Kannada Movie review : ಶಾಖಾಹಾರಿ: ಶಾಕಾಹಾರಿಗಳಷ್ಟೇ ಅಲ್ಲ, ಮಾಂಸಾಹಾರಿಗಳೂ ನೋಡಬಹುದು! - Vistara News

ಸಿನಿಮಾ

Kannada Movie review : ಶಾಖಾಹಾರಿ: ಶಾಕಾಹಾರಿಗಳಷ್ಟೇ ಅಲ್ಲ, ಮಾಂಸಾಹಾರಿಗಳೂ ನೋಡಬಹುದು!

ಹೊಸತನದೊಂದಿಗೆ ಒಂದು ಮಿಸ್ಟರಿ ಕಥೆಯನ್ನು ಹದವಾಗಿ ಒಂದು ಪ್ರದೇಶಕ್ಕೆ ಹೊಂದಿಸಿ ಚೆಂದದೊಂದು ರೋಚಕ ಚಿತ್ರವಾಗಿಸಿ ಈ ‘ಶಾಖಾಹಾರಿ’ ಚಿತ್ರತಂಡ ಗೆದ್ದಿದೆ ಅನ್ನಬಹುದು.

VISTARANEWS.COM


on

Shakahari Kannada movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವರಾಜ್​ ಡಿ. ಎನ್​. ಎಸ್​

ಈ ಚಿತ್ರದ ಟೈಟಲ್ ಮೊದಮೊದಲಿಗೆ ಆಕರ್ಷಿಸಲಿಲ್ಲ. (Kannada Movie review) ಆದರೆ ಟ್ರೈಲರ್ ಇದು ಬೇರೆಯದೇ ಆಯಾಮದ ಸಿನಿಮಾ ಎನ್ನುವುದರ ಸುಳಿವು ನೀಡಿತ್ತು, ಪ್ರೇಕ್ಷಕರು ಆ ಸುಳಿವಿನ ಆಧಾರದ ಮೇಲೆ ಎಂಥೆಂಥ ಕತೆ ಕಟ್ಟಿಕೊಂಡಿದ್ದರೂ ಅದೆಲ್ಲವನ್ನೂ ಮೀರಿದ ಕಥೆ ಹೇಳಿ ಚಿತ್ರ ತಣಿಸಿದೆಯಾ, ಟ್ರೈಲರ್ ಮಾಡಿದ ಪ್ರಾಮಿಸಿಂಗ್ ಉಳಿಸಿಕೊಂಡಿದೆಯಾ ಅನ್ನೋದನ್ನ ನೋಡುವುದಾದರೆ…ಹೌದು ಎನ್ನಬಹುದು.

ಸಿನಿಮಾ ಗೆದ್ದಿದೆಯಾ?

ಸುಪ್ರಸಿದ್ಧ ಅನಿಸಿಕೊಂಡಿರುವ ಸಿದ್ಧಸೂತ್ರಗಳನ್ನು ಕೈಬಿಟ್ಟು ಹೊಸತೇನೋ ಮಾಡಲು ಹೊರಟ ಪ್ರಯತ್ನದಲ್ಲೇ ಸಿನಿಮಾ ಅರ್ಧ ಗೆದ್ದಂತೆ. ಅಂತಹ ಪ್ರಯತ್ನದಲ್ಲಿ ಹೊಸತನದೊಂದಿಗೆ ಒಂದು ಮಿಸ್ಟರಿ ಕಥೆಯನ್ನು ಹದವಾಗಿ ಒಂದು ಪ್ರದೇಶಕ್ಕೆ ಹೊಂದಿಸಿ ಚೆಂದದೊಂದು ರೋಚಕ ಚಿತ್ರವಾಗಿಸಿ ಈ ‘ಶಾಖಾಹಾರಿ’ ಚಿತ್ರತಂಡ ಗೆದ್ದಿದೆ ಅನ್ನಬಹುದು.

ಯಾಕೆ ಈ ಸಿನಿಮಾ ನೋಡಬೇಕು?

ಮೊದಲೇ ಹೇಳಿದಂತೆ ಇಲ್ಲಿ ನಿರ್ದೇಶಕರು ಯಾವುದೇ ಕಮರ್ಷಿಯಲ್ ಅಂಶಗಳಿಗೆ ಜೋತು ಬೀಳದೆ ತಮಗೇನು ತಿಳಿದಿದೆಯೋ, ತಾವೇನು ಹೇಳಬೇಕು ಅಂದುಕೊಂಡಿದ್ದರೋ ಆ ಕಂಟೆಂಟ್ ಮೇಲೆ ನಂಬಿಕೆಯಿಟ್ಟು ತಮ್ಮಿಂದ ಸಾಧ್ಯವಾದಷ್ಟೂ ಪ್ರಯತ್ನಪಟ್ಟು ಶ್ರದ್ಧೆಯಿಂದ ಚಿತ್ರ ಕಟ್ಟಿಕೊಟ್ಟಿದ್ದಾರೆ.

ಸಿನಿಮಾದ ಶಾಖ ಸರಿಯಾಗಿ ತಟ್ಟೋದು ಸೆಕೆಂಡ್ ಹಾಫ್‌ನಲ್ಲಿ. ಚಿತ್ರ ಶುರುವಾಗಿ ಮೊದಲಾರ್ಧದಲ್ಲಿ ಸಿನಿ ಪ್ರೇಮಿಯ ತಾಳ್ಮೆ ಪರೀಕ್ಷೆ ಮಾಡೋದು ನಿಜ. ಆದರೆ ಸೆಕೆಂಡ್ ಹಾಫ್ ಮತ್ತು ಕ್ಲೈಮ್ಯಾಕ್ಸ್ ಈ ಸಿನಿಮಾದಲ್ಲಿ ಕಂಟೆಂಟ್ ಇದೆ. ಅದನ್ನು ನೋಡಿದಾಗ ನಿರ್ದೇಶಕರಲ್ಲಿ ಪ್ರತಿಭೆ ಇದೆ ಅನಿಸಿಬಿಡುತ್ತದೆ. ಮೊದಲಾರ್ಧದ ಕತೆ ಇನ್ನೂ ಚೂರು ಚೂರುಕಾಗಿ ಸೂಕ್ಷ್ಮ ವಿಚಾರಗಳಲ್ಲಿ ಗಮನ ಹರಿಸಬಹುದಿತ್ತು. ನಿರ್ದೇಶಕರು ಹೇಳ ಹೊರಟ ವಿಷಯ ಬೇರೆಯದೇ ಆಗಿದ್ದರಿಂದ ಅದರ ಕುರಿತು ತಲೆಕೆಡಿಸಿಕೊಂಡಿಲ್ಲವೇನೊ ಅನಿಸೋದು ಸಹಜ. ಆದರೆ ಅವರು ಹೇಳಹೊರಟ ಮುಖ್ಯ ವಿಷಯ ಮುಖ್ಯ ಪಾತ್ರದಲ್ಲಿ ಗಟ್ಟಿತನವಿದೆ ಅಂತ ಹೇಳಬಹುದು.

