ಸಿನಿಮಾ
ಆಗ KGF ಫ್ಯಾನ್, ಈಗ KGF-2 ಎಡಿಟರ್!: 18ರ ಹರೆಯದ ʼಉಜ್ವಲʼ ಕಥೆ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಅನೇಕ ರೋಮಾಂಚಕ ಸುದ್ದಿಗಳಿವೆ. ಈ ಚಿತ್ರದ ಎಡಿಟರ್ 18 ವರ್ಷದ ಹುಡುಗ ಎಂದು ಕೇಳಿ ಆಶ್ಚರ್ಯವಾಗಬಹುದು.
ಬೆಂಗಳೂರು: ಪ್ಯಾನ್ ಇಂಡಿಯಾ ಮೂವಿ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಯಾವುದೇ ಹೊಸ ಪ್ರಯೋಗವನ್ನು ಮಾಡುವಲ್ಲಿ ಹಿಂದೇಟು ಹಾಕುವುದಿಲ್ಲ. ಇಡೀ ಸಿನಿಮಾ ಜಗತ್ತಿನ ಅಭಿಮಾನಿಗಳು ಕಾತರಿದಿಂದ ಕಾಯುತ್ತಿರುವ ಬಿಗ್ ಬಜೆಟ್ ಸಿನಿಮಾ ಕೆಜಿಎಫ್. ಈ ಚಿತ್ರವನ್ನು ಎಡಿಟ್ ಮಾಡುವ ಜವಾಬ್ಧಾರಿಯನ್ನು 18 ವರ್ಷದ ಯುವಕನ ಕೈಗೆ ನೀಡಿದ ಘಟನೆಯೇ ಸಾಕ್ಷಿ. ಹೌದು, ಕೆಜಿಎಫ್ ಚಿತ್ರವನ್ನು ಎಡಿಟ್ ಮಾಡುವ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದು ಉಜ್ವಲ್ ಕುಲಕರ್ಣಿ ಎಂಬ 18 ವರ್ಷದ ಯುವಕ.
ಕೆಜಿಎಫ್ 2 ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಮಾತನಾಡಿದ ರಾಕಿ ಭಾಯ್ ಚಿತ್ರದ ಎಡಿಟಿಂಗ್ ಮಾಡಿದ್ದು ಯಾರು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಕೆಜಿಎಫ್ ಚಾಪ್ಟರ್1 ಚಿತ್ರದ ವಿಡಿಯೋ ಎಡಿಟಿಂಗ್ ಮಾಡಿದ ಶ್ರೀಕಾಂತ್ ಗೌಡ ತೆರೆಯ ಹಿಂದೆ ಅದ್ಭುತ ಕೆಲಸವನ್ನು ಮಾಡಿ ತಮ್ಮ ಸಾಮರ್ಥ್ಯವನ್ನು ತೋರಿದ್ದರು. ಕೆಜಿಎಫ್ 2 ಚಿತ್ರದಲ್ಲಿ ಕೂಡ ವಿಶುವಲ್ ಎಫೆಕ್ಟ್ಸ್ ಅಭಿಮಾನಿಗಳ ಗಮನ ಸೆಳೆಯುವ ಅಂಶವಾಗಿದೆ. ಈ ಚಿತ್ರದ ವಿಡಿಯೋ ಎಡಿಟಿಂಗ್ ತಂಡದಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದು 18 ವರ್ಷದ ಯುವಕ ಉಜ್ವಲ್ ಎಂದು ನಟ ಯಶ್ ತಿಳಿಸಿದ್ದಾರೆ.
ಯಾಕೆ ಈ ನಿರ್ಧಾರ?
