Sidhartha Mallya: ಹಸೆಮಣೆಗೇರಲು ಸಜ್ಜಾದ ದೀಪಿಕಾ ಪಡುಕೋಣೆ ಮಾಜಿ ಪ್ರೇಮಿ ಸಿದ್ಧಾರ್ಥ್‌ ಮಲ್ಯ - Vistara News

ಸಿನಿಮಾ

Sidhartha Mallya: ಹಸೆಮಣೆಗೇರಲು ಸಜ್ಜಾದ ದೀಪಿಕಾ ಪಡುಕೋಣೆ ಮಾಜಿ ಪ್ರೇಮಿ ಸಿದ್ಧಾರ್ಥ್‌ ಮಲ್ಯ

Sidhartha Mallya: ಇಂಗ್ಲೆಂಡ್‌ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್‌ ಮಲ್ಯ ಪುತ್ರ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮಾಜಿ ಪ್ರೇಮಿ ಸಿದ್ಧಾರ್ಥ್‌ ಮಲ್ಯ ಶೀಘ್ರದಲ್ಲಿಯೇ ಹಸೆಮಣೆಗೇರಲಿದ್ದಾರೆ. ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಅವರು ಸಜ್ಜಾಗಿದ್ದು, ಈ ವಾರ ಮದುವೆ ನೆರವೇರಲಿದೆ. ಲಂಡನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹ ಆಯೋಜಿಸಲಾಗಿದ್ದು, ಈಗಾಗಲೇ ಸಿದ್ಧತೆ ಆರಂಭವಾಗಿದೆ.

VISTARANEWS.COM


on

Sidhartha Mallya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: ಇಂಗ್ಲೆಂಡ್‌ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ಮಲ್ಯ (Sidhartha Mallya) ಶೀಘ್ರದಲ್ಲಿಯೇ ಹಸೆಮಣೆಗೇರಲಿದ್ದಾರೆ. ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಅವರು ಸಜ್ಜಾಗಿದ್ದು, ಈ ವಾರ ಮದುವೆ ನೆರವೇರಲಿದೆ. ಲಂಡನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹ ಆಯೋಜಿಸಲಾಗಿದ್ದು, ಈಗಾಗಲೇ ಸಿದ್ಧತೆ ಆರಂಭವಾಗಿದೆ. ಸಿದ್ಧಾರ್ಥ್‌ ಮಲ್ಯ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಾಸ್ಮಿನ್ ಜತೆಗಿರುವ ಫೋಟೊ ಪೋಸ್ಟ್‌ ಮಾಡಿದ್ದಾರೆ.

ʼʼಮದುವೆಯ ಖುಷಿಯ ಕ್ಷಣ ಆರಂಭವಾಯಿತುʼʼ ಎಂದು ಬರೆದುಕೊಂಡು ಫೋಟೊ ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್‌ ಬಿಳಿ ಟಕ್ಸೆಡೋ ಮತ್ತು ಗುಲಾಬಿ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರೆ, ಜಾಸ್ಮಿನ್ ತಿಳಿ ಹಸಿರು ಬಣ್ಣದ ಉಡುಪು ಧರಿಸಿ ನಗುತ್ತಾ ಪೋಸ್‌ ನೀಡಿದ್ದಾರೆ. ಸದ್ಯ ಈ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಆಗುತ್ತಿದ್ದು, ಸೆಲೆಬ್ರಿಟಿಗಳು, ಅಭಿಮಾನಿಗಳು ಹಾರೈಸಿದ್ದಾರೆ.

ವರ್ಷದ ಹಿಂದೆಯೇ ಪ್ರಪೋಸ್‌

ಬಹುಕಾಲದ ಗೆಳತಿ ಜಾಸ್ಮಿನ್‌ಗೆ 2023ರ ಆರಂಭದಲ್ಲಿ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಇಬ್ಬರು ಜತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದಾರ್ಥ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಇದಕ್ಕೆ ಜಾಸ್ಮಿನ್ ಗ್ರೀನ್ ಸಿಗ್ನಲ್ ನೀಡಿದ್ದರು. ಬಳಿಕ ಈ ಜೋಡಿ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮದುವೆ ದಿನಾಂಕ ಶೀಘ್ರ ಬಹಿರಂಗಪಡಿಸುವುದಾಗಿ ಸಿದ್ಧಾರ್ಥ್‌ ತಿಳಿಸಿದ್ದರು.

