ವಾಣಿಜ್ಯ
Indian startups : ದಿವಾಳಿಯಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಭಾರತೀಯ ಸ್ಟಾರ್ಟಪ್‌ಗಳ 8,200 ಕೋಟಿ ರೂ. ಠೇವಣಿ
ಅಮೆರಿಕದಲ್ಲಿ ದಿವಾಳಿಯಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ( Indian startups) ಭಾರತೀಯ ಸ್ಟಾರ್ಟಪ್‌ಗಳ 8,200 ಕೋಟಿ ರೂ. ಠೇವಣಿ ಇದೆ ಎಂದು ಸರ್ಕಾರ ತಿಳಿಸಿದೆ.
ಮುಂಬಯಿ: ಭಾರತೀಯ ಸ್ಟಾರ್ಟಪ್‌ಗಳು ಅಮೆರಿಕದಲ್ಲಿನ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ( Silicon Valley Bank) 8,200 ಕೋಟಿ ರೂ. ಠೇವಣಿಯನ್ನು ಹೊಂದಿವೆ (Indian startups ) ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ 10ರಂದು ದಿವಾಳಿಯಾಗಿ ಮುಚ್ಚಿದೆ. ಠೇವಣಿದಾರರು ಒಂದೇ ದಿನ 42 ಶತಕೋಟಿ ಡಾಲರ್ (3.44 ಲಕ್ಷ ಕೋಟಿ ರೂ.) ಹಿಂತೆಗೆದುಕೊಂಡಿದ್ದರು. ನೂರಾರು ಭಾರತೀಯ ಸ್ಟಾರ್ಟಪ್‌ಗಳೂ ಎಸ್‌ವಿಬಿಯಲ್ಲಿ ಠೇವಣಿ ಹೂಡಿವೆ.
ಎಸ್‌ವಿಬಿ ಮುಚ್ಚಿರುವ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರು ನೂರಾರು ಸ್ಟಾರ್ಟಪ್‌ಗಳ ಮುಖ್ಯಸ್ಥರುಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೂ ಸಮಾಲೋಚನೆ ಮಾಡಿದ್ದಾರೆ.
ಅಮೆರಿಕದಲ್ಲಿ ಸ್ಟಾರ್ಟಪ್‌ಗಳಿಗೆ ಸಾಲ ನೀಡುತ್ತಿದ್ದ ಕ್ಯಾಲಿಫೋರ್ನಿಯಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ ( SVB Financial Group) ಇತ್ತೀಚೆಗೆ ಪತನವಾಗಿದೆ. 2008ರ ಬಳಿಕ ಅಲ್ಲಿನ ಅತಿ ದೊಡ್ಡ ಬ್ಯಾಂಕ್ ಇದೀಗ ಪತನವಾದಂತಾಗಿದೆ. ಬ್ಯಾಂಕ್‌ನ ವೈಫಲ್ಯದ ಪರಿಣಾಮ ನಾನಾ ಕಂಪನಿಗಳು, ಹೂಡಿಕೆದಾರರು, ಠೇವಣಿದಾರರ ಕೋಟ್ಯಂತರ ಡಾಲರ್ ಹಣ ಅತಂತ್ರವಾಗಿದೆ.
