ದಿನಸಿ ಪೇಟೆ : ಸಗಟು ಮಾರುಕಟ್ಟೆಯಲ್ಲಿ ಸಾಮಗ್ರಿಗಳ ದರ ವಿವರ ಇಲ್ಲಿದೆ: ಯಾವುದು ಅಗ್ಗ, ಯಾವುದು ತುಟ್ಟಿ? Vistara News

ವಾಣಿಜ್ಯ

ದಿನಸಿ ಪೇಟೆ : ಸಗಟು ಮಾರುಕಟ್ಟೆಯಲ್ಲಿ ಸಾಮಗ್ರಿಗಳ ದರ ವಿವರ ಇಲ್ಲಿದೆ: ಯಾವುದು ಅಗ್ಗ, ಯಾವುದು ತುಟ್ಟಿ?

ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ಕೆಲವು ಪದಾರ್ಥಗಳ ದರ ಇಳಿದಿದೆ, ಕೆಲವು ಪದಾರ್ಥಗಳ ದರ ಹೆಚ್ಚಳವಾಗಿದೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

ದಿನಸಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

23/01/2023

ಸರಕು ದರ (ರೂಪಾಯಿ)
ಸಕ್ಕರೆ (100 ಕೆ.ಜಿ.)
1. ಉತ್ತಮ ದಪ್ಪ
2. ಮಧ್ಯಮ ಸಣ್ಣ

1780-11790
1760-1770
ಬೆಲ್ಲ
1. ಸಣ್ಣ ಅಚ್ಚು
2. ದಪ್ಪ
3. ಉಂಡೆ ಸೇಲಂ
4. ಕೊಲ್ಲಾಪುರ

4300-4400
3800-3900
4500-4650
4300-5500
ತೊಗರಿಬೇಳೆ ಹೊಸದು 50 ಕೆ.ಜಿ.
ದೇಸಿ ಶಿವಲಿಂಗ
ವಿದೇಶಿ ಶಿವಲಿಂಗ
ವಿದೇಶಿ ಮಧ್ಯಮ
ಪಟ್ಕ ಸಾರ್ಟೆಕ್ಸ್
ರೆಗ್ಯುಲರ್

6000-6050
4700-4750
4400-4500
5500-5600
5200-5250
ಕಡ್ಲೆ ಬೇಳೆ 50 ಕೆ.ಜಿ.
1. ಲಕನ್
2. ತ್ರಿಶೂಲ್
3. ಮಹಾರಾಜಾ
4. ಅಕೋಲ

3390-3410
3350-3370
3150-3200
2950-3000
ಕಡಲೆಕಾಯಿ ಬೀಜ 40 ಕೆಜಿ
ಉತ್ತಮ ದಪ್ಪ
ಮಧ್ಯಮ

5600-5700
5200-5300
ಹುರಿಕಡ್ಲೆ 30 ಕೆ.ಜಿ.
1. ಫೈನ್
2. ಮೀಡಿಯಂ

2300-2350
2000-2050
ಉದ್ದಿನ ಬೇಳೆ 50 ಕೆ.ಜಿ.
ಡಿ ಹಾರ್ಸ್
ಹನುಮಾನ್
ವೈಟ್ ಗೋಲ್ಡ್
ಸೂರ್ಯ
ಮಧ್ಯಮ
ಗೋಲಾ ಉತ್ತಮ
ಗೋಲಾ ಮದ್ಯಮ

6550-6600
5350-5400
5300-5350
5250-5300
4700-4800
5100-5150
4600-4700
ಹೆಸರು ಬೇಳೆ 50 ಕೆ.ಜಿ.
1. ಸೋಂ ಪರಿ
2. ಮಧ್ಯಮ

5250-5300
4900-5000
ಹೆಸರು ಕಾಳು
1. ಉತ್ತಮ
2. ಮಧ್ಯಮ

5000-5200
4600-4700
ಅಲಸಂದೆ
1. ಉತ್ತಮ
2. ಮಧ್ಯಮ

3800-3900
3600-3700
ಅವರೆ ಕಾಳು
1. ಉತ್ತಮ
2. ಮಧ್ಯಮ

ಅವರೆ ಬೇಳೆ
1. ಉತ್ತಮ
2. ಮಧ್ಯಮ

ಹುರುಳಿ ಕಾಳು
1. ಉತ್ತಮ
2. ಮಧ್ಯಮ

5700-5800
5400-5500


7250-7300
7100-7200


35000-3600
3000-3100
ರಾಗಿ 100 ಕೆ.ಜಿ.
1. ಕ್ಲೀನ್ಡ್‌ ಉತ್ತಮ
2. ಮಧ್ಯಮ

3500-3550
3000-3200
ಅಕ್ಕಿ ಸೋನಾ ಮಸೂರಿ (100 ಕೆ. ಜಿ.)
ರಾ ರೈಸ್ ನುಚ್ಚು
ಸೋನಾ,ಮ,ಸ್ಟೀಮ್ ಉತ್ತಮ
ಸೋನಾ, ಮ,ಸ್ಟೀಮ್ ಮದ್ಯಮ
ಸೋನಾ,ಮ,ಸ್ಟೀಮ್ ನುಚ್ಚು
ಆರ್ ಎನ್ ಆರ್ ಸ್ಟೀಮ್
ಹೆಚ್ ಎಂ ಟಿ ಸ್ಟಿಮ್
ಸೋನಾ ಬಾಯಿಲ್ಡ್
ಕೆಂಪು ಕುಚಲಕ್ಕಿ ಉತ್ತಮ
ಮಧ್ಯಮ
ಐ ಆರ್8(100 ಕೆಜಿ)
ಇಡ್ಲಿಕಾರ್ (100 ಕೆಜೆ)

3000-3200
4300-4400
3800-4000
2300-2500
4400-4500
5000-5200
3400-4200
5000-52000
4000-4200
3200-3300
3600-4000
ಬೆಳ್ಳುಳ್ಳಿ ಎಂಪಿ 100 ಕೆ.ಜಿ.
1. ಎಂಪಿ ಗೋಲಾ
2. ಲಡ್ಡು
3. ಮಧ್ಯಮ
4. 30 ಕೆಜಿ ಬಾಕ್ಸ್

5000-5500
3500-4000
1800-2200
1800-1850
ಈರುಳ್ಳಿ
ಕಾರನಾಟಕ ಫುಲ್ ದಪ್ಪ
ಮೀಡಿಯಂ ದಪ್ಪ
ಮಧ್ಯಮ
ಗೋಲ್ಟಾ
ಗೊಲ್ಟಿ
ಜೋಡ್

1000-1050
900-950
750-800
600-700
300-500
200-300
ಆಲೂಗಡ್ಡೆ (50 ಕೆ.ಜಿ.)
ಚೀಪ್ಸ್ ದಪ್ಪ
ಮಧ್ಯಮ
ಕೋಲಾರ ಉತ್ತಮ
ಮಧ್ಯಮ
ಆಗ್ರಾ ಉತ್ತಮ
ಮಧ್ಯಮ

