Leonardo DiCaprio: ಭಾರತೀಯ ಮೂಲದ ಮಾಡೆಲ್‌ ಜತೆಗೆ ಲಿಯೊನಾರ್ಡೊ ಡಿಕ್ಯಾಪ್ರಿಯೊ ರೊಮ್ಯಾನ್ಸ್ Vistara News
Connect with us

ಸಿನಿಮಾ

Leonardo DiCaprio: ಭಾರತೀಯ ಮೂಲದ ಮಾಡೆಲ್‌ ಜತೆಗೆ ಲಿಯೊನಾರ್ಡೊ ಡಿಕ್ಯಾಪ್ರಿಯೊ ರೊಮ್ಯಾನ್ಸ್

ಹಾಲಿವುಡ್‌ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಹಾಗೂ ಭಾರತೀಯ ಮೂಲದ ಮಾಡೆಲ್‌ ನೀಲಂ ಗಿಲ್‌ ಪದೇ ಪದೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

leonardo dicaprio and neelam gill
Koo

ಲಾಸ್‌ ಏಂಜಲೀಸ್:‌ ಹಾಲಿವುಡ್‌ನ ಖ್ಯಾತ ನಟ, ಟೈಟಾನಿಕ್‌ ಖ್ಯಾತಿಯ ಲಿಯೊನಾರ್ಡ್‌ ಡಿಕ್ಯಾಪ್ರಿಯೊ, ಭಾರತೀಯ ಮಾಡೆಲ್‌ ಒಬ್ಬಳೊಂದಿಗೆ ಡೇಟಿಂಗ್‌ ಮಾಡ್ತಾ ಇದ್ದಾರಾ? ಇಬ್ಬರೂ ಜತೆಯಾಗಿ ಆತ್ಮೀಯವಾಗಿ ಹಲವು ಬಾರಿ ಕಾಣಿಸಿಕೊಂಡಿರುವುದು ಈ ಬಗ್ಗೆ ಕುತೂಹಲ ಮೂಡಿಸಿದೆ.

ಶುಕ್ರವಾರ ಹಾಲಿವುಡ್ ಸೆನ್ಸೇಶನ್ ಲಿಯೊನಾರ್ಡೊ ಡಿಕಾಪ್ರಿಯೊ ಅವರು ಪ್ಯಾರಿಸ್‌ನಲ್ಲಿ ಭಾರತೀಯ ಮೂಲದ ಬ್ರಿಟಿಷ್ ಮಾಡೆಲ್ ನೀಲಂ ಗಿಲ್ ಅವರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿದರು. ಜತೆಗೆ ಡಿಕಾಪ್ರಿಯೊ ಸ್ನೇಹಿತ ಟೋಬೆ ಮ್ಯಾಗೈರ್ ಕೂಡ ಇದ್ದರು. ಡಿಕ್ಯಾಪ್ರಿಯೊ ಮತ್ತು ಮ್ಯಾಗೈರ್ ಪ್ಯಾರಿಸ್‌ನಲ್ಲಿರುವ ಹೋಟೆಲ್ ಕಾಸ್ಟ್ಸ್‌ನಿಂದ ಹೊರಟು ತಡರಾತ್ರಿಯ ಊಟಕ್ಕಾಗಿ ರೂ ಡಿ ರಿವೋಲಿಗೆ ತೆರಳಿದರು. ಡಿಕ್ಯಾಪ್ರಿಯೊ ಅವರ ಸೋದರ ಸೊಸೆ ನಾರ್ಮಂಡಿ, ಮ್ಯಾಗೈರ್ ಅವರ ಮಕ್ಕಳಾದ ರೂಬಿ ಮತ್ತು ಓಟಿಸ್ ಕೂಡ ಅವರೊಂದಿಗೆ ಭೋಜನಕ್ಕೆ ಸೇರಿಕೊಂಡರು. ಡಿಕಾಪ್ರಿಯೊ ಮತ್ತು ಮ್ಯಾಗೈರ್ ಇಬ್ಬರೂ ಕ್ಯಾಶುಯಲ್ ಡೆನಿಮ್‌ ಹಾಗೂ ಕಪ್ಪು ಟಿ-ಶರ್ಟ್‌ನಲ್ಲಿದ್ದರೆ, ನೀಲಂ ನೀಲಿ ಬಣ್ಣದ ಮಿನಿ ಸ್ಕರ್ಟ್‌ನೊಂದಿಗೆ ಕಪ್ಪು ಟ್ಯಾಂಕ್ ಟಾಪ್‌ ಧರಿಸಿದ್ದರು. ದುಬಾರಿ ಬೆಲ್ಟ್ ಮತ್ತು ಸೊಗಸಾದ ಸ್ಟಿಲೆಟ್ಟೊ ಬೂಟುಗಳನ್ನು ಕೂಡ ನೀಲಂ ಧರಿಸಿದ್ದರು.

