Explainer: ಮೂರೇ ವರ್ಷದಲ್ಲಿ ಲಂಕೆಯನ್ನು ರಾಜಪಕ್ಸ ಕುಟುಂಬ ಮುಳುಗಿಸಿದ್ದು ಹೇಗೆ? - Vistara News

EXPLAINER

Explainer: ಮೂರೇ ವರ್ಷದಲ್ಲಿ ಲಂಕೆಯನ್ನು ರಾಜಪಕ್ಸ ಕುಟುಂಬ ಮುಳುಗಿಸಿದ್ದು ಹೇಗೆ?

ಒಂದು ಕಾಲದಲ್ಲಿ ಆರ್ಥಿಕವಾಗಿ ಸಶಕ್ತವಾಗಿದ್ದ ಶ್ರೀಲಂಕಾ ದ್ವೀಪರಾಷ್ಟ್ರವನ್ನು ರಾಜಪಕ್ಸ ಫ್ಯಾಮಿಲಿ ರಾಜಕೀಯವಾಗಿ ಗುತ್ತಿಗೆ ತೆಗೆದುಕೊಂಡು, ಇಂದಿನ ದಿವಾಳಿ ಸ್ಥಿತಿಗೆ ತಂದಿಟ್ಟಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

2019ರಲ್ಲಿ ಗೋತಾಬಯ ರಾಜಪಕ್ಸ ಅವರು ಶ್ರೀಲಂಕೆಯ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದಾಗ, ಅಧಿಕಾರಕ್ಕೆ ಬಂದರೆ ದೊಡ್ಡ ಪ್ರಮಾಣದ ತೆರಿಗೆ ವಿನಾಯಿತಿ ನೀಡುವುದಾಗಿ ಘೋಷಿಸಿದ್ದರು. ಅದು ಚುನಾವಣಾ ಪ್ರಚಾರ ಗಿಮಿಕ್‌ ಎಂದು ಭಾವಿಸಲಾಗಿತ್ತು.

ತೆರಿಗೆ ಕಡಿತದ ದುಡುಕು
ಆಗಿನ ವಿತ್ತ ಸಚಿವರಾಗಿದ್ದ ಮಂಗಲ ಸಮರವೀರ ಅವರು, ವ್ಯಾಟ್‌ ಅನ್ನು 15%ದಿಂದ 8%ಗೆ ಇಳಿಸುವುದು, ಲೆವಿಗಳನ್ನು ತೆಗೆಯುವುದು ಅಪಾಯಕಾರಿ ನಡೆ ಎಂದು ಹೇಳಿದ್ದರು. ಯಾಕೆಂದರೆ ದ್ವೀಪರಾಷ್ಟ್ರದ ಸ್ವಂತ ಆದಾಯವೇ ಕಡಿಮೆ. ಅಂತಾರಾಷ್ಟ್ರೀಯ ಸಾಲವೇ ಹೆಚ್ಚು. ಇಂಥ ಹೊತ್ತಿನಲ್ಲಿ ಇದ್ದ ತೆರಿಗೆಯನ್ನೂ ಇಳಿಸಿದರೆ! ʼʼಹಾಗೆಲ್ಲಾದರೂ ಮಾಡಿದರೆ ಇಡೀ ದೇಶವೇ ದಿವಾಳಿಯಾಗಿ, ಇನ್ನೊಂದು ವೆನೆಜುವೆಲಾ ಅಥವಾ ಗ್ರೀಸ್‌ ಆದೀತುʼʼ ಎಂದು ಎಚ್ಚರಿಸಿದ್ದರು. ಇದನ್ನು ಅವರು ಹೇಳಿ ಸರಿಯಾಗಿ 30 ತಿಂಗಳಲ್ಲಿ ಅವರು ಹೇಳಿದಂತೆಯೇ ಆಗಿದೆ.

ನಿರಂಕುಶಾಧಿಕಾರ
2019ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಕೂಡಲೇ ಭಾರಿ ತೆರಿಗೆ ಕಡಿತವನ್ನು ಗೋತಾಬಯ ರಾಜಪಕ್ಸ ಘೋಷಿಸಿದರು. ಇನ್ನಷ್ಟು ಅಧ್ಯಕ್ಷೀಯ ಅಧಿಕಾರಗಳನ್ನು ಕ್ರೋಡೀಕರಿಸಿಕೊಂಡರು. 2015ಕ್ಕೆ ಮುನ್ನ ಅವರ ಸಹೋದರ ಮಹಿಂದ ರಾಜಪಕ್ಸ ಅಧಿಕಾರದಲ್ಲಿದ್ದಾಗ ಪಡೆದುಕೊಂಡಿದ್ದ ನಿರಂಕುಶ ಅಧಿಕಾರಗಳು ಅವು. ದೇಶದ ಅಂತರ್ಯುದ್ಧವನ್ನು ಅಡಗಿಸಲು ಅವರು ಆ ಕ್ರೂರ ಅಧಿಕಾರಗಳನ್ನು ಬಳಸಿಕೊಂಡಿದ್ದರು.

ವಿನಯ, ವಿವೇಕ ಇರಬೇಕಾದ ಜಾಗದಲ್ಲಿ ಹೆಚ್ಚಿನ ಅಧಿಕಾರ, ನಿರಂಕುಶತೆ ಬಂದವು. ತಮ್ಮ ಕುಟುಂಬದ ಜನರನ್ನು ಆಯಕಟ್ಟಿನ ಸ್ಥಾನಗಳಿಗೆ ತಂದರು. ತಮ್ಮ ʼರಾಜಪಕ್ಸʼ ಕುಟುಂಬದ ಬ್ರಾಂಡ್‌ ಅನ್ನು ಹೆಚ್ಚಿಸಿಕೊಳ್ಳಲು ಶ್ರಮಿಸಿದರು. ಸಿಂಹಳೀಯ ಬೌದ್ಧರು ಶೇ.75ರಷ್ಟಿರುವ ಈ ದೇಶದಲ್ಲಿ ಪ್ರಬಲಿಸುತ್ತಿರುವ ರಾಷ್ಟ್ರೀಯವಾದಿ ಮನೋಭಾವದ ಬೆನ್ನೇರಿದರು.

ಅಧಿಕಾರದ ದುರ್ಬಳಕೆ
ಆದರೆ ಶ್ರೀಲಂಕೆಯ ಇಂದಿನ ಪರಿಸ್ಥಿತಿ ದಾರುಣವಾಗಿದೆ. ಪ್ರಧಾನಿ ಮಹಿಂದ ರಾಜಪಕ್ಸ ರಾಜೀನಾಮೆ ನೀಡಿ ಅಡಗಿ ಕುಳಿತಿದ್ದಾರೆ. ಜನತೆಯ ಕೈಗೆ ಸಿಕ್ಕರೆ ಸಿಗಿದುಬಿಡಬಹುದು ಎಂಬ ಭಯವಿದೆ ಅವರಿಗೆ. ಅಧ್ಯಕ್ಷ ಗೋತಾಬಯ ರಾಜಪಕ್ಸ ಅವರ ಅಧಿಕಾರ ಕೂಡ ಯಾವ ಕ್ಷಣದಲ್ಲಿ ಬೇಕಿದ್ದರೂ ʼಗೋತಾʼ ಆಗುವ ಸಂಭವ ಇದೆ. ಆದರೆ ತಾವು ಅಧಿಕಾರದಿಂದ ಇಳಿದ ಕೂಡಲೇ ದುರ್ಬಲರಾಗಿಬಿಡುತ್ತೇವೆ, ಕಾನೂನಿನ ಕೈಗೆ ಸಿಕ್ಕಿಬೀಳಬೇಕಾಗುತ್ತದೆ ಎಂಬುದು ಅವರಿಗೆ ಅರಿವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ, ಬ್ರಹ್ಮಾಂಡ ಭ್ರಷ್ಟಾಚಾರ, ಯುದ್ಧ ಕಾನೂನುಗಳ ಉಲ್ಲಂಘನೆ ಇತ್ಯಾದಿಗಳ ನೂರಾರು ಪ್ರಕರಣಗಳು ಅವರನ್ನು ಮಣಿಸಲು ಕಾದಿವೆ.

ಕಳೆದ ಹನ್ನೆರಡು ವರ್ಷಗಳಿಂದ ರಾಜಪಕ್ಸ ಫ್ಯಾಮಿಲಿಯ ಹಲವರು ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ಇದ್ದಾರೆ. ಮೀಡಿಯಾಗಳು ಹಾಗೂ ಪ್ರತಿಪಕ್ಷಗಳು ಇವರ ಆಡಳಿತವನ್ನು ʼಸರ್ವಾಧಿಕಾರʼ ಎಂದೇ ಕರೆದಿವೆ.

