Cash Limit At Home: ಮನೆಯಲ್ಲಿ ಎಷ್ಟು ಹಣ ಇರಿಸಿಕೊಳ್ಳಬಹುದು? ಮಿತಿಗಿಂತ ಹೆಚ್ಚಿದ್ದರೆ ಏನಾಗುತ್ತದೆ? - Vistara News

ವಾಣಿಜ್ಯ

Cash Limit At Home: ಮನೆಯಲ್ಲಿ ಎಷ್ಟು ಹಣ ಇರಿಸಿಕೊಳ್ಳಬಹುದು? ಮಿತಿಗಿಂತ ಹೆಚ್ಚಿದ್ದರೆ ಏನಾಗುತ್ತದೆ?

ಮನೆಯಲ್ಲಿ ಹಣವನ್ನು (Cash Limit At Home) ಇಡಲು ಆದಾಯ ತೆರಿಗೆ ಕೆಲವು ನಿಯಮಗಳನ್ನು ಮಾಡಿದೆ. ಈ ನಿಯಮಗಳನ್ನು ಅನುಸರಿಸದಿದ್ದರೆ ಅಥವಾ ತಪ್ಪು ಮಾಡಿದರೆ ಅದಕ್ಕೆ ಉತ್ತರಿಸಬೇಕಾಗಬಹುದು ಮಾತ್ರವಲ್ಲದೇ ಜೈಲು ಶಿಕ್ಷೆಗೂ ಒಳಗಾಗಬೇಕಾಗಬಹುದು. ಈ ಕುರಿತ ಮಾಹಿತಿ ಇಲ್ಲಿ ಕೊಡಲಾಗಿದೆ.

VISTARANEWS.COM


on

Cash Limit At Home
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾವೀಗ ಡಿಜಿಟಲ್ (digital) ಯುಗದಲ್ಲಿದ್ದೇವೆ. ಹೀಗಾಗಿ ಜೇಬಿಗಿಂತ ಹಣವನ್ನು ಬ್ಯಾಂಕ್ ಖಾತೆಯಲ್ಲಿ (bank account) ಇರಿಸುವುದು ಸುರಕ್ಷಿತ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇನ್ನೂ ಬಹಳಷ್ಟು ಮಂದಿ ಬ್ಯಾಂಕ್, ಡಿಜಿಟಲ್ ವಹಿವಾಟಿನ ಜಂಜಾಟ ಯಾಕೆಂದುಕೊಂಡು ಮನೆಯಲ್ಲೇ ಹಣವನ್ನು ಇಟ್ಟುಕೊಂಡಿರುತ್ತಾರೆ. ಮನೆಯಲ್ಲಿ ಬೇಕಾಬಿಟ್ಟಿ ಹಣ (Cash Limit At Home) ಇಟ್ಟುಕೊಳ್ಳುವಂತಿಲ್ಲ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

ಮನೆಯಲ್ಲಿ ಇಟ್ಟುಕೊಳ್ಳಬಹುದಾದ ನಗದಿಗೆ ನಿರ್ದಿಷ್ಟ ಮಿತಿ ಇದೆ. ಅಷ್ಟು ಹಣವನ್ನು ಮಾತ್ರ ಇಟ್ಟುಕೊಳ್ಳಬಹುದು. ಮಿತಿಯ ಒಳಗೆ ಮನೆಯಲ್ಲಿ ನಗದು ಇಟ್ಟುಕೊಂಡರೆ ಅದಕ್ಕೆ ತೆರಿಗೆ ಇಲ್ಲ. ಮನೆಯಲ್ಲಿ ಹಣವನ್ನು ಇಡಲು ಆದಾಯ ತೆರಿಗೆ ಕೆಲವು ನಿಯಮಗಳನ್ನು ಮಾಡಿದೆ. ಈ ನಿಯಮಗಳನ್ನು ಅನುಸರಿಸದಿದ್ದರೆ ಅಥವಾ ತಪ್ಪು ಮಾಡಿದರೆ ಅದಕ್ಕೆ ಉತ್ತರಿಸಬೇಕಾಗಬಹುದು ಮಾತ್ರವಲ್ಲದೇ ಜೈಲು ಶಿಕ್ಷೆಗೂ ಒಳಗಾಗಬೇಕಾಗಬಹುದು.

ಮನೆಯಲ್ಲಿ ಹಣ ಇಡುವುದು ಏಕೆ?

ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಜನರು ಮನೆಯಲ್ಲಿ ಹಣವನ್ನು ಇಡುವುದನ್ನು ಕಡಿಮೆ ಮಾಡಿದ್ದಾರೆ. ಆದರೆ ಹಿಂದೆ ಅಜ್ಜಿಯ ಕಾಲದಲ್ಲಿ ಯಾವುದೇ ತುರ್ತು ಪರಿಸ್ಥಿತಿಗೆ ಮನೆಯಲ್ಲಿ ನಗದನ್ನು ಇಟ್ಟುಕೊಳ್ಳಲು ಸಲಹೆ ನೀಡುತ್ತಿದ್ದರು ಎಂಬುದು ಎಲ್ಲರಿಗೂ ನೆನಪಿರಬಹುದು. ಅದಕ್ಕೂ ಮೊದಲು ಜನರು ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಮಾಡಲು ನಿರಾಕರಿಸುತ್ತಿದ್ದರು ಮತ್ತು ಸಂಗ್ರಹಿಸಿದ ಹಣವನ್ನು ತಮ್ಮ ಮನೆಗಳಲ್ಲಿ ಎಲ್ಲೋ ಬಚ್ಚಿಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜನರು ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಖರ್ಚು ಮಾಡುತ್ತಾರೆ.

ಮನೆಯಲ್ಲಿ ಎಷ್ಟು ಹಣ ಇಡಬಹುದು?

ಮನೆಯಲ್ಲಿ ಎಷ್ಟು ಹಣವನ್ನು ಇರಿಸಬಹುದು, ಹೆಚ್ಚಿನ ಹಣ ಇಟ್ಟುಕೊಂಡರೆ ಎಷ್ಟು ದಂಡವನ್ನು ವಿಧಿಸಲಾಗುತ್ತದೆ ಇಂತಹ ಹಲವು ಪ್ರಶ್ನೆಗಳು ಈಗ ಮನದಲ್ಲಿ ಹುಟ್ಟಿಕೊಂಡಿರಬಹುದು. ಆದಾಯ ತೆರಿಗೆ ನಿಯಮಗಳ ಪ್ರಕಾರ, ನಾವು ಎಷ್ಟು ಆದಾಯ ಮತ್ತು ಆದಾಯ ಮೂಲಗಳನ್ನು ಘೋಷಣೆ ಮಾಡುತ್ತೇವೋ ಅಷ್ಟು ಪ್ರಮಾಣದ ಹಣವನ್ನು ಮನೆಯಲ್ಲಿ ಇರಿಸಿಕೊಳ್ಳಲು ಅವಕಾಶವಿದೆ.

ಒಂದು ವೇಳೆ ಹೆಚ್ಚಿನ ಹಣ ಇಟ್ಟುಕೊಂಡಿದ್ದರೆ ತನಿಖಾ ಸಂಸ್ಥೆ ಕೇಳುವ ಪ್ರಶ್ನೆಗಳಿಗೆ ಮುಖ್ಯವಾಗಿ ಆದಾಯ ಅಥವಾ ಆ ಹಣದ ಮೂಲವನ್ನು ಹೇಳಬೇಕಾಗುತ್ತದೆ. ಒಂದು ವೇಳೆ ತೆರಿಗೆ ಫೈಲ್ ಮಾಡಿದರೆ ಚಿಂತೆ ಇರುವುದಿಲ್ಲ.


ದಾಖಲೆಗಳಿರಲಿ

ನಗದು ಹರಿವಿನ ಸಂಪೂರ್ಣ ಮೂಲವನ್ನು ತಿಳಿದಿರುವುದು ಮತ್ತು ಆದಾಯದ ಮೂಲವನ್ನು ಸಹ ತಿಳಿದುಕೊಳ್ಳುವುದು ಮುಖ್ಯ. ಇದಕ್ಕಾಗಿ ಸಂಪೂರ್ಣ ದಾಖಲೆಗಳನ್ನು ಹೊಂದಿರಬೇಕು. ಅಗತ್ಯವಿದ್ದಾಗ ಇದನ್ನು ತೋರಿಸಬಹುದು. ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ, ಚಿಂತಿಸಬೇಕಾಗಿಲ್ಲ. ಆದರೆ ನಗದು ಆದಾಯ ತೆರಿಗೆ ನಿಯಮಗಳ ಪ್ರಕಾರ ಇರಬೇಕು. ಆದಾಯ ತೆರಿಗೆ ನಿಯಮಗಳ ಪ್ರಕಾರ ವಾರ್ಷಿಕವಾಗಿ 5ರಿಂದ 50 ಲಕ್ಷ ರೂಪಾಯಿ ನಗದು ಇಟ್ಟುಕೊಂಡರೆ ಸಮಸ್ಯೆ ಇರುವುದಿಲ್ಲ. ಆದರೆ ಇದಕ್ಕೆ ಸೂಕ್ತ ದಾಖಲೆಗಳು ಇರಬೇಕು.

ಸಮಸ್ಯೆ ಯಾವಾಗ ಉಂಟಾಗುತ್ತದೆ?