ಲಿಯೋ ಮತ್ತು ಮಾಡೆಲ್ ನಡುವೆ ಏನೋ ನಡೆಯುತ್ತಿದೆ ಎಂದು ಊಹಿಸಲು ಕಾರಣಗಳಿವೆ. ಅವರಿಬ್ಬರೂ ಲಂಡನ್‌ನಲ್ಲಿ ಇತ್ತೀಚಿಗೆ ನಡೆದ ಎರಡು ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ಅಲ್ಲಿ ನೀಲಂ ಅವರ ಪೋಷಕರು ಸಹ ಇದ್ದರು. ಕೆಲವೇ ವಾರಗಳ ಹಿಂದೆ, ನೀಲಂ ಲಂಡನ್‌ನ ಚಿಲ್ಟರ್ನ್ ಫೈರ್‌ಹೌಸ್‌ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಡಿಕ್ಯಾಪ್ರಿಯೊ ತಮ್ಮ ತಂದೆ ಮತ್ತು ಮಲತಾಯಿಯನ್ನು ಅಲ್ಲಿಗೆ ಊಟಕ್ಕೆ ಕರೆತಂದಿದ್ದರು.

ಈ ನಡುವೆ, ಲಿಯೋನಾರ್ಡೋ ಅವರು ಇನ್ನೊಬ್ಬ ಮಾಡೆಲ್ ಗಿಗಿ ಹಡಿದ್ ಅವರೊಂದಿಗೆ ಕೂಡ ಲಿವ್-‌ ಇನ್‌ ಸಂಬಂಧದಲ್ಲಿದ್ದಾರೆ ಎಂದೂ ವರದಿಯಾಗಿದೆ. ಇಬ್ಬರೂ ಆಗಾಗ ಜತೆಯಾಗಿ ಪ್ರಯಾಣಿಸುವುದು ಕಂಡುಬಂದಿದೆ. ಆದರೆ ಈ ಸಂಬಂಧವನ್ನು ಹೆಚ್ಚು ಮುಂದಕ್ಕೆ ಒಯ್ಯಲು ಇಬ್ಬರೂ ಇಷ್ಟಪಟ್ಟಿಲ್ಲ ಎನ್ನಲಾಗಿದೆ.

ನೀಲಂ ಗಿಲ್ ಅವರು ಇಂಗ್ಲೆಂಡ್‌ನ ವಾರ್ವಿಕ್‌ಷೈರ್‌ ಕೋವೆಂಟ್ರಿಯಲ್ಲಿ ನೆಲೆಸಿರುವ 28 ವರ್ಷದ ಮಾಡೆಲ್. ಏಪ್ರಿಲ್ 27, 1995ರಂದು ಜನಿಸಿರುವ ಅವರ ಪೂರ್ವಜರು ಭಾರತದ ಪಂಜಾಬ್‌ನವರು. Burberry, Abercrombie & Fitch ಮತ್ತಿತರ ಪ್ರತಿಷ್ಠಿತ ಹೆಸರಾಂತ ಬ್ರಾಂಡ್‌ಗಳಿಗೆ ಮಾಡೆಲ್‌ ಆಗಿ ಕೆಲಸ ಮಾಡಿ ನೀಲಂ ಫ್ಯಾಶನ್ ಉದ್ಯಮದಲ್ಲಿ ಮನ್ನಣೆ ಗಳಿಸಿದ್ದಾರೆ.

ಇದನ್ನೂ ಓದಿ: Yoga Day 2023: ಹಾಲಿವುಡ್‌-ಬಾಲಿವುಡ್‌ ಸೆಲೆಬ್ರಿಟಿಗಳ ಯೋಗಾಯೋಗ! ಇವರು ಇತರರಿಗೂ ಸ್ಫೂರ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರದಲ್ಲಿ ಸೆರೆ

VISTARA TOP 10 NEWS : ಕಾವೇರಿ ಹೋರಾಟದ ಕಿಚ್ಚು ಹೊತ್ತಿ ಉರಿಯುತ್ತಿದೆ. ಮಂಡ್ಯ ಬಂದ್‌ ಯಶಸ್ವಿಯಾಗಿದೆ. ಬೆಂಗಳೂರು ಬಂದ್‌ ರೆಡಿಯಾಗಿದೆ. ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರ ತಲುಪಿದೆ. ಹೀಗೆ ದಿನ ವಿಶೇಷ ಬೆಳವಣಿಗೆಗಳ ಸುತ್ತು ನೋಟವೇ ವಿಸ್ತಾರ ಟಾಪ್‌ 10 ನ್ಯೂಸ್‌

