ಸಿನಿಮಾ
Review: ಇನ್ನೂ ಬೆಸ್ಟ್ ಆಗಬಹುದಿತ್ತು ʼಬೀಸ್ಟ್ʼ
ಅಭಿಮಾನಿಗಳ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿರುವ ಚಿತ್ರ. ನಿರ್ದೇಶಕ ನೆಲ್ಸನ್ ಹಾಗೂ ನಟ ವಿಜಯ್ ತಳಪತಿ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ.
ಚಿತ್ರ: ಬೀಸ್ಟ್ (ತಮಿಳು)
ನಿರ್ದೇಶನ: ನೆಲ್ಸನ್
ನಿರ್ಮಾಪಕ: ಕಲಾನಿಧಿ ಮಾರನ್
ಸಂಗೀತ: ಅನಿರುದ್ಧ್ ರವಿಚಂದ್ರನ್
ತಾರಾಗಣ: ವಿಜಯ್, ಪೂಜಾ ಹೆಗಡೆ, ಸೆಲ್ವ ರಾಘವನ್, ಅಂಕುರ್ ವೈಕಲ್, ವಿ.ಟಿ.ವಿ ಗಣೇಶ್, ಯೋಗಿ ಬಾಬು
ಒಂದು ಚಿತ್ರ ಸೂಪರ್ ಹಿಟ್ ಆದ ನಂತರ ಪ್ರೇಕ್ಷಕರಲ್ಲಿ ಸಹಜವಾಗಿ ಆ ನಿರ್ದೇಶಕರ ಮೇಲೆ ಭರವಸೆ ಹೆಚ್ಚುತ್ತದೆ, ನಿರೀಕ್ಷೆ ಹೆಚ್ಚುತ್ತದೆ. ಕೊನೇಪಕ್ಷ ಹಿಂದಿನ ಚಿತ್ರದ ಮಟ್ಟದಲ್ಲಿ ಇರುತ್ತದೆ ಎಂಬ ನಂಬಿಕೆ ಇರುತ್ತದೆ. ಅದೇ ರೀತಿಯ ಭರವಸೆಯನ್ನು ತಮಿಳು ಚಿತ್ರರಂಗದ ನಿರ್ದೇಶಕ ನೆಲ್ಸನ್ ಮೂಡಿಸಿದ್ದರು. ತಾವು ನಿರ್ದೇಶಿಸಿದ ಶಿವಕಾರ್ತಿಕೇಯನ್ ಅಭಿನಯದ ಡಾಕ್ಟರ್ ಎಂಬ ಚಿತ್ರ ವಿನೂತನವಾಗಿತ್ತು. But ನೆಲ್ಸನ್ ನಿರ್ದೇಶನದ ಬೀಸ್ಟ್ ಚಿತ್ರ ಜನರ ನಿರೀಕ್ಷೆಯನ್ನು ಮುಟ್ಟುವುಲ್ಲಿ ಇನ್ನಷ್ಟು ಪ್ರಯತ್ನ ಮಾಡಬಹುದಿತ್ತು.
ಕಥೆ ಹೇಗಿದೆ?
ಬೀಸ್ಟ್ ಟ್ರೇಲರ್ ನೊಡಿದಾಗ ಸಿನಿಮಾದ ಒಂದು ಸಾಮಾನ್ಯ ಚಿತ್ರಣ ಅರಿವಾಗುತ್ತದೆ. ಒಬ್ಬ ಯೋಧನ ಕಥೆ ಇದು ಎಂದು ತಿಳಿಯುತ್ತದೆ. But ಉಳಿದ ಯೋಧರ ಕಥೆಯಂತೆ, ಯಾವುದೋ ಯುದ್ಧವನ್ನು ಆಧರಿಸಿ ಮಾಡಿರುವಂತಹ ಕಥೆಯಲ್ಲ. ಒಂದು ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ನಡೆಯುವಂತಹ ಸರಳವಾದ ಕಥೆ. ಭಯೋತ್ಪಾದಕರು ಹೈಜಾಕ್ ಮಾಡಿದ ಶಾಪಿಂಗ್ ಕಾಂಪ್ಲೆಕ್ಸ್‌ನಿಂದ ನಾಗರಿಕರನ್ನು ಸುರಕ್ಷಿತವಾಗಿ ಹೊರತರಬೇಕಾಗುತ್ತದೆ. ಆ ಪ್ರಯತ್ನದ ಸುತ್ತ ನಡೆಯುವ ಘಟನೆಯನ್ನು ಚಿತ್ರವಾಗಿಸಲಾಗಿದೆ.
ಹೇಗಿದೆ ಚಿತ್ರ?