ಎಲ್‌ಟಿಟಿಇಯನ್ನು ಹಸಿಹಸಿಯಾಗಿ ತರಿದುಹಾಕಿದ ಮಿಲಿಟರಿ ಕಾರ್ಯಾಚರಣೆ ನಡೆಸಿದಾಗ ಸೈನ್ಯದ ಮುಖ್ಯಸ್ಥರಾಗಿದ್ದವರು ಇದೇ ಗೋತಾಬಯ. ಈ ರಕ್ತಪಾತದಲ್ಲಿ ಅವರು ಸುಮಾರು ಒಂದು ಲಕ್ಷ ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಿಸಿದ್ದರು. ಅವರಿಗೀಗ 72 ವರ್ಷ. ಇವರ ಅಣ್ಣ (76) ಮಹಿಂದ ರಾಜಪಕ್ಸ ಈ ಫ್ಯಾಮಿಲಿಯ ರಾಜಕೀಯ ಮಿದುಳು. ಒಮ್ಮೆ ಅಧ್ಯಕ್ಷರಾಗಿ, ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಹೋದರರಾದ ಚಮಲ್‌ (79) ಮತ್ತು ಬಸಿಲ್‌ (71) ಇಲ್ಲಿನ ಬಂದರು, ಕೃಷಿ, ಹಣಕಾಸು ಎಲ್ಲವನ್ನೂ ಆವರಿಸಿಕೊಂಡಿದ್ದಾರೆ. ಮಿಲಿಂದ ರಾಜಪಕ್ಸ ಎಂಬಾತ ಸರಕಾರದ ವಕ್ತಾರ. ಕ್ರೀಡಾ ಸಚಿವನಾಗಿದ್ದ ನಮಲ್‌ ರಾಜಪಕ್ಸ ಎಂಬಾತ ಮಹಿಂದರ ಭಾವ, ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದಾನೆ.

ಸಾಲದ ಮೇಲೆ ಸಾಲ
ರಾಜಪಕ್ಸ ಕುಟುಂಬ ಅಧಿಕಾರಕ್ಕೆ ಬರುವ ಮುನ್ನವೇ ದೇಶದ ಮೇಲೆ ಸಾಲ ಇತ್ತು. ಆದರೆ ಈ ಸಾಲಕ್ಕೆ ಭ್ರಷ್ಟಾಚಾರವನ್ನೂ ಸೇರಿಸಿ, ಮರುಪಾವತಿ ಅಸಾಧ್ಯವಾಗುವಂತೆ ಮಾಡಿದ ಹೆಗ್ಗಳಿಕೆ ಈ ಕುಟುಂಬದ್ದು. ಹಂಬನ್‌ತೋಟ ಬಂದರನ್ನು ಪೂರ್ತಿಯಾಗಿ ಚೀನಾದ ವಶಕ್ಕೆ ಒಪ್ಪಿಸಿ, ಆ ದೇಶದಿಂದ ಭಾರಿ ಸಾಲವನ್ನು ಪಡೆದದ್ದು ಇದೇ ಕುಟುಂಬ. ಆದರೆ 2010 ಮತ್ತು 2020ರ ನಡುವೆ ದೇಶದ ಸಾಲ ದುಪ್ಪಟ್ಟು ಹೆಚ್ಚಿತು.

2019ರಲ್ಲಿ ದೇಶದಲ್ಲಿ ಈಸ್ಟರ್‌ ಸಂಡೇ ಉಗ್ರ ದಾಳಿಗಳು ನಡೆದವು. ಕುಸಿದ ಪ್ರವಾಸೋದ್ಯಮಕ್ಕೆ ಜೀವ ತುಂಬಲು ಬಡ್ಡಿದರ ಇಳಿಕೆ, ತೆರಿಗೆ ವಿನಾಯಿತಿಗಳು ಅಗತ್ಯ ಎಂದು ರಾಜಪಕ್ಸ ಭಾವಿಸಿದರು. ಆದರೆ ಇದು ನಗದು ಕೊರತೆಯನ್ನು ಮತ್ತಷ್ಟು ಹೆಚ್ಚಿಸಿತು.
ಕೋವಿಡ್‌ ಕಾಲದಲ್ಲಿ ಪ್ರವಾಸೋದ್ಯಮ ಮತ್ತಷ್ಟು ಕುಸಿಯಿತು. ವಿಶ್ವಬ್ಯಾಂಕ್‌, ಹಣಕಾಸು ನಿಧಿ, ಚೀನಾ ಮತ್ತಿತರ ಕಡೆಯಿಂದ ಹಣ ತರಲಾಯಿತು.

ಇದನ್ನೂ ಓದಿ: Explainer: ಶ್ರೀಲಂಕಾದಲ್ಲಿ ಮತ್ತೆ ಎಮರ್ಜೆನ್ಸಿ, ಹಸಿವು, ಪ್ರತಿಭಟನೆ, ಹಾಹಾಕಾರ

ಆಮದಿಗಾಗಿ ವಿದೇಶಿ ವಿನಿಮಯ ಸಂಗ್ರಹವನ್ನು ಬಳಸಿಕೊಳ್ಳಲಾಯಿತು. ಇದರಿಂದ ಸಂಗ್ರಹ ಮೂರನೇ ಎರಡು ಭಾಗದಷ್ಟು ಖಾಲಿಯಾಯಿತು. ಕ್ರೆಡಿಟ್‌ ರೇಟಿಂಗ್‌ ಕಂಪನಿಗಳು ಶ್ರೀಲಂಕೆಗೆ ಕಡಿಮೆ ರೇಟಿಂಗ್‌ ನೀಡಿದವು. ಇದರಿಂದ ಹೊಸ ಸಾಲ ಸಿಗಲಿಲ್ಲ.
ಸರಕಾರ ಇನ್ನಷ್ಟು ನಗದು ಟಂಕಿಸಲು ಮುಂದಾಯಿತು. ಶೇ.42ರಷ್ಟು ಹಣ ಮುದ್ರಿಸಿತು. ಆದರೆ ಇದು ಹಣದುಬ್ಬರವನ್ನು ಹೆಚ್ಚು ಮಾಡಿತು.

ಕೃಷಿ ಕುಸಿತ, ಆಹಾರ ಕೊರತೆ
ಕಳೆದ ಏಪ್ರಿಲ್‌ನಲ್ಲಿ, ಇದ್ದಕ್ಕಿದ್ದಂತೆ ರಸಗೊಬ್ಬರಗಳನ್ನು ನಿಷೇಧಿಸಲಾಯಿತು. ಇದಕ್ಕೆ ನೀಡಿದ ಕಾರಣ- ಶ್ರೀಲಂಕೆಯನ್ನು ಸಾವಯವ ದೇಶವಾಗಿಸಬೇಕು ಹಾಗೂ ರಸಗೊಬ್ಬರ ಮಾಫಿಯಾ ಮಟ್ಟಹಾಕಬೇಕು. ಆದರೆ ನಿಜವಾದ ಕಾರಣವೆಂದರೆ, ಹೊರದೇಶಗಳಿಂದ ರಸಗೊಬ್ಬರ ಖರೀದಿಗೆ ಹಣವಿರಲಿಲ್ಲ. ಈ ರಸಗೊಬ್ಬರ ಬ್ಯಾನ್‌ ತಿರುಗೇಟು ನೀಡಿತು. ಭತ್ತದ ಇಳುವರಿ ಕುಸಿಯಿತು. ಟೀ ಉತ್ಪಾದನೆ ಕುಸಿಯಿತು. ಇಡೀ ಕೃಷಿ ಸರಪಣಿಯೇ ಕುಸಿಯಿತು. ದುಬಾರಿ ಹಣ ನೀಡಿ ಆಹಾರ ಹೊರಗಿನಿಂದ ತರಬೇಕಾಯಿತು. ಇದೊಂದು ಅಪಾಯಕಾರಿ ನೀತಿ ಎಂದು ತಜ್ಞರು ಎಚ್ಚರಿಸಿದರೂ, ರಾಜಪಕ್ಸ ಫ್ಯಾಮಿಲಿ ಕೇಳಲಿಲ್ಲ.

ಸದ್ಯದ ರಾಜಕೀಯ ಜನಪ್ರಿಯತೆ, ಸಮೀಕ್ಷೆಗಳ ಪ್ರಕಾರ ಶೇ.10ಕ್ಕೆ ಇಳಿದಿದೆ. ರಾಜಪಕ್ಸ ಕುಟುಂಬದವರು ಜನರ ಕೈಗೆ ಸಿಗದೆ ಪಾರಾಗಲು ದಾರಿ ಹುಡುಕುತ್ತಿದ್ದಾರೆ.

