ಸಿನಿಮಾ
Rishab Shetty: ವಿಶ್ವಸಂಸ್ಥೆಯ ವೇದಿಕೆಯಲ್ಲಿ ರಿಷಬ್ ಕನ್ನಡ ಭಾಷಣ: ವಿಡಿಯೊ ವೈರಲ್
ಮಾರ್ಚ್ 17 ರಂದು (Rishab Shetty) ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್‌ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಾಗಿ ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್ ಗುಪ್ತ ತಿಳಿಸಿರುವುದು ವರದಿಯಾಗಿದೆ. ರಿಷಬ್ ಕೂಡ ಪ್ರಚಲಿತ ವಿದ್ಯಮಾನಗಳ ಕುರಿತು ಮತ್ತು ಕಾಂತಾರ (Kantara) ಚಿತ್ರದ ಕುರಿತು ವಿಷಯ ಮಂಡಿಸಲಿದ್ದಾರೆ
ಬೆಂಗಳೂರು: ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ವಿಶ್ವಸಂಸ್ಥೆಯ ಮಾನವ ಮಾನವ ಹಕ್ಕುಗಳ ಮಂಡಳಿ(UNHRC) ವಾರ್ಷಿಕ ಸಭೆಯಲ್ಲಿ ನಟ, ನಿರ್ಮಾಪಕ ರಿಷಬ್ ಶೆಟ್ಟಿ (Rishab Shetty) ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ ಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಲಿದ್ದಾರೆ ರಿಷಬ್. ಜತೆಗೆ ಮಾರ್ಚ್ 17 ರಂದು ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್‌ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಾಗಿ ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್ ಗುಪ್ತ ತಿಳಿಸಿರುವುದು ವರದಿಯಾಗಿದೆ.
ವಿವಿಧ ದೇಶಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿ ಹಲವು ವಿಷಯಗಳ ಕುರಿತು ಮಾತನಾಡುತ್ತಿದ್ದು, ರಿಷಬ್ ಕೂಡ ಪ್ರಚಲಿತ ವಿದ್ಯಮಾನಗಳ ಕುರಿತು ಮತ್ತು ಕಾಂತಾರ (Kantara) ಚಿತ್ರದ ಕುರಿತು ವಿಷಯ ಮಂಡಿಸಲಿದ್ದಾರೆ. ಕನ್ನಡದಲ್ಲೇ ರಿಷಬ್ ಭಾಷಣ ಮಾಡಿದ್ದು, ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ನಟ ಕರ್ನಾಟಕ ಸಂಸ್ಕೃತಿ, ದೈವಾರಾಧನೆ, ಕಾಡಿನ ಜನರ ಬದುಕು ಹೀಗೆ ನಾಡಿ ಭವ್ಯ ಸಂಸ್ಕೃತಿಯ ಕುರಿತು ಮಾತನಾಡಿದ್ದಾರೆ.
ವಿಡಿಯೊ ಇಲ್ಲಿದೆ
ಮಾರ್ಚ್ 17ರಂದು ಸ್ವಿಟ್ಜರ್ಲ್ಯಾಂಡ್ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಕಾಂತಾರ ಸಿನಿಮಾದ ಪ್ರದರ್ಶನದಲ್ಲೂ ಭಾಗಿಯಾಗಲಿದ್ದಾರೆ. ಸಿನಿಮಾ ಪ್ರದರ್ಶನದ ನಂತರ ಅವರೊಂದಿಗೆ ಮಾತುಕತೆಗೂ ಕೂಡ ಸಂಸ್ಥೆಯು ಆಯೋಜನೆ ಮಾಡಿದೆ.