ಕೆಜಿಎಫ್ ಚಿತ್ರ ಬಿಡುಗಡೆಯಾದಾಗ ಯಶ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ಡೈಲಾಗ್ ಹೆಳುವ ಮೂಲಕ, ಯಶ್ ಅಭಿನಯವನ್ನು ಅನುಕರಣೆ ಮಾಡುವ ಮೂಲಕ ವೈರಲ್ ಆಗಿದ್ದರು. ಹೀಗೆ ಹಲವು ರೀತಿಯಲ್ಲಿ ಯಶ್ ಫ್ಯಾನ್ಸ್ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಅದೇ ರೀತಿ, ರಾಕಿಂಗ್ ಸ್ಟಾರ್ ಅಭಿಮಾನಿಯಾದ ಉಜ್ವಲ್ ಕುಲಕರ್ಣಿ ವಿಶಿಷ್ಟವಾಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಉಜ್ವಲ್ ಕೆಜಿಎಫ್ ಚಿತ್ರದ ಆಯ್ದ ಭಾಗವನ್ನು ತಮ್ಮದೇ ಶೈಲಿಯಲ್ಲಿ ಎಡಿಟ್ ಮಾಡಿ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹರಿಬಿಟ್ಟಿದ್ದರು. ಆಗ ಆ ವಿಡಿಯೋ ಸಖತ್ ವೈರಲ್ ಕೂಡ ಆಗಿತ್ತು.
ನಿರ್ದೇಶಕ ಪ್ರಶಾಂತ್ ನೀಲ್ ಪತ್ನಿ ಮೊದಲು ಆ ವಿಡಿಯೋ ಗಮನಿಸಿದ್ದರು. ನಂತರ ನಿರ್ದೇಶಕ ಪ್ರಶಾಂತ್ ನೀಲ್ ಆ ಉಜ್ವಲ್‌ನ ಪ್ರತಿಭೆಯನ್ನು ನೋಡಿ ಆಶ್ಚರ್ಯಪಟ್ಟರು. ಹಾಗೆಯೆ, ತಮ್ಮ ಜತೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಮೂರು ವರ್ಷಗಳ ಸತತ ಟ್ರೇನಿಂಗ್ ಬಳಿಕ ಉಜ್ವಲ್ ಈಗ ಪ್ರತಿಭಾವಂತ ಎಡಿಟರ್ ಆಗಿದ್ದಾರೆ ಎಂದು ನಿರ್ದೇಶಕ ಪ್ರಶಾಂತ್ ಸಂತಸಟ್ಟರು. ಸಕ್ಸೆಸ್‌ಫುಲ್ ಸಿನಿಮಾ ಮಾಡುವುದಷ್ಟೆ ಅಲ್ಲ, ಸಕ್ಸೆಸ್‌ಫುಲ್ ವ್ಯಕ್ತಿಗಳನ್ನೂ ನಿರ್ಮಿಸುವುದು ನಿಜವಾದ ಯಶಸ್ಸಲ್ಲವೇ !
ಹೆಚ್ಚಿನ ಓದಿಗಾಗಿ: ಎಲ್ಲಾ ರೆಕಾರ್ಡ್ ಮುರಿದ ಕೆಜಿಎಫ್ 2 ಟ್ರೇಲರ್
ಕರ್ನಾಟಕ
VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್ ಪರಪ್ಪನ ಅಗ್ರಹಾರದಲ್ಲಿ ಸೆರೆ
VISTARA TOP 10 NEWS : ಕಾವೇರಿ ಹೋರಾಟದ ಕಿಚ್ಚು ಹೊತ್ತಿ ಉರಿಯುತ್ತಿದೆ. ಮಂಡ್ಯ ಬಂದ್ ಯಶಸ್ವಿಯಾಗಿದೆ. ಬೆಂಗಳೂರು ಬಂದ್ ರೆಡಿಯಾಗಿದೆ. ಚೈತ್ರಾ ಕುಂದಾಪುರ ಟೀಮ್ ಪರಪ್ಪನ ಅಗ್ರಹಾರ ತಲುಪಿದೆ. ಹೀಗೆ ದಿನ ವಿಶೇಷ ಬೆಳವಣಿಗೆಗಳ ಸುತ್ತು ನೋಟವೇ ವಿಸ್ತಾರ ಟಾಪ್ 10 ನ್ಯೂಸ್
1.ರಾಜಧಾನಿಯಲ್ಲಿ ತೀವ್ರಗೊಂಡ ಕಾವೇರಿ ಹೋರಾಟ: ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಕರೆ
ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ (Bangalore bandh on September 26) ಕರೆ ನೀಡಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಸೆ. 26ರಬಂದ್‌ಗೆ ಭಾರಿ ಬೆಂಬಲ; ಏನಿರುತ್ತೆ? ಏನಿರಲ್ಲ?; ಕರ್ನಾಟಕ ಬಂದ್‌ಗೂ ಪ್ಲ್ಯಾನಿಂಗ್
2. ರೈತ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಸಕ್ಸಸ್: ರಾಜ್ಯಾದ್ಯಂತ ವ್ಯಾಪಿಸಿದ ಜ್ವಾಲೆ
