ನಾಗರ ಪಂಚಮಿ | ಇಂದು ನಾಗದೇವರ ಪೂಜೆ ಮಾಡುವುದೇಕೆ? - Vistara News

ಧಾರ್ಮಿಕ

ನಾಗರ ಪಂಚಮಿ | ಇಂದು ನಾಗದೇವರ ಪೂಜೆ ಮಾಡುವುದೇಕೆ?

ನಾಗರ ಪಂಚಮಿ ಹಿನ್ನೆಲೆ, ಇದರ ಆಧ್ಯಾತ್ಮಿಕ ನೆಲೆ, ಪೂಜಾಕ್ರಮ ಇತ್ಯಾದಿಗಳನ್ನು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ವಿವರಿಸಿದ್ದಾರೆ.

VISTARANEWS.COM


on

nagara panchami
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

– ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ

vidyaprasanna
ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ನಾಗರಪಂಚಮಿಯನ್ನು ನಾಡಿಗೆ ದೊಡ್ಡದು ಎಂದು ಹಿರಿಯರು ಸುಮ್ಮನೇ ಹೇಳಲಿಲ್ಲ. ಅದಕ್ಕೆ ಧಾರ್ಮಿಕ ಪ್ರಭಾವಳಿ, ಆಧ್ಯಾತ್ಮಿಕ ಪ್ರಭಾವಳಿಗಳೆಲ್ಲಾ ಸೇರಿಕೊಂಡಿವೆ. ನಾಗನೇ ಈ ಭೂಮಿಯನ್ನ ಹೊತ್ತವನು, ನಾಗನೇ ಈ ಭೂಮಿಯ ಆದಿನಿವಾಸಿ. ನಾಗನ ಕೃಪೆಯಿಂದಲೇ ನಾವು ಇಲ್ಲಿದ್ದೇವೆ. ಹೀಗಾಗಿ ನಾಗನಿಗೆ ಗೌರವ ನೀಡುವ ದಿನವಿಂದು.

ನಾಗಚತುರ್ಥಿ
ಶ್ರಾವಣಮಾಸದ ಶುಕ್ಲಪಕ್ಷದ ಚತುರ್ಥಿಯನ್ನು ನಾಗಚತುರ್ಥಿಯೆನ್ನುತ್ತಾರೆ. ಅಂದು ಬೆಳ್ಳಿ ಅಥವಾ ತಾಮ್ರದಲ್ಲಿ ಮಾಡಿದ ನಾಗನ ಪ್ರತಿಮೆಯನ್ನು ಒಳ್ಳೆಯ ಆಸನದಲ್ಲಿಟ್ಟು ಪೂಜೆ ಸಲ್ಲಿಸಬೇಕು ಮತ್ತು ಮನೆಯ ಗೋಡೆಯ ಮೇಲೆ ನಾಗನ ಚಿತ್ರ ಬರೆಯುತ್ತಾರೆ. ಅಣ್ಣಂದಿರ ಶ್ರೇಯಸ್ಸು ಬಯಸಿ ಉಪವಾಸ ಮಾಡುವ ಪದ್ಧತಿಯಿದೆ.

ನಾಗಪಂಚಮೀ

ಈ ದಿನ ಎಲ್ಲಾ ಸ್ತ್ರೀ ಪುರುಷರೂ ಅಭ್ಯಂಜನ ಸ್ನಾನ ಮಾಡಿ ಹಿಂದಿನ ದಿನ ಪೂಜಿಸಿದ ನಾಗದೇವರನ್ನೇ ಹರಿವಾಯುಗಳ ಪೂಜೆಯ ನಂತರ ಕ್ಷೀರಾಭಿಷೇಕದಿಂದ ಪೂಜಿಸಬೇಕು. ಪೂಜೆಯ ಈ ಫಲವನ್ನು ಶೇಷಾಂತರ್ಗತ ಸಂಕರ್ಷಣನಿಗೆ ಅರ್ಪಿಸಬೇಕು.

ಸರ್ಪಗಳು ಮೊದಲು ತುಂಬಾ ದುಷ್ಟತರವಾಗಿದ್ದು ಜನರಿಗೆ ಪೀಡೆಯನ್ನುಂಟು ಮಾಡುತ್ತಿದ್ದವು. ದೇವತೆಗಳು ಇದನ್ನರಿತು ಬ್ರಹ್ಮನ ಬಳಿ ವಿನಂತಿಸಿದರು. ಬ್ರಹ್ಮನು ಸರ್ಪಗಳು ತಮ್ಮ ತಾಯಿ ಕದ್ರುವಿನ ಶಾಪದಿಂದಲೇ ವಿನಾಶ ಹೊಂದುವವೆಂದು ಸೂಚಿಸಿದನು. ಸರ್ಪಗಳು ಎಲ್ಲಾ ಸಹೋದರರಿಂದ ಒಟ್ಟುಗೂಡಿ ಬ್ರಹ್ಮನಿಗೆ ಶಾಪನ್ನು ಹಿಂತೆಗೆದುಕೊಳ್ಳಬೇಕೆಂದು ಪ್ರಾರ್ಥಿಸಿದವು. ಅವರ ಅಪರಾಧೀ ಪ್ರಜ್ಞೆ ಪಶ್ಚಾತ್ತಾಪಗಳನ್ನು ಮನಗಂಡು ಬ್ರಹ್ಮನು ಮುಂದೆ ಆಸ್ತಿಕನೆಂಬುವನು ಸರ್ಪಕುಲ ರಕ್ಷಕನಾಗಿ ನಿಲ್ಲುತ್ತಾನೆ ಎಂದು ನುಡಿದನು. ಹಾಗೆ ಹೇಳುತ್ತಾ ಸರ್ಪಗಳು ಅತಲ, ವಿತಲ, ಪಾತಾಲಗಳಲ್ಲಿ ವಾಸಿಸಬೇಕೆಂದು, ನೋಯದೇ ಕಚ್ಚಬಾರದೆಂದೂ ಆದೇಶಿಸಿದನು. ಹೀಗಾಗಿ ಸರ್ಪಕುಲಗಳ ಒಗ್ಗಟ್ಟಿನ ಪ್ರಾರ್ಥನೆ– ರಕ್ಷಣೆ ಇವೆರಡೂ ಪ್ರತಿಫಲಿಸಿದ್ದು ಪಂಚಮಿಯ ಈ ಶುಭದಿನದಂದು. ಹೀಗಾಗಿ ಅವುಗಳಿಗೆ ಈ ದಿನ ಪರಮಪ್ರೀತಿಕರ. ಇಂದೇ ಅವುಗಳ ಪೂಜೆ ಮಾಡಬೇಕು. ಅದು ನಾನಾ ಪಾಪಗಳನ್ನೆಲ್ಲಾ ಪರಿಹರಿಸುವುದು.