ಇದನ್ನೂ ಓದಿ : Actor Darshan: ಹೌದು ನಾನು ಬ್ಯಾಡ್‌ ಬಾಯ್‌, ವಿವಾದಕ್ಕೆ ಕೇರ್‌ ಮಾಡಲ್ಲ ಎಂದ ದರ್ಶನ್‌!

‘ಸೌಗಂಧಿಕ’ ಹಾಗೂ ‘ಎಲ್ಲೋ ಸುರಿದ ಮಳೆ’ ಹಾಡುಗಳು ಸುಮಧುರ ಎನ್ನುವುದನ್ನು ಥಿಯೇಟರ್‌ನಲ್ಲಿ ಮತ್ತೆ ಸಾಬೀತುಪಡಿಸಿವೆ. ‘ಎಲ್ಲೋ ಸುರಿದ ಮಳೆ’ ಹಾಡು ಅನ್ನ ಮಾಡುವಾಗ ನೀರು ಕುದಿವ ಮುಂಚೆಯೇ ಅಕ್ಕಿ ಹಾಕಿಬಿಟ್ಟರಲ್ಲ ಅಂದುಕೊಳ್ಳುವಂತೆ ಮಾಡಿ WRONG PLACEMENT ಅನಿಸುತ್ತದೆ. ಆದರೆ ಕೊನೆಗೆ ಅದೆಲ್ಲವನ್ನೂ ಮರೆಸಿ ವಾವ್ಹ್‌, ಇಟ್ಸ್ ಬ್ರಿಲಿಯಂಟ್ ಅನಿಸಿಕೊಳ್ಳುವಂಥ ತಾಕತ್ತು ಚಿತ್ರದ ಕೊನೆಯ ಇಪ್ಪತ್ತು ನಿಮಿಷಕ್ಕಿದೆ. ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ತಂತ್ರಗಾರಿಕೆಯೂ ಅಚ್ಚುಕಟ್ಟಾಗಿದೆ. ಈ ಸಿನಿಮಾಗೆ ಮೂರು ಕ್ಲೈಮ್ಯಾಕ್ಸ್. ಮೂರಕ್ಕೆ ಮೂರು ಪಾಸ್ ಆಗಿವೆ. ಸಿನಿ ರಸಿಕರಿಗೆ ಸಿನಿಮಾ ಇಷ್ಟ ಆಗುತ್ತೆ. ಸುಬ್ಬಣ್ಣ ಹಾಗೂ ಸುಭದ್ರಾ ನವಿರಾದ ಪ್ರೇಮ ಕಾವ್ಯ ಸಿನಿಮಾ ನೋಡಿ ಹೊರಬಂದಮೇಲೂ ಕಾಡೋದಂತು ಖಂಡಿತ. ಚಿತ್ರದಲ್ಲಿ ರಂಗಾಯಣ ರಘು ಅವರು ಹಾಕಿರುವ ಅಷ್ಟೂ ಪಟ್ಟುಗಳು ತುಂಬಾ ಇಷ್ಟ ಆಗುತ್ತವೆ. ಅಂತಹ ಗಂಭೀರ ಸನ್ನಿವೇಶದಲ್ಲೂ ಪ್ರೇಕ್ಷಕರು ಮೈಮರೆತು ಕೈತಟ್ಟಿ ನಗುವಂತೆ ಮಾಡೋದು ಸುಲಭದ ಮಾತಲ್ಲ. ಅಲ್ಲಿ ಕಲಾವಿದರು ನಿರ್ದೇಶಕ, ಬರಹಗಾರನ ಸಂಭಾಷಣೆ ಎಲ್ಲರ ಶ್ರಮ ಎದ್ದು ಕಾಣುತ್ತದೆ.

ತಾರಾಗಣದಲ್ಲಿ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ವಿನಯ್, ನಿಧಿ ಹೆಗ್ಡೆ, ಸುಜಯ್ ಶಾಸ್ತ್ರಿ, ಯತೀಶ್ ಕೊಳ್ಳೆಗಾಲ, ವಾಸನೆ ಹಿಡಿಯೋನ ಪಾತ್ರದಲ್ಲಿ ಮೋಹನ್ ಶೆಣೈ ಮುಂತಾದವರಿದ್ದಾರೆ. ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿ ಬಂದಿವೆ.

ಅದೇನ್ ಕಥೆ? ಅದ್ಹೇಗೆ ಮೂರ್ ಮೂರ್ ಕ್ಲೈಮ್ಯಾಕ್ಸ್ ಅಂತೀರಾ?:

ಕತೆಯ ಕುರಿತು ಹೇಳೋದು ಬೇಡ, ಕೇಳೋದೂ ಬೇಡ. ಇಷ್ಟಷ್ಟೆ ಹೇಳ್ತಿನಿ. ಇದು ಸೈಕೊ ಕಿಲ್ಲರ್ ಸಿನಿಮಾ ಅಲ್ಲ. ಸಿನಿಮಾಸಕ್ತರೂ ಸೀದಾ ಹೋಗಿ ಸಿನಿಮಾವನ್ನು ಥಿಯೇಟರಲ್ಲೆ ನೋಡಿ. ಆ ರೋಚಕ ಅನುಭವವನ್ನು ಅನುಭವಿಸಿ. U/A ಸೆನ್ಸಾರ್ ಸರ್ಟಿಫಿಕೇಟ್ ಪಡೆದಿರುವ ಕ್ರೈಮ್ ಥ್ರಿಲ್ಲರ್ ಕತೆಯ ಶಾಖಾಹಾರಿ ಸಿನಿಮಾವನ್ನು ಶಾಖಾಹಾರಿಗಳಷ್ಟೆ ಅಲ್ಲ, ಮಾಂಸಾಹಾರಿ ಪ್ರೇಕ್ಷಕರೂ ನೋಡಬಹುದು.

ಇದು ನೀರ್ದೇಶಕರ ಚೊಚ್ಚಲ ಸಿನಿಮಾವಾದರೂ ಸಿನಿಮಾ ವಿದ್ಯಾರ್ಥಿಗಳು ಇಂತಹ ಸಿನಿಮಾಗಳನ್ನು ತಪ್ಪದೇ ವೀಕ್ಷಿಸುವುದು ಒಳ್ಳೆಯದು. ಯಾಕೆಂದರೇ ಓವರ್ ಕಮರ್ಷಿಯಲ್ ಸಿನಿಮಾಗಳಿಂದ ಪ್ರೇರಣೆ ಪಡೆದು ಎಂಥೆಂಥದ್ದೋ ಕತೆ ಮಾಡಿ ಅತ್ತ ವಿಷಯವನ್ನೂ ತಲುಪಲಾಗದೆ ಇತ್ತ ತಂತ್ರಗಾರಿಯಲ್ಲೂ ಯಶಸ್ವಿಯಾಗದೆ ಪೇಲವತನಕ್ಕೆ ಸಾಕ್ಷಿಯಾಗಿ ಸೋಲುಣ್ಣುವ ಬದಲು ಇಂತಹ ಹೊಸ ಪ್ರಯೋಗಳನ್ನು ಗಮನಿಸಿ, ಅರ್ಥೈಸಿಕೊಂಡು, ಪ್ರೇಕ್ಷರನ್ನು ರಂಜಿಸುವ ಪ್ರಯತ್ನದಲ್ಲಿ ಹೊಸತೇನೋ ಪ್ರಯತ್ನಿಸಿ ಗೆಲ್ಲಬಹುದು ಅನ್ನುವ ನಂಬಿಕೆ ಇರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸಿನಿಮಾ

Salaar Movie: ಕಿರುತೆರೆಯಲ್ಲಿ ‘ಸಲಾರ್’ಗೆ ಕಡಿಮೆ ಟಿಆರ್‌ಪಿ: ಪ್ಲಾಪ್‌ ಆಗಲು ಕಾರಣವೇನು?

