Puneeth Rajkumar : ಅವತ್ತು ವಿಧಿ ನಮ್ಮ ನಾಡಿಗೆ ನೋವಿನ ಪೆಟ್ಟು ನೀಡಿತ್ತು - Vistara News

ಸಿನಿಮಾ

Puneeth Rajkumar : ಅವತ್ತು ವಿಧಿ ನಮ್ಮ ನಾಡಿಗೆ ನೋವಿನ ಪೆಟ್ಟು ನೀಡಿತ್ತು

ವೀರ ಕನ್ನಡಿಗನ ದೇಹದಿಂದ ಉಸಿರು ತೊರೆದು ಗಾಳಿಯಲ್ಲಿ ಲೀನವಾಗಿ ಜೀವಾತ್ಮವು ಪರಮಾತ್ಮನ ಸಾನಿಧ್ಯದಲ್ಲಿ ಅಮರವಾಗಿದೆ.

VISTARANEWS.COM


on

That fate gave a painful blow to our pulse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಾಂಗತ್ಯ. ಬೆಂಗಳೂರು

ಅಪ್ಪು ನೀನು ನಮ್ಮ ಕಣ್ಣೆದುರಿಗೆ ಇಲ್ಲ ಅನ್ನೋದನ್ನ ಬಿಟ್ಟರೆ ಮಿಕ್ಕಿದ್ದೆಲ್ಲವೂ ಹಾಗೇ ಇದೆ. ನಿನ್ನ ಮಾನವ ಪ್ರೇಮದ ನಗುವಿನೊಂದಿಗೆ. ಅಕ್ಟೋಬರ್ 29 2021 ಅವತ್ತು ವಿಧಿ ದೊಡ್ಮನೆ ಹುಡುಗನನ್ನ ಮೆಚ್ಚಿ ಪ್ರೀತಿಸುವ ಗೌರವಿಸುವ ಅಸಂಖ್ಯಾತ ಅಭಿಮಾನಿಗಳಿಗೆ ನೋವಿನ ಪೆಟ್ಟು ನೀಡಿತು. ಅವತ್ತು ಒಂದು ದಿನ ಸಾವು ತಡ ಮಾಡಿ ಸುಮ್ಮನೆ ವಾಪಸ್ ಹೋಗಿದ್ರೆ ಅದೆಷ್ಟು ವಾತ್ಸಲ್ಯ ಹೃದಯದ ಕನ್ನಡಿಗರು ದೇವರಿಗೆ ತುಪ್ಪದ ದೀಪ ಬೆಳಗುತ್ತಿದ್ದರು ಇನ್ನೊಂದಿಷ್ಟು ನೊಂದ ಅಸಹಾಯಕ ಜೀವಗಳಿಗೆ ನಿನ್ನ ಸಹಾಯ ಪ್ರೀತಿ ವಾತ್ಸಲ್ಯ ಚಂದದ ಬದುಕು ಕಟ್ಟಿಕೊಳ್ಳಲಿಕ್ಕೆ ಇನ್ನೊಂದಿಷ್ಟು ನಿನ್ನಿಂದ
ನೆರವು ಸಿಗುತ್ತಿತ್ತು. ಈವಾಗ ನಿನ್ನನ್ನು ನೆನಪಿಸಿಕೊಳ್ಳುತ್ತ ಮನದೊಳಗೆ ದುಃಖಿಸುವವರು ಇದ್ದಾರೆ.

ನೀನಿಲ್ಲದ ಜಗತ್ತಲ್ಲಿ ನಿನ್ನ ಸ್ಮರಿಸುತ್ತಾ ಈಗಲೂ ಎಷ್ಟು ಊರು ಬೀದಿ ಮನೆಯ ದೇವರ ಕೋಣೆಯಲ್ಲಿ ನಿನಗೆ ದೀಪ ಬೆಳಗಿಸುತ್ತಾರೆ. ಭೇದ ಭಾವವಿಲ್ಲದೆ ಸಾರ್ಥಕವಾಗಿ ಬದುಕಿದ ನಿನ್ನ ವ್ಯಕ್ತಿತ್ವ ನಿಜಕ್ಕೂ ಭವ್ಯವಾದದ್ದು. ಅಷ್ಟೇ ಅಲ್ಲ ನಮಗೂ ಸಹ ಬದುಕಿದರೆ ಹೀಗೆ ಬದುಕಿ ಎನ್ನುವುದನ್ನು ತೋರಿಸಿಕೊಟ್ಟ ಪುಣ್ಯಾತ್ಮ ನೀನು.

