಾಗಿ ದೊಡ್ಡ ಹಾಯಿಪಟದ ಹಡಗಾಗುವುದನ್ನು. ಆಕಾಶದಲ್ಲಿ ನನ್ನ ಜೊತೆ ಸ್ಪರ್ಧಿಸುತ್ತಿರುವ ಆ ಜೊತೆಗಾರ ಗಾಳಿಯಲ್ಲಿ ಅವುಗಳನ್ನು ತೇಲಿಬಿಡುವನು. ರಾತ್ರಿಯಾದಾಗ ತೋಳುಗಳಲ್ಲಿ ಮುಖ ಹುದುಗಿಸಿ, ತಾರೆಗಳ ಬೆಳಕಿನಲ್ಲಿ ತೇಲುವ ಕಾಗದದ ದೋಣಿಗಳ ಕನಸು ಕಾಣುವೆ. ಬುಟ್ಟಿಗಳಲ್ಲಿ ಕನಸುಗಳ ತುಂಬಿಕೊಂಡ ನಿದ್ರೆಯ ದೇವತೆಗಳು ಅವುಗಳಲ್ಲಿ ಚಲಿಸುತ್ತಿರುವರು.

ನಾಲ್ಕು

ನೀನು ನನ್ನನ್ನು ಕೊನೆಯಿಲ್ಲದಂತೆ ಮುದಗೊಳಿಸಿರುವೆ. ಈ ಒಡಕು ಪಾತ್ರೆ ಮತ್ತೆ ಮತ್ತೆ ಖಾಲಿಯಾಗುತ್ತಲೇ ಇದೆ, ನೀನು ತಾಜಾ ಬದುಕನ್ನು ಅದಕ್ಕೆ ತುಂಬುತ್ತಲೇ ಇರುವೆ. ಒಂಟಿ ತೂತಿನ ಈ ಪುಟ್ಟ ಕೊಳಲನ್ನು ನೀನು ಬೆಟ್ಟಗಳಲ್ಲಿ ಮರುಭೂಮಿಗಳಲ್ಲಿ ಒಯ್ಯುತ್ತಿರುವೆ, ನಿತ್ಯ ಹೊಸ ಮೃದುಮಧುರ ರಾಗಗಳಲ್ಲಿ ಉಸಿರೂಡುತ್ತಿರುವೆ. ನಿನ್ನ ಶಾಶ್ವತ ಸ್ಪರ್ಶದಲ್ಲಿ ಈ ಪುಟ್ಟ ಹೃದಯ ತನ್ನ ಎಲ್ಲೆಗಳ ದಾಟಿ ಅನಿರ್ವಚನೀಯ ಸಂತಸದಲ್ಲಿ ಮೀಯುತ್ತಿದೆ. ನನ್ನ ಪುಟ್ಟ ಕೈಗಳಿಗೇ ಕೊನೆಯಿಲ್ಲದೆ ಬಂದು ಬೀಳುತ್ತಿರುವ ಉಡುಗೊರೆಗಳು. ಯುಗಗಳೇ ಕಳೆದರೂ ನೀನು ಸುರಿಯುತ್ತಲೇ ಇರುವೆ, ಆದರಿನ್ನೂ ಜಾಗವಿದೆ ತುಂಬಲು.

ಐದು

ಹಗಲು ರಾತ್ರಿಗಳಲ್ಲಿ ನನ್ನ ಧಮನಿಗಳಲ್ಲಿ ಹರಿಯುತ್ತಿರುವ ಜೀವನದ ತೊರೆಯೇ ಜಗತ್ತಿನಲ್ಲಿ ಅಂತರ್ಯಾಮಿಯಾಗಿ ಲಯಬದ್ಧವಾಗಿ ನರ್ತಿಸುತ್ತ ಚಲಿಸುತ್ತಿದೆ. ಅಸಂಖ್ಯ ಹುಲ್ಲಿನ ದಳಗಳಲ್ಲಿ ಧರೆಯ ಧೂಳಾಗಿ ಮೇಲಕ್ಕೆದ್ದು ಕೂತಿರುವ, ಎಲೆಗಳಲ್ಲೂ ಹೂವುಗಳಲ್ಲೂ ತುರುಸಿನ ಅಲೆಯಾಗಿ ಹರಿದಿರುವ ಜೀವನವೇ ಅದು. ಕಡಲಿನ ತೊಟ್ಟಿಲಿನಲ್ಲಿ ತೂಗುಯ್ಯಾಲೆಯಾಡುತ್ತಿರುವ ಜನನ ಮರಣಗಳ ಭರತವಿಳಿತಗಳ ಜೀವನವೇ ಅದು. ಈ ಜೀವನದ ತೊರೆಯ ಸ್ಪರ್ಶದಿಂದಲೇ ನನ್ನ ತೋಳುಗಳು ವಿಜಯಿಯಾಗಿವೆ. ನನ್ನ ರಕ್ತದಲ್ಲಿ ಕುಣಿಯುತ್ತಿರುವ ಈ ಜೀವಶಕ್ತಿಯಿಂದಲೇ ನನ್ನ ಹೆಮ್ಮೆ ತಲೆಯೆತ್ತಿದೆ.

ಇದನ್ನೂ ಓದಿ: Book Excerpt: ದೇವೇಂದ್ರನ ಮೀಸೆ ಹಸುರಾದುದು ಹೇಗೆ?