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಸಮಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಗೆ ನಗದು ಖಾತೆಯ ಮಾಹಿತಿಯನ್ನು ನೀಡಲು ಸಾಧ್ಯವಾಗದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: National Pension Scheme: ಎನ್‌ಪಿಎಸ್‌ನಲ್ಲಿ ದಿನಕ್ಕೆ 200 ರೂ. ಹೂಡಿಕೆ ಮಾಡಿದರೆ ಸಿಗುವ ಮಾಸಿಕ ಪಿಂಚಣಿ ಎಷ್ಟು ಗೊತ್ತೇ?

ಆದಾಯ ತೆರಿಗೆ ಇಲಾಖೆಯ ದಾಳಿಯ ಸಮಯದಲ್ಲಿ ಆದಾಯದ ಬಗ್ಗೆ ಖಚಿತವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಸರಿಯಾದ ಮಾಹಿತಿಯನ್ನು ಹೊಂದಿದ್ದರೆ ಯಾವುದೇ ರೀತಿಯ ದಂಡವನ್ನು ಪಾವತಿಸಬೇಕಾಗಿಲ್ಲ. ಆದರೆ ಮಾಹಿತಿಯನ್ನು ನೀಡಲು ಸಾಧ್ಯವಾಗದಿದ್ದರೆ ಪತ್ತೆಯಾದ ನಗದಿನ ಮೇಲೆ ಶೇ. 137ರಷ್ಟು ತೆರಿಗೆಯನ್ನು ವಿಧಿಸಬಹುದು. ಅಂದರೆ, ನೀವು ನಗದು ಜೊತೆಗೆ ಶೇ. 37ರಷ್ಟು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಜತೆಗೆ ದಂಡ ಮತ್ತು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿನ್ನದ ದರ

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬಂಗಾರ ಖರೀದಿಯ ಮುನ್ನ ಬೆಲೆ ಚೆಕ್‌ ಮಾಡಿ

Gold Rate Today: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಶನಿವಾರ ಏರಿಕೆಯಾಗಿದ್ದು, ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಶನಿವಾರ ಏರಿಕೆಯಾಗಿದ್ದು, ಇಂದು (ಆಗಸ್ಟ್‌ 25) ಯಥಾಸ್ಥಿತಿ ಕಾಯ್ದುಕೊಂಡಿದೆ (Gold Rate Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ.

22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,560 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,950 ಮತ್ತು ₹ 6,69,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 58,432 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 73,040 ಮತ್ತು ₹ 7,30,400 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,710₹ 7,319
ಮುಂಬೈ₹ 6,695₹ 7,304
ಬೆಂಗಳೂರು₹ 6,695₹ 7,304
ಚೆನ್ನೈ₹ 6,695₹ 7,304

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಬೆಳ್ಳಿ 1 ಗ್ರಾಂಗೆ ₹ 84.50 ಹಾಗೂ 8 ಗ್ರಾಂಗೆ ₹ 676 ಇದೆ. 10 ಗ್ರಾಂ ₹ 845 ಹಾಗೂ 1 ಕಿಲೋಗ್ರಾಂ ₹ 84,500 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ (BIS) ಹಾಲ್‌ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ ಬಿಐಎಸ್ ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್‌ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Cash Limit At Home: ಮನೆಯಲ್ಲಿ ಎಷ್ಟು ಹಣ ಇರಿಸಿಕೊಳ್ಳಬಹುದು? ಮಿತಿಗಿಂತ ಹೆಚ್ಚಿದ್ದರೆ ಏನಾಗುತ್ತದೆ?

Continue Reading

ದೇಶ

UPS: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌; ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು

UPS: ಯುಪಿಎಸ್ ಯೋಜನೆ ಏಪ್ರಿಲ್ 1, 2025 ರಿಂದ ಅನ್ವಯವಾಗುತ್ತದೆ. ಮೊದಲ ವರ್ಷದಲ್ಲಿ ಈ ಯೋಜನೆ ಜಾರಿಗೊಳಿಸಲು ಬರೋಬ್ಬರಿ 6250 ಕೋಟಿ ರೂ. ವೆಚ್ಚ ತಗುಲುತ್ತದೆ. 2004 ರಿಂದ ಎನ್‌ಪಿಎಸ್ ಅಡಿಯಲ್ಲಿ ನಿವೃತ್ತರಾದ ಎಲ್ಲರಿಗೂ ಯುಪಿಎಸ್ ಅನ್ವಯಿಸುತ್ತದೆ.

VISTARANEWS.COM


on

UPS
Koo

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶನಿವಾರ ಏಕೀಕೃತ ಪಿಂಚಣಿ ಯೋಜನೆಗೆ (UPS) ಹಸಿರು ನಿಶಾನೆ ತೋರಿದೆ. ಕೇಂದ್ರ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಉಳಿಯಬೇಕೆ ಅಥವಾ ಏಕೀಕೃತ ಪಿಂಚಣಿ ಯೋಜನೆಗೆ ಸೇರಬೇಕೆ ಎಂದು ನಿರ್ಧರಿಸುವ ಹಕ್ಕನ್ನು ಅವರಿಗೆ ನೋಡಲಾಗಿದೆ. ಅಂತೆಯೇ, ಯುಪಿಎಸ್‌ನ ಈ ಹೊಸ ಮಾಡ್ಯೂಲ್ ಅನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಸಹ ನಿರ್ಧರಿಸಬಹುದು.