ಏತತ್ಸರ್ವಂ ಚ ಪಂಚಮ್ಯಾ ತೇಷಾಂ ಜಾತಂ ಮಹಾತ್ಮನಾಂ |
ಆತಸ್ತಿರ್‌ವಯಂ ತಿಥಿರ್ಧನ್ಯಾ ಸರ್ವಪಾಪಹರಾ ಶುಭಾ || ವರಾಹಪುರಾಣ)
ಮತ್ಪೂಜಾಽನಂತರ ಶೇಷಂ ವಾಸುಕೀಂ ತಕ್ಷಕಂ ತಥಾ || (ವರಾಹ ಪುರಾಣ)

ಹರಿವಾಯುಗಳ ಪೂಜೆಯ ಅನಂತರ ಶೇಷ, ವಾಸುಕಿ, ತಕ್ಷಕ ಇವರನ್ನು ಪೂಜಿಸಬೇಕು. ನಾಗಗಳನ್ನು ಪೂಜಿಸಬೇಕು. ಏಕೆಂದರೆ ಸಂಕರ್ಷಣ ರೂಪಿಯಾದ ಪರಮಾತ್ಮನೇ ಪೂಜೆಯನ್ನು ನೇರವಾಗಿ ಸ್ವೀಕರಿಸುವನು. ಅಂದು ಶೇಷದೇವರ ಸ್ತೋತ್ರ ಈ ರೀತಿ ಇದೆ.

ಸಹಸ್ರಶೀರ್ಷಂ ಜಗದೇಕ ಕುಂಡಲಂ ಪೀತಾಂಬರಂ ಧೂಮ್ರಸಹಸ್ರಲೋಚನಂ |
ಉದಾರವೀರ್ಯಂ ವಿಷದಂಷ್ಟ್ರಕಾನನಂ ನಮಾಮ್ಯನಂತಂ ಜಗದೇಕನಾಥಂ ||

(ಸಾವಿರ ಹೆಡೆಗಳುಳ್ಳ, ಜಗದೇಕಕುಂಡಲನಾದ, ಪೀತಾಂಬರ ತೊಟ್ಟಿರುವ ಹೊಗೆಕಾರುವ ಕಣ್ಣುಗಳುಳ್ಳ, ಅಪರಿಮಿತ ಪರಾಕ್ರಮನಾದ, ವಿಷದ ಕೋರೆದಾಡುಗಳುಳ್ಳ, ಮುಖವುಳ್ಳ, ಜಗದೊಡೆಯನಾದ ಅನಂತನಿಗೆ ನಾನು ನಮಿಸುವೆ)

ಇದನ್ನೂ ಓದಿ: Shravan| ಶ್ರಾವಣ ಮಾಸ ಬರಲು ಹಬ್ಬಗಳ ಸಾಲು ಸಾಲು!

ಕಣ್ಣಲ್ಲೇ ಕಿವಿಯ ಕೆಲಸವನ್ನು ನಿರ್ವಹಿಸುವ ಸರ್ಪದ ಜಾಣ್ಮೆ ಯಾರಿಗಿದೆ? ಅದರಂತೆಯೇ ಚಕ್ಷುರಿಂದ್ರಿಯ- ಶ್ರವಣೇಂದ್ರಿಯವನ್ನು ಸಮರ್ಥವಾಗಿ ವಿನಿಯೋಗಿಸಿಕೊಳ್ಳುವ ಜಾಡು ನಮ್ಮದಾಗಬೇಕು. ಬೇಗನೇ ಹರಿದುಹೋಗಿಬಿಡುವ ಅದರ ಸ್ವಭಾವ ಶೀಘ್ರವಾಗಿ ಪ್ರವೃತ್ತರಾಗಬೇಕಾದ ನಮ್ಮ ಕ್ರಿಯಾಶೀಲತೆಗೆ ಪ್ರೇರಕವಾಗಿದೆ.

