Shivaraj Kumar: ಶಿವಣ್ಣ ಸಿನಿ ಜರ್ನಿಗೆ 38 ವರ್ಷ: ಅಭಿಮಾನಿಗಳಲ್ಲಿ ಹರುಷ! - Vistara News

ಸಿನಿಮಾ

Shivaraj Kumar: ಶಿವಣ್ಣ ಸಿನಿ ಜರ್ನಿಗೆ 38 ವರ್ಷ: ಅಭಿಮಾನಿಗಳಲ್ಲಿ ಹರುಷ!

Shivaraj Kumar: ನಟಿಸಿದ ಮೂರು ಚಿತ್ರಗಳು ಅಂದರೆ ಆನಂದ್‌, ರಥಸಪ್ತಮಿ, ಮನಮೆಚ್ಚಿದ ಹುಡುಗ ಸಿನಿಮಾಗಳು ಒಂದರ ಹಿಂದೊಂದು 100 ದಿನ ಪ್ರದರ್ಶನ ಕಂಡದ್ದರಿಂದ ಹ್ಯಾಟ್ರಿಕ್‌ ಹೀರೋ ಎಂಬ ಬಿರುದು ಪಡೆದವರು ಶಿವಣ್ಣ.

VISTARANEWS.COM


on

Shivaraj Kumar Completes 38 Years In Kannada Film Industry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ (Shivaraj Kumar) ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 1986ರ ಫೆಬ್ರವರಿ 19ರಂದು ಶಿವಣ್ಣನ ಮೊದಲ ಸಿನಿಮಾ ‘ಆನಂದ್​’ (Anand Kannada Movie) ಮುಹೂರ್ತ ನೆರವೇರಿತ್ತು. ಅಂದಿನಿಂದ ಇಂದಿಗೆ ಬಣ್ಣದ ಲೋಕದ ಜರ್ನಿಯಲ್ಲಿ ಅವರು 38 ವರ್ಷಗಳನ್ನು ಪೂರೈಸಿದ್ದಾರೆ. ಈ ಸಾಧನೆಗಾಗಿ ಅವರಿಗೆ ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ತಾವು ನಟಿಸಿದ ಮೂರು ಚಿತ್ರಗಳು ಅಂದರೆ ಆನಂದ್‌, ರಥಸಪ್ತಮಿ, ಮನಮೆಚ್ಚಿದ ಹುಡುಗ ಸಿನಿಮಾಗಳು ಒಂದರ ಹಿಂದೊಂದು 100 ದಿನ ಪ್ರದರ್ಶನ ಕಂಡದ್ದರಿಂದ ಹ್ಯಾಟ್ರಿಕ್‌ ಹೀರೋ ಎಂಬ ಬಿರುದು ಪಡೆದವರು ಶಿವಣ್ಣ. 1962 ಜುಲೈ 12ರಂದು ಮದ್ರಾಸ್‌ ನಗರದಲ್ಲಿ ಡಾ.ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ದಂಪತಿಗೆ ಶಿವರಾಜ್‌ಕುಮಾರ್‌ ಜನಿಸಿದರು. ಶಿವಣ್ಣನ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ಚೆಕ್‌, ಪಾಸ್‌ ಪೋರ್ಟ್‌ ಎಲ್ಲದರಲ್ಲೂ ಎನ್‌.ಎಸ್‌ ಪುಟ್ಟಸ್ವಾಮಿ ಎಂದೇ ಇದೆ ಎಂದು ಶಿವಣ್ಣ ಈ ಹಿಂದೆ ಹೇಳಿಕೊಂಡಿದ್ದರು.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶಿವಣ್ಣ

ಆನಂದ್‌ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶಿವಣ್ಣ, ಈ ಚಿತ್ರದ ಮೂಲಕ ಪ್ರಶಂಸೆಗೆ ಪಾತ್ರರಾದರು. 1994ರಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʻಓಂʼ ಸಿನಿಮಾ ಶಿವರಾಜ್‌ಕುಮಾರ್‌ ಅವರಿಗೆ ಯಶಸ್ಸು ತಂದು ಕೊಟ್ಟಿತು. ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಜೋಗಿ, ಚಿಗುರಿದ ಕನಸು, ತವರಿಗೆ ಬಾ ತಂಗಿ, ವಜ್ರಕಾಯ, ಟಗರು, ಬೈರಾಗಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ಶಿವಣ್ಣ.

ಇದನ್ನೂ ಓದಿ: Shivaraj Kumar: ಡಿ.ಕರಡೀಗೌಡರ 10ನೇ ಪುಣ್ಯ ಸ್ಮರಣೆ; ರಾಜಕೀಯ ಬೇಡ, ಸಿನಿಮಾ ರಂಗವೇ ಸಾಕು ಎಂದ ಶಿವಣ್ಣ!