ದೀಪಿಕಾ ಜತೆ ಪ್ರೀತಿಯಲ್ಲಿ ಬಿದ್ದಿದ್ದ ಸಿದ್ಧಾರ್ಥ್‌

ಕೆಲವು ವರ್ಷಗಳ ಹಿಂದೆ ಬಾಲಿವುಡ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್‌ ಮಲ್ಯ ಡೇಟಿಂಗ್‌ ನಡೆಸುತ್ತಿದ್ದರು. ಇವರು ಐಪಿಎಲ್‌ ಪಂದ್ಯಗಳಿಗೆ ಜತೆಯಾಗಿ ತೆರಳುತ್ತಿದ್ದರು. ಒಂದೊಮ್ಮೆ ಇಬ್ಬರು ಪಂದ್ಯ ವೀಕ್ಷಿಸುತ್ತಿರುವಾಗಲೇ ಪರಸ್ಪರ ಚುಂಬಿಸಿ ಸದ್ದು ಮಾಡಿದ್ದರು. ಆರಂಭದಲ್ಲಿ ದೀಪಿಕಾ ಕಿಂಗ್‌ ಫಿಷರ್‌ ಕ್ಯಾಲಂಡರ್‌ಗೆ ಮಾಡೆಲ್‌ ಆಗಿದ್ದರು. ಆ ವೇಳೆ ಸಿದ್ಧಾರ್ಥ್‌ನ ಪರಿಚಯವಾಗಿತ್ತು. ಬಳಿಕ ಇಬ್ಬರು ಜತೆಗೆ ಹಲವು ಕಡೆ ಸುತ್ತಾಡುತ್ತಾ ಗಾಸಿಪ್‌ಗೆ ಆಹಾರವಾಗಿದ್ದರು. ಅದಾಗ್ಯೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ಬಳಿಕ ಕಾರಣಾಂತರಗಳಿಂದ ಈ ಜೋಡಿ ಬೇರ್ಪಟ್ಟಿತ್ತು. ದೀಪಿಕಾ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಬಳಿಕ ರಣವೀರ್‌ ಸಿಂಗ್‌ ಜತೆ ಸಪ್ತಪದಿ ತುಳಿದರು. ಇತ್ತ ಸಿದ್ಧಾರ್ಥ್‌ ತಂದೆ ಜತೆಗೆ ಲಂಡನ್‌ಗೆ ಹಾರಿ ಅಲ್ಲೇ ನೆಲೆಸಿದರು. ಬ್ರೇಕಪ್‌ ಆದ ಆರಂಭದಲ್ಲಿ ಸಿದ್ಧಾರ್ಥ್‌ ಸನ್ಯಾಸತ್ವ ಸ್ವೀಕರಿಸುತ್ತಾರೆ ಎಂಬೆಲ್ಲ ಸುದ್ದಿ ಹರಡಿದ್ದವು. ಲಂಡನ್‌ಗೆ ಪರಾರಿಯಾದ ಬಳಿಕ ಸಿದ್ದಾರ್ಥ್ ಮತ್ತು ಜಾಸ್ಮಿನ್ ಆತ್ಮೀಯರಾಗಿದ್ದರು.

ಇದನ್ನೂ ಓದಿ: Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಸಿದ್ಧಾರ್ಥ್‌ ಮಲ್ಯ ಲಂಡನ್‌ನಲ್ಲಿ ಶಿಕ್ಷಣ ಪೂರೈಸಿದರು. ಪದವಿ ಪಡೆದ ನಂತರ ಅವರು ಮಾಡೆಲ್‌ ಮತ್ತು ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಬ್ರಾಹ್ಮಣ ನಮನ್ (Brahman Naman), ಬೆಸ್ಟ್‌ ಫೇಕ್‌ ಫ್ರೆಂಡ್ಸ್‌ (Best Fake Friends) ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಳಿಕ ಅಭಿನಯದಿಂದ ದೂರ ಸರಿದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

The Kaptan Song: ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹುಟ್ಟುಹಬ್ಬದ ಅಂಗವಾಗಿ ಪೃಕೃತಿ ಪ್ರೊಡಕ್ಷನ್ಸ್ ಮೂಲಕ ಶರಣಪ್ಪ ಗೌರಮ್ಮ ಅವರು “ದ ಕಫ್ತಾನ್” ಎಂಬ ಆಲ್ಬಂ ಸಾಂಗ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಪದ್ದಿ ಮಲ್ನಾಡ್ ಬರೆದು, ಅನಿಲ್ ಸಿ.ಜೆ. ಹಾಡಿ, ಸಂಗೀತ ನೀಡಿರುವ ಈ ” ದ ಕಪ್ತಾನ್ ” ಆಲ್ಬಂ ಸಾಂಗ್ ಮಾಸ್ ಮ್ಯೂಸಿಕ್ ಅಡ್ಡ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

VISTARANEWS.COM


on

The Kaftan kannada Album Song Release
Koo

ಬೆಂಗಳೂರು: ಹೆಬ್ಬುಲಿ, ರಾಷ್ಟ್ರಪ್ರಶಸ್ತಿ ವಿಜೇತ “ಒಂದಲ್ಲಾ ಎರಡಲ್ಲಾ” ಹಾಗೂ “ರಾಬರ್ಟ್” ಚಿತ್ರಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹುಟ್ಟುಹಬ್ಬದ ಅಂಗವಾಗಿ ಪೃಕೃತಿ ಪ್ರೊಡಕ್ಷನ್ಸ್ ಮೂಲಕ ಶರಣಪ್ಪ ಗೌರಮ್ಮ ಅವರು “ದ ಕಪ್ತಾನ್” (The Kaptan Song) ಆಲ್ಬಂ ಸಾಂಗ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಕಿಕ್ ಬಾಕ್ಸಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶರಣಪ್ಪ ಗೌರಮ್ಮ “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

“ನನಗೆ ಉಮಾಪತಿ ಶ್ರೀನಿವಾಸ್, ಅವರ ಮೇಲೆ ಅಪಾರ ಪ್ರೀತಿ ಹಾಗೂ ಗೌರವ. ನಮ್ಮ ಎಲ್ಲಾ ಕೆಲಸಗಳಿಗೂ ಅವರ ಪ್ರೋತ್ಸಾಹ ಇರುತ್ತದೆ. ಹಾಗಾಗಿ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಮುಂಚಿತವಾಗಿಯೇ ತಿಳಿಸುತ್ತಿರುವುದಾಗಿ ನಿರ್ಮಾಪಕ ಶರಣಪ್ಪ ಗೌರಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ಹೂಡಿಕೆಗೆ ದ. ಕೊರಿಯಾ ಆಸಕ್ತಿ; ಸಚಿವ ಎಂ‌.ಬಿ. ಪಾಟೀಲ್‌ ಚರ್ಚೆ

