Aamir Khan : ದಕ್ಷಿಣ ಭಾರತ ಸಿನಿಮಾದಲ್ಲಿ ವಿಲನ್‌ ಆಗ್ತಾರಂತೆ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಆಮೀರ್ ಖಾನ್‌! Vistara News
Connect with us

ಸಿನಿಮಾ

Aamir Khan : ದಕ್ಷಿಣ ಭಾರತ ಸಿನಿಮಾದಲ್ಲಿ ವಿಲನ್‌ ಆಗ್ತಾರಂತೆ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಆಮೀರ್ ಖಾನ್‌!

ರಾಜಮೌಳಿ ಅವರ ಸಿನಿಮಾವೊಂದರಲ್ಲಿ ಬಾಲಿವುಡ್‌ ನಟ ಆಮೀರ್‌ ಖಾನ್‌ (Aamir Khan) ಅವರು ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ.

VISTARANEWS.COM


on

aamir khan to act in rajamouli movie
Koo

ಮುಂಬೈ: ಸಿನಿಮಾ ರಂಗದಲ್ಲಿ ಸದ್ಯ ದಕ್ಷಿಣ ಭಾರತವು ಬಾಲಿವುಡ್‌ಗಿಂತ ಮೇಲುಗೈ ಸಾಧಿಸಿಕೊಂಡು ಮುನ್ನುಗ್ಗುತ್ತಿದೆ. ಬಾಲಿವುಡ್‌ ಮಂದಿ ಕೂಡ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಎಂದೆನಿಸಿಕೊಂಡಿರುವ ಆಮೀರ್‌ ಖಾನ್‌ (Aamir Khan) ಕೂಡ ದಕ್ಷಿಣ ಭಾರತದ ಸಿನಿಮಾಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಆರ್‌ಆರ್‌ಆರ್‌ ಸಿನಿಮಾ ಮೂಲಕ ಆಸ್ಕರ್‌ ಪ್ರಶಸ್ತಿ ತಂದುಕೊಟ್ಟಿರುವ ನಿರ್ದೇಶಕ ರಾಜಮೌಳಿ ಅವರ ಸಿನಿಮಾವೊಂದರಲ್ಲಿ ಆಮೀರ್‌ ಖಾನ್‌ ನಟಿಸಲಿದ್ದಾರೆ ಎನ್ನಲಾಗಿದೆ. ಅದರಲ್ಲೂ ಆಮೀರ್‌ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ವರದಿಯಿದೆ. ಸಿನಿಮಾದಲ್ಲಿ ಮಹೇಶ್‌ ಬಾಬು ಅವರು ಹೀರೋ ಆಗಿರಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Viral News: ಇದು ಮೂಗಿನಿಂದ ಬಂದ ಕೊಳಲ ನಾದ! ಸರ್ಕಾರಿ ಶಾಲೆಯ ಶಿಕ್ಷಕನ ಕಲೆ ನೋಡಿ ಬೆಕ್ಕಸ ಬೆರಗಾದ ಜನ

ಈ ಸಿನಿಮಾ ಇನ್ನೂ ಕಥೆ ನಿರ್ಮಾಣದ ಹಂತದಲ್ಲಿದೆ. ರಾಜಮೌಳಿ ಮತ್ತು ಅವರ ತಂದೆ ವಿಜಯೇಂದ್ರ ಪ್ರಸಾದ್‌ ಕಥೆ ಬರೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಮಾತ್ರವೇ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

ಆಮೀರ್‌ ಖಾನ್‌ ಅವರು ಕೊನೆಯದಾಗಿ ಲಾಲ್‌ ಸಿಂಗ್‌ ಛಡ್ಡಾ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾಗೆ ನಿರೀಕ್ಷೆಯಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಅಮೀರ್‌ ಅವರು ದೊಡ್ಡ ಹೆಸರಾಗಬಲ್ಲಂತಹ ಸಿನಿಮಾಕ್ಕಾಗಿಯೇ ಕಾಯುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರು ಮುಂಬೈನಲ್ಲಿ ನಡೆದ ‘ಕ್ಯಾರಿ ಆನ್ ಜಟ್ಟಾ 3’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಗ ಅವರ ಮುಂದಿನ ಸಿನಿಮಾ ಬಗ್ಗೆ ಕೇಳಿದಾಗ, “ಸದ್ಯ ನಾನು ನನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೇನೆ. ನಾನು ಮಾನಸಿಕವಾಗಿ ಸಿದ್ಧವಾದಾಗ ಮುಂದಿನ ಸಿನಿಮಾದ ಬಗ್ಗೆ ಯೋಚಿಸುತ್ತೇನೆ” ಎಂದು ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

South Cinema

Rashmika Mandanna: ಮತ್ತೊಮ್ಮೆ ʼರಂಜಿತಮೆʼ, ʼಸಾಮಿʼ ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ!

