ಶ್‌..! ʼKGFʼ2 ಮಾನ್‌ಸ್ಟರ್‌ ಇಸ್‌ ಹಿಯರ್ - Vistara News

ಸಿನಿಮಾ

ಶ್‌..! ʼKGFʼ2 ಮಾನ್‌ಸ್ಟರ್‌ ಇಸ್‌ ಹಿಯರ್

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಮೊಸ್ಟ್‌ ಅವೈಟೆಡ್‌ ಸಿನಿಮಾ ಕೆಜಿಎಫ್‌ 2 ಬಿಡುಗಡೆಗೊಂಡು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಕೆಜಿಎಫ್‌ 1 ಚಿತ್ರಕ್ಕೆ ಸೂಕ್ತ ಅಂತ್ಯ ಕೆಜಿಎಫ್‌ 2ನಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿತ್ರ: ಕೆಜಿಎಫ್‌ ಚಾಪ್ಟರ್-2‌.
ನಿರ್ದೇಶಕ: ಪ್ರಶಾಂತ್‌ ನೀಲ್‌.
ನಿರ್ಮಾಪಕ: ವಿಜಯ್‌ ಕಿರಗಂದೂರ್‌
ಬ್ಯಾನರ್: ಹೊಂಬಾಳೆ ಫಿಲ್ಮ್ಸ್‌
ಸಂಗೀತ: ರವಿ ಬಸ್ರೂರ್‌


ತಾರಾಗಣ: ಯಶ್‌, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್ತ್‌, ರವೀನಾ ಟಂಡನ್‌, ಅಚ್ಯುತ್‌ ಕುಮಾರ್‌, ಪ್ರಕಾಶ್‌ ರಾಜ್. ಮಾಳವಿಕಾ ಅವಿನಾಶ್‌,ಅರ್ಚನಾ ಜೋಯ್ಸ್‌, ಅಯ್ಯಪ್ಪ ಪಿ ಶರ್ಮಾ, ಹರೀಶ್‌ ರೈ, ದಿನೇಶ್‌ ಮಂಗಳೂರು.

ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ ಚಾಪ್ಟರ್‌ 1 ಅತ್ಯತ್ತಮ ಸಿನಿಮಾ ಎಂದು ಹೆಸರು ಮಾಡಿತ್ತು. ಚಿತ್ರದ ಯಶಸ್ಸಿಗೆ ಅವರು ಆಯ್ದುಕೊಂಡ ಕಥೆ, ತಾರಾಗಣ, ಪ್ರಬಲವಾದ ಚಿತ್ರತಂಡ ಪ್ರಮುಖ ಪಾತ್ರವಹಿಸಿತ್ತು. ಕೆಜಿಎಫ್‌ 1 ಮುಗಿಯುವ ಹೊತ್ತಿಗೆ ಎರಡನೇ ಭಾಗದಲ್ಲಿ ಏನು ಹೊಸತನ್ನು ಕಾಣಬಹುದು ಎಂಬ ಕುತೂಹಲ ಕೆರಳಿಸಿತ್ತು. ರಾಕಿ ಭಾಯ್‌ ಗರುಡನನ್ನು ಕೊಂದ ಮೇಲೆ ಕೆಜಿಎಫ್‌ನ ಸುಲ್ತಾನನಾಗಿ ಪಟ್ಟಕ್ಕೆ ಏರ್ತಾರಾ? ರೀನಾ ಮತ್ತು ರಾಕಿ ಭಾಯ್‌ ಒಂದಾಗ್ತಾರಾ? ರಮಿಕಾ ಸೇನ್‌ ರಾಕಿ ವಿರುದ್ಧ ಏನು ಕ್ರಮ ಕೈಗೊಳ್ತಾರೆ? ಗುರುಪಾಂಡ್ಯನ್‌ ಸೇರಿದಂತೆ ಉಳಿದವರ ಕಥೆ ಏನಾಗುತ್ತೆ? ಇನಾಯತ್‌ ಖಲೀಲ್‌ ಹಡಗುಗಳು ಭಾರತದ ಪೋರ್ಟ್‌ ಪ್ರವೇಶ ಪಡೆಯುತ್ತಾ? ಅಧೀರ ಕೆಜಿಎಫ್‌ಗೆ ಆಗಮಿಸಿದರೆ ರಾಕಿ ಏನು ಮಾಡಬಹುದು?

ಕೆಜಿಎಫ್‌ 1 ಹೀಗೆ ಹಲವಾರು ಪ್ರಶ್ನೆಗಳನ್ನು ಪ್ರೇಕ್ಷಕರ ಮನದಲ್ಲಿ ಹುಟ್ಟು ಹಾಕಿತ್ತು. ನಿರ್ದೇಶಕ ಪ್ರಶಾಂತ್‌ ನೀಲ್ ಇದಕ್ಕೆ ಉತ್ತರವಾಗಿ‌ ಎರಡನೇ ಭಾಗ ಬರಲಿದೆ ಎಂದು ಭರವಸೆ ನೀಡಿದ್ದರು. ರಾಕಿ ತನ್ನ ತಾಯಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವದರಲ್ಲಿ ಹೇಗೆ ಯಶಸ್ವಿಯಾದರೋ ಅದೇ ರೀತಿ ಪ್ರಶಾಂತ್‌ ಕೂಡ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಕೆಜಿಎಫ್‌ ಮೊದಲ ಭಾಗಕ್ಕೆ ಸೂಕ್ತ ಅಂತ್ಯವನ್ನು ಕೆಜಿಎಫ್‌ ಚಾಪ್ಟರ್‌ 2ನಲ್ಲಿ ನೀಡಲಾಗಿದೆ ಎಂದು ಹೇಳಬಹುದು.


ಏನು ಕಥೆ?


