Namma Hudugaru Movie | ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಕುಡಿ ಗಾಂಧಿನಗರಕ್ಕೆ ಎಂಟ್ರಿ - Vistara News

ಸಿನಿಮಾ

Namma Hudugaru Movie | ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಕುಡಿ ಗಾಂಧಿನಗರಕ್ಕೆ ಎಂಟ್ರಿ

Namma Hudugaru Movie | ನಿರಂಜನ್‌ ಸುಧೀಂದ್ರ ಅಭಿನಯದ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಷ್ಣುವರ್ಧನ್ ಅಭಿಮಾನಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Namma Hudugaru Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ರಿಯಲ್‌ ಸ್ಟಾರ್‌ ಉಪೇಂದ್ರ ಕುಟುಂಬದ ಕುಡಿ ನಿರಂಜನ್‌ ಸುಧೀಂದ್ರ ನಾಯಕನಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಮ್ಮ ಹುಡುಗರು ಚಿತ್ರದಲ್ಲಿ (Namma Hudugaru Movie ) ಪ್ರಮುಖ ಪಾತ್ರದಲ್ಲಿ ನಿರಂಜನ್‌ ಸುಧೀಂದ್ರ ಅಭಿನಯಿಸಿದ್ದಾರೆ.

ಈ ಹಿಂದೆ ʼಸೆಕೆಂಡ್‌ ಹಾಫ್‌ʼ ಚಿತ್ರದಲ್ಲಿ ಪ್ರಿಯಾಂಕಾ ಅವರೊಟ್ಟಿಗೆ ನಟಿಸಿದ್ದು ಇದೀಗ ನಾಯಕನಾಗಿ ನಮ್ಮ ಹುಡುಗರು ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದಾರೆ. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡೊಂದು ಬಿಡುಗಡೆಯಾಗಿದೆ. ಜುಲೈ 8ಕ್ಕೆ ರಾಜ್ಯಾದ್ಯಂತ ಅದ್ದೂರಿ ಪ್ರದರ್ಶನ ಕಾಣಲು ಚಿತ್ರ ಸಜ್ಜಾಗಿದೆ. ನಟಿ ಪ್ರಿಯಾಂಕಾ ಉಪೇಂದ್ರ ಮನೆತನದ ಕುಡಿಗೆ ಶುಭ ಹಾರೈಸಿದ್ದಾರೆ.

ಹೆಚ್. ಬಿ ಸಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಆ್ಯಕ್ಷನ್ ಕಟ್ ಹೇಳಿದ್ದು, ಕೆ. ಕೆ. ಅಶ್ರಫ್ ನಿರ್ಮಾಣ ಮಾಡಿದ್ದಾರೆ. ನಿರಂಜನ್ ಸುಧೀಂದ್ರ, ಶರತ್ ಲೋಹಿತಾಶ್ವ, ವಸಿಷ್ಠ ಸಿಂಹ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಇದೊಂದು ರೋಮ್ಯಾಂಟಿಕ್ ಆ್ಯಕ್ಷನ್ ಎಂಟರ್ಟೈನ್ಮೆಂಟ್‌ ಚಿತ್ರ. ಅಭಿಯಾನ್ ರಾಯ್ ಸಂಗೀತ ಸಂಯೋಜನೆ ಮಾಡಿದ್ದು, ಚಿದಾನಂದ್ ಹೆಚ್. ಕೆ. ಛಾಯಾಗ್ರಹಣ ಮಾಡಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಿರಂಜನ್ ಬೆಳ್ಳಿ ಪರದೆ ಮೇಲೆ ಹೇಗೆ ಮೋಡಿ ಮಾಡ್ತಾರೆ ಅನ್ನೋದನ್ನು ಕಾದು ನೋಡ್ಬೇಕಿದೆ.