ಕೇವಲ 48 ಗಂಟೆಗಳಲ್ಲೇ ಬ್ಯಾಂಕ್ ಬಿಕ್ಕಟ್ಟು ಉಲ್ಬಣ
ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಬ್ಯಾಲೆನ್ಸ್‌ಶೀಟ್‌ನಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ 200 ಕೋಟಿ ಡಾಲರ್ ನಿಧಿಯನ್ನು ಸಂಗ್ರಹಿಸಲು ಉದ್ದೇಶಿಸಿರುವುದಾಗಿ ಘೋಷಿಸಿದ ಬಳಿಕ ಕೇವಲ 48 ಗಂಟೆಗಳಲ್ಲಿ ಹೂಡಿಕೆದಾರರು ಆತಂಕದಿಂದ ವ್ಯಾಪಕವಾಗಿ ಷೇರುಗಳನ್ನು ಮಾರಾಟ ಮಾಡಿದರು. ಹೀಗಾಗಿ ಬ್ಯಾಂಕ್ ನಿಧಿ ಸಂಗ್ರಹಿಸುವ ಯೋಜನೆಯನ್ನು ಕೈಬಿಟ್ಟಿತು. ಕಳೆದ ಶುಕ್ರವಾರವೇ ಅಮೆರಿಕದ ಫೆಡರಲ್ ಡಿಪಾಸಿಟ್ ಇನ್ಷೂರೆನ್ಸ್ ಕಾರ್ಪೊರೇಷನ್, (ಎಫ್‌ಡಿಐಸಿ) ಬ್ಯಾಂಕ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಎಸ್‌ವಿಬಿಯ ಷೇರು ದರದಲ್ಲಿ 60% ಕುಸಿತ ಸಂಭವಿಸಿದೆ. ಎಸ್‌ವಿಬಿಯನ್ನು ಹಣಕಾಸು ಇಲಾಖೆ ಮುಚ್ಚಿದೆ ಎಂದು ಎಫ್‌ಡಿಐಸಿ ತಿಳಿಸಿದೆ. ಎಸ್‌ವಿಬಿ ದಿವಾಳಿಯಾಗಿರುವುದು ಟೆಕ್ ಇಂಡಸ್ಟ್ರಿಯಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತವಾಗಿದ್ದೇಕೆ?
ಅಮೆರಿಕದಲ್ಲಿ ಫೆಡರಲ್ ರಿಸರ್ವ್ 2023ರಲ್ಲಿ ಬಡ್ಡಿ ದರಗಳನ್ನು ಏರಿಸಿರುವುದು ಎಸ್‌ವಿಬಿ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಬಡ್ಡಿ ದರಗಳು ಕೆಳಮಟ್ಟದಲ್ಲಿತ್ತು. ಬಳಿಕ ಅಮೆರಿಕದ ಫೆಡರಲ್ ರಿಸರ್ವ್, ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿ ದರಗಳನ್ನು ಪದೇಪದೆ ಏರಿಸಿತು. ಇದರ ಪರಿಣಾಮ ಕಡಿಮೆ ಬಡ್ಡಿ ದರದಲ್ಲಿ ಬಿಡುಗಡೆಗೊಳಿಸಿದ್ದ ಬಾಂಡ್‌ಗಳ ಮೌಲ್ಯ ಕುಸಿಯಿತು. ಈ ಬಾಂಡ್‌ಗಳನ್ನು ಬ್ಯಾಂಕ್‌ಗಳು ಖರೀದಿಸಿದ್ದವು. ಮೌಲ್ಯ ಕುಸಿತದ ಕಾರಣದಿಂದ ಬ್ಯಾಂಕ್‌ಗಳಿಗೆ ನಷ್ಟವಾಯಿತು. ಮತ್ತೊಂದು ಕಡೆ ಬಡ್ಡಿ ದರ ಏರಿಕೆ ಹಿನ್ನೆಲೆಯಲ್ಲಿ ಸ್ಟಾರ್ಟಪ್‌ಗಳಿಗೆ ಹೂಡಿಕೆ ಹರಿವು ಕಡಿಮೆಯಾಯಿತು. ಇದು ಹೂಡಿಕೆದಾರರ ಭಾವನೆಗಳನ್ನು ಘಾಸಿಗೊಳಿಸಿತು. ಎಸ್‌ವಿಬಿಯ ಗ್ರಾಹಕರು ತಮ್ಮ ನಗದು ವೆಚ್ಚಗಳಿಗೆ ಬ್ಯಾಂಕಿನಿಂದ ಠೇವಣಿಗಳನ್ನು ಹಿಂತೆಗೆದುಕೊಳ್ಳಲು