Sudipto Sen: ದಿ ಕೇರಳ ಸ್ಟೋರಿ ನಿರ್ದೇಶಕರಿಂದ ಮತ್ತೊಂದು ಸಿನ್ಮಾ; ಇದು ಸತ್ಯಕಥೆಯಲ್ಲ, ಜೀವನಚರಿತ್ರೆ - Vistara News

ಸಿನಿಮಾ

Sudipto Sen: ದಿ ಕೇರಳ ಸ್ಟೋರಿ ನಿರ್ದೇಶಕರಿಂದ ಮತ್ತೊಂದು ಸಿನ್ಮಾ; ಇದು ಸತ್ಯಕಥೆಯಲ್ಲ, ಜೀವನಚರಿತ್ರೆ

ಕೇರಳ ಸ್ಟೋರಿ ಸಿನಿಮಾದ ನಿರ್ದೇಶಕ ಸುದೀಪ್ತೊ ಸೇನ್‌ (Sudipto Sen) ಅವರು ಮತ್ತೊಂದು ಜೀವನ ಚರಿತ್ರೆಯನ್ನು ಸಿನಿಮಾವಾಗಿಸಲು ಸಿದ್ಧವಾಗಿದ್ದಾರೆ. ಅದಕ್ಕಾಗಿ ನಾಯಕ ನಟನ ಹುಡುಕಾಟ ನಡೆಯುತ್ತಿದೆ.

VISTARANEWS.COM


on

Sudipto Sen new movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ನಿರ್ದೇಶಕ ಸುದೀಪ್ತೋ ಸೇನ್‌ (Sudipto Sen) ನಿರ್ದೇಶಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ಹಲವಾರು ಕಾರಣಗಳಿಂದ ವಿವಾದದ ಸುಳಿಗೆ ಸಿಲುಕಿಕೊಂಡಿದೆ. ಅದೇ ಕಾರಣಗಳಿಂದಾಗಿ ಸಿನಿಮಾ ಒಳ್ಳೆಯ ಗಳಿಕೆಯನ್ನೂ ಮಾಡಿಕೊಂಡಿದೆ. ಆ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸುದೀಪ್ತೋ ಅವರು ಮತ್ತೊಂದು ಸಿನಿಮಾ ಮಾಡುವುದಕ್ಕೆ ಅಣಿಯಾಗಿದ್ದಾರೆ. ಆದರೆ ಈ ಬಾರಿ ನೈಜ ಕಥೆಯಲ್ಲ, ಜೀವನ ಚರಿತ್ರೆಯನ್ನೇ ಮಾಡುತ್ತಿದ್ದಾರೆ.

ಭಾರತದ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದ ಸುಬ್ರತಾ ರಾಯ್‌ ಅವರು ಜೂನ್‌ 10ರಂದು ತಮ್ಮ 75ನೇ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ. ಆ ವೇಳೆಯೇ ಸುದೀಪ್ತೋ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಸುದೀಪ್ತೋ ಅವರು ಸುಬ್ರತಾ ರಾಯ್‌ ಅವರ ಜೀವನ ಕಥೆಯನ್ನೇ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: The Kerala Story : ಕಮಲ ಹಾಸನ್‌ಗೆ ಮಾತಿನ ತಿರುಗೇಟು ಕೊಟ್ಟ ನಿರ್ದೇಶಕ ಸುದೀಪ್ತೋ ಸೇನ್
ನಿರ್ಮಾಪಕರಾಗಿರುವ ಸಂದೀಪ್‌ ಸಿಂಗ್‌ ಮತ್ತು ಜಯಂತಿಲಾಲ್‌ ಗಡ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕರಾಗಿರುವ ಸುಬ್ರತಾ ಅವರ ಜೀವನ ಚರಿತ್ರೆಯುಳ್ಳ ಸಿನಿಮಾಕ್ಕೆ ಸಹಾಶ್ರೀ ಎಂದು ಹೆಸರಿಡಲಾಗಿದೆ.