Salaar Movie: ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾವು ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂ. ಕಮಾಯಿ ಮಾಡಿತ್ತು.  ಇದಾದ ಬಳಿಕ ಒಟಿಟಿಗೂ ಲಗ್ಗೆ ಇಟ್ಟಿತ್ತು. ಇದಾದ ಮೇಲೆ ಈ ಸಿನಿಮಾವು ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಸುವರ್ಣ ವರ್ಲ್ಡ್ ಪ್ರೀಮಿಯರ್ ಆಗಿದೆ. ಇನ್ನೊಂದು ಕಡೆ ಒಟಿಟಿಯಲ್ಲೂ ‘ಸಲಾರ್’ ರಿಲೀಸ್ ಆದ ಬಹಳ ದಿನಗಳ ಬಳಿಕ ಟಿವಿಯಲ್ಲಿ ರಿಲೀಸ್ ಆಗಿತ್ತು. ಈ ಕಾರಣಕ್ಕೆ ಟಿವಿಯಲ್ಲಿ ಜನ ನೋಡಲು ಮನಸ್ಸು ಮಾಡಿಲ್ಲ ಎಂದು ಹೇಳಲಾಗುತ್ತಿದೆ.

VISTARANEWS.COM


on

Salaar Movie Fails To Get Expected TRP Star Suvarna
Koo

ಬೆಂಗಳೂರು: ವಿಶ್ವ-ವಿಖ್ಯಾತಿ ಪಡೆದ ʻಕಾಂತಾರʼ, ʻಹೊಯ್ಸಳʼ, ʻಜೇಮ್ಸ್ʼ ನಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದ ಸುವರ್ಣ ವಾಹಿನಿ (Star Suvarna)ಯಲ್ಲಿ 2023ರ ಬ್ಲಾಕ್ ಬಸ್ಟರ್ ಹಿಟ್ “ಸಲಾರ್” ಸಿನಿಮಾ (Salaar Movie) ಪ್ರಸಾರ ಕಂಡಿತ್ತು. ಆದರೆ ಸಿನಿಮಾ ಟಿವಿಯಲ್ಲಿ ನೀರಸ ಪ್ರತಿಕ್ರಿಯೆ ನೀಡಿದೆ. ಸಿನಿಮಾ ಟಿವಿಯಲ್ಲಿ ಗೆಲ್ಲಬಹುದು ಎಂಬ ನಿರೀಕ್ಷೆಯಿತ್ತು. ಕೇವಲ 6.5 ಟಿಆರ್‌ಪಿ ಗಿಟ್ಟಿಸಿಕೊಂಡಿದೆ. ಈ ಮೂಲಕ ಕಿರುತೆರೆಯಲ್ಲಿ ದೊಡ್ಡ ಫ್ಲಾಪ್ ಆಗಿದೆ ಸಲಾರ್‌.

ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾವು ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂ. ಕಮಾಯಿ ಮಾಡಿತ್ತು.  ಇದಾದ ಬಳಿಕ ಒಟಿಟಿಗೂ ಲಗ್ಗೆ ಇಟ್ಟಿತ್ತು. ಇದಾದ ಮೇಲೆ ಈ ಸಿನಿಮಾವು ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಸುವರ್ಣ ವರ್ಲ್ಡ್ ಪ್ರೀಮಿಯರ್ ಆಗಿದೆ. ಆದರೆ ಅಷ್ಟಾಗಿ ಕಿರುತೆರೆಯಲ್ಲಿ ರೆಸ್ಪಾನ್ಸ್‌ ಸಿಕ್ಕಿಲ್ಲ. ಥಿಯೇಟರ್‌ನಲ್ಲಿ ಬಹುತೇಕ ಮಂದಿ ‘ಸಲಾರ್’ ಸಿನಿಮಾ ವೀಕ್ಷಣೆ ಮಾಡಿದ್ದರು. ಇನ್ನೊಂದು ಕಡೆ ಒಟಿಟಿಯಲ್ಲೂ ‘ಸಲಾರ್’ ರಿಲೀಸ್ ಆದ ಬಹಳ ದಿನಗಳ ಬಳಿಕ ಟಿವಿಯಲ್ಲಿ ರಿಲೀಸ್ ಆಗಿತ್ತು. ಈ ಕಾರಣಕ್ಕೆ ಟಿವಿಯಲ್ಲಿ ಜನ ನೋಡಲು ಮನಸ್ಸು ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಐಪಿಎಲ್ ಪಂದ್ಯಗಳು ನಡೆಯುತ್ತಿರುವುದರಿಂದ ಕ್ರಿಕೆಟ್ ಪಂದ್ಯಗಳನ್ನೇ ಹೆಚ್ಚು ನೋಡುತ್ತಿದ್ದಾರೆ. ಇನ್ನೊಂದು ಕಡೆ ಆಂಧ್ರದಲ್ಲಿ ಚುನಾವಣೆಯಿದೆ. ಈ ಕಾರಣಕ್ಕೆ ಜನರ ಗಮನ ಬೇರೆ ಕಡೆಗೆ ಇದೆ ಎಂದೂ ವರದಿಯಾಗಿದೆ. ಆದರೆ ಮಹೇಶ್‌ ಬಾಬು ಅವರ ʻಗುಂಟೂರು ಖಾರಂʼ ಹಾಗೂ ನಾಗಾರ್ಜು ನಟನೆಯ ‘ನಾ ಸಾಮಿ ರಂಗ’ ಸಿನಿಮಾಗಳಿಗೆ ಥಿಯೇಟರ್‌ಗಳಲ್ಲಿ ಅಷ್ಟಾಗಿ ರೆಸ್ಲಾನ್ಸ್‌ ಇಲ್ಲವಿದ್ದರೂ ಕಿರುತೆರೆಯಲ್ಲಿ ಒಳ್ಳೆಯ ಟಿಆರ್‌ಪಿ ಕಂಡಿತ್ತು.

ಇದನ್ನೂ ಓದಿ: Salaar Movie: ಕಿರುತೆರೆಗೆ ಬಂದೇ ಬಿಡ್ತು ಬ್ಲಾಕ್ ಬಸ್ಟರ್ ಸಿನಿಮಾ ‘ಸಲಾರ್’!

