ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಕ್ರೈಮ್ – ತಡೆಗಟ್ಟುವುದು ಹೇಗೆ? - Vistara News

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಕ್ರೈಮ್ – ತಡೆಗಟ್ಟುವುದು ಹೇಗೆ?

ನಿಮಗೆ ಸೈಬರ್‌ ಅಪರಾಧ ಸಂಭವಿಸಿದಾಗ ಯಾರ ಸಹಾಯ ಪಡೆಯಬೇಕು? ಏನು ಮಾಡಬೇಕು? ಕಾನೂನಿನಲ್ಲಿ ಇದಕ್ಕೆ ಇರುವ ದಾರಿಗಳೇನು? ಎನ್ನುವ ಪ್ರಶ್ನೆಗಳಿಗೆ ಸೈಬರ್ ಕ್ರೈಮ್ ಪುಸ್ತಕದಲ್ಲಿ ಉತ್ತರವಿದೆ.

VISTARANEWS.COM


on

cyber safety column cyber crime book
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
cyber safty logo

ಸೈಬರ್‌ ಸೇಫ್ಟಿ ಅಂಕಣ: ಸೈಬರ್ (cyber world) ಜಗತ್ತಿನಲ್ಲಿ ಸರ್ವೈವ್ ಆಗಲು ಅರಿವೊಂದೇ ದಾರಿ. ಜಾಣರಾಗಿ ಮತ್ತು ಜಾಗ್ರತರಾಗಿರಿ ಎಂದು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (RBI) ಕೂಡ ಹೇಳೋದು ಇದನ್ನೇ. ಈ ರೀತಿಯ ಎಚ್ಚರಿಕೆಯನ್ನು ಸರ್ಕಾರ, ವಿವಿಧ ವಾಣಿಜ್ಯ ವಲಯಗಳ ನಿಯಂತ್ರಕರು, ಕಾನೂನು ಪಾಲಕರೂ ಹೇಳುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಸಾವಣ್ಣ ಎಂಟರ್‌ಪ್ರೈಸರ್ಸ್ ಪ್ರಕಾಶನದಲ್ಲಿ ಇತ್ತೀಚೆಗೆ ಬಂದ ಪುಸ್ತಕ ಸತೀಶ್ ವೆಂಕಟಸುಬ್ಬು ಅವರ ʼಸೈಬರ್ ಕ್ರೈಮ್- ತಡೆಗಟ್ಟುವುದು ಹೇಗೆʼ ಎಂಬ ಉಪಶೀರ್ಷಿಕೆಯನ್ನು ಹೊಂದಿರುವ ಈ ಪುಸ್ತಕಕ್ಕೆ ಖ್ಯಾತ ಲೇಖಕ, ಅಂಕಣಕಾರ ಮತ್ತು ಆರ್ಥಿಕ ಸಲಹೆಗಾರರಾದ ರಂಗಸ್ವಾಮಿ ಮೂಕನಹಳ್ಳಿಯವರ ಬೆನ್ನುಡಿ ಇದೆ.

ಅವರು ಹೇಳ್ತಾರೆ “ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಗಳು ಕಳ್ಳತನದ ವ್ಯಾಖ್ಯಾನವನ್ನು ಬದಲಿಸಿದೆ. ಹಿಂದೆ ಕಳ್ಳರು ಮನೆಗೆ ನುಗ್ಗಿ ಅಥವಾ ದಾರಿಯಲ್ಲಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಈಗ ನಮ್ಮ ಅಜಾಗರೂಕತೆಯಿಂದ ಕೊಟ್ಟ ಅನುಮತಿಯಿಂದ, ಅಥವಾ ನಮ್ಮ ಅನುಮತಿಯಿಲ್ಲದೆ ಕ್ರೈಮ್ ಸಂಭವಿಸುತ್ತಿದೆ. ನಮ್ಮ ಗಳಿಕೆ, ಉಳಿಕೆಗಳು ಕ್ಷಣಾರ್ಧದಲ್ಲಿ ಮಾಯವಾಗುತ್ತಿದೆ. ಹೀಗೆ ಆದಾಗ ಯಾರ ಸಹಾಯ ಪಡೆಯಬೇಕು? ಏನು ಮಾಡಬೇಕು? ಕಾನೂನಿನಲ್ಲಿ ಇದಕ್ಕೆ ಇರುವ ದಾರಿಗಳೇನು? ಕಳೆದುಕೊಂಡಿರುವುದನ್ನು ಮರಳಿ ಪಡೆಯಬಹುದೇ? ಎನ್ನುವ ಪ್ರಶ್ನೆಗಳಿಗೆ ಸೈಬರ್ ಕ್ರೈಮ್ ಪುಸ್ತಕದಲ್ಲಿ ಉತ್ತರವಿದೆ. ಕನ್ನಡಿಗರಿಗೆ ಸೈಬರ್ ಕ್ರೈಮ್‌ಗೆ ಸಂಬಂಧಿಸಿದ ಒಂದು ಅತ್ಯವಶ್ಯಕ ಕೈಪಿಡಿಯಂತಿದೆ ಈ ಪುಸ್ತಕ.

ವಿವಿಧ ದೇಶಗಳಲ್ಲಿ ಸುಮಾರು 20 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್‌ ವೆಂಕಟಸುಬ್ಬು ಸ್ವಯಂ ನಿವೃತ್ತಿ ಪಡೆದು ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ನ್ಯಾಷನಲ್‌ ಲಾ ಸ್ಕೂಲಿನ ಸೈಬರ್ ಲಾ ಮತ್ತು ಸೈಬರ್‌ ಫೋರೆನ್ಸಿಕ್ಸ್ ಡಿಪ್ಲೊಮಾ ಮಾಡಿದ್ದಾರೆ. ಜೊತೆಗೆ ಮೈಸೂರಿನ JSS ಕಾನೂನು ಕಾಲೇಜಿನಲ್ಲಿ LLB ಕೋರ್ಸನ್ನು ಮುಗಿಸಿದ್ದಾರೆ. ಈ ಸಂಬಂಧವಾಗಿ ಮೈಸೂರಿನ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್‌ಠಾಣೆಯಲ್ಲಿ ಇಂಟರ್ನ್‌ಶಿಪ್‌ ಮಾಡಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಜೊತೆಯಲ್ಲಿ ಇವರು ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ‘ಸೈಬರ್‌ಮಿತ್ರ’ ಎಂಬ ಅಂಕಣವನ್ನೂ ಬರೆಯುತ್ತಾರೆ. ವಿವಿಧ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಅಂಕಣಬರಹಗಳ ಗುಚ್ಛವನ್ನು ಸೈಬರ್ ಕ್ರೈಮ್ ಪುಸ್ತಕವನ್ನಾಗಿ ಕನ್ನಡಿಗರಿಗೆ ಕೊಟ್ಟಿದ್ದಾರೆ.

ಸೈಬರ್ ಅಪರಾಧಗಳ ಕಿರು ಪರಿಚಯದೊಂದೆಗೆ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಸೋಶಿಯಲ್‌ ಇಂಜಿನಿಯರಿಂಗ್, ರಾನ್ಸಮ್‌ವೇರ್ ದಾಳಿ, ಆನ್‌ಲೈನ್‌ ಸಾಲದ ಆ್ಯಪ್‌ ವಂಚನೆ, ಸಿಮ್-ಸ್ವಾಪ್‌ ಅಪರಾಧಗಳು, ಆಧಾರ್ ಬಳಸಿಕೊಂಡು ನಡೆಯುತ್ತಿರುವ ಅಪರಾಧಗಳು, ಪ್ಯಾನ್ (PAN) ಬಳಸಿಕೊಂಡು ನಡೆಯುತ್ತಿರುವ ವಂಚನೆಗಳು, ಸೆಕ್ಸ್‌ಟಾರ್ಶನ್‌, ಆನ್‌ಲೈನ್‌ ಆಟಗಳ ಮೂಲಕ ಆಗುತ್ತಿರುವ ಮೋಸ, ಸೋಗು ಹಾಕುವಿಕೆ (impersonation), ಗುರುತಿನ ಕಳ್ಳತನ (identity theft), ಕ್ಯೂಆರ್ ಕೋಡು ಅಪರಾಧಗಳು, ಮನೆಯಿಂದಲೇ ಕೆಲಸ, ಆನ್ಲೈನ್ ಕೆಲಸದ ಆಮಿಷದ ಮೂಲಕ ನೆಡೆಯುತ್ತಿರುವ ಸೈಬರ್ ವಂಚನೆಗಳು, ಗ್ರಾಹಕ ಸಹಾಯವಾಣಿ, ಕೊರಿಯರ್ ಸಂಬಂಧಿತ ಅಪರಾಧಗಳು, ಮಹಿಳೆಯರು, ಹುಡುಗಿಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ನೆಡೆಸುವ ಸೈಬರ್ ಕ್ರೈಮ್‌ಗಳು, ಡೀಪ್‌ಫೇಕ್, ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ವಂಚನೆಗಳು, ಮುಂತಾದ ವೈವಿಧ್ಯಮಯ ಅಪರಾಧಗಳ ಬಗ್ಗೆ ಸರಳವಾಗಿ ಅರಿವು ಮೂಡಿಸಿದ್ದಾರೆ. ಲೇಖಕರು ಈ ಪುಸ್ತಕದಲ್ಲಿ ಜನಸಾಮಾನ್ಯರ ಮೇಲೆ ನೆಡೆಯುವ ಸೈಬರ್ ಅಪರಾಧಗಳನ್ನು ಅರ್ಥ ಮಾಡಿಕೊಳ್ಳುವ ಮಾಹಿತಿ ನೀಡಿದ್ದಾರೆ.

ಈ ಅಪರಾಧಗಳ ಕಾರ್ಯತಂತ್ರ, ಅದರಿಂದ ಪಾರಾಗುವ ಬಗೆ ಮತ್ತು ಅಕಸ್ಮಾತ್ತಾಗಿ ಆ ಸೈಬರ್ ಕ್ರೈಮಿನ ವಿಕ್ಟಿಮ್‌ ಆಗಿದ್ದರೆ ಕೈಗೊಳ್ಳಬೇಕಾದ ಕ್ರಮಗಳು ಜೊತೆಗೆ ಭಾರತದಲ್ಲಿ ಕಾನೂನುಬದ್ಧವಾಗಿ ಲಭ್ಯವಿರುವ ಪರಿಹಾರಗಳನ್ನೂ ಕೊಟ್ಟಿದ್ದಾರೆ.

ಲೇಖಕರು ಇದನ್ನು ಸಂಪೂರ್ಣ ಕೈಪಿಡಿ ಅಲ್ಲ ಎಂದಿರುವುದು ಅವರ ನಮ್ರತೆಯನ್ನು ತೋರಿಸುತ್ತದೆ. ನಮ್ಮ ತಿಳುವಳಿಕೆ, ಅನುಭವವನ್ನು ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರ ಮತ್ತು ಅದಕ್ಕನುಗುಣವಾಗಿ ರೂಪುಗೊಳ್ಳುವ ಕ್ರಿಮಿನಲ್‌ಗಳ ಕುತಂತ್ರಗಳು ಹೊಸ ಬಗೆಯ ಸವಾಲುಗಳನ್ನು ಒಡ್ಡುತ್ತಿರುತ್ತದೆ. ಹಾಗಾಗಿ ಎಲ್ಲಾ ಪ್ರಕರಣಗಳಿಗೂ ಈ ಪುಸ್ತಕ ಒಂದನ್ನೇ ನೆಚ್ಚಿಕೊಳ್ಳುವುದು ಸಾಕಾಗಲಿಕ್ಕಿಲ್ಲ ಎಂದು ಡಿಸ್ಕ್‌ಕ್ಲೈಮರ್‌ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದ ಅಲೆದಾಟದಲ್ಲಿ ಜಾಗರೂಕತೆಯಿಲ್ಲದಿದ್ದರೆ ಪರದಾಟ

ಮುಖ್ಯವಾಗಿ ಈ ಪುಸ್ತಕದಲ್ಲಿ ತಿಳಿಸಿರುವುದೇನೆಂದರೆ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ https://cybercrime.gov.in/ ನಲ್ಲಿ ದೂರು ಸಲ್ಲಿಸಿ. ಮೋಸದಿಂದ ಕಳೆದುಕೊಂಡ ಹಣವನ್ನು ಫ್ರೀಜ್‌ ಮಾಡಲು ಸಂಬಂಧಿಸಿದ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸಿ. ನಿಮ್ಮ ಆಧಾರ್ ಕಾರ್ಡ್‌ನ್ನು ಲಾಕ್‌ಮಾಡಿ. ನಿಮ್ಮ ಖಾತೆಗಳ ಪಾಸ್‌ವರ್ಡ್/ಪಿನ್‌ಗಳನ್ನು ಬದಲಾಯಿಸಿ. ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ಗೆ ಏನಾದರೂ ಮಾಲ್‌ವೇರ್ ಅಥವಾ ವೈರಸ್‌ ದಾಳಿಯ ಅನುಮಾನವಿದ್ದರೆ ಫಾರ್ಮ್ಯಾಟ್‌ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್‌ ಮಾಡಿ.