ಸಿನಿಮಾ ಘೋಷಣೆಯಾಗುತ್ತಿದ್ದಂತೆಯೇ ಸಿನಿಮಾದಲ್ಲಿ ಸುಬ್ರತಾ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿವೆ. ಅದಕ್ಕೆಂದು ಸೂಪರ್‌ ಸ್ಟಾರ್‌ ನಟರನ್ನು ಪರಿಗಣಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಯಾರು ತೆರೆಯ ಮೇಲೆ ಸುಬ್ರತಾ ರಾಯ್‌ ಆಗಿ ಮಿಂಚಲಿದ್ದಾರೆ ಎನ್ನುವ ವಿಚಾರ ಇನ್ನು ಕೆಲವು ದಿನಗಳಲ್ಲಿ ಹೊರಬೀಳಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

Kanguva Budget: ಭಾರತೀಯ ಚಿತ್ರರಂಗದಲ್ಲಿ ಅತೀ ದೊಡ್ಡ ಬಜೆಟ್ ನ ಚಿತ್ರ ಕಂಗುವ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ. ತಮಿಳು ನಟ ಸೂರ್ಯ ಶಿವಕುಮಾರ್ ಹಾಗೂ ಬಾಲಿವುಡ್ ಸ್ಟಾರ್ ಬಾಬಿ ಡಿ’ಯೋಲ್‌ ಅಭಿನಯದ ಈ ಚಿತ್ರ ಈಗಾಗಲೇ ಸಿನಿ ರಸಿಕರನ್ನು ಮೋಡಿ ಮಾಡಿದೆ.

VISTARANEWS.COM


on

By

Kanguva Budget
Koo

ಚೆನ್ನೈ: ಹೊಸ ವರ್ಷದಂದು (new year) ಪೋಸ್ಟರ್ (poster) ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ (social media) ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಕಂಗುವ (Kanguva). ತಮಿಳು (tamil) ನಟ (actor) ಸೂರ್ಯ (surya), ದಿಶಾ ಪಟಾನಿ (disha patani) ಅಭಿನಯದ ಈ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಚಿತ್ರದ ಕುರಿತು ಹೊಸಹೊಸ ಮಾಹಿತಿಗಾಗಿ ವೀಕ್ಷಕರು ಕಾಯುವಂತೆ ಮಾಡಿದೆ.

ವರ್ಷದ ಅತಿ ದೊಡ್ಡ ಮತ್ತು ದುಬಾರಿ ಚಿತ್ರಗಳಲ್ಲಿ ಒಂದು ಎಂದು ಊಹಿಸಲಾಗಿರುವ ಕಂಗುವವನ್ನು (Kanguva Budget) ಸುಮಾರು 300 ಕೋಟಿಗೂ ಹೆಚ್ಚು ಬಜೆಟ್‌ ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಚಿತ್ರವೂ ಚಿತ್ರರಂಗದಲ್ಲಿ ಬಹು ದಾಖಲೆಗಳನ್ನು ಮುರಿಯಲಿದೆ ಎಂದು ಊಹಿಸಲಾಗಿದೆ.

ಕಂಗುವ ಬಗ್ಗೆ ಭಾರಿ ಚರ್ಚೆ

ಸ್ಟುಡಿಯೋ ಗ್ರೀನ್ ಮತ್ತು ಸೂರ್ಯ ಶಿವಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ “ಕಂಗುವ” ದ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಣ್ಣಿಗೆ ಹಬ್ಬದಂತಿರುವ ಚಿತ್ರದ ದೃಶ್ಯಗಳು, ಬೆರಗುಗೊಳಿಸುವ ವಿನ್ಯಾಸ, ವಿಶಿಷ್ಟ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಅದ್ಬುತ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ದೇಶದಾದ್ಯಂತ ಸಾಕಷ್ಟು ಮಂದಿ ಇದನ್ನು ನೋಡಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ


ಶಕ್ತಿಶಾಲಿ ನಾಯಕನಾಗಿ ಸೂರ್ಯ ಮತ್ತು ಖಳನಾಯಕನಾಗಿ ಬಾಬಿ ಡಿ’ಯೋಲ್‌ ಚಿತ್ರದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಟೀಸರ್ ಬಿಡುಗಡೆಯಾದಾಗಿನಿಂದ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ, ಎಲ್ಲರೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ದುಬಾರಿ ಚಿತ್ರ

ಕಂಗುವವರ ಮಹತ್ವಾಕಾಂಕ್ಷೆಯ ಕಥೆಯ ಹಂದರವನ್ನು ಒಳಗೊಂಡಿರುವ ಈ ಚಿತ್ರದ ಬಜೆಟ್ 350 ಕೋಟಿಗೂ ಮೀರಿದೆ ಎನ್ನಲಾಗಿದೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ.