ಶುರು ಮಾಡಿದರು. ಠೇವಣಿದಾರರು ವ್ಯಾಪಕವಾಗಿ ಹಣ ಹಿಂತೆಗೆದುಕೊಳ್ಳಲು ಆರಂಭಿಸಿದಾಗ ಕೊಡಲು ಬ್ಯಾಂಕಿನ ಬಳಿ ನಗದು ಕೊರತೆ ಉಂಟಾಯಿತು. ಈ ಒತ್ತಡವನ್ನು ನಿವಾರಿಸಲು ಬ್ಯಾಂಕ್ ಕೋಟ್ಯಂತರ ಡಾಲರ್ ಮೌಲ್ಯದ ತನ್ನ ಬಾಂಡ್‌ಗಳನ್ನು ನಷ್ಟದಲ್ಲಿ ಮಾರಾಟ ಮಾಡಿತು. ಈ ನಷ್ಟವನ್ನು ಭರ್ತಿಗೊಳಿಸಲು ತನ್ನ 2.25 ಶತಕೋಟಿ ಡಾಲರ್ (18,450 ಕೋಟಿ ರೂ.) ಷೇರುಗಳನ್ನು (ಈಕ್ವಿಟಿ) ಮಾರುವುದಾಗಿ ಬ್ಯಾಂಕ್ ಘೋಷಿಸಿತು. ಈ ದಿಢೀರ್ ಬೆಳವಣಿಗೆಯು ಬ್ಯಾಂಕ್‌ನ ಬ್ಯಾಲೆನ್ಸ್ ಶೀಟ್ ಬಗ್ಗೆ ಕಳವಳ ಹೆಚ್ಚಿಸಿತು. ಷೇರು ದರ 60% ಕುಸಿಯಿತು. ಎಸ್‌ವಿಬಿ ಪತನಕ್ಕೆ ಮುನ್ನ ಸಿಲ್ವರ್‌ಗೇಟ್ ಕ್ಯಾಪಿಟಲ್ ಎಂಬ ಕ್ರಿಪ್ಟೊ ಆಧರಿತ ಬ್ಯಾಂಖ್ ಮುಚ್ಚಿತ್ತು. ಇದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿತ್ತು. ವೆಂಚರ್ ಕ್ಯಾಪಿಟಲ್ ಕಂಪನಿಗಳ ಸಲಹೆಯ ಮೇರೆಗೆ ಹೂಡಿಕೆದಾರರು ಬ್ಯಾಂಕ್‌ನಿಂದ ತಮ್ಮ ಹಣವನ್ನು ಒಂದೇ ಸಮನೆ ಹಿಂತೆಗೆದುಕೊಂಡಿದ್ದರಿಂದ, ಬ್ಯಾಂಕಿಗೆ ಷೇರು ಮಾರಾಟ ಮಾಡದೆ ವಿಧಿ ಇರಲಿಲ್ಲ. ಆದರೆ ಅದು ಸಫಲವಾಗಲಿಲ್ಲ.
ಭಾರತದ ಷೇರು ಪೇಟೆ ಮೇಲೆ ಪ್ರಭಾವ?
ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನವು ಭಾರತದ ಬ್ಯಾಂಕಿಂಗ್ ಮೇಲೆ ಯಾವುದೇ ಪ್ರತಿಕೂಲ ಪ್ರಭಾವ ಬೀರದು. ದೊಡ್ಡ ಪ್ರಮಾಣದ ನಕಾರಾತ್ಮಕ ಪರಿಣಾಮ ಸಾಧ್ಯತೆ ಇಲ್ಲ ಎನ್ನುತ್ತಾರೆ ತಜ್ಞರು.
ಎಸ್‌ವಿಬಿ ಖರೀದಿಸಲು ಎಲಾನ್ ಮಸ್ಕ್ ಆಸಕ್ತಿ:
ಪತನವಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಖರೀದಿಸಲು ಅಮೆರಿಕದ ದಿಗ್ಗಜ ಉದ್ಯಮಿ ಎಲಾನ್ ಮಸ್ಕ್ ಉತ್ಸುಕರಾಗಿದ್ದಾರೆ. ರೇಜರ್ ಸಿಇಒ ಮಿನ್ ಲಿಯಾಂಗ್ ಅವರು ಎಸ್‌ವಿಬಿಯನ್ನು ಮಸ್ಕ್ ಖರೀದಿಸಬಹುದು ಮತ್ತು ಡಿಜಿಟಲ್ ಬ್ಯಾಂಕ್ ಆಗಿಸಬಹುದು ಎಂದು ಟ್ವೀಟ್ ಮಾಡಿದ್ದಕ್ಕೆ, ಈ ಬಗ್ಗೆ ಆಲೋಚಿಸುವುದಾಗಿ ಮಸ್ಕ್ ಪ್ರತಿಕ್ರಿಯಿಸಿದ್ದರು.
ದೇಶ
Karur Vysya Bank: ಕರೂರ್ ವೈಶ್ಯ ಬ್ಯಾಂಕ್‌ಗೆ 30 ಲಕ್ಷ ರೂ. ದಂಡ ವಿಧಿಸಿದ ಆರ್‌ಬಿಐ, ಕಾರಣವೇನು?