ರಾಜ್ಯದಲ್ಲಿ ಮಳೆ ಇಲ್ಲದೆ ಸಂಕಷ್ಟ ಕಾಲ ಬಂದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ (Cauvery protest) ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ (Mandya bandh) ಯಶಸ್ವಿಯಾಯಿತು. ಕಾವೇರಿ ಹೋರಾಟಕ್ಕೆ ರಾಜ್ಯದ ಎಲ್ಲ ಕಡೆಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ಸಂಘಟನೆಗಳು ಪ್ರತಿಭಟನೆ, ಜಾಥಾಗಳನ್ನು ನಡೆಸಿದವು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ 3 ಸಲಹೆಗಳು
3. ಕಾಂಗ್ರೆಸ್‌ನಲ್ಲಿ ನಿಲ್ಲದ ಡಿಸಿಎಂ ರಗಳೆ- ಮೂರಲ್ಲ, ಐವರು ಡಿಸಿಎಂ ಬೇಕೆಂದ ರಾಯರೆಡ್ಡಿ
ರಾಜ್ಯದಲ್ಲಿ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಬೇಕು ಬೇಡಿಕೆಯ ನಡುವೆಯೇ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ದೇವೇಗೌಡರ ತುಮಕೂರು ಸ್ಪರ್ಧೆಗೆ ಬಿಜೆಪಿ ಸಂಸದರ ವಿರೋಧ
4. ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನ ಏಳು ಮಂದಿ ಪರಪ್ಪನ ಅಗ್ರಹಾರ ಜೈಲಿಗೆ, 14 ದಿನ ನ್ಯಾಯಾಂಗ ಸೆರೆ
ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್ ಆದೇಶಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ಕೋರ್ಟ್ ತಾತ್ಕಾಲಿಕ ನಿರ್ಬಂಧ
5. ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ
ಪೂರ್ಣ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
6 ಲೋಕ ಸಮರ ಹೊತ್ತಲ್ಲೇ ವಾರಾಣಸಿಯಲ್ಲಿ ಅಭಿವೃದ್ಧಿ ಪರ್ವ: ಕ್ರಿಕೆಟ್ ಸ್ಟೇಡಿಯಂಗೆ ಮೋದಿ ಶಂಕುಸ್ಥಾಪನೆ
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಶಿವನ ಮಾದರಿಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. 330 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಸ್ಟೇಡಿಯಂ ಶಿವನಿಗೆ ಸಮರ್ಪಣೆ ಎಂದಿದೆ ಬಿಸಿಸಿಐ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
7. ಭಾರತದ ಬೆನ್ನಿಗೆ ನಿಂತ ಅಮೆರಿಕ: ಆನೆ ಜತೆ ಇರುವೆ ಕಾಳಗಕ್ಕೆ ಇಳಿದಿದೆ ಅಂತ ಕೆನಡಾಗೆ ವ್ಯಂಗ್ಯ
ಭಾರತ ಹಾಗೂ ಕೆನಡಾ ನಡುವಿನ ಬಿಕ್ಕಟ್ಟು (India Canada Row) ದಿನೇದಿನೆ ಉಲ್ಬಣವಾಗುತ್ತಿರುವ ಕಾರಣ ಅಮೆರಿಕ ಮಧ್ಯಪ್ರವೇಶಿಸಲು ಯತ್ನಿಸುತ್ತಿದೆ. ಜತೆಗೆ “ಕೆನಡಾ ಭಾರತದ ಜತೆ ಸಂಘರ್ಷಕ್ಕೆ ಇಳಿದಿದೆ ಎಂದರೆ, ಅದು ಇರುವೆಯೊಂದು ಆನೆಯ ಜತೆ ಕಾಳಗಕ್ಕೆ ಇಳಿದಂತೆ” ಎಂದು ಗೇಲಿ ಮಾಡಿದೆ. ಪೂರ್ಣ ವರದಿಗೆ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಭಾರತದಿಂದಲೇ G20 ಶೃಂಗಸಭೆ ಯಶಸ್ವಿ ಎಂದ ಬ್ರೆಜಿಲ್; ಕೆನಡಾ ಆರೋಪಕ್ಕೆ ಏನೆಂದಿತು?