ಚಿತ್ರದ ಪ್ಯಾನ್-ವರ್ಲ್ಡ್ ಪ್ರಾಜೆಕ್ಟ್ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಸುಂದರ ದೃಶ್ಯಗಳು, ಭವ್ಯವಾದ ಛಾಯಾಗ್ರಹಣ ಮತ್ತು ವಿಸ್ತಾರವಾದ ಈ ಚಿತ್ರ ಚಲನಚಿತ್ರ ನಿರ್ಮಾಪಕರು ಅದರ ಸೃಷ್ಟಿಗೆ ಸುರಿದ ಅಪಾರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ವೆಟ್ರಿ ಪಳನಿಸಾಮಿ ಅವರ ಅದ್ಭುತ ಛಾಯಾಗ್ರಹಣ ಮತ್ತು ಗಾಯಕ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರವು ಹೆಚ್ಚು ಪ್ರದರ್ಶನವನ್ನು ಕಾಣುವ ನಿರೀಕ್ಷೆಯಿದೆ.

ಸ್ಟುಡಿಯೋ ಗ್ರೀನ್‌ ಬೆಂಬಲದಿಂದ ನಿರ್ದೇಶಕ ಶಿವ ಅವರ ವಿಶಿಷ್ಟ ಕಲ್ಪನೆಗೆ ಜೀವ ತುಂಬಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದಿರುವ ಚಿತ್ರ ಸಿನಿರಸಿಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಪ್ರಮುಖರಾಗಿರುವ ಸ್ಟುಡಿಯೋ ಗ್ರೀನ್ ಮಾಲಕ ಕೆ.ಇ. ಜ್ಞಾನವೇಲ್ ರಾಜಾ ಅವರು ಕಳೆದ 16 ವರ್ಷಗಳಲ್ಲಿ ಸತತವಾಗಿ “ಸಿಂಗಂ” ಸರಣಿ, “ಪರುತಿ ವೀರನ್,” “ಸಿರುತೈ,” “ಕೊಂಬನ್,” “ನಾನ್ ಮಹನ್ ಅಲ್ಲಾ,” “ಮದ್ರಾಸ್,” “ಟೆಡ್ಡಿ,” ಮತ್ತು ತೀರಾ ಇತ್ತೀಚೆಗೆ ಬ್ಲಾಕ್ಬಸ್ಟರ್ ಹಿಟ್ ಗಳನ್ನು ನೀಡಿದ್ದಾರೆ.

“ಪಾತು ತಾಲಾ.” ಅವರು “ಬಾಹುಬಲಿ: ದಿ ಬಿಗಿನಿಂಗ್” ನಂತಹ ಪ್ರಮುಖ ಬ್ಲಾಕ್‌ಬಸ್ಟರ್‌ಗಳನ್ನು ವಿತರಿಸಿದ ಕಾರಣ ಅವರಿಂದಲೇ ಚಿತ್ರ ಬಿಡುಗಡೆ ಮಾಡಿಸಬೇಕು ಎಂದು ಹಲವಾರು ಮಂದಿ ನಿರ್ದೇಶಕರು ಕಾಯುವಂತಾಗಿದೆ.
ಸ್ಟುಡಿಯೋ ಗ್ರೀನ್ ಕಂಗುವಕ್ಕಾಗಿ ವಿಶ್ವದಾದ್ಯಂತ ಇರುವ ಪ್ರಮುಖ ವಿತರಕರೊಂದಿಗೆ ಕೈಜೋಡಿಸಿದೆ. 2024 ರ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Continue Reading

ಸಿನಿಮಾ

The Legend of Hanuman: ಹನುಮ ಜಯಂತಿಯಂದೇ ‘ದಿ ಲೆಜೆಂಡ್ ಆಫ್ ಹನುಮಾನ್’ ಸೀಸನ್ 4 ಘೋಷಣೆ

The Legend of Hanuman: ರಾಮ ಭಕ್ತ ಹನುಮಂತನ ಕಥೆಯನ್ನು ಎಲ್ಲರೂ ಕೇಳಿದ್ದಾರೆ. ಆದರೆ ಹೊಸ ಪೀಳಿಗೆಯನ್ನು ಆಕರ್ಷಿಸಲು ಬಂದಿರುವ ದಿ ಲೆಜೆಂಡ್ ಆಫ್ ಹನುಮಾನ್ ನ ನಾಲ್ಕನೇ ಸರಣಿ ಘೋಷಣೆಯಾಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

