Kannada New Movie: ʻಕಾಂತಾರʼದ ಫಾರೆಸ್ಟ್ ಗಾರ್ಡ್ ರವಿ ಈಗ ಡೈರೆಕ್ಟರ್; ಹೊಸ ಸಿನಿಮಾ ಘೋಷಿಸಿದ ಮೈತ್ರಿ ಪ್ರೊಡಕ್ಷನ್! - Vistara News

ಸ್ಯಾಂಡಲ್ ವುಡ್

Kannada New Movie: ʻಕಾಂತಾರʼದ ಫಾರೆಸ್ಟ್ ಗಾರ್ಡ್ ರವಿ ಈಗ ಡೈರೆಕ್ಟರ್; ಹೊಸ ಸಿನಿಮಾ ಘೋಷಿಸಿದ ಮೈತ್ರಿ ಪ್ರೊಡಕ್ಷನ್!

Kannada New Movie: ರವಿ ಬಸ್ರೂರ್ ಅಖಾಡದಿಂದ ಯುವ ಸಿನಿಮೋತ್ಸಾಹಿಗಳು ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿರ್ದೇಶಕರಾಗಿ ಸೂಚನ್ ಶೆಟ್ಟಿ, ಹೊಸ ಪಯಣ ಪ್ರಾರಂಭಿಸಿದ್ದಾರೆ.

VISTARANEWS.COM


on

Forest Guard Ravi of ``Kantara'' is now Director
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರವಿ ಬಸ್ರೂರ್ ಬಹುಬೇಡಿಕೆಯ (Kannada New Movie) ಸಂಗೀತ ನಿರ್ದೇಶಕರಲ್ಲಿ ಒಬ್ಬರು. ʻಕೆಜಿಎಫ್ʼ ಸರಣಿ ಸಿನಿಮಾ ಬಹುದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್, ಟಾಲಿವುಡ್‌ಗಳಿಗೂ ಪಯಣಿಸಿರುವ ಅವರು ಸ್ಟಾರ್ ಹೀರೋ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರ ಗರಡಿಯಿಂದ ಬಂದ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಇದೀಗ ರವಿ ಬಸ್ರೂರ್ ಅಖಾಡದಿಂದ ಯುವ ಸಿನಿಮೋತ್ಸಾಹಿಗಳು ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿರ್ದೇಶಕರಾಗಿ ಸೂಚನ್ ಶೆಟ್ಟಿ, ಹೊಸ ಪಯಣ ಪ್ರಾರಂಭಿಸಿದ್ದಾರೆ.

ಸೂಚನ್ ಶೆಟ್ಟಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೂಚನ್ ಅವರ ಚೊಚ್ಚಲ ಪ್ರಯತ್ನದ ಸಿನಿಮಾಗೆ ʻಗಾಡ್ ಪ್ರಾಮಿಸಿʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ರವಿ ಬಸ್ರೂರ್ ಸಾರಥ್ಯದ ಕಟಕ, ಗಿರ್ಮಿಟ್, ಕಡಲ್ ಸಿನಿಮಾಗಳಿಗೆ ಬರಹಗಾರನಾಗಿ, ಸಹ ನಿರ್ದೇಶಕನಾಗಿ, ನಟನಾಗಿ ಕೆಲಸ ಮಾಡಿರುವ ಸೂಚನ್ ಈ ಅನುಭವದೊಂದಿಗೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ಯಾನ್ ಇಂಡಿಯಾ ʻಕಾಂತಾರʼ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ, ರವಿ ಬಸ್ರೂರ್ ಅವರ ʻಕಡಲ್ʼ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಸೂಚನ್ ಶೆಟ್ಟಿ ʻಗಾಡ್ ಪ್ರಾಮಿಸ್ʼ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಿನಿಮಾ ಮಾಡುವ ಕನಸಿನೊಂದಿಗೆ 2016ರಲ್ಲಿ ಶುರುವಾದ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಚೊಚ್ಚಲ ಕನಸಿಗೆ ಜೊತೆಯಾಗಿದೆ. ʻಗಾಡ್ ಪ್ರಾಮಿಸ್ʼ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ʻಗಾಡ್ ಪ್ರಾಮಿಸ್ʼ.ಹಳ್ಳಿ ಸೊಗಡನ್ನು ಬಿಂಬಿಸುವ ಟೈಟಲ್ ಪೋಸ್ಟರ್ ಕುತೂಹಲವನ್ನು ಹೆಚ್ಚು ಮಾಡಿದೆ.

