ಟಾಲಿವುಡ್
Samantha: ಸಮಂತಾ ಅಭಿನಯದ ʻಶಾಕುಂತಲಂʼ ಸಿನಿಮಾದಲ್ಲಿ ನಟ ಜಿಶು ಸೇನಗುಪ್ತಾ ಪಾತ್ರವೇನು?
ತಮಿಳು, ತೆಲುಗು, ಮಲಯಾಳಂ, (Samantha) ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ.ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ.
ಬೆಂಗಳೂರು: ಒಟಿಟಿಗೆ ಬಿಡುಗಡೆಯಾದ ವಿದ್ಯಾ ಬಾಲನ್ ನಟನೆಯ ಶಕುಂತಲಾ ದೇವಿ ಸಿನಿಮಾದಲ್ಲಿ ಅಭಿನಯಿಸಿದ ನಂತರ ಜಿಶು ಸೇನಗುಪ್ತಾ ಶೀಘ್ರದಲ್ಲೇ ಶಾಕುಂತಲಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಂಗಾಳದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾದ ಜಿಶು ಸೇನಗುಪ್ತಾ ಅವರು ಹಲವಾರು ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಪೌರಾಣಿಕ ಚಿತ್ರಗಳಲ್ಲಿ ಒಂದಾದ ಶಾಕುಂತಲಂನಲ್ಲಿ ಇಂಧ್ರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಸಮಂತಾ ರುತ್ ಪ್ರಭು (Samantha) ನಾಯಕಿಯಾಗಿ ನಟಿಸಿದ್ದಾರೆ.
ಜಿಶು ಸೇನಗುಪ್ತಾ ಅವರ ಜನುಮದಿನಕ್ಕೆ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ʻʻಇಲ್ಲಿದೆ ಇಂದ್ರ… ಅವನ ಎಲ್ಲ ವೈಭವದಲ್ಲಿ, ದೇವತೆಗಳ ರಾಜ, ಶಾಕುಂತಲಾ-ದುಷ್ಯಂತರ ಕಥೆಯಲ್ಲಿ ಪ್ರಮುಖ ಪಾತ್ರ…” ಎಂದು ಕ್ಪಾಪ್ಷನ್ ನೀಡಿದ್ದಾರೆ. ಜಿಶು ಸೇನಗುಪ್ತಾ ಹಲವು ಬಾರಿ ಇಂತಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಶ್ಯಾಮ್ ಬೆನಗಲ್ ಅವರ ನೇತಾಜಿ ಸುಭಾಸ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೊ (2004) ನೊಂದಿಗೆ ಜಿಶು ಸೇನಗುಪ್ತಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರು ಇತ್ತೀಚಿನ ದಿನಗಳಲ್ಲಿ ಮಣಿಕರ್ಣಿಕಾ, ಎನ್ಟಿಆರ್: ಕಥಾನಾಯಕುಡು, ಶ್ಯಾಮ್ ಸಿಂಘ ರಾಯ್ ಮತ್ತು ಸೀತಾ ರಾಮಂನಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Samantha: ಸಮಂತಾ ಅಭಿನಯದ ಪೌರಾಣಿಕ ಚಿತ್ರ ʻಶಾಕುಂತಲಂʼ ಬಿಡುಗಡೆ ದಿನಾಂಕ ಬದಲಾವಣೆ
ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ.ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
South Cinema
Actress Samantha: ಮನೆಯವರ ವಿರೋಧ ಕಟ್ಟಿಕೊಂಡು ‘ಊ ಅಂಟಾವಾ’ ಹಾಡಿಗೆ ಕುಣಿದಿದ್ದ ನಟಿ ಸಮಂತಾ
Actor Samantha: ನಟಿ ಸಮಂತಾ ಅವರು ಪುಷ್ಪ ಸಿನಿಮಾದ ಊ ಅಂಟಾವಾ ಹಾಡಿಗೆ ನೃತ್ಯ ಮಾಡುವುದಕ್ಕೆ ಕುಟುಂಬದ ವಿರೋಧ ಕಟ್ಟಿಕೊಂಡ ಬಗ್ಗೆ ಮಾತನಾಡಿದ್ದಾರೆ.