ವಿಶ್ವಸಂಸ್ಥೆಯ ಮಾನವ ಮಾನವ ಹಕ್ಕುಗಳ ಮಂಡಳಿ(UNHRC) ವಾರ್ಷಿಕ ಸಭೆಯಲ್ಲಿ ಮಾತನಾಡಲು ಈಗಾಗಲೇ ಸ್ವಿಟ್ಜರ್ಲ್ಯಾಂಡ್ ಜಿನಿವಾ ತಲುಪಿದ್ದಾರೆ. ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೊಲೀಸ್ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ರಿಷಬ್ ಪರಿಸರ, ಹವಾಮಾನ ಮತ್ತು ಸಂರಕ್ಷಣೆಯ ಕುರಿತು ಹಾಗೂ ಕಾಂತಾರ ಸಿನಿಮಾದ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ನಿರ್ದೇಶಕಿ ಅನಿಂಧ್ಯಾ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೊಲಿಸಿ ಟ್ವೀಟ್‌ನಲ್ಲಿ ʻʻಜಿನೀವಾದಲ್ಲಿ, UNHRC ಅಧಿವೇಶನದಲ್ಲಿ, ಪರಿಸರ, ಹವಾಮಾನ ಮತ್ತು ಸಂರಕ್ಷಣೆಯ ಕುರಿತು ಮತ್ತು ಭಾರತೀಯ ಸಿನಿಮಾ ಕುರಿತು ರಿಷಬ್ ಮಾತನಾಡಲಿದ್ದಾರೆ. CGAPP ನಿರ್ದೇಶಕ ಅನಿಂದ್ಯಾ ಸೇನ್‌ಗುಪ್ತ ಅವರನ್ನು ಭೇಟಿಯಾದ ಕ್ಷಣʼʼಎಂದು ಹಂಚಿಕೊಂಡಿದೆ
ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೊಲಿಸಿ ಟ್ವೀಟ್
ಇದನ್ನೂ ಓದಿ: Rishab Shetty: ಕಾಂತಾರ ಚಿತ್ರದ ಬಳಿಕ ಬೊಮ್ಮಾಯಿಗೆ ರಿಷಬ್ ಶೆಟ್ಟಿ ಮನವಿ ಸಲ್ಲಿಸಿದ್ದೇನು?
ಪ್ರಿಕ್ವೆಲ್ ಆಗಿ ಬರಲಿದೆ ಕಾಂತಾರ 2
ಕಾಂತಾರ-1 ಸಿಕ್ವೆಲ್ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಸಿನಿಮಾ ಕಾಂತಾರಕ್ಕಿಂತ ಮೊದಲಿನ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್ ಖಚಿತಪಡಿಸಿದ್ದಾರೆ.
South Cinema
Actress Samantha: ಮನೆಯವರ ವಿರೋಧ ಕಟ್ಟಿಕೊಂಡು ‘ಊ ಅಂಟಾವಾ’ ಹಾಡಿಗೆ ಕುಣಿದಿದ್ದ ನಟಿ ಸಮಂತಾ
Actor Samantha: ನಟಿ ಸಮಂತಾ ಅವರು ಪುಷ್ಪ ಸಿನಿಮಾದ ಊ ಅಂಟಾವಾ ಹಾಡಿಗೆ ನೃತ್ಯ ಮಾಡುವುದಕ್ಕೆ ಕುಟುಂಬದ ವಿರೋಧ ಕಟ್ಟಿಕೊಂಡ ಬಗ್ಗೆ ಮಾತನಾಡಿದ್ದಾರೆ.
ಹೈದರಾಬಾದ್: ದಕ್ಷಿಣ ಭಾರತದ ನಟಿ ಸಮಂತಾ (Actress Samantha) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದವರು. ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದಲ್ಲಿ ʼಊ ಅಂಟಾವಾʼ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಐಟಂ ಸಾಂಗ್‌ಗೂ ಸೈ ಎಂದು ತೋರಿಸಿಕೊಟ್ಟವರು. ಆದರೆ ನಟಿ ಈ ಹಾಡಿಗೆ ನೃತ್ಯ ಮಾಡುವ ಮುನ್ನ ಕೆಲವು ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಯಿತಂತೆ. ಈ ವಿಚಾರವನ್ನು ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Actress Samantha : ಯಾರನ್ನಾದರೂ ಪ್ರೀತಿಸಿ ಎಂದ ಅಭಿಮಾನಿಗೆ ಸರಿಯಾದ ಉತ್ತರ ನೀಡಿದ ಸಮಂತಾ
ತಮ್ಮ ಮುಂಬರುವ ಚಿತ್ರ ಶಾಕುಂತಲಂನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ʼಊ ಅಂಟಾವಾʼ ಹಾಡಿನ ಹಿಂದಿನ ಕಥೆಯನ್ನು ತೆರೆದಿಟ್ಟಿದ್ದಾರೆ. “ನನ್ನ ಮದುವೆ ಮುರಿದುಬಿದ್ದ ವಿಚಾರವನ್ನು ನಾವು ಸಮಾಜಕ್ಕೆ ಹೇಳಿಕೊಳ್ಳಬೇಕು ಎನ್ನುವ ಸಮಯದಲ್ಲೇ ಈ ಹಾಡಿನ ಆಫರ್ ನನಗೆ ಬಂದಿತು. ಆಗ ನನ್ನ ಕುಟುಂಬ ನಾನು ಮನೆಯಲ್ಲೇ ಇರಬೇಕು ಎಂದು ಬಯಸುತ್ತಿತ್ತು. ಈ ಹಾಡಿಗೆ ನೃತ್ಯ ಮಾಡುವುದಕ್ಕೆ ನನ್ನ ಕುಟುಂಬದಿಂದ ವಿರೋಧ ಬಂದಿತ್ತು” ಎಂದು ನಟಿ ಹೇಳಿದ್ದಾರೆ.