ಇದನ್ನೂ ಓದಿ: Kannada New Movie: ಧನ್ವೀರ್ ನಾಯಕರಾಗಿ ನಟಿಸುತ್ತಿರುವ ʻಹಯಗ್ರೀವʼ ಚಿತ್ರಕ್ಕೆ ಚಾಲನೆ!

ʻಗಾಡ್ ಪ್ರಾಮಿಸ್ʼ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿದೆ. ಕಬ್ಜ-ಸಲಾರ್ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಎಜೆ ಶೆಟ್ಟಿ ಹಾಗೂ ಭುವನ್ ಗೌಡ ಜತೆ ಕೆಲಸ ಮಾಡಿರುವ ಗುರುಪ್ರಸಾದ್ ಛಾಯಾಗ್ರಹಣ, ರವಿ ಬಸ್ರೂರ್ ಜೊತೆ ಸಲಾರ್, ಕೆಜಿಎಫ್ ಸರಣಿ ಚಿತ್ರಗಳಿಗೆ ಕೆಲಸ ಮಾಡಿರುವ 400ಕ್ಕೂ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ಲವ್ ಮಾಕ್ಟೇಲ್-2, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ವಿಕ್ರಾಂತ್ ರೋಣ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಆನ್ ಲೈನ್ ಎಡಿಟರ್ ಆಗಿ ಕೆಲಸ ಮಾಡಿರುವ, ಖ್ಯಾತ ಸಂಕಲನಕಾರರಾದ ಕೆಎಂ ಪ್ರಕಾಶ್, ರುತ್ವಿಕ್, ಪ್ರತಿಕ್ ಶೆಟ್ಟಿ ಬಳಗದಲ್ಲಿ ದುಡಿದಿರುವ ನವೀನ್ ಶೆಟ್ಟಿ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಯಶಸ್ವಿ ತಂತ್ರಜ್ಞನರ ಸಿನಿಮಾವಾಗಿರುವ ʻಗಾಡ್ ಪ್ರಾಮಿಸ್ʼ ತಂಡದಲ್ಲಿ ಯಾವೆಲ್ಲಾ ಕಲಾಬಳಗದ ಇರಲಿದೆ ಅನ್ನೋದು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ. ಮಾರ್ಚ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kiccha Sudeep: ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ; ಇವರನ್ನು ನೋಡಲು ಜನವೋ ಜನ!

Kiccha Sudeep: ಕೆಲವು ದಿನಗಳ ಹಿಂದೆ ಸುದೀಪ್‌ ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಮ್ಯಾಕ್ಸ್‌ ಟ್ರೈಲರ್‌ ರಿಲೀಸ್‌ ಮಾಡಲಿದ್ದಾರೆ ಎನ್ನಲಾಗಿದೆ. ಇದೀಗ ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ (Kiccha Sudeep) ಇಂದು (ಮೇ.27) ಬೆಳಗ್ಗೆ ಭೇಟಿ ನೀಡಿದ್ದಾರೆ.