Rashmika Mandanna: ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ದುಬೈಯಲ್ಲಿ ಆಭರಣ ಮಳೆಗೆಯೊಂದರ ಉದ್ಘಾಟನೆ ವೇಳೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Edited by

rashmika
Koo

ದುಬೈ: ಸ್ಯಾಂಡಲ್‌ವುಡ್‌ನ ʼಕಿರಿಕ್‌ ಪಾರ್ಟಿʼ (Kirik Party) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿ ʼಚಲೋʼ ಚಿತ್ರದ ಮೂಲಕ ತೆಲುಗಿನಲ್ಲಿ ಛಾಪು ಮೂಡಿಸಿ ʼಸುಲ್ತಾನʼನ ಮನದರಸಿಯಾಗಿ ಕಾಲಿವುಡ್‌ಗೆ ಕಾಲಿಟ್ಟು, ʼಗುಡ್‌ ಬೈʼ ಮೂಲಕ ಬಾಲಿವುಡ್‌ಗೆ ಜಿಗಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಕೈ ತುಂಬಾ ಸಿನಿಮಾ, ಜಾಹೀರಾತು ಹೊಂದಿರುವ ನಟಿ. ಅವರು ದೇಶಾದ್ಯಂತ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಆಭರಣ ಮಳಿಗೆಯೊಂದರ ಉದ್ಘಾಟನೆಗಾಗಿ ದುಬೈಗೆ ತೆರಳಿದ್ದರು. ಈ ವೇಳೆ ಅವರು ತಾವು ಕಾಲಿವುಡ್‌ ಸೂಪರ್‌ ಸ್ಟಾರ್‌ ವಿಜಯ್‌ ಜತೆ ನಟಿಸಿದ ʼವಾರಿಸುʼ (Varisu) ಚಿತ್ರ ʼರಂಜಿತಮೆʼ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಎಸ್‌. ತಮನ್‌ ಸಂಗೀತ ನೀಡಿದ ʼರಂಜಿತಮೆʼ ಹಾಡು ಸೂಪರ್‌ ಹಿಟ್‌ ಆಗಿತ್ತು. ಡ್ಯಾನ್ಸಿಂಗ್‌ ನಂಬರ್‌ ಇದಾಗಿದ್ದು, ವಿಜಯ್‌-ರಶ್ಮಿಕಾ ಹೆಜ್ಜೆ ಹಾಕಿದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಇತ್ತೀಚೆಗೆ ದುಬೈಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ರಶ್ಮಿಕಾ ವೇದಿಕೆ ಮೇಲೆ ಬಂದಾಗ ನಿರೂಪಕರು ಒಂದರಡು ಹೆಜ್ಜೆ ಹಾಕಲು ಮನವಿ ಮಾಡಿದರು. ಅದಕ್ಕೆ ತಕ್ಕಂತೆ ಡಿಜೆ ʼರಂಜಿತಮೆʼ ಹಾಡು ಪ್ಲೇ ಮಾಡಿದರು. ಬಳಿಕ ರಶ್ಮಿಕಾ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು.

ಕಲ್ಯಾಣ್‌ ಜ್ಯುವೆಲ್ಲರ್ಸ್‌ನ ಬ್ರ್ಯಾಂಡ್‌ ರಾಯಭಾರಿಯಾಗಿರುವ ರಶ್ಮಿಕಾ ದುಬೈನ ಅಲ್ ಬರ್ಶಾದಲ್ಲಿನ ಹೊಸ ಶೋರೂಂ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ʼರಂಜಿತಮೆʼ ಮಾತ್ರವಲ್ಲ ತಮ್ಮ ಸೂಪರ್‌ ಹಿಟ್‌ ತೆಲುಗು ಚಿತ್ರ ʼಪುಷ್ಪʼದ ʼಸಾಮಿ ಸಾಮಿʼ ಹಾಡಿಗೂ ಕುಣಿದಿದ್ದಾರೆ. ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಅಭಿನಯಿಸಿದ್ದ ʼಪುಷ್ಪʼ ಚಿತ್ರ 2021ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು. ಸುಕುಮಾರ್‌ ನಿರ್ದೇಶನದ ಈ ಚಿತ್ರಕ್ಕೆ ದೇವಿ ಪ್ರಸಾದ್‌ ಸಂಗೀತ ನೀಡಿದ್ದರು. ಈ ಚಿತ್ರದ ಹಾಡುಗಳೆಲ್ಲ ಸೂಪರ್‌ ಹಿಟ್‌ ಆಗಿದ್ದವು. ಆಭರಣ ಮಳಿಗೆ ಉದ್ಘಾಟನೆ ವೇಳೆ ಸೀರೆ ಸುತ್ತಿ ಅಭಿಮಾನಿಗಳ ಮನ ಕದ್ದಿದ್ದ ರಶ್ಮಿಕಾ ಬಳಿ ಸ್ಪೆಪ್‌ ಮೂಲಕವೂ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ʼರಂಜಿತಮೆʼ ಹಾಡಿನ ವಿಡಿಯೊವನ್ನು ಎಕ್ಸ್‌ನಲ್ಲಿ ಈಗಾಗಲೇ ಸುಮಾರು 20 ಸಾವಿರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ʼಸಾಮಿ ಸಾಮಿʼ ಹಾಡಿನ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Rashmika Mandanna: ಧನುಷ್‌ ಜತೆ ರಶ್ಮಿಕಾ ರೊಮ್ಯಾನ್ಸ್‌!