ಕೆಜಿಎಫ್‌ 2 ಮೊದಲ ಭಾಗದ ಮುಂದುವರೆದ ಕಥೆಯಾಗಿದೆ. ಮೊದಲ ಭಾಗದ ಕಥೆಗೆ ಸೂಕ್ತವಾದ ಅಂತ್ಯವನ್ನು ಎರಡನೇ ಭಾಗದಲ್ಲಿ ನೀಡಲಾಗಿದೆ ಎಂದು ಹೇಳಬಹುದು. ಈಗಾಗಲೇ ಟ್ರೇಲರ್‌ನಲ್ಲಿ ತೋರಿಸಿದ ಹಾಗೆ ರಾಕಿ ತನ್ನ ತಾಯಿಗೆ ರಾಜನಂತೆ ಬಾಳುವ ಮಾತು ಕೊಟ್ಟಿದ್ದ. ಆ ಮಾತನ್ನು ಉಳಿಸಿಕೊಳ್ಳಲು ಕೆಜಿಎಫ್‌ ಮೇಲೆ ರಾಜ್ಯಭಾರ ಮಾಡಬೇಕೆಂಬುದು ರಾಕಿ ಆಸೆ. ಕೆಜಿಎಫ್‌ ತನ್ನ ಹಿಡಿತಕ್ಕೆ ಪಡೆಯುವ ಮೂಲಕ ಇಡೀ ದೇಶದ ಮೇಲೆ ಹುಕೂಮತ್‌ ನಡೆಸಬೇಕು ಎಂಬ ರಾಕಿಯ ಹಂಬಲ. ಯಾರಿಗೂ ಭಯಪಡದೇ ಒಂಟಿಯಾಗಿ ಎಲ್ಲರನ್ನೂ ಎದುರಿಸಿ ತನ್ನ ಸಾಮ್ಯಜ್ಯವನ್ನು ಕಟ್ಟುವುದರಲ್ಲಿ ರಾಕಿ ಸಫಲತೆಯನ್ನು ಕಾಣ್ತಾರೆ. ಆದರೆ ಕೆಜಿಎಫ್‌ ಜಾಗದ ಮೇಲೆ ಉಳಿದವರೂ ಕಣ್ಣು ಹಾಕಿರುತ್ತಾರೆ ಎಂದು ಈಗಾಗಲೇ ಮೊದಲ ಭಾಗದಲ್ಲಿ ತಿಳಿಸಿದ್ದಾರೆ. ಆದರೆ, ಕೆಜಿಎಫ್‌ ವಶಪಡಿಸಿಕೊಳ್ಳುವ ಸಮರದಲ್ಲಿ ಯಾರು ಯಾರೊಂದಿಗೆ ಕೈ ಮಿಲಾಯಿಸಿ, ಯಾರ ವಿರುದ್ಧ ಯುದ್ಧ ಮಾಡಲು ಸಿದ್ಧರಾಗುತ್ತಾರೆ ಎಂಬುದೇ ಸ್ವಾರಸ್ಯ. ಒಂದು ಜಾಗಕ್ಕೆ, ಒಂದು ಪಟ್ಟಕ್ಕಾಗಿ ನಡೆಯುವ ರಾಜಕೀಯ ತಂತ್ರಗಳು, ಕೊಲೆಗಳು, ರಕ್ತಪಾತಗಳು, ಎಲ್ಲವೂ ಸೇರಿ ಕೊನೆಗೆ ಕೆಜಿಎಫ್‌ನಲ್ಲಿ ಏನಾಗುತ್ತದೆ? ಎಂಬುದೇ ಈ ಚಿತ್ರದ ಕಥೆ.

ಚಿತ್ರದಲ್ಲಿ ಆಕರ್ಷಿಸುವ ಅಂಶಗಳು:

  1. ಈವರೆಗೆ ಹಾಲಿವುಡ್‌ನಲ್ಲಿ ಡಾರ್ಕ್‌ ಥೀಮ್‌ ಇಟ್ಟುಕೊಂಡು ಅನೇಕ ಸಿನಿಮಾಗಳನ್ನು ಮಾಡಲಾಗಿದೆ. ಆದರೆ, ಕನ್ನಡದಲ್ಲಿ ಈ ರೀತಿಯ ಒಂದು ಪ್ರಯತ್ನ ಅಪರೂಪ. ಡಾರ್ಕ್‌ ಶೇಡ್‌ ಇಟ್ಟು ಚಿತ್ರವನ್ನು ನಿರ್ದೇಶಿಸಿ ಪ್ರೇಕ್ಷಕರ ಮನಮುಟ್ಟುವುದು ಸುಲಭದ ಕಾರ್ಯವಲ್ಲ ಆದರೆ ಕೆಜಿಎಫ್‌ ಇದರಲ್ಲಿ ಗೆದ್ದಿದೆ ಎಂದು ಹೇಳಬಹುದು.
  2. ಅಬ್ಬರಿಸುವ ರೌಡಿಗಳ ನಡುವೆ ತಾಯಿಯ ಸೆಂಟಿಮೆಂಟ್‌ ನೀಡಿದ್ದು ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ಕರೆದೊಯ್ಯುತ್ತದೆ. ಹೌದು ಅನ್ನಿಸುವ ಕಥೆ, ಚಿತ್ರಕಥೆ ಚಿತ್ರದ ಗೆಲುವು.
  3. ರೌಡಿಸಂ ಕಥೆಯನ್ನು ಆಧರಿಸಿ ಹಲವಾರು ಚಿತ್ರಗಳು ಬಂದಿದೆ. ಕೆಜಿಎಫ್‌ ಇದೇ ಕೆಟಗರಿಗೆ ಸೇರಿಯೂ ಸ್ವಲ್ಪ ವಿಭಿನ್ನವಾಗಿ ನಿಲ್ಲುತ್ತದೆ. ಒಂದು ಚೂರು ಕ್ಲಾಸ್‌, ಸ್ವಲ್ಪ ಮಾಸ್‌, ಸ್ವಲ್ಪ ಕಲ್ಟ್‌ ಸಿನಿಮಾದ ವಿಭಾಗಕ್ಕೆ ಸೇರುತ್ತದೆ. ಇದು ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಅದ್ಭುತ ಪ್ರಯತ್ನ. ಚಿತ್ರದ ಸೆಟ್‌, ಹಾಗೂ ಮೇಕಿಂಗ್‌ ಗಮನಸೆಳೆಯುತ್ತದೆ.
  4. ತೆರೆಯ ಹಿಂದೆ ಕೆಲಸ ಮಾಡಿದ ತಂಡದ ಪರಿಶ್ರಮ ತೆರೆಯ ಮೇಲೆ ಕಾಣುತ್ತದೆ. ಛಾಯಗ್ರಾಹಕ ಭುವನ್‌ ಗೌಡ ತಮ್ಮ ಕೆಜಿಎಫ್‌ 1 ಚಿತ್ರದಲ್ಲೇ ಸಾಮರ್ಥ್ಯವನ್ನು ತೋರಿದ್ದರು. ಅವರು ಅದ್ಭುತವಾಗಿ ಕ್ಯಾಮೆರಾ ಹಿಂದೆ ಕೆಲಸ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
  5. ಚಿತ್ರದಲ್ಲಿ ಹೊಸತನಬೇಕು ಎಂಬ ನಿಟ್ಟಿನಲ್ಲಿ ಹೊಸ ಟಕ್ನೀಶಿಯನ್‌ ಹಾಗೂ ಎಡಿಟರ್‌ಗಳಿಗೆ ಅವಕಾಶ ನೀಡಲಾಗಿದೆ. ಉದಾಹರಣೆಗೆ ಎಡಿಟಿಂಗ್‌ ಮಾಡಲು 18 ವರ್ಷದ ಯುವಕರೊಬ್ಬರಿಗೆ ಅವಕಾಶ ನೀಡಿದ್ದು ಅದ್ಭುತ ಕಾರ್ಯವನ್ನು ಮಾಡಿದ್ದಾರೆ.
  6. ರವಿ ಬಸ್ರೂರ್‌ ನೀಡಿದ ಹಿನ್ನಲೆ ಸಂಗೀತ ಚಿತ್ರದ ದೃಶ್ಯಗಳಿಗೆ ಪೂರಕವಾಗಿದೆ. ಭಾವಕ್ಕೆ ತಕ್ಕ ಸಂಗೀತ ನಿಡಿದ್ದಾರೆ.
  7. ನಿರ್ದೇಶಕ ಪ್ರಶಾಂತ್‌ ಬರೆದ ಸಂಭಾಷಣೆ ಚಿತ್ರದ ಶ್ರೀಮಂತಿಕೆ. ಪ್ರಶಾಂತ್ ಅವರ ಸಂಭಾಷಣೆ ಬರೆಯುವ ಶೈಲಿ ವಿಭಿನ್ನ. ದೀರ್ಘ ಸಂಭಾಷಣೆಯನ್ನು ಬರೆಯುವ ಹಾದಿಯನ್ನು ಆರಿಸಿಕೊಳ್ಳದೆ ವನ್‌ ಲೈನರ್ಸ್‌ ಮಾತುಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಈ ರೀತಿಯ ಪಂಚಿಗ್‌ ಲೈನ್ಸ್‌ಗಳು ಪ್ರೇಕ್ಷಕರ ಮನದಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಈ ಹಿಂದೆ ಕೂಡ ಉಗ್ರಂ ಹಾಗೂ ಕೆಜಿಎಫ್‌ 1 ಸಿನಿಮಾಗಳಲ್ಲಿ ಪಂಚಿಂಗ್‌ ಡೈಲಾಗ್‌ಗಳಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಹೇಗಿದೆ ಅಭಿನಯ?

  • ರಾಕಿಂಗ್‌ ಸ್ಟಾರ್‌ ಯಶ್‌ ರಾಕಿ ಪಾತ್ರಕ್ಕೆ ಹೊಂದುತ್ತಾರೆ. ಅವರ ಮಾತುಗಳಲ್ಲಿ ಒಂದು ಹಾಸ್ಯಮಯವಾದ ಧಾಟಿ ಅಥವಾ ವ್ಯಂಗ್ಯವಾಗಿ ಟೀಕಿಸಿ ಎದುರಾಳಿಯನ್ನು ಕೆಣಕುವ ಧಾಟಿ ಸಹಜವಾಗಿಯೇ ಇದೆ. ಇದು ಸಣ್ಣ ಹಳ್ಳಿಯಿಂದ ಬಂದು, ಏನೂ ಅರಿಯದ ಮಾಸ್‌ ಲೀಡರ್‌ ಆಗಿ ಬೆಳೆದು ನಿಂತ ರಾಕಿ ಪಾತ್ರಕ್ಕೆ ಹೊಂದುತ್ತದೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿ ಕೂಡ ರೀನಾ ಪಾತ್ರಕ್ಕೆ ಒಪ್ಪುತ್ತಾರೆ. ಕೆಜಿಎಫ್‌ 1 ಚಿತ್ರದಲ್ಲಿ ಉತ್ತಮ ಅಭಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಕೂಡ ಅವರದ್ದು ಪ್ರಬುದ್ಧ ನಟನೆ.
  • ಅಧೀರ ಹಾಗೂ ರಮಿಕಾ ಸೇನ್ ಗಮನ ಸೆಳೆಯುವ ಪ್ರಮುಖ ಪಾತ್ರಗಳು. ಅಧೀರನ ಪಾತ್ರದಲ್ಲಿ ಸಂಜಯ್‌ ದತ್ತ್‌ ಹಾಗೂ ರಮಿಕಾ ಸೇನ್‌ ಪಾತ್ರದಲ್ಲಿ ರವಿನಾ ಟಂಡನ್‌ ಇಬ್ಬರೂ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಅಭಿನಯಿಸಿದ್ದಾರೆ. ನಟಿ ರವಿನಾ ಟಂಡನ್‌ ಕೆಲವು ವರ್ಷಗಳ ಹಿಂದೆ ಬಾಲಿವುಡ್‌ನ ಉತ್ತಮ ನಟಿಯರಲ್ಲಿ ಒಬ್ಬರು ಆದರೆ ಇತ್ತೀಚೆಗೆ ಅವರು ಯಾವುದೇ ಸಿನಿಮಾಗಳನ್ನು ಮಾಡಿದ್ದು ಕಂಡುಬಂದಿಲ್ಲ. ಆದರೆ ಕೆಜಿಎಫ್‌ 2ರಲ್ಲಿ ಅವರ ಅಭಿನಯ ಶ್ಲಾಘನೀಯ.
  • ನಟ ಸಂಜಯ್‌ ದತ್ತ್‌ ಮಾನ್ಸ್‌ಟರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ಬಾಲಿವುಡ್‌ನ ಅಗ್ನಿಪಥ್‌ ಸಿನಿಮಾದಲ್ಲಿ ನಿರ್ದಾಕ್ಷಿಣ್ಯವಾಗಿ ಜನರನ್ನು ಹತ್ಯೆ ಮಾಡುವ ರಾಕ್ಷಸನಂತಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದರು ಕೂಡ. ಅಧೀರ ಕೂಡ ಅದೇ ರೀತಿಯ ಒಂದು ಪಾತ್ರ. ಆ ಪಾತ್ರಕ್ಕೆ ಅವಶ್ಯಕತೆಯಿರುವ ಗತ್ತು, ಗಾಂಭೀರ್ಯತೆಯನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಂಡಿದ್ದಾರೆ.
  • ಆನಂದ್‌ ಇಂಗಳಗಿ ಅವರ ಮಗನಾಗಿ ರಾಕಿಯ ಕಥೆಯನ್ನು ಹೇಳುವ ವಿಜಯೇಂದ್ರ ಇಂಗಳಗಿ ಪಾತ್ರವನ್ನು ಪ್ರಕಾಶ್‌ ರೈ ನಿರ್ವಹಿಸಿದ್ದಾರೆ. ಅವರ ವಿಶಿಷ್ಟ ಡೈಲಾಗ್‌ ಹೇಳುವ ರೀತಿಯಿಂದ ಆಕರ್ಷಿಸಿದ್ದಾರೆ.
  • ಇನ್ನು ಉಳಿದಂತೆ ಎಲ್ಲಾ ಸಹಾಯಕ ಪಾತ್ರಗಳನ್ನು ನಿರ್ವಹಿಸಿದ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಬಹುದು.