ʻಸಲಾರ್‌ʼವನ್ನು ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಿಸಿದೆ. ಇನ್ನು ಈ ಸಿನಿಮಾದ ಹಾಡುಗಳು ಅದ್ಭುತ ರೀತಿಯಲ್ಲಿ ಮೂಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು.

ಸಲಾರ್‌ʼ ಒಟಿಟಿ ಹಕ್ಕನ್ನು ನೆಟ್‌ಫ್ಲಿಕ್ಸ್‌ ಬರೋಬ್ಬರಿ 160 ಕೋಟಿ ರೂ.ಗೆ ಪಡೆದುಕೊಂಡಿತ್ತು. ಈ ಚಿತ್ರದಲ್ಲಿ ಮಾಲಿವುಡ್‌ ಸೂಪರ್‌ ಸ್ಟಾರ್‌, ಬಹುಭಾಷಾ ನಟ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು, ಈಶ್ವರಿ ರಾವ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ರವಿ ಬಸ್ರೂರು ಸಂಗೀತ ನೀಡಿದ್ದಾರೆ. ʼಕೆಜಿಎಫ್‌ʼ ಸರಣಿ ಮತ್ತು ʼಕಾಂತಾರʼ ಚಿತ್ರಗಳ ಬಹುದೊಡ್ಡ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್‌ ʼಸಲಾರ್‌ʼ ಮೂಲಕ ಇನ್ನೊಂದು ಗೆಲುವು ದಾಖಲಿಸಿತ್ತು. ‘ಉಗ್ರಂ’ ಕಥೆಯನ್ನೇ ಸಾಕಷ್ಟು ಬದಲಾವಣೆಯೊಂದಿಗೆ ಬಹಳ ದೊಡ್ಡಮಟ್ಟದಲ್ಲಿ ನೀಲ್ ಕಟ್ಟಿಕೊಟ್ಟಿದ್ದರು ಆದರೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ: Salaar Movie: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಸಲಾರ್‌ʼ; 625 ಕೋಟಿ ಗಳಿಕೆ

ಎರಡನೇ ಪಾರ್ಟ್‌ ಯಾವಾಗ?

ʼಸಲಾರ್‌ʼ ಎರಡು ಭಾಗಗಳಲ್ಲಿ ತಯಾರಾಗಿದೆ. ನೋಡುಗರಲ್ಲಿ ಕುತೂಹಲದ ಬೀಜ ಬಿತ್ತಿ ಮೊದಲ ಪಾರ್ಟ್‌ ಕೊನೆಗೊಂದಿದೆ. ಹೀಗಾಗಿ ಎರಡನೇ ಭಾಗಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಎರಡನೇ ಭಾಗ ಯಾವಾಗ ತೆರೆಗೆ ಬರಲಿದೆ ಎನ್ನುವ ಬಗ್ಗೆ ಚಿತ್ರತಂಡ ಇದುವರೆಗೆ ಘೋಷಿಸಿಲ್ಲ.

Continue Reading

ಒಟಿಟಿ

Ajay Devgn: ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗ್ತಾ ಇದೆ ಅಜಯ್‌ ದೇವಗನ್‌ ʻಶೈತಾನ್ʼ ಸಿನಿಮಾ

Ajay Devgn: ʻಶೈತಾನ್’ ಗುಜರಾತಿ ಚಿತ್ರದ ‘ವಾಶ್’ ಶೀರ್ಷಿಕೆಯ ರಿಮೇಕ್ ಆಗಿದೆ. ‘ಶೈತಾನ್’ ಬ್ಲಾಕ್ ಮ್ಯಾಜಿಕ್ ಸುತ್ತ ಕಥೆ ಇದೆ. ಎರಡು ದಶಕಗಳಿಗೂ ಹೆಚ್ಚು ಸಮಯದ ನಂತರ ಬಾಲಿವುಡ್‌ಗೆ ಮರಳಿರುವ ಜ್ಯೋತಿಕಾ ಅವರು ʻಶೈತಾನ್ʼ ಸಿನಿಮಾ ಮೂಲಕ ಭರ್ಜರಿ ಜಯಭೇರಿ ಭಾರಿಸಿದ್ದರು. ಇದು ಜ್ಯೋತಿಕಾ ಅವರ ಪಾಲಿಗೆ 100 ಕೋಟಿ ರೂ. ಕ್ಲಬ್‌ ಸೇರಿದ ಮೊದಲ ಹಿಂದಿ ಸಿನಿಮಾ ಆಗಿತ್ತು.

VISTARANEWS.COM


on

Ajay Devgn 'Shaitaan' to stream on OTT
Koo

ಬೆಂಗಳೂರು:  ಅಜಯ್ ದೇವಗನ್ (Ajay Devgn) ಅವರ ಸೂಪರ್ ನ್ಯಾಚುರಲ್ ಥ್ರಿಲ್ಲರ್ ʻಶೈತಾನ್ʼ (Shaitaan box office ) ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂ. ಕ್ಲಬ್ ಪ್ರವೇಶಿಸಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಶೈತಾನ್‌ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಅಜಯ್ ದೇವಗನ್, ಆರ್ ಮಾಧವನ್ (R Madhavan) ಮತ್ತು ಜ್ಯೋತಿಕಾ ( Jyotika) ಅಭಿನಯದ ಚಿತ್ರ ಮೇ 4 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರ ʻಫೈಟರ್ʼ ಮತ್ತು ಶಾಹಿದ್ ಕಪೂರ್ ಮತ್ತು ಕೃತಿ ಸನೂನ್ ಅಭಿನಯದ ʻತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾʼ (Teri Baaton Mein Aisa Uljha Jiya) ಬಳಿಕ ಈ ವರ್ಷ ಒಳ್ಳೆಯ ಮೈಲೇಜ್‌ ನೀಡಿದ ಮೂರನೇ ಹಿಂದಿ ಸಿನಿಮಾವಾಗಿ ಶೈತಾನ್‌ ಹೊರಹೊಮ್ಮಿತ್ತು. ಶೈತಾನ್‌ ತೆರೆ ಕಂಡ ಬಳಿಕ ಒಟ್ಟೂ 149.49 ಕೋಟಿ ರೂ. ಗಳಿಕೆ ಕಂಡಿತ್ತು. ಅಜಯ್ ದೇವಗನ್ ಅವರ ಸತತ ಮೂರನೇ ಸಕ್ಸೆಸ್‌ ಸಿನಿಮಾ ಇದಾಗಿದೆ.

ʻಶೈತಾನ್’ ಗುಜರಾತಿ ಚಿತ್ರದ ‘ವಾಶ್’ ಶೀರ್ಷಿಕೆಯ ರಿಮೇಕ್ ಆಗಿದೆ. ‘ಶೈತಾನ್’ ಬ್ಲಾಕ್ ಮ್ಯಾಜಿಕ್ ಸುತ್ತ ಕಥೆ ಇದೆ. ಎರಡು ದಶಕಗಳಿಗೂ ಹೆಚ್ಚು ಸಮಯದ ನಂತರ ಬಾಲಿವುಡ್‌ಗೆ ಮರಳಿರುವ ಜ್ಯೋತಿಕಾ ಅವರು ʻಶೈತಾನ್ʼ ಸಿನಿಮಾ ಮೂಲಕ ಭರ್ಜರಿ ಜಯಭೇರಿ ಭಾರಿಸಿದ್ದರು. ಇದು ಜ್ಯೋತಿಕಾ ಅವರ ಪಾಲಿಗೆ 100 ಕೋಟಿ ರೂ. ಕ್ಲಬ್‌ ಸೇರಿದ ಮೊದಲ ಹಿಂದಿ ಸಿನಿಮಾ ಆಗಿತ್ತು.