1400- 1500
1000-1100
1300-1400
900-1200
1000-1100
700-900
ಹಸಿ ಶುಂಠಿ (60 ಕೆ.ಜಿ.)
1. ಹೈಟೆಕ್
2. ಮೀಡಿಯಂ

2300-2400
1500-1600
ಪರಿಶುದ್ಧ ಅಡುಗೆ ಎಣ್ಣೆ
ಸೂರ್ಯಕಾಂತಿ ಎಣ್ಣೆ
ಸನ್ ಪ್ಯೂರ್ 10 ಲೀ
ಸನ್ ಪ್ಯೂರ್ 15 ಕೆಜಿ
ಗೋಲ್ಡವಿನ್ನರ್ 10 ಲೀ.
ಗೋಲ್ಡ್ ವಿನ್ನರ್ 15 ಕೆಜಿ
ಜೆಮಿನಿ 10 ಲೀ.
ಜೆಮಿನಿ 15 ಕೆಜಿ
ಫ಼ಾರ್ಚುನ್10 ಲೀ.
ಫ಼ಾರ್ಚುನ್15 ಕೆಜಿ


1420
2110
1480
2150
1530
2350
1480
2250
ಕಡ್ಲೆ ಹಿಟ್ಟು
1. ಶಂಕರ್ 30 ಕೆ.ಜಿ
2. ಶಂಕರ್ 10 ಕೆ.ಜಿ
3. ಶಂಕರ್ 20 ಕೆಜಿ ಪ್ಯಾಕೆಟ್

2185
755
1660
ಕಡ್ಲೆಕಾಳು (50 ಕೆಜಿ)
1. ಕ್ಲಿನ್ ಬೋಲ್ಡ್
2. ಮಧ್ಯಮ
3. ಕ್ಲಿನ್ ಗುಲಾಬಿ
4. ಕ್ಲಿನ್ ಮಧ್ಯಮ

2950-3000
2900-2950
2900-3000
2750-2800
ಚಕ್ಕಿ ಅಟ್ಟ (50 ಕೆ.ಜಿ)
ಐಸ್
ಆರೇಂಜ್
ಸಿಲ್ವರ್ ಕಾಯಿನ್
ಇಂದೂರ್
ಕೇಸರಿ ಪಿಚ್
ಅಂಬೆ

1780-1790
1830-1840
1750-1760
1700-1710
1720-1730
1730-1740
ರೆಗ್ಯುಲರ್ ಅಟ್ಟ 50 ಕೆ.ಜಿ
ಆರೇಂಜ್
ರಾಕ್ಷಿ
ಸುನಿಲ್

1790-1800
1790-1800
1730-1740
ತಂದೂರಿ ಅಟ್ಟ ( 50 ಕೆ.ಜಿ)
1. ರಾಕ್ಷಿ
2. ಸಿಲ್ವರ್ ಕಾಯಿನ್
3. ಮೋಹಿನಿ

1820-1830
1860-1870
1800-1810
ಸಾದಾ ಸೂಜಿ (50 ಕೆ.ಜಿ)
ಆರೇಂಜ್
ರಾಕ್ಷಿ
ಹೀರೊ
ಸುನಿಲ್
ಕ್ಯಾಂಡಿ

2010-2020
1980-1990
1780-1790
1860-1870
1750-1760
ಚಿರೋಟಿ ಸೂಜಿ (50 ಕೆ.ಜಿ)
1. ಮೋಹಿನಿ
2. ಆರೆಂಜ್ 30 ಕೆ.ಜಿ
3. ತುಳಸಿ

1850-1860
1990-2000
1800-1810
ಮೈದಾ (50 ಕೆ.ಜಿ)
1. ಐಸ್
2. ಸುನೀಲ್
3. ಆರೆಂಜ್
4. ಮೊಬೆಲ್
5. ಸಿಲ್ವರ್ ಕಾಯಿನ್
6. ಕೇಸರಿ ಪೀಚ್

1930-1940
1880-1890
1980-1990
1910-1920
1850-1860
1820-1830

ಮೀಡಿಯಂ ಕುಕಿಂಗ್ ಆಯಿಲ್ ೧ ಲೀಟರ್‌ನ ೧೦ ಪ್ಯಾಕೆಟ್

ಸನ್ ಪ್ರಿಯಾ
ಸನ್ ಪಾರ್ಕ್
ಸನ್ ಪವರ್
ಸೂರ್ಯ ಪವರ್
1030
1040
975
965
ದೀಪದೆಣ್ಣೆ 1 ಲೀ.ನ 10 ಪ್ಯಾಕೆಟ್
ಆನಂದಮ್
ಅಂದಮ್
ಅಕ್ಷಯ
ನಂದಿನಿ

1050
1040
1020
1010
ಕಡ್ಲೆಕಾಯಿ ಎಣ್ಣೆ
1. ಪ್ಯೂರ್ ನಟ್ 10 ಲೀ.
2. ಕೆ ಎನ್ ಜೆ 10 ಲೀ.
3. ನಟ್ ಗೋಲ್ಡ್ 10 ಲೀ.

1650
1500
1450
ಪಾಮ್ ಆಯಿಲ್ 1 ಲೀ.ನ 10 ಪ್ಯಾಕೆಟ್
1. ರುಚಿಗೋಲ್ಡ್ 10 ಲೀ.
2. ಲೀಡರ್ ಗೋಲ್ಡ್ 10 ಲೀ.
3. ರುಚಿಗೋಲ್ಡ್ 15 ಕೆ.ಜಿ

950
930
1660
ರಗ್ಯುಲರ್ ವನಸ್ಪತಿ
1. ರುಚಿ No1, 10 ಕೆ.ಜಿ
2. ರುಚಿ No1, 15 ಕೆ.ಜಿ
3. ಎಟೂಝೆಡ್ 15 ಕೆ.ಜಿ

900
1660
1600
ಬೇಕರಿ ಸ್ಪೆಷಲ್ ವನಸ್ಪತಿ 15 ಕೆ.ಜಿ ಬಾಕ್ಸ್
1. ಗ್ರೀನ್ ಗೋಲ್ಡ್
2. ಗ್ರೇಟ್ ಚೆಫ್
3. ಬೆಸ್ ಪಫ್
4. ಬೆಸ್ ಕ್ರೀಮ್
5. ಬೆಸ್ ಬಿಸ್ಕೆಟ್
6. ಬೇಕರ್ ಕಿಂಗ್

1800
1840
1730
1700
1650
1650
ಮೆಣಸಿನಕಾಯಿ 100 ಕೆ.ಜಿ.: ಪಿ.ಸಿ.ಎನ್. ಟ್ರೇಡರ್ಸ್ [ಎಪಿಎಮ್‌ಸಿ ಬೆಂಗಳೂರು]
ಬ್ಯಾಡಗಿ ಸ್ಟೇಮ್
ಬ್ಯಾ, ಸ್ಟೇಮ್ಲೆಸ್
ಗುಂಟೂರಸ್ಟೇಮ್
ಗು, ಸ್ಟೇಮ್ ಲೆಸ್
ಮಣ್ ಕಟ್
ಕನಿಷ್ಠ ಗರಿಷ್ಠ

