JioMart: ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ಜಿಯೋಮಾರ್ಟ್‌ನಿಂದ ಮತ್ತೊಂದು ಘೋಷಣೆ - Vistara News

ವಾಣಿಜ್ಯ

JioMart: ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ಜಿಯೋಮಾರ್ಟ್‌ನಿಂದ ಮತ್ತೊಂದು ಘೋಷಣೆ

JioMart: ಜಿಯೋಮಾರ್ಟ್‌ನಿಂದ ಸೋಮವಾರ ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದ್ದು, ಸಣ್ಣ ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕರರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ದೃಷ್ಟಿಕೋನದ ಹಿನ್ನೆಲೆಯಲ್ಲಿ JASCOLAMPF ಹಾಗೂ JHARCRAFT ಜತೆಗೆ ಸಹಭಾಗಿತ್ವ ವಹಿಸಲಾಗಿದೆ.

VISTARANEWS.COM


on

Jiomart partnership with JASCOLAMPF and JHARCRAFT
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ರಿಲಯನ್ಸ್ ರೀಟೇಲ್‌ನ ಇ-ಮಾರ್ಕೆಟ್ ಪ್ಲೇಸ್ ಅಂಗವಾದ ಜಿಯೋಮಾರ್ಟ್‌ನಿಂದ (JioMart) ಸೋಮವಾರ ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದ್ದು, ಸಣ್ಣ ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕ ವೃತ್ತಿಯವರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ಉದ್ದೇಶದಿಂದ JASCOLAMPF ಹಾಗೂ JHARCRAFT ಜತೆಗೆ ಸಹಭಾಗಿತ್ವ ವಹಿಸಲಾಗಿದೆ.

ಅಂದ ಹಾಗೆ ಮೊದಲನೆಯದು ಜಾರ್ಖಂಡ್‌ನ ರಾಜ್ಯ ಸರ್ಕಾರಿ ಎಂಪೋರಿಯಂ ಹಾಗೂ ಎರಡನೆಯದು ಜಾರ್ಖಂಡ್ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂಥದ್ದು. ಜಾರ್ಖಂಡ್‌ನಲ್ಲಿನ ಕುಶಲಕರ್ಮಿಗಳ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಈ ಜಂಟಿ ಉಪಕ್ರಮವು ಬಹಳ ದೊಡ್ಡ ಮೈಲುಗಲ್ಲಾಗಿದೆ. ಮತ್ತು ಇದರೊಂದಿಗೆ ಜಿಯೋಮಾರ್ಟ್ ಮೂಲಕ ದೇಶದಾದ್ಯಂತ ತಲುಪುವುದಕ್ಕೆ ಅನುಕೂಲ ಆಗುತ್ತದೆ.

ಇದನ್ನೂ ಓದಿ: Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

ಜಾರ್ಖಂಡ್‌ನ ಪಟ್ಟಣ ಮತ್ತು ನಗರಗಳಾದ ಗುಮ್ಲಾ, ಸರೈಕೆಲಾ ಹಾಗೂ ಪಲಮೌ ಸೇರಿದಂತೆ ಇತರೆಡೆಗಳಿಂದ ಅಪಾರ ಸಂಖ್ಯೆಯ ಕುಶಲಕರ್ಮಿಗಳನ್ನು ಜಿಯೋಮಾರ್ಟ್ ವೇದಿಕೆಗೆ ಕರೆತರುವಲ್ಲಿ ಈ ಸಹಯೋಗ ನೆರವಾಗಿದೆ. ಇದೀಗ ಈ ಕುಶಲಕರ್ಮಿಗಳು ತನ್ನ ಅದ್ಭುತ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವುದಕ್ಕೆ ಮಾತ್ರವಲ್ಲ, ಅದರ ಜತೆಗೆ ದೇಶದಾದ್ಯಂತ ಇರುವಂಥ ಗ್ರಾಹಕರನ್ನು ತಲುಪುವುದಕ್ಕೆ ಮತ್ತು ತಮ್ಮ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುವುದಕ್ಕೆ ಸಹಾಯ ಆಗುತ್ತದೆ.

ಜಾರ್ಖಂಡ್‌ನ ರಾಜ್ಯ ಸರ್ಕಾರದ ಎಂಪೋರಿಯಂ ಅನ್ನು JASCOLAMPF ಎಂದು ಕರೆಯಲಾಗುತ್ತದೆ. ತಮ್ಮ ವ್ಯವಹಾರವನ್ನು ಆರಂಭಿಸುವುದಕ್ಕೆ ಯಾವುದೇ ಸಮಸ್ಯೆ ಆಗದಂಥ, ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕವಾದಂಥ ಹಾಗೂ ಜತೆಗೆ ಮೀಸಲು ಇರಿಸಿದಂಥ ಮಾರ್ಕೆಟಿಂಗ್ ಬೆಂಬಲದೊಂದಿಗೆ ಇನ್ನು ಲಭ್ಯವಿರುತ್ತದೆ.

ಈ ಸಹಯೋಗದ ಮೂಲಕ ಜಿಯೋಮಾರ್ಟ್‌ನ ಲಕ್ಷಾಂತರ ಸಂಖ್ಯೆಯ ಗ್ರಾಹಕರು ಜಿಐ- ಟ್ಯಾಗ್ ಆದಂಥ ಮರದ ಉತ್ಪನ್ನಗಳು, ಬಿದಿರಿನ ವಸ್ತುಗಳು, ಧೋಕ್ರಾ ಕಲಾಕೃತಿಗಳು, ಟೆರಾಕೋಟಾ ವಸ್ತುಗಳು, ಲ್ಯಾಕ್ ಬಳೆಗಳು, ಹತ್ತಿ ಕೈಮಗ್ಗ, ಅಪ್ಲಿಕ್ ವರ್ಕ್, ಝರ್ಡೋಜಿ ವರ್ಕ್, ತಸರ್ ಕೈ ಮಗ್ಗ ಸೀರೆಗಳು, ಪುರುಷರ ಅಂಗಿಗಳು, ಹೊಲಿಗೆ ಹಾಕಿರದಂಥ ಡ್ರೆಸ್ ಮಟಿರೀಯಲ್ ಗಳು, ಕರಕುಶಲ ಬ್ಯಾಗ್, ಬೆಡ್ ಶೀಟ್ ಗಳು, ಪೇಂಟಿಂಗ್ ಗಳು, ಗೃಹಾಲಂಕಾರ ವಸ್ತುಗಳು, ಮತ್ತು ಇನ್ನೂ ಹಲವು ಕೈಯಿಂದ ಸಿದ್ಧಪಡಿಸಲಾದ ಹಲವು ವಿಧದ ಕಲಾ ವಸ್ತುಗಳು ದೊರೆಯುತ್ತವೆ.

