Keerthy Suresh: ಹಿಂದಿ ಹೇರಿಕೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ ಕೀರ್ತಿ ಸುರೇಶ್‌ ! - Vistara News

South Cinema

Keerthy Suresh: ಹಿಂದಿ ಹೇರಿಕೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ ಕೀರ್ತಿ ಸುರೇಶ್‌ !

Keerthy Suresh: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್‌ ಅಭಿನಯದ ಮುಂದಿನ ತಮಿಳು ಚಿತ್ರ ʼರಘು ತಾತಾʼ. ಈ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ಸ್ ಕಾಲಿವುಡ್‌ಗೆ ಕಾಲಿಟ್ಟಿದೆ. ಸದ್ಯ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

VISTARANEWS.COM


on

raghu thatha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ʼಕೆಜಿಎಫ್‌ʼ ಸರಣಿ, ʼಕಾಂತಾರʼ, ʼಸಲಾರ್‌ʼ ಮುಂತಾದ ಚಿತ್ರಗಳನ್ನು ನಿರ್ಮಿಸಿ ದೇಶಾದ್ಯಂತ ಸಂಚಲನ ಸೃಷಿಸಿದ ಕನ್ನಡದ ಹೊಂಬಾಳೆ ಫಿಲ್ಮ್ಸ್‌ನ (Hombale Films) ಮೊದಲ ತಮಿಳು ಸಿನಿಮಾ ‘ರಘು ತಾತಾ’ (Raghu Thatha) ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ನ ಮೊದಲ ಈ ತಮಿಳು ಸಿನಿಮಾದಲ್ಲಿ ಬಹುಭಾಷಾ ನಟಿ, ಪ್ರತಿಭಾವಂತ ಕಲಾವಿದೆ ಕೀರ್ತಿ ಸುರೇಶ್‌ (Keerthy Suresh) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.

ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ʼʼರಘುತಾತಾ’ ಮಹಿಳಾ ಪ್ರಧಾನ ಕಥೆಯನ್ನೊಳಗೊಂಡ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಅಸಿತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼಎಂದು ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಇದೀಗ ಬಿಡುಗಡೆಯಾದ ಟೀಸರ್‌ನಲ್ಲಿ ಈ ಅಂಶ ಕಂಡು ಬಂದಿದೆ.

ಗಮನ ಸೆಳೆದ ಕೀರ್ತಿ ಸುರೇಶ್‌

ಬಿಡುಗಡೆಯಾದ ಒಂದು ನಿಮಿಷದ ಟೀಸರ್‌ನಲ್ಲಿ, ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ಹೋರಾಡುವ ಯುವತಿಯಾಗಿ ಕೀರ್ತಿ ಸುರೇಶ್‌ ಮಿಂಚಿದ್ದಾರೆ. ಉದ್ಯೋಗ ಬಡ್ತಿಗಾಗಿ ಹಿಂದಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು ಎನ್ನುವ ಷರತ್ತನ್ನು ಆಕೆ ವಿರೋಧಿಸುತ್ತಾಳೆ. ಅನೇಕ ಜನರನ್ನು ಸಂಘಟಿಸಿ ಬೀದಿಗಿಳಿದು ಹೋರಾಡುತ್ತಾಳೆ. ಸದ್ಯ ಇದಿಷ್ಟು ವಿಚಾರ ಟೀಸರ್‌ ಮೂಲಕ ಬಹಿರಂಗಗೊಂಡಿದೆ. ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿ ಬಂದಿದೆ. ದಿಟ್ಟ ಯುವತಿ ಪಾತ್ರದಲ್ಲಿ ಕಂಡು ಬಂದಿರುವ ಕೀರ್ತಿ ಸುರೇಶ್‌ ಪಾತ್ರಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.

ಯಾವಾಗ ತೆರೆಗೆ?

ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್‌ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ʼಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಟೀಸರ್‌ ಕೊನೆಯಲ್ಲಿ ಕಮಿಂಗ್‌ ಸೂನ್‌ ಎಂದು ಹೇಳಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಮೂಲಗಳ ಪ್ರಕಾರ ಈ ಚಿತ್ರ ಬೇಸಗೆ ರಜೆಯ ವೇಳೆ ತೆರೆಗೆ ಬರಲಿದೆ.

ಇದನ್ನೂ ಓದಿ: Hombale Films: ವರ್ಲ್ಡ್ ವೈಡ್ ನಮ್ದೇ ಹವಾ; ಹೊಂಬಾಳೆ ಫಿಲ್ಮ್ಸ್‌ಸಂಚಲನ!

ʼಸಲಾರ್‌ʼ ಮೂಲಕ ಗೆಲುವಿನ ನಗೆ ಬೀರಿದ ಹೊಂಬಾಳೆ ಫಿಲ್ಮ್ಸ್‌

ವಿಜಯ್‌ ಕಿರಗಂದೂರು ಮಾಲಕತ್ವದ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ʼಸಲಾರ್‌ʼ ಚಿತ್ರ ಇತ್ತೀಚೆಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡು ಭರ್ಜರಿ ಕಲೆಕ್ಷನ್‌ ಮಾಡಿದೆ. ಪ್ರಶಾಂತ್‌ ನೀಲ್‌ ನಿರ್ದೇಶನ್‌ ಈ ಚಿತ್ರದ ಮೂಲಕ ಟಾಲಿವುಡ್‌ ಸ್ಟಾರ್‌ ಪ್ರಭಾಸ್‌ ಸತತ ಸೋಲಿನ ಸುಳಿಯಿಂದ ಎದ್ದು ಬಂದಿದ್ದಾರೆ. ಕಳೆದ ತಿಂಗಳು ರಿಲೀಸ್‌ ಆದ ʼಸಲಾರ್‌ʼ ಈಗಲೂ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಗಲ್ಲಾ ಪಟ್ಟೆಗೆಯಲ್ಲಿ 600 ಕೋಟಿ ರೂ.ಗಿಂತ ಅಧಿಕ ಗಳಿಕೆ ಕಂಡಿರುವ ʼಸಲಾರ್‌ʼನಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Chandan Shetty: 3ನೇ ವ್ಯಕ್ತಿ ಜತೆ ನಿವೇದಿತಾ ಸಂಬಂಧದ ಕುರಿತು ಚಂದನ್‌ ಹೇಳಿದ್ದೇನು?