ಕಾಲಿಲ್ಲದಿದ್ದರೂ ತೆವಳಿ ಸರಿದು ಹೋಗುವವು ಭುಜಂಗಗಳು. ಅವುಗಳಂತೆ ನಾವು ಶಕ್ತಿಮೀರಿ ಧರ್ಮಮಾರ್ಗಗಾಮಿಗಳಾಗಬೇಕು ಎಂಬುದನ್ನು ಹೇಳುತ್ತವೆ. ಒಂದೇ ಹುತ್ತದಲ್ಲಿ ಹಲವು ಸರ್ಪಗಳು ನೆಲೆಸುವ ಆ ಅನ್ಯೋನ್ಯತೆ, ಒಟ್ಟಾಗಿ ಬ್ರಹ್ಮನನ್ನು ಪ್ರಾರ್ಥಿಸಿದ ಆ ಧಾರ್ಮಿಕ ಒಗ್ಗಟ್ಟು, ಸಹೋದರ ಭಾವ ನಮಗೆ ಆದರ್ಶಪ್ರಾಯ. ಹೀಗಾಗಿ ಇದು ಅಣ್ಣತಮ್ಮಂದಿರ ಹಬ್ಬವೂ ಹೌದು. ಅಂದು ಸಹೋದರರು ಪರಸ್ಪರ ಬೆನ್ನಿಗೆ ಹಾಲನ್ನು ತಿಕ್ಕುವ, ಶ್ರೇಯಸ್ಸು ಬಯಸುವ ಪದ್ಧತಿಯೂ ಇದೆ. ಅಂದಿನ ಪೂಜೆಯಿಂದ ವರ್ಷವಿಡೀ ನಮಗೆ ಸರ್ವಭೀತಿ ನಿವಾರಣೆಯಾಗುತ್ತದೆ. ಮೂಳೆಗಳಿಲ್ಲದೆ, ನರಗಳಿಂದಲೇ ಎಲ್ಲೆಡೆ ಹರಿದಾಡುವ ಆ ಪ್ರಾಣಿ ನಮ್ಮ ನರನಾಡಿಗಳನ್ನು ಚೆನ್ನಾಗಿಡಲಿ ಎಂದು ಪ್ರಾರ್ಥನೆಯೂ ಸಹ ಇಲ್ಲಿದೆ.

ಅವುಗಳ ವಂಶ ನಾಶದ ಅಂಚಿನಲ್ಲಿದ್ದಾಗ ಆಸ್ತಿಕನಿಂದ ಉಳಿದು ಬೆಳೆಯಲಿಲ್ಲವೇ? ಹಾಗೆ ಪ್ರತಿಯೊಬ್ಬರ ವಂಶವೂ ಬೆಳೆಯಬೇಕಲ್ಲವೇ? ಹೀಗಾಗಿ ನಾಗಪ್ರತಿಷ್ಠೆಯನ್ನು ನಡೆಸುವುದು, ನಾಗವನ್ನು ಪೂಜಿಸುವುದು ವಂಶೋದ್ಧಾರಕ ಪದ್ಧತಿಯೂ ಹೌದು. ಇದರಿಂದ ಮಕ್ಕಳ ಪ್ರಾಪ್ತಿಯಾಗುವುದು ನಿಶ್ಚಯ. ಇಷ್ಟೆಲ್ಲಾ ಗುಣಗಳಿರುವ ಪರಮಪವಿತ್ರವಾದ ಈ ದಿನ ಸರ್ಪದ ಸಂಹಾರದ ಆಲೋಚನೆಯೂ ಸಲ್ಲದು.

ಆದ್ದರಿಂದ ಅದರ ಕಣ್ಣುಗಳನ್ನೇ ಹೋಲುವ ಸಾಸುವೆಯ ಬಳಕೆ ಅಂದು ಸಂಪ್ರದಾಯ ಸಮ್ಮತವಲ್ಲ. ಅಂತೆಯೇ ಅತಿಯಾದ ಶಾಖದಿಂದ ಅದರ ಚರ್ಮಗಳು ಸುಟ್ಟುಹೋಗುವುದಿಲ್ಲವೇ? ಅದಕ್ಕಾಗಿ ಅಂದು ಅತಿಶಾಖ ನೀಡುವ ಹುರಿಯುವ ಕ್ರಿಯೆಯಾಗಲೀ, ಎಣ್ಣೆಯಲ್ಲಿ ಕರಿಯುವ ನೀತಿಯಾಗಲೀ ನಿಷಿದ್ಧ. ಒಳಗಡೆ ಹಬೆಯಿಂದಲೇ ಬೆಂದ ಕಡುಬು, ಹುರಿಯದ ಎಳ್ಳಿನ ಚಿಗಳಿ, ತಂಬಿಟ್ಟು ಮಾಡುವ ಸಂಪ್ರದಾಯವಿದೆ. ಅಂದು ಅಷ್ಟನ್ನು ದೇವರಿಗೆ ನಿವೇದಿಸಿ 13 ಗಂಟುಗಳುಳ್ಳ ದಾರವನ್ನು ಶೇಷಾಂತರ್ಗತ ಸಂಕರ್ಷಣನಿಗೆ ಸಮರ್ಪಿಸಿ ಕೈಯಲ್ಲಿ ಕಟ್ಟಿಕೊಳ್ಳಬೇಕು.
ಅಂದೂ ಸರ್ಪದ ಆಕಾರವಿರುವ ಪಡವಲಕಾಯಿ, ಸೋರೆಕಾಯಿ, ಶಾವಿಗೆಗಳ ಬಳಕೆಯೂ ಸಲ್ಲದು. ಇದನ್ನೆಲ್ಲಾ ಗಮನಿಸಿದಾಗ ಇದು ಅಂಧಶ್ರದ್ಧೆಯಲ್ಲ ಎಂಬ ಅಂಶ ಮನವರಿಕೆಯಾಗುವುದು.

