Taraka Ratna: ತಾರಕ ರತ್ನ ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲ: ಸಚಿವ ಸುಧಾಕರ್‌ - Vistara News

ಟಾಲಿವುಡ್

Taraka Ratna: ತಾರಕ ರತ್ನ ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲ: ಸಚಿವ ಸುಧಾಕರ್‌

ಜ್ಯೂ ಎನ್‌ಟಿಆರ್‌, ಕಲ್ಯಾಣ್ ರಾಮ್, ಸಚಿವ ಸುಧಾಕರ್ ಹಾಗೂ ಹ್ಯಾಟ್ರಿಕ್‌ ಹೀರೊ ಶಿವರಾಜಕುಮಾರ್ ಆಸ್ಪತ್ರೆಗೆ ಧಾವಿಸಿ ತಾರಕ ರತ್ನ ಆರೋಗ್ಯದ ಬಗ್ಗೆ ವೈದ್ಯರ ಜತೆ ಚರ್ಚಿಸಿದರು.

VISTARANEWS.COM


on

Taraka Ratna is not completely out of danger: Minister Sudhakar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ನಂದಮೂರಿ ತಾರಕ ರತ್ನ (Taraka Ratna) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಜ್ಯೂ ಎನ್‌ಟಿಆರ್‌, ಕಲ್ಯಾಣ್ ರಾಮ್, ಸಚಿವ ಸುಧಾಕರ್ ಹಾಗೂ ಹ್ಯಾಟ್ರಿಕ್‌ ಹೀರೊ ಶಿವರಾಜಕುಮಾರ್ ಆಸ್ಪತ್ರೆಗೆ ಧಾವಿಸಿ ತಾರಕ ರತ್ನ ಆರೋಗ್ಯದ ಬಗ್ಗೆ ವೈದ್ಯರ ಜತೆ ಚರ್ಚಿಸಿದರು. ಇದೆ ವೇಳೆ ಸಚಿವ ಸುಧಾಕರ್‌ ಮಾತನಾಡಿ ʻʻತಾರಕ ಅವರು ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲʼʼ ಎಂದು ಹೇಳಿಕೆ ನೀಡಿದರು.

ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾತನಾಡಿ ʻʻತೀವ್ರ ಹೃದಯಾಘಾತದಿಂದ ಅಸ್ವಸ್ಥರಾದ ತಾರಕ್ ಅವರಿಗೆ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಗ್ರೀನ್ ಕಾರಿಡಾರ್ ಮೂಲಕ ಆಸ್ಪತ್ರೆಗೆ ಶಿಫ್ಟ್‌ ಮಾಡಿಸಲಾಗಿದೆ. ನಾರಾಯಣ ಹೃದಯಾಲದಲ್ಲಿ ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ನ್ಯೂರಾಲಜಿ, ಕಾರ್ಡಿಯಾಲಜಿ ಸೇರಿದಂತೆ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿಮಾನ್ಸ್ ಆಸ್ಪತ್ರೆ ಮೆದುಳಿನ ತಜ್ಞ ವೈದ್ಯರ ತಂಡದಿಂದಲು ಸಹ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಸದ್ಯ ತಾರಕ್ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ. ಆದರೆ ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲ. ಆದರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಇದು ನಮಗೆ ಪಾಸಿಟಿವ್ ಅಂಶವಾಗಿದೆ. ಹಾಗಾಗಿ ತಾರಕ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸೋಣʼʼಎಂದರು.

ಇದನ್ನೂ ಓದಿ: Taraka Ratna: ತಾರಕರತ್ನ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡ ಜ್ಯೂ. ಎನ್‌ಟಿಆರ್‌, ಶಿವರಾಜ್‌ಕುಮಾರ್‌

ಜನವರಿ 27ರ ಶುಕ್ರವಾರ ತಾರಕ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಸಂಜೆ ನಂದಮೂರಿ ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಆರೋಗ್ಯ ತೀರಾ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದೆ. ಈಗಾಗಲೇ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಬೆಂಗಳೂರಿಗೆ ಬಂದು, ನಾರಾಯಣ ಹೃದಯಾಲಯಕ್ಕೆ ತೆರಳಿ ನಂದಮೂರಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: Taraka Ratna: ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಹೆಣ್ಣು ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ; ಅಭಿನಂದನೆಗಳ ಮಹಾಪೂರ

VISTARANEWS.COM


on

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಅಟ್ಲಿ ಅವರ ಪತ್ನಿ ಪ್ರಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಟ್ಲಿ ಹಾಗೂ ಅವರ ಪತ್ನಿ ಪ್ರಿಯಾ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಈ ದಂಪತಿ ಎರಡನೇ ಬಾರಿಗೆ ಪೋಷಕರಾಗಿದ್ದು, ಮುದ್ದಾದ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರು ತಮ್ಮ ಎರಡನೇ ಪ್ರೆಗ್ನೆನ್ಸಿ ಸುದ್ದಿಯನ್ನು ಹಂಚಿಕೊಂಡ ಮರುದಿನವೇ ಅಟ್ಲೀ ಕೂಡ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರಿಯಾ ಅಟ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಟ್ಲಿ ಮತ್ತು ಪ್ರಿಯಾ, ತಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ಪೋಸ್ಟ್‌ ಗೆ ‘ಧನ್ಯತೆಯ ಭಾವ ಮೂಡಿದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ತಮ್ಮ ಮೊದಲ ಪುತ್ರ ಮೀರ್ ಈಗ ದೊಡ್ಡ ಅಣ್ಣನ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿರುವ ಮುದ್ದಾದ ಪೋಸ್ಟರ್ ಒಂದನ್ನೂ ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ.
ಅಟ್ಲಿ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇಡೀ ದೇಶದ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಅಟ್ಲಿ ಮತ್ತು ಪ್ರಿಯಾ ಹಲವು ವರ್ಷಗಳ ಕಾಲ ಪ್ರೀತಿಸಿ 2014ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಎಂಟು ವರ್ಷಗಳ ನಂತರ 2023ರ ಜನವರಿ 31ರಂದು ದಂಪತಿಗೆ ಮೊದಲ ಪುತ್ರ ಮೀರ್ ಜನಿಸಿದ್ದ. ಈಗ ಎರಡನೇ ಮಗುವಿನ ಆಗಮನವಾಗಿದೆ.
ಚಿತ್ರರಂಗದಲ್ಲಿಯೂ ಅಟ್ಲಿ ಅವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಈಗ ಅವರು ‘ರಾಕಾ’ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

Continue Reading

ಸಿನಿಮಾ

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ ಬರಲಿದೆ.

VISTARANEWS.COM


on

Action Prince Dhruva Sarja much awaited film Martin to hit the screens on October 11

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ, ಪ್ಯಾನ್‌ ವರ್ಲ್ಡ್‌ ಸಿನಿಮಾ ಮಾರ್ಟಿನ್‌ ರಿಲೀಸ್‌ಗೆ ಕೌಂಟ್‌ ಡೌನ್‌ ಶುರುವಾಗಿದೆ. ಅಕ್ಟೋಬರ್ 11 ರಂದು ಭಾರತದಾದ್ಯಂತ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಮಾರ್ಟಿನ್‌ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

Action Prince Dhruva Sarjas much-awaited film 'Martin' to hit the screens on October 11

