Capsicum price crash : ಪಂಜಾಬ್‌ನಲ್ಲಿ ಕ್ಯಾಪ್ಸಿಕಂ ಬೆಳೆದಿದ್ದ ರೈತರಿಗೆ ಆಘಾತ, ಕೆ.ಜಿಗೆ 1 ರೂ.ಗೆ ದರ ಕುಸಿತ, ಕಾರಣವೇನು? - Vistara News

ವಾಣಿಜ್ಯ

Capsicum price crash : ಪಂಜಾಬ್‌ನಲ್ಲಿ ಕ್ಯಾಪ್ಸಿಕಂ ಬೆಳೆದಿದ್ದ ರೈತರಿಗೆ ಆಘಾತ, ಕೆ.ಜಿಗೆ 1 ರೂ.ಗೆ ದರ ಕುಸಿತ, ಕಾರಣವೇನು?

ಪಂಜಾಬ್‌ನಲ್ಲಿ ಸ್ವತಃ ಸಿಎಂ ಭಗವಂತ್‌ ಮಾನ್‌ ಅವರ ಉತ್ತೇಜನದಿಂದ ಕ್ಯಾಪ್ಸಿಕಂ ಬೆಳೆದಿದ್ದ ರೈತರಿಗೆ ದರ ಕುಸಿತದ ಆಘಾತ ಎದುರಾಗಿದೆ. ಕಾರಣವೇನು? (Capsicum price crash) ಇಲ್ಲಿದೆ ವಿವರ.

VISTARANEWS.COM


on

capsicum
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂಡೀಗಢ: ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ಉತ್ತೇಜನದಿಂದ ಸಾವಿರಾರು ಎಕರೆಗಳಲ್ಲಿ ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ) ಬೆಳೆದಿದ್ದ ರೈತರಿಗೆ ಆಘಾತ ಉಂಟಾಗಿದೆ. ಮಾರುಕಟ್ಟೆಯಲ್ಲಿ ರೈತರಿಗೆ ಸಿಗುವ (Capsicum price crash) ದರ ಪ್ರತಿ ಕೆ.ಜಿಗೆ ಕೇವಲ 1 ರೂ.ಗೆ ಕುಸಿದಿದೆ. ಇದರ ಪರಿಣಾಮ ಆಕ್ರೋಶಗೊಂಡಿರುವ ರೈತರು ಬೆಳೆಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ರೈತರು ತಾವು ಬೆಳೆದಿರುವ ಕ್ಯಾಪ್ಸಿಕಂಗೆ ಬೆಲೆ ನೆಲಕಚ್ಚಿರುವುದನ್ನು ಕಂಡು ಹತಾಶೆಯಿಂದ ಬೀದಿಗಿಳಿದಿದ್ದಾರೆ.

ಪಂಜಾಬ್‌ ಸಿಎಂ ಮನವಿ ಮೇರೆಗೆ ನಾವು ಜಮೀನಿನ ಒಂದು ಭಾಗದಲ್ಲಿ ಕ್ಯಾಪ್ಸಿಕಂ ಬೆಳೆದಿದ್ದೆವು. ಆದರೆ ಈಗ ಅದಕ್ಕೆ ಸಿಗುತ್ತಿರುವ 1 ರೂ. ದರ ಕೇಳಿ ಆಘಾತವಾಗಿದೆ ಎಂದು ರೈತರು ಹೇಳಿದ್ದಾರೆ.

ಕಾರಣವೇನು?

ರಾಜ್ಯದ ತೋಟಗಾರಿಕಾ ಇಲಾಖೆಯ ಪ್ರಕಾರ ಪಂಜಾಬ್‌ನ ಮಾನ್ಸಾ, ಫಿರೋಜ್‌ಪುರ, ಸಂಗ್ರೂರ್‌ ಜಿಲ್ಲೆಯಲ್ಲಿ 1,500 ಹೆಕ್ಟೇರ್‌ ಪ್ರದೇಶಗಳಲ್ಲಿ ಕ್ಯಾಪ್ಸಿಕಂ ಬೆಳೆಯಲಾಗಿತ್ತು. ಆದರೆ ಹವಾಮಾನ ಬದಲಾವಣೆಯೇ ದರ ಕುಸಿತಕ್ಕೆ ಪ್ರಮುಖ ಕಾರಣ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಈ ವರ್ಷ ಚಳಿಗಾಲ ವಿಸ್ತರಣೆಯಾಗಿದ್ದರಿಂದ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಕ್ಯಾಪ್ಸಿಕಂ ಬೆಳೆಯಲಾಗಿದೆ. ಇದರಿಂದ ದರ ಕುಸಿದಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಮಾರುಕಟ್ಟೆಗೆ ಸಾಮಾನ್ಯವಾಗಿ ಜನವರಿ-ಫೆಬ್ರವರಿ ವೇಳೆಯಲ್ಲಿ ಮಹಾರಾಷ್ಟ್ರ-ಮಧ್ಯಪ್ರದೇಶದಿಂದ ಕ್ಯಾಪ್ಸಿಕಂ ಬರುತ್ತದೆ. ಬಳಿಕ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ನಿಂದ ಪಂಜಾಬ್‌ನಿಂದ ಸಿಗುತ್ತದೆ. ಆದರೆ ಈ ಸಲ ಏಕಕಾಲಕ್ಕೆ ಎಲ್ಲ ರಾಜ್ಯಗಳಿಂದ ಮಾರುಕಟ್ಟೆಗೆ ಕ್ಯಾಪ್ಸಿಕಂ ಬಂದಿದೆ. ಆದ್ದರಿಂದ ಬೆಳೆಯನ್ನು ಶೀಥಲೀಕರಣ ಘಟಕಗಳಲ್ಲಿ ದಾಸ್ತಾನಿಡುವಂತೆ ಮತ್ತು ದರ ಬಂದಾಗ ಮಾರುವಂತೆ ಅಧಿಕಾರಿಗಳು ರೈತರಿಗೆ ಮನವಿ ಮಾಡಿದ್ದಾರೆ. ತಮ್ಮ ಬೆಳೆಯನ್ನು ಕೋಲ್ಕೊತಾ ಮತ್ತಿತರ ಕಡೆಗೆ ಸಾಗಿಸಿ ಮಾರಾಟ ಮಾಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮೆಣಸಿನ ಕಾಯಿ ದರ ಕುಸಿತ ಸಂಭವ:

ಪಂಜಾಬ್‌ನಲ್ಲಿ ಹಸಿ ಮೆಣಸಿನಕಾಯಿ ದರ ಕೂಡ ಪ್ರತಿ ಕೆ.ಜಿಗೆ 9 ರೂ.ಗೆ ಕುಸಿದಿದ್ದು, ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಅಮೃತಸರ ಮಾರುಕಟ್ಟೆಯಲ್ಲಿ ಕೆಜಿಗೆ 20-25 ರೂ. ಇರುತ್ತಿತ್ತು. ಈ ನಡುವೆ ರಿಟೇಲ್‌ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕ್ಯಾಪ್ಸಿಕಂ ದರ 20-30 ರೂ. ಶ್ರೇಣಿಯಲ್ಲಿದೆ. ಏಪ್ರಿಲ್‌ ಮೊದಲ ವಾರದಲ್ಲಿ 70-80 ರೂ. ಇತ್ತು.

ಕೃಷಿ ಕಾಯಿದೆ ವಿರೋಧಿಸಿದ್ದರ ಪರಿಣಾಮ?

ಪಂಜಾಬ್‌ ನೂತನ ಕೃಷಿ ಕಾಯಿದೆಯನ್ನು ಪ್ರಬಲವಾಗಿ ವಿರೋಧಿಸಿತ್ತು. ಕೃಷಿ ಕಾಯಿದೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿತ್ತು. ಒಂದು ವೇಳೆ ವಿರೋಧಿಸದಿರುತ್ತಿದ್ದರೆ, ಕ್ಯಾಪ್ಸಿಕಂ ಅನ್ನು ದೇಶದ ನಾನಾ ರಾಜ್ಯಗಳಿಗೆ ಮುಕ್ತವಾಗಿ ಸಾಗಿಸಿ ಮಾರಾಟ ಮಾಡಲು ಸಾಧ್ಯವಾಗುತ್ತಿತ್ತು. ಹಾಗೂ ದರ ಕುಸಿತ ಆಗುತ್ತಿರಲಿಲ್ಲ ಎಂದು ಜಾಲತಾಣಗಳಲ್ಲಿ ನೆಟ್ಟಿಗರು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Real Estate: ಹಲವರಿಗೆ ಮನೆ ಇಲ್ಲ, ಇದ್ದವರು ಬಳಸುತ್ತಿಲ್ಲ! ದೇಶದಲ್ಲಿ 1 ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ಖಾಲಿ ಬಿದ್ದಿವೆ!

ಖರೀದಿ ಮಾಡಿರುವ ಒಂದು ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ದೇಶದಲ್ಲಿ ಖಾಲಿ ಇವೆ. ಮಾತ್ರವಲ್ಲದೆ ದೇಶದಲ್ಲಿ ಅಗ್ಗದ ಮನೆಗಳಿಗೆ ಬೇಡಿಕೆ ವೇಗವಾಗಿ ಕುಸಿಯುತ್ತಿದ್ದು, ದುಬಾರಿ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಅರ್ಥ ಎಲ್ಲರೂ ಶ್ರೀಮಂತರಾಗಿದ್ದಾರೆ ಎಂದಲ್ಲ. ರಿಯಲ್ ಎಸ್ಟೇಟ್ (Real Estate) ಉದ್ಯಮಿಗಳು ಶೇ. 10ರಷ್ಟಿರುವ ಶ್ರೀಮಂತರಿಗೆ ತಮ್ಮ ಆಸ್ತಿ ಮಾರಾಟಕ್ಕೆ ಆಸಕ್ತಿ ವಹಿಸಿರುವುದು ಇದಕ್ಕೆ ಮುಖ್ಯ ಕಾರಣ ಎಂದಿದ್ದಾರೆ ಭಾರತದ ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ನರೆಡ್ಕೊ) ಅಧ್ಯಕ್ಷ ಜಿ. ಹರಿಬಾಬು.

VISTARANEWS.COM


on

By

Real Estate
Koo

ಬಳಕೆಯಾಗದ ಆಸ್ತಿಯನ್ನು (assets) ಇಟ್ಟುಕೊಳ್ಳುವುದು ಒಂದು ರಾಷ್ಟ್ರೀಯ ಅಪರಾಧ (national crime) ಎಂದು ನಾನು ಭಾವಿಸುತ್ತೇನೆ. ದೇಶದಲ್ಲಿ ಒಂದೆಡೆ ವಸತಿ ಕೊರತೆಯಿದೆ. ಇನ್ನೊಂದೆಡೆ 1.14 ಕೋಟಿ ಫ್ಲಾಟ್‌ಗಳು ಖಾಲಿ ಇವೆ ಎಂದು ಭಾರತದ ರಾಷ್ಟ್ರೀಯ ರಿಯಲ್ ಎಸ್ಟೇಟ್ (Real Estate) ಅಭಿವೃದ್ಧಿ ಮಂಡಳಿ (NAREDCO) ಅಧ್ಯಕ್ಷ ಜಿ. ಹರಿಬಾಬು (G. Haribabu) ತಿಳಿಸಿದ್ದಾರೆ.