ಹೈದರಾಬಾದ್: ದಕ್ಷಿಣ ಭಾರತದ ನಟಿ ಸಮಂತಾ (Actress Samantha) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದವರು. ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದಲ್ಲಿ ʼಊ ಅಂಟಾವಾʼ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಐಟಂ ಸಾಂಗ್‌ಗೂ ಸೈ ಎಂದು ತೋರಿಸಿಕೊಟ್ಟವರು. ಆದರೆ ನಟಿ ಈ ಹಾಡಿಗೆ ನೃತ್ಯ ಮಾಡುವ ಮುನ್ನ ಕೆಲವು ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಯಿತಂತೆ. ಈ ವಿಚಾರವನ್ನು ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Actress Samantha : ಯಾರನ್ನಾದರೂ ಪ್ರೀತಿಸಿ ಎಂದ ಅಭಿಮಾನಿಗೆ ಸರಿಯಾದ ಉತ್ತರ ನೀಡಿದ ಸಮಂತಾ
ತಮ್ಮ ಮುಂಬರುವ ಚಿತ್ರ ಶಾಕುಂತಲಂನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ʼಊ ಅಂಟಾವಾʼ ಹಾಡಿನ ಹಿಂದಿನ ಕಥೆಯನ್ನು ತೆರೆದಿಟ್ಟಿದ್ದಾರೆ. “ನನ್ನ ಮದುವೆ ಮುರಿದುಬಿದ್ದ ವಿಚಾರವನ್ನು ನಾವು ಸಮಾಜಕ್ಕೆ ಹೇಳಿಕೊಳ್ಳಬೇಕು ಎನ್ನುವ ಸಮಯದಲ್ಲೇ ಈ ಹಾಡಿನ ಆಫರ್ ನನಗೆ ಬಂದಿತು. ಆಗ ನನ್ನ ಕುಟುಂಬ ನಾನು ಮನೆಯಲ್ಲೇ ಇರಬೇಕು ಎಂದು ಬಯಸುತ್ತಿತ್ತು. ಈ ಹಾಡಿಗೆ ನೃತ್ಯ ಮಾಡುವುದಕ್ಕೆ ನನ್ನ ಕುಟುಂಬದಿಂದ ವಿರೋಧ ಬಂದಿತ್ತು” ಎಂದು ನಟಿ ಹೇಳಿದ್ದಾರೆ.
“ಅಷ್ಟೇ ಅಲ್ಲ, ನನ್ನ ಸ್ನೇಹಿತರೂ ಕೂಡ ಈ ಹಾಡಿನ ವಿಚಾರದಲ್ಲಿ ನನಗೆ ಬೆಂಬಲ ನೀಡಲಿಲ್ಲ. ʼಸೂಪರ್ ಡಿಲಕ್ಸ್ʼ ಸಿನಿಮಾದಲ್ಲಿ ನಟಿಸುವುದಕ್ಕೂ ಒಕೆ ಎಂದಿದ್ದ ಸ್ನೇಹಿತರು ಈ ಹಾಡಿನ ವಿಚಾರದಲ್ಲಿ ಹಿಂದೆ ಬಿದ್ದರು. ಆಗ ನಾನು ಎಲ್ಲವನ್ನೂ ಮೀರಿ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ನಾನೇಕೆ ಬದುಕನ್ನು ಮರೆಮಾಚಿಕೊಂಡು ಬದುಕಬೇಕೆಂದು ನನ್ನದೇ ಆದ ನಿರ್ಧಾರ ತೆಗೆದುಕೊಂಡೆ” ಎಂದು ಸಮಂತಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Samantha Ruth Prabhu: `ಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಬೇಕಂತಿದ್ದ ಸಮಂತಾ: ಕಾರಣವೇನು?
“ಮದುವೆ ವಿಚಾರದಲ್ಲಿ ನಾನು ಸಂಬಂಧವನ್ನು ಉಳಿಸಿಕೊಳ್ಳುವುದಕ್ಕೆ ಶೇ.100 ಪ್ರಯತ್ನ ಮಾಡಿದ್ದೇನೆ. ಆದರೆ ಅದು ಸಫಲವಾಗಲಿಲ್ಲ. ಆ ವಿಚಾರದಲ್ಲಿ ನನ್ನನ್ನು ನಾನು ತಪ್ಪಿತಸ್ಥೆ ರೀತಿಯಲ್ಲಿ ನೋಡಿಕೊಳ್ಳುವುದಕ್ಕೂ ಇಷ್ಟಪಡುವುದಿಲ್ಲ” ಎಂದು ನಟಿ ತಮ್ಮ ಮದುವೆ ಮುರಿದುಬಿದ್ದ ವಿಚಾರವನ್ನೂ ಹೇಳಿಕೊಂಡಿದ್ದಾರೆ.