VISTARANEWS.COM


on

Edited by

Vistara Top 10 News 2309
Koo

1.ರಾಜಧಾನಿಯಲ್ಲಿ ತೀವ್ರಗೊಂಡ ಕಾವೇರಿ ಹೋರಾಟ: ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಕರೆ
ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ (Bangalore bandh on September 26) ಕರೆ ನೀಡಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಸೆ. 26ರಬಂದ್‌ಗೆ ಭಾರಿ ಬೆಂಬಲ; ಏನಿರುತ್ತೆ? ಏನಿರಲ್ಲ?; ಕರ್ನಾಟಕ ಬಂದ್‌ಗೂ ಪ್ಲ್ಯಾನಿಂಗ್

2. ರೈತ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್‌ ಸಕ್ಸಸ್‌‌‌‌: ರಾಜ್ಯಾದ್ಯಂತ ವ್ಯಾಪಿಸಿದ ಜ್ವಾಲೆ
ರಾಜ್ಯದಲ್ಲಿ ಮಳೆ ಇಲ್ಲದೆ ಸಂಕಷ್ಟ ಕಾಲ ಬಂದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ (Cauvery protest) ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್‌ (Mandya bandh) ಯಶಸ್ವಿಯಾಯಿತು. ಕಾವೇರಿ ಹೋರಾಟಕ್ಕೆ ರಾಜ್ಯದ ಎಲ್ಲ ಕಡೆಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ಸಂಘಟನೆಗಳು ಪ್ರತಿಭಟನೆ, ಜಾಥಾಗಳನ್ನು ನಡೆಸಿದವು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ 3 ಸಲಹೆಗಳು

3. ಕಾಂಗ್ರೆಸ್‌ನಲ್ಲಿ ನಿಲ್ಲದ ಡಿಸಿಎಂ ರಗಳೆ- ಮೂರಲ್ಲ, ಐವರು ಡಿಸಿಎಂ ಬೇಕೆಂದ ರಾಯರೆಡ್ಡಿ
ರಾಜ್ಯದಲ್ಲಿ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಬೇಕು ಬೇಡಿಕೆಯ ನಡುವೆಯೇ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ದೇವೇಗೌಡರ ತುಮಕೂರು ಸ್ಪರ್ಧೆಗೆ ಬಿಜೆಪಿ ಸಂಸದರ ವಿರೋಧ

4. ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನ ಏಳು ಮಂದಿ ಪರಪ್ಪನ ಅಗ್ರಹಾರ ಜೈಲಿಗೆ, 14 ದಿನ ನ್ಯಾಯಾಂಗ ಸೆರೆ
ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್‌ ಆದೇಶಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ಕೋರ್ಟ್ ತಾತ್ಕಾಲಿಕ ನಿರ್ಬಂಧ

5. ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ

ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

6 ಲೋಕ ಸಮರ ಹೊತ್ತಲ್ಲೇ ವಾರಾಣಸಿಯಲ್ಲಿ ಅಭಿವೃದ್ಧಿ ಪರ್ವ: ಕ್ರಿಕೆಟ್‌ ಸ್ಟೇಡಿಯಂಗೆ ಮೋದಿ ಶಂಕುಸ್ಥಾಪನೆ
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಶಿವನ ಮಾದರಿಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. 330 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಸ್ಟೇಡಿಯಂ ಶಿವನಿಗೆ ಸಮರ್ಪಣೆ ಎಂದಿದೆ ಬಿಸಿಸಿಐ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ವಾರಾಣಸಿ ಕ್ರಿಕೆಟ್‌ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ

7. ಭಾರತದ ಬೆನ್ನಿಗೆ ನಿಂತ ಅಮೆರಿಕ: ಆನೆ ಜತೆ ಇರುವೆ ಕಾಳಗಕ್ಕೆ ಇಳಿದಿದೆ ಅಂತ ಕೆನಡಾಗೆ ವ್ಯಂಗ್ಯ
ಭಾರತ ಹಾಗೂ ಕೆನಡಾ ನಡುವಿನ ಬಿಕ್ಕಟ್ಟು (India Canada Row) ದಿನೇದಿನೆ ಉಲ್ಬಣವಾಗುತ್ತಿರುವ ಕಾರಣ ಅಮೆರಿಕ ಮಧ್ಯಪ್ರವೇಶಿಸಲು ಯತ್ನಿಸುತ್ತಿದೆ. ಜತೆಗೆ “ಕೆನಡಾ ಭಾರತದ ಜತೆ ಸಂಘರ್ಷಕ್ಕೆ ಇಳಿದಿದೆ ಎಂದರೆ, ಅದು ಇರುವೆಯೊಂದು ಆನೆಯ ಜತೆ ಕಾಳಗಕ್ಕೆ ಇಳಿದಂತೆ” ಎಂದು ಗೇಲಿ ಮಾಡಿದೆ. ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ: ಭಾರತದಿಂದಲೇ G20 ಶೃಂಗಸಭೆ ಯಶಸ್ವಿ ಎಂದ ಬ್ರೆಜಿಲ್;‌ ಕೆನಡಾ ಆರೋಪಕ್ಕೆ ಏನೆಂದಿತು?