ಪ್ರಸ್ತುತ ದೇಶದಲ್ಲಿ ಸುಮಾರು ಒಂದು ಕೋಟಿ ಮನೆಗಳು ಖಾಲಿ ಬಿದ್ದಿವೆ. ಒಂದೆಡೆ ದುಬಾರಿ ಮನೆಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮತ್ತೊಂದೆಡೆ ದೇಶದ ದೊಡ್ಡ ನಗರಗಳಲ್ಲಿ ಅಗ್ಗದ ಮನೆಗಳ ಬೇಡಿಕೆ ವೇಗವಾಗಿ ಕುಸಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ 2019 ಮತ್ತು 2023 ರ ನಡುವೆ 1.5 ಕೋಟಿ ರೂ. ಗಿಂತ ಹೆಚ್ಚು ವೆಚ್ಚದ ಮನೆಗಳ ಬೇಡಿಕೆಯು ಸುಮಾರು 1000 ಪ್ರತಿಶತದಷ್ಟು ಹೆಚ್ಚಾಗಿದೆ. ಶ್ರೀಮಂತರು ಮತ್ತು ಸಾಂಸ್ಥಿಕ ಹೂಡಿಕೆದಾರರು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಜಿಗಿದಿರುವುದರಿಂದ ಈ ರೀತಿಯಾಗಿದೆ. ಆದರೆ, ದೇಶಕ್ಕೆ ಅಗ್ಗದ ಮನೆಗಳ ಅಗತ್ಯವಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿಗೆ ಅವರ ಬೇಡಿಕೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.


ಬಿಲ್ಡರ್‌ ಗಳಿಗೆ ಕೇವಲ ಶೇ. 10ರಷ್ಟು ಜನರಷ್ಟೇ ಗುರಿ

2022ರಲ್ಲಿ ಹೈದರಾಬಾದ್‌ನಲ್ಲಿ 5,300 ಅಗ್ಗದ ಮನೆಗಳನ್ನು ಮಾರಾಟ ಮಾಡಲಾಗಿದೆ. 2023ರಲ್ಲಿ ಈ ಸಂಖ್ಯೆ ಕೇವಲ 3,800 ಕ್ಕೆ ಇಳಿಕೆಯಾಗಿದೆ. ಕೆಲವೇ ಜನರಲ್ಲಿ ಹಣವು ವೇಗವಾಗಿ ಹೆಚ್ಚುತ್ತಿದೆ. ದೇಶದ ಜನಸಂಖ್ಯೆಯ ಶೇ. 10ರಷ್ಟು ಮಂದಿಯಲ್ಲಿ ಶೇ. 63ರಷ್ಟು ಸಂಪತ್ತು ಸಂಗ್ರಹವಾಗಿದೆ. ಈ ಸಂಖ್ಯೆ 14 ಕೋಟಿ ಜನರದ್ದು. ಈ ಸಮಯದಲ್ಲಿ ಹೆಚ್ಚಿನ ಬಿಲ್ಡರ್‌ಗಳು ಈ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಸುಮಾರು 1.14 ಕೋಟಿ ಮನೆಗಳು ಖಾಲಿ ಬಿದ್ದಿರುವುದಕ್ಕೆ ಇದೇ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.

ಖರೀದಿಸಿ ಬಳಕೆಯಾಗದ ಮನೆಗಳು

ಹೂಡಿಕೆದಾರರು ಖರೀದಿಸುವ ಮನೆಗಳನ್ನು ಬಳಸುತ್ತಿಲ್ಲ ಎಂದು ತಿಳಿಸಿರುವ ಹರಿಬಾಬು, ಈ ಮನೆಗಳನ್ನು ಬಾಡಿಗೆಗೆ ಸಹ ನೀಡುತ್ತಿಲ್ಲ. ಒಂದೆಡೆ ಜನ ಮನೆ ಹುಡುಕಿಕೊಂಡು ಅಲೆದಾಡುತ್ತಿದ್ದರೆ, ಮತ್ತೊಂದೆಡೆ ಈ ಮನೆಗಳು ಖಾಲಿ ಬಿದ್ದಿವೆ. ಹೂಡಿಕೆಗಾಗಿ ಖರೀದಿಸಿದ ಈ ಮನೆಗಳು ಬಳಕೆಯಾಗುತ್ತಿಲ್ಲ. ಇದೊಂದು ರೀತಿಯ ಅಪರಾಧ. ಅಂತಹ ಮನೆಗಳ ಮೇಲಿನ ಆಸ್ತಿ ತೆರಿಗೆಯನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿಸಬೇಕು. ಇದರಿಂದ ಈ ಆಸ್ತಿಯನ್ನು ಬಳಸಬಹುದು. ನಮ್ಮ ಜನಸಂಖ್ಯೆಯ ಶೇ.60ರಷ್ಟು ಮಂದಿಗೆ ಮನೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅವರು ಸಂಪೂರ್ಣವಾಗಿ ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!