VISTARANEWS.COM


on

Kiccha Sudeep visit chamundeshwari temple
Koo

ಮೈಸೂರು: ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ (Kiccha Sudeep) ಇಂದು (ಮೇ 27) ಬೆಳಗ್ಗೆ ಭೇಟಿ ನೀಡಿದ್ದಾರೆ. ನಾಡ ಅದಿದೇವತೆ ದರ್ಶನ ಪಡೆದಿದ್ದಾರೆ ಕಿಚ್ಚ ಸುದೀಪ್. ಕಿಚ್ಚ ಸುದೀಪ್ ನೋಡಲು ಅಭಿಮಾನಿಗಳು ಸಾಗರವೇ ನೆರೆದಿತ್ತು. ಕಿಚ್ಚ ಸುದೀಪ್‌ ಕಂಡೊಡನೆ (Kiccha Sudeep visit chamundeshwari temple) ಫ್ಯಾನ್ಸ್‌ ಜೈಕಾರ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಸುದೀಪ್‌ ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಮ್ಯಾಕ್ಸ್‌ ಟ್ರೈಲರ್‌ ರಿಲೀಸ್‌ ಮಾಡಲಿದ್ದಾರೆ ಎನ್ನಲಾಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರೆಸ್ಟ್ ಆಯೋಜಿಸಿದ್ದ, ಯಕ್ಷ ಧ್ರುವ ಪಟ್ಲ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾಡುತ್ತಿದ್ದ ಕಿಚ್ಚ ಸುದೀಪ್ ತಮಗಿರುವ ತುಳುನಾಡಿನ ಕನೆಕ್ಷನ್ ಬಗ್ಗೆ ಮಾತಾಡಿದ್ದರು. ಅವರ ತಾಯಿ ತುಳುನಾಡಿನವರಾಗಿದ್ದು, ಅವರು ತುಂಬಾ ಚೆನ್ನಾಗಿ ತುಳು ಮಾತಾಡುತ್ತಾರೆ. ಆದರೆ, ತಮಗೆ ಮಾತ್ರ ಎರಡೇ ಎರಡು ತುಳು ಪದಗಳನ್ನು ಹೇಳಿಕೊಟ್ಟಿದ್ದಾರಷ್ಟೇ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Kiccha Sudeep: ʻಮ್ಯಾಕ್ಸ್ʼ ಪ್ರಿ- ಕ್ಲೈಮ್ಯಾಕ್ಸ್ ಫೋಟೊ ಲೀಕ್‌? ಬೆಂಕಿ ಬಿರುಗಾಳಿ ಅಂದ್ರು ಫ್ಯಾನ್ಸ್‌!

‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಸುದೀಪ್ (Kiccha Sudeep) ಒಪ್ಪಿಕೊಂಡಿರುವ ಸಿನಿಮಾ ಮ್ಯಾಕ್ಸ್ (MAX). ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಕಿಚ್ಚ ಸುದೀಪ್‌ ಎಕ್ಸ್‌ನಲ್ಲಿ ʻʻಮಹಾಬಲಿಪುರಂನಲ್ಲಿ ʻಮ್ಯಾಕ್ಸ್‌ʼಗಾಗಿ ಒಂದು ಸುತ್ತು. ಸುದೀರ್ಘ 10 ತಿಂಗಳ ಪ್ರಯಾಣ. ನಾನು‌ ಪ್ರತಿ ಘಳಿಗೆಯನ್ನು ಆನಂದಿಸಿದೆ. ಸೆಟ್‌ನಲ್ಲಿ ಅದ್ಭುತ ತಂಡ ಮತ್ತು ಸುಂದರ ತಾರೆಯನ್ನು ಒಳಗೊಂಡಿತ್ತು. ಧನ್ಯವಾದಗಳು ಧನು ಸರ್. ನನ್ನನ್ನು ಚೆನ್ನಾಗಿ ಹೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು, ವಿಜಯ್ ಮತ್ತು ಇಡೀ ತಂಡಕ್ಕೆ ಧನ್ಯವಾದʼʼಎಂದು ಬರೆದುಕೊಂಡಿದ್ದರು.