25,000 – 50,000
30,000 – 62,000
20,000 – 27,000
33,000 – 35,000
21,000 – 25,000
ಹುಣಸೆ ಹುಳಿ (100 ಕೆ.ಜಿ.)
ಉತ್ತಮ ಹಸಿರು
ಮಧ್ಯಮ ಹಸಿರು
ಮಧ್ಯಮ
ಬ್ರೋಕನ್
ಕನಿಷ್ಠ ಗರಿಷ್ಠ
6,200 – 12,000
6,000 – 10,000
10,000 – 17,000
18,000 – 25,000
ದನಿಯಾ (40 ಕೆ.ಜಿ.)
1. ಉತ್ತಮ ಹಸಿರು
2. ಮಧ್ಯಮ ಹಸಿರು
3. ಮಧ್ಯಮ
4. ಬ್ರೋಕನ್
ಕನಿಷ್ಠ ಗರಿಷ್ಠ
6,200 – 8,000
4,600 – 5,500
3,800 – 5,000
3,400 – 4,000
ಮಸಾಲ ದರ (1 ಕೆ.ಜಿ.)ಕನಿಷ್ಠಗರಿಷ್ಠ
ಅರಿಶಿಣ ಕೊಂಬು
1. ದಪ್ಪ
2. ಸಣ್ಣ
3. ಜೀರಿಗೆ ಸೂಪರ್ ಫೈನ್
4. ಜೀರಿಗೆ ಮೀಡಿಯಂ ಫೈನ್
5. ಜೀರಿಗೆ ಮೀಡಿಯಂ

130
80
430
350
280

140
90
440
370
290
ಗಸಗಸೆ
1. ಫೈನ್
2. ಮೀಡಿಯಂ
3. ಟರ್ಕಿ
4. ಇಂಡಿಯನ್

1350
1250
1450
1350

1400
1300
1510
1400
ಮೆಂತ್ಯೆ8494
ಸಾಸಿವೆ
1. ಸಾಸಿವೆ ಸಣ್ಣ
2. ಸಾಸಿವೆ ದಪ್ಪ

80
78

82
80
ಏಲಕ್ಕಿ
1. 8 ಎಂ.ಎಂ.
2. 7.5 ಎಂ.ಎಂ.
3. 7. ಎಂ.ಎಂ.
4. ಪಾನ್ ಬಹಾರ್‌

1500
1300
1200
1050

1600
1400
1250
1100
ಲವಂಗ
ಮಡಗಸ್ಕರ್
ಲಾಲ್ ಪರಿ
ಚೆಕ್ಕೆ
ಮರಾಠಿ ಮೊಗ್ಗು ವರ್ಜಿನಲ್
ಆನಾನಸ್ ಹೂ
ಕೊಬ್ಬರಿ
ಉತ್ತಮ
ಮಾಧ್ಯಮ

780
760
280
800
1050

145
135

790
800
290
850
1100

150
140
ಕಾಳು ಮೆಣಸು
1. ಆಟೋಮ್
2. ಗಾರ್ಬಲ್ಡ್‌

550
560

555
565
ಗೋಡಂಬಿ
1. ಜೆ ಎಚ್
3. ಡಬ್ಲ್ಯೂ 240
4. ಡಬ್ಲ್ಯೂ 240 ಪಾನ್ ರೊಟ್ಟಿ

700
700
700

720
720
720
ಬಾದಾಮಿ570580
ಗೋಧಿ 50 ಕೆಜಿ
1. ಸೂಪರ್ ಫೈನ್
2. ಮೀಡಿಯಂ ಫೈನ್
3. ಮೀಡಿಯಂ

2200
2000
1800

2300
2100
1850
ದ್ರಾಕ್ಷಿ200240
ಎಳ್ಳು
1. ಕಪ್ಪು
2. ಬಿಳಿ
3. ನೈಲಾನ್

160
185
195

165
190
200

[ ಮೊಟ್ಟೆ (ಎನ್.ಇ.ಸಿ.ಸಿ) 100ಕ್ಕೆ 575 ರೂಪಾಯಿ]

ತರಕಾರಿಕನಿಷ್ಠಗರಿಷ್ಠ
ಟೊಮೇಟೊ2030
ಹುರುಳಿಕಾಯಿ ನಾಟಿ           3035
ಹ್ಯಾರಿಕೊಟ್‌ ಬೀನ್ಸ್    2530
ಬದನೆಕಾಯಿ ಬಿಳಿ     3040
ಬದನೆಕಾಯಿ ಗುಂಡು  3040
ಬೀಟ್‌ರೂಟ್‌             2025
ಹಾಗಲಕಾಯಿ            3035
ಸೀಮೆ ಬದನೆಕಾಯಿ      810
ಸೌತೆಕಾಯಿ                  2025
ಗೊರಿಕಾಯಿ ಗೊಂಚಲು  3035
ಕ್ಯಾಪ್ಸಿಕಮ್‌ 3540
ಹಸಿ ಮೆಣಸಿನಕಾಯಿ ದಪ್ಪ4045
ಸಣ್ಣ ಮೆಣಸಿನಕಾಯಿ   4050
ಬಜ್ಜಿ ಮೆಣಸಿನಕಾಯಿ3035
ತೊಂಡೆಕಾಯಿ4050
ಕ್ಯಾರೆಟ್ ಉಟಿ 3540
ಕ್ಯಾರೆಟ್ ನಾಟಿ        3035
ಎಲೆಕೋಸು                820
ನವಿಲು ಕೋಸು2530
ಹೂ ಕೋಸು ಸಣ್ಣ     4045
ನುಗ್ಗೆಕಾಯಿ 130150
ಬೆಂಡೆಕಾಯಿ4045
ಹಿರೇಕಾಯಿ   3540
ಸೋರೆಕಾಯಿ     2530
ಚಪ್ಪರವರೇಕಾಯಿ4550
ಕಾರಮಣಿ                2225
ಮೂಲಂಗಿ            2025
ಈರುಳ್ಳಿ 1822
ಬೆಳ್ಳುಳ್ಳಿ 5060
ಆಲೂಗಡ್ಡೆ 2532