ಇದನ್ನೂ ಓದಿ: Guru Purnima 2022 | ಗುರು ಪದದ ಅರ್ಥ ಅರಿತವರಿಗಷ್ಟೇ ಮುಕ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ

Tirupathi Laddu: ತಿರುಪತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅಲ್ಲಿಯ ರುಚಿಕರವಾದ ಲಡ್ಡು. ವೆಂಕಟೇಶ್ವರ ದೇವರಿಗೆ ಶ್ರೀವಾರಿ ಲಡ್ಡು ಎಂದು ಕರೆಯಲ್ಪಡುವ ಲಡ್ಡನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಲಡ್ಡು ಮತ್ತು ವಿಶೇಷ ದರ್ಶನದ ಬೆಲೆಯನ್ನು ಕಡಿತಗೊಳಿಸಿದೆ ಎಂಬ ವದಂತಿಯನ್ನು ಹಬ್ಬಿಸಿ ಜನರಲ್ಲಿ ಗೊದಲವನ್ನುಂಟುಮಾಡಲಾಗಿತ್ತು. ಲಡ್ಡು ಬೆಲೆಯನ್ನು 50 ರೂ. ಯಿಂದ 25 ರೂ.ಗೆ ಮತ್ತು ವಿಶೇಷ ದರ್ಶನದ ಬೆಲೆಯನ್ನು 300 ರೂ.ನಿಂದ 200ರೂ.ಗೆ ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಈಗ ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

VISTARANEWS.COM


on

Tirupathi Laddu
Koo

ತಿರುಪತಿ : ಸಾಮಾಜಿಕ ಮಾಧ್ಯಮಗಳು (social media) ಜನರಿಗೆ ಪ್ರಸ್ತುತ ವಿಚಾರಗಳ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತದೆ. ಹೆಚ್ಚಿನ ವಿಚಾರಗಳು ಜನರಿಗೆ ಸಾಮಾಜಿಕ ಮಾಧ್ಯಮದಿಂದಲೇ ತಿಳಿಯುತ್ತಿದೆ. ಅಂದಮಾತ್ರಕ್ಕೆ ಇದರಲ್ಲಿ ಬರುವ ಎಲ್ಲಾ ಮಾಹಿತಿಯೂ ಸತ್ಯವಾಗಿರುವುದಿಲ್ಲ. ಕೆಲವೊಂದು ಊಹಾಪೋಹಗಳು ಇರುತ್ತದೆ. ಹಾಗಾಗಿ ಸಾಮಾಜಿಕ ಮಾಧ್ಯಮದ ಎಲ್ಲಾ ಮಾಹಿತಿಗಳನ್ನು ನಿಜವೆಂದು ನಂಬಬೇಡಿ. ಇದಕ್ಕೆ ತಿರುಪತಿ ಲಡ್ಡು (Tirupathi Laddu) ಹಾಗೂ ವಿಶೇಷ ದರ್ಶನಕ್ಕೆ ಸಂಬಂಧಪಟ್ಟ ಸುದ್ದಿಯೊಂದು ನಿದರ್ಶನವಾಗಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ತಿರುಪತಿಯ ಶ್ರೀವೆಂಕಟೇಶ್ವರ ದೇವಸ್ಥಾನದ ಅಧಿಕೃತ ಉಸ್ತುವಾರಿಗಳಾದ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ತಿರುಮಲ ಲಡ್ಡು ಮತ್ತು ವಿಶೇಷ ದರ್ಶನದ ಬೆಲೆಯನ್ನು ಕಡಿತಗೊಳಿಸಿದೆ ಎಂಬ ವದಂತಿಯನ್ನು ಹಬ್ಬಿಸಿ ಜನರಲ್ಲಿ ಗೊದಲವನ್ನುಂಟು ಮಾಡಿದ್ದವು.

ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಲಡ್ಡು ಬೆಲೆಯನ್ನು 50ರೂ. ಯಿಂದ 25 ರೂ.ಗೆ ಮತ್ತು ವಿಶೇಷ ದರ್ಶನದ ಬೆಲೆಯನ್ನು 300 ರೂ.ನಿಂದ 200 ರೂ.ಗೆ ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಸುದ್ದಿಯನ್ನು ನಿಜವೆಂದು ನಂಬಿದ ಭಕ್ತಾಧಿಗಳು ಸಂತೋಷದಿಂದ ಟಿಟಿಡಿಗೆ ಕೃತಜ್ಞತೆ ಸಲ್ಲಿದ್ದರು.

ಆದರೆ ಈ ಬಗ್ಗೆ ಟಿಟಿಡಿ ತನ್ನ ವೆಬ್ ಸೈಟ್ ಅಥವಾ ಅಧಿಕೃತ ಪುಟಗಳಲ್ಲಿ ಅಂತಹ ಯಾವುದೇ ಬೆಲೆ ಕಡಿತದ ಬಗ್ಗೆ ಘೋಷಣೆ ಮಾಡಿಲ್ಲ ಮತ್ತು ಸರ್ಕಾರ ಕೂಡ ಯಾವುದೇ ಹೇಳಿಕೆ ನೀಡಿಲ್ಲ. ಹಾಗಾಗಿ ಸಂಶಯಗೊಂಡ ಕೆಲವು ಭಕ್ತರು ಈ ಸುದ್ದಿಯನ್ನು ಪರಿಶೀಲಿಸಲು ಟಿಟಿಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆಗ ಈ ಸುದ್ದಿ ಸುಳ್ಳು ಎಂಬುದಾಗಿ ತಿಳಿದುಬಂದಿದೆ. ಈ ದಾರಿತಪ್ಪಿಸುವಂತಹ ಪೋಸ್ಟ್ ಗಳನ್ನು ನಂಬಬೇಡಿ. ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟಿಟಿಡಿ ಅಧಿಕೃತವಾಗಿ ಹೇಳಿಕೆ ನೀಡಿದೆ. ಆ ಮೂಲಕ ಸಾಮಾಜಿಕ ಮಾಧ್ಯಮದ ಈ ಸುದ್ದಿ ಸುಳ್ಳು ಎಂಬುದು ಭಕ್ತರಿಗೆ ಮನದಟ್ಟಾಗಿದೆ.