ಇದಕ್ಕೂ ಕೆಲವು ದಿನಗಳ ಹಿಂದೆ ಟ್ರೈಲರ್ ರಫ್ ಕಟ್ ಆಗಿರುವ ಬಗ್ಗೆ ಸುದೀಪ್ ಮಾಹಿತಿ ಹಂಚಿಕೊಂಡಿದ್ದರು. ಸುದೀಪ್‌ ಎಕ್ಸ್‌ನಲ್ಲಿ ʻʻಮ್ಯಾಕ್ಸ್ (Max) ಕ್ಲೈಮ್ಯಾಕ್ಸ್‌ನ ಪ್ರಮುಖ ಭಾಗ ಪೂರ್ಣಗೊಳಿಸಲಾಗಿದೆ. ಇಲ್ಲಿಯವರೆಗೆ ಚಿತ್ರೀಕರಿಸಿದ ಅಷ್ಟೂ ಶಾಟ್‌ಗಳನ್ನು ನೋಡಿದೆ. ಚಿತ್ರದ ಪ್ರತಿ ಬಿಟ್ ನೋಡಿ, ತಂಡದ ಎಫರ್ಟ್‌ ಕಂಡು ಸಂತೋಷವಾಗಿದೆ. ಸ್ವಲ್ಪ ಭಾಗ ಚಿತ್ರೀಕರಣ ಬಾಕಿ ಇದೆ. ಟ್ರೈಲರ್ ವೇಳೆ ರಫ್ ಕಟ್ ಸಹ ನೋಡಿದೆ ಮತ್ತು ಅದು ನನ್ನನ್ನು ರೋಮಾಂಚನಗೊಳಿಸಿತುʼʼ ಎಂದು ಬರೆದುಕೊಂಡಿದ್ದರು.

ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ವರದಿಯಾಗಿದೆ. ʻಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ ಎನ್ನಲಾಗಿದೆ.

ʻಮ್ಯಾಕ್ಸ್ʼ ಸಿನಿಮಾಕ್ಕೆ ಕನ್ನಡದ ತಾರೆಯರು ಇದ್ದಾರೆ. ಕನ್ನಡದ ಟೆಕ್ನಿಷಿಯನ್‌ಗಳೂ ಇದ್ದಾರೆ. ಹಾಗೆಯೇ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್‌ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಈ ಸಿನಿಮಾದಲ್ಲಿ ಇದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading

ಸ್ಯಾಂಡಲ್ ವುಡ್

Dhruva Sarja: ಜಿಮ್ ಟ್ರೈನರ್ ಮೇಲೆ ಹಲ್ಲೆ; ಧ್ರುವ ಸರ್ಜಾ ನೀಡಿದ ಸ್ಪಷ್ಟನೆ ಏನು?

Dhruva Sarja: ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿ ಕೊಂಡು ಪ್ರಶಾಂತ್‌ ಮೇಲೆ ಇಬ್ಬರು ಅಪರಿಚಿತರು ಬೈಕ್‌ ಮೇಲೆ ಬಂದು ದಾಳಿ ನಡೆಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಪ್ರಶಾಂತ್‌. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

Dhruva Sarja Trainer Prashanth Was Attacked First Reaction
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಜತೆಗಿದ್ದ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಭಾನುವಾರ (ಮೇ 26) ರಾತ್ರಿ ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ಹುಡುಗರ ಜತೆ ಗಲಾಟೆ (Dhruva Sarja Trainer Prashanth) ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಹಲ್ಲೆ ಬಗ್ಗೆ ಬನಶಂಕರಿ ಪೊಲೀಸರಿಗೆ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವೊಂದಕ್ಕೆ ಧ್ರುವ ಸರ್ಜಾ ಮಾಹಿತಿ ನೀಡಿ ʻʻಪ್ರಶಾಂತ್‌ ಅವರು ಕೆಡಿ ಸಿನಿಮಾ ಈವೆಂಟ್‌ನಲ್ಲಿ ನನ್ನ ಜತೆಯೇ ಇದ್ದರು. ಹೌದು, ಹಲ್ಲೆ ನಡೆದಿದ್ದು ನಿಜ. ಅವರ ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಪ್ರಶಾಂತ್ ನಮ್ ಹುಡುಗ, ಅವನ ಜತೆಗಿರುತ್ತೇನೆ. ಇದು ಮೇಲ್ನೋಟಕ್ಕೆ ಪ್ರಿ ಪ್ಲಾನ್‌ ಅನ್ನಿಸುತ್ತದೆ. ಈ ವಿಚಾರ ದೊಡ್ಡದು ಮಾಡೋದು ಬೇಡʼʼ ಎಂದಿದ್ದಾರೆ.. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಶಾಂತ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿಕೊಂಡು ಪ್ರಶಾಂತ್‌ ಮೇಲೆ ಇಬ್ಬರು ಅಪರಿಚಿತರು ಬೈಕ್‌ ಮೇಲೆ ಬಂದು ದಾಳಿ ನಡೆಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಪ್ರಶಾಂತ್‌. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ (KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು. ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಬಾಲಿವುಡ್‌ಗೆ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Dhruva Sarja:  ಧ್ರುವ ಸರ್ಜಾ ಜತೆಗಿದ್ದ ಜಿಮ್ ಟ್ರೈನರ್ ಮೇಲೆ ಮಚ್ಚಿನಿಂದ‌ ಹಲ್ಲೆ?