ಪದ್ದಿ ಮಲ್ನಾಡ್ ಬರೆದು, ಅನಿಲ್ ಸಿ.ಜೆ. ಹಾಡಿ, ಸಂಗೀತ ನೀಡಿರುವ ಈ ” ದ ಕಪ್ತಾನ್ ” ಆಲ್ಬಂ ಸಾಂಗ್ ಮಾಸ್ ಮ್ಯೂಸಿಕ್ ಅಡ್ಡ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.

Continue Reading

ಸ್ಯಾಂಡಲ್ ವುಡ್

Harshika Poonacha: ಮದುವೆ ಆದ್ರೂ ಮಕ್ಕಳು ಬೇಡ ಅನ್ನೋರಿಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ಉತ್ತರ ಕೊಟ್ಟ ಹರ್ಷಿಕಾ ಪೂಣಚ್ಚ ದಂಪತಿ!

Harshika Poonacha: ಮದುವೆಯಾಗಿ ವರ್ಷದೊಳಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಇದೀಗ ಜೋಡಿ ಇಷ್ಟು ಬೇಗ ಮಗುನಾ? ಸಿನಿಮಾರಂಗ ಬಿಟ್ಟು ಬಿಡುತ್ತೀರಾ? ಎಂದೆಲ್ಲಾ ಪ್ರಶ್ನೆ ಮಾಡುವವರಿಗೆ ಈಗಾಗಲೆ ಉತ್ತರ ಕೊಟ್ಟಿದ್ದಾರೆ. ಹರ್ಷಿಕಾ‌ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದ್ದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆಗೆ ಸ್ಯಾಂಡಲ್‌ವುಡ್‌, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಹಾರೈಸಿದ್ದರು.

VISTARANEWS.COM


on

Harshika Poonacha Bhuvann Ponnannaa shares opinion about marriage
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ (Harshika Poonacha) ತಾಯಿಯಾಗುತ್ತಿದ್ದಾರೆ‌. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದರು. 2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ (Bhuvann Ponnannaa) ಜತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ವರ್ಷದೊಳಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಇದೀಗ ಜೋಡಿ ಇಷ್ಟು ಬೇಗ ಮಗುನಾ? ಸಿನಿಮಾರಂಗ ಬಿಟ್ಟು ಬಿಡುತ್ತೀರಾ? ಎಂದೆಲ್ಲಾ ಪ್ರಶ್ನೆ ಮಾಡುವವರಿಗೆ ಮಾಧ್ಯಮಗಳ ಮುಂದೆ ಉತ್ತರ ಕೊಟ್ಟಿದ್ದಾರೆ. 

ಭುವನ್ ಪೊನ್ನಣ್ಣ ಮಾತನಾಡಿ ʻʻತುಂಬ ಖುಷಿ ಇದೆ. ಈಗಿನ ಸನ್ನಿವೇಶದಲ್ಲಿ ಹೇಳೋದು ಏನೆಂದರೆ, ಈಗಿನ ಸಮಯದಲ್ಲಿ ಹಲವಾರು ಜನ ಫ್ಯಾಮಿಲಿ ಪ್ಲ್ಯಾನಿಂಗ್‌ ಎಂದುಕೊಂಡು ಮದುವೆಯಾಗಿ 5-10 ವರ್ಷ ಮಕ್ಕಳು ಮಾಡಿಕೊಳ್ಳದೇ ಹಾಗೇ ಇರ್ತಾರೆ. ನನ್ನ ಪ್ರಕಾರ ತಪ್ಪು. ಮದುವೆಯಾದ ಕೂಡಲೇ ಮಕ್ಕಳು ಮಾಡಿಕೊಳ್ಳಿ. ಈಗಿನ ಪೊಲಿಟಿಕಲ್‌ ಸಂದರ್ಭಗಳನ್ನು ನೋಡಿದರೆ, ಜಗತ್ತು ಎಷ್ಟು ದಿವಸ ಇರುತ್ತೋ ಇಲ್ಲವೋ ಗೊತ್ತಿಲ್ಲ. ಇದಷ್ಟು ದಿನ ಖುಷಿಯಾಗಿರಿ.ʼʼಎಂದರು.