By

The Legend of Hanuman
Koo

ಹಿಂದೂಗಳ (hindu) ಆರಾಧ್ಯ ದೇವರಾದ ಶ್ರೀ ರಾಮನ (sriram) ಭಕ್ತ ಹನುಮಾನ್ ಜನ್ಮ ದಿನದ ಶುಭ ಸಂದರ್ಭದಲ್ಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney Plus Hotstar) ಜನಪ್ರಿಯ ಅನಿಮೇಟೆಡ್ ಸರಣಿ ‘ದಿ ಲೆಜೆಂಡ್ ಆಫ್ ಹನುಮಾನ್’ ನ (The Legend of Hanuman) ನಾಲ್ಕನೇ ಸರಣಿಯನ್ನು ಏಪ್ರಿಲ್ 23ರಂದು ಘೋಷಣೆ ಮಾಡಿದೆ. ಹನುಮಾನ್ ಜಯಂತಿಯ ದಿನದಂದೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಈ ಘೋಷಣೆ ಮಾಡಿರುವುದು ಬಹುತೇಕ ಹನುಮಾನ್ ಭಕ್ತರಲ್ಲಿ ಸಂತಸ ತಂದಿದೆ.

ನಾಲ್ಕನೇ ಸರಣಿಯ ಕಥಾವಸ್ತುವಿನ ಕುರಿತಾದ ವಿವರಗಳನ್ನೂ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಅಭಿಮಾನಿಗಳು ಹನುಮಂತನ ಶೌರ್ಯ, ಭಕ್ತಿ ಮತ್ತು ಅಚಲ ನಂಬಿಕೆಯ ಹೆಚ್ಚಿನ ಕಥೆಗಳನ್ನು ಇದರಲ್ಲಿ ನಿರೀಕ್ಷಿಸಬಹುದು. ಹಿಂದಿನ ಸರಣಿಯಲ್ಲಿ ಹನುಮಂತನ ಆರಂಭಿಕ ಜೀವನ, ಭಗವಾನ್ ರಾಮನೊಂದಿಗಿನ ಅವನ ಭೇಟಿ, ಲಂಕಾಕ್ಕೆ ಮಹಾಕಾವ್ಯದ ಪ್ರಯಾಣ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತಿಮ ಯುದ್ಧವನ್ನು ವಿವರಿಸಲಾಗಿತ್ತು.

ಡಿಸ್ನಿ+ ಹಾಟ್‌ಸ್ಟಾರ್‌ಗೆ ‘ದಿ ಲೆಜೆಂಡ್ ಆಫ್ ಹನುಮಾನ್’ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದೆ. ಕಾರ್ಯಕ್ರಮದ ಬೆರಗುಗೊಳಿಸುವ ಅನಿಮೇಷನ್, ಆಕರ್ಷಕ ಕಥೆ ಹೇಳುವಿಕೆ ಮತ್ತು ಹಿಂದೂ ಪುರಾಣಗಳ ಚಿತ್ರಣವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

‘ದಿ ಲೆಜೆಂಡ್ ಆಫ್ ಹನುಮಾನ್’ ನ ಹೊಸ ಸೀಸನ್‌ನಲ್ಲಿ ನಟ ಮತ್ತು ರಾವಣನ ಧ್ವನಿ, ಶರದ್ ಕೇಳ್ಕರ್ ಅವರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿ ಲೆಜೆಂಡ್ ಆಫ್ ಹನುಮಾನ್ ನ ಹೊಸ ಸೀಸನ್‌ನಲ್ಲಿ ರಾವಣ ರಾಜನಿಗೆ ಧ್ವನಿ ನೀಡುವುದು ನನಗೆ ಆಳವಾದ ವೈಯಕ್ತಿಕ ಪ್ರಯಾಣವಾಗಿದೆ. ಒಂದು ಪೌರಾಣಿಕ ಸಿದ್ಧಾಂತವನ್ನು ಆಧರಿಸಿ ಮತ್ತು ಇದರ ಮೂಲಕ ನಾನು ಅನೇಕ ಲೇಯರಿಂಗ್ ಕಥೆಗಳನ್ನು ಕಂಡುಹಿಡಿದಿದ್ದೇನೆ. ಇದರಿಂದ ನನಗೆ ಹೆಚ್ಚು ತಿಳಿಯಲು ಸಾಧ್ಯವಾಯಿತು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ದಿ ಲೆಜೆಂಡ್ ಆಫ್ ಹನುಮಾನ್‌ನ ಹೊಸ ಸರಣಿ ಇನ್ನಷ್ಟು ಶ್ರೇಷ್ಠವಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.