South Cinema
Naga Chaitanya: ಶೋಭಿತಾ-ನಾಗಚೈತನ್ಯ ಡೇಟಿಂಗ್ ಮಾಡಿರುವ ಫೋಟೊ ಇದ್ದಕ್ಕಿದ್ದಂತೆ ಮಾಯಾ!
ಲಂಡನ್ (Naga Chaitanya) ರೆಸ್ಟೋರೆಂಟ್‌ನಲ್ಲಿ ದಂಪತಿ ಊಟ ಮಾಡುತ್ತಿರುವ ಹೊಸ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಫೋಟೊ ವೈರಲ್ ಆಗುತ್ತಿದ್ದಂತೆ ಬಾಣಸಿಗ ಸುರೇಂದರ್ ಮೋಹನ್ ಈಗ ಡಿಲೀಟ್ ಮಾಡಿದ್ದಾರೆ.
ಬೆಂಗಳೂರು: ತೆಲುಗು ಸ್ಟಾರ್ ನಾಗ ಚೈತನ್ಯ (Naga Chaitanya) ಮತ್ತು ಬಾಲಿವುಡ್ ನಟಿ ಶೋಭಿತಾ ಧೂಲಿಪಾಲ (Sobhita Dhulipala ) ಅವರ ಡೇಟಿಂಗ್ ವದಂತಿಗಳು ಮತ್ತೊಮ್ಮೆ ಗಮನ ಸೆಳೆದಿವೆ. ಇದೀಗ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗಿದೆ. ಲಂಡನ್ ರೆಸ್ಟೋರೆಂಟ್‌ನಲ್ಲಿ ದಂಪತಿ ಊಟ ಮಾಡುತ್ತಿರುವ ಹೊಸ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಫೋಟೊ ವೈರಲ್ ಆಗುತ್ತಿದ್ದಂತೆ ಬಾಣಸಿಗ ಸುರೇಂದರ್ ಮೋಹನ್ ಈಗ ಡಿಲೀಟ್ ಮಾಡಿದ್ದಾರೆ. ಈ ಕಾರಣದಿಂದಾಗಿ ಅನುಮಾನ ಹೆಚ್ಚಾಗುತ್ತಿದ್ದು ನೆಟ್ಟಿಗರು ಇಬ್ಬರ ಡೇಟಿಂಗ್ ಸುದ್ದಿ ಪಕ್ಕಾ ಎಂದು ಕಮೆಂಟ್ ಮಾಡಿದ್ದಾರೆ.
ಇಬ್ಬರು ಸಿಕ್ಕಿಬಿದ್ದಿದ್ದು ಆ ಹೋಟೆಲ್‌ನ ಬಾಣಸಿಗ ಸುರೇಂದರ್ ಮೋಹನ್ ಶೇರ್ ಮಾಡಿದ ಫೋಟೊದಿಂದ. ಶೋಭಿತಾ ಧೂಲಿಪಾಲ ಮೇಜಿನ ಮೇಲೆ ಹಿಂಭಾಗದಲ್ಲಿ ಕುಳಿತಿರುವುದನ್ನು ಕಾಣಬಹುದು. ಚಿತ್ರ ಫೆಬ್ರವರಿ 1ರಂದು ಹಂಚಿಕೊಳ್ಳಲಾಗಿದೆ. ಆದರೆ ಇದೀಗ ಅಭಿಮಾನಿಗಳು ಶೋಭಿತಾ ಅವರನ್ನು ಚಿತ್ರದಲ್ಲಿ ಗುರುತಿಸಿದ್ದಾರೆ.
ಚಿತ್ರದ ಜತೆಗೆ, ಬಾಣಸಿಗರು ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ನಾಗಚೈತನ್ಯ ನಮ್ಮೊಂದಿಗೆ ಭೋಜನ ಮಾಡುವುದು ನಮಗೆ ಸಂತೋಷವಾಗಿದೆ. ನೀವು ಊಟವನ್ನು ಆನಂದಿಸಿದ್ದೀರಿʼ ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿಯೂ ನಾಗಚೈತನ್ಯ ಮತ್ತು ಶೋಭಿತಾ ಲಂಡಲ್‌ನಲ್ಲಿರುವ ಫೋಟೊ ವೈರಲ್ ಆಗಿತ್ತು. ಆ ಫೋಟೊಗಳು ಡೇಟಿಂಗ್ ವದಂತಿಗೆ ಪುಷ್ಟಿ ನೀಡಿತ್ತು. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರ ಫೋಟೊಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ, ಇದು ಫೇಕ್ ಎನ್ನುವ ಮಾತು ಕೇಳಿ ಬಂದಿತ್ತು.
