ITR Filing: ಐಟಿ ರಿಟರ್ನ್ಸ್‌ ಗಡುವು ವಿಸ್ತರಣೆ ಇಲ್ಲ, ಕೊನೇ ಕ್ಷಣದಲ್ಲಿ ಪೋರ್ಟಲ್‌ ಕ್ರ್ಯಾಶ್;‌ ಇನ್ಫೋಸಿಸ್‌ ವಿರುದ್ಧ ಆಕ್ರೋಶ! - Vistara News

ವಾಣಿಜ್ಯ

ITR Filing: ಐಟಿ ರಿಟರ್ನ್ಸ್‌ ಗಡುವು ವಿಸ್ತರಣೆ ಇಲ್ಲ, ಕೊನೇ ಕ್ಷಣದಲ್ಲಿ ಪೋರ್ಟಲ್‌ ಕ್ರ್ಯಾಶ್;‌ ಇನ್ಫೋಸಿಸ್‌ ವಿರುದ್ಧ ಆಕ್ರೋಶ!

ITR Filing: ಐಟಿಆರ್‌ಗೆ ಬುಧವಾರವೇ ಕೊನೇ ದಿನವಾದ ಕಾರಣ ಹೆಚ್ಚಿನ ಜನರು ಐಟಿಆರ್‌ ಸಲ್ಲಿಕೆಗೆ ಮುಂದಾಗಿದ್ದು, ವೆಬ್‌ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಜನರು, ಲೆಕ್ಕಪರಿಶೋಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಟಿಆರ್‌ ಸಲ್ಲಿಕೆಯ ಕೊನೆಯ ದಿನದಂದು ಪೋರ್ಟಲ್‌ನಲ್ಲಿ ಲೋಡಿಂಗ್‌ ಸಮಸ್ಯೆಯಾಗುತ್ತಿದೆ ಎಂದೆಲ್ಲ ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

ITR Filing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್‌ (ITR Filing) ಸಲ್ಲಿಸದವರು ಕುತೂಹಲದಿಂದ ಕಾಯುತ್ತಿದ್ದ ದಿನವು ಮುಕ್ತಾಯಗೊಂಡಿದ್ದು, ಐಟಿಆರ್‌ ಸಲ್ಲಿಕೆಯ ಗಡುವನ್ನು ವಿಸ್ತರಣೆ ಮಾಡದ ಹಿನ್ನೆಲೆಯಲ್ಲಿ ಅವರಿಗೆ ನಿರಾಸೆಯಾಗಿದೆ. ಬುಧವಾರ (ಜುಲೈ 31) ಸಂಜೆಯಾದರೂ ಕೇಂದ್ರ ಹಣಕಾಸು ಸಚಿವಾಲಯವು ಐಟಿಆರ್‌ ಸಲ್ಲಿಕೆಯ ಗಡುವು (ITR Filing Deadline) ವಿಸ್ತರಣೆ ಮಾಡದ ಕಾರಣ ಜನರಿಗೆ ನಿರಾಸೆಯಾಯಿತು. ಇನ್ನು, ಐಟಿಆರ್‌ಗೆ ಬುಧವಾರವೇ ಕೊನೇ ದಿನವಾದ ಕಾರಣ ಹೆಚ್ಚಿನ ಜನರು ಐಟಿಆರ್‌ ಸಲ್ಲಿಕೆಗೆ (Income Tax Returns) ಮುಂದಾಗಿದ್ದು, ವೆಬ್‌ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಜನರು, ಲೆಕ್ಕಪರಿಶೋಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋರ್ಟಲ್‌ನಲ್ಲಿ ಏನು ದೋಷ?

ಸಿಎ ನಿಖಿತಾ ಕೋಲ್ತೆ-ಗೋರೆ ಎಂಬುವರು ಐಟಿಆರ್‌ ಸಲ್ಲಿಕೆಯ ವೆಬ್‌ ಪೋರ್ಟಲ್‌ನಲ್ಲಿ ಸಮಸ್ಯೆಯಾಗಿದ್ದನ್ನು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಐಟಿಆರ್‌ ಸಲ್ಲಿಕೆಯ ಕೊನೆಯ ದಿನದಂದು ಪೋರ್ಟಲ್‌ನಲ್ಲಿ ಲೋಡಿಂಗ್‌ ಸಮಸ್ಯೆಯಾಗುತ್ತಿದೆ. ವೆಬ್‌ ಪೋರ್ಟಲ್‌ನಲ್ಲಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಮುಂದಿನ ವರ್ಷವಾದರೂ ತೆರಿಗೆ ಪಾವತಿದಾರರು ಸುಲಭವಾಗಿ ಐಟಿಆರ್‌ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಬೇಕು” ಎಂದಿದ್ದಾರೆ. ಇವರು ವೆಬ್‌ ಪೋರ್ಟಲ್‌ ಅಭಿವೃದ್ಧಿ ಪಡಿಸಿರುವ ಇನ್ಫೋಸಿಸ್‌ಅನ್ನೂ ಟ್ಯಾಗ್‌ ಮಾಡಿದ್ದಾರೆ.