ಆರು

ನಿನ್ನ ಕೈಯಲ್ಲಿ ಸಮಯ ಕೊನೆಯಿಲ್ಲದ್ದು ದೊರೆಯೇ, ನಿಮಿಷಗಳ ಲೆಕ್ಕ ಹಾಕಲು ಅಲ್ಲಿ ಯಾರೂ ಇಲ್ಲ. ದಿನರಾತ್ರಿಗಳು ಕಳೆಯುತ್ತಿವೆ, ಯುಗಗಳು ಅರಳಿ ಮುದುಡುತ್ತಿವೆ ಹೂಗಳಂತೆ. ಕಾಯುವುದು ಹೇಗೆಂದು ನೀನು ಬಲ್ಲೆ. ಸಣ್ಣ ಕಾಡು ಹೂವೊಂದನ್ನು ನೇರ್ಪುಗೊಳಿಸುತ್ತ ನೀನು ಶತಮಾನಗಳ ಕಳೆಯಬಲ್ಲೆ. ಕಳೆಯಲು ನಮ್ಮ ಬಳಿ ಸಮಯವೇ ಇಲ್ಲ; ಒಂದು ಆಯ್ಕೆಗಾಗಿ ಕಾಯುವವರಂತೆ ನಾವು ತಡ ಮಾಡಲಾರದ ಬಡವರು. ಪರಚಾಡುವ ಮನುಷ್ಯರಿಗಾಗಿ ನನ್ನ ಸಮಯವೆಲ್ಲ ಸಂದುಹೋಗಿದೆ; ನಿನ್ನ ಮೇಜಿನ ಮೇಲೆ ಎಲ್ಲ ಕೊಡುಗೆಗಳು ಬರಿದಾಗಿವೆ. ದಿನದ ಕೊನೆಯಲ್ಲಿ ನಿನ್ನ ಬಾಗಿಲು ಎಲ್ಲಿ ಮುಚ್ಚುವುದೋ ಎಂಬ ಭೀತಿ; ಸಮಯವಿದೆ ಇನ್ನೂ ಎಂಬ ಆಸೆ. ಒಂದು ಪ್ರೀತಿಯ ಜೀವವನ್ನು ಕಳೆದುಕೊಂಡಾಗ ನಾನಿದನ್ನು ಮರೆಯದಿರಲಿ.

ಏಳು

ಕತ್ತಲು ಗಾಢವಾಗಿದೆ ಹಾಗೂ ಕಾಡಿಗೆ ಎಲ್ಲೆಯೇ ಇಲ್ಲ. ಲಕ್ಷಾಂತರ ಜನ ಅವರದೇ ರೀತಿಯಲ್ಲಿ ಹಾದುಹೋಗಿದ್ದಾರೆ ಇಲ್ಲಿ. ಕತ್ತಲಲ್ಲಿ ಮುನ್ನಡೆಯಲೇಬೇಕಿರುವ ವಿಧಿ ನಮಗಿದೆ; ಆದರೆ ಯಾರ ಜೊತೆಗೆ ಹಾಗೂ ಎಲ್ಲಿಗೆ ಎಂಬುದು ಮಾತ್ರ ನಿಗೂಢ. ಆದರೆ ನಮಗೊಂದು ನಂಬಿಕೆ- ಜೀವಮಾನದ ವರ ಯಾವುದೇ ಕ್ಷಣದಲ್ಲಿ ಮುಗುಳುನಗೆಯೊಂದಿಗೆ ಎದುರಾಗಬಹುದು. ಪರಿಮಳ, ಸ್ಪರ್ಶ, ಧ್ವನಿ, ಗೀತಗಳ ಪಲುಕು ನಮ್ಮ ತಾಕಿ ಪ್ರಫುಲ್ಲ ಪುಳಕಗಳ ಮೂಡಿಸುವುವು. ಒಂದು ಮಿಂಚಿನ ಬೆಳಕಿನಲ್ಲಿ ಕ್ಷಣ ಅವನ ಕಂಡು ಪ್ರೀತಿಗೆ ಬೀಳುವೆ. ಅವನ ಕರೆಕರೆದು, ನಿನ್ನ ದರ್ಶನಕ್ಕಾಗಿಯೇ ಇಷ್ಟು ದೂರ ಬಂದೆನೆಂದು ಕೂಗುವೆ. ಹತ್ತಿರ ಬಂದವರು ಅಷ್ಟೇ ವೇಗವಾಗಿ ಕತ್ತಲಲ್ಲಿ ಕರಗುವರು; ಅವರು ಇದ್ದರೋ ಇಲ್ಲವೋ ಎಂಬಂತೆ.

ಇದನ್ನೂ ಓದಿ: World Book Day: ಪುಸ್ತಕಗಳಿಗೆ ರೆಕ್ಕೆ ನೀಡಿದ ಊರಿನ ಕತೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Book Release: ಬೆಂಗಳೂರಿನಲ್ಲಿ ಆ.4ರಂದು ʼರಣಧುರಂಧರʼ ಗ್ರಂಥ ಲೋಕಾರ್ಪಣೆ

Book Release: ಯಾಜಿ ಪ್ರಕಾಶನದಿಂದ ಬೆಂಗಳೂರಿನ ಗಿರಿನಗರದ ಸಂಸ್ಕೃತ ಭಾರತ ಅಕ್ಷರಂ ನಲ್ಲಿ ಇದೇ ಆಗಸ್ಟ್‌ 4 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ “ರಣಧುರಂಧರ” (ಛತ್ರಪತಿ ಶಿವಾಜಿ ಮಹಾರಾಜರ ಹತ್ತು ನಿರ್ಣಾಯಕ ಯುದ್ಧಗಳು ಮತ್ತು ಅವರ ಕಟ್ಟಕಡೆಯ ಯುದ್ಧ- ಒಂದು ವಿಶ್ಲೇಷಣೆ) ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Ranadhurandhara book release in Bengaluru on August 4
Koo

ಬೆಂಗಳೂರು: ಯಾಜಿ ಪ್ರಕಾಶನದಿಂದ ಬೆಂಗಳೂರಿನ ಗಿರಿನಗರದ ಸಂಸ್ಕೃತ ಭಾರತ ಅಕ್ಷರಂನಲ್ಲಿ ಇದೇ ಆಗಸ್ಟ್‌ 4ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ “ರಣಧುರಂಧರ” (ಛತ್ರಪತಿ ಶಿವಾಜಿ ಮಹಾರಾಜರ ಹತ್ತು ನಿರ್ಣಾಯಕ ಯುದ್ಧಗಳು ಮತ್ತು ಅವರ ಕಟ್ಟಕಡೆಯ ಯುದ್ಧ- ಒಂದು ವಿಶ್ಲೇಷಣೆ) ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ (Book Release) ಏರ್ಪಡಿಸಲಾಗಿದೆ.