ಇದನ್ನೂ ಓದಿ: Samantha Ruth Prabhu: ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಸಮಂತಾ ಹೇಳಿದ್ದು ಯಾಕೆ?
ಶೋಭಿತಾ ಧೂಲಿಪಾಲ ಯಾರು?
ಆಂಧ್ರ ಪ್ರದೇಶದ ಶೋಭಿತಾ ಧೂಲಿಪಾಲ ಅವರು ಮಾಡೆಲ್ ಆಗಿದ್ದವರು. ಇಲ್ಲಿಯವರೆಗೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಶೋಭಿತಾ 2016ರಲ್ಲಿ ರಮನ್ ರಾಘವ್ 2.0 ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಗೂಢಚಾರಿ, ದಿ ಬಾಡಿ, ಘೋಸ್ಟ್ ಸ್ಟೋರೀಸ್, ಕುರುಪ್, ಮೇಜರ್ ಮುಂತಾದ ಸಿನಿಮಾಗಳಲ್ಲಿ ಶೋಭಿತಾ ಧೂಲಿಪಾಲ ನಟಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್: 1, ಸಿತಾರಾ, ಮಂಕಿ ಮ್ಯಾನ್ ಸಿನಿಮಾಗಳಲ್ಲಿಯೂ ಶೋಭಿತಾ ನಟಿಸಿದ್ದು, ಅವುಗಳು ರಿಲೀಸ್ ಆಗಬೇಕಿವೆ. 2013ರಲ್ಲಿ ಫೇಮಿನಾ ಮಿಸ್ ಇಂಡಿಯಾ ಅವಾರ್ಡ್ ಕೂಡ ಪಡೆದಿದ್ದಾರೆ.
South Cinema
Priyanka Chopra: ಆರ್‌ಆರ್‌ಆರ್ ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾ: ಟ್ರೋಲ್‌ಗೆ ಗುರಿಯಾದ ನಟಿ
ನಟಿ (Priyanka Chopra) ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆರ್‌ಆರ್‌ಆರ್ ಚಿತ್ರವನ್ನು ‘ತಮಿಳು ಚಿತ್ರ’ ಎಂದು ಉಲ್ಲೇಖಿಸಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಟಿಯ ವಿರುದ್ಧ ಗರಂ ಆಗಿದ್ದಾರೆ.
ಬೆಂಗಳೂರು: ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರ ಆಸ್ಕರ್‌ಗೆ ಸಲ್ಲಿಸಿದಾಗಿನಿಂದಲೂ ಪ್ರಿಯಾಂಕಾ ಚೋಪ್ರಾ (Priyanka Chopra) ಉತ್ತಮ ಬೆಂಬಲಿಗರಾಗಿದ್ದರು. ಅಮೆರಿಕಾದಲ್ಲಿ ಚಿತ್ರದ ಪ್ರದರ್ಶನದಲ್ಲಿಯೂ ನಟಿ ಹಾಜರಾಗಿದ್ದರು. ಆದರೆ ಇದೀಗ ನಟಿ ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆರ್‌ಆರ್‌ಆರ್ ಚಿತ್ರವನ್ನು ‘ತಮಿಳು ಚಿತ್ರ’ ಎಂದು ಉಲ್ಲೇಖಿಸಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಟಿಯ ವಿರುದ್ಧ ಗರಂ ಆಗಿದ್ದಾರೆ.
