Infosys Q1 Results : ಇನ್ಫೋಸಿಸ್‌ಗೆ 5,945 ಕೋಟಿ ರೂ. ನಿವ್ವಳ ಲಾಭ, 2023-24ರ ಮುನ್ನೋಟಕ್ಕೆ ಕತ್ತರಿ Vistara News
Connect with us

ವಾಣಿಜ್ಯ

Infosys Q1 Results : ಇನ್ಫೋಸಿಸ್‌ಗೆ 5,945 ಕೋಟಿ ರೂ. ನಿವ್ವಳ ಲಾಭ, 2023-24ರ ಮುನ್ನೋಟಕ್ಕೆ ಕತ್ತರಿ

Infosys Q1 Results : ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 5,945 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ವಿವರ ಇಲ್ಲಿದೆ.

VISTARANEWS.COM


on

Infoysis
Koo

ಮುಂಬಯಿ: ‌ಐಟಿ ದಿಗ್ಗಜ ಇನ್ಫೋಸಿಸ್ ಕಳೆದ ಏಪ್ರಿಲ್-ಜೂನ್‌ ಅವಧಿಯಲ್ಲಿ 5,945 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. (Infosys) ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11% ಏರಿಕೆ ದಾಖಲಿಸಿದೆ. (Infosys Q1 Results) ಇನ್ಫೋಸಿಸ್‌ ಈ ಅವಧಿಯಲ್ಲಿ 37,933 ಕೋಟಿ ರೂ. ಆದಾಯ ಗಳಿಸಿದೆ. 10% ಹೆಚ್ಚಳ ಕಂಡಿದೆ.

ಜಾಗತಿಕ ಆರ್ಥಿಕತೆಯ ಮಂದಗತಿ, ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಇನ್ಫೋಸಿಸ್‌ 2023-24 ಸಾಲಿನ ಕಂದಾಯ ಬೆಳವಣಿಗೆಯ ಮುನ್ನೋಟವನ್ನು ಕಡಿತಗೊಳಿಸಿದೆ. ಕಂಪನಿ ಪ್ರಸಕ್ತ ಸಾಲಿಗೆ ಕೇವಲ 1.3.5% ಬೆಳವಣಿಗೆಯ ಮುನ್ನೋಟವನ್ನು ಅಂದಾಜಿಸಿದೆ. ಕಳೆದ ವರ್ಷ ಇದು 4-7% ಇತ್ತು.

ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್‌ ರಫ್ತುದಾರ ಕಂಪನಿಯಾದ ಇನ್ಫೋಸಿಸ್‌, ಹೀಗಿದ್ದರೂ ಆಪರೇಟಿಂಗ್‌ ಮಾರ್ಜಿನ್‌ ಗೈಡೆನ್ಸ್‌ ಅನ್ನು 2023-24ಕ್ಕೆ 20-22%ಕ್ಕೆ ಉಳಿಸಿದೆ. ಕಂಪನಿಯು ಜೂನ್‌ ತ್ರೈಮಾಸಿಕದಲ್ಲಿ 2.3 ಶತಕೋಟಿ ಡಾಲರ್‌ (18,860 ಕೋಟಿ ರೂ.) ಮೌಲ್ಯದ ಡೀಲ್‌ಗಳನ್ನು ಗಳಿಸಿದೆ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ವಲಸೆಯ ಪ್ರಮಾಣ 28.4%ಕ್ಕೆ ಏರಿಕೆ: ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಣದಲ್ಲಿ ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 28.4%ಕ್ಕೆ ಹೆಚ್ಚಳವಾಗಿದೆ. ಕಂಪನಿಯಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 3,36,294 ಇತ್ತು. ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 6,940 ಕಡಿಮೆಯಾಗಿದೆ.

ಇನ್ಫೋಸಿಸ್‌ಗೆ ಹಣಕಾಸು ಸೇವೆಯಲ್ಲಿ ಅತಿ ಹೆಚ್ಚು ಆದಾಯ ಲಭಿಸಿದೆ. 4.7% ಪ್ರಗತಿ ದಾಖಲಿಸಿದೆ. ಕಮ್ಯುನಿಕೇಶನ್‌ ವಿಭಾಗದಲ್ಲಿ 6.1% ಇಳಿದಿದೆ. ಉತ್ಪಾದನೆ ಮತ್ತು ಜೀವ ವಿಜ್ಞಾನ ವಲಯದಿಂದ ಎರಡಂಕಿಯ ಆದಾಯ ಬೆಳವಣಿಗೆ ದಾಖಲಿಸಿದೆ. ಇನ್ಫೋಸಿಸ್‌ನ ಪ್ರತಿ ಷೇರಿನ ದರ 1449 ರೂ. ಇತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

Demat Account: ಡಿಮ್ಯಾಟ್ ಖಾತೆದಾರರಿಗೆ ಗುಡ್‌ ನ್ಯೂಸ್:‌ ನಾಮಿನಿ ಘೋಷಣೆಗೆ ಸಮಯ ವಿಸ್ತರಣೆ

ಸ್ಥಿರಾಸ್ತಿ ಭದ್ರತೆ ಹೊಂದಿರುವವರು ಪ್ಯಾನ್, ನಾಮಿನಿ, ಸಂಪರ್ಕ ವಿವರಗಳು, ಬ್ಯಾಂಕ್ ಖಾತೆ ವಿವರಗಳು ಮತ್ತು ಫೋಲಿಯೊ ಸಂಖ್ಯೆಗಳಿಗೆ ಮಾದರಿ ಸಹಿಯನ್ನು ಸಲ್ಲಿಸಲು ಸೆಬಿ ಡಿಸೆಂಬರ್ 31ರವರೆಗೆ ಸಮಯವನ್ನು ನೀಡಿದೆ.

