Rakesh Jhunjhunwala | ರಾಕೇಶ್‌ ಜುಂಜುನ್‌ವಾಲಾ ನಿಧನಕ್ಕೆ ರತನ್‌ ಟಾಟಾ ಸಂತಾಪ - Vistara News

ರಾಕೇಶ್ ಜುಂಜುನ್ವಾಲಾ

Rakesh Jhunjhunwala | ರಾಕೇಶ್‌ ಜುಂಜುನ್‌ವಾಲಾ ನಿಧನಕ್ಕೆ ರತನ್‌ ಟಾಟಾ ಸಂತಾಪ

ಖ್ಯಾತ ಷೇರು ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಅವರ ನಿಧನಕ್ಕೆ ಟಾಟಾ ಸಮೂಹದ ಗೌರವಾಧ್ಯಕ್ಷ ರತನ್‌ ಟಾಟಾ ಅವರು ಸಂತಾಪ ಸೂಚಿಸಿದ್ದಾರೆ. ಷೇರು ಪೇಟೆ ಕುರಿತ ಅಪಾರ ಜ್ಞಾನಕ್ಕಾಗಿ ಜುಂಜುನ್‌ವಾಲಾ ಚಿರಸ್ಮರಣೀಯರಾಗಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

VISTARANEWS.COM


on

ratan tata
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಇಂದು ಬೆಳಗ್ಗೆ ನಿಧನರಾದ ಖ್ಯಾತ ಷೇರು ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಅವರ ಅಗಲಿಕೆಗೆ ಟಾಟಾ ಸಮೂಹದ ಗೌರವಾಧ್ಯಕ್ಷರಾದ ರತನ್‌ ಟಾಟಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತೀಯ ಷೇರು ಮಾರುಕಟ್ಟೆ ಬಗ್ಗೆ ಹೊಂದಿದ್ದ ಅಪಾರ ತಿಳುವಳಿಕೆ ಮತ್ತು ಜ್ಞಾನಕ್ಕಾಗಿ ರಾಕೇಶ್‌ ಜುಂಜುನ್‌ವಾಲಾ ಅವರು ಸದಾ ಸ್ಮರಣೆಯಲ್ಲಿ ಉಳಿದುಕೊಳ್ಳಲಿದ್ದಾರೆ. ತಮ್ಮ ಲವಲವಿಕೆಯ ವ್ಯಕ್ತಿತ್ವ, ಔದಾರ್ಯ, ದೂರದೃಷ್ಟಿಗೋಸ್ಕರ ಸದಾ ನೆನಪಿನಲ್ಲಿ ಇರಲಿದ್ದಾರೆ. ಈ ದೊಡ್ಡ ನಷ್ಟವನ್ನು ಭರಿಸಿಕೊಳ್ಳಬೇಕಿರುವ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತಿದ್ದೇನೆ ಎಂದು ರತನ್‌ ಟಾಟಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Rakesh Jhunjhunwala | 5 ಸಾವಿರ ರೂ. ಹೂಡಿಕೆಯಿಂದ 45 ಸಾವಿರ ಕೋಟಿ ರೂ. ಸಂಪತ್ತಿನ ಒಡೆಯನಾಗಿದ್ದ ಜುಂಜುನ್‌ವಾಲಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Anand Mahindra | ಜುಂಜುನ್‌ವಾಲಾ ಅವರ ಈ ಸಲಹೆ ಸಹಸ್ರಾರು ಕೋಟಿ ರೂ. ಮೌಲ್ಯದ್ದು ಎಂದು ಆನಂದ್‌ ಮಹೀಂದ್ರಾ ಹೇಳಿದ್ದೇಕೆ?

ಆರೋಗ್ಯದ ಕುರಿತು ಬಿಗ್‌ ಬುಲ್‌ ರಾಕೇಶ್‌ ಜುಂಜುನ್‌ವಾಲಾ ಅವರು ಕೆಲವು ವರ್ಷಗಳ ಹಿಂದೆ ನೀಡಿದ್ದ ಸಲಹೆಯನ್ನು ಮಹೀಂದ್ರಾ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರಾ (Anand Mahindra) ಅವರು ಕೊಂಡಾಡಿದ್ದಾರೆ.