ಇನ್ಫೋಸಿಸ್‌ ವಿರುದ್ಧ ಆಕ್ರೋಶ

“ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಪ್ರತಿಬಾರಿ ಪ್ರಯತ್ನಿಸಿದಾಗಲೂ ‘Something Went Wrong’ ಎಂಬ ಪ್ರತಿಕ್ರಿಯೆ ಬರುತ್ತಿದೆ. ಐಟಿಆರ್‌ ಸಲ್ಲಿಕೆಯ ಪೋರ್ಟಲ್‌ಗಾಗಿ ಇನ್ಫೋಸಿಸ್‌ಗೆ 4,200 ಕೋಟಿ ರೂ. ನೀಡುತ್ತಿರುವುದು ನಿಜವಾಗಿಯೂ ವೇಸ್ಟ್”‌ ಎಂದು ಸಿಎ ಅನಂತ್‌ ಸೆಖ್ಸಾರಿಯಾ ತಿಳಿಸಿದ್ದಾರೆ.

6.5 ಕೋಟಿ ಐಟಿಆರ್‌ ಸಲ್ಲಿಕೆ

ಜುಲೈ 31ರವರೆಗೆ 6.5 ಕೋಟಿ ಐಟಿಆರ್‌ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. 2023-24ನೇ ಸಾಲಿನಲ್ಲಿ ಜುಲೈ 30ರವರೆಗೆ ಸಲ್ಲಿಕೆಯಾದ ಐಟಿಆರ್‌ಗಳಿಗಿಂತ ಶೇ.7.5ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಎಷ್ಟು ದಂಡ?

ಜುಲೈ 31ರ ಗಡುವಿನ ನಂತರ ಐಟಿಆರ್ ಸಲ್ಲಿಸುವವರು ದಂಡ ಪಾವತಿಸಬೇಕಾಗುತ್ತದೆ. ನಿವ್ವಳ ತೆರಿಗೆಯ ಆದಾಯವು 5 ಲಕ್ಷ ರೂ. ವರೆಗೆ ಇದ್ದರೆ ತಡವಾಗಿ ತೆರಿಗೆ ರಿಟರ್ನ್‌ಗೆ ಗರಿಷ್ಠ ದಂಡ 1,000 ರೂ ಆಗಿದೆ. 5 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು 5,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಪ್ರಕಾರ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಾದರೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಇನ್ವೆಸ್ಟ್ ಕರ್ನಾಟಕ

Invest Karnataka: ಸನ್ಸೇರಾ ಕಂಪನಿಯಿಂದ ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ; ರಾಮನಗರದಲ್ಲಿ ಘಟಕ

Invest Karnataka: ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ ರೂ.2,100 ಕೋಟಿ ಹೂಡಲಿದೆ. ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆಗೆ ಅಂಕಿತ ಹಾಕಲಾಯಿತು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

2100 crore rupees investment in the state by Sunsera Company; Sign the agreement
Koo

ಬೆಂಗಳೂರು: ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ ರೂ. 2,100 ಕೋಟಿ ಹೂಡಲಿದೆ (Invest Karnataka). ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಖನಿಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 3,500 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದರು.

ಕಂಪನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಅನುಕೂಲ ಆಗಲಿದೆ ಎಂದರು.

ಇದನ್ನೂ ಓದಿ: FASTag new rule: ಫಾಸ್ಟ್‌ಟ್ಯಾಗ್‌ ಬಳಕೆದಾರರೇ ಗಮನಿಸಿ; ನಾಳೆಯಿಂದ ಹೊಸ ನಿಯಮ ಜಾರಿ!

ಕಂಪನಿಯು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಕೇಂದ್ರ ಆರಂಭಿಸಲಿದ್ದು, ಇದರಿಂದ ಸ್ಥಳೀಯರ ಕೌಶಲ ವೃದ್ಧಿಯಾಗಲಿದೆ. ಕಂಪನಿಯು ದೇಶದಲ್ಲಿ 16 ತಯಾರಿಕಾ ಘಟಕಗಳನ್ನು ಹೊಂದಿದ್ದು, ಅವುಗಳ ಪೈಕಿ 12 ಘಟಕಗಳು ರಾಜ್ಯದಲ್ಲೇ ಇವೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್‌.ಆರ್‌. ಸಿಂಘ್ವಿ, ಕಾರ್ಯದರ್ಶಿ ರಾಜೇಶ್‌ ಮೋದಿ ಉಪಸ್ಥಿತರಿದ್ದರು.