ಕನ್ನಡ ಮಾತ್ರವಲ್ಲದೇ, ಪರಭಾಷೆಯಲ್ಲೂ ಶಿವರಾಜ್​ಕುಮಾರ್​ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ರಜನಿಕಾಂತ್​ ನಟನೆಯ ತಮಿಳಿನ ‘ಜೈಲರ್​’ ಸಿನಿಮಾ,ಧನುಷ್​ ಜೊತೆ ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲಿ ತೆರೆ ಹಂಚಿಕೊಂಡರು.

ಪ್ರಶಸ್ತಿ ಬಾಚಿಕೊಂಡಿರುವ ಹ್ಯಾಟ್ರಿಕ್‌

ಶಿವರಾಜ್‌ಕುಮಾರ್‌ ಅವರು ಕೇವಲ ನಟನೆ ಮಾತ್ರವಲ್ಲದೇ ಹಿನ್ನೆಲೆ ಗಾಯಕನೂ ಹೌದು. ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ , ಅಂಡಮಾನ್‌, ಹೀಗೆ ಹಲವಾರು ಸಿನಿಮಾಗಳಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ. 1995ರಲ್ಲಿ ಓಂ ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ, 1999ರ ಹೃದಯ ಹೃದಯ ಸಿನಿಮಾಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, ಚಿಗುರಿದ ಕನಸು, ಜೋಗಿ ಸಿನಿಮಾಗೂ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭಿಸಿದೆ.

1996ರ ನಮ್ಮೂರ ಮಂದಾರ ಹೂವೇ ಸಿನಿಮಾಗೆ ಫಿಲಂಫೇರ್‌ ಅವಾರ್ಡ್‌ ದೊರೆತಿದೆ. 1996ರಲ್ಲಿ ಜನುಮದ ಜೋಡಿ ಸಿನಿಮಾಗೆ ಆರ್ಯಭಟ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿದೆ. ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್‌ ನೀಡಿದೆ.

ಹ್ಯಾಟ್ರಿಕ್‌ ಸಿನಿಮಾ ಮೈಲಿಗಲ್ಲುಗಳು

1986ರಲ್ಲಿ ಆನಂದ್‌ ಸಿನಿಮಾ ಮೊದಲ ಸಿನಿಮಾ ಆದರೆ, 1995ರಲ್ಲಿ ಮನ ಮಿಡಿಯಿತು 25ನೇ ಸಿನಿಮಾ, 1999ರಲ್ಲಿ 50ನೇ ಸಿನಿಮಾ ಏಕೆ 47 ಹಾಗೂ 2003ರಲ್ಲಿ 75ನೇ ಚಿತ್ರ ಶ್ರೀರಾಮ್‌ ಮತ್ತು 2011ರಲ್ಲಿ 100ನೇ ಚಿತ್ರ ಜೋಗಯ್ಯ ಆಗಿದೆ. 125ನೇ ಸಿನಿಮಾ ವೇದಾ ತೆರೆಗೆ ಬರಲು ಸಜ್ಜಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

YAJAMANA PREMIER LEAGUE SEASON-3: ಈ ಬಾರಿ ಟಿ10 ಮಾದರಿಯಲ್ಲಿ ನಡೆಯಲಿದೆ ಯಜಮಾನ ಪ್ರೀಮಿಯರ್ ಲೀಗ್​

YAJAMANA PREMIER LEAGUE SEASON-3: ಈ ಬಾರಿ ISPL ಮಾದರಿಯಲ್ಲಿ ಯಜಮಾನ ಪ್ರೀಮಿಯರ್ ಲೀಗ್ T10 ಟಚ್ ಕೊಡಲಾಗಿದೆ. ಪ್ರತಿ ತಂಡಗಳಿಗೂ ಮೆಂಟರ್ಸ್ ಗಳಿದ್ದು, ಶ್ರೇಯಸ್ ಮಂಜು, ಸಿಂಪಲ್ ಸುನಿ, ರೋಷನ್ ಬಚ್ಚನ್, ಜಯರಾಮ್ ಕಾರ್ತಿಕ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಾಥ್ ಕೊಟ್ಟಿದ್ದಾರೆ.

VISTARANEWS.COM


on

YAJAMANA PREMIER LEAGUE SEASON-3 (2)
Koo

ಬೆಂಗಳೂರು: ಮೂರನೇ ಆವೃತ್ತಿಯ ಯಜಮಾನ ಪ್ರೀಮಿಯರ್ ಲೀಗ್(ವೈಪಿಎಲ್-3)ನ(YAJAMANA PREMIER LEAGUE SEASON-3) ದಿನಾಂಕ ಪ್ರಕಟಗೊಂಡಿದೆ. ಮೇ 4 ಮತ್ತು 5 ರಂದು ಎರಡು ದಿನಗಳ ಕಾಲ‌ ಟೂರ್ನಿ ನಡೆಯಲಿದೆ. ಶನಿವಾರ ತಂಡದ ಜರ್ಸಿ ಕೂಡ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಜಯರಾಮ್ ಕಾರ್ತಿಕ್ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು.