“ಅಷ್ಟೇ ಅಲ್ಲ, ನನ್ನ ಸ್ನೇಹಿತರೂ ಕೂಡ ಈ ಹಾಡಿನ ವಿಚಾರದಲ್ಲಿ ನನಗೆ ಬೆಂಬಲ ನೀಡಲಿಲ್ಲ. ʼಸೂಪರ್ ಡಿಲಕ್ಸ್ʼ ಸಿನಿಮಾದಲ್ಲಿ ನಟಿಸುವುದಕ್ಕೂ ಒಕೆ ಎಂದಿದ್ದ ಸ್ನೇಹಿತರು ಈ ಹಾಡಿನ ವಿಚಾರದಲ್ಲಿ ಹಿಂದೆ ಬಿದ್ದರು. ಆಗ ನಾನು ಎಲ್ಲವನ್ನೂ ಮೀರಿ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ನಾನೇಕೆ ಬದುಕನ್ನು ಮರೆಮಾಚಿಕೊಂಡು ಬದುಕಬೇಕೆಂದು ನನ್ನದೇ ಆದ ನಿರ್ಧಾರ ತೆಗೆದುಕೊಂಡೆ” ಎಂದು ಸಮಂತಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Samantha Ruth Prabhu: `ಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಬೇಕಂತಿದ್ದ ಸಮಂತಾ: ಕಾರಣವೇನು?
“ಮದುವೆ ವಿಚಾರದಲ್ಲಿ ನಾನು ಸಂಬಂಧವನ್ನು ಉಳಿಸಿಕೊಳ್ಳುವುದಕ್ಕೆ ಶೇ.100 ಪ್ರಯತ್ನ ಮಾಡಿದ್ದೇನೆ. ಆದರೆ ಅದು ಸಫಲವಾಗಲಿಲ್ಲ. ಆ ವಿಚಾರದಲ್ಲಿ ನನ್ನನ್ನು ನಾನು ತಪ್ಪಿತಸ್ಥೆ ರೀತಿಯಲ್ಲಿ ನೋಡಿಕೊಳ್ಳುವುದಕ್ಕೂ ಇಷ್ಟಪಡುವುದಿಲ್ಲ” ಎಂದು ನಟಿ ತಮ್ಮ ಮದುವೆ ಮುರಿದುಬಿದ್ದ ವಿಚಾರವನ್ನೂ ಹೇಳಿಕೊಂಡಿದ್ದಾರೆ.
South Cinema
Naga Chaitanya: ಶೋಭಿತಾ-ನಾಗಚೈತನ್ಯ ಡೇಟಿಂಗ್ ಮಾಡಿರುವ ಫೋಟೊ ಇದ್ದಕ್ಕಿದ್ದಂತೆ ಮಾಯಾ!
ಲಂಡನ್ (Naga Chaitanya) ರೆಸ್ಟೋರೆಂಟ್‌ನಲ್ಲಿ ದಂಪತಿ ಊಟ ಮಾಡುತ್ತಿರುವ ಹೊಸ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಫೋಟೊ ವೈರಲ್ ಆಗುತ್ತಿದ್ದಂತೆ ಬಾಣಸಿಗ ಸುರೇಂದರ್ ಮೋಹನ್ ಈಗ ಡಿಲೀಟ್ ಮಾಡಿದ್ದಾರೆ.