ಇದನ್ನೂ ಓದಿ: Ajay Devgn:‌ ಕನ್ನಡಿಗನ ಕಥೆ ಕದ್ದರಾ ಅಜಯ್‌ ದೇವಗನ್‌? ‘ಮೈದಾನ್’ ಚಿತ್ರಕ್ಕೆ ಕೋರ್ಟ್ ತಡೆ!

ಅಜಯ್ ದೇವಗನ್ ಹಾಗೂ ಆರ್ ಮಾಧವನ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ‘ಶೈತಾನ್’ ಚಿತ್ರಕ್ಕಾಗಿ ಒಂದಾಗಿ ಗಮನ ಸೆಳೆದಿದ್ದರು. ಮಾಧವನ್ ಅವರು ಮಾಂತ್ರಿಕನ ಪಾತ್ರದಲ್ಲಿ ಗಮನ ಸೆಳೆದಿದ್ದರು.

2023ರಲ್ಲಿ ರಿಲೀಸ್ ಆದ ‘ವಶ್’ ಹೆಸರಿನ ಗುಜರಾತಿ ಸಿನಿಮಾದ ರಿಮೇಕ್ ಆಗಿ ‘ಶೈತಾನ್’ ಮೂಡಿ ಬಂದಿತ್ತು. ಅಜಯ್ ದೇವಗನ್ ಜೊತೆ ಜ್ಯೋತಿಕಾ, ಆರ್​ ಮಾಧವನ್ ಪ್ರಮುಖ ಪಾತ್ರ ಮಾಡಿದ್ದರು. ದೇವಗನ್ ಫಿಲ್ಮ್ಸ್, ಜಿಯೋ ಸ್ಟುಡಿಯೋ ಹಾಗೂ ಪನೋರಮಾ ಸ್ಟುಡಿಯೋ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿತ್ತು.

Continue Reading

ಸ್ಯಾಂಡಲ್ ವುಡ್

Kannada New Movie: ‘ ರಂಗಸ್ಥಳ’ ಸಿನಿಮಾಗೆ ಮಲಯಾಳಂನ ಖ್ಯಾತ ನಟ ಎಂಟ್ರಿ

Kannada New Movie: ಇನ್ನು ಈ ಚಿತ್ರ ನಿರ್ದೇಶನ ಮಾಡುತ್ತಿರುವ ಯುವ ಪ್ರತಿಭೆ ಈಶ್ವರ್ ನಿತಿನ್ ಪ್ರಥಮ ಪ್ರಯತ್ನ ಇದಾಗಿದೆ. ಡೆಂಟಲ್ ವಿದ್ಯಾರ್ಥಿ ಆಗಿದ್ದ ನಿತಿನ್ , ಎಲ್. ವಿ. ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದು ಒಂದಷ್ಟು ಕಿರು ಚಿತ್ರ , ಹ್ಯಾಡ್ ಫಿಲಂ ನಲ್ಲಿ ವರ್ಕ್ ಮಾಡುವ ಮೂಲಕ ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ನಾಯಕನ ಒಬ್ಬ ಯಕ್ಷಗಾನ ಕಲಾವಿದ ಹಾಗೂ ನಾಯಕಿ ವೈಲ್ಡ್ ಲೈಫ್ ಫೋಟೋಗ್ರಾಫರ್. ಹಾಗೆಯೇ ಮಲಯಾಳಂನ ಖ್ಯಾತ ನಟ ಮನೋಜ್. ಕೆ. ಜಯನ್ ಒಂದು ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

VISTARANEWS.COM


on

Kannada New Movie Rangasthala movie
Koo

ಬೆಂಗಳೂರು: ಚಂದನವನಕ್ಕೆ ಯುವಕರ ಬಳಗವು ಪೂರ್ವ ತಯಾರಿಯೊಂದಿಗೆ ಒಂದು ಕಂಪನಿಯ ಮಾದರಿಯಲ್ಲಿ ತಂಡವನ್ನು ಕಟ್ಟಿಕೊಂಡು ಚಿತ್ರ (Kannada New Movie) ನಿರ್ಮಾಣಕ್ಕೆ ಮುಂದಾಗಿದೆ. ಜೀವನವೇ ಒಂದು ರಂಗ ಪ್ರಪಂಚ ಅಲ್ಲಿ ಎಲ್ಲಾ ರೀತಿಯ ಏಳು, ಬೀಳುಗಳು, ಪಾತ್ರಧಾರಿಗಳು ಕಣ್ಣ ಮುಂದೆ ಹಾದು ಹೋಗುತ್ತಾರೆ. ಅಂತಹದ್ದೇ ಒಂದು ವಿಭಿನ್ನ ಕಥೆಯ ಮೂಲಕ ʻಅಘೋರ್ ಮೋಶನ್ ಪಿಚ್ಚರ್ಸ್ʼ ಅಡಿಯಲ್ಲಿ ಡಾ. ರೇವಣ್ಣ ನಿರ್ಮಾಣದ ‘ರಂಗಸ್ಥಳ ‘ ಎಂಬ ನೂತನ ಚಿತ್ರದ ಟೈಟಲ್ ಲಾಂಚ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡ ಮಂಜುನಾಥ್ , ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು. ಬಹುತೇಕ (manoj jayan) ಯುವ ಪ್ರತಿಭೆಗಳ ತಂಡ ಸೇರಿಕೊಂಡು ಸಿದ್ಧಪಡಿಸುತ್ತಿರುವ ಈ ಚಿತ್ರದ ಪತ್ರಿಕಾಗೋಷ್ಠಿಯನ್ನ MMB ಲೆಗೆಸಿ ಆಯೋಜಿಸಲಾಗಿದ್ದು , ಮಾಧ್ಯಮದವರ ಮುಂದೆ ಚಿತ್ರ ತಂಡ ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾದರು.