ಜೆರ್ಸಿ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ನಟ ಜಯರಾಮ್ ಕಾರ್ತಿಕ್, ಒಂದು ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಎಷ್ಟು ಕಷ್ಟ ಎನ್ನುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಯಜಮಾನ ಪ್ರೀಮಿಯರ್ ಲೀಗ್​ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಸಂತಸದ ವಿಚಾರ. ಈ ಲೀಗ್​ 100 ಆವೃತ್ತಿಯನ್ನು ಕಾಣಲಿ ಎಂದು ಹಾರೈಸುತ್ತೇನೆ. ವಿಷ್ಣು ಸರ್​ ಎಲ್ಲರಿಗೂ ಅಚ್ಚುಮೆಚ್ಚು. ಅವರ ಹೆಸರಿಗೆ ತಕ್ಕಂತೆ ಲೀಗ್​ಗೆ ಯಜಮಾನ ಲೀಗ್​ ಎಂದು ಹೆಸರಿಟ್ಟಿದ್ದು ಚೆನ್ನಾಗಿದೆ. ಇದು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ವಿಷ್ಣು ಸರ್ ನಮಗೆ ಸ್ಫೂರ್ತಿ. ಈ ಲೀಗ್​ನಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳಿಗೂ ಆಲ್ ದಿ ಬೆಸ್ಟ್ ಎಂದರು.


ಇದನ್ನೂ ಓದಿ RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

ಯದುನಂದನ್ ಗೌಡ ಮಾತನಾಡಿ, ಯಜಮಾನ ಪ್ರೀಮಿಯರ್ ಲೀಗ್ ನ ಮೂರು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಶುರು ಮಾಡಿದ್ದೇವು.‌ ಪ್ರೀಮಿಯರ್, ಐಪಿಎಲ್ ಅಂತಾ ಕ್ರಿಕೆಟ್ ಪಂದ್ಯಾವಳಿ ಮಾಡುತ್ತಾರೆ. ನಾವು ಯಾಕೆ ವಿಷ್ಣು ಸರ್(Dr.Vishnu Sena Samiti) ಹೆಸರಿನಲ್ಲಿ ಮಾಡಬಾರದು ಎಂದು ಅವರ ಹೆಸರಲ್ಲಿ ಶುರು ಮಾಡಿದೆವು. ಕನ್ನಡ ಇಂಡಸ್ಟ್ರೀಗೆ ಕ್ರಿಕೆಟ್ ಪರಿಚಯಿಸಿದ್ದು,ನಮ್ಮ ಯಜಮಾನರು. ವಿಷ್ಣು ಸರ್ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಅಭಿಮಾನಿಗಳೇ ಸೇರಿಕೊಂಡು ಯಜಮಾನ ಪ್ರೀಮಿಯರ್ ಲೀಗ್ ಪ್ರಾರಂಭಿಸಿದೆವು. ಸ್ಟಾರ್​ ವಾರ್​ ಬಿಟ್ಟು ಕನ್ನಡ ಚಿತ್ರರಂಗದ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸವನ್ನು ಯಜಮಾನ ಪ್ರೀಮಿಯರ್ ಲೀಗ್ ಮೂಲಕ ಮಾಡಲಾಗಿದೆ. ನಿಮ್ಮ ಸಹಕಾರ ಇದ್ದರೆ ಈ ಪಂದ್ಯಾವಳಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

ಟಿ10 ಮಾದರಿಯಲ್ಲಿ ಟೂರ್ನಿ


ಬೆಂಗಳೂರಿನ ಅಶೋಕ್ ರೈಸಿಂಗ್ ಕ್ರಿಕೆಟ್ ಗ್ರೌಂಡ್ ನಲ್ಲಿ ಪಂದ್ಯಾವಳಿ ನಡೆಯಲಿದೆ. ಈ ಬಾರಿ ISPL ಮಾದರಿಯಲ್ಲಿ ಯಜಮಾನ ಪ್ರೀಮಿಯರ್ ಲೀಗ್ T10 ಟಚ್ ಕೊಡಲಾಗಿದೆ. ಪ್ರತಿ ತಂಡಗಳಿಗೂ ಮೆಂಟರ್ಸ್ ಗಳಿದ್ದು, ಶ್ರೇಯಸ್ ಮಂಜು, ಸಿಂಪಲ್ ಸುನಿ, ರೋಷನ್ ಬಚ್ಚನ್, ಜಯರಾಮ್ ಕಾರ್ತಿಕ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಾಥ್ ಕೊಟ್ಟಿದ್ದಾರೆ. ವೈಪಿಎಲ್ ಅನ್ನು ವಿಷ್ಣು ಸೇನಾ ಸಮಿತಿಯ ಬೆಂಗಳೂರಿನ ಜಿಲ್ಲಾಧ್ಯಕ್ಷ ಯದುನಂದನ್ ಗೌಡ ನಡೆಸುತ್ತಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿಸಿ ಮಲ್ಲಿಕಾರ್ಜುನ್ ಅವರಿಗೆ ಸಾಥ್ ಕೊಡುತ್ತಿದ್ದಾರೆ.


ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಪಂದ್ಯ ಶುರು ಮಾಡಿದ ಕೀರ್ತಿ ಡಾ.ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣುವರ್ಧನ್​ ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದರು. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.

Continue Reading

ಸಿನಿಮಾ

Amrita Pandey: ಭೋಜ್‌ಪುರಿ ಜನಪ್ರಿಯ ನಟಿ ಅಮೃತಾ ಪಾಂಡೆ ಆತ್ಮಹತ್ಯೆ; ಸಾವಿಗೆ ಮುನ್ನ ಬರೆದ ವಾಟ್ಸಾಪ್ ಸ್ಟೇಟಸ್‌ನಲ್ಲಿ ಏನಿದೆ?

Amrita Pandey: ಭೋಜ್‌ಪುರಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ ಅಮೃತಾ ಪಾಂಡೆ ಶನಿವಾರ ಬಿಹಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ. ಆದರೆ ಆತ್ಮಹತ್ಯೆಗೆ ಮುನ್ನ ಅವರು ವಾಟ್ಸಾಪ್‌ನ ಸ್ಟೇಟಸ್‌ನಲ್ಲಿ ಕೆಲವೊಂದು ವಿಚಾರಗಳನ್ನು ತಿಳಿಸಿದ್ದರು ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಅಮೃತಾ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಇದು ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಆಪ್ತ ಮೂಲಗಳು ತಿಳಿಸಿದ್ದು. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಅಮೃತಾ ಹಿಂದಿ ಚಿತ್ರ, ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ.

VISTARANEWS.COM


on

Amrita Pandey
Koo

ಪಟ್ನಾ: ಭೋಜ್‌ಪುರಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ ಅಮೃತಾ ಪಾಂಡೆ (Amrita Pandey) ಶನಿವಾರ ಬಿಹಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಗಲ್ಪುರದ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವ ಪತ್ತೆಯಾಗಿದೆ. ಜೋಗ್ಸರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿವ್ಯಧರ್ಮ ಅಪಾರ್ಟ್‌ಮೆಂಟ್‌ನಲ್ಲಿ ಸೀಲಿಂಗ್‌ ಫ್ಯಾನ್‌ಗೆ ಕಟ್ಟಿದ ಸೀರೆಯಲ್ಲಿ ನೇಣು ಬಿಗಿದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ. ಆದರೆ ಆತ್ಮಹತ್ಯೆಗೆ ಮುನ್ನ ಅವರು ವಾಟ್ಸಾಪ್‌ನ ಸ್ಟೇಟಸ್‌ನಲ್ಲಿ ಕೆಲವೊಂದು ವಿಚಾರಗಳನ್ನು ತಿಳಿಸಿದ್ದರು ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಅಮೃತಾ ಪಾಂಡೆ ಅವರು ತಮ್ಮ ಪತಿಯೊಂದಿಗೆ ಮುಂಬೈಯಲ್ಲಿ ವಾಸವಾಗಿದ್ದಾರೆ. ಕೆಲವು ದಿನಗಳ ಹಿಂದೆ ಸಂಬಂಧಿಕರೊಬ್ಬರು ವಿವಾಹ ಸಮಾರಂಭದಲ್ಲಿ ಭಾಗಿಯಾಗಲು ಅವರು ಬಿಹಾರದ ಭಾಗಲ್ಪುರಕ್ಕೆ ಆಗಮಿಸಿದ್ದರು. ಬಳಿಕ ಕೆಲವು ದಿನ ಇಲ್ಲಿಯೇ ಉಳಿಯಲು ನಿರ್ಧರಿಸಿದ್ದರು. ಶನಿವಾರ ತಡರಾತ್ರಿಯವರೆಗೆ ಎಚ್ಚರವಾಗಿದ್ದ ಅವರು ತನ್ನ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ರಹಸ್ಯ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದರು. ಸದ್ಯ ಅಧಿಕಾರಿಗಳು ಇದರ ಸುತ್ತ ತನಿಖೆ ನಡೆಸಲು ಮುಂದಾಗಿದ್ದಾರೆ.

ಸ್ಟೇಟಸ್‌ನಲ್ಲಿ ಏನಿತ್ತು?

