ಸಿನಿಮಾ
Video: ಅಪ್ಪನಾಗ್ತಿದ್ದಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ; ಪತ್ನಿ ಪ್ರೇರಣಾರ ಬೇಬಿ ಬಂಪ್ ವಿಡಿಯೋ ಹಂಚಿಕೊಂಡ ನಟ
ಧ್ರುವ ಸರ್ಜಾ ಮತ್ತು ಪ್ರೇರಣಾ 2019ರ ನವೆಂಬರ್ನಲ್ಲಿ ವಿವಾಹವಾಗಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಒಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಧ್ರುವ ಸರ್ಜಾಗೆ ನಿರೂಪಕ ಅಕುಲ್ ‘ಇನ್ನೂ ವಿಶೇಷ ಏನಿಲ್ವಾ‘ ಎಂದು ಕಾಲೆಳೆದಿದ್ದರು.
ಬೆಂಗಳೂರು: ಸರ್ಜಾ ಕುಟುಂಬಕ್ಕೆ ಮತ್ತೊಬ್ಬ ಸದಸ್ಯ/ಸದಸ್ಯೆ ಆಗಮನವಾಗುತ್ತಿದೆ. ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಈಗ ತುಂಬು ಗರ್ಭಿಣಿ. ಇನ್ನೇನು ಕೆಲವೇ ದಿನಗಳಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಲಿದ್ದಾರೆ. ಪ್ರೇರಣಾರ ಬೇಬಿ ಬಂಪ್ ಫೋಟೋ-ವಿಡಿಯೋಗಳು ವೈರಲ್ ಆಗುತ್ತಿವೆ. ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡು, ‘ನಾವು ಜೀವನದ ಹೊಸ ಹಂತಕ್ಕೆ ಏರುತ್ತಿದ್ದೇವೆ. ಅದೊಂದು ದೈವತ್ವದ ಹಂತ. ಶೀಘ್ರದಲ್ಲೇ ಬರುತ್ತಿರುವ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ, ಜೈ ಹನುಮಾನ್’ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಧ್ರುವ ಸರ್ಜಾ ಮತ್ತು ಪ್ರೇರಣಾ ವಿವಾಹ 2019ರ ನವೆಂಬರ್ನಲ್ಲಿ ನಡೆದಿತ್ತು. ಬಾಲ್ಯದಿಂದಲೂ ಸ್ನೇಹಿತರಾಗಿದ್ದ ಇವರು, ಪ್ರೀತಿಸಿ ವಿವಾಹವಾಗಿದ್ದಾರೆ. ಪ್ರೇರಣಾ ಬೆಂಗಳೂರಿನ ಕಾಲೇಜೊಂದರಲ್ಲಿ ಅಧ್ಯಾಪಕಿ. ಇವರಿಬ್ಬರ ಮದುವೆಯಾಗಿ ಎರಡು ವರ್ಷ ಕಳೆದಿದ್ದು, ಈಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಸೆಪ್ಟೆಂಬರ್ ತಿಂಗಳಲ್ಲೇ ಪ್ರೇರಣಾಗೆ ಹೆರಿಗೆಯಾಗಲಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಸ್ಟಾರ್ಗಳು, ಸೆಲೆಬ್ರಿಟಿಗಳೆಲ್ಲ ಇಂಥ ವಿಷಯಗಳನ್ನು ತುಂಬ ಕಾಯಿಸದೆ ಬಹಿರಂಗ ಮಾಡುತ್ತಾರೆ. ಆದರೆ ಧ್ರುವ ಸರ್ಜಾ ತಾವು ತಂದೆಯಾಗುತ್ತಿರುವ ವಿಷಯವನ್ನು ಇದುವರೆಗೂ ಅಂದರೆ ತೀರ ಹೆರಿಗೆ ದಿನ ಬರುವವರೆಗೂ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.