Chandan Shetty: ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಒಂದು ವಿಡಿಯೊ ಶೇರ್ ಮಾಡಿ ಶುಭ ಕೋರಿದ್ದರು. ಅದರಲ್ಲಿ ನಿವೇದಿತಾ ಜತೆಗಿನ ಒಂದಷ್ಟು ಫೋಟೊಗಳನ್ನು ಹಾಕಿದ್ದರು. ಇದಕ್ಕೆ ಮನಬಂದಂತೆ ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು. ಆ ಬಗ್ಗೆ ಮಾಜಿ ದಂಪತಿ ಸ್ಪಷ್ಟನೆ ನೀಡಿದ್ದಾರೆ.ಒಬ್ಬ ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿಗೆ ಸೇರಿಸಿ ಸಂಬಂಧ ಕಲ್ಪಿಸಿದ್ದು ನನ್ನ ಮನಸ್ಸಿಗೆ ತುಂಬ ಬೇಸರ ಆಗಿದೆ ಎಂದಿದ್ದಾರೆ ಚಂದನ್‌.

VISTARANEWS.COM


on

Chandan Shetty Niveditha gowda roumers on srujan lokesh
Koo

ಬೆಂಗಳೂರು: ಕನ್ನಡದ ರ್‍ಯಾಪರ್‌ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದ ಬೆನ್ನಲ್ಲೇ ಕೆಲವರು ನಟ ಸೃಜನ್ ಲೋಕೇಶ್ ಹೆಸರು ಎಳೆದುತಂದು ಟ್ರೋಲ್ ಮಾಡಿದ್ದರು. ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಒಂದು ವಿಡಿಯೊ ಶೇರ್ ಮಾಡಿ ಶುಭ ಕೋರಿದ್ದರು. ಅದರಲ್ಲಿ ನಿವೇದಿತಾ ಜತೆಗಿನ ಒಂದಷ್ಟು ಫೋಟೊಗಳನ್ನು ಹಾಕಿದ್ದರು. ಇದಕ್ಕೆ ಮನಬಂದಂತೆ ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು. ಆ ಬಗ್ಗೆ ಮಾಜಿ ದಂಪತಿ ಸ್ಪಷ್ಟನೆ ನೀಡಿದ್ದಾರೆ.ಒಬ್ಬ ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿಗೆ ಸೇರಿಸಿ ಸಂಬಂಧ ಕಲ್ಪಿಸಿದ್ದು ನನ್ನ ಮನಸ್ಸಿಗೆ ತುಂಬ ಬೇಸರ ಆಗಿದೆ ಎಂದಿದ್ದಾರೆ ಚಂದನ್‌.

ಮೂರನೇ ವ್ಯಕ್ತಿಯನ್ನು ಸಂಬಂಧಿಸಿ ಸಂಬಂಧ ಕೂಡ ಕಲ್ಪಿಸುತ್ತಿದ್ದಾರೆ. ಆದರೆ ಅವರು ನಮಗೆ ಫ್ಯಾಮಿಲಿ ತರ. ಆ ವ್ಯಕ್ತಿ ಜತೆ ಹೆಸರು ಸೇರಿಸಿದ್ದು ಸರಿಯಲ್ಲ. ಇದು ಕನ್ನಡಿಗರಾಗಿ ನಮಗೆ ಶೋಭೆ ಅಲ್ಲ. ಯಾಕೆಂದರೆ ಆ ವ್ಯಕ್ತಿಯ ಮನೆಗೆ ನಾನು ಕೂಡ ಅನೇಕ ಬಾರಿ ಹೋಗಿದ್ದೇನೆ. ತುಂಬ ಒಳ್ಳೆಯ ಕುಟುಂಬ ಅವರದ್ದುʼʼಎಂದರು ಚಂದನ್‌.

ಇನ್ನು ನಿವೇದಿತಾ ಕೂಡ ʻʻಆ ರೀತಿಯ ಪೋಸ್ಟ್​ಗಳನ್ನು ನೋಡಿದಾಗ ನನಗೆ ನೋವಾಯಿತು. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್​. ಪ್ರತಿ ವರ್ಷ ಅವರು ನನ್ನ ಜನ್ಮದಿನಕ್ಕೆ ವಿಶ್​ ಮಾಡುತ್ತಾರೆ. ನಾನು ಕೂಡ ಅವರಿಗೆ ವಿಶ್​ ಮಾಡುತ್ತೇನೆ. ಈ ವರ್ಷವೇ ಈ ರೀತಿ ವದಂತಿ ಹಬ್ಬಿದ್ದು ಯಾಕೆ ಅಂತ ಗೊತ್ತಿಲ್ಲ. ಇದರಿಂದ ಅವರ ಫ್ಯಾಮಿಲಿಯವರಿಗೆ ತುಂಬ ನೋವಾಗುತ್ತದೆ. ಫ್ಯಾಮಿಲಿ ಎಲ್ಲರಿಗೂ ಇರತ್ತೆ, ಬೇರೆಯವರ ಇಮೋಷನ್‌ ಹರ್ಟ್‌ ಮಾಡಬೇಡಿ. ಬೇಸ್‌ಲೆಸ್‌ ಆಗಿ ಏನೇನೊ ಹೇಳಬಾರದು. ನಾವಿಬ್ಬರೂ ಒಮ್ಮತದಿಂದ ನಿರ್ಧಾರ ಮಾಡಿಯೇ ಡಿವೋರ್ಸ್‌ ಪಡೆದುಕೊಂಡಿದ್ದೇವೆ. ನಾವು ಸೆಲೆಬ್ರಿಟಿಯಾಗಿ ನಮ್ಮ ಫಾಲ್ಲೋವರ್ಸ್ ಯಾರಿಗೂ ಡಿವೋರ್ಸ್ ಕೊಡಿ ಎಂದು ಪ್ರಚೋದನೆ ಕೊಡುತ್ತಿಲ್ಲ ʼʼಎಂದರು.

ಇದನ್ನೂ ಓದಿ: Richa Chadha: ಖ್ಯಾತ ನಿರ್ದೇಶಕ ಸೆಟ್‌ನಲ್ಲಿ ಮದ್ಯ ಸೇವಿಸಿ ಫಜೀತಿಗೆ ಒಳಗಾದ ರಿಚಾ ಚಡ್ಡಾ!