ಈ ಚಿತ್ರದ ನಿರ್ಮಾಪಕ ಡಾ. ರೇವಣ್ಣ ಮಾತನಾಡಿ ʻʻನಾನು ಮೂಲತಃ ರೈತ ಕುಟುಂಬದಿಂದ ಬಂದವನು, ವಿದ್ಯಾಭ್ಯಾಸದಲ್ಲಿ ಹೆಚ್ಚು ಗಮನ ಇಲ್ಲದಿದ್ದರೂ ಮನೆಯವರ ಒತ್ತಾಯದ ಮೇರೆಗೆ ಮುಗಿಸಿ ಡಿಗ್ರಿ ಮುಗಿಸಿಕೊಂಡೆ. ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನನ್ನ ಎತ್ತರವನ್ನು ಗಮನಿಸಿದಂತಹ ಹಿರಿಯರೊಬ್ಬರು ನನಗೆ ವಾಲಿಬಾಲ್ ತಂಡಕ್ಕೆ ಸೇರಿಸಿದರು. ನಂತರ ನಾನು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೂ ಆಡಿ ಪ್ರಶಸ್ತಿಯನ್ನು ಪಡೆದೆ. ನನ್ನ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿಯು ಸಿಕ್ಕಿತು. ಸಿನಿಮಾ ಬಗ್ಗೆ ನಮಗೇನು ಹೆಚ್ಚು ಒಲವಿಲ್ಲ ಆದರೆ ನನ್ನ ಇಬ್ಬರು ಮಕ್ಕಳಾದ ವಿನೋದ್ ಕುಮಾರ್ ಜೈ ಕೀರ್ತಿ ಹಾಗೂ ವಿನಯ್ ಕುಮಾರ್ ಜೈ ಕೀರ್ತಿ ಅಮೇರಿಕಾದಲ್ಲಿ ಸ್ವಂತ ಉದ್ಯೋಗವನ್ನು ಆರಂಭಿಸಿದರು , ಅದು ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಅವರ ಜೊತೆ ನಾನು ನನ್ನ ಮಡಿದಿ ಕೂಡ ಈಗ ಕೈಜೋಡಿಸಿದ್ದೇವೆ. ಈ ಒಂದು ಚಿತ್ರವನ್ನ ಸಾಫ್ಟ್ವೇರ್ ಕಂಪನಿಯ ಕಾರ್ಯ ವೈಖರಿಯಂತೆ ಬಹಳ ಅಚ್ಚುಕಟ್ಟಾಗಿ ಆರಂಭಿಸಿದ್ದೇವೆ, ಕಲಾವಿದರು , ತಂತ್ರಜ್ಞಾನರ ಆಯ್ಕೆಯ ಜೊತೆಗೆ ವಿಶೇಷವಾಗಿ ಮಲಯಾಳಂನ ಖ್ಯಾತ ನಟ ಮನೋಜ್. ಕೆ.ಜಯನ್ ಆಯ್ಕೆಯನ್ನು ನನ್ನ ಸುಪುತ್ರ ವಿನೋದ್ ಫೈನಲ್ ಮಾಡಿದ್ರು. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ತಂಡ ಅಚ್ಚುಕಟ್ಟಾಗಿ ಕೆಲಸ ಮಾಡ್ತಿದೆ. ನಮ್ಮಿಂದ 150 ಕುಟುಂಬಗಳಿಗೆ ಅನುಕೂಲವಾದರೆ ಸಾಕು , ನಮಗೆ ಲಾಭ ಬೇಡ ಹಾಕಿದ ಹಣ ಬಂದರೆ ಸಾಕು , ನಮ್ಮ ಸಂಸ್ಥೆಯಿಂದ ಹೊಸಬರಿಗೆ ಮುಂದೆಯೂ ಅವಕಾಶ ಕೊಡುವ ಉದ್ದೇಶವಿದೆ. ಹಾಗೆಯೇ ವಾಲಿಬಾಲ್ ಗೆ ಸಂಬಂಧಪಟ್ಟ ಚಿತ್ರವನ್ನು ನಿರ್ಮಿಸುವ ಆಸೆಯೂ ನನಗಿದೆʼʼ ಎಂದು ಹೇಳಿಕೊಂಡರು.

ಇದನ್ನೂ ಓದಿ: Mallikarjuna Kharge: ಪ್ರಧಾನಿ ಮೋದಿ ವಡೋದರಾ ಬಿಟ್ಟು ವಾರಣಾಸಿಗೆ ಓಡಲಿಲ್ಲವೇ?; ಖರ್ಗೆ ಕಿಡಿ

ಇನ್ನು ಈ ಚಿತ್ರದಲ್ಲಿ ಬಹಳ ಪ್ರಮುಖ ಪಾತ್ರದಲ್ಲಿ ಮಲಯಾಳಂನ ಖ್ಯಾತ ನಟ ಮನೋಜ್. ಕೆ .ಜಯನ್ ಅಭಿನಯಿಸುತ್ತಿದ್ದಾರೆ. ಮಲಯಾಳಂ , ತಮಿಳು , ತೆಲುಗು ಸೇರಿದಂತೆ ಸುಮಾರು 200ಕ್ಕೂಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂ ಚಿತ್ರದಲ್ಲಿ ಎರಡು ಬಾರಿ ಉತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಮಾರು 2005ರಲ್ಲಿ ಉಗ್ರ ನರಸಿಂಹ ಚಿತ್ರದಲ್ಲಿ ಅಭಿನಯಿಸಿದ್ದ ಮನೋಜ್ ಸುಮಾರು 18 ವರ್ಷಗಳ ನಂತರ ಮತ್ತೊಮ್ಮೆ ರಂಗಸ್ಥಳ ಮೂಲಕ ವಿಲನ್ ಪಾತ್ರದಲ್ಲಿ ಕಾಡಿಸಿಕೊಂಡಿದ್ದಾರೆ. ಮಲಯಾಳಂ ವ್ಯಕ್ತಿಯಾಗಿ ಪಾತ್ರವನ್ನು ನಿರ್ವಹಿಸಿದ್ದು , ಚಿತ್ರದ ಕಥೆಗೆ ಪೂರಕವಾಗಿ ಮೂಡಿ ಬರ್ತಿದೆಯಂತೆ. ಮಲಯಾಳಂ ಭಾಷೆಯಲ್ಲಿ ಮಾತನಾಡುತ್ತಾ ʻʻಕನ್ನಡ ಭಾಷೆಗೆ ದೈವಿಕ ಶಕ್ತಿ ಇದೆ. ನಾನು ಡಾ. ರಾಜ್ ಕುಮಾರ್ ಅವರ ಅಭಿಮಾನಿ. ಅವರು ತಮ್ಮ ಚಿತ್ರಗಳಲ್ಲಿ ತಾವೇ ಹಾಡುತ್ತಾ ಅಭಿನಯಿಸುತ್ತಿದ್ದು ನನಗೆ ಬಹಳ ಸಂತೋಷವಾಗುತ್ತಿತ್ತು.ನನಗೆ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದಂತಹ ನಿರ್ಮಾಪಕ , ನಿರ್ದೇಶಕ ಹಾಗೂ ನನ್ನ ಸ್ನೇಹಿತರಿಗೆ ಧನ್ಯವಾದ ತಿಳಿಸುತ್ತೇನೆʼʼ ಎಂದು ಹೇಳಿದರು.