ನಿನ್ನ ನಟನೆ ಪ್ರೀತಿ ನಗು ಪರೋಪಕಾರದ ಗುಣ ಇವುಗಳನ್ನೆಲ್ಲ ಕಂಡು ಅನುಸರಿಸುವ ನಾವುಗಳು ಧನ್ಯರು. ದೊಡ್ಮನೆ ಹುಡುಗ ನೀನು. ನಿಜಕ್ಕೂ ನಮ್ಮೆಲ್ಲರಿಗೂ ಅನುಕರಣೀಯ. ನಮ್ಮೆಲ್ಲರ ಎದೆಯಲ್ಲಿನ ಸಮೃದ್ಧವಾದ ಫಸಲಿಗೆ ವಿಧಿಯು ಇದ್ದಕ್ಕಿದ್ದಂತೆ ಬೆಂಕಿ ಇಟ್ಟಿತು. ನಲವತ್ತಾರು ವರ್ಷ ಬದುಕಿದ ಯುವರತ್ನ ಅದೆಷ್ಟೋ ತಾಯಂದಿರಿಗೆ, ಯುವಕರಿಗೆ ಪ್ರೇರಣೆ. ಹುಡುಗಿಯರಿಗಂತೂ ತುಂಬಾ ಆತ್ಮೀಯ. ಪ್ರೇಮಿಗಳಿಗೆ ಆತ್ಮ ಬಂಧು.

ದೇವರಾಣೆ ಅಪ್ಪು ನಿನ್ನ ಅಗಲಿಕೆಯು ನಮಗೆಲ್ಲ ಅತ್ಯಂತ ಯಾತನೆ. ಹಾಗೆಯೇ ನೋಡಿದಾಗ ಎಲ್ಲವೂ ಸರಿಯಾಗಿತ್ತು, ಚಂದವಾಗಿತ್ತು. ಥೇಟ್ ನಿನ್ನ ನಗು ಸರಳತೆಯಂತೆ. ಆದರೆ ವಿಧಿಯ ಲೆಕ್ಕಾಚಾರ ಬೇರೆ ಏನು ಇತ್ತು. ತೆರೆಮರೆಯಲ್ಲಿ ಹೊಂಚು ಹಾಕುತ್ತಿದ್ದ ಸಾವು ಮುಲಾಜಿಲ್ಲದೆ ನಿನ್ನನ್ನ ಎತ್ತಿಕೊಂಡು ಹೋಯಿತು. ಆಕಾಶಕ್ಕೆ. ಇದ್ದಕ್ಕಿದ್ದಂತೆ ನದಿಯೊಂದು ಬತ್ತಿ ಹೋದ ಅನುಭವವಾಗುತ್ತಿದೆ. ನಮಗೆಲ್ಲ. ಕತ್ತು ಮೇಲೆತ್ತಿ ಆಕಾಶ ನೋಡಿದರೆ ಚಂದಿರನ ಪಕ್ಕದಲ್ಲಿನ ದೊಡ್ಡ ನಕ್ಷತ್ರವಾಗಿ ಕಾಣುವ ದೇವತಾ ಮನುಷ್ಯನ ಮಗನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿವೆ.

ಅವತ್ತು ಅಕ್ಟೋಬರ್ 29 2021 ಸಂಜೆ ನಾಲ್ಕು ಗಂಟೆ. ಐದು ವರ್ಷಗಳ ನಂತರ ಸೈನ್ಯದಿಂದ ಹಿಂದಿರುಗಿ ಬಂದು ನನ್ನ ಪ್ರೀತಿ ಹುಡುಗಿ ಜೊತೆ ಖುಷಿಯಿಂದ ಮಾತಾಡುವಾಗ ಅವಳ ವಾಟ್ಸಪ್ ಮೆಸೇಜ್ ಬಂತು ತಕ್ಷಣವೇ ಅವಳ ಮುಖ ಸಪ್ಪೆ ಆಯ್ತು ಕಂಗಳ ನೀರು ಕೆನ್ನೆ ಮೇಲೆ ಜಾರಿದವು. ಮೆಸೇಜ್ ನೋಡಿ ನಾನು ಅವಳು ಆಕಾಶದಿಟ್ಟಿಸಿದವು ರೋಧಿಸುತ್ತಾ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ನಮ್ಮಿಬ್ಬರಲ್ಲಿ ದುಃಖ ಹೆಪ್ಪುಗಟ್ಟಿ ಪ್ರೇಮವೇ ಸಂಕಟ ಪಡುತ್ತಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Flop Film: ಫ್ಲಾಪ್ ಎಂದು ಕರೆಸಿಕೊಂಡ ಈ ಚಿತ್ರದ 25 ಕೋಟಿ ಟಿಕೆಟ್ ಮಾರಾಟವಾಗಿದ್ದು ಹೇಗೆ; ಇಲ್ಲಿದೆ ರೋಚಕ ಸಿನಿ ಇತಿಹಾಸ