ಇದನ್ನೂ ಓದಿ: Harshika Poonacha: ಮದುವೆಯಾಗಿ ವರ್ಷದೊಳಗೆ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ ಪೂಣಚ್ಚ–ಭುವನ್

ಇನ್ನು ನಟಿ ಹರ್ಷಿಕಾ ಮಾತನಾಡಿ ʻʻಭುವನ್‌ ಅವರ ನಿರ್ಧಾರವೇ ನನ್ನದೂ ಆಗಿತ್ತು. ಸಾಕಷ್ಟು ವರ್ಷ ನಾವು ಸ್ನೇಹಿತರಾಗಿ ಆಮೇಲೆ ಮದುವೆ ಆದ್ವಿ. ನಮ್ಮ ನಿರ್ಧಾರ ಅದೇ ಇತ್ತು. ದೇವರು ಮಕ್ಕಳು ಕೊಟ್ಟರೆ ಮಾಡಿಕೊಳ್ಳಬೇಕು ಎಂದೇ ಇತ್ತು. ದೇವರ ಆಶೀರ್ವಾದಿಂದ ಒಳ್ಳೆಯದು ಆಗಿದೆ. ಮುಂದೆ ಸಿನಿಮಾ ಮಾಡುತ್ತೇನೆ. ತಾಯಿಯಾಗಿ ಮಗುವಿಗೆ ಎಷ್ಟು ಸಮಯ ಕೊಡಬೇಕು ಅಷ್ಟು ಕೊಡುತ್ತೇನೆ. ಅದರ ನಂತರ ಸಿನಿಮಾ ಮಾಡೋದು ಇದ್ದೇ ಇದೆʼಎಂದರು.

ಹರ್ಷಿಕಾ‌ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದ್ದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆಗೆ ಸ್ಯಾಂಡಲ್‌ವುಡ್‌, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಹಾರೈಸಿದ್ದರು.

ತಾವು ಪೋಷಕರಾಗುತ್ತಿರುವ ವಿಚಾರವನ್ನು ಭುವನ್ ಮತ್ತು ಹರ್ಷಿಕಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು.

2008ರಲ್ಲಿ ʼಪಿಯುಸಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹರ್ಷಿಕಾ ಬಳಿಕ ಕೊಡವ, ಕೊಂಕಣಿ, ತೆಲುಗು, ಮಲಯಾಳಂ, ಬೋಜಪುರಿ, ತಮಿಳು ಮುಂತಾದ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. 2010ರಲ್ಲಿ ತೆರೆಕಂಡದ ಕನ್ನಡದ ʼತಮಸ್ಸುʼ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು ಸದ್ಯ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಇನ್ನು ಸ್ಯಾಂಡಲ್‌ವುಡ್‌ ನಟ ಭುವನ್‌ ಪೊನ್ನಣ್ಣ 2010ರಲ್ಲಿ ತೆರೆಕಂಡ, ಸುದೀಪ್‌ ಅಭಿನಯದ ʼಜಸ್ಟ್‌ ಮಾತ್‌ ಮಾತಲ್ಲಿʼ ಚಿತ್ರದ ಮೂಲಕ ಬಣ್ಣ ಲೋಕ ಪ್ರವೇಶಿಸಿದ್ದರು. ಗಣೇಶ್‌ ಜತೆಗೆ ಕೂಲ್‌ ಚಿತ್ರದಲ್ಲಿಯೂ ನಟಿಸಿರುವ ಅವರು 2019ರಲ್ಲಿ ತೆರೆಕಂಡ ರಾಂಧವ ಸಿನಿಮಾದ ಮೂಲಕ ಜನಪ್ರಿಯರಾಗಿದ್ದಾರೆ. ಕೊಡಗು ಮೂಲದ ಭುವನ್‌ ಮತ್ತು ಹರ್ಷಿಕಾ ಈ ಹಿಂದೆ ನೆರೆ ಪೀಡಿತರಿಗೆ ನೆರವಾಗುವ ಮೂಲಕ ಅನೇಕ ಮಂದಿಯ ಕಷ್ಟಗಳಿಗೆ ಸಹಾಯ ಹಸ್ತ ಚಾಚಿದ್ದರು.

Continue Reading

ಸಿನಿಮಾ

Kannada New Movie: ಮಾರಮ್ಮ ದೇವಿ ಸಮ್ಮುಖದಲ್ಲಿ ʻಸಿಂಹರೂಪಿಣಿʼ ಟೀಸರ್ ಬಿಡುಗಡೆ

Kannada New Movie: ಪ್ಯಾನ್ ಇಂಡಿಯ ಸಂಗೀತ ಸಂಯೋಜಕ ರವಿಬಸ್ರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಿರ್ದೇಶಕರು, ನಿರ್ಮಾಪಕರ ದೇವಿಯ ಮೇಲಿನ ಭಕ್ತಿ, ತಂತ್ರಜ್ಞರ ಕೆಲಸಗಳು ಚೆನ್ನಾಗಿ ಮೂಡಿಬಂದಿದೆ. ದೃಶ್ಯಗಳನ್ನು ನೋಡಿ ನನಗೆ ಆದಂತ ಕಂಪನ ಎಲ್ಲರಿಗೂ ಆಗಿದೆ ಅಂತ ಭಾವಿಸುತ್ತೇನೆ. ನನ್ನ ನಿರ್ದೇಶಕರ ಪಯಣ ಸುಮಾರು 15 ವರ್ಷದಷ್ಟು ಹಳೆಯದು.

