ಪೇಟೆ ಧಾರಣೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ಇಂದಿನ ದರ ಇಲ್ಲಿದೆ - Vistara News

ವಾಣಿಜ್ಯ

ಪೇಟೆ ಧಾರಣೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ಇಂದಿನ ದರ ಇಲ್ಲಿದೆ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

09/06/2022

ಸಗಟು ಮಾರುಕಟ್ಟೆಯಲ್ಲಿ ಕೆಲವು ಪದಾರ್ಥಗಳ ದರ ಇಳಿದಿದೆ, ಕೆಲವು ಪದಾರ್ಥಗಳ ದರ ಹೆಚ್ಚಳವಾಗಿದೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

ಸರಕು ದರ ಸರಕುದರ
ಬೆಳ್ಳುಳ್ಳಿ ಎಂಪಿ 100 ಕೆಜಿ
1. ದಪ್ಪ
2. ಎಂಪಿ ಲಡ್ಡು
3. ಮಧ್ಯಮ
4. ಎಂಪಿ ಗೋಲಾ

1. 4000-4200
2. 2600-3000
3. 1500-2000
4. 48000-4900
ಹುಣಸೆ ಹುಳಿ (100 ಕೆಜಿ)
1. ರೌಂಡ್
2. ಪ್ಲವರ್
3. ಕರ್ಪುಳಿ

1.6,000-12,000
2. 4,000-11,000
3. 10,000-16,000
ಈರುಳ್ಳಿ
1. ಮಹಾರಾಷ್ಟ್ರ ದಪ್ಪ
2. ಮಹಾರಾಷ್ಟ್ರ ಮಧ್ಯಮ
3. ಕರ್ನಾಟಕ ದಪ್ಪ
4. ಕರ್ನಾಟಕ ಮಧ್ಯಮ

1. 700-850
2. 500-600
3. 600-700
4. 400-500
ಸಕ್ಕರೆ (100 ಕೆಜಿ)
1. ಉತ್ತಮ M-30
2. ಮಧ್ಯಮ S-30

1. 1820-1825
2. 1810-1815
ಆಲೂಗಡ್ಡೆ (50 ಕೆಜಿ)
1. ಲಾಕರ್ ಚೀಪ್ಸ್
2. ಜೊತಿ
3. ಲೋಕಲ್ ದಪ್ಪ
4. ಆಗ್ರಾ
5. ಮಧ್ಯಮ
6. ಲೋಕಲ್‌ ಮಧ್ಯಮ

1. 1300-1350
2. 1200-1400
3. 1300-1400
4. 900-1000
5. 1100-1150
6. 1050-1150
ಬೆಲ್ಲ
1. ಸಣ್ಣ ಅಚ್ಚು
2. ದಪ್ಪ ಅಚ್ಚು
3. ಉಂಡೆ ಸೇಲಂ
4. ಕೊಲ್ಲಾಪುರ

1. 4600-4700
2. 4400-4500
3. 4300-4400
4. 4300-5200
ಹಸಿ ಶುಂಠಿ (60 ಕೆಜಿ)
1. ಉತ್ತಮ
2. ಮಧ್ಯಮ

1. 1300-1350
2. 800-950
ವನಸ್ಪತಿ (15 ಕೆಜಿ)
1. ರುಚಿ ನಂ 1(10 ಕೆಜಿ)
2. ರುಚಿ ನಂ 1 ( 15 ಕೆಜಿ)
3. ಎ ಟು ಝೆಡ್

1. 1560
2. 2700‌
3. 2750
ಧನಿಯಾ (40 ಕೆಜಿ)
1. ಉತ್ತಮ ಹಸಿರು
2. ಮಧ್ಯಮ ಹಸಿರು
3. ಮಧ್ಯಮ
4. ಬ್ರೋಕನ್

1.6,800-8,500
2. 5,800-6500
3. 5,000-5,500
4. 5,000-5,500
ಬೇಕರಿ ಸ್ಪೆಶಲ್ ವನಸ್ಪತಿ (15 ಕೆಜಿ)
1. ಗ್ರೂನ್ ಗೋಲ್ಡ್
2. ಬೇಸ್ ಬಿಸ್ಕೆಟ್
3. ಬೇಸ್ ಫಫ್
4. ಬೇಸ್ ಕ್ರೀಮ್
5. ಮೊಟ್ಟೆ (100 ಕ್ಕೆ)


1. 2800-2810
2. 2780-2800
3. 2800-2820
4. 2750-2760
5. 460
ಅಕ್ಕಿ ಸೋನಾ ಮಸೂರಿ(100ಕೆಜಿ)
1. 2 ವರ್ಷ ಹಳೇದು
2. 1 ವರ್ಷ ಹಳೇದು
3. ಸ್ಟೀಮ್ 2 ವರ್ಷ ಹಳೇದು
4. ಕಾವೇರಿ ಸೊನಾಮಸೂರಿ ಹೊಸತು
5. ಐ ಆರ್8(100 ಕೆಜಿ)
6. ಇಡ್ಲಿಕಾರ್ (100 ಕೆಜೆ)


1. 5000- 5200
2. 4500-4600
3. 3600-3700
4. 3300-3400

5. 3000-3050
6. 2900-3000
ರಾಗಿ 100 ಕೆಜಿ
1. ಕ್ಲೀನ್ಡ್‌ ಉತ್ತಮ
2. ಮಧ್ಯಮ

ಅಲಸಂಡೆ
1. ಉತ್ತಮ
2. ಮಧ್ಯಮ

ಅವರೆ ಕಾಳು
1. ಉತ್ತಮ
2. ಮಧ್ಯಮ
3. ಅವರೆ ಬೆಳೆ

1. 3300-3400
2. 2800-3000


1. 3350-3420
2. 3250-3300


1. 4250-4300
2.4150-4300
3. 5250-5400
ಪಾಮ್ ಆಯಿಲ್ 10 ಲೀ.
ರುಚಿಗೋಲ್ಡ್
ಲೀಡರ್ ಗೋಲ್ಡ್ 10 ಲೀ
ರುಚಿಗೋಲ್ಡ್ 15 ಕೆಜಿ

1. 1490
2. 1470
3. 2560
ಸೂರ್ಯಕಾಂತಿ ಎಣ್ಣೆ
1. ಸನ್‌ಪ್ಯೂರ್ 10 ಲೀ
2. ಸನ್‌ಪ್ಯೂರ್ 15 ಕೆಜಿ
3. ಗೋಲ್ಡ್‌ವಿನ್ನರ್(10 ಕೆಜಿ)
4. ಗೋಲ್ಡ್‌ವಿನ್ನರ್(15 ಕೆಜಿ)
5. ಜೆಮಿನಿ(10 ಕೆಜಿ)
6. ಜೆಮಿನಿ (15 ಕೆಜಿ)