ಬೆಂಗಳೂರು: ತೆಲುಗು ಸ್ಟಾರ್ ನಾಗ ಚೈತನ್ಯ (Naga Chaitanya) ಮತ್ತು ಬಾಲಿವುಡ್ ನಟಿ ಶೋಭಿತಾ ಧೂಲಿಪಾಲ (Sobhita Dhulipala ) ಅವರ ಡೇಟಿಂಗ್ ವದಂತಿಗಳು ಮತ್ತೊಮ್ಮೆ ಗಮನ ಸೆಳೆದಿವೆ. ಇದೀಗ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗಿದೆ. ಲಂಡನ್ ರೆಸ್ಟೋರೆಂಟ್‌ನಲ್ಲಿ ದಂಪತಿ ಊಟ ಮಾಡುತ್ತಿರುವ ಹೊಸ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಫೋಟೊ ವೈರಲ್ ಆಗುತ್ತಿದ್ದಂತೆ ಬಾಣಸಿಗ ಸುರೇಂದರ್ ಮೋಹನ್ ಈಗ ಡಿಲೀಟ್ ಮಾಡಿದ್ದಾರೆ. ಈ ಕಾರಣದಿಂದಾಗಿ ಅನುಮಾನ ಹೆಚ್ಚಾಗುತ್ತಿದ್ದು ನೆಟ್ಟಿಗರು ಇಬ್ಬರ ಡೇಟಿಂಗ್ ಸುದ್ದಿ ಪಕ್ಕಾ ಎಂದು ಕಮೆಂಟ್ ಮಾಡಿದ್ದಾರೆ.
ಇಬ್ಬರು ಸಿಕ್ಕಿಬಿದ್ದಿದ್ದು ಆ ಹೋಟೆಲ್‌ನ ಬಾಣಸಿಗ ಸುರೇಂದರ್ ಮೋಹನ್ ಶೇರ್ ಮಾಡಿದ ಫೋಟೊದಿಂದ. ಶೋಭಿತಾ ಧೂಲಿಪಾಲ ಮೇಜಿನ ಮೇಲೆ ಹಿಂಭಾಗದಲ್ಲಿ ಕುಳಿತಿರುವುದನ್ನು ಕಾಣಬಹುದು. ಚಿತ್ರ ಫೆಬ್ರವರಿ 1ರಂದು ಹಂಚಿಕೊಳ್ಳಲಾಗಿದೆ. ಆದರೆ ಇದೀಗ ಅಭಿಮಾನಿಗಳು ಶೋಭಿತಾ ಅವರನ್ನು ಚಿತ್ರದಲ್ಲಿ ಗುರುತಿಸಿದ್ದಾರೆ.
ಚಿತ್ರದ ಜತೆಗೆ, ಬಾಣಸಿಗರು ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ನಾಗಚೈತನ್ಯ ನಮ್ಮೊಂದಿಗೆ ಭೋಜನ ಮಾಡುವುದು ನಮಗೆ ಸಂತೋಷವಾಗಿದೆ. ನೀವು ಊಟವನ್ನು ಆನಂದಿಸಿದ್ದೀರಿʼ ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿಯೂ ನಾಗಚೈತನ್ಯ ಮತ್ತು ಶೋಭಿತಾ ಲಂಡಲ್‌ನಲ್ಲಿರುವ ಫೋಟೊ ವೈರಲ್ ಆಗಿತ್ತು. ಆ ಫೋಟೊಗಳು ಡೇಟಿಂಗ್ ವದಂತಿಗೆ ಪುಷ್ಟಿ ನೀಡಿತ್ತು. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರ ಫೋಟೊಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ, ಇದು ಫೇಕ್ ಎನ್ನುವ ಮಾತು ಕೇಳಿ ಬಂದಿತ್ತು.
ಇದನ್ನೂ ಓದಿ: Samantha Ruth Prabhu: ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಸಮಂತಾ ಹೇಳಿದ್ದು ಯಾಕೆ?
ಶೋಭಿತಾ ಧೂಲಿಪಾಲ ಯಾರು?