VISTARANEWS.COM


on

Kannada New Movie Simha Roopini Character Introduction Teaser
Koo

ಬೆಂಗಳೂರು: ಗುರು ಪೂರ್ಣಿಮೆ ದಿನದಂದುಸಿಂಹರೂಪಿಣಿ’ ಚಿತ್ರಪಾತ್ರಗಳ ಪರಿಚಯದ ಟೀಸರ್ ಬಿಡುಗಡೆ ಸಮಾರಂಭವು (Kannada New Movie) ಕಲಾವಿದರ ಭವನದಲ್ಲಿ ಅದ್ಧೂರಿಯಾಗಿ ನಡೆಯಿತು. ವೇದಿಕೆ ಮೇಲೆ ಸಾಕ್ಷಾತ್ ಮಾರಮ್ಮ ದೇವಿ ಪ್ರತಿಷ್ಠಾಪನೆ, ಮಾವಿನ ಮತ್ತು ಬೇವಿನ ಎಲೆಯಿಂದ ಸಿಂಗಾರ ಗೊಳಿಸಿದ್ದು ವಿಶೇಷವಾಗಿತ್ತು. ಕಿನ್ನಾಳ್‌ರಾಜ್ ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಹಾಗೂ ನಿರ್ದೇಶನ. ದೊಡ್ಡಬಳ್ಳಾಪುರ ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಿಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆಕಾಶ್‌ಪರ್ವ ಸಂಗೀತ, ಕಿರಣ್‌ಕುಮಾರ್ ಛಾಯಾಗ್ರಹಣ, ವೆಂಕಿ.ಯುಡಿವಿ ಸಂಕಲನ, ಕಿಶೋರ್ ಕಲರಿಸ್ಟ್, ಸಾಹಸ ಥ್ರಿಲ್ಲರ್‌ಮಂಜು-ಚಂದ್ರು ಬಂಡೆ-ಮಂಜುನಾಗಪ್ಪ, ಸೌಂಡ್ ಎಫೆಕ್ಟ್ ನಂದು.ಜೆ ಇವರುಗಳ ಶ್ರಮದಿಂದ ಸಿದ್ದಗೊಂಡಿರುವ 1.45 ನಿಮಿಷದ ತುಣುಕುಗಳು ದೊಡ್ಡ ಪರದೆ ಮೇಲೆ ಅನಾವರಣಗೊಂಡಿತು.

ಪ್ಯಾನ್ ಇಂಡಿಯ ಸಂಗೀತ ಸಂಯೋಜಕ ರವಿಬಸ್ರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಿರ್ದೇಶಕರು, ನಿರ್ಮಾಪಕರ ದೇವಿಯ ಮೇಲಿನ ಭಕ್ತಿ, ತಂತ್ರಜ್ಞರ ಕೆಲಸಗಳು ಚೆನ್ನಾಗಿ ಮೂಡಿಬಂದಿದೆ. ದೃಶ್ಯಗಳನ್ನು ನೋಡಿ ನನಗೆ ಆದಂತ ಕಂಪನ ಎಲ್ಲರಿಗೂ ಆಗಿದೆ ಅಂತ ಭಾವಿಸುತ್ತೇನೆ. ನನ್ನ ನಿರ್ದೇಶಕರ ಪಯಣ ಸುಮಾರು 15 ವರ್ಷದಷ್ಟು ಹಳೆಯದು. ಇವರ ನಿರ್ದೇಶನದಲ್ಲಿ ನಾನು ಸಂಗೀತ ಕಂಪೋಸ್ ಮಾಡಬೇಕೆಂದು ಆ ಸಮಯದಲ್ಲಿ ಮಾತಾಡಿಕೊಂಡಿದ್ದೇವು. ಅಲ್ಲಿಂದ ಒಂದಷ್ಟು ಸಿನಿಮಾಗಳಲ್ಲಿ ನಾವಿಬ್ಬರು ಸೇರಿದ್ದೇವು. ಉದ್ಯಮದ ಬೆಳವಣಿಗೆಗೆ ಇಂತಹ ಪ್ರತಿಭೆಗಳ ಪಾತ್ರ ತುಂಬ ಅಗತ್ಯವಿದೆ ಎಂದರು.

’ಕಾಟೇರ’ ಖ್ಯಾತಿಯ ಜಡೇಶ್‌ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ, ʻʻನಿರ್ದೇಶಕರು ನಮ್ಮ ಊರಿನ ಪಕ್ಕದವರು. ಪ್ರಾರಂಭದಿಂದಲೂ ಅವರ ಶ್ರಮವನ್ನು ನೋಡುತ್ತಾ ಬಂದಿದ್ದೇನೆ. ಚಿತ್ರದಲ್ಲಿ ನಮ್ಮ ಊರಿನ,ಭಾಗದ ಸಂಸ್ಕ್ರತಿಯನ್ನು ತೋರಿಸಲಾಗಿದೆ. ಅಂತಹ ಪ್ರಯತ್ನಗಳು ನಡೆದಾಗಲೇ ಮಾಹಿತಿಗಳು ಎಲ್ಲರಿಗೂ ತಿಳಿಯುತ್ತದೆ. ಮ್ಯೂಸಿಕ್ ಚೆನ್ನಾಗಿದೆ. ಕಾಟೇರ ಕೋಣ ಇಲ್ಲಿಗೆ ಯಾಕೆ ಬಂತು ಅಂತ ಕೇಳಿದೆ. ಸಿನಿಮಾ ನೋಡಿ ಅಂತಾರೆ. ನಿಮ್ಮಗಳ ಪ್ರಯತ್ನಕ್ಕೆ ಶುಭವಾಗಲಿʼʼ ಎಂದು ಹಾರೈಸಿದರು.