1. 1860
2. 3160
3. 1880
4. 3200
5. 1930
6. 3350
ರೆಗ್ಯುಲರ್ ವನಸ್ಪತಿ

ರುಚಿ no,1 10 ಕೆಜಿ
ರುಚಿ no,1 15 ಕೆಜಿ
ಎಟೂ ಝೆಡ್ 15 ಕೆಜಿ


1520
2550
2700

ಮೊಟ್ಟೆ (ಎನ್.ಇ.ಸಿ.ಸಿ) 100105
ತೊಗರಿಬೇಳೆ ಹೊಸದು 50 ಕೆಜಿ
1. ದೇಶಿ ಶಿವಲಿಂಗ (ಜಿಎಸ್ಟಿ)
2. ವಿದೇಶಿ ಶಿವಲಿಂಗ
3. ಪಟ್ಕ ಸಾರ್ಟೆಕ್ಸ್( ನಾನ್ ಜಿಎಸ್ಟಿ )
4. ರೆಗ್ಯುಲರ್
5. ವಿದೇಶಿ ಮಧ್ಯಮ

1. 5400-5450
2. 4450-4500
3. 4650-4750
4. 4400-4500
5. 4400-4500
ಕಡ್ಲೆ ಬೇಳೆ 50 ಕೆಜಿ
ಲಕನ್
ತ್ರಿಶುಲ್
ಮಹಾರಾಜಾ
ಅಕೋಲ

3370-3400
3300-3350
3150-3200
2900-2950
ಉದ್ದಿನ ಬೇಳೆ 50 ಕೆಜಿ
ಡಿ ಹಾರ್ಸ್
ಹನುಮಾನ್
ವೈಟ್ ಗೋಲ್ಡ್
ಗೋಲಾ
ಮಧ್ಯಮ

6450-6500
5150-5200
5050-5100
4400-4700
4500-4700
ಹೆಸರು ಬೇಳೆ 50 ಕೆಜಿ
ಉತ್ತಮ
ಮಧ್ಯಮ

4500-4600
4400-4450
ಹೆಸರು ಕಾಳು
ಉತ್ತಮ
ಮಾಧ್ಯಮ

4600-4650
3800-3900


ಕಡ್ಲೆ ಕಾಳು 50 ಕೆಜಿ
ಉತ್ತಮ

2700-2750
ಮಸಾಲೆ(1ಕೆಜಿ)ಕನಿಷ್ಠಗರಿಷ್ಠ
ಅರಿಶಿಣ
1. ಕೆಕೆಎಸ್ ಉತ್ತಮ
2. ಜೀರಿಗೆ
3. ಮಧ್ಯಮ
4. ಜೀರಿಗೆ

1. 120
2. 240
3. 85
4. 255

1. 150
2. 255
3. 90
4. 260
ಗಸಗಸೆ
1. ಇಂಡಿಯನ್
2. ಟರ್ಕಿ

1. 1250
2. 1350

1.1300
2. 1400
ಮೆಂತೆ7880
ಸಾಸುವೆ
ಸಾಸುವೆ ಸಣ್ಣ
ಸಾಸುವೆ ದಪ್ಪ

82
80

84
82
ಏಲಕ್ಕಿ
1. 8 ಎಂ.ಎಂ.
2. 7.5 ಎಂ.ಎಂ.
3. 7. ಎಂ.ಎಂ.
4. ಪಾನ್ ಬಹಾರ್‌

1. 1400
2.1200
3. 1100
4. 980

1. 1450
2. 1300
3. 1150
4. 1050
ಲವಂಗ
1. ಮಡಗಾಸ್ಕರ್
2. ಲಾಲ್ ಪರಿ
3. ಚೆಕ್ಕೆ
4. ಮರಾಠಿ ಮೊಗ್ಗು
5. ಆನಾನಸ್ ಹೂ
6. ಕೊಬ್ಬರಿ
7. ಮಧ್ಯಮ

720
750
300
900
800
160
150

730
760
310
950
900
165
155
ಕಾಳು ಮೆಣಸು
1. ಆಟೋಮ್
2. ಗಾರ್ಬಲ್ಡ್‌

1. 540
2. 520

1. 545
2. 525
ಗೋಡಂಬಿ
1. ಜೆ ಎಚ್
2. (240) ಪುನೂರುಟ್ಟಿ
3. w 240

1. 690
2. 750
3. 860

1. 750
2. 800
3. 870
ಬಾದಾಮಿ650670
ದ್ರಾಕ್ಷಿ190240
ಎಳ್ಳು
1. ಕಪ್ಪು
2. ಬಿಳಿ
3. ನೈಲಾನ್

1. 110
2. 120
3. 150

1. 120
2. 130
3. 160
ಮೆಣಸಿನಕಾಯಿ 100 ಕೆಜಿ
ಪಿ ಸಿ ಎನ್ ಟ್ರೇಡರ್ಸ್

1. ಬ್ಯಾಡಗಿ ಸ್ಟೆಮ್‌
2. ಬ್ಯಾ, ಸ್ಟೇಮ್‌ಲೆಸ್
3. ಗುಂಟೂರು ಸ್ಟೆಮ್
4. ಗುಂಟೂರು ಸ್ಟೆಮ್‌ಲೆಸ್
5. ಮಣ್ಣಕಟ್



1. 20,000
2 30,000
3. 12,000
4. 25,000
5. 18,200



1. 40,000
2. 50,000
3. 22,000
4. 29,000
5. 22,200

ಇದನ್ನೂ ಓದಿ | ಚಿನ್ನದ ದರದಲ್ಲಿ 5 ದಿನಗಳಲ್ಲಿ 1,140 ರೂ. ಹೆಚ್ಚಳ, ಬೆಳ್ಳಿಯ ದರದಲ್ಲಿ 600 ರೂ. ಏರಿಕೆ