ಪ್ರೇಕ್ಷಕರು ಚಿತ್ರವನ್ನು ಯಾಕೆ ನೋಡಲು ಚಿತ್ರಮಂದಿರಕ್ಕೆ ಬರುತ್ತಾರೆ ಎಂದು ನಿರ್ದೇಶಕ ಅರಿತುಕೊಂಡಿದ್ದರೆ ಉತ್ತಮ. ಕೆಲವರು ನಿರ್ದೇಶಕ ಅದ್ಭುತ ಕಥೆಯನ್ನು ಚಿತ್ರ ಮಾಡಿರುತ್ತಾರೆ ಎಂಬ ಭರವಸೆ ಇಟ್ಟು ಚಿತ್ರ ನೋಡಲು ಹೋಗುತ್ತಾರೆ. ಕೆಲವರು ಚಿತ್ರದ ಮೇಕಿಂಗ್ ಹೇಗಿದೆ ಎಂದು ನೊಡುತ್ತಾರೆ. ಕೆಲವರು ನಟ ಅಥವಾ ನಟಿಯ ಮೇಲಿರುವ ಅಭಿಮಾನದಿಂದ ನೋಡುತ್ತಾರೆ. But, ಬೀಸ್ಟ್ ಚಿತ್ರ ಈ ಮೂರು ಅಂಶಗಳನ್ನೂ ಸಾರ್ಥಕಗೊಳಿಸುವಲ್ಲಿ ವಿಫಲವಾಗಿದೆ ಎಂದು ಹೇಳಬಹುದು.
- ಅದ್ಭುತ ಎನಿಸುಂತಹ ಕಥೆಯಲ್ಲ.
- ನಟ Vijay Thalapathy ಅತ್ಯತ್ತಮ ನಟ. ಈವರೆಗೆ ಬಿಡುಗಡೆಗೊಂಡತಹ ಎಲ್ಲಾ ಚಿತ್ರದಲ್ಲಿ ಅವರ ಅಭಿನಯದ ಛಾಪು ಮೂಡಿಸಿದ್ದಾರೆ. But, ಬೀಸ್ಟ್ ಚಿತ್ರದ ವೀರರಾಘವನ್ ಪಾತ್ರದಲ್ಲಿ ಅವರ ಮುಖದ ಭಾವನೆಗಳು ಬದಲಾಗುವುದು ಕಾಣುವುದಿಲ್ಲ. ಕೆಲವು ದೃಶ್ಯಗಳಲ್ಲಿ ಮಾತ್ರ ಅವರ ಖದರ್ ಸ್ಟೈಲ್‌ನಲ್ಲಿ ಮೆರೆದಿದ್ದು ಕಂಡುಬರುತ್ತದೆ. ಇದು ಕೂಡ ಚಿತ್ರದ ವೈಫಲ್ಯ.
ಪೂಜಾ ಹೆಗಡೆ ನಟಿಸಿದ ಪ್ರೀತಿ ಎಂಬ ಪಾತ್ರವೂ ಸಾಧಾರಣವಾಗಿ ಮೂಡಿಬಂದಿದೆ. ಉಳಿದ ಸಹಾಯಕ ಪಾತ್ರಗಳು ಕೂಡ ಸಾಮಾನ್ಯ. - ಚಿತ್ರದ ಕಥೆಯನ್ನು ಗಡಿಬಿಡಿಯಲ್ಲಿ ಹೇಳಿದಂತೆ ಭಾಸವಾಗುತ್ತದೆ.
- ಚಿತ್ರದಲ್ಲಿ ವೀರರಾಘವನ್ ಪಾತ್ರದ ಪ್ರವೇಶದಿಂದ ಶುರು ಮಾಡಿ ಅಂತ್ಯದವರೆಗೂ ಚಿತ್ರ ಡಲ್ ಎಂದು ಭಾಸವಾಗುತ್ತದೆ. So, ಎಲ್ಲಿಯೂ ʼವ್ಹಾವ್ʼ ಎನ್ನುವ ಸನ್ನಿವೇಶ ಬರುವುದಿಲ್ಲ.
- ಅಲ್ಲಲ್ಲಿ ಹಾಸ್ಯದ ಅಂಶವನ್ನು ಕಾಣಬಹುದು ಆದರೆ ಅದು ಒತ್ತಾಯಪೂರ್ವಕವಾಗಿ ಮದ್ಯೆ ಮಧ್ಯೆ ಸೇರಿಸಿದಂತೆ ಅನುಭವವಾಗುತ್ತದೆ. So, ಅದ್ಭುತ ಕಾಮಿಡಿಯ ಅಂಶಗಳು ಕಾಣುವುದಿಲ್ಲ.
- ಚಿತ್ರದಲ್ಲಿ ಇರುವುದೇ ಎರಡು ಹಾಡುಗಳು. ಒಂದು ಹಾಡು ಚಿತ್ರ ಮುಗಿದ ನಂತರ ಬರುತ್ತದೆ. ಮತ್ತೊಂದು ಚಿತ್ರದ ಮಧ್ಯದಲ್ಲಿ ಬರುತ್ತದೆ but ಅದು ಕಥೆಯ ಓಘಕ್ಕೆ ತೊಡಕು ಉಂಟುಮಾಡುತ್ತದೆ. ಎರಡೂ ಹಾಡುಗಳನ್ನು ಬಿಡಿಯಾಗಿ ಕೇಳಿದಾಗ ಚೆನ್ನಾಗಿದೆ.
ಚಿತ್ರದಲ್ಲಿರುವ ಗುಣಾತ್ಮಕ ಆಂಶಗಳು
So, ಚಿತ್ರದಲ್ಲಿ ಗುಣಾತ್ಮಕ ಅಂಶಗಳೇ ಇಲ್ವಾ? ಎಂಬ ಪ್ರಶ್ನೆ ಮೂಡಬಹುದು.
But, ಚಿತ್ರದಲ್ಲಿ ಕೆಲವು ಗುಣಾತ್ಮಕ ಅಂಶಗಳಿವೆ.