ಜೀವನದಲ್ಲಿ ನನ್ನ ಹೆಸರು ಟೈಟಲ್ ಕಾರ್ಡ್‌ದಲ್ಲಿ ಕಾಣಿಸಬೇಕೆಂದು ಆಸೆಪಟ್ಟವನು. ರವಿಬಸ್ರೂರು ’ಅಂಜನಿಪುತ್ರ’ ಸಿನಿಮಾಕ್ಕೆ ಹಾಡು ಬರೆಯಲು ಅವಕಾಶ ಮಾಡಿಕೊಟ್ಟರು. ನಂತರ ’ಕೆಜಿಎಫ್’ನಿಂದ ಎಲ್ಲರೂ ಗುರುತು ಹಿಡಿಯುವಂತಾಯಿತು. ಈಗ ತಾಯಿ ಚಿತ್ರ ಮಾಡುತ್ತಿದ್ದೇನೆ. ಶೀರ್ಷಿಕೆ ಹೇಳುವಂತೆ ಶ್ರೀ ಮಾರಮ್ಮ ದೇವಿ ಕುರಿತಾಗಿದ್ದು, ಗ್ರಾಫಿಕ್ಸ್ ತಂತ್ರಜ್ಘಾನ ಇರುವುದು ವಿಶೇಷ. ಸಪ್ತ ಮಾತ್ರ್ರಿಕೆಯರ ವಿಷಯಗಳನ್ನು ಹೊಂದಿದ್ದು, ರಾಕ್ಷಸನನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾಳೆ. ಅದರಲ್ಲಿ ಕೊನೆಯದು ಶ್ರೀ ಮಾರಮ್ಮ ದೇವಿಯದು ಆಗಿರುತ್ತದೆ. ತಾಯಿಯ ಮಹಿಮೆ,ಪವಾಡಗಳು, ಈಗಿನ ಟ್ರೆಂಡ್‌ಗೆ ತಕ್ಕಂತೆ ಕಮರ್ಷಿಯಲ್ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನಿರ್ಮಾಪಕರ ಹುಟ್ಟಿದ ಹಬ್ಬ, ಗುರುಪೂರ್ಣೀಮೆ ಶುಭದಿನವಾಗಿದ್ದರಿಂದ ಕಾರ್ಯಕ್ರಮ ಏರ್ಪಾಟು ಮಾಡಲಾಗಿದೆ. ಚಿತ್ರದಲ್ಲಿ 132 ಕಲಾವಿದರು ಅಭಿನಯಿಸಿದ್ದಾರೆ. ನಿರ್ಮಾಪಕರ ಕಥೆಗೆ ಚಿತ್ರರೂಪ ಕೊಟ್ಟಿದ್ದೇನೆ. ಹಾಡು ಬರೆಯಲು ಹೋದವನು, ಅಂತಿಮವಾಗಿ ನಿರ್ದೇಶನ ಮಾಡಲು ಹೇಳಿದ್ದೆ, ಇಲ್ಲಿಯ ತನಕ ತಂದು ನಿಲ್ಲಿಸಿದೆ. ಗ್ರಾಫಿಕ್ಸ್ 15 ನಿಮಿಷದ ಕಾಲ ಬರುತ್ತದೆ. ಸದ್ಯ ಸಿಜಿ ನಡೆಯುತ್ತಿದ್ದು, ಕೋಣ ಯಾಕೆ ಇದೆ ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದೆಂದು ಕಿನ್ನಾಳ್‌ರಾಜ್ ಕುತೂಹಲ ಕಾಯ್ದಿರಿಸಿದರು.

ನಿರ್ಮಾಪಕ ಕೆ.ಎಂ.ನಂಜುಡೇಶ್ವರ ಹೇಳುವಂತೆ ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ಅನುಭವ ಆಗಿರುತ್ತದೆ. ತಾಯಿ ವಿರಾಜಮಾನವಾಗಿ ಕೂತಿದ್ದಾಳೆ. ನೀವುಗಳು ದರ್ಶನ ಮಾಡಿದ್ದೀರಾ. ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ತಾಯಿಯ ಅನುಭವವನ್ನು ಫೀಲ್ ಮಾಡಿ. ತ್ರಿಮೂರ್ತಿ, ತ್ರಿಶಕ್ತಿ , ಸರ್ವಶಕ್ತಿ ಸ್ವರೂಪಿಣಿ ಗ್ರಾಮ ದೇವತೆ ಮಾರಮ್ಮ. ಮೂರು ದೇವತೆಗಳು, ತ್ರಿಮೂರ್ತಿಗಳು. ಎಲ್ಲಾ ದೇವರುಗಳಿಗೆ ಮೂಲ ದೇವರು ಗ್ರಾಮ ದೇವತೆ. ನಿಮ್ಮೂರಿನ ದೇವತೆಯ ಪೂಜೆ ಮಾಡಿ, ಶ್ರೀಮನ್ ನಾರಾಯಣ ತಿರುಪತಿಯಲ್ಲಿ ದರ್ಶನವಾದಂತೆ ಆಗುತ್ತದೆ. ಚಿತ್ರ ನೋಡಿದ ಮೇಲೆ ನೀವುಗಳು ತಾಯಿ ಪ್ರೀತಿ ಬಗ್ಗೆ ಮಾತನಾಡುತ್ತಿರಾ. ಮನುಷ್ಯನಾಗಿ ಹುಟ್ಟಿ ಎಲ್ಲವನ್ನು ದೇವರ ಅನುಗ್ರಹದಿಂದ ಪಡೆದುಕೊಂಡು ನಾವು ಏನು ಮಾಡಿಲ್ಲ. ಅದಕ್ಕಾಗಿ ಸಿನಿಮಾ ಮಾಡಿದ್ದೇನೆ. ಅಮ್ಮ ಅಂತ ಒಂದು ಹೆಜ್ಜೆ ಇಟ್ಟರೆ, ತಾಯಿ ಮೂರು ಹೆಜ್ಜೆ ಮುಂದಿಡುತ್ತಾಳೆ. ನಮಗೆ ಹರಸಲು ಎಲ್ಲಾ ವರ್ಗದಿಂದ ಹಿತೈಷಿಗಳು ಬಂದಿದ್ದಾರೆ. ನಿಮ್ಮಗಳ ಪ್ರೋತ್ಸಾಹ ಇದೇ ರೀತಿ ಇರಬೇಕೆಂದು ಕೋರಿಕೊಂಡರು.