ಅಡಕೆ ಧಾರಣೆ: 9/06/2022

ಕುಮಟಾಕನಿಷ್ಠಗರಿಷ್ಠ
1. ಕೋಕಾ
2. ಚಿಪ್ಪು
3. ಫ್ಯಾಕ್ಟರಿ
4. ಹಳೆ ಚಾಲಿ
5. ಹೊಸ ಚಾಲಿ
1.18019
2.23599
3.10169
4.43019
5.33089
1. 28899
2. 29089
3.20299
4.46899
5.36899
ಶಿರಸಿಕನಿಷ್ಠಗರಿಷ್ಠ
1. ಚಾಲಿ
2. ಬೆಟ್ಟೆ
3. ಬಿಳಿಗೋಟು
4. ರಾಶಿ
1.30699
2.36009
3.16296
4.34069
1.38101
2.45018
3.30709
4. 48698
ಚಿತ್ರದುರ್ಗಕನಿಷ್ಠಗರಿಷ್ಠ
1. ಅಪಿ
2. ಕೆಂಪುಗೋಟು
3. ಬೆಟ್ಟೆ
4. ರಾಶಿ
1.48922
2.29000
3. 38419
4. 48429
1. 49332
2. 29400
3.38859
4. 48869
ಶಿವಮೊಗ್ಗಕನಿಷ್ಠಗರಿಷ್ಠ
ಗೊರಬಲು
ಬೆಟ್ಟೆ
ರಾಶಿ
ಸರಕು
1. 17009
2. 50989
3. 46899
4. 58109
1. 37409
2. 52800
3. 49299
4. 76696
ಸಾಗರಕನಿಷ್ಠಗರಿಷ್ಠ
ಕೆಂಪುಗೋಟು
ಕೋಕ
ಚಾಲಿ
ಬಿಳಿಗೋಟು
ರಾಶಿ
ಸಿಪ್ಪೆಗೋಟು
1. 22339
2.15022
3. 30000
4.20560
5. 37699
6. 13999
1. 37199
2. 34089
3. 37069
4. 27869
5. 49609
6. 21198

ಮೀಡಿಯಂ ಕುಕಿಂಗ್ ಆಯಿಲ್ 10 ಲೀ.

ಸನ್ ಪ್ರಿಯಾ 1540
ಸನ್ ಪಾರ್ಕ್ 1550
ಸನ್ ಪವರ್ 1540
ಸೂರ್ಯ ಪವರ್1530
ದೀಪದೆಣ್ಣೆ 10 ಲೀ.
ಆನಂದಮ್ 1560
ಅಂದo 1550
ಅಕ್ಷಯ 1530
ನಂದಿನಿ 1550
ಪಾಮ್ ಆಯಿಲ್ 10 ಲೀ.
ರುಚಿಗೋಲ್ಡ್ 10 ಲೀ 1490
ಲೀಡರ್ ಗೋಲ್ಡ್ 10 ಲೀ 1475
ರುಚಿಗೋಲ್ಡ್ 15 ಕೆಜಿ 2600
ರಗ್ಯುಲರ್ ವನಸ್ಪತಿ
ರುಚಿ no,1 10 ಕೆಜಿ1520
ರುಚಿ no,1 15 ಕೆಜಿ2640
ಎಟೂ ಝೆಡ್ 15 ಕೆಜಿ2690
ಬೇಕರಿ ಸ್ಪೆಶಲ್ ವನಸ್ಪತಿ 15 ಕೆಜಿ ಬಾಕ್ಸ್
ಗ್ರೀನ್ ಗೋಲ್ಡ್2750
ಗ್ರೇಟ್ ಶೆಫ್2770
ಬೆಸ್ ಪಫ್2700
ಬೆಸ್ ಕ್ರೀಮ್2650
ಬೆಸ್ ಬಿಸ್ಕೆಟ್2670
ಬೇಕರ್ ಕಿಂಗ್2690
ಸೂರ್ಯಕಾಂತಿ ಎಣ್ಣೆ
ಸನ್ ಪ್ಯೂರ್ 10 ಲೀ1830
ಸನ್ ಪ್ಯೂರ್ 15 ಕೆಜಿ3000
ಗೋಲ್ಡ್ ವಿನ್ನರ್ 10 ಕೆಜಿ1860
ಗೋಲ್ಡ್ ವಿನ್ನರ್ 15 ಕೆಜಿ3050
ಜೆಮಿನಿ 10 ಕೆಜಿ1920
ಜೆಮಿನಿ 15 ಕೆಜಿ3350

ಹಾಫ್ ಕಾಮ್ಸ್ ನ ತರಕಾರಿ ದರ (1 ಕೆಜಿಗೆ) 09 ಜೂನ್, 2022

ತರಕಾರಿದರ
ಟೊಮೋಟೊ94
ಹುರುಳಿಕಾಯಿ           60
ಹ್ಯಾರಿಕೊಟ್‌ ಬೀನ್ಸ್    66
ಬದನೇಕಾಯಿ ಬಿಳಿ     56  
ಬದನೇಕಾಯಿ ಗುಂಡು  42
ಬೀಟ್‌ರೂಟ್‌             44
ಹಾಗಲಕಾಯಿ            58  
ಸೀಮೆ ಬದನೆಕಾಯಿ      40
ಸೌತೆಕಾಯಿ                  33
ಗೊರಿಕಾಯಿ ಗೊಂಚಲು  58
ಕ್ಯಾಪ್ಸಿಕಮ್ 120
ದಪ್ಪ ಮೆಣಸಿನಕಾಯಿ       74       
ಹಸಿ ಮೆಣಸಿನಕಾಯಿ     62
ಸಣ್ಣ ಮೆಣಸಿನಕಾಯಿ   74
ಊಟಿ ಕ್ಯಾರೆಟ್           76
ನಾಟಿ ಕ್ಯಾರೆಟ್              58
ತೆಂಗಿನಕಾಯಿ               35
ಎಲೆಕೋಸ್                 44
ಹೂ ಕೋಸ್ ಸಣ್ಣ     48
ಗಡ್ಡೆ ಕೋಸ್ 68
ನುಗ್ಗೆಕಾಯಿ             90
ಮೂಲಂಗಿ 32
ಹಿರೇಕಾಯಿ64
ಬೆಂಡೆಕಾಯಿ               39
ಈರುಳ್ಳಿ                   32
ಬೆಳ್ಳುಳ್ಳಿ                   96
ಆಲೂಗಡ್ಡೆ               42
ಬೇಕರಿ ಸ್ಪೆಶಲ್ ವನಸ್ಪತಿ 15 ಕೆಜಿ ಬಾಕ್ಸ್
ಗ್ರೀನ್ ಗೋಲ್ಡ್
ಗ್ರೇಟ್ ಚಫ್
ಬೆಸ್ ಪಫ್
ಬೆಸ್ ಕ್ರೀಮ್
ಬೆಸ್ ಬಿಸ್ಕೆಟ್
ಬೇಕರ್ ಕಿಂಗ್
2750
2770
2680
2630
2600
2680