VISTARANEWS.COM


on

Edited by

demat account
Koo

ಹೊಸದಿಲ್ಲಿ: ಡಿಮ್ಯಾಟ್ ಖಾತೆದಾರರು ನಾಮನಿರ್ದೇಶನ (ನಾಮಿನಿ) ಆಯ್ಕೆ ಮಾಡಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡಲು ಗಡುವನ್ನು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ. ಇದಕ್ಕೆ ಡಿಸೆಂಬರ್ ಅಂತ್ಯದವರೆಗೆ ಸಮಯ ನೀಡಿದೆ.

ಈ ಹಿಂದೆ, ಅರ್ಹ ಟ್ರೇಡಿಂಗ್‌ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನದ ಆಯ್ಕೆಯನ್ನು ಒದಗಿಸಲು ಗಡುವು ಸೆಪ್ಟೆಂಬರ್ 30ರವರೆಗೆ ಇತ್ತು. ವ್ಯವಹಾರವನ್ನು ಸುಲಭಗೊಳಿಸುವ ಉದ್ದೇಶದಿಂದ, ಟ್ರೇಡಿಂಗ್‌ ಖಾತೆಗಳಿಗೆ ʼನಾಮನಿರ್ದೇಶನದ ಆಯ್ಕೆ’ ಸಲ್ಲಿಕೆಯನ್ನು ಸ್ವಯಂಪ್ರೇರಿತ ಮಾಡಲಾಗಿದೆ. ಈ ಕ್ರಮವು ಹೂಡಿಕೆದಾರರಿಗೆ ತಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

“ವ್ಯವಹಾರವನ್ನು ಸುಲಭಗೊಳಿಸುವುದಕ್ಕಾಗಿ, ಠೇವಣಿದಾರರು, ದಲ್ಲಾಳಿಗಳ ಸಂಘಗಳು ಮತ್ತು ಇತರ ವಿವಿಧ ಪಾಲುದಾರರಿಂದ ಪಡೆದ ಮಾಹಿತಿಯಂತೆ, ಟ್ರೇಡಿಂಗ್‌ ಖಾತೆಗಳಿಗೆ ನಾಮನಿರ್ದೇಶನದ ಆಯ್ಕೆಯ ಸಲ್ಲಿಕೆಯನ್ನು ಸ್ವಯಂಪ್ರೇರಿತ ಮಾಡಲಾಗಿದೆ. ಡಿಮ್ಯಾಟ್ ಖಾತೆಗಳಿಗೆ ಸಂಬಂಧಿಸಿದಂತೆ ನಾಮಿನಿ ಆಯ್ಕೆ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 31, 2023ಕ್ಕೆ ವಿಸ್ತರಿಸಲಾಗಿದೆ” ಎಂದು ಸೆಬಿ ಸುತ್ತೋಲೆಯಲ್ಲಿ ತಿಳಿಸಿದೆ.

ಸ್ಥಿರಾಸ್ತಿ ಭದ್ರತೆ ಹೊಂದಿರುವವರು ಪ್ಯಾನ್, ನಾಮಿನಿ, ಸಂಪರ್ಕ ವಿವರಗಳು, ಬ್ಯಾಂಕ್ ಖಾತೆ ವಿವರಗಳು ಮತ್ತು ಫೋಲಿಯೊ ಸಂಖ್ಯೆಗಳಿಗೆ ಮಾದರಿ ಸಹಿಯನ್ನು ಸಲ್ಲಿಸಲು ಸೆಬಿ ಡಿಸೆಂಬರ್ 31ರವರೆಗೆ ಸಮಯವನ್ನು ನೀಡಿದೆ.

ಅಸ್ತಿತ್ವದಲ್ಲಿರುವ ಎಲ್ಲಾ ಅರ್ಹ ಟ್ರೇಡಿಂಗ್‌ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಆಯ್ಕೆಯನ್ನು ಒದಗಿಸುವಂತೆ ಜುಲೈ 2021ರಲ್ಲಿ ಸೆಬಿ ಹೇಳಿತ್ತು. ಮಾರ್ಚ್ 31, 2022ರ ಗಡುವು ನೀಡಿತ್ತು. ನಂತರ ಅದನ್ನು ಇನ್ನೂ ಒಂದು ವರ್ಷ ಅಂದರೆ ಮಾರ್ಚ್ 31, 2023ರವರೆಗೆ, ನಂತರ ಮತ್ತೆ ಸೆಪ್ಟೆಂಬರ್ 30, 2023ರವರೆಗೆ ವಿಸ್ತರಿಸಿತು.