ಶುಲ್ಕಗಳಲ್ಲಿ ರಿಯಾಯಿತಿ

ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಲು ಬಿಲ್ಡರ್ ಗಳ ಮೇಲೆ ಸರಕಾರ ಒತ್ತಡ ಹೇರಬೇಕು ಎಂದ ಅವರು, ಕೈಗೆಟಕುವ ಬೆಲೆಯ ಮನೆಗಳಿಗೆ ಜಿಎಸ್‌ಟಿ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಬೇಕು. ಈ ಬದಲಾವಣೆಗಳು ಕೈಗೆಟುಕುವ ದರದ ವಸತಿ ವಲಯದಲ್ಲಿ ಶೇ. 25ರಷ್ಟು ಬೆಳವಣಿಗೆಯನ್ನು ತರುವ ನಿರೀಕ್ಷೆಯಿದೆ. ಕೆಳಮಧ್ಯಮ ಮತ್ತು ಮಧ್ಯಮ ವರ್ಗದವರ ಬಗ್ಗೆ ಸರಕಾರ ಚಿಂತನೆ ನಡೆಸಬೇಕಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ನಾವು ಸಾಗುತ್ತಿದ್ದೇವೆ. ನಮ್ಮ ಜನಸಂಖ್ಯೆಯ ಶೇ. 40ರಷ್ಟು ಮಂದಿ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರೆ, ನಾವು ಅಭಿವೃದ್ಧಿ ಹೊಂದಿದ ದೇಶ ಎಂದು ಹೇಗೆ ಕರೆಯಬಹುದು ಎಂದು ಅವರು ಪ್ರಶ್ನಿಸಿದ್ದಾರೆ.

Continue Reading

ಚಿನ್ನದ ದರ

Gold Rate Today: ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್;‌ ಇಂದು ಏರಿಕೆಯಾಗದ ಬೆಲೆ

Gold Rate Today: ಶನಿವಾರ ಒಂದೇ ದಿನ ಗ್ರಾಂ ಚಿನ್ನದ ಬೆಲೆಯು 67 ರೂಪಾಯಿ ಜಾಸ್ತಿಯಾಗಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಭಾನುವಾರ ಇನ್ನಷ್ಟು ಏರಿಕೆಯಾಗುವ ಭೀತಿ ಇತ್ತು. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆ ಕಂಡರೆ, ಎರಡು ಬಾರಿ ಮಾತ್ರ ಇಳಿಕೆ ಕಂಡಿತ್ತು. ಭಾನುವಾರ ಬೆಳ್ಳಿಯ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ. ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆಯು 90.30 ರೂ. ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಶನಿವಾರ (ಜೂನ್‌ 15) ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಭಾನುವಾರ (ಜೂನ್‌ 16) ಯಥಾಸ್ಥಿತಿ ಕಾಯ್ದುಕೊಂಡಿರುವುದು ಗ್ರಾಹಕರಿಗೆ ತುಸು ರಿಲೀಫ್‌ ತಂದಿದೆ. ಬೆಂಗಳೂರಿನಲ್ಲಿ ಇಂದು (Gold Rate Today) 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 6,650 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 7,255 ರೂ. ಇದೆ. ಚಿನ್ನದ ಬೆಲೆ ಏರಿಕೆ ಕಾಣದ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ ಚಿನ್ನ ಖರೀದಿಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಒಂದೇ ದಿನ ಗ್ರಾಂ ಚಿನ್ನದ ಬೆಲೆಯು 67 ರೂಪಾಯಿ ಜಾಸ್ತಿಯಾಗಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಭಾನುವಾರ ಇನ್ನಷ್ಟು ಏರಿಕೆಯಾಗುವ ಭೀತಿ ಇತ್ತು. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆ ಕಂಡರೆ, ಎರಡು ಬಾರಿ ಮಾತ್ರ ಇಳಿಕೆ ಕಂಡಿತ್ತು. ಇನ್ನು ನಾಲ್ಕು ಬಾರಿ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಭಾನುವಾರ ಬೆಳ್ಳಿಯ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ. ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆಯು 90.30 ರೂ. ಇದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,665 ₹ 7,270
ಮುಂಬೈ₹ 6,650 ₹ 7,255
ಬೆಂಗಳೂರು₹ 6,650₹ 7,255
ಚೆನ್ನೈ₹ 6,705 ₹ 7,315

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

Gold Rate Today

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!

Continue Reading

ವಾಣಿಜ್ಯ

Tata Motors: ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವ; ಗ್ರಾಹಕರಿಗೆ 1 ಲಕ್ಷ ರೂ.ವರೆಗೆ ಉಳಿತಾಯ!

Tata Motors: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಭಾರತದ ನಂ. 1 ಎಸ್‌ಯುವಿ ಟಾಟಾ ನೆಕ್ಸಾನ್ ತನ್ನ 7ನೇ ವರ್ಷದ ವಾರ್ಷಿಕೋತ್ಸವದಂದು 7 ಲಕ್ಷ ವಾಹನ ಮಾರಾಟದ ಸಂಭ್ರಮಾಚರಣೆ ಮಾಡುತ್ತಿದ್ದು, ಈ ಪ್ರಯುಕ್ತ ರೂ.1 ಲಕ್ಷವರೆಗಿನ ಪ್ರಯೋಜನಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ.

VISTARANEWS.COM


on

Tata Motors SUV Tata Nexon 7th Anniversary Benefit up to Rs 1 lakh for customers
Koo

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ (Tata Motors) ಭಾರತದ ನಂ. 1 ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವದಂದು 7 ಲಕ್ಷ ಯುನಿಟ್ ಮಾರಾಟದ ಸಂಭ್ರಮಾಚರಣೆ ಮಾಡುತ್ತಿದೆ.