ಇದನ್ನೂ ಓದಿ| ಆದಾಯಕ್ಕಾಗಿ ಷೇರು ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು 3,000 ಕೋಟಿ ರೂ. ಹೂಡಿಕೆಗೆ EPFO ಚಿಂತನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಚಿನ್ನದ ದರ

Gold Rate Today: ಕೈ ಸುಡುತಿದೆ ಚಿನ್ನದ ದರ; ಆಭರಣ ಖರೀದಿಸುವ ಮುನ್ನ ಬೆಲೆ ಚೆಕ್‌ ಮಾಡಿ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ (ಜುಲೈ 4) ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮಂಗಳವಾರ ಹೆಚ್ಚಾಗಿದ್ದ ದರ ಇಂದು ಮತ್ತೊಮ್ಮೆ ಏರಿಕೆಯಾಗಿ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 65 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 71 ಹೆಚ್ಚಾಗಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,700 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,309ಕ್ಕೆ ತಲುಪಿದೆ. ಇಲ್ಲಿದೆ ಸಂಪೂರ್ಣ ವಿವರ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ (ಜುಲೈ 4) ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. (Gold Rate Today). ಮಂಗಳವಾರ ಹೆಚ್ಚಾಗಿದ್ದ ದರ ಇಂದು ಮತ್ತೊಮ್ಮೆ ಏರಿಕೆಯಾಗಿ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 65 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 71 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,700 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,309ಕ್ಕೆ ತಲುಪಿದೆ. 22 ಕ್ಯಾರೆಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,600. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 67,000 ಮತ್ತು ₹ 6,70,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 58,472 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 73,090 ಮತ್ತು ₹ 7,30,900 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,715 ₹ 7,324
ಮುಂಬೈ₹ 6,700 ₹ 7,309
ಬೆಂಗಳೂರು₹ 6,700 ₹ 7,309
ಚೆನ್ನೈ₹ 6,760 ₹ 7,375

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆ ಕೂಡ ಏರಿಕೆಯಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 90.60 ಹಾಗೂ 8 ಗ್ರಾಂಗೆ ₹ 724.80 ಇದೆ. 10 ಗ್ರಾಂಗೆ ₹ 906 ಹಾಗೂ 1 ಕಿಲೋಗ್ರಾಂಗೆ ₹ 90,600 ಬೆಲೆ ಬಾಳುತ್ತದೆ.

ಚಿನ್ನ ಯಾಕೆ ದುಬಾರಿಯಾಗುತ್ತಿದೆ?

ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಾಗಿರುವುದರಿಂದಲೇ ಚಿನ್ನ ಹೆಚ್ಚು ದುಬಾರಿಯಾಗುತ್ತಿದೆ. ಆರ್ಥಿಕ ಅನಿಶ್ಚಿತತೆ, ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿ ಕಾಣುತ್ತಿದೆ. ಹೀಗಾಗಿಯೇ ಚಿನ್ನದ ದರ ಗಗನಕ್ಕೇರುತ್ತಿದೆ.

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ ತೆಗೆದಿರುಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ. ಈ ಮೂಲಕ ದೇಶದಲ್ಲಿ ಕರೆನ್ಸಿಗಳ ಮೌಲ್ಯ ಕಾಪಾಡಿಕೊಳ್ಳಬಹುದು.

ಜಾಗತಿಕ ಉದ್ವಿಗ್ನತೆಗಳು: ಇತ್ತೀಚಿನ ದಿನಗಳಲ್ಲಿ ಭೌಗೋಳಿಕ, ರಾಜಕೀಯ ಘರ್ಷಣೆಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಇದು ಹೂಡಿಕೆದಾರರಿಗೆ ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಉಕ್ರೇನ್‌ ಯುದ್ಧ ಮುಂದುವರಿಯುತ್ತಿರುವಾಗಲೇ ಈಗ ಇರಾನ್‌-ಇಸ್ರೇಲ್‌ ಯುದ್ಧದ ಛಾಯೆ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗುತ್ತದೆ.

ಚೀನಾದ ಪ್ರಭಾವ: ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.

ಹೂಡಿಕೆ ಮಾಡಬಹುದೆ?: ಚಿನ್ನದ ಬೆಲೆಗಳು ಹೆಚ್ಚಾದಾಗ ಸಾಮಾನ್ಯವಾಗಿ ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊದಲೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯ ಕೊಂಚ ಕಡಿಮೆಯಾಗುತ್ತದೆ. ಹೂಡಿಕೆಯ ಉದ್ದೇಶವನ್ನು ಮೊದಲೇ ನಿರ್ಣಯಿಸುವುದು ಮತ್ತು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಮದುವೆ ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಉದ್ದೇಶ ಮೊದಲೇ ಇರುತ್ತದೆ. ಇದಕ್ಕೆ ಮುಂಚಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಬೆಲೆಗಳು ಸ್ಥಿರವಾಗಿದ್ದಾಗ ತಕ್ಷಣ ಖರೀದಿ ಮಾಡಬಹುದು.

ಇದನ್ನೂ ಓದಿ: Price Hike: ಮೊಬೈಲ್ ಕಂಪನಿಗಳಿಂದ ದರ ಏರಿಕೆ; ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಹುದೆ?

    Continue Reading

    ವಾಣಿಜ್ಯ

    Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

    Stock Market: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರ ಜೋರಾಗಿದೆ. ಗುರುವಾರ ಕೂಡ ಸೆನ್ಸೆಕ್ಸ್  ಮತ್ತು ನಿಫ್ಟಿ ಜಿಗಿದು ನೂತನ ದಾಖಲೆ ಬರೆದಿದೆ. ಇಂದು ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲೇ ಸೆನ್ಸೆಕ್ಸ್‌ 336.51 ಅಂಕ ಅಥವಾ ಶೇ. 0.42 ಏರಿಕೆಯೊಂದಿಗೆ ಸಾರ್ವಕಾಲಿಕ 80,323.30 ಗಡಿ ತಲುಪಿದೆ. ಇನ್ನು ನಿಫ್ಟಿ 83.50 ಪಾಯಿಂಟ್‌ ಅಥವಾ ಶೇ. 0.34 ಹೆಚ್ಚಳದೊಂದಿಗೆ 24 ಸಾವಿರದ ಗಡಿ ದಾಟಿ 24,370ಕ್ಕೆ ಏರಿದೆ. ಬುಧವಾರ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿತ್ತು.