ಸೆಬಿ ನಿಯಮಾವಳಿಗಳ ಪ್ರಕಾರ, ಹೊಸ ಹೂಡಿಕೆದಾರರು ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗಳನ್ನು ತೆರೆದಾಗ, ತಮ್ಮ ಸೆಕ್ಯುರಿಟೀಸ್ ನಾಮಿನಿಯನ್ನು ಗೊತ್ತುಪಡಿಸಬೇಕು ಅಥವಾ ಡಿಕ್ಲರೇಶನ್ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ನಾಮನಿರ್ದೇಶನವನ್ನು ಸ್ಪಷ್ಟವಾಗಿ ನಿರಾಕರಿಸಬೇಕು.

ಇದನ್ನೂ ಓದಿ: Demat Account: ಡಿಮ್ಯಾಟ್‌ ಖಾತೆಗೆ ಅಗತ್ಯವಿರುವ ದಾಖಲೆಗಳು

Continue Reading

ದೇಶ

Air India: ಬದಲಾಗಲಿದೆ ಏರ್‌ ಇಂಡಿಯಾ ಸಿಬ್ಬಂದಿ ಸಮವಸ್ತ್ರ; ಸೀರೆ ಬದಲು ಚೂಡಿದಾರ್‌?

Air India: ಏರ್‌ ಇಂಡಿಯಾ (Air India) ವಿಮಾನ ಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಸಮವಸ್ತ್ರ (uniform) ಬದಲಾಗಲಿದೆ. ಸೀರೆ ಬದಲು ಅವರು ಆಧುನಿಕ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Edited by

airindia
Koo

ನವ ದೆಹಲಿ: ಏರ್‌ ಇಂಡಿಯಾ (Air India) ಸಿಬ್ಬಂದಿಯ ಸಮವಸ್ತ್ರ ಇನ್ನು ಮಂದೆ ಬದಲಾಗಲಿದೆ. ಸುಮಾರು 60 ವರ್ಷಗಳ ಕಾಲ ಭಾರತೀಯ ಸಾಂಪ್ರದಾಯಿಕ ಉಡುಪು ಸೀರೆಯಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಇನ್ನು ಮುಂದೆ ಹೊಸ ರೀತಿಯ ಉಡುಗೆ ಸಿಗಲಿದೆ. ವರ್ಷಾಂತ್ಯದಲ್ಲಿ ಸಮವಸ್ತ್ರ (uniform) ಬದಲಾಗಲಿದೆ ಎಂದು ಮೂಲಗಳು ತಿಳಿಸಿವೆ. 6 ದಶಕಗಳ ಕಾಲ ಸೀರೆ ಧರಿಸಿಕೊಂಡು ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದ ಏರ್‌ ಇಂಡಿಯಾ ಸಿಬ್ಬಂದಿ ಇನ್ನು ಮುಂದೆ ಆಧುನಿಕ ಉಡುಗೆ ಮೂಲಕ ಕಾಣಿಸಿಕೊಳ್ಳಲಿರುವುದು ಖಚಿತವಾಗಿದೆ.

ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್‌ ಮಲ್ಹೋತ್ರ ಹೊಸ ಸಮವಸ್ತ್ರದ ವಿನ್ಯಾಸ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ ಅವರು ನಾನ್‌ ಡಿಸ್‌ಕ್ಲೋಷರ್‌ ಅಗ್ರಿಮೆಂಟ್‌ (NDA) ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೀಗಾಗಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದಾಗ್ಯೂ ಹೊಸ ಸಮವಸ್ತ್ರ ಸಾಂಪ್ರದಾಯಿಕವಾಗಿಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳು ಹೇಳಿದ್ದೇನು?

ಸದ್ಯದ ಬೆಳವಣಿಗೆ ಪ್ರಕಾರ ಸೀರೆಯನ್ನು ಸಮವಸ್ತ್ರದ ಪಟ್ಟಿಯಿಂದ ಸಂಪೂರ್ಣ ಹೊರಗಿಡಲಾಗುತ್ತದೆ. ಮಹಿಳೆಯರಿಗೆ ಚೂಡಿದಾರ್‌ ಮತ್ತು ಪುರುಷ ಸಿಬ್ಬಂದಿಗೆ ಸೂಟ್‌ ಸಮವಸ್ತ್ರವಾಗಿ ದೊರೆಯುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ಇನ್ನೊಬ್ಬ ಅಧಿಕಾರಿಯ ಪ್ರಕಾರ, ಸೀರೆಯನ್ನು ಸಂಪೂರ್ಣವಾಗಿ ಸಮವಸ್ತ್ರದಿಂದ ಹೊರಗಿಡಲಾಗುವುದಿಲ್ಲವಂತೆ. “ವಿಮಾನಯಾನ ಸಂಸ್ಥೆಗೆ ಸಮವಸ್ತ್ರವಾಗಿ ವಿವಿಧ ಆಯ್ಕೆಗಳನ್ನು ನೀಡಲಾಯಿತು. ಅದರಲ್ಲಿ ಸೀರೆಯಂತೆ ಕಾಣುವ ಆದರೆ ಸಾಂಪ್ರದಾಯಿಕ ಸೀರೆಗಳಿಗಿಂತ ಭಿನ್ನವಾದ ಸೀರೆಗಳಿಗೆ ಒಪ್ಪಿಗೆ ಸೂಚಿಸಿತ್ತು. ಆದಾಗ್ಯೂ, ಅವುಗಳನ್ನು ಆಡಳಿತ ಮಂಡಳಿ ಅಂತಿಮಗೊಳಿಸಿಲ್ಲʼʼ ಎಂದು ಅವರು ತಿಳಿಸಿದ್ದಾರೆ.