ಓಟಿಸ್ ಕಂಪನಿಯಿಂದ ರೂ.135 ಕೋಟಿ ಹೂಡಿಕೆ

ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ 135 ಕೋಟಿ ರೂಪಾಯಿ ಹೂಡಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವಾಗಿ ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಿದರು.

ಇದನ್ನೂ ಓದಿ: Kannada New Movie: ರೆಟ್ರೋ ಸ್ಟೈಲ್‌ನಲ್ಲಿ ಮೂಡಿಬಂದ ʼಹೇಳು ಗೆಳತಿʼ; ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ

ಇದಕ್ಕಾಗಿ ಕಂಪನಿಯು ಹಾರೋಹಳ್ಳಿಯಲ್ಲಿ 12 ಎಕರೆ ಭೂಮಿಯನ್ನು ಕೇಳಿದ್ದು, ಇದನ್ನು ಒದಗಿಸಲಾಗುವುದು. ಇದರಿಂದ 200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

Continue Reading

ಮನಿ-ಗೈಡ್

Money Guide: PPF v/s NPS Vatsalya ನಿಮ್ಮ ಮಕ್ಕಳಿಗೆ ಯಾವುದು ಉತ್ತಮ ಯೋಜನೆ? ಇಲ್ಲಿದೆ ವಿವರ

Money Guide: ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ ಮತ್ತು ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು ಆರಂಭಿಸಿದೆ. ಇವೆರಡು ಯೋಜನೆಗಳ ವೈಶಿಷ್ಟ್ಯ, ಯೋಜನೆ ನಡುವಿನ ವ್ಯತ್ಯಾಸ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಮಕ್ಕಳ ಜೀವನ, ಭವಿಷ್ಯ ಉತ್ತಮವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸು. ಈ ಕನಸು ನನಸಾಗಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಪ್ರಸ್ತುತ ಹೆಚ್ಚುತ್ತಿರುವ ಜೀವನ ವೆಚ್ಚ, ದುಬಾರಿಯಾಗುತ್ತಿರುವ ಶಿಕ್ಷಣ ಮುಂತಾದ ಕಾರಣಗಳಿಂದ ಇದಕ್ಕಾಗಿ ಈಗಲೇ ಒಂದಷ್ಟು ಯೋಜನೆ ರೂಪಿಸಬೇಕಾಗುತ್ತದೆ. ಜತೆಗೆ ಅವರ ನಿವೃತ್ತಿ ಜೀವನದ ಬಗ್ಗೆಯೂ ಚಿಂತನೆ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ನಿರ್ಧಾರ ಎನಿಸಿಕೊಳ್ಳಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಇದೀಗ ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಹೂಡಿಕೆ ಮಾಡಬಹುದಾದ ಆಯ್ಕೆ ಲಭ್ಯ. ಅವರ ಉನ್ನತ ಶಿಕ್ಷಣಕ್ಕೆ ಇದು ನೆರವಾಗುತ್ತದೆ. ಹಾಗಾದರೆ ಹೂಡಿಕೆಗೆ ಉತ್ತಮ ಆಯ್ಕೆ ಎನಿಸಿಕೊಂಡಿರುವ ಪಿಪಿಎಫ್‌ ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಪೈಕಿ ಯಾವುದು ಉತ್ತಮ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಮತ್ತು ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು (National Pension Scheme Vatsalya) ಆರಂಭಿಸಿದೆ. ಇವೆರಡು ಯೋಜನೆಗಳ ವೈಶಿಷ್ಟ್ಯ, ಯೋಜನೆ ನಡುವಿನ ವ್ಯತ್ಯಾಸ ನೋಡೋಣ.