- ನಿರ್ದೇಶಕ ನೆಲ್ಸನ್ ಒಂದು ಹೊಸ ಪ್ರಯತ್ನವನ್ನು ಮಾಡುವ ಉದ್ದೇಶದಿಂದ ಚಿತ್ರವನ್ನು ನಿರ್ದೇಶಿಸಿದ್ದಾರೆ.
- ಸಾಮಾನ್ಯವಾಗಿ ಯಾವುದೇ ದೊಡ್ಡ ಸ್ಟಾರ್ ಚಿತ್ರದಲ್ಲಿ ಎಂಟ್ರಿ ಭರ್ಜರಿಯಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ತುಂಬಾ ಸಾದಾ ಎಂಟ್ರಿ. ಇದೊಂದು ಹೊಸ ಪ್ರಯತ್ನ ಎನ್ನಬಹುದು.
- ಚಿತ್ರದ ಹಿನ್ನಲೆ ಸಂಗೀತ ಮೆಚ್ಚುವಂಥದ್ದು. ಅನಿರುಧ್ಧ್ ರವಿಚಂದ್ರನ್ ನೀಡಿದ ಹಿನ್ನಲೆ ಸಂಗೀತ ನಿಜಕ್ಕೂ ಅದ್ಭುತ ಎನ್ನಬಹುದು. Hence, ಸಂದರ್ಭಕ್ಕೆ ಹೊಂದುವಂತಹ ಸಂಗೀತ ನೀಡುವುದರಲ್ಲಿ ಅನಿರುದ್ಧ್ ಪಳಗಿದ್ದಾರೆ.
- ಚಿತ್ರದಲ್ಲಿ ಕೆಲವು ವನ್ ಲೈನರ್ ಡೈಲಾಗ್‌ಗಳಿವೆ. ಅದನ್ನು ವಿಜಯ್ ಸ್ವರದಲ್ಲಿ ಆ ಮಾತುಗಳನ್ನು ಕೇಳಲು ಖುಷಿ ಕೊಡುತ್ತದೆ.
- ಚಿತ್ರದ ಮೇಕಿಂಗ್ ಒಂದು ಮಟ್ಟದಲ್ಲಿ ಗೆದ್ದಿದೆ ಎನ್ನಬಹುದು. ಛಾಯಗ್ರಾಹಕ ಮನೋಜ್ ಪರಮಹಂಸ ಚಿತ್ರೀಕರಣ ಮಾಡಿದ್ದಾರೆ ಹಾಗೂ ಆರ್. ನಿರ್ಮಲ್ ಅಚ್ಚುಕಟ್ಟಾಗಿ ಎಡಿಟಿಂಗ್ ಮಾಡಿದ್ದಾರೆ.
ಬೀಸ್ಟ್ ಟ್ರೇಲರ್ ಬಿಡುಗಡೆಗೊಂಡಾಗ ಅತ್ಯುತ್ತಮ ಚಿತ್ರವಾಗುವ ಸಾಧ್ಯತೆಯಿದೆ ಎಂದು ಭರವಸೆ ಮೂಡಿಸಿತ್ತು. ಚಿತ್ರದ ಬಿಡುಗಡೆಯ ಮುನ್ನ ಸಾಕಷ್ಟು ಹೈಪ್ ಕೂಡ ನೀಡಲಾಗಿತ್ತು. ಈ ಹಿಂದೆ ಕೂಡ ಥುಪಾಕಿಯಂತಹ ಸಿನಿಮಾಗಳಲ್ಲಿ ಸೈನಿಕನ ಪಾತ್ರದಲ್ಲಿ ವಿಜಯ್ ಅದ್ಭುತ ಅಭಿನಯ ಮಾಡಿದ್ದು ಸಹಜವಾಗಿ ನಿರೀಕ್ಷೆಯ ಮಟ್ಟ ಹೆಚ್ಚಿತ್ತು. But, ಬೀಸ್ಟ್ ಚಿತ್ರ ಪ್ರೇಕ್ಷಕರ ಹಾಗೂ ಅಭಿಮಾನಿಗಳ ನಿರೀಕ್ಷೆಯನ್ನು ಮುಟ್ಟುವಲ್ಲಿ ಯಶಸ್ವಿಯಾಗಿಲ್ಲ.
ಹೆಚ್ಚಿನ ಓದಿಗಾಗಿ: KGF Chapter 2 ಚಿತ್ರ ವಿಮರ್ಶೆ
South Cinema
Kannada New Movie: ʻಡೇರ್‌ಡೆವಿಲ್ ಮುಸ್ತಾಫಾʼ ಅಮೋಘ ಪ್ರದರ್ಶನ; ಹೊರದೇಶದಲ್ಲಿ ತೆರೆಕಾಣಲಿದೆ ಸಿನಿಮಾ
Kannada New Movie: ಈ ವಾರ ಅಮೆರಿಕಾ ಹಾಗೂ ಯುರೋಪ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮುಂದಿನ ವಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ ಸೇರಿದಂತೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಬೆಂಗಳೂರು: ಚಂದನವನದಲ್ಲೀಗ (Kannada New Movie) ಡೇರ್‌ಡೆವಿಲ್ ಮುಸ್ತಾಫಾ (Daredevil Mustafa) ಸಿನಿಮಾ ಹವಾ ಜೋರಾಗಿದೆ. ಕಳೆದ ವಾರ ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಸಿಗುತ್ತಿದೆ. ಕನ್ನಡಿಗರು ಬಿಗಿದಪ್ಪಿ ಕೊಂಡಾಡುತ್ತಿರುವ ಡೇರ್‌ಡೆವಿಲ್ ಮುಸ್ತಾಫಾ ಅಮೋಘವಾಗಿ ಎರಡನೇ ವಾರ ಪ್ರದರ್ಶನ ಕಾಣುತ್ತಿದೆ.