ಇನ್ನು ಈ ಚಿತ್ರ ನಿರ್ದೇಶನ ಮಾಡುತ್ತಿರುವ ಯುವ ಪ್ರತಿಭೆ ಈಶ್ವರ್ ನಿತಿನ್ ಪ್ರಥಮ ಪ್ರಯತ್ನ ಇದಾಗಿದೆ. ಡೆಂಟಲ್ ವಿದ್ಯಾರ್ಥಿ ಆಗಿದ್ದ ನಿತಿನ್ , ಎಲ್. ವಿ. ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದು ಒಂದಷ್ಟು ಕಿರು ಚಿತ್ರ , ಹ್ಯಾಡ್ ಫಿಲಂ ನಲ್ಲಿ ವರ್ಕ್ ಮಾಡುವ ಮೂಲಕ ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೊಂದು ಗ್ರಾಮೀಣ ಸೊಗಡಿನ ಕಥೆಯಾಗಿದ್ದು , ನಮ್ಮ ಪುತ್ತೂರು , ಸುಳ್ಯ , ಭಾಗದ ಭಾಷೆ , ಸೊಗಡು , ಆಚಾರ , ವಿಚಾರ , ಕಲೆ, ಬದುಕಿನ ಸುತ್ತ ನೈಜಕ್ಕೆ ಪೂರಕ ಎನ್ನುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ರಂಗಸ್ಥಳ ಎಂದರೆ ನನ್ನ ಪ್ರಕಾರ ಒಂದು ವೇದಿಕೆ , ರಂಗ ಕಲೆಗಳ ಪ್ರದರ್ಶನ ನಡೆಯುವ ಸ್ಥಳ. ಅದೇ ರೀತಿ ನನ್ನ ಕಥೆಗೆ ಬರುವ ಪಾತ್ರಧಾರಿಗಳ ಒಬ್ಬೊಬ್ಬರದು ಒಂದೊಂದು ರೀತಿಯ ಮನಸ್ಥಿತಿ. ಅದು ಹೇಗೆ , ಯಾವ ರೀತಿ , ಏನೆಲ್ಲಾ ತೊಂದರೆಗಳನ್ನು ನೀಡುತ್ತದೆ. ಈ ರಂಗ ಮಂಟಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ.

ಈ ಚಿತ್ರದಲ್ಲಿ ನಾಯಕನ ಒಬ್ಬ ಯಕ್ಷಗಾನ ಕಲಾವಿದ ಹಾಗೂ ನಾಯಕಿ ವೈಲ್ಡ್ ಲೈಫ್ ಫೋಟೋಗ್ರಾಫರ್. ಹಾಗೆಯೇ ಮಲಯಾಳಂನ ಖ್ಯಾತ ನಟ ಮನೋಜ್. ಕೆ. ಜಯನ್ ಒಂದು ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹಳಷ್ಟು ಹೊಸಬರು ಹಾಗೂ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದು , ಈಗಾಗಲೇ 25 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು , 40% ಕೆಲಸ ಮುಗಿದಿದೆ. ಇಂದು ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೊಂಡರು.

ನಾಯಕನಾಗಿ ಅಭಿನಯಿಸುತ್ತಿರುವ ವಿಲೋಕ್ ರಾಜ್ ಚಿತ್ರರಂಗದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದು , ಸುಮಾರು 9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರ್ಕಿ ಚಿತ್ರದ ನಂತರ ಈ ‘ರಂಗಸ್ಥಳ’ ವಿಲೋಕ್ ಚಿತ್ರ ಜೀವನಕ್ಕೆ ಒಂದು ತಿರುವು ನೀಡುವಂತಹ ಸಿನಿಮಾ ವಾಗಲಿದೆಯಂತೆ. ಈ ಚಿತ್ರದಲ್ಲಿ ಒಬ್ಬ ಯಕ್ಷಗಾನ ಕಲಾವಿದನಾಗಿ ಅಭಿನಯಿಸುತ್ತಿದ್ದು , ಇದಕ್ಕಾಗಿ ಮೂರು ತಿಂಗಳ ತರಬೇತಿಯನ್ನು ಕೂಡ ಪಡೆದಿದ್ದಾರಂತೆ. ಹಾಗೆಯೇ ಭಾಷೆಯ ವಿಚಾರವಾಗಿಯೂ ಬಹಳ ಸೂಕ್ಷ್ಮವಾಗಿ ಗಮನಹರಿಸುತ್ತಿದ್ದು , ನಿರ್ದೇಶಕರು ಹೇಳಿದಂತೆ ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಿರ್ಮಾಪಕ ಡಾ. ರೇವಣ್ಣ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ. ನಾವು ಮೊದಲು ಸಣ್ಣ ಬಜೆಟ್ ಪ್ಲಾನ್ ಮಾಡಿಕೊಂಡಿದ್ದೇವು, ಆದರೆ ನಿರ್ಮಾಪಕರ ಪುತ್ರ ವಿನೋದ್ ಸಹಕಾರದೊಂದಿಗೆ ಈ ಚಿತ್ರ ಬೇರೆದೇ ರೂಪ ಪಡೆಯುತ್ತಿದೆ. ನಮ್ಮಂತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ , ಬೆಳೆಸಿ ಎಂದು ಕೇಳಿಕೊಂಡರು.
ಇನ್ನು ಮಂಗಳೂರು ಮೂಲದ ಬೆಡಗಿ ಶಿಲ್ಪ ಕಾಮತ್ ಶಾರ್ಟ್ ಮೂವೀಸ್ ನಲ್ಲಿ ಅಭಿನಯಿಸಿದ್ದು , ಆಡಿಷನ್ ಮೂಲಕ ಈ ಚಿತ್ರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಚಿತ್ರದಲ್ಲಿ ಒಬ್ಬ ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಮನೋಜ್ ಜೆಬೆ ಎಂಬ ಮಲಯಾಳಂ ಪ್ರತಿಭೆ ಕಾಮಿಡಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹಾಗೆ ಮತ್ತೊಬ್ಬ ಪ್ರತಿಭೆ ಸಂಧ್ಯಾ ಅರ್ಕೆರೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ ಎನಾಷ್ ಒಲಿವೇರ ಛಾಯಾಗ್ರಹಣ ಮಾಡುತ್ತಿದ್ದು , ಜೂಡೋ ಸ್ಯಾಂಡಿ ಆರು ಹಾಡುಗಳಿಗೆ ಸಂಗೀತವನ್ನು ನೀಡುತ್ತಿದ್ದು , ಪ್ರಭಾಕರನ್ ರಾಮು ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.

Continue Reading

ಬಾಲಿವುಡ್

Bharti Singh: ಬಾಲಿವುಡ್‌ ಖ್ಯಾತ ನಿರೂಪಕಿ ಆಸ್ಪತ್ರೆಗೆ ದಾಖಲು

Bharti Singh: ಭಾರತಿ ಸಿಂಗ್ ಅವರಿದ್ದ ಎತ್ತರಕ್ಕೆ ಹೋಲಿಸಿ ನೋಡಿದರೆ ಅತಿಯಾದ ತೂಕ ಹೊಂದಿದ್ದರು. ಹೀಗಾಗಿ ಅವರ 15 ಕೆಜಿ ತೂಕ ಇಳಿಸಿಕೊಂಡ ನಂತರದಲ್ಲಿ ಗರ್ಭಿಣಿಯಾಗಿದ್ದರು. ಈಗಾಗಲೇ ಸಾಕಷ್ಟು ರಿಯಾಲಿಟಿ ಶೋ, ಪ್ರಶಸ್ತಿ ಸಮಾರಂಭಗಳನ್ನು ಭಾರತಿ ನಿರೂಪಣೆ ಮಾಡಿದ್ದಾರೆ. ಮೊದಲಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗಲಿಲ್ಲವಂತೆ. ಆದರೆ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ.