ಇದರಿಂದಾಗಿ ಕೇವಲ ಸ್ಥಳೀಯ ಕರಕುಶಲತೆ ಜತೆಗೆ ನಿಕಟ ಬಂಧವನ್ನು ಮಾತ್ರ ಸೃಷ್ಟಿಸುವುದಲ್ಲದೆ “ವೋಕಲ್ ಫಾರ್ ಲೋಕಲ್”ಎಂಬ ಸ್ಥಳೀಯ ವಸ್ತುಗಳಿಗೆ ಉತ್ತೇಜನ ನೀಡಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ದೃಷ್ಟಿಕೋನದೊಂದಿಗೆ ಸಾಗುತ್ತದೆ.

ಇದನ್ನೂ ಓದಿ: Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

ಈ ಕುರಿತು ಜಾರ್ಖಂಡ್ ಸ್ಟೇಟ್ ಕೋ-ಆಪರೇಟಿವ್ ಲ್ಯಾಕ್ ಮಾರ್ಕೆಟಿಂಗ್ ಅಂಡ್ ಪ್ರೊಕ್ಯೂರ್‌ಮೆಂಟ್ ಫೆಡರೇಷನ್ ಲಿಮಿಟೆಡ್ (JASCOLAMPF) ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಸಿಂಗ್ ಮಾತನಾಡಿ, “ಜಾರ್ಖಂಡ್‌ನ ಕರಕುಶಲ ಕಲಾವಿದರು, ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುವ ಅದ್ಭುತ ಕೌಶಲಗಳನ್ನು ಹೊಂದಿದ್ದಾರೆ.

ಅವರೊಂದಿಗೆ ಸಹಯೋಗವು ಜಾರ್ಖಂಡ್‌ನ ರೋಮಾಂಚಕ ಕರಕುಶಲತೆ ಮತ್ತು ಕಾಲಾತೀತ ಸಂಪ್ರದಾಯಗಳಲ್ಲಿ ಆಳವಾದ ತೊಡಗುಕೊಳ್ಳುವಿಕೆಗೆ ಭರವಸೆ ನೀಡುತ್ತದೆ. ಆದರೆ ಇದು ಜಾರ್ಖಂಡ್‌ನ ಇತರ ಎಂಎಸ್‌ಎಂಇ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ತಯಾರಕರಿಗೆ ಸಹ ಪ್ರಯೋಜನಗಳನ್ನು ನೀಡುತ್ತದೆ. ಆದರೂ ಹಂಚಿಕೆಯ ಜ್ಞಾನ ಮತ್ತು ಅವಕಾಶಗಳ ಮೂಲಕ, ಈ ಬಾಂಧವ್ಯದ ಬೆಳವಣಿಗೆ, ನಾವೀನ್ಯತೆ ಮತ್ತು ಜಾರ್ಖಂಡ್‌ನ ಗುರುತನ್ನು ವ್ಯಾಖ್ಯಾನಿಸುವ ಸಂಕೀರ್ಣವಾದ ಕರಕುಶಲತೆಗೆ ಗಹನವಾದ ಮೆಚ್ಚುಗೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಜಾರ್ಖಂಡ್ ಸಿಲ್ಕ್ ಟೆಕ್ಸ್‌ಟೈಲ್ ಮತ್ತು ಕರಕುಶಲ ಅಭಿವೃದ್ಧಿ ನಿಗಮ ಲಿಮಿಟೆಡ್ (JHARCRAFT) ನ ಉಪ ಪ್ರಧಾನ ವ್ಯವಸ್ಥಾಪಕಿ ಅಶ್ವಿನಿ ಸಹಾಯ್ ಮಾತನಾಡಿ, “ದೇಶೀಯ ಉತ್ಪನ್ನಗಳ ವಿಶಿಷ್ಟ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಜಿಯೋಮಾರ್ಟ್ ನಂತಹ ಸ್ಥಳೀಯ ವೇದಿಕೆಯಲ್ಲಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮಗೆ, ಈ ಬಿಡುಗಡೆಯು ಜಾರ್ಖಂಡ್‌ನ ವೈವಿಧ್ಯಮಯ ಕಲಾ ಪ್ರಕಾರಗಳೊಂದಿಗೆ ಜಿಯೋಮಾರ್ಟ್ ಮಾರುಕಟ್ಟೆಯನ್ನು ಶ್ರೀಮಂತಗೊಳಿಸುವ ಬದ್ಧತೆಯ ಸಂಕೇತವಾಗಿದೆ. ಆ ಮೂಲಕ ಕುಶಲಕರ್ಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

2022ರಲ್ಲಿ ಪ್ರಾರಂಭ ಆದಾಗಿನಿಂದ ಜಿಯೋಮಾರ್ಟ್ ದೇಶವ್ಯಾಪಿ 20 ಸಾವಿರ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಬಲ ತುಂಬಿದೆ. ಇಂಥ ಸರ್ಕಾರಿ ಸಂಸ್ಥೆಗಳ ಜತೆಗೆ ಸಹಭಾಗಿತ್ವ ವಹಿಸುವ ಮೂಲಕ ಡಿಜಿಟಲ್ ವಿಭಜನೆಯಿಂದ ಸೃಷ್ಟಿ ಆಗಿರುವ ಕಂದಕದ ಮಧ್ಯೆ ಸೇತುವೆ ನಿರ್ಮಿಸುವುದಕ್ಕೆ ಹಾಗೂ ಕುಶಲಕರ್ಮಿ ಸಮುದಾಯದ ಏಳ್ಗೆಗೆ ಸಹಕಾರಿ ಆಗುತ್ತದೆ. ಇನ್ನೂ ಮುಂದುವರಿದು ಕರಕುಶಲ ಮೇಳದಂಥ ಉಪಕ್ರಮಗಳು ಮತ್ತು ಇತರ ಕ್ರಮಗಳು ಸ್ಥಳೀಯ ಕಲೆಯನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಒತ್ತಿ ಹೇಳುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Foreign Investment: ರಾಜ್ಯದಲ್ಲಿ ಹೂಡಿಕೆಗೆ ದ. ಕೊರಿಯಾ ಆಸಕ್ತಿ; ಸಚಿವ ಎಂ‌.ಬಿ. ಪಾಟೀಲ್‌ ಚರ್ಚೆ