ಸೈಬರ್ ಕಾನೂನುಗಳ ಬಗ್ಗೆಯೇ ಒಂದು ಪ್ರತ್ಯೇಕ ಅಧ್ಯಾಯವನ್ನು ಕೊಟ್ಟಿರೋದು ಎಲ್ಲರಿಗೂ ಭಾರತೀಯ ಸೈಬರ್ ಕಾನೂನುಗಳ ಬಗ್ಗೆ ಒಂದು ಅವಲೋಕನವನ್ನು ಕೊಡುವುದರ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000 – 2008, ಭಾರತೀಯ ದಂಡ ಸಂಹಿತೆ ಅಥವಾ ಇಂಡಿಯನ್ ಪೀನಲ್‌ ಕೋಡ್‌ 1860 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಬಗ್ಗೆ ಸರಳವಾಗಿ ವಿವರಿಸಿದ್ದಾರೆ.

ಅಂತರ್ಜಾಲದಲ್ಲಿ ಅಂತರ್ಗತವಾಗಿರುವ ವಿವಿಧ ಮೋಸ ವಂಚನೆಗಳ ಕಾರ್ಯತಂತ್ರ ಮತ್ತು ಅದರ ಪರಿಹಾರಗಳನ್ನು ನಿಮಗೆ ಒಂದೇ ಕಡೆ ಸಿಗುವಂತೆ ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಕ್ರಿಪ್ಟೋಗ್ರಫಿ ಮತ್ತು ಸೈಬರ್ ಭದ್ರತೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

ರಾಜಮಾರ್ಗ ಅಂಕಣ: ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು!

VISTARANEWS.COM


on

George Fernandes ರಾಜಮಾರ್ಗ ಅಂಕಣ
Koo

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 1989ರ ಇಸವಿಯಲ್ಲಿ ಪ್ರಧಾನಿ ವಿ.ಪಿ ಸಿಂಗ್ (VP Singh) ಅವರ ಕ್ಯಾಬಿನೆಟ್‌ನಲ್ಲಿ ರೈಲ್ವೇ ಮಂತ್ರಿ (Railway minister) ಆಗಿ ಪ್ರತಿಜ್ಞೆ ಸ್ವೀಕರಿಸಿದ ತಕ್ಷಣ ಜಾರ್ಜ್ ಫರ್ನಾಂಡಿಸ್ (George Fernandes) ಉನ್ನತ ರೈಲ್ವೇ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದರು.

ಜಾರ್ಜ್ ಫರ್ನಾಂಡಿಸ್ ಅಂದು ಹೇಳಿದ್ದು ಎರಡೇ ಮಾತು – ನನ್ನ ಮನಸಿನಲ್ಲಿ ಎರಡು ರೈಲ್ವೇಯ ಯೋಜನೆಗಳು ಇವೆ. ಒಂದು ಬಿಹಾರದಲ್ಲಿ ಚಿಟ್ಟೌನಿ, ಮತ್ತೊಂದು ಕರ್ನಾಟಕದಲ್ಲಿ ಕೊಂಕಣ ರೈಲ್ವೆ (Konkan Railway). ಮುಂದಿನ ಬಜೆಟ್ಟಿನಲ್ಲಿ ಅವುಗಳಿಗೆ ನಾನು ಹಣವನ್ನು ಮೀಸಲು ಇಡುತ್ತೇನೆ. ಅವೆರಡೂ ಪೂರ್ತಿ ಆಗಬೇಕು.

ಅವರು ಎರಡು ರೈಲ್ವೇ ಯೋಜನೆಗಳ ಹಿಂದೆ ಬಿದ್ದದ್ದೇಕೆ?

ಆಗ ಪತ್ರಕರ್ತರು ಅವೆರಡು ಯೋಜನೆಗಳು ಮಾತ್ರವೇ ಯಾಕೆ? ಎಂದು ಕೇಳಿದ್ದರು. ಅದಕ್ಕೆ ಜಾರ್ಜ್ ಫರ್ನಾಂಡೀಸ್ ಹೇಳಿದ್ದು – ಒಂದು ನನಗೆ ವೋಟನ್ನು ಹಾಕಿ ಗೆಲ್ಲಿಸಿದ ರಾಜ್ಯ ಬಿಹಾರ್. ಇನ್ನೊಂದು ನನ್ನ ಜನ್ಮ ಕೊಟ್ಟ ರಾಜ್ಯ ಕರ್ನಾಟಕ! ಎರಡು ರಾಜ್ಯಗಳ ಋಣವನ್ನು ಮರೆಯಲು ಸಾಧ್ಯವೇ?

ಜಾರ್ಜ್ ಅವರಿಗೆ ಮಂತ್ರಿಯಾಗಿ ಮುಂದೆ ತಾನು ಏನು ಮಾಡಬೇಕು ಅನ್ನುವುದು ಸ್ಪಷ್ಟ ಆಗಿತ್ತು! ನಾನು ಇವತ್ತು ʻಕೊಂಕಣ ರೈಲ್ವೆ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯು ಅನುಷ್ಠಾನವಾದ ಬಗ್ಗೆ ತುಂಬಾ ವಿಸ್ತಾರ ಆಗಿ ಬರೆಯಬೇಕು. ಏಕೆಂದರೆ ಜಾರ್ಜ್ ಇಲ್ಲವಾದ್ರೆ ಅದು ಇವತ್ತಿಗೂ ಪೂರ್ತಿ ಆಗುತ್ತಿರಲಿಲ್ಲ!

ʻಕೊಂಕಣ ರೈಲ್ವೆ ‘ ಎಂಬ ಮಹಾ ಮಿಷನ್!

ಭಾರತದ ಅತೀ ದೊಡ್ಡ, ಸವಾಲಿನ ರೈಲ್ವೇ ಪ್ರಾಜೆಕ್ಟ್ ಅದು! 70ರ ದಶಕದಲ್ಲಿ ಕರಾವಳಿ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಮುಂಬೈಗೆ ಹೋಗಿ ಉದ್ಯಮ, ವ್ಯವಹಾರ ಆರಂಭ ಮಾಡಿದ್ದ ತುಳುವರಿಗೆ ಮುಂಬೈಗೆ ಹೋಗಲು ಆಗ 48 ಗಂಟೆ ಅವಧಿಯು ಬೇಕಾಗಿತ್ತು! ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಭಸವಾಗಿ ಹರಿಯುತ್ತಿದ್ದ ದೊಡ್ಡ ದೊಡ್ಡ ನದಿಗಳಿಗೆ ಆಗ ಸೇತುವೆಗಳು ಆಗಿರಲಿಲ್ಲ.

ಕರಾವಳಿ ಕರ್ನಾಟಕದ ಮಂದಿಯು ರಸ್ತೆಯ ಮಾರ್ಗದಲ್ಲಿ ಚಿಕ್ಕಮಗಳೂರಿನವರೆಗೆ (ಕಡೂರು)ಹೋಗಿ ಅಲ್ಲಿಂದ ಟ್ರೈನನ್ನು ಏರಿಕೊಂಡು ಮುಂಬಯಿ ತಲುಪುವಾಗ ಎರಡು ದಿನ ಮತ್ತು ಎರಡು ರಾತ್ರಿಗಳು ಕಳೆದುಹೋಗುತ್ತಿದ್ದವು! ಬೇರೆ ಯಾವುದೇ ಮಾರ್ಗವು ಕೂಡ ಆಗ ಇರಲಿಲ್ಲ. ವಿಮಾನ ಆರಂಭ ಆಗಿರಲಿಲ್ಲ.

ಕೊಂಕಣ ರೈಲ್ವೇಗೆ ಎದುರಾಯಿತು ನೂರಾರು ಸವಾಲು

ಜಾರ್ಜ್ ತಾವು ಭರವಸೆ ಕೊಟ್ಟ ಹಾಗೆ ರೈಲ್ವೆ ಬಜೇಟಲ್ಲಿ ಕೊಂಕಣ್ ರೈಲ್ವೆಗೆ ಮಂಜೂರಾತಿ ಪಡೆದರು. ಒಂದಿಷ್ಟು ದುಡ್ಡು ಕೂಡ ಪಡೆದರು. ಆದರೆ ಅದು ‘ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ’ ಎಂಬ ಹಾಗೆ ಇತ್ತು. ಆದರೆ ಜಾರ್ಜ್ ಹಿಡಿದ ಹಠ ಬಿಡುವ ಜಾಯಮಾನದವರೆ ಅಲ್ಲವಲ್ಲ!

ಮುಂದೆ ಒಂದೆರಡು ತಿಂಗಳ ಒಳಗೆ ಕೊಂಕಣ ರೈಲ್ವೆಸ್ ಕಂಪೆನಿಯು ಉದ್ಘಾಟನೆ ಆಯಿತು(1990 ಜುಲೈ 19). ಕೆಲವೇ ತಿಂಗಳ ಹಿಂದೆ ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತಿ ಹೊಂದಿದ್ದ ಚೀಫ್ ಇಂಜಿನಿಯರ್ ಕೇರಳದ ಈ. ಶ್ರೀಧರನ್ ಅವರನ್ನು ಆ ಕಂಪೆನಿಯ ಮುಖ್ಯಸ್ಥರಾಗಿ ಆಗಮಿಸಲು ಜಾರ್ಜ್ ವಿನಂತಿ ಮಾಡಿದರು. ಶ್ರೀಧರನ್ ಒಪ್ಪಿದರು. ಅವರಿಗೆ ಜಾರ್ಜ್ ಹೇಳಿದ್ದು ಒಂದೇ ಮಾತು – ಸರ್, ನೀವು ಕೆಲಸ ಮಾಡ್ತಾ ಹೋಗಿ. ಕೆಲಸ ನಿಲ್ಲಬಾರದು. ದುಡ್ಡು ನಾನು ಹೊಂದಿಸುವೆ!

ನಾನು ರೈಲ್ವೆ ಮಂತ್ರಿ ಆಗಿರದಿದ್ದರೂ….!

ಮುಂದೆ ಶಿಲಾನ್ಯಾಸದ ಕಾರ್ಯಕ್ರಮ ನಡೆದಾಗ ರೈಲ್ವೆ ಮಂತ್ರಿ ಜಾರ್ಜ್ ಹೇಳಿದ್ದು – ಮುಂದೆ ನಾನು ರೈಲ್ವೆ ಮಂತ್ರಿ ಆಗಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಎಂಟು ವರ್ಷಗಳ ಒಳಗೆ ಈ ಯೋಜನೆಯು ಖಂಡಿತವಾಗಿ ಪೂರ್ತಿ ಆಗುತ್ತದೆ. ಅದಕ್ಕೆ ಬೇಕಾದ ದುಡ್ಡು ನನ್ನ ಹೊಣೆ!

ಜಾರ್ಜ್ ಫರ್ನಾಂಡಿಸ್ ನುಡಿದ ಹಾಗೆ ನಡೆದರು. ಸರಕಾರದ ದುಡ್ಡು ಸಾಲದೆ ಹೋದಾಗ ಪಬ್ಲಿಕ್ ಇಶ್ಯುಸ್ ಮೂಲಕ ಫಂಡ್ಸ್ ಒಟ್ಟು ಮಾಡಿದರು. ಆ ಯೋಜನೆಯ ಫಲಾನುಭವಿಗಳ ಸಭೆ ಕರೆದು ಭಿಕ್ಷಾಪಾತ್ರೆ ಹಿಡಿದರು. ಜನರು ಹಿಂದೆ ಮುಂದೆ ನೋಡದೆ ಜಾರ್ಜ್ ಮೇಲೆ ಭರವಸೆ ಇಟ್ಟರು. ಜಾರ್ಜ್ ಅವರ ಕನ್ವಿನ್ಸಿಂಗ್ ಪವರ್ ತುಂಬಾ ಅದ್ಭುತ ಆಗಿತ್ತು. ಅವರ ಕೊಂಕಣಿ, ತುಳು, ಹಿಂದೀ, ಇಂಗ್ಲಿಷ್, ಮರಾಠಿ ಭಾಷೆಯ ಮಾತುಗಳು ಜನರಲ್ಲಿ ಭಾರೀ ಭರವಸೆ ಮೂಡಿಸಿದವು.

ಶ್ರೀಧರನ್ ಎಂಬ ಮಹಾನ್ ಕಾಯಕ ರಾಕ್ಷಸ

ಇನ್ನು ಈ ಶ್ರೀಧರನ್ ಸಾಮರ್ಥ್ಯದ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ! ಆತ ಮಹಾ ಕಾಯಕ ರಾಕ್ಷಸ! ತುಂಬಾ ಸ್ಟ್ರಾಂಗ್ ಆಗಿದ್ದ ಯುವ ಇಂಜಿನಿಯರಗಳ ತಂಡವನ್ನು ಕಟ್ಟಿಕೊಂಡ ಅವರು ಮುಂದಿನ ಎಂಟು ವರ್ಷಗಳ ಕಾಲ ಮಾಡಿದ್ದೆಲ್ಲವೂ ಅದ್ಭುತ! ಎಲ್ಲವೂ ಮಹೋನ್ನತ!