ಕೊನೆಯದಾಗಿ ಚಂದನ್‌ ಮಾತನಾಡಿ ʻʻನಾನು ಮಾರ್ನಿಂಗ್ ಪರ್ಸನ್, ನಿವೇದಿತಾ ನೈಟ್ ಪರ್ಸನ್ ಇಲ್ಲಿಂದಲೇ ಸಮಸ್ಯೆ ಶುರುವಾಗಿತ್ತು. ನಾನು ಬೆಳಗ್ಗೆ ಬೇಗ ಎದ್ದೇಳ್ತಿನಿ, ನಿವೇದಿತಾ ಲೇಟ್ ಆಗಿ ಎದೆಳ್ತಾಳೆ. ಇಬ್ರಿಗೂ ಟೈಮ್ ಕೊಡೋಕೆ ಆಗುತ್ತಿರಲಿಲ್ಲ. 1 ವರ್ಷದಿಂದ ದೂರ ಆಗುವ ಬಗ್ಗೆ ಮಾತುಕಥೆ ಇತ್ತು. ಕ್ಯಾಂಡಿ ಕ್ರಶ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಒಂದು ದಿನದ ಶೂಟಿಂಗ್‌ ಬಾಕಿ ಇದೆ. ಇಬ್ಬರೂ ಭಾಗಿ ಆಗ್ತೇವೆ. ವೈಯಕ್ತಿಯ ಸಮಸ್ಯೆಯನ್ನು ಪ್ರೊಫೆಷನಲ್‌ಗೆ ತರೋದಿಲ್ಲʼʼಎಂದರು ಚಂದನ್‌.

Continue Reading

ಸಿನಿಮಾ

Chandan Shetty: ನಮ್ಮ ಖುಷಿ ಮೇಲೆ ಪ್ರಶಾಂತ್‌ ಸಂಬರಗಿ ಕಣ್ಣು; ಟಾಂಗ್‌ ಕೊಟ್ಟ ಚಂದನ್‌ ಶೆಟ್ಟಿ

Chandan Shetty: ಪ್ರಶಾಂತ್‌ ಸಂಬರಗಿ ʻದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಎಂದು ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆʼʼ ಎಂದಿದ್ದರು. ಇದೀಗ ಚಂದನ್‌ ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಹೆಸರನ್ನು ಪ್ರಸ್ತಾಪ ಮಾಡದೇ ಈ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ.

VISTARANEWS.COM


on

Chandan Shetty reaction about prashant sambaragi statement on divorce
Koo

ಬೆಂಗಳೂರು: ಚಂದನ್‌ ಶೆಟ್ಟಿ (Niveditha Gowda) ಹಾಗೂ ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ “ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರಾಗಲು ಚಿಕ್ಕದಾದ ಸಂಶಯ ಸಾಕು’ಎಂದು ಚಂದನ್‌ ಕುರಿತಾಗಿ ಬರೆದುಕೊಂಡಿದ್ದರು. ಇದಾದ ಬಳಿಕ ಪ್ರಶಾಂತ್‌ ಸಂಬರಗಿ ʻದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಎಂದು ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆʼʼ ಎಂದಿದ್ದರು. ಇದೀಗ ಚಂದನ್‌ ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಹೆಸರನ್ನು ಪ್ರಸ್ತಾಪ ಮಾಡದೇ ಈ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ.

“ಮಾಧ್ಯಮಗಳಲ್ಲಿ ಮೂರನೇ ವ್ಯಕ್ತಿ ನಮ್ಮ ಸಂಬಂಧದ ಬಗ್ಗೆ ಕೊಟ್ಟಿರುವ ಹೇಳಿಕೆ ನಿಜವಲ್ಲ. ಇದು ನಮ್ಮ ವೈಯಕ್ತಿಕ ಜೀವನ. ನಾವಿಬ್ರು ಖುಷಿಯಾಗಿರಬೇಕು ಎಂದೇ ದೂರ ಆಗಿರುವುದು. ಆದರೆ ಆ ವ್ಯಕ್ತಿ ನಮ್ಮ ಖುಷಿ ನೋಡುವುದಕ್ಕೆ ಆಗ್ತಿಲ್ಲ ಅನ್ನಿಸುತ್ತದೆ. ನಮ್ಮ ಜೋಡಿ ನೋಡಿ ಎಲ್ಲರೂ ಖುಷಿ ಪಡ್ತಾ ಇದ್ದರು. ಬೇರೆ ಕಡೆ ನಾನು ಸಂದರ್ಶನ ಒಬ್ಬರು ಕೊಟ್ಟಿರುವುದು ನೋಡಿದೆ. ನಾನು ಯಾರಿಗೂ ಫ್ರೆಂಡ್‌ ಅಂದಿಲ್ಲ, ಆ ವ್ಯಕ್ತಿ ಜತೆ ನಾನು ಏನೂ ಆ ತರ ಮಾತನಾಡಿಲ್ಲ. ಈ ರೀತಿ ಅವರು ಮಾತನಾಡಿದ್ದು ಸುಳ್ಳು. ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಬೇರೆ ಅವರ ವೈಯಕ್ತಿಕ ಜೀವನ ಬಗ್ಗೆ ಯಾಕೆ ಹೀಗೆ ಮಾತನಾಡುತ್ತಿದ್ದೀರಾ ಗೊತ್ತಿಲ್ಲ. ನಾವು ಪೋಷಕರು ಜತೆ ಮಾತನಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮಿಬ್ಬರ ಮಧ್ಯೆ ಇಲ್ಲದೇ ಇರುವ ಉಹಾ ಪೋಹಾ ಬೀಜ ಬಿತ್ತಬೇಡಿ. ಇಲ್ಲಿಗೆ ಈ ವಿಚಾರ ನಿಲ್ಲಿಸಿ. ವದಂತಿಗಳಿಗೆ ಕಿವಿ ಕೊಡಬೇಡಿ. ಆದರೆ ನಾವು ಬ್ಯಾಲೆನ್ಸ್‌ ಮಾಡೋಕೆ ನೋಡಿದ್ವಿ ಆದರೆ ಆಗಿಲ್ಲʼʼಅಷ್ಟೇ ಅಂದರು.

ಇದನ್ನೂ ಓದಿ: Chandan Shetty: ಚಂದನ್-ನಿವೇದಿತಾ ಸಂಬಂಧ ಸರಿ ಮಾಡ್ತಾರಾ ಧ್ರುವ ಸರ್ಜಾ? ಪ್ರಥಮ್ ಕೊಟ್ಟಿದ್ದಾರೆ ಕ್ಲೂ!

ಪ್ರಶಾಂತ್‌ ಸಂಬರಗಿ ಹೇಳಿದ್ದೇನು?