Karur Vysya Bank: ಬ್ಯಾಂಕ್‌ಗಳಿಗೆ ವಂಚಿಸಿದವರ ಕುರಿತು ಸಮರ್ಪಕವಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕರೂರ್ ವೈಶ್ಯ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ದಂಡ ವಿಧಿಸಿದೆ.
ನವದೆಹಲಿ: ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಕರೂರ್ ವೈಶ್ಯ ಬ್ಯಾಂಕ್‌ಗೆ (Karur Vysya Bank) ಭಾರತೀಯ ರಿಸರ್ವ್ ಬ್ಯಾಂಕ್ (RBI) 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಬ್ಯಾಂಕುಗಳಿಗೆ ವಂಚನೆ ಮಾಡಿದ ಪ್ರಕರಣಗಳ ಕುರಿತು ಒಂದು ವಾರದೊಳಗೆ ಕರೂರ್ ವೈಶ್ಯ ಬ್ಯಾಂಕ್ ವರದಿ ನೀಡಲು ವಿಫಲವಾಗಿದೆ ಎಂದು ಆರ್‌ಬಿಐನ ಸೆಲೆಕ್ಟ್ ಸ್ಕೋಪ್ ಇನ್ಸ್‌ಪೆಕ್ಷನ್ (SSI) ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಾಯಿಂಟ್ ಲೀಡರ್ಸ್ ಫೋರಂ (JLF)ನಿಂದ ದಂಡ ವಿಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
“ಆರ್‌ಬಿಐ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಇದಕ್ಕೂ ಮೊದಲು ಬ್ಯಾಂಕ್‌ಗೇಕೆ ದಂಡ ವಿಧಿಸಬಾರದು ಎಂಬುದಾಗಿ ಕರೂರ್ ವೈಶ್ಯ ಬ್ಯಾಂಕ್‌ಗೆ ಆರ್‌ಬಿಐ ನೋಟಿಸ್ ನೀಡಿತ್ತು. ಅದರಂತೆ, ಬ್ಯಾಂಕ್ ಆರ್‌ಬಿಐಗೆ ಪ್ರತಿಕ್ರಿಯೆ ನೀಡಿತ್ತು. ಆದರೆ, ಕರೂರ್ ವೈಶ್ಯ ಬ್ಯಾಂಕ್ ವರದಿ ಬಳಿಕ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 30 ಲಕ್ಷ ರೂಪಾಯಿ ದಂಡ ವಿಧಿಸಿತು” ಎಂದು ಕೇಂದ್ರೀಯ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
“ಕರೂರ್ ವೈಶ್ಯ ಬ್ಯಾಂಕ್ ವಂಚಕರ ಕುರಿತು ಮಾಹಿತಿ ನೀಡದ ಕಾರಣ 2022ರ ಫೆಬ್ರವರಿ 22ರಿಂದ ಮಾರ್ಚ್ 4ರ ಅವಧಿಯಲ್ಲಿ ಬ್ಯಾಂಕ್‌ನ ಸೆಲೆಕ್ಸ್ ಸ್ಕೋಪ್ ಇನ್ಸ್‌ಪೆಕ್ಷನ್ ತನಿಖೆ ನಡೆಸಿದೆ. ಇದಾದ ಬಳಿಕ 2016ರಲ್ಲಿ ಆರ್‌ಬಿಐ ಹೊರಡಿಸಿದ ನಿಬಂಧನೆಗಳ (ವಂಚನೆಗಳು-ಆಯ್ದ ವಾಣಿಜ್ಯ ಬ್ಯಾಂಕ್‌ಗಳಿಂದ ವಂಚನೆ ಪ್ರಕರಣಗಳ ವರ್ಗೀಕರಣ ಹಾಗೂ ವರದಿ ಸಲ್ಲಿಕೆ) ಅನುಸರಣೆಯಲ್ಲಿ ವಿಫಲವಾದ ಕಾರಣ ದಂಡ ವಿಧಿಸಲಾಗಿದೆ” ಎಂದು ಮಾಹಿತಿ ನೀಡಿದೆ.