ಪಿಪಿಎಫ್‌

ಸಾರ್ವಜನಿಕ ಭವಿಷ್ಯ ನಿಧಿ-ಇದು ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಯಾಗಿರುವುದರಿಂದ ಇದರಲ್ಲಿ ಅಪಾಯ ಕಡಿಮೆ. ಜತೆಗೆ ತೆರಿಗೆ ಪ್ರಯೋಜವೂ ಲಭ್ಯ. ಮಕ್ಕಳಲ್ಲಿ ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಸರ್ಕಾರ ಪಿಪಿಎಫ್‌ ಮೈನರ್‌ (PPF minor) ಖಾತೆಯನ್ನೂ ಜಾರಿಗೆ ತಂದಿದೆ. ಪಾಲಕರು ತಮ್ಮ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯುವ ಆಯ್ಕೆಯನ್ನು ಹೊಂದಿದ್ದಾರೆ. ಆಕರ್ಷಕ ಬಡ್ಡಿದರ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ಪಿಪಿಎಫ್ ಖಾತೆಯು ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾದ ಹೂಡಿಕೆ ಆಯ್ಕೆಗಳಲ್ಲಿ ಒಂದು. ಅಪ್ರಾಪ್ತ ಮಗುವಿಗೆ 18 ವರ್ಷ ತುಂಬುವವರೆಗೆ ಪಿಪಿಎಫ್ ಖಾತೆಯನ್ನು ಪಾಲಕರು ನಿರ್ವಹಿಸುತ್ತಾರೆ. ಬಳಿಕ ಆತ / ಅವಳು ತನ್ನ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಬಹುದಾಗಿದೆ.

ಪಿಪಿಎಫ್‌ನ ವೈಶಿಷ್ಟ್ಯ

  • ವಾರ್ಷಿಕ ಗರಿಷ್ಠ 1,50,000 ರೂ.ಗಳಿಂದ ಕನಿಷ್ಠ 500 ರೂ.ಗಳವರೆಗೆ ಠೇವಣಿ ಇಡಬಹುದು.
  • ಮೂಲ ಅವಧಿ 15 ವರ್ಷಗಳು. ಅದರ ನಂತರ 5 ವರ್ಷಗಳ ಅವಧಿಗೆ ವಿಸ್ತರಿಸಬಹುದು. 
  • ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಪ್ರಸ್ತುತ ಬಡ್ಡಿದರ ವಾರ್ಷಿಕ ಶೇ. 7.10ರಷ್ಟಿದೆ.
  • ಖಾತೆಯ ತೆರೆದ ದಿನಾಂಕ ಆಧಾರದಲ್ಲಿ ಸಾಲ ಪಡೆಯಬಹುದು.
  • ಪಿಪಿಎಫ್ ಖಾತೆಗಳಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.
  • ಒಂದು ಅಥವಾ ಹೆಚ್ಚು ವ್ಯಕ್ತಿಗಳ ನಾಮನಿರ್ದೇಶನ ಸೌಲಭ್ಯ ಇದೆ.
  • ಖಾತೆಯನ್ನು ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನ ಇತರ ಶಾಖೆಗಳಿಗೆ ವರ್ಗಾಯಿಸಬಹುದು.

ಎನ್‌ಪಿಎಸ್‌ ವಾತ್ಯಲ್ಯ ಯೋಜನೆ

ಎನ್‌ಪಿಎಸ್‌ ವಾತ್ಸಲ್ಯ – 2024ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾದ ಹೊಸ ಪಿಂಚಣಿ ಯೋಜನೆಯಾಗಿದ್ದು, ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ ಪೋಷಕ ಖಾತೆ ತೆರೆಯಬಹುದು. ಪೋಷಕರಿಗೆ ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಎನ್‌ಪಿಎಸ್ ಖಾತೆಯನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯವನ್ನು ಹಾಕಿಕೊಟ್ಟಂತಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಈ ಖಾತೆಗಳು ನಿಯಮಿತ ಎನ್‌ಪಿಎಸ್ ಯೋಜನೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದ ಮಕ್ಕಳ ಪ್ರೌಢಾವಸ್ಥೆಯಲ್ಲಿ ಉಳಿತಾಯ ಅಭ್ಯಾಸ ಸುಗಮವಾಗಿ ಮುಂದುವರಿಯುತ್ತದೆ.

ಎನ್‌ಪಿಎಸ್‌ ಅನ್ನು 18 ವರ್ಷದ ನಂತರ ಆರಂಭಿಸಬಹುದಾಗಿದ್ದರೆ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದಾಗಿದೆ. ಎನ್‌ಪಿಎಸ್ ಯೋಜನೆಯಡಿ ಖಾತೆದಾರರು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ನಿಮ್ಮ ಮಕ್ಕಳು 60ರ ನಿವೃತ್ತಿ ವಯಸ್ಸನ್ನು ತಲುಪಿದ ಮೇಲೆ ಖಾತೆಯಲ್ಲಿರುವ ಸಂಗ್ರಹ ಮೊತ್ತದೊಂದಿಗೆ ಬಡ್ಡಿ ಸೇರಿ ಗಣನೀಯ ಮೊತ್ತವನ್ನು ಪಡೆಯುತ್ತಾರೆ.

ಯಾವುದು ಉತ್ತಮ?