ಅತ್ಯಂತ ದುರ್ಗಮವಾದ ಪರ್ವತಗಳ ಶ್ರೇಣಿ! ಜಾರುವ ಬಂಡೆಗಳು! ಒಂದು ಮಳೆಗೆ ಜಾರಿ ಕುಸಿದು ಹೋಗುವ ಶೇಡಿ ಮಣ್ಣಿನ ನೆಲ! ಬೆಟ್ಟಗಳನ್ನು ಅಗೆದು ಮೈಲು ದೂರದ ಸುರಂಗಗಳನ್ನು ಕೊರೆಯುವ ಸವಾಲು! ಅದು ಇಡೀ ಭಾರತದ ರೈಲ್ವೆ ಇತಿಹಾಸದ ಅತ್ಯಂತ ಸಾಹಸದ ಮತ್ತು ಕಠಿಣ ಸವಾಲಿನ ಪ್ರಾಜೆಕ್ಟ್ ಆಗಿತ್ತು!

ಮೂರು ರಾಜ್ಯಗಳ ಹೃದಯದ ಮೂಲಕ ಹಾದು ಹೋಗುವ 760 ಕಿಲೋಮೀಟರ್ ರೈಲ್ವೆ ಹಳಿಗಳು! 2000 ಸಣ್ಣ ಸೇತುವೆಗಳು! 179 ದೊಡ್ಡ ಸೇತುವೆಗಳು! 92 ಭಾರೀ ಸುರಂಗಗಳು! ಅದರಲ್ಲಿ ಕೆಲವು ಮೈಲುಗಟ್ಟಲೆ ಉದ್ದ ಇವೆ! 59 ವೈಭವದ ನಿಲ್ದಾಣಗಳು! ಆಗಾಗ ಗುಡ್ಡದ ಕುಸಿತದ ಹಿನ್ನೆಲೆಯಲ್ಲಿ ಕೆಲಸವು ಕಷ್ಟ ಆಯ್ತು. ಆದರೆ ಈ. ಶ್ರೀಧರನ್ ಕೆಲಸವನ್ನು ನಿಲ್ಲಲು ಬಿಡಲಿಲ್ಲ! ಜಾರ್ಜ್ ಅವರನ್ನು ಬೆನ್ನು ಬಿಡಬೇಕಲ್ಲ!

ಜಾರ್ಜ್ ಫರ್ನಾಂಡಿಸ್ ನುಡಿದಂತೆ ನಡೆದರು

ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ಆಗ ಕೇಂದ್ರದ ರಕ್ಷಣಾ ಮಂತ್ರಿ ಆಗಿದ್ದರು ಜಾರ್ಜ್ ಫರ್ನಾಂಡಿಸ್. ಅಂದು ವೇದಿಕೆಯಲ್ಲಿ ಇದ್ದು ಆನಂದ ಭಾಷ್ಪ ಸುರಿಸಿದರು! ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು! ಅಂದು ಮಂಗಳೂರು ಮುಂಬೈ ನಡುವೆ ಮೊದಲ ಟ್ರೈನ್ ಓಡಿತ್ತು!

ಕೊಂಕಣ ರೈಲು ಕ್ರಾಂತಿಯನ್ನೇ ಮಾಡಿತು!

ಅದುವರೆಗೆ ಮಂಗಳೂರು ಮುಂಬೈ ನಡುವಿನ ಪ್ರಯಾಣಕ್ಕೆ 48 ಗಂಟೆ ತೆಗೆದುಕೊಳ್ಳುತ್ತಿದ್ದ ಕರಾವಳಿಯ ಮಂದಿ ಅಂದು ಕೇವಲ 15 ಗಂಟೆಯಲ್ಲಿ ಮುಂಬೈ ತಲುಪಿದ್ದರು! ಈಗಇನ್ನೂ ಕಡಿಮೆಯ ಸಮಯವು ಸಾಕಾಗುತ್ತದೆ. ದೂರವು 1200 ಕಿಲೋಮೀಟರ್‌ನಿಂದ 760 ಕಿಲೋಮೀಟರ್‌ಗೆ ಇಳಿದಿದೆ. ಅತ್ಯಂತ ಆಕರ್ಷಕವಾದ 59 ಸ್ಟೇಶನ್‌ಗಳು ಕೂಡ ಮುಗಿದು ಬಿಟ್ಟಿದ್ದವು. ತುಳುವರ ಸಂತೋಷಕ್ಕೆ ಅಂದು ಪಾರವೇ ಇರಲಿಲ್ಲ. ಈ. ಶ್ರೀಧರನ್ ಈ ಪ್ರಾಜೆಕ್ಟನ್ನು ಪೂರ್ತಿ ಮಾಡಿ ಇನ್ನೊಂದು ಪ್ರಾಜೆಕ್ಟ್ ಹಿಂದೆ ಹೋದರು. ಅವರೆಲ್ಲಿ ವಿಶ್ರಾಂತಿ ಪಡೆಯುತ್ತಾರೆ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ಇಂದು ಅದೇ ಕೊಂಕಣ್ ರೈಲ್ವೆ ಹಳಿಗಳ ಮೂಲಕ ನೂರಾರು ಟ್ರೈನಗಳು ಓಡುತ್ತಿವೆ. ದಕ್ಷಿಣ ಭಾರತ ಮತ್ತು ಉತ್ತರ ಭಾರತವನ್ನು ಕನೆಕ್ಟ್ ಮಾಡುವ ಶ್ರೇಷ್ಟ ಸಾರಿಗೆ ವ್ಯವಸ್ಥೆ ಅದು. ಅದೇ ಹಳಿಗಳ ಮೇಲೆ ಈಗ ಭಾರತದ ಅತ್ಯಂತ ವೇಗವಾದ ರೈಲು ಕೂಡ ಓಡುತ್ತಿದೆ. ಖರ್ಚು ಕೂಡ ತುಂಬಾ ಕಡಿಮೆ.

ಜಾರ್ಜ್ ಫರ್ನಾಂಡಿಸ್ ಆದರು ಲೆಜೆಂಡ್

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ. ಬದುಕಿದ್ದರೆ ಅವರಿಗೆ ಇಂದು 94ವರ್ಷ ಆಗಿರುತ್ತಿತ್ತು. ಅವರಿಂದು ಬದುಕಿಲ್ಲ. ಅವರು ಗತಿಸಿ ಐದು ವರ್ಷಗಳೇ ಆಗಿವೆ. ಆದರೆ ಪ್ರತೀ ದಿನವೂ ರೈಲಿನಲ್ಲಿ ಪ್ರಯಾಣ ಮಾಡುವ ಜನರ ಹೃದಯದಲ್ಲಿ ಅವರು ಸದಾ ಜೀವಂತ ಇರುತ್ತಾರೆ.

ಉಡುಪಿ ಇಂದ್ರಾಳಿ ಜಂಕ್ಷನನಿಂದ ರೈಲ್ವೆ ನಿಲ್ದಾಣದ ತನಕ ಹೋಗುವ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಇಡಲಾಗಿದೆ. ಆದರೆ ಆ ನಾಮಫಲಕವು ಎಲ್ಲೋ ಮರೆಗೆ ಹೋಗಿದೆ. ಸರಕಾರಗಳು ಅವರನ್ನು ಮರೆತಿವೆ. ಅವರ ಬಗ್ಗೆ ನಿರ್ಲಕ್ಷ್ಯವು ಖಂಡಿತಾ ಸಲ್ಲದು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

ಸೈಬರ್‌ ಸೇಫ್ಟಿ ಅಂಕಣ: ನಿಮ್ಮ ಟೆಕ್ನಾಲಜಿ ಯಾತ್ರೆಯನ್ನು ಸುರಕ್ಷಿತಗೊಳಿಸಲು ಬಹುರಾಷ್ಟ್ರೀಯ ಸೈಬರ್‌ ಭದ್ರತಾ ಸಂಸ್ಥೆಯೊಂದು ಡಿಸೆಂಬರ್‌ 2023ಲ್ಲಿ ಪ್ರಕಟಿಸಿದ ಟ್ರೆಂಡ್‌ಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಇಲ್ಲಿದೆ. ಇದು ತಂತ್ರಜ್ಞಾನವನ್ನು ಹೆಚ್ಚು ಪ್ರಜ್ಞಾಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ಬಳಸುವ ಉತ್ತಮ ಅಭ್ಯಾಸಗಳನ್ನು ತಿಳಿಸುತ್ತದೆ.

VISTARANEWS.COM


on

cyber attack ನನ್ನ ದೇಶ ನನ್ನ ದನಿ
Koo
cyber-safty-logo

ಸೈಬರ್‌ ಸೇಫ್ಟಿ ಅಂಕಣ: ತಂತ್ರಜ್ಞಾನದ ಪ್ರಗತಿ ನಮ್ಮ ದೈನಂದಿನ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ. ನಮ್ಮ ಜೀವನದಲ್ಲಿ ಅದರ ಬಳಕೆ ಹೆಚ್ಚುತ್ತಿದೆ. ಹಾಗಾಗಿ ತಂತ್ರಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ಬಳಸುವ ಅಭ್ಯಾಸಗಳನ್ನು ಸಂಸ್ಥೆಗಳು, ಮತ್ತು ನಾವು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅಭಿವೃದ್ಧಿಯ ಜೊತೆಗೆ ಆತಂಕಕಾರಿಯಾಗಿ ಸೈಬರ್ ದಾಳಿಗಳು (cyber attack) ಮತ್ತು ವಂಚನೆಯ (cyber fraud) ಪ್ರಕರಣಗಳೂ ಹೆಚ್ಚುತ್ತಿವೆ. ಆದ್ದರಿಂದ, ಪ್ರತಿ ವರ್ಷವೂ ಸೈಬರ್ ಭದ್ರತೆಯ (cyber security) ಟ್ರೆಂಡ್‌ಗಳ ಬಗ್ಗೆ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಕಾರ್ಪೊರೇಟ್‌ (corporate) ವಲಯದಲ್ಲಿ ಮುಖ್ಯವಾದ ಕಾರ್ಯಕ್ರಮ.

2021ರವರೆಗೆ ಜಾಗತಿಕವಾಗಿ ಸೈಬರ್‌ ಅಟ್ಯಾಕ್‌ಗಳು ಶೇಕಡಾ 125ರಷ್ಟು ಹೆಚ್ಚಾಗಿದೆ. ಸೈಬರ್ ಕ್ರಿಮಿನಲ್‌ಗಳು (cyber criminals) ಕಂಪನಿಗಳಿಗೆ ಮತ್ತು ವ್ಯಕ್ತಿಗಳಿಗೆ ಬೆದರಿಕೆ ಹಾಕುತ್ತಲೇ ಇದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷವು ಸೈಬರ್ ದಾಳಿಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಆನ್‌ಲೈನ್‌ನಲ್ಲಿ ಫಿಶಿಂಗ್ (fishing) ಮುಖಾಂತರ ಹಣ ದೋಚುವ ಕಾರ್ಯತಂತ್ರ ಹೆಚ್ಚಾಗಿದೆ. ಯುರೋಪಿನಲ್ಲಿ ransomware ದಾಳಿಯು ಶೇಕಡ 26ರಷ್ಟಿದ್ದು ಪ್ರಮುಖವಾದ ಪ್ರಕಾರವಾಗಿದೆ. ಸರ್ವರ್‌ ಮೇಲಿನ ದಾಳಿಗಳು (12%) ಮತ್ತು ಡೇಟಾ ಕಳ್ಳತನ (10%) ಇತರ ರೀತಿಯ ಸೈಬರ್ ದಾಳಿಗಳಾಗಿವೆ.