ಸ್ಯಾಂಡಲ್‌ವುಡ್‌ನಲ್ಲಿ ಮುನ್ನುಗ್ಗುತ್ತಿರುವ ನಿರಂಜನ್‌

‘ಸೂಪರ್‌ ಸ್ಟಾರ್‌’ ಎಂಬ ಮಾಸ್‌ ಟೈಟಲ್‌ ಇರುವ ಎರಡನೇ ಸಿನಿಮಾ ಕೂಡ ಈ ಹಿಂದೆ ನಿರಂಜನ್‌ ಅನೌನ್ಸ್‌ ಮಾಡಿದ್ದರು. ಈ ಚಿತ್ರದ ಶೇ. 50ರಷ್ಟು ಚಿತ್ರೀಕರಣ ಪೂರ್ಣವಾಗಿದೆ. ಮತ್ತೆರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಸಿನಿಮಾಗೆ ‘ಕ್ಯೂ’ ಎಂಬ ವಿಶಿಷ್ಟವಾದ ಟೈಟಲ್‌ ಇಟ್ಟಿದ್ದಾರೆ. ಇದರಲ್ಲಿ ‘ಮೈನೇ ಪ್ಯಾರ್‌ ಕಿಯಾ’ ಸಿನಿಮಾ ಬೆಡಗಿ ಭಾಗ್ಯಶ್ರೀ ಪುತ್ರಿ ಆವಂತಿಕಾ ನಾಯಕಿಯಾಗಿದ್ದಾರೆ.

ನಾಗಶೇಖರ್‌ ಸಿನಿಮಾದ ಜತೆಗೆ ‘ಹಂಟರ್‌’ ಎಂಬ ಸಿನಿಮಾವನ್ನು ಸಹ ನಿರಂಜನ್‌ ಒಪ್ಪಿಕೊಂಡಿದ್ದು, ಅದನ್ನು ‘ಸೀಜರ್‌’ ಸಿನಿಮಾ ನಿರ್ದೇಶನ ಮಾಡಿದ್ದ ವಿನಯ್‌ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾ ನಿರ್ಮಾಣ ಮಾಡಿದ್ದ ತಂಡವೇ ‘ಹಂಟರ್‌ಗೂ ಬಂಡವಾಳ ಹೂಡುತ್ತಿದೆ. ಹಂಟರ್‌ ಸಿನಿಮಾ ಸೋಮವಾರದಿಂದ ಆರಂಭವಾಗಲಿದೆ. ಈ ಸಿನಿಮಾದಲ್ಲಿ ನಿರಂಜನ್‌ಗೆ ಜೋಡಿಯಾಗಿ ಮಲಯಾಳಂ ಬೆಡಗಿ ಸೌಮ್ಯ ಮೆನನ್‌ ಕಾಣಿಸಿಕೊಳ್ಳುತ್ತಿದ್ದಾರೆ. ‘ಹಂಟರ್‌ʼ ಕೂಡ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾವಾಗಿದೆ.

‘ಸೂಪರ್‌ ಸ್ಟಾರ್‌’ ಸಿನಿಮಾಗಾಗಿ ಭರ್ಜರಿ ಡ್ಯಾನ್ಸ್‌ ಕಲಿತಿದ್ದಾರೆ. ‘ಹಂಟರ್‌’ ಮತ್ತು ‘ಕ್ಯೂ’ಗಾಗಿ ವರ್ಕೌಟ್‌, ಜಿಮ್ನಾಸ್ಟಿಕ್‌ ಮಾಡಿ ದೇಹವನ್ನು ಹುರಿಗೊಳಿಸುತ್ತಿದ್ದಾರೆ ನಿರಂಜನ್‌.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Andre Russell: ಸ್ಟಾರ್​​ ನಟಿಯೊಂದಿಗೆ ಕೇಸರಿ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ ಆಂಡ್ರೆ ರಸೆಲ್

Andre Russell: ರಸೆಲ್​ ಕೇಸರಿ ಬಣ್ಣದ ಲುಂಗಿ ತೊಟ್ಟು, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್​ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚಿದ್ದಾರೆ ಮತ್ತು ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಈ ಜೋಡಿಯ ಡ್ಯಾನ್ಸ್ ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ.