ಹೊಸ ಸಮವಸ್ತ್ರ ಸೀರೆ ಅಭಿಮಾನಿಗಳಿಗೆ ಬೇಸರ ಮೂಡಿಸುವ ಸಾಧ್ಯತೆ ಇದೆ. 1962ರ ತನಕ ವಿಮಾನ ಸಿಬ್ಬಂದಿ ಸ್ಕರ್ಟ್‌, ಜಾಕೆಟ್‌ ಮತ್ತು ಹ್ಯಾಟ್‌ ಧರಿಸುತ್ತಿದ್ದರು. ದಿ. ಜೆ.ಆರ್‌.ಡಿ. ಟಾಟಾ ಸೀರೆಯನ್ನು ಸಮವಸ್ತ್ರವಾಗಿಸುವ ಬಗ್ಗೆ ಪ್ರಸ್ತಾವ ಮಂಡಿಸಿದ್ದರು. ಬಳಿಕ ಇದನ್ನು ಅಂಗೀಕರಿಸಲಾಯಿತು. ಆರಂಭದಲ್ಲಿ ಸೀರೆಗಳನ್ನು ಬಿನ್ನಿ ಮಿಲ್‌ನಿಂದ ಪಡೆದುಕೊಳ್ಳಲಾಗಿತ್ತು.

ಸಮವಸ್ತ್ರ ಬದಲಾವಣೆ ಬಗ್ಗೆ ನಿವೃತ್ತ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, ನಮಗೆ ಆರಂಭಿಕ ದಿನಗಳಲ್ಲಿ ಸೀರೆಯನ್ನು ಹೇಗೆ ಧರಿಸುವುದು ಎಂದು ಹೇಳಿಕೊಟ್ಟಿದ್ದರು. ಬಳಿಕ ಸೀರೆಯಲ್ಲಿ ಕೆಲಸ ನಿರ್ವಹಿಸಲು ಖುಷಿಯಾಗುತ್ತಿತ್ತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಯಾವ ಬಣ್ಣ?

ಸದ್ಯದ ಮಾಹಿತಿ ಪ್ರಕಾರ ಹೊಸ ಸಮವಸ್ತ್ರದ ಬಣ್ಣ ವಿಮಾನದ ಬಣ್ಣವಾದ ಕಡುಗೆಂಪು, ಹಳದಿ(ಚಿನ್ನದ ಬಣ್ಣ)ಯಲ್ಲಿರಲಿದೆ. ವಿಲೀನದ ನಂತರ, ವಿಸ್ತಾರ ಕ್ಯಾಬಿನ್ ಸಿಬ್ಬಂದಿಯ ಉಡುಗೆಯೂ ಏರ್ ಇಂಡಿಯಾ ಸಿಬ್ಬಂದಿಯಂತೆಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್;‌ ಮಣಿಪುರ ಮತ್ತೆ ಉದ್ವಿಗ್ನ?

ವಿಮಾನಯಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಕ್ಯಾಂಪ್ಬೆಲ್ ವಿಲ್ಸನ್, ಆಗಸ್ಟ್ 10ರಂದು ನಡೆದ ಮರುನಾಮಕರಣ ಕಾರ್ಯಕ್ರಮದಲ್ಲಿ, ವಿಮಾನಯಾನದ ಹೊಸ ಉಡುಗೆಯನ್ನು ಮೊದಲು ಎ 350 ವಿಮಾನದಲ್ಲಿ ಪರಿಚಯಿಸಲಾಗುವುದು ಎಂದು ಘೋಷಿಸಿದ್ದರು. ನವೆಂಬರ್‌ನಲ್ಲಿ ಈ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ತಿಳಿಸಿವೆ.

Continue Reading

ಪ್ರಮುಖ ಸುದ್ದಿ

₹2000 Notes Withdrawn: ನಿಮ್ಮ ಬಳಿ ₹2000 ನೋಟು ಇನ್ನೂ ಇದೆಯಾ? ಕೊನೆಯ ಕ್ಷಣದ ಗೊಂದಲದಿಂದ ಪಾರಾಗಲು ಈಗಲೇ ಮರಳಿಸಿ

ಸೆಪ್ಟೆಂಬರ್ 30 ನೋಟು ವಿನಿಮಯಕ್ಕೆ ಅಂತಿಮ ದಿನವಾಗಿದೆ. ಅಂತಿಮ ದಿನಾಂಕಕ್ಕೆ ಇನ್ನು ನಾಲ್ಕು ದಿನಗಳು ಉಳಿದಿವೆ. ನಿಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವಂತೆ ಆರ್‌ಬಿಐ ಸೂಚಿಸಿದೆ.