ಎಪಿಎಂಸಿ ತರಕಾರಿ ಸಗಟು ದರ (1 ಕೆ. ಜಿ.ಗೆ) 00 ಜನವರಿ 2023

ಅಡಕೆ ಧಾರಣೆ: 00 ಜನವರಿ, 2023

ಕುಮಟಾಕನಿಷ್ಠಗರಿಷ್ಠ
1. ಕೋಕಾ
2. ಚಿಪ್ಪು
3. ಫ್ಯಾಕ್ಟರಿ
4. ಹಳೆ ಚಾಲಿ
5. ಹೊಸ ಚಾಲಿ
1.18089
2. 26089
3.10109
4. 43899
5. 36809
1. 29999
2. 31199
3. 19549
4. 46429
5. 39519
ಶಿರಸಿಕನಿಷ್ಠಗರಿಷ್ಠ
1. ಚಾಲಿ
2. ಬೆಟ್ಟೆ
3. ಬಿಳಿಗೋಟು
4. ರಾಶಿ
1. 33699
2.35196
3.21199
4. 40799
1. 39699
2.46518
3. 32289
4. 49899
ಚಿತ್ರದುರ್ಗಕನಿಷ್ಠಗರಿಷ್ಠ
1. ಅಪಿ
2. ಕೆಂಪುಗೋಟು
3. ಬೆಟ್ಟೆ
4. ರಾಶಿ
1.48922
2.29000
3. 38419
4. 48429
1. 49332
2. 29400
3.38859
4. 48869
ಶಿವಮೊಗ್ಗಕನಿಷ್ಠಗರಿಷ್ಠ
ಗೊರಬಲು
ಬೆಟ್ಟೆ
ರಾಶಿ
ಸರಕು
1. 17500
2. 49090
3. 47009
4. 57669
1. 37299
2.53486
3. 49459
4. 79596
ಸಾಗರಕನಿಷ್ಠಗರಿಷ್ಠ
ಕೆಂಪುಗೋಟು
ಕೋಕ
ಚಾಲಿ
ಬಿಳಿಗೋಟು
ರಾಶಿ
ಸಿಪ್ಪೆಗೋಟು
1. 22339
2.15022
3. 30000
4.20560
5. 37699
6. 13999
1. 37199
2. 34089
3. 37069
4. 27869
5. 49609
6. 21198

ಇದನ್ನೂ ಓದಿ | Heart Attack | ಹೃದಯಾಘಾತವಾಗಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಐಎಎಸ್‌ ಅಧಿಕಾರಿ! ವಿಡಿಯೊ ವೈರಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

bars onion export: ಬರದ ಕಾರಣದಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕುಂಠಿತವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರ ಕ್ರಮ ಕೈಗೊಂಡಿದೆ.

VISTARANEWS.COM


on

Central government bars onion export to curb inflation
Koo

ನವದೆಹಲಿ: ಬೆಲೆ ಏರಿಕೆಯನ್ನು (Price Rise) ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು (Central Government) ಶುಕ್ರವಾರ ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದು, ಈ ಪೈಕಿ ಈರುಳ್ಳಿ ರಫ್ತು ಮೇಲೆ ನಿಷೇಧ ಹೇರಿದೆ(bars onion export). ಜತೆಗೆ, ಎಥೆನಾಲ್‌ ತಯಾರಿಕೆಗಾಗಿ ಕಬ್ಬು ಬಳಕೆಯನ್ನು ತಡೆಯಲಾಗುತ್ತಿದೆ. ಅನಗತ್ಯವಾಗಿ ಗೋಧಿ ದಾಸ್ತಾನು ಮಾಡಿಕೊಳ್ಳುವ ವ್ಯಾಪಾರಿಗಳ ವಿರುದ್ಧ ಬಿಗಿಯಾದ ನಿಯಂತ್ರಣಗಳನ್ನು ವಿಧಿಸಲಾಗುತ್ತಿದೆ.

ಕೆಲವು ರಾಜ್ಯಗಳಲ್ಲಿ ಬರ ಹಾಗೂ ಬೇಸಿಗೆ ಮಳೆಯಿಂದಾಗಿ ಸಕ್ಕರೆ, ಬೇಳೆ ಕಾಳುಗಳು ಸೇರಿದಂತೆ ಹಲವು ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕಬ್ಬಿನ ಉತ್ಪಾದನೆಯಲ್ಲಿ ತೀವ್ರ ಕುಸಿತದ ನಿರೀಕ್ಷೆ ಇರುವುದರಿಂದ ಸರ್ಕಾರವು ಕಬ್ಬಿನ ರಸವನ್ನು ಪೆಟ್ರೋಲ್‌ನೊಂದಿಗೆ ಬೆರೆಸಿದ ಎಥೆನಾಲ್ ಉತ್ಪಾದನೆ ಮಾಡುವುದನ್ನು ನಿರ್ಬಂಧಿಸಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.

ಎಥೆನಾಲ್ ತಯಾರಿಕೆಗಾಗಿ ಕಬ್ಬಿನ ರಸದ ಮಾರಾಟವನ್ನು ನಿಲ್ಲಿಸುವ ನಿರ್ಧಾರವು 2025-26ರ ವೇಳೆಗೆ ಪೆಟ್ರೋಲ್‌ನೊಂದಿಗೆ 20% ಎಥೆನಾಲ್ ಮಿಶ್ರಣವನ್ನು ಸಾಧಿಸುವ ಭಾರತದ ಮಹತ್ವಾಕಾಂಕ್ಷೆಯ ಒತ್ತಡದ ಮೇಲೆ ಪರಿಣಾಮ ಬೀರುವುದಿಲ್ಲ, ಇದನ್ನು ಇ20 ಎಂದು ಕರೆಯಲಾಗುತ್ತದೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಪಂಕಜ್ ಜೈನ್ ಹೇಳಿದ್ದಾರೆ.

ಈ ನಿಷೇಧವು ತಾತ್ಕಾಲಿಕವಾಗಿದೆ ಮತ್ತು ಪರಿಸ್ಥಿತಿಯು ಸುಧಾರಿಸಿದ ಬಳಿಕ ನೀತಿಯನ್ನು ಮರುಮಾಪನ ಮಾಡಲಾಗುವುದು. ಎಥೆನಾಲ್-ಬ್ಲೆಂಡಿಂಗ್ ಪ್ರೋಗ್ರಾಂ ಮತ್ತು ಗ್ಲೋಬಲ್ ಜೈವಿಕ ಇಂಧನ ಒಕ್ಕೂಟ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಬೇಡಿಕೆಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಪೂರ್ಣ ಯೋಜನೆಯನ್ನು ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ದೇಶದ ಸುಮಾರು 25% ಎಥೆನಾಲ್ ಅನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ, ಆದರೆ ಇನ್ನೊಂದು 50% ಮೊಲಾಸಸ್‌ನಿಂದ ಉತ್ಪಾದಿಸಲಾಗುತ್ತದೆ. ಆದರೆ ಉಳಿದವು ಅಕ್ಕಿ ಮತ್ತು ಜೋಳದಂತಹ ಧಾನ್ಯಗಳಿಂದ ತಯಾರಿಸಲಾಗುತ್ತದೆ.