ಇದನ್ನೂ ಓದಿ: Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

ಹೊಸಪೇಟೆಯ ಯಾಜಿ ಪ್ರಕಾಶನದ ಪ್ರಕಾಶಕಿ ಸವಿತಾ ಯಾಜಿ ಹಾಗೂ ಲೇಖಕ ಗುರುಪ್ರಸಾದ್‌ ಭಟ್‌ ಅವರ “ರಣಧುರಂಧರ” ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ ಪಾಲ್ಗೊಳ್ಳುವರು. ನವದೆಹಲಿಯ ಸಂಸ್ಕೃತ ಭಾರತಿ ಅಖಿಲ ಭಾರತ ಸಂಘಟನ ಮಂತ್ರಿ ದಿನೇಶ ಕಾಮತ್‌ ಅಧ್ಯಕ್ಷತೆ ವಹಿಸುವರು. ಲೇಖಕ ಸತ್ಯೇಶ್‌ ಬೆಳ್ಳೂರ್‌ ಪುಸ್ತಕ ಪರಿಚಯಿಸುವರು.

ಇದನ್ನೂ ಓದಿ: KSET 2024: ಕೆಸೆಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆ.22 ಕೊನೆ ದಿನ; ವೇಳಾಪಟ್ಟಿ ಹೀಗಿದೆ

ಪೂರ್ಣಪ್ರಮತಿ ಶಾಲೆಯ ಮಕ್ಕಳಿಂದ “ಮಹಾನ್‌ ರಾಜಾ ಶಿವಾಜಿ” ಕುರಿತಾಗಿ ಕಿರು ನಾಟಕ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಬೆಂಗಳೂರು

Utthana Katha Spardhe 2024: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ; ಕಥೆ ತಲುಪಿಸಲು ಅ.10 ಕೊನೆಯ ದಿನ

Utthana Katha Spardhe 2024: ಸದಭಿರುಚಿಯ ಮಾಸಪತ್ರಿಕೆ ʼಉತ್ಥಾನʼ ವತಿಯಿಂದ ʼಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2024ʼ ಆಯೋಜಿಸಲಾಗಿದ್ದು, ಕಥೆಗಳನ್ನು ತಲುಪಿಸಲು ಅಕ್ಟೋಬರ್‌ 10 ಕೊನೆಯ ದಿನವಾಗಿದೆ. ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ 15 ಸಾವಿರ ರೂ., 2ನೇ ಬಹುಮಾನ 12 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ಐದು ಮೆಚ್ಚುಗೆಯ ಬಹುಮಾನಗಳು ತಲಾ 2 ಸಾವಿರ ರೂ. ಇರಲಿದೆ.

VISTARANEWS.COM


on

utthana vaarshika katha spardhe the last date for submission of the story is october 10
Koo

ಬೆಂಗಳೂರು: ಸದಭಿರುಚಿಯ ಮಾಸ ಪತ್ರಿಕೆ ʼಉತ್ಥಾನʼ ವತಿಯಿಂದ ʼಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2024ʼ ಆಯೋಜಿಸಲಾಗಿದ್ದು, ಕಥೆಗಳನ್ನು ತಲುಪಿಸಲು ಅಕ್ಟೋಬರ್‌ 10 ಕೊನೆಯ ದಿನವಾಗಿದೆ. ಕಥಾ ಸ್ಪರ್ಧೆಯಲ್ಲಿ (Utthana Katha Spardhe 2024) ಮೊದಲ ಬಹುಮಾನ 15 ಸಾವಿರ ರೂ., ಎರಡನೇ ಬಹುಮಾನ 12 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ಐದು ಮೆಚ್ಚುಗೆಯ ಬಹುಮಾನಗಳು ತಲಾ 2 ಸಾವಿರ ರೂ. ಇರಲಿದೆ.

ಕಥಾ ಸ್ಪರ್ಧೆಯ ನಿಯಮಗಳು

ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.

ಬಹುಮಾನಿತ ಕಥೆ ‘ಉತ್ಥಾನ’ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ.

ಪೋಸ್ಟ್‌ ಮೂಲಕ ಕಳುಹಿಸುವವರು: ಕಾಗದದ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು ಅಥವಾ ವಿರಳವಾಗಿ ಬೆರಳಚ್ಚು ಮಾಡಿರಬೇಕು. ಕಾರ್ಬನ್/ಜೆರಾಕ್ಸ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.

ಇಮೇಲ್‌ ಮೂಲಕ ಕಳುಹಿಸುವವರು: ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ವರ್ಡ್ ಮತ್ತು ಪಿಡಿಎಫ್ 2 ರೂಪದಲ್ಲಿ) ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: utthanakathaspardhe@gmail.com

ಕಥೆ 3,000 ಪದಗಳ ಮಿತಿಯಲ್ಲಿ ಇರಬೇಕು.

ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವ ಯಾವುದೇ ವ್ಯವಸ್ಥೆ ಇರುವುದಿಲ್ಲ

ಲೇಖಕರು ತಮ್ಮ ಹೆಸರು, ವಿಳಾಸ, ದೂರವಾಣಿ, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜತೆಗೆ ಲೇಖಕರ ಭಾವಚಿತ್ರವೂ ಇರಬೇಕು.
ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು ‘ಉತ್ಥಾನ’ದ್ದು.

ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ‘ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ಮಾತ್ರ ಪತ್ರ ಬರೆದು ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರ ವ್ಯವಹಾರ ಸಾಧ್ಯವಾಗದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.

ಇದನ್ನೂ ಓದಿ: Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

ಕಥೆ ತಲುಪಿಸುವ ವಿಳಾಸ

ಕಥೆಗಳನ್ನು ಅಕ್ಟೋಬರ್‌ 10ರೊಳಗೆ ವಿಳಾಸ: ಸಂಪಾದಕರು, ʼಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2024ʼ ಕೇಶವ ಶಿಲ್ಪ, ಕೆಂಪೇಗೌಡನಗರ, ಬೆಂಗಳೂರು-560004 ಇಲ್ಲಿಗೆ ತಲುಪಿಸಬೇಕು. ಮೊಬೈಲ್‌ 77954 41894, ದೂರವಾಣಿ: 080-26604673 ಇ-ಮೇಲ್: utthanakathaspardhe@gmail.com

Continue Reading

ಅಂಕಣ

ರಾಜಮಾರ್ಗ ಅಂಕಣ: ಜಗತ್ತಿನ ಯಾರ ಪ್ರೀತಿಯೂ ಇವರ ಪ್ರೀತಿಗೆ ಸಮನಲ್ಲ!