ಉತ್ತಮಗೊಳಿಸಬಹುದಾಗಿದ್ದ ಅಂಶಗಳು:

  1. ಚಿತ್ರದಲ್ಲಿ ಬರುವ ಹಾಡುಗಳು ವಿಶೇಷ ಅಂತನಿಸುವುದಿಲ್ಲ. ಕೆಜಿಎಫ್‌ 1ರ ಚಿತ್ರದ ಹಾಡುಗಳಿಗೆ ಹೋಲುತ್ತಿರುವದಕ್ಕೆ ಏಕತಾನತೆಯ ರೂಪ ಪಡೆದುಕೊಂಡಂತಿದೆ.
  2. ಪ್ರಕಾಶ್‌ ರೈ ಉತ್ತಮವಾಗಿ ಅಭಿನಯಿಸಿದ್ದರೂ ಪ್ರೇಕ್ಷಕರು ರಾಕಿ ಕಥೆಯನ್ನು ಆನಂದ್‌ ಇಂಗಳಗಿ ಬಾಯಲ್ಲಿ ಕೇಳಿದರೆ ಹೆಚ್ಚು ಖುಷಿಯಾಗುತ್ತಿತ್ತು. ಅನಂತ್‌ನಾಗ್‌ ಅವರನ್ನು ತೆರಯ ಮೇಲೆ ಕಾಣದೇ ನಿರಾಸೆ ಉಂಟುಮಾಡುತ್ತದೆ.

ಕೊನೆಯದಾಗಿ‌:

ರಾಕಿ ಪಾತ್ರಕ್ಕೆ ಬಿಲ್ಡಪ್‌ ಕೊಟ್ಟಿದ್ದು ಹೆಚ್ಚಾಯಿತು ಅಂತ ಅನ್ನಿಸಬಹುದು. ಆದರೆ, ಒಬ್ಬ ಸುಲ್ತಾನಂತೆ ರಾಜ್ಯಭಾರ ಮಾಡುವ ಗ್ಯಾಂಗ್‌ಸ್ಟರ್‌ಗೆ ಅಷ್ಟು ಬಿಲ್ಡಪ್ ಕೊಡುವ ವಿನಾಯಿತಿ ಇರುತ್ತದೆ. ಅದು ಕಥೆಗೆ ಎಲ್ಲೂ ಅಡಚಣೆ ಉಂಟುಮಾಡುವುದಿಲ್ಲ. ಕಾಲಕಾಲಕ್ಕೆ ಸರಿಯಾಗಿ ತಿರುವುಗಳನ್ನು ನೀಡಲಾಗಿದ್ದು, ಎಲ್ಲೂ ಬೋರ್‌ ಹೊಡೆಸದ ಅದ್ಧೂರಿ ಸಿನಿಮಾ ಎಂದು ಹೇಳಬಹುದು.

ಈ ಚಿತ್ರದ ಅಂತ್ಯದಲ್ಲಿ ಏನಾಗುತ್ತದೆ ಎಂದು ಪ್ರೇಕ್ಷಕರ ಊಹೆಗೆ ಬಿಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಕೆಜಿಎಫ್‌ ಚಾಪ್ಟರ್‌ 3 ಬರಬಹುದಾ? ಎಂಬ ಕುತೂಹಲವನ್ನು ಈ ಪ್ರೇಕ್ಷಕರ ಮನದಲ್ಲಿ ಹುಟ್ಟುಹಾಕಿದೆ.