VISTARANEWS.COM


on

Andre Russell
Koo

ಮುಂಬಯಿ: ವೆಸ್ಟ್​ ಇಂಡೀಸ್​ ತಂಡ ಸ್ಫೋಟಕ ಬ್ಯಾಟರ್​, ಕೆಕೆಆರ್(KKR)​ ತಂಡದ ಆಂಡ್ರೆ ರಸೆಲ್(Andre Russell) ಬಾಲಿವುಡ್​ ನಟಿ ಅವಿಕಾ ಗೋರ್(Avika Gor) ಜತೆ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ್ದಾರೆ. ​’ಲಡ್ಕಿ ತು ಕಮಲ್ ಕಿ’ ಎನ್ನುವ ಹಾಡಿಗೆ ರೆಸೆಲ್ ಅವಿಕಾ ಸೇರಿ ಹೆಜ್ಜೆ ಹಾಕಿರುವ ಈ ಹಾಡು ಯೂಟ್ಯೂಬ್​ನಲ್ಲಿ ಇಂದು(ಮೇ 9 ಗುರುವಾರ) ಬಿಡುಗಡೆಯಾಗಿದ್ದು, ಎಲ್ಲಡೆ ಸಂಚಲನ ಮೂಡಿಸಿದೆ.

ರಸೆಲ್​ ಕೇಸರಿ ಬಣ್ಣದ ಲುಂಗಿ ತೊಟ್ಟು, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್​ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚಿದ್ದಾರೆ ಮತ್ತು ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಈ ಜೋಡಿಯ ಡ್ಯಾನ್ಸ್ ಕಂಡು ಅಭಿಮಾನಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅವಿಕಾ ಗೋರ್ ಭಾರತೀಯ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸುತ್ತಾರೆ.

ವಿಂಡೀಸ್​ ಆಟಗಾರರು ಕ್ರಿಕೆಟ್​ ಜತೆ ನಟನೆ, ಸಂಗೀತ, ಡ್ಯಾನ್ಸ್​ನಲ್ಲಿ ಅಪಾರ ಕ್ರೇಜ್​ ಹೊಂದಿರುತ್ತಾರೆ. ಈಗಾಗಲೇ ಯೂನಿವರ್ಸಲ್​ ಬಾಸ್ ಖ್ಯಾತಿಯ​ ಕ್ರಿಸ್ ಗೇಲ್ ಮತ್ತು ಡ್ವೇನ್ ಬ್ರಾವೋ ಹಲವು ಆಲ್ಬಮ್​ ಸಾಂಗ್​ ಮಾಡಿ ಖ್ಯಾತಿಗಳಿಸಿದ್ದಾರೆ. ಇದೀಗ ಈ ಸಾಲಿಗೆ ರಸೆಲ್​ ಕೂಡ ಸೇರಿದ್ದಾರೆ.


ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್​ ಖಾನ್​ ನಟನೆಯ ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

ಈ ಬಾರಿಯ ಐಪಿಎಲ್‌ನಲ್ಲಿ ರಸೆಲ್​ ಕೆಕೆಆರ್​ ಪರ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನಸೆಳೆಯುತ್ತಿದ್ದಾರೆ. 11 ಪಂದ್ಯಗಳಲ್ಲಿ 198 ರನ್ ಗಳಿಸಿರುವ ರಸೆಲ್, ಬೌಲಿಂಗ್‌ನಲ್ಲೂ ಮಿಂಚಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಕೆಕೆಆರ್​ 16 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್​ ಟಿಕೆಟ್​ ಅಧಿಕೃತಗೊಳ್ಳಲಿದೆ.