ಪ್ರಶಾಂತ್‌ ಸಂಬರಗಿ ಮಾತನಾಡಿ ʻʻನನಗೆ ಚಂದನ್‌ ಆತ್ಮೀಯ ಗೆಳೆಯ. ಚಂದನ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’  ಸಿನಿಮಾದಲ್ಲಿ ಚಂದನ್‌ ನಾಯಕ. ನಾನು ಅದರಲ್ಲಿ ಪೊಲೀಸ್‌ ಪಾತ್ರ ಮಾಡಿದ್ದೇನೆ. 15 ದಿನಗಳ ಕಾಲ ಒಟ್ಟಿಗೆ ಶೂಟಿಂಗ್‌ ಮಾಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹೊಡೆದಾಡಿಕೊಂಡಿದ್ದೇವೆ,, ಮಜಾ ಮಾಡಿದ್ದೇವೆ. ಚಂದನ್‌ ಹಾಗೂ ನಿವೇದಿತಾ ಸ್ಯಾಂಡಲ್‌ವುಡ್‌ ಪವರ್‌ ಕಪಲ್‌. ಆದರೆ ಏಕಾಏಕಿ ಅವರು ದೂರ ಆದರು. ಎಲ್ಲರೂ ಈ ವಿಷಯ ಕೇಳಿ ಶಾಕ್‌ ಆದರು. ಆದರೆ ನನಗೆ ಈ ವಿಚಾರ ಹೊಸದಲ್ಲ. ಒಂದು ವರ್ಷದ ಹಿಂದೆಯೇ ಗೊತ್ತಿತ್ತುʼʼ ಎಂದಿದ್ದರು.

ʻʻಚಂದನ್‌ ದಸರಾದಲ್ಲಿ ಪ್ರಪೋಸ್‌ ಮಾಡಿರುವ ಬಗ್ಗೆ ನನ್ನ ಧಿಕ್ಕಾರ ಕೂಡ ಇತ್ತು. ಆದರೂ ಕೊನೆಗೆ ಅವೆಲ್ಲ ಕ್ಷಮಿಸಿ ಮುಂದೆ ಒಳ್ಳೆಯದಾಗಲಿ ಎಂದು ಹಾರೈಸಿದೆ. ಈ ತಿಂಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಪ್ರಮೋಷನ್‌ಗೆ ಚಂದನ್‌ ಬರಲಿಲ್ಲ. ಹಲವು ಪ್ರಮೋಷನ್‌ಗೆ ಬರಲಿಲ್ಲ. 6 ತಿಂಗಳ ಹಿಂದೆಯೇ ಚಂದನ್‌ ಬಗ್ಗೆ ಹಿಂಟ್‌ ಸಿಕ್ಕಿತ್ತು. ಚಂದನ್‌ ಮನಸ್ಥಿತಿ ಸರಿಯಿಲ್ಲ ಎಂದು. ಒಂದು ಪ್ರಪೋಷನ್‌ ಲಾಂಚ್‌ಗೆ ಮನೆಯಲ್ಲಿ ಹಾಕಿರುವ ಡ್ರೆಸ್‌ ಹಾಕಿಕೊಂಡೇ ಚಂದನ್‌ ಬಂದಿದ್ದರು. ಇದಕ್ಕೆ ನಮ್ಮ ಭಿನ್ನಾಭಿಪ್ರಾಯ ಕೂಡ ಇತ್ತು. ನೀವು ಹೀರೊ ಆಗಿ ಹೀರೊ ತರಹ ಪ್ರೆಸೆಂಟ್‌ ಆಗಬೇಕು. ಈ ತರಹ ಅವತಾರದಲ್ಲಿ ಬರೋದು ಸರಿಯಲ್ಲ ಎಂದು ನಿರ್ದೇಶಕರು ಕೇಳಿದಾಗ, ಈ ವಿಚಾರ ಬಹಿರಂಗಪಡಿಸಿದ್ದರು. ನಂದು ಮತ್ತೆ ನಿವೇದಿತಾ ವಿಷನ್‌ ಮ್ಯಾಚ್‌ ಆಗ್ತಿಲ್ಲ. ಒಟ್ಟಿಗೆ ಬದುಕಲು ಆಗ್ತಿಲ್ಲ. ತುಂಬ ಸಮಸ್ಯೆಯಲ್ಲಿದ್ದೇನೆ. ಮುಂದೆ ಗೊತ್ತಾಗತ್ತೆ ಎಂದು ಚಂದನ್‌ ನಿರ್ದೇಶಕರ ಹತ್ತಿರ ಹೇಳಿಕೊಂಡಿದ್ದರು ʼ ಎಂದಿದ್ದರು.

ʻʻಚಂದನ್ ಅಮೆರಿಕಾಗೆ ಮ್ಯೂಸಿಕ್ ಕಾರ್ಯಕ್ರಮಕ್ಕೆ ಹೋಗಿದ್ದ. ಆಗ ನಿವೇದಿತಾ ಹೋಗಲಿಲ್ಲ. ನನ್ನ ಮೊದಲನೇ ಪ್ರಶ್ನೆ ಇದ್ದಿದ್ದು ಯಾಕೆ ಅವಳನ್ನು ಕರೆದುಕೊಂಡು ಹೋಗುತ್ತಿಲ್ಲ ಅಂತ. ಆದರೆ, ಬೇರೆ ಟ್ರಿಪ್‌ಗೆ ನೀನು ಕರ್ಕೊಂಡು ಹೋಗಿಲ್ಲ. ಬೇರೆಯವರು ಕರ್ಕೊಂಡು ಹೋಗ್ತಾರೆ. ನೀನು ನಿನ್ನ ಎಮೋಷನ್ಸ್‌ಗೆ ಸ್ಪಂದಿಸಿಲ್ಲ ಅಂದರೆ, ಬೇರೆ ಯಾರೋ ಕೊಡ್ತಾರೆ. ನೀನು ನಿನ್ನ ವಸ್ತುವನ್ನು ಕಾಪಾಡಿಕೋ ಅಂತ ಅನೇಕ ಬಾರಿ ಹೇಳಿದ್ದೇನೆ” ಎಂದು ಪ್ರಶಾಂತ್ ಸಂಬರಗಿ ಹೇಳಿದ್ದರು.

ʻʻನಿನ್ನೆ ನಗ್ತಾನೇ ಬಂದು ಹೋದರು. ಆದರೆ ಚಂದನ್‌ಗೆ ನೋವಾಗಿದೆ. ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರು ಬೇಕು ಅಂದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಬೆನ್ಜ್ ಹಿಂದೆ ಹೋಗಿರುವಂತವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಅಂತ ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆ. ಚಂದನ್‌ಗೆ ನಮ್ಮ ಬ್ರದರ್ಲಿ ಸಪೋರ್ಟ್, ಎಮೋಷನಲ್ ಸಪೋರ್ಟ್ ಇದೆʼʼಎಂದಿದ್ದರು ಪ್ರಶಾಂತ್‌ ಸಂಬರಗಿ.

Continue Reading

ಸಿನಿಮಾ

Niveditha Gowda: ಸೃಜನ್‌, ಸಂಬರಗಿ, ಜೀವನಾಂಶ, ಮಗು; ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ಚಂದನ್‌-ನಿವೇದಿತಾ!