ಚಿಲ್ಲರೆ ಹಣದುಬ್ಬರವು ಹೆಚ್ಚಾಗುವ ನಿರೀಕ್ಷೆಯಿದೆ, ಮೂರು ತಿಂಗಳ ಕಾಲ ಇಳಿಮುಖವಾದ ನಂತರ ಹೆಚ್ಚಿನ ಆಹಾರ ಬೆಲೆಗಳಿಂದ ಅದು ಮತ್ತೆ ಹೆಚ್ಚಾಗಬಹುದು. ಈರುಳ್ಳಿ, ಟೊಮ್ಯಾಟೊ ಮತ್ತು ಬೇಳೆಕಾಳುಗಳಂತಹ ತರಕಾರಿಗಳು ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ 4.87% ಆಗಿತ್ತು, ಇದು ನಾಲ್ಕು ತಿಂಗಳ ಕನಿಷ್ಠವಾಗಿದೆ.

ಈ ಸುದ್ದಿಯನ್ನೂ ಓದಿ: Retail Inflation: ಶೇ.4.87ಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ!

Continue Reading

ಮನಿ-ಗೈಡ್

Money Guide: ಪಾರ್ಟ್‌ ಟೈಮ್‌ ಜಾಬ್‌ ಹುಡುಕುತ್ತಿದ್ದೀರಾ? ಇಲ್ಲಿದೆ ವಿಫುಲ ಅವಕಾಶ

Money Guide: ಆರ್ಥಿಕವಾಗಿ ಸದೃಢರಾಗಲು ಪಾರ್ಟ್‌ ಟೈಮ್‌ ಜಾಬ್‌ ಉತ್ತಮ ಆಯ್ಕೆ ಎನಿಸಿಕೊಂಡಿದೆ. ನೀವು ಮನೆಯಲ್ಲೇ ಕೂತು ಮಾಡಬಹುದಾದ ಅಂತಹ ಉದ್ಯೋಗಗಳ ಕುರಿತಾದ ಮಾಹಿತಿ ಇಲ್ಲಿದೆ.

VISTARANEWS.COM


on

work from home
Koo

ಬೆಂಗಳೂರು: ಪ್ರಸ್ತುತ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ದುಬಾರಿಯಾಗಿದೆ. ಉತ್ತಮ ಜೀವನ ಸಾಗಿಸಲು ಆರ್ಥಿಕವಾಗಿ ಸದೃಢವಾಗುವುದು ಅನಿವಾರ್ಯ ಎನಿಸಿಕೊಂಡಿದೆ. ಅದಕ್ಕಾಗಿ ಬಹುತೇಕರು ಉದ್ಯೋಗದ ಜತೆಗೆ ಪಾರ್ಟ್‌ ಟೈಂ ಜಾಬ್‌ನತ್ತ ಗಮನ ಹರಿಸುತ್ತಾರೆ. ಇಂದಿನ ಮನಿಗೈಡ್‌ (Money Guide) ಮನೆಯಲ್ಲೇ ಕೂತು ಮಾಡಬಹುದಾದ ಉದ್ಯೋಗಾವಕಾಶಗಳ ಬಗ್ಗೆ ವಿವರಿಸಲಿದೆ.

ಫ್ರೀಲಾನ್ಸಿಂಗ್: ಕೌಶಲ್ಯಗಳನ್ನು ಆದಾಯವಾಗಿ ಪರಿವರ್ತಿಸಿ

ಮನೆಯಿಂದಲೇ ಹಣವನ್ನು ಗಳಿಸುವ ಅತ್ಯಂತ ಜನಪ್ರಿಯ ಮಾರ್ಗಗಳಲ್ಲಿ ಫ್ರೀಲಾನ್ಸಿಂಗ್ ಪ್ರಮುಖವಾದುದು. ಅಪ್‌ವರ್ಕ್‌, ಫ್ರೀಲಾನ್ಸರ್ ಮತ್ತು ಫೈವರ್‌ (Upwork, Freelancer, and Fiverr)ನಂತಹ ಪ್ಲಾಟ್‌ಫಾರ್ಮ್‌ಗಳು ನುರಿತ ವೃತ್ತಿಪರರನ್ನು ಪ್ರಪಂಚದಾದ್ಯಂತದ ಗ್ರಾಹಕರೊಂದಿಗೆ ಸಂಪರ್ಕಿಸುತ್ತವೆ. ಬರವಣಿಗೆ, ಗ್ರಾಫಿಕ್ ವಿನ್ಯಾಸ, ಪ್ರೋಗ್ರಾಮಿಂಗ್ ಅಥವಾ ಡಿಜಿಟಲ್ ಮಾರ್ಕೆಟಿಂಗ್ ಹೀಗೆ ನಿಮ್ಮ ಕೌಶಲ್ಯ ಯಾವುದೇ ಆಗಿರಲಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ.

ಆನ್‌ಲೈನ್‌ ಟ್ಯೂಷನ್‌: ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಿ

ಶಿಕ್ಷಣವು ಡಿಜಿಟಲ್‌ನತ್ತ ಹೊರಳಿರುವುದರಿಂದ ಆನ್‌ಲೈನ್‌ ಬೋಧನೆಗೆ ಬೇಡಿಕೆ ಹೆಚ್ಚಾಗಿದೆ. ನೀವು ನಿರ್ದಿಷ್ಟ ವಿಷಯ ಅಥವಾ ಕೌಶಲ್ಯದಲ್ಲಿ ಪರಿಣತಿಯನ್ನು ಹೊಂದಿದ್ದರೆ ಆನ್‌ಲೈನ್‌ ಬೋಧಕರಾಗಬಹುದು. ಉದಾಹರಣೆಗೆ ನೀವು ಯೋಗದಲ್ಲಿ ಪರಿಣಿತಿ ಹೊಂದಿದ್ದರೆ ಆನ್‌ಲೈನ್‌ ಮೂಲಕ ತರಗತಿ ನಡೆಸಬಹುದು. ಚೆಗ್ ಟ್ಯೂಟರ್ಸ್, ಟ್ಯೂಟರ್‌.ಕಾಮ್‌ ಮತ್ತು ವೇದಾಂತು(Chegg Tutors, Tutor.com, Vedantu)ನಂತಹ ವೆಬ್‌ಸೈಟ್‌ಗಳು ವಿವಿಧ ವಯಸ್ಸಿನ ಮತ್ತು ವಿವಿಧ ಕಡೆಗಳಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ನಿಗದಿ ಪಡಿಸಬಹುದು ಮತ್ತು ದರವನ್ನು ನೀವೇ ನಿರ್ಧರಿಸಬಹುದು.