ಸೈಬರ್ ಕ್ರೈಮ್ ಹೆಚ್ಚು ಕಾಲ ನಿಶ್ಚಲವಾಗಿ ಉಳಿಯುವುದಿಲ್ಲ. ಕ್ರಿಮಿನಲ್‌ಗಳು ನಿರಂತರವಾಗಿ ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ತಾಂತ್ರಿಕ ಮತ್ತು ಸಾಮಾಜಿಕ ಆವಿಷ್ಕಾರಗಳು, ಬ್ರೌಸರ್‌ಗಳ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಏಮಾರಿಸಲು ಹ್ಯಾಕರ್‌ಗಳು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಇಕಾಮರ್ಸ್ (E commerce) ಸೈಟ್‌ಗಳು ಅಥವಾ ಮೊಬೈಲ್ ಕಂಪ್ಯೂಟಿಂಗ್ ಸಾಧನಗಳ ಸುರಕ್ಷತೆಯಲ್ಲಿ ಲೋಪಗಳನ್ನು ಹುಡುಕುತ್ತಲೇ ಇರುತ್ತಾರೆ. ಸೈಬರ್‌ ಸೆಕ್ಯೂರಿಟಿ ಚಾಪೆ ಕೆಳಗೆ ತೂರಿದರೆ, ಸೈಬರ್‌ ಕ್ರಿಮಿನಲ್‌ಗಳು ರಂಗೋಲಿ ಕೆಳಗೇ ತೂರುವ ಜಾಣತನ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ನಿಮ್ಮ ಟೆಕ್ನಾಲಜಿ ಯಾತ್ರೆಯನ್ನು ಸುರಕ್ಷಿತಗೊಳಿಸಲು ಬಹುರಾಷ್ಟ್ರೀಯ ಸೈಬರ್‌ ಭದ್ರತಾ ಸಂಸ್ಥೆಯೊಂದು ಡಿಸೆಂಬರ್‌ 2023ಲ್ಲಿ ಪ್ರಕಟಿಸಿದ ಟ್ರೆಂಡ್‌ಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ಇದು ಕಂಪೆನಿಗಳ ಮುಖ್ಯಸ್ಥರಿಗಷ್ಟೇ ಅಲ್ಲ, ಜನಸಾಮಾನ್ಯರೂ ತಿಳಿದು ಜಾಗರೂಕರಾಗುವಂತಿದೆ. ತಂತ್ರಜ್ಞಾನವನ್ನು ಹೆಚ್ಚು ಪ್ರಜ್ಞಾಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ಬಳಸುವ ಉತ್ತಮ ಅಭ್ಯಾಸಗಳನ್ನು ತಿಳಿಸುತ್ತದೆ.

1) ರಕ್ಷಣೆ ಮತ್ತು ದಾಳಿಗಾಗಿ ಕೃತಕ ಬುದ್ಧಿಮತ್ತೆಯ ಅಳವಡಿಕೆ: ಕೃತಕ ಬುದ್ಧಿಮತ್ತೆ ಹೆಚ್ಚು ಸಂಕೀರ್ಣವಾಗುತ್ತಿದೆ. ಸೈಬರ್ ದಾಳಿಕೋರರು ದಾಳಿಗಳನ್ನು ರೂಪಿಸಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಸೈಬರ್ ಸುರಕ್ಷತಾ ಪರಿಣಿತರು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಹೊಸ ಬಗೆಯ ರಕ್ಷಣಾ ವ್ಯವಸ್ಥೆಗಳನ್ನು ರೂಪಿಸುತ್ತಿದ್ದಾರೆ.

2) ಫಿಶಿಂಗ್ ಅಟ್ಯಾಕ್‌ಗಳ ವಿಕಸನ: ಫಿಶಿಂಗ್, ಆಕ್ರಮಣಕಾರರಿಗೆ ಪ್ರವೇಶವನ್ನು ನೀಡಲು ಬಳಕೆದಾರರನ್ನು ಮೋಸಗೊಳಿಸುವುದನ್ನು ಒಳಗೊಂಡಿರುವ ಒಂದು ರೀತಿಯ ಸಾಮಾಜಿಕ ಎಂಜಿನಿಯರಿಂಗ್ ದಾಳಿ. ಇದು 2024 ರಲ್ಲಿ ಆತಂಕಕಾರಿಯಾಗಿ ಮುಂದುವರಿಯುತ್ತದೆ. ವರ್ಷದ ಮೊದಲಾರ್ಧ ಮುಗಿಯುವಷ್ಟರಲ್ಲಿ ಇದು ಕಳೆದ ವರ್ಷಕ್ಕಿಂದ ಜಾಸ್ತಿಯಾಗಿರುವುದು ಗಮನಿಸಿದ್ದಾರೆ.

3) ಸಂಸ್ಥೆಗಳಲ್ಲಿ ಸೈಬರ್‌ ಸುರಕ್ಷತೆಗೆ ಆದ್ಯತೆ: ಸೈಬರ್‌ ದಾಳಿಗಳ ಹೆಚ್ಚುತ್ತಿರುವ ಆವರ್ತನದೊಂದಿಗೆ, 2024 ರಲ್ಲಿ ಐಟಿ ವಿಭಾಗದ ಅವಿಭಾಜ್ಯ ಅಂಗವಾಗಿರುವುದಕ್ಕಿಂತ ಹೆಚ್ಚಾಗಿ ಸೈಬರ್‌ ಸುರಕ್ಷತೆಯು ಸಂಸ್ಥೆಗಳಲ್ಲಿ ಕಾರ್ಯತಂತ್ರದ ಆದ್ಯತೆಯಾಗಿರಬೇಕು.

cyber attacks

4) IoT-ಚಾಲಿತ ಸೈಬರ್ ದಾಳಿಗಳು: ಇಂಟರ್ನೆಟ್ ಆಫ್‌ ತಿಂಗ್ಸ್ (IoT: ಮನೆಗಳಲ್ಲಿ ಧ್ವನಿ ಮೂಲಕ ಬಳಸುವ ಸಾಧನಗಳು ಉದಾಹರಣೆ: ಅಲೆಕ್ಸಾ) ಮೂಲಕ ಪರಸ್ಪರ ಸಂವಹನ ನಡೆಸುವ ಸಾಧನಗಳು ಹೆಚ್ಚಾಗುತ್ತಿದೆ. ಇದು ಸೈಬರ್ ದಾಳಿಕೋರರಿಗೆ ದಾಳಿ ಮಾಡಲು ಹೆಚ್ಚು ಸಂಭಾವ್ಯ ವ್ಯವಸ್ಥೆಗಳನ್ನು ಕೊಡುತ್ತದೆ.

5) ಸೈಬರ್ ಸ್ಥಿತಿಸ್ಥಾಪಕತ್ವ ಮತ್ತು ಸೈಬರ್ ಭದ್ರತೆ: 2024ರಲ್ಲಿ, ಸೈಬರ್ ಸ್ಥಿತಿಸ್ಥಾಪಕತ್ವ ಮತ್ತು ಸೈಬರ್ ಭದ್ರತೆಯ ನಡುವಿನ ಸ್ಪಷ್ಟವಾದ ವ್ಯತ್ಯಾಸವು ಹೊರಹೊಮ್ಮುತ್ತದೆ.

6) ಝೀರೋ-ಟ್ರಸ್ಟ್ ಮಾದರಿ: ಶೂನ್ಯ-ಟ್ರಸ್ಟ್ ಮಾದರಿಯು ಎಲ್ಲವೂ ಬೆದರಿಕೆ ಎಂದು ಪರಿಗಣಿಸುತ್ತದೆ. ಅಂದರೆ ಕಾರ್ಪೊರೇಟ್ ನೆಟ್‌ವರ್ಕ್‌ನಲ್ಲಿ ಒಳಗೊಂಡಿರುವ ಎಲ್ಲಾ ಸಂವಹನವನ್ನೂ ರೆಕಾರ್ಡ್ ಮಾಡಬೇಕು ಮತ್ತು ವಿಶ್ಲೇಷಿಸಬೇಕು. ಉದ್ಯೋಗಿಯ ಪ್ರವೇಶ ಮತ್ತು ಅವರಿಗೆ ಕೊಟ್ಟಿರುವ ವ್ಯಾಪ್ತಿಯ ಪರಿಧಿಯನ್ನು ವನ್ನು ಪರಿಶೀಲಿಸುವುದು.

7) ಸೈಬರ್ ವಾರ್‌ಫೇರ್ ಮತ್ತು ಪ್ರಭುತ್ವ-ಪ್ರಾಯೋಜಿತ ಸೈಬರ್ ದಾಳಿಗಳು: ಉಕ್ರೇನ್‌ನಲ್ಲಿನ ಯುದ್ಧದೊಂದಿಗೆ, ಸೈಬರ್ ವಾರ್‌ಫೇರ್ ಹೆಚ್ಚು ಜನಪ್ರಿಯವಾಗಿದೆ ಮತ್ತು ಸೈಬರ್ ದಾಳಿಯ ವಿಕಾಸವು ಸ್ಪಷ್ಟವಾಗಿದೆ.

8) Ransomware ಎವಲ್ಯೂಷನ್: Ransomware ಒಂದು ಸೇವೆಯಾಗಿ (RaaS – Ransomware as a service), ಬಳಕೆದಾರರು ಸುಲಿಗೆ ಪಾವತಿಸುವವರೆಗೆ ಕಂಪ್ಯೂಟರ್ ಸಿಸ್ಟಮ್‌ಗೆ ಪ್ರವೇಶವನ್ನು ನಿರ್ಬಂಧಿಸುವುದನ್ನು ಒಳಗೊಂಡಿರುವ ಈ ಸೈಬರ್‌ ದಾಳಿ, ವಿಶೇಷವಾಗಿ ಆರೋಗ್ಯ ಪೂರೈಕೆದಾರರಿಗೆ ಆತಂಕಕಾರಿಯಾಗಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

9) ಗೌಪ್ಯತೆ ಮತ್ತು ನಿಯಂತ್ರಕ ಅನುಸರಣೆ: NIS2, ಯುರೋಪಿಯನ್ ಒಕ್ಕೂಟದ ನೆಟ್‌ವರ್ಕ್ ಮತ್ತು ಮಾಹಿತಿ ಭದ್ರತಾ ನಿರ್ದೇಶನ, ಸೈಬರ್ ಸುರಕ್ಷತೆಯನ್ನು ಸುಧಾರಿಸಲು ಮತ್ತು ಸೈಬರ್ ಬೆದರಿಕೆಗಳ ವಿರುದ್ಧ ಮೂಲಸೌಕರ್ಯಗಳನ್ನು ರಕ್ಷಿಸಲು ಸಮಗ್ರ ಪ್ರಯತ್ನ ಮಾಡುತ್ತಿದೆ.

10) ವಿಸ್ತೃತ ಪತ್ತೆ ಮತ್ತು ಪ್ರತಿಕ್ರಿಯೆ: (XDR – Extended Detection and Response) ನಿರಂತರ ತಾಂತ್ರಿಕ ಪ್ರಗತಿಯೊಂದಿಗೆ, ಸಾಂಪ್ರದಾಯಿಕ ಸೈಬರ್‌ ಸೆಕ್ಯುರಿಟಿ ಉಪಕರಣಗಳು ಸಮಗ್ರ ಪರಿಹಾರಗಳನ್ನು ಕೊಡುವಂತಹ ಉಪಕರಣಗಳಿಗೆ ಮತ್ತು ಕಾರ್ಯತಂತ್ರಗಳಿಗೆ ದಾರಿ ಮಾಡಿಕೊಡುತ್ತದೆ.

11) ಥರ್ಡ್-ಪಾರ್ಟಿ ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಹೆಚ್ಚಿದ ಹೂಡಿಕೆಗಳು: ಇದು ಮೂರನೇ ವ್ಯಕ್ತಿಗಳಿಗೆ ಉಪಗುತ್ತಿಗೆ ನೀಡುವ ಪೂರೈಕೆದಾರರು ಅಥವಾ ಸೇವಾ ಪೂರೈಕೆದಾರರಿಗೆ ಸಂಬಂಧಿಸಿದ ಅಪಾಯಗಳನ್ನು ವಿಶ್ಲೇಷಿಸುವ ಮತ್ತು ಕಡಿಮೆ ಮಾಡುವ ಪ್ರಕ್ರಿಯೆಯಾಗಿದೆ.

12) ಗೌಪ್ಯತೆ-ಸಂರಕ್ಷಿಸುವ ತಂತ್ರಜ್ಞಾನಗಳು: ಡೇಟಾ ಗೌಪ್ಯತೆ (Data privacy) ಮತ್ತು ಅದರ ನಿಯಂತ್ರಣವು ಹೋಮೋಮಾರ್ಫಿಕ್ ಎನ್‌ಕ್ರಿಪ್ಶನ್‌ನಂತಹ ಗೌಪ್ಯತೆ-ಸಂರಕ್ಷಿಸುವ ತಂತ್ರಜ್ಞಾನಗಳ ಅಭಿವೃದ್ಧಿಗೆ ಚಾಲನೆ ನೀಡುತ್ತದೆ

13) DevSecOps ನ ಏಕೀಕರಣ: DevSecOps ಇನ್ನು ಮುಂದೆ ಒಂದು ಪರಿಕಲ್ಪನೆಯಾಗಿರುವುದಿಲ್ಲ ಆದರೆ ಸಾಫ್ಟ್‌ವೇರ್ ಅಭಿವೃದ್ಧಿಯ ಮೂಲಭೂತ ಭಾಗವಾಗುತ್ತದೆ

14) ಕ್ಲೌಡ್ ಮತ್ತು ಮಲ್ಟಿ-ಕ್ಲೌಡ್ ಪರಿಸರದಲ್ಲಿ ಭದ್ರತೆ: ಕ್ಲೌಡ್ (cloud) ಅಥವಾ ಬಹು-ಕ್ಲೌಡ್ ಪರಿಸರದಲ್ಲಿ ಭದ್ರತೆ ಐಟಿ ಪರಿಸರ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳ ಬೇಕಾದ ಪ್ರವೃತ್ತಿ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

ನನ್ನ ದೇಶ ನನ್ನ ದನಿ ಅಂಕಣ: ಶತಮಾನದ ಹಿಂದೆಯೇ, ಬ್ರಿಟಿಷರು ಆಳುತ್ತಿದ್ದಾಗಲೇ, ಬ್ರಿಟಿಷರ ಬಗೆಗೆ ಬಾಮನದಾಸರಂತಹವರು ಬರೆದಿಟ್ಟುಹೋಗಿದ್ದರೂ ನಮ್ಮ ಕನ್ನಡದ ನವ್ಯರಿಗೆ ರೋಮಿಲ್ಲಾ ಥಾಪರ್, ಇರ್ಫಾನ್ ಹಬೀಬ್, ಡಿ.ಎನ್.ಝಾ ರಂತಹ ಸುಳ್ಳು-ಇತಿಹಾಸಕಾರರ ಪುಸ್ತಕಗಳು ಮಾತ್ರವೇ ಪಥ್ಯವಾದವು. ಈಗಲೂ ವಿವಿಧ ಕ್ಷೇತ್ರಗಳಲ್ಲಿರುವ ಅವರ ಶಿಷ್ಯಕೋಟಿ ಇನ್ನೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಬರೆಯುತ್ತಾರೆ, ಮಾತನಾಡುತ್ತಾರೆ, ವಾದಿಸುತ್ತಾರೆ.