ಸದ್ಯ ರಶ್ಮಿಕಾ ವಿವಿಧ ಭಾಷೆಗಳ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ರಣಬೀರ್‌ ಕಪೂರ್‌ ಜತೆ ನಟಿಸುತ್ತಿರುವ ಬಾಲಿವುಡ್‌ ಚಿತ್ರ ʼಅನಿಮಲ್‌ʼನ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಇನ್ನು ಬಹು ನಿರೀಕ್ಷಿತ ತೆಲುಗು ಚಿತ್ರ ʼಪುಷ್ಪ 2′ ಚಿತ್ರೀಕರಣ ನಡೆಯುತ್ತಿದೆ. ಮಾತ್ರವಲ್ಲ ‘ರೈನ್‌ ಬೋ’, ಧನುಷ್‌ ಜತೆ ‘ಡಿ 51ʼ, ವಿಜಯ್‌ ದೇವರಕೊಂಡ, ರವಿತೇಜ ಅಭಿನಯದ ಚಿತ್ರಗಳಿಗೂ ರಶ್ಮಿಕಾ ನಾಯಕಿ ಆಯ್ಕೆಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Continue Reading

ಬಾಲಿವುಡ್

Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?

Boney Kapoor: ಬಾಲಿವುಡ್‌ ಸ್ಟಾರ್‌, ಬಹುಭಾಷಾ ನಾಯಕಿ ಶ್ರೀದೇವಿ ಸಾವಿನ ಕುರಿತು ಪತಿ, ನಿರ್ಮಾಪಕ ಬೋನಿ ಕಪೂರ್‌ ಮುಕ್ತವಾಗಿ ಮಾತನಾಡಿದ್ದಾರೆ. ಶ್ರೀದೇವಿ ಸಾವು ಸಹಜವಲ್ಲ ಆದರೆ ಆಕಸ್ಮಿಕ ಎಂದಿದ್ದಾರೆ.

VISTARANEWS.COM


on

Edited by

boney kapoor
Koo

ಮುಂಬೈ: ಬಾಲಿವುಡ್‌ ನಟಿ, ಪತ್ನಿ ಶ್ರೀದೇವಿ ಸಾವಿನ ಕುರಿತು ಇದೇ ಮೊದಲ ಬಾರಿ ನಿರ್ಮಾಪಕ ಬೋನಿ ಕಪೂರ್‌ ಮಾತನಾಡಿದ್ದಾರೆ. 2018ರಲ್ಲಿ ಮೃತಪಟ್ಟ ನಟಿಯ ಸಾವಿನ ಹಿಂದೆ ತಮ್ಮ ಪಾತ್ರ ಇರುವ ಬಗ್ಗೆ ವದಂತಿ ಕೇಳಿ ಬಂದಿರುವ ಹಿನ್ನಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಶ್ರೀದೇವಿ ಅವರ ಸಾವು ಸಹಜವಲ್ಲ. ಆದರೆ ಆಕಸ್ಮಿಕ ಎಂದಿದ್ದಾರೆ. ಈ ಬಗ್ಗೆ ಅವರು ದುಬೈ ಪೊಲೀಸರಿಂದ ಎಲ್ಲಾ ರೀತಿಯ ಪರೀಕ್ಷೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಆ ಸಮಯದಲ್ಲಿ ಭಾರತೀಯ ಮಾಧ್ಯಮಗಳಿಂದ ಸಾಕಷ್ಟು ಒತ್ತಡ ಇತ್ತು ಎನ್ನುವುದನ್ನೂ ತಿಳಿಸಿದ್ದಾರೆ.

”ಆ ಬಗ್ಗೆ ನಾನು ಮಾತನಾಡದಿರಲು ನಿರ್ಧರಿಸಿದ್ದೆ. ತನಿಖೆ ವೇಳೆ ನಾನು ಈ ಬಗ್ಗೆಯೇ ಸುಮಾರು 24ರಿಂದ 48 ಗಂಟೆಗಳ ಕಾಲ ಮಾತನಾಡಿದ್ದೆ. ಹೀಗಾಗಿ ನಾನು ದುಬೈ ಪೊಲೀಸ್‌ನಿಂದ ಕ್ಲೀನ್‌ ಚಿಟ್‌ ಪಡೆದುಕೊಂಡಿದ್ದೆ. ಮಾತ್ರವಲ್ಲ ನಾನು ತನಿಖೆಗೆ ಪೊಲೀಸರ ಜತೆ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದೆ. ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ ಸಹಿತ ಎಲ್ಲಾ ಪರೀಕ್ಷೆಗಳಿಗೆ ಒಳಗಾಗಿದ್ದೆ. ಕೊನೆಗೆ ಇದು ನೀರಿನಲ್ಲಿ ಮುಳುಗಿ ಸಂಭವಿಸಿದ ಆಕಸ್ಮಿಕ ಸಾವು ಎನ್ನುವ ವರದಿ ಬಂತುʼʼ ಎಂದು ಬೋನಿ ಕಪೂರ್‌ ಹೇಳಿದ್ದಾರೆ.