VISTARANEWS.COM


on

Edited by

2000 Notes Withdrawn
Koo

ಹೊಸದಿಲ್ಲಿ: ₹2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗೆ ಮರಳಿಸುವ (₹2000 Notes Withdrawn) ಅಂತಿಮ ಗಡುವು ಸಮೀಪಿಸುತ್ತಿದೆ. ನಿಮ್ಮ ಬಳಿ ₹2000 ನೋಟುಗಳಿದ್ದರೆ, ಕೊನೆಯ ಕ್ಷಣದ ಗೊಂದಲಗಳಿಂದ ಪಾರಾಗಲು ಈಗಲೇ ಬ್ಯಾಂಕ್‌ಗೆ ಹೋಗಿ ಅವುಗಳನ್ನು ವಿನಿಮಯ ಮಾಡಿಕೊಳ್ಳುವುದು ಉತ್ತಮವೆಂದು ಸೂಚಿಸಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಲಾವಣೆಯಲ್ಲಿರುವ 2,000 ರೂ ನೋಟುಗಳನ್ನು ಸ್ಥಗಿತಗೊಳಿಸುವ ಬಗ್ಗೆ 2023ರ ಮೇ 19ರಂದು ಘೋಷಣೆ ಮಾಡಿತು. ಸೆಪ್ಟೆಂಬರ್ 30 ನೋಟು ವಿನಿಮಯಕ್ಕೆ ಅಂತಿಮ ದಿನವಾಗಿದೆ. ಅಂತಿಮ ದಿನಾಂಕಕ್ಕೆ ಇನ್ನು ನಾಲ್ಕು ದಿನಗಳು ಉಳಿದಿವೆ. ನಿಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವಂತೆ ಆರ್‌ಬಿಐ ಸೂಚಿಸಿದೆ.

ಬದಲಿಸುವ ಕ್ರಮ ಹೇಗೆ?

2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯ ಸೆಪ್ಟೆಂಬರ್ 30ರವರೆಗೆ ಲಭ್ಯವಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಈ ವಹಿವಾಟನ್ನು ಕೈಗೊಳ್ಳಬಹುದು. ಸೆಪ್ಟೆಂಬರ್ 30ರವರೆಗೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ರೂ 2,000 ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಇವನ್ನು ನೀಡಿ ಬೇರೆ ನೋಟು ಪಡೆದುಕೊಳ್ಳಬಹುದು.

ಬ್ಯಾಂಕ್ ಶಾಖೆಗಳ ಸಾಮಾನ್ಯ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗುವಿಕೆ ಕಡಿಮೆಯಾಗುವಂತೆ ಈ ಉಪಕ್ರಮ ವಿನ್ಯಾಸಗೊಳಿಸಲಾಗಿದೆ. ನೀವು ಎಕ್ಸ್‌ಚೇಂಜ್‌ ಮಾಡಬಹುದಾದ ನೋಟುಗಳ ಗರಿಷ್ಠ ಮೌಲ್ಯ 20,000 ರೂ. ಬ್ಯಾಂಕ್ ಖಾತೆಗೆ ರೂ 2,000 ನೋಟುಗಳನ್ನು ಠೇವಣಿ ಮಾಡುವಾಗ KYC ಮಾನದಂಡಗಳನ್ನು ಅನುಸರಿಸುವುದು ಮತ್ತು ಇತರ ಕಾನೂನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಠೇವಣಿ ಮಾಡುವುದಕ್ಕೆ ಯಾವುದೇ ಯಾವುದೇ ನಿರ್ದಿಷ್ಟ ಠೇವಣಿ ಮಿತಿ ಇಲ್ಲ ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ. ಆದರೆ ಕೆಲವು ಶಾಸನಬದ್ಧ ಅವಶ್ಯಕತೆಗಳು ಅನ್ವಯಿಸುತ್ತವೆ. ನೋಟುಗಳನ್ನು ಸಾಮಾನ್ಯ ಸೇವಿಂಗ್ಸ್ ಬ್ಯಾಂಕ್ ಠೇವಣಿ (BSBD) ಅಥವಾ ಜನ್‌ಧನ್ ಖಾತೆಗೆ ಠೇವಣಿ ಮಾಡುವಾಗ, ಸಾಮಾನ್ಯ ಮಿತಿಗಳು ಜಾರಿಯಲ್ಲಿರುತ್ತವೆ. 50,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವ ವ್ಯಕ್ತಿಗಳು ಆದಾಯ ತೆರಿಗೆ ನಿಯಮಗಳ ನಿಯಮ 114B ಅನ್ನು ಅನುಸರಿಸಬೇಕು. ಇದಕ್ಕೆ ಪ್ಯಾನ್ ಸಂಖ್ಯೆಯನ್ನು ಒದಗಿಸುವ ಅಗತ್ಯವಿದೆ. ಒಂದೇ ದಿನದಲ್ಲಿ ರೂ 50,000ಕ್ಕಿಂತ ಕಡಿಮೆ ಮೊತ್ತಕ್ಕೆ ಠೇವಣಿ ಮಾಡಿದರೆ ಪ್ಯಾನ್ ಸಂಖ್ಯೆಯನ್ನು ಉಲ್ಲೇಖಿಸುವುದು ಕಡ್ಡಾಯವಲ್ಲ.

ಸೆ.30ರ ನಂತರ ಏನಾಗುತ್ತದೆ?