ಈ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ ಶ್ರೀವಾರಿ ಲಡ್ಡು ಎಂದು ಕರೆಯಲ್ಪಡುವ ಲಡ್ಡನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನ ಪಡೆದ ನಂತರ ಈ ಲಡ್ಡನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಇದು ತುಂಬಾ ಸಿಹಿ, ರುಚಿ ಮತ್ತು ಪರಿಮಳಯುಕ್ತವಾಗಿದೆ. ಹಾಗಾಗಿ ಈ ಲಡ್ಡುಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಅದರ ಬೆಲೆ ಇಳಿಕೆಯ ಸುದ್ದಿ ವೈರಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವ 1933ರಲ್ಲಿ ಸ್ಥಾಪನೆಯಾದ ತಿರುಮಲ ವೆಂಕಟೇಶ್ವರ ದೇವಸ್ಥಾನವು ಮೊದಲ ಬಾರಿಗೆ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಇದರ ಪ್ರಕಾರ ಬ್ಯಾಂಕ್‌ಗಳಲ್ಲಿ 10.25 ಟನ್ ಚಿನ್ನದ ಠೇವಣಿ, 2.5 ಟನ್ ಚಿನ್ನಾಭರಣ, ಸುಮಾರು 16,000 ಕೋಟಿ ರೂ. ಬ್ಯಾಂಕ್ ಠೇವಣಿ ಮತ್ತು ಭಾರತದಾದ್ಯಂತ 960 ಆಸ್ತಿಗಳನ್ನು ಒಳಗೊಂಡಂತೆ ಒಟ್ಟು 2.5 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ. ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಒಎನ್ ಜಿಸಿ ಮತ್ತು ಐಒಸಿಗಳ ಮಾರುಕಟ್ಟೆ ಬಂಡವಾಳ ಕೂಡ ಇಷ್ಟು ಪ್ರಮಾಣದಲ್ಲಿಲ್ಲ!

Continue Reading

Latest

Last Rites: ಅಂತ್ಯಕ್ರಿಯೆ ಮುಗಿಸಿ ಬರುವಾಗ ಸ್ಮಶಾನದತ್ತ ಹಿಂತಿರುಗಿ ನೋಡಬಾರದು ಅನ್ನೋದು ಏಕೆ ಗೊತ್ತಾ?

ಅಂತಿಮ ವಿಧಿವಿಧಾನಗಳಲ್ಲಿ (Last Rites) ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು. ಹಿಂತಿರುಗಿ ನೋಡಬಾರದು ಎಂದು ಹಿರಿಯರು ಹೇಳುವುದೇಕೆ? ಇಲ್ಲಿದೆ ಮಾಹಿತಿ.

VISTARANEWS.COM


on

By

Last Rites
Koo

ಪ್ರತಿಯೊಂದು ಧರ್ಮದಲ್ಲೂ ವಿವಿಧ ಆಚರಣೆಗಳಿವೆ (rituals). ಅದರಲ್ಲೂ ಮುಖ್ಯವಾಗಿ ಸನಾತನ ಧರ್ಮದಲ್ಲಿ (sanatana dharma) ಸಾಕಷ್ಟು ವಿಶೇಷ ಮತ್ತು ಅರ್ಥಪೂರ್ಣವಾದ ಆಚರಣೆಗಳಿವೆ. ಕೆಲವೊಂದು ಆಚರಣೆಗಳ ಬಗ್ಗೆ ನಮಗೆ ಗೊತ್ತಿದ್ದರೂ ಮರಣಾನಂತರದ (post-death ceremony) ಕೆಲವು ಆಚರಣೆಗಳ ನಾವು ತಿಳಿದಿರುವುದಿಲ್ಲ. ಈ ಆಚರಣೆಗಳನ್ನು (Last Rites) ಪಾಲಿಸುವುದು ಬಹುಮುಖ್ಯ.

ಮರಣಾನಂತರದ ಆಚರಣೆಗಳಲ್ಲಿ 16 ಪ್ರಮುಖ ಆಚರಣೆಗಳಿವೆ. ಇದರಲ್ಲಿ ಅನೇಕ ನಿಯಮಗಳಿವೆ. ಅದನ್ನು ಪ್ರತಿಯೊಬ್ಬರೂ ಪಾಲಿಸುವುದು ಮುಖ್ಯವಾಗಿದೆ.

ಅಂತಿಮ ವಿಧಿವಿಧಾನಗಳಲ್ಲಿ ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು.

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಆತನ ಆತ್ಮವು ದೇಹವನ್ನು ತೊರೆಯುತ್ತದೆ. ಅಂತಿಮ ವಿಧಿಗಳನ್ನು ನಡೆಸಿದ ಬಳಿಕ ದೇಹವು ಬೂದಿಯಾಗುತ್ತದೆ. ಆದರೆ ಆತ್ಮವು ಅಲ್ಲೇ ಇರುತ್ತದೆ. ಆತ್ಮವನ್ನು ಶಾಶ್ವತ ಮತ್ತು ಅವಿನಾಶಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಾವುದೇ ಕತ್ತಿ, ಬೆಂಕಿ ಅಥವಾ ನೀರು ಆತ್ಮವನ್ನು ನಾಶಮಾಡುವುದಿಲ್ಲ.