ಹೆಚ್ಚಿನ ಓದಿಗಾಗಿ: RRR ಸಿನಿ ವಿಮರ್ಶೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕಿರುತೆರೆ

Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

Comedy Khiladigalu Premier League:  ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ನಿರೂಪಕರಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಹೆಸರು ಪಡೆದವರು ಅದೆಷ್ಟೋ ಸ್ಟಾರ್‌ ನಟರ ಜತೆ, ಬೆಳ್ಳಿ ಪರದೆಯಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಈ ಬಾರಿಯೂ ವಿವಿಧ ಭಾಗದ ಬೇರೆ ಬೇರೆ ಕಲಾವಿದರು ಆಯ್ಕೆಯಾಗಿದ್ದಾರೆ. ತಮ್ಮ ವಿಶೇಷ ಪ್ರತಿಭೆಗಳಿಂದ ನೋಡುಗರನ್ನು ರಂಜಿಸಲಿದ್ದಾರೆ.‌

VISTARANEWS.COM


on

Comedy Khiladigalu Premier League From 27th April On Zee Kannada
Koo

ಬೆಂಗಳೂರು: ʻಜೀ ಕನ್ನಡʼ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಅಂದರೆ ಅದುವೇ ʻಕಾಮಿಡಿ ಕಿಲಾಡಿಗಳುʼ ಶೋ. (Comedy Khiladigalu Premier League) “ಸೈಡ್‌ಗಿಡ್ರಿ ನಿಮ್‌ ಟೆನ್ಷನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು” ಎಂಬ ಸ್ಲೋಗನ್‌ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸುವ ಕೀರ್ತಿ ಈ ಕಾರ್ಯಕ್ರಮಕ್ಕೆ ಸಲ್ಲುತ್ತದೆ. ಇದೀಗ ಸೀಸನ್‌ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗ ಜೀ ವಾಹಿನಿ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಮೂಲಕ ಮನರಂಜಿಸಲು ಸಿದ್ಧವಾಗಿದೆ.

ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ನಿರೂಪಕರಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಟಿ-20 ರೀತಿಯಲ್ಲಿ ಹೇಗೆ ತಂಡಗಳು, ಮಾಲೀಕರು , ಕ್ಯಾಪ್ಟನ್‌ಗಳು ಇರುತ್ತಾರೋ ಅದೇ ರೀತಿ ಇಲ್ಲಿಯೂ ಇರಲಿದೆ. ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಗುದ್ದಾಟ ನಡೆಸಲಿದೆ. ಈ ಶೋನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ಕಲಾವಿದರಿಗೆ ಅವರ ಪ್ರದರ್ಶನ ಆಧಾರದ ಮೇಲೆ ಪ್ರತಿ ವಾರ 1 ಲಕ್ಷ ರೂ. ಬಹುಮಾನ ಗೆಲ್ಲುವ ಅವಕಾಶ ಇರಲಿದೆ. ಈ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಗೆ ಐವರು ನಿರೂಪಕರು ಹೊಸ ಜವಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಹೊಸ ನಿರೂಪಕರನ್ನು ಈ ಶೋ ಮೂಲಕ ಕರೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಆ ನಿರೂಪಕರು ಯಾರು ಎಂಬ ಪ್ರಶ್ನೆಗೆ ಉತ್ತರ ಇದೇ ಶನಿವಾರ ಹಾಗೂ ಭಾನುವಾರು ರಾತ್ರಿ 9ಗಂಟೆಗೆ ಗೊತ್ತಾಗಲಿದೆ.

ಇದನ್ನೂ ಓದಿ: Comedy khiladi Nayana: ಮುದ್ದು ಕೃಷ್ಣನನ್ನು ಹಿಡಿದು ಫೋಟೊಶೂಟ್‌ ಮಾಡಿಸಿದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

ಸೀಸನ್ 4 ಈಗಾಗಲೇ ಮುಕ್ತಾಯಗೊಂಡಿದೆ. ಸೀಸನ್‌ 4ರ ವಿಜೇತರಾಗಿ ಹರೀಶ್ ಹಿರಿಯೂರು, ಮೊದಲನೇ ರನ್ನರ್ ಅಪ್ ಆಗಿ ಮಂಡ್ಯದ ಗಿಲ್ಲಿ ನಟ ಮತ್ತು ಎರಡನೇ ರನ್ನರ್ ಅಪ್‌ ಆಗಿ ಶುಭಾ ಸ್ಥಾನ ಪಡೆದಿದ್ದರು. ಒಟ್ಟು 12 ಜನ ಟಾಪ್​ ಫೈನಲಿಸ್ಟ್‌ಗಳ ನಡುವೆ ಈ ಮೂವರು ವಿಶೇಷ ಸ್ಥಾನ ಪಡೆದಿದ್ದರು.

ಈ ಕಾರ್ಯಕ್ರಮದ ಮೂಲಕ ಹೆಸರು ಪಡೆದವರು ಅದೆಷ್ಟೋ ಸ್ಟಾರ್‌ ನಟರ ಜತೆ, ಬೆಳ್ಳಿ ಪರದೆಯಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಈ ಬಾರಿಯೂ ವಿವಿಧ ಭಾಗದ ಬೇರೆ ಬೇರೆ ಕಲಾವಿದರು ಆಯ್ಕೆಯಾಗಿದ್ದಾರೆ. ತಮ್ಮ ವಿಶೇಷ ಪ್ರತಿಭೆಗಳಿಂದ ನೋಡುಗರನ್ನು ರಂಜಿಸಲಿದ್ದಾರೆ.‌ ಈ ಕಾರ್ಯಕ್ರಮದ (Comedy Khiladigalu) ಎಲ್ಲ ಸೀಸನ್‌ಗಳಲ್ಲಿಯೂ ಅದ್ಭುತವಾಗಿ ನಿರೂಪಣೆ ಮಾಡಿರುವ ಮಾಸ್ಟರ್‌ ಆನಂದ್‌ ಈ ಬಾರಿಗೂ ನಿರೂಪಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎನ್ನಲಾಗಿದೆ.

Continue Reading

ಟಾಲಿವುಡ್

Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

Pushpa The Rule: ಪುಷ್ಪ 2 ಸಿನಿಮಾ (Pushpa 2) ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬದಂದು ಟೀಸರ್ ಬಿಡುಗಡೆಯಾದಾಗಿನಿಂದ, ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಟಿ-ಸೀರೀಸ್ (T series) ಎಲ್ಲಾ ಭಾಷೆಗಳ ಆಡಿಯೊ ಹಕ್ಕನ್ನು ಪಡೆದಿರುವುದು ಗೊತ್ತಿರುವ ವಿಚಾರ. ಭೂಷಣ್ ಕುಮಾರ್ ಸಂಸ್ಥೆಯು ಎಲ್ಲಾ ಭಾಷೆಗಳ ಸಂಗೀತ ಹಕ್ಕುಗಳಿಗಾಗಿ ಸುಮಾರು 60 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ.