ಆಂಧ್ರ ಪ್ರದೇಶದ ಶೋಭಿತಾ ಧೂಲಿಪಾಲ ಅವರು ಮಾಡೆಲ್ ಆಗಿದ್ದವರು. ಇಲ್ಲಿಯವರೆಗೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಶೋಭಿತಾ 2016ರಲ್ಲಿ ರಮನ್ ರಾಘವ್ 2.0 ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಗೂಢಚಾರಿ, ದಿ ಬಾಡಿ, ಘೋಸ್ಟ್ ಸ್ಟೋರೀಸ್, ಕುರುಪ್, ಮೇಜರ್ ಮುಂತಾದ ಸಿನಿಮಾಗಳಲ್ಲಿ ಶೋಭಿತಾ ಧೂಲಿಪಾಲ ನಟಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್: 1, ಸಿತಾರಾ, ಮಂಕಿ ಮ್ಯಾನ್ ಸಿನಿಮಾಗಳಲ್ಲಿಯೂ ಶೋಭಿತಾ ನಟಿಸಿದ್ದು, ಅವುಗಳು ರಿಲೀಸ್ ಆಗಬೇಕಿವೆ. 2013ರಲ್ಲಿ ಫೇಮಿನಾ ಮಿಸ್ ಇಂಡಿಯಾ ಅವಾರ್ಡ್ ಕೂಡ ಪಡೆದಿದ್ದಾರೆ.
ಸಿನಿಮಾ
Kannada Web Series: ಹೊಸ ಪ್ರತಿಭೆಗಳ ವಿನೂತನ ಪ್ರಯತ್ನ ಕ್ರೈಂ ಥ್ರಿಲರ್ ‘ವೈಟ್ ಆ್ಯಂಡ್ ಬ್ಲ್ಯಾಕ್’ ವೆಬ್ ಸಿರೀಸ್!
ಹೊಸ ಪ್ರತಿಭೆಗಳ (Kannada Web Series) ವಿನೂತನ ಪ್ರಯತ್ನವಿರುವ ಈ ವೆಬ್ ಸಿರೀಸ್ ಹೆಸರು ‘ವೈಟ್ ಆ್ಯಂಡ್ ಬ್ಲ್ಯಾಕ್’. ಜೋಗೇಶ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ವೈಟ್ ಆ್ಯಂಡ್ ಬ್ಲ್ಯಾಕ್’ ವೆಬ್ ಸಿರೀಸ್ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಬೆಂಗಳೂರು: ಕ್ರೈಂ ಥ್ರಿಲ್ಲರ್, ಸೈನ್ಸ್ ಫಿಕ್ಷನ್ ವೆಬ್ ಸಿರೀಸ್‌ವೊಂದು ಕನ್ನಡದಲ್ಲಿ ನಿರ್ಮಾಣವಾಗಿ ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹೊಸ ಪ್ರತಿಭೆಗಳ ವಿನೂತನ ಪ್ರಯತ್ನವಿರುವ ಈ ವೆಬ್ ಸಿರೀಸ್ (Kannada Web Series) ಹೆಸರು ‘ವೈಟ್ ಆ್ಯಂಡ್ ಬ್ಲ್ಯಾಕ್’. ಜೋಗೇಶ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ವೈಟ್ ಆ್ಯಂಡ್ ಬ್ಲ್ಯಾಕ್’ ವೆಬ್ ಸಿರೀಸ್ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಅಭಿನಂದನ್ ಕಥೆ ಬರೆದು ನಿರ್ದೇಶನ ಮಾಡಿರುವ ಮೊದಲ ವೆಬ್ ಸಿರೀಸ್ ಇದು. ರಂಗಭೂಮಿ ಕಲಾವಿದನಾಗಿ, ಬರಹಗಾರನಾಗಿ ಅಭಿನಂದನ್ ಗುರುತಿಸಿಕೊಂಡಿದ್ದಾರೆ. ಹಲವು ನಾಟಕಗಳಿಗೆ ಕಥೆ ಬರೆದು ನಿರ್ದೇಶಿಸಿರುವ ಅನುಭವ ಇವರಿಗಿದ್ದು, ತಮ್ಮ ಮೊದಲ ವೆಬ್ ಸಿರೀಸ್‌ಗೂ ಸ್ವತಃ ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಕಲಾವಿದರು ಹಾಗೂ ಪ್ರತಿಭಾವಂತ ಯುವ ತಾಂತ್ರಿಕ ವರ್ಗವನ್ನು ಬಳಸಿಕೊಂಡು ವೆಬ್ ಸರಣಿಯನ್ನು ನೀಡಿ ಗಮನ ಸೆಳೆಯುತ್ತಿದ್ದಾರೆ ಅಭಿನಂದನ್.