VISTARANEWS.COM


on

Anand Mahindra
Koo

ನವದೆಹಲಿ: ಷೇರು ಮಾರುಕಟ್ಟೆಯ ಬಿಗ್‌ ಬುಲ್‌ (Big Bull) ಎಂದೇ ಖ್ಯಾತಿಯಾಗಿದ್ದ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಅವರು ಕೆಲವು ದಿನಗಳ ಹಿಂದಷ್ಟೇ ನಿಧನರಾದರೂ, ಹೂಡಿಕೆ ಕುರಿತು ಅವರು ನೀಡಿದ ಸಲಹೆ, ಷೇರು ಮಾರುಕಟ್ಟೆ ಕುರಿತು ಮಾಡಿದ ವಿಶ್ಲೇಷಣೆ ಸೇರಿ ವಿವಿಧ ವಿಷಯಗಳ ಕುರಿತು ಈಗಲೂ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಜುಂಜುನ್‌ವಾಲಾ ಅವರು ಆರೋಗ್ಯದ ಬಗ್ಗೆ ನೀಡಿದ ಸಲಹೆಯನ್ನು ಮಹೀಂದ್ರಾ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರಾ (Anand Mahindra) ಅವರು ಕೊಂಡಾಡಿದ್ದಾರೆ.

ರಾಕೇಶ್‌ ಜುಂಜುನ್‌ವಾಲಾ ಅವರು ಕೆಲ ವರ್ಷಗಳ ಹಿಂದೆ ನೀಡಿದ್ದ ಸಲಹೆಯ ಪೋಸ್ಟ್‌ ಈಗ ಶೇರ್‌ ಆಗುತ್ತಿದೆ. ಅದನ್ನು ಆನಂದ್‌ ಮಹೀಂದ್ರಾ ಕೂಡ ಹಂಚಿಕೊಂಡಿದ್ದಾರೆ. “ಈ ಪೋಸ್ಟ್‌ ಹೆಚ್ಚು ಶೇರ್‌ ಆಗುತ್ತಿದೆ. ಜುಂಜುನ್‌ವಾಲಾ ಅವರು ತಮ್ಮ ಕೊನೆಯ ದಿನಗಳಲ್ಲಿ ನೀಡಿದ ಸಲಹೆಯು ಉಪಯುಕ್ತವಾಗಿದ್ದು, ಸಹಸ್ರಾರು ಕೋಟಿ ರೂಪಾಯಿಯಷ್ಟು ಮೌಲ್ಯದ್ದು” ಎಂದು ಆನಂದ್‌ ಹೇಳಿದ್ದಾರೆ.

“ನನ್ನ ಕೆಟ್ಟ ಹೂಡಿಕೆ ಎಂದರೆ ಅದು ಆರೋಗ್ಯ. ಆದರೆ, ಬೇರೆಯವರು ಆರೋಗ್ಯದ ಮೇಲೆ ಹೆಚ್ಚು ಹೂಡಿಕೆ ಮಾಡುವಂತೆ ಸಲಹೆ ನೀಡುತ್ತೇನೆ” ಎಂಬುದಾಗಿ ಜುಂಜುನ್‌ವಾಲಾ ಹೇಳಿದ್ದರು. ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂಬುದು ಅವರ ಸಲಹೆಯ ಆಶಯವಾಗಿತ್ತು. ಸಾವಿರಾರು ಕೋಟಿ ರೂ. ಒಡೆಯರಾಗಿದ್ದರೂ ಅವರಿಗೆ ತಮ್ಮ ಆರೋಗ್ಯದ ಕುರಿತು ಅಸಮಾಧಾನ ಇತ್ತು.

ಇದನ್ನೂ ಓದಿ | Viral Video | ಅದೆಂಥ ಜೀವನೋತ್ಸಾಹಿಯಾಗಿದ್ದರು ರಾಕೇಶ್​ ಜುಂಜುನ್​ವಾಲಾ; ಅದ್ಭುತ ಡ್ಯಾನ್ಸ್ ಇಲ್ಲಿದೆ

Continue Reading

ದೇಶ

Rakesh Jhunjhunwala | ರಾಕೇಶ್​ ಜುಂಜುನ್​ವಾಲಾಗೆ ಏನಾಗಿತ್ತು? ಹೊರಬಿತ್ತು ವೈದ್ಯಕೀಯ ವರದಿ

ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ರಾಕೇಶ್​ ಜುಂಜುನ್​ವಾಲ್​ ಸ್ವಲ್ಪ ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದರು. ಇಂದು ಮುಂಜಾನೆ ಮತ್ತೆ ಅಸ್ವಸ್ಥರಾಗಿದ್ದರು.