ಡಾಕ್ಸ್ ಶೆಪರ್ಡ್ ಅವರೊಂದಿಗೆ ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನ ಇತ್ತೀಚಿನ ಸಂದರ್ಶನದಲ್ಲಿ, ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದರು. ಸಂದರ್ಶನದ ಸಮಯದಲ್ಲಿ, ನಿರೂಪಕರು RRR ಅನ್ನು ಬಾಲಿವುಡ್ ಚಲನಚಿತ್ರ ಎಂದು ಹೇಳಿದ್ದಾರೆ. ಬಾಲಿವುಡ್ ಮತ್ತು ಹಾಲಿವುಡ್ ಹೋಲಿಕೆ ಮಾಡುವಾಗ, ʻಕೆಲವು ಸೆಲೆಬ್ರಿಟಿಗಳನ್ನು ಮತ್ತು ಸ್ಟುಡಿಯೋಗಳು ಎಲ್ಲವನ್ನೂ ನಿಯಂತ್ರಿಸುತ್ತವೆʼ ಎಂದು ಹೇಳಿದರು. ಪ್ರಿಯಾಂಕಾ ಅವರ ಮಾತಿಗೆ ಒಪ್ಪಿಗೆ ಸೂಚಿಸಿ, “ನೀವು ದೂರದಲ್ಲಿದ್ದೀರಿ ಎಂದು ನಾನು ಭಾವಿಸುತ್ತೇನೆ, ದೊಡ್ಡ ಸ್ಟುಡಿಯೋಗಳು, ಕೆಲವು ನಟರುಗಳು ದೊಡ್ಡ ಸಿನಿಮಾಗಳನ್ನು ಚಲನಚಿತ್ರಗಳನ್ನು ಮಾಡುತ್ತಾರೆ. ಆದರೆ ಇದೀಗ ಎಲ್ಲವೂ ಬದಲಾಗಿದೆ. ಮೊದಲನೆಯದಾಗಿ ಸ್ಟ್ರೀಮಿಂಗ್ ಆಗಿದೆ. ಇದು ಕಂಟೆಂಟ್ ಮಾಡುತ್ತಿರುವ ಹಲವಾರು ಜನರಿಗೆ ಸಾಥ್ ನೀಡಿದೆ. ಬಾಲಿವುಡ್ ಉದ್ಯಮ ನಂಬಲಾಗದ ರೀತಿಯಲ್ಲಿ ವಿಕಸನಗೊಂಡಿದೆ.ʼʼಎಂದರು. ಆಗ ಸಂದರ್ಶನಕಾರ ʻಆರ್‌ಆರ್‌ಆರ್ ಸಿನಿಮಾ ಅಂತೆʼ ಎಂದು ಹೇಳಿದಾಗ, ನಟಿ ʻಆರ್‌ಆರ್‌ಆರ್ ಬಾಲಿವುಡ್ ಸಿನಿಮಾವಲ್ಲ, ತಮಿಳು ಸಿನಿಮಾʼ ಎಂದಿದ್ದಾರೆ.
ಪ್ರಿಯಾಂಕಾ ಸಂದರ್ಶಕರ ಮಾತನ್ನು ಸರಿಪಡಿಸಿ,ʻʻಆರ್‌ಆರ್‌ಆರ್ ತಮಿಳು ಚಿತ್ರ. ಇದು ದೊಡ್ಡ, ಮೆಗಾ, ಬ್ಲಾಕ್‌ಬಸ್ಟರ್ ಸಿನಿಮಾ. ಇದು ನಮ್ಮ ಅವೆಂಜರ್ಸ್‌ನಂತೆ” ಎಂದು ಹೇಳಿದರು. ಇದೀಗ ನಟಿ ಆರ್‌ಆರ್‌ಆರ್ ಸಿನಿಮಾ ತಮಿಳು ಸಿನಿಮಾ ಅಂದಿರುವುದಕ್ಕೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ 2023ರ ಆಸ್ಕರ್‌ಗೆ ಮುಂಚಿತವಾಗಿ ಆರ್‌ಆರ್‌ಆರ್ ಸಿನಿಮಾವನ್ನು ಪ್ರಚಾರ ಮಾಡಿದ್ದರು. ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ ಚಲನಚಿತ್ರವನ್ನು ಅಭಿನಂದಿಸಿದ್ದರು. ಇಷ್ಟೆಲ್ಲ ಸಪೋರ್ಟ್ ಮಾಡಿರುವ ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇದೀಗ ನೆಟ್ಟಿಗರು ಟ್ವೀಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Priyanka Chopra: ಫೇರ್‌ನೆಸ್ ಆ್ಯಡ್‌ಗಳಲ್ಲಿ ನಟಿಸುವುದು ಹಾನಿಕರ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ?