ಸುದ್ದಿಗೋಷ್ಠಿಗೆ ಇಬ್ಬರೂ ಪ್ರತ್ಯೇಕವಾಗಿ ಬಂದರು. ಡಿವೋರ್ಸ್‌ ವಿಚಾರ ಬಹಿರಂಗವಾದ ಬಳಿಕ ಕೆಲವು ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಚಂದನ್‌ ಹಾಗೂ ನಿವೇದಿತಾ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಮಾರ್ನಿಂಗ್ ಪರ್ಸನ್, ನಿವೇದಿತಾ ನೈಟ್ ಪರ್ಸನ್ ಇಲ್ಲಿಂದಲೇ ಸಮಸ್ಯೆ ಶುರುವಾಗಿತ್ತು. ನಾನು ಬೆಳಗ್ಗೆ ಬೇಗ ಎದ್ದೇಳ್ತಿನಿ, ನಿವೇದಿತಾ ಲೇಟ್ ಆಗಿ ಎದೆಳ್ತಾಳೆ. ಇಬ್ರಿಗೂ ಟೈಮ್ ಕೊಡೋಕೆ ಆಗುತ್ತಿರಲಿಲ್ಲ. 1 ವರ್ಷದಿಂದ ದೂರ ಆಗುವ ಬಗ್ಗೆ ಮಾತುಕಥೆ ಇತ್ತು. ಕ್ಯಾಂಡಿ ಕ್ರಶ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಒಂದು ದಿನದ ಶೂಟಿಂಗ್‌ ಬಾಕಿ ಇದೆ. ಇಬ್ಬರೂ ಭಾಗಿ ಆಗ್ತೇವೆ. ವೈಯಕ್ತಿಯ ಸಮಸ್ಯೆಯನ್ನು ಪ್ರೊಫೆಷನಲ್‌ಗೆ ತರೋದಿಲ್ಲʼʼಎಂದರು ಚಂದನ್‌.

VISTARANEWS.COM


on

Niveditha Gowda Chandan Shetty Divorce Case
Koo

ಬೆಂಗಳೂರು: ಚಂದನ್‌ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಡಿವೋರ್ಸ್‌ ಪಡೆದುಕೊಂಡಿರುವುದು ಗೊತ್ತೇ ಇದೆ. ಇನ್‌ಸ್ಟಾದಲ್ಲಿ ಪೋಸ್ಟ್‌ ಮೂಲಕ ಜೋಡಿ ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹಂಚಿಕೊಂಡಿದೆ. ಈಗ ಇಬ್ಬರೂ ಒಟ್ಟಾಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಸುದ್ದಿಗೋಷ್ಠಿಗೆ ಇಬ್ಬರೂ ಪ್ರತ್ಯೇಕವಾಗಿ ಬಂದರು. ಡಿವೋರ್ಸ್‌ ವಿಚಾರ ಬಹಿರಂಗವಾದ ಬಳಿಕ ಕೆಲವು ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಚಂದನ್‌ ಹಾಗೂ ನಿವೇದಿತಾ ಸ್ಪಷ್ಟನೆ ಕೊಟ್ಟಿದ್ದಾರೆ.

ಚಂದನ್‌ ಈ ಬಗ್ಗೆ ಮಾತನಾಡಿ ʻʻಮಾಧ್ಯಮದ ಮೇಲೆ ಇರುವ ಗೌರವ, ಸರಿಯಾದ ವಿಷಯವನ್ನು ಜನೆತೆಗೆ ತಲುಪಿಸುವ ಪ್ರಯತ್ನಕ್ಕೆ ನಾವು ಈಗ ನಿಮ್ಮ ಮುಂದೆ ಬಂದಿದ್ದೇನೆ. ಇದೇ 6ನೇ ತಾರಿಖು ಅರ್ಜಿ ಸಲ್ಲಿಸಿದ್ದೀವಿ. ನಮ್ಮಿಬ್ಬರಿಗೂ ನ್ಯಾಯಾಲಯ ಕಾನೂನಾತ್ಮಕವಾಗಿ ವಿಚ್ಛೇದನ ಕೊಟ್ಟಿದೆ. ತುಂಬ ಚೆನ್ನಾಗಿಯೇ ಇದ್ದರು, ಈಗ ಯಾಕೆ ದೂರ ಆದರು ಎಂದು ಹಲವರು ಪ್ರಶ್ನೆ ಕೇಳುತ್ತಲೇ ಇದ್ದರು. ಈ ಬಗ್ಗೆ ಈಗಾಗಲೇ ನಾವು ಸೋಷಿಯಲ್‌ ಮೀಡಿಯಾ ಮೂಲಕ ಪೋಸ್ಟ್‌ ಮಾಡಿದ್ದೇವೆ. ನಮ್ಮಿಬ್ಬರ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬುತ್ತಿವೆʼʼಎಂದರು.

ನಮ್ಮಿಬ್ಬರ ಆಲೋಚನೆ, ಜೀವನಶೈಲಿ ಬೇರೆ

ʻʻಮೊದಲಿಗೆ ನಾವಿಬ್ಬರೂ ದೂರ ಆಗಲು ಕಾರಣ, ನಮ್ಮಿಬ್ಬರ ಆಲೋಚನೆಗಳು ಬೇರೆ ಬೇರೆ. ನಿವೇದಿತಾ ಜೀವನಶೈಲಿ ಇನ್ನೊಂದು ಆಯಾಮ ಇತ್ತು. ನಾವಿಬ್ಬರು ಕೂಡ ಹಲವು ವರ್ಷಗಳಿಂದ ಅರ್ಥ ಮಾಡಿಕೊಂಡು ಸಾಗಬೇಕು ಎಂದು ಪ್ರಯತ್ನ ಪಟ್ಟಿದ್ದೇವು. ಆದರೆ ಇಬ್ಬರ ಜೀವನ ಶೈಲಿ ಬೇರೆಯಾಗಿತ್ತು. ಯಾರಿಗೂ ಯಾರ ಮೇಲೂ ಫೋರ್ಸ್‌ ಮಾಡಿಕೊಂಡು ಬದುಕಬಾರದು. ಹೀಗಾಗಿ ನಾವಿಬ್ಬರು ಒಮ್ಮತದಿಂದ ಒಟ್ಟಿಗೆ ನಿರ್ಧಾರ ಮಾಡಿಕೊಂಡು, ಖುಷಿಯಾಗಿ ಇರಬೇಕು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ವೈಮನಸ್ಸು ಇಲ್ಲ. ಇಬ್ಬರ ಮಧ್ಯೆಯೂ ಗೌರವ ಇದೆ. ನಮಗೆ ಸ್ನೇಹಿತರು ಹಾಗೇ ನಮ್ಮ ಇನ್‌ಸ್ಟಾ ಫಾಲೋವರ್ಸ್‌ ಸಪೋರ್ಟ್‌ ಮಾಡಿದ್ದೀರಾ ತುಂಬ ಧನ್ಯವಾದʼʼಎಂದರು ಚಂದನ್‌.