ಬಹುನಿರೀಕ್ಷಿತ ‘ವಾರ್-2’ ಚಿತ್ರದಲ್ಲಿ ಕನ್ನಡದ ನಟ ಬಣ್ಣ ಹಚ್ಚುತ್ತಾರೆ ಎನ್ನಲಾಗುತ್ತಿದೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಜ್ಯೂ. ಎನ್‌ಟಿಆರ್ ಸಹೋದರನ ಪಾತ್ರದಲ್ಲಿ ಧ್ರುವ ನಟಿಸುತ್ತಾರೆ ಎಂದು ಎಂದು ವರದಿಯಾಗುತ್ತಿದೆ. ಧ್ರುವ ಸರ್ಜಾ ಈ ಚಿತ್ರದಲ್ಲಿ ನಟಿಸುತ್ತಾರೆ, ಆ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್‌-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ. ಕಿಯಾರಾ ಆಡ್ವಾಣಿ ಈ ಸಿನಿಮಾ ನಾಯಕಿ. ʼವಾರ್ 2ʼ 2025ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

Continue Reading

ಸ್ಯಾಂಡಲ್ ವುಡ್

Dhruva Sarja:  ಧ್ರುವ ಸರ್ಜಾ ಜತೆಗಿದ್ದ ಜಿಮ್ ಟ್ರೈನರ್ ಮೇಲೆ ಮಚ್ಚಿನಿಂದ‌ ಹಲ್ಲೆ?

Dhruva Sarja: ವೈಯಕ್ತಿಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಗಲಾಟೆ ಆಗಿದೆ ಎನ್ನಲಾಗಿದೆ. ಸಿಟ್ಟಿನಲ್ಲಿ ಮಚ್ಚಿನಿಂದ ಪ್ರಶಾಂತ್ ಮೇಲೆ ಏರಿಯಾ ಹುಡುಗರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ ( KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು.

VISTARANEWS.COM


on

Dhruva Sarja Gym trainer prashanth attacked
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಜತೆಗಿದ್ದ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಅಟ್ಯಾಕ್ ಆಗಿದೆ ಎಂದು ವರದಿಯಾಗಿದೆ. ಭಾನುವಾರ (ಮೇ 26) ರಾತ್ರಿ ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ಹುಡುಗರ ಜತೆ ಗಲಾಟೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಸ್ಪಷ್ಟನೆ ಕೊಡಬೇಕಿದೆ. ಸದ್ಯಕ್ಕೆ ಮಚ್ಚಿನಿಂದ‌ ಪ್ರಶಾಂತ್ ಮೇಲೆ ಹಲ್ಲೆ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈಯಕ್ತಿಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಗಲಾಟೆ ಆಗಿದೆ ಎನ್ನಲಾಗಿದೆ. ಸಿಟ್ಟಿನಲ್ಲಿ ಮಚ್ಚಿನಿಂದ ಪ್ರಶಾಂತ್ ಮೇಲೆ ಸ್ಥಳೀಯ ಹುಡುಗರು ಹಲ್ಲೆ ಮಾಡಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಶಾಂತ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ (KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು. ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಬಾಲಿವುಡ್‌ಗೆ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

