ವಾಣಿಜ್ಯ
Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ
ದೇಶದಲ್ಲಿ ಚಿಲ್ಲರೆ ಹಣದುಬ್ಬರ ಈಗಲೂ ಉನ್ನತ ಮಟ್ಟದಲ್ಲಿ ಇರುವುದಕ್ಕೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಹೀಗಿದ್ದರೂ ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಎಕಾನಮಿ ( Retail inflation) ಉತ್ತಮವಾಗಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಿದೆ.
ಮುಂಬಯಿ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಈಗಲೂ ಉನ್ನತ ಮಟ್ಟದಲ್ಲಿ ಮುಂದುವರಿದಿರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ತನ್ನ ಮಾಸಿಕ ಬುಲೆಟಿನ್‌ನಲ್ಲಿ ಕಳವಳ ವ್ಯಕ್ತಪಡಿಸಿದೆ. ( Retail inflation) ಮೂಲ ಹಣದುಬ್ಬರ (core inflation) ಹೆಚ್ಚಳದ ಪರಿಣಾಮ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ ಎಂದು ತಿಳಿಸಿದೆ.
ರಿಟೇಲ್ ಹಣದುಬ್ಬರ 2023ರ ಜನವರಿಯಲ್ಲಿ 6.52% ಮತ್ತು ಫೆಬ್ರವರಿಯಲ್ಲಿ 6.44% ರಷ್ಟಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 8% ಅಧಿಕ ಹಣದುಬ್ಬರ ಇತ್ತು. ಛತ್ತೀಸ್‌ಗಢ, ದಿಲ್ಲಿ, ಗೋವಾ, ಹಿಮಾಚಲಪ್ರದೇಶ, ಮಣಿಪುರದಲ್ಲಿ 4% ಕ್ಕಿಂತ ಕಡಿಮೆ ಹಣದುಬ್ಬರ ಇತ್ತು ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ.
ಭಾರತ ಪ್ರಗತಿಪರ ಮಾರುಕಟ್ಟೆಯಾಗಿದ್ದು, ವಿತ್ತೀಯ ಕೊರತೆ ( current account deficit) ಇದೆ. ಉಳಿತಾಯದ ಪ್ರಮಾಣ ಇಳಿಕೆಯಾಗಿದ್ದರೂ, ವಿದೇಶಿ ಸಂಪನ್ಮೂಲದ ಪೂರೈಕೆಯಿಂದ ಭರಿಸಲಾಗುತ್ತಿದೆ. ಹೀಗಾಗಿ ಉದ್ದೇಶಿತ ಹೂಡಿಕೆ ಸಾಧ್ಯವಾಗುತ್ತಿದೆ ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ.
ಜಗತ್ತಿನ ಹಲವಾರು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಆರ್ಥಿಕತೆ 2023ರಲ್ಲಿ ಆರ್ಥಿಕ ಹಿಂಜರಿತದ ಭೀತಿಯಲ್ಲಿದ್ದರೂ, ಭಾರತವು ಕೋವಿಡ್ ಬಿಕ್ಕಟ್ಟಿನ ಬಳಿಕ ಆರ್ಥಿಕವಾಗಿಯೂ ಚೇತರಿಸಿಕೊಂಡಿದೆ ಎಂದು ಆರ್‌ಬಿಐ ತಿಳಿಸಿದೆ.
ದೇಶ
Fashion Factory: ಹಳೆ ಬಟ್ಟೆ, ಶೂ ಕೊಟ್ರೆ, ಹೊಸ ಬಟ್ಟೆ ಕೊಡ್ತಾರೆ! ಇದು ಫ್ಯಾಷನ್ ಫ್ಯಾಕ್ಟರಿ ಕಮಾಲ್
Fashion Factory: ರಿಲಯನ್ಸ್ ರೀಟೆಲ್‌ಗೆ ಸೇರಿದ ಫ್ಯಾಶನ್ ಫ್ಯಾಕ್ಟರಿ ಹೊಸ ಆಫರ್ ಘೋ,ಣೆ ಮಾಡಿದೆ. ಗ್ರಾಹಕರು ತಮ್ಮ ಯಾವುದೇ ಹಳೆ ಬಟ್ಟೆದಳು, ಶೂಗಳನ್ನು ಬ್ರ್ಯಾಂಡೆಡ್ ಬಟ್ಟೆಗಳಿಗೆ ವಿನಿಮಯ ಮಾಡಿಕೊಳ್ಳಬಾರದು.
ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರೀಟೇಲ್‌ಗೆ (Reliance Retail) ಸೇರಿದ “ಫ್ಯಾಷನ್ ಫ್ಯಾಕ್ಟರಿ”ಯಿಂದ (Fashion Factory) ಭಾರತದಾದ್ಯಂತ ರಿಯಾಯಿತಿ ಮಾರಾಟವನ್ನು ಮಾಡಲಾಗುತ್ತಿದೆ. ಗ್ರಾಹಕರು ಈಗ ತಮ್ಮ ಬಳಿ ಇರುವ ಯಾವುದೇ ಅನ್ ಬ್ರ್ಯಾಂಡೆಡ್ ಬಟ್ಟೆಗಳು, ಶೂಗಳು ಇತ್ಯಾದಿಗಳನ್ನು ಫ್ಯಾಷನ್ ಫ್ಯಾಕ್ಟರಿಯಲ್ಲಿನ ಬ್ರ್ಯಾಂಡೆಡ್ ಬಟ್ಟೆಗಳು, ಶೂಗಳು ಇತ್ಯಾದಿಗಳ ಜತೆಗೆ ವಿನಿಮಯ ಮಾಡಿಕೊಳ್ಳಬಹುದು. ಇದು ವಿನಿಮಯದ ಉತ್ಸವವಾಗಿದ್ದು, ಇಲ್ಲಿಂದ ಖರೀದಿಸಿದ ನೆಚ್ಚಿನ ಬ್ರ್ಯಾಂಡ್ ಹಾಗೂ ಟ್ರೆಂಡ್ ದಿರಿಸು, ಶೂಗಳು ಮೊದಲಾದವುಗಳನ್ನು ಹಳೆಯದರ ಬದಲಾಗಿ ಮನೆಗೆ ಒಯ್ಯಬಹುದು.
ಇಂಥ ಅವಕಾಶವನ್ನು ಜಾಕ್ ಪಾಟ್ ಅನ್ನದೇ ಬೇರೆ ಏನೆನ್ನಲು ಸಾಧ್ಯ? ಗ್ರಾಹಕರು ತಮ್ಮ ಹಳೆಯ ಡೆನಿಮ್ಸ್ (ಜೀನ್ಸ್ ಪ್ಯಾಂಟ್), ಟಿ ಶರ್ಟ್ ಗಳು, ಶರ್ಟ್ ಗಳು ಮತ್ತು ಶೂಗಳನ್ನು ಫ್ಯಾಷನ್ ಫ್ಯಾಕ್ಟರಿಗೆ ತಂದು, ಇಲ್ಲಿನ ಬ್ರ್ಯಾಂಡೆಡ್ ಹಾಗೂ ಟ್ರೆಂಡಿಯಾದ, ನೆಚ್ಚಿನ ಬಟ್ಟೆಗಳು, ಶೂಗಳು ಇತ್ಯಾದಿಗಳನ್ನು ವಿನಿಮಯದಲ್ಲಿ ಖರೀದಿಸಬಹುದು. ಹಳೇ ವಸ್ತುಗಳಿಗೆ ಉತ್ತಮ ಬೆಲೆಯೂ ಸಿಗುತ್ತದೆ, ಜೊತೆಗೆ ಭರ್ಜರಿ ರಿಯಾಯಿತಿಯೂ ಲಭ್ಯ.