‘ರಾಮಾ ರಾಮಾ ರೇ’ ಖ್ಯಾತಿಯ ನಿರ್ದೇಶಕ ಸತ್ಯ ವೆಬ್ ಸೀರೀಸ್ ಕಂಟೆಂಟ್ ಮೆಚ್ಚಿ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ನೋಡುಗರು ಕೂಡ ತಂಡದ ಪ್ಯಾಷನ್, ಕಂಟೆಂಟ್, ಅದನ್ನು ತೆರೆ ಮೇಲೆ ಕಟ್ಟಿಕೊಟ್ಟ ರೀತಿಗೆ ಬೆರಗಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮೊದಲ ಕನಸಿಗೆ, ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹ ಸಿಗುತ್ತಿರುವುದು ನಿರ್ದೇಶಕ ಅಭಿನಂದನ್ ಹಾಗೂ ತಂಡಕ್ಕೆ ಸಂತಸ ತಂದಿದೆ.
ಜೋಗೇಶ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ‘ವೈಟ್ ಆ್ಯಂಡ್ ಬ್ಲ್ಯಾಕ್’ ವೆಬ್ ಸಿರೀಸ್
ಬಹುತೇಕ ರಂಗಭೂಮಿ ಕಲಾವಿದರೇ ನಟಿಸಿರುವ ಈ ವೆಬ್ ಸಿರೀಸ್‌ನಲ್ಲಿ ಸತ್ಯ ಸೀರಿಯಲ್ ಬಾಲಾ ಪಾತ್ರಧಾರಿ ಶಶಿ ರಾಜ್, ಪ್ರಿಯಾಂಕ ಪ್ರಕಾಶ್, ಚನ್ನಕೇಶವ.ಜಿ, ಸವಿತ ಒಳಗೊಂಡ ತಾರಾಗಣವಿದೆ. ಕಮಲ್.ವಿ ಛಾಯಾಗ್ರಹಣ, ಸತ್ಯ ರಾಧಕೃಷ್ಣ ಸಂಗೀತ ನಿರ್ದೇಶನದಲ್ಲಿ ‘ವೈಟ್ ಆ್ಯಂಡ್ ಬ್ಲ್ಯಾಕ್’.ಮೂಡಿ ಬಂದಿದೆ. ಜೋಗೇಶ್ ಫಿಲ್ಮ್ಸ್ ಬ್ಯಾನರ್ ನಡಿ ಚಿತ್ರದುರ್ಗ ಸಿದ್ದಯ್ಯ ಜೋಗೇಶ್ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ.
South Cinema
Actor Upendra: ನನಗೆ ಗೊತ್ತಿಲ್ಲ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ, ಅತಿ ಬುದ್ವಂತ್ರು! ಹೀಗೆ ಅಂದಿದ್ಯಾಕೆ ಉಪ್ಪಿ?
ನಟ ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ (Actor Upendra) ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಯೊಂದನ್ನು ಎತ್ತಿ ಸಂಚಲನ ಮೂಡಿಸಿದ್ದರು. ಈ ಬಗ್ಗೆ ಭಾರಿ ಪರ ಮತ್ತು ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದು, ಇದೀಗ ಮತ್ತೆ ಉಪ್ಪಿ ಖಡಕ್ ಆಗಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ರಿಯಲ್ ಸ್ಟಾರ್ ಉಪೇಂದ್ರ (Actor Upendra) ಅವರು ಸಖತ್ ಸುದ್ದಿಯಲ್ಲಿದ್ದಾರೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ನಟ ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಯೊಂದನ್ನು ಎತ್ತಿ ಸಂಚಲನ ಮೂಡಿಸಿದ್ದರು. ಈ ಬಗ್ಗೆ ಭಾರಿ ಪರ ಮತ್ತು ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದು, ಇದೀಗ ಮತ್ತೆ ಉಪ್ಪಿ ಖಡಕ್ ಆಗಿ ಟ್ವೀಟ್ ಮಾಡಿದ್ದಾರೆ.
ಉಪ್ಪಿ ಮೊದಲಿಗೆ ಟ್ವೀಟ್ ಮಾಡಿದ್ದೇನು?
“ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು
ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?!