ಯುಪಿಎಸ್ ಏಪ್ರಿಲ್ 1, 2025 ರಿಂದ ಅನ್ವಯವಾಗುತ್ತದೆ. ಮೊದಲ ವರ್ಷದಲ್ಲಿ ಈ ಯೋಜನೆ ಜಾರಿಗೊಳಿಸಲು ಬರೋಬ್ಬರಿ 6250 ಕೋಟಿ ರೂ. ವೆಚ್ಚ ತಗುಲುತ್ತದೆ. 2004 ರಿಂದ ಎನ್‌ಪಿಎಸ್ ಅಡಿಯಲ್ಲಿ ನಿವೃತ್ತರಾದ ಎಲ್ಲರಿಗೂ ಯುಪಿಎಸ್ ಅನ್ವಯಿಸುತ್ತದೆ.

UPSನ ಪ್ರಮುಖ ಗುಣಲಕ್ಷಣಗಳು ಹೀಗಿವೆ

ಪಿಂಚಣಿ ಖಚಿತ: 25 ವರ್ಷಗಳ ಕನಿಷ್ಠ ಅರ್ಹತಾ ಸೇವೆಗಾಗಿ ನಿವೃತ್ತಿಗೆ ಮುಂಚಿತವಾಗಿ ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ 50%. ಕನಿಷ್ಠ 10 ವರ್ಷಗಳ ಸೇವೆಯವರೆಗಿನ ಕಡಿಮೆ ಸೇವಾ ಅವಧಿಗೆ ಅನುಪಾತದಲ್ಲಿರುತ್ತದೆ.

ಖಚಿತವಾದ ಕುಟುಂಬ ಪಿಂಚಣಿ: ಅವಳ/ಅವನ ಮರಣದ ತಕ್ಷಣ ನೌಕರನ ಪಿಂಚಣಿಯ ಶೇ. 60ರಷ್ಟು ಅವರ ಕುಟುಂಬಕ್ಕೆ ನೀಡಲಾಗುತ್ತದೆ.

ಖಚಿತವಾದ ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ಮೇಲೆ ಪ್ರತಿ ತಿಂಗಳಿಗೆ 10000 ರೂ.

ಹಣದುಬ್ಬರ ಸೂಚ್ಯಂಕ: ಖಚಿತವಾದ ಪಿಂಚಣಿ ಮೇಲೆ, ಖಚಿತವಾದ ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿಯ ಮೇಲೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಕೈಗಾರಿಕಾ ಕಾರ್ಮಿಕರಿಗೆ (AICPI-IW) ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಪರಿಹಾರ

ಇದನ್ನೂ ಓದಿ: National Pension Scheme: ಎನ್‌ಪಿಎಸ್‌ನಲ್ಲಿ ದಿನಕ್ಕೆ 200 ರೂ. ಹೂಡಿಕೆ ಮಾಡಿದರೆ ಸಿಗುವ ಮಾಸಿಕ ಪಿಂಚಣಿ ಎಷ್ಟು ಗೊತ್ತೇ?

Continue Reading

ಚಿನ್ನದ ದರ

Gold Rate Today: ಸತತವಾಗಿ ಇಳಿದಿದ್ದ ಚಿನ್ನದ ದರದಲ್ಲಿ ಮತ್ತೆ ಏರಿಕೆ; ಬಂಗಾರ ಇಂದು ಇಷ್ಟು ದುಬಾರಿ

Gold Rate Today: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಇಂದು (ಆಗಸ್ಟ್‌ 24) ಮತ್ತೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 35 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 39 ಹೆಚ್ಚಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಇಂದು (ಆಗಸ್ಟ್‌ 24) ಮತ್ತೆ ಏರಿಕೆಯಾಗಿದೆ (Gold Rate Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 35 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 39 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,560 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,950 ಮತ್ತು ₹ 6,69,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 58,432 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 73,040 ಮತ್ತು ₹ 7,30,400 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,695 ₹ 7,304
ಮುಂಬೈ₹ 6,695 ₹ 7,304
ಬೆಂಗಳೂರು₹ 6,695 ₹ 7,304
ಚೆನ್ನೈ₹ 6,695 ₹ 7,304

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಬೆಳ್ಳಿ 1 ಗ್ರಾಂಗೆ ₹ 84.50 ಹಾಗೂ 8 ಗ್ರಾಂಗೆ ₹ 676 ಇದೆ. 10 ಗ್ರಾಂ ₹ 845 ಹಾಗೂ 1 ಕಿಲೋಗ್ರಾಂ ₹ 84,500 ಬೆಲೆ ಬಾಳುತ್ತದೆ.