ಫ್ಯಾಷನ್ ಫ್ಯಾಕ್ಟರಿಯ ಈ ವಿನಿಮಯ ಉತ್ಸವವು ಜೂನ್ 25ರ ವರೆಗೆ ಎಲ್ಲಾ ಸ್ಟೋರ್ ಗಳಲ್ಲಿ ಲಭ್ಯವಿದೆ. ನಿಮ್ಮ ಸಮೀಪದ ಫ್ಯಾಷನ್ ಫ್ಯಾಕ್ಟರಿ ಸ್ಟೋರ್ ಗೆ ಭೇಟಿ ನೀಡಿರಿ ಮತ್ತು ನಿಮ್ಮ ಹಳೆ / ಅನ್ ಬ್ರಾಂಡೆಡ್ ಬಟ್ಟೆಗಳು ಮತ್ತು ಶೂಗಳನ್ನು ವಿನಿಮಯ ಮಾಡಿಕೊಳ್ಳಿರಿ. ಡೆನಿಮ್ ಮೇಲೆ ರೂ. 400 ಮೌಲ್ಯದ ವಿನಿಮಯದ ವ್ಯಾಲ್ಯೂ ಕೂಪನ್, ಶೂಗಳ ಮೇಲೆ ರೂ.300, ಶರ್ಟ್ ಗಳ ಮೇಲೆ ರೂ. 250 ಮತ್ತು ಟೀ ಶರ್ಟ್ ಮೇಲೆ ರೂ.150ರ ಜತೆಗೆ ಹೊಸ ಉತ್ಪನ್ನಗಳ ಮೇಲೆ ಶೇಕಡಾ 50ರ ವರೆಗೆ ಹೆಚ್ಚುವರಿ ರಿಯಾಯಿತಿ ದೊರೆಯುತ್ತದೆ.
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಬ್ರ್ಯಾಂಡ್ ಗಳಾದ ಲೆವೀಸ್, ಪೆಪೆ, ಸ್ಪೈಕರ್, ಲೀ, ಅವಾಸಾ, ಮಾರ್ಕ್ಸ್ ಅಂಡ್ ಸ್ಪೆನ್ಸರ್, ಜಿಯೋರ್ಡಾನೊ, ಅಡಿಡಾಸ್, ಪುಮಾ, ಸ್ಕೆಚರ್ಸ್ ಮತ್ತು ಲೀ ಕೂಪರ್ ಇತ್ಯಾದಿ ಬ್ರ್ಯಾಂಡ್ ಗಳು ಈ ಆಕರ್ಷಕ ವಿನಿಮಯ ಉತ್ಸವದಲ್ಲಿ ಲಭ್ಯ ಇವೆ. ಈ ವಿನಿಮಯ ಕೂಪನ್ ಗಳ ಬಿಡುಗಡೆ ಮೇ 28ರಿಂದ ಆರಂಭಗೊಂಡಿದೆ ಮತ್ತು ಈ ಕೂಪನ್ ಗಳನ್ನು ಜೂನ್ 25ರ ವರೆಗೆ ಯಾವುದೇ ಫ್ಯಾಷನ್ ಫ್ಯಾಕ್ಟರಿ ಸ್ಟೋರ್ ನಲ್ಲಿ ರಿಡೀಮ್ ಮಾಡಿಕೊಳ್ಳಬಹುದಾಗಿದೆ.
ಬ್ರ್ಯಾಂಡ್ ಬಗ್ಗೆ ಕಾಳಜಿ ಇರುವವರಾಗಿದ್ದರೆ ಹಾಗೂ ಮೌಲ್ಯ ಹುಡುಕುವ ಗ್ರಾಹಕರಾಗಿದ್ದರೆ ಫ್ಯಾಷನ್ ಫ್ಯಾಕ್ಟರಿಯು ಶಾಪಿಂಗ್ ಮಾಡಲು ನಿಮಗೆ ಇದು ಸೂಕ್ತ ಸ್ಥಳವಾಗಿದ್ದು, ವರ್ಷದ 365 ದಿನಗಳಲ್ಲೂ ವಿಶಿಷ್ಟ ಫ್ಯಾಷನ್ ವಸ್ತುಗಳನ್ನು ಒದಗಿಸುತ್ತದೆ. ಉತ್ತಮ ಬ್ರ್ಯಾಂಡ್ ವಸ್ತುಗಳ ಮೇಲೆ ಶೇ 20ರಿಂದ ಶೇ 70ರ ವರೆಗೆ ರಿಯಾಯಿತಿ ಇರುತ್ತದೆ. ನಿಮಗಿಷ್ಟದ ಫ್ಯಾಷನ್ ಬ್ರ್ಯಾಂಡ್ ಗಳನ್ನು ಖರೀದಿಸಲು ಈಗಲೇ ಮಳಿಗೆಗೆ ಭೇಟಿ ನೀಡಿ.