Flop Film ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟವಾಗಿದೆ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಭಾರತೀಯ ಚಲನಚಿತ್ರವೊಂದು ಈ ದಾಖಲೆಯನ್ನು ಬ್ರೇಕ್ ಮಾಡಿ ಎಂದಿಗೂ ಮುರಿಯಲಾಗದ ದಾಖಲೆಯನ್ನು ಮಾಡಿ ಹೋಗಿದೆ..

VISTARANEWS.COM


on

Flop Film
Koo

ಬೆಂಗಳೂರು: ಕಳೆದ ವರ್ಷ ‘ಜವಾನ್’ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಕೊನೆಯಲ್ಲಿ ಅದು 4 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು ಮತ್ತು ಇದನ್ನು ದೊಡ್ಡ ದಾಖಲೆ ಎಂಬಂತೆ ಎತ್ತಿ ತೋರಿಸಲಾಗಿತ್ತು. ಆದರೆ ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಮತ್ತು ಟಿಕೆಟ್​ಗಳು ಮಾರಾಟವಾದ ಭಾರತೀಯ ಚಲನಚಿತ್ರವೊಂದು ಸಾರ್ವಕಾಲಿಕ ದಾಖಲೆ ಮಾಡಿದೆ. ಅಚ್ಚರಿ ಏನೆಂದರೆ ಈ ಸಿನಿಮಾ ಆರಂಭದಲ್ಲಿ ಇದು ಸೋತ ((Flop Film) ) ಸಿನಿಮಾ ಎಂಬ ವಿಮರ್ಶೆಯನ್ನು ಪಡೆದುಕೊಂಡಿತ್ತು. ಆದರೆ, ಬಳಿಕ ಆದದ್ದೇ ಬೇರೆ.

ಆ ಚಿತ್ರ ಯಾವುದೆಂದರೆ ರಮೇಶ್ ಸಿಪ್ಪಿ ಅವರ, ನಟ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅಭಿನಯದ ಜನಪ್ರಿಯ ‘ಶೋಲೆ’ ಚಿತ್ರ. ಇದನ್ನು ಇತರ ಭಾರತೀಯ ಚಿತ್ರಗಳಿಗಿಂತ ಹೆಚ್ಚು ಜನರು ಥಿಯೇಟರ್ ನಲ್ಲಿ ವೀಕ್ಷಿಸಿದ್ದಾರಂತೆ. ಗಲ್ಲಾ ಪೆಟ್ಟಿಗೆ ಸಂಗ್ರಾಹಕರ ಪ್ರಕಾರ, ಶೋಲೆ ಚಿತ್ರ 1975-80ರ ಆರಂಭದಲ್ಲಿ ಭಾರತದಲ್ಲಿ ಮಾತ್ರ 18 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿತು. ಹಾಗೇ ಈ ಚಿತ್ರ 60 ಚಿತ್ರಮಂದಿರಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿತ್ತು ಮತ್ತು ಬೆಳ್ಳಿ ಹಬ್ಬವನ್ನು ಆಚರಿಸಿತ್ತು. ಅಲ್ಲದೇ ಈ ಚಿತ್ರ ಬಾಂಬೆಯ ಮಿನರ್ವ ಥಿಯೇಟರ್ ನಲ್ಲಿ ಐದು ವರ್ಷಗಳ ಕಾಲ ಓಡಿದ್ದು, ಅಂದಿನ ದಾಖಲೆ. ಒಟ್ಟಾರೆ ಈ ಚಿತ್ರ ಅಂದಾಜು 2 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ಹಾಗೇ ಈ ಚಿತ್ರ ಸೋವಿಯತ್ ರಷ್ಯಾದಲ್ಲಿ ಬಿಡುಗಡೆಯಾಗಿ ಅಲ್ಲಿ 48 ಮಿಲಿಯನ್ (4.8 ಕೋಟಿ) ಗಳಿಕೆ ಮಾಡಿದೆ. ಒಟ್ಟಾರೆ ಸುಮಾರು 25 ಕೋಟಿಯಷ್ಟು ಟಿಕೆಟ್​ ಸೇಲಾಗಿದೆ.