ಬಹುನಿರೀಕ್ಷಿತ ‘ವಾರ್-2’ ಚಿತ್ರದಲ್ಲಿ ಕನ್ನಡದ ನಟ ಬಣ್ಣ ಹಚ್ಚುತ್ತಾರೆ ಎನ್ನಲಾಗುತ್ತಿದೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಜ್ಯೂ. ಎನ್‌ಟಿಆರ್ ಸಹೋದರನ ಪಾತ್ರದಲ್ಲಿ ಧ್ರುವ ನಟಿಸುತ್ತಾರೆ ಎಂದು ಎಂದು ವರದಿಯಾಗುತ್ತಿದೆ. ಧ್ರುವ ಸರ್ಜಾ ಈ ಚಿತ್ರದಲ್ಲಿ ನಟಿಸುತ್ತಾರೆ, ಆ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್‌-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ. ಕಿಯಾರಾ ಆಡ್ವಾಣಿ ಈ ಸಿನಿಮಾ ನಾಯಕಿ. ʼವಾರ್ 2ʼ 2025ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

Continue Reading

ಸಿನಿಮಾ

Ragini Dwivedi: ರಾಗಿಣಿ ದ್ವಿವೇದಿ ಅಭಿನಯದ ʻಬಿಂಗೊʼ ಚಿತ್ರದ ಡಬ್ಬಿಂಗ್‌ ಮುಕ್ತಾಯ

Ragini Dwivedi: ರಾಗಿಣಿ ದ್ವಿವೇದಿ, ಆರ್ ಕೆ ಚಂದನ್ , ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಶ್ರವಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಿತನ್ ಹಾಸನ್ ಸಂಗೀತ ನೀಡಿರುವ ಮೂರು ಹಾಡುಗಳು ಈ ಚಿತ್ರದಲ್ಲಿದೆ. ಸದ್ಯದಲ್ಲೇ ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

VISTARANEWS.COM


on

Ragini Dwivedi Bingo Movie Dubbing complete
Koo

ಬೆಂಗಳೂರು: “ಶಂಭೋ ಶಿವ ಶಂಕರ” ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ನಿರ್ದೇಶನದ “ಬಿಂಗೊ” ಚಿತ್ರದ ಡಬ್ಬಿಂಗ್ ಮುಕ್ತಾಯಗೊಂಡಿದೆ. ಆರ್ ಕೆ ಚಂದನ್ ಹಾಗೂ ರಾಗಿಣಿ ದ್ವಿವೇದಿ (Ragini Dwivedi) ನಾಯಕ – ನಾಯಕಿಯಾಗಿ ನಟಿಸಿರುವ ಸಿನಿಮಾ ಇದು. “ಬಿಂಗೊ” ಚಿತ್ರದ ಡಬ್ಬಿಂಗ್ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೊದಲ್ಲಿ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಈ ಚಿತ್ರಕ್ಕೆ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ. ಮೇ 24ರಂದು ನಟಿ ರಾಗಿಣಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ “ಬಿಂಗೊ” ಚಿತ್ರತಂಡ ರಾಗಿಣಿ ಅವರಿಗೆ ಶುಭಾಶಯ ತಿಳಿಸಿದೆ. ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ರಾಗಿಣಿ ದ್ವಿವೇದಿ, ಆರ್ ಕೆ ಚಂದನ್ , ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಶ್ರವಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಿತನ್ ಹಾಸನ್ ಸಂಗೀತ ನೀಡಿರುವ ಮೂರು ಹಾಡುಗಳು ಈ ಚಿತ್ರದಲ್ಲಿದೆ. ಸದ್ಯದಲ್ಲೇ ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿದ್ದು, ನರಸಿಂಹ ಸಾಹಸ ನಿರ್ದೇಶನ ಮಾಡಿದ್ದಾರೆ. ಕಂಬಿ ರಾಜು ಅವರ ನೃತ್ಯ ನಿರ್ದೇಶನ ಸಿನಿಮಾಕ್ಕಿದೆ.

ಇದನ್ನೂ ಓದಿ: Ragini Dwivedi: ರಾಜವರ್ಧನ್ ‘ಗಜರಾಮ’ ಸಿನಿಮಾದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ ತುಪ್ಪದ ಬೆಡಗಿ ರಾಗಿಣಿ!