ಇದನ್ನೂ ಓದಿ: Kannada New Movie: ಬರ್ತ್‌ಡೇ ದಿನವೇ ಹೊಸ ಸಿನಿಮಾ ಅಪ್ ಡೇಟ್ ಕೊಟ್ಟ ಅಶು ಬೆದ್ರ!

ಖ್ಯಾತ ನಿರೂಪಕಿ ಅಂಕಿತಾಗೌಡ ಈ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿ ಕೊಂಡಿದ್ದಾರೆ. ದೇವಿಯಾಗಿ ಯಶಸ್ವಿನಿಸಿದ್ದೇಗೌಡ, ರವಿಬಸ್ರೂರು ಪುತ್ರಿ ಕುಮಾರಿ.ಖುಷಿಬಸ್ರೂರು ಬಾಲ ದೇವಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಹರೀಶ್‌ರಾಯ್, ಯಶ್‌ಶೆಟ್ಟಿ, ದಿನೇಶ್‌ಮಂಗಳೂರು, ಪುನೀತ್‌ರುದ್ರನಾಗ್, ಭಜರಂಗಿ ಪ್ರಸನ್ನ, ನೀನಾಸಂ ಅಶ್ವತ್ಥ್, ಹಿರಿಯ ನಟ ಸುಮನ್, ತಮಿಳಿನ ದಿನಾ, ಸಾಗರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ತಬಲನಾಣಿ, ವಿಜಯ್‌ಚೆಂಡೂರು, ದಿವ್ಯಾಆಲೂರು, ಮನಮೋಹನ್‌ರೈ, ಆರವ್‌ಲೋಹಿತ್, ಪಿಳ್ಳಣ್ಣ, ಮಧುಶ್ರೀ, ದಿವ್ಯಾ ಆಲೂರು., ವೇದಾಹಾಸನ್, ಸುನಂದಕಲ್ಬುರ್ಗಿ, ಶಶಿಕುಮಾರ್, ಕೆ.ಬಾಲಸುಬ್ರಮಣ್ಯಂ ಮುಂತಾದವರು ನಟಿಸಿದ್ದಾರೆ.

ಕಲಾವಿದರು, ತಂತ್ರಜ್ಘರು ಹಾಗೂ ಚಿತ್ರಕ್ಕೆ ದುಡಿದವರನ್ನು ವೇದಿಕೆಗೆ ಆಹ್ವಾನಿಸಿ ಅವರುಗಳಿಗೂ ಮಾತನಾಡಲು ಅವಕಾಶ ಕಲ್ಪಸಿದ್ದು ನಿರ್ದೇಶಕರ ದೊಡ್ಡ ಗುಣವೆಂದು ಹೇಳಬಹುದು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸುಂದರ ಸಮಾರಂಭವು ಎಲ್ಲರಿಗೂ ಭಕ್ತಿಭಾವದಲ್ಲಿ ಮಿಂದಂತೆ ಆಗಿತ್ತು.

Continue Reading

ಸ್ಯಾಂಡಲ್ ವುಡ್

Tharun Sudhir: ತರುಣ್-ಸೋನಲ್‌ ನಡುವಿನ ವಯಸ್ಸಿನ ಅಂತರ ಎಷ್ಟು?

Tharun Sudhir: ಈ ಮೂರು ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಇವರ ಮಧ್ಯೆ ಪ್ರೀತಿ ಮೂಡಿತು. ಈಗ ಇಬ್ಬರೂ ವಿವಾಹ ಆಗುತ್ತಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ವಯಸ್ಸಿನ ಅಂತರದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.

VISTARANEWS.COM


on

Tharun Sudhir sonal monteiro age differnce
Koo

ಬೆಂಗಳೂರು: ತರುಣ್ ಸುಧೀರ್ (Tharun Sudhir) ಅವರು ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ ಸ್ಯಾಂಡಲ್​ವುಡ್​ನಲ್ಲಿ ಮೂರು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ‘ಚೌಕ’, ‘ರಾಬರ್ಟ್’ ಹಾಗೂ ‘ಕಾಟೇರ’ ಚಿತ್ರಗಳನ್ನು ತರುಣ್ ನಿರ್ದೇಶನ ಮಾಡಿದ್ದಾರೆ. ಈ ಮೂರು ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಇವರ ಮಧ್ಯೆ ಪ್ರೀತಿ ಮೂಡಿತು. ಈಗ ಇಬ್ಬರೂ ವಿವಾಹ ಆಗುತ್ತಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ವಯಸ್ಸಿನ ಅಂತರದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.

ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್​ಲೈನ್​ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.