ಅತ್ತಿಗೆ ಮೇಘನಾ ರಾಜ್ ವಿಶ್
ಧ್ರುವ ಸರ್ಜಾ ನನ್ನ ತಮ್ಮನಿದ್ದಂತೆ ಎಂದು ಮೇಘನಾ ರಾಜ್ ಸರ್ಜಾ ಯಾವಾಗಲೂ ಹೇಳುತ್ತಿರುತ್ತಾರೆ. ಇದೀಗ ಮೈದುನ ಕೊಟ್ಟ ಖುಷಿಯ ಸುದ್ದಿಗೆ ಅವರೂ ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ‘ಮನಸಿಗೆ ತುಂಬ ಹಿತ ಎನ್ನಿಸುವ ಸುದ್ದಿ ಕೊಟ್ಟಿದ್ದೀರಿ. ನಿಮ್ಮನ್ನು ದೇವರು ಆಶೀರ್ವದಿಸಲಿ. ಬರಲಿರುವ ಪುಟ್ಟ ಮಗುವಿನ ಮೇಲೆ ನನಗೀಗಲೇ ಪ್ರೀತಿ ಶುರುವಾಗಿದೆ’ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಚಿರು ಸರ್ಜಾ ಕೊನೆ ಚಿತ್ರ ರಾಜಮಾರ್ತಾಂಡ ಬಿಡುಗಡೆ ಯಾವಾಗ? 23ರಂದು ಗೊತ್ತಾಗುತ್ತೆ!
ಸಿನಿಮಾ
Ishita Dutta : ತಾಯಿಯಾಗುತ್ತಿದ್ದಾರೆ ʼರಾಜ ರಾಜೇಂದ್ರʼ ನಟಿ ಇಶಿತಾ; ಬೇಬಿ ಬಂಪ್ ಫೋಟೊ ವೈರಲ್
ರಾಜ ರಾಜೇಂದ್ರ ಸಿನಿಮಾದ ನಟಿ ಇಶಿತಾ ದತ್ತಾ ಅವರು ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರ ಬೇಬಿ ಬಂಪ್ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈ: ಕನ್ನಡದ ರಾಜ ರಾಜೇಂದ್ರ ಸಿನಿಮಾದಲ್ಲಿ ನಟಿಸಿ, ಮಿಂಚಿದ್ದ ನಟಿ ಇಶಿತಾ ದತ್ತಾ. ಹಿಂದಿಯ ಹಲವಾರು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಇದೀಗ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಬೇಬಿ ಬಂಪ್ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: Kannada New Movie: ʻದಿಲ್ ದಾರ್’ ಎಂದ ಕೆ.ಮಂಜು ಪುತ್ರ: ಶ್ರೇಯಸ್ ಹೊಸ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್!
ನಟಿ ಸಮುದ್ರದ ತಡದಲ್ಲಿ ಪತಿಯೊಂದಿಗಿರುವ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಡಲ ತೀರದಲ್ಲಿ ಸೂರ್ಯಾಸ್ತ ಆಗುವ ಸಮಯದಲ್ಲಿನ ಫೋಟೊ ಅದಾಗಿದೆ. ಬೇಬಿ ಬಂಪ್‌ಗೆ ಪತಿ ಮುತ್ತನ್ನಿಡುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ನಟಿ, “ಬೇಬಿ ಆನ್ ಬೋರ್ಡ್” ಎಂದು ಬರೆದುಕೊಂಡಿದ್ದಾರೆ.
ನಟಿಯ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ. ಅಭಿಮಾನಿಗಳೆಲ್ಲರೂ ನಟಿಗೆ ಶುಭ ಹಾರೈಸಲಾರಂಭಿಸಿದ್ದಾರೆ.
ಇಶಿತಾ 2015ರಲ್ಲಿ ತೆರೆ ಕಂಡ ರಾಜ ರಾಜೇಂದ್ರ ಸಿನಿಮಾದಲ್ಲಿ ನಟ ಶರಣ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಅವರು ದೃಶ್ಯಂ, ದೃಶ್ಯಂ 2 ಸಿನಿಮಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಹಲವಾರು ಧಾರಾವಾಹಿಗಳಲ್ಲೂ ನಟಿಸಿ ಜನರಿಗೆ ಹತ್ತಿರವಾಗಿದ್ದಾರೆ. ನಟಿ 2017ರಲ್ಲಿ ವತ್ಸಲ ಶೇಠ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.
South Cinema
Kannada New Movie: ʻದಿಲ್ ದಾರ್’ ಎಂದ ಕೆ.ಮಂಜು ಪುತ್ರ: ಶ್ರೇಯಸ್ ಹೊಸ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್!