ಸೆ.30ರ ನಂತರವೂ ಈ ನೋಟುಗಳನ್ನು ನಿಮ್ಮಲ್ಲಿ ಉಳಿಸಿಕೊಂಡಿದ್ದರೆ ಅದೇನೂ ಅಪರಾಧವಲ್ಲ. ಆಗಲೂ ಈ ನೋಟು ಕಾನೂನುಬದ್ಧವಾಗಿಯೇ ಉಳಿದಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಇದನ್ನು ಬಳಸಲು ಸಾಧ್ಯವಿಲ್ಲ. ಆರ್‌ಬಿಐ ಅದನ್ನು ಮರಳಿ ಪಡೆಯುತ್ತದೆ. ಆದರೆ ನಿರ್ದಿಷ್ಟ ಗಡುವಿನ ಒಳಗೆ ನೀವು ಯಾಕೆ ಅದನ್ನು ಮರಳಿಸಿಲ್ಲ ಎಂಬ ವಿವರಣೆಯನ್ನು ನೀಡಬೇಕಾಗುತ್ತದೆ.
ಆದರೆ ಅದರ ನಂತರ ನೀವಿ

ಎಷ್ಟು ನೋಟು ಬಂದಿದೆ?

RBI ಒದಗಿಸಿದ ಮಾಹಿತಿಯ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳಲ್ಲಿ ಸರಿಸುಮಾರು 93 ಪ್ರತಿಶತದಷ್ಟು ಬ್ಯಾಂಕ್‌ಗಳಿಗೆ ಮರಳಿದೆ. ಆಗಸ್ಟ್ 31, 2023ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾದ 2,000 ರೂ. ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ. 0.24 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಉಳಿದಿವೆ.

ಇದನ್ನೂ ಓದಿ: ₹2000 Notes Withdrawn: ಪಿಂಕ್‌ ನೋಟು ಮರಳಿಸಲು ಇನ್ನು ಐದೇ ದಿನ ಅವಕಾಶ; ನಿಮ್ಮಲ್ಲಿ ಇನ್ನೂ ಇದೆಯಾ?

Continue Reading

ದೇಶ

Interest Rates: ಈ ವಾರ ಬದಲಾಗಲಿದೆ ಉಳಿತಾಯ ಖಾತೆ ಬಡ್ಡಿ ದರ; ತಜ್ಞರು ಹೇಳೋದೇನು?

Interest Rates: ಈ ವಾರ ಸಣ್ಣ ಉಳಿತಾಯ ಖಾತೆಗಳ (small savings schemes) ಬಡ್ಡಿ ದರ (Interest Rates) ಪರಿಷ್ಕರಣೆಯಾಗಲಿದೆ. ಬಡ್ಡಿ ದರ ಯಥಾ ಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ.

VISTARANEWS.COM


on

Edited by

savings
Koo

ನವ ದೆಹಲಿ: 2023ರ ಅಕ್ಟೋಬರ್‌-ಡಿಸೆಂಬರ್‌ ತ್ರೈ ಮಾಸಿಕದ (October-December 2023 quarter) ಪಿಪಿಎಫ್‌(PPF), ಎನ್‌ಎಸ್‌ಸಿ(NSC), ಕೆವಿಪಿ(KVP) ಮತ್ತು ಪೋಸ್ಟ್‌ ಆಫೀಸ್‌(Post office) ಮುಂತಾದ ಸಣ್ಣ ಉಳಿತಾಯ ಯೋಜನೆಗಳ(small savings schemes) ಹೂಡಿಕೆ ಮೇಲಿನ ಬಡ್ಡಿದರಗಳ ಪರಿಷ್ಕರಣೆ ಸೆಪ್ಟೆಂಬರ್‌ 30ರಂದು ನಡೆಯಲಿದೆ. ಹಿಂದಿನ ತ್ರೈಮಾಸಿಕ(ಜುಲೈ-ಸೆಪ್ಟೆಂಬರ್ 2023)ದ ದರವನ್ನು ಜಿ-ಸೆಕ್ ಇಳುವರಿಯ ಆಧಾರದ ಮೇಲೆ ನಿರ್ಧರಿಸಲಾಗುವುದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಈ ಬಾರಿ ಬದಲಾಯಿಸುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಸಾಮಾನ್ಯವಾಗಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹಿಂದಿನ ತ್ರೈ ಮಾಸಿಕದ ಟ್ರೆಂಡ್‌ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.

ತಜ್ಞರು ಏನು ಹೇಳುತ್ತಾರೆ?

ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ ಮತ್ತು ಅದಕ್ಕನುಗುಣವಾಗಿ ಮುಂದಿನ ತ್ರೈ ಮಾಸಿಕ ದರವನ್ನು ನಿರ್ಧರಿಸಲಾಗುತ್ತದೆ. 10 ವರ್ಷಗಳ ಜಿ-ಸೆಕ್ ಶೇಕಡಾ 7.0 ರಿಂದ 7.2ರ ನಡುವೆ ಇದೆ ಮತ್ತು ಮುಂದೆ ಶೇಕಡಾ 7.1-7.2ರಷ್ಟು ಮುಂದುವರಿಯುವ ನಿರೀಕ್ಷೆಯಿದೆ. ಈ ವರ್ಷದ ಸೆಪ್ಟಂಬರ್ ನಂತರ ಹಣದುಬ್ಬರ ದರವು ಶೇಕಡಾ 5-6ರ ಆಸುಪಾಸಿನಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಬದಲಾಗುವ ಸಾಧ್ಯತೆ ಇಲ್ಲ ಎಂದು ಆರ್ಥಿಕ ಪರಿಣತರು ಹೇಳಿದ್ದಾರೆ.