ಕೊನೆಯಲ್ಲಿ ಇದು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಹಾಗೂ ಭಾರತದಲ್ಲಿ ಅತ್ಯಂತ ಯಶಸ್ಸು ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು 30ಕೋಟಿ ಗಳಿಸಿತ್ತು. ಆ ಮೂಲಕ ಅದು ಮುಘಲ್-ಎ-ಆಜಮ್ ಮತ್ತು ಮದರ್ ಇಂಡಿಯಾದ ದಾಖಲೆಯನ್ನು ಮುರಿದಿದೆ.

ಆದರೆ ಈ ಚಿತ್ರ ಮೊದಲು ಹಿಟ್ ಆಗಲಿಲ್ಲ, ಸ್ವಾತಂತ್ರ್ಯ ದಿನಾಚರಣೆಯ ಮೊದಲು ಬಿಡುಗಡೆಯಾದ ಈ ಚಿತ್ರ ನಂತರ ಕೆಟ್ಟ ವಿಮರ್ಶೆಗಳು ಮತ್ತು ಟೀಕೆಗಳಿಗೆ ಒಳಗಾಗಿತ್ತು. ಹಾಗಾಗಿ ಮೊದಲ ಎರಡು ವಾರಗಳಲ್ಲಿ ಈ ಚಿತ್ರತಂಡದವರೇ ಅದನ್ನು ಫ್ಲಾಪ್ ಎಂದು ಲೇಬಲ್ ನೀಡಿದ್ದಾರೆ. ಹಾಗಾಗಿ ತಯಾರಕರು ಅದರ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಲು ಹೇಳಿದ್ದರು. ಆದರೆ ಕೊನೆಯಲ್ಲಿ ಹಿಟ್ ಚಿತ್ರವಾಗಿ ಹೊರಮೊಮ್ಮಿತ್ತು., ದಾಖಲೆಯನ್ನು ಸೃಷ್ಟಿಸಿತ್ತು.

ಇದನ್ನೂ ಓದಿ: Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!

ಕಳೆದ ವರ್ಷಗಳಲ್ಲಿ ಹಲವಾರು ಭಾರತೀಯ ಚಲನಚಿತ್ರಗಳು ವಿಶ್ವದಾದ್ಯಂತ 1000 ಕೋಟಿ ಗಳಿಕೆಯನ್ನು ಪಡೆದುಕೊಂಡಿವೆ. ಬಾಹುಬಲಿ ಚಿತ್ರ ಜಾಗತಿಕ ಮಟ್ಟದಲ್ಲಿ 15-20 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು. ಆರ್ ಆರ್ ಆರ್ ಮತ್ತು ಕೆಜಿಎಫ್ 2 10 ಕೋಟಿ ಗಿಂತ ಕಡಿಮೆ ಪ್ರೇಕ್ಷಕರನ್ನು ಗಳಿಸಿದೆ. ದಂಗಲ್ ಚಿತ್ರ ಕೂಡ 10 ಕೋಟಿ ಪ್ರೇಕ್ಷಕರನ್ನು ಗಳಿಸಿದೆ. ಆದರೂ ಅವುಗಳು ಶೋಲೆಯ ಮಟ್ಟಕ್ಕೆ ಬಂದು ನಿಲ್ಲಲಿಲ್ಲ. ಎನ್ನಲಾಗಿದೆ.

Continue Reading

ಬಾಲಿವುಡ್

Navya Naveli Nanda: ಆರಾಧ್ಯ ಬಚ್ಚನ್‌ ನನಗಿಂತ ಹೆಚ್ಚು ಬುದ್ಧಿವಂತೆ ಎಂದ ಶ್ವೇತಾ ಬಚ್ಚನ್ ಮಗಳು!

Navya Naveli Nanda: ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

VISTARANEWS.COM


on

Aaradhya Bachchan is wiser more intelligent than I
Koo

ಬೆಂಗಳೂರು: ಪೋಡ್‌ಕಾಸ್ಟ್‌ ʻವಾಟ್ ದಿ ಹೆಲ್ ನವ್ಯಾʼದಲ್ಲಿ ಜಯಾ ಬಚ್ಚನ್‌ ಅವರು ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಜತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೀಗ ಶ್ವೇತಾ ಬಚ್ಚನ್ ಮಗಳು ನವ್ಯಾ ಅವರು ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಮಗಳ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ತನ್ನ ಸೋದರಸಂಬಂಧಿ ಆರಾಧ್ಯ(Aaradhya Bachchan) ತುಂಬ ಬುದ್ಧಿವಂತೆ ಎಂದು ಹೇಳಿಕೊಂಡಿದ್ದಾರೆ.