ಸಾಹಸಮಯ, ಭಕ್ತಿಪ್ರಧಾನವಾದ ಹನುಮಂತನ ಜೀವನ ಕಥೆಯನ್ನು ಹೇಳುವ ಮೂರು ಸರಣಿಯನ್ನು ಇಷ್ಟಪಟ್ಟಿರುವವರು ನಾಲ್ಕನೇ ಸರಣಿಗೆ ಕುತೂಹಲದಿಂದ ಕಾಯುವಂತಾಗಿದೆ.

ರಾವಣನ ದುಷ್ಟತನವನ್ನು ಎದುರಿಸಲು, ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವನ ದಾರಿಯಲ್ಲಿ ಎದುರಾಗುವ ವಿನಮ್ರ ರಾಮ ಭಕ್ತನಾದ ವಾನರನು ತನ್ನ ಭಕ್ತಿಯಿಂದಾಗಿಯೇ ದೇವರಾಗಿರುವ ಕಥೆಯನ್ನು ಇದು ಒಳಗೊಂಡಿದೆ. ಗ್ರಾಫಿಕ್ ಇಂಡಿಯಾ ರಚಿಸಿರುವ ಈ ಸರಣಿಗೆ ಶರದ್ ದೇವರಾಜನ್, ಜೀವನ್ ಜೆ. ಕಾಂಗ್, ಶರದ್ ಕೇಳ್ಕರ್ ಮತ್ತು ದಮನ್ ಬಗ್ಗನ್ ಧ್ವನಿ ನೀಡಿದ್ದಾರೆ.

Continue Reading

ಸಿನಿಮಾ

Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ

Uttarakaanda Movie: ಕನ್ನಡದ ಬಹು ನಿರೀಕ್ಷಿತ ಚಿತ್ರ ʼಉತ್ತರಕಾಂಡʼದ ಶೂಟಿಂಗ್‌ ವಿಜಪುರದಲ್ಲಿ ಭರದಿಂದ ನಡೆಯುತ್ತಿದೆ. ಬಹು ತಾರಾಗಣದ ಮೂಲಕ ಗಮನ ಸೆಳೆದ ಚಿತ್ರಕ್ಕೆ ಬಹುಭಾಷಾ ನಟಿ ಐಶ್ವರ್ಯ ರಾಜೇಶ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ನಾಯಕಿಯಾಗಿ ಮೋಹಕ ತಾರೆ ರಮ್ಯಾ ಆಯ್ಕೆಯಾಗಿದ್ದರು. ಕೆಲವು ದಿನಗಳ ಹಿಂದೆ ಅವರು ಸಿನಿಮಾದಿಂದ ಹೊರ ನಡೆದಿದ್ದರು. ಹೀಗಾಗಿ ನಾಯಕಿ ಯಾರಾಗುತ್ತಾರೆ ಎನ್ನುವ ಕುತೂಹಲ ಮೂಡಿತ್ತು. ಕೊನೆಗೂ ಚಿತ್ರತಂಡ ಈ ಕುತೂಹಲಕ್ಕೆ ಬ್ರೇಕ್‌ ಹಾಕಿದ್ದು, ಪ್ರತಿಭಾನ್ವಿತ ನಟಿಯನ್ನು ಸ್ಯಾಂಡಲ್‌ವುಡ್‌ಗೆ ಕರೆ ತಂದಿದೆ. ಐಶ್ವರ್ಯ ಅವರು ದುರ್ಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Uttarakaanda Movie
Koo