ಅಫಿಲಿಯೇಟ್‌ ಮಾರ್ಕೆಟಿಂಗ್‌ (Affiliate Marketing)

ಅಫಿಲಿಯೇಟ್‌ ಮಾರ್ಕೆಟಿಂಗ್‌ನಿಂದಲೂ ನೀವು ಆದಾಯ ಗಳಿಸಬಹುದು. ಬ್ಲಾಗ್, ವೆಬ್‌ಸೈಟ್‌ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಚುರ ಪಡಿಸಬಹುದು. ನೀವು ಹಂಚಿಕೊಳ್ಳುವ ಲಿಂಕ್ ಮೂಲಕ ಖರೀದಿ ಮಾಡಿದಾಗ, ನೀವು ಕಮಿಷನ್ ಗಳಿಸುತ್ತೀರಿ. ನೀವು ಗಣನೀಯ ಪ್ರಮಾಣದ ಆನ್‌ಲೈನ್‌ ಫಾಲೋವರ್ಸ್‌ ಹೊಂದಿದ್ದರೆ ಮತ್ತು ಆನ್‌ಲೈನ್ ಮಾರ್ಕೆಟಿಂಗ್‌ನಲ್ಲಿ ಪ್ರಾವೀಣ್ಯತೆ ಹೊಂದಿದ್ದರೆ ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಹಣ ಗಳಿಸಬಹುದು.

ಆನ್‌ಲೈನ್ ಸಮೀಕ್ಷೆ

ಆನ್‌ಲೈನ್ ಸಮೀಕ್ಷೆಗಳಲ್ಲಿ ಭಾಗವಹಿಸುವುದು ಮತ್ತು ಉತ್ಪನ್ನಗಳ ಬಗ್ಗೆ ವಿಮರ್ಶೆಗಳನ್ನು ಬರೆಯುವುದರಿಂದಲೂ ಸ್ವಲ್ಪ ಮಟ್ಟಿನ ದುಡ್ಡು ಸಂಪಾದಿಸಬಹುದು. ಸ್ವಾಗ್ ಬಕ್ಸ್, ಸರ್ವೇ ಜಂಕಿ ಮತ್ತು ಅಮೆಜಾನ್ ಮೆಕ್ಯಾನಿಕಲ್ ಟರ್ಕ್ (Swagbucks, Survey Junkie, Amazon Mechanical Turk)ನಂತಹ ವೆಬ್‌ಸೈಟ್‌ಗಳು ನಿಮ್ಮ ಸಮಯ ಮತ್ತು ಪ್ರತಿಕ್ರಿಯೆಗೆ ಒಂದಷ್ಟು ಹಣವನ್ನು ಪಾವತಿಸುತ್ತವೆ.

ಇ-ಕಾಮರ್ಸ್‌: ಆನ್‌ಲೈನ್‌ ಮಾರಾಟ ಜಾಲ ಆರಂಭಿಸಿ

ನಿಮ್ಮದೇ ಸ್ವಂತ ಆನ್‌ಲೈನ್ ಸ್ಟೋರ್ ಪ್ರಾರಂಭಿಸುವುದು ಕೂಡ ಲಾಭದಾಯಕ ಉದ್ಯಮ. ಶಾಪಿಫೈ, ವೂಕಾಮರ್ಸ್ ಮತ್ತು ಅಮೆಜಾನ್ (Shopify, WooCommerce Amazon)ನಂತಹ ಫ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ನಿಮಗೆ ಅನುಮತಿ ನೀಡುತ್ತದೆ.

ಒಟ್ಟಿನಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶಗಳ ಕ್ಷೇತ್ರ ವಿಶಾಲವಾಗಿದೆ ಮತ್ತು ನಿರಂತರವಾಗಿ ವಿಸ್ತಾರವಾಗುತ್ತಲೇ ಇದೆ. ಅಂತರ್ಜಾಲದ ಶಕ್ತಿ ಮತ್ತು ನಿಮ್ಮ ಪ್ರತಿಭೆಗಳನ್ನು ಬಳಸಿಕೊಳ್ಳುವ ಮೂಲಕ ಆದಾಯವನ್ನು ಗಳಿಸಲು ನೀವು ವೈವಿಧ್ಯಮಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಕೌಶಲ್ಯ ಮತ್ತು ಜೀವನಶೈಲಿಗೆ ಯಾವುದು ಸೂಕ್ತ ಎಂಬುದನ್ನು ಮೊದಲೇ ನಿರ್ಧರಿಸುವುದು ಮುಖ್ಯ.

ಇದನ್ನೂ ಓದಿ: Money Guide: ತೆರಿಗೆ ಕಡಿತ ಇಲ್ಲದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Continue Reading

ಕರ್ನಾಟಕ

ಜೆರೋಧಾ ಸಂಸ್ಥಾಪಕರಾದ ಕಾಮತ್‌ ಸಹೋದರರ ಗಳಿಕೆ ಎಷ್ಟು ಕೋಟಿ ರೂ.?

Zerodha: ಝೆರೋಧಾ ಸಂಸ್ಥಾಪಕರ ವೇತನದ ಮಾಹಿತಿ ಬಹಿರಂಗಗೊಂಡಿದೆ. ಸಹೋದರರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ವಾರ್ಷಿಕ ವೇತನವಾಗಿ ತಲಾ 72 ಕೋಟಿ ರೂ. ಪಡೆದುಕೊಂಡಿದ್ದಾರೆ.

VISTARANEWS.COM


on

kamath brothers
Koo

ಬೆಂಗಳೂರು: ಬೆಂಗಳೂರು ಮೂಲದ ಆನ್‌ಲೈನ್‌ ಬ್ರೋಕರೇಜ್ ಸಂಸ್ಥೆ ಜೆರೋಧಾ (Zerodha) ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ (Nithin Kamath, Nikhil Kamath) 2023ರ ಹಣಕಾಸು ವರ್ಷದಲ್ಲಿ 195.4 ಕೋಟಿ ರೂ.ಗಳನ್ನು ಪರಿಹಾರವಾಗಿ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಕಾಮತ್ ಸಹೋದರರು ಜೆರೋಧಾ ಪೂರ್ಣಾವಧಿ ನಿರ್ದೇಶಕರೂ ಹೌದು. ಈ ಪೈಕಿ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ತಮ್ಮ ವಾರ್ಷಿಕ ವೇತನವಾಗಿ ತಲಾ 72 ಕೋಟಿ ರೂ. ಪಡೆದುಕೊಂಡಿದ್ದಾರೆ.

ಅತ್ಯಧಿಕ ಸಂಭಾವನೆ

ಈ ಮೂಲಕ ಭಾರತದ ಸ್ಟಾರ್ಟ್ಅಪ್ ಸಂಸ್ಥಾಪಕರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆದುಕೊಂಡವರು ಎನ್ನುವ ಹೆಗ್ಗಳಿಕೆಗೆ ಕಾಮತ್‌ ಸಹೋದರರು ಪಾತ್ರರಾಗಿದ್ದಾರೆ. ಓಯೋದ ರಿತೇಶ್ ಅಗರ್ವಾಲ್ 2023ರ ಹಣಕಾಸು ವರ್ಷದಲ್ಲಿ 12 ಕೋಟಿ ರೂ.ಗಳ ವೇತನದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸಿಇಒ ನಿತಿನ್ ಕಾಮತ್ ಅವರ ಪತ್ನಿ ಮತ್ತು ಕಂಪನಿಯ ಪೂರ್ಣಾವಧಿ ನಿರ್ದೇಶಕಿ ಸೀಮಾ ಪಾಟೀಲ್ ಈ ವರ್ಷ 36 ಕೋಟಿ ರೂ. ವೇತನ ಪಡೆದುಕೊಂಡಿದ್ದಾರೆ.