ಆರಾಧ್ಯಗೆ ಏನು ಸಲಹೆ ನೀಡುತ್ತೀರಿ ಎಂದು ನವ್ಯಾಗೆ ಪ್ರಶ್ನೆ ಎದುರಾದಾಗ ಹೀಗೆ ಹೇಳಿದರು ನವ್ಯಾ. “ಆರಾಧ್ಯ ನನಗಿಂತ ಹೆಚ್ಚು ಬುದ್ಧಿವಂತಳು. ಇಂದಿನ ಮಕ್ಕಳು ಬಹಳ ಮುಂದಿದ್ದಾರೆ. ಅವಳ ವಯಸ್ಸಿನಲ್ಲಿ ನಾನು ಅಷ್ಟು ಬುದ್ಧಿವಂತನಾಗಿರಲಿಲ್ಲ. ಜಗತ್ತನ್ನು ಹಲವು ವಿಧಗಳಲ್ಲಿ ಬದಲಾಯಿಸಲು ಬಯಸುವ ಯುವತಿಯರ ಪೀಳಿಗೆಯನ್ನು ನಾವು ಈಗ ಹೊಂದಿದ್ದೇವೆ. ಅದು ನಾನು ಅವಳಲ್ಲಿಯೂ ನೋಡುತ್ತಿರುವ ಖುಷಿಯ ಸಂಗತಿ. ಅವಳಿಗೆ ನಾನು ಸಲಹೆ ಅಥವಾ ಸ್ಫೂರ್ತಿ ನೀಡುವುದಕ್ಕಿಂತ ಹೆಚ್ಚಾಗಿ, ಅವಳಿಂದ ನಾನು ಬಹಳಷ್ಟು ತಿಳಿದುಕೊಳ್ಳುತ್ತಿರುವೆ ಎಂದು ನಾನು ಭಾವಿಸುತ್ತೇನೆʼʼಎಂದರು.

ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

ಇದನ್ನೂ ಓದಿ: Aaradhya Bachchan: ಅಬ್ಬಾ.. ಅಂತೂ ಐಶ್ವರ್ಯಾ ರೈ ಪುತ್ರಿ ಹಣೆ ನೋಡಿದ್ವಲ್ಲ! ನಿಟ್ಟುಸಿರು ಬಿಟ್ಟ ನೆಟ್ಟಿಗರು!

ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಅವರು ಮೊಮ್ಮಗಳ ʻನವ್ಯಾ ನವೇಲಿ ನಂದಾʼ ಪಾಡ್‌ಕಾಸ್ಟ್‌ನ ಸಂಚಿಕೆಯಲ್ಲಿ ನಟಿ ಜಯಾ ಬಚ್ಚನ್ ಈ ಮುಂಚೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಔಟ್‌ ಡೋರ್‌ ಶೂಟಿಂಗ್‌ ವೇಳೆ ಪೊದೆಗಳ ಹಿಂದೆ ಅಡಗಿ ಕುಳಿತು ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದರು.

ಜಯಾ ಬಚ್ಚನ್ ಮಾತನಾಡಿ ʻʻನಮ್ಮ ಕಾಲದಲ್ಲಿ ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಮಗಾಗಿ ವ್ಯಾನ್‌ಗಳಿರಲಿಲ್ಲ(ಕ್ಯಾರವಾನ್‌). ಸರಿಯಾದ ಶೌಚಾಲಯದ ವ್ಯವಸ್ಥೆಗಳು ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಪ್ಯಾಡ್‌ಗಳನ್ನು ಬದಲಿಸಲು ನಮಗೆ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಪ್ಯಾಡ್‌ಗಳನ್ನು ಎಸೆಯಲು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಆಗ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೆವುʼʼ ಎಂದಿದ್ದರು.

Continue Reading

ಕ್ರೈಂ

Raj Kundra: ಬಿಟ್‌ಕಾಯಿನ್‌ ಪೋಂಜಿ ಸ್ಕೀಮ್‌; ಇಡಿಯಿಂದ ರಾಜ್‌ ಕುಂದ್ರಾ ₹97 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Raj Kundra: ಸಿಂಗಾಪುರ (Singapore) ಮೂಲದ ಸಂಸ್ಥೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ನಡೆಸಿದ ₹6,600 ಕೋಟಿ ಬಿಟ್‌ಕಾಯಿನ್ (Bitcoin) ಆಧಾರಿತ ಪೋಂಜಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ರಾಜ್‌ ಕುಂದ್ರಾ ಅವರ ಕೈವಾಡವನ್ನು ಶಂಕಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