ಭರ್ಜರಿ ಬರ್ತ್‌ ಡೇ ಸೆಲೆಬ್ರೆಷನ್‌ಗೆ ಫ್ಯಾನ್ಸ್‌ ಸಜ್ಜು

ಮಾರ್ಟಿನ್‌ ಸಿನಿಮಾಗೂ ಮೊದಲೇ ಧ್ರುವ ಸರ್ಜಾರ ಬರ್ತ್ ಡೇ ಸೆಲೆಬ್ರೆಷನ್‌‌ಗೆ ಫ್ಯಾನ್ಸ್ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಆಟಂ ಬಾಂಬ್ ಧ್ರುವ ಸರ್ಜಾ ನಟನೆಯಲ್ಲಿ ರಿಲೀಸ್ ಆಗಿರುವುದುದು ನಾಲ್ಕೇ ಸಿನಿಮಾವಾದರೂ, 40 ಸಿನಿಮಾ ಮಾಡಿರುವಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅಭಿಮಾನಿಗಳನ್ನು ವಿಐಪಿ ಅಂತೇಳು ಧ್ರುವ, ಅವರಿಗಾಗಿಯೇ ಒಂದು ದಿನ ಮೀಸಲಿಟ್ಟಿದ್ದಾರೆ. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿಯಾಗುವ ಬಹದ್ಧೂರ್, ಈ ಬಾರಿ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಇರುವ ಜಾಗಕ್ಕೆ ಭೇಟಿ ಕೊಡುತ್ತಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ಧ್ರುವ ಮನೆಯ ರಸ್ತೆಯು, ಅಭಿಮಾನಿಗಳಿಂದ ತುಂಬಿ ಹೋಗಿತ್ತು.

Action Prince Dhruva Sarjas much-awaited film 'Martin' to hit the screens on October 11

ಧ್ರುವ ಹುಟ್ಟುಹಬ್ಬಕ್ಕೂ ಮೊದಲು ಮಾರ್ಟಿನ್ ಚಿತ್ರತಂಡ ಅಕ್ಟೋಬರ್ 4ರಂದು ಹೈದರಾಬಾದ್‌ನಲ್ಲಿ ಧ್ರುವ ಅವರ ಇಂಟ್ರೋಡಕ್ಷನ್ ಸಾಂಗ್ ರಿಲೀಸ್ ಮಾಡುತ್ತಿದೆ. ಅಕ್ಟೋಬರ್ 5ರಂದು ಹುಬ್ಬಳಿಯಲ್ಲಿ ಧ್ರುವ ತಮ್ಮ ಫ್ಯಾನ್ಸ್‌ನ ಮೀಟ್ ಮಾಡಲಿದ್ದಾರೆ. ತಮ್ಮ ಹುಟ್ಟುಹಬ್ಬದಂದು ದಾವಣಗೆರೆಯಲ್ಲಿ ಮಾರ್ಟಿನ್ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿದ್ದಾರೆ. ಒಟ್ಟಾರೆ ಉತ್ತರ ಕರ್ನಾಟಕ ಜನರ ಜತೆ ಧ್ರುವ ಈ ಬಾರಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ಮುಂಬೈನಲ್ಲಿ ಸಾಂಗ್‌ ರಿಲೀಸ್‌

ಹುಟ್ಟುಹಬ್ಬದ ನಂತರ ಅಕ್ಟೋಬರ್ 8ರಂದು ಮುಂಬೈನಲ್ಲಿ ಮಾರ್ಟಿನ್ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗುತ್ತಿದೆ. ಅಂದ‌ ಹಾಗೆ ಮಾರ್ಟಿನ್ ಒಂದಲ್ಲ ಒಂದು ಕಾರಣಕ್ಕೆ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.ಇದೇ ತಿಂಗಳ 11ರಂದು ಮಾರ್ಟಿನ್ ಆಲ್ ಓವರ್ ಇಂಡಿಯಾ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಅತಿ ಹೆಚ್ಚು ಬಜೆಟ್‌ನ ಮಾರ್ಟಿನ್‌, ಶೇಖಡಾ 80ರಷ್ಟು ಚಿತ್ರವನ್ನು ಸೆಟ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಹಾಲಿವುಡ್‌ನ ಫಾಸ್ಟ್ ಆ್ಯಂಡ್ ಪ್ಯೂರಿಯಸ್ ಚಿತ್ರ ನೋಡಿದ ಅನುಭವ ಆಗುತ್ತೆ ಎನ್ನುವ ಮಾತನ್ನು ಸಿನಿಮಾ ತಂಡ ಹೇಳಿಕೊಂಡಿದೆ.