ಸ್ಟೇಟಸ್‌ನಲ್ಲಿ ಅವರು ಏನು ಬರೆದಿದ್ದರು ಎನ್ನುವ ವಿಚಾರವೇ ಸದ್ಯ ಕುತೂಹಲ ಕೆರಳಿಸಿದೆ. ಅದರಲ್ಲಿ ಅವರು, ‘ಅವಳ ಜೀವನ 2 ದೋಣಿಗಳಲ್ಲಿ ಸಾಗುತ್ತಿದೆ. ನನ್ನ ಜೀವನವನ್ನು ಕೊನೆಗೊಳಿಸುವ ಮೂಲಕ ನಾನು ಅವಳ ದಾರಿಯನ್ನು ಸುಗಮಗೊಳಿಸುತ್ತೇನೆʼ ಎಂದು ಬರೆದುಕೊಂಡಿದ್ದರು. ಹೀಗಾಗಿ ಅಮೃತಾ ಪಾಂಡೆ ಅವರ ಸ್ಟೇಟಸ್‌ ಹಲವು ಅನುಮಾನಕ್ಕೆ ಕಾರಣವಾಗಿದೆ. ಪತಿಯ ಇನ್ನೊಂದು ಸಂಬಂಧದಿಂದ ಮನನೊಂದು ಅಮೃತಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ.

ಜನಪ್ರಿಯ ನಟಿ

ಅಮೃತಾ ಪಾಂಡೆ ಭೋಜ್‌ಪುರಿ ಚಿತ್ರಗಳಲ್ಲದೆ ಹಲವು ಹಿಂದಿ ಸಿನಿಮಾ, ವೆಬ್‌ಸೀರಿಸ್‌, ಕಿರುತೆರೆ ಶೋಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲಿ ಕೆಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಮೃತಾ ನಟನೆಯ ಹಾರರ್ ವೆಬ್ ಸೀರಿಸ್‌ ‘ಪ್ರತಿಶೋದ’ದ ಮೊದಲ ಸಂಚಿಕೆ ಇತ್ತೀಚೆಗೆ ಬಿಡುಗಡೆಯಾಗಿದೆ.

ಖಿನ್ನತೆ ಕಾರಣ?

ಕುಟುಂಬದ ಮೂಲಗಳ ಪ್ರಕಾರ ಅಮೃತಾ ತಮ್ಮ ವೃತ್ತಿ ಜೀವನದ ಬಗ್ಗೆ ಚಿಂತಿತರಾಗಿದ್ದರು ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ. ಅಮೃತಾ ಅವರು 2022ರಲ್ಲಿ ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದ ಪ್ರಸ್ತುತ ಮುಂಬೈಯಲ್ಲಿ ವಾಸವಾಗಿರುವ ಚಂದ್ರಮಣಿ ಜಂಗದ್ ಅವರನ್ನು ವಿವಾಹವಾಗಿದ್ದರು. ಚಂದ್ರಮಣಿ ಮುಂಬೈಯಲ್ಲಿ ಅನಿಮೇಷನ್ ಎಂಜಿನಿಯರ್ ಆಗಿದ್ದಾರೆ. ಈ ದಂಪತಿಗೆ ಇನ್ನೂ ಮಕ್ಕಳಾಗಿರಲಿಲ್ಲ.

ಇದನ್ನೂ ಓದಿ: Brijesh Tripathi: ಭೋಜ್‌ಪುರಿ ಜನಪ್ರಿಯ ನಟ ಬ್ರಿಜೇಶ್ ತ್ರಿಪಾಠಿ ಇನ್ನಿಲ್ಲ

ಮೊದಲು ನೋಡಿದ್ದು ಸಹೋದರಿ

ಅಮೃತಾ ಅವರ ಮೃತದೇಹವನ್ನು ಮೊದಲು ನೋಡಿದ್ದು ಸಹೋದರಿ ಎಂದು ಪೊಲೀಸರು ತಿಳಿಸಿದ್ದಾರೆ. ಸಹೋದರಿ ಅಪರಾಹ್ನ 3.30ರ ಸುಮಾರಿಗೆ ಅಮೃತಾ ಅವರ ಕೋಣೆಗೆ ಹೋಗಿದ್ದರು. ಈ ವೇಳೆ ಅಮೃತಾ ಅವರ ದೇಹ ನೇತಾಡಿಕೊಂಡಿತ್ತು. ಕೂಡಲೇ ಸೀರೆಯನ್ನು ಕತ್ತರಿಸಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Shiva Rajkumar: ಸೆಟ್ಟೇರಿತು ಶಿವರಾಜ್‌ಕುಮಾರ್‌ – ಆರ್ ಚಂದ್ರು ಕಾಂಬಿನೇಷನ್‌ನ ಹೊಸ ಸಿನಿಮಾ!

Shiva Rajkumar: ಶಾಸಕ ಪ್ರದೀಪ್ ಈಶ್ವರ್, ರಾಜಕೀಯ ಮುಖಂಡ ಎಚ್.ಎಂ. ರೇವಣ್ಣ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಚೇತನ್ ಕುಮಾರ್, ಮಂಜುನಾಥ್, ಮಮತಾ ದೇವರಾಜ್ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ‘ಫಾದರ್​’ ಚಿತ್ರತಂಡಕ್ಕೆ ಶುಭ ಹಾರೈಸಿದರು. ʻಶ್ರೀರಾಮಬಾಣʼ, ʻಫಾದರ್ʼ, ʻPOKʼ, ʻಡಾಗ್ʼ ಹಾಗೂ ಕಬ್ಜ-2 ಟೈಟಲ್ ಘೋಷಣೆಯಾಗಿತ್ತು.