VISTARANEWS.COM


on

ನನ್ನ ದೇಶ ನನ್ನ ದನಿ baman das basu
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: “ವಸಾಹತುಶಾಹಿ (colonialism) ನಿರ್ಗಮನದ ಅನಂತರವೂ ಒಬ್ಬ ಅದರ ಪರವಾಗಿಯೇ ಮಾತನಾಡುತ್ತಾನೆ, ಎಂದರೆ ವಸಾಹತುಶಾಹಿಯು ತುಂಬ ಪರಿಣಾಮಕಾರಿಯಾಗಿಯೇ ಬೇರೂರಿದೆ ಎಂದರ್ಥ”.

ಅನೇಕ ವರ್ಷಗಳಿಂದ ಈ ಚಿಂತನೆ, ಈ ಮಾತು, ಈ ಸಂಗತಿ ನನ್ನನ್ನು ಕಾಡುತ್ತಲೇ ಇದೆ. ನಿಜ. ನಮ್ಮ ಮೇಲಾದ ಆಕ್ರಮಣಗಳು ಬಹು-ಮುಖೀ. ನಾವು ಶತಾಯಗತಾಯ ಯುದ್ಧಗಳನ್ನು (wars) ಸೋಲಬಾರದು. ಸೋತರೆ ಪ್ರಣಶ್ಯತಿ. ಅಬ್ರಹಾಮಿಕ್ (abrahamic) ಮತಗಳ ವಿನಾಶಕಾರೀ ಆಕ್ರಮಣಗಳನ್ನು, ಧ್ವಂಸ-ವಿಧ್ವಂಸಗಳನ್ನು ಅಧ್ಯಯನ ಮಾಡಿದಾಗ ಮತ್ತು ಇವುಗಳಿಗಿಂತಲೂ ನಮ್ಮಂತಹ ಗುಲಾಮದೇಶಗಳ ಜನರ ಮಾನಸಿಕತೆ – ಅಭಿಪ್ರಾಯಗಳ ಮೇಲಾದ ಭಯಾನಕ ದುಷ್ಪರಿಣಾಮಗಳನ್ನು ನೋಡುವಾಗ, ಹೌದು, ನಾವು ಶತ್ರುಗಳನ್ನು (enemies) ಯಾವ ಕಾರಣಕ್ಕೂ ಔದಾರ್ಯದಿಂದ ಕಾಣಬಾರದಿತ್ತು. ಅವರ “ಭಾಷೆಯಲ್ಲಿಯೇ” ನಾವೂ ಉತ್ತರ ನೀಡಬೇಕಿತ್ತು, ಎನಿಸುತ್ತದೆ. ಶ್ರೀಕೃಷ್ಣನಂತೆ, (SriKrishna) ಆಚಾರ್ಯ ಚಾಣಕ್ಯರಂತೆ (Chanakya) ಸಂಪೂರ್ಣ ಶತ್ರುನಾಶವೇ ನಮ್ಮ ಕಾರ್ಯತಂತ್ರವೂ ಆಗಬೇಕಿತ್ತು, ಅನಿಸುತ್ತದೆ. ಬ್ರಿಟಿಷರು (British) ಮತ್ತು ಅವರ “ಪ್ರೀತಿಪಾತ್ರರು” ಬರೆಸಿರುವ – ಬರೆದಿಟ್ಟಿರುವ ಇತಿಹಾಸ ಪುಸ್ತಕಗಳನ್ನು ನೋಡಿದರೆ, ಇಡೀ ದಕ್ಷಿಣ ಭಾರತವನ್ನು ಈಗಲೂ ನಾಶ ಮಾಡುತ್ತಲೇ ಇರುವ ಅವೈಜ್ಞಾನಿಕವಾದ ಆರ್ಯ – ದ್ರಾವಿಡ (Arya Dravida) ಪೊಳ್ಳು ಸಿದ್ಧಾಂತದ ಪರಿಣಾಮವನ್ನು ನೋಡಿದರೆ ಗಾಬರಿಯಾಗುತ್ತದೆ. ನೋಡಿ, ನಮ್ಮ ದೇಶದ ಶಿಕ್ಷಣ, ಕೃಷಿ, ಉದ್ಯಮಗಳನ್ನು ನಾಶ ಮಾಡಿದ ಬ್ರಿಟಿಷರು, ಬಹಳಷ್ಟು ಭಾರತೀಯರ ದೃಷ್ಟಿಯಲ್ಲಿ ಇಂದಿಗೂ ಆರಾಧ್ಯದೈವಗಳಾಗಿದ್ದಾರೆ, ಉದ್ಧಾರಕರಾಗಿದ್ದಾರೆ! ವಸಾಹತುಶಾಹಿಯ ಅಧ್ಯಾಯ ಮುಗಿದಿದೆ, ನಾವೊಂದು ಸ್ವತಂತ್ರ ರಾಷ್ಟ್ರ, ಎಂದು ನಾವು ಎಷ್ಟೆಷ್ಟು ಬಾರಿ ಹೇಳಿಕೊಂಡರೂ, ವಸಾಹತುಶಾಹಿಯ ಮಾನಸಿಕತೆ – ಅವರ ಬಗೆಗಿನ ಆರಾಧನೆಗಳು ನಮ್ಮೊಳಗೆ ಇದ್ದರೆ, ನಾವಿನ್ನೂ ಗುಲಾಮರಾಗಿಯೇ ಮುಂದುವರಿದಿದ್ದೇವೆ, ಎನಿಸುವುದಿಲ್ಲವೇ?

ಇತಿಹಾಸಕಾರ ಬಾಮನ (ವಾಮನ) ದಾಸ ಬಸು (Baman Das Basu) ಅವರ “ಹಿಸ್ಟರಿ ಆಫ್ ಎಜುಕೇಷನ್ ಇನ್ ಇಂಡಿಯಾ ಅಂಡರ್ ದಿ ರೂಲ್ ಆಫ್ ಈಸ್ಟ್ ಇಂಡಿಯಾ ಕಂಪನಿ” (ಪ್ರಕಟಣೆ 1922) ಕೃತಿಯ ಕೆಲವು ಸಾಲುಗಳನ್ನು ಗಮನಿಸುವಾಗ, ಸಹಜವಾಗಿಯೇ ಕನ್ನಡದ ನಮ್ಮ ನವ್ಯ ಸಾಹಿತಿಗಳ ಮಾತು – ಭಾಷಣಗಳೇ ನೆನಪಾಗುತ್ತವೆ. ನಾಲ್ಕೈದು ದಶಕಗಳ ಹಿಂದೆ ನಮ್ಮಂತಹವರ ಮೇಲೆ ತುಂಬಾ ಪ್ರಭಾವ ಬೀರಿದವರು ಈ ನವ್ಯರು. Of Course, ಅವರೆಲ್ಲಾ ತುಂಬ ಚೆನ್ನಾಗಿ ಮಾತನಾಡುತ್ತಿದ್ದರು, ಆಕರ್ಷಕವಾದ ಹೊಸದೊಂದು ಭಾಷೆಯಲ್ಲಿ ಬರೆಯುತ್ತಿದ್ದರು. ಭಾರತೀಯ ಸಾಹಿತ್ಯದ ಮೇಲೆ, ಶಿಕ್ಷಣ – ಜನಜೀವನ – ಸಾಮಾಜಿಕ ವ್ಯವಸ್ಥೆಗಳ ಮೇಲೆ, ವಸಾಹತುಶಾಹಿಯ ಪ್ರಭಾವದ ಬಗೆಗೆ ಈ ನವ್ಯರ ಮಾತುಗಳನ್ನು ಕೇಳಿ ನಾನು ಬೆರಗಾದುದುಂಟು. ತಮ್ಮ ಮಾತಿನ ಪ್ರತಿ ಎರಡು ವಾಕ್ಯಗಳಿಗೊಮ್ಮೆ ಭಾರತದ, ಮುಖ್ಯವಾಗಿ ಹಿಂದೂಗಳ ಮೂಢನಂಬಿಕೆಗಳ ಬಗೆಗೆ, ಅಸ್ಪೃಶ್ಯತೆ – ಜಾತಿವ್ಯವಸ್ಥೆ – ಮುಂತಾದವುಗಳ ಬಗೆಗೆ ತಪ್ಪದೇ ಪ್ರಹಾರ ಮಾಡುತ್ತಿದ್ದರು. ವಸಾಹತುಶಾಹಿ ಬಂದುದೇ ನಮ್ಮ ವಿಮೋಚನೆಗೆ ಎಂದು ಪರೋಕ್ಷವಾಗಿ ಹೇಳುತ್ತಿದ್ದರು. ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ, ಶೂದ್ರರಿಗೆ, ಅಸ್ಪೃಶ್ಯರಿಗೆ ಕಳೆದ ಐದು ಸಾವಿರ ವರ್ಷಗಳಿಂದ ವಿದ್ಯಾಭ್ಯಾಸಕ್ಕೆ ಅವಕಾಶವಿರಲಿಲ್ಲ, ಎಂದು ರೋದಿಸುತ್ತಿದ್ದರು. ಬ್ರಿಟಿಷರ ಪ್ರೀತಿಪಾತ್ರರೇ ಬರೆಸಿದ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಯೂರೋಪಿಯನ್ನರು ಇಲ್ಲಿಗೆ ಬಂದುದೇ ವ್ಯಾಪಾರದ ಹೆಸರಿನಲ್ಲಿ ಲೂಟಿ ಮಾಡಲು – ವಸಾಹತುಗಳನ್ನು ಸ್ಥಾಪಿಸಲು ಎಂದೆಲ್ಲಾ ಓದಿದವರಿಗೆ, ಈ ನವ್ಯರ ಮಾತುಗಳು ಗೊಂದಲವನ್ನುಂಟುಮಾಡುತ್ತಿದ್ದವು, ನಮಗೆಲ್ಲಾ ಅಯೋಮಯವಾಗುತ್ತಿತ್ತು. “ಈ ನವ್ಯ ಸಾಹಿತಿಗಳೆಲ್ಲಾ ವಸಾಹತುಶಾಹಿಯ ಪರವಾಗಿಯೇ ಮಾತನಾಡುತ್ತಿದ್ದಾರಲ್ಲಾ” ಎನಿಸಿ ವಿಷಾದವೂ ಉಂಟಾಗುತ್ತಿತ್ತು. ಭಾರತದಲ್ಲಿ ಆಸ್ಪತ್ರೆಗಳನ್ನು, ಶಾಲೆಗಳನ್ನು ಪ್ರಾರಂಭ ಮಾಡಿದವರೇ ಬ್ರಿಟಿಷರು. ಅವರಿಂದಾಗಿಯೇ ರೈಲು ವ್ಯವಸ್ಥೆ ಬಂದಿತು. ಆಧುನಿಕತೆ – ವಿಜ್ಞಾನ ಅವರಿಂದಲೇ ಬಂದಿತು…..ಇತ್ಯಾದಿ ಇತ್ಯಾದಿ……

ಭಾರತದಲ್ಲಿ ರಸ್ತೆಗಳನ್ನು ಮಾಡಿಸಿದವರೂ ಬ್ರಿಟಿಷರೇ, ಎಂದು ಈಗಲೂ ಕೆಲವರು ಉಗ್ಘಡಿಸುವುದುಂಟು. “ಹಾಗಿದ್ದಲ್ಲಿ, ಸ್ವಾಮೀ, ಬ್ರಿಟಿಷರಿಗಿಂತ ಮೊದಲು ಇದ್ದ ಕೃಷ್ಣದೇವರಾಯನ ಐದು ಲಕ್ಷ ಸೈನಿಕರು, 1200 ಆನೆಗಳು, 60,000 ಕುದುರೆಗಳು ಏನು ಆಕಾಶದಲ್ಲಿ ಓಡಾಡುತ್ತಿದ್ದವೇ” ಎಂದು ಕೇಳಿದರೆ ಉತ್ತರಿಸುವುದಿಲ್ಲ.