ಡಯಟ್‌ ಮಾಡುತ್ತಿದ ಶ್ರೀದೇವಿ

ಶ್ರೀದೇವಿ ಕೈಗೊಳ್ಳುತ್ತಿದ್ದ ಡಯಟ್‌ ಬಗ್ಗೆಯೂ ಬೋನಿ ಕಪೂರ್‌ ಮಾತನಾಡಿದ್ದಾರೆ. ʼʼಅವರು ಆಹಾರ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಕುಟುಂಬ ವೈದ್ಯರು ಪಥ್ಯ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದರು. ಅದರಂತೆ ಶ್ರೀದೇವಿ ಹಸಿವಿನಿಂದ ಬಳಲುತ್ತಿದ್ದರೂ ಚೆನ್ನಾಗಿ ಕಾಣಬೇಕು ಎಂದು ಬಯಸಿದ್ದರುʼʼ ಎಂದು ಬೋನಿ ಕಪೂರ್‌ ಹೇಳಿದ್ದಾರೆ.

ʼʼಶ್ರೀದೇವಿ ತಮ್ಮ ದೇಹದ ಆಕಾರ ಉತ್ತಮವಾಗಿ ಇರಿಸಿಕೊಳ್ಳಲು ಸದಾ ಗಮನ ಹರಿಸುತ್ತಿದ್ದರು. ಹಿಂದೊಮ್ಮೆ ಅವರು ʼಇಂಗ್ಲಿಷ್‌ ವಿಂಗ್ಲಿಷ್‌ʼ ಚಿತ್ರಕ್ಕಾಗಿ ದೇಹವನ್ನು 46-47 ಕೆಜಿಗೆ ಇಳಿಸಿಕೊಂಡಿದ್ದರು. ಮಾತ್ರವಲ್ಲ ಅವರು ಉಪ್ಪನ್ನು ಸೇವಿಸುತ್ತಿರಲಿಲ್ಲʼʼ ಎಂದು ವಿವರಿಸಿದ್ದಾರೆ.

ʼʼಮದುವೆಯಾದಾಗಿನಿಂದ ಗಮನಿಸುತ್ತಿದ್ದೆ. ಆಕೆ ಕಟ್ಟುನಿಟ್ಟಿನ ಜೀವನ ಕ್ರಮ ಅನುಸರಿಸುತ್ತಿದ್ದರು. ಕಠಿಣ ಡಯಟ್‌ ಫಾಲೋ ಮಾಡುತ್ತಿದ್ದರು. ಲೋ ಬಿಪಿಯ ಅಪಾಯದ ಬಗ್ಗೆ ಆಗಾಗ ವೈದ್ಯರು ಸೂಚಿಸುತ್ತಿದ್ದರು. ಉಪ್ಪು ತಿನ್ನದಿರುವ ಆಹಾರ ಕ್ರಮ ಅನುಸರಿಸಬೇಡಿ ಎಂದು ಎಚ್ಚರಿಸುತ್ತಿದ್ದರು. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಶ್ರೀದೇವಿ ಮೃತಪಟ್ಟಾಗ ನಟ ನಾಗಾರ್ಜುನ ಸಾಂತ್ವನ ಹೇಳಲು ಬಂದಿದ್ದರು. ಆಗ ಅವರು ಒಂದು ಸಿನಿಮಾಕ್ಕಾಗಿ ಕಠಿಣ ಡಯಟ್‌ ಮಾಡಿ ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದು ಹಲ್ಲು ಮುರಿದುಕೊಂಡ ಘಟನೆಯನ್ನು ವಿವರಿಸಿದ್ದರುʼʼ ಎಂದು ಬೋನಿ ಕಪೂರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Actress Sridevi: ಮದುವೆಯಾಗುವಾಗ ಶ್ರೀದೇವಿ ಗರ್ಭಿಣಿಯಾಗಿದ್ದರೆ? ಬೋನಿ ಕಪೂರ್‌ ಹೇಳಿದ್ದೇನು?