ಕಳೆದ ಆರೇಳು ತಿಂಗಳಿನಿಂದ ಥಿಯೇಟರ್‌ನಲ್ಲಿ ಯಾವ ಸಿನಿಮಾಗೂ ಸಿಗದ ಮೆಚ್ಚುಗೆ ಮುಸ್ತಾಫಾನ ಪಾಲಾಗಿದೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ 40 ಸೆಂಟರ್‌ಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಚಿತ್ರಕ್ಕೆ ಈ ಮಟ್ಟಿಗಿನ ವಿಮರ್ಶೆ ಹಾಗೂ ಬೇಡಿಕೆ ಸಿಗುತ್ತಿರುವ ಬೆನ್ನಲ್ಲೆ ವಿದೇಶದಲ್ಲಿ ಡೇರ್‌ಡೆವಿಲ್ ಮುಸ್ತಾಫಾ ದರ್ಶನಕ್ಕೆ ಚಿತ್ರತಂಡ ಸಜ್ಜಾಗಿದೆ.
ಈ ವಾರ ಅಮೆರಿಕಾ ಹಾಗೂ ಯುರೋಪ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮುಂದಿನ ವಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ ಸೇರಿದಂತೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಡೇರ್‌ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ.
ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಪ್ರಸ್ತುತಪಡಿಸಿದ್ದಾರೆ. ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ.
ಇದನ್ನೂ ಓದಿ: Daredevil Mustafa: ಮಜವಾಗಿದೆ `ಡೇರ್‌ಡೆವಿಲ್ ಮುಸ್ತಫಾʼ ಟ್ರೈಲರ್: ಡಾಕ್ಟರ್ ಬ್ರೋ ಸಾಥ್!
ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.
South Cinema
Ram Charan: ವೀರ್ ಸಾವರ್ಕರ್ ಜನುಮದಿನದಂದೇ ʻವಿ ಮೆಗಾ ಪಿಕ್ಚರ್ಸ್ʼ ಹೊಸ ಸಿನಿಮಾ ಅನೌನ್ಸ್; ವಿಡಿಯೊ ಹಂಚಿಕೊಂಡ ರಾಮ್‌ಚರಣ್!
Ram Charan: ರಾಮ್ ಚರಣ್ ಅವರು ತಮ್ಮ ಪ್ರೊಡಕ್ಷನ್ ಬ್ಯಾನರ್ ʻವಿ ಮೆಗಾ ಪಿಕ್ಚರ್ಸ್ʼ ತಮ್ಮ ಸ್ನೇಹಿತ ಯುವಿ ಕ್ರಿಯೇಷನ್ಸ್‌ನ ವಿಕ್ರಮ್ ರೆಡ್ಡಿ ಅವರ ಸಹಯೋಗದೊಂದಿಗೆ ಪ್ರಾರಂಭಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಬೆಂಗಳೂರು: ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan), ಹಾಗೂ ಅವರ ಸ್ನೇಹಿತ ವಿಕ್ರಮ್ ಮತ್ತು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಇದೀಗ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಮತ್ತು ಅಭಿಷೇಕ್ ಅಗರ್ವಾಲ್ ಅವರ ಆರ್ಟ್ ಬ್ಯಾನರ್ ಸಹಯೋಗದಲ್ಲಿ ಮೊದಲ ಸಿನಿಮಾವನ್ನು ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ಅನೌನ್ಸ್ ಮಾಡಿದ್ದಾರೆ. ರಾಮ್ ವಂಶಿ ಕೃಷ್ಣ ನಿರ್ದೇಶನದ ʻದಿ ಇಂಡಿಯಾ ಹೌಸ್ʼ ಶೀರ್ಷಿಕೆಯ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ರಾಮ್ ಚರಣ್ ಪ್ರಸ್ತುತಪಡಿಸಿದ್ದಾರೆ.