VISTARANEWS.COM


on

Raj Kundra Shilpa Shetty
Koo

ಮುಂಬಯಿ: ನಟಿ ಶಿಲ್ಪಾ ಶೆಟ್ಟಿ (Actress Shilpa Shetty) ಅವರ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಅವರ ₹97.79 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಸಿಂಗಾಪುರ (Singapore) ಮೂಲದ ಸಂಸ್ಥೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ನಡೆಸಿದ ₹6,600 ಕೋಟಿ ಬಿಟ್‌ಕಾಯಿನ್ (Bitcoin) ಆಧಾರಿತ ಪೋಂಜಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ರಾಜ್‌ ಕುಂದ್ರಾ ಅವರ ಕೈವಾಡವನ್ನು ಶಂಕಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಕುಂದ್ರಾ ಈ ಪ್ರಕರಣದ ಆದಾಯದ ಫಲಾನುಭವಿ ಎಂದು ಶಂಕಿಸಲಾಗಿದೆ.

ಲಗತ್ತಿಸಲಾದ ಆಸ್ತಿಗಳಲ್ಲಿ ಪ್ರಸ್ತುತ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಜುಹುದಲ್ಲಿರುವ ವಸತಿ ಫ್ಲಾಟ್, ಪುಣೆಯಲ್ಲಿರುವ ವಸತಿ ಬಂಗಲೆ ಮತ್ತು ರಾಜ್ ಕುಂದ್ರಾ ಅವರ ಹೆಸರಿನಲ್ಲಿರುವ ಈಕ್ವಿಟಿ ಷೇರುಗಳು ಸೇರಿವೆ. ವೇರಿಯಬಲ್ ಟೆಕ್ ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ದೇಶಾದ್ಯಂತ ಮೋಸಗಾರಿಕೆಯ ಹೂಡಿಕೆದಾರ ಮೂಲಕ 80,000 ಬಿಟ್‌ಕಾಯಿನ್‌ಗಳನ್ನು ಸಂಗ್ರಹಿಸಿದೆ. ಮತ್ತು ವಿದೇಶದಲ್ಲಿ ಆಸ್ತಿಗಳನ್ನು ಖರೀದಿಸಲು ಒಂಬತ್ತು ಸಂಸ್ಥೆಗಳ ಮೂಲಕ ₹6,606 ಕೋಟಿ ಮೌಲ್ಯದ ಹಣವನ್ನು ಭಾರತದಿಂದ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಅಮೇಜ್ ಮೈನಿಂಗ್ ಮತ್ತು ಬ್ಲಾಕ್‌ಚೈನ್ ರಿಸರ್ಚ್ ಲಿಮಿಟೆಡ್ ಹಾಂಗ್‌ಕಾಂಗ್, ಗ್ರೀನ್‌ ಓಶನ್‌ ಓವರ್‌ಸೀಸ್‌ ಹಾಂಗ್‌ಕಾಂಗ್, ಬ್ಲೂ ವೇವ್ ಟ್ರೇಡಿಂಗ್ ಹಾಂಗ್‌ಕಾಂಗ್, AB ಮಾರ್ಕೆಟಿಂಗ್ ಕನ್ಸಲ್ಟೆನ್ಸಿ FZE ದುಬೈ, ಕ್ರಿಪ್ಟೋ ಕ್ಯಾಪಿಟಲ್ ಎಸ್ಟೋನಿಯಾ, ABC ಮೆಗಾ ಅಲೈಯನ್ಸ್ DMCC/ABC ಮೆಗಾಕಾರ್ಪ್ ದುಬೈ, ಎಬಿ ಹೋಲ್ಡಿಂಗ್ಸ್ ದುಬೈ, ಎಬಿ ಫೆಸಿಲಿಟೀಸ್ ದುಬೈ ಮತ್ತು ಪರ್ಪಲ್ ರೈನ್ ಟ್ರೇಡಿಂಗ್ ಕಂಪನಿ ದುಬೈಗಳು EDಯ ತನಿಖೆಯ ಅಡಿಯಲ್ಲಿರುವ ಸಂಸ್ಥೆಗಳಾಗಿವೆ.