8. ಸುಂದರ ಆಟಗಾರ ಶುಭಮನ್​ ಗಿಲ್​ ಜತೆಗಿನ ಪ್ರೀತಿಗೆ ಕ್ಲ್ಯಾರಿಟಿ ನೀಡಿದ ಸಾರಾ ತೆಂಡೂಲ್ಕರ್
ಮುಂಬಯಿ:  ಸಾರಾ ತೆಂಡೂಲ್ಕರ್ ಮತ್ತು ಶುಭಮನ್​ ಗಿಲ್​ ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship)​ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಇದೀಗ ಸಾರಾ ಅವರು ಮಾಡಿರುವ ಟ್ವೀಟ್​ ಈ ಜೋಡಿ ನಿಜವಾಗಿಯೂ ಪ್ರೀತಿಸುತ್ತಿರುವುದು ಖಚಿತ ಎಂಬ ಸುಳಿವು ನೀಡಿದಂತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದ ವಿಜಯ್ ಸೇತುಪತಿ!
 ವಿಜಯ್ ಸೇತುಪತಿ ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಬ್ಯುಸಿ. ಇಷ್ಟೊಂದು ಜನಪ್ರಿಯತೆ ಪಡೆದಿರುವ ವಿಜಯ್‌ ಸೇತುಪತಿ ಅವರು ನಟಿ ಕೃತಿ ಶೆಟ್ಟಿ (Krithi Shetty) ಜತೆ ನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ. ಮಗಳ ಪಾತ್ರ ಮಾಡಿದ ನಟಿ ಜತೆ ರೊಮ್ಯಾನ್ಸ್ ಮಾಡಲಾರೆʼ ಎಂದು ನಟ ಹೇಳಿದ್ದಾರಂತೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಸಿಲ್ಕ್‌ ಸ್ಮಿತಾ ಶವದ ಮೇಲೆ ನಡೆದಿತ್ತಂತೆ ಸಾಮೂಹಿಕ ಅತ್ಯಾಚಾರ: ನಟಿಯ ಪುಣ್ಯತಿಥಿಯಂದೇ ಹೊರಬಿತ್ತು ಸತ್ಯ
ಸಿಲ್ಕ್‌ ಸ್ಮಿತಾ (Silk Smitha) ಎಂಬ ಅಪ್ಸರೆಯಂಥ ನಟಿ ಬದುಕಿನಲ್ಲಿ ಏನೆಲ್ಲ ಅನುಭವಿಸಿದರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಭಯಾನಕ ಸುದ್ದಿ ಮತ್ತೊಮ್ಮೆ ವೈರಲ್‌ ಆಗಿದೆ. ಏನಿದು ಪೈಶಾಚಿಕ ಕೃತ್ಯ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಪ್ರಮುಖ ಸುದ್ದಿ

Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ

ತಮ್ಮ ಸಮೀಪದ ಪ್ರತಿಸ್ಪರ್ಧಿ ಶಿಲ್ಪಾ ಸುರೇಶ್​ (217 ಮತ) ಅವರಿಗಿಂತ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ ಎನ್​. ಎಂ ಸುರೇಶ್ ಅವರು karnataka film chamber of commerce) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

VISTARANEWS.COM


on

karnataka film chamber
Koo

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (karnataka film chamber of commerce) ಚುನಾವಣಾ (Sandalwood) ಫಲಿತಾಂಶ ಶನಿವಾರ ಸಂಜೆಯ ವೇಳೆಗೆ ಪ್ರಕಟಗೊಂಡಿದೆ. ನಿರ್ಮಾಪಕ ಎನ್​ ಎಂ ಸುರೇಶ್ ಅವರು ಅತ್ಯಧಿಕ ಮತಗಳನ್ನು (337) ಪಡೆಯುವ ಮೂಲಕ ಅಧ್ಯಕ್ಷ ಗದ್ದುಗೆಗೆ ಏರಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಶಿಲ್ಪಾ ಸುರೇಶ್​ (217 ಮತ) ಅವರಿಗಿಂತ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿತರಕ ಏ ಗಣೇಶ್ ಅವರು 204 ಮತಗಳನ್ನು ಪಡೆದಿದ್ದರೆ, ಮಾರ್ಸ್ ಸುರೇಶ್ ಅವರ 181 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ 1599 ಮತಗಳಲ್ಲಿ 967 ಮತಗಳು ಚಲಾವಣೆಯಾಗಿದ್ದವು. ಸೆಪ್ಟೆಂಬರ್​ 23ರಂದು ಚುನಾವಣೆ ನಡೆದು ಅಂದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟಿಸಲಾಯಿತು.

ಕೌತುಕ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಚುನಾವಣೆಯ ಸಂಜೆಯ ತನಕ ನಡೆಯಿತು. ಮತದಾನ ಪ್ರಕ್ರಿಯೆಯಲ್ಲಿ ಸ್ಟಾರ್ ನಟರು, ನಿರ್ಮಾಪಕರು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ನಿರ್ಮಾಪಕ, ಹಂಚಿಕೆದಾರ, ಪ್ರದರ್ಶಕ ಸೇರಿದಂತೆ ಹಲವು ವಲಯಗಳ 93 ಸ್ಥಾನಗಳಿಗೆ ಮತದಾನ ನಡೆಯಿತು. ಇಷ್ಟೊಂದು ಸ್ಥಾನಗಳಿಗೆ ಒಟ್ಟು 158 ಅಭ್ಯರ್ಥಿಗಳು ಕಣದಲ್ಲಿದ್ದರು.

ಅಧ್ಯಕ್ಷರ ಹುದ್ದೆಗೆ ಈ ಬಾರಿ ಪೈಪೋಟಿ ಏರ್ಪಟ್ಟಿತ್ತು. ಎನ್​ಎಂ ಸುರೇಶ್, ವಿತರಕ ಮಾರ್ಸ್ ಸುರೇಶ್, ನಿರ್ಮಾಪಕ ಶಿಲ್ಪ ಶ್ರೀನಿವಾಸ್, ವಿತರಕ ಏ ಗಣೇಶ್ ಅವರುಗಳು ಅಧ್ಯಕ್ಷ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ಒಡ್ಡಿದ್ದರು. ಆದರೆ, ಸುರೇಶ್​ ಅವರಿಗೆ ಸಾರಾ ಗೋವಿಂದು ಸೇರಿದಂತೆ ಮಂಡಳಿಯ ಕೆಲವು ಪ್ರಮುಖರ ಬೆಂಬಲ ಸಿಕ್ಕಿತ್ತು. ಹೀಗಾಗಿ ಅವರೇ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.

ಇದನ್ನೂ ಓದಿ : Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ

ಹಾಲಿ ಅಧ್ಯಕ್ಷರಾಗಿರುವ ಭಾಮಾ ಹರೀಶ್ ಅವರ ಸಹೋದರ ಭಾಮಾ ಗಿರೀಶ್ ಅವರು ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಿತರಕರ ವಲಯದಿಂದ ಕರಿಸುಬ್ಬು ವಿಜಯ ಸಾಧಿಸಿದ್ದಾರೆ ಪ್ರದರ್ಶಕರ ವಲಯದಿಂದ ಸುಂದರ ರಾಜು ಜಯಭೇರಿ ಬಾರಿಸಿದ್ದಾರೆ. ಖಜಾಂಚಿಯಾಗಿ‌ ಜಯಸಿಂಹ‌ ಮುಸೂರಿ ಗೆಲುವು ತಮ್ಮದಾಗಿಸಿಕೊಂಡಡಿದ್ದಾರೆ.

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ ಆಯ್ಕೆಯಾಗಿದ್ದಾರೆ. ವಿತರಕರ ವಲಯದಿಂದ ವೆಂಕಟೇಶ್. ಜಿ ಗೆಲುವು ಸಾಧಿಸಿದ್ದರೆ, ಪ್ರದರ್ಶಕರ ವಲಯದಿಂದ ನರಸಿಂಹುಲು ಜಯ ಗಿಟ್ಟಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಕಳೆದ ಬಾರಿಗಿಂತ ಸುಮಾರು 55ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದರು.

Continue Reading

South Cinema

Vijay Sethupathi: ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದ ವಿಜಯ್ ಸೇತುಪತಿ!

2021ರಲ್ಲಿ ಬಿಡುಗಡೆಯಾದ ʻಉಪ್ಪೆನ’ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜತೆಯಾಗಿ ನಟಿಸಿದ್ದರು. ‘ಉಪ್ಪೆನ’ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು.