ಪ್ರಸಕ್ತ ಬಡ್ಡಿ ದರ ಎಷ್ಟಿದೆ?

ಪ್ರಸ್ತುತ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರಗಳ ವಿವರ ನೋಡುವುದಾದರೆ, ವಾರ್ಷಿಕವಾಗಿ ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಗಳಿಗೆ 4%, ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌-SCSSಗೆ 8.2% ಮತ್ತು ಸಾರ್ವಜನಿಕ ಭವಿಷ್ಯ ನಿಧಿ-PPFಗೆ 7.1% ಬಡ್ಡಿ ದರವಿದೆ.

ಹಣಕಾಸು ಸಚಿವಾಲಯವು ಅಕ್ಟೋಬರ್-ನವೆಂಬರ್ ತ್ರೈಮಾಸಿಕದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳ ಬಡ್ಡಿದರವನ್ನು 2023ರ ಸೆಪ್ಟಂಬರ್ ವೇಳೆಗೆ ವಾರ್ಷಿಕವಾಗಿ ಶೇಕಡಾ 7.10ಕ್ಕೆ ಉಳಿಸಿಕೊಳ್ಳಬಹುದು ಎಂಬ ಸಲಹೆ ವ್ಯಕ್ತವಾಗಿದೆ.

ಕಳೆದ ವರ್ಷದಲ್ಲಿ ದರ ಏರಿಕೆಯೊಂದಿಗೆ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪ್ರಸ್ತುತ ದೀರ್ಘಾವಧಿಯ ಸ್ಥಿರ ಠೇವಣಿ(FD)ಗಳಿಗೆ ಸಮಾನವಾಗಿವೆ ಎಂದು ಬ್ಯಾಂಕಿಂಗ್‌ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಏಪ್ರಿಲ್‌ನಿಂದ ದರ ಏರಿಕೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ ಜಾಗತಿಕವಾಗಿ ಹಣದುಬ್ಬರವು ನಿಧಾನವಾಗಿ ಕಡಿಮೆಯಾಗುತ್ತಿರುವುದರಿಂದ ರೆಪೊ ದರವು ಇದೇ ರೀತಿ ಮುಂದುವರಿಯುವ ನಿರೀಕ್ಷೆಯಿದೆ. ಆದ್ದರಿಂದ ಹೆಚ್ಚಿನ ಪರಿಷ್ಕರಣೆಗೆ ಯಾವುದೇ ಸಾಧ್ಯತೆ ಇಲ್ಲ. ಜೊತೆಗೆ SCSSನಲ್ಲಿ ಗಮನಾರ್ಹ ದರ ಏರಿಕೆಯ ಸಾಧ್ಯತೆಗಳು ಕಡಿಮೆ ಎಂದೂ ಅವರು ಹೇಳಿದ್ದಾರೆ.

ಜೂನ್‌ 30, 2023ರಲ್ಲಿ ಸರ್ಕಾರ ಅನೇಕ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹೆಚ್ಚಿಸಿತ್ತು. 2020-21ರ ಎರಡನೇ ತ್ರೈ ಮಾಸಿಕದಿಂದ 2022-23ರ ಎರಡನೇ ತ್ರೈಮಾಸಿಕದವರೆಗೆ ಸತತ ಒಂಬತ್ತು ತ್ರೈ ಮಾಸಿಕಗಳಲ್ಲಿ ಯಾವುದೇ ಬದಲಾವಣೆಯಾಗದ ನಂತರ, ಅಕ್ಟೋಬರ್-ಡಿಸೆಂಬರ್ 2022ರ ತ್ರೈಮಾಸಿಕದಲ್ಲಿ ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ ಇದು ನಾಲ್ಕನೇ ಹೆಚ್ಚಳವಾಗಿತ್ತು.

ಸದ್ಯದ ಬಡ್ಡಿ ದರಗಳ ವಿವರ

ಜುಲೈ ಮತ್ತು ಸೆಪ್ಟೆಂಬರ್‌ 2023ರ ತ್ರೈ ಮಾಸಿಕದಲ್ಲಿರುವ ಬಡ್ಡಿ ದರಗಳ ವಿವರ ಇಲ್ಲಿದೆ.

  • ಉಳಿತಾಯ ಠೇವಣಿ-4%
  • 1 ವರ್ಷದ ಪೋಸ್ಟ್‌ ಆಫೀಸ್‌ ಠೇವಣಿ-6.9%
  • 1 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌-6.9%
  • 2 ವರ್ಷದ ಪೋಸ್ಟ್‌ ಆಫೀಸ್‌ ಡೆಪಾಸಿಟ್-‌ 7.0%
  • 3 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌-7%
  • 5 ವರ್ಷದ ಪೋಸ್ಟ್‌ ಆಫೀಸ್‌ ಡೆಪಾಸಿಟ್-7.5‌%
  • 5 ವರ್ಷದ ರಿಕರಿಂಗ್‌ ಡೆಪಾಸಿಟ್‌-6.5%
  • ನ್ಯಾಷನಲ್‌ ಸೇವಿಂಗ್‌ ಸರ್ಟಿಫಿಕೆಟ್ಸ್‌(NCS)-7.7%
  • ಕಿಸಾನ್‌ ವಿಕಾಸ್‌ ಪತ್ರ: 7.5%(ಇದು 115 ತಿಂಗಳಲ್ಲಿ ಮೆಚ್ಯುರ್‌ ಆಗಲಿದೆ)
  • ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌-7.1%
  • ಸುಕನ್ಯಾ ಸಮೃದ್ದಿ ಖಾತೆ- 8.0%
  • ಸೀನಿಯರ್‌ ಸಿಟಿಸನ್‌ ಸೇವಿಂಗ್‌ ಸ್ಕೀಮ್‌-8.2%
  • ಮಾಸಿಕ ಆದಾಯ ಖಾತೆ-7.4%