ರಾಮ್ ಚರಣ್ ಅವರು ತಮ್ಮ ಪ್ರೊಡಕ್ಷನ್ ಬ್ಯಾನರ್ ʻವಿ ಮೆಗಾ ಪಿಕ್ಚರ್ಸ್ʼ ತಮ್ಮ ಸ್ನೇಹಿತ ಯುವಿ ಕ್ರಿಯೇಷನ್ಸ್‌ನ ವಿಕ್ರಮ್ ರೆಡ್ಡಿ ಅವರ ಸಹಯೋಗದೊಂದಿಗೆ ಪ್ರಾರಂಭಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಸಿನಿಮಾವಾದ ʻದಿ ಇಂಡಿಯಾ ಹೌಸ್ʼನಲ್ಲಿ ನಿಖಿಲ್ ಸಿದ್ಧಾರ್ಥ ಶಿವನಾಗಿ ಮತ್ತು ಅನುಪಮ್ ಖೇರ್ ಶ್ಯಾಮ್ಜಿ ಕೃಷ್ಣ ವರ್ಮಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಅವರ ವಿ ಮೆಗಾ ಪಿಕ್ಚರ್ಸ್ ಮತ್ತು ಅಭಿಷೇಕ್ ಅಗರ್ವಾಲ್ ಅವರ ಸೋಷಿಯಲ್ ಮೀಡಿಯಾಗಳ ಅಧಿಕೃತ ಖಾತೆಯಲ್ಲಿ ಪವರ್-ಪ್ಯಾಕ್ಡ್ ವಿಡಿಯೊದೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಅವರ ಜನ್ಮದಿನದ ಈ ಸಿನಿಮಾದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ.
ಇದನ್ನೂ ಓದಿ: Ram Charan : ಹಾಲಿವುಡ್ ಎಂಟ್ರಿ ಬಗ್ಗೆ ನಟ ರಾಮ್ ಚರಣ್ ಹೇಳಿದ್ದೇನು? ವಿಡಿಯೊ ವೈರಲ್
ರಾಮ್ ಚರಣ್ ಪೋಸ್ಟ್
“ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ 140ನೇ ಜನ್ಮದಿನದ ಸಂದರ್ಭದಲ್ಲಿ ನಾವು ನಮ್ಮ ಪ್ಯಾನ್ ಇಂಡಿಯಾ ಚಲನಚಿತ್ರವನ್ನು ಘೋಷಿಸಲು ಹೆಮ್ಮೆಪಡುತ್ತೇವೆ. `ದಿ ಇಂಡಿಯಾ ಹೌಸ್’ ಸಿನಿಮಾ.
ನಿಖಿಲ್ ಸಿದ್ಧಾರ್ಥ, ಅನುಪಮ್ ಖೇರ್ ಜಿ ಮತ್ತು ನಿರ್ದೇಶಕ ರಾಮ್ ವಂಶಿ ಕೃಷ್ಣ ತಂಡದೊಂದಿಗೆʼʼ ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.
On the occasion of the 140th birth anniversary of our great freedom fighter Veer Savarkar Garu we are proud to announce our pan India film – THE INDIA HOUSE
— Ram Charan (@AlwaysRamCharan) May 28, 2023
headlined by Nikhil Siddhartha, Anupam Kher ji & director Ram Vamsi Krishna!
Jai Hind!@actor_Nikhil @AnupamPKher… pic.twitter.com/YYOTOjmgkV
ಕ್ಯಾಮರೂನ್ ಬ್ರೈಸನ್ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಲನಚಿತ್ರವನ್ನು ಪ್ರಮುಖ ಭಾರತೀಯ ಭಾಷೆಗಳಲ್ಲಿ ಮತ್ತು ವಿದೇಶಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಘೋಷಿಸಿದ್ದಾರೆ. ಉಳಿದ ಪಾತ್ರವರ್ಗ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ರಾಮ್ ಚರಣ್ ಜತೆ ಕೈ ಜೋಡಿಸಿದ ʻದಿ ಕಾಶ್ಮೀರ್ ಫೈಲ್ಸ್ʼ ನಿರ್ಮಾಪಕ
ಟಾಲಿವುಡ್ ನಟ ರಾಮ್‌ಚರಣ್ (Ram Charan) ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ ಮೆಗಾ ಪಿಕ್ಚರ್ಸ್’ (V Mega Pictures) ನಿರ್ಮಾಣ ಸಂಸ್ಥೆಯ ಜತೆ ಕೈ ಜೋಡಿಸಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕಿಳಿದಿರುವ ರಾಮ್ ಚರಣ್ ಸ್ನೇಹಿತ ಯುವಿ ಕ್ರಿಯೇಷನ್‌ನ ವಿಕ್ರನ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ನಿರ್ಮಾಣಕ್ಕಿಳಿದಿದ್ದಾರೆ. ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡವುದರಿಂದ ರಾಮ್ ಚರಣ್ ಅವರ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
South Cinema
Telugu star Naresh: ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ನರೇಶ್, ಪವಿತ್ರಾ ಲೋಕೇಶ್ ಹೇಳಿದ್ದೇನು?
Telugu star Naresh: ಜೋಡಿ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ಜೋಡಿ ಅಭಿಪ್ರಾಯ ವ್ತಕ್ತಪಡಿಸಿದೆ.
ಬೆಂಗಳೂರು: ನರೇಶ್ ಹಾಗೂ ಪವಿತ್ರಾ ಲೋಕೇಶ್ (Telugu star Naresh) ಅಭಿನಯದ ‘ಮಳ್ಳಿ ಪೆಳ್ಳಿ’ ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನರೇಶ್- ಪವಿತ್ರಾ ಲವ್‌ಸ್ಟೋರಿಯಲ್ಲಿ ನಿರ್ದೇಶಕ ಎಂ. ಎಸ್ ರಾಜು ತೆರೆಗೆ ತಂದಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನರೇಶ್ ಹೇಳಿದ್ದಾರೆ. ಇದೀಗ ಜೋಡಿ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ಜೋಡಿ ಅಭಿಪ್ರಾಯ ವ್ತಕ್ತಪಡಿಸಿದೆ.
ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ನಿಮಗೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಇದೆಯಾ? ಎನ್ನುವ ಪ್ರಶ್ನೆಗೆ ಪವಿತ್ರಾ ಲೋಕೇಶ್ ಮಾತನಾಡಿ ʻʻಸಾಕಷ್ಟು ಮಕ್ಕಳಿಗೆ ಪ್ರಪಂಚದಲ್ಲಿ ತಂದೆ ತಾಯಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮಕ್ಕಳನ್ನು ಪಡೆಯುವ, ಸಮಾಜಕ್ಕೆ ನೀಡುವ ಅವಶ್ಯಕತೆ ಏನಿದೆ? ಎಂದಿದ್ದಾರೆ. ನಾವು ಜೋಡಿಯಾಗಿ ಮಾಡೋಕೆ ಸಾಕಷ್ಟು ವಿಷಯಗಳಿವೆʼʼಎಂದರು.
ನರೇಶ್ ಮಾತನಾಡಿ ʻʻರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಬಹಳ ದೊಡ್ಡದು. ನನಗೆ ಪವಿತ್ರಾ ಮಗು, ನಾನು ಪವಿತ್ರಾಗೆ ಮಗು. ನಮಗೆ ಮಕ್ಕಳಿದ್ದಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಮಗು ಪಡೆಯಲು ನಾವು ದೈಹಿಕವಾಗಿ ಅರ್ಹರಾಗಿದ್ದೇವೆ. ನಾವು ಈಗ ಮಕ್ಕಳನ್ನು ಪಡೆದು ಬೆಳೆಸಿದರೆ, ಅವರಿಗೆ 20 ವರ್ಷ ಆಗುವಷ್ಟರಲ್ಲಿ ನಮಗೆ 60 ವರ್ಷ ವಯಸ್ಸಾಗಿರುತ್ತದೆ. ನನಗೆ ಪವಿತ್ರಾ ದೇವತೆಯಂತೆ, ತಾಯಿಯಂತೆ, ಮಡದಿಯಂತೆ, ಮಗಳಂತೆ, ಸ್ನೇಹಿತೆಯಂತೆ ಕಾಣಿಸುತ್ತಾರೆ. ಆಕೆ ಬಂದ ಮೇಲೆ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆʼʼ ಎಂದರು.
ಇದನ್ನೂ ಓದಿ: Pavitra Naresh: ನನ್ನ ತಾಯಿಯ ಬಳಿಕ ಇನ್ನೊಬ್ಬ ತಾಯಿಯನ್ನು ಭೇಟಿಯಾದೆ: ನರೇಶ್ ಭಾವುಕ!
Audience made #MALLIPELLI their own 😍
— MS Raju (@MSRajuOfficial) May 27, 2023
Enjoy the BOLDEST BLOCKBUSTER in Theaters near you ❤️🔥💥
Book Ur Tickets for this Intense Melodrama Now!
🎟️ https://t.co/PFyBXV2kGK@ItsActorNaresh #PavitraLokesh @MSRajuOfficial @VKMovies_ @adityamusic pic.twitter.com/4WQ12ZAWm0
ಮೇ 26ಕ್ಕೆ ʻಮಳ್ಳಿ ಪೆಳ್ಳಿʼ ಎಂಬ ಟೈಟಲ್ ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಂಡಿದೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.
South Cinema
IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!
IIFA 2023 Winners Full List: ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ, ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.ಆಲಿಯಾ ಸಮಾರಂಭದಲ್ಲಿ ಗೈರಾದ ಕಾರಣ ನಿರ್ಮಾಪಕ ಜಯಂತಿಲಾಲ್ ಗಡಾ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬೆಂಗಳೂರು: ಅಬುಧಾಬಿಯಲ್ಲಿ ಮೇ 27ರಂದು ನಡೆದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA 2023)ರಲ್ಲಿ (IIFA 2023 Winners Full List) ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಸೈಫ್ ಅಲಿ ಖಾನ್ ನಟಿಸಿದ ವಿಕ್ರಮ್ ವೇದಾದಲ್ಲಿ ಅವರ ಸಾಹಸಮಯ ಅಭಿನಯಕ್ಕಾಗಿ ಟ್ರೋಫಿಯನ್ನು ಪಡೆದರು. ಅಷ್ಟೇ ಅಲ್ಲದೇ ʻಗಂಗೂಬಾಯಿ ಕಥಿಯಾವಾಡಿʼಗಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಲಿಯಾ ಸಮಾರಂಭದಲ್ಲಿ ಗೈರಾದ ಕಾರಣ ನಿರ್ಮಾಪಕ ಜಯಂತಿಲಾಲ್ ಗಡಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಬಾರಿ ʻಗಂಗೂಬಾಯಿ ಕಥಿಯಾವಾಡಿ ಸಿನಿಮಾಗೆ ಹಲವು ಪ್ರಶಸ್ತಿಗಳು ಸಂದಿವೆ.
ಹಿರಿಯ ನಟ ಅನಿಲ್ ಕಪೂರ್ ಅವರು IIFA 2023ರಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರು. ʻಜಗ್‌ಜಗ್ ಜೀಯೋದಲ್ಲಿʼನ ಅವರ ಪಾತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು.
ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಕಮಲ್ ಹಾಸನ್‌ಗೆ ಪ್ರಶಸ್ತಿ
ಹಿರಿಯ ನಟ ಕಮಲ್ ಹಾಸನ್ ಅವರು ಐಐಎಫ್‌ಎ 2023ರಲ್ಲಿ (IIFA 2023) ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಿದಾಗ ಭಾರೀ ಕರತಾಡನದ ಪಡೆದರು. ಗಾಯಕ ಮತ್ತು ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು ಕಮಲ್ ಹಾಸನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಮಲ್ ಹಾಸನ್ ಟ್ರೋಫಿ ಸ್ವೀಕರಿಸಿದ ತಕ್ಷಣ, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರೂ ತಮ್ಮ ಸ್ಥಾನದಿಂದ ಎದ್ದು ನಿಂತು ನಟನನ್ನು ಶ್ಲಾಘಿಸಿದರು.
ವಿಕ್ರಮ್ ವೇದಾ ತಮಿಳು ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಹೃತಿಕ್ ಹಾಗೂ ಸೈಫ್ ನಟಿಸಿದ್ದರು.
ಇದನ್ನೂ ಓದಿ: Aahana Kumra: ಐಫಾ ಕಾರ್ಯಕ್ರಮದಲ್ಲಿ ನಟಿ ಅಹಾನಾ ಕುಮ್ರಾಳ ಡ್ರೆಸ್ ಜಾರುವುದರಲ್ಲಿತ್ತು, ಆಗ? ವಿಡಿಯೊ ವೈರಲ್
CRYING 😭😭😭😭😭 FINALLY #HrithikRoshan𓃵 #IIFA2023 #IIFA https://t.co/DhJrpvwtZK
— ✨️ (@ADushtKanya) May 27, 2023
ಬ್ರಹ್ಮಾಸ್ತ್ರ ಮತ್ತು ಗಂಗೂಬಾಯಿ ಕಾಠಿಯಾವಾಡಿಗೆ ದೊಡ್ಡ ಗೆಲುವು
ಬಾಲಿವುಡ್ ಫ್ಯಾಂಟಸಿ ಚಿತ್ರ ಬ್ರಹ್ಮಾಸ್ತ್ರ: ಭಾಗ ಒಂದು – ಶಿವ, ಮತ್ತು ಜೀವನಚರಿತ್ರೆ ಗಂಗೂಬಾಯಿ ಕಾಠಿಯಾವಾಡಿ ಈ ವರ್ಷದ IIFAನಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಶ್ರೇಯಾ ಘೋಷಾಲ್ ಮತ್ತು ಅರಿಜಿತ್ ಸಿಂಗ್ ಅತ್ಯುತ್ತಮ ಹಿನ್ನೆಲೆ ಗಾಯಕಿ, ಗಾಯಕಿ ವಿಭಾಗ, ಹಾಗೆಯೇ ಮೌನಿ ರಾಯ್ ಅತ್ಯುತ್ತಮ ಪೋಷಕ ನಟಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ದಿವಂಗತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಮಗ, ಬಾಬಿಲ್ ಖಾನ್, ʻಕಾಲಾʼ ಚಿತ್ರಕ್ಕಾಗಿ ಬೆಸ್ಟ್ ಡೆಬ್ಯೂಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಧೋಕಾ ಅರೌಂಡ್ ದಿ ಕಾರ್ನರ್‌ಗಾಗಿ ಖುಶಾಲಿ ಕುಮಾರ್ ಬೆಸ್ ಡೆಬ್ಯೂಟ್ ಫಿಮೇಲ್ ಅವಾರ್ಡ್ ಪಡೆದುಕೊಂಡರು.
ಗಂಗೂಬಾಯಿ ಕಾಠಿಯಾವಾ ಡಿಸಿನಿಮಾದ ತಾಂತ್ರಿಕ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಛಾಯಾಗ್ರಹಣ, ಚಿತ್ರಕಥೆ ಮತ್ತು ಸಂಭಾಷಣೆಗಾಗಿ ಟ್ರೋಫಿಗಳನ್ನು ಗೆದ್ದುಕೊಂಡಿತು. ಈ ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದರು.
ಇದನ್ನೂ ಓದಿ: Pavan Wadeyar: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕ ಪವನ್ ಒಡೆಯರ್‌ಗೆ ದುಬೈನಲ್ಲಿ ಸನ್ಮಾನ
Here are the highlights of the glitz, glamour, and golden moments of your favourite celebrities lifting the IIFA trophy for their exceptional achievements in Bollywood.
— IIFA (@IIFA) May 27, 2023
Read more: https://t.co/Aj81Wnua0L pic.twitter.com/YHkyZfx3cc
ಪ್ರಶಸ್ತಿಗಳ ವಿವರ ಇಲ್ಲಿದೆ!