VISTARANEWS.COM


on

Pushpa The Rule first single on May 1
Koo

ಬೆಂಗಳೂರು: ಅಲ್ಲು ಅರ್ಜುನ್‌ (Allu Arjun) ಅಭಿನಯದ ಬಹುನಿರೀಕ್ಷಿತ ‘ಪುಷ್ಪ: ದಿ ರೂಲ್’ (Pushpa The Rule) ಸಿನಿಮಾದ ಮೊದಲ ಸಿಂಗಲ್ ಅಂದರೆ ಮೊದಲ ಹಾಡು ‘ಪುಷ್ಪ ಪುಷ್ಪ’ (‘Pushpa Pushpa’) ಮೇ 1ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಅಲ್ಲು ಅರ್ಜುನ್‌ (Pushpa The Rule) ಸೋಷಿಯಲ್‌ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಏಪ್ರಿಲ್ 24 ರಂದು, ಅಲ್ಲು ಅರ್ಜುನ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜತೆಗೆ ‘ಪುಷ್ಪ ಪುಷ್ಪ’ ಟ್ರ್ಯಾಕ್‌ನ ಟೀಸರ್‌ ಶೇರ್‌ ಮಾಡಿಕೊಂಡಿದ್ದಾರೆ. ಮೇ 1ರಂದು ಬೆಳಗ್ಗೆ 11.7ಕ್ಕೆ ‘ಪುಷ್ಪ ಪುಷ್ಪ’ ಸಾಂಗ್‌ ಬಿಡುಗಡೆಯಾಗಲಿದೆ. ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದಾರೆ.

‘ಪುಷ್ಪ 2’ ಸಿನಿಮಾದ ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆದಿದೆ. ಒಂದೊಂದೇ ಹಾಡುಗಳನ್ನು ರಿಲೀಸ್​ ಮಾಡಲು ಸಕಲ ತಯಾರಿ ಆಗಿದೆ. ಈಗ ಮೊದಲ ಹಾಡಿನ ಲಿರಿಕಲ್ ವಿಡಿಯೊ ಮೇ 1ಕ್ಕೆ ಅನಾವರಣ ಆಗಲಿದೆ.

ಪುಷ್ಪ 2 ಸಿನಿಮಾ (Pushpa 2) ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬದಂದು ಟೀಸರ್ ಬಿಡುಗಡೆಯಾದಾಗಿನಿಂದ, ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಟಿ-ಸೀರೀಸ್ (T series) ಎಲ್ಲಾ ಭಾಷೆಗಳ ಆಡಿಯೊ ಹಕ್ಕನ್ನು ಪಡೆದಿರುವುದು ಗೊತ್ತಿರುವ ವಿಚಾರ. ಭೂಷಣ್ ಕುಮಾರ್ ಸಂಸ್ಥೆಯು ಎಲ್ಲಾ ಭಾಷೆಗಳ ಸಂಗೀತ ಹಕ್ಕುಗಳಿಗಾಗಿ ಸುಮಾರು 60 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ. ಈಗ ಚಿತ್ರದ ಆಡಿಯೊ ಹಕ್ಕುಗಳು ಬರೋಬ್ಬರಿ 60 ಕೋಟಿ ರೂ . ಮಾರಟವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rashmika Mandanna: ಪುಷ್ಪ 2ನಲ್ಲಿ ಶ್ರೀವಲ್ಲಿ 2.0 ಲೆವೆಲ್‌ಗೆ ಇದ್ದಾಳಂತೆ! ರಶ್ಮಿಕಾ ಹೇಳಿದ್ದೇನು?

ತೆಲುಗಿನ ಜತೆ ಕನ್ನಡ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲೂ ಹಾಡುಗಳು ಸಿದ್ಧವಾಗುತ್ತಿವೆ. ಈ ಎಲ್ಲ ಭಾಷೆಯ ಆಡಿಯೊ ಹಕ್ಕುಗಳನ್ನು ಟಿ-ಸಿರೀಸ್​ ಸಂಸ್ಥೆ ಪಡೆದುಕೊಂಡಿದೆ. ದೇವಿ ಶ್ರೀ ಪ್ರಸಾದ್​ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 2021ರಲ್ಲಿ ಬಿಡುಗಡೆ ಆದ ‘ಪುಷ್ಪ 1’ ಸಿನಿಮಾದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು.

ಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು. ಸದ್ಯ ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

Continue Reading

ಸಿನಿಮಾ

Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Amitabh Bachchan: ಮೂರು ವರ್ಷಗಳಿಂದ ಲತಾ ಮಂಗೇಶ್ಕರ್​ ಕುಟುಂಬ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿ ಗೌರವಿಸಿಕೊಂಡು ಬರುತ್ತಿದೆ. ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್​ ಬಚ್ಚನ್ ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ಈ ಮುಂಚೆ ಮಾಹಿತಿ ಹಂಚಿಕೊಂಡಿದ್ದರು. ಜತೆಗೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪುರಸ್ಕಾರವನ್ನು (Master Deenanath Mangeshkar Puraskar) ಪಡೆದರು.