ರಾಜಮಾರ್ಗ ಅಂಕಣ: ಇವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!

VISTARANEWS.COM


on

ರಾಜಮಾರ್ಗ ಅಂಕಣ love story
Koo

ರಾಬರ್ಟ್ ಬ್ರೌನಿಂಗ್ ಮತ್ತು ಎಲಿಜೆಬೆತ್ ಬ್ಯಾರೆಟ್ ಪರಸ್ಪರ ಭೇಟಿ ಆಗದೆ ವರ್ಷಾನುಗಟ್ಟಲೆ ಪ್ರೀತಿ ಮಾಡಿದರು!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಪ್ರೀತಿಗೆ ಕಣ್ಣಿಲ್ಲ (Love is blind) ಅಂತಾರೆ. ಆದರೆ ಇಟಲಿಯಲ್ಲಿ (Italy) ಇರುವ ಅವರ ಸಮಾಧಿಯ ಮೇಲೆ ʼಪ್ರೀತಿ ಕುರುಡಲ್ಲ’ ಎಂದು ಬರೆದಿರುವುದು ಯಾಕೆ? ಇದೆಲ್ಲವೂ ಅರ್ಥ ಆಗಬೇಕಾದರೆ ಈ ಪ್ರೀತಿಯ ಪರಾಕಾಷ್ಠೆಯ ಕಥೆಯನ್ನು ಒಮ್ಮೆ ಫೀಲ್ ಮಾಡಿಕೊಂಡು ಓದಿ.

ಅದು ಲಂಡನ್ ನಗರ. ಆಕೆ ಎಲಿಜೆಬೆತ್ ಬ್ಯಾರೇಟ್ (Elizabeth Barrett). ಆ ಕಾಲಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕವಯಿತ್ರಿ. ವಯಸ್ಸು 39ರ ಆಸುಪಾಸು. ಅವಿವಾಹಿತೆ. ಆಕೆಯ ತಂದೆ ಅತ್ಯಂತ ಶ್ರೀಮಂತ ಜಮೀನುದಾರರು. ಅಪ್ಪ ಅಮ್ಮನ 12 ಮಕ್ಕಳಲ್ಲಿ ಆಕೆಯೂ ಒಬ್ಬರು. ಅಪ್ಪನ ಪ್ರೀತಿಯ ಮಗಳು.

ಹದಿಹರೆಯದಿಂದಲೂ ಆಕೆಗೆ ತೀವ್ರ ಅನಾರೋಗ್ಯ ಮತ್ತು ದೇಹವೆಲ್ಲ ನೋವು. ಉಸಿರಾಟದ ತೊಂದರೆ. ಮನೆಯಿಂದಾಚೆ ಹೋಗಲು ಸಾಧ್ಯವೇ ಆಗದ ಸ್ಥಿತಿ. ಆಕೆ ಅಂತರ್ಮುಖಿ. ತನ್ನ ಸ್ಟಡಿ ರೂಮಿನಲ್ಲಿ ಕುಳಿತು ಓದುವುದು ಮತ್ತು ಬರೆಯುವುದು ಬಿಟ್ಟರೆ ಆಕೆಗೆ ಬೇರೆ ಪ್ರಪಂಚವೇ ಇರಲಿಲ್ಲ!

ಆತನು ರಾಬರ್ಟ್ ಬ್ರೌನಿಂಗ್

ಅವನೂ ಲಂಡನ್ ನಗರದವನು. ವಯಸ್ಸು 32. ಆತ ಕೂಡ ಕವಿ ಮತ್ತು ನಾಟಕಕಾರ. ಆತ ಆಕೆಯನ್ನು ಎಂದಿಗೂ ಭೇಟಿ ಮಾಡಿರಲೇ ಇಲ್ಲ. ಆಕೆಯ ಬಗ್ಗೆ ಆತನಿಗೆ ಏನೂ ಗೊತ್ತಿಲ್ಲ. ಆದರೆ ಆಕೆಯ ಕವಿತೆಗಳ ಆರಾಧಕ. ಒಂದು ದಿನ ಧೈರ್ಯ ಮಾಡಿ ಅವಳ ವಿಳಾಸವನ್ನು ಪಡೆದುಕೊಂಡು ‘ನಾನು ನಿಮ್ಮ ಕವಿತೆಗಳನ್ನು ಪ್ರೀತಿ ಮಾಡುತ್ತೇನೆ ‘ಎಂದು ಧೈರ್ಯವಾಗಿ ಪತ್ರ ಬರೆದನು. ಆಶ್ಚರ್ಯ ಪಟ್ಟ ಎಲಿಜೆಬೆತ್ ಧನ್ಯವಾದಗಳು ಎಂದು ಎರಡು ಸಾಲಿನ ಪತ್ರ ಬರೆದಳು. ಯಾರೋ ಒಬ್ಬ ಅಭಿಮಾನಿ ಎಂದು ಆಕೆ ಭಾವಿಸಿದ್ದಳು. ಆದರೆ ರಾಬರ್ಟ್ (Robert Browning) ಬಿಡಬೇಕಲ್ಲ. ಮರುದಿನವೇ ಇನ್ನೊಂದು ಪತ್ರ ಬರೆದು ಪೋಸ್ಟ್ ಮಾಡಿದನು.

ಹೀಗೆ ಮುಂದಿನ 20 ತಿಂಗಳ ಕಾಲ ಅವರಿಬ್ಬರೂ 600 ಪತ್ರಗಳನ್ನು ವಿನಿಮಯ ಮಾಡಿಕೊಂಡರು! ಒಬ್ಬರನ್ನೊಬ್ಬರು ಅಭಿನಂದಿಸಿ ಕೊಂಡರು. ಕವಿತೆಗಳ ಬಗ್ಗೆ ವಿಸ್ತಾರವಾಗಿ ಮಾತಾಡಿದರು. ಎಲ್ಲಿಯೂ ಪ್ರೀತಿಯನ್ನು ಪ್ರಪೋಸ್ ಮಾಡಲಿಲ್ಲ! ಅಥವಾ ಫೋನ್ ಮಾಡಿ ಮಾತನಾಡಲೇ ಇಲ್ಲ!