ಈ ಚಿತ್ರದ (Kannada New Movie) ಮುಹೂರ್ತ ಸಮಾರಂಭ ಮಾರ್ಚ್ 31ರಂದು ಬೆಂಗಳೂರಿನ ಶ್ರೀಕಂಠೇಶ್ವರ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗೆ ಕ್ಲ್ಯಾಪ್ ಮಾಡಿ ಟೈಟಲ್ ಅನಾವರಣ ಮಾಡಿದರು. ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮೆರಾಗೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಬೆಂಗಳೂರು; ರಾಣಾ ಸಿನಿಮಾ ಬಳಿಕ ಶ್ರೇಯಸ್ ಕೆ ಮಂಜು ಹೊಸ ಸಿನಿಮಾಕ್ಕೆ (Kannada New Movie) ದಿಲ್ ದಾರ್ ಎಂದು ಹೊಸ ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಚಿತ್ರದ ಮುಹೂರ್ತ ಸಮಾರಂಭ ಮಾರ್ಚ್ 31ರಂದು ಬೆಂಗಳೂರಿನ ಶ್ರೀಕಂಠೇಶ್ವರ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗೆ ಕ್ಲ್ಯಾಪ್ ಮಾಡಿ ಟೈಟಲ್ ಅನಾವರಣ ಮಾಡಿದರು. ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮೆರಾಗೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಟೈಟಲ್ ರಿವೀಲ್ ಮಾಡಿ ಮಾತಾನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ʻʻಸಿನಿಮಾ ಮಾಡಬೇಕು ಅಂದರೆ ದಿಲ್ ಬೇಕು. ನಟ ಶ್ರೇಯಸ್ ಮಂಜು ಹಾಗೂ ಇಡೀ ಚಿತ್ರತಂಡಕ್ಕೆ ಶುಭಾಶಯʼʼ ತಿಳಿಸಿದರು.
ದಿಲ್ ದಾರ್ ನಿರ್ದೇಶಕ ಮಧು ಗೌಡ ಮಾತನಾಡಿ, ʻʻಈ ಸಿನಿಮಾ ಕೇವಲ ನನ್ನಿಂದ ಅಲ್ಲ. ನನ್ನ ತಂಡದ ಸಪೋರ್ಟ್ ನಿಂದ ಸಾಧ್ಯವಾಗಿದೆ. ಕತೆ ರೆಡಿ ಮಾಡಿದಾಗ ದಿಲ್ ದಾರ್ ಟೈಟಲ್ ಫಿಕ್ಸ್ ಮಾಡಿದಾಗ. ಯಾರು ಇದ್ದಾರೆ ದಿಲ್ ದಾರ್ ಎಂದು ಯೋಚಿಸಿದಾಗ ಸಿಕ್ಕಿದ್ದ ಶ್ರೇಯಸ್ ಮಂಜು ನೆನಪಾದರುʼʼ ಎಂದರು.
ಇದನ್ನೂ ಓದಿ: Kannada New Movie : ಶ್ರೇಯಸ್ ಕೆ ಮಂಜು ಹೊಸ ಸಿನಿಮಾ ಅನೌನ್ಸ್; ಪಡ್ಡೆಹುಲಿಗೆ ಪ್ರಿಯಾಂಕಾ ಕುಮಾರ್ ಜೋಡಿ
ಏಷ್ಯಾನೆಟ್ ಮೂವೀ ಬ್ಯಾನರ್ ನಡಿ ಆರ್ ಸಂತೋಷ್ ಕುಮಾರ್(ಎಸ್ ವಿಟಿ) ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
South Cinema
Shah Rukh Khan: ಶಾರುಖ್ ಅಭಿಮಾನಿಗಳ ಅಭಿಮಾನದ ಜವಾನ್ ಪೋಸ್ಟರ್ ವೈರಲ್! ಟ್ರೆಂಡ್ ಆಗಿದ್ಯಾಕೆ?
ಸೋಷಿಯಲ್ ಮೀಡಿಯಾದಲ್ಲಿ ಜವಾನ್ ಟ್ರೆಂಡ್ ಆಗುತ್ತಿದೆ. ಇದೀಗ ಜವಾನ್ ಚಿತ್ರೀಕರಣ ಮುಗಿದಿದೆಯಾ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ತಾವೇ ಪೋಸ್ಟರ್ (Shahrukh Khan) ತಯಾರಿಸಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆ ಆಗಿತ್ತು.
ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಅಭಿನಯದ ʻಪಠಾಣ್ʼ ಸಿನಿಮಾ ಸಕ್ಸೆಸ್ ನಂತರ ಇದೀಗ ಶಾರುಖ್ ಅಭಿಮಾನಗಳ ಚಿತ್ತ ʻಜವಾನ್ʼ ಕಡೆ ಹೋಗಿದೆ. ನಿರ್ದೇಶಕ ಅಟ್ಲೀ ಜತೆಗೆ ಕೈ ಜೋಡಿಸುತ್ತಿದ್ದಾರೆ ನಟ ಶಾರುಖ್. ಜವಾನ್ ಜೂನ್ 2 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದು ವರದಿಯಾಗಿದೆ. ಇದೀಗ ಶಾರುಖ್ ಅಭಿಮಾನಿಗಳು ತಾವೇ ತಯಾರಿಸದ ಫೋಟೊಗಳನ್ನು ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ಅಭಿಮಾನಿಗಳ ಅಭಿಮಾನದ ಪೋಸ್ಟರ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಜವಾನ್ ಟ್ರೆಂಡ್ ಆಗುತ್ತಿದೆ. ಇದೀಗ ಜವಾನ್ ಚಿತ್ರೀಕರಣ ಮುಗಿದಿದೆಯಾ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ತಾವೇ ಪೋಸ್ಟರ್ ತಯಾರಿಸಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆ ಆಗಿತ್ತು. ಶೂಟಿಂಗ್ ಸೆಟ್‌ನಲ್ಲಿ ಶಾರುಖ್ ನಿಭಾಯಿಸುತ್ತಿರುವ ಆ್ಯಕ್ಷನ್ ದೃಶ್ಯಗಳು ಲೀಕ್ ಆಗಿತ್ತು. ಇದಾದ ಬಳಿಕ ಶಾರುಖ್ ಖಾನ್ ಅವರ ಅಭಿಮಾನಿಗಳ ಸಂಘಗಳು ಗ್ಲಿಂಪ್ಸ್‌ಗಳನ್ನು ಸೋರಿಕೆ ಮಾಡದಂತೆ ನೆಟಿಜನ್‌ಗಳಿಗೆ ವಿನಂತಿಸಿದೆ.
ಅಭಿಮಾನಿಗಳ ಸಂಘ ವಿನಂತಿಸಿದ ಪೋಸ್ಟ್
ಜವಾನ್ ಸಿನಿಮಾದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕಮರ್ಷಿಯಲ್ ಎಂಟರ್‌ಟೈನರ್ ಎಂದು ಹೇಳಲಾಗಿದೆ. ಗುಪ್ತಚರ ಅಧಿಕಾರಿ ಮತ್ತು ಕಳ್ಳನಾಗಿ ಶಾರುಖ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ, ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಸೇರಿದಂತೆ ಇತರರು ಇದ್ದಾರೆ.
ಇದನ್ನೂ ಓದಿ; Shahrukh Khan: ಶಾರುಖ್ ಅಭಿನಯದ ʻಜವಾನ್ʼ ಸಿನಿಮಾ ದೃಶ್ಯ ಲೀಕ್
ಅಭಿಮಾನಿಗಳ ಪೋಸ್ಟ್
ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಿದೆ. ಜವಾನ್ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸುವುದಕ್ಕೆ ಟಾಲಿವುಡ್‌ನ ಅಲ್ಲು ಅರ್ಜುನ್ ಅವರಿಗೆ ಸಿನಿ ತಂಡ ಕೇಳಿಕೊಂಡಿತ್ತು. ಆದರೆ ಅಲ್ಲು ಅದಕ್ಕೆ ಒಪ್ಪಿಲ್ಲ ಎಂದು ಹೇಳಲಾಗಿದೆ. ಹಾಗೆಯೇ ದಳಪತಿ ವಿಜಯ್ ಅವರ ಬಳಿಯೂ ಜವಾನ್ ಸಿನಿಮಾದಲ್ಲಿ ನಟಿಸುವುದಕ್ಕೆ ಕೇಳಿಕೊಳ್ಳಲಾಗಿತ್ತು.
ಅಲ್ಲು ಮತ್ತು ದಳಪತಿ ವಿಜಯ್ ಇಬ್ಬರೂ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿ ಇರುವ ಹಿನ್ನೆಲೆಯಲ್ಲಿ ಜವಾನ್ ಸಿನಿಮಾಕ್ಕೆ ಒಪ್ಪಿಕೊಂಡಿಲ್ಲ ಎಂದು ಹೇಳಲಾಗಿದೆ.ಖ್ಯಾತ ನಟ ಶಿವರಾಜ್ ಕುಮಾರ್ ಅವರೂ ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ.
South Cinema
Priyanka Chopra: ಸೋದರಸಂಬಂಧಿ ಪರಿಣಿತಿ ಚೋಪ್ರಾ ಮದುವೆಗೆ ಬಂದಿದ್ದಾರಾ ಪ್ರಿಯಾಂಕಾ ಚೋಪ್ರಾ?