ಈಗ ಹದಿನಾಲ್ಕು ವರ್ಷಗಳ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೊಬ್ಬರು, ತಮ್ಮ ಮಾತುಗಳ ಆರಂಭದಲ್ಲಿಯೇ “ಬ್ರಿಟಿಷರು ನಮ್ಮ ದೇಶಕ್ಕೆ ಬರದೇಹೋಗಿದ್ದರೆ, ನಾವೆಲ್ಲಾ ಇನ್ನೂ ಅಂಧಕಾರದಲ್ಲಿ ಇರುತ್ತಿದ್ದೆವು” ಎಂದು ಹೇಳಿ ಆಘಾತವನ್ನೇ ಉಂಟುಮಾಡಿದ್ದರು.

ಬಾಮನದಾಸರು ದಾಖಲಿಸಿರುವ ಕೆಲವು ಅಂಶಗಳು ಗಮನಿಸುವಂತಹವು. ಇದು ನೂರು ವರ್ಷಗಳ ಹಿಂದಿನ ಗ್ರಂಥ ಮತ್ತು ಬ್ರಿಟಿಷರು ಆಳುತ್ತಿದ್ದಾಗಲೇ ಪ್ರಕಟವಾದ ಗ್ರಂಥ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಭಾರತಕ್ಕೆ ಸಮುದ್ರ ಮಾರ್ಗದಲ್ಲಿ ಬರಲು ಧಾವಿಸಲು, ಯೂರೋಪಿಯನ್ನರ ಮಧ್ಯೆ 15ನೆಯ ಶತಮಾನದಿಂದಲೇ ಸ್ಪರ್ಧೆ – ಯುದ್ಧ ನಡೆಯುತ್ತಿತ್ತು. ಪೋರ್ತುಗೀಸರನ್ನು, ಡಚ್ಚರನ್ನು, ಫ್ರೆಂಚರನ್ನು ಬಗ್ಗುಬಡಿದು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಪಾರಮ್ಯವನ್ನು ಸಾಧಿಸಿತು. ಭಾರತೀಯರ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಬ್ರಿಟಿಷರೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇಲ್ಲಿನ ರಾಜರ – ಸುಲ್ತಾನರ ನಡುವೆ ರಾಜಕೀಯ ಮಾಡುತ್ತಾ ತಮ್ಮ ಲೂಟಿಯಲ್ಲಿ, ವ್ಯಾಪಾರದಲ್ಲಿ ಗರಿಷ್ಠ ಲಾಭ ಗಳಿಸುವಲ್ಲಿ ನಿರತರಾಗಿದ್ದರು. ಕೆಲಕಾಲಾನಂತರ ಭಾರತದ ಸ್ಥಳೀಯರಿಗೆ ಇಂಗ್ಲಿಷ್ ಶಿಕ್ಷಣ ನೀಡದಿದ್ದರೆ ತಾವು ಬಹಳ ಕಾಲ ವಸಾಹತುವನ್ನು ನಿಭಾಯಿಸಲು ಸಾಧ್ಯವಿಲ್ಲ, ಎಂಬುದು ಅವರಿಗೆ ಅರಿವಾಯಿತು. 18ನೆಯ ಶತಮಾನದ ಕೊನೆಯ ಹೊತ್ತಿಗೆ ಹಿಂದುಗಳಿಗೆ ಮತ್ತು ಮುಸ್ಲಿಮರಿಗೆ, ಕಾಶಿ ಮತ್ತು ಕೊಲ್ಕತ್ತಾಗಳಲ್ಲಿ ಸಂಸ್ಕೃತದ ಮತ್ತು ಇಸ್ಲಾಮೀ ಶಿಕ್ಷಣದ ಕಾಲೇಜುಗಳನ್ನು ಸ್ಥಾಪಿಸಿದರು. ತಮ್ಮ ಆಡಳಿತಾತ್ಮಕ ಉದ್ದೇಶಕ್ಕಾಗಿ ಈ ಕಾಲೇಜುಗಳನ್ನು ಸ್ಥಾಪಿಸಿದರೇ ವಿನಃ, ಸ್ಥಳೀಯರಿಗೆ ವಿದ್ಯೆ ಕಲಿಸುವ ಸದುದ್ದೇಶವಿರಲಿಲ್ಲ.

ಭಾರತದ ನೂರೆಂಟು ಭಾಷೆಗಳನ್ನು ತಾವು ಕಲಿತು ಆಡಳಿತ ಮಾಡುವುದರ ಬದಲಿಗೆ, ಇಲ್ಲಿನವರಿಗೇ ಇಂಗ್ಲಿಷ್ ಕಲಿಸಿಬಿಡುವುದು ಅವರಿಗೆ ಲಾಭದಾಯಕವಾಗಿತ್ತು.

ಇದೇ ಬ್ರಿಟಿಷರೇ, ತಮ್ಮ ಆಳ್ವಿಕೆಯಲ್ಲಿ, ಅಮೆರಿಕೆಯಲ್ಲಿ “ಶಿಕ್ಷಣದ ಉದ್ದೇಶಕ್ಕಾಗಿ ಕಪ್ಪು ಗುಲಾಮರನ್ನು ಒಂದೆಡೆ ಸೇರಿಸುವುದು ಕಾನೂನಿಗೆ ವಿರುದ್ಧವಾಗುತ್ತದೆ. ಉಲ್ಲಂಘಿಸಿದವರಿಗೆ ಉಗ್ರ ಶಿಕ್ಷೆ ನೀಡಲಾಗುತ್ತದೆ” ಎಂದು ಕಾನೂನು ಮಾಡಿದ್ದರು. ಇದು ಬ್ರಿಟಿಷ್ ಧೂರ್ತರ ನಿಜಸ್ವರೂಪ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ನಮ್ಮ ದೇಶಕ್ಕೆ ಸಂಬಂಧಿಸಿದಂತೆ, ಮೆಕಾಲೆಯ ಶಿಫಾರಸ್ಸುಗಳೇನಿದ್ದವು, ಅವನ ಉದ್ದೇಶವೇನಿತ್ತು, ಇತ್ಯಾದಿ ನಮಗೆಲ್ಲ ಗೊತ್ತೇ ಇದೆ. ಬಾಮನದಾಸರು ತಮ್ಮ ಕೃತಿಯಲ್ಲಿ, ಮೆಕಾಲೆಯ ಬಂಧು ಚಾರ್ಲ್ಸ್ ಟ್ರೆವೆಲ್ಯಾನ್ ಎಂಬವನು, ಬ್ರಿಟಿಷ್ ಸಂಸತ್ತಿನ ಸಮಿತಿಯ ಮುಂದೆ ನೀಡಿದ ಹೇಳಿಕೆಯನ್ನೂ ಉಲ್ಲೇಖಿಸುತ್ತಾರೆ. “ಭಾರತದಲ್ಲಿರುವ ಹಿಂದೂಗಳು ಮತ್ತು ಮುಸ್ಲಿಮರು, ಬ್ರಿಟಿಷರನ್ನು ತಮ್ಮ ದೇಶವನ್ನು ವಶಪಡಿಸಿಕೊಂಡ ವಿದೇಶೀ ಶತ್ರುಗಳು ಎಂದೇ ಭಾವಿಸುತ್ತಾರೆ. ಐರೋಪ್ಯ ಶಿಕ್ಷಣವನ್ನು ನೀಡಿದ ಮೇಲೆ, ಅವರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವುದನ್ನೇ ಬಿಟ್ಟುಬಿಡುತ್ತಾರೆ. ಬ್ರಿಟಿಷರನ್ನು ತಮ್ಮ ಶತ್ರುಗಳು ಮತ್ತು ತಮ್ಮ ದೇಶವನ್ನು ಆಕ್ರಮಿಸಿಕೊಂಡವರು ಎಂದು ಭಾವಿಸುವುದನ್ನು ಮರೆತು, ತಮ್ಮ ಸ್ನೇಹಿತರಂತೆ – ಪೋಷಕರಂತೆ ಕಾಣುತ್ತಾರೆ ” ಎಂದಿದ್ದ ಈ ಚಾರ್ಲ್ಸ್ ಟ್ರೆವೆಲ್ಯಾನ್.

ಶತಮಾನದ ಹಿಂದೆಯೇ, ಬ್ರಿಟಿಷರು ಆಳುತ್ತಿದ್ದಾಗಲೇ, ಬ್ರಿಟಿಷರ ಬಗೆಗೆ ಬಾಮನದಾಸರಂತಹವರು ಬರೆದಿಟ್ಟುಹೋಗಿದ್ದರೂ ನಮ್ಮ ಕನ್ನಡದ ನವ್ಯರಿಗೆ ರೋಮಿಲ್ಲಾ ಥಾಪರ್, ಇರ್ಫಾನ್ ಹಬೀಬ್, ಡಿ.ಎನ್.ಝಾ ರಂತಹ ಸುಳ್ಳು-ಇತಿಹಾಸಕಾರರ ಪುಸ್ತಕಗಳು ಮಾತ್ರವೇ ಪಥ್ಯವಾದವು. ಬಹಳ ಜನ ಕೊನೆಯವರೆಗೆ ಭಾರತ-ವಿರೋಧಿಗಳಾಗಿಯೇ ಇದ್ದುಬಿಟ್ಟರು. ಧರ್ಮಪಾಲ್, ಅರುಣ್ ಶೌರಿ, ಸೀತಾರಾಮ ಗೋಯಲ್, ರಾಮಸ್ವರೂಪ್ ಮೊದಲಾದವರ ಸಂಶೋಧನೆ – ವಿಶ್ಲೇಷಣೆಗಳನ್ನು ಓದುವ, ಪರಾಮರ್ಶಿಸುವ ಗೊಡವೆಗೆ ಒಬ್ಬರೂ ಹೋಗಲಿಲ್ಲ. ದುರಂತವೆಂದರೆ, ಈಗಲೂ ವಿವಿಧ ಕ್ಷೇತ್ರಗಳಲ್ಲಿರುವ ಅವರ ಶಿಷ್ಯಕೋಟಿ ಇನ್ನೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಬರೆಯುತ್ತಾರೆ, ಮಾತನಾಡುತ್ತಾರೆ, ವಾದಿಸುತ್ತಾರೆ.

ಹೌದು, “ವಸಾಹತುಶಾಹಿಯ ನಿರ್ಗಮನದ ಅನಂತರವೂ ಒಬ್ಬ ಅದರ ಪರವಾಗಿಯೇ ಮಾತನಾಡುತ್ತಾನೆ, ಎಂದರೆ ವಸಾಹತುಶಾಹಿಯು ತುಂಬ ಪರಿಣಾಮಕಾರಿಯಾಗಿಯೇ ಬೇರೂರಿದೆ ಎಂದರ್ಥ”.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

Continue Reading

ಅಂಕಣ

Mother Sentiment: ವ್ಯಾಸಂಗಕ್ಕಾಗಿ ಊರು ತೊರೆದು ಪಟ್ಟಣದ ಹಾಸ್ಟೆಲ್‌ ಸೇರುತ್ತಿರುವ ಮಗಳಿಗೆ ತಾಯಿ ಕರುಳಿನ ಭಾವುಕ ಪತ್ರ ಇದು…

ತಾಯಿ ಹೃದಯದ ಅಳಲು (Mother Sentiment) ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು…..ಇತ್ತೀಚೆಗೆ ಬಾಲಕಿಯರ ಮೇಲೆ ನಡೆಯುತ್ತಿರುವ ಅಮಾನುಷ ಕೃತ್ಯಗಳ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಮಗಳಿಗೆ ಬರೆದ ಸುದೀರ್ಘ ಪತ್ರದ ಸಾರ ಇಲ್ಲಿದೆ.