ಬೆಂಗಳೂರು: ಈ ವರ್ಷದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರ ʼಉತ್ತರಕಾಂಡʼ (Uttarakaanda Movie). ಈಗಾಗಲೇ ಶೂಟಿಂಗ್‌ ಆರಂಭಿಸಿರುವ ಈ ಚಿತ್ರ ಬಹು ತಾರಾಗಣದ ಮೂಲಕ ಸದ್ದು ಮಾಡುತ್ತಿದೆ. ಡಾ. ಶಿವರಾಜ್ ಕುಮಾರ್ ಮತ್ತು ಡಾಲಿ‌ ಧನಂಜಯ ಅಭಿನಯದ ಈ ಚಿತ್ರಕ್ಕೆ ಹಿಂದೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌, ಮೋಹಕ ತಾರೆ ರಮ್ಯಾ (Ramya) ಆಯ್ಕೆಯಾಗಿದ್ದರು. ಚಿತ್ರದ ಮುಹೂರ್ತದಲ್ಲಿಯೂ ಪಾಲ್ಗೊಂಡಿದ್ದರು. ಆದರೆ ಕೆಲವು ದಿನಗಳ ಹಿಂದೆ ಸಿನಿಮಾದಿಂದ ಹೊರ ನಡೆದಿದ್ದರು. ಇದೀಗ ಅವರ ಜಾಗಕ್ಕೆ ಜನಪ್ರಿಯ ನಟಿಯನ್ನು ಚಿತ್ರತಂಡ ಕರೆ ತಂದಿದೆ. ದಕ್ಷಿಣ ಭಾರತದ ಖ್ಯಾತ ನಟಿ, ಕಾಲಿವುಡ್‌ನ ಐಶ್ವರ್ಯ ರಾಜೇಶ್ (Aishwarya Rajesh) ‘ಉತ್ತರಕಾಂಡ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ನಟಿ ಐಶ್ವರ್ಯ ಈ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ ʼದುರ್ಗಿʼ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪೋಸ್ಟರ್‌ ಅನ್ನೂ ಇದೀಗ ರಿಲೀಸ್‌ ಮಾಡಲಾಗಿದ್ದು ಗಮನ ಸೆಳೆಯುತ್ತಿದೆ. ತಮಿಳುನಾಡು ರಾಜ್ಯ ಚಲನಚಿತ್ರ ಪುರಸ್ಕೃತ ಐಶ್ವರ್ಯ ತಮಿಳಿನ ಜತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ನಟಿಸಿದ್ದಾರೆ. ಇದೀಗ ಕನ್ನಡಕ್ಕೂ ಕಾಲಿಟ್ಟು ಪಂಚಭಾಷಾ ತಾರೆ ಎನಿಸಿಕೊಂಡಿದ್ದಾರೆ.

ಬಾಲನಟಿಯಾಗಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಐಶ್ವರ್ಯ 2010ರಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ದಕ್ಷಿಣ ಭಾರತದ ʼದಿ ಗ್ರೇಟ್ ಇಂಡಿಯನ್ ಕಿಚನ್ʼ, ʼದಿ ವರ್ಲ್ಡ್ ಫೇಮಸ್ ಲವರ್ʼ, ʼವಡಾ‌ ಚೆನ್ನೈʼ, ʼಕಾಕ ಮುಟ್ಟೈʼ (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ʼಜೋಮೋಂಟೆ ಸುವಿಶೇಷಂಗಳʼ, ʼಟಕ್ ಜಗದೀಶ್ʼ, ʼವಾನಂ ಕೊಟ್ಟಾಟುಂʼ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ 2017ರಲ್ಲಿ ತೆರೆಕಂಡ ಬಾಲಿವುಡ್‌ನ ʼಡ್ಯಾಡಿʼ ಸಿನಿಮಾದಲ್ಲಿಯೂ ಅವರು ಅಭಿನಯಿಸಿದ್ದಾರೆ. ʼಕಾಕ ಮುಟ್ಟೈʼ ಸಿನಿಮಾದಲ್ಲಿನ ಅಭಿನಯಕ್ಕೆ ತಮಿಳುನಾಡಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ವೆಬ್‌ ಸೀರಿಸ್‌ನಲ್ಲಿಯೂ ಅಭಿನಯಿಸಿರುವ ಅವರು ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ʼಉತ್ತರಕಾಂಡʼ ಸಿನಿಮಾದಲ್ಲಿನ ಅವರ ಪಾತ್ರದ ಬಗ್ಗೆ ನಿರೀಕ್ಷೆ ಗರಿಗೆದರಿದೆ.