ಇದನ್ನೂ ಓದಿ PBKS vs RCB: ಮಳೆಯ ಕೈಯಲ್ಲಿದೆ ಆರ್​ಸಿಬಿ-ಪಂಜಾಬ್​ ಪ್ಲೇ ಆಫ್​ ಭವಿಷ್ಯ

ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ


ಬುಧವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡ ಪ್ಲೇ ಆಫ್​ ಸನಿಹಕ್ಕೆ ಬಂದು ನಿಂತಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ(IPL 2024 Points Table) ಪ್ರಗತಿ ಸಾಧಿಸಿ ಮೂರನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ಈ ಹಿಂದೆ ಮೂರನೇ ಸ್ಥಾನಿಯಾಗಿದ್ದ ಹಾಲಿ ಚಾಂಪಿಯನ್​ ಚೆನ್ನೈ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಸದ್ಯ ಚೆನ್ನೈ, ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು 12 ಅಂಕಗಳಿಸಿವೆ. ಹೀಗಾಗಿ ಈ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಬಹುತೇಕ ಪ್ಲೇ ಆಫ್​ ಪ್ರವೇಶಿಸುವುದು ಖಚಿತ. ಹೈದರಾಬಾದ್​ಗೆ ಇನ್ನೊಂದು ಪಂದ್ಯ ಗೆದ್ದರೂ ಸಾಕು. ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಪ್ಲೇ ಆಫ್​ ಕ್ಷೀಣ ಅವಕಾಶ ಹೊಂದಿರುವ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆಯಿದೆ.

Continue Reading

ಬಾಲಿವುಡ್

Deepika Padukone: ಕ್ಯಾಮೆರಾ ತಳ್ಳಿ ಮುಂದೆ ನಡೆದ ದೀಪಿಕಾ! ನಾಚಿಕೆಗೇಡಿನ ವರ್ತನೆ ಅಂದ್ರು ನೆಟ್ಟಿಗರು!

Deepika Padukone: ದೀಪಿಕಾ ಕಾರಿನತ್ತ ಸಾಗುತ್ತಿದ್ದಾಗ , ಅಭಿಮಾನಿಯೊಬ್ಬರು ಅವರನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದರು. ದೀಪಿಕಾ ಲೆನ್ಸ್ ಗುರುತಿಸಿದಾಕ್ಷಣ ದೂರ ತಳ್ಳಿ ಮುಂದೆ ನಡೆದರು. ರಣವೀರ್‌ ಕೂಡ ನಟಿ ಜತೆ ಇದ್ದರು. ಇದೀಗ ದೀಪಿಕಾ ಅವರ ನಡವಳಿಕೆಗೆ ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ.

VISTARANEWS.COM


on

Deepika Padukone pushes away fan camera at airport
Koo

ಬೆಂಗಳೂರು: ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ವೆಕೇಶನ್‌ ಬಳಿಕ ಮುಂಬೈಗೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಅವರನ್ನು ನೋಡಿದ ಕೂಡಲೆ ಪಾಪರಾಜಿಗಳು ಫೋಟೊ ಕ್ಲಿಕ್ಕಿಸಲು ಶುರು ಮಾಡಿದರು. ಜತೆಗೆ ಗುಟ್ಟಾಗಿ ನಟಿಯ ಬೇಬಿ ಬಂಪ್‌ವನ್ನು ಕ್ಯಾಮೆರಾ ಮೂಲಕ ಸೆರೆ ಹಡಿಯಲು ಶುರು ಮಾಡಿದ್ದಾರೆ. ಆಗ ದೀಪಿಕಾ ಕ್ಯಾಮೆರಾ ಕಂಡೊಡನೆ ದೂರ ತಳ್ಳಿದ್ದಾರೆ. ನಟಿ ತಮ್ಮ ಬೇಬಿ ಬಂಪ್‌ವನ್ನು ಮರೆಮಾಚಲು ಲೂಸ್‌ ಆಗಿರುವ ಬಟ್ಟೆಯನ್ನೂ ಧರಿಸಿದ್ದರು.