ಚಿನ್ನ ಯಾಕೆ ದುಬಾರಿಯಾಗುತ್ತಿದೆ?

ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಾಗಿರುವುದರಿಂದಲೇ ಚಿನ್ನ ಹೆಚ್ಚು ದುಬಾರಿಯಾಗುತ್ತಿದೆ. ಆರ್ಥಿಕ ಅನಿಶ್ಚಿತತೆ, ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿ ಕಾಣುತ್ತಿದೆ. ಹೀಗಾಗಿಯೇ ಚಿನ್ನದ ದರ ಗಗನಕ್ಕೇರುತ್ತಿದೆ.

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ ತೆಗೆದಿರುಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ. ಈ ಮೂಲಕ ದೇಶದಲ್ಲಿ ಕರೆನ್ಸಿಗಳ ಮೌಲ್ಯ ಕಾಪಾಡಿಕೊಳ್ಳಬಹುದು.

ಜಾಗತಿಕ ಉದ್ವಿಗ್ನತೆಗಳು: ಇತ್ತೀಚಿನ ದಿನಗಳಲ್ಲಿ ಭೌಗೋಳಿಕ, ರಾಜಕೀಯ ಘರ್ಷಣೆಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಇದು ಹೂಡಿಕೆದಾರರಿಗೆ ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಉಕ್ರೇನ್‌ ಯುದ್ಧ ಮುಂದುವರಿಯುತ್ತಿರುವಾಗಲೇ ಈಗ ಇರಾನ್‌-ಇಸ್ರೇಲ್‌ ಯುದ್ಧದ ಛಾಯೆ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗುತ್ತದೆ.

ಚೀನಾದ ಪ್ರಭಾವ: ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.

ಹೂಡಿಕೆ ಮಾಡಬಹುದೆ?: ಚಿನ್ನದ ಬೆಲೆಗಳು ಹೆಚ್ಚಾದಾಗ ಸಾಮಾನ್ಯವಾಗಿ ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊದಲೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯ ಕೊಂಚ ಕಡಿಮೆಯಾಗುತ್ತದೆ. ಹೂಡಿಕೆಯ ಉದ್ದೇಶವನ್ನು ಮೊದಲೇ ನಿರ್ಣಯಿಸುವುದು ಮತ್ತು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಮದುವೆ ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಉದ್ದೇಶ ಮೊದಲೇ ಇರುತ್ತದೆ. ಇದಕ್ಕೆ ಮುಂಚಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಬೆಲೆಗಳು ಸ್ಥಿರವಾಗಿದ್ದಾಗ ತಕ್ಷಣ ಖರೀದಿ ಮಾಡಬಹುದು.

    ಇದನ್ನೂ ಓದಿ: Cheapest Currency: ವಿಶ್ವದಲ್ಲೇ ಅಗ್ಗದ ಕರೆನ್ಸಿ ಹೊಂದಿರುವ ದೇಶಗಳಲ್ಲಿ ಭಾರತದ 1 ರೂ.ನ ಮೌಲ್ಯ ಎಷ್ಟಾಗುತ್ತೆ ನೋಡಿ!

    Continue Reading

    ಆಟೋಮೊಬೈಲ್

    Skoda Kylaq: ಸ್ಕೋಡಾ ಕಾರಿಗೆ ಸಂಸ್ಕೃತ ಹೆಸರು ಸೂಚಿಸಿ ಕಾರು ಗೆದ್ದ ಕುರಾನ್‌ ಶಿಕ್ಷಕ!

    Skoda Kylaq: ಇಂಗ್ಲಿಷ್ ವರ್ಣಮಾಲೆಯಲ್ಲಿ Kಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕಂಪನಿ ಕೇಳಿತ್ತು. ಐದು ಹೆಸರು ಸೂಚಿಸುವ ಆಯ್ಕೆಯನ್ನು ನೀಡಿತ್ತು. ಕಾಸರಗೋಡು ಮೂಲದ ಮೊಹಮ್ಮದ್ ಜಿಯಾದ್ ಎಂಬವರು ಎಸ್‌ಯುವಿಗೆ ʼಕೈಲಾಕ್’ ಎಂಬ ಹೆಸರನ್ನು ಸೂಚಿಸಿ ಗೆದ್ದರು.