ದೇಶದಲ್ಲಿ ವಿಜಯ್ ಮಲ್ಯ ಸೇರಿ ಹಲವು ಉದ್ಯಮಿಗಳು ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ, ಅದನ್ನು ಪಾವತಿಸದೆ ವಿದೇಶಕ್ಕೆ ಹಾರುತ್ತಿರುವ ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ 2016ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿಬಂಧನೆಗಳನ್ನು ರೂಪಿಸಿದೆ. ಹೊಸ ನಿಬಂಧನೆಗಳ ಪ್ರಕಾರ, ಬ್ಯಾಂಕ್‌ಗಳು ನಿಯಮಿತವಾಗಿ ವಂಚಕರ ಕುರಿತು ಮಾಹಿತಿ ನೀಡಬೇಕಿದೆ. ವಂಚನೆ ತಡೆಯುವುದು ಹಾಗೂ ಬ್ಯಾಂಕ್‌ಗಳು ದಿವಾಳಿಯಾಗದಂತೆ ನೋಡಿಕೊಳ್ಳಲು ಇಂತಹ ನಿಯಮಗಳನ್ನು ರೂಪಿಸಿದೆ.
ಕಳೆದ ವರ್ಷ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಕೋಟಕ್ ಮಹೀಂದ್ರ ಬ್ಯಾಂಕ್‌ಗೆ 1.05 ಕೋಟಿ ರೂ. ಹಾಗೂ ಇಂಡಸ್‌ಇಂಡ್ ಬ್ಯಾಂಕ್‌ಗೆ ಕೂಡ 1 ಕೋಟಿ ರೂ. ದಂಡ ವಿಧಿಸಿತ್ತು. ಆರ್‌ಬಿಐನ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿತ್ತು.. 2022ರ ಜೂನ್ 29ರಂದು ಹೊರಡಿಸಿದ ಆದೇಶದಲ್ಲಿ, ಬ್ಯಾಂಕಿಂಗ್ ನಿಯಮಗಳು ಮತ್ತು ಗ್ರಾಹಕರ ಹಿತರಕ್ಷಣೆಯ ಕ್ರಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿತ್ತು.
ಇದನ್ನೂ ಓದಿ: ಕೋಟಕ್ ಮಹೀಂದ್ರ ಬ್ಯಾಂಕ್‌ಗೆ 1.05 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ
ಪ್ರಮುಖ ಸುದ್ದಿ
F&O trading : ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್ & ಆಪ್ಷನ್ಸ್ ಟ್ರೇಡಿಂಗ್‌ಗೆ ತೆರಿಗೆ ಹೆಚ್ಚಳ
ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್ & ಆಪ್ಷನ್ಸ್ ಟ್ರೇಡಿಂಗ್‌ಗೆ (F&O trading) ಸೆಕ್ಯುರಿಟಿ ಟ್ರಾನ್ಸಕ್ಷನ್ ತೆರಿಗೆಯನ್ನು ಏರಿಸಲಾಗಿದೆ. ಹಣಕಾಸು ವಿಧೇಯಕಕ್ಕೆ ತಿದ್ದುಪಡಿ ಮೂಲಕ ಈ ಏರಿಕೆ ಮಾಡಲಾಗಿದೆ.
ನವ ದೆಹಲಿ: ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್ & ಆಪ್ಷನ್ಸ್ ಟ್ರೇಡಿಂಗ್‌ಗೆ ಸೆಕ್ಯುರಿಟೀಸ್ ಟ್ರಾನ್ಸಕ್ಷನ್ ತೆರಿಗೆಯನ್ನು (Securities transaction tax -STT) ಏರಿಸಲಾಗಿದೆ. (F&O trading) ಆಪ್ಷನ್ ಸೇಲ್ ಮೇಲೆ ತೆರಿಗೆಯನ್ನು 0.05%ರಿಂದ 0.062%ಕ್ಕೆ ಹಾಗೂ ಫ್ಯೂಚರ್ ವಹಿವಾಟಿನ ಮೇಲೆ 0.017%ರಿಂದ 0.021%ಕ್ಕೆ ಏರಿಸಲಾಗಿದೆ.