    VISTARANEWS.COM


    on

    Stock Market
    Koo

    ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market)ಯಲ್ಲಿ ಗೂಳಿ ಅಬ್ಬರ ಜೋರಾಗಿದೆ. ಗುರುವಾರ (ಜುಲೈ 3) ಕೂಡ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಜಿಗಿದು ನೂತನ ದಾಖಲೆ ಬರೆದಿದೆ. ಇಂದು ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲೇ ಸೆನ್ಸೆಕ್ಸ್‌ 336.51 ಅಂಕ ಅಥವಾ ಶೇ. 0.42 ಏರಿಕೆಯೊಂದಿಗೆ ಸಾರ್ವಕಾಲಿಕ 80,323.30 ಗಡಿ ತಲುಪಿದೆ. ಇನ್ನು ನಿಫ್ಟಿ 83.50 ಪಾಯಿಂಟ್‌ ಅಥವಾ ಶೇ. 0.34 ಹೆಚ್ಚಳದೊಂದಿಗೆ 24 ಸಾವಿರದ ಗಡಿ ದಾಟಿ 24,370ಕ್ಕೆ ಏರಿದೆ.

    ಬುಧವಾರ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿತ್ತು. ಜತೆಗೆ ನಿಫ್ಟಿ ಕೂಡ 24,291.75 ಅಂಕಗಳ ಹೊಸ ಶಿಖರ ಏರಿತ್ತು. ಜಾಗತಿಕವಾಗಿ ಪೂರಕ ವಾತಾವರಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಈ ಸಂಚಲನ ಮೂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೂನ್ 10ರ ನಂತರ ಇಲ್ಲಿಯವರೆಗೆ ಸೆನ್ಸೆಕ್ಸ್‌ನಲ್ಲಿ 3,000ಕ್ಕೂ ಹೆಚ್ಚು ಪಾಯಿಂಟ್‌ಗಳು ಏರಿವೆ. ವಿಶೇಷ ಎಂದರೆ 1980ರ ದಶಕದಲ್ಲಿ ಪ್ರಾರಂಭವಾದ ನಂತರ ಸೆಕ್ಸೆಕ್ಸ್‌ ಮೊದಲ ಬಾರಿಗೆ 80,400ರ ಗಡಿಯನ್ನು ಸಮೀಪಿಸಿದೆ. ಭಾರತದಲ್ಲಿ ಮಾನ್ಸೂನ್ ಪ್ರಗತಿಯೂ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಎಚ್‌ಸಿಎಲ್‌ ಟೆಕ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಎಂ & ಎಂ, ಟಿಸಿಎಸ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ ಮತ್ತು ಟೆಕ್ ಎಂ ಮುಂತಾದ ಪ್ರಮುಖ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಶೇ. 1.35ರಷ್ಟು ಏರಿಕೆಯಾಗಿದೆ. ಜತೆಗೆ ಬಿಎಸ್ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೆನ್ಸೆಕ್ಸ್ ಕ್ರಮವಾಗಿ ಶೇ. 0.36 ಮತ್ತು ಶೇ. 0.57ರಷ್ಟು ಏರಿಕೆ ದಾಖಲಿಸಿವೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್, ಸಿಪ್ಲಾ, ಡಾ.ರೆಡ್ಡೀಸ್, ಶ್ರೀರಾಮ್ ಫೈನಾನ್ಸ್ ಮತ್ತು ಅದಾನಿ ಎಂಟರ್‌ಟೈನ್‌ಮೆಂಟ್‌ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

    ದೇಶೀಯ ಮಾರುಕಟ್ಟೆಯ ಜತೆಗೆ ಜಾಗತಿಕ ಮಾರುಕಟ್ಟೆಗಳೂ ಸಕಾರಾತ್ಮಕವಾಗಿ ಸ್ಪಂದಿಸಿವೆ. ಟೆಕ್ ಷೇರುಗಳ ಲಾಭದಿಂದ ವಾಲ್ ಸ್ಟ್ರೀಟ್ ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿದೆ. ಎಸ್ & ಪಿ 500 ಶೇ. 0.51ರಷ್ಟು ಮತ್ತು ನಾಸ್ಡಾಕ್ ಕಾಂಪೊಸಿಟ್ ಶೇ. 0.88ರಷ್ಟು ಏರಿಕೆಯಾಗಿದೆ. ಇನ್ನು ಜಪಾನ್‌ನ ನಿಕೈ 225 ಶೇ. 0.27, ಕೊರಿಯಾದ ಕೋಸ್ಪಿ ಶೇ. 0.87 ಮತ್ತು ಏಷ್ಯಾ ಡೌ ಶೇ. 1ರಷ್ಟು ಏರಿಕೆ ದಾಖಲಿಸಿವೆ. ಹಾಂಗ್‌ಕಾಂಗ್‌ನ ಹಾಂಗ್ ಸೆಂಗ್ ಕೂಡಾ ಶೇ. 0.56ರಷ್ಟು ಹೆಚ್ಚಾಗಿದೆ.

    ಇದನ್ನೂ ಓದಿ: Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

    ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸುದ್ದೇವೆ ಎಂದು ಹೇಳಿಕ ನೀಡಿದ ನಂತರ ಮಾರುಕಟ್ಟೆಗಳು ಧನಾತ್ಮಕ ಪ್ರದರ್ಶನ ತೋರುತ್ತಿವೆ. ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್‌ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್‌ ಗಡಿ ಮುಟ್ಟಿತ್ತು. ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್‌ ಗಳಿಸಿತ್ತು. 

    Continue Reading

    ವಾಣಿಜ್ಯ

    Price Hike: ಮೊಬೈಲ್ ಕಂಪನಿಗಳಿಂದ ದರ ಏರಿಕೆ; ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಹುದೆ?

    Price Hike: ರಿಲಯನ್ಸ್‌ ಜಿಯೋ, ಏರ್‌ಟೆಲ್‌, ವೋಡಾಫೋನ್‌ ಐಡಿಯಾ ಮುಂತಾದ ಕಂಪನಿಗಳು ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಬೆಲೆಗಳನ್ನು ಏರಿಕೆ ಮಾಡಿವೆ. ಇದೀಗ ಮೊಬೈಲ್‌ ಕಂಪನಿಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಸರ್ಕಾರ ಮತ್ತು ಟೆಲಿಕಾಂ ನಿಯಂತ್ರಕ ಸಂಸ್ಥೆ ಟೆಲಿಕಾಂ ಕಂಪನಿಗಳ ಬೆಲೆ ಹೆಚ್ಚಳವನ್ನು ತಡೆಯುವುದಿಲ್ಲ ಮತ್ತು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