ಇದನ್ನೂ ಓದಿ: ರಿಲಯನ್ಸ್ ರಿಟೇಲ್ ಅಧ್ಯಕ್ಷರಾಗಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ನೇಮಕ
ತಂತ್ರಜ್ಞಾನ
Digital Payments: ಡಿಜಿಟಲ್ ಪಾವತಿ, ಇಂಡಿಯಾದ್ದೇ ಕೀರ್ತಿ! ಎಲ್ಲ ದೇಶಗಳನ್ನು ಹಿಂದಿಕ್ಕಿ ನಂ.1 ಆದ ಭಾರತ
Digital Payments:ಭಾರತದ ಡಿಜಿಟಲ್ ವ್ಯವಸ್ಥೆಯು ಮತ್ತೊಂದು ಸಾಹಸವನ್ನು ಮಾಡಿದೆ. 2022ರ ಅಂಕಿ ಸಂಖ್ಯೆಗಳ ಪ್ರಕಾರ ಜಗತ್ತಿನಲ್ಲೇ ಡಿಜಿಟಲ್ ಪೇಮೆಂಟ್ಸ್‌ನಲ್ಲಿ ಭಾರತವು ಅಗ್ರಗಣ್ಯ ರಾಷ್ಟ್ರವಾಗಿದೆ.
ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದೆ(digital revolution in india). ಇದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ (Digital Payments) ಭಾರತವು (India) ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. 2022ರಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್‌ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಅಂದರೆ, ಜಾಗತಿಕವಾಗಿ (World) ನಡೆಯುವ ರಿಯಲ್‌ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ!
ಡಿಜಿಟಿಲ್ ಪಾವತಿಯಲ್ಲಿ ಭಾರತದ ನಂತರದ ಸ್ಥಾನದಲ್ಲಿ 2.92 ಕೋಟಿ ಪಾವತಿಗಳೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್ ನಂತರದ ಸ್ಥಾನದಲ್ಲಿ ಸೌತ್ ಕೋರಿಯಾ 80 ಲಕ್ಷ ಪಾವತಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಮೈಗೌವ್‌ಇಂಡಿಯಾ ಮಾಹಿತಿ ನೀಡಿದೆ.
ಮೈಗೌಇಂಡಿಯಾ (MyGovIndia) ಎಂಬುದು ಭಾರತೀಯ ಸರ್ಕಾರದ ವೇದಿಕೆಯಾಗಿದ್ದು ಅದು ನಾಗರಿಕರು ತಳಮಟ್ಟದಲ್ಲಿ ಡಿಜಿಟಲ್ ಆಗಿ ತೊಡಗಿಸಿಕೊಳ್ಳಲು ಮತ್ತು ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಡಿಜಿಟಲ್ ಪಾವತಿಗಳಲ್ಲಿ ಭಾರತದ ನಾಯಕತ್ವ ಮತ್ತು ದೇಶದ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿವರ್ತಕ ಪರಿಣಾಮವನ್ನು ಒತ್ತಿ ಹೇಳಿದ್ದರು.
ಇದನ್ನೂ ಓದಿ: Har Payment Digital: ಹರ್ ಪೇಮೆಂಟ್ ಡಿಜಿಟಲ್ ಮಿಷನ್‌ಗೆ ಚಾಲನೆ ನೀಡಿದ ಆರ್‌ಬಿಐ, ವಾರ ಪೂರ್ತಿ ಜಾಗೃತಿ
ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪರಿಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಇದು ದೇಶದ ಪಾವತಿ ಪರಿಸರ ವ್ಯವಸ್ಥೆಯ ಶಕ್ತಿ ಮತ್ತು ವ್ಯಾಪಕವಾದ ಸ್ವೀಕಾರವನ್ನು ಎತ್ತಿ ತೋರಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರ ಪರಿಣಾಮವೇ ಈಗ ಈ ಸಾಧನೆ ಮಾಡಲು ಸಾಧ್ಯವಾಗಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ವಾಣಿಜ್ಯ
Gold Rate Today: ಬೆಂಗಳೂರಲ್ಲಿ ಹೆಚ್ಚಿದ ಬೆಳ್ಳಿ ಬೆಲೆ; ಎಷ್ಟಿದೆ ಇಂದಿನ ಬಂಗಾರದ ದರ?