ಆ ಪತ್ರಗಳ ಪ್ರಭಾವದಿಂದ ಎಲಿಜೆಬೆತ್ ಆರೋಗ್ಯ ಸುಧಾರಣೆ ಆಯ್ತು!

ದೀರ್ಘ ಅವಧಿಗೆ ಅದೃಶ್ಯ ಅಭಿಮಾನಿಯ ಪ್ರೀತಿಪೂರ್ವಕ ಪತ್ರಗಳನ್ನು ಓದುತ್ತಾ, ಅವುಗಳಿಗೆ ಉತ್ತರ ಬರೆಯುತ್ತ ಎಲಿಜೆಬೆತ್ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಆಯ್ತು! ಆಕೆ ಅಫೀಮ್ ಮತ್ತು ಮಾರ್ಫಿನ್ ಡ್ರಗ್ಸ್ ಸೇವನೆಯಿಂದ ನಿಧಾನವಾಗಿ ಹೊರಬಂದಳು. ಒಂದು ದಿನ ಧೈರ್ಯವಾಗಿ ಆತನಿಗೆ ಪತ್ರ ಬರೆದಳು – ನನ್ನಲ್ಲಿ ತುಂಬಾ ಆರೋಗ್ಯ ಸುಧಾರಣೆ ಆಗಿದೆ. ನಾನು ಈಗ ಆರು ವರ್ಷಗಳ ಕತ್ತಲೆಯ ಕೋಣೆಯಿಂದ ಹೊರಬರಬೇಕು ಎಂದು ಆಸೆ ಪಡುತ್ತಾ ಇದ್ದೇನೆ. ನಿನ್ನನ್ನೊಮ್ಮೆ ಭೇಟಿ ಆಗಿ ಥ್ಯಾಂಕ್ಸ್ ಹೇಳಬೇಕು ಅನ್ನಿಸ್ತಿದೆ. ಸಿಗ್ತಿಯಾ?

ಆತ ಒಪ್ಪಿದನು. ಅವರಿಬ್ಬರೂ ಮೊದಲ ಬಾರಿಗೆ ಭೇಟಿ ಆದರು. ʼನಾನು ನಿಮ್ಮನ್ನು ಮದುವೆ ಆಗುತ್ತೇನೆ. ನಿಮ್ಮ ಒಪ್ಪಿಗೆ ಇದೆಯಾ? ‘ಎಂದು ಆಗ ರಾಬರ್ಟ್ ನೇರವಾಗಿ ಕೇಳಿದನು. ಅದನ್ನವಳು ನಿರೀಕ್ಷೆ ಮಾಡಿರಲಿಲ್ಲ. ಈಗ ಎಲಿಜೆಬೆತ್ ಬೆವರಲು ಆರಂಭಿಸಿದಳು.

ಆಕೆಯ ಅಪ್ಪ ಪ್ರೇಮವಿವಾಹಕ್ಕೆ ವಿರೋಧ ಇದ್ದರು

ಆಕೆಯು ಬೆವರಲು ಕಾರಣ ಆಕೆಯ ಅಪ್ಪ ಹಾಕಿದ ನಿರ್ಬಂಧ. ಅವನ ಎರಡು ಮಕ್ಕಳು ಪ್ರೀತಿ ಮಾಡಿ ಓಡಿಹೋಗಿ ಮದುವೆ ಆಗಿದ್ದರು. ಆ ಸಿಟ್ಟಿನಲ್ಲಿ ಆತನು ಎಲಿಜಬೆತ್ ಮಗಳಿಗೆ ಪ್ರೀತಿ ಮಾಡಲೇ ಬಾರದು ಎಂಬ ನಿರ್ಬಂಧವನ್ನು ಹಾಕಿದ್ದನು. ಆಕೆಯ ಸಂದಿಗ್ದವು ರಾಬರ್ಟನಿಗೆ ಅರ್ಥ ಆಯಿತು. ಅವನು ಎಷ್ಟು ಧೈರ್ಯ ತುಂಬಿಸಿದರೂ ಅಪ್ಪನ ಎದುರು ಹೋಗಿ ನಿಂತು ಮಾತಾಡುವ ಧೈರ್ಯ ಅವಳಿಗೆ ಕೊನೆಗೂ ಬರಲಿಲ್ಲ. ಕೊನೆಗೆ 1845ರ ಸೆಪ್ಟೆಂಬರ್ 12ರಂದು ಅವರಿಬ್ಬರೂ ರಹಸ್ಯವಾಗಿ ಮದುವೆ ಆದರು.

ಆಸ್ತಿಯಲ್ಲಿ ಪಾಲು ಕೊಡುವುದಿಲ್ಲ ಎಂದ ಅಪ್ಪ

ಹೇಗೋ ಮದುವೆಯ ರಹಸ್ಯವು ಅಪ್ಪನಿಗೆ ಗೊತ್ತಾಯಿತು. ನಿಮಗೆ ಆಸ್ತಿಯಲ್ಲಿ ಒಂದು ಡಾಲರ್ ಕೂಡ ಕೊಡುವುದಿಲ್ಲ. ಎಲ್ಲಿ ಬೇಕಾದರೂ ಹೋಗಿ ಎಂದು ಗರ್ಜಿಸಿದನು. ಮದುಮಕ್ಕಳನ್ನು ಮನೆಯ ಹೊರಗೆ ನಿಲ್ಲಿಸಿ ದಢಾರ್ ಎಂದು ಬಾಗಿಲು ಹಾಕಿದನು.

ರಾಬರ್ಟ್ ಮತ್ತು ಎಲಿಜಬೆತ್ ಇಬ್ಬರೂ ಬೇಸರ ಮಾಡಿಕೊಳ್ಳಲಿಲ್ಲ. ಬರವಣಿಗೆಯ ಮೂಲಕ ಬದುಕುವ ಶಕ್ತಿ ಇಬ್ಬರಿಗೂ ಇತ್ತು. ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇತ್ತು. ಅವರಿಬ್ಬರೂ ಉಟ್ಟ ಬಟ್ಟೆಯಲ್ಲಿ ಲಂಡನ್ ನಗರವನ್ನು ಬಿಟ್ಟು ಪ್ರೀತಿಯ ಊರಾದ ಇಟಲಿಗೆ ಬಂದರು. ಪೀಸಾದ ವಾಲುವ ಗೋಪುರದ ಮುಂದೆ ನಿಂತು ದಂಪತಿಗಳು ಮೊಟ್ಟಮೊದಲ ಬಾರಿಗೆ ಕಿಸ್ ಮಾಡಿದರು. ಪ್ರೀತಿಯ ಉತ್ಕಟತೆಯನ್ನು ಫೀಲ್ ಮಾಡಿದರು. ಅಲ್ಲಿಯೇ ಮನೆ ಮಾಡಿ ಸಾಹಿತ್ಯದ ಕೆಲಸದಲ್ಲಿ ಮುಳುಗಿದರು.