ಎನ್‌ಪಿಎಸ್‌ ವಾತ್ಯಲ್ಯ ಯೋಜನೆಯನ್ನು ಸರ್ಕಾರ ಇತ್ತೀಚೆಗೆಷ್ಟೇ ಘೋಷಿಸಿದ್ದು ಹೂಡಿಕೆ ಮಾಡಬಹುದಾದ ಅಪ್ರಾಪ್ತ ವಯಸ್ಕರ ಕನಿಷ್ಠ ವಯಸ್ಸನ್ನು ಇನ್ನೂ ಬಹುರಂಗಪಡಿಸಿಲ್ಲ. ಎರಡೂ ಯೋಜನೆಗಳು ನಿಮ್ಮ ಮಕ್ಕಳ ಭವಿಷ್ಯ ದೃಷ್ಟಿಯಿಂದ ಉತ್ತಮ ಆಯ್ಕೆ ಎನಿಸಿಕೊಂಡಿದೆ. ನಿಮ್ಮ ಉದ್ದೇಶಕ್ಕೆ ಅನುಗುಣವಾದ, ಆರ್ಥಿಕ ಸ್ಥಿತಿಗೆ ಹೊಂದಿಕೆಯಾಗುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಬೆಂಗಳೂರು

Property Tax: ಬೆಂಗಳೂರು ಆಸ್ತಿ ತೆರಿಗೆ; ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಪ್ರಯೋಜನ ಪಡೆಯಲು ಇಂದೇ ಲಾಸ್ಟ್‌ ಡೇಟ್‌

ಒನ್-ಟೈಮ್ ಇತ್ಯರ್ಥ ಯೋಜನೆಯಡಿಯಲ್ಲಿ ಆಸ್ತಿ ತೆರಿಗೆಗೆ ಶೇ.5 ರಿಯಾಯಿತಿಯನ್ನು ಪಡೆಯಲು ಜುಲೈ 31 ಅಂತಿಮ ದಿನವಾಗಿದೆ. ಈ ನಡುವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ ಸುಮಾರು 548.94 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆ (Property Tax) ಇನ್ನೂ ಬಾಕಿ ಪಾವತಿಯಾಗದೆ ಉಳಿದಿದೆ. ಈ ಬಗ್ಗೆ ಮುಂದೇನು ಕ್ರಮ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದೇನು? ಇಲ್ಲಿದೆ ವಿವರ.

VISTARANEWS.COM


on

By

Property Tax
Koo

ಬೆಂಗಳೂರಿನ (bengaluru) ಎಂಟು ವಲಯಗಳ ಸುಮಾರು 2.88 ಲಕ್ಷ ಆಸ್ತಿಗಳ 548.94 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆ (Property Tax) ಬಾಕಿ ಪಾವತಿಯಾಗದೆ ಉಳಿದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಿಳಿಸಿದೆ. ಒನ್-ಟೈಮ್ ಇತ್ಯರ್ಥ ಯೋಜನೆಯಡಿಯಲ್ಲಿ (one-time settlement scheme) ಆಸ್ತಿ ತೆರಿಗೆಗೆ ಶೇ.5 ರಿಯಾಯಿತಿಯನ್ನು ಪಡೆಯಲು ಜುಲೈ 31 ಅಂತಿಮ ದಿನವಾಗಿದೆ.

ಒನ್-ಟೈಮ್ ಇತ್ಯರ್ಥ ಯೋಜನೆಯು ದಂಡಗಳ ಮೇಲೆ ಶೇ. 50 ರಿಯಾಯಿತಿ ಮತ್ತು ಆಸ್ತಿ ತೆರಿಗೆ ಡೀಫಾಲ್ಟರ್‌ಗಳಿಗೆ ಬಡ್ಡಿ ಪಾವತಿಗಳ ಮೇಲೆ ಶೇ. 100ರಷ್ಟು ರಿಯಾಯಿತಿಯನ್ನು ನೀಡುತ್ತದೆ.

ಬೆಂಗಳೂರು ನಗರ ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹವನ್ನು ಸುಗಮಗೊಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಹೊಸ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಎಂದಿಗೂ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಒಂದು ಬಾರಿ ಪರಿಹಾರದ ಆಯ್ಕೆಯನ್ನು ಅವರು ಈ ಯೋಜನೆಯ ಅಡಿಯಲ್ಲಿ ಘೋಷಿಸಿದ್ದರು.

ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ಪಾವತಿ ವಿಂಡೋವನ್ನು ಈ ವರ್ಷ ಏಪ್ರಿಲ್ 30ರಿಂದ ಜುಲೈ 31ರವರೆಗೆ ವಿಸ್ತರಿಸಲಾಗಿತ್ತು. ಜುಲೈ 31ರ ಗಡುವು ಮೀರಿದ ಬಳಿಕ ಅವಧಿ ವಿಸ್ತರಣೆಗೆ ಸರ್ಕಾರ ಮುಂದಾಗಿಲ್ಲ.