ಇದೇ ಅವಧಿಯಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಣು ಮಾಧವ್ ಒಟ್ಟು 15.4 ಕೋಟಿ ರೂ.ಗಳ ಪ್ಯಾಕೇಜ್ ಪಡೆದಿದ್ದಾರೆ. ಕಂಪೆನಿಯು ನೌಕರರಿಗಾಗಿ ಈ ವರ್ಷ 623 ಕೋಟಿ ರೂ.ಗಳನ್ನು ವಿನಿಯೋಗಿಸಿದೆ. ಆ ಪೈಕಿ 380 ಕೋಟಿ ರೂ.ಗಳನ್ನು ನಿರ್ದೇಶಕರ ವೇತನವಾಗಿ ನೀಡಲಾಗಿದೆ. ಉಳಿದ 236 ಕೋಟಿ ರೂ.ಗಳನ್ನು ನಗದಾಗಿ ಎಂಪ್ಲಾಯ್‌ ಸ್ಟಾಕ್‌ ಓನರ್‌ಶಿಪ್‌ ಪ್ಲ್ಯಾನ್ಸ್‌ (ESOPs)ಗೆ ಉಪಯೋಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಮೂಲದ ಈ ಟೆಕ್ ದೈತ್ಯ ಸಂಸ್ಥೆಯ ಉದ್ಯೋಗಿಗಳ ಪ್ರಯೋಜನ ವೆಚ್ಚವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 35.7ರಷ್ಟು ಗಮನಾರ್ಹ ಹೆಚ್ಚಳವನ್ನು ದಾಖಲಿಸಿದೆ. ಇದಕ್ಕಾಗಿ ಈ ವರ್ಷ 623 ಕೋಟಿ ರೂ. ವಿನಿಯೋಗಿಸಲಾಗಿದೆ. ಕಳೆದ ವರ್ಷ ಇದಕ್ಕಾಗಿ 459 ಕೋಟಿ ರೂ. ಖರ್ಚು ಮಾಡಲಾಗಿತ್ತು. ಜೆರೋಧಾ ಭಾರತದ ಅತ್ಯಂತ ಲಾಭದಾಯಕ ಸ್ಟಾರ್ಟ್‌ ಅಪ್‌ಗಳ ಪೈಕಿ ಪ್ರಮುಖವಾದುದು.

ಲಾಭದಲ್ಲಿ ಏರಿಕೆ

ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪೆನಿಯ ನಿವ್ವಳ ಲಾಭ ಈ ವರ್ಷ ಶೇ. 39ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ 2,094 ಕೋಟಿ ರೂ. ಇದ್ದರೆ ಈ ವರ್ಷ 2,907 ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಂಪನಿಯ ಮೌಲ್ಯ 30,000 ಕೋಟಿ ರೂ. ಇದು ವಾರ್ಷಿಕ ಲಾಭದ ಅಂದಾಜು 10 ಪಟ್ಟು. ಇತ್ತೀಚಿನ ದಿನಗಳಲ್ಲಿ ಸತತ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಮಾರುಕಟ್ಟೆಯಲ್ಲಿ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಈ ಬ್ರೋಕರೇಜ್ ಸಂಸ್ಥೆಯನ್ನು 2010ರಲ್ಲಿ ಸ್ಥಾಪಿಸಲಾಗಿತ್ತು. ಕಂಪನಿಯು ಪ್ರಸ್ತುತ ದೇಶದಲ್ಲಿ ಎರಡನೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದನ್ನು 65 ಲಕ್ಷಕ್ಕೂ ಹೆಚ್ಚು ಮಂದಿ ಬಳಸುತ್ತಿದ್ದಾರೆ. ಮೊದಲ ಸ್ಥಾನದಲ್ಲಿ 66.30 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿರುವ Groww ಇದೆ.

ಇದನ್ನೂ ಓದಿ: NR Narayana Murthy: “70 ಅಲ್ಲ, 90 ಗಂಟೆ ಕೆಲಸ…ʼʼ ನಾರಾಯಣ ಮೂರ್ತಿ ಇನ್ನೊಂದು ಬಾಂಬ್‌

Continue Reading

ದೇಶ

NR Narayana Murthy: “70 ಅಲ್ಲ, 90 ಗಂಟೆ ಕೆಲಸ…ʼʼ ನಾರಾಯಣ ಮೂರ್ತಿ ಇನ್ನೊಂದು ಬಾಂಬ್‌

ಯುವಜನತೆ ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ (70 hours work) ಕೆಲಸ ಮಾಡಬೇಕು ಎಂದಿದ್ದ ಎನ್‌.ಆರ್‌ ನಾರಾಯಣ ಮೂರ್ತಿ (NR Narayana Murthy) ಈಗ ಇನ್ನೊಂದು ಶಾಕ್‌ ನೀಡಿದ್ದಾರೆ.

VISTARANEWS.COM


on

NR Narayana Murthy
Koo

ಹೊಸದಿಲ್ಲಿ: ʼಭಾರತದಲ್ಲಿ ಯುವಜನತೆ ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ (70 hours work) ಕೆಲಸ ಮಾಡಬೇಕುʼ ಎಂದು ಸಲಹೆ ನೀಡಿ ಹಲವರಿಂದ ಟೀಕೆಗೂ ಶ್ಲಾಘನೆಗೂ ಸಮಾನವಾಗಿ ತುತ್ತಾಗಿದ್ದ ಇನ್ಫೋಸಿಸ್ (Infosys) ಸಹ-ಸಂಸ್ಥಾಪಕ ಎನ್‌.ಆರ್‌ ನಾರಾಯಣ ಮೂರ್ತಿ (NR Narayana Murthy), ಈಗ ಇನ್ನೊಂದು ಬಾಂಬ್‌ ಸಿಡಿಸಿದ್ದಾರೆ. ಇನ್ಫೋಸಿಸ್ ಆರಂಭಿಸಿದ ಸಮಯದಲ್ಲಿ ತಾನು ವಾರಕ್ಕೆ 85ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ.

ಬ್ಯುಸಿನೆಸ್‌ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಇದನ್ನು ಹೇಳಿದ್ದಾರೆ. 1994ರವರೆಗೆ ತಾನು ವಾರಕ್ಕೆ 85ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ 6.20ಕ್ಕೆ ಕಚೇರಿಯಲ್ಲಿರುತ್ತಿದ್ದೆ ಮತ್ತು ರಾತ್ರಿ 8.30ಕ್ಕೆ ಕಚೇರಿಯಿಂದ ಹೊರಡುತ್ತಿದ್ದೆ. ವಾರದಲ್ಲಿ ಆರು ದಿನ ಕೆಲಸ ಮಾಡುತ್ತಿದ್ದೆ” ಎಂದು ಅವರು ತಿಳಿಸಿದ್ದಾರೆ. “ಅಭಿವೃದ್ಧಿ ಹೊಂದಿದ ಪ್ರತಿಯೊಂದು ರಾಷ್ಟ್ರವೂ ಕಠಿಣ ಪರಿಶ್ರಮದ ಮೂಲಕ ಅದನ್ನು ಸಾಧಿಸಿದೆ ಎಂದು ನನಗೆ ತಿಳಿದಿದೆ” ಎಂದಿದ್ದಾರೆ.