ಸ್ಮಶಾನ ಕಾರ್ಯದ ಬಳಿಕ ವ್ಯಕ್ತಿಯ ಆತ್ಮವು ಬೇರೆ ಲೋಕಕ್ಕೆ ಪ್ರಯಾಣ ಬೆಳೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸತ್ತವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆಯ ಅನಂತರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಹಿಂತಿರುಗಿ ನೋಡಿದಾಗ ಕುಟುಂಬಕ್ಕೆ ಆತ್ಮದ ಬಾಂಧವ್ಯವು ಅದನ್ನು ಇನ್ನೊಂದು ಲೋಕಕ್ಕೆ ಹಾದುಹೋಗದಂತೆ ತಡೆಯುತ್ತದೆ.

ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ ಮರಣದ ಅನಂತರ ಸತ್ತ ವ್ಯಕ್ತಿಯ ಆತ್ಮವು ಸ್ಮಶಾನದಲ್ಲಿ ನಡೆಯುವ ಅವನ ಕೊನೆಯ ಚಟುವಟಿಕೆಗಳನ್ನು ವೀಕ್ಷಿಸುತ್ತದೆ. ಮೃತನ ಕುಟುಂಬದ ಸದಸ್ಯರು ಸ್ಮಶಾನದಲ್ಲಿ ಇರುವುದರಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆಯ ಕಡೆಗೆ ಹಿಂತಿರುಗಿ ನೋಡಿದರೆ ಮೃತನ ಆತ್ಮವು ಆ ವ್ಯಕ್ತಿಯೊಂದಿಗೆ ಬರುತ್ತದೆ ಮತ್ತು ಆ ಬಂಧವನ್ನು ಮುರಿಯಲಾಗುವುದಿಲ್ಲ.

ಹೀಗಾಗಿ ಅಂತಿಮ ವಿಧಿಗಳನ್ನು ನಡೆಸಿದ ಅನಂತರ ತಿರುಗಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅಂತಹ ಸಂದರ್ಭದಲ್ಲಿ ಆತ್ಮವು ಮರಣಾನಂತರದ ಜೀವನಕ್ಕೆ ಪರಿವರ್ತನೆ ಕಷ್ಟವಾಗುತ್ತದೆ.

ಇದನ್ನೂ ಓದಿ: Vastu Tips: ಗಂಗಾ ಜಲ ಮನೆಯಲ್ಲಿಟ್ಟರೆ ಸಾಲದು; ಅದನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು?

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು 13 ದಿನಗಳ ಕಾಲ ಹಲವು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಇದರ ಹೊರತಾಗಿ ಅಂತ್ಯಕ್ರಿಯೆಯಿಂದ ಹಿಂದಿರುಗಿದ ಅನಂತರ ಅನುಸರಿಸಬೇಕಾದ ಕೆಲವು ನಿಯಮಗಳಿವೆ.

ತಕ್ಷಣ ಸ್ನಾನ ಮಾಡಿ ಮತ್ತು ವ್ಯಕ್ತಿಯ ಬಟ್ಟೆಗಳನ್ನು ತೊಳೆಯಬೇಕು. ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಗಂಗಾಜಲವನ್ನು ಇಡೀ ಮನೆಯಲ್ಲಿ ಸಿಂಪಡಿಸಬೇಕು. ವ್ಯಕ್ತಿ ಸತ್ತ ಮನೆಯಲ್ಲಿ ಮೃತರ ಆತ್ಮಕ್ಕೆ ಶಾಂತಿಗಾಗಿ 12 ದಿನಗಳ ಕಾಲ ದೀಪವನ್ನು ಬೆಳಗಿಸಬೇಕು. ಪಿತೃ ಪಕ್ಷದಲ್ಲಿ ಪಿಂಡದಾನ ಮಾಡಬೇಕು‌ ಎಂಬೆಲ್ಲ ಉಲ್ಲೇಖ ಗರುಡ ಪುರಾಣದಲ್ಲಿದೆ.

Continue Reading

ಧಾರ್ಮಿಕ

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

ಕನ್ನಡಿಯನ್ನು ಪ್ರತಿಯೊಂದು ಮನೆಯಲ್ಲೂ ವಿವಿಧ ಉದ್ದೇಶದಿಂದ ಇಡಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಬಳಕೆಯಾಗುವುದು ಪ್ರತಿಬಿಂಬ ನೋಡಲು. ಹೀಗೆ ಮನೆಯಲ್ಲಿ ಇಡುವ ಕನ್ನಡಿಗಳನ್ನು ವಾಸ್ತು ಪ್ರಕಾರ (Vastu Tips) ಇರಿಸುವುದರಿಂದ ನಾವು ನಮ್ಮ ಅದೃಷ್ಟವನ್ನು ಬದಲಾಯಿಕೊಳ್ಳಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ (home) ಇಡುವ ಪ್ರತಿಯೊಂದು ವಸ್ತುವಿಗೂ ವಾಸ್ತು (Vastu Tips) ಅನ್ವಯವಾಗುತ್ತದೆ. ಅದರಲ್ಲೂ ನಾವು ಅಲಂಕಾರದ ವಿಚಾರದಲ್ಲಿ ಇಡುವ ಕನ್ನಡಿ (mirror) ನಮ್ಮ ಸೌಂದರ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿಲ್ಲ ಬದಲಾಗಿ ನಮ್ಮ ಅದೃಷ್ಟವನ್ನೂ ಬದಲಾಯಿಸುತ್ತದೆ.