ಇದನ್ನೂ ಓದಿ: SRILANKA CRISIS: ಮಾಜಿ ಪ್ರಧಾನಿ ಮಹಿಂದ ರಾಜಪಕ್ಸ ನಿವಾಸಕ್ಕೆ ಬೆಂಕಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

New Criminal Laws: ಹೊಸ ಕ್ರಿಮಿನಲ್ ಕಾನೂನು ಜು.1ರಿಂದ ಜಾರಿ; ಯಾವ ಕಾನೂನು? ಏನು ಬದಲಾವಣೆ? Complete Details!

New criminal laws: ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟು ರಾಷ್ಟ್ರಪತಿಗಳಿಂದ ಒಪ್ಪಿಗೆಯನ್ನು ಪಡೆದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ ಒಂದರಿಂದ ಜಾರಿಗೆ ಬರಲಿವೆ. ಅವುಗಳ ಅನುಷ್ಠಾನಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ನಡೆಯುತ್ತಿದೆ. ಮೂರು ಹೊಸ ಕಾನೂನುಗಳ ರೂಪುರೇಷೆಗಳೇನು? ಬದಲಾವಣೆಗಳು ಏನೇನು? ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

New criminal laws
Koo

ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳು (New criminal laws) ಜುಲೈ 1ರಿಂದ ಜಾರಿಗೆ ಬರಲಿವೆ. ಅವುಗಳ ಅನುಷ್ಠಾನಕ್ಕೆ ಅಗತ್ಯ ತರಬೇತಿ ಈಗಾಗಲೇ ನಡೆಯುತ್ತಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ (Union law and justice ministe) ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಈ ಬಗ್ಗೆ ವಿವರ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ (Kolkata) “ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಆಡಳಿತದಲ್ಲಿ ಭಾರತದ ಪ್ರಗತಿಪರ ಹಾದಿ” ಎಂಬ ಸಮ್ಮೇಳನದಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆಯ (UCC) ರಾಷ್ಟ್ರವ್ಯಾಪಿ ಅನುಷ್ಠಾನದ ಬಗ್ಗೆಯೂ ಭರವಸೆ ವ್ಯಕ್ತಪಡಿಸಿದ್ದಾರೆ.

ಜುಲೈ 1ರಿಂದ ಎಲ್ಲಾ ಮೂರು ಕಾನೂನುಗಳು – ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆಗಳು ಈ ಹಿಂದಿನ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸುತ್ತವೆ. ಈಗಿರುವ ಕಾಯಿದೆಗಳಿಗೆ ಹೋಲಿಸಿದರೆ ಈ ಮೂರು ಹೊಸ ಕಾನೂನುಗಳಲ್ಲಿ ಹಲವು ವಿನೂತನ ಉದ್ದೇಶಗಳಿವೆ.

ಮೂರು ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು. ಆದರೆ, ಅವು ಜಾರಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 25ರಂದು ಮೂರು ಕಾನೂನುಗಳು ಜುಲೈ 1ರಂದು ಜಾರಿಗೆ ಬರುತ್ತವೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು.

ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್‌ಡಿ) ಈ ಹೊಸ ಕಾನೂನುಗಳಿಗೆ ತರಬೇತಿಯನ್ನು ನೀಡುತ್ತಿದೆ. ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು ಸಹ ತರಬೇತಿಯನ್ನು ನೀಡುತ್ತಿವೆ. ನ್ಯಾಯಾಧೀಶರಿಗೂ ನ್ಯಾಯಾಂಗ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ.

ಇದನ್ನೂ ಓದಿ: Opposition Leader: 10 ವರ್ಷ ಬಳಿಕ ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ! ಇವರಿಗೆ ಸಿಗುವ ಸವಲತ್ತುಗಳೇನು?

ಹೊಸ ಕ್ರಿಮಿನಲ್ ಕಾನೂನುಗಳು ಯಾವವು?

ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (Indian Code), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Indian Civil Protection Code) ಮತ್ತು ಭಾರತೀಯ ಸಾಕ್ಷಿ ಕಾಯಿದೆಯು (Indian Evidence Act) ಜುಲೈ 1ರಿಂದ ಜಾರಿಗೆ ಬರಲಿವೆ. ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದೆ.


ಭಯೋತ್ಪಾದಕರ ಆಸ್ತಿ ಮುಟ್ಟುಗೋಲು

ಭಯೋತ್ಪಾದನೆಯನ್ನು ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 113 (1) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಅಥವಾ ಯಾವುದೇ ವಿದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ಕೃತ್ಯವನ್ನು ಎಸಗುವ ವ್ಯಕ್ತಿಯನ್ನು ಈ ಕಾನೂನಿನಲ್ಲಿ ಭಯೋತ್ಪಾದಕ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಾಮಾನ್ಯ ಸಾರ್ವಜನಿಕರನ್ನು ಅಥವಾ ಅದರ ಒಂದು ಭಾಗವನ್ನು ಬೆದರಿಸಲು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಭಯೋತ್ಪಾದಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಈ ಕಾನೂನಿನ ಅಡಿಯಲ್ಲಿ ಇದೆ. ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳನ್ನು ಮರಣದಂಡನೆ ಅಥವಾ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿದೆ. ‘ಆಸ್ತಿಗೆ ಹಾನಿ, ಅಥವಾ ಕರೆನ್ಸಿಯ ತಯಾರಿಕೆ ಅಥವಾ ಕಳ್ಳಸಾಗಣೆಯನ್ನು ಇದು ಒಳಗೊಂಡಿದೆ.

ದೇಶದ್ರೋಹ ಎಂಬುದು ರದ್ದು

ಭಾರತೀಯ ದಂಡ ಸಂಹಿತೆ1860ರ ದೇಶದ್ರೋಹದ ನಿಬಂಧನೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152ಕ್ಕೆ ಬದಲಾಯಿಸಲಾಗಿದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ವಿಭಾಗಗಳನ್ನು ಪರಿಚಯಿಸಲಾಗಿದೆ.

ಅತ್ಯಾಚಾರ ಮಾಡಿದರೆ ಮರಣ ದಂಡನೆ

ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧಗಳನ್ನು ಪರಿಹರಿಸಲು ‘ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು’ ಎಂಬ ಅಧ್ಯಾಯವನ್ನು ಪರಿಚಯಿಸಿದೆ. ಇದಲ್ಲದೆ, ಸಂಹಿತೆ 18 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ಮಾರ್ಪಾಡುಗಳನ್ನು ಶಿಫಾರಸು ಮಾಡುತ್ತಿದೆ.

ಅಪ್ರಾಪ್ತ ವಯಸ್ಸಿನ ಮಹಿಳೆಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ)ಗೆ ಅನುಗುಣವಾಗಿ ಮಾಡಲಾಗಿದೆ. 18 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಅವಕಾಶ ಕಲ್ಪಿಸಲಾಗಿದೆ.

ಅತ್ಯಾಚಾರ ಎಸಗುವವರಿಗೆ ಕಾನೂನಿನ ಪ್ರಕಾರ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಇದು ಜೀವಾವಧಿಯವರೆಗೆ ಜೈಲು ಶಿಕ್ಷೆಗೆ ವಿಸ್ತರಿಸಬಹುದು ಮತ್ತು ದಂಡಕ್ಕೆ ಸಹ ಹೊಣೆಗಾರರಾಗಬೇಕಾಗುತ್ತದೆ.

ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಇದಲ್ಲದೆ ಮದುವೆ, ಉದ್ಯೋಗ, ಬಡ್ತಿಯ ನೆಪದಲ್ಲಿ ಅಥವಾ ಯಾವುದೇ ಆಮಿಷದ ಮೂಲಕ ಮಹಿಳೆಯರ ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

ಮೊದಲ ಬಾರಿಗೆ ಸಂಘಟಿತ ಅಪರಾಧದ ವ್ಯಾಖ್ಯಾನ

ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ 111 (1) ಅಡಿಯಲ್ಲಿ ಪದವನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ. ಈ ವ್ಯಾಖ್ಯಾನವು ಸಶಸ್ತ್ರ ದಂಗೆ, ವಿಧ್ವಂಸಕ ಕಾರ್ಯಾಚರಣೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಒಳಗೊಂಡಿದೆ. ಶಿಕ್ಷೆಯು ವಿವಿಧ ಅಪರಾಧಗಳಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ, ದಂಡ ಅಥವಾ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒಳಗೊಂಡಿರುತ್ತದೆ.