    VISTARANEWS.COM


    on

    skoda Kylaq
    Koo

    ಹೊಸದಿಲ್ಲಿ: ಸ್ಕೋಡಾ ಕಂಪನಿಯ (Skoda Company) ಹೊಸ ಕಾರಿಗೆ ಸಂಸ್ಕೃತದ (Sanskrit) ಹೆಸರೊಂದನ್ನು ಕಾಸರಗೋಡಿನ ಕುರಾನ್‌ ಶಿಕ್ಷಕರೊಬ್ಬರು (Quran teacher) ಸೂಚಿಸಿದ್ದು, ಅದನ್ನು ಕಂಪನಿ (Skoda Kylaq) ಆಯ್ಕೆ ಮಾಡಿದೆ. ಜೊತೆಗೆ, ಈ ಹೆಸರನ್ನು ಸೂಚಿಸಿದ ಶಿಕ್ಷಕರಿಗೆ ಒಂದು ಹೊಸ ಕಾರನ್ನೂ ಕೊಡುಗೆಯಾಗಿ ನೀಡಿದೆ.

    ʼನೇಮ್ ಯುವರ್ ಸ್ಕೋಡಾ’ ಅಭಿಯಾನದ ಮೂಲಕ ಹೊಸ ಕಾರಿಗೆ ಹೆಸರು ನೀಡಲು ಕಂಪನಿ ಪ್ರಕಟಣೆ ನೀಡಿತ್ತು. ದೇಶಾದ್ಯಂತ ಸಾಕಷ್ಟು ಕಾರು ಪ್ರಿಯರು ಹೆಸರನ್ನು ಸೂಚಿಸಿ ಅಭಿಯಾನದಲ್ಲಿ ಭಾಗವಹಿಸಿದ್ದರು. ಕರ್ನಾಟಕ- ಕೇರಳ ಗಡಿಭಾಗದ ಕಾಸರಗೋಡಿನ ವ್ಯಕ್ತಿಯೊಬ್ಬರು ಸ್ಕೋಡಾ ಎಸ್‌ಯುವಿ (Skoda SUV) ಹೆಸರನ್ನು ಸೂಚಿಸುವ ಮೂಲಕ ಬಹುಮಾನವನ್ನು ಗೆದ್ದಿದ್ದಾರೆ.

    ಸ್ಕೋಡಾ ಈ ವರ್ಷದ ಫೆಬ್ರವರಿಯಲ್ಲಿ ʼನೇಮ್ ಯುವರ್ ಸ್ಕೋಡಾ’ ಅಭಿಯಾನವನ್ನು ಪ್ರಾರಂಭಿಸಿತು. ಇಂಗ್ಲಿಷ್ ವರ್ಣಮಾಲೆಯಲ್ಲಿ Kಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕಂಪನಿ ಕೇಳಿತ್ತು. ಐದು ಹೆಸರು ಸೂಚಿಸುವ ಆಯ್ಕೆಯನ್ನು ನೀಡಿತ್ತು. ಕಾಸರಗೋಡು ಮೂಲದ ಮೊಹಮ್ಮದ್ ಜಿಯಾದ್ ಎಂಬವರು ಎಸ್‌ಯುವಿಗೆ ʼಕೈಲಾಕ್’ ಎಂಬ ಹೆಸರನ್ನು ಸೂಚಿಸಿ ಗೆದ್ದರು.

    24 ವರ್ಷ ವಯಸ್ಸಿನ ಜಿಯಾದ್ ಅವರು ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಶಿಕ್ಷಕರಾಗಿದ್ದಾರೆ. ಹೆಸರನ್ನು ಸೂಚಿಸಿದ ನಂತರ, ಸ್ಪರ್ಧೆಯ ಅಪ್‌ಡೇಟ್‌ಗಳಿಗಾಗಿ ಸ್ಕೋಡಾದ Instagram ಖಾತೆಯನ್ನು ಜಿಯಾದ್ ಫಾಲೋ ಮಾಡಿದ್ದರು. ವಿವಿಧ ಹಂತಗಳಲ್ಲಿ ಸುಮಾರು ಎರಡು ಲಕ್ಷ ಹೆಸರುಗಳು ಬಂದಿದ್ದವಂತೆ. ಮೊದಲ 100 ಜನರ ಶಾರ್ಟ್‌ಲಿಸ್ಟ್‌ನಲ್ಲಿ ಜಿಯಾದ್ ಹೆಸರು ಬಂತು. ಆದರೆ ಬಹುಮಾನ ಬಂದಿರುವುದನ್ನು ನಂಬಲೇ ಸಾಧ್ಯವಿಲ್ಲ ಎಂಬುದು ಜಿಯಾದ್‌ ಅವರ ಅಚ್ಚರಿ.