    VISTARANEWS.COM


    on

    Price Hike
    Koo

    ನವದೆಹಲಿ: ದೇಶದ ಟೆಲಿಕಾಂ ಕಂಪನಿಗಳು ಕೆಲ ದಿನಗಳ ಹಿಂದೆ ಗ್ರಾಹಕರಿಗೆ ಬೆಲೆಯೇರಿಕೆಯ ಬಿಸಿ ಮುಟ್ಟಿಸಿವೆ (Price Hike). ರಿಲಯನ್ಸ್‌ ಜಿಯೋ (Reliance Jio), ಏರ್‌ಟೆಲ್‌ (Airtel), ವೋಡಾಫೋನ್‌ ಐಡಿಯಾ (Vodafone Idea) ಮುಂತಾದ ಕಂಪನಿಗಳು ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಬೆಲೆಗಳನ್ನು ಏರಿಕೆ ಮಾಡಿವೆ. ಇದೀಗ ಮೊಬೈಲ್‌ ಕಂಪನಿಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದು ಸಾಧ್ಯವೆ? ಈ ಕುರಿತಾದ ನಿಯಮ ಏನು ಹೇಳುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ಸರ್ಕಾರ ಮತ್ತು ಟೆಲಿಕಾಂ ನಿಯಂತ್ರಕ ಸಂಸ್ಥೆ ಟೆಲಿಕಾಂ ಕಂಪನಿಗಳ ಬೆಲೆ ಹೆಚ್ಚಳವನ್ನು ತಡೆಯುವುದಿಲ್ಲ ಮತ್ತು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ʼʼಹಾಗೆ ನೋಡಿದರೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ ದರ ಇನ್ನೂ ಅಗ್ಗವಾಗಿದೆ. ಕಂಪನಿಗಳು ಸೇವೆಗಳ ಗುಣಮಟ್ಟದ ಸೇವೆ ನೀಡಲು ತಮ್ಮ ಗಮನವನ್ನು ಹರಿಸಬೇಕುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    “ಟೆಲಿಕಾಂ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಇದೀಗ ಸರ್ಕಾರ ಮಧ್ಯಪ್ರವೇಶಿಸುವಷ್ಟು ಪರಿಸ್ಥಿತಿ ಗಂಭೀರವಾಗಿಲ್ಲ. ಸುಮಾರು ಮೂರು ವರ್ಷಗಳ ನಂತರ ಸ್ವಲ್ಪ ಮಟ್ಟಿನ ಬೆಲೆ ಏರಿಕೆಯಾಗಿದೆಯಷ್ಟೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಬೆಲೆ ಏರಿಕೆಯ ಬಿಸಿ

    ಈ ವಾರ ಭಾರತದ ಮೂರು ಪ್ರಮುಖ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್‌ ಜಿಯೋ, ಏರ್‌ಟೆಲ್‌ ಮತ್ತು ವೋಡಾಫೋನ್‌ ಐಡಿಯಾ ಮೊಬೈಲ್ ರೀಚಾರ್ಜ್‌ ದರವನ್ನು ಶೇ. 11-25ರಷ್ಟು ಹೆಚ್ಚಿಸಿವೆ. ʼʼಮೊಬೈಲ್‌ ರೀಚಾರ್ಜ್‌ ದರದಲ್ಲಿನ ಶೇ. 13 ಹೆಚ್ಚಳವು ತೀರಾ ಹೊರೆ ಎನಿಸಿಕೊಂಡಿಲ್ಲ. ದರ ಹೆಚ್ಚಳ ಮಧ್ಯಮವಾಗಿದೆ. ಇದು ಮನೆಯ ವೆಚ್ಚದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲʼʼ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (Trai) ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, “ಟೆಲಿಕಾಂ ಕಂಪನಿಗಳು ದರ ನಿರ್ಧರಿಸುವ ವಿಚಾರದಲ್ಲಿ ಸ್ವತಂತ್ರರಾಗಿದ್ದಾರೆ. ಅವರ ನಿರ್ಧಾರದಲ್ಲಿ ನಾವು ಮಧ್ಯ ಪ್ರವೇಸಿಸುವುದಿಲ್ಲ. ಆದರೆ ಅವರು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಬೇಕು. ಗುಣಮಟ್ಟದಲ್ಲಿ ರಾಜಿಯಾದರೆ ನಾವು ಮಧ್ಯಪ್ರವೇಶಿಸುತ್ತೇವೆʼʼ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

    ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

    ಬೆಂಗಳೂರು: ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ (ಟಾರೀಫ್‌ ದರಪಟ್ಟಿಯನ್ನು) ಹೆಚ್ಚಳ ಮಾಡಿವೆ. ಮೂರು ಟೆಲಿಕಾಂಗಳ ಬೆಲೆ ಏರಿಕೆ ಕಂಡ ಯೋಜನೆಗಳ ಹೊಸ ದರಗಳನ್ನು ಹೋಲಿಸಿ ನೋಡಿದರೆ ನಮ್ಮ ಕಂಪನಿಯ ದರವೇ ಕಡಿಮೆ ಎಂದು ರಿಲಯನ್ಸ್‌ ಜಿಯೋ ಟೆಲಿಕಾಂ ಹೇಳಿಕೊಂಡಿದೆ.

    ಜಿಯೋ ಸೇರಿದಂತೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29ರಷ್ಟು ಕಡಿಮೆಯಾಗಿದೆ ಎಂದು ಈ ಕಂಪನಿ ಹೇಳಿದೆ.

    Continue Reading

    ವಾಣಿಜ್ಯ

    Credit Card New Rules: ಕ್ರೆಡಿಟ್ ಕಾರ್ಡ್‌ಗೆ ಹೊಸ ನಿಯಮ; ಗ್ರಾಹಕರು ಈಗ ಏನು ಮಾಡಬೇಕು?

    ಎಲ್ಲಾ ಕ್ರೆಡಿಟ್ ಕಾರ್ಡ್ (Credit Card New Rules) ಬಿಲ್ ಪಾವತಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುವ ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ರವಾನಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಆದೇಶ ಮಾಡಿದ್ದು, ಇದು ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಮಾಹಿತಿ ಇಲ್ಲಿದೆ.

    VISTARANEWS.COM


    on

    By

    Credit Card New Rules
    Koo

    ಕ್ರೆಡಿಟ್ ಕಾರ್ಡ್ (Credit Card New Rules) ಬಿಲ್ ಪಾವತಿ (bill payment) ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಲಾಗಿದ್ದು, ಇದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ವಹಿಸುವ ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ರವಾನಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ (RBI) ಆದೇಶದಲ್ಲಿ ತಿಳಿಸಿದೆ.