VISTARANEWS.COM


on

Rakesh Jhunjhunwala
Koo

ಮುಂಬೈ: ಷೇರು ಮಾರುಕಟ್ಟೆಯ ಬಿಗ್​ ಬುಲ್​, ಖ್ಯಾತ ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾ (Rakesh Jhunjhunwala) ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಬಹುಕಾಲದಿಂದಲೂ ಅವರು ಡಯಾಬಿಟಿಸ್​​ನಿಂದ ಬಳಲುತ್ತಿದ್ದರು ಎಂದಷ್ಟೇ ಗೊತ್ತಾಗಿತ್ತು. ಆದರೆ ಅದರ ತೀವ್ರತೆ ಎಷ್ಟಿತ್ತು? ಏನೆಲ್ಲ ಆರೋಗ್ಯ ಸಮಸ್ಯೆಯಿತ್ತು ಎಂಬುದು ಸ್ಪಷ್ಟವಾಗಿರಲಿಲ್ಲ. ಇದೀಗ ಜುಂಜುನ್​ವಾಲಾಗೆ ಚಿಕಿತ್ಸೆ ನೀಡುತ್ತಿದ್ದ, ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮದಾನಿ ಹೇಳಿಕೆ ನೀಡಿದ್ದಾರೆ. ರಾಕೇಶ್ ಜುಂಜುನ್​ವಾಲಾ ಮೃತಪಟ್ಟ ನಂತರ ಮೊದಲ ಬಾರಿಗೆ ಆ ಆಸ್ಪತ್ರೆಯಿಂದ ಪ್ರಕಟಣೆ ಬಿಡುಗಡೆಯಾಗಿದೆ.

‘ರಾಕೇಶ್​ ಜುಂಜುನ್​ವಾಲಾ ಮೃತಪಟ್ಟಿದ್ದು ಹೃದಯ ಸ್ತಂಭನದಿಂದಲೇ ಹೌದು. ಆದರೆ ಅವರು ದೀರ್ಘಕಾಲದಿಂದಲೂ ಅನಾರೋಗ್ಯಕ್ಕೀಡಾಗಿದ್ದರು. ಅವರಿಗೆ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ತುಂಬ ಕಾಲದಿಂದಲೂ ನಿಯಮಿತವಾಗಿ ಡಯಾಲಿಸಿಸ್​​ಗೆ ಒಳಗಾಗುತ್ತಿದ್ದರು. ಡಯಾಬಿಟಿಸ್​ ಗಂಭೀರ ಸ್ವರೂಪದಲ್ಲಿಯೇ ಇತ್ತು. ಇತ್ತೀಚೆಗೆ ಹೃದಯ ಸಮಸ್ಯೆ ಶುರುವಾಗಿ, ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು’ ಎಂದು ಡಾ. ಪ್ರತೀತ್​ ತಿಳಿಸಿದ್ದಾರೆ.

ಭಾರತದ ವಾರೆನ್​ ಬಫೆಟ್​ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್​ವಾಲಾ ಹುಟ್ಟಿದ್ದು 1960ರ ಜುಲೈ 5ರಂದು. ಮುಂಬೈನಲ್ಲಿಯೇ ಬೆಳೆದರು. 1985ರಲ್ಲಿ ಸೈಡನ್​ಹ್ಯಾಮ್​ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಇನ್​​ಸ್ಟಿಟ್ಯೂಟ್​ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಕ್ಕೆ ಸೇರ್ಪಡೆಯಾದರು. ಬಳಿಕ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಾಗಿದ್ದ ರೇಖಾ ಅವರನ್ನು ಮದುವೆಯಾದರು. ಇತ್ತೀಚೆಗೆಷ್ಟೇ ಹೊಸದಾಗಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟು, ಆಕಾಸ ಏರ್​ಲೈನ್​ ಪ್ರಾರಂಭ ಮಾಡಿದ್ದರು.

ಇದನ್ನೂ ಓದಿ: Rakesh Jhunjhunwala | ಸಾರಥಿಯ ನಿರ್ಗಮನಕ್ಕೆ ಆಕಾಸ ಏರ್‌ ಕಂಬನಿ, ಏರ್‌ಲೈನ್ಸ್‌ ಭವಿಷ್ಯವೇನು?