Foreign Investment: ದಕ್ಷಿಣ ಕೊರಿಯಾದ ಕಾನ್ಸುಲ್ ಜನರಲ್ ಚಾಂಗ್ ನ್ಯುನ್ ಕಿಮ್ ನೇತೃತ್ವದ ನಿಯೋಗವು ಮಂಗಳವಾರ ಬೃಹತ್ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿತು. ಈ ವೇಳೆ ಸಚಿವರು, ರಾಜ್ಯದಲ್ಲಿ ಇರುವ ಕೈಗಾರಿಕಾ ಕಾರ್ಯಪರಿಸರ ಮತ್ತು ಉದ್ಯಮಸ್ನೇಹಿ ನೀತಿಗಳನ್ನು ವಿವರಿಸಿದರು.

VISTARANEWS.COM


on

Foreign Investment investment in the state South Korea Consul General along with Minister M.B. Patil discussion
Koo

ಬೆಂಗಳೂರು: ದಕ್ಷಿಣ ಕೊರಿಯಾದ ಕಾನ್ಸುಲ್ ಜನರಲ್ ಚಾಂಗ್ ನ್ಯುನ್ ಕಿಮ್ ನೇತೃತ್ವದ ನಿಯೋಗ ಮಂಗಳವಾರ ಬೃಹತ್ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ, ಮಾತುಕತೆ (Foreign Investment) ನಡೆಸಿತು.

ಸಚಿವ ಪಾಟೀಲ ನೇತೃತ್ವದ ರಾಜ್ಯ ನಿಯೋಗವು ಇತ್ತೀಚಿಗೆ ಕೊರಿಯಾಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಹೆಚ್ಚು ಬಂಡವಾಳ ನೀಡುವಂತೆ ಅಲ್ಲಿನ‌ ಉದ್ದಿಮೆಗಳಿಗೆ ಆಹ್ವಾನಿಸಿತ್ತು.

ಇದನ್ನೂ ಓದಿ: Bengaluru Power Cut: ಜು.25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಇಂದಿನ ಭೇಟಿಯ ಸಂದರ್ಭದಲ್ಲಿ ಎಂ‌.ಬಿ. ಪಾಟೀಲ ಅವರು, ರಾಜ್ಯದಲ್ಲಿ ಇರುವ ಕೈಗಾರಿಕಾ ಕಾರ್ಯಪರಿಸರ ಮತ್ತು ಉದ್ಯಮಸ್ನೇಹಿ ನೀತಿಗಳನ್ನು ವಿವರಿಸಿದರು. ಮುಖ್ಯವಾಗಿ ವಿದ್ಯುತ್ ಚಾಲಿತ ವಾಹನ ತಯಾರಿಕೆ, ಗ್ರೀನ್ ಎನರ್ಜಿ, ಮರುಬಳಕೆ ಇಂಧನ, ಆಟೋಮೊಬೈಲ್, ವೈಮಾಂತರಿಕ್ಷ ಮತ್ತು ಸಂಶೋಧನೆ ಮುಂತಾದ ವಲಯಗಳಿಗೆ ನೀಡಿರುವ ಆದ್ಯತೆ ಬಗ್ಗೆ ಮನದಟ್ಟು ಮಾಡಿಕೊಟ್ಟರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಕೊರಿಯಾ ನಿಯೋಗದಲ್ಲಿ ಸಂಶೋಧಕರಾದ ಜೂನ್ ಸಿಕ್ ಹ್ವಾಂಗ್, ಇಂದುಜಾ ಅಗರವಾಲ್, ಸಿಯೋ ಯಂಗ್ ಮೂನ್ ಕೂಡ ಇದ್ದರು.

Continue Reading

ದೇಶ

Union Budget 2024 : ಇಪಿಎಫ್​ ಖಾತೆ ಮೂಲಕ ಉದ್ಯೋಗ ಸೃಷ್ಟಿ; ಯುವಜನ ಪರ 3 ಸ್ಕೀಮ್‌ಗಳ ವಿವರ ಇಲ್ಲಿದೆ

Union Budget 2024: ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿರುವ ಮೊದಲ ಬಾರಿಗೆ ಉದ್ಯೋಗಿಗಳಿಗೆ ಮೂರು ಕಂತುಗಳಲ್ಲಿ ಒಂದು ತಿಂಗಳ ವೇತನವನ್ನು ನೇರವಾಗಿ ವರ್ಗಾಯಿಸಲಾಗುವುದು. ಗರಿಷ್ಠ ಮಿತಿ 15,000 ರೂ.ಗಳವರೆಗೆ ಇರುತ್ತದೆ. ಗರಿಷ್ಠ ಸಂಬಳ ತಿಂಗಳಿಗೆ 1 ಲಕ್ಷ ರೂಪಾಯಿ ಎಂದು ಅವರು ಹೇಳಿದ್ದಾರೆ.

VISTARANEWS.COM


on

Union Budget 2024
Koo

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಾವು ಮಂಡಿಸಿದ ಬಜೆಟ್​ನಲ್ಲಿ (Union Budget 2024) ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ದಾಖಲಾಗುವ ಆಧಾರದ ಮೇಲೆ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಮೂರು ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಿದ್ದಾರೆ. ಸ್ಕೀಮ್ ಎ (ಹೊಸಬರಿಗೆ ಒಂದು ತಿಂಗಳ ವೇತನ), ಸ್ಕೀಮ್ ಬಿ (ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಸೃಷ್ಟಿ) ಮತ್ತು ಸ್ಕೀಮ್ ಸಿ (ಉದ್ಯೋಗದಾತರಿಗೆ ಬೆಂಬಲ) ಸೇರಿದಂತೆ ಈ ಮೂರು ಯೋಜನೆಗಳನ್ನು ಪ್ರಕಟಿಸಿದೆ. ಮೊದಲ ಬಾರಿಗೆ ಉದ್ಯೋಗಿಗಳು ಇಪಿಎಫ್ಒಗೆ ನೋಂದಾಯಿಸಿಕೊಳ್ಳುವಾಗ ಈ ಅನುಕೂಲ ನೀಡಲಾಗಿದೆ.