8. ಸುಂದರ ಆಟಗಾರ ಶುಭಮನ್ ಗಿಲ್ ಜತೆಗಿನ ಪ್ರೀತಿಗೆ ಕ್ಲ್ಯಾರಿಟಿ ನೀಡಿದ ಸಾರಾ ತೆಂಡೂಲ್ಕರ್
ಮುಂಬಯಿ: ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship) ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಇದೀಗ ಸಾರಾ ಅವರು ಮಾಡಿರುವ ಟ್ವೀಟ್ ಈ ಜೋಡಿ ನಿಜವಾಗಿಯೂ ಪ್ರೀತಿಸುತ್ತಿರುವುದು ಖಚಿತ ಎಂಬ ಸುಳಿವು ನೀಡಿದಂತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದ ವಿಜಯ್ ಸೇತುಪತಿ!
ವಿಜಯ್ ಸೇತುಪತಿ ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಬ್ಯುಸಿ. ಇಷ್ಟೊಂದು ಜನಪ್ರಿಯತೆ ಪಡೆದಿರುವ ವಿಜಯ್ ಸೇತುಪತಿ ಅವರು ನಟಿ ಕೃತಿ ಶೆಟ್ಟಿ (Krithi Shetty) ಜತೆ ನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ. ಮಗಳ ಪಾತ್ರ ಮಾಡಿದ ನಟಿ ಜತೆ ರೊಮ್ಯಾನ್ಸ್ ಮಾಡಲಾರೆʼ ಎಂದು ನಟ ಹೇಳಿದ್ದಾರಂತೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಸಿಲ್ಕ್ ಸ್ಮಿತಾ ಶವದ ಮೇಲೆ ನಡೆದಿತ್ತಂತೆ ಸಾಮೂಹಿಕ ಅತ್ಯಾಚಾರ: ನಟಿಯ ಪುಣ್ಯತಿಥಿಯಂದೇ ಹೊರಬಿತ್ತು ಸತ್ಯ
ಸಿಲ್ಕ್ ಸ್ಮಿತಾ (Silk Smitha) ಎಂಬ ಅಪ್ಸರೆಯಂಥ ನಟಿ ಬದುಕಿನಲ್ಲಿ ಏನೆಲ್ಲ ಅನುಭವಿಸಿದರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಭಯಾನಕ ಸುದ್ದಿ ಮತ್ತೊಮ್ಮೆ ವೈರಲ್ ಆಗಿದೆ. ಏನಿದು ಪೈಶಾಚಿಕ ಕೃತ್ಯ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪ್ರಮುಖ ಸುದ್ದಿ
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
ತಮ್ಮ ಸಮೀಪದ ಪ್ರತಿಸ್ಪರ್ಧಿ ಶಿಲ್ಪಾ ಸುರೇಶ್ (217 ಮತ) ಅವರಿಗಿಂತ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ ಎನ್. ಎಂ ಸುರೇಶ್ ಅವರು karnataka film chamber of commerce) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (karnataka film chamber of commerce) ಚುನಾವಣಾ (Sandalwood) ಫಲಿತಾಂಶ ಶನಿವಾರ ಸಂಜೆಯ ವೇಳೆಗೆ ಪ್ರಕಟಗೊಂಡಿದೆ. ನಿರ್ಮಾಪಕ ಎನ್ ಎಂ ಸುರೇಶ್ ಅವರು ಅತ್ಯಧಿಕ ಮತಗಳನ್ನು (337) ಪಡೆಯುವ ಮೂಲಕ ಅಧ್ಯಕ್ಷ ಗದ್ದುಗೆಗೆ ಏರಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಶಿಲ್ಪಾ ಸುರೇಶ್ (217 ಮತ) ಅವರಿಗಿಂತ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿತರಕ ಏ ಗಣೇಶ್ ಅವರು 204 ಮತಗಳನ್ನು ಪಡೆದಿದ್ದರೆ, ಮಾರ್ಸ್ ಸುರೇಶ್ ಅವರ 181 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ 1599 ಮತಗಳಲ್ಲಿ 967 ಮತಗಳು ಚಲಾವಣೆಯಾಗಿದ್ದವು. ಸೆಪ್ಟೆಂಬರ್ 23ರಂದು ಚುನಾವಣೆ ನಡೆದು ಅಂದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟಿಸಲಾಯಿತು.
ಕೌತುಕ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಚುನಾವಣೆಯ ಸಂಜೆಯ ತನಕ ನಡೆಯಿತು. ಮತದಾನ ಪ್ರಕ್ರಿಯೆಯಲ್ಲಿ ಸ್ಟಾರ್ ನಟರು, ನಿರ್ಮಾಪಕರು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ನಿರ್ಮಾಪಕ, ಹಂಚಿಕೆದಾರ, ಪ್ರದರ್ಶಕ ಸೇರಿದಂತೆ ಹಲವು ವಲಯಗಳ 93 ಸ್ಥಾನಗಳಿಗೆ ಮತದಾನ ನಡೆಯಿತು. ಇಷ್ಟೊಂದು ಸ್ಥಾನಗಳಿಗೆ ಒಟ್ಟು 158 ಅಭ್ಯರ್ಥಿಗಳು ಕಣದಲ್ಲಿದ್ದರು.
ಅಧ್ಯಕ್ಷರ ಹುದ್ದೆಗೆ ಈ ಬಾರಿ ಪೈಪೋಟಿ ಏರ್ಪಟ್ಟಿತ್ತು. ಎನ್ಎಂ ಸುರೇಶ್, ವಿತರಕ ಮಾರ್ಸ್ ಸುರೇಶ್, ನಿರ್ಮಾಪಕ ಶಿಲ್ಪ ಶ್ರೀನಿವಾಸ್, ವಿತರಕ ಏ ಗಣೇಶ್ ಅವರುಗಳು ಅಧ್ಯಕ್ಷ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ಒಡ್ಡಿದ್ದರು. ಆದರೆ, ಸುರೇಶ್ ಅವರಿಗೆ ಸಾರಾ ಗೋವಿಂದು ಸೇರಿದಂತೆ ಮಂಡಳಿಯ ಕೆಲವು ಪ್ರಮುಖರ ಬೆಂಬಲ ಸಿಕ್ಕಿತ್ತು. ಹೀಗಾಗಿ ಅವರೇ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.
ಇದನ್ನೂ ಓದಿ : Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ
ಹಾಲಿ ಅಧ್ಯಕ್ಷರಾಗಿರುವ ಭಾಮಾ ಹರೀಶ್ ಅವರ ಸಹೋದರ ಭಾಮಾ ಗಿರೀಶ್ ಅವರು ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಿತರಕರ ವಲಯದಿಂದ ಕರಿಸುಬ್ಬು ವಿಜಯ ಸಾಧಿಸಿದ್ದಾರೆ ಪ್ರದರ್ಶಕರ ವಲಯದಿಂದ ಸುಂದರ ರಾಜು ಜಯಭೇರಿ ಬಾರಿಸಿದ್ದಾರೆ. ಖಜಾಂಚಿಯಾಗಿ ಜಯಸಿಂಹ ಮುಸೂರಿ ಗೆಲುವು ತಮ್ಮದಾಗಿಸಿಕೊಂಡಡಿದ್ದಾರೆ.
ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ ಆಯ್ಕೆಯಾಗಿದ್ದಾರೆ. ವಿತರಕರ ವಲಯದಿಂದ ವೆಂಕಟೇಶ್. ಜಿ ಗೆಲುವು ಸಾಧಿಸಿದ್ದರೆ, ಪ್ರದರ್ಶಕರ ವಲಯದಿಂದ ನರಸಿಂಹುಲು ಜಯ ಗಿಟ್ಟಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಕಳೆದ ಬಾರಿಗಿಂತ ಸುಮಾರು 55ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದರು.