ದೀಪಿಕಾ ಕಾರಿನತ್ತ ಸಾಗುತ್ತಿದ್ದಾಗ , ಅಭಿಮಾನಿಯೊಬ್ಬರು ಅವರನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದರು. ದೀಪಿಕಾ ಲೆನ್ಸ್ ಗುರುತಿಸಿದಾಕ್ಷಣ ದೂರ ತಳ್ಳಿ ಮುಂದೆ ನಡೆದರು. ರಣವೀರ್‌ ಕೂಡ ನಟಿ ಜತೆ ಇದ್ದರು. ಇದೀಗ ದೀಪಿಕಾ ಅವರ ನಡವಳಿಕೆಗೆ ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ʻನಾಚಿಕೆಗೇಡಿನ ವರ್ತನೆʼʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು, ʻʻತಾವು ಪ್ರೆಗ್ನೆಂಟ್‌ ಎಂಬುದನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ. ಪಾಪರಾಜಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್‌ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

ಇದನ್ನೂ ಓದಿ: Deepika Padukone: ಸಖತ್‌ ಗ್ಲೋ ಆದ ಪ್ರೆಗ್ನೆಂಟ್‌ ದೀಪಿಕಾ: ಜ್ಯೂನಿಯರ್‌ ಆರ್ಟಿಸ್ಟ್‌ ಕೊಟ್ಟ ಸ್ಪೆಷಲ್‌ ಗಿಫ್ಟ್‌ ಏನು?

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

ಮಗುವಿನ ನಿರೀಕ್ಷೆ ಹೊಸ್ತಿಲಲ್ಲೇ ಮದುವೆ ಫೋಟೊಗಳು ಡಿಲಿಟ್‌!

ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಸಂದರ್ಭದಲ್ಲೇ ತಮ್ಮ ಮದುವೆ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಡಿಲಿಟ್‌ ಮಾಡಿದ್ದರು. ಎಲ್ಲವೂ ಸರಿಯಿರುವಾಗಲೇ ರಣ್‌ವೀರ್ ಸಿಂಗ್ ಯಾಕೆ ಈ ನಿರ್ಧಾರ ತೆಗೆದುಕೊಂಡರು? ದಿಢೀರನೇ ಫೋಟೊಗಳನ್ನು ತೆಗೆದು ಹಾಕಿದ್ದು ಯಾಕೆ? ಈ ಎಲ್ಲಾ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿತ್ತು. ಕಳೆದ ವರ್ಷ ಕರಣ್ ಜೋಹರ್ ಶೋನಲ್ಲಿ ಮದುವೆ ವಿಡಿಯೋ ರಿಲೀಸ್ ಮಾಡಿದ್ದರು. ಇದರಿಂದ ರಣವೀರ್ ಸಿಂಗ್ ಹಾಗೂ ದೀಪಿಕಾ ಮಧ್ಯೆ ಏನಾದರೂ ಗಂಭೀರ ಜಗಳ ಆಯಿತೇ ಎನ್ನುವ ಅನುಮಾನ ಮೂಡಿತ್ತು.

Continue Reading

ಕಿರುತೆರೆ

Kendasampige Serial: `ಕೆಂಡಸಂಪಿಗೆ’ ಧಾರಾವಾಹಿಗೆ ಕಾವ್ಯ ಶೈವ ಗುಡ್‌ ಬೈ; ಬದಲಾದ ಸುಮನಾ ಪಾತ್ರಧಾರಿ ಯಾರು?