ಗುಂಪು ಹತ್ಯೆಗೆ ಶಿಕ್ಷೆಯ ಹೆಚ್ಚಳ

ಮೊದಲ ಬಾರಿಗೆ ಮೂಲ ಮಸೂದೆಯು ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆಗಳೆಂದು ವರ್ಗೀಕರಿಸಿದೆ. ಈ ಕಾಯಿದೆಯು ಗುಂಪು ಹತ್ಯೆಯಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆಯನ್ನು ನೀಡಲು ಬಯಸುತ್ತದೆ.

ದೇಶ ವಿರೋಧಿ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ

“ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳಿಗೆ” ಸಂಬಂಧಿಸಿದ ಕೃತ್ಯಗಳ ಸಂದರ್ಭದಲ್ಲಿ ಕಾನೂನುಗಳು ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ.

ಯಾರಾದರೂ ಉದ್ದೇಶಪೂರ್ವಕವಾಗಿ ಪದಗಳಲ್ಲಿ ಮಾತನಾಡುವ ಅಥವಾ ಬರೆಯುವ ಅಥವಾ ಚಿಹ್ನೆಗಳ ಮೂಲಕ, ಅಥವಾ ಗೋಚರ ಪ್ರಾತಿನಿಧ್ಯದಿಂದ, ಅಥವಾ ವಿದ್ಯುನ್ಮಾನ ಸಂವಹನದ ಮೂಲಕ ಅಥವಾ ಹಣಕಾಸಿನ ಅರ್ಥದ ಬಳಕೆಯಿಂದ ಅಥವಾ ಬೇರೆ ಬೇರೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕವನ್ನು ಪ್ರಚೋದಿಸಲು ಪ್ರಯತ್ನಿಸಿದರೆ ಕಠಿಣ ಶಿಕ್ಷೆ ಕಾದಿದೆ. ಅಕ್ರಮ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.

ತ್ವರಿತ ವಿಚಾರಣೆ ಮತ್ತು ನ್ಯಾಯ

ಹೊಸ ಕಾನೂನುಗಳ ಪ್ರಕಾರ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕಾಗುತ್ತದೆ ಮತ್ತು ಪರಿಸ್ಥಿತಿಯನ್ನು ನೋಡಿ ನ್ಯಾಯಾಲಯವು ಇನ್ನೂ 90 ದಿನಗಳವರೆಗೆ ಅನುಮತಿ ನೀಡಬಹುದು. ತನಿಖೆಯನ್ನು 180 ದಿನಗಳಲ್ಲಿ ಮುಗಿಸಿ ವಿಚಾರಣೆಗೆ ಕಳುಹಿಸಬೇಕು.

ಇದಲ್ಲದೆ, ಪೊಲೀಸರು 90 ದಿನಗಳಲ್ಲಿ ಪ್ರಕರಣದ ಸ್ಥಿತಿಯನ್ನು ಅಪ್‌ಡೇಟ್‌ ಮಾಡಬೇಕಾಗುತ್ತದೆ. ವಿಚಾರಣೆಯ ಅನಂತರ 30 ದಿನಗಳಲ್ಲಿ ತೀರ್ಪು ನೀಡಬೇಕಾಗುತ್ತದೆ. ಒಂದು ವಾರದೊಳಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಮೂರು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಿಗೆ ಸಾಮಾನ್ಯ ವಿಚಾರಣೆ ಸಾಕಾಗುತ್ತದೆ. ಇದರಿಂದ ಸೆಷನ್ ಕೋರ್ಟ್‌ಗಳಲ್ಲಿನ ಪ್ರಕರಣಗಳು ಶೇ. 40ರಷ್ಟು ಕಡಿಮೆಯಾಗಲಿವೆ. ಶೂನ್ಯ ಎಫ್‌ಐಆರ್ ದಾಖಲಿಸುವ ಪದ್ಧತಿಯನ್ನು ಸಾಂಸ್ಥಿಕಗೊಳಿಸಲಾಗಿದೆ. ಎಲ್ಲೇ ಘಟನೆ ನಡೆದರೂ ಎಲ್ಲಿ ಬೇಕಾದರೂ ಎಫ್‌ಐಆರ್‌ ದಾಖಲಿಸಬಹುದು.

ಸಂತ್ರಸ್ತರ ಮಾಹಿತಿ ಹಕ್ಕನ್ನು ಬಲಪಡಿಸಲಾಗಿದೆ. ಎಫ್‌ಐಆರ್‌ನ ಉಚಿತ ಪ್ರತಿಯನ್ನು ಪಡೆಯುವ ಹಕ್ಕು ಬಲಿಪಶುವಿಗೆ ಇದೆ. 90 ದಿನಗಳಲ್ಲಿ ತನಿಖೆಯ ಸ್ಥಿತಿಯನ್ನು ಸಂತ್ರಸ್ತರಿಗೆ ತಿಳಿಸಲು ಅವಕಾಶವಿದೆ. ಹೊಸ ಸಂಹಿತೆಯು ಕ್ರಿಮಿನಲ್ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ.

ಇತರ ನಿಬಂಧನೆಗಳು

ಹೊಸ ಕಾನೂನಿನ ಪ್ರಕಾರ ‘ಆರ್ಥಿಕ ಅಪರಾಧಗಳನ್ನು’ ಹೊರತುಪಡಿಸಿ ಘೋರ ಅಪರಾಧಿಗಳಿಗೆ ಮಾತ್ರ ಕೈಕೋಳವನ್ನು ಬಳಸಲಾಗುವುದು. ಅಂಗವೈಕಲ್ಯ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಅಪರಾಧ ಕಾರ್ಯಗಳಿಗೆ ಕಠಿಣ ದಂಡವನ್ನು ಪರಿಚಯಿಸಲಾಗಿದೆ.

ಶಿಕ್ಷೆ ಮನ್ನಾಗೊಳಿಸಲು ಕಾನೂನುಗಳಲ್ಲಿ ಹೊಸ ನಿಬಂಧನೆಯನ್ನು ಮಾಡಲಾಗಿದೆ. ಮರಣದಂಡನೆಗಳನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬಹುದು. ಏಳು ವರ್ಷಗಳ ಒಳಗಿನ ಸೆರೆವಾಸ ಮತ್ತು ಜೀವಾವಧಿ ಶಿಕ್ಷೆಯನ್ನು ಮಾತ್ರ ಕ್ಷಮಿಸಬಹುದು.

Continue Reading

EXPLAINER

Train Accident: ‘ಕವಚ’ ಇಲ್ಲದಿರುವುದೇ ಬಂಗಾಳ ರೈಲು ಅಪಘಾತಕ್ಕೆ ಕಾರಣ; ಹಾಗಾದರೆ ಏನಿದು?

Train Accident: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ ರೈಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ಮಾರ್ಗದಲ್ಲಿ ಕವಚ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

VISTARANEWS.COM


on

Train Accident
Koo

ಕೋಲ್ಕೊತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ (Kanchanjunga Express) ರೈಲಿಗೆ ಗೂಡ್ಸ್​ ರೈಲು ಡಿಕ್ಕಿಯಾಗಿ (Train Accident) 15 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ಈ ಮಾರ್ಗದಲ್ಲಿ ರೈಲುಗಳ ಸುರಕ್ಷತೆಗಾಗಿ ಅಳವಡಿಸಿಕೊಳ್ಳಲಾಗಿರುವ ಕವಚ (Kavach) ಸುರಕ್ಷಾ ವ್ಯವಸ್ಥೆ ಇಲ್ಲದಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಹಾಗಾದರೆ, ಏನಿದು ಕವಚ ಸುರಕ್ಷಾ ವ್ಯವಸ್ಥೆ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

ಏನಿದು ಕವಚ?