ಟ್ರೋಲ್ ಮಾಡಿ ನಟಿಯ ಕಾಲೆಳೆದ ನೆಟ್ಟಿಗರು
ನೆಟ್ಟಿಗೊಬ್ಬರು ʻʻನಿಮ್ಮ ಬಗ್ಗೆ ತುಂಬಾ ನಿರಾಶೆಯಾಗಿದೆ. ತೆಲುಗು ಚಿತ್ರ ಯಾವುದು ಎಂದು ನಿಮಗೆ ಹೇಳಲು ಸಾಧ್ಯವಿಲ್ಲ ಅಂದರೆ ನೀವು ಪ್ರಚಾರದ ಸಮಯದಲ್ಲಿ RRR ಚಿತ್ರವನ್ನು ಬೆಂಬಲಿಸಿದ್ದೀರಿ ಅದಕ್ಕಾಗಿ ನಾವು ತುಂಬಾ ಕೃತಜ್ಞರಾಗಿದ್ದೇವೆ! ಆದರೆ ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರಿ. ಸಿನಿಮಾ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಸಂಶೋಧನೆಯನ್ನು ಮಾಡಿ ಬನ್ನಿʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Priyanka Chopra : ಬಾಲಿವುಡ್‌ನ ಪೊಲಿಟಿಕ್ಸ್ಗೆ ಹೆದರಿ ಹಾಲಿವುಡ್ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ
ಪಾಡ್‌ಕ್ಯಾಸ್ಟ್ ಸಂಭಾಷಣೆಯಲ್ಲಿ “ಡಾಕ್ಸ್ ಶೆಪರ್ಡ್ ಜತೆ ಆರ್ಮ್‌ಚೇರ್ ಎಕ್ಸ್‌ಪರ್ಟ್”. ಆರ್‌ಆರ್‌ಆರ್ ಸಿನಿಮಾವನ್ನು ಬಾಲಿವುಡ್ ಚಿತ್ರ ಎಂದು ಲೇಬಲ್ ಮಾಡುವ ಸಂದರ್ಶಕರ ತಪ್ಪನ್ನು ಪ್ರಿಯಾಂಕಾ ಚೋಪ್ರಾ ಎತ್ತಿ ತೋರಿಸಿದ್ದಾರೆ. ತಮಿಳು ಚಿತ್ರ ಎಂದು ಬೇರೆ ಹೇಳಿದ್ದಾರೆ. ಉತ್ತರ ಭಾರತದ ಜನರು ಯಾವಾಗಲೂ ದಕ್ಷಿಣ ಭಾರತದ ಚಿತ್ರರಂಗವನ್ನು ತಮಿಳು ಮತ್ತು ಸಾಂಬಾರ್ ಎಂದು ಕಂಡುಕೊಳ್ಳುತ್ತಾರೆʼʼಎಂದು ಬರೆದುಕೊಂಡಿದ್ದಾರೆ.
ನಟಿ ಆರ್‌ಆರ್‌ಆರ್ ಚಿತ್ರತಂಡಕ್ಕೆ ಪ್ರೀ ಇವೆಂಟ್ ಪಾರ್ಟಿಯನ್ನು ಸಹ ಆಯೋಜಿಸಿದ್ದರು. ಆದರೆ ಸಿನಿಮಾದ ಮೂಲ ಭಾಷೆಯೇʼʼಗೊತ್ತಿಲ್ಲ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.
ಸಿಟಾಡೆಲ್‌ನ ಪ್ರಚಾರಕ್ಕಾಗಿ ಪಿಗ್ಗಿ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಶೀಘ್ರದಲ್ಲೇ ನಟಿ ‘ಸಿಟಾಡೆಲ್’ ಮತ್ತು ‘ಲವ್ ಎಗೇನ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
South Cinema
Junior NTR: ರಾಮ್‌ಚರಣ್ ಬರ್ತ್‌ಡೇ ಪಾರ್ಟಿಗೆ ಜ್ಯೂ. ಎನ್‌ಟಿಆರ್ ಗೈರು; ಇಬ್ಬರ ನಡುವೆ ಬಿರುಕು ಮೂಡಿದ್ಯಾಕೆ?
ಎನ್‌ಟಿಆರ್ ಹೊರತುಪಡಿಸಿ ತೆಲುಗು ಇಂಡಸ್ಟ್ರಿಯ ಪ್ರತಿಯೊಬ್ಬ ಗಣ್ಯರು ಉಪಸ್ಥಿತರಿದ್ದರು. ಆದರೆ ಜ್ಯೂನಿಯರ್ ಎನ್‌ಟಿಆರ್ ಅನುಪಸ್ಥಿತಿಯು ಟಾಲಿವುಡ್ ಚಿತ್ರರಂಗದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಅವರ ಸ್ನೇಹವು ಅಂದುಕೊಂಡಷ್ಟು ಬಲವಾಗಿಲ್ಲ ಎಂದು ವದಂತಿಗಳು ಹಬ್ಬಿವೆ.