Continue Reading

ಪ್ರಮುಖ ಸುದ್ದಿ

Rakesh Jhunjhunwala | ಸಾರಥಿಯ ನಿರ್ಗಮನಕ್ಕೆ ಆಕಾಸ ಏರ್‌ ಕಂಬನಿ, ಏರ್‌ಲೈನ್ಸ್‌ ಭವಿಷ್ಯವೇನು?

ರಾಕೇಶ್‌ ಜುಂಜುನ್‌ವಾಲಾ ಅವರ ಅಕಾಲಿಕ ನಿಧನದಿಂದ, ಕೇವಲ ಒಂದು ವಾರದ ಹಿಂದೆಯಷ್ಟೇ ಆರಂಭವಾಗಿರುವ (Rakesh Jhunjhunwala) ಆಕಾಸ ಏರ್‌ ತನ್ನ ಸಾರಥಿಯನ್ನು ಕಳೆದುಕೊಂಡಂತಾಗಿದೆ. ಇದರ ಪರಿಣಾಮವೇನು? ಇಲ್ಲಿದೆ ತಜ್ಞರ ಅಭಿಮತ.

VISTARANEWS.COM


on

akasa air
Koo

ಮುಂಬಯಿ: ಬಿಲಿಯನೇರ್‌ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಅವರ ನಿಧನದ ಬಳಿಕ, ಕೇವಲ ಒಂದು ವಾರದ ಹಿಂದೆಯಷ್ಟೇ ಅವರು ಆರಂಭಿಸಿರುವ ಆಕಾಸ ಏರ್‌ನ ಭವಿಷ್ಯವೇನಾಗಲಿದೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

“ರಾಕೇಶ್‌ ಜುಂಜುನ್‌ವಾಲಾ ಅವರ ಅಕಾಲಿಕ ನಿಧನಕ್ಕೆ ನಾವು ತೀವ್ರ ಶೋಕತಪ್ತರಾಗಿದ್ದೇವೆ. ಜುಂಜುನ್‌ವಾಲಾ ಅವರ ಕುಟುಂಬ ವರ್ಗ ಹಾಗೂ ಬಂಧು ಬಳಗ, ಸ್ನೇಹಿತರ ದುಃಖದಲ್ಲಿ ಏರ್‌ಲೈನ್‌ ಕೂಡ ಭಾಗಿಯಾಗಿದೆ. ಜುಂಜುನ್‌ ವಾಲಾ ಅವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ. ಆಕಾಸ ಏರ್‌ ಬಗ್ಗೆ ಜುಂಜುನ್‌ ವಾಲಾ ಅತೀವ ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದರು. ವಿಶ್ವದರ್ಜೆಯ ವಿಮಾನವನ್ನು ನಿರ್ಮಿಸುವುದು ಅವರ ಕನಸಾಗಿತ್ತು. ಪ್ರತಿಯೊಬ್ಬ ಭಾರತೀಯ, ಕಂಪನಿಯ ಉದ್ಯೋಗಿ ಮತ್ತು ಗ್ರಾಹಕರು ಚೆನ್ನಾಗಿರಬೇಕು ಎಂದು ಅವರು ಸದಾ ಬಯಸುತ್ತಿದ್ದರು. ಅದಮ್ಯ ಸ್ಫೂರ್ತಿಯ ಸೆಲೆಯಾಗಿದ್ದರು. ಆಕಾಸ್‌ ಏರ್‌ ಜುಂಜುನ್‌ ವಾಲಾ ಅವರ ಆದರ್ಶ, ಮೌಲ್ಯಗಳನ್ನು ಎತ್ತಿ ಹಿಡಿಯಲಿದೆʼʼ ಎಂದು ಆಕಾಸ ಏರ್‌ ಟ್ವೀಟ್‌ ಮಾಡಿದೆ.