ಆತ್ಮನಿರ್ಭರ ಭಾರತದ ಭಾಗವಾಗಿ 2022-23ರಲ್ಲಿ ರೈಲುಗಳ ಸುರಕ್ಷತೆ ಮತ್ತು ಸಾಮರ್ಥ್ಯ ಹೆಚ್ಚಳಕ್ಕಾಗಿ ಸುಮಾರು 2,000 ಕಿ.ಮೀ. ಮಾರ್ಗವನ್ನು ಕವಚ ಸುರಕ್ಷತಾ ವಿಧಾನದ ಅಡಿಯಲ್ಲಿ ತರಲಾಗುವುದು ಎಂದು ಸಚಿವಾಲಯ ಹೇಳಿತ್ತು. ಕವಚ ಎಂಬುದು ಸೇಫ್ಟಿ ಇಂಟೆಗ್ರಿಟಿ ಲೆವೆಲ್ 4 ಮಾನದಂಡಗಳಾಗಿವೆ. ಇದನ್ನು ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್​​ಡಿಎಸ್​​ಒ) ಅಭಿವೃದ್ಧಿಪಡಿಸಿದೆ. ಕವಚ​ ವ್ಯವಸ್ಥೆಯು ರೈಲುಗಳು ಕೆಂಪು ಸಿಗ್ನಲ್​ ದಾಟಿ ಮುಂದಕ್ಕೆ ಹೋಗುವುದನ್ನು ತಡೆಯುತ್ತದೆ. ಒಂದು ವೇಳೆ ದಾಟಿದರೆ ಸ್ವಯಂಚಾಲಿತ ಬ್ರೇಕಿಂಗ್ ವ್ಯವಸ್ಥೆ ಆ್ಯಕ್ವಿವೇಟ್​ ಆಗುತ್ತದೆ. ಹೀಗಾಗಿ ಎರಡು ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿಯ ಸಂಭವ ಕಡಿಮೆ.

ಕವಚ ಕಾರ್ಯನಿರ್ವಹಿಸುವುದು ಹೇಗೆ?

ಯಾವುದೇ ತುರ್ತು ಸಂದರ್ಭದಲ್ಲಿ ರೈಲು ಅಪಘಾತ ತಡೆಯುವುದೇ ಕವಚದ ಉದ್ದೇಶವಾಗಿದೆ. ರೈಲು ಹಳಿಗಳು, ಸ್ಟೇಷನ್‌ ಯಾರ್ಡ್‌ ಹಾಗೂ ಸಿಗ್ನಲ್‌ಗಳಿಗೆ ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್)‌ ಟ್ಯಾಗ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ರೈಲುಗಳು ಎದುರು ಬದಿರಾಗಿ ಒಂದೇ ಹಳಿಯ ಮೇಲೆ ಚಲಿಸಿದರೂ ಎರಡೂ ಡಿಕ್ಕಿಯಾಗುವ ಮುನ್ನ ಸ್ವಯಂಚಾಲಿತವಾಗಿಯೇ ರೈಲುಗಳು ಬ್ರೇಕ್‌ ಹಾಕಿಕೊಳ್ಳುತ್ತವೆ. ಲೋಕೊ ಪೈಲಟ್‌ ಬ್ರೇಕ್‌ ಹಾಕುವುದನ್ನು ಮರೆತರೂ, ಸಿಗ್ನಲ್‌ನಿಂದಾಗಿಯೇ ಸ್ವಯಂಚಾಲಿತವಾಗಿ ಬ್ರೇಕ್‌ ಹಾಕಿಕೊಳ್ಳುತ್ತವೆ.

ಅಷ್ಟೇ ಅಲ್ಲ, ಒಂದು ರೈಲಿನ ಹಿಂದೆ ಮತ್ತೊಂದು ರೈಲು ಚಲಿಸುವಾಗ ಹಿಂದಿನ ರೈಲು ನಿಧಾನಗತಿಯಲ್ಲಿ ಸಾಗುವುದು, ರೈಲಿನ ಸಮೀಪ ಹೋದಾಗ ಬ್ರೇಕ್‌ ಹಾಕುವುದು, ಹವಾಮಾನ ವೈಪರೀತ್ಯದಿಂದ ಮಂದ ಬೆಳಕು ಇದ್ದಾಗ ಬ್ರೇಕ್‌ ಹಾಕುವುದು, ಗೇಟ್‌ಗಳು ಅಡ್ಡ ಬಂದಾಗ ಬ್ರೇಕ್‌ ಹಾಕುವುದು ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಲೋಕೊಮೋಟಿವ್‌ ಪೈಲಟ್‌ ಬ್ರೇಕ್‌ ಹಾಕುವುದನ್ನು ಮರೆತರೂ, ಸ್ವಯಂಚಾಲಿತವಾಗಿ ಕವಚ ವ್ಯವಸ್ಥೆಯ ಅಡಿಯಲ್ಲಿ ಬ್ರೇಕ್‌ ಹಾಕಿಕೊಳ್ಳುತ್ತವೆ.

ದೇಶಾದ್ಯಂತ ವಿಸ್ತರಣೆ ಯಾವಾಗ?

ಕವಚ ಸುರಕ್ಷಾ ವಿಧಾನದ ಅಳವಡಿಕೆಯಿಂದ ರೈಲುಗಳ ಅಪಘಾತವು ಗಣನೀಯವಾಗಿ ಕುಸಿದಿದೆ. ಆದರೆ, ಇದುವರೆಗೆ 1,500 ಕಿಲೋಮೀಟರ್‌ ರೈಲು ಮಾರ್ಗಕ್ಕೆ ಮಾತ್ರ ಕವಚ ಅಳವಡಿಸಲಾಗಿದೆ. ಆರಂಭಿಕ ಹಂತದಲ್ಲಿ 2 ಸಾವಿರ ಕಿಲೋಮೀಟರ್‌ ಹಾಗೂ ಹಂತ ಹಂತವಾಗಿ 34 ಸಾವಿರ ಕಿಲೋಮೀಟರ್‌ ಉದ್ದದ ರೈಲು ಮಾರ್ಗಕ್ಕೆ ಕವಚ ಅಳವಡಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಭಾರತೀಯ ರೈಲ್ವೆಯು ಸುಮಾರು 1 ಲಕ್ಷ ಕಿಲೋಮೀಟರ್‌ ಮಾರ್ಗವನ್ನು ಹೊಂದಿರುವ ಕಾರಣ ಎಲ್ಲ ಮಾರ್ಗಗಳಲ್ಲೂ ಕವಚ ಅಳವಡಿಸಲು ಸಮಯ ಬೇಕಾಗುತ್ತದೆ.

ಇದನ್ನೂ ಓದಿ: Train Accident: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್​ ರೈಲು ಡಿಕ್ಕಿ; ಕನಿಷ್ಠ 15 ಮಂದಿ ಸಾವು

Continue Reading

ವಿದೇಶ

Petrodollar Explainer: ಅಮೆರಿಕ ಜೊತೆಗಿನ 50 ವರ್ಷಗಳ ಪೆಟ್ರೊಡಾಲರ್‌ ಒಪ್ಪಂದ ಕೊನೆಗೊಳಿಸಿದ ಸೌದಿ ಅರೇಬಿಯಾ; ಡಾಲರ್‌ ಗರ್ವ ಭಂಗ?

Petrodollar Explainer: ಸೌದಿ ಅರೇಬಿಯಾವು ಅಮೆರಿಕ ಜೊತೆಗಿನ 50 ವರ್ಷಗಳ ಹಿಂದಿನ ಪೆಟ್ರೋಡಾಲರ್ ಒಪ್ಪಂದವನ್ನು (Petrodollar Deal) ಕೊನೆಗೊಳಿಸಿದೆ. 1974ರಲ್ಲಿ ಸಹಿ ಮಾಡಲಾದ ಈ ಒಪ್ಪಂದ ಮುರಿದಿರುವುದರಿಂದ ಇದು ಜಾಗತಿಕ ವಹಿವಾಟಿನಲ್ಲಿ ಬಹುದೊಡ್ಡ ಬದಲಾವಣೆ ಬಿರುವುದು ಮಾತ್ರವಲ್ಲ ವಿಶ್ವದ ಆರ್ಥಿಕತೆಯ ಮೇಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕುರಿತ ವಿಸ್ತೃತ ಚಿತ್ರಣ ಇಲ್ಲಿದೆ.

VISTARANEWS.COM


on

By

Petrodollar Deal
Koo

ಸೌದಿ ಅರೇಬಿಯಾವು (Saudi Arabia) ಅಮೆರಿಕದೊಂದಿಗಿನ (United States) 50 ವರ್ಷಗಳ ಹಳೆಯ ಪೆಟ್ರೋಡಾಲರ್ ಒಪ್ಪಂದವನ್ನು (Petrodollar Explainer) ಕೊನೆಗೊಳಿಸಲು ನಿರ್ಧರಿಸಿದೆ. 1974ರ ಜೂನ್ 8ರಂದು ಸಹಿ ಹಾಕಲಾದ ಈ ಒಪ್ಪಂದವು ಜೂನ್ 9ರಂದು ಮುಕ್ತಾಯಗೊಂಡಿದೆ. ಮಧ್ಯಪ್ರಾಚ್ಯ ದೇಶವು (Middle East country) ಈಗ ಅದನ್ನು ನವೀಕರಿಸದಿರಲು ನಿರ್ಧರಿಸಿದೆ. ಇದು ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳಲ್ಲಿ ಐತಿಹಾಸಿಕ ತಿರುವು ಎಂದರೆ ತಪ್ಪಾಗಲಾರದು. ಇದರಿಂದ ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವಿನ ದೀರ್ಘಕಾಲದ ತೈಲ ಡಾಲರ್ ಒಪ್ಪಂದ ಕೊನೆಯಾದಂತಾಗಿದೆ.