ಪ್ರಧಾನ ಮಂತ್ರಿಗಳ ಪ್ಯಾಕೇಜ್​​​ನ ಭಾಗವಾಗಿ ಉದ್ಯೋಗ-ಸಂಬಂಧಿತ ಪ್ರೋತ್ಸಾಹಕ್ಕಾಗಿ ನಮ್ಮ ಸರ್ಕಾರ ಈ ಕೆಳಗಿನ ಮೂರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಪಿಎಫ್​​ಗೆ ದಾಖಲು, ಮೊದಲ ಬಾರಿಗೆ ಉದ್ಯೋಗಿಗಳನ್ನು ಗುರುತಿಸುವತ್ತ ಗಮನ ಹರಿಸುವುದು ಮತ್ತು ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಬೆಂಬಲ ಯೋಜನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಬಜೆಟ್ 2024 ಓದುತ್ತಾ ಹೇಳಿದ್ದಾರೆ.

ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿರುವ ಮೊದಲ ಬಾರಿಗೆ ಉದ್ಯೋಗಿಗಳಿಗೆ ಮೂರು ಕಂತುಗಳಲ್ಲಿ ಒಂದು ತಿಂಗಳ ವೇತನವನ್ನು ನೇರವಾಗಿ ವರ್ಗಾಯಿಸಲಾಗುವುದು. ಗರಿಷ್ಠ ಮಿತಿ 15,000 ರೂ.ಗಳವರೆಗೆ ಇರುತ್ತದೆ. ಗರಿಷ್ಠ ಸಂಬಳ ತಿಂಗಳಿಗೆ 1 ಲಕ್ಷ ರೂಪಾಯಿ ಎಂದು ಅವರು ಹೇಳಿದ್ದಾರೆ.

3 ಹೊಸ ಯೋಜನೆಗಳು ಈ ರೀತಿ ಇವೆ


ಸ್ಕೀಮ್ ಎ: ಈ ಯೋಜನೆಯಡಿ, ಮೊದಲ ಬಾರಿಗೆ ಕೆಲಸ ಸೇರಿದವರಿಗೆ ಒಂದು ತಿಂಗಳ ವೇತನವನ್ನು 15,000 ರೂ.ಗಳವರೆಗೆ ಸಬ್ಸಿಡಿಯಾಗಿ ಪಡೆಯುತ್ತಾರೆ. ಇದು ಎಲ್ಲಾ ವಲಯಗಳಿಗೆ ಮತ್ತು ತಿಂಗಳಿಗೆ 1 ಲಕ್ಷ ರೂ.ಗಿಂತ ಕಡಿಮೆ ವೇತನ ಹೊಂದಿರುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಸಬ್ಸಿಡಿಯನ್ನು ಮೂರು ಕಂತುಗಳಲ್ಲಿ ಉದ್ಯೋಗಿಗೆ ಪಾವತಿಸಲಾಗುತ್ತದ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಉದ್ಯೋಗಿಯು ಎರಡನೇ ಕಂತು ಕ್ಲೈಮ್ ಮಾಡುವ ಮೊದಲು ಕಡ್ಡಾಯ ಆನ್ಲೈನ್ ಹಣಕಾಸು ಸಾಕ್ಷರತಾ ಕೋರ್ಸ್​ಗೆ ಒಳಪಡಬೇಕು. ನೇಮಕಾತಿಯ 12 ತಿಂಗಳೊಳಗೆ ಉದ್ಯೋಗಿ ಹೊರಕ್ಕೆ ಹೋದರೆ ಕಂಪನಿಯು ಸಬ್ಸಿಡಿಯನ್ನು ಮರುಪಾವತಿಸಬೇಕಾಗುತ್ತದೆ. ಈ ಯೋಜನೆ ಎರಡು ವರ್ಷಗಳವರೆಗೆ ಅನ್ವಯಿಸುತ್ತದೆ.

ಸ್ಕೀಮ್ ಬಿ: ಮೇಲಿನ ಯೋಜನೆಗೆ ಇಪಿಎಫ್ಒ ಅನುಕೂಲದ ಮೂರು ವರ್ಷಗಳ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಎಲ್ಲಾ ಕಾರ್ಪೊರೇಟ್ ಮತ್ತು ಕಾರ್ಪೊರೇಟ್ ಅಲ್ಲದ ಕಂಪನಿಗಳು ಅರ್ಹ. ಉತ್ಪಾದನಾ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಿಗಳನ್ನು ಗಣನೀಯವಾಗಿ ನೇಮಿಸಿಕೊಳ್ಳಲು ಇದು ನೆರವಾಗುತ್ತದೆ. ಉದ್ಯೋಗದಾತರು ಈ ಹಿಂದೆ ಇಪಿಎಫ್ಒ ನೋಂದಣಿಯಾಗದ ಕನಿಷ್ಠ ಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಳ್ಳಬಹುದು.