    ಆದರೆ, ಕ್ರೆಡಿಟ್ ಕಾರ್ಡ್ ಪಾವತಿಗಳಿಗಾಗಿ CRED ಮತ್ತು PhonePe ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ತಮ್ಮ ಬ್ಯಾಂಕ್‌ಗಳು ಇನ್ನೂ ಸಕ್ರಿಯವಾಗಿಲ್ಲ ಎಂದು ಅನೇಕ ಗ್ರಾಹಕರು ದೂರಿದ್ದಾರೆ.

    ಬ್ಯಾಂಕ್ ಏಕೀಕರಣದ ಪ್ರಸ್ತುತ ಸ್ಥಿತಿ ಏನಿದೆ?

    ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ಅಧಿಕಾರ ಹೊಂದಿರುವ 34 ಬ್ಯಾಂಕ್‌ಗಳಲ್ಲಿ 12 ಮಾತ್ರ ಪ್ರಸ್ತುತ BBPS ಪ್ಲಾಟ್‌ಫಾರ್ಮ್‌ನಲ್ಲಿ ಇದೆ. ಉಳಿದ 22 ಬ್ಯಾಂಕ್‌ಗಳು ಇನ್ನೂ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಪ್ರಕ್ರಿಯೆಯಲ್ಲಿವೆ. ಪ್ರಸ್ತುತ ಎಸ್‌ಬಿಐ ಕಾರ್ಡ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಯು ಸಣ್ಣ ಹಣಕಾಸು ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್ ಗಳು ಬಿಬಿಪಿಎಸ್ ಪ್ಲಾಟ್ ಫಾರ್ಮ್ ನಲ್ಲಿ ಇವೆ.

    ಆಕ್ಸಿಸ್ ಬ್ಯಾಂಕ್, ಹೆಚ್ ಡಿಎಫ್ ಸಿ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯೆಸ್ ಬ್ಯಾಂಕ್ ಗಳು ಸೇರಿದಂತೆ ಇನ್ನು ಹಲವು ಬ್ಯಾಂಕ್ ಗಳು ಬಿಬಿಪಿಎಸ್ ನೊಂದಿಗೆ ಸೇರುವ ಪ್ರಯತ್ನದಲ್ಲಿದೆ.

    ಇನ್ನೂ ಅಪ್‌ಡೇಟ್‌ ಆಗಿಲ್ಲ ಏಕೆ?

    ಕೆಲವು ಬ್ಯಾಂಕ್‌ಗಳು ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳುವಲ್ಲಿ ವಿಳಂಬವನ್ನು ಅನುಸರಿಸಲು ಹಲವಾರು ಅಂಶಗಳು ಕಾರಣವೆಂದು ಹೇಳಬಹುದು. ಏಕೀಕರಣವು ಅಸ್ತಿತ್ವದಲ್ಲಿರುವ ಸಿಸ್ಟಮ್‌ಗಳಿಗೆ ಗಮನಾರ್ಹವಾದ ನವೀಕರಣಗಳ ಅಗತ್ಯವಿದೆ. ಇದು ಸಂಕೀರ್ಣವಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ದುಬಾರಿ ಪ್ರಕ್ರಿಯೆಯಾಗಿದೆ.

    ಕೆಲವು ಬ್ಯಾಂಕುಗಳು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ಕೈಗೊಳ್ಳಲು ಅಗತ್ಯವಾದ ಸಂಪನ್ಮೂಲಗಳು ಅಥವಾ ತಾಂತ್ರಿಕ ಸಾಮರ್ಥ್ಯಗಳನ್ನು ಹೊಂದಿಲ್ಲ. ಇದಲ್ಲದೆ, ಬ್ಯಾಂಕ್‌ಗಳು ಬಿಲ್ ಪಾವತಿ ಸೌಲಭ್ಯಕ್ಕಿಂತ ಹೆಚ್ಚು ನಿರ್ಣಾಯಕ ಅಥವಾ ಲಾಭದಾಯಕವೆಂದು ಪರಿಗಣಿಸುವ ಡಿಜಿಟಲ್ ಬ್ಯಾಂಕಿಂಗ್ ಅಥವಾ ಹಣಕಾಸು ಸೇವೆಗಳ ಇತರ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದೆ. ಹೆಚ್ಚುವರಿಯಾಗಿ, ಅನೇಕ ಬ್ಯಾಂಕುಗಳು ತಮ್ಮದೇ ಆದ ಪಾವತಿ ವ್ಯವಸ್ಥೆಯನ್ನು ಹೊಂದಿವೆ ಮತ್ತು ಗ್ರಾಹಕರನ್ನು ತಮ್ಮ ಪರಿಸರ ವ್ಯವಸ್ಥೆಯೊಳಗೆ ನಿಕಟ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ವಹಿವಾಟಿನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಲು ಆದ್ಯತೆ ನೀಡುತ್ತಿವೆ. ಹಾಗಾಗಿ ಈ ಅಪ್‌ಡೇಟ್‌ ಪ್ರಕ್ರಿಯೆ ವಿಳಂಬವಾಗಿದೆ.

    ಏನು ಇದರ ಪರಿಣಾಮ?

    ಆರ್‌ಬಿಐನ ಹೊಸ ಆದೇಶವು ಪ್ರಾಥಮಿಕವಾಗಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಅವಲಂಬಿಸಿರುವ ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಪ್ಲಾಟ್‌ಫಾರ್ಮ್‌ಗಳು ಕೊಡುಗೆಗಳನ್ನು ನೀಡುತ್ತಿತ್ತು.

    ಬ್ಯಾಂಕ್‌ಗಳು ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳದಿದ್ದರೆ ಬಳಕೆದಾರರು ತಮ್ಮ ಪಾವತಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    ಬಿಬಿಪಿಎಸ್‌ನ ಹಿಂದಿನ ಮುಖ್ಯ ಆಲೋಚನೆಯು ಬಿಲ್ ಪಾವತಿ ಪ್ರಕ್ರಿಯೆಯನ್ನು ಕೇಂದ್ರೀಕರಿಸುವುದು ಮತ್ತು ಸುಗಮಗೊಳಿಸುವುದು. ಬಳಕೆದಾರರಿಗೆ ಒಂದೇ ಪ್ಲಾಟ್‌ಫಾರ್ಮ್‌ನಿಂದ ಬಹು ಬಿಲ್‌ಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಬಿಬಿಪಿಎಸ್ ಗೆ ಪ್ರವೇಶವಿಲ್ಲದೆ ಬಳಕೆದಾರರು ಹಲವಾರು ಪ್ಲಾಟ್‌ಫಾರ್ಮ್‌ಗಳನ್ನು ನ್ಯಾವಿಗೇಟ್ ಮಾಡಬೇಕಾಗಬಹುದು ಅಥವಾ ಹಲವಾರು ಪಾವತಿ ಸೆಟಪ್‌ಗಳನ್ನು ನಿರ್ವಹಿಸಬೇಕಾಗಬಹುದು. ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಬಹುದು.