ವೇರಿಯೇಬಲ್ ಟೆಕ್ ಮತ್ತು ಹಲವಾರು ಇತರ ಏಜೆಂಟ್‌ಗಳ ವಿರುದ್ಧ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರು ದಾಖಲಿಸಿದ ಬಹು ಪ್ರಕರಣಗಳ ಆಧಾರದ ಮೇಲೆ 2018ರಲ್ಲಿ ಇಡಿ ಸಂಸ್ಥೆಯು ಪೋಂಜಿ ಸ್ಕೀಮ್‌ ಕುರಿತ ತನಿಖೆಯನ್ನು ಪ್ರಾರಂಭಿಸಿತು. ಜನವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿ ನಿಖಿಲ್ ಮಹಾಜನ್ ಅವರನ್ನು ಏಜೆನ್ಸಿ ಬಂಧಿಸಿತ್ತು. ಹೂಡಿಕೆದಾರರನ್ನು ಆಕರ್ಷಿಸಲು ದುಬೈನಲ್ಲಿ ಸೆಮಿನಾರ್‌ಗಳನ್ನು ನಡೆಸುವ ಮೂಲಕ ಮಹಾಜನ್ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಮತ್ತು 40 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ ದರಗಳ ಪ್ರಕಾರ, ಒಂದು ಬಿಟ್‌ಕಾಯಿನ್‌ಗೆ ಸುಮಾರು ₹51 ಲಕ್ಷ ದರವಿದೆ. Bitcoin ಕಾನೂನುಬದ್ಧ ಕರೆನ್ಸಿ ಅಲ್ಲ.

ಅಶ್ಲೀಲ ವೀಡಿಯೊಗಳನ್ನು ವಿತರಿಸಿದ ಆರೋಪದ ಮೇಲೂ ಬಂಧಿತರಾಗಿ ಜೈಲಿಗೆ ಹೋಗಿದ್ದ ರಾಜ್‌ ಕುಂದ್ರಾ ಅವರಿಗೆ 2022ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದರ ತನಿಖೆಯೂ ನಡೆಯುತ್ತಿದೆ.

ಇದನ್ನೂ ಓದಿ: Shilpa Shetty: ಜೈಲಿಗೆ ಹೋಗಿ ಬಂದ ಬಳಿಕವೂ ಪತಿ ರಾಜ್‌ ಕುಂದ್ರಾರನ್ನು ಹಾಡಿ ಹೊಗಳಿದ ಶಿಲ್ಪಾ ಶೆಟ್ಟಿ!

Continue Reading

ಸಿನಿಮಾ

Abhradeep Saha: ʻಕೆಜಿಎಫ್ʼ ಸಿನಿಮಾವನ್ನು ಕಿರುಚಾಡುತ್ತಲೇ ಹಾಡಿ ಹೊಗಳಿದ್ದ ಯೂಟ್ಯೂಬರ್ ನಿಧನ

Abhradeep Saha: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಭ್ರದೀಪ್ ಸಾಹಾ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 16ರ ಮಧ್ಯರಾತ್ರಿ ಬೆಂಗಳೂರಿನ(Bengaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳು, ಅಭ್ರದೀಪ್ ಸಹಾ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಭ್ರದೀಪ್ ಸಹಾ ಅವರಿಗೆ ಶಸ್ತ್ತ ಚಿಕಿತ್ಸೆ ಮಾಡಲಾಗಿತ್ತು. 2018ರಲ್ಲಿ ತೆರೆಕಂಡಿದ್ದ ಯಶ್​ ಅಭಿನಯದ ಕೆಜಿಎಫ್ 1 ಹಾಗೂ 2022ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಬಗ್ಗೆ ಹಾಡಿ ಹೊಗಳಿದ್ದರು. ಈ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು.