Silver Rate: ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ನಿನ್ನೆಗಿಂತಲೂ 175 ರೂ. ಹೆಚ್ಚಿದೆ. 1 ಗ್ರಾಂ ಬೆಳ್ಳಿ ಬೆಲೆ 75.75 ರೂಪಾಯಿ ಇದೆ.
ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭಾರತದಲ್ಲಂತೂ ಚಿನ್ನವನ್ನು ಹೂಡಿಕೆ, ಅಲಂಕಾರಕ್ಕಾಗಿ ಯತೇಚ್ಛವಾಗಿ ಬಳಕೆ ಮಾಡುತ್ತಾರೆ. ಮದುವೆ ಸಮಾರಂಭ, ಕೆಲವು ಹಬ್ಬಗಳಲ್ಲಿ ಈ ಲೋಹಕ್ಕೆ ವಿಶೇಷ ಪ್ರಾಶಸ್ತ್ಯ ಇದೆ. ಅಷ್ಟೇ ಅಲ್ಲ, ಚಿನ್ನ ಆಪತ್ಕಾಲದ ರಕ್ಷಕ. ಕೈಯಲ್ಲಿ ಹಣವಿದ್ದಾಗ ಬಂಗಾರ ಕೊಂಡು ಇಟ್ಟುಕೊಂಡರೆ, ಅದು ಮುಂದೆ ಯಾವುದೇ ಆರ್ಥಿಕ ಸಂಕಷ್ಟದಲ್ಲಿ ನಮ್ಮ ಕೈ ಹಿಡಿಯುತ್ತದೆ ಎಂಬ ನಂಬಿಕೆ ಭಾರತೀಯರದ್ದು. ಹೀಗಾಗಿ ಚಿನ್ನವನ್ನು ಕೊಳ್ಳಲು ಜನ ಆ ಕಾಲ, ಈ ಕಾಲ ಎಂದು ನೋಡುವುದಿಲ್ಲ. ಅಂಥ ಚಿನ್ನಪ್ರಿಯರು, ಬಂಗಾರ ಖರೀದಿಸಲು ಪ್ಲ್ಯಾನ್ ಮಾಡುತ್ತಿರುವವರಿಗೆ ಇಂದು ಗುಡ್ನ್ಯೂಸ್ ಇದೆ. ಇಂದು ಚಿನ್ನದ ದರ (Gold Rate Today) ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ.
ಗುಡ್ ರಿಟರ್ನ್ಸ್ ವೆಬ್ಸೈಟ್ ಪ್ರಕಾರ ಭಾರತದಲ್ಲಿ ಇಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಇಳಿಕೆಯಾಗಿದೆ. ನಿನ್ನೆ 55,600 ರೂಪಾಯಿ ಇತ್ತು. ಅದು ಇಂದು 55,500 ರೂ.ಗೆ ಇಳಿಕೆಯಾಗಿದೆ. ಹಾಗೇ, 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ನಿನ್ನೆಗಿಂತಲೂ 10 ರೂ. ಇಳಿಕೆಯಾಗಿದ್ದ 5,550 ರೂ. ಆಗಿದೆ. 8 ಗ್ರಾಂ.ಗೆ 44,400 ರೂ., 100 ಗ್ರಾಂ.ಗೆ 5,55,000 ರೂ. ಇದೆ. ಹಾಗೇ, ದೇಶದಲ್ಲಿ 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ ಕೂಡ ನಿನ್ನೆಗಿಂತಲೂ 100 ರೂ.ಕಡಿಮೆಯಾಗಿದ್ದು, 60,550 ರೂ.ಕ್ಕೆ ಮಾರಾಟವಾಗುತ್ತಿದೆ. 1 ಗ್ರಾಂ.ಗೆ 6,055ರೂ., 8 ಗ್ರಾಂ.ಗೆ 48,440 ರೂ, 100 ಗ್ರಾಂ.ಗೆ 6,05,500 ರೂಪಾಯಿ ಇದೆ. ಇನ್ನು ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 1ಗ್ರಾಂ ಬೆಳ್ಳಿ ಬೆಲೆ 74.50 ರೂ., 8 ಗ್ರಾಂ-596 ರೂ., 10 ಗ್ರಾಂ.-745 ರೂ., 100 ಗ್ರಾಂ- 7,450 ರೂ. ಮತ್ತು 1 ಕೆಜಿಗೆ 74,500 ರೂ.ಇದೆ.
ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?
22 ಕ್ಯಾರೆಟ್ ಚಿನ್ನ: 1 ಗ್ರಾಂ- 5,550 ರೂ., 8 ಗ್ರಾಂ-44,440 ರೂ., 10 ಗ್ರಾಂ-55,550 ರೂ., 100 ಗ್ರಾಂ-5,55,500 ರೂ.
24 ಕ್ಯಾರೆಟ್ ಚಿನ್ನ: 1 ಗ್ರಾಂ-6,060 ರೂ., 8 ಗ್ರಾಂ-48,480 ರೂ., 10 ಗ್ರಾಂ-60,600 ರೂ., 100 ಗ್ರಾಂ-6,06,000 ರೂ.
ಬೆಳ್ಳಿ ದರ: ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ನಿನ್ನೆಗಿಂತಲೂ 175 ರೂ. ಹೆಚ್ಚಿದೆ. 1 ಗ್ರಾಂ ಬೆಳ್ಳಿ ಬೆಲೆ 75.75 ರೂ., 8 ಗ್ರಾಂ.-606 ರೂ., 10 ಗ್ರಾಂ-757.75 ರೂ., 100 ಗ್ರಾಂ-7,575 ರೂ., 1 ಕೆಜಿ-75,750 ರೂಪಾಯಿ ಆಗಿದೆ.
ಇದನ್ನೂ ಓದಿ: Gold price today : ಚಿನ್ನದ ದರದಲ್ಲಿ ಅಲ್ಪ ಇಳಿಕೆ, ಬೆಳ್ಳಿ 400 ರೂ. ಹೆಚ್ಚಳ
22 ಕ್ಯಾರೆಟ್ ಚಿನ್ನಕ್ಕೂ-24 ಕ್ಯಾರೆಟ್ ಚಿನ್ನಕ್ಕೂ ಇರುವ ವ್ಯತ್ಯಾಸ
ಸಾಮಾನ್ಯವಾಗಿ 22 ಕ್ಯಾರೆಟ್ ಚಿನ್ನಕ್ಕೂ, 24 ಕ್ಯಾರೆಟ್ ಚಿನ್ನಕ್ಕೂ ದರದಲ್ಲಿ ವ್ಯತ್ಯಾಸ ಇರುತ್ತದೆ. 22 ಕ್ಯಾರೆಟ್ ಚಿನ್ನಕ್ಕೆ ಸ್ವಲ್ಪ ಕಡಿಮೆ ಬೆಲೆ ಇದ್ದರೆ, 24 ಕ್ಯಾರೆಟ್ ಬಂಗಾರಕ್ಕೆ ಬೆಲೆ ಹೆಚ್ಚಿರುತ್ತದೆ. ಆದರೆ 22 ಕ್ಯಾರೆಟ್ಗೂ, 24 ಕ್ಯಾರೆಟ್ಗೂ ನಡುವಿನ ವ್ಯತ್ಯಾಸದ ಅರಿವು ಅನೇಕ ಗ್ರಾಹಕರಿಗೆ ಇರುವುದಿಲ್ಲ. ಇದು ಮತ್ತೇನಲ್ಲ, 22 ಕ್ಯಾರೆಟ್ ಎಂದರೆ ಅದರಲ್ಲಿ ಶೇ.91ರಷ್ಟು ಶುದ್ಧ ಚಿನ್ನ ಇದ್ದರೆ, 24 ಕ್ಯಾರೆಟ್ನಲ್ಲಿ ಶೇ.99.9ರಷ್ಟು ಶುದ್ಧ ಚಿನ್ನ ಇರುತ್ತದೆ. 22 ಕ್ಯಾರೆಟ್ ಚಿನ್ನದ ಆಭರಣಗಳಲ್ಲಿ ಇನ್ನುಳಿದ ಶೇ.9ರಷ್ಟು ಭಾಗ ತಾಮ್ರ, ಬೆಳ್ಳಿ, ಸತುವಿನ ಅಂಶ ಇರುತ್ತದೆ. 24 ಕ್ಯಾರೆಟ್ನ ಚಿನ್ನವನ್ನು ಅಪರಂಜಿ ಎಂದೂ ಕರೆಯಲಾಗುತ್ತದೆ, ಇದನ್ನು ಆಭರಣಗಳಲ್ಲಿ ಬಳಕೆ ಮಾಡುವುದಿಲ್ಲ.