    ಫೆಬ್ರವರಿಯಲ್ಲಿ ನಾಮಕರಣ ಸ್ಪರ್ಧೆ ಆರಂಭವಾದಾಗಲೇ ಜಿಯಾದ್ ಹೊಸ ವಾಹನದ ಹೆಸರನ್ನು ಸೂಚಿಸಿದ್ದರು. ವಾಟ್ಸಾಪ್ ಗ್ರೂಪ್ ಮೂಲಕ ಬಂದ ಲಿಂಕ್ ಮೂಲಕ ಸಿಯಾದ್ ಈ ಸ್ಪರ್ಧೆಯ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ, ಹೆಸರನ್ನು ಸೂಚಿಸಿದ್ದರು. 10 ಜನರ ಶಾರ್ಟ್‌ಲಿಸ್ಟ್‌ನಲ್ಲಿ ಅವರ ಹೆಸರು ಕಾಣಿಸಿಕೊಂಡಾಗ ಅವರು ತುಂಬಾ ಸಂತೋಷಪಟ್ಟರು. ಆದರೆ ಅವರು ವಿಜೇತರು ಎಂದು ತಿಳಿದಾಗ ಅವರು ಆಘಾತಕ್ಕೇ ಒಳಗಾದರಂತೆ.

    ಕಾರು ತಯಾರಕ ಕಂಪನಿ ಸ್ಕೋಡಾ ಪ್ರಕಾರ, ಕೈಲಾಕ್ ಎಂಬುದು ಸಂಸ್ಕೃತ ಪದ ಹಾಗೂ ʼಸ್ಫಟಿಕʼ ಎಂಬುದು ಅದರ ಅರ್ಥ. ಸ್ಕೋಡಾ ಕಂಪನಿಯು ಕ್ವಿಕ್, ಕಾಸ್ಮಿಕ್, ಕ್ಲಿಕ್ ಮತ್ತು ಕಯಾಕ್ ಹೆಸರುಗಳನ್ನು ಹೊಂದಿತ್ತು. ಅವುಗಳನ್ನು ಬದಲಿಸಿ ಹೊಸ ಮಾದರಿಗೆ ಕೈಲಾಕ್ ಎಂದು ಹೆಸರನ್ನು ನೀಡಿದೆ.

    ಸ್ಕೋಡಾ ಭಾರತದಲ್ಲಿ ವಿಶೇಷ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಕಾರು ತಯಾರಕ ಕಂಪನಿ. ಈ ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಕಾರುಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಸ್ಕೋಡಾ ಆಟೋ ಭಾರತದಲ್ಲಿ ತನ್ನ ಮುಂಬರುವ ಹೊಸ ಎಸ್‍ಯುವಿಯ ಹೆಸರನ್ನು ಆಗಸ್ಟ್ 21ರಂದು ಘೋಷಿಸಿತು. ಸ್ಕೋಡಾ ಕೈಲಾಕ್ (Skoda Kylaq) ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಬ್ 4 ಮೀಟರ್ ಎಸ್‌ಯುವಿ ವಿಭಾಗವನ್ನು ಬದಲಾಯಿಸಲಿದೆ. ಕೈಲಾಕ್ ಜನಪ್ರಿಯ ಮಾದರಿಗಳಾದ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳೊಂದಿಗೆ ಸ್ಪರ್ಧಿಸಲಿದೆ.

    ಸ್ಕೋಡಾದ ಇಂಡಿಯಾ 2.0 ಕಾರ್ಯಕ್ರಮದ ಭಾಗವಾಗಿರುವ ಮೂರನೇ ಕಾರು ಇದಾಗಿದೆ. ಹೊಸ ವಾಹನವನ್ನು ಅದೇ MQB-M00 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಅದು ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾಕ್ಕೆ ಆಧಾರವಾಗಿದೆ. ಸ್ಕೋಡಾದ ಹೊಸ ಸಬ್-4 ಮೀಟರ್ ಎಸ್‌ಯುವಿಯು ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

    ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ. ಈ ಹೊಸ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಶೇಕಡಾ 30 ರಷ್ಟು ಹೆಚ್ಚಿಸುವುದಾಗಿ ಕಂಪಬಿ ಹೇಳಿದೆ. ಸ್ಕೋಡಾ ಒಂದು ವರ್ಷದಲ್ಲಿ ಬ್ರೆಝಾ, ನೆಕ್ಸಾನ್ ಪ್ರತಿಸ್ಪರ್ಧಿಯ ಒಂದು ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.

    ಇದನ್ನೂ ಓದಿ: Auto Launches: ಸ್ಕೋಡಾ ಕುಶಾಕ್‌, ಬಿಎಂಡಬ್ಲ್ಯು ಆರ್ 1300 ಸೇರಿ ಇನ್ನೂ ಹಲವು ಹೊಸ ವಾಹನ ಮಾರುಕಟ್ಟೆಗೆ!

    Continue Reading
    Advertisement
    Gold Rate Today
    ಚಿನ್ನದ ದರ29 seconds ago

    Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬಂಗಾರ ಖರೀದಿಯ ಮುನ್ನ ಬೆಲೆ ಚೆಕ್‌ ಮಾಡಿ

    Actor darshan
    ಸ್ಯಾಂಡಲ್ ವುಡ್7 mins ago

    Actor Darshan : ಕೊಲೆ ಕೇಸ್‌ನಲ್ಲಿ ದರ್ಶನ್‌ ಮೂಲಕವೇ ಪವಿತ್ರಾಗೌಡ ಲಾಕ್‌; ಜತೆಗೆ ಇದ್ದ ಹುಡುಗರನ್ನು ನಂಬಿ ಕೆಟ್ಟೆ ಎಂದ ನಟ!