Property Tax
Property Tax


ಜುಲೈ 31 ರೊಳಗೆ ಬಾಕಿ ಪಾವತಿಸಲು ವಿಫಲರಾದವರನ್ನು ಆಗಸ್ಟ್ 1ರಿಂದ ಸುಸ್ತಿದಾರರೆಂದು ಪರಿಗಣಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಹೆಚ್ಚು ಬಾಕಿ ಯಾವ ವಲಯದ್ದು?

ಮಹದೇವಪುರ ವಲಯವು 60,000ಕ್ಕೂ ಹೆಚ್ಚು ಆಸ್ತಿಗಳೊಂದಿಗೆ ಮುಂಚೂಣಿಯಲ್ಲಿದ್ದು, ಒಟ್ಟು 124.23 ಕೋಟಿ ರೂ. ಬಾಕಿಯನ್ನು ಹೊಂದಿದೆ. ಬೊಮ್ಮನಹಳ್ಳಿ 45,381 ಆಸ್ತಿಗಳಿಂದ 71.10 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಕಿಅಂಶಗಳ ಪ್ರಕಾರ ಏಪ್ರಿಲ್ 1 ರಿಂದ ಜುಲೈ 29 ರ ನಡುವೆ 184.77 ಕೋಟಿ ರೂ. ಮೊತ್ತದ 1,07,344 ಆಸ್ತಿಗಳ ಆಸ್ತಿ ತೆರಿಗೆ ಪಾವತಿಸಲಾಗಿದೆ.

ಇದನ್ನೂ ಓದಿ: BJP Protest: ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಪುನೀತ್‌ ಕೆರೆಹಳ್ಳಿ ಮತ್ತೆ ವಶಕ್ಕೆ, ಪ್ರತಾಪ್‌ ಸಿಂಹ ವಿರುದ್ಧ ದೂರು

ಒಟ್ಟು 282.59 ಕೋಟಿ ರೂ. ಮೊತ್ತದ 16,904 ಆಸ್ತಿಗಳನ್ನು ಒಳಗೊಂಡ ಪರಿಷ್ಕರಣೆ ಪ್ರಕರಣಗಳು 2024ರ ಜುಲೈ 29ರವರೆಗೆ ಬಾಕಿ ಉಳಿದಿವೆ ಎಂದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ಬಿನ್ನಿಪೇಟೆ, ಬಸವನಗುಡಿ, ಹನುಮಂತನಗರ ಮತ್ತು ಜಯನಗರದಂತಹ ಪ್ರದೇಶಗಳನ್ನು ಒಳಗೊಂಡಿರುವ ಪಶ್ಚಿಮ ವಲಯವು ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಇವು ಒಟ್ಟು ಸೇರಿ 3,474 ಆಸ್ತಿ ಪ್ರಕರಣಗಳನ್ನು ಒಳಗೊಂಡಿವೆ.

Continue Reading

ದೇಶ

Nitin Gadkari: “ಜೀವ ಮತ್ತು ಆರೋಗ್ಯ ವಿಮೆಗಳ ಪ್ರೀಮಿಯಂ ಮೇಲಿನ GST ತೆಗೆದುಹಾಕಿ”; ಹಣಕಾಸು ಸಚಿವಾಲಯಕ್ಕೆ ಗಡ್ಕರಿ ಪತ್ರ

Nitin Gadkari: ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡುತ್ತಿದ್ದೇನೆ. ಇದನ್ನು ಆದ್ಯತೆಯ ಮೇರೆಗೆ ಪರಿಗಣಿಸಲು ನಿಮ್ಮನ್ನು ವಿನಂತಿಸಲಾಗಿದೆ, ಏಕೆಂದರೆ ಇದು ಹಿರಿಯ ನಾಗರಿಕರಿಗೆ ತೊಡಕಾಗಿದೆ ಎಂದು ನಿತಿನ್ ಗಡ್ಕರಿ ಪತ್ರದಲ್ಲಿ ಬರೆದಿದ್ದಾರೆ.