ಕನ್ನಡಿಯನ್ನು ಪ್ರತಿಯೊಂದು ಮನೆಯಲ್ಲೂ ವಿವಿಧ ಉದ್ದೇಶದಿಂದ ಇಡಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಬಳಕೆಯಾಗುವುದು ಪ್ರತಿಬಿಂಬ ನೋಡಲು. ಹೀಗೆ ಮನೆಯಲ್ಲಿ ಇಡುವ ಕನ್ನಡಿಗಳನ್ನು ವಾಸ್ತು ಪ್ರಕಾರ ಇರಿಸುವುದರಿಂದ ನಾವು ನಮ್ಮ ಅದೃಷ್ಟವನ್ನು ಬದಲಾಯಿಕೊಳ್ಳಬಹುದು.

ವಾಸ್ತು ಶಾಸ್ತ್ರವು ಅನೇಕ ನಂಬಿಕೆಗಳನ್ನು ಹೊಂದಿದ್ದು, ಅದರಲ್ಲಿ ಮುಖ್ಯವಾದದ್ದು ಕನ್ನಡಿಯನ್ನು ಸರಿಯಾಗಿ ಇರಿಸಿದಾಗ ಅದು ಮನೆಗೆ ಸಮೃದ್ಧಿ ಮತ್ತು ಸಂತೋಷ, ಮನೆಮಂದಿಗೆ ಅರೋಗ್ಯ ವನ್ನು ತರುತ್ತದೆ ಮತ್ತು ಅದು ಸದಾಕಾಲ ಇರುವಂತೆ ಮಾಡುತ್ತದೆ. ಹಾಗಾದರೆ ವಾಸ್ತುವಿನ ಪ್ರಕಾರ ಮನೆಯಲ್ಲಿ ಕನ್ನಡಿ ಎಲ್ಲಿ, ಹೇಗೆ ಇಡಬೇಕು ಎನ್ನುವ ಮಾಹಿತಿ ಇಲ್ಲಿದೆ.

Vastu Tips


ದಿಕ್ಕು ಮುಖ್ಯ

ಕನ್ನಡಿಯನ್ನು ಇಡಲು ದಿಕ್ಕು ಮುಖ್ಯವಾಗಿದೆ. ಸಕಾರಾತ್ಮಕ ಶಕ್ತಿಯು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ. ಈ ಕಾರಣದಿಂದಾಗಿ ಕನ್ನಡಿಯನ್ನು ಯಾವಾಗಲೂ ವೀಕ್ಷಕರ ಮುಖವು ಪೂರ್ವ ಅಥವಾ ಉತ್ತರದ ಗೋಡೆಗೆ ಎದುರಿಸುವಂತೆ ಇರಿಸಬೇಕು. ಕನ್ನಡಿಯನ್ನು ಎಚ್ಚರಿಕೆಯಿಂದ ಇರಿಸುವುದನ್ನು ಖಚಿತಪಡಿಸಿಕೊಳ್ಳಿ. ಎರಡು ಕನ್ನಡಿಗಳು ಎಂದಿಗೂ ಪರಸ್ಪರ ನೇರವಾಗಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಎಷ್ಟು ಎತ್ತರ?

ಕನ್ನಡಿಯು ನೆಲದಿಂದ ನಾಲ್ಕರಿಂದ ಐದು ಅಡಿ ಎತ್ತರದಲ್ಲಿ ಇರಿಸಬೇಕು. ಹಾಸಿಗೆಯ ಪಕ್ಕದಲ್ಲಿ ದೊಡ್ಡ ಡ್ರೆಸ್ಸಿಂಗ್ ಟೇಬಲ್ ಅಥವಾ ಸೈಡ್ ಟೇಬಲ್ ಅನ್ನು ಹೊಂದುವುದು ಅದೃಷ್ಟ. ಯಾವುದೇ ಕೋಣೆಯಲ್ಲಿ ಕನ್ನಡಿಯನ್ನು ಅಳವಡಿಸುವಾಗ ನೀವು ಮಲಗಿದಾಗ ನಿಮ್ಮ ದೇಹದ ಯಾವುದೇ ಭಾಗವು ಕನ್ನಡಿಯಲ್ಲಿ ಗೋಚರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಪೂರ್ವ ಮತ್ತು ಉತ್ತರದಿಂದ ಧನಾತ್ಮಕ ಶಕ್ತಿಗಳು ಪಶ್ಚಿಮ ಅಥವಾ ದಕ್ಷಿಣಕ್ಕೆ ಎದುರಾಗಿರುವ ಗೋಡೆಗಳ ಮೇಲೆ ಇರುವ ಕನ್ನಡಿಗಳಿಂದ ಪ್ರತಿಫಲಿಸುತ್ತದೆ.

ಸೂಕ್ತ ಗಾತ್ರ?

ಕನ್ನಡಿಯ ಗಾತ್ರವು ಬಹಳ ಮುಖ್ಯವಾಗಿರುತ್ತದೆ. ಚದರ ಅಥವಾ ಆಯತದಂತಹ ನಾಲ್ಕು ಮೂಲೆಗಳ ಫಾರ್ಮ್ ಅನ್ನು ಆಯ್ಕೆ ಮಾಡಬಹುದು. ಚೌಕ ಮತ್ತು ಆಯತಾಕಾರದ ರೂಪಗಳು ಅದೃಷ್ಟ ಎಂದು ವಾಸ್ತು ಹೇಳುತ್ತದೆ. ಸುಂದರವಾದ ಮಾದರಿಗಳನ್ನು ರಚಿಸಲು ಚೌಕ ಮತ್ತು ಆಯತಾಕಾರದ ಕನ್ನಡಿಗಳು ತುಂಬಾ ಉಪಯುಕ್ತವಾಗಿವೆ.