VISTARANEWS.COM


on

Mother Sentiment
Koo

| ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ

ಪ್ರೀತಿಯ ಮಗಳೇ,
ಅರೆ! ನಿನ್ನೆ ತಾನೆ ನನ್ನನ್ನು ಕಳಿಸಲು ಬಂದ ಅಮ್ಮ (Mother Sentiment) ಇಷ್ಟು ಬೇಗ ಪತ್ರ ಬರೆಯಲು ಕಾರಣವೇನು ಎಂದು ಗಾಬರಿಯಾಗಬೇಡ. ತಾಯಿ ಹೃದಯದ ಅಳಲು ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು.
ನಮ್ಮ ಮನೆಯಂಗಳದಲ್ಲಿ ಚಂದದ ಪ್ರಾಕು ಧರಿಸಿ, ಎರಡು ಪುಟ್ಟ ಜುಟ್ಟು ಹಾಕಿಕೊಂಡು, ಮುಖಕ್ಕೆ ಪೌಡರ್ ಸವರಿ, ಹಣೆಗೆ ಕಾಡಿಗೆಯ ಬೊಟ್ಟುಇಟ್ಟು ಕಾಲಿನ ಗೆಜ್ಜೆಯ ಸದ್ದು ಮಾಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯೆಲ್ಲ ನಡೆಯುತ್ತಿದ್ದ, ಅರಳು ಹುರಿದಂತೆ ಮುದ್ದಾಗಿ ಬಾಯಿ ತುಂಬಾ ಮಾತನಾಡುತ್ತಿದ್ದ ಪುಟ್ಟ ಕಂದ ನೀನು, ಇಂದು ಕಾಲೇಜಿಗೆ ಹೋಗುವಷ್ಟು ದೊಡ್ಡವಳಾಗಿರುವೆ. ಅತ್ಯುತ್ತಮ ಅಂಕ ಗಳಿಸಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ ಉನ್ನತ ಶಿಕ್ಷಣ (Higher Education) ಪಡೆಯುವ ಆಸೆಯಲ್ಲಿ ನಾವು ಮನೆಯವರನ್ನೆಲ್ಲಾ ತೊರೆದು ಹಾಸ್ಟೆಲಿನಲ್ಲಿ ವಾಸವಾಗಲು ಹೋಗುತ್ತಿರುವೆ.

ತುಸುವೇ ಸಂಭ್ರಮ ನಮ್ಮೆಲ್ಲರಲ್ಲಿ ಮನೆ ಮಾಡಿದ್ದರೂ ಹೆಚ್ಚು ಆತಂಕ ಮನದಲ್ಲಿ ಇದೆ. ಕಾಣದ ಊರು, ಅರಿಯದ ಜನ, ಬದಲಾದ ವಾತಾವರಣ ಇದೆಲ್ಲಕ್ಕೂ ನೀನು ಅದು ಹೇಗೋ ಹೊಂದಿಕೊಂಡು ಬಿಡುವೆ ಎಂಬ ಭರವಸೆ ನನಗಿದೆ… ಆದರೆ ನನ್ನ ಭಯ ಅದಲ್ಲ, ಅದರ ಅರಿವಾಗಲು ನೀನು ನಾನಲ್ಲ.
‘ಅಯ್ಯೋ ಅಮ್ಮ! ಮತ್ತದೇ ರಾಗ ಆಡಬೇಡ ನೀನು’ ಎಂಬ ನಿನ್ನ ಗದರಿಕೆಯ ನಡುವೆಯೂ ಮನ ಆತಂಕದ ಗೂಡಾಗಿದೆ. ನಿನ್ನನ್ನು ಕಳಿಸಲು ಬಂದಾಗ ಹೇಳದ ಮಾತುಗಳನು ಬರೆಯಲೇಬೇಕಾದ, ಬರೆದು ತಿಳಿಸಲೇಬೇಕಾದ ಅನಿವಾರ್ಯತೆ ನನ್ನದು.

ಪ್ರೀತಿಯ ಕೂಸು ನೀನು

ನಮ್ಮ ಮನೆಯ ಪ್ರೀತಿಯ ಕೂಸು ನೀನು. ಅಜ್ಜ ಅಜ್ಜಿಯ ಚಿನ್ನುವಾಗಿ, ಅಪ್ಪನ ಮುದ್ದಿನ ಮಗಳಾಗಿ, ಅಕ್ಕ-ಅಣ್ಣಂದಿರ ನೆಚ್ಚಿನ ತಂಗಿಯಾಗಿ ನನ್ನ ಕಣ್ಮಣಿಯಾಗಿ ಸುರಕ್ಷಿತವಾದ ಗುಬ್ಬಚ್ಚಿ ಗೂಡಿನಂತಹ ಸಂಸಾರದಲ್ಲಿ ಬೆಳೆದಿರುವ ನಿನಗೆ ಹೊರಗಿನ ನಿಷ್ಕುರ ಪ್ರಪಂಚದ ಅರಿವಿಲ್ಲ. ಹಾಗೆಂದು ಇಡೀ ಜಗತ್ತೇ ಕೆಟ್ಟದು ಎಂದಲ್ಲ. ನನಗೆ ಎಲ್ಲವೂ ಗೊತ್ತಿದೆ ಎಂಬ ಹದಿಹರೆಯದ ಹುಮ್ಮಸ್ಸು, ಸುಣ್ಣದ ತಿಳಿ ನೀರನ್ನು ಕೂಡ ಹಾಲೆಂದು ನಂಬುವ ನಿನ್ನ ಬೋಳೆ ಸ್ವಭಾವ, ಸ್ನೇಹಕ್ಕಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ ಎಂಬ ಸ್ಲೋಗನ್‌ಗಳು, ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಧ್ಯೇಯ ವಾಕ್ಯಗಳು, ಜೀವನ ಇರೋದೇ ಎಂಜಾಯ್ ಮಾಡೋಕೆ, ಈ ಹದಿಹರೆಯದ ವಯಸ್ಸು ಮತ್ತೆ ಬರುತ್ತಾ ಎಂಬ ಮಾತುಗಳು ಹೆಚ್ಚು ರುಚಿಸುವ ಸಮಯ ಇದು.

ಯಾವುದೂ ತಪ್ಪಲ್ಲ ನಿಜ

ಯಾವುದೂ ತಪ್ಪಲ್ಲ ನಿಜ. ಆದರೆ ಅದೆಲ್ಲವೂ ಒಂದು ಮಿತಿಯಲ್ಲಿದ್ದಾಗ ಮಾತ್ರ. ಜೀವನದಲ್ಲಿ ಎಂಜಾಯ್ಮೆಂಟ್ ಇರಬೇಕೆ ಹೊರತು ಎಂಜಾಯ್ಮೆಂಟ್ ಒಂದೇ ಜೀವನದ ಮುಖ್ಯ ಉದ್ದೇಶ ಅಲ್ಲ. ನಮ್ಮ ಬದುಕನ್ನು ವ್ಯವಸ್ಥಿತವಾಗಿ ನಡೆಸಲು ಬೇಕಾಗುವ ವಿದ್ಯೆ, ಆರ್ಥಿಕ ಸ್ವಾವಲಂಬನೆಯನ್ನು ಕೊಡುವ ನೌಕರಿ, ಸಾಮಾಜಿಕ ವಲಯದಲ್ಲಿ ನಿನ್ನದೇ ಆದ ಒಂದು ಒಳ್ಳೆಯ ಗುರುತಿಸುವಿಕೆ ಇವು ಉನ್ನತ ಶಿಕ್ಷಣದ ಮುಖ್ಯ ಧ್ಯೇಯಗಳು.

ಈಗಾಗಲೇ ಬದುಕಿನಲ್ಲಿ ಒಂದು ಮಹತ್ತರ ಘಟ್ಟವನ್ನು ತಲುಪಿರುವ ಸೋದರ ಸಂಬಂಧಿಗಳು ನಾವಂತೂ ಎಂಜಾಯ್ ಮಾಡಲಿಲ್ಲ ನೀವಾದರೂ ಮಾಡಿ ಎಂದು ಲಘುವಾಗಿ ನಿಮಗೆ ಹೇಳಿರುವುದನ್ನು ನೀನು ಗಂಭೀರವಾಗಿ ತೆಗೆದುಕೊಳ್ಳಬೇಡ…. ಓಟದ ನಡುವೆ ಅಲ್ಲೊಂದು ಇಲ್ಲೊಂದು ಅಡೆತಡೆಗಳು ಇದ್ದರೆ ತೊಂದರೆ ಇಲ್ಲ, ಆದರೆ ಆಡೆ ತಡೆಗಳನ್ನೇ ದಾಟುತ್ತ ಮುಂದೆ ಸಾಗುವ ಹೊತ್ತಿಗೆ ನಿನ್ನ ಸಮಯ ವ್ಯರ್ಥವಾಗಬಹುದು, ನಿನ್ನ ಗುರಿ ನಿನ್ನ ಕೈತಪ್ಪಿ ಹೋಗಬಹುದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೋ.

ನಿನ್ನ ಕಾಲೇಜಿನಲ್ಲಿ, ಹಾಸ್ಟೆಲ್‌ನಲ್ಲಿ ಎಲ್ಲರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದು ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಸದಾ ಒಂದು ಅಂತರವನ್ನು ಕಾಯ್ದುಕೋ. ಕಹಿ ಎನಿಸಿದರೂ ಜೀವನದ ಸತ್ಯ ಇದುವೇ. ಕೆಲ ಸ್ನೇಹ ಸಂಬಂಧಗಳು ಜೊತೆಗಿರುವವರೆಗೆ ಮಾತ್ರ.. ಒಂದೇ ಊರಿನವರಾದರೆ ಆಗಾಗ ಪರಸ್ಪರ ಭೇಟಿಯಾಗಿ ಕಷ್ಟ ಸುಖವನ್ನಾದರೂ ಹಂಚಿಕೊಳ್ಳುತ್ತಾರೆ, ಆದರೆ ದೂರದಲ್ಲಿರುವ ಸ್ನೇಹಿತರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗುತ್ತಾರೆ ಎಂಬುದನ್ನು ನೀನೇ ನೋಡುತ್ತಿರುವೆಯಲ್ಲ. ಹಾಗೆಂದು ಆ ಸ್ನೇಹದ ಕುರಿತು ತಿರಸ್ಕಾರ ಬೇಡ, ಒಳ್ಳೆಯ ಸ್ನೇಹಗಳು ಒಂದು ಮಧುರ ಅನುಭೂತಿಯಂತೆ ನಿನ್ನೊಂದಿಗೆ ಉಳಿದು ಹೋಗಬೇಕು ನಿಜ. ದುಸ್ವಪ್ನಗಳಂತಲ್ಲ.

ನಮ್ಮ ಜೊತೆಗೆ ಬರುವುದು ನಮ್ಮವರು ಮಾತ್ರ

ಜೀವಿತದ ಕೊನೆಯವರೆಗೂ ನಮ್ಮ ಜೊತೆಗೆ ಬರುವುದು ನಮ್ಮ ಅಪ್ಪ, ಅಮ್ಮ, ಅಣ್ಣ-ತಮ್ಮ, ಅಕ್ಕ- ತಂಗಿ ಮುಂತಾದ ರಕ್ತ ಸಂಬಂಧಗಳು ಮಾತ್ರ. ನಮ್ಮ ಕಷ್ಟ ಸುಖಕ್ಕೆ ನೋವು ನಲಿವಿಗೆ ಜೊತೆಯಾಗುವವರು ನಮ್ಮವರೇ. ಕೆಲ ಸ್ನೇಹಗಳು ಇದಕ್ಕೆ ಅಪವಾದ ಇರಬಹುದು. ನೀನು ಮನೆಯವರನ್ನೆಲ್ಲಾ ಬಿಟ್ಟು ಓದಲು ಹೋಗಿರುವ ಮುಖ್ಯ ಉದ್ದೇಶವನ್ನು ಸದಾ ನೆನಪಿನಲ್ಲಿಡು. ಓದು ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ನಿನ್ನನ್ನು ನೀನು ತೊಡಗಿಸಿಕೋ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ತಮಾಷೆ, ಜೋಕುಗಳು, ಕಾಲೆಳೆಯುವುದು ಹಿತಮಿತವಾಗಿರಲಿ…. ಆದರೆ ಅದುವೇ ಮುಖ್ಯವಾಗದಿರಲಿ.

ಹಾಸ್ಟೆಲ್ ನಲ್ಲಿ ಕೊಡುವ ಆಹಾರಕ್ಕೆ ನಿನ್ನನ್ನು ನೀನು ಒಗ್ಗಿಸಿಕೊಳ್ಳುವುದನ್ನು ರೂಢಿ ಮಾಡಿಕೋ. ಬೇಕು ಬೇಕೆಂದಾಗ ಊಟ ಮಾಡಲು ಆಗುವುದಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಆಹಾರ ಸೇವಿಸು. ಅಲ್ಲಿ ಕೊಡುವ ಹಸಿ ತರಕಾರಿ ಸೊಪ್ಪುಗಳನ್ನು, ಹಣ್ಣುಗಳನ್ನು ಸೇವಿಸು. ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ಅವಾಯ್ಡ್ ಮಾಡು. ಹಾಸ್ಟೆಲ್ನ ನಿಯಮಾವಳಿಗಳನ್ನು ಎಂದೂ ಮೀರದಿರು. ಅತಿಯಾಗಿ ರುಚಿಯ ಕಡೆ ಗಮನ ಕೊಡದೆ ಹಿತಮಿತವಾದ ಆಹಾರವನ್ನು ಸೇವಿಸು.