Kendasampige Serial: ಕಥಾನಾಯಕಿ ಸುಮನಾ ಪಾತ್ರಕ್ಕೆ ನಟಿ ಕಾವ್ಯ ಶೈವ ಬಣ್ಣ ಹಚ್ಚಿದ್ದರು. ಇದೀಗ ಸುಮನಾ ಪಾತ್ರಕ್ಕೆ ಬೇರೊಬ್ಬ ನಟಿ ಎಂಟ್ರಿ ಕೊಟ್ಟಿದ್ದಾರೆ. ‘ಕೆಂಡಸಂಪಿಗೆ’ ಧಾರಾವಾಹಿಯಿಂದ ಕಾವ್ಯ ಶೈವ ಹೊರಬಂದಿದ್ದು ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಕಾತ್ಯಾಯಿನಿ ಆಗಿ ನಟಿ ಚೈತ್ರಾ ರಾವ್ ಸಚಿನ್, ತೀರ್ಥಂಕರ್ ಪ್ರಸಾದ್ ಆಗಿ ನಟ ಆಕಾಶ್, ಸಾಧನಾ ಆಗಿ ನಟಿ ಅಮೃತಾ ರಾಮಮೂರ್ತಿ, ಕೇಶವ್ ಪ್ರಸಾದ್ ಆಗಿ ನಟ ದೊಡ್ಡಣ್ಣ, ಪದ್ಮ ಆಗಿ ನಟಿ ಜ್ಯೋತಿ ಬಂಟ್ವಾಳ ಅಭಿನಯಿಸುತ್ತಿದ್ದಾರೆ.

VISTARANEWS.COM


on

Kendasampige Serial Madhumitha Entry
Koo

ಕಲರ್ಸ್‌ ಕನ್ನಡ ವಾಹಿನಿಯ ಟಾಪ್‌ ಧಾರಾವಾಹಿಗಳಲ್ಲಿ ‘ಕೆಂಡಸಂಪಿಗೆ’ ಕೂಡ (Kendasampige Serial) ಒಂದು. ಇದೀಗ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ  ನಟಿ ಕಾವ್ಯ ಶೈವ (Kavya Shaiva) ಹೊರ ಬಂದಿದ್ದಾರೆ.

ಕಥಾನಾಯಕಿ ಸುಮನಾ ಪಾತ್ರಕ್ಕೆ ನಟಿ ಕಾವ್ಯ ಶೈವ ಬಣ್ಣ ಹಚ್ಚಿದ್ದರು. ಇದೀಗ ಸುಮನಾ ಪಾತ್ರಕ್ಕೆ ಬೇರೊಬ್ಬ ನಟಿ ಎಂಟ್ರಿ ಕೊಟ್ಟಿದ್ದಾರೆ.

ಧಾರಾವಾಹಿಯಲ್ಲಿ ಸುಮನಾಳ ಕಿಡ್ನ್ಯಾಪ್‌ನಿಂದ ‘ಕೆಂಡಸಂಪಿಗೆ’ ಸೀರಿಯಲ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಮಧ್ಯೆ ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಈ ದೊಡ್ಡ ಬದಲಾವಣೆಯಾಗಿದೆ.

ಇದನ್ನೂ ಓದಿ: Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಇದೀಗ ಸುಮನಾ ಪಾತ್ರಕ್ಕಾಗಿ ಬಣ್ಣ ಹಚ್ಚಿರುವವರು ಮಧುಮಿತ (Madhumitha).

ಈ ಮುಂಚೆ ಮಧುಮಿತ ‘ಜೇನುಗೂಡು’ ಸೀರಿಯಲ್‌ನಲ್ಲಿ ಅಭಿನಯಿಸಿದ್ದರು.‘ಯುವರತ್ನ’ ಚಿತ್ರದಲ್ಲಿ ಸಮೀರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಮಧುಮಿತ ಅವರು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘’ ಒಳ್ಳೆಯ ಕೆಲಸಗಳಿಗೆ ಸಮಯ ಹಿಡಿಯುತ್ತದೆ ಎಂಬುದು ನಿಜಕ್ಕೂ ಸತ್ಯ. ತುಂಬಾ ಧನ್ಯವಾದಗಳು ವಿಶ್ವಕ್ಕೆ. ನಾನು ಬಯಸಿದ್ದನ್ನು ನೀವು ನನಗೆ ನೀಡಿದ್ದೀರಿ. ಈ ಯೋಜನೆಯ ಭಾಗವಾಗಿರಲು ತುಂಬ ಸಂತಸವಾಗುತ್ತಿದೆ. ನನಗೆ ಈ ಅವಕಾಶವನ್ನು ನೀಡಿದ ಕಲರ್ಸ್‌ ಕನ್ನಡದವರಿಗೆ ತುಂಬಾ ಧನ್ಯವಾದಗಳು. ಸುಮನಾ ಆಗಿ ಸೈನ್ ಇನ್ ಮಾಡಲು ನಿಮ್ಮೆಲ್ಲರ ಆಶೀರ್ವಾದ ಬೇಕು. ಇಲ್ಲಿಗೆ ತಲುಪಲು ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ರಾಯರಿದ್ದಾರೆʼʼ ಎಂದು ನಟಿ ಮಧುಮಿತ ಸೋಷಿಯಲ್ ಮೀಡಿಯಾದ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Continue Reading