ಇದನ್ನೂ ಓದಿ: Vastu Tips: ಮನೆ ಆವರಣದ ತಪ್ಪಾದ ದಿಕ್ಕಿನಲ್ಲಿ ಗಿಡ ಬೆಳೆಸಿದರೆ ಕೆಟ್ಟ ಪರಿಣಾಮ!

ತಿಳಿದಿರಲಿ

ಕನ್ನಡಿಗಳಲ್ಲಿ ಯಾವಾಗಲೂ ಸ್ಪಷ್ಟವಾದ ಚಿತ್ರವು ಗೋಚರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

ಮನೆಯ ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಕನ್ನಡಿ ಅಥವಾ ಯಾವುದೇ ಗಾಜಿನ ವಸ್ತುವನ್ನು ಇರಿಸಿ.

ಮನೆಯಲ್ಲಿ ಯಾವುದೇ ಕನ್ನಡಿ ನಾಲ್ಕು ಅಥವಾ ಐದು ಅಡಿಗಳಿಗಿಂತ ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಅಪಾರದರ್ಶಕ ಬಾಗಿಲುಗಳು ಮತ್ತು ಕಿಟಕಿ ಫಲಕಗಳಿಂದ ದೂರವಿರಿ. ಅರೆಪಾರದರ್ಶಕವಾದವುಗಳನ್ನು ಆರಿಸುವುದು ಸಾಮಾನ್ಯವಾಗಿ ಯೋಗ್ಯವಾಗಿದೆ.

ಕನ್ನಡಿಗಳು ಯುವಕರು ವಿಚಲಿತರಾಗಲು ಮತ್ತು ಗಮನಹರಿಸುವಲ್ಲಿ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ಅವುಗಳನ್ನು ಸ್ಟಡಿ ಟೇಬಲ್‌ನಿಂದ ದೂರವಿರಿಸಿ.

Continue Reading

ಶಿವಮೊಗ್ಗ

Shivamogga News: ಕಾರ ಹುಣ್ಣಿಮೆ; ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

Shivamogga News: ಸೊರಬ ತಾಲೂಕಿನ ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಕಾರ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ಶುಕ್ರವಾರ ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.

VISTARANEWS.COM


on

Thousands of devotees have darshan of Shri Renukamba Devi of Chandragutti
Koo

ಸೊರಬ: ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ (Chandragutti Shri Renukamba Devi temple) ಕಾರ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ಶುಕ್ರವಾರ ಆಗಮಿಸಿ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ (Shivamogga News) ಸಲ್ಲಿಸಿದರು.

ಇದನ್ನೂ ಓದಿ: Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ತುಂತುರು ಮಳೆಯ ನಡುವೆಯೂ ಆಗಮಿಸಿ, ಮಲೆನಾಡಿನ ಆರಾಧ್ಯ ದೇವಿ ಶ್ರೀ ರೇಣುಕಾದೇವಿಯ ದರ್ಶನ ಪಡೆದು ಉದೋ ಉದೋ ಎಂದು ಜೈಕಾರ ಹಾಕಿ, ಭಕ್ತಿ ಸಮರ್ಪಿಸಿದರು.

ಹಿರೇಕೆರೂರು ಬಸ್ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಗೇಯೇ ಖಾಸಗಿ ವಾಹನಗಳಲ್ಲಿಯೂ ಜನ ಚಂದ್ರಗುತ್ತಿಗೆ ಜಾತ್ರೆಯ ರೀತಿಯಲ್ಲಿ ಆಗಮಿಸಿದ್ದರು.

ಇದನ್ನೂ ಓದಿ: International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಲಾಯಿತು.

Continue Reading
Advertisement
Divorce
ದೇಶ10 mins ago

Divorce: ತೂಕ ಇಳಿಸಿಕೊಳ್ಳಲು ನೆರವಾಗದ ‘ಜಿಮ್‌ ಟ್ರೇನರ್‌’ ಗಂಡನಿಗೆ ಮಹಿಳೆ ಡಿವೋರ್ಸ್‌!

Crush Saree Fashion
ಫ್ಯಾಷನ್14 mins ago

Crush Saree Fashion: ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ ಕ್ರಶ್‌ ಸೀರೆಗಳು

ಕರ್ನಾಟಕ18 mins ago

Renuka Swamy Murder: ರೇಣುಕಾಸ್ವಾಮಿ ಹತ್ಯೆ ಕೇಸ್‌ನ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್; ಕಾರಣವೇನು?

union Minister Pralhad Joshi took oath in the name of God in his mother tongue
ಕರ್ನಾಟಕ27 mins ago

Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

Divisional Level Progress Review Meeting of Revenue Department by Minister Krishna Byregowda
ಕಲಬುರಗಿ33 mins ago

krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

Hardeep Singh Nijjar
ದೇಶ40 mins ago

Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Sleep After Lunch
ಲೈಫ್‌ಸ್ಟೈಲ್44 mins ago

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

R Ashok demands that the Congress apologize for imposing emergency
ಕರ್ನಾಟಕ51 mins ago

R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

Viral Video
Latest58 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ1 hour ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