VISTARANEWS.COM


on

Bharti Singh admitted to hospital
Koo

ಬೆಂಗಳೂರು: ಬಾಲಿವುಡ್‌ನ ಖ್ಯಾತ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್‌ (Bharti Singh) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ದೈನಂದಿನ ವ್ಲಾಗ್‌ಗಳ ಮೂಲಕ ಯೂಟ್ಯೂಬ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಹೊಂಸಿರುವ ಭಾರತಿ ಸಿಂಗ್‌ ಆಗಾಗ ಅಪ್‌ಡೇಟ್‌ (Bharti Singh admitted) ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ತಮ್ಮ ವ್ಲಾಗ್‌ನಲ್ಲಿ ತೀವ್ರವಾದ ಹೊಟ್ಟೆ ನೋವಿನ ಬಳಿಕ ಆಸ್ಪತ್ರೆಗೆ ದಾಖಲಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಇದೀಗ ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅವರ ಫ್ಯಾನ್ಸ್‌ ಚಿಂತೆಗೀಡಾಗಿದ್ದಾರೆ.

ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಟಿ ದಾಖಲಾಗಿದ್ದು ಡ್ರಿಪ್‌ಗಳನ್ನು ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗಲಿಲ್ಲವಂತೆ. ಆದರೆ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ. ಭಾರತಿ ಸಿಂಗ್ ಅವರು ಪಿತ್ತಕೋಶದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವ್ಲಾಗ್‌ನಲ್ಲಿ ಭಾರತಿ ಭಾವುಕರಾಗಿರುವುದನ್ನು ಕಾಣಬಹುದು.

ವ್ಲಾಗ್‌ನಲ್ಲಿ ಭಾರತಿ ಮಾತನಾಡಿ ʻʻನನಗೆ ನೋವು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಪಿತ್ತಕೋಶದಲ್ಲಿ ಕಲ್ಲು ಇದೆ ಎಂದು ಆನಂತರ ಗೊತ್ತಾಯಿತು. ಪರಿಣಾಮವಾಗಿ, ನಾನು ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ವಾಂತಿ ಕೂಡ ಆಗಿತ್ತುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Kareena Kapoor:‌ ರಾಕಿಂಗ್‌ ಸ್ಟಾರ್ ಯಶ್‌ ಸಿನಿಮಾದಿಂದ ಕರೀನಾ ಕಪೂರ್‌ ಔಟ್?

ಭಾರತಿ ಸಿಂಗ್‌ ಅಭಿಮಾನಿಗಳು ಇದೀಗ ಕಮೆಂಟ್‌ ಮೂಲಕ ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ. ಒಬ್ಬರು ʻʻಈ ವಿಡಿಯೊ ನೋಡಿ ನನಗೆ ಅಳು ಬಂತು. ಬೇಗ ಗುಣಮುಖರಾಗಿ. ದುರ್ಗಾ ಮಾತೆ ಆಶೀರ್ವದಿಸುತ್ತಾಳೆ.”ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʻʻನೀವು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಅತ್ತಿದ್ದು ನೋಡಿದೆ. ನನಗೂ ಅಳು ಬಂತುʼʼಎಂದು ಕಮೆಂಟ್‌ ಮಾಡಿದ್ದಾರೆ.

ಭಾರತಿ ಸಿಂಗ್ ಅವರಿದ್ದ ಎತ್ತರಕ್ಕೆ ಹೋಲಿಸಿ ನೋಡಿದರೆ ಅತಿಯಾದ ತೂಕ ಹೊಂದಿದ್ದರು. ಹೀಗಾಗಿ ಅವರ 15 ಕೆಜಿ ತೂಕ ಇಳಿಸಿಕೊಂಡ ನಂತರದಲ್ಲಿ ಗರ್ಭಿಣಿಯಾಗಿದ್ದರು. ಈಗಾಗಲೇ ಸಾಕಷ್ಟು ರಿಯಾಲಿಟಿ ಶೋ, ಪ್ರಶಸ್ತಿ ಸಮಾರಂಭಗಳನ್ನು ಭಾರತಿ ನಿರೂಪಣೆ ಮಾಡಿದ್ದಾರೆ.

Continue Reading
Advertisement
Amith Shah
ದೇಶ10 mins ago

Amit Shah: ತೆಲಂಗಾಣದಲ್ಲಿ ಗೃಹಸಚಿವ ಅಮಿತ್ ಶಾ ವಿರುದ್ಧ FIR ದಾಖಲು

Porbandar Tour
ಪ್ರವಾಸ15 mins ago

Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

hd revanna prajwal revanna case
ಪ್ರಮುಖ ಸುದ್ದಿ35 mins ago

Prajwal Revanna Case: ಕಾಣದಂತೆ ಮಾಯವಾದ ಎಚ್‌ಡಿ ರೇವಣ್ಣ ! ಇಂದು ಜಾಮೀನು ಸಿಗದೇ ಹೋದರೆ….

Cocoa Price
ಕೃಷಿ38 mins ago

Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

IPL 2024 POINTS TABLE
ಕ್ರೀಡೆ56 mins ago

IPL 2024 POINTS TABLE: ಕೆಕೆಆರ್​ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

prajwal revanna case hassan MP home
ಕ್ರೈಂ1 hour ago

Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

Robbery Case
ಕ್ರೈಂ1 hour ago

Robbery Case: ಕಾರು ತಪಾಸಣೆ ನೆಪದಲ್ಲಿ ಸುಲಿಗೆ; ಪೊಲೀಸರ ವಿರುದ್ಧವೇ ಕೇಳಿ ಬಂತು ಗಂಭೀರ ಆರೋಪ

Food Cleaning Tips Kannada
ಲೈಫ್‌ಸ್ಟೈಲ್1 hour ago

Food Cleaning Tips Kannada: ಹಣ್ಣು, ತರಕಾರಿಗಳಿಂದ ರಾಸಾಯನಿಕ ಅಂಶ ಸ್ವಚ್ಛಗೊಳಿಸುವ 5 ವಿಧಾನಗಳಿವು

Viral Video
ವೈರಲ್ ನ್ಯೂಸ್1 hour ago

Viral Video: ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

Salaar Movie Fails To Get Expected TRP Star Suvarna
ಸಿನಿಮಾ1 hour ago

Salaar Movie: ಕಿರುತೆರೆಯಲ್ಲಿ ‘ಸಲಾರ್’ಗೆ ಕಡಿಮೆ ಟಿಆರ್‌ಪಿ: ಪ್ಲಾಪ್‌ ಆಗಲು ಕಾರಣವೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ19 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