ಏಕೆಂದು ಬಲ್ಲವರು ತಿಳಿಸುತ್ತೀರಾ?ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಸಾರ್ವಜನಿಕರು ಉಪ್ಪಿಗೆ ತಲೆ ಕೆಟ್ಟಿದೆಯಾ ಎಂದು ಕಮೆಂಟ್ ಮೂಲಕ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಒಬ್ಬರು ʻʻಸ್ವಲ್ಪ ಅರ್ಥ ಮಾಡ್ಕೊಳಿ ಸ್ವಾಮಿ. ಮತಯಂತ್ರಗಳನ್ನು ಮತಗಟ್ಟೆಗಳಿಂದ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ಯಬೇಕು, ಅದರ ಜತೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಇತ್ಯಾದಿ ಇರುತ್ತೆ ಅಲ್ವಾ? ಇಷ್ಟೆಲ್ಲಾ ಮಾಡೋಕ್ಕೆ 2 ದಿನ ಬೇಕಲ್ವಾ ಸ್ವಾಮಿ?ʼʼಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ʻʻನಿಮ್ಮ ಸಿನಿಮಾ ಶೂಟಿಂಗ್ ಮುಗಿದ ದಿನವೇ ರಿಲೀಸ್ ಮಾಡ್ತೀರಾ? ಏಕೆಂದು ತಿಳಿಸುವಿರಾ ಸ್ವಾಮಿ?ʼʼಎಂದು ಕಮೆಂಟ್ ಮಾಡಿದ್ದಾರೆ.
ʻʻತಾಂತ್ರಿಕ ದೋಷದಿಂದ ಮತ್ತು ಬೇರೆ ಕಾರಣಗಳಿಂದ ಮತದಾನ ನಿಂತರೆ ಮರುಮತದಾನ ಮಾಡಲಿಕ್ಕೆ ಸಮಯ ಬೇಕಲ್ಲವೇ?ʼʼಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ಪೋಸ್ಟ್ ಹಾಕಿದ ಬೆನ್ನಲ್ಲೇ ನಟ ಉಪ್ಪಿಗೆ ಸಾವರ್ಜನಿಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಾದ ನಂತರ ಮತ್ತೆ ಉಪ್ಪಿ ತಮ್ಮ ಟ್ವೀಟ್ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.
ಉಪೇಂದ್ರ ಅವರ ಎರಡನೇ ಟ್ವೀಟ್
ಉಪ್ಪಿ ತಮ್ಮ ಟ್ವೀಟ್‌ನಲ್ಲಿ ʻʻಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….ಅಬ್ಬಬ್ಬಾ ಏನು ಕಾಮೆಂಟ್ಸ್‌ಗಳು ?!ವಾರೆ ವಾಹ್! ವ್ಯಾಪಾರಿ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಮೆಂಟ್ ಮಾಡಿ ನೋಡೋಣ. ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….!ʼʼಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Priyanka Upendra | ʻಪ್ರಜೆಯೇ ಪ್ರಭು’ ಎಂದು ಪ್ರಜಾಕೀಯಕ್ಕೆ ಸಾಥ್ ಕೊಟ್ರಾ ಪ್ರಿಯಾಂಕಾ ಉಪೇಂದ್ರ?
ಈ ಬಗ್ಗೆ ನೆಟ್ಟಿಗರು ಕೂಡ ಖಡಕ್ ಪ್ರತಿಕ್ರಿಯೆ ನೀಡಿದ್ದು ಒಬ್ಬರು ʻನಿಮ್ಮದೂ ರಾಜಕೀಯ ಪಕ್ಷನೇ, ಪ್ರಜಾಕೀಯ ಅಂತ ಹೆಸರು ಹೇಳಿದ್ದು ಕೂಡಲೇ ಅದು ಚೇಂಜ್ ಆಗಲ್ಲ.. ಡಿಜಿಟಲ್ ಕ್ಯಾಮೆರಾ, ಹೈ ಟೆಕ್‌ನಾಲಜಿ ಮಾಡಿ ಮಾಡುವ ಸಿನೆಮಾ ಆಗಿದ್ರೆ ಯಾಕೆ ಟೈಂ ತಗೊಂಡು ರಿಲೀಸ್ ಮಾಡ್ತೀರಾʼʼ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ʻʻಮೊದಲು ಚುನಾವಣೆ ವ್ಯವಸ್ಥೆ ಅರ್ಥ ಮಾಡಿಕೊಳ್ಳಿ. ಎಲ್ಲಿಯಾದರೂ ಮತದಾನಕ್ಕೆ ತೊಂದರೆ ಆದರೆ ಎರಡು ದಿನ ಬಿಟ್ಟು ಮರು ಮತದಾನ ನಡೆಸಬೇಕು. ಇದುವೇ ಮುಖ್ಯ ಕಾರಣʼʼಎಂದು ಸಲಹೆ ನೀಡಿದ್ದಾರೆ.
-
ಕರ್ನಾಟಕ12 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ16 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ11 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?