    ಬಿಬಿಪಿಎಸ್ ನೊಂದಿಗೆ ಬ್ಯಾಂಕ್‌ಗಳನ್ನು ಸಂಯೋಜಿಸದ ಕ್ರೆಡಿಟ್ ಕಾರ್ಡ್ ಬಳಕೆದಾರರು ಕೆಲವು ಬಿಲ್ ಪಾವತಿಗಳಿಗೆ ತಮ್ಮ ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗದಿರಬಹುದು.

    ಇದನ್ನೂ ಓದಿ: SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

    ಹಾಗಾದರೆ ಗ್ರಾಹಕರು ಏನು ಮಾಡಬಹುದು?

    ಸದ್ಯಕ್ಕೆ ಬಿಬಿಪಿಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಬ್ಯಾಂಕ್ ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಸಲಹೆ ನೀಡಲಾಗುತ್ತಿದೆ. ಈ ಮಾಹಿತಿಯು ಸಾಮಾನ್ಯವಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಗ್ರಾಹಕ ಸೇವಾ ಚಾನೆಲ್‌ಗಳ ಮೂಲಕ ಲಭ್ಯವಿರುತ್ತದೆ. ಬ್ಯಾಂಕ್‌ಗಳು ಇನ್ನೂ ಬಿಬಿಪಿಎಸ್ ನಲ್ಲಿ ಸೇರಿಕೊಳ್ಳದೇ ಇದ್ದರೆ ತಮ್ಮ ಬಿಲ್ ಪಾವತಿ ಕಷ್ಟವಾಗಬಹುದು. ಗಡುವು ಮೀರಿದ ದಂಡ ಶುಲ್ಕದಿಂದ ಪಾರಾಗಲು ಪರ್ಯಾಯ ಪಾವತಿ ವಿಧಾನಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಆಯಾ ಬ್ಯಾಂಕ್‌ನ ಕಾಲ್‌ ಸೆಂಟರ್‌ಗೆ ಕರೆ ಮಾಡಿ ನೆರವು ಕೋರಬೇಕು.

    Continue Reading
    Advertisement
    Rakshit Shetty Richard Anthony Produce By Hombale
    ಅವಿಭಾಗೀಕೃತ1 second ago

    Job Alert: ಬ್ಯಾಂಕ್‌ ಆಫ್‌ ಬರೋಡಾದ 627 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

    Electric shock
    ಬೆಂಗಳೂರು ಗ್ರಾಮಾಂತರ20 mins ago

    Electric shock : ಕತ್ತಲಲ್ಲಿ ಕೆಲಸಕ್ಕೆ ಹೋದವನಿಗೆ ಕರೆಂಟ್‌ ಶಾಕ್‌

    Paris Olympics
    ಕ್ರೀಡೆ24 mins ago

    Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 9 ಅಥ್ಲೀಟ್​ಗಳು

    Bigg Boss Telugu 8 Contestants List Leaked
    ಬಿಗ್ ಬಾಸ್25 mins ago

    Bigg Boss Telugu 8: ಶುರುವಾಗ್ತಿದೆ ಬಿಗ್​ಬಾಸ್ ತೆಲುಗು ಸೀಸನ್ 8; ಸ್ಪರ್ಧಿಗಳು ಯಾರೆಲ್ಲ?

    Lonalva Tragedy
    ದೇಶ37 mins ago

    Lonavla Tragedy: ಲೋನಾವಲಾದಲ್ಲಿ ಇದುವರೆಗೆ 37 ದುರಂತ ಪ್ರಕರಣಗಳು; 47 ಮಂದಿ ದಾರುಣ ಸಾವು

    Gold Rate Today
    ಚಿನ್ನದ ದರ41 mins ago

    Gold Rate Today: ಕೈ ಸುಡುತಿದೆ ಚಿನ್ನದ ದರ; ಆಭರಣ ಖರೀದಿಸುವ ಮುನ್ನ ಬೆಲೆ ಚೆಕ್‌ ಮಾಡಿ

    Juhi Chawla mother-in-law uninvited nearly 2000 guests her wedding
    ಬಾಲಿವುಡ್50 mins ago

    Juhi Chawla: ಮದುವೆಗೆ 2000 ಜನಕ್ಕೆ ನೀಡಲಾಗಿತ್ತು ಆಮಂತ್ರಣ; ಆದರೆ ಅತ್ತೆ ಹಿಂಪಡೆದರು ಎಂದ ಜೂಹಿ ಚಾವ್ಲಾ!

    Karnataka Rain
    ಮಳೆ59 mins ago

    Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

    dengue fever mysore death
    ಪ್ರಮುಖ ಸುದ್ದಿ1 hour ago

    Dengue Fever: ಡೆಂಗ್ಯು ಜ್ವರಕ್ಕೆ ಮೈಸೂರು ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯೇ ಮೊದಲ ಬಲಿ!

    Hathras Stampede
    ದೇಶ1 hour ago

    Hathras Stampede: ಹತ್ರಾಸ್‌ ಕಾಲ್ತುಳಿತಕ್ಕೆ ಸಮಾಜಘಾತುಕ ಶಕ್ತಿ ಕಾರಣ ಎಂದ ಭೋಲೇ ಬಾಬಾ

    Sharmitha Gowda in bikini
    ಕಿರುತೆರೆ9 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ9 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ9 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ7 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ9 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ9 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ7 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ8 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    Karnataka Rain
    ಮಳೆ59 mins ago

    Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

    Tornado Effect in Udupi
    ಉಡುಪಿ2 hours ago

    Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

    karnataka weather Forecast
    ಮಳೆ2 days ago

    Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

    karnataka Weather Forecast
    ಮಳೆ3 days ago

    Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

    karnataka Weather Forecast
    ಮಳೆ4 days ago

    Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

    Actor Darshan
    ಬೆಂಗಳೂರು4 days ago

    Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

    karnataka weather Forecast
    ಮಳೆ5 days ago

    Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

    karnataka Rain
    ಮಳೆ5 days ago

    Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

    karnataka Weather Forecast
    ಮಳೆ6 days ago

    Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

    karnataka Rain
    ಮಳೆ6 days ago

    Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

    ಟ್ರೆಂಡಿಂಗ್‌