South Cinema
Vijay Sethupathi: ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದ ವಿಜಯ್ ಸೇತುಪತಿ!
2021ರಲ್ಲಿ ಬಿಡುಗಡೆಯಾದ ʻಉಪ್ಪೆನ’ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜತೆಯಾಗಿ ನಟಿಸಿದ್ದರು. ‘ಉಪ್ಪೆನ’ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು.
ಬೆಂಗಳೂರು: ವಿಜಯ್ ಸೇತುಪತಿ (Vijay Sethupathi) ಸದ್ಯ ʻಜವಾನ್ʼ ಸಿನಿಮಾದ ಸಕ್ಸಸ್ ಮೂಡ್‌ನಲ್ಲಿ ಇದ್ದಾರೆ. ಬಹುಭಾಷಾ ನಟ ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ. ಇಷ್ಟೊಂದು ಜನಪ್ರಿಯತೆ ಪಡೆದಿರುವ ವಿಜಯ್ ಸೇತುಪತಿ ಅವರು ನಟಿ ಕೃತಿ ಶೆಟ್ಟಿ (Krithi Shetty) ಜತೆ ನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಮಗಳ ಪಾತ್ರ ಮಾಡಿದ ನಟಿ ಜತೆ ರೊಮ್ಯಾನ್ಸ್ ಮಾಡಲಾರೆʼ ಎಂದು ನಟ ಹೇಳಿದ್ದಾರಂತೆ.
2021ರಲ್ಲಿ ಬಿಡುಗಡೆಯಾದ ʻಉಪ್ಪೆನ’ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜತೆಯಾಗಿ ನಟಿಸಿದ್ದರು. ‘ಉಪ್ಪೆನ’ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಹೀಗಾಗಿ ಒಂದು ಸಿನಿಮಾದಲ್ಲಿ ಮಗಳಂತೆ ನೋಡಿದ ನಟಿಯ ಜತೆ ಮತ್ತೊಂದು ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡುವುದಿಲ್ಲ ಎಂಬುದಾಗಿ ಸೇತುಪತಿ ಹೇಳಿದ್ದಾರೆ. ತಮ್ಮಿಬ್ಬರನ್ನು ನಾಯಕ-ನಾಯಕಿಯನ್ನಾಗಿಸಿ ತಮಿಳು ಸಿನಿಮಾವೊಂದನ್ನು ಮಾಡುವುದಕ್ಕೆ ಆಫರ್ ಬಂದರೂ ವಿಜಯ್ ನಿರಾಕರಿಸಿದ್ದಾರೆ.
ಈ ಬಗ್ಗೆ ವಿಜಯ್ ಸೇತುಪತಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ʻಒಮ್ಮೆ ಮಗಳೆಂದು ಕಲ್ಪಿಸಿಕೊಂಡ ನಟಿಯ ಜತೆಗೆ ನಾನು ಹೇಗೆ ರೊಮ್ಯಾನ್ಸ್ ಮಾಡಲಿ? ಉಪ್ಪೆನ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುವಾಗ, ನನ್ನನ್ನು ನಿನ್ನ ತಂದೆ ಎಂದು ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ. ಆ ಸಿನಿಮಾ ಮಾಡುವಾಗ ನನ್ನ ಮಗನಷ್ಟೇ ಕೃತಿಗೂ ವಯಸ್ಸು. ನಾನು ಕೂಡ ಕೃತಿಯನ್ನು ಮಗಳಂತೆ ಭಾವಿಸಿದ್ದೇನೆ. ಹೀಗಿರುವಾಗ ಕೃತಿ ಜತೆಗೆ ರೊಮ್ಯಾನ್ಸ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vijay Sethupathi: ‘ಮಹಾರಾಜʼಫಸ್ಟ್ ಲುಕ್ ಔಟ್; 50ನೇ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಮಿಂಚಿದ ವಿಜಯ್ ಸೇತುಪತಿ!