VISTARANEWS.COM


on

Amitabh Bachchan, AR Rahman honoured with Deenanath Mangeshkar award
Koo

ಮುಂಬೈ: ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಏಪ್ರಿಲ್ 24ರಂದು ಮುಂಬೈನ ವಿಲೇ ಪಾರ್ಲೆ ಪ್ರದೇಶದಲ್ಲಿ ʻಲತಾ ದೀನನಾಥ್ ಮಂಗೇಶ್ಕರ್ʼ ಪುರಸ್ಕಾರ (Lata Deenanath Mangeshkar award) ನೀಡಿ ಗೌರವಿಸಲಾಯಿತು. ಜತೆಗೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪುರಸ್ಕಾರವನ್ನು (Master Deenanath Mangeshkar Puraskar) ಪಡೆದರು. ಏಪ್ರಿಲ್ 24 ರಂದು ಮುಂಬೈನಲ್ಲಿ ಮಂಗೇಶ್ಕರ್ ಕುಟುಂಬದ ಸದಸ್ಯರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಅಮಿತಾಭ್‌ ಬಚ್ಚನ್ ಅವರಿಗೆ ಗಾಯಕಿ ಉಷಾ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನ ಮಾಡಬೇಕಿದ್ದ ಆಶಾ ಭೋಂಸ್ಲೆ ಅವರು ಅಸ್ವಸ್ಥರಾಗಿರುವ ಕಾರಣ ಪ್ರಶಸ್ತಿಯನ್ನು ನೀಡಲಾಗಲಿಲ್ಲ.

ಮೂರು ವರ್ಷಗಳಿಂದ ಲತಾ ಮಂಗೇಶ್ಕರ್​ ಕುಟುಂಬ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿ ಗೌರವಿಸಿಕೊಂಡು ಬರುತ್ತಿದೆ. ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್​ ಬಚ್ಚನ್ ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ಈ ಮುಂಚೆ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Amitabh Bachchan: 30 ಅಡಿ ಎತ್ತರದ ಬಂಡೆಯಿಂದ ಜಿಗಿದ ಅಮಿತಾಭ್‌: ನಿಜವಾದ ‘ಆ್ಯಕ್ಷನ್ ಹೀರೊʼ ನೀವೆ ಎಂದ ಫ್ಯಾನ್ಸ್‌!

ಪ್ರಶಸ್ತಿ ಸ್ವೀಕಾರ ಮಾಡಿದ ಬಳಿಕ ಅಮಿತಾಭ್‌ ಬಚ್ಚನ್‌ ಮಾತನಾಡಿ, “ಇಂದು ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಈ ಪ್ರಶಸ್ತಿಗೆ ನಾನು ಅರ್ಹನೆಂದು ಯಾವುತ್ತೂ ಅಂದುಕೊಂಡಿರಲಿಲ್ಲ. ಹೃದಯನಾಥ್ ಜಿ ಅವರು ನಾನು ಇಲ್ಲಿಗೆ ಬರಲು ಸಾಕಷ್ಟು ಪ್ರಯತ್ನಿಸಿದರು. ಹೃದಯನಾಥ್ ಜೀ, ನಾನು ಕೊನೆಯ ಬಾರಿಗೆ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಈ ಹಿಂದೆ ನೀವು ಕರೆದಾಗ ನಾನು ಅಸ್ವಸ್ಥನಾಗಿದ್ದೆʼʼಎಂದರು .

ಅಮಿತಾಭ್ ಬಚ್ಚನ್ ತಮ್ಮ ಭಾಷಣದಲ್ಲಿ, ಅವರ ತಂದೆ, ಪ್ರಸಿದ್ಧ ಹಿಂದಿ ಕವಿ ಹರಿವಂಶ ರಾಯ್ ಬಚ್ಚನ್ ಅವರು ಲತಾ ಮಂಗೇಶ್ಕರ್ ಅವರ ಧ್ವನಿಯನ್ನು ಪ್ರೀತಿಸುತ್ತಿದ್ದರು ಎಂದರು. ಮಾತ್ರವಲ್ಲ ಲತಾ ಮಂಗೇಶ್ಕರ್ ಧ್ವನಿ ಅತ್ಯಂತ ಮಾಧುರ್ಯ ಹಾಗೂ ಮಧುವಾಗಿತ್ತು ಎಂದು ಹೇಳಿದರು.

ಎಆರ್ ರೆಹಮಾನ್ ಅವರು ತಮ್ಮ ಇನ್‌ಸ್ಟಾದಲ್ಲಿ ಪ್ರಶಸ್ತಿಯ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. “ಇಂದು ʻಲತಾ ದೀನನಾಥ್ ಮಂಗೇಶ್ಕರ್ʼ ಪ್ರಶಸ್ತಿಯನ್ನು ಪಡೆಯಲು ಗೌರವವಾಗಿದೆ. ನಾನು ಮಂಗೇಶ್ಕರ್ ಕುಟುಂಬದ ಪರಂಪರೆಯನ್ನು ಮತ್ತು ಅವರ ಕಲೆಯ ಸಮರ್ಪಣೆಯನ್ನು ಆರಾಧಿಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ನಟರಾದ ರಣದೀಪ್ ಹೂಡಾ, ಅಶೋಕ್ ಸರಾಫ್, ಹಿನ್ನೆಲೆ ಗಾಯಕ ರೂಪಕುಮಾರ್ ರಾಥೋಡ್ ಮತ್ತು ನಟಿ ಪದ್ಮಿನಿ ಕೊಲ್ಹಾಪುರೆ ಅವರನ್ನು ಸನ್ಮಾನಿಸಲಾಯಿತು.

ಬಹು ಅಂಗಾಂಗ ವೈಫಲ್ಯದಿಂದ 2022ರ ಫೆಬ್ರವರಿ 6ರಂದು ನಿಧನರಾದ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥವಾಗಿ ಮಂಗೇಶ್ಕರ್ ಕುಟುಂಬ ಮತ್ತು ಟ್ರಸ್ಟ್ ಈ ಪ್ರಶಸ್ತಿಯನ್ನು ನೀಡುತ್ತ ಬರುತ್ತಿದೆ.

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಹಿರಿಯ ಮರಾಠಿ ಸಿನಿಮಾ ಕಲಾವಿದ ಅಶೋಕ್ ಸರಾಫ್, ಮರಾಠಿ ನಟಿ ಪದ್ಮಿನಿ ಕೊಲ್ಹಾಪುರೆ, ಗಾಯಕ ರೂಪ್‌ಕುಮಾರ್ ರಾಥೋಡ್, ಮರಾಠಿ ರಂಗಭೂಮಿಯ ದಿಗ್ಗಜ ಅತುಲ್ ಪರ್ಚುರೆ ಹಾಗೂ ಖ್ಯಾತ ಲೇಖಕಿ ಮಂಜಿರಿ ಫಡ್ಕೆ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇದೆ ವೇಳೆ ನಟ, ನಿರ್ದೇಶಕ, ನಿರ್ಮಾಪಕ ರಣದೀಪ್ ಹೂಡಾ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಿದರು.