2018ರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಶ್ರೀದೇವಿ ಕುಟುಂಬ ಸಮೇತ ದುಬೈಗೆ ತೆರಳಿದ್ದರು. ಈ ವೇಳೆ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟಿದ್ದರು. ಇದು ಅನುಮಾನಗಳನ್ನನು ಹುಟ್ಟು ಹಾಕಿತ್ತು. ಹೀಗಾಗಿ ಬೋನಿ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಶ್ರೀದೇವಿ-ಬೋನಿ ಕಪೂರ್‌ ದಂಪತಿಯ ಮಕ್ಕಳು. ಸದ್ಯ ಜಾಹ್ನವಿ ಚಿತ್ರಗಳಲ್ಲಿ ನಟಿಸುತ್ತಿದ್ದು, ಖುಷಿ ಶೀಘ್ರದಲ್ಲಿಯೇ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Continue Reading

ಬಾಲಿವುಡ್

‘Merry Christmas’Movie: ಕೊನೆಗೂ ʻಮೆರ‍್ರಿ ಕ್ರಿಸ್‌ಮಸ್‌ʼ ಸಿನಿಮಾ ಬಿಡುಗಡೆಗೆ ಡೇಟ್‌ ಫಿಕ್ಸ್‌

‘Merry Christmas’Movie: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಮತ್ತು ಕಾಲಿವುಡ್‌ ನಟ ವಿಜಯ್‌ ಸೇತುಪತಿ ಮೊದಲ ಬಾರಿ ಒಂದಾಗುತ್ತಿರುವ ʻಮೆರ‍್ರಿ ಕ್ರಿಸ್‌ಮಸ್‌ʼ ಡಿಸೆಂಬರ್‌ 8ರಂದು ತೆರೆಗೆ ಬರಲಿದೆ.

VISTARANEWS.COM


on

Edited by

merry christmas
Koo

ಮುಂಬೈ: ಕೆಲವು ಚಿತ್ರಗಳ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುವುದು ಸಹಜ. ಆದರೆ ಇಲ್ಲೊಂದು ಚಿತ್ರ 3 ಬಾರಿ ರಿಲೀಸ್‌ ದಿನಾಂಕವನ್ನು ಬದಲಾವಣೆ ಮಾಡಿಕೊಂಡಿದೆ. ಹೌದು, ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ʻಮೆರ‍್ರಿ ಕ್ರಿಸ್‌ಮಸ್‌ʼ (‘Merry Christmas’) ಮೂರನೇ ಬಾರಿ ಬಿಡುಗಡೆ ತಾರೀಕನ್ನು ಬದಲಾವಣೆ ಮಾಡಿ ಘೋಷಣೆ ಹೊರಡಿಸಿದೆ. ಬಾಲಿವುಡ್‌ ನಟಿ ಕತ್ರಿನಾ ಕೈಫ್‌ (Katrina Kaif) ಮತ್ತು ಕಾಲಿವುಡ್‌ ಸ್ಟಾರ್‌ ವಿಜಯ್‌ ಸೇತುಪತಿ (Vijay Sethupathi) ತೆರೆ ಮೇಲೆ ಒಂದಾಗುತ್ತಿರುವ ಈ ಚಿತ್ರ ಆರಂಭದಲ್ಲಿ ಡಿಸೆಂಬರ್‌ 23ರಂದು ತೆರೆಗೆ ಬರಲಿದೆ ಎನ್ನಲಾಗಿತ್ತು. ಬಳಿಕ ಡಿಸೆಂಬರ್‌ 15ಕ್ಕೆ ದಿನಾಂಕ ಬದಲಾಯಿಸಿಕೊಂಡಿತ್ತು. ಆದರೆ ಇದೀಗ ಅಂದೇ ಸಿದ್ಧಾರ್ಥ್‌ ಮಲ್ಹೋತ್ರಾ ನಟನೆಯ ‌ʼಯೋಧʼ ಕೂಡ ಬಿಡುಗಡೆಯಾಗುತ್ತಿರುವುದರಿಂದ ʻಮೆರ‍್ರಿ ಕ್ರಿಸ್‌ಮಸ್‌ʼ ಅನ್ನು ಒಂದು ವಾರ ಮೊದಲೇ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಹೊಸ ದಿನಾಂಕ ಯಾವುದು?

ʻಮೆರ‍್ರಿ ಕ್ರಿಸ್‌ಮಸ್‌ʼ ಚಿತ್ರಕ್ಕೆ ಮತ್ತೆ ಹೊಸ ಬಿಡುಗಡೆ ದಿನಾಂಕ ಸಿಕ್ಕಿದೆ. ಡಿಸೆಂಬರ್‌ 8ರಂದು ಸಿನಿಮಾ ತೆರೆ ಕಾಣಲಿದೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್‌ ಆದರ್ಶ್‌ ಎಕ್ಸ್‌ ಮೂಲಕ ಮಾಹಿತಿ ನೀಡಿದ್ದಾರೆ. ʼʼಮೊದಲ ಬಾರಿ ಕತ್ರಿನಾ ಕೈಫ್‌ ಮತ್ತು ವಿಜಯ್‌ ಸೇತುಪತಿ ಒಂದಾಗುತ್ತಿದ್ದು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆದಿದೆʼʼ ಎಂದು ತಿಳಿಸಿದ್ದಾರೆ.