ಇದನ್ನೂ ಓದಿ: Chandan Shetty: ಚಂದನ್-ನಿವೇದಿತಾ ಸಂಬಂಧ ಸರಿ ಮಾಡ್ತಾರಾ ಧ್ರುವ ಸರ್ಜಾ? ಪ್ರಥಮ್ ಕೊಟ್ಟಿದ್ದಾರೆ ಕ್ಲೂ!

ಮಕ್ಕಳ ವಿಚಾರಕ್ಕೆ ದೂರ ಆದ್ರಾ?

ʻʻನಮ್ಮಿಬ್ಬರ ವೈಯಕ್ತಿಕ ವಿಚಾರವನ್ನು ಈಗ ಬೇರೆ ರೀತಿಯಲ್ಲಿ ಸೃಷ್ಟಿ ಮಾಡುತ್ತಿರುವ ಕಾರಣ ಇಲ್ಲಿಗೆ ಬಂದಿದ್ದೇವೆ. . ನಿವೇದಿತಾ ಅವರು ಜೀವನಾಂಶ ಪಡೆದಿಲ್ಲ. ಅವರಿಗೆ ನಾನು ಕೊಟ್ಟಿಲ್ಲ ʼʼಎಂದರು ಚಂದನ್‌. ʻʻಮಕ್ಕಳು ವಿಚಾರಕ್ಕೆ ನಾವಿಬ್ಬರೂ ದೂರ ಆಗಿದ್ದೇವೆ ಎಂಬುದು ಸುಳ್ಳು. ನಿವೇದಿತಾ ಅವರಿಗೆ ಸಿನಿಮಾದಲ್ಲಿ ಒಳ್ಳೆಯ ಕರಿಯರ್‌ ಇದೆ. ನನಗೂ ತುಂಬ ಪ್ಲ್ಯಾನ್ಸ್‌ ಇದೆ. ಈ ಎಲ್ಲ ವದಂತಿ ಸುಳ್ಳು. ಅವರು ಯಾರ ಮೇಲೆ ಡಿಪೆಂಡ್‌ ಆಗಿಲ್ಲ ಕೂಡ. ಮೂರನೇ ವ್ಯಕ್ತಿಯನ್ನು ಸಂಬಂಧಿಸಿ ಸಂಬಂಧ ಕೂಡ ಕಲ್ಪಿಸುತ್ತಿದ್ದಾರೆ. ಆದರೆ ಅವರು ನಮಗೆ ಫ್ಯಾಮಿಲಿ ತರ. ಆ ವ್ಯಕ್ತಿ ಜತೆ ಹೆಸರು ಸೇರಿಸಿದ್ದು ಸರಿಯಲ್ಲ. ಇದು ಕನ್ನಡಿಗರಿಗಾ ನಮಗೆ ಶೋಭೆ ಅಲ್ಲʼʼ ಎಂದರು.

ನಾನು ಯಾರಿಗೂ ಸ್ನೇಹಿತ ಅಲ್ಲ, ಆ ಸಂದರ್ಶನ ಸುಳ್ಳು!

ಬೇರೆ ಕಡೆ ನಾನು ಸಂದರ್ಶನ ಒಬ್ಬರು ಕೊಟ್ಟಿರುವುದು ನೋಡಿದೆ. ನಾನು ಯಾರಿಗೂ ಫ್ರೆಂಡ್‌ ಅಂದಿಲ್ಲ, ಆ ವ್ಯಕ್ತಿ ಜತೆ ನಾನು ಏನೂ ಆ ತರ ಮಾತನಾಡಿಲ್ಲ. ಈ ರೀತಿ ಅವರು ಮಾತನಾಡಿದ್ದು ಸುಳ್ಲು. ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಬೇರೆ ಅವರ ವೈಯಕ್ತಿಕ ಜೀವನ ಬಗ್ಗೆ ಯಾಕೆ ಹೀಗೆ ಮಾತನಾಡುತ್ತಿದ್ದೀರಾ ಗೊತ್ತಿಲ್ಲ. ನಾವು ಪೋಷಕರು ಜತೆ ಮಾತನಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮಿಬ್ಬರ ಮಧ್ಯೆ ಇಲ್ಲದೇ ಇರುವ ಉಹಾ ಪೋಹಾ ಬೀಜ ಬಿತ್ತಬೇಡಿ. ಇಲ್ಲಿಗೆ ಈ ವಿಚಾರ ನಿಲ್ಲಿಸಿ. ವದಂತಿಗಳಿಗೆ ಕಿವಿ ಕೊಡಬೇಡಿ. ಆದರೆ ನಾವು ಬ್ಯಾಲೆನ್ಸ್‌ ಮಾಡೋಕೆ ನೋಡಿದ್ವಿ ಆದರೆ ಆಗಿಲ್ಲʼʼಅಷ್ಟೇ ಅಂದರು.

ಬೆಂಬಲ ಇರಲಿ

ʻʻಕೊನೆದಾಗಿ ನಮಗೆ ಸಪೋರ್ಟ್‌ ಮಾಡಿದ ಫ್ಯಾನ್ಸ್‌ ಮಾಧ್ಯಮಕ್ಕೆ ಧನ್ಯವಾದ. ಇನ್ನೊಂದು ನನ್ನ ಬಗ್ಗೆ ವಿಡಿಯೊವೊಂದು ಹರಿದಾಡುತ್ತಿತ್ತು. ನಾನು ಡಿಪ್ರೆಶನ್‌ಗೆ ಹೋಗಿದ್ದೆ ಎಂದು. ಅದು 2023ರಲ್ಲಿ ಮಾಡಿದ ವಿಡಿಯೊ. ಆ ವಿಡಿಯೊ ನಾನು ಸಿನಿಮಾ ಬಗ್ಗೆ ಮಾತನಾಡಿದ್ದೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಕೊನೆಯಲ್ಲಿ ನಾನು ಮಾತನಾಡಿದ ಮಾತುಗಳನ್ನು ಕಟ್‌ ಮಾಡಿ, ಈ ಬೇರೆ ವಿಚಾರಕ್ಕೆ ಲಿಂಕ್‌ ಮಾಡಿದ್ದಾರೆ. ಕೆಟ್ಟ ಸುದ್ದಿ ಬೇಗ ಹರಡುತ್ತೆ. ಈ ರೀತಿ ಅಪ್ರಪಚಾರ ಮಾಡಬೇಡಿ. ಸ್ವಲ್ಪ ಸಮಯ ಕೂಡ ನಾನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಿನಿಮಾಗಳು ಬರುತ್ತಿವೆ. ಹೊಸ ಸಾಂಗ್‌ಗಳು ಬರುತ್ತಿವೆ. ನಿವೇದಿತಾ ಅವರು ಕೂಡ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಮೇಲೆ ಸಹಕಾರ ಇರಲಿʼʼಎಂದರು.