ಏನಿದು ಪೆಟ್ರೋಡಾಲರ್?

ಪೆಟ್ರೋಡಾಲರ್ ಎಂಬ ಪದವು ಜಾಗತಿಕ ಕಚ್ಚಾ ತೈಲ ವಹಿವಾಟುಗಳಿಗೆ ಕರೆನ್ಸಿಯಾಗಿ ಯುಎಸ್ ಡಾಲರ್ ಬಳಕೆಯನ್ನು ಸೂಚಿಸುತ್ತದೆ. ಯುಎಸ್ ಚಿನ್ನ ವಹಿವಾಟುಗಳಿಗೆ ಕರೆನ್ಸಿಯಾಗಿ ಡಾಲರ್ ಬಳಕೆಯನ್ನು ಕಡಿಮೆಗೊಳಿಸಿದ ಬಳಿಕ ಪೆಟ್ರೋಡಾಲರ್ ವ್ಯವಸ್ಥೆಯು ಜಾರಿಗೆ ಬಂದಿತು.

ಏನು ಸಮಸ್ಯೆ?

ಸೌದಿ ಅರೇಬಿಯಾವು ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ತನ್ನ ದೀರ್ಘಕಾಲದ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿದೆ. ಇದಕ್ಕೆ ಮುಖ್ಯ ಕಾರಣ ಯುನೈಟೆಡ್ ಸ್ಟೇಟ್ಸ್ ತೈಲವನ್ನು ಯುಎಸ್ ಡಾಲರ್‌ಗಳಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡುತ್ತದೆ. ಪೆಟ್ರೋಡಾಲರ್ ವ್ಯವಸ್ಥೆಯು ಜಾಗತಿಕ ತೈಲ ಮಾರುಕಟ್ಟೆಯ ಮೂಲಾಧಾರವಾಗಿದೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಯುಎಸ್ ಡಾಲರ್ ಅನ್ನು ಹೆಚ್ಚು ಪ್ರಭಾವಶಾಲಿಗೊಳಿಸಿದೆ. ಪೆಟ್ರೋಡಾಲರ್ ಒಪ್ಪಂದವು ಆರ್ಥಿಕ ಸಹಕಾರ ಮತ್ತು ಸೌದಿ ಅರೇಬಿಯಾದ ಮಿಲಿಟರಿ ಅಗತ್ಯಗಳಿಗಾಗಿ ಜಂಟಿ ಆಯೋಗಗಳನ್ನು ಸ್ಥಾಪಿಸಿತ್ತು.

ಯಾವಾಗ ಸಹಿ ಹಾಕಲಾಯಿತು?

ಯುಎಸ್ ಸರ್ಕಾರದ ಪರವಾಗಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮತ್ತು ಸೌದಿ ರಾಜಮನೆತನದ ನೇತೃತ್ವದಲ್ಲಿ ನಡೆದ ಮಾತುಕತೆ ವೇಳೆ 1974ರ ಜೂನ್ 8ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅನಂತರ ಪೆಟ್ರೋಡಾಲರ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.

ಈ ಒಪ್ಪಂದದ ಪ್ರಕಾರ ಸೌದಿ ಆಡಳಿತದ ಭದ್ರತೆಯನ್ನು ಖಾತರಿಪಡಿಸಲು ಯುಎಸ್ ಮಿಲಿಟರಿ ಸಹಾಯವನ್ನು ಒದಗಿಸುವ ಬದಲಾಗಿ ಸೌದಿ ಅರೇಬಿಯಾ ತನ್ನ ತೈಲ ರಫ್ತುಗಳಿಗೆ ಯುಎಸ್ ಡಾಲರ್‌ಗಳಲ್ಲಿ ಪ್ರತ್ಯೇಕವಾಗಿ ಬೆಲೆ ನೀಡಲು ಒಪ್ಪಿಕೊಂಡಿತು. ಈ ಒಪ್ಪಂದವು ಯುಎಸ್ ಡಾಲರ್‌ಗೆ ಸ್ಥಿರವಾದ ಬೇಡಿಕೆಯನ್ನು ಖಾತ್ರಿಪಡಿಸಿತು. ಏಕೆಂದರೆ ಇತರ ದೇಶಗಳಿಗೆ ತೈಲವನ್ನು ಖರೀದಿಸಲು ಡಾಲರ್‌ಗಳ ಅಗತ್ಯವಿತ್ತು. ವಿಶ್ವದ ಪ್ರಾಥಮಿಕ ಮೀಸಲು ಕರೆನ್ಸಿಯಾಗಿ ಡಾಲರ್‌ನ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಲಪಡಿಸಿತು.

ಪೆಟ್ರೋಡಾಲರ್ ಒಪ್ಪಂದದ ಮಹತ್ವವೇನು?

ಪೆಟ್ರೋಡಾಲರ್ ವ್ಯವಸ್ಥೆಯು ಹಲವಾರು ಕಾರಣಗಳಿಗಾಗಿ ಗಮನಾರ್ಹವಾಗಿದೆ.

ಯುಎಸ್ ಡಾಲರ್ ಪ್ರಾಬಲ್ಯ

ಈ ಒಪ್ಪಂದವು ಯುಎಸ್ ಡಾಲರ್‌ನ ಸ್ಥಾನವನ್ನು ವಿಶ್ವದ ಪ್ರಬಲ ಕರೆನ್ಸಿಯಾಗಿ ಭದ್ರಪಡಿಸಿತು. ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸಿತು ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯ ಮೇಲೆ ಯುಎಸ್ ಗಮನಾರ್ಹ ಪ್ರಭಾವವನ್ನು ಬೀರಲು ಅನುವು ಮಾಡಿಕೊಟ್ಟಿತ್ತು.

ಆರ್ಥಿಕ ಸ್ಥಿರತೆ

ಯುಎಸ್ ಡಾಲರ್‌ಗೆ ಸ್ಥಿರವಾದ ಬೇಡಿಕೆಯು ಅದರ ಮೌಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು ಮತ್ತು ತಕ್ಷಣದ ಆರ್ಥಿಕ ಪರಿಣಾಮಗಳನ್ನು ಎದುರಿಸದೆ ದೊಡ್ಡ ವ್ಯಾಪಾರ ಕೊರತೆಗಳನ್ನು ಚಲಾಯಿಸುವ ಅನನ್ಯ ಸಾಮರ್ಥ್ಯವನ್ನು ಯುಎಸ್ ಗೆ ಒದಗಿಸಿತು.


ಭೌಗೋಳಿಕ ರಾಜಕೀಯ ಪ್ರಭಾವ

ಯುಎಸ್ ಮತ್ತು ಸೌದಿ ಅರೇಬಿಯಾ ನಡುವಿನ ಕಾರ್ಯತಂತ್ರದ ಮೈತ್ರಿಯನ್ನು ಪಡೆದುಕೊಂಡಿತು. ಮಧ್ಯಪ್ರಾಚ್ಯದಲ್ಲಿ ಅದರ ತೈಲ ಸಂಪನ್ಮೂಲಗಳಿಗೆ ನಿರ್ಣಾಯಕ ಪ್ರದೇಶವಾದ ಅಮೆರಿಕದ ಪ್ರಭಾವವನ್ನು ಖಾತ್ರಿಪಡಿಸಿತು.

ಹಣಕಾಸು ಮಾರುಕಟ್ಟೆಗಳು

ಪೆಟ್ರೋಡಾಲರ್ ಮರುಬಳಕೆಯ ಕಾರ್ಯವಿಧಾನವು ತೈಲ- ರಫ್ತು ಮಾಡುವ ದೇಶಗಳಿಗೆ ತಮ್ಮ ಹೆಚ್ಚುವರಿ ಡಾಲರ್‌ಗಳನ್ನು ಯುಎಸ್ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ಅಮೆರಿಕಾದ ಹಣಕಾಸು ಮಾರುಕಟ್ಟೆಗಳು ಮತ್ತು ಸರ್ಕಾರದ ಸಾಲಕ್ಕೆ ಬೆಂಬಲವಾಯಿತು.