ಆರ್ಥಿಕ ಶಿಸ್ತು ಇರಲಿ

ಖರ್ಚಿನ ವಿಷಯದಲ್ಲಿ ಸ್ವಲ್ಪ ಹುಷಾರಾಗಿರು. ಯಾವುದೇ ಕಾರಣಕ್ಕೂ ಹಣದ ದುರ್ಬಳಕೆ ಬೇಡ. ಅದೆಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ ಕೂಡ ಯಾರೊಂದಿಗೂ ನಿನ್ನ ಖಾತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಮತ್ತು ಎಟಿಎಂನ ಪಾಸ್ವರ್ಡ್ ಅನ್ನು ಹಂಚಿಕೊಳ್ಳಬೇಡ. ನೀನು ಓದುತ್ತಿರುವೆಡೆಯಲ್ಲಾಗಲಿ, ವಾಸಿಸುತ್ತಿರುವ ಸ್ಥಳದಲ್ಲಾಗಲಿ ಪ್ರತಿ ಬಾರಿಯೂ ನಿನ್ನ ಮಾತೇ ನಡೆಯಬೇಕು ಎಂಬ ಹಟ ಬೇಡ. ಬೇರೆಯವರ ಮಾತಿಗೂ ಬೆಲೆ ಕೊಡು. ಬಹಳಷ್ಟು ಸಲ ನಿಮ್ಮ ಹಾಸ್ಟೆಲ್ ವಾರ್ಡನ್ ಗಳು ನಿಮಗೆ ಹೇಳುವ ಮಾತುಗಳು ಒರಟೆನಿಸಬಹುದು, ಬೇಧ ತೋರುತ್ತಾರೆ ಎಂದು ಕೂಡ ಅನಿಸಬಹುದು. ಆದರೆ ಅವರು ಕೂಡ ನಿಮ್ಮ ಒಳಿತಿಗಾಗಿ ಮತ್ತು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವವರು. ನಿಮ್ಮ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರು ಎಂಬುದು ಸದಾ ನೆನಪಿರಲಿ.

ಇನ್ನು ಮುಖ್ಯವಾಗಿ ನಮ್ಮ ಬದುಕಿನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯ ಹೇಗೆ ಒಂದರ ನಂತರ ಒಂದು ಕ್ರಮವಾಗಿ ಬರುತ್ತವೆಯೋ ಹಾಗೆಯೇ ವಿದ್ಯಾರ್ಥಿ ಜೀವನ, ಉದ್ಯೋಗ, ಸಂಗಾತಿ ಮತ್ತು ವಿವಾಹಗಳು ಕೂಡ ಅದೇ ಕ್ರಮದಲ್ಲಿ ಬರಬೇಕು. ಇದರಲ್ಲಿ ಮಧ್ಯದ ಎರಡು ವಿಷಯಗಳು ಹಿಂದು ಮುಂದಾದರೆ ಉಳಿದ ಎರಡು ವಿಷಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಆಗುವುದಿಲ್ಲ. ಆದ್ದರಿಂದ ಈಗ ಓದುವ ವಯಸ್ಸಿನಲ್ಲಿ ಕೇವಲ ನಿನ್ನ ಓದಿನೆಡೆ ಮಾತ್ರ ನಿನ್ನ ಗಮನವಿರಲಿ. ಹರೆಯದ ಆಕರ್ಷಣೆಗೆ ಒಳಗಾಗಿ ವಿರುದ್ಧ ಲಿಂಗಿಯ ಜೊತೆಗಿನ ಸ್ನೇಹಕ್ಕೆ ಪ್ರೀತಿ ಪ್ರೇಮದ ಬಣ್ಣ ಹಚ್ಚುವುದು ಬೇಡ. ನಿನ್ನ ತಂದೆ ತಾಯಿಯರಿಗೂ ನಿನ್ನ ಸ್ನೇಹಿತರನ್ನು ಪರಿಚಯಿಸಿ ಧೈರ್ಯವಾಗಿ ಮಾತನಾಡಬಲ್ಲಷ್ಟು ನಿಷ್ಕಲ್ಮಶ ಸ್ನೇಹವನ್ನು ಹೊಂದಿದ್ದರೆ ಸಾಕು. ನಮ್ಮ ಹಿರಿಯರು ಇದ್ದಂತೆ ನಾವಿಲ್ಲ ನಿಜ, ಆದರೆ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ನಮಗಿದ್ದೆ ಇದೆ.

ಕ್ಷಣಿಕ ಆಸೆಗೆ ಬಲಿಯಾಗಬೇಡ

ಮತ್ತೊಂದು ವಿಷಯ ಹೇಳಿದರೆ ನಿನಗೆ ಬೇಸರವಾಗಬಹುದು. ಇತ್ತೀಚೆಗೆ ಕೇಳಿ ಬರುತ್ತಿರುವ ಹೆಣ್ಣು ಮಕ್ಕಳ ಮೇಲಿನ ಬರ್ಬರ ಕೃತ್ಯಗಳು ಹೆತ್ತವರನ್ನು ಆತಂಕಕ್ಕೆ ಈಡು ಮಾಡಿವೆ. ಕ್ಷಣಿಕ ಆಕರ್ಷಣೆ ಬದುಕನ್ನು ನಾಶ ಮಾಡಬಹುದು. ಒಂದು ತಪ್ಪು ಹೆಜ್ಜೆ ಜೀವನವಿಡೀ ಪಶ್ಚಾತಾಪಕ್ಕೆ ದಾರಿ ಮಾಡಿಕೊಡುವುದು ಬೇಡ ಎಂಬ ಎಚ್ಚರ ನಿನಗಿದ್ದರೆ ಸಾಕು.
ಬದುಕಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಕಳೆದ ಒಂದುವರೆ ತಿಂಗಳಿನಲ್ಲಿ ನಡೆದ ಹೆಣ್ಣು ಮಕ್ಕಳ ಸಾಲು ಸಾಲು ಹತ್ಯೆಗಳನ್ನು ನೋಡಿ ಮನಸ್ಸಿಗೆ ಅನ್ನಿಸಿದ್ದು ಹೀಗೆ. ಅರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು, ತಂದೆ ತಾಯಿ ಬುದ್ಧಿ ಹೇಳಿದಾಗ ವಿದ್ಯಾರ್ಥಿ ದೆಸೆಯಲ್ಲಿ ತಾನು ತಪ್ಪು ಮಾಡುತ್ತಿರುವೆ ಎಂಬ ಅರಿವು ಉಂಟಾಗಿ ಪ್ರೀತಿಯಿಂದ ಹಿಂದೆ ಸರಿದ ತಪ್ಪಿಗೆ ಒಂದೊಮ್ಮೆ ತನ್ನನ್ನು ಪ್ರೀತಿಸಿದ ಹುಡುಗನೇ ತನ್ನನ್ನು ಕೊಚ್ಚಿ ಕೊಂದರೆ ಆಕೆಯನ್ನು ಇಷ್ಟು ವರ್ಷಗಳ ಕಾಲ ಲಾಲಿಸಿ ಪಾಲಿಸಿದ ತಂದೆ ತಾಯಿಗಳ ಪಾಡೇನು ಎಂದು ನೆನೆದಾಗ ಮೈಯಲ್ಲಿ ನಡುಕ ಉಂಟಾಗುತ್ತದೆ. ನಿಮ್ಮ ಬದುಕು ಕೇವಲ ನಿಮ್ಮದಲ್ಲ. ನಿಮ್ಮ ಬದುಕಿನ ಆಗುಹೋಗುಗಳ ಸುತ್ತ ನಿಮ್ಮ ಕುಟುಂಬ ಮತ್ತು ಸಮಾಜ ನಿಮ್ಮೊಂದಿಗೆ ಜೋಡಿಸಲ್ಪಟ್ಟಿ ರುತ್ತದೆ. ಆದ್ದರಿಂದ ನಿನ್ನ ಹುಷಾರಿನಲ್ಲಿ ನೀನಿರು ಎಂದು ಮಾತ್ರ ಹೇಳುತ್ತೇನೆ. ಸಮಾಜಕ್ಕೆ ಒಳ್ಳೆಯ ಉದಾಹರಣೆಯಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟ ಉದಾಹರಣೆಯಾಗಬಾರದು ಎಂಬ ಅರಿವಿನ ಪ್ರಜ್ಞೆ ನಿನ್ನಲ್ಲಿ ಸದಾ ಜಾಗೃತವಾಗಿರಲಿ.

ಅಷ್ಟಾಗಿಯೂ ನಿನಗೆ ಏನೇ ತೊಂದರೆಯಾದರೂ ಮುಕ್ತವಾಗಿ ಹೇಳಿಕೋ…. ಒಂದು ಸುಳ್ಳನ್ನು ಮುಚ್ಚಲು ನೂರಾರು ಸುಳ್ಳುಗಳನ್ನು ಹೇಳುವುದರ ಬದಲು ಒಂದು ಸತ್ಯವನ್ನು ಹೇಳಿ ಬೈಸಿಕೊಂಡರೂ ಪರವಾಗಿಲ್ಲ ಮನಸ್ಸು ನಿರಾಳವಾಗಿರುತ್ತದೆ ಎಂಬುದನ್ನು ಅರಿತುಕೋ.

ಬದುಕಿನ ಯಾವುದೇ ಹಂತದಲ್ಲಿಯಾದರೂ ನಮ್ಮ ತೋಳುಗಳ ಆಸರೆ ನಿನಗೆ ಇದ್ದೇ ಇರುತ್ತದೆ… ಆದರೆ ಆ ತೋಳುಗಳಲ್ಲಿ ಕಸುವು ತುಂಬುವ ಕೆಲಸ ಮಾತ್ರ ನಿನ್ನದು. ಅದು ನಿನ್ನ ನಡತೆಯಲ್ಲಿ, ವಿದ್ಯಾಭ್ಯಾಸದಲ್ಲಿ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸದಾ ಇರಲೇಬೇಕು. ನಿನ್ನ ಕುರಿತಾಗಿ ನನ್ನ ಆಸೆ ಆಕಾಂಕ್ಷೆಗಳಿಗೆ ಮಿತಿ ಇಲ್ಲ,ಭಯ ಆತಂಕಗಳು ನಿರಾಧಾರವಾದುದು ಎಂದು ನಿನಗೆ ಅನಿಸಿದರೆ ಅದು ನಿನ್ನ ತಪ್ಪಲ್ಲ. ನನ್ನಂತೆ ನೀನೂ ಕೂಡ ತಾಯಾಗಿ ನಿನ್ನ ಮಕ್ಕಳನ್ನು ಬೆಳೆಸುವಾಗ ನಿನಗೆ ಇದರ ಅನುಭವ ಖಂಡಿತವಾಗಿಯೂ ಆಗುತ್ತದೆ. ಪತ್ರ ತುಸು ದೊಡ್ಡದಾಯಿತು ಆದರೆ ಓದದೆ ಇರಬೇಡ. ನಿನ್ನ ಹಿತದಲ್ಲಿಯೇ ನಮ್ಮ ಕುಟುಂಬದ ಒಳಿತಿದೆ.

ಇದನ್ನೂ ಓದಿ: AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

Continue Reading
Advertisement
Udupi-Chikmagalur Lok Sabha constituency
ದೇಶ5 mins ago

Udupi-Chikmagalur Lok Sabha constituency: ಬದಲಾವಣೆ ನಡುವೆ ಯಾರಿಗೆ ಮಣೆ ಹಾಕಲಿದ್ದಾರೆ ಉಡುಪಿ ಕ್ಷೇತ್ರದ ಮತದಾರರು?

Vasishta Simha Lovely Kannada Film Trailer Event
ಸ್ಯಾಂಡಲ್ ವುಡ್10 mins ago

Vasishta Simha: ಟ್ರೈಲರ್‌ ಲಾಂಚ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ವಸಿಷ್ಠ ಸಿಂಹ!

Heat wave
ದೇಶ10 mins ago

Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ

Food Poisoning
ಮೈಸೂರು12 mins ago

Food Poisoning : ಮೈಸೂರಲ್ಲಿ ಗೃಹ ಪ್ರವೇಶದ ಊಟ ತಿಂದ ವೃದ್ಧೆ ಸಾವು; 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Gold Rate Today
ಚಿನ್ನದ ದರ21 mins ago

Gold Rate Today: ಚಿನ್ನದ ಬೆಲೆ ಮತ್ತೂ ಇಳಿಕೆ; ಇಂದಿನ ಧಾರಣೆಯನ್ನು ಇಲ್ಲಿ ಗಮನಿಸಿ

karnataka Rain
ಮಳೆ32 mins ago

Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

Team India
ಪ್ರಮುಖ ಸುದ್ದಿ41 mins ago

Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

Priyanka Chopra The Bluff team Malti enjoys
ಬಾಲಿವುಡ್49 mins ago

Priyanka Chopra: ಆಸ್ಟ್ರೇಲಿಯಾದ ಬೀಚ್‌ನಲ್ಲಿ ಅಮ್ಮನ ಸಿನಿ ತಂಡದ ಜತೆ ಎಂಜಾಯ್ ಮಾಡಿದ ಮಾಲತಿ ಮೇರಿ ಚೋಪ್ರಾ!

George Fernandes ರಾಜಮಾರ್ಗ ಅಂಕಣ
ಅಂಕಣ50 mins ago

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

gold rate today
ಕರ್ನಾಟಕ57 mins ago

Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