VISTARANEWS.COM


on

Shiva Rajkumar Graces Muhurtha Of Father Kannada Movie
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shiva Rajkumar) ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿರುವುದು ಗೊತ್ತೇ ಇದೆ. ಆರ್​ ಚಂದ್ರು (R Chandru) ಅವರು ಇತ್ತೀಚೆಗೆ ‘ಆರ್​ಸಿ ಸ್ಟುಡಿಯೊ’ ಆರಂಭಿಸಿ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಈಗ ಆ ಐದು ಸಿನಿಮಾಗಳಲ್ಲಿ ಮೊದಲ ಚಿತ್ರವಾಗಿ ‘ಡಾರ್ಲಿಂಗ್’ ಕೃಷ್ಣ ನಟನೆಯ ‘ಫಾದರ್’ ಸಿನಿಮಾ (Father Kannada Movie) ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತ ನಡೆಯಿತು. ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ ನಿರ್ದೇಶಕ ಆರ್ ಚಂದ್ರು ಅವರು ಆರ್ ಸಿ ಪ್ರೊಡಕ್ಷನ್ ನಡಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ʻಶ್ರೀರಾಮಬಾಣʼ, ʻಫಾದರ್ʼ, ʻPOKʼ, ʻಡಾಗ್ʼ ಹಾಗೂ ಕಬ್ಜ-2 ಟೈಟಲ್ ಘೋಷಣೆಯಾಗಿತ್ತು.

ಶಾಸಕ ಪ್ರದೀಪ್ ಈಶ್ವರ್, ರಾಜಕೀಯ ಮುಖಂಡ ಎಚ್.ಎಂ. ರೇವಣ್ಣ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಚೇತನ್ ಕುಮಾರ್, ಮಂಜುನಾಥ್, ಮಮತಾ ದೇವರಾಜ್ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ‘ಫಾದರ್​’ ಚಿತ್ರತಂಡಕ್ಕೆ ಶುಭ ಹಾರೈಸಿದರು

ಶಿವರಾಜ್​ಕುಮಾರ್​ ನಟಿಸಿದ್ದ ‘ಭೈರಾಗಿ’ ಸಿನಿಮಾಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜ್ ಮೋಹನ್ ಅವರು ಈಗ ‘ಫಾದರ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿದ್ದು, ಅವರಿಗೆ ಅಮೃತಾ ಅಯ್ಯಂಗಾರ್ ಜೋಡಿ ಆಗಿದ್ದಾರೆ. ಪ್ರಕಾಶ್ ರೈ, ಸುನೀಲ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಾಲಿವುಡ್​ ನಿರ್ಮಾಪಕ ಆನಂದ್ ಪಂಡಿತ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ‘ಹನುಮಾನ್’ ಸಿನಿಮಾದ ಖ್ಯಾತಿಯ ಹರಿ ಅವರು ಸಂಗೀತ ನೀಡುತ್ತಿದ್ದಾರೆ ಎಂದು ಆರ್. ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ತಂದೆ-ಮಗನ ನಡುವಿನ ಬಾಂಧವ್ಯದ ಕಹಾನಿ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: Shiva Rajkumar: `ವಿಕ್ಟೋರಿಯಾ ಮಾನ್ಸನ್‌’ ಫಸ್ಟ್‌ ಲುಕ್‌ ಔಟ್‌: ಶಿವಣ್ಣ ಸಾಥ್!

ಆರ್​. ಚಂದ್ರು ನಿರ್ದೇಶನದ, ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಎರಡು ದಿನಗಳಲ್ಲೇ ನೂರು ಕೋಟಿ ರೂ. ಕ್ಲಬ್‌ ಸೇರಿತ್ತು. ಆದರೆ ಭಾರಿ ಕಲೆಕ್ಷನ್‌ ಮಾಡಿರುವ ಈ ಸಿನಿಮಾವನ್ನು ಸಾಕಷ್ಟು ಜನ ಇಷ್ಟ ಪಟ್ಟಿರಲಿಲ್ಲ. ಹೀಗಾಗಿ ʻಕಬ್ಜʼ ಸೀಕ್ವೆಲ್ ಯಾವುದೇ ಕಾರಣಕ್ಕೂ ಸಿದ್ಧವಾಗುವುದಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಇದಾದ ಬಳಿಕ ಜನವರಿ 23ರಂದು ಚಂದ್ರು ಅವರು ಐದು ಸಿನಿಮಾ ಘೋಷಣೆ ಮಾಡಿದರು.

ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ ನಿರ್ದೇಶಕ ಆರ್ ಚಂದ್ರು ಅವರು ಆರ್ ಸಿ ಪ್ರೊಡಕ್ಷನ್ ನಡಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ʻಶ್ರೀರಾಮಬಾಣʼ, ʻಫಾದರ್ʼ, ʻPOKʼ, ʻಡಾಗ್ʼ ಹಾಗೂ ಕಬ್ಜ-2 ಟೈಟಲ್ ಘೋಷಣೆಯಾಗಿತ್ತು.

ಈ ಬಗ್ಗೆ ಆರ್‌ ಚಂದ್ರು ಮಾತನಾಡಿ ʻʻಯಾವುದೇ ಕೆಲಸ ಮಾಡಬೇಕು ಅಂದರೆ ಯೋಗಬೇಕು. ಯೋಗ್ಯತೆ ಬೇಕು. 10 ತಿಂಗಳು ನಾನು ಸುಮ್ನೆ ಕೂತಿರಲಿಲ್ಲ. ಕೈ ಹಾಕಿದರೆ ಕರಂಟ್ ಕಂಬಕ್ಕೆ ಕೈ ಹಾಕಬಾರದು. ಚಂದ್ರಲೋಕಕ್ಕೆ ಕೈ ಹಾಕಬೇಕು. ಕಬ್ಜ’ ಸಿನಿಮಾದ ಕಲೆಕ್ಷನ್ ಫೇಕ್ ಎಂದು ಅನೇಕರು ಹೇಳಿದ್ದರು.‘ಕಬ್ಜ ಸಿನಿಮಾದಿಂದ ನಾನು ಸರ್ಕಾರಕ್ಕೆ 20 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದೀನಿ. ಇದನ್ನು ಓಪನ್ ಆಗಿ ಹೇಳಿಕೊಳ್ಳುತ್ತಿದ್ದೇನೆ. ಕನ್ನಡ ಸಿನಿಮಾಗಳನ್ನು ನೋಡ್ಬೇಕು ಅಂದ್ರೆ ಒಳ್ಳೊಳ್ಳೆ ಸಿನಿಮಾಗಳನ್ನ ಮಾಡ್ಬೇಕು. ಬಾಯಿ ಇದೆ ಎಂದು ಮಾತನಾಡಿದರೆ ಐದು ಸಿನಿಮಾ, ಹತ್ತು ಸಿನಿಮಾ ಆಗಲ್ಲ’ ಎಂದು ಅವರು ನೇರವಾಗಿ ಹೇಳಿದ್ದರು.

Continue Reading

ಟಾಲಿವುಡ್

Samantha Ruth Prabhu: ಜನ್ಮದಿನದಂದೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟಿ ಸಮಂತಾ!

Samantha Ruth Prabhu: ಸಮಂತಾ ಜನುಮದಿನಕ್ಕೆ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ. ‘ಬಂಗಾರಂ’ ಚಿತ್ರದ ಫಸ್ಟ್ ಲುಕ್‌ನಲ್ಲಿ ಉಗ್ರ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದು, ಗನ್ ಹಿಡಿದುಕೊಂಡು ರಕ್ತಸಿಕ್ತ ಮುಖವನ್ನು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. 37ನೇ ವಸಂತಕ್ಕೆ ನಟಿ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ನಟಿ ಸಮಂತಾ ಅವರು ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ʻ

VISTARANEWS.COM


on

Samantha Ruth Prabhu announces new film Bangaram
Koo

ಬೆಂಗಳೂರು: ಇಂದು ಟಾಲಿವುಡ್‌ ನಟಿ ಸಮಂತಾ(Samantha Ruth Prabhu) ಅವರ ಜನುಮದಿನದ (Samantha Birthday) ಸಂಭ್ರಮ. 37ನೇ ವಸಂತಕ್ಕೆ ನಟಿ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ನಟಿ ಸಮಂತಾ ಅವರು ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ʻಬಂಗಾರಂ’ (Bangaram) ಎಂಬ ಹೊಸ ಚಿತ್ರದ ಶೀರ್ಷಿಕೆ ಜತೆ ಫಸ್ಟ್‌ ಲುಕ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಸಮಂತಾ ತಿಳಿಸಿದ್ದಾರೆ.

ಸಮಂತಾ ಜನುಮದಿನಕ್ಕೆ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ. ‘ಬಂಗಾರM’ ಚಿತ್ರದ ಫಸ್ಟ್ ಲುಕ್‌ನಲ್ಲಿ ಉಗ್ರ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದು, ಗನ್ ಹಿಡಿದುಕೊಂಡು ರಕ್ತಸಿಕ್ತ ಮುಖವನ್ನು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸಿನಿಮಾ 2025ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್‌ಸ್ಟಾದಲ್ಲಿ ನಟಿ ಪೋಸ್ಟ್ ಶೇರ್‌ ಮಾಡಿ “ಚಿನ್ನವಾಗಲು ಎಲ್ಲವೂ ಹೊಳೆಯಬೇಕಾಗಿಲ್ಲ. ʻಬಂಗಾರಂʼ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Samantha Ruth Prabhu: ಸಮಂತಾಗೆ ಜನುಮ ದಿನದ ಸಂಭ್ರಮ! ಈ ನಟಿಯ ಸೀಕ್ರೆಟ್‌ ಸಂಗತಿಗಳಿವು!

ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ ಸಮಂತಾ ಯೋಗ, ಧ್ಯಾನ, ಕುದುರೆ ಸವಾರಿ ಮತ್ತು ಕಿಕ್ ಬಾಕ್ಸಿಂಗ್ ಕಡೆಗೆ ಗಮನಹರಿಸುತ್ತಿದ್ದಾರೆ. ತಾವು ಕಲಿತ ಸಮರ ಕಲೆಗಳ ಪ್ರದರ್ಶನದ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನಟಿ ಸಮಂತಾ (Samantha Kickboxing) ಇದಕ್ಕೆ ‘ಒನ್ ಡೇ ಎಟ್ ಅ ಟೈಮ್ ‘ ಎಂಬ ಶೀರ್ಷಿಕೆ ನೀಡಿದ್ದಾರೆ.

ನಟಿ ಸಮಂತಾ ನಟನಾ ವೃತ್ತಿಗೆ ವಿದಾಯ ಹೇಳಿಲ್ಲ, ಬದಲಾಗಿ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ ಅಷ್ಟೇ. ನಟಿ ಈಗಾಗಲೇ ʻಸಿಟಾಡೆಲ್ ಇಂಡಿಯಾ: ಹನಿ ಬನ್ನಿʼ ವೆಬ್ ಸರಣಿಯಲ್ಲಿ ನಟಿಸಿದ್ದು ಅದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಸಮಂತಾ ಜತೆ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಸಿಕಂದರ್ ಖೇರ್, ಸಾಕಿಬ್ ಸಲೀಮ್ ಮತ್ತು ಕೇ ಕೇ ಮೆನನ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ರಾಜ್ ಮತ್ತು ಡಿಕೆ ಮತ್ತು ಸೀತಾ ಆರ್ ಮೆನನ್ ನಿರ್ದೇಶನದ ಸಿಟಾಡೆಲ್ ಇಂಡಿಯಾ:ಹನಿ ಬನ್ನಿ ಯುಎಸ್ ಶೋನ ಭಾರತೀಯ ಸ್ಪಿನ್ ಆಫ್ ಆಗಿದೆ. ಇದರಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading
Advertisement
ವೈರಲ್ ನ್ಯೂಸ್9 mins ago

Viral Video: ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು; ವಿಡಿಯೋ ವೈರಲ್‌

tomato price rise
ಕರ್ನಾಟಕ30 mins ago

Tomato Price: ಗ್ರಾಹಕನ ಜೇಬು ಸುಡಲು ಟೊಮ್ಯಾಟೊ ಸಜ್ಜು, ಬಾಕ್ಸ್‌ಗೆ 400 ರೂಪಾಯಿಗೆ ಬೆಲೆ ಏರಿಕೆ

srinivasa prasad
ಪ್ರಮುಖ ಸುದ್ದಿ1 hour ago

Srinivasa Prasad passes away‌: 7 ಬಾರಿ ಸಂಸದರಾಗಿದ್ದ ಸ್ವಾಭಿಮಾನಿ, ದಕ್ಷಿಣ ಕರ್ನಾಟಕದ ʼದಲಿತ ಸೂರ್ಯʼ

ಕರ್ನಾಟಕ1 hour ago

Srinivas Prasad: ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

Sleeping Tips
ಆರೋಗ್ಯ2 hours ago

Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

Rishabh Pant
ಅಂಕಣ2 hours ago

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Karnataka Weather
ಕರ್ನಾಟಕ2 hours ago

Karnataka Weather: ಇಂದು ಬೀದರ್, ಕಲಬುರಗಿ ಸೇರಿ ಹಲವೆಡೆ ಶಾಖದ ಅಲೆ ಎಚ್ಚರಿಕೆ; ಇನ್ನೂ ಎಲ್ಲಿಯವರೆಗೆ ಈ ರಣ ಬಿಸಿಲು?

Tooth Decay
ಆರೋಗ್ಯ3 hours ago

Tooth Decay: ನಮ್ಮ ಈ ದುರಭ್ಯಾಸಗಳು ಹಲ್ಲಿನ ಹುಳುಕಿಗೆ ಕಾರಣವಾಗುತ್ತವೆ

dina bhavishya read your daily horoscope predictions for April 29 2024
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

love jihad
ಕರ್ನಾಟಕ8 hours ago

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202416 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202418 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202420 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202420 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ23 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