ಸಣ್ಣ ಉಳಿತಾಯ ಯೋಜನೆಗಳಲ್ಲಿ 3 ವಿಧಗಳಿವೆ – ಉಳಿತಾಯ ಠೇವಣಿ, ಸಾಮಾಜಿಕ ಭದ್ರತಾ ಯೋಜನೆ ಮತ್ತು ಮಾಸಿಕ ಆದಾಯ ಯೋಜನೆ. ಉಳಿತಾಯ ಠೇವಣಿಗಳಲ್ಲಿ 1-3 ವರ್ಷಗಳ ಟೈಮ್ ಡೆಪಾಸಿಟ್ ಮತ್ತು 5 ವರ್ಷಗಳ ರಿಕರಿಂಗ್ ಡಿಪಾಸಿಟ್ ಗಳು ಸೇರಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಮಾಸಿಕ ಆದಾಯ ಯೋಜನೆ ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿದೆ.

ಇದನ್ನೂ ಓದಿ: Server Hack : ಆಸ್ತಿ ನೋಂದಣಿಗಾಗಿ ರಿಜಿಸ್ಟ್ರಾರ್ ಕಚೇರಿಗೆ ಹೋದವರ ಬ್ಯಾಂಕ್ ಖಾತೆಯಿಂದ ಹಣ ಮಾಯ!

Continue Reading
Advertisement
Kolara MP Muniswamy complaint to governor of Karnataka
ಕರ್ನಾಟಕ6 mins ago

MP Muniswamy : ಸಚಿವ ಬೈರತಿ, ಶಾಸಕ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಸಂಸದ ಮುನಿಸ್ವಾಮಿ

Nepal Team
ಕ್ರಿಕೆಟ್18 mins ago

Asian Games 2023 : ಏಷ್ಯನ್ ಗೇಮ್ಸ್​ನಲ್ಲಿ ನೇಪಾಳ ತಂಡ ಸೃಷ್ಟಿಸಿದ ಮಾಡಿದ ದಾಖಲೆಗಳ ವಿವರ ಇಲ್ಲಿದೆ

Malayalam Film 2018
South Cinema22 mins ago

Oscars 2024: ‘ಆಸ್ಕರ್‌’ಗೆ ಪ್ರವೇಶ ಪಡೆದ ಮಲಯಾಳಂ ಸಿನಿಮಾ; ನೀವೂ ಇದನ್ನು ನೋಡಿರುತ್ತೀರಿ!

Mulayam Singh Yadav Statue
ದೇಶ29 mins ago

Mulayam Singh Yadav: ಮುಲಾಯಂ ಸಿಂಗ್‌ ಮೂರ್ತಿ ತೆರವು; ಯೋಗಿ ನಾಡಲ್ಲಿ ರೂಲ್ಸ್‌ ಎಂದರೆ ರೂಲ್ಸ್!

Parineeti Chopra with Raghav
ಬಾಲಿವುಡ್31 mins ago

Parineeti Chopra: ‘ಓ ಪ್ರಿಯಾ’; ಪತಿಗಾಗಿ ವಿಶೇಷ ಹಾಡು ರೆಕಾರ್ಡ್‌ ಮಾಡಿದ ಪರಿಣಿತಿ ಚೋಪ್ರಾ!

demat account
ಮನಿ ಗೈಡ್31 mins ago

Demat Account: ಡಿಮ್ಯಾಟ್ ಖಾತೆದಾರರಿಗೆ ಗುಡ್‌ ನ್ಯೂಸ್:‌ ನಾಮಿನಿ ಘೋಷಣೆಗೆ ಸಮಯ ವಿಸ್ತರಣೆ

HD Kumaraswamy Press meet vs congress government
ಕರ್ನಾಟಕ37 mins ago

BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್‌: ಎಚ್.ಡಿ. ಕುಮಾರಸ್ವಾಮಿ ಕಿಡಿ

ODI AUS
Live News56 mins ago

ind vs Aus : ಆಸ್ಟ್ರೇಲಿಯಾ ತಂಡದ ಮೊದಲ ವಿಕೆಟ್​ ಪತನ, ಡೇವಿಡ್ ವಾರ್ನರ್​ 56 ರನ್​ಗೆ ಔಟ್​​

Madhya Pradesh Rape News
ಕ್ರೈಂ1 hour ago

ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!

CM siddaramaiah at Chamarajanagar
ಕರ್ನಾಟಕ1 hour ago

CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

bangalore bandh
ಕರ್ನಾಟಕ1 day ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

dina bhavishya
ಪ್ರಮುಖ ಸುದ್ದಿ9 hours ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ2 days ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