VISTARANEWS.COM


on

Edited by

Vijay Sethupathi Krithi Shetty
Koo

ಬೆಂಗಳೂರು: ವಿಜಯ್ ಸೇತುಪತಿ (Vijay Sethupathi) ಸದ್ಯ ʻಜವಾನ್‌ʼ ಸಿನಿಮಾದ ಸಕ್ಸಸ್​​ ಮೂಡ್‌ನಲ್ಲಿ ಇದ್ದಾರೆ. ಬಹುಭಾಷಾ ನಟ ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ. ಇಷ್ಟೊಂದು ಜನಪ್ರಿಯತೆ ಪಡೆದಿರುವ ವಿಜಯ್‌ ಸೇತುಪತಿ ಅವರು ನಟಿ ಕೃತಿ ಶೆಟ್ಟಿ (Krithi Shetty) ಜತೆ ನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಮಗಳ ಪಾತ್ರ ಮಾಡಿದ ನಟಿ ಜತೆ ರೊಮ್ಯಾನ್ಸ್ ಮಾಡಲಾರೆʼ ಎಂದು ನಟ ಹೇಳಿದ್ದಾರಂತೆ.

2021ರಲ್ಲಿ ಬಿಡುಗಡೆಯಾದ ʻಉಪ್ಪೆನ’ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜತೆಯಾಗಿ ನಟಿಸಿದ್ದರು. ‘ಉಪ್ಪೆನ’ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಹೀಗಾಗಿ ಒಂದು ಸಿನಿಮಾದಲ್ಲಿ ಮಗಳಂತೆ ನೋಡಿದ ನಟಿಯ ಜತೆ ಮತ್ತೊಂದು ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡುವುದಿಲ್ಲ ಎಂಬುದಾಗಿ ಸೇತುಪತಿ ಹೇಳಿದ್ದಾರೆ. ತಮ್ಮಿಬ್ಬರನ್ನು ನಾಯಕ-ನಾಯಕಿಯನ್ನಾಗಿಸಿ ತಮಿಳು ಸಿನಿಮಾವೊಂದನ್ನು ಮಾಡುವುದಕ್ಕೆ ಆಫರ್‌ ಬಂದರೂ ವಿಜಯ್‌ ನಿರಾಕರಿಸಿದ್ದಾರೆ.

ಈ ಬಗ್ಗೆ ವಿಜಯ್​ ಸೇತುಪತಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ʻಒಮ್ಮೆ ಮಗಳೆಂದು ಕಲ್ಪಿಸಿಕೊಂಡ ನಟಿಯ ಜತೆಗೆ ನಾನು ಹೇಗೆ ರೊಮ್ಯಾನ್ಸ್ ಮಾಡಲಿ? ಉಪ್ಪೆನ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟಿಂಗ್ ಮಾಡುವಾಗ, ನನ್ನನ್ನು ನಿನ್ನ ತಂದೆ ಎಂದು ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ. ಆ ಸಿನಿಮಾ ಮಾಡುವಾಗ ನನ್ನ ಮಗನಷ್ಟೇ ಕೃತಿಗೂ ವಯಸ್ಸು. ನಾನು ಕೂಡ ಕೃತಿಯನ್ನು ಮಗಳಂತೆ ಭಾವಿಸಿದ್ದೇನೆ. ಹೀಗಿರುವಾಗ ಕೃತಿ ಜತೆಗೆ ರೊಮ್ಯಾನ್ಸ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vijay Sethupathi: ‘ಮಹಾರಾಜʼಫಸ್ಟ್‌ ಲುಕ್‌ ಔಟ್‌; 50ನೇ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಮಿಂಚಿದ ವಿಜಯ್‌ ಸೇತುಪತಿ!

50ನೇ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಮಿಂಚಿದ ವಿಜಯ್‌ ಸೇತುಪತಿ

ಸದ್ಯ ವಿಜಯ್‌ ಸೇತುಪತಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ವಿಜಯ್‌ ಸೇತುಪತಿ ಅವರ ‘ಮಹಾರಾಜ’ ಸಿನಿಮಾದ (Maharaja first Look Out) ಫಸ್ಟ್-ಲುಕ್ ಪೋಸ್ಟರ್ ಅನಾವರಣಗೊಂಡಿದೆ. ವಿಜಯ್‌ ಸೇತುಪತಿ 50ನೇ ಚಿತ್ರಕ್ಕಾಗಿ,(50th film ‘Maharaja) ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಜತೆ ಕೈ ಜೋಡಿಸಿದ್ದಾರೆ.