ಈ ಹಿಂದೆ ʼಅಂಧಾಧುನ್‌ʼ, ʼಬದ್ಲಾಪುರ್‌ʼ ಮುಂತಾದ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಶ್ರೀರಾಮ್‌ ರಾಘವನ್‌ ʻಮೆರ‍್ರಿ ಕ್ರಿಸ್‌ಮಸ್‌ʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹಿಂದಿ ಮತ್ತು ತಮಿಳಿನ ವಿವಿಧ ಕಲಾವಿದರ ನಟನೆಯ ಜತೆಗೆ ಎರಡು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಕತ್ರಿನಾ ಕೈಫ್‌ ಮತ್ತು ಶ್ರೀರಾಮ್‌ ರಾಘವನ್‌ ಅವರ ಮೊದಲ ತಮಿಳು ಚಿತ್ರ ಇದಾಗಿರಲಿದೆ.

ಹಿಂದಿ ಚಿತ್ರದಲ್ಲಿ ಸಂಜಯ್‌ ಕಪೂರ್‌, ವಿನಯ್‌ ಪಾಠಕ್‌, ಪ್ರತಿಮಾ ಕಣ್ಣನ್‌ ಮತ್ತು ಟಿನ್ನು ಆನಂದ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ರಾಧಿಕಾ ಶರತ್‌ ಕುಮಾರ್‌, ಷನ್ಮುಖರಾಜ, ಕೆವಿನ್‌ ಜೈ ಬಾಬು ಮತ್ತು ರಾಜೇಶ್‌ ವಿಲಿಯಮ್ಸ್‌ ಈ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ಆಮ್ಟೆ ಮತ್ತು ಅಶ್ವಿನಿ ಕಲ್ಶೇಖರ್‌ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Katrina Kaif | ಕತ್ರಿನಾ ಕೈಫ್-ವಿಜಯ್ ಸೇತುಪತಿ ಕಾಂಬಿನೇಶನ್‌ ʻಮೆರ‍್ರಿ ಕ್ರಿಸ್‌ಮಸ್‌ʼ ಮುಂದಿನ ವರ್ಷ ತೆರೆಗೆ? ಟ್ವಿಸ್ಟ್‌ ಇರಲಿದೆ ಎಂದ ನಟಿ!

ಈ ಚಿತ್ರದ ಬಗ್ಗೆ ಮಾತನಾಡಿದ್ದ ಶ್ರೀರಾಮ್‌ ರಾಘವನ್‌, ‘ʻಮೆರ‍್ರಿ ಕ್ರಿಸ್‌ಮಸ್‌ʼ ಲವ್‌ ಸ್ಟೋರಿಯನ್ನೊಳಗೊಂಡಿದೆ. ಇದು ನನ್ನ ಹಿಂದಿನ ಚಿತ್ರ ‘ಅಂಧಾಧುನ್‌’ಗಿಂತ ಭಿನ್ನವಾಗಿರಲಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲಿದೆ ಎಂದಿದ್ದರು. ಪೋಸ್ಟರ್‌ ನೋಡಿದ ವೀಕ್ಷಕರು ಈ ಚಿತ್ರದಲ್ಲೂ ಸ್ವಲ್ಪ ಪ್ರಮಾಣದ ಕ್ರೈಂ ಅಂಶ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇದು ಕೊನೆಯ ಭಾಗದಲ್ಲಿ ಬರಲಿದೆಯಂತೆ. ʼʼವಿಜಯ್‌ ಸೇತುಪತಿ ಇರುವುದಿಂದ ತಮಿಳಿನಲ್ಲೂ ಚಿತ್ರ ಮಾಡುವ ಕುರಿತು ಚಿಂತನೆ ನಡೆಸಿದ್ದೆವುʼʼ ಎಂದು ಶ್ರೀರಾಂ ರಾಘವನ್‌ ಹೇಳಿದ್ದಾರೆ. ಎರಡೂ ಭಾಷೆಗಳಲ್ಲಿ ನಾಯಕ-ನಾಯಕಿಯಾಗಿ ವಿಜಯ್‌ ಸೇತುಪತಿ-ಕತ್ರಿನಾ ಕೈಫ್‌ ಇರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Continue Reading

ಬಾಲಿವುಡ್

Aamir Khan: ಕಂಬ್ಯಾಕ್‌ ಪ್ರಕಟಿಸಿದ ಆಮೀರ್‌ ಖಾನ್‌; ಆದರೆ ನಾಯಕನಾಗಿ ಅಲ್ಲ

Aamir Khan: ಸತತ ಸೋಲಿನಿಂ ಕಂಗೆಟ್ಟಿದ್ದ ಬಾಲಿವುಡ್‌ ಸೂಪರ್‌ ಸ್ಟಾರ್‌ ಹೊಸ ಚಿತ್ರ ಘೋಷಿಸಿದ್ದಾರೆ. ನಾಯಕನ ಬದಲಾಗಿ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಲಾಹೋರ್‌ 1947 ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.