ಅಲ್ಲಿ ರಾಬರ್ಟ್ ತನ್ನ ಅದ್ಭುತ ಕವಿತೆ ‘ಸಾನೆಟ್ಸ್ ಫ್ರಮ್ ಪೋರ್ಚುಗೀಸ್ ‘ ಬರೆದು ಹೆಂಡತಿಗೆ ಪ್ರೆಸೆಂಟ್ ಮಾಡುತ್ತಾನೆ. ಅದು ಲೋಕಪ್ರಸಿದ್ಧಿ ಪಡೆಯಿತು.

ಆಕೆಯು ಅಷ್ಟೇ ಪ್ರೀತಿಯಿಂದ ʼಪೊಯೆಮ್ಸ್ ಬಿಫೋರ್ ಕಾಂಗ್ರೆಸ್’ ಕವಿತೆಯನ್ನು ಬರೆದು ಅವನಿಗೆ ಅರ್ಪಿಸುತ್ತಾಳೆ. ಗಂಡನ ಪ್ರೀತಿಯಲ್ಲಿ ಮುಳುಗಿ ʼಆರೋರಾ’ ಎಂಬ ಪ್ರೇಮಗ್ರಂಥವನ್ನು ಬರೆದು ಪ್ರಕಟಣೆ ಮಾಡುತ್ತಾಳೆ. ಅವರ ಪ್ರೀತಿಯ ಪ್ರತೀಕವಾಗಿ ಅವರಿಗೆ ವೀಡ್ಮನ್ ಬ್ಯಾರೆಟ್ ಎಂಬ ಮಗನು ಹುಟ್ಟುತ್ತಾನೆ.

1861ರಲ್ಲಿ ರಾಬರ್ಟ್ ತನ್ನ ಮಹತ್ವಾಕಾಂಕ್ಷೆಯ ಕೃತಿ ʼಮೆನ್ ಅಂಡ್ ವಿಮೆನ್’ ಪೂರ್ತಿ ಮಾಡಿ ಪತ್ನಿಯ ಕೈಯ್ಯಲ್ಲಿ ಇಟ್ಟು ಬಿಡುಗಡೆ ಮಾಡುತ್ತಾನೆ. 15 ವರ್ಷಗಳ ಶ್ರೇಷ್ಟ ದಾಂಪತ್ಯದ ಅನುಪಮ ಪ್ರೀತಿಯನ್ನು ಆಸ್ವಾದಿಸಿದ ನಂತರ 1861ರ ಜೂನ್ 29ರಂದು ಎಲಿಜೆಬೆತ್ ತನ್ನ ಗಂಡನ ತೋಳುಗಳಲ್ಲೇ ಉಸಿರು ನಿಲ್ಲಿಸುತ್ತಾಳೆ. ಕೆಲವೇ ವರ್ಷಗಳಲ್ಲಿ ರಾಬರ್ಟ್ ಕೂಡ ನಿಧನ ಹೊಂದುತ್ತಾನೆ.

ಅವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

Continue Reading

ಅಂಕಣ

ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

ರಾಜಮಾರ್ಗ ಅಂಕಣ: ಯಶಸ್ಸು ಗಳಿಸಲು ಬೇಕಾದ್ದು ಗುರಿ, ಆತ್ಮವಿಶ್ವಾಸ, ನಿರಂತರ ಪ್ರಯತ್ನ, ಎಚ್ಚರ. ಇತ್ಯಾದಿ. ನಿಮ್ಮನ್ನು ಗೆಲುವಿನ ಕಡೆಗೆ ಒಯ್ಯುವ 25 ಸೂತ್ರಗಳು ಇಲ್ಲಿವೆ.

VISTARANEWS.COM


on

winning tips ರಾಜಮಾರ್ಗ ಅಂಕಣ
Koo

ಗೆಲ್ಲಲು ಹೊರಟವರಿಗೆ ನಿಜವಾದ ಬೂಸ್ಟರ್ ಡೋಸ್ ಈ ಸೂತ್ರಗಳು

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಗೆಲ್ಲುವುದು (Winning) ಯಾರಿಗೆ ಬೇಡ ಹೇಳಿ? ಸೋಲಲು ಯಾರೂ ಬಯಸುವುದಿಲ್ಲ. ದಿಗಂತದ ಕಡೆಗೆ ದೃಷ್ಟಿ ನೆಟ್ಟು ಸಾಧನೆಯ (achievement) ಹಸಿವು ಮತ್ತು ಕನಸಿನ ಕಸುವುಗಳನ್ನು ಜೋಡಿಸಿಕೊಂಡು ನಾವು ಖಂಡಿತ ಗೆಲ್ಲಲೇಬೇಕು ಎಂದು ಹೊರಟಾಗ ಈ 25 ಸೂತ್ರಗಳು (Success Tips) ನಿಮ್ಮನ್ನು ಗೆಲ್ಲಿಸುತ್ತವೆ.

1) ಗಮ್ಯ (Aim) – ನಾವು ತಲುಪಬೇಕಾದ ಸ್ಥಳದ ಸರಿಯಾದ ಅರಿವು.

2) ದಾರಿ (Way)- ನಾವು ಕ್ರಮಿಸಬೇಕಾದ ನ್ಯಾಯಯುತವಾದ ಮತ್ತು ನೇರವಾದ ದಾರಿ.

3) ಆತ್ಮವಿಶ್ವಾಸ (confidence) – ಖಂಡಿತ ಗಮ್ಯವನ್ನು ತಲುಪುವೆ ಎಂಬ ನಂಬಿಕೆಯು ನಮಗೆ ಇಂಧನ ಆಗುತ್ತದೆ.