Action Prince Dhruva Sarjas much-awaited film 'Martin' to hit the screens on October 11

ಮಾರ್ಟಿನ್ ತಂಡದಿಂದ ನಿರ್ದೇಶಕರೇ ಔಟ್!

ಮಾರ್ಟಿನ್ ಗೆಲ್ಲುತ್ತೆ ಎಂಬ ಭರವಸೆ ಕೂಡ ಗಾಂಧಿನಗರಕ್ಕಿದೆ. ಆದರೆ ಈ ಸಮಯದಲ್ಲಿ ಜತೆಯಾಗಿರಬೇಕಿದ್ದ ತಂಡದಲ್ಲಿ ಬಿರುಕು ಮೂಡಿದೆ. ಚಿತ್ರದ ಪ್ರಚಾರದಿಂದ ನಿರ್ದೇಶಕ ಎಪಿ ಅರ್ಜುನ್ ಅವರನ್ನು ದೂರ ಇಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮಾರ್ಟಿನ್‌ಗೆ ದ್ರೋಹದ ವಿಚಾರ ಜಗಜ್ಜಾಹೀರಾಗಿತ್ತು. ಚಿತ್ರದ ಹೆಸರಿನಲ್ಲಿ ನಿರ್ಮಾಪಕ ಉದಯ್ ಮೆಹ್ತಾಗೆ ನಿರ್ದೇಶಕ ಎ.ಪಿ.ಅರ್ಜುನ್ ಅವರಿಂದ ಮೋಸವಾಗಿದೆ. ಕೇವಲ ಸಿಜಿ ಮತ್ತು ವಿಎಫ್‌ಎಕ್ಸ್ ಒಂದರಲ್ಲೇ 73 ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕೆ ಉದಯ್ ಮೆಹ್ತಾ ಮತ್ತು ಎಪಿ ಅರ್ಜುನ್ ನಡುವೆ ಸಂಬಂಧ ಹಳಸಿದೆ. ತಮ್ಮದೇ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಎಪಿ ಅರ್ಜುನ್ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ಅರ್ಜಿ ವಜಾ ಆಗಿದೆ ಎಂದು ಹೊಸ ಬಾಂಬ್ ಕೂಡ ಉದಯ್ ಮೆಹ್ತಾ ಸಿಡಿಸಿದ್ದಾರೆ.

Action Prince Dhruva Sarja  much awaited film Martin to hit the screens on October 11

ಮಾರ್ಟಿನ್ ಚಿತ್ರದ ಕಥೆ ಚಿತ್ರಕಥೆಯನ್ನು ಆ್ಯಕ್ಷನ್ ಹೀರೋ ಅರ್ಜುನ್ ಸರ್ಜಾ ಬರೆದಿದ್ದಾರೆ. ಹೀಗಿರುವಾಗ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಬೇಕಿದ್ದ ”ಮಾರ್ಟಿನ್‌” ಚಿತ್ರತಂಡದಲ್ಲಿ, ಸಿನಿಮಾ ರಿಲೀಸ್‌ಗೂ ಮೊದಲೇ ಬಿರುಕು ಮೂಡಿದೆ. ಇವೆಲ್ಲದರ ನಡುವೆ ಅಕ್ಟೋಬರ್ 6 ರಂದು ಧ್ರುವ ಸರ್ಜಾ ಬರ್ತ್ ಡೇ ಸೆಲೆಬ್ರೇಶನ್ ಮಾಡಿ ಮತ್ತೊಂದು ಮೆಗಾ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಧ್ಯರಾತ್ರಿಯೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