ಬೆಂಗಳೂರು: ಆರ್‌ಆರ್‌ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ. ಈ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸಿದ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‌ಟಿಆರ್ (Junior NTR) ಪರಸ್ಪರ ದೂರವಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಮಾರ್ಚ್ 27 ರಂದು 38ನೇ ವರ್ಷಕ್ಕೆ ಕಾಲಿಟ್ಟ ರಾಮ್ ಚರಣ್ ತಮ್ಮ ಪತ್ನಿ ಉಪಾಸನಾ ಅವರೊಂದಿಗೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಯೋಜಿಸಿದ್ದರು. ಎನ್‌ಟಿಆರ್ ಹೊರತುಪಡಿಸಿ ತೆಲುಗು ಇಂಡಸ್ಟ್ರಿಯ ಪ್ರತಿಯೊಬ್ಬ ಗಣ್ಯರು ಉಪಸ್ಥಿತರಿದ್ದರು. ಆದರೆ ಜ್ಯೂನಿಯರ್ ಎನ್‌ಟಿಆರ್ ಅನುಪಸ್ಥಿತಿಯು ಟಾಲಿವುಡ್ ಚಿತ್ರರಂಗದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಅವರ ಸ್ನೇಹವು ಅಂದುಕೊಂಡಷ್ಟು ಬಲವಾಗಿಲ್ಲ ಎಂದು ವದಂತಿಗಳು ಹಬ್ಬಿವೆ.
ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದೆ. “ಇಬ್ಬರ ನಡುವಿನ ಬಿರುಕು ಗಂಭೀರವಾಗಿದೆ. ಆರ್‌ಆರ್‌ಆರ್ ಅನುಭವ, ವಿಶೇಷವಾಗಿ ಆಸ್ಕರ್‌ಗೆ ಮುನ್ನ ಅಮೆರಿಕಾದಲ್ಲಿ ಚಿತ್ರದ ಪ್ರಚಾರದ ಕಾರಣದಿಂದಲೇ ಎನ್‌ಟಿಆರ್ ಮತ್ತು ರಾಮ್ ಚರಣ್‌ರಣ್ ನಡುವೆ ಬಿರುಕು ಮೂಡಿದೆ. ರಾಮ್ ಚರಣ್ ಮಾತ್ರ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಎಂದು ಎನ್‌ಟಿಆರ್ ಭಾವಿಸಿದ್ದರು. ಈ ಕಾರಣದಿಂದಾಗಿಯೇ ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಎನ್‌ಟಿಆರ್ ಭಾಗಿಯಾಗಿಲ್ಲʼʼಎಂದು ವರದಿ ಮಾಡಿದೆ.
ಪತ್ನಿ ಲಕ್ಷ್ಮಿ ಪ್ರಣತಿ ಹುಟ್ಟುಹಬ್ಬದ ಸೆಲೆಬ್ರೆಷನ್‌ನಲ್ಲಿ ಜ್ಯೂನಿಯರ್ ಎನ್‌ಟಿಆರ್
ಇನ್ನೊಂದು ಮೂಲಗಳ ಪ್ರಕಾರ ಜ್ಯೂನಿಯರ್ ಎನ್‌ಟಿಆರ್ ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾರ್ಚ್ 26ರಂದು ಪಾರ್ಟಿಯನ್ನು ಆಯೋಜಿಸಿದ್ದರು. ಸೆಲೆಬ್ರೆಷನ್ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಅವರ ಪತ್ನಿಯ ಜನ್ಮದಿನಗಳು ಒಂದು ದಿನದ ಅಂತರದಲ್ಲಿವೆ. ಹೀಗಾಗಿ ನಟ ಭಾಗಿಯಾಗಿಲ್ಲ ಎಂತಲೂ ಹೇಳಲಾಗುತ್ತಿದೆ.
ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ನಡುವೆ ಅವರ ಭಿನ್ನಾಭಿಪ್ರಾಯ ಮೂಡಿದೆಯೇ ಎನ್ನುವ ಅಧಿಕೃತ ಮಾಹಿತಿ ಇಲ್ಲ. ಜ್ಯೂನಿಯರ್ ಎನ್‌ಟಿಆರ್ ಯಾಕೆ ಭಾಗಿಯಾಗಿಲ್ಲ ಎಂಬದು ನಟ ಸ್ಪಷ್ಟನೆ ನೀಡಬೇಕಿದೆ.