Continue Reading

ಟಾಲಿವುಡ್

Vijay Deverakonda: ಮೃಣಾಲ್ – ವಿಜಯ್ ದೇವರಕೊಂಡ ಅಭಿನಯದ ʻಫ್ಯಾಮಿಲಿ ಸ್ಟಾರ್ʼ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌!

Vijay Deverakonda: ಕೆಲವರು ಇದು ಸರಾಸರಿಗಿಂತ ಕಡಿಮೆ ಚಿತ್ರ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಚಿತ್ರಕ್ಕಿಂತ ಧಾರಾವಾಹಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದರು. ಸಂಗೀತ ಅಷ್ಟಾಗಿ ಆಕರ್ಷಣೀಯವಾಗಿಲ್ಲ ಎಂಬ ಮಾತು ಕೂಡ ಇದೆ. ಈ ಸಿನಿಮಾ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ, ಹೊಸತನವೇನೂ ಇಲ್ಲ ಎಂದಿದ್ದರು.

VISTARANEWS.COM


on

Vijay Deverakonda Mrunal Thakur The Family Star to release on OTT
Koo

ಬೆಂಗಳೂರು: ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ (Family Star Box Office) ಪಡೆದುಕೊಂಡಿತ್ತು. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಏಪ್ರಿಲ್ 26 ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ತೆಲುಗು ಆವೃತ್ತಿಯ ಈ ಸಿನಿಮಾ ತಮಿಳು, ಮಲಯಾಳಂ ಮತ್ತು ಕನ್ನಡ ಡಬ್ಬಿಂಗ್ ಆವೃತ್ತಿಗಳೊಂದಿಗೆ ಲಭ್ಯವಿರಲಿದೆ.

ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಬ್ಬರು ʻʻಸಿನಿಮಾ ಫಸ್ಟ್‌ ಹಾಪ್‌ ಹಾಗೂ ಕಾಮಿಡಿ ಚೆನ್ನಾಗಿದೆʼʼಎಂದು ಬರೆದುಕೊಂಡಿದ್ದರು. ʻವಿಜಯ್ ಮತ್ತು ಮೃಣಾಲ್ ಅಭಿನಯ ಸೂಪರ್‌ʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದರು. ʻʻನನ್ನ ರೇಟಿಂಗ್ – 3.5/5. ಕೌಟುಂಬಿಕ ಮನರಂಜನೆ ಸಿನಿಮಾ ಇದುʼʼಮತ್ತೊಬ್ಬರು ಬರೆದುಕೊಂಡಿದ್ದರು.

ಕೆಲವರು ಇದು ಸರಾಸರಿಗಿಂತ ಕಡಿಮೆ ಚಿತ್ರ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಚಿತ್ರಕ್ಕಿಂತ ಧಾರಾವಾಹಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದರು. ಸಂಗೀತ ಅಷ್ಟಾಗಿ ಆಕರ್ಷಣೀಯವಾಗಿಲ್ಲ ಎಂಬ ಮಾತು ಕೂಡ ಇದೆ. ಈ ಸಿನಿಮಾ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ, ಹೊಸತನವೇನೂ ಇಲ್ಲ ಎಂದಿದ್ದರು.

ಇದನ್ನೂ ಓದಿ: Vijay Deverakonda: ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ವಿಜಯ್ ದೇವರಕೊಂಡ!

ʻಹಾಯ್ ನಾನ್ನʼ (2023), ʻಸೀತಾ ರಾಮಂʼ (2022)ಬಳಿಕ ಮೃಣಾಲ್ ಠಾಕೂರ್ ಅವರ ಮೂರನೇ ತೆಲುಗು ಚಿತ್ರ ಇದು. ʻಫ್ಯಾಮಿಲಿ ಸ್ಟಾರ್ʼ ಸಿನಿಮಾವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಮುಂಚೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻಗೀತ ಗೋವಿಂದಂʼ (2018) ಸಿನಿಮಾಗೆ ನಿರ್ದೇಶನ ಮಾಡಿದ್ದರು.

ʻಫ್ಯಾಮಿಲಿ ಸ್ಟಾರ್ʼ ಚಿತ್ರಕ್ಕೆ ಗೋಪಿಸುಂದರ್ ಸಂಗೀತ ನೀಡಿದ್ದು, ಇದುವರೆಗೆ ಬಿಡುಗಡೆಯಾಗಿರುವ ಮೂರು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Continue Reading
Advertisement
IPL 2024
ಕ್ರೀಡೆ3 mins ago

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

Pakistan Teen
ದೇಶ3 mins ago

ಪಾಕಿಸ್ತಾನದ ಯುವತಿಯ ಪ್ರಾಣ ಉಳಿಸಿತು ಭಾರತದ ಹೃದಯ; ‘ಹಾರ್ಟ್‌’ ಟಚಿಂಗ್ ಸ್ಟೋರಿ ಇದು!

Comedy Khiladigalu Premier League From 27th April On Zee Kannada
ಕಿರುತೆರೆ4 mins ago

Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

Pushpa The Rule first single on May 1
ಟಾಲಿವುಡ್21 mins ago

Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

actress amulya father in law election officers ride
ಕ್ರೈಂ27 mins ago

Election Officer Raid: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ

Rahul Gandhi
ದೇಶ30 mins ago

Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

IPL 2024
ಕ್ರೀಡೆ40 mins ago

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

Amitabh Bachchan, AR Rahman honoured with Deenanath Mangeshkar award
ಸಿನಿಮಾ51 mins ago

Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Lok Sabha Election
ಕರ್ನಾಟಕ1 hour ago

Lok Sabha Election: ಕರ್ನಾಟಕ ಸೇರಿ 13 ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ; ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ

Subramanya Dhareshwar
ಶ್ರದ್ಧಾಂಜಲಿ1 hour ago

Subramanya Dhareshwar: ಜೇನುದನಿಯ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