VISTARANEWS.COM


on

Superstar Rajinikanth is unwell Family members admitted to hospital in the middle of the night

ಸೂಪರ್‌ ಸ್ಟಾರ್‌ ರಜನಿಕಾಂತ್ (Actor Rajinikanth) ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ (ಸೆ.30) ಮಧ್ಯರಾತ್ರಿ ತಲೈವಾ ರಜನಿಕಾತ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಜನಿಕಾಂತ್​ಗೆ ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೂ ದಾಖಲಾಗುವುದಕ್ಕೂ ಮುನ್ನ ರಜನಿಕಾಂತ್‌ ಅಭಿನಯಿಸಿರುವ ವೆಟ್ಟೈಯನ್​​​ ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್‌ಗೆ 73 ವರ್ಷ ವಯಸ್ಸು ಆಗಿದೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

Real Star Upendra Acting with Superstar Rajinikanth Coolie Movie

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

Real Star Upendra Acting with Superstar Rajinikanth Coolie Movie

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

Real Star Upendra Acting with Superstar Rajinikanth Coolie Movie

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

Real Star Upendra Acting with Superstar Rajinikanth Coolie Movie

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading

ಸಿನಿಮಾ

Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

Rishab Shetty And NTR: ಮಂಗಳೂರು ಏರ್‌ಪೋರ್ಟ್‌ನಲ್ಲಿ ಕುಂದಾಪುರ ಬಾಯ್ಸ್ ದರ್ಶನ ಕೊಟ್ಟಿದ್ದಾರೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ ರಿಷಬ್ ಶೆಟ್ಟಿ ಮತ್ತು ಜೂ. ಎನ್.ಟಿ.ಆರ್ ಭೇಟಿಯಾದರು. ಇದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

VISTARANEWS.COM


on

Rishab Shetty And NTR

Rishab Shetty And NTR: ಇಂದು (ಆಗಸ್ಟ್‌ 31) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ರಿಷಬ್ ಶೆಟ್ಟಿ ಮತ್ತು ಜ್ಯೂ. ಎನ್‌ಟಿಆರ್ (Rishab Shetty And NTR) ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

Rishab Shetty And NTR with family

ಶ್ರಾವಣ ಮಾಸದ ಶನಿವಾರದಂದು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ಸ್ಟಾರ್ ನಟರು ದೇವರ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದರು.

NTR and Rishab Shetty

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಮೊದಲು ರಿಷಬ್ ಶೆಟ್ಟಿ ಮತ್ತು ಜೂ. ಎನ್.ಟಿ.ಆರ್ ಮಂಗಳೂರು ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿದ್ದರು ಮತ್ತು ಡಿವೈನ್ ಸ್ಟಾರ್, ಟೈಗರ್‌ನನ್ನು ಸ್ವಾಗತಿಸಿದ್ದರು.

ಸೆ.2ರಂದು ನನ್ನ ತಾಯಿ ಹುಟ್ಟುಹಬ್ಬ ಇದೆ. ಅವರ ತವರು ಕುಂದಾಪುರಕ್ಕೆ ಬರಬೇಕೆಂಬ ಮಹಾದಾಸೆ ಇತ್ತು. ಮಗನಾಗಿ ಅವರ ಸಣ್ಣ ಆಸೆಯನ್ನು ಈಡೇರಿಸುವುದೇ ನನ್ನ ಭಾಗ್ಯ. ಅವರ ಹುಟ್ಟುಹಬ್ಬಕ್ಕೆ ಇದೇ ದೊಡ್ಡ ಗಿಫ್ಟ್‌. ಅಮ್ಮನನ್ನು ಕರೆದುಕೊಂಡು ಬಂದಿದ್ದು ಖುಷಿ ಆಯಿತು. ಜತೆಗೆ ಆಸೆ ಈಡೇರಿಸಿ ಎಂಬ ನೆಮ್ಮದಿ ಇದೆ ಎಂದು ಟಾಲಿವುಡ್‌ ನಟ ಜ್ಯೂ.ಎನ್‌ಟಿಆರ್‌ ತಿಳಿಸಿದರು.