VISTARANEWS.COM


on

Edited by

aamir khan
Koo

ಮುಂಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಆಮೀರ್‌ ಖಾನ್‌ (Aamir Khan) ಕೆಲವು ಸಮಯಗಳಿಂದ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ಅವರ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಹೊರಬಂದಿದ್ದು, ಹೊಸ ಚಿತ್ರದೊಂದಿಗೆ ಮರಳಿ ಬಂದಿದ್ದಾರೆ. ಆದರೆ ಈ ಬಾರಿ ಅವರು ನಾಯಕನಾಗಿ ಅಲ್ಲ ಬದಲಾಗಿ ನಿರ್ಮಾಪಕನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ ಕುಮಾರ್‌ ಸಂತೋಷಿ ನಿರ್ದೇಶನದ ಮುಂದಿನ ಚಿತ್ರವನ್ನು ಅಮೀರ್‌ ಖಾನ್‌ ನಿರ್ಮಿಸಲಿದ್ದು, ಚಿತ್ರಕ್ಕೆ ಲಾಹೋರ್‌ 1947 (Lahore 1947) ಟೈಟಲ್‌ ಇಡಲಾಗಿದೆ. ಗದರ್‌ 2 (Gadar 2) ಮೂಲಕ ತಮ್ಮ ಖದರ್‌ ತೋರಿದ ಸನ್ನಿ ಡಿಯೋಲ್‌ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಇಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿರುವ ಆಮೀರ್‌ ಖಾನ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼನಾನು ಮತ್ತು ಆಮೀರ್‌ ಖಾನ್‌ ಪ್ರೊಡಕ್ಷನ್ಸ್‌ (AKP) ಟೀಮ್‌ನ ಎಲ್ಲರೂ ನಮ್ಮ ಮುಂದಿನ ಪ್ರಾಜೆಕ್ಟ್‌ ಘೋಷಿಸಲು ಉತ್ಸುಕರಾಗಿದ್ದೇವೆ. ಸನ್ನಿ ಡಿಯೋಲ್‌ ನಾಯಕನಾಗಿ ನಟಿಸುತ್ತಿರುವ, ನನ್ನ ನೇಚ್ಚಿನ ನಿರ್ದೇಶಕ ರಾಜ್‌ ಕುಮಾರ್‌ ಸಂತೋಷಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರಕ್ಕೆ ಲಾಹೋರ್‌ 1947 ಶೀರ್ಷಿಕೆ ಇಟ್ಟಿದ್ದೇವೆ. ಪ್ರತಿಭಾವಂತರಾದ ಸನ್ನಿ ಡಿಯೋಲ್‌ ಮತ್ತು ರಾಜ್‌ ಕುಮಾರ್‌ ಸಂತೋಷಿ ಒಂದಾಗುತ್ತಿರುವುದು ನೋಡಲು ಖುಷಿ ಎನಿಸುತ್ತಿದೆ. ಈ ನಮ್ಮ ಪಯಣಕ್ಕೆ ನಿಮ್ಮ ಆಶೀರ್ವಾದ ಬೇಕುʼʼ ಎಂದು ಬರೆದುಕೊಂಡಿದ್ದಾರೆ.

ಖುಷಿ ಹಂಚಿಕೊಂಡ ಫ್ಯಾನ್ಸ್‌

ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ನಿರೀಕ್ಷೆ ಗರಿಗೆದರಿದೆ. ʼʼವಾವ್‌! ಇದು ಖಂಡಿತಾ ಬ್ಲಾಕ್‌ ಬ್ಲಸ್ಟರ್‌ ಚಿತ್ರವಾಗಲಿದೆ. ಇದಕ್ಕಾಗಿ ಕಾಯುತ್ತಿದ್ದೇವೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ʼʼಇದು ಉತ್ತಮ ವಿಚಾರ. ಇದು 1,000 ಕೋಟಿ ರೂ. ಕ್ಲಬ್‌ ಸೇರಲಿದೆʼʼ ಎಂದು ಭವಿಷ್ಯ ನುಡಿದಿದ್ದಾರೆ. ಕೆಲವರು ಇದು ಖುಷ್ವಂತ್‌ ಸಿಂಗ್‌ ಅವರ ಕಾದಂಬರಿ ʼಟ್ರೈನ್‌ ಟು ಪಾಕಿಸ್ತಾನ್‌ʼ ಆಧಾರದಲ್ಲಿ ತಯಾರಾಗಲಿದೆ ಎಂದು ಊಹಿಸಿದ್ದಾರೆ. ಆದರೆ ಸದ್ಯಕ್ಕೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