2017ರಲ್ಲಿ ಬಿಡುಗಡೆಯಾದ ನೆಕ್ಸಾನ್ 2021 ರಿಂದ 2023 ರವರೆಗೆ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಭಾರತದ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2018ರಲ್ಲಿ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಮೊದಲ ವಾಹನ ಎಂಬ ಖ್ಯಾತಿಯನ್ನು ನೆಕ್ಸಾನ್ ಹೊಂದಿದೆ. ಆ ಮೂಲಕ ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಹೊಸ ಮಾನದಂಡವನ್ನು ಹಾಕಿಕೊಟ್ಟಿದೆ. ಅಂದಿನಿಂದ ಇಂದಿನವರೆಗೂ ಅದರ ಗೆಲುವಿನ ಓಟ ಮುಂದುವರಿದಿದೆ.

ಇದನ್ನೂ ಓದಿ: ಕರ್ನಾಟಕದ ಶ್ರುತಿ ಬಿ.ಆರ್, ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ

ಫೆಬ್ರವರಿ 2024ರಲ್ಲಿ, ಹೊಸ ಜನರೇಷನ್‌ನ ನೆಕ್ಸಾನ್ 2022ರ ಹೆಚ್ಚಿನ ಪ್ರೋಟೋಕಾಲ್ ಪ್ರಕಾರ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ನೆಕ್ಸಾನ್.ಇವಿ ಕೂಡ ಅದೇ ದಾರಿಯಲ್ಲಿ ಸಾಗಿದ್ದು, ಇದೇ ತಿಂಗಳಲ್ಲಿ ಭಾರತ್- ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.

41 ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ನೆಕ್ಸಾನ್‌ನ ಅತ್ಯದ್ಭುತ ಕಾರ್ಯಕ್ಷಮತೆಯು ಗಮನ ಸೆಳೆಯುತ್ತದೆ ಮತ್ತು ಅದರಿಂದಲೇ ಮಾರಾಟ ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ (2022 ಮತ್ತು 2023) 3 ಲಕ್ಷಕ್ಕೂ ಹೆಚ್ಚು ನೆಕ್ಸಾನ್ ಯುನಿಟ್‌ಗಳು ಮಾರಾಟವಾಗಿವೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಎಂಬ ಬಹು ಪವರ್‌ಟ್ರೇನ್‌ಗಳಲ್ಲಿ ಲಭ್ಯವಿರುವ ನೆಕ್ಸಾನ್, ಸಮಯದ ಜತೆಗೆ ದೃಢವಾಗಿ ಬೆಳವಣಿಗೆ ಹೊಂದಿದೆ. ಸೆಗ್ಮೆಂಟಿನಲ್ಲಿ ಅತಿ ಆಕರ್ಷಕವಾದ ಅದರ ವಿನ್ಯಾಸ, ವಿಭಾಗದಲ್ಲಿಯೇ ಅತ್ಯುತ್ತಮ ಅನ್ನಿಸುವ ಫೀಚರ್‌ಗಳು ಮತ್ತು ಟೆಕ್ ಫಾರ್ವರ್ಡ್ ಗುಣಗಳಿಂದಾಗಿ ನೆಕ್ಸಾನ್ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ.

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಈ ಕುರಿತು ಮಾತನಾಡಿ, 2017 ರಲ್ಲಿ ಬಿಡುಗಡೆ ಆದಾಗಿನಿಂದಲೂ ನೆಕ್ಸಾನ್ ವಿನ್ಯಾಸ, ಸುರಕ್ಷತೆ, ಸೌಕರ್ಯ ಮತ್ತು ಚಾಲನಾ ಅನುಭವದ ವಿಚಾರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಕಳೆದ ಏಳು ವರ್ಷಗಳಲ್ಲಿ ದೊಡ್ಡದಾಗಿ ವಿಸ್ತಾರಗೊಂಡಿರುವ ನೆಕ್ಸಾನ್‌ನ ಗ್ರಾಹಕರ ಅಚಲವಾದ ಬೆಂಬಲ ಮತ್ತು ಪ್ರೀತಿಯಿಂದಾಗಿ ನೆಕ್ಸಾನ್ ಉದ್ಯಮದಲ್ಲಿ ಐಕಾನಿಕ್ ಬ್ರ್ಯಾಂಡ್ ಆಗಿ ರೂಪುಗೊಂಡಿದೆ.

ಪವರ್‌ಟ್ರೇನ್‌ಗಳು ಮತ್ತು ವೇರಿಯಂಟ್‌ಗಳ ವಿವಿಧ ಆಯ್ಕೆಗಳ ಮೂಲಕ ಗ್ರಾಹಕರ ಅಗತ್ಯ ಮತ್ತು ಆಸಕ್ತಿಗೆ ತಕ್ಕಂತೆ ನೆಕ್ಸಾನ್ ಅನ್ನು ಒದಗಿಸಲಾಗುತ್ತಿದೆ ಎಂಬುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. 7 ವರ್ಷಗಳಲ್ಲಿ 7 ಲಕ್ಷ ವಾಹನ ಮಾರಾಟ ಮಾಡಿರುವ ಮಹತ್ವದ ಸಾಧನೆಯನ್ನು ಆಚರಿಸಲು ಮತ್ತು ಬೆಳೆಯುತ್ತಿರುವ ನೆಕ್ಸಾನ್ ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಹಲವು ಉತ್ತಮ ಪ್ರಯೋಜನಗಳನ್ನು ಒದಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Weather : ದಕ್ಷಿಣ ಒಳನಾಡು, ಮಲೆನಾಡಲ್ಲಿ ತಗ್ಗಿದ ಮಳೆ; ಕರಾವಳಿಯಲ್ಲಿ ಮುಂದುವರಿಯಲಿದೆ ಅಬ್ಬರ