Rishab Shetty And NTR photo

ಇವರಿಬ್ಬರ ದಿಢೀರ್ ಭೇಟಿ ನೋಡಿ “ತಾರಕ್ ಕಾಂತಾರದಲ್ಲಿ ನಟಿಸುತ್ತಾರಾ?” “ರಿಷಬ್ ಸಿಂಹಾದ್ರಿ ಭೇಟಿ ಏನು ಸೀಕ್ರೆಟ್ ಏನು?” ಹೀಗೆ ಹಲವಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತುಹಲ ಮೂಡಿಸಿದ್ದವು.

ಇದನ್ನೂ ಓದಿ: Sonal Monteiro: ಚರ್ಚ್ ವೆಡ್ಡಿಂಗ್‌ಗೂ ಮುನ್ನ ಸೋನಲ್ ಮನೆಯಲ್ಲಿ Roce Celebration

Continue Reading
Advertisement
Latest2 hours ago

ಮಹಿಳಾ ಮೀಸಲಾತಿಗೆ ಬೆಂಬಲ; ಡಿಲಿಮಿಟೇಷನ್‌ ಗೆ ವಿರೋಧ:ಸಿಎಂ ಸಿದ್ದರಾಮಯ್ಯ ಸಷ್ಟನೆ

Latest3 hours ago

ಕುಮಾರಸ್ವಾಮಿಗೆ ಬೆಂಗಳೂರಿನ ಬಗ್ಗೆ ಅರಿವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

Latest3 hours ago

ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ ಖರ್ಗೆ; ಕ್ಷಮೆ ಯಾಚನೆಗೆ ಯಡಿಯೂರಪ್ಪ ಆಗ್ರಹ

Latest3 hours ago

ಇಡಿ ದಾಳಿ: ನಳಪಾಡ್‌ ಫಸ್ಟ್‌ ರಿಯಾಕ್ಷನ್‌ ಏನಿತ್ತು? ಅವರು ಕೊಟ್ಟ ಸ್ಪಷ್ಟನೆ ಏನು?

Latest3 hours ago

ದಲಿತರಿಗೆ ಒಳ ಮೀಸಲಾತಿ: ಏ.24ರಂದು ವಿಶೇಷ ಸಂಪುಟ ಸಭೆ

Latest3 hours ago

“ಗ್ರೇಟರ್ ಇಸ್ರೇಲ್” ಸಾಕಾರಕ್ಕೆ ನೆತನ್ಯಾಹು ಬಿಗ್‌ ಪ್ಲಾನ್:‌ ಮಧ್ಯ ಪ್ರಾಚ್ಯದಲ್ಲಿ ಶಾಂತಿಗಿಲ್ಲ ನೆಲೆ

Latest3 hours ago

ಜೆಡಿಎಸ್‌ ಗೆ ಮರಳುತ್ತೀರಾ?; ಸಚಿವ ಜಮೀರ್‌ ಅಹಮದ್‌ ಕೊಟ್ಟ ಉತ್ತರ ಏನು?

Latest3 hours ago

ಬೇಸಿಗೆಯಲ್ಲೂ ಸಣ್ಣ ನೀರಾವರಿ ಕೆರೆಗಳಲ್ಲಿ ಸಮೃದ್ದ ನೀರು ಸಂಗ್ರಹ: ಸಚಿವ ಎನ್‌ ಎಸ್‌ ಭೋಸರಾಜು

Latest4 hours ago

ಗುಜರಾತ್‌ ನಲ್ಲಿ ಬೃಹತ್‌ ಸೈಬರ್‌ ವಂಚನೆ ಜಾಲ ಪತ್ತೆ: 2,500 ಕೋಟಿ ಹಣ ವಂಚನೆ

Latest4 hours ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