ಹಣಕಾಸು ವಿಧೇಯಕ 2023ಕ್ಕೆ ತಿದ್ದುಪಡಿ ಮಾಡಿರುವ ಪ್ರಕಾರ, ಆಪ್ಷನ್ ಸೇಲ್ಸ್‌ನಲ್ಲಿ 1 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟಿನ ಮೇಲೆ ಮೇಲ್ತೆರಿಗೆಯನ್ನು 1,700 ರೂ.ಗಳಿಂದ 2,100 ರೂ.ಗೆ ಏರಿಸಲಾಗಿದೆ. ಫ್ಯೂಚರ್ ವಹಿವಾಟಿನಲ್ಲಿ ಎಸ್‌ಟಿಟಿಯನ್ನು 1,000 ರೂ.ಗಳಿಂದ 1,250 ರೂ.ಗೆ ಏರಿಸಲಾಗಿದೆ.
2023ರಲ್ಲಿ ಮಾರ್ಚ್ ವೇಳೆಗೆ ಎಸ್‌ಟಿಟಿ ಸಂಗ್ರಹದಿಂದ ಸರ್ಕಾರದ ಬೊಕ್ಕಸಕ್ಕೆ 20,000 ಕೋಟಿ ರೂ. ದೊರೆಯುವ ನಿರೀಕ್ಷೆ ಇದೆ. ಇದು ಈ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 60% ಹೆಚ್ಚಳವಾಗಿದೆ. 2020-21ರಲ್ಲಿ 16,927 ಕೋಟಿ ರೂ. ಎಸ್‌ಟಿಟಿ ಸಂಗ್ರಹವಾಗಿತ್ತು. 2004ರಲ್ಲಿ ಎಸ್‌ಟಿಟಿಯನ್ನು ಜಾರಿಗೊಳಿಸಲಾಗಿತ್ತು.
ಉದ್ಯೋಗ
Layoffs 2023 : ಅಕ್ಸೆಂಚರ್‌ನಿಂದ ಭಾರತದಲ್ಲಿ 7,000 ಹುದ್ದೆ ಕಡಿತ ನಿರೀಕ್ಷೆ
ಐಟಿ ಕಂಪನಿ ಅಕ್ಸೆಂಚರ್‌ನಿಂದ ಭಾರತದಲ್ಲಿ 7,000 ಹುದ್ದೆ ಕಡಿತವಾಗುವ ಸಾಧ್ಯತೆ ಇದೆ. ಹೀಗಾಗಿ (Layoffs 2023) ಐಟಿ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ವರ್ಷ ಐಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಬೆಂಗಳೂರು: ಐಟಿ ಕಂಪನಿ ಅಕ್ಸೆಂಚರ್ (Accenture) ಮುಂದಿನ ಒಂದೂವರೆ ವರ್ಷದಲ್ಲಿ ತನ್ನ 19,000 ಉದ್ಯೋಗಿಗಳನ್ನು ವಜಾಗೊಳಿಸಲು ಉದ್ದೇಶಿಸಿದೆ. (Layoffs 2023) ಈ ಪೈಕಿ ಭಾರತದಲ್ಲಿಯೇ 7,000 ಟೆಕ್ಕಿಗಳಿಗೆ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ. ದೇಶದಲ್ಲಿ 3.5 ಲಕ್ಷ ಉದ್ಯೋಗಿಗಳನ್ನು ಕಂಪನಿ ಹೊಂದಿದೆ. ಹೀಗಾಗಿ ಭಾರತೀಯ ಟೆಕ್ಕಿಗಳ ವಲಯದಲ್ಲಿ ಭೀತಿ ಉಂಟಾಗಿದೆ.
ಕಳೆದ ವರ್ಷ ಆರ್ಥಿಕ ಅನಿಶ್ಚಿತತೆ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದರು. 1,052 ಟೆಕ್ ಕಂಪನಿಗಳು 1,61,411 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ 2023 ರಲ್ಲಿ ಕೂಡ 500 ಟೆಕ್ ಕಂಪನಿಗಳು 1,50,000 ಸಿಬ್ಬಂದಿಯನ್ನು ವಜಾಗೊಳಿಸಿವೆ.
ಉದ್ಯೋಗ ಕಡಿತ ಜಾಗತಿಕ ಸಮಸ್ಯೆಯಾಗಿದ್ದು, ಭಾರತವೂ ಹೊರತಾಗಿಲ್ಲ. ಬೈಜೂಸ್, ಅನ್‌ಅಕಾಡೆಮಿ, ವೇದಾಂತು, ಸ್ವಿಗ್ಗಿ, ಓಲಾದಲ್ಲಿ ಸಾವಿರಾರು ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ.