ಇನ್ನು ನಿವೇದಿತಾ ಕೂಡ ʻʻವದಂತಿಗಳು ಕೇಳಿ ಬೇಜಾರಾಯ್ತು. ಫ್ಯಾಮಿಲಿ ಎಲ್ಲರಿಗೂ ಇರತ್ತೆ, ಬೇರೆಯವರ ಇಮೋಷನ್‌ ಹರ್ಟ್‌ ಮಾಡಬೇಡಿ. ಬೇಸ್‌ಲೆಸ್‌ ಆಗಿ ಏನೇನೊ ಹೇಳಬಾರದು. ನಾವಿಬ್ಬರೂ ಒಮ್ಮತದಿಂದ ನಿರ್ಧಾರ ಮಾಡಿಯೇ ಡಿವೋರ್ಸ್‌ ಪಡೆದುಕೊಂಡಿದ್ದೇವೆ. ನಾವು ಸೆಲೆಬ್ರಿಟಿಯಾಗಿ ನಮ್ಮ ಫಾಲ್ಲೋವರ್ಸ್ ಯಾರಿಗೂ ಡಿವೋರ್ಸ್ ಕೊಡಿ ಎಂದು ಪ್ರಚೋದನೆ ಕೊಡುತ್ತಿಲ್ಲ ʼʼಎಂದರು.

ಕೊನೆಯದಾಗಿ ಚಂದನ್‌ ಮಾತನಾಡಿ ʻʻನಾನು ಮಾರ್ನಿಂಗ್ ಪರ್ಸನ್, ನಿವೇದಿತಾ ನೈಟ್ ಪರ್ಸನ್ ಇಲ್ಲಿಂದಲೇ ಸಮಸ್ಯೆ ಶುರುವಾಗಿತ್ತು. ನಾನು ಬೆಳಗ್ಗೆ ಬೇಗ ಎದ್ದೇಳ್ತಿನಿ, ನಿವೇದಿತಾ ಲೇಟ್ ಆಗಿ ಎದೆಳ್ತಾಳೆ. ಇಬ್ರಿಗೂ ಟೈಮ್ ಕೊಡೋಕೆ ಆಗುತ್ತಿರಲಿಲ್ಲ. 1 ವರ್ಷದಿಂದ ದೂರ ಆಗುವ ಬಗ್ಗೆ ಮಾತುಕಥೆ ಇತ್ತು. ಕ್ಯಾಂಡಿ ಕ್ರಶ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಒಂದು ದಿನದ ಶೂಟಿಂಗ್‌ ಬಾಕಿ ಇದೆ. ಇಬ್ಬರೂ ಭಾಗಿ ಆಗ್ತೇವೆ. ವೈಯಕ್ತಿಯ ಸಮಸ್ಯೆಯನ್ನು ಪ್ರೊಫೆಷನಲ್‌ಗೆ ತರೋದಿಲ್ಲʼʼಎಂದರು ಚಂದನ್‌.

Continue Reading

ಸಿನಿಮಾ

Kannada New Movie: ಹಳ್ಳಿಗಳನ್ನು ಉಳಿಸುವ ಹುಡುಗರ ಕಥೆ ʻಸಂಭವಾಮಿ ಯುಗೇ ಯುಗೇʼ: ಇದೇ ಜೂನ್‌ 21ಕ್ಕೆ ತೆರೆಗೆ!

Kannada New Movie: ನಾಯಕನ ತಂಗಿಯ ಪಾತ್ರ ಮಾಡಿರುವ ಮಧುರಾಗೌಡ ಮಾತನಾಡಿ ಈ ಚಿತ್ರದಲ್ಲಿ ಸುಧಾರಾಣಿ ಅವರ ಮಗಳಾಗಿ ನಟಿಸಿದ್ದು ನನ್ನ ಅದೃಷ್ಟ ಎಂದುʼʼ ತನ್ನ‌ ಪಾತ್ರದ ಕುರಿತು ಹೇಳಿಕೊಂಡರು. ಪೂರನ್ ಶೆಟ್ಟಿಗಾರ್ ಅವರ ಸಂಗೀತ ಸಂಯೋಜನೆ, ರಾಜು ಹೆಮ್ಮಿಗೆಪುರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಉಳಿದಂತೆ ಕಲಾವಿದರಾದ ಬಲ ರಾಜವಾಡಿ, ಪುನೀತ್, ಅಶ್ವಿನ್‌ಹಾಸನ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದು ತಮ್ಮ ಪಾತ್ರಗಳ‌ ಕುರಿತು ಮಾತನಾಡಿದರು.

VISTARANEWS.COM


on

Sambhavami Yuge Yuge in june 21st Release
Koo

ಬೆಂಗಳೂರು: ಆಧುನಿಕತೆಯ ಸೋಗಿನಲ್ಲಿ (Kannada New Movie) ನಮ್ಮ ಹಳ್ಳಿಗಳಲ್ಲಿ ಮೊದಲಿದ್ದ ವೈಭವ ಕಡಿಮೆಯಾಗುತ್ತಿದೆ. ವಿದ್ಯಾವಂತರೆಲ್ಲ ಪಟ್ಟಣ ಸೇರುತ್ತಿದ್ದಾರೆ. ಹೀಗಾಗಬಾರದು, ಯುವಕರು ಹಳ್ಳಿಗಳಲ್ಲೇ ಇದ್ದು ಕೆಲಸ ಮಾಡಬೇಕೆನ್ನುವ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ʻಸಂಭವಾಮಿ ಯುಗೇ ಯುಗೇʼ. ರಾಜಲಕ್ಷ್ಮಿ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಶ್ರೀಮತಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವು ಇದೇ ತಿಂಗಳು 21ರಂದು ಬಿಡುಗಡೆಯಾಗಲಿದೆ.