ನಿರ್ದೇಶಕರಿಗೊಬ್ಬ ನಟಿ ಸಿಕ್ರು. ನಟಿಗೊಬ್ಬ ನಿರ್ದೇಶಕ ಸಿಕ್ರು ಎಂದು ನಿನ್ನೆ ಪೋಸ್ಟ್ ಹಂಚಿಕೊಂಡಿದ್ದರು ತರುಣ್‌. ಇಂದು ತರುಣ್ ಅವರು ಸೋನಾಲ್ ಅವರನ್ನು ಮದುವೆಯಾಗುತ್ತಿದ್ದೇನೆ ಎಂದು ವಿಡಿಯೊ ಮೂಲಕ ರಿವೀಲ್ ಮಾಡಿದ್ದಾರೆ. ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ. ಮದುವೆ ಆಗಸ್ಟ್‌ 11ಕ್ಕೆ ಎಂದು ತರುಣ್​ ಸುಧೀರ್ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್ 10ರಂದು ರಿಸೆಪ್ಷನ್, ಆಗಸ್ಟ್‌ 11ರಂದು ಮದುವೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಮದುವೆ ಅದ್ಧೂರಿಯಾಗಿ ನಡೆಯಲಿದೆ.

ಇದನ್ನೂ ಓದಿ: Tharun Sudhir: ನವರಂಗ್‌ ಥಿಯೇಟರ್‌ನಲ್ಲೇ ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ ಮಾಡಿಸಿದ್ದೇಕೆ ತರುಣ್‌ ಸುಧೀರ್‌?

ಹಲವು ದಿನಗಳ ಹಿಂದೆ ಸೋನಲ್ ಜೊತೆ ತರುಣ್ ಹೆಸರು ಕೇಳಿಬಂದಿತ್ತು. ಆದರೆ ಪಕ್ಕಾ ಮಾಹಿತಿ ತಿಳಿದು ಬಂದಿರಲಿಲ್ಲ. ಈ ಎಲ್ಲ ಕನ್ಫ್ಯೂಷನ್‌ಗಳಿಗೆ ತರುಣ್‌ ಫುಲ್‌ ಸ್ಟಾಪ್ ಇಟ್ಟಿದೆ ಜೋಡಿ.

ತರುಣ್‌ ಮದುವೆಗೆ ದರ್ಶನ್‌ ಬರ್ತಾರಾ?

ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್ ಸುಧೀರ್ ಭೇಟಿ ಮಾಡಿದ್ದರು ತರುಣ್ ಸುಧೀರ್ ಲವ್ ಸ್ಟೋರಿ ಟ್ರ್ಯಾಕ್‌ಗೆ ತಂದಿದ್ದೆ ದರ್ಶನ್. ತರುಣ್ ಹಾಗೂ ನಟಿ ಸೋನಲ್ ಮದುವೆಗೆ ದರ್ಶನ್ ಮುದ್ರೆ ಒತ್ತಿದ್ದರು. ದರ್ಶನ್ ಇಲ್ಲದೆ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಸಜ್ಜಾಗಿದ್ದರು ಎನ್ನಲಾಗಿತ್ತು. ಹಿರಿಯರ ಸಲಹೆ ನಂತರ ತರುಣ್‌ ಮುದುವೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ನಟ ಮಾಹಿತಿ ನೀಡಿದ್ದಾಗಿದೆ. ʻʻʻದರ್ಶನ್‌ ಅವರಿಗೆ ಸ್ವಲ್ಪ ಹುಷಾರಿಲ್ಲ. ರಿಕವರ್‌ ಆಗುತ್ತ ಇದ್ದಾರೆ. ನನ್ನ ನೋಡಿದಾಗ ಯಾವ ಸ್ಮೈಲ್‌ ಅಲ್ಲಿ ನೋಡುತ್ತಿದ್ದು ಅದೇ ನಗುವಿನಲ್ಲಿ ಇಂದು ನೋಡಿದರು. ಅವರಗಿಂತ ನಾವೇ ವೀಕ್‌ ಆಗಿದ್ದೇವೆ. ನನ್ನ ಮದುವೆ ಬಗ್ಗೆ ದರ್ಶನ್​ ಅವರಿಗೆ ಮೊದಲೇ ಗೊತ್ತಿತ್ತು. ಈ ವಿಚಾರದಲ್ಲಿ ನನಗೆ ಮೊದಲಿನಿಂದಲೂ ತೊಳಲಾಟ ಇತ್ತು. ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಾಯಿಸಬೇಡ ಅಂತ ಅವರು ಹೇಳಿದ್ದಾರೆ. ನಾನು ಬಂದೇ ಬರ್ತೀನಿ ಎನ್ನುವ ನಂಬಿಕೆ ಅವರಲ್ಲಿ ಇದೆ. ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆʼʼಎಂದಿದ್ದರು.

ರಾಬರ್ಟ್’ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್‌ ಕೂಡ ಆಗಾಗ ತರುಣ್‌ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್‌ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗಿದೆ.

Continue Reading
Advertisement
karnataka Weather Forecast
ಮಳೆ8 mins ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Khajjiar Tour
ಪ್ರವಾಸ14 mins ago

Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

Allergies During Monsoon
ಆರೋಗ್ಯ38 mins ago

Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ಮಧುರ ಪ್ರೀತಿ ಸಿಗಲಿದೆ

INDIA Bloc To Protest
ದೇಶ7 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ8 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ8 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ8 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ8 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ9 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ8 mins ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ12 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ13 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ17 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