Why Vijay Sethupathi refused to act with Kriti Shetty as his pair… 👇 pic.twitter.com/R6Gp9DarBB
— Christopher Kanagaraj (@Chrissuccess) September 23, 2023
50ನೇ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಮಿಂಚಿದ ವಿಜಯ್ ಸೇತುಪತಿ
ಸದ್ಯ ವಿಜಯ್ ಸೇತುಪತಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ವಿಜಯ್ ಸೇತುಪತಿ ಅವರ ‘ಮಹಾರಾಜ’ ಸಿನಿಮಾದ (Maharaja first Look Out) ಫಸ್ಟ್-ಲುಕ್ ಪೋಸ್ಟರ್ ಅನಾವರಣಗೊಂಡಿದೆ. ವಿಜಯ್ ಸೇತುಪತಿ 50ನೇ ಚಿತ್ರಕ್ಕಾಗಿ,(50th film ‘Maharaja) ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಜತೆ ಕೈ ಜೋಡಿಸಿದ್ದಾರೆ.
ಮಹಾರಾಜ’ ಸಿನಿಮಾದ ಫಸ್ಟ್-ಲುಕ್‌ನಲ್ಲಿ ವಿಜಯ್ ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಚೇರ್‌ನಲ್ಲಿ ಚಾಕು ಹಿಡಿದು ರಕ್ತಸಿಕ್ತರಾಗಿ ಗಂಭೀರದಿಂದ ಕೂತಿದ್ದಾರೆ ವಿಜಯ್. ಸುತ್ತಲೂ ಪೊಲೀಸ್ ಅಧಿಕಾರಿಗಳು ನಿಂತಿದ್ದಾರೆ. ನಟ ವಿಜಯ್ ಅವರ ಎಡ ಭಾಗದ ಕಿವಿಗೆ ಬ್ಯಾಂಡೆಜ್ ಹಾಕಲಾಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜತೆಗೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್ ಮತ್ತು ನಟ್ಟಿ ನಟರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ದಿನೇಶ್ ಪುರುಷೋತ್ತಮನ್ ಅವರ ಛಾಯಾಗ್ರಹಣವಿದೆ.
South Cinema
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
Silk Smitha: ಸಿಲ್ಕ್ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎಂಬ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರ ಹೇಳಿಕೆ ಮತ್ತೆ ವೈರಲ್ ಆಗುತ್ತಿದೆ.
ಬೆಂಗಳೂರು: ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ ಸಿಲ್ಕ್ ಸ್ಮಿತಾ (Silk Smitha) ಮೂಲ ಹೆಸರು ವಿಜಯಲಕ್ಷ್ಮಿ. 1960ರ ಡಿಸೆಂಬರ್ 2ರಂದು ಜನಿಸಿದರು. ಆ ನಂತರದ ದಿನಗಳಲ್ಲಿ ಸಿಲ್ಕ್ ಸ್ಮಿತಾ ಎಂದೇ ಫೇಮಸ್ ಆದರು. ಸೆಪ್ಟೆಂಬರ್ 23 ನಟಿ ಸಿಲ್ಕ್ ಸ್ಮಿತಾ ಅವರ 27ನೇ ಪುಣ್ಯತಿಥಿ. ಇದೀಗ ಕಾಲಿವುಡ್ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರ ಹಳೆಯ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಸಿಲ್ಕ್ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಅವರ ಹೇಳಿಕೆ ಮತ್ತೆ ವೈರಲ್ ಆಗುತ್ತಿದೆ.