ಒಪ್ಪಂದ ನವೀಕರಿಸದಿರುವ ಪರಿಣಾಮ ಏನು?

ಪೆಟ್ರೋಡಾಲರ್ ಒಪ್ಪಂದವನ್ನು ಅಂತ್ಯಗೊಳಿಸಲು ಸೌದಿ ಅರೇಬಿಯಾದ ನಿರ್ಧಾರವು ದೂರಾಲೋಚನೆಯನ್ನು ಹೊಂದಿದೆ. ಇದು ಬಹಳ ಪರಿಣಾಮಗಳನ್ನು ಉಂಟುಮಾಡುತ್ತದೆ. ಪೆಟ್ರೋಡಾಲರ್ ವ್ಯವಸ್ಥೆಯ ಅಂತ್ಯದಿಂದ ಯುಎಸ್ ಡಾಲರ್‌ಗೆ ಜಾಗತಿಕ ಬೇಡಿಕೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಯುರೋ, ಚೈನೀಸ್ ಯುವಾನ್ ಅಥವಾ ಕ್ರಿಪ್ಟೋಕರೆನ್ಸಿಗಳಂತಹ ಇತರ ಕರೆನ್ಸಿಗಳು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಬಹುದು. ಇದು ಡಾಲರ್‌ನ ಪ್ರಾಬಲ್ಯವನ್ನು ಕಡಿಮೆ ಮಾಡುತ್ತದೆ. ಸೌದಿ ಅರೇಬಿಯಾ ಪ್ರಾಜೆಕ್ಟ್ ಎಂಬ್ರಿಡ್ಜ್‌ನಲ್ಲಿ ಭಾಗವಹಿಸಿದೆ. ಇದು ಕೇಂದ್ರೀಯ ಬ್ಯಾಂಕುಗಳು ಮತ್ತು ವಾಣಿಜ್ಯ ಬ್ಯಾಂಕುಗಳ ಬಳಕೆಗಾಗಿ ಡಿಜಿಟಲ್ ಕರೆನ್ಸಿ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Aliens: ಏಲಿಯನ್‌ಗಳು ಅನ್ಯಗ್ರಹ ಜೀವಿಗಳಲ್ಲ; ಈ ಭೂಮಿಯ ರಹಸ್ಯ ನಿವಾಸಿಗಳು! ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ

ವಿನಿಮಯ ದರಗಳಲ್ಲಿ ಚಂಚಲತೆ

ಡಾಲರ್‌ಗೆ ಬೇಡಿಕೆಯಲ್ಲಿನ ಕಡಿತವು ವಿನಿಮಯ ದರ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಹೆಚ್ಚಿನ ಚಂಚಲತೆಗೆ ಕಾರಣವಾಗಬಹುದು. ಇದು ಡಾಲರ್ ನಾಮಕರಣದ ವ್ಯಾಪಾರ ಮತ್ತು ಸಾಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಗಳ ಮೇಲೆ ಪರಿಣಾಮ ಬೀರಬಹುದು.

ಅಮೆರಿಕಕ್ಕೆ ಆರ್ಥಿಕ ಸವಾಲು

ಯುಎಸ್ ತನ್ನ ಕೊರತೆಗಳಿಗೆ ಹಣಕಾಸು ಒದಗಿಸಲು ಮತ್ತು ಪೆಟ್ರೋಡಾಲರ್‌ಗಳ ನಿರಂತರ ಒಳಹರಿವು ಇಲ್ಲದೆ ತನ್ನ ಆರ್ಥಿಕ ಪ್ರಾಬಲ್ಯವನ್ನು ಉಳಿಸಿಕೊಳ್ಳುವಲ್ಲಿ ಸವಾಲುಗಳನ್ನು ಎದುರಿಸಬಹುದು. ಇದು ಹೆಚ್ಚಿನ ಬಡ್ಡಿ ದರ ಮತ್ತು ಹಣಕಾಸಿನ ನೀತಿಗಳ ಮರುಮೌಲ್ಯಮಾಪನಕ್ಕೆ ಕಾರಣವಾಗಬಹುದು.

ಭೌಗೋಳಿಕ ರಾಜಕೀಯ ಮರುಜೋಡಣೆ

ಈ ಒಪ್ಪಂದದ ಮುಕ್ತಾಯವು ಜಾಗತಿಕ ಮೈತ್ರಿಗಳ ಮರುಜೋಡಣೆಗೆ ಕಾರಣವಾಗಬಹುದು. ಸೌದಿ ಅರೇಬಿಯಾವು ಚೀನಾ ಅಥವಾ ರಷ್ಯಾದಂತಹ ಇತರ ಪ್ರಮುಖ ಶಕ್ತಿಗಳೊಂದಿಗೆ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಬಹುದು. ಆ ಮೂಲಕ ಮಧ್ಯಪ್ರಾಚ್ಯ ಮತ್ತು ಅದರಾಚೆಗಿನ ಭೌಗೋಳಿಕ ರಾಜಕೀಯ ಚಿತ್ರಣ ಬದಲಾಗಬಹುದು.

ತೈಲ ಮಾರುಕಟ್ಟೆ

ತೈಲ ರಫ್ತು ಮಾಡುವ ದೇಶಗಳು ತಮ್ಮ ತೈಲಕ್ಕಾಗಿ ಬಹು ಕರೆನ್ಸಿಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು. ಇದು ಹೆಚ್ಚು ವೈವಿಧ್ಯಮಯ ಮತ್ತು ಹೆಚ್ಚು ಸಂಕೀರ್ಣವಾದ ತೈಲ ಮಾರುಕಟ್ಟೆಗೆ ಕಾರಣವಾಗುತ್ತದೆ. ಇದು ಜಾಗತಿಕ ತೈಲ ಬೆಲೆಗಳು ಮತ್ತು ವ್ಯಾಪಾರ ಅಭ್ಯಾಸಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಭಾರತ ಕೆಲವು ತೈಲ ರಾಷ್ಟ್ರಗಳ ಜತೆ ಡಾಲರ್‌ ಬದಲು ರೂಪಾಯಿಯಲ್ಲೇ ವ್ಯವಹಾರ ನಡೆಸಲು ಆರಂಭಿಸಿದೆ.

Continue Reading

ಶಿಕ್ಷಣ

NEET UG Result 2024: ಏನಿದು ನೀಟ್‌ ವಿವಾದ? ಗ್ರೇಸ್‌ ಅಂಕ ಕೊಟ್ಟಿದ್ಯಾಕೆ? ಮರು ಪರೀಕ್ಷೆ ಮಾಡೋದ್ಯಾಕೆ?

ಅಕ್ರಮ ಆರೋಪದ ನಡುವೆಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಮರು ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದೆ. ಗ್ರೇಸ್ ಅಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸಿ ಜೂನ್ 30ರಂದು ಫಲಿತಾಂಶ (NEET UG Result 2024) ಪ್ರಕಟಿಸುವುದಾಗಿ ಘೋಷಿಸಿದೆ. ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 6ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ. ನೀಟ್‌ ವಿವಾದದ ಸಂಪೂರ್ಣ ಚಿತ್ರಣ ಇಲ್ಲಿದೆ.

VISTARANEWS.COM


on

By

NEET UG Result 2024
Koo

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG Result 2024) ಅಕ್ರಮ ನಡೆದಿದೆ ಎಂದು ನೀಟ್ ಆಕಾಂಕ್ಷಿಗಳು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ (exam) ಗ್ರೇಸ್ ಅಂಕಗಳನ್ನು (grace marks) ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ (retest) ನಡೆಸಲು ಕೇಂದ್ರ ಸರ್ಕಾರ (central govt) ಗುರುವಾರ ಪ್ರಸ್ತಾವನೆ ಸಲ್ಲಿಸಿದೆ. ನೀಟ್ ಫಲಿತಾಂಶ ಘೋಷಣೆಯಾದ ಬಳಿಕ ಆಕಾಂಕ್ಷಿಗಳು ಮತ್ತು ಪೋಷಕರು ಕೆಲವು ಕೇಂದ್ರಗಳಲ್ಲಿ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ತನಿಖೆ ಮತ್ತು ಮರು ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.

ನೀಟ್- ಯುಜಿ ಅನ್ನು ಮೊದಲು ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಎಂದು ಕರೆಯಲಾಗುತ್ತಿತ್ತು. ಇದು ದೇಶದಾದ್ಯಂತ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಡೆಯುವ ಏಕೈಕ ಪ್ರವೇಶ ಪರೀಕ್ಷೆಯಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿದೆ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ (CBSE) ಇದನ್ನು ನಡೆಸುತ್ತಿತ್ತು.