ಪ್ರಸ್ತುತ ಮೊದಲ ಹಂತದ ಚಿತ್ರೀಕರಣ ವಿಜಯಪುರದಲ್ಲಿ ನಡೆಯುತ್ತಿದ್ದು, ಈ ಆ್ಯಕ್ಷನ್‌ ಡ್ರಾಮಾಗೆ ರೋಹಿತ್ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ.ರಾಜ್ ಕೆ.ಆರ್.ಜಿ. ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: Uttarakaanda Movie: ‘ಬಂಡೆ ಕಾಕಾ’ ನಾಗಿ ‘ಉತ್ತರಕಾಂಡ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಂಗಾಯಣ ರಘು

ಬಹು ತಾರಾಗಣ

ಮೊದಲೇ ಹೇಳಿದಂತೆ ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ಮಲಯಾಳಂ ನಟ ವಿಜಯ್ ಬಾಬು, ಕನ್ನಡದ ರಂಗಾಯಣ ರಘು, ಚೈತ್ರ ಜೆ. ಆಚಾರ್, ಉಮಾಶ್ರೀ, ಯೋಗರಾಜ್ ಭಟ್, ದಿಗಂತ್ ಮಂಚಾಲೆ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಬಹು ದೊಡ್ಡ ತಾರಾಬಳಗವನ್ನು ಚಿತ್ರ ಹೊಂದಿದೆ. ಬಾಲಿವುಡ್ ಗಾಯಕ ಹಾಗೂ ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್‌ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡುತ್ತಿದ್ದಾರೆ.

Continue Reading

ಕ್ರಿಕೆಟ್

IPL 2024: ಸನ್​ರೈಸರ್ಸ್​ ತಂಡದ ಆಟಗಾರರನ್ನು ಭೇಟಿ ಮಾಡಿದ ನಟ ಮಹೇಶ್‌ ಬಾಬು

Mahesh Babu: ಸದ್ಯ ಹೈದರಾಬಾದ್​ ಆಡಿದ 7 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಏಪ್ರಿಲ್​ 25 ರಂದು ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ವಿರುದ್ಧ 287 ರನ್​ ಬಾರಿಸಿ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ತಂಡವೆಂಬ ದಾಖಲೆ ನಿರ್ಮಿಸಿತ್ತು.

VISTARANEWS.COM


on

Mahesh Babu
Koo

ಹೈದರಾಬಾದ್​: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಪ್ರಚಂಡ ಬ್ಯಾಟಿಂಗ್​ ಮೂಲಕ ಪಂದ್ಯದಿಂದ ಪಂದ್ಯಕ್ಕೆ ಬೃಹತ್​ ಮೊತ್ತ ಪೇರಿಸಿ ದಾಖಲೆ ಬರೆಯುತ್ತಿರುವ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡದ ಆಟಗಾರರು ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಇದೇ ವೇಳೆ ​ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು(Mahesh Babu) ಅವರು ಆಟಗಾರರನ್ನು ಭೇಟಿಯಾಗಿದ್ದಾರೆ. ಈ ಫೋಟೊವನ್ನು ಫ್ರಾಂಚೈಸಿ ತನ್ನ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

ಹೈದರಾಬಾದ್​ ತಂಡದ ನಾಯಕ ಪ್ಯಾಟ್​ ಕಮಿನ್ಸ್​, ಕನ್ನಡಿಗ ಮಯಾಂಕ್​ ಅಗರ್ವಾಲ್​, ರಾಹುಲ್​ ತ್ರಿಪಾಠಿ, ಅಭಿಷೇಕ್​ ಶರ್ಮ ಸೇರಿ ಕೆಲ ಆಟಗಾರರು ನೆಚ್ಚಿನ ನಟನೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಜತೆಗೆ ಕೆಲ ಕಾಲ ಕುಶಲೋಪರಿ ನಡೆಸಿದ್ದಾರೆ.


ಸದ್ಯ ಹೈದರಾಬಾದ್​ ಆಡಿದ 7 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಏಪ್ರಿಲ್​ 25 ರಂದು ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ವಿರುದ್ಧ 287 ರನ್​ ಬಾರಿಸಿ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ತಂಡವೆಂಬ ದಾಖಲೆ ನಿರ್ಮಿಸಿತ್ತು. ಇದಕ್ಕೂ ಮುನ್ನ ಮುಂಬೈ ವಿರುದ್ಧ 277 ರನ್​ ಬಾರಿಸಿತ್ತು. ಒಟ್ಟು ಈ ಬಾರಿಯ ಐಪಿಎಲ್​ನಲ್ಲಿ ಮೂರು ಬಾರಿ 200 ಪ್ಲಸ್​ ಮೊತ್ತ ಪೇರಿಸಿದ ಸಾಧನೆ ಹೈದರಾಬಾದ್​ ತಂಡದ್ದು.

ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್

ಜೈಪುರ: ರಾಜಸ್ಥಾನ್​ ರಾಯಲ್ಸ್​(Rajasthan Royals) ತಂಡದ ಗೆಲುವಿನ ನಾಗಲೋಟ ಮತ್ತೆ ಮುಂದುವರಿದಿದೆ. ಸೋಮವಾರ ರಾತ್ರಿ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians)​ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿ ಅಂಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜತೆಗೆ 14 ಅಂಕದೊಂದಿಗೆ ಬಹುತೇಕ ಪ್ಲೇ ಆಫ್​ ಟಿಕೆಟ್​ ಖಚಿತ ಪಡಿಸಿಕೊಂಡಿದೆ. ಇನ್ನೊಂದು ಗೆಲುವು ಸಾಧಿಸಿದರೆ ಇದು ಅಧಿಕೃತಗೊಳ್ಳಲಿದೆ. ಸೋಲು ಕಂಡ ಮುಂಬೈ ತಂಡದ ಪ್ಲೇ ಆಫ್​ ಹಾದಿ ಕಠಿಣಗೊಂಡಿದೆ.

ಇದನ್ನೂ ಓದಿ IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​87114 (+0.698)
ಕೆಕೆಆರ್​​75210 (+1.206)
ಹೈದರಾಬಾದ್​​75210 (+0.914)
ಚೆನ್ನೈ ಸೂಪರ್​ ಕಿಂಗ್ಸ್​​​​7428 (+0.726)
ಲಕ್ನೋ7438 (+0.123)
ಗುಜರಾತ್8448 (-1.055)
ಮುಂಬೈ8356 (-0.227)
ಡೆಲ್ಲಿ8356 (-0.477)
ಪಂಜಾಬ್​8264 (-0.292)
ಆರ್​ಸಿಬಿ8172 (-1.046)
Continue Reading
Advertisement
Dina Bhavishya
ಭವಿಷ್ಯ3 mins ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Bengaluru karaga
ಕರ್ನಾಟಕ3 hours ago

Bengaluru Karaga: ಐತಿಹಾಸಿಕ ಬೆಂಗಳೂರು ಕರಗಕ್ಕೆ ಅದ್ಧೂರಿ ಚಾಲನೆ; ಉತ್ಸವ ವೀಕ್ಷಿಸಲು ಹರಿದು ಬಂದ ಜನಸಾಗರ

vistara Editorial ವಿಸ್ತಾರ ಸಂಪಾದಕೀಯ
ದೇಶ5 hours ago

ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ಕ್ಷೇತ್ರದಲ್ಲಿ ಬೆಳವಣಿಗೆ ನಮ್ಮ ಹೆಗ್ಗಳಿಕೆ

IPL 2024
ಪ್ರಮುಖ ಸುದ್ದಿ5 hours ago

IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

Voters' Pledge
ಬೆಂಗಳೂರು5 hours ago

Voters Pledge: ಸಹಕಾರ ಸಂಘಗಳ ಕಾರ್ಯದರ್ಶಿಗಳು, ಸಿಬ್ಬಂದಿಗೆ ಮತದಾನ ಪ್ರತಿಜ್ಞಾವಿಧಿ ಬೋಧನೆ

Lok Sabha Election 2024
Lok Sabha Election 20246 hours ago

Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

DCM DK Shivakumar Election campaign for Bangalore Rural Lok Sabha Constituency Congress candidate DK Suresh In Ramanagara
ರಾಮನಗರ6 hours ago

Lok Sabha Election 2024: ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ತಾರತಮ್ಯ ಧೋರಣೆ: ಡಿ.ಕೆ. ಸುರೇಶ್

Priyanka Gandhi
ಕರ್ನಾಟಕ6 hours ago

Priyanka Gandhi: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ?; ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

Lok Sabha Election 2024
Lok Sabha Election 20247 hours ago

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Amit Shah
ಕರ್ನಾಟಕ7 hours ago

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 mins ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