ರಾಕೇಶ್‌ ಜುಂಜುನ್‌ವಾಲಾ ಅವರು ಸ್ಮಾರ್ಟ್‌ ಹೂಡಿಕೆದಾರರಾಗಿದ್ದರು. ರಾಜಕೀಯವಾಗಿಯೂ ಪ್ರಮುಖರೊಡನೆ ಸಂಪರ್ಕವನ್ನು ಹೊಂದಿದ್ದರು. ಅವರು ಪ್ರತಿಯೊಂದು ಹೂಡಿಕೆಯನ್ನೂ ಅಚ್ಚುಕಟ್ಟಾಗಿ, ಸಾಕಷ್ಟು ಯೋಚಿಸಿಯೇ ಮಾಡುತ್ತಿದ್ದರು. ಇದೇ ರೀತಿ ಆಕಾಸ ಏರ್‌ನಲ್ಲೂ ಹೂಡಿಕೆ ಮಾಡಿರಬಹುದು. ಆಕಾಸ ಏರ್‌ಗೆ ಉತ್ತಮ ರೀತಿಯಲ್ಲಿ ಹಣಕಾಸು ವ್ಯವಸ್ಥೆ ನಡೆದಿದೆ. ಹೀಗಾಗಿ ಏರ್‌ಲೈನ್‌ ತನ್ನ ಹಾರಾಟ ಮತ್ತು ಸೇವೆಯನ್ನು ಮುಂದುವರಿಸುತ್ತದೆ. ಹೀಗಿದ್ದರೂ ರಾಕೇಶ್‌ ಜುಂಜುನ್‌ ವಾಲಾ ಅವರ ವೃತ್ತಿಪರತೆ, ಕಾರ್ಪೊರೇಟ್‌ ವ್ಯವಹಾರಗಳ ಕುರಿತ ಅವರ ಜ್ಞಾನ, ಅನುಭವದ ಪ್ರಯೋಜನಗಳು ಸಂಸ್ಥೆಗೆ ಮಿಸ್‌ ಆಗಬಹುದು ಎನ್ನುತ್ತಾರೆ ವೈಮಾನಿಕ ಕ್ಷೇತ್ರದ ತಜ್ಞರಾದ ದಿವೇಶ್‌ ಅಗ್ರವಾಲ್.‌

ಆಕಾಸ ಏರ್‌ ಈಗಾಗಲೇ ಸುಸಜ್ಜಿತ ಹಾಗೂ ವೃತ್ತಿಪರ ತಂಡ, ಆಡಳಿತ ಮಂಡಳಿಯೊಂದಿಗೆ ತನ್ನ ಸೇವೆಯನ್ನು ಆರಂಭಿಸಿದೆ. ಸಿಇಒ ಆಗಿ ಜೆಟ್‌ ಏರ್‌ವೇಸ್‌ನ ಮಾಜಿ ಸಿಇಒ ವಿನಯ್‌ ದುಬೆ ಅವರಿದ್ದಾರೆ. ಅವರು ಸಹ ಸಂಸ್ಥಾಪಕರೂ ಆಗಿದ್ದಾರೆ.

“ರಾಕೇಶ್‌ ಜುಂಜುನ್‌ವಾಲಾ ಅವರ ನಿಧನ ಅಕಾಲಿಕವಾಗಿದೆ. ಆಕಾಸ ಏರ್‌ನ ಭವಿಷ್ಯದ ಪ್ಲಾನ್‌ ಎಂಬುದು ಬಹಿರಂಗವಾಗಿಲ್ಲ. ಜುಂಜುನ್‌ವಾಲಾ ಅವರ ತಿಳುವಳಿಕೆ, ಮಾರ್ಗದರ್ಶನ ಇನ್ನು ಮುಂದೆ ಆಕಾಸ್‌ ಏರ್‌ಗೆ ಸಿಗದಿರಬಹುದು. ಆದರೆ ಏರ್‌ಲೈನ್‌ ತನ್ನ ಪ್ಲಾನ್‌ ಪ್ರಕಾರ ಮುಂದುವರಿಯುವ ಸಾಧ್ಯತೆಯೇ ಹೆಚ್ಚುʼʼ ಎನ್ನುತ್ತಾರೆ ದಿವೇಶ್‌ ಅಗ್ರವಾಲ್.‌

Continue Reading

ದೇಶ

Rakesh Jhunjhunwala | ಸಂಜೆ 5.30ಕ್ಕೆ ರಾಕೇಶ್‌ ಜುಂಜುನ್‌ವಾಲಾ ಅಂತ್ಯಕ್ರಿಯೆ

ಷೇರುಮಾರುಕಟ್ಟೆಯ ಬಿಗ್‌ಬುಲ್ ಖ್ಯಾತಿಯ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಅಂತ್ಯಕ್ರಿಯೆ ಮುಂಬೈನ ಮಲಬಾರ್‌ ಹಿಲ್ಸ್‌ನಲ್ಲಿ ಸಂಜೆ 5.30ಕ್ಕೆ ನೆರವೇರಲಿದೆ.