ನೀಟ್ ಯುಜಿ ಫಲಿತಾಂಶಗಳ ಸುತ್ತ ವಿವಾದ

2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಸಾಧಿಸಲು ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣ ಎಂಬ ಆರೋಪಗಳೂ ಕೇಳಿ ಬಂದಿದೆ.

ನೀಟ್ ಯುಜಿ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳು ಒಟ್ಟು 720 ಅಂಕಗಳನ್ನು ಗಳಿಸಿದ್ದಾರೆ ಎಂಬುದು ಫಲಿತಾಂಶ ತೋರಿಸಿವೆ. ಇದು ಹಿಂದಿನ ವರ್ಷಗಳ ಫಲಿತಾಂಶಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಿದ್ದರೆ, 2022ರಲ್ಲಿ ಮೂವರು, 2021ರಲ್ಲಿ ಇಬ್ಬರು, 2020ರಲ್ಲಿ ಒಬ್ಬರು ಮಾತ್ರ ಪೂರ್ಣ ಅಂಕ ಗಳಿಸಿದ್ದರು. ಈ ಬಾರಿ ಹರ್ಯಾಣದ ಒಂದೇ ಕೇಂದ್ರದಲ್ಲಿ ಆರು ಮಂದಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇದು ಸಂಶಯಕ್ಕೆ ಆಸ್ಪದ ಮಾಡಿ ಕೊಟ್ಟಿದೆ.


ಸುಪ್ರೀಂ ಕೋರ್ಟ್ ಹೇಳಿದ್ದೇನು?

ನೀಟ್ ಯುಜಿ 2024ರಲ್ಲಿ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮರು ಪರೀಕ್ಷೆಯು ಜೂನ್ 23ರಂದು ನಡೆಯಲಿದೆ. ಆದರೆ ಪ್ರವೇಶ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಿಲ್ಲಿಸದಿರಲು ಸುಪ್ರೀಂ ಕೋರ್ಟ್ ಆದೇಶಿಸಿದೆ. 1,563 ಅಭ್ಯರ್ಥಿಗಳಲ್ಲಿ ಯಾರಾದರೂ ಮರುಪರೀಕ್ಷೆಯಿಂದ ಹೊರಗುಳಿದಿದ್ದರೆ ಗ್ರೇಸ್ ಅಂಕಗಳಿಲ್ಲದ ಅವರ ಹಿಂದಿನ ಅಂಕಗಳನ್ನು ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ.

ಜುಲೈ 6ರಂದು ಕೌನ್ಸೆಲಿಂಗ್ ಪ್ರಾರಂಭ

ಮರು ಪರೀಕ್ಷೆಯ ಫಲಿತಾಂಶವನ್ನು ಜೂನ್ 30ರಂದು ಪ್ರಕಟಿಸಲಾಗುವುದು ಮತ್ತು ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 6 ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಸುಪ್ರೀಂ ಕೋರ್ಟ್‌ಗೆ ಮೊರೆ

ನೀಟ್ ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸುವಂತೆ ಮತ್ತು ಗ್ರೇಸ್ ಮಾರ್ಕ್‌ ಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಮರುಪರೀಕ್ಷೆಯನ್ನು ನಡೆಸುವಂತೆ ಕೋರಿ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿತ್ತು. ನ್ಯಾಯಾಧೀಶರಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿಗಳನ್ನು ಆಲಿಸಿತು.

ಫಿಸಿಕ್ಸ್ ವಾಲಾ ಸಿಇಒ ಅಲಖ್ ಪಾಂಡೆ, ಅರ್ಜಿದಾರರಲ್ಲಿ ಒಬ್ಬರು ಗ್ರೇಸ್ ಅಂಕಗಳನ್ನು ನೀಡುವ ಎನ್‌ಟಿಎ ನಿರ್ಧಾರವು ನಿರಂಕುಶ ಎಂದು ವಾದಿಸಿದರು. ಅವರು ಸುಮಾರು 20,000 ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಸಂಗ್ರಹಿಸಿದ್ದಾರೆ. ಸುಮಾರು 70-80 ಅಂಕಗಳನ್ನು ಕನಿಷ್ಠ 1,500 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳಾಗಿ ನೀಡಿರುವುದು ಆಕ್ಷೇಪಕಾರಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಎರಡನೇ ಅರ್ಜಿಯನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಸದಸ್ಯರಾದ ಅಬ್ದುಲ್ಲಾ ಮೊಹಮ್ಮದ್ ಫೈಜ್ ಮತ್ತು ಡಾ. ಶೇಕ್ ರೋಷನ್ ಮೊಹಿದ್ದೀನ್ ಅವರು ಎನ್‌ಇಇಟಿ ಮರುಪರೀಕ್ಷೆಗೆ ವಿನಂತಿಸಿದ್ದರು. ಹಲವಾರು ವಿದ್ಯಾರ್ಥಿಗಳು ಗ್ರೇಸ್ ಅಂಕಗಳನ್ನು ಪಡೆದಿರುವುದು ಇಡೀ ನೀಟ್‌ ಪರೀಕ್ಷಾ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ ಎಂದು ಅವರು ವಾದಿಸಿದ್ದರು.

ಮೂರನೇ ಅರ್ಜಿಯನ್ನು ನೀಟ್ ಅಭ್ಯರ್ಥಿ ಜಾರಿಪಿಟಿ ಕಾರ್ತೀಕ್ ಅವರು ಸಲ್ಲಿಸಿದ್ದು, ಪರೀಕ್ಷೆಯ ಸಮಯದಲ್ಲಿ ಕಳೆದುಹೋದ ಸಮಯಕ್ಕೆ ಪರಿಹಾರವಾಗಿ ಗ್ರೇಸ್ ಅಂಕಗಳನ್ನು ನೀಡುವುದನ್ನು ಪ್ರಶ್ನಿಸಿದ್ದರು.

Continue Reading
Advertisement
Engineering Seats
ಶಿಕ್ಷಣ44 seconds ago

Engineering Seats: ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಸಿಹಿಸುದ್ದಿ; ಈ ಬಾರಿ ಹೆಚ್ಚು ಸೀಟುಗಳು ಲಭ್ಯ!

Pavithra Gowda Number 6024 in parappana jail
ಕ್ರೈಂ1 min ago

Pavithra Gowda: ಪವಿತ್ರಾ ಗೌಡ ಈಗ ಕೈದಿ ನಂಬರ್ 6024; ಹೈಫೈ ಲೈಫ್ ಲೀಡ್ ಮಾಡಿದ್ದ ನಟಿ ಈಗ ಜೈಲು ಹಕ್ಕಿ!

assault Case
ಕ್ರೈಂ15 mins ago

Assault Case: 3 ವರ್ಷದ ಮಗಳ ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ; ಸಿಗರೇಟ್‌ನಿಂದ ಸುಟ್ಟು ವಿಕೃತಿ

ram mohan raju actor darshan
ಪ್ರಮುಖ ಸುದ್ದಿ19 mins ago

Actor Darshan: ದರ್ಶನ್‌ಗೆ 40 ಲಕ್ಷ ರೂ ನೀಡಿದ ವ್ಯಕ್ತಿ ಈಗ ನಾಪತ್ತೆ! ಯಾರೀ ಆಸಾಮಿ?

Darshan Arrested in IT trouble! Is the money paid to a MLA's friend
ಸ್ಯಾಂಡಲ್ ವುಡ್23 mins ago

Darshan Arrested: ದರ್ಶನ್‌ಗೆ ಕೊಲೆ ಆರೋಪದ ಜತೆಗೆ ಐಟಿ ಸಂಕಷ್ಟ! ಹಣ ಸಂದಾಯ ಮಾಡಿದ್ರಾ ಶಾಸಕರೊಬ್ಬರ ಆಪ್ತ?

IRCTC Ticket Booking
Latest39 mins ago

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

Viral Video
Latest41 mins ago

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Israel-Hamas Conflict
ವಿದೇಶ46 mins ago

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Actor Darshan case sanjana galrani Reaction about ramya statement
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Liquor Price Karnataka
ಪ್ರಮುಖ ಸುದ್ದಿ1 hour ago

Liquor Price Karnataka: ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ನ್ಯೂಸ್‌; ಜುಲೈ 1ರಿಂದ ಬೆಲೆ ಇಳಿಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ17 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು4 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ5 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ7 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