“ಬಡತನದಿಂದ ಪಾರಾಗುವ ಏಕೈಕ ಮಾರ್ಗವೆಂದರೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವುದು ಎಂದು ಪೋಷಕರು ನನಗೆ ಕಲಿಸಿದರು. ಪ್ರತಿಯೊಂದು ಗಂಟೆಯ ಕೆಲಸದಿಂದಲೂ ವ್ಯಕ್ತಿಯು ಹೆಚ್ಚಿನ ಉತ್ಪಾದಕತೆಯನ್ನು ಪಡೆಯುತ್ತಾನೆ. ನನ್ನ ಸಂಪೂರ್ಣ 40 ವರ್ಷಗಳ ವೃತ್ತಿಪರ ಜೀವನದಲ್ಲಿ, ನಾನು ವಾರಕ್ಕೆ ಸರಾಸರಿ 70 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. 1994ರವರೆಗೆ ನಾವು ಆರು ದಿನಗಳ ವಾರವನ್ನು ಹೊಂದಿದ್ದೆವು. ಆಗ ನಾನು ವಾರಕ್ಕೆ ಕನಿಷ್ಠ 85ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಅದು ವ್ಯರ್ಥವಾಗಲಿಲ್ಲ” ಎಂದಿದ್ದಾರೆ.

ಭಾರತವು ಚೀನಾ ಮತ್ತು ಜಪಾನ್‌ನಂತಹ ವೇಗವಾಗಿ ಬೆಳೆಯುತ್ತಿರುವ ದೇಶಗಳೊಂದಿಗೆ ಸ್ಪರ್ಧಿಸಲು ಬಯಸಿದರೆ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಮೂರ್ತಿ ಅವರು ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗೆ ಅಕ್ಟೋಬರ್‌ನಲ್ಲಿ ನಡೆಸಿದ ಸಂವಾದದಲ್ಲಿ ಹೇಳಿದ್ದರು. “ಎರಡನೆಯ ಮಹಾಯುದ್ಧದ ನಂತರ, ಜರ್ಮನಿ ಮತ್ತು ಜಪಾನ್‌ನ ಜನರು ತಮ್ಮ ದೇಶಕ್ಕಾಗಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದರು. ಭಾರತದಲ್ಲಿನ ಯುವಕರು ಸಹ ದೇಶಕ್ಕಾಗಿ, ನಮ್ಮ ಆರ್ಥಿಕತೆಯ ಸಲುವಾಗಿ ಶ್ರಮಿಸುತ್ತಾರೆ” ಎಂದು ಮೂರ್ತಿ ಗಮನಿಸಿದರು.

ಓಲಾ ಸಿಇಒ ಭವಿಶ್ ಅಗರ್ವಾಲ್ ಅವರು ಮೂರ್ತಿ ಮಾತನ್ನು ಸಮ್ಮತಿಸಿದ್ದಾರೆ. “ಮೂರ್ತಿ ಅವರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಇದು ಕಡಿಮೆ ಕೆಲಸ ಮಾಡುವ ಮತ್ತು ಮನರಂಜನೆ ಪಡೆಯುವ ಕ್ಷಣವಲ್ಲ. ಬದಲಿಗೆ ಇತರ ದೇಶಗಳು ಹಲವು ತಲೆಮಾರುಗಳಲ್ಲಿ ನಿರ್ಮಿಸಿದ್ದನ್ನು ಒಂದು ತಲೆಮಾರಿನಲ್ಲಿ ನಿರ್ಮಿಸುವ ನಮ್ಮ ಕ್ಷಣವಾಗಿದೆ!ʼʼ ಎಂದು Xನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಅವರೂ ಮೂರ್ತಿಯವರ ಹೇಳಿಕೆಯನ್ನು ಮನಃಪೂರ್ವಕವಾಗಿ ಅನುಮೋದಿಸಿದ್ದಾರೆ. ಐದು ದಿನಗಳ ವಾರದ ಸಂಸ್ಕೃತಿಯು ಭಾರತದಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅಗತ್ಯವಿಲ್ಲ ಎಂದಿದ್ದಾರೆ.

ಆದರೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಮೂರ್ತಿ ಮಾತನ್ನು ಟೀಕಿಸಿದ್ದರು. “ಕೇವಲ ಹೆಚ್ಚು ಗಂಟೆಗಳ ಕೆಲಸದಿಂದ ಉತ್ಪಾದಕತೆ ಹೆಚ್ಚುವುದಿಲ್ಲ” ಎಂದು ಚಲನಚಿತ್ರ ನಿರ್ಮಾಪಕ ರೋನಿ ಸ್ಕ್ರೂವಾಲಾ ಹೇಳಿದ್ದಾರೆ. ಸೋಮವಾರ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಮೂರ್ತಿ ಅವರ ಸಲಹೆಯನ್ನು ಉಲ್ಲೇಖಿಸಲಾಗಿದೆ. ಮೂರ್ತಿ ನೀಡಿದ ಸಲಹೆಯನ್ನು ಅಳವಡಿಸಲು ಪರಿಶೀಲಿಸುತ್ತಿದ್ದೀರಾ ಎಂದು ಮೂವರು ಲೋಕಸಭಾ ಸಂಸದರು ಸರ್ಕಾರವನ್ನು ಪ್ರಶ್ನಿಸಿದ್ದರು. “ಅಂತಹ ಯಾವುದೇ ಪ್ರಸ್ತಾವನೆಯು ಭಾರತ ಸರ್ಕಾರದ ಪರಿಗಣನೆಯಲ್ಲಿಲ್ಲ” ಎಂದು ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಹಾಯಕ ಸಚಿವ (MoS) ರಾಮೇಶ್ವರ್ ತೇಲಿ ಉತ್ತರಿಸಿದ್ದರು.

ಇದನ್ನೂ ಓದಿ: Narayana Murthy: ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಕರಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ!

Continue Reading
Advertisement
Madhu Bangarappa Beluru Gopalakrishna
ಅಂಕಣ10 mins ago

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Rain News
ಉಡುಪಿ10 mins ago

Karnataka Weather : ಮೈಸೂರು ಸೇರಿ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌!

Vistara Editorial, Let the strengthening government schools
ಕರ್ನಾಟಕ25 mins ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ7 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ7 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ8 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ8 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Central government bars onion export to curb inflation
ದೇಶ8 hours ago

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema1 day ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