    Western Ghats
    ಕರ್ನಾಟಕ32 mins ago

    Western Ghats: ಭೂ ಕುಸಿತ ಹಿನ್ನೆಲೆ; ಪಶ್ಚಿಮ ಘಟ್ಟಗಳಲ್ಲಿನ ರೆಸಾರ್ಟ್, ಹೋಮ್ ಸ್ಟೇ, ತೋಟ, ಬಡಾವಣೆ ತೆರವಿಗೆ ಸರ್ಕಾರದ ಆದೇಶ

    Israel vs Hezbollah War
    ವಿದೇಶ50 mins ago

    Israel vs Hezbollah War: ಹೆಜ್ಬುಲ್ಲಾ ಉಗ್ರರ ಅಟ್ಟಹಾಸ; ಲೆಬನಾನ್‌ ಮೇಲೆ ರಾಕೆಟ್​ ದಾಳಿ ಆರಂಭಿಸಿದ ಇಸ್ರೇಲ್​; ಭಯಾನಕ ವಿಡಿಯೊ ಇಲ್ಲಿದೆ

    Dhanya Ramkumar-Vicky Varun starrer Kaalapathar to release on September 13
    ಸಿನಿಮಾ1 hour ago

    Dhanya Ramkumar: ತೆರೆಗೆ ಸಿದ್ಧವಾಯ್ತು ಕಾಲಾಪತ್ಥರ್‌; ಸೆ.13ಕ್ಕೆ ಧನ್ಯಾ ರಾಮ್‌ಕುಮಾರ್- ವಿಕ್ಕಿ ವರುಣ್‌ ನಟನೆ ಮೋಡಿ

    Karkala Shocker
    ಕರ್ನಾಟಕ1 hour ago

    Karkala Shocker: ಹಿಂದೂ ಯುವತಿ ಮೇಲೆ ಅತ್ಯಾಚಾರ ಎಸಗಿದ ಅಲ್ತಾಫ್‌ಗೆ ಕಠಿಣ ಶಿಕ್ಷೆಯಾಗಲಿ ಎಂದ ಮುಸ್ಲಿಂ ಒಕ್ಕೂಟ

    Pavel Durov Arrest
    ವಿದೇಶ1 hour ago

    Pavel Durov Arrest: ಟೆಲಿಗ್ರಾಂ ಸಿಇಒ ಪಾವೆಲ್‌‌ ಫ್ರಾನ್ಸ್‌‌ನಲ್ಲಿ ಬಂಧನ; ಕಾರಣ ಏನು?

    CBI Raid
    ದೇಶ2 hours ago

    CBI Raid: ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸದ ಮೇಲೆ ಸಿಬಿಐ ದಾಳಿ

    Israel strike
    ವಿದೇಶ2 hours ago

    Israel strike: ರಾಕೆಟ್ ದಾಳಿ; ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    Rohit Sharma
    ಕ್ರೀಡೆ3 hours ago

    Rohit Sharma: ಪಾರ್ಕ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್​; ವಿಡಿಯೊ ವೈರಲ್​

    Kannada Serials
    ಕಿರುತೆರೆ11 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Sharmitha Gowda in bikini
    ಕಿರುತೆರೆ11 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Bigg Boss- Saregamapa 20 average TRP
    ಕಿರುತೆರೆ10 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    Kannada Serials
    ಕಿರುತೆರೆ11 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    galipata neetu
    ಕಿರುತೆರೆ9 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ11 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ8 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    Kannada Serials
    ಕಿರುತೆರೆ12 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    varun
    ಕಿರುತೆರೆ9 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    ಮಳೆ21 hours ago

    Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

    karnataka Weather Forecast
    ಮಳೆ2 weeks ago

    Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

    Bellary news
    ಬಳ್ಳಾರಿ2 weeks ago

    Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

    Maravoor bridge in danger Vehicular traffic suspended
    ದಕ್ಷಿಣ ಕನ್ನಡ2 weeks ago

    Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

    Wild Animals Attack
    ಚಿಕ್ಕಮಗಳೂರು3 weeks ago

    Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

    Karnataka Weather Forecast
    ಮಳೆ3 weeks ago

    Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

    assault case
    ಬೆಳಗಾವಿ3 weeks ago

    Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

    karnataka rain
    ಮಳೆ3 weeks ago

    Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

    karnataka Rain
    ಮಳೆ3 weeks ago

    Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

    Karnataka Rain
    ಮಳೆ3 weeks ago

    Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

    ಟ್ರೆಂಡಿಂಗ್‌