ಟಾಲಿವುಡ್

Rashmika Mandanna: ಸಲ್ಮಾನ್ ಖಾನ್ ಜತೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ರೊಮ್ಯಾನ್ಸ್‌!

Rashmika Mandanna: ಈದ್ ದಿನವೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು ಸಲ್ಮಾನ್ ಖಾನ್ (Salman Khan).ಎಆರ್ ಮುರುಗದಾಸ್ (AR Murugadoss) ಜತೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದು, ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದರು. ಮಾರ್ಚ್ 12ರಂದು, ಸಲ್ಮಾನ್ ಖಾನ್ ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದರು. ಪ್ರತಿಭಾವಂತರಾದ ಎಆರ್ ಮುರುಗದಾಸ್ ನನ್ನ ಸ್ನೇಹಿತ, ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವಾಗಿದೆ. ಈ ಸಹಯೋಗ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದರು.

VISTARANEWS.COM


on

Rashmika Mandanna Signed Salman Khan Sikandar
Koo

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಲ್ಮಾನ್ ಖಾನ್ (Salman Khan) ಅವರ ಹೊಸ ಪ್ರಾಜೆಕ್ಟ್ ʻಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಇದು ರಶ್ಮಿಕಾ ಅವರ ನಾಲ್ಕನೇ ಬಾಲಿವುಡ್ ಚಿತ್ರ. ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಮೇ.8ರಂದು ಇನ್‌ಸ್ಟಾ ಮೂಲಕ ಖಚಿತಪಡಿಸಿದ್ದಾರೆ. “ನೀವು ಬಹಳ ಸಮಯದಿಂದ ಮುಂದಿನ ಅಪ್‌ಡೇಟ್‌ ಬಗ್ಗೆ ನನ್ನನ್ನು ಕೇಳುತ್ತಿದ್ದೀರಿ. ಇದೀಗ ನಿಮ್ಮ ಮುಂದೆ. ʻಸಿಕಂದರ್‌ ಸಿನಿಮಾ ಭಾಗವಾಗಿರುವುದಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು ಗೌರವಿಸುತ್ತೇನೆʼʼಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ ರಶ್ಮಿಕಾ. ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಈದ್ ದಿನವೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು ಸಲ್ಮಾನ್ ಖಾನ್ (Salman Khan).ಎಆರ್ ಮುರುಗದಾಸ್ (AR Murugadoss) ಜತೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದು, ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದರು. ಮಾರ್ಚ್ 12ರಂದು, ಸಲ್ಮಾನ್ ಖಾನ್ ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದರು. ಪ್ರತಿಭಾವಂತರಾದ ಎಆರ್ ಮುರುಗದಾಸ್ ನನ್ನ ಸ್ನೇಹಿತ, ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವಾಗಿದೆ. ಈ ಸಹಯೋಗ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತಂಗಿ ಈಗ ಹೇಗಿದ್ದಾರೆ?

ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು.

ಸೊನಾಕ್ಷಿ ಸಿನ್ಹಾ ನಟನೆಯ ‘ಅಕಿರಾ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಸ್ಟಾಲಿನ್’ ಚಿತ್ರವನ್ನು ಹಿಂದಿಯಲ್ಲಿ ‘ಜೈ ಹೋ’ ಹೆಸರಲ್ಲಿ ರೀಮೇಕ್ ಮಾಡಲಾಗಿತ್ತು.