VISTARANEWS.COM


on

Nitin Gadkari
Koo

ನವದೆಹಲಿ: ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಪ್ರೀಮಿಯಂ ಮೇಲಿನ 18% ಸರಕು ಮತ್ತು ಸೇವಾ ತೆರಿಗೆ(GST)ಯನ್ನು ತೆಗೆದು ಹಾಕುವಂತೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ(Nitin Gadkari) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಅವರಿಗೆ ಪತ್ರ ಬರೆದಿದ್ದಾರೆ. ಜಿಎಸ್‌ಟಿಯು ಜೀವನದ ಅನಿಶ್ಚಿತತೆಗಳಿಗೆ ತೆರಿಗೆ ವಿಧಿಸುತ್ತದೆ. ಜೀವ ಮತ್ತು ವೈದ್ಯಕೀಯ ವಿಮಾ ಕಂತುಗಳ ಮೇಲೆ ಶೇ. 18 ರಷ್ಟು GST ವಿಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡುತ್ತಿದ್ದೇನೆ. ಇದನ್ನು ಆದ್ಯತೆಯ ಮೇರೆಗೆ ಪರಿಗಣಿಸಲು ನಿಮ್ಮನ್ನು ವಿನಂತಿಸಲಾಗಿದೆ, ಏಕೆಂದರೆ ಇದು ಹಿರಿಯ ನಾಗರಿಕರಿಗೆ ತೊಡಕಾಗಿದೆ ಎಂದು ನಿತಿನ್ ಗಡ್ಕರಿ ಪತ್ರದಲ್ಲಿ ಬರೆದಿದ್ದಾರೆ. ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಮೇಲಿನ ಜಿಎಸ್ಟಿ ತೆಗೆದು ಹಾಕುವಂತೆ ಅನೇಕರು ಮನವಿ ಮಾಡಿದ್ದಾರೆ. ಜಿಎಸ್‌ಟಿಯಿಂದಾಗಿ ಈ ವಲಯಗಳ ಅಭಿವೃದ್ಧಿ ಕುಂಠಿತವಾಗಿದೆ ಎಂಬುದನ್ನು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಜೀವ ವಿಮಾ ಪ್ರೀಮಿಯಂ ಮೇಲೆ GST ವಿಧಿಸುವುದರಿಂದ ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸುತ್ತದೆ. ಕುಟುಂಬಕ್ಕೆ ಸ್ವಲ್ಪ ರಕ್ಷಣೆ ನೀಡಲು ಜೀವನದ ಅನಿಶ್ಚಿತತೆಯ ಅಪಾಯವನ್ನು ಆವರಿಸುವ ವ್ಯಕ್ತಿಯು ಈ ಅಪಾಯದ ವಿರುದ್ಧ ರಕ್ಷಣೆಯನ್ನು ಖರೀದಿಸಲು ಪ್ರೀಮಿಯಂಗೆ ತೆರಿಗೆಯನ್ನು ವಿಧಿಸಬಾರದು ಎಂದು ಒಕ್ಕೂಟವು ಭಾವಿಸುತ್ತದೆ. ಅಲ್ಲದೇ ತೆರಿಗೆ ವಿಧಿಸುವುದರಿಂದ ವಿಮಾ ಕಂಪನಿಗಳ ಬಲವರ್ಧನೆ ಅಡ್ಡಿ ಆಗುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇತೀಚೆಗಷ್ಟೇ ಈ ಹಣಕಾಸು ವರ್ಷದ ಜಿಎಸ್‌ಟಿ ಸಂಗ್ರಹದ ವರದಿ ಬಹಿರಂಗವಾಗಿತ್ತು. 2024-25ನೇ ಹಣಕಾಸು ವರ್ಷದ ಜೂನ್​​ನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು (GST Collection) 1.74 ಲಕ್ಷ ಕೋಟಿ ರೂಪಾಯಿ ಆಗಿದ್ದು ಶೇಕಡಾ 8 ರಷ್ಟು ಏರಿಕೆಯಾಗಿತ್ತು. ಆದಾಗ್ಯೂ, ಮಾಸಿಕ ಜಿಎಸ್ಟಿ ಸಂಗ್ರಹದ ದತ್ತಾಂಶದ ಅಧಿಕೃತ ಬಿಡುಗಡೆಯನ್ನು ಸರ್ಕಾರ ನಿಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಹಣಕಾಸು ವರ್ಷದ ಮೂರು ತಿಂಗಳಲ್ಲಿ (ಏಪ್ರಿಲ್-ಜೂನ್) ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ​) ಸಂಗ್ರಹವು 5.57 ಲಕ್ಷ ಕೋಟಿ ರೂ.ಗಳಷ್ಟಿದೆ ಎಂದು ಮೂಲಗಳು ತಿಳಿಸಿವೆ.