ಇದನ್ನೂ ಓದಿ: Junior NTR: ಪತ್ನಿ ಲಕ್ಷ್ಮಿ ಪ್ರಣತಿ ಜನುಮದಿನಕ್ಕೆ ಸ್ಪೆಷಲ್ ಫೋಟೊ ಮೂಲಕ ವಿಶ್ ಮಾಡಿದ ಜ್ಯೂ. ಎನ್‌ಟಿಆರ್
ಹೇಗಿತ್ತು ರಾಮ್‌ಚರಣ್ ಬರ್ತ್‌ಡೇ ಪಾರ್ಟಿ?
ರಾಮ್‌ಚರಣ್ ಮತ್ತು ಉಪಾಸನಾ ತಮ್ಮ ಮೊದಲನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯಾಗಿರುವ ಉಪಾಸನಾ ಪಾರ್ಟಿಗೆ ನೀಲಿ ಬಣ್ಣದ ಡ್ರೆಸ್ ಹಾಗೂ ಅದಕ್ಕೆ ಸರಿಹೊಂದುವಂತಹ ಫ್ಲಾಟ್ ಸ್ಲಿಪ್ಪರ್ ಧರಿಸಿ ಬಂದಿದ್ದರು. ರಾಮ್‌ಚರಣ್ ಕಪ್ಪು ಪ್ಯಾಂಟ್, ಶರ್ಟ್ ಮತ್ತು ಶೂನಲ್ಲಿ ಮಿಂಚುತ್ತಿದ್ದರು. ಈ ಜೋಡಿಯ ವಿಡಿಯೊವನ್ನು ಬಾಲಿವುಡ್‌ನ ಮಾಧ್ಯಮಗಳು ಹಂಚಿಕೊಂಡಿವೆ. ಅದಕ್ಕೆ ಆರ್‌ಆರ್‌ಆರ್ ಅಭಿಮಾನಿಗಳು, ರಾಮ್‌ಚರಣ್ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆ ಸುರಿಸಿದ್ದಾರೆ. “ಜೂ.ರಾಮ್‌ಚರಣ್ ಬರುತ್ತಿದ್ದಾರೆ”, “ಮುದ್ದಾದ ಜೋಡಿ”, “ಮೇಡ್ ಫಾರ್ ಈಚ್ ಅದರ್” ಎನ್ನುವಂತಹ ಹಲವಾರು ಕಮೆಂಟ್‌ಗಳು ಬಂದಿವೆ.
ರಾಮ್‌ಚರಣ್ ಬರ್ತ್‌ಡೇ ಪಾರ್ಟಿಗೆ ಆರ್‌ಆರ್‌ಆರ್ ನಿರ್ದೇಶಕ ಎಸ್.ಎಸ್.ರಾಜಮೌಳಿ, ಸಿನಿಮಾದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ, ನಟ ವಿಜಯದೇವರಕೊಂಡ, ನಾಗಾರ್ಜುನ, ನಾಗಚೈತನ್ಯ, ಅಖಿಲ್ ಅಕ್ಕಿನೇನಿ, ನಾಗ ಬಾಬು ಸೇರಿದಂತೆ ಅನೇಕ ಪ್ರಮುಖರು ಆಗಮಿಸಿದ್ದರು.
ಈ ಹಿಂದೆ ಪತಿಯ ಬರ್ತ್‌ಡೇ ಪ್ರಯುಕ್ತ ಉಪಾಸನಾ ಅವರು ವಿಶೇಷ ಫೋಟೊ ಹಂಚಿಕೊಂಡು ವಿಶ್ ಮಾಡಿದ್ದರು. ತನ್ನ ತೊಡೆ ಮೇಲೆ ರಾಮ್‌ಚರಣ್ ಕುಳಿತಿರುವ ಹಾಗೂ ರಾಮ್‌ಚರಣ್ ಹೆಗಲಿಗೆ ತಾವು ಒರಗಿರುವ ಎರಡು ಫೋಟೊಗಳನ್ನು ಹಂಚಿಕೊಂಡಿದ್ದ ಅವರು, “ಹ್ಯಾಪಿ ಬರ್ತ್‌ಡೇ ಬೆಸ್ಟೀ” ಎಂದು ಬರೆದುಕೊಂಡಿದ್ದರು. ಹಾಗೆಯೇ ರಾಮ್‌ಚರಣ್ ಅವರ ತಂದೆ ಚಿರಂಜೀವಿ ಕೂಡ ಮಗನ ಫೋಟೊ ಹಂಚಿಕೊಂಡು ಶುಭ ಹಾರೈಸಿದ್ದರು.
-
ಕರ್ನಾಟಕ14 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ15 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ18 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ13 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ9 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್10 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ12 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ16 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?