ಕುಟುಂಬ (Priyanka Chopra) ಸಮೇತರಾಗಿ ನಟಿ ಬರುತ್ತಿದ್ದಂತೆ ಸೋದರಸಂಬಂಧಿ ಪರಿಣಿತಿ ಚೋಪ್ರಾ ಅವರ ವದಂತಿಯ ಗೆಳೆಯ, ಎಎಪಿ ಸದಸ್ಯ ರಾಘವ್ ಚಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡಿವೆ. ಕೆಲವು ದಿನಗಳಿಂದ, ಪರಿಣಿತಿ ಮತ್ತು ರಾಘವ್ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಇವೆ.
ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮಾರ್ಚ್ 31ರ ಮಧ್ಯಾಹ್ನ ನಿಕ್ ಜೋನಾಸ್ ಮತ್ತು ಮಗಳು ಮಾಲತಿ ಮೇರಿ ಅವರೊಂದಿಗೆ ಮುಂಬೈಗೆ ಬಂದಿಳಿದರು. ಕುಟುಂಬ ಸಮೇತರಾಗಿ ನಟಿ ಬರುತ್ತಿದ್ದಂತೆ ಸೋದರಸಂಬಂಧಿ ಪರಿಣಿತಿ ಚೋಪ್ರಾ ಅವರ ವದಂತಿಯ ಗೆಳೆಯ, ಎಎಪಿ ಸದಸ್ಯ ರಾಘವ್ ಚಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡಿವೆ. ಕೆಲವು ದಿನಗಳಿಂದ, ಪರಿಣಿತಿ ಮತ್ತು ರಾಘವ್ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಇವೆ.
ದಂಪತಿ ಕುಟುಂಬಗಳು ಶೀಘ್ರದಲ್ಲೇ ರೋಕಾ ಸಮಾರಂಭವನ್ನು ಆಯೋಜಿಸಬಹುದು ಮತ್ತು ಮದುವೆಯ ತಯಾರಿಯಲ್ಲಿದೆ ಎಂದು ವದಂತಿಗಳಿವೆ. ಇದೀಗ ಪ್ರಿಯಾಂಕ ಭಾರತಕ್ಕೆ ಬರುತ್ತಿದ್ದಂತೆ ಮತ್ತಷ್ಟು ಚರ್ಚೆಗಳು ಆಗುತ್ತಿವೆ. ಪರಿಣಿತಿ ಮತ್ತು ಪ್ರಿಯಾಂಕಾ ಇನ್ನೂ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಇಂಡಿಯಾ ಟುಡೇ ವರದಿಯು ಪ್ರಿಯಾಂಕಾ ಅವರು ರಾಘವ್ ಅವರನ್ನು ಭೇಟಿಯಾಗಬಹುದು ಎಂದು ಹೇಳಿಕೊಂಡಿದೆ.
ʻʻಸಿಟಾಡೆಲ್ ಚಿತ್ರದ ಪ್ರಚಾರಕ್ಕಾಗಿ ಪ್ರಿಯಾಂಕಾ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ. ಕೊಲ್ಲಿಯಲ್ಲಿ ಹಿಂತಿರುಗಿ, ನಂತರ ತನ್ನ ಸೋದರಸಂಬಂಧಿ ಪರಿಣಿತಿ ಚೋಪ್ರಾರನ್ನು ಭೇಟಿಯಾಗಲಿದ್ದಾರೆ. ನಟಿ ಪರಿಣಿತಿ ಅವರ ಸ್ನೇಹಿತ ರಾಘವ್ ಚಡ್ಡಾ ಅವರನ್ನು ಭೇಟಿಯಾಗಬಹುದು. ಅವರ ಕುಟುಂಬದವರ ಸಮ್ಮುಖದಲ್ಲಿ ಸಣ್ಣ ಸಮಾರಂಭ ನಡೆಯುವ ಸಾಧ್ಯತೆ ಇದೆʼʼಎಂದು ವರದಿಯಾಗಿದೆ.
ಇದನ್ನೂ ಓದಿ: Priyanka Chopra: ಆರ್‌ಆರ್‌ಆರ್ ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾ: ಟ್ರೋಲ್‌ಗೆ ಗುರಿಯಾದ ನಟಿ
ರಾಜ್ಯಸಭಾ ಸಂಸದ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ವೇಗವಾಗಿ ಹರಡಿದೆ. ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಮಾರ್ಚ್ 29ರ ರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಪರಿಣಿತಿ ಚೋಪ್ರಾ, ಇಮ್ತಿಯಾಜ್ ಅಲಿ ನಿರ್ದೇಶನದ ‘ಚಮ್ಕಿಲಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ11 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್