- ಅತ್ಯುತ್ತಮ ಚಿತ್ರ: ದೃಶ್ಯಂ 2
- ಅತ್ಯುತ್ತಮ ನಿರ್ದೇಶಕ: ಆರ್ ಮಾಧವನ್ ರಾಕೆಟ್ರಿ: ದಿ ನಂಬಿ ಎಫೆಕ್ಟ್
- ಅತ್ಯುತ್ತಮ ನಟಿ : ಗಂಗೂಬಾಯಿ ಕಾಠಿಯಾವಾಡಿಗಾಗಿ ಆಲಿಯಾ ಭಟ್
- ಅತ್ಯುತ್ತಮ ನಟ : ವಿಕ್ರಮ್ ವೇದಕ್ಕಾಗಿ ಹೃತಿಕ್ ರೋಷನ್
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಬ್ರಹ್ಮಾಸ್ತ್ರ ಸಿನಿಮಾದ ಮೌನಿ ರಾಯ್: ಭಾಗ ಒಂದು – ಶಿವ
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ : ಜಗ್ ಜಗ್ ಜೀಯೋಗಾಗಿ ಅನಿಲ್ ಕಪೂರ್
- ಫ್ಯಾಷನ್ ವಿಭಾಗ : ಮನೀಶ್ ಮಲ್ಹೋತ್ರಾ
- ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ: ಕಮಲ್ ಹಾಸನ್
- ಅತ್ಯುತ್ತಮ ಅಡಾಪ್ಟೆಡ್ ಸ್ಟೋರಿ : ಆಮಿಲ್ ಕೀಯಾನ್ ಖಾನ್ ಮತ್ತು ಅಭಿಷೇಕ್ ಪಾಠಕ್ ದೃಶ್ಯಂ 2
- ಅತ್ಯುತ್ತಮ ಮೂಲ ಕಥೆ: ಡಾರ್ಲಿಂಗ್ಸ್‌ಗಾಗಿ ಪರ್ವೀಜ್ ಶೇಖ್ ಮತ್ತು ಜಸ್ಮೀತ್ ರೀನ್
- ಪ್ರಾದೇಶಿಕ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆ: ರಿತೇಶ್ ದೇಶಮುಖ್ ನಿರ್ದೇಶನದ ಮರಾಠಿ ಚಲನಚಿತ್ರ ವೇದ್
- ಬೆಸ್ಟ್ ಡೆಬ್ಯೂಟ್ ಅವಾರ್ಡ್ (ಪುರುಷರ ವಿಭಾಗ): ಗಂಗೂಬಾಯಿ ಕಾಠಿಯಾವಾಡಿಗಾಗಿ ಶಾಂತನು ಮಹೇಶ್ವರಿ ಮತ್ತು ಕ್ಲಾಗಾಗಿ ಬಾಬಿಲ್ ಖಾನ್
- ಬೆಸ್ಟ್ ಡೆಬ್ಯೂಟ್ ಅವಾರ್ಡ್ (ಮಹಿಳೆಯ ವಿಭಾಗ): ಧೋಕಾ ಅರೌಂಡ್ ದಿ ಕಾರ್ನರ್‌ಗಾಗಿ ಖುಶಾಲಿ ಕುಮಾರ್
- ಅತ್ಯುತ್ತಮ ಹಿನ್ನೆಲೆ ಗಾಯಕಿ : ಬ್ರಹ್ಮಾಸ್ತ್ರ, ಶ್ರೇಯಾ ಘೋಷಾಲ್
- ಅತ್ಯುತ್ತಮ ಹಿನ್ನೆಲೆ ಗಾಯಕ: ಬ್ರಹ್ಮಾಸ್ತ್ರದ ಕೇಸರಿಯಾ ಹಾಡಿಗೆ ಅರಿಜಿತ್ ಸಿಂಗ್
- ಅತ್ಯುತ್ತಮ ಸಂಗೀತ ನಿರ್ದೇಶನ: ಬ್ರಹ್ಮಾಸ್ತ್ರಕ್ಕಾಗಿ ಪ್ರೀತಮ್
- ಅತ್ಯುತ್ತಮ ಗೀತರಚನೆಕಾರ: ಅಮಿತಾಭ್ ಭಟ್ಟಾಚಾರ್ಯ ಬ್ರಹ್ಮಾಸ್ತ್ರದ ಕೇಸರಿಯಾ
- ಅತ್ಯುತ್ತಮ ಛಾಯಾಗ್ರಹಣ: ಗಂಗೂಬಾಯಿ ಕಾಠಿಯಾವಾಡಿ
- ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಾಠಿಯಾವಾಡಿ
- ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಠಿಯಾವಾಡಿ
- ಶೀರ್ಷಿಕೆ ಗೀತೆಗಾಗಿ ಅತ್ಯುತ್ತಮ ನೃತ್ಯ ಸಂಯೋಜನೆ: ಭೂಲ್ ಭುಲೈಯಾ 2
- ಅತ್ಯುತ್ತಮ ಧ್ವನಿ ವಿನ್ಯಾಸ: ಭೂಲ್ ಭುಲೈಯಾ 2
- ಅತ್ಯುತ್ತಮ ಸಂಕಲನ: ದೃಶ್ಯಂ 2
- ಅತ್ಯುತ್ತಮ ಹಿನ್ನೆಲೆ ಸಂಗೀತ: ವಿಕ್ರಮ್ ವೇದಾ
- ಸೌಂಡ್ ಮಿಕ್ಸಿಂಗ್: ಮೋನಿಕಾ ಓ ಮೈ ಡಾರ್ಲಿಂಗ್
-
ಕರ್ನಾಟಕ23 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ23 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ22 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ17 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್13 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ6 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ14 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER4 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?