ಸಿಲ್ಕ್ ಸ್ಮಿತಾ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ ಮತ್ತು ಅದಕ್ಕಾಗಿಯೇ ಸಿಲ್ಕ್ ಬಾಲ್ಯದಲ್ಲಿ ತಮ್ಮ ಓದನ್ನು ಬಿಡಬೇಕಾಯಿತು. ವರದಿಗಳ ಪ್ರಕಾರ, ಸಿಲ್ಕ್ ಸ್ಮಿತಾ ಅವರು ಕೇವಲ 14 ವರ್ಷದವರಾಗಿದ್ದಾಗ ಮದುವೆಯಾಗಿದ್ದರು ಮತ್ತು ಅವರು ಸಾಕಷ್ಟು ಕೌಟುಂಬಿಕ ಹಿಂಸೆಯನ್ನು ಎದುರಿಸಿದರು. ಸಿಲ್ಕ್ ಸ್ಮಿತಾ ತಮ್ಮ ಗಂಡನ ಮನೆಯಿಂದ ಓಡಿಹೋದ ನಂತರ ಮೇಕಪ್ ಕಲಾವಿದನಾಗಿದ್ದ ತಮ್ಮ ಸ್ನೇಹಿತನ ಮನೆ ಸೇರಿಕೊಂಡಿದ್ದರು. ಮೇಕಪ್ ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ತಮಿಳು ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾಗೆ ದೊಡ್ಡ ಬ್ರೇಕ್ ನೀಡಿದರು. 1979ರಲ್ಲಿ ತಮಿಳು ಚಲನಚಿತ್ರ ‘ವಂದಿಚಕ್ಕರಂ’ನಲ್ಲಿನ ಅವರ ಅದ್ಭುತ ಅಭಿನಯಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ಸಿಲ್ಕ್ ಸ್ಮಿತಾ ಅವರು 17 ವರ್ಷಗಳ ಕಾಲ ನಟಿಯಾಗಿ, ನೃತ್ಯಗಾತಿಯಾಗಿ ಮಿಂಚಿದರು. 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23, 1996ರಂದು ತಮ್ಮ 35ನೇ ವಯಸ್ಸಿನಲ್ಲಿ ನಿಗೂಢವಾಗಿ ಮೃತಪಟ್ಟರು. ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದೆ ಎಂದು ಹೇಳಲಾಗಿತ್ತು.
ನಟಿ ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸಿ ಫೇಮಸ್ಸಾದ ಕಾರಣ ಅಭಿಮಾನಿಗಳ ಸಂಖ್ಯೆ ಹೆಚ್ಚಿನ ರೀತಿಯಲ್ಲಿ ಇತ್ತು. ಒಮ್ಮೆಯಾದರೂ ಈ ನಟಿಯನ್ನು ನೇರವಾಗಿ ನೋಡಿ ಕಣ್ತುಂಬಿಸಿಕೊಳ್ಳಬೇಕು ಎಂದುಕೊಂಡವರೇ ಹೆಚ್ಚು. ಇದ್ದಕ್ಕಿದ್ದಂತೆ ನಟಿ ಬಾರದ ಲೋಕಕ್ಕೆ ಹೋಗುತ್ತಾರೆ. ʻʻಶವದೊಂದಿಗೆ ಅತ್ಯಾಚಾರ ಮಾಡಲಾಗಿತ್ತು. ಶವಾಗಾರದಲ್ಲಿ ನಟಿಯ ನೌಕರರು ಕುಡಿದ ಅಮಲಿನಲ್ಲಿ ಇರುತ್ತಾರೆ. ಅಲ್ಲಿನ ಹೆಚ್ಚು ನೌಕರರು ಬೆಳಗ್ಗೆ ಕೆಲಸ ಆರಂಭಿಸಿದಾಗಿನಿಂದ ಕುಡಿದಿರುತ್ತಾರೆ. ಇದೇ ಅಮಲಿನಲ್ಲಿ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹಲವು ಬಾರಿ ಸಿಲ್ಕ್ ಸ್ಮಿತಾ ಅವರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆʼʼ ಎಂದಿದ್ದಾರೆ ಬೈಲ್ವಾನ್ ರಂಗನಾಥನ್. ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ಖುದ್ದು ನೋಡಿದ್ದೆ ಎನ್ನುವ ಅವರ ಮಾತು ಇದೀಗ ಮತ್ತೆ ವೈರಲ್ ಆಗಿದೆ.
-
ವೈರಲ್ ನ್ಯೂಸ್16 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಸುವಚನ5 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ14 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ಕರ್ನಾಟಕ21 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema18 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಬಾಲಿವುಡ್21 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ತಂತ್ರಜ್ಞಾನ18 hours ago
Apple Iphone : ಐಫೋನ್ ಬಳಕೆದಾರರೇ ಇಲ್ಲಿ ಕೇಳಿ; ನಿಮಗೊಂದು ಸೆಕ್ಯುರಿಟಿ ಅಲರ್ಟ್ ಕೊಟ್ಟಿದೆ ಕೇಂದ್ರ ಸರ್ಕಾರ
-
ದೇಶ13 hours ago
Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್