4) ಎಚ್ಚರ – ಎಂದಿಗೂ ತಪ್ಪು ದಾರಿ ಹಿಡಿಯುವುದಿಲ್ಲ ಎಂಬ ನಮ್ಮ ನಿರ್ಧಾರ

5) ಮಾರ್ಗದರ್ಶಕರು – ಕೈ ಹಿಡಿದು ನಡೆಸುವ ಮಂದಿ ಸದಾ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಾರೆ.

6) ಇಚ್ಛಾ ಶಕ್ತಿ – ಎಲ್ಲೂ ನಾನು ಕ್ವಿಟ್ ಮಾಡುವುದಿಲ್ಲ ಎಂಬ ಹಠ. ಅದೇ ನಮಗೆ ಲುಬ್ರಿಕೆಂಟ್.

7) ಪಾಸಿಟಿವ್ ಥಿಂಕಿಂಗ್ (Positive thinking)- ಎಂತಹ ಸವಾಲು, ಸಮಸ್ಯೆಗಳು ಎದುರಾದರೂ ಎದುರಿಸಿ ನಿಲ್ಲುವೆ ಎನ್ನುವ ಗಟ್ಟಿ ನಿಲುವು.

8) ಕಾಳಜಿ – ನಮ್ಮ ಜೊತೆಗೆ ಹೆಜ್ಜೆ ಹಾಕಿ ನಡೆಯುವವರ ಬಗ್ಗೆ ತೀವ್ರವಾದ ಕಾಳಜಿ.

9) ಸ್ಟಾಟರ್ಜಿ – ದುರ್ಗಮವಾದ ಹಾದಿಯಲ್ಲಿ ಹೆಜ್ಜೆಯಿಟ್ಟು ನಡೆಯುವಾಗ ಅದಕ್ಕೆ ಪೂರಕವಾದ ತಂತ್ರಗಾರಿಕೆ ಮತ್ತು ಯೋಜನೆ.

10) ತಾಳ್ಮೆ – ನಮ್ಮೊಳಗಿನ ಸತ್ವವನ್ನು ಹೆಚ್ಚಿಸುವ ಮತ್ತು ನಮ್ಮನ್ನು ಎಂದಿಗೂ ಸೋಲಲು ಬಿಡದ ಟೆಂಪರಮೆಂಟ್.

11) ಫೋಕಸ್ – ಒಂದಿಷ್ಟೂ ವಿಚಲಿತವಾಗದ ಮನಸ್ಥಿತಿ. ಆಮಿಷಗಳಿಗೆ, ಅಡ್ಡ ದಾರಿಗಳಿಗೆ ನಮ್ಮನ್ನು ಎಳೆಯದ ಗಟ್ಟಿ ಮನಸ್ಸು.

12) ಅಹಂ ರಾಹಿತ್ಯ – ಒಂದಿಷ್ಟೂ ಅಹಂ ಇಲ್ಲದ, ಎಷ್ಟು ಸಾಧನೆ ಮಾಡಿದರೂ ನಾನೇನು ಮಾಡಿಲ್ಲ ಎನ್ನುವ ವಿಕ್ಷಿಪ್ತ ಭಾವನೆ.

13) ನಿರಂತರತೆ – ಯಾವ ಏರು,ತಗ್ಗಿನ ರಸ್ತೆಯಲ್ಲಿಯೂ ವೇಗವನ್ನು ಕಳೆದುಕೊಳ್ಳದ ಶಕ್ತಿ.

14) ಕಾಂಪಿಟೆನ್ಸಿ – ಯಾವ ರೀತಿಯ ಸ್ಪರ್ಧೆಗೂ ನಮ್ಮನ್ನು ತೆರೆದುಕೊಳ್ಳುವ ಮತ್ತು ಎದುರಿಸಿ ನಿಲ್ಲುವ ಗಟ್ಟಿತನ.

15) ನಮ್ಮ ಕಾಂಪಿಟಿಟರ್ – ನೀವು ಒಪ್ಪುತ್ತೀರೋ ಅಥವಾ ಬಿಡುತ್ತೀರೋ ಗೊತ್ತಿಲ್ಲ. ನಮ್ಮ ಸ್ಪರ್ಧಿಗಳು ನಮ್ಮನ್ನು ಸದಾ ಜಾಗೃತವಾಗಿ ಇಟ್ಟುಕೊಂಡು ಗೆಲುವಿನ ಕಡೆಗೆ ಮುನ್ನಡೆವ ಉತ್ಸಾಹ ತುಂಬುತ್ತಾರೆ.

16) ಸವಾಲುಗಳು – ನಾವು ಒಳ್ಳೆಯ ಚಾಲಕ ಆಗಬೇಕು ಎಂದು ನೀವು ನಿರ್ಧರಿಸಿದರೆ ದೊಡ್ಡ ಹೆದ್ದಾರಿಯಲ್ಲಿ ಗಾಡಿ ಓಡಿಸುವುದಲ್ಲ. ದುರ್ಗಮವಾದ ರಸ್ತೆಗಳನ್ನು ಆಯ್ಕೆ ಮಾಡಬೇಕು!

17) ಆದ್ಯತೆಗಳು – ಹೊರಳು ದಾರಿಯಲ್ಲಿ ಸರಿಯಾದದ್ದನ್ನು ಮತ್ತು ಸೂಕ್ತವಾದದ್ದನ್ನು ನಮ್ಮ ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳುವುದು.

18) ಉತ್ಕೃಷ್ಟತೆ – ಯಾವಾಗಲೂ ಉತ್ತಮವಾದದ್ದನ್ನು ಮತ್ತು ಸರಿಯಾದದ್ದನ್ನು ಆರಿಸುವ ಪ್ರೌಢಿಮೆ.

19)ಪ್ಲಾನಿಂಗ್ – ಸರಿಯಾದ ಯೋಜನೆ ಇದ್ದರೆ ಸೋಲು ಕೂಡ ಸೋಲುತ್ತದೆ.

business man
business man

20) ಉದ್ದೇಶದ ಸ್ಪಷ್ಟತೆ – ನಮ್ಮ ಪ್ರಯಾಣದ ಉದ್ದೇಶವು ನಮಗೆ ಸ್ಪಷ್ಟವಾಗಿದ್ದರೆ ಗೆಲುವು ಸುಲಭ. ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ ಆಗುತ್ತದೆ.