ದೇಶ
Gold Rate Today: ಬೆಂಗಳೂರಲ್ಲಿ ನಿನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ
Gold Rate Today: ಬೆಂಗಳೂರು ಮಾರುಕಟ್ಟೆಯಲ್ಲಿಗುರುವಾರ ಚಿನ್ನದ ದರ ಕೊಂಚ ಇಳಿಕೆಯಾಗಿತ್ತು. ಆದರೆ, ಅಂತಾರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ರವಾರ ದರ ಏರಿಕೆಯಾಗಿದೆ.
ಬೆಂಗಳೂರು, ಕರ್ನಾಟಕ: ದೇಶದ ಐಟಿ ಕ್ಯಾಪಿಟಲ್ ಆಗಿರುವ ಬೆಂಗಳೂರು (Bengaluru) ನಗರದಲ್ಲಿ ಜೂನ್ 9ರಂದು ಬಂಗಾರ ದರದಲ್ಲಿ ಏರಿಕೆಯಾಗಿದೆ. 1 ಗ್ರಾಮ್ 22 ಕ್ಯಾರಟ್ ಗೋಲ್ಡ್ ಬೆಲೆ ಇಂದು(ಶುಕ್ರವಾರ) 5,565 ರೂ. ಇದೆ. ಗುರುವಾರ ಈ ಬೆಲೆ 5525 ರೂ. ಇತ್ತು. ಅದೇ ರೀತಿ, 10 ಗ್ರಾಮ್ ದರ 55650 ರೂ. ಆಗಿದೆ. ಇನ್ನು 24 ಕ್ಯಾರಟ್ ಗೋಲ್ಡ್ ದರ ಶುಕ್ರವಾರ 10 ಗ್ರಾಮ್‌ಗೆ 60,730 ರೂ. ಇದೆ. ಗುರುವಾರ ಈ ದರ 60,270 ರೂ. ಇತ್ತು. ಅಂದರೆ, 460 ಏರಿಕೆಯಾಗಿದೆ(Gold Rate Today).
ಬೆಂಗಳೂರು ಸೇರಿದಂತೆ ದೇಶಾದ್ಯಂತ ಚಿನ್ನದ ದರ ಏರಿಕೆಯಾಗಿದೆ. ಈ ಮೂಲಕ ಸತತ ಎರಡು ವಾರಗಳಿಂದಲೂ ಏರಿಕೆಯ ಹಾದಿಯಲ್ಲಿದೆ. ಇದರ ಪರಿಣಾಮ ಬೆಳ್ಳಿಯ ದರವೂ ನಾಲ್ಕು ವಾರಗಳಲ್ಲಿ ಅತ್ಯಧಿಕವಾಗಿದೆ ಎನ್ನುತ್ತಿವ ಮಾರುಕಟ್ಟೆ ಮೂಲಗಳು. ಭಾರತದ ರೂಪಾಯಿ ಎದುರು ತುಸು ಡಾಲರ್ ಮೌಲ್ಯ ಇಳಿಕೆಯಾಗಿದ್ದೇ ತಡ ಚಿನ್ನದ ದರ ಕೂಡ ಏರಿಕೆಯಾಗಲು ಕಾರಣವಾಗಿದೆ.
ಆದರೆ, ಜಾಗತಿಕವಾಗಿ ಶುಕ್ರವಾರ ಈ ಹಳದಿ ಲೋಹದ ಬೆಲೆ ತುಸು ತಗ್ಗಿದೆ. ಗುರುವಾರ ಶೇ.1ರಷ್ಟು ಏರಿಕೆಯಾಗಿದ್ದ ದರವೂ ಅಷ್ಟೇ ತಗ್ಗಿದೆ. ಅಮೆರಿಕವು ಬಡ್ಡಿದರವನ್ನು ಹೆಚ್ಚಿಸುವುದರ ಹಿನ್ನೆಲೆಯಲ್ಲಿ ಈ ಏರಿಕೆ ತಗ್ಗಬಹುದು ಎಂದೂ ಹೇಳಲಾಗುತ್ತಿದೆ.
ಜ್