ಜೂನ್​​ನ ಸಂಗ್ರಹವು ಮೇ 2024 ರಲ್ಲಿ ಸಂಗ್ರಹಿಸಿದ 1.73 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. ಇದು ಜೂನ್ 2023 ರಲ್ಲಿ ಸಂಗ್ರಹಿಸಿದ 1.61 ಲಕ್ಷ ಕೋಟಿ ರೂ.ಗಿಂತ ಶೇಕಡಾ 8 ರಷ್ಟು ಹೆಚ್ಚಾಗಿದೆ. ಕೇಂದ್ರ ಜಿಎಸ್ಟಿ (ಸಿಜಿಎಸ್​ಟಿ) ಗೆ 39,586 ಕೋಟಿ ರೂ., ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ಗೆ 33,548 ಕೋಟಿ ರೂ. ಜಿಎಸ್ಟಿ ಸಂಗ್ರಹವು ಏಪ್ರಿಲ್​​ನಲ್ಲಿ ದಾಖಲೆಯ ಗರಿಷ್ಠ 2.10 ಲಕ್ಷ ಕೋಟಿ ರೂ.ಗೆ ತಲುಪಿತ್ತು.

ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಹೇಳಿಕೆ ಬಿಡುಗಡೆ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ತೆರಿಗೆ ಪಾಲುದಾರ ಸೌರಭ್ ಅಗರ್ವಾಲ್ ಮಾತನಾಡಿ, ಈ ದೃಢ ಕಾರ್ಯಕ್ಷಮತೆಯು ಉತ್ಸಾಹಭರಿತ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತದೆ. ಸಮಯೋಚಿತ ಲೆಕ್ಕಪರಿಶೋಧನೆ, ಪರಿಶೀಲನಾ ಕ್ರಮಗಳು ಮತ್ತು ಇಲಾಖೆಯ ಪರಿಣಾಮಕಾರಿ ಜಾರಿ ಇವೆಲ್ಲವೂ ಈ ಜಿಎಸ್​ಟಿ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Narayana Murthy: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ: ನಾರಾಯಣಮೂರ್ತಿ ಹೊಸ ವಾದ!

Continue Reading
Advertisement
Crocodile Attack
Latest28 seconds ago

Crocodile Attack: ತಂದೆಯ ಜೀವ ಉಳಿಸಲು ಮೊಸಳೆ ಬಾಯಿಗೆ ಕೈ ಹಾಕಿದ ಬಾಲಕ!

Viral Video
Latest3 mins ago

Viral Video: ನಾಗದೇವತೆ ವಿಗ್ರಹದ ಮೇಲೆ ಹೆಡೆ ಬಿಚ್ಚಿ ನಿಂತ ನಾಗರ ಹಾವು!

Nutrients For The Human Body
ಆರೋಗ್ಯ6 mins ago

Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

Our government has changed the concept of Anganwadi says Minister Lakshmi Hebbalkar
ಕರ್ನಾಟಕ15 mins ago

Lakshmi Hebbalkar: ಅಂಗನವಾಡಿ ಪರಿಕಲ್ಪನೆಯನ್ನೇ ನಮ್ಮ ಸರ್ಕಾರ ಬದಲಾಯಿಸಿದೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Congress government
ಕರ್ನಾಟಕ24 mins ago

Congress government: ನಮ್ಮ ಸರ್ಕಾರ ಅಲುಗಾಡಿಸಿದರೆ ರಕ್ತಕ್ರಾಂತಿ ಆಗುತ್ತೆ: ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ

Nino Salukvadze
ಕ್ರೀಡೆ44 mins ago

Nino Salukvadze: ತಂದೆಯ ಆಸೆಯಂತೆ 10ನೇ ಒಲಿಂಪಿಕ್ಸ್ ಆಡಿ ದಾಖಲೆ ಬರೆದ ಜಾರ್ಜಿಯಾದ ಮಹಿಳಾ ಶೂಟರ್‌

2100 crore rupees investment in the state by Sunsera Company; Sign the agreement
ಇನ್ವೆಸ್ಟ್ ಕರ್ನಾಟಕ48 mins ago

Invest Karnataka: ಸನ್ಸೇರಾ ಕಂಪನಿಯಿಂದ ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ; ರಾಮನಗರದಲ್ಲಿ ಘಟಕ

Kaftan Kurta Fashion
ಫ್ಯಾಷನ್50 mins ago

Kaftan Kurta Fashion: ಸಿಂಪಲ್‌ ಲುಕ್‌ಗೆ ಸಾಥ್‌ ನೀಡುವ ದೊಗಲೆ ಕಫ್ತಾನ್‌ ಕುರ್ತಾ!

Paris Olympics
ಕ್ರೀಡೆ50 mins ago

Paris Olympics: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತದ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ; 4 ಪದಕ ನಿರೀಕ್ಷೆ!

Toyota company investment in the state will continue as usual says Minister MB Patil
ಕರ್ನಾಟಕ50 mins ago

MB Patil: ರಾಜ್ಯದಲ್ಲಿ ಟೊಯೋಟಾ ಕಂಪನಿಯ ಹೂಡಿಕೆ ಅಬಾಧಿತ; ಸಚಿವ ಎಂ‌.ಬಿ. ಪಾಟೀಲ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