VISTARANEWS.COM


on

Rakesh Jhunjhunwala
Koo

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ದಿಗ್ಗಜ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಅವರ ಅಂತ್ಯಕ್ರಿಯೆ ಸಂಜೆ ೫.೩೦ಕ್ಕೆ ಮುಂಬೈನ ಮಲಬಾರ್‌ ಹಿಲ್ಸ್‌ನಲ್ಲಿ ನಡೆಯಲಿದೆ. ಬಂಗಾಂಗ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಮಲಬಾರ್‌ ಹಿಲ್ಸ್‌ನಲ್ಲಿರುವ ಜುಂಜುನ್‌ವಾಲಾ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ. ಸಾರ್ವಜನಿಕರಿಗೂ ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು, ಗಣ್ಯರು ಅಂತಿಮ ದರ್ಶನ ಪಡೆದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.

ರಾಕೇಶ್‌ ಜುಂಜುನ್‌ವಾಲಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ನೂರಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅದರಲ್ಲೂ, ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿದ, ಬಿಗ್‌ ಬುಲ್‌ ಒಡೆತನದ ಆಕಾಸ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯು ಭಾವನಾತ್ಮಕ ಸಂದೇಶದ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

ಇದನ್ನೂ ಓದಿ | Viral Video | ಅದೆಂಥ ಜೀವನೋತ್ಸಾಹಿಯಾಗಿದ್ದರು ರಾಕೇಶ್​ ಜುಂಜುನ್​ವಾಲಾ; ಅದ್ಭುತ ಡ್ಯಾನ್ಸ್ ಇಲ್ಲಿದೆ

Continue Reading
Advertisement
Lok sabha Election
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ಈ ದಿನ ನಮ್ಮದು, ನಮ್ಮ ಅಧಿಕಾರ ಚಲಾಯಿಸೋಣ

food
ಕರ್ನಾಟಕ4 hours ago

Food Poisoning : ಮದುವೆ ಮನೆ ಊಟ ತಿಂದ ನೂರಾರು ಮಂದಿ ಅಸ್ವಸ್ಥ; ಆಸ್ಪತ್ರೆಯಲ್ಲಿ ಹಾಹಾಕಾರ

PM Narendra Modi will visit Sirsi on April 28
ಉತ್ತರ ಕನ್ನಡ4 hours ago

Lok Sabha Election 2024: ಶಿರಸಿಯಲ್ಲಿ ಏಪ್ರಿಲ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಸಮಾವೇಶ

Bus Driver attacked
ಕರ್ನಾಟಕ4 hours ago

Bus driver Attacked : ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಠಾಣೆ ಮುಂಭಾಗ ಧರಣಿ

IPL 2024
ಪ್ರಮುಖ ಸುದ್ದಿ5 hours ago

IPL 2024 : ಆರ್​​ಸಿಬಿಗೆ ಸಿಕ್ಕಿತು ಕೊನೆಗೂ ಒಂದು ವಿಜಯ; ಎಸ್​ಆರ್​ಎಚ್​ ವಿರುದ್ಧ 35 ರನ್ ಗೆಲುವು

Viral News
ವೈರಲ್ ನ್ಯೂಸ್5 hours ago

Viral News: ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿದ ಬುದ್ಧಿವಂತ ಮಂಗ; ವಿಡಿಯೊ ನೀವೂ ನೋಡಿ

lok sabha Election
ಪ್ರಮುಖ ಸುದ್ದಿ5 hours ago

lok sabha election : ಒಂದು ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್​​!

Car Accident
ಪ್ರಮುಖ ಸುದ್ದಿ5 hours ago

Car Accident : ಟೈರ್​ ಬ್ಲಾಸ್ಟ್​ ಆಗಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕಾರು; ಇಬ್ಬರ ದುರ್ಮರಣ

Narendra Modi
ದೇಶ6 hours ago

Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

khalistan movement
ಪ್ರಮುಖ ಸುದ್ದಿ6 hours ago

khalistan Movement : ಲಂಡನ್​ ಭಾರತ ಹೈಕಮಿಷನ್​ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿ ಉಗ್ರ ಎನ್​ಐಎ ವಶಕ್ಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ12 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ12 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ15 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202417 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು4 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET 2024 Exam
ಬೆಂಗಳೂರು4 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