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್​

ಸ್ಕೀಮ್ ಸಿ: ಈ ಕೆಳಗಿನ ಯೋಜನೆಯು ಕನಿಷ್ಠ ಇಬ್ಬರು ಉದ್ಯೋಗಿಗಳು (50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವವರಿಗೆ) ಅಥವಾ 5 ಉದ್ಯೋಗಿಗಳಿಗೆ ಅನ್ವಯವಾಗುತ್ತದೆ (50 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವವರಿಗೆ) ಉದ್ಯೋಗವಕಾಶ ಹೆಚ್ಚಿಸುವ ಉದ್ಯೋಗದಾತರಿಗೆ ಮತ್ತು ತಿಂಗಳಿಗೆ 1,00,000 ರೂ.ಗಳನ್ನು ಮೀರದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಇಲ್ಲಿ ಉದ್ಯೋಗಿಗಳು ಇಪಿಎಫ್ಒಗೆ ಹೊಸದಾಗಿ ದಾಖಲು ಮಾಡಬೇಕಾಗಿಲ್ಲ. ಇದರ ಅಡಿಯಲ್ಲಿ, ಎರಡು ವರ್ಷಗಳವರೆಗೆ, ಹಿಂದಿನ ವರ್ಷದಲ್ಲಿ ನೇಮಕಗೊಂಡ ಹೆಚ್ಚುವರಿ ಉದ್ಯೋಗಿಗಳಿಗೆ ಸರ್ಕಾರವು ಇಪಿಎಫ್ಒ ಕಂಪನಿಯ ಪಾಲನ್ನು ಉದ್ಯೋಗದಾತರಿಗೆ ತಿಂಗಳಿಗೆ 3,000 ರೂ.ವರೆಗೆ ಮರುಪಾವತಿ ಮಾಡುತ್ತದೆ. ಸ್ಕೀಮ್​ ಬಿ ಯವರಿಗೆ ಇದು ಅನ್ವಯಿಸುವುದಿಲ್ಲ.

Continue Reading

ದೇಶ

Union Budget 2024: ಯುವಜನ, ಉದ್ಯೋಗ, ಉದ್ದಿಮೆಯೇ ಫೋಕಸ್‌; ಇಲ್ಲಿದೆ ಕೇಂದ್ರ ಬಜೆಟ್‌ನ ಸಮಗ್ರ ಚಿತ್ರಣ

Union Budget 2024: ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದಾರೆ. ಕೃಷಿ, ತೆರಿಗೆ, ಉದ್ಯೋಗ ಸೃಷ್ಟಿ, ಹೂಡಿಕೆ ಸೇರಿ ಹಲವು ವಿಷಯಗಳ ಮೇಲೆ ಕೇಂದ್ರ ಸರ್ಕಾರ ಗಮನಿಸಿದೆ. ಕೇಂದ್ರ ಸರ್ಕಾರದ ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ.

VISTARANEWS.COM


on

Union Budget 2024
Koo

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪಷ್ಟ ಬಹುಮತ ಪಡೆದ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಜೆಟ್‌ಅನ್ನು ಜನರ ಮುಂದಿಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಏಳನೇ ಬಾರಿಗೆ ಬಜೆಟ್‌ (Union Budget 2024) ಮಂಡಿಸಿದ್ದು, ಯುವ ಜನರಿಗೆ ಉದ್ಯೋಗ, ಯುವತಿಯರ ಕೌಶಲ ಅಭಿವೃದ್ಧಿ, ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ, ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿಯ ಉದ್ಯಮಿಗಳಿಗೆ ನೆರವು ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಕೆಲವು ಕ್ಷೇತ್ರಗಳ ಕಡೆಗಣನೆ ಆರೋಪದ ಹೊರತಾಗಿಯೂ ನಿರ್ಮಲಾ ಅವರು ಸಮತೋಲಿತ ಬಜೆಟ್‌ ಮಂಡಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಉದ್ಯೋಗ ಸೃಷ್ಟಿಯ ಕೂಗು ಹೆಚ್ಚಾಗಿ ಕೇಳುತ್ತಿತ್ತು. ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ, ನೀಡಿದ ಭರವಸೆಯನ್ನು ಮೋದಿ ಈಡೇರಿಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಇವೆ. ಹಾಗಾಗಿ, ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಿದೆ. ಆ ಮೂಲಕ, ಪ್ರತಿಪಕ್ಷಗಳ ಆರೋಪ, ಜನರ ಭಾವನೆಯನ್ನು ಬದಲಾಯಿಸಲು ಯತ್ನಿಸಿದೆ. ‌

Inspiring placement Story
Vistara editorial

ದೇಶದ 500 ಅಗ್ರ ಕಂಪನಿಗಳಲ್ಲಿ ಮುಂದಿನ 5 ವರ್ಷದಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್‌, ಅವರಿಗೆ ಪ್ರತಿ ತಿಂಗಳು 5 ಸಾವಿರ ರೂ. ಅಲೋವೆನ್ಸ್‌ (ಭತ್ಯೆ), ಉನ್ನತ ಶಿಕ್ಷಣ ಪಡೆಯುವವರಿಗೆ ಸಾಲ ಸೌಲಭ್ಯ ಸೇರಿ ಮುಂದಿನ 5 ವರ್ಷದಲ್ಲಿ 4.1 ಕೋಟಿ ಜನರಿಗೆ ಉದ್ಯೋಗ ನೀಡುವ ದಿಸೆಯಲ್ಲಿ 2 ಲಕ್ಷ ಕೋಟಿ ರೂ. ಪ್ಯಾಕೇಜ್‌ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಯುವಕ-ಯುವತಿಯರಿಗೆ ಉದ್ಯೋಗ ಕೊಡಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆ ಎನಿಸಿದೆ.

ಉದ್ಯಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ

ಯುವಕರು ಸೇರಿ ಕೋಟ್ಯಂತರ ಮಂದಿಗೆ ಉದ್ಯೋಗ ನೀಡುವಲ್ಲಿ ಉದ್ಯಮಗಳ ಪಾತ್ರ ಪ್ರಮುಖವಾಗಿದ್ದು, ಉದ್ಯಮಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ಕಾರ್ಪೊರೇಟ್‌ ಟ್ಯಾಕ್ಸ್‌ಅನ್ನು ಶೇ.40ರಿಂದ ಶೇ.35ಕ್ಕೆ ಇಳಿಸಿರುವುದು, ಎಂಎಸ್‌ಎಂಇಗಳಿಗೆ ಹಣಕಾಸು ನೆರವು, ಮುದ್ರಾ ಯೋಜನೆಯ ಸಾಲದ ಮೊತ್ತವನ್ನು 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಏರಿಕೆ ಮಾಡಿರುವುದು ಪ್ರಮುಖ ಸಂಗತಿಗಳಾಗಿವೆ.

ಕೃಷಿ ಋಷಿಗಳ ಏಳಿಗೆಗೆ 1.52 ಲಕ್ಷ ಕೋಟಿ ರೂ.

ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂಪಾಯಿಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ದೇಶಾದ್ಯಂತ 10,000 ಜೈವಿಕ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್​ನಲ್ಲಿ ಭರವಸೆ ನೀಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ, 1 ಕೋಟಿ ರೈತರನ್ನು ಬ್ರ್ಯಾಂಡಿಂಗ್ ಮತ್ತು ಪ್ರಮಾಣೀಕರಣ ನೀಡುವ ಮೂಲಕ ನೈಸರ್ಗಿಕ ಕೃಷಿಗೆ ಪ್ರೇರಣೆ ನೀಡಲಾಗುವುದು ಎಂದು ಅವರು ಬಜೆಟ್​ನಲ್ಲಿ ಹೇಳಿದ್ದಾರೆ.‌

Rain Deficit In India
Vistara editorial

ತರಕಾರಿ ಬೆಳೆಗಳನ್ನು ಜೀವನಾಧಾರವಾಗಿ ಮಾಡಿಕೊಂಡಿರುವ ರೈತರಿಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ
ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ಮಿಸುವ ಯೋಜನೆ ಪ್ರಕಟಿಸಿದ್ದಾರೆ. ಅದೇ ರೀತಿ ಮಾರುಕಟ್ಟೆಗೆಳ ಕೇಂದ್ರಗಳ ಹತ್ತಿರ ದೊಡ್ಡ ಕ್ಲಸ್ಟರ್​ಗಳನ್ನು ನಿರ್ಮಿಸುವ ಭರವಸೆಯನ್ನು ಕೊಟ್ಟಿದ್ದಾರೆ. ಮೀನು ಸಾಕಣೆದಾರರ ಅಭಿವೃದ್ಧಿಗಾಗಿ ಸಿಗಡಿ ಸಂತಾನೋತ್ಪತ್ತಿ ಕೇಂದ್ರಗಳಿಗೆ ಆರ್ಥಿಕ ನೆರವು ನೀಡಲಾಗುವುದ ಎಂದು ಹಣಕಾಸು ಸಚಿವರು ಭರವಸೆ ಕೊಟ್ಟಿದ್ದಾರೆ. ಅದೇ ರೀತಿ ನಬಾರ್ಡ್ ಮೂಲಕ ಸಿಗಡಿಗಳ ರಫ್ತಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಧಾರ್ಮಿಕ ಕೇಂದ್ರಗಳಿಗೂ ಆದ್ಯತೆ

ಕೇಂದ್ರ ಬಜೆಟ್‌ನಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ ಮಾದರಿಯಲ್ಲಿ ಬಿಹಾರದ ಗಯಾದಲ್ಲಿರುವ ವಿಷ್ಣುಪಾದ ದೇವಾಲಯ (Vishnupad Temple) ಮತ್ತು ಮಹಾಬೋಧಿ (Mahabodhi Temple) ದೇಗುಲಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ. ವಿಷ್ಣುಪಾದ ದೇಗುಲ ಅತ್ಯಂತ ಪ್ರಾಚೀನ ದೇಗುಲ ಫಾಲ್ಗು ನದಿ ದಡದಲ್ಲಿರುವ ಭಗವಾನ್‌ ವಿಷ್ಣುವಿನ ದೇಗುವಲವಾಗಿದೆ. ಬೋಧ್‌ ಗಯಾದಲ್ಲಿರುವ ಮಹಾಬೋಧಿ ದೇಗುಲವಿಶ್ವ ಪಾರಂಪರಿಕಾ ಸ್ಥಳವೆಂದು ಯುನೆಸ್ಕೋ ಗುರುತಿಸಿದೆ.

Vistara editorial

ಆಂಧ್ರ, ಬಿಹಾರಕ್ಕೆ ಬಂಪರ್‌, ಕರ್ನಾಟಕಕ್ಕೆ ಶೂನ್ಯ ಕೊಡುಗೆ

ಹೈದರಾಬಾದ್‌-ಬೆಂಗಳೂರು ಮಧ್ಯೆ ಇಂಡಸ್ಟ್ರಿಯಲ್‌ ಕಾರಿಡಾರ್‌ ಸ್ಥಾಪನೆಯನ್ನು ಹೊರತುಪಡಿಸಿದರೆ, ಕರ್ನಾಟಕ ಹಾಗೂ ಬೆಂಗಳೂರಿನ ಕುರಿತು ಇಡೀ ಬಜೆಟ್‌ನಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಆಡಳಿತವಿರುವ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ಗಮನ ಹರಿಸಿರುವ ಕೇಂದ್ರ ಸರ್ಕಾರವು, ಕರ್ನಾಟಕದ ಕಡೆಯೇ ಗಮನವೇ ಹರಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು, ರಸ್ತೆ ನಿರ್ಮಾಣ ಸೇರಿ ಯಾವುದೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ.

Legislative Council Election dates fixedVoting on June 13
Vistara editorial

ತೆರಿಗೆ ಭಾರ ಅಲ್ಪ ಇಳಿಕೆ

ತೆರಿಗೆ ಪಾವತಿಸುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು, ಹೊಸ ಸ್ಲ್ಯಾಬ್‌ಗಳ ಪರಿಚಯದಿಂದ ತೆರಿಗೆದಾರರು 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಅವರು ಘೋಷಿಸಿದ್ದಾರೆ. ಆದರೆ, ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಲ್ಲದೆ, ಏಂಜೆಲ್ ತೆರಿಗೆಯನ್ನು ರದ್ದುಪಡಿಸುವುದು ಸ್ಟಾರ್ಟ್ಅಪ್ ಸಮುದಾಯಕ್ಕೆ ಸಕಾರಾತ್ಮಕ ಬೆಳವಣಿಗೆ. ಇದು ನಿಧಿಸಂಗ್ರಹಕ್ಕೆ ಹೆಚ್ಚು ಬೆಂಬಲ ಮತ್ತು ಕಡಿಮೆ ನಿರ್ಬಂಧಿತ ವಾತಾವರಣ ನಿವಾರಿಸುತ್ತದೆ. ಈ ಬದಲಾವಣೆಯೊಂದಿಗೆ, ಭಾರತದಲ್ಲಿ ನಾವೀನ್ಯತೆ ಮತ್ತು ಹೂಡಿಕೆಗೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಚಿನ್ನ, ಬೆಳ್ಳಿ ಆಗಲಿದೆ ಅಗ್ಗ

ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗುವುದು ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆಯು ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ. ಪ್ಲಾಟಿನಮ್‌ ಮೇಲಿನ ಕಸ್ಟಮ್‌ ಸುಂಕವನ್ನು ಕೂಡ ಶೇ.6.4ರಷ್ಟು ಇಳಿಕೆ ಮಾಡಲಾಗಿದೆ. ಕಸ್ಟಮ್ಸ್‌ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್‌ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್‌ ಉಪಕರಣಗಳು, ಮೂರು ಕ್ಯಾನ್ಸರ್‌ ಔಷಧಿಗಳನ್ನು ಕಸ್ಟಮ್ಸ್‌ ಸುಂಕದಿಂದ ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಶೇ.15ರಷ್ಟು ಕಸ್ಟಮ್ಸ್‌ ಸುಂಕವನ್ನು ಇಳಿಸಿದೆ. ಆಮದು ಮಾಡಿಕೊಳ್ಳುವ ಮೊಬೈಲ್‌, ಮೊಬೈಲ್ ಬಿಡಿ ಭಾಗಗಳ ಮೇಲಿನ ಸುಂಕವನ್ನೂ ಕೇಂದ್ರ ಸರ್ಕಾರ ಶೇ.15ರಷ್ಟು ಇಳಿಸಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ರಕ್ಷಣಾ ವೆಚ್ಚ ಮತ್ತಷ್ಟು ಹೆಚ್ಚಳ

ದೇಶದ ರಕ್ಷಣಾ ಕ್ಷೇತ್ರವನ್ನು ಸುಭದ್ರಪಡಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ರಕ್ಷಣಾ ವೆಚ್ಚವನ್ನು ಕಳೆದ ವರ್ಷಕ್ಕಿಂತ ಏರಿಸಿದೆ. ಕಳೆದ ವರ್ಷ ಕೇಂದ್ರ ಸರ್ಕಾರವು ರಕ್ಷಣಾ ವೆಚ್ಚಕ್ಕೆ 5.94 ಲಕ್ಷ ಕೋಟಿ ರೂ. ಮೀಸಲಿಟ್ಟಿತ್ತು. ಆದರೆ, ಈ ಬಾರಿ ಮೊತ್ತವನ್ನು 6.21 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಿದೆ. ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ, ದೇಶೀಯವಾಗಿ ರಕ್ಷಣಾ ಉಪಕರಣಗಳ ಉತ್ಪಾದನೆ, ರಕ್ಷಣಾ ರಫ್ತು ಸೇರಿ ಹಲವು ವಿಭಾಗಗಳಿಗೆ ಉತ್ತೇಜನ ನೀಡಲಾಗಿದೆ.

Vistara editorial
Vistara editorial

ರೈಲ್ವೆ ಕ್ಷೇತ್ರಕ್ಕಿಲ್ಲ ಹೆಚ್ಚಿನ ಪ್ರಾಮುಖ್ಯತೆ

ಒಂದು ಕಾಲದಲ್ಲಿ ರೈಲ್ವೆಗಾಗಿಯೇ ಪ್ರತ್ಯೇಕ ಬಜೆಟ್‌ ಮಂಡಿಸಲಾಗುತ್ತಿತ್ತು. ಕೇಂದ್ರ ಸರ್ಕಾರವು ರೈಲ್ವೆ ಬಜೆಟ್‌ಅನ್ನೂ ಸಾಮಾನ್ಯ ಬಜೆಟ್‌ನಲ್ಲೇ ಘೋಷಿಸುತ್ತಿದೆ. ಈ ಬಾರಿ ಸಾಮಾನ್ಯ ಬಜೆಟ್‌ನಲ್ಲೂ ರೈಲ್ವೆ ಕ್ಷೇತ್ರಕ್ಕೆ ಯಾವುದೇ ಮಹತ್ವದ ಘೋಷಣೆ ಮಾಡದಿರುವುದು ಟೀಕೆ ಹಾಗೂ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: Union Budget 2024: ಇನ್ನೊಂದು ವರ್ಷದಲ್ಲಿ ಹಳೇ ತೆರಿಗೆ ಪದ್ಧತಿ ರದ್ದು? ಕೇಂದ್ರ ವಿತ್ತ ಸಚಿವೆ ಹೇಳಿದ್ದಿಷ್ಟು

Continue Reading

ದೇಶ

Union Budget 2024 : ಹೂಡಿಕೆಗಳನ್ನು ಉತ್ತೇಜಿಸಲು ‘ಏಂಜಲ್ ಟ್ಯಾಕ್ಸ್’ ರದ್ದು ಮಾಡಿದ ಕೇಂದ್ರ ಸರ್ಕಾರ

Union Budget 2024 : ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್​​ನಲ್ಲಿ ಪಿಂಚಣಿ ನಿಧಿಗಳ ಬೆಂಬಲಿತ ಸ್ಟಾರ್ಟ್​​ಅಪ್​ಗಳು ಮತ್ತು ಹೂಡಿಕೆಗಳಿಗೆ ನೀಡಲಾಗಿದ್ದ ತೆರಿಗೆ ಪ್ರೋತ್ಸಾಹವನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗಿದೆ. ಈ ಕ್ರಮವು ತೆರಿಗೆ ಪರಿಹಾರ ಪಡೆಯುವ ಉದ್ದೇಶವನ್ನು ಹೊಂದಿತ್ತು.