VISTARANEWS.COM


on

Abhradeep Saha
Koo

ಬೆಂಗಳೂರು: `ಆ್ಯಂಗ್ರಿ ರಾಂಟ್‌ಮ್ಯಾನ್’ (Angry Rantman) ಎಂದು ಜನಪ್ರಿಯವಾಗಿರುವ ಯೂಟ್ಯೂಬರ್ ಅಭ್ರದೀಪ್ ಸಹಾ (Abhradeep Saha) ಅಲಿಯಾಸ್ `ಆ್ಯಂಗ್ರಿ ರಾಂಟ್‌ಮ್ಯಾನ್’ ನಿಧನರಾಗಿದ್ದಾರೆ. ಅಭ್ರದೀಪ್ ಸಹಾ ಅವರಿಗೆ 27 ವರ್ಷ ವಯಸ್ಸಾಗಿತ್ತು. ಕೋಲ್ಕತ್ತಾ ಮೂಲದ ಯೂಟ್ಯೂಬರ್ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು ಎಂದು ವರದಿಯಾಗಿದೆ. 2018ರಲ್ಲಿ ತೆರೆಕಂಡಿದ್ದ ಯಶ್​ ಅಭಿನಯದ ಕೆಜಿಎಫ್ 1 ಹಾಗೂ 2022ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಬಗ್ಗೆ ಹಾಡಿ ಹೊಗಳಿದ್ದರು. ಈ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಭ್ರದೀಪ್ ಸಾಹಾ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 16ರ ಮಧ್ಯರಾತ್ರಿ ಬೆಂಗಳೂರಿನ(Bengaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳು, ಅಭ್ರದೀಪ್ ಸಹಾ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಭ್ರದೀಪ್ ಸಹಾ ಅವರಿಗೆ ಶಸ್ತ್ತ ಚಿಕಿತ್ಸೆ ಮಾಡಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಮಗನ ಆರೋಗ್ಯದ ಬಗ್ಗೆ ಏ. 15ರಂದು ತಂದೆ ಟ್ವೀಟ್ ಮಾಡಿ, ಅಭ್ರದೀಪ್‌ ಅಭಿಮಾನಿಗಳು ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡಬೇಕಷ್ಟೇ ಎಂದು ಬರೆದುಕೊಂಡಿದ್ದರು. ಅದರೆ, ತಂದೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಮರುದಿನವೇ ಸಾಹಾ ನಿಧನರಾಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: Self Harming: 7ನೇ ಮಹಡಿಯಿಂದ ಜಿಗಿದು ಯೂಟ್ಯೂಬರ್‌ ಜೋಡಿ ಆತ್ಮಹತ್ಯೆ

ಅಭ್ರದೀಪ್ ಸಹಾ ಯೂಟ್ಯೂಬ್ ಚಾನೆಲ್‌ನಲ್ಲಿ ಕ್ರೀಡೆ ಮತ್ತು ಚಲನಚಿತ್ರಗಳ ಕುರಿತು ಹೆಚ್ಚಾಗಿ ಹೇಳುತ್ತಿದ್ದರು. ಇಂಡಿಯನ್ ಸೂಪರ್ ಲೀಗ್ (ISL)ನ ಹಲವಾರು ಫುಟ್‌ಬಾಲ್ ಕ್ಲಬ್‌ಗಳು ಸಹಾ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಸಂತಾಪ ಸೂಚಿಸಿವೆ. ಅಭ್ರದೀಪ್ ಸಹಾ ಅವರು ಯೂಟ್ಯೂಬ್‌ನಲ್ಲಿ 4.8 ಲಕ್ಷ ಫಾಲೋವರ್ಸ್ ಹೊಂದಿದ್ದರು.

Continue Reading
Advertisement
Hubli Murder Case
ಪ್ರಮುಖ ಸುದ್ದಿ7 mins ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ32 mins ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ53 mins ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Man death in tiger attack in Nittur village
ಕೊಡಗು1 hour ago

Wild Animals Attack: ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ; ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಸಾವು

Surapura Assembly Constituency By election BJP candidate Raju Gowda filed nomination
ಯಾದಗಿರಿ1 hour ago

Yadgiri News: ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಮಪತ್ರ ಸಲ್ಲಿಕೆ

Preity Zinta
ಕ್ರೀಡೆ1 hour ago

Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

Lok Sabha Election 2024 Malikayya Guttedar Joining Congress April 19
Lok Sabha Election 20241 hour ago

Lok Sabha Election 2024: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್ ಬಿಜೆಪಿಗೆ ಗುಡ್‌ ಬೈ; ನಾಳೆ ಕಾಂಗ್ರೆಸ್‌ ಸೇರ್ಪಡೆ

Lok Sabah Election
ಪ್ರಮುಖ ಸುದ್ದಿ2 hours ago

Lok Sabah Election : ತಮಿಳುನಾಡಿನಲ್ಲಿ ಕತ್ತೆಗಳ ಮೂಲಕ ಹಳ್ಳಿಗಳಿಗೆ ಇವಿಎಂ ತಲುಪಿಸಿದ ಅಧಿಕಾರಿಗಳು!

DRDO
ತಂತ್ರಜ್ಞಾನ2 hours ago

DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ

Iran Israel war
ಪ್ರಮುಖ ಸುದ್ದಿ2 hours ago

Israel Iran War : ಇಸ್ರೇಲ್​ ಮೇಲಿನ ದಾಳಿಗೆ ಪ್ರತಿಕಾರ; ಅಮೆರಿಕ, ಬ್ರಿಟನ್ ನಿಂದ ಇರಾನ್​​ಗೆ ಭಾರಿ ನಿರ್ಬಂಧ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