2023ರಲ್ಲಿ ಉದ್ಯೋಗ ಕಡಿತ ಇಂತಿದೆ:
ಬೈಜೂಸ್: 4,000
ಅನ್ ಅಕಾಡೆಮಿ: 1,500
ಓಲಾ: 1,400
ವೇದಾಂತು : 1,100
ಸ್ವಿಗ್ಗಿ: 630
ಕಾರ್ಸ್ 24: 600
ಓಯೊ: 600
ಶೇರ್‌ಚಾಟ್ : 600
ಉದ್ಯೋಗಾವಕಾಶ ಕುರಿತ ಸೇವೆ ನೀಡುವ ಅಮೆರಿಕ ಮೂಲದ ಇಂಡೀಡ್‌ನಲ್ಲೂ 2,200 ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಅಮೆಜಾನ್ 9,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಮೆಟಾ 10,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ.
ವಾಣಿಜ್ಯ
GPS-based toll system : ಹೆದ್ದಾರಿಗಳಲ್ಲಿ 6 ತಿಂಗಳಲ್ಲಿ ಟೋಲ್ ಪ್ಲಾಜಾ ತೆರವು, ಜಿಪಿಎಸ್ ಆಧರಿತ ಟೋಲ್ ಸಂಗ್ರಹ ವ್ಯವಸ್ಥೆ
ಹೆದ್ದಾರಿಗಳಲ್ಲಿ 6 ತಿಂಗಳಲ್ಲಿ ಟೋಲ್ ಪ್ಲಾಜಾಗಳ ಬದಲಿಗೆ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ವ್ಯವಸ್ಥೆ (GPS-based toll system) ಜಾರಿಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನವ ದೆಹಲಿ: ಸರ್ಕಾರ ಮುಂದಿನ 6 ತಿಂಗಳಲ್ಲಿ ಹೆದ್ದಾರಿಗಳಲ್ಲಿ ಈಗಿನ ಟೋಲ್ ಪ್ಲಾಜಾ (Toll plaza) ಬದಲಿಗೆ ಜಿಪಿಎಸ್ ಆಧರಿತ ಟೋಲ್ ವ್ಯವಸ್ಥೆಯನ್ನು (GPS-based toll colletction) ಅಳವಡಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಕ್ರವಾರ ತಿಳಿಸಿದ್ದಾರೆ.
ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು, ಮೋಟಾರು ವಾಹನಗಳಿಗೆ ಸಂಚರಿಸಿದಷ್ಟೇ ದೂರದ ಲೆಕ್ಕದಲ್ಲಿ ನಿಖರವಾಗಿ ಶುಲ್ಕ ನಿಗದಿಪಡಿಸಲು ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಪದ್ಧತಿ ಸಹಕಾರಿಯಾಗಲಿದೆ ಎಂದು ಗಡ್ಕರಿ ತಿಳಿಸಿದರು.
ಸಿಐಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎನ್‌ಎಚ್‌ಎಐ ಈಗ 40,000 ಕೋಟಿ ರೂ. ಕಂದಾಯ ಸಂಗ್ರಹಿಸುತ್ತಿದೆ. ಇದು 2-3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ವಿವರಿಸಿದರು.
ಇನ್ನು ಆರು ತಿಂಗಳುಗಳಲ್ಲಿ ದೇಶದಲ್ಲಿನ ಹೆದ್ದಾರಿಗಳಲ್ಲಿನ ಎಲ್ಲ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಿ, ಜಿಪಿಎಸ್ ಆಧರಿತ ಟೋಲ್ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದರು. 2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಕಾಯುವ ಅವಧಿ 8 ನಿಮಿಷಗಳಾಗಿತ್ತು. ಈಗ 47 ಸೆಕೆಂಡ್‌ಗೆ ಇಳಿಕೆಯಾಗಿದೆ ಎಂದರು.
-
ಅಂಕಣ21 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ21 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ21 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ22 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ19 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ15 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ19 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ20 hours ago
Congress First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ವರುಣಾದಿಂದ ಸಿದ್ದರಾಮಯ್ಯ, ದೇವನಹಳ್ಳಿಯಲ್ಲಿ ಮುನಿಯಪ್ಪ