ದೇಶಾದ್ಯಂತ ಇರುವ ಎಲ್ಲಾ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವಿತರಕರು ಮತ್ತು ಶೋರೂಮ್‌ಗಳು ನೆಕ್ಸಾನ್ ಗೆಲುವನ್ನು ಸಂಭ್ರಮಿಸಲು ಹಲವಾರು ವಿಶೇಷ ಕಾರ್ಯಕ್ರಮಗಳು ಮತ್ತು ಗ್ರಾಹಕರ ಸಭೆಗಳನ್ನು ಆಯೋಜಿಸುತ್ತಿವೆ. ಹೊಸ ನೆಕ್ಸಾನ್ ಅನ್ನು ಬುಕಿಂಗ್ ಮಾಡುವವರಿಗೆ, ಜತೆಗೆ ತಮ್ಮ ಹೊಸ ನೆಕ್ಸಾನ್ ಅನ್ನು ಬುಕಿಂಗ್ ಮಾಡಿ ಡೆಲಿವರಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ಅಥವಾ ತಮ್ಮ ಅಸ್ತಿತ್ವದಲ್ಲಿರುವ ನೆಕ್ಸಾನ್ ಅನ್ನು ಅದರ ಹೊಸ ಅವತಾರಕ್ಕೆ ಅಪ್‌ಗ್ರೇಡ್ ಮಾಡಲು ಬಯಸುಸುವವರಿಗೆ 1 ಲಕ್ಷ ರೂ.ವರೆಗಿನ (ಮಾಡೆಲ್ ಮತ್ತು ವೇರಿಯಂಟ್ ಅನ್ನು ಆಧರಿಸಿ) ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ಭಾರತದ ನಂ. 1 ಎಸ್‌ಯುವಿಯನ್ನು ತಮ್ಮದಾಗಿಸಿಕೊಳ್ಳಲು ಇದು ಸಕಾಲವಾಗಿದೆ.

ಅತ್ಯಾಧುನಿಕ ಕನೆಕ್ಟಿವಿಟಿ, ಅಪ್‌ಗ್ರೇಡ್ ಮಾಡಿದ ಸುರಕ್ಷತಾ ಫೀಚರ್‌ಗಳು ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ನೆಕ್ಸಾನ್ ಅತ್ಯುತ್ತಮ ಕಾರ್ಯಕ್ಷಣತೆ ಪ್ರದರ್ಶಿಸಲು ಸನ್ನದ್ಧವಾಗಿದೆ ಮತ್ತು ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಜತೆಗೆ ಈ ಸೆಗ್ಮೆಂಟಿನಲ್ಲಿ ಇದು ಮುಂಚೂಣಿಯಲ್ಲಿ ನಿಂತಿದೆ. ಆಧುನಿಕ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವ ಈ ಎಸ್‌ಯುವಿ ಯಾವಾಗಲೂ ರಸ್ತೆಯಲ್ಲಿ ಘನತೆಯಿಂದ ಕಾಣಿಸಿಕೊಳ್ಳುತ್ತದೆ ಮತ್ತು ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ನೀಡುತ್ತದೆ. ಗ್ರಾಹಕರು ಮತ್ತು ಅಭಿಮಾನಿಗಳ ಅತ್ಯುತ್ಸಾಹದ ಪ್ರತಿಕ್ರಿಯೆಯು ನೆಕ್ಸಾನ್ ಅನ್ನು ಭಾರತೀಯ ಆಟೋ ಉದ್ಯಮದ ಸ್ಪರ್ಧಾತ್ಮಕ ವಿಭಾಗದ ನಾಯಕನನ್ನಾಗಿ ಮಾಡಿದೆ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌: ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 627 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

ಜೂನ್ 30 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಮಾತ್ರ ಈ ಸೀಮಿತ ಅವಧಿಯ ಪ್ರಯೋಜನಗಳು ಲಭ್ಯವಿರುತ್ತವೆ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ ಎಂದು ತಿಳಿಸಿದೆ.

Continue Reading

ಮನಿ-ಗೈಡ್

Money Guide: ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಉಳಿತಾಯ ಯೋಜನೆ

ಅತ್ಯಾಕರ್ಷಕ ಬಡ್ಡಿ ದರದೊಂದಿಗೆ ಅಂಚೆ ಇಲಾಖೆ ಒದಗಿಸಿರುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಹೂಡಿಕೆ (Money Guide) ಮಾಡಬಹುದು. ಖಾತ್ರಿ ಮರುಪಾವತಿ ನೀಡುವ ಯೋಜನೆ ಇದಾಗಿದ್ದು, ಇದರಲ್ಲಿ ಹೂಡಿಕೆ ಮಾಡುವುದರಿಂದ ಏನು ಲಾಭ, ಸಿಗುವ ಬಡ್ಡಿ ದರ ಎಷ್ಟಿದೆ ಗೊತ್ತೇ? ಹಿರಿಯ ನಾಗರಿಕರಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ.

VISTARANEWS.COM


on

By

Money Guide
Koo

ಹಿರಿಯ ನಾಗರಿಕರ (Senior Citizen) ಉಳಿತಾಯ ಯೋಜನೆಯು (SCSS) 60 ವರ್ಷಕ್ಕಿಂತ ಮೇಲ್ಪಟ್ಟವರು ಹೂಡಿಕೆ (Money Guide) ಮಾಡಬಹುದಾದ ಖಾತ್ರಿ ಮರುಪಾವತಿ (guaranteed return) ನೀಡುವ ಯೋಜನೆಯಾಗಿದೆ. ಇದರಲ್ಲಿ ಜಂಟಿ ಖಾತೆಯನ್ನು ಸಂಗಾತಿಯೊಂದಿಗೆ ಮಾತ್ರ ತೆರೆಯಬಹುದು.