ಮಹಾರಾಜ’ ಸಿನಿಮಾದ ಫಸ್ಟ್-ಲುಕ್‌ನಲ್ಲಿ ವಿಜಯ್‌ ರಗಡ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಚೇರ್‌ನಲ್ಲಿ ಚಾಕು ಹಿಡಿದು ರಕ್ತಸಿಕ್ತರಾಗಿ ಗಂಭೀರದಿಂದ ಕೂತಿದ್ದಾರೆ ವಿಜಯ್‌. ಸುತ್ತಲೂ ಪೊಲೀಸ್ ಅಧಿಕಾರಿಗಳು ನಿಂತಿದ್ದಾರೆ. ನಟ ವಿಜಯ್ ಅವರ ಎಡ ಭಾಗದ ಕಿವಿಗೆ ಬ್ಯಾಂಡೆಜ್ ಹಾಕಲಾಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜತೆಗೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್ ಮತ್ತು ನಟ್ಟಿ ನಟರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ದಿನೇಶ್ ಪುರುಷೋತ್ತಮನ್ ಅವರ ಛಾಯಾಗ್ರಹಣವಿದೆ.


Continue Reading

South Cinema

Silk Smitha: ಸಿಲ್ಕ್​ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!

Silk Smitha:  ಸಿಲ್ಕ್​ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎಂಬ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರ ಹೇಳಿಕೆ ಮತ್ತೆ ವೈರಲ್‌ ಆಗುತ್ತಿದೆ.

VISTARANEWS.COM


on

Edited by

Silk Smitha
Koo

ಬೆಂಗಳೂರು: ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ ಸಿಲ್ಕ್‌ ಸ್ಮಿತಾ (Silk Smitha) ಮೂಲ ಹೆಸರು ವಿಜಯಲಕ್ಷ್ಮಿ. 1960ರ ಡಿಸೆಂಬರ್ 2ರಂದು ಜನಿಸಿದರು. ಆ ನಂತರದ ದಿನಗಳಲ್ಲಿ ಸಿಲ್ಕ್ ಸ್ಮಿತಾ ಎಂದೇ ಫೇಮಸ್ ಆದರು.  ಸೆಪ್ಟೆಂಬರ್​ 23 ನಟಿ ಸಿಲ್ಕ್​ ಸ್ಮಿತಾ ಅವರ 27ನೇ ಪುಣ್ಯತಿಥಿ. ಇದೀಗ ಕಾಲಿವುಡ್​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರ ಹಳೆಯ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಸಿಲ್ಕ್​ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಅವರ ಹೇಳಿಕೆ ಮತ್ತೆ ವೈರಲ್‌ ಆಗುತ್ತಿದೆ.

ಸಿಲ್ಕ್ ಸ್ಮಿತಾ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ ಮತ್ತು ಅದಕ್ಕಾಗಿಯೇ ಸಿಲ್ಕ್ ಬಾಲ್ಯದಲ್ಲಿ ತಮ್ಮ ಓದನ್ನು ಬಿಡಬೇಕಾಯಿತು. ವರದಿಗಳ ಪ್ರಕಾರ, ಸಿಲ್ಕ್ ಸ್ಮಿತಾ ಅವರು ಕೇವಲ 14 ವರ್ಷದವರಾಗಿದ್ದಾಗ ಮದುವೆಯಾಗಿದ್ದರು ಮತ್ತು ಅವರು ಸಾಕಷ್ಟು ಕೌಟುಂಬಿಕ ಹಿಂಸೆಯನ್ನು ಎದುರಿಸಿದರು. ಸಿಲ್ಕ್ ಸ್ಮಿತಾ ತಮ್ಮ ಗಂಡನ ಮನೆಯಿಂದ ಓಡಿಹೋದ ನಂತರ ಮೇಕಪ್ ಕಲಾವಿದನಾಗಿದ್ದ ತಮ್ಮ ಸ್ನೇಹಿತನ ಮನೆ ಸೇರಿಕೊಂಡಿದ್ದರು. ಮೇಕಪ್ ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ತಮಿಳು ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾಗೆ ದೊಡ್ಡ ಬ್ರೇಕ್ ನೀಡಿದರು. 1979ರಲ್ಲಿ ತಮಿಳು ಚಲನಚಿತ್ರ ‘ವಂದಿಚಕ್ಕರಂ’ನಲ್ಲಿನ ಅವರ ಅದ್ಭುತ ಅಭಿನಯಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ಸಿಲ್ಕ್ ಸ್ಮಿತಾ ಅವರು 17 ವರ್ಷಗಳ ಕಾಲ ನಟಿಯಾಗಿ, ನೃತ್ಯಗಾತಿಯಾಗಿ ಮಿಂಚಿದರು. 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23, 1996ರಂದು ತಮ್ಮ 35ನೇ ವಯಸ್ಸಿನಲ್ಲಿ ನಿಗೂಢವಾಗಿ ಮೃತಪಟ್ಟರು. ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Silk Smitha: ಜ್ಯೂನಿಯರ್‌ ಸಿಲ್ಕ್‌ ಸ್ಮಿತಾ ಕಂಡು ಸಿನಿ ಪ್ರೇಮಿಗಳು ಥ್ರಿಲ್‌; ʻಹಳ್ಳಿ ಮೇಷ್ಟ್ರೇʼ ಬೇಗ ಬನ್ನಿ ಅಂದ್ರು ನೆಟ್ಟಿಗರು!