21) ಅನುಭವಗಳಿಂದ ಪಾಠ ಕಲಿಯುವುದು – ನಮ್ಮ ತಪ್ಪುಗಳಿಂದ ಪಾಠ ಕಲಿಯುವಷ್ಟು ನಮ್ಮ ಆಯಸ್ಸು ದೊಡ್ಡದಲ್ಲ. ಬೇರೆಯವರ ತಪ್ಪುಗಳಿಂದ ಕೂಡ ಪಾಠ ಕಲಿಯಬಹುದು.

22) ಟೀಮ್ ವರ್ಕ್ – ತಂಡವಾಗಿ ಕೆಲಸ ಮಾಡುವ ಖುಷಿ ನಮ್ಮ ಗೆಲುವನ್ನು ಖಾತರಿ ಮಾಡುತ್ತದೆ.

23) ಸ್ವಯಂ ಶಿಸ್ತು – ನಮಗೆ ನಾವೇ ಹಾಕಿಕೊಂಡ ಶಿಸ್ತು ಮತ್ತು ಅನುಶಾಸನಗಳ ಗೆರೆಗಳು ನಮ್ಮನ್ನು ಸೋಲಲು ಬಿಡುವುದಿಲ್ಲ.

24) ವಾಸ್ತವದ ಪ್ರಜ್ಞೆ – ನಮ್ಮ ಭ್ರಮೆಗಳಿಂದ ಹೊರಬಂದು ವಾಸ್ತವದ ಪ್ರಜ್ಞೆಯೊಂದಿಗೆ ಮುನ್ನಡೆಯುವುದು ನಮ್ಮ ಗೆಲುವನ್ನು ಸುಲಭ ಮಾಡುತ್ತದೆ.

25) ಅವಲೋಕನ- ಒಮ್ಮೆ ನಾವು ಪ್ರಯಾಣ ಮಾಡಿದ ದಾರಿಯನ್ನು ಹಿಂತಿರುಗಿ ನೋಡಿ ಮತ್ತೆ ಮುಂದಿನ ಗಮ್ಯಕ್ಕೆ ತಯಾರಿ ಮಾಡುವುದು.

ಇವಿಷ್ಟನ್ನು ಬಂಡವಾಳ ಮಾಡಿಕೊಂಡು ಹೊರಡಿ. ನಿಮ್ಮನ್ನು ಸೋಲಿಸಲು ನಿಮ್ಮ ಶತ್ರುಗಳಿಗೂ ಸಾಧ್ಯ ಇಲ್ಲ. ಗೆಲುವು ನಿಮ್ಮದಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಗೋಲ್ಡನ್ ಮೆಮೊರಿ ನಿಮ್ಮದು!

Continue Reading
Advertisement
Sheikh Hasina
ಪ್ರಮುಖ ಸುದ್ದಿ9 mins ago

Sheikh Hasina: ರಾಜೀನಾಮೆ ನೀಡಿ ಶೇಖ್‌ ಹಸೀನಾ ವಿದೇಶಕ್ಕೆ ಪಲಾಯನ; ಸುರಕ್ಷತೆಗಾಗಿ ಭಾರತಕ್ಕೆ ಆಗಮನ?

Nia Sharma Trolled For Wearing Plunging Neckline Bralette
ಬಾಲಿವುಡ್13 mins ago

Nia Sharma: ಬ್ರಾ ಧರಿಸಿ ಪೋಸ್‌ ಕೊಟ್ಟ ಕಿರುತೆರೆ ನಟಿ ನಿಯಾ ಶರ್ಮಾರನ್ನು ಕಾಲೆಳೆದ ನೆಟ್ಟಿಗರು!

Emergency Landing
ವೈರಲ್ ನ್ಯೂಸ್35 mins ago

Emergency Landing: ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಕಾರಣವಾಯ್ತು ಹೇನು! ಏನಿದು ವಿಚಿತ್ರ ಪ್ರಕರಣ? ಇಲ್ಲಿದೆ ವಿವರ

BJP-JDS Padayatra
ಪ್ರಮುಖ ಸುದ್ದಿ41 mins ago

BJP-JDS Padayatra: ಪಾದಯಾತ್ರೆ ವೇಳೆ ಹೃದಯಾಘಾತದಿಂದ ಜೆಡಿಎಸ್ ಕಾರ್ಯಕರ್ತೆ ಸಾವು

Bangladesh Protests
ಪ್ರಮುಖ ಸುದ್ದಿ45 mins ago

Bangladesh Protests: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ದೇಶದಿಂದ ಪಲಾಯನ; ಪ್ರಧಾನಿ ಅರಮನೆಗೇ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

Shira News
ತುಮಕೂರು1 hour ago

Shira News: ಶಿರಾ ನಗರಸಭೆಯಿಂದ ದೊಡ್ಡಕೆರೆಯ ಸುತ್ತಲಿನ ಪ್ರದೇಶದ ಸ್ವಚ್ಛತೆ

Shravana 2024
ಧಾರ್ಮಿಕ1 hour ago

Shravana 2024: ಶ್ರಾವಣ ಉಪವಾಸದ ವೇಳೆ ಈ 5 ಪಾನೀಯ ಆರೋಗ್ಯಕರ

bs yediyurappa
ಪ್ರಮುಖ ಸುದ್ದಿ1 hour ago

BS Yediyurappa: ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ 150 ಸೀಟು ಖಚಿತ: ಬಿಎಸ್‌ ಯಡಿಯೂರಪ್ಪ

PSI Parashuram Case
ಕರ್ನಾಟಕ2 hours ago

PSI Parashuram Case: ನಾನು ಯಾವ ಪೊಲೀಸ್‌ ಬಳಿಯೂ ದುಡ್ಡು ಕೇಳಿಲ್ಲ: ಶಾಸಕ ಚನ್ನಾರೆಡ್ಡಿ ಪಾಟೀಲ

Snake Bite
ವೈರಲ್ ನ್ಯೂಸ್2 hours ago

Snake Bite: ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