ಕಳೆದ ವರ್ಷ ತೆರೆಕಂಡ ಆಮೀರ್‌ ಖಾನ್‌ ಅಭಿನಯ್‌ ಬಹು ನಿರೀಕ್ಷಿತ ಚಿತ್ರ ʼಲಾಲ್‌ ಸಿಂಗ್‌ ಛಡ್ಡಾʼ ಬಾಕ್ಸ್‌ ಆಫೀಸ್‌ನಲ್ಲಿ ಸೋತು ಹೋಗಿತ್ತು. ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದಾಗ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಅದ್ವೈತ್‌ ಚಂದನ್‌ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕರೀನಾ ಕಪೂರ್‌ ನಟಿಸಿದ್ದರು. ಹಾಲಿವುಡ್‌ನ ಹಿಟ್‌ ಚಿತ್ರ ಟಾಮ್‌ ಹಾಂಕ್ಸ್‌ನ ಫಾರೆಸ್ಟ್‌ ಗಂಪ್‌ನ ರಿಮೇಕ್‌ ಇದಾಗಿತ್ತು. ಅದರ ಮೊದಲು 2018ರಲ್ಲಿ ತೆರೆಕಂಡ ʼಥಗ್ಸ್‌ ಆಫ್‌ ಹಿಂದೂಸ್ಥಾನ್‌ʼ ಸಿನಿಮಾವೂ ಫ್ಲಾಪ್‌ ಪಟ್ಟಿಗೆ ಸೇರಿತ್ತು. ವಿಜಯ್‌ ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಘಟಾನುಘಟಿಗಳಾದ ಅಮಿತಾಬ್‌ ಬಚ್ಚನ್‌, ಕತ್ರೀನಾ ಖೈಫ್‌ ಮತ್ತಿತರರು ನಟಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಇದನ್ನೂ ಓದಿ: Gadar 2: 24 ದಿನಗಳಲ್ಲಿ ಪಠಾಣ್‌, ಬಾಹುಬಲಿ 2 ದಾಖಲೆ ಮುರಿದ ಗದರ್ 2!

ಗೆಲುವಿನ ಯಶಸ್ಸಿನಲ್ಲಿ ಸನ್ನಿ ಡಿಯೋಲ್‌

ಇತ್ತ ಸನ್ನಿ ಡಿಯೋಲ್‌ ಸದ್ಯ ʼಗದರ್‌ 2ʼ ಸೂಪರ್‌ ಹಿಟ್‌ ಆದ ಖುಷಿಯಲ್ಲಿದ್ದಾರೆ. ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ 525 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್‌ ಮಾಡಿ ಸುದ್ದಿಯಲ್ಲಿದೆ. ಅಮೀರ್‌ ಖಾನ್‌ ಮತ್ತು ಸನ್ನಿ ಡಿಯೋಲ್‌ ಈ ಮೊದಲು ಒಟ್ಟಿಗೆ ಕೆಲಸ ಮಾಡಿಲ್ಲ. ಹೀಗಾಗಿ ಈ ಇಬ್ಬರು ದಿಗ್ಗಜರ ಸಮ್ಮಿಲನ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Continue Reading
Advertisement
rashmika
South Cinema8 mins ago

Rashmika Mandanna: ಮತ್ತೊಮ್ಮೆ ʼರಂಜಿತಮೆʼ, ʼಸಾಮಿʼ ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ!

Annu Rani
ಕ್ರೀಡೆ15 mins ago

Asian Games : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಅನ್ನುರಾಣಿ

Old Pension Scheme Madhu Bangarappa
ಕರ್ನಾಟಕ33 mins ago

Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ

No Rain Girl waiting For rain and holding Umbrella
ಉಡುಪಿ1 hour ago

karnataka weather forecast : ಮುಕ್ಕಾಲು ಜಿಲ್ಲೆಗೆ ಕೈಕೊಟ್ಟ ಮಳೆರಾಯ; ಮತ್ತೆ ಮುಂಗಾರು ದುರ್ಬಲ

Paris facing bed bugs and France government is trying to tackle crisis
ಪ್ರಮುಖ ಸುದ್ದಿ1 hour ago

Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ

Parul won gold medal in asian Games
ಕ್ರೀಡೆ1 hour ago

Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್​ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್​

Siddaramaiah felicitated at Shepherds India International Conference
ಕರ್ನಾಟಕ1 hour ago

Kuruba Conference: ಬೆಳಗಾವಿಯಲ್ಲಿ ಬೃಹತ್‌ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ

Shivamogga encounter Fake News
ಕರ್ನಾಟಕ1 hour ago

Shivamogga Violence : ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

boney kapoor
ಬಾಲಿವುಡ್1 hour ago

Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?

indvsned practice match
ಕ್ರಿಕೆಟ್2 hours ago

ICC World Cup 2023 : ಭಾರತ- ನೆದರ್ಲ್ಯಾಂಡ್ಸ್​ ​​​ ಅಭ್ಯಾಸ ಪಂದ್ಯವೂ ರದ್ದು

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ4 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ5 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ14 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ1 day ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