Bayilvan Ranganathan

ನಟಿ ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸಿ ಫೇಮಸ್ಸಾದ ಕಾರಣ ಅಭಿಮಾನಿಗಳ ಸಂಖ್ಯೆ ಹೆಚ್ಚಿನ ರೀತಿಯಲ್ಲಿ ಇತ್ತು. ಒಮ್ಮೆಯಾದರೂ ಈ ನಟಿಯನ್ನು ನೇರವಾಗಿ ನೋಡಿ ಕಣ್ತುಂಬಿಸಿಕೊಳ್ಳಬೇಕು ಎಂದುಕೊಂಡವರೇ ಹೆಚ್ಚು. ಇದ್ದಕ್ಕಿದ್ದಂತೆ ನಟಿ ಬಾರದ ಲೋಕಕ್ಕೆ ಹೋಗುತ್ತಾರೆ. ʻʻಶವದೊಂದಿಗೆ ಅತ್ಯಾಚಾರ ಮಾಡಲಾಗಿತ್ತು. ಶವಾಗಾರದಲ್ಲಿ ನಟಿಯ ನೌಕರರು ಕುಡಿದ ಅಮಲಿನಲ್ಲಿ ಇರುತ್ತಾರೆ. ಅಲ್ಲಿನ ಹೆಚ್ಚು ನೌಕರರು ಬೆಳಗ್ಗೆ ಕೆಲಸ ಆರಂಭಿಸಿದಾಗಿನಿಂದ ಕುಡಿದಿರುತ್ತಾರೆ. ಇದೇ ಅಮಲಿನಲ್ಲಿ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹಲವು ಬಾರಿ ಸಿಲ್ಕ್ ಸ್ಮಿತಾ ಅವರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆʼʼ ಎಂದಿದ್ದಾರೆ ಬೈಲ್ವಾನ್ ರಂಗನಾಥನ್. ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ಖುದ್ದು ನೋಡಿದ್ದೆ ಎನ್ನುವ ಅವರ ಮಾತು ಇದೀಗ ಮತ್ತೆ ವೈರಲ್‌ ಆಗಿದೆ.

Continue Reading
Advertisement
Vistara Top 10 News 2309
ಕರ್ನಾಟಕ45 seconds ago

VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರದಲ್ಲಿ ಸೆರೆ

Anegondi Vrindavana
ಕರ್ನಾಟಕ4 mins ago

Gangavathi News: ಆನೆಗೊಂದಿ ಜಯತೀರ್ಥ-ರಘುವರ್ಯರ ವೃಂದಾವನ ವಿವಾದ; ರಾಯರ ಮಠದ ಪರ ಹೈಕೋರ್ಟ್ ತೀರ್ಪು

Modi Reservation
ದೇಶ14 mins ago

Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ

Mohammed Shami finished with 5 for 51
ಕ್ರಿಕೆಟ್36 mins ago

Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್​ ಶಮಿ

MK Stalin
ದೇಶ39 mins ago

Organ Donation : ಅಂಗಾಂಗ ದಾನ ಮಾಡಿದವರ ಅಂತ್ಯ ಸಂಸ್ಕಾರಕ್ಕೆ ಸಕಲ ಸರ್ಕಾರಿ ಗೌರವ

Chaitra Kundapura
ಉಡುಪಿ1 hour ago

Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್‌

women arrested
ದೇಶ2 hours ago

Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್​​

Kumaraswamys three suggestions to Government
ಕರ್ನಾಟಕ2 hours ago

HD Kumaraswamy : ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ ನೀಡಿದ 3 ಸಲಹೆಗಳು

CM Siddaramaiah
ಕರ್ನಾಟಕ2 hours ago

Women’s Reservation Bill: ಮೋದಿಯವರ ಮಹಿಳಾ ಮೀಸಲಾತಿ 2024, 2029, 2034ರಲ್ಲೂ ಜಾರಿಯಾಗಲ್ಲ: ಸಿದ್ದರಾಮಯ್ಯ

naveen ul haq and gautam gambhir
ಕ್ರಿಕೆಟ್2 hours ago

‘ಎಂದಿಗೂ ಬದಲಾಗಬೇಡ’ ನವೀನ್ ಉಲ್ ಹಕ್​ಗೆ ಜನ್ಮದಿನದ ಶುಭಾಶಯ ಕೋರಿದ ಗಂಭೀರ್; ಹಾರೈಕೆ ಹಿಂದಿದೆ ನರಿ ಬುದ್ಧಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