ʻಸಿಖಂದರ್’ ಸಿನಿಮಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರಲಿದೆ. 400 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ ಎಂದು ವರದಿಯಾಗಿದೆ. ಸಲ್ಮಾನ್ ಖಾನ್ ಕೊನೆಯದಾಗಿ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ರಶ್ಮಿಕಾ ಮುಂದೆ ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

Continue Reading
Advertisement
SSLC Result 2024 SSLC students get 20 percent grace marks but result is very poor
ಶಿಕ್ಷಣ5 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

Andre Russell
ಕ್ರೀಡೆ12 mins ago

Andre Russell: ಸ್ಟಾರ್​​ ನಟಿಯೊಂದಿಗೆ ಕೇಸರಿ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ ಆಂಡ್ರೆ ರಸೆಲ್

Deepika Padukone pushes away fan camera at airport
ಬಾಲಿವುಡ್13 mins ago

Deepika Padukone: ಕ್ಯಾಮೆರಾ ತಳ್ಳಿ ಮುಂದೆ ನಡೆದ ದೀಪಿಕಾ! ನಾಚಿಕೆಗೇಡಿನ ವರ್ತನೆ ಅಂದ್ರು ನೆಟ್ಟಿಗರು!

Kendasampige Serial Madhumitha Entry
ಕಿರುತೆರೆ15 mins ago

Kendasampige Serial: `ಕೆಂಡಸಂಪಿಗೆ’ ಧಾರಾವಾಹಿಗೆ ಕಾವ್ಯ ಶೈವ ಗುಡ್‌ ಬೈ; ಬದಲಾದ ಸುಮನಾ ಪಾತ್ರಧಾರಿ ಯಾರು?

What After SSLC ?
ಶಿಕ್ಷಣ28 mins ago

What After SSLC?: ವಿಜ್ಞಾನ, ವಾಣಿಜ್ಯ, ಕಲೆ; ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಓದಬಹುದು?

sslc result 2024 ankita basappa first rank toppers list
ಪ್ರಮುಖ ಸುದ್ದಿ38 mins ago

SSLC Result 2024: ಶೇ.100 ಅಂಕಗಳೊಂದಿಗೆ ಬಾಗಲಕೋಟೆಯ ಅಂಕಿತಾ ಪ್ರಥಮ; ಎಸ್ಸೆಸ್ಸೆಲ್ಸಿ ಟಾಪರ್ಸ್ ಪಟ್ಟಿ ಇಲ್ಲಿದೆ

SSLC Exam Result 2024 Announce
ಬೆಂಗಳೂರು54 mins ago

SSLC Result 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್‌; ಫಸ್ಟ್‌ ಬೆಂಚ್‌ಗೆ ಬಂದ ಉಡುಪಿ; ಲಾಸ್ಟ್‌ ಬೆಂಚ್‌ನಲ್ಲೇ ಉಳಿದ ಯಾದಗಿರಿ!

IPL 2024
ಕ್ರೀಡೆ1 hour ago

IPL 2024: 17ನೇ ಆವೃತ್ತಿಯ ಐಪಿಎಲ್​ನಿಂದ ಅಧಿಕೃತವಾಗಿ ಹೊರಬಿದ್ದ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​

Kerala Governor
ದೇಶ1 hour ago

Kerala Governor: ರಾಮಲಲ್ಲಾನಿಗೆ ಶಿರಬಾಗಿ ನಮಸ್ಕರಿಸಿದ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌; ವಿಡಿಯೋ ನೋಡಿ

Air India Express
ದೇಶ1 hour ago

Air India Express: 30 ಸಿಬ್ಬಂದಿಯನ್ನು ವಜಾಗೊಳಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌; ಇಂದು 74 ವಿಮಾನಗಳ ಹಾರಾಟ ರದ್ದು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Exam Result 2024 Announce
ಬೆಂಗಳೂರು2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

ಟ್ರೆಂಡಿಂಗ್‌