ಮೋಹನ್‌ಲಾಲ್‌ ಜತೆ ಶೂಟಿಂಗ್‌ ಶುರು ಮಾಡಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ನಟಿಸುವ ಚಾನ್ಸ್​ ಸಿಕ್ಕಿರುವುದಕ್ಕೆ ರಾಗಿಣಿ ದ್ವಿವೇದಿ ಸಖತ್​ ಖುಷಿ ಆಗಿದ್ದಾರೆ.

ಈ ಪ್ಯಾನ್‌ ಇಂಡಿಯಾ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಎವಿಎಸ್ ಸ್ಟುಡಿಯೋಸ್ ಮತ್ತು ಕನೆಕ್ಟ್ ಮೀಡಿಯಾ 200 ಕೋಟಿ ರೂ ಬಜೆಟ್‌ನಲ್ಲಿ ಸಿನಿಮಾ ಮಾಡಲಿದೆ ಎಂದು ವರದಿಯಾಗಿದೆ. ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದ್ದು, ಇದು ಏಕ್ತಾ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದೆ.

ನಂದ್ ಕಿಶೋರ್ ನಿರ್ದೇಶನದ ಈ ಚಿತ್ರ 2024ರಲ್ಲಿ ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದೊಂದು ಪೌರಾಣಿಕ ಹಾಗೂ ಫ್ಯಾಂಟಸಿ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಎಂದು ಹೇಳಿಕೊಂಡಿರುವ ನಂದಕಿಶೋರ್, ಸಾಹಸ ಪ್ರಧಾನ ದೃಶ್ಯಗಳನ್ನೂ ಹೊಂದಿರುವುದಾಗಿ ತಿಳಿಸಿದ್ದಾರೆ.

Continue Reading
Advertisement
Prajwal Revanna Case
ಪ್ರಮುಖ ಸುದ್ದಿ4 mins ago

Prajwal Revanna Case : ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಚೇತನ್​ಗೆ ಎಸ್ಐಟಿ ನೋಟಿಸ್

Yuvraj Singh
ಕ್ರೀಡೆ30 mins ago

Yuvraj Singh : ಅಪಾರ್ಟ್​ಮೆಂಟ್ ವಿತರಣೆಯಲ್ಲಿ ಮೋಸ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೋಟಿಸ್​ ಕೊಟ್ಟ ಯುವರಾಜ್ ಸಿಂಗ್

Kavya Maran
ಪ್ರಮುಖ ಸುದ್ದಿ55 mins ago

Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

Viral Video
ದೇಶ1 hour ago

Viral Video: ಬೆಂಗಳೂರಿನಲ್ಲಷ್ಟೇ ಅಲ್ಲ, ಮೌಂಟ್ ಎವರೆಸ್ಟ್ ನಲ್ಲೂ ಈಗ ಟ್ರಾಫಿಕ್ ಜಾಮ್!!

Samsung Galaxy F55 5G Smartphone Released With Exciting Classy Veegan Leather Design
ದೇಶ1 hour ago

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Kannada New Movie
ಕರ್ನಾಟಕ1 hour ago

Kannada New Movie: ʼಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿʼ ಚಿತ್ರದ ಅನಿಮೇಷನ್‌ ಟೀಸರ್‌ ರಿಲೀಸ್‌

Golden Star Ganesh Krishnam Pranaya Sakhi movie first song release in Mysore
ಕರ್ನಾಟಕ1 hour ago

Golden Star Ganesh: ಮೊದಲ ಹಾಡಿನಲ್ಲೇ ಮೋಡಿ ಮಾಡಿದ ʼಕೃಷ್ಣಂ ಪ್ರಣಯ ಸಖಿʼ

Mandya News
ಪ್ರಮುಖ ಸುದ್ದಿ1 hour ago

Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

11th Annual Mahotsav of Sri Annapurneswari Temple in Belagavi from 29th May
ಬೆಳಗಾವಿ1 hour ago

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Prajwal Revanna Case
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್‌ ಬಂದ್ರೆ ಎಸ್‌ಐಟಿ ಮುಂದೆ ನಾನೂ ಹಾಜರಾಗುವೆ: ಆರೋಪಿ ನವೀನ್‌ ಗೌಡ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ6 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