VISTARANEWS.COM


on

Union Budget 2024
Koo

ಬೆಂಗಳೂರು: ಸ್ಟಾರ್ಟ್ಅಪ್ ಗಳಿಗೆ ಉತ್ತೇಜನ ನೀಡಲು ಹಾಗೂ ಹೂಡಿಕೆಗೆ ಬೆಂಂಬಲಿಸುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವರು ಮಂಡಿಸಿದ ಬಜೆಟ್​ನಲ್ಲಿ (Union Budget 2024) ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಲಾಗಿದೆ. “ಸ್ಟಾರ್ಟ್ಅಪ್​​ಗಳಲ್ಲಿನ ಎಲ್ಲಾ ವರ್ಗದ ಹೂಡಿಕೆದಾರರಿಗೆ ಸರ್ಕಾರ ಏಂಜೆಲ್ ತೆರಿಗೆ ರದ್ದುಗೊಳಿಸುತ್ತದೆ” ಎಂದು ಹಣಕಾಸು ಸಚಿವರು ಬಜೆಟ್​ ಮಂಡನೆ ವೇಳೆ ಹೇಳಿದರು. ಈ ಮೂಲಕ ಹೊಸ ಉದ್ದಿಮೆಗಳನ್ನು ಬೆಂಬಲಿಸಲು ಸರ್ಕಾರ ಬದ್ಧ ಎಂದರು.

ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್​​ನಲ್ಲಿ ಪಿಂಚಣಿ ನಿಧಿಗಳ ಬೆಂಬಲಿತ ಸ್ಟಾರ್ಟ್​​ಅಪ್​ಗಳು ಮತ್ತು ಹೂಡಿಕೆಗಳಿಗೆ ನೀಡಲಾಗಿದ್ದ ತೆರಿಗೆ ಪ್ರೋತ್ಸಾಹವನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗಿದೆ. ಈ ಕ್ರಮವು ತೆರಿಗೆ ಪರಿಹಾರ ಪಡೆಯುವ ಉದ್ದೇಶವನ್ನು ಹೊಂದಿತ್ತು.

ಆದಾಯ ತೆರಿಗೆ ಕಾಯ್ದೆಯಡಿ (ಐಟಿಎ) ಸೆಕ್ಷನ್ 56 (2) (VIB) ಏಂಜೆಲ್ ತೆರಿಗೆಯನ್ನು 2012 ರಲ್ಲಿ ಪರಿಚಯಿಸಲಾಗಿತ್ತು. ಇದು ಷೇರುಗಳ ವಿತರಣೆಯ ಮೂಲಕ ಪಟ್ಟಿ ಮಾಡದ ಕಂಪನಿಗಳು ಮಾಡಿದ ಹೂಡಿಕೆಗಳನ್ನು ಗುರಿಯಾಗಿಸಿಕೊಂಡಿದ್ದವು. ಕಂಪನಿಯ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತಕ್ಕೆ ಈ ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು “ಇತರ ಮೂಲಗಳಿಂದ ಬರುವ ಆದಾಯ” ಎಂದು ವರ್ಗೀಕರಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿತ್ತು. (ಉದಾಹರಣೆಗೆ, ಒಂದು ಕಂಪನಿಯ ಮೌಲ್ಯ 1 ಕೋಟಿ ಇದ್ದು, ಕಂಪನಿಯ ಮೇಲಿನ ಒಟ್ಟು ಹೂಡಿಕೆ 1.5 ಕೋಟಿ ರೂಪಾಯಿ ಇದ್ದರೆ ಹೆಚ್ಚುವರಿ 50 ಲಕ್ಷಕ್ಕೆ ತೆರಿಗೆ ಹಾಕಲಾಗುತ್ತಿತ್ತು. ಇದನ್ನು ಏಂಜಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತಿತ್ತು.

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್​

ಅಕ್ರಮ ಹಣ ವರ್ಗಾವಣೆ ಮತ್ತು ಲೆಕ್ಕವಿಲ್ಲದ ಹಣದ ಹರಿವಿಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು 2012 ರ ಹಣಕಾಸು ಕಾಯ್ದೆಯಗೆ ಸೇರಿಸಲಾಗಿತ್ತು. ಆದಾಗ್ಯೂ, ಇದು ಸ್ಟಾರ್ಟ್ಅಪ್​ಗಳು ಮತ್ತು ಹೂಡಿಕೆದಾರರೊಳಗೆ ವಿವಾದಕ್ಕೆ ಕಾರಣವಾಯಿತು. ನಿಧಿಸಂಗ್ರಹಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಅಪಸ್ವರಕ್ಕೆ ಕಾರಣವಾಯಿತು.

ಆರ್ಥಿಕ ಪಂಡಿತರ ಪ್ರಕಾರ ಪ್ರಕಾರ, ಈ ತೆರಿಗೆ ತೆಗೆದುಹಾಕುವುದು ಸ್ಪಷ್ಟತೆ ಒದಗಿಸುವ ಮತ್ತು ವಿದೇಶಿ ಹೂಡಿಕೆಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸುವ ಮಹತ್ವದ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಏಂಜೆಲ್ ತೆರಿಗೆಯನ್ನು ರದ್ದುಪಡಿಸುವುದು ಸ್ಟಾರ್ಟ್ಅಪ್ ಸಮುದಾಯಕ್ಕೆ ಸಕಾರಾತ್ಮಕ ಬೆಳವಣಿಗೆ. ಇದು ನಿಧಿಸಂಗ್ರಹಕ್ಕೆ ಹೆಚ್ಚು ಬೆಂಬಲ ಮತ್ತು ಕಡಿಮೆ ನಿರ್ಬಂಧಿತ ವಾತಾವರಣ ನಿವಾರಿಸುತ್ತದೆ. ಈ ಬದಲಾವಣೆಯೊಂದಿಗೆ, ಭಾರತದಲ್ಲಿ ನಾವೀನ್ಯತೆ ಮತ್ತು ಹೂಡಿಕೆಗೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.

Continue Reading
Advertisement
Allergies During Monsoon
ಆರೋಗ್ಯ12 mins ago

Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

Dina Bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ಮಧುರ ಪ್ರೀತಿ ಸಿಗಲಿದೆ

INDIA Bloc To Protest
ದೇಶ7 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ7 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ7 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ7 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ8 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ8 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Farmer commits suicide in Kenchanala village
ಕರ್ನಾಟಕ9 hours ago

Farmer Self Harming: ಕೆಂಚನಾಲ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕರ್ನಾಟಕ9 hours ago

Assembly Session: ಕೆಳಮನೆಯಲ್ಲಿ ವಿಧಾನ ಮಂಡಲ ಅನರ್ಹತಾ‌ ನಿವಾರಣಾ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ13 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ17 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಟ್ರೆಂಡಿಂಗ್‌