ಅಂಚೆ ಇಲಾಖೆಯು (post office) ಈ ಸಣ್ಣ ಉಳಿತಾಯ ಯೋಜನೆಗೆ (small savings scheme) ವಾರ್ಷಿಕ ಶೇ. ಶೇ. 8.2 ಬಡ್ಡಿ ದರವನ್ನು (interest rate) ನೀಡುತ್ತಿದೆ. ನೀವು ಈ ಯೋಜನೆಯನ್ನು 5 ವರ್ಷಗಳವರೆಗೆ ತೆರೆಯಬಹುದು. ಆದರೆ ಮೆಚ್ಯೂರಿಟಿಯ ದಿನಾಂಕದಿಂದ ಮುಂದಿನ 3 ವರ್ಷಗಳವರೆಗೆ ಇದನ್ನು ವಿಸ್ತರಿಸಬಹುದು.

ಎಷ್ಟು ಹೂಡಿಕೆ ಮಾಡಬಹುದು?

ಒಂದು ಬಾರಿಯ ಮೊತ್ತದ ಹೂಡಿಕೆಯನ್ನು ಮಾಡಬೇಕು. ಇದರಲ್ಲಿ ಕನಿಷ್ಠ 1,000 ರೂ. ನಿಂದ ಗರಿಷ್ಠ 30 ಲಕ್ಷ ರೂ. ವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಇದರಲ್ಲಿ ಮಾಡಿದ ಠೇವಣಿಗಳ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಬಡ್ಡಿ ದರ

ತ್ರೈಮಾಸಿಕ ಆಧಾರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಠೇವಣಿ ಮಾಡಿದ ದಿನಾಂಕದಿಂದ ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30, ಡಿಸೆಂಬರ್ 31ರಂದು ಬಡ್ಡಿಯನ್ನು ಪಾವತಿಸಲಾಗುತ್ತದೆ. ಯಾವುದೇ ತ್ರೈಮಾಸಿಕದಲ್ಲಿ ಬಡ್ಡಿಯನ್ನು ಕ್ಲೈಮ್ ಮಾಡದಿದ್ದರೆ ಹೆಚ್ಚುವರಿ ಬಡ್ಡಿಯನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಉಳಿತಾಯ ಖಾತೆಗೆ ಸ್ವಯಂ ಕ್ರೆಡಿಟ್ ಮೂಲಕ ಬಡ್ಡಿಯನ್ನು ಡ್ರಾ ಮಾಡಬಹುದು.


ಬಡ್ಡಿಗೆ ತೆರಿಗೆ

ಎಲ್ಲಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಖಾತೆಗಳಲ್ಲಿನ ಒಟ್ಟು ಬಡ್ಡಿಯು 50,000 ರೂ. ಗಳನ್ನು ಮೀರಿದರೆ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಅನಂತರ ಬಡ್ಡಿಯ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಫಾರ್ಮ್ 15 ಜಿ /15ಹೆಚ್ ಅನ್ನು ಸಲ್ಲಿಸಿದರೆ ಮತ್ತು ಸಂಚಿತ ಬಡ್ಡಿಯು 50,000 ರೂ. ಗಿಂತ ಹೆಚ್ಚಿಲ್ಲದಿದ್ದರೆ ಯಾವುದೇ ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ.

ಎಷ್ಟು ಲಾಭ?

ಪ್ರಸ್ತುತ ಪೋಸ್ಟ್ ಆಫೀಸ್ ಎಸ್‌ಸಿಎಸ್‌ಎಸ್‌ನಲ್ಲಿ ತಲಾ 1 ಲಕ್ಷ, 2 ಲಕ್ಷ, 5 ಲಕ್ಷ ಮತ್ತು 10 ಲಕ್ಷ ರೂ. ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಯೋಜನೆಯ ಒಟ್ಟು ಅವಧಿಯು 5 ವರ್ಷಗಳು ಮತ್ತು ಬಡ್ಡಿ ದರವು ವಾರ್ಷಿಕ ಶೇ. 8.2. ಗಳಾದರೆ 1 ಲಕ್ಷ ರೂ. ಹೂಡಿಕೆ ಮಾಡಿದರೆ ಒಟ್ಟು ಬಡ್ಡಿ 41,000, 2,050 ತ್ರೈಮಾಸಿಕ ಬಡ್ಡಿ ಹಾಗೂ ಐದು ವರ್ಷಗಳಲ್ಲಿ ಮುಕ್ತಾಯದ ಮೊತ್ತ 1,41,000 ರೂ. ಅನ್ನು ಪಡೆಯಬಹುದು. ಅದೇ ರೀತಿ 2 ಲಕ್ಷ ರೂ. ಹೂಡಿಕೆ ಮಾಡಿದರೆ 82,000, 4,100, 2,82,000, 3 ಲಕ್ಷ ಹೂಡಿಕೆ ಮಾಡಿದರೆ 1,23,000, 6,150, 4,23,000, 4 ಲಕ್ಷ ಹೂಡಿಕೆ ಮಾಡಿದರೆ 1,64,000, 8,200, 5,64,000, 5 ಲಕ್ಷ ರೂ. ಹೂಡಿಕೆ ಮಾಡಿದರೆ 2,05,000, 10,250, 7,05,000, 10 ಲಕ್ಷ ರೂ. ಹೂಡಿಕೆ ಮಾಡಿದರೆ 4,10,000, 20500, 14,10,000, 20 ಲಕ್ಷ ರೂ. ಹೂಡಿಕೆ ಮಾಡಿದರೆ 8,20,000, 41,000, 28,20,000, 30 ಲಕ್ಷ ಹೂಡಿಕೆ ಮಾಡಿದರೆ 12,30,000, 61,500, 42,30,000 ಪಡೆಯಬಹುದು.