ಜಯ್ ಶೆಟ್ಟಿ – ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಅರಮನೆಗಳ ನಗರ ಮೈಸೂರಿಗೆ ಭೇಟಿಕೊಟ್ಟು ಮಾಧ್ಯಮಗಳ ಜತೆ ಮಾತನಾಡಿತು.
ತಮ್ಮ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಕುರಿತಂತೆ ಮಾತನಾಡಿದ ಚೇತನ್ ಚಂದ್ರಶೇಖರ್ ಶೆಟ್ಟಿ, ʻನಾನು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಇರುವ ಈ ಚಿತ್ರಕ್ಕೆ ಚಿತ್ರದಲ್ಲಿ ಕೃಷ್ಣನ ಪಾತ್ರ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳೂ ಇವೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ವೈರಲ್ ಆಗಿದ್ದು, ಸದ್ಯದಲ್ಲೇ ಟ್ರೈಲರ್ ಬಿಡುಗʼʼ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: Nandamuri Balakrishna: ಇಂದು ತೆಲುಗು ಸೂಪರ್‌ಸ್ಟಾರ್ ಬಾಲಯ್ಯ ಬರ್ತ್‌ಡೇ; ಹೊಸ ಸಿನಿಮಾ ಅನೌನ್ಸ್‌!

ʻʻಹಳ್ಳಿಯ ಹುಡುಗರು ವಿದ್ಯಾವಂತರಾದ ಮೇಲೆ, ಕೆಲಸದ ನಿಮಿತ್ತ ಪಟ್ಟಣಕ್ಕೆ ಅಂತ ಹೋದವರು ಅಲ್ಲೇ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು ? ನಮ್ಮ ಹಳ್ಳಿಗಳು ಉಳಿಯುವುದಾದರೂ ಹೇಗೆ ?, ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲೆಸಬೇಕು, ಹಳ್ಳಿಗಳನ್ನು ಬೆಳೆಸಬೇಕು ಎಂಬ ಕಥಾಹಂದರದ ಮೇಲೆ ಈ ಚಿತ್ರ ಮಾಡಿದ್ದೇವೆ. ಜೂನ್ 21ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಕಮರ್ಷಿಯಲ್ ಚಿತ್ರವಾದರೂ, ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವಂಥ ಹಲವಾರು ಅಂಶಗಳು ನಮ್ಮ ಚಿತ್ರದಲ್ಲಿವೆʼʼ ಎಂದು ಹೇಳಿದರು.

ನಾಯಕಿ ನಿಶಾ ರಜಪೂತ್ ಮಾತನಾಡಿ ʻʻನಾನು ಬಿಜಾಪುರದವಳಾದರೂ, ಬೆಳೆದಿದ್ದು ಮುಂಬೈನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಈ ಚಿತ್ರದಲ್ಲಿ ಸ್ವಾತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು, ನಾಯಕನ ತಂಗಿಯ ಪಾತ್ರ ಮಾಡಿರುವ ಮಧುರಾಗೌಡ ಮಾತನಾಡಿ ಈ ಚಿತ್ರದಲ್ಲಿ ಸುಧಾರಾಣಿ ಅವರ ಮಗಳಾಗಿ ನಟಿಸಿದ್ದು ನನ್ನ ಅದೃಷ್ಟ ಎಂದುʼʼ ತನ್ನ‌ ಪಾತ್ರದ ಕುರಿತು ಹೇಳಿಕೊಂಡರು. ಪೂರನ್ ಶೆಟ್ಟಿಗಾರ್ ಅವರ ಸಂಗೀತ ಸಂಯೋಜನೆ, ರಾಜು ಹೆಮ್ಮಿಗೆಪುರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಉಳಿದಂತೆ ಕಲಾವಿದರಾದ ಬಲ ರಾಜವಾಡಿ, ಪುನೀತ್, ಅಶ್ವಿನ್‌ಹಾಸನ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದು ತಮ್ಮ ಪಾತ್ರಗಳ‌ ಕುರಿತು ಮಾತನಾಡಿದರು.

Continue Reading
Advertisement
Vinay Kulkarni
ಕರ್ನಾಟಕ31 seconds ago

Vinay Kulkarni: ವಿನಯ್ ಕುಲಕರ್ಣಿಗೆ ತೀವ್ರ ಹಿನ್ನಡೆ; ಸಿಬಿಐ ವಿಶೇಷ ಕೋರ್ಟ್‌ನ ತೀರ್ಪು ಎತ್ತಿ ಹಿಡಿದ ಸುಪ್ರೀಂ

Modi 3.0 Cabinet
ಪ್ರಮುಖ ಸುದ್ದಿ7 mins ago

Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Students Fashion
ಫ್ಯಾಷನ್16 mins ago

Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

Suresh Gopi
ದೇಶ42 mins ago

Suresh Gopi: ಸಚಿವ ಸ್ಥಾನಕ್ಕೆ ಬಿಜೆಪಿಯ ಸುರೇಶ್‌ ಗೋಪಿ ರಾಜೀನಾಮೆ; ಮಹತ್ವದ ಸ್ಪಷ್ಟನೆ ಕೊಟ್ಟ ಸಂಸದ

Medical student commits suicide in Bengaluru
ಬೆಂಗಳೂರು56 mins ago

Medical Student : ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು

Shivaraj Kumar
ಕರ್ನಾಟಕ1 hour ago

Shivaraj Kumar: ನನ್ನ ಹೆಂಡತಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ?: ನಟ ಶಿವರಾಜ್‌ ಕುಮಾರ್‌

Money Guide
ಮನಿ ಗೈಡ್1 hour ago

Money Guide: ಹೆಚ್ಚಿನ ಬಡ್ಡಿ ಮಾತ್ರವಲ್ಲ, ಪಿಪಿಎಫ್ ನಿಂದ ಇನ್ನೂ ಏನೇನು ಪ್ರಯೋಜನ?

MLA Shivaram Hebbar should resign immediately MLC Shantharama Siddi demands
ಉತ್ತರ ಕನ್ನಡ1 hour ago

Uttara Kannada News: ಪಕ್ಷದ್ರೋಹಿ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆಗೆ ಆಗ್ರಹ

Chandan Shetty Niveditha gowda roumers on srujan lokesh
ಸ್ಯಾಂಡಲ್ ವುಡ್1 hour ago

Chandan Shetty: 3ನೇ ವ್ಯಕ್ತಿ ಜತೆ ನಿವೇದಿತಾ ಸಂಬಂಧದ ಕುರಿತು ಚಂದನ್‌ ಹೇಳಿದ್ದೇನು?

Viral Video
ವೈರಲ್ ನ್ಯೂಸ್1 hour ago

Viral Video: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ! ಸೋಲೇ ಕಾರಣ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