ಇದನ್ನೂ ಓದಿ: Money Guide: ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ

ಅಕಾಲಿಕ ಮುಚ್ಚುವಿಕೆ

ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಯಾವುದೇ ಸಮಯದಲ್ಲಿ ಅಕಾಲಿಕವಾಗಿ ಮುಚ್ಚಬಹುದು. ಆದರೂ ಖಾತೆಯನ್ನು ತೆರೆಯುವ 1 ವರ್ಷದ ಮೊದಲು ಮುಚ್ಚಿದ್ದರೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಅಂಚೆ ಕಚೇರಿಯು ಒಟ್ಟು ಮೊತ್ತದಿಂದ ಪಾವತಿಸಿದ ಬಡ್ಡಿಯನ್ನು ಸಹ ಪಡೆಯುತ್ತದೆ. 1 ವರ್ಷದಿಂದ 2 ವರ್ಷಗಳ ಅವಧಿಯಲ್ಲಿ ಖಾತೆಯನ್ನು ಮುಚ್ಚಿದ್ದರೆ, ಮೊತ್ತದ ಶೇ. 1.5ರಷ್ಟನ್ನು ಕಡಿತಗೊಳಿಸಿದ ಅನಂತರ ಮೂಲ ಮೊತ್ತವನ್ನು ಪಾವತಿಸಲಾಗುತ್ತದೆ.

Continue Reading
Advertisement
Real Estate
ವಾಣಿಜ್ಯ3 mins ago

Real Estate: ಹಲವರಿಗೆ ಮನೆ ಇಲ್ಲ, ಇದ್ದವರು ಬಳಸುತ್ತಿಲ್ಲ! ದೇಶದಲ್ಲಿ 1 ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ಖಾಲಿ ಬಿದ್ದಿವೆ!

Smriti Mandhana
ಕ್ರೀಡೆ4 mins ago

Smriti Mandhana: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ

Actress Nayanathara
Latest14 mins ago

Actress Nayanathara: ‘ಬಾಹುಬಲಿ’ ಸಿನಿಮಾ ದೃಶ್ಯದ ಮರುಸೃಷ್ಟಿಯಲ್ಲಿ ವಿಘ್ನೇಶ್ ಶಿವನ್ ಪುತ್ರರು!

Actor Darshan Rakshak Bullet Not Celebrating His Birthday Due To Darshan Arrest
ಸ್ಯಾಂಡಲ್ ವುಡ್18 mins ago

Actor Darshan: ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿದ್ದಾರೆ; ಬರ್ತ್‌ಡೇ ಕ್ಯಾನ್ಸಲ್ ಮಾಡಿದ ರಕ್ಷಕ್ ಬುಲೆಟ್!

pattanagere shed darshan renuka swamy murder
ಕ್ರೈಂ25 mins ago

Renuka Swamy Murder: ಸಿಸಿಟಿವಿ ದಾಖಲೆ ಸಂಪೂರ್ಣ ನಾಶ ಮಾಡಿದ ಪಾತಕಿಗಳು! ಆ ಭಯಾನಕ ಶೆಡ್‌ನಲ್ಲಿದೆ ಇನ್ನಷ್ಟು ರಹಸ್ಯ!

murder Case in chikkodi
ಬೆಳಗಾವಿ36 mins ago

Murder Case : ನಡುರಸ್ತೆಯಲ್ಲಿ ಚಿಮ್ಮಿದ ರಕ್ತ; ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಕೊಲೆ

Train Accident
ದೇಶ46 mins ago

Train Accident: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್​ ರೈಲು ಡಿಕ್ಕಿ; 5 ಮಂದಿ ಸಾವು

Actor Darshan old interview goes viral Explain About Murder And His Mindset
ಸ್ಯಾಂಡಲ್ ವುಡ್47 mins ago

Actor Darshan: ಕೊಲೆಯನ್ನು ಆತುರದಲ್ಲಿ ಮಾಡಿರ್ತಾನೆ ಬಳಿಕ ಕೊರಗುತ್ತಾನೆ; ದರ್ಶನ್ ಹಳೆಯ ಸಂದರ್ಶನ ವೈರಲ್‌!

Paris Olympics 2024
ಕ್ರೀಡೆ47 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಗೀತ ಗೋವಿಂದಂ ಚಿತ್ರದ ಹಾಡು; ಹರ್ಷ ವ್ಯಕ್ತಪಡಿಸಿದ ರಶ್ಮಿಕಾ-ದೇವರಕೊಂಡ

Actor Darshan case real star upendra react about case
ಸ್ಯಾಂಡಲ್ ವುಡ್54 mins ago

Actor Darshan: ದರ್ಶನ್ & ಗ್ಯಾಂಗ್ ಪೊಲೀಸ್ ವಿಚಾರಣೆ ಲೈವ್ ಸ್ಟ್ರೀಮಿಂಗ್ ಆಗಬೇಕು ಎಂದ ಉಪೇಂದ್ರ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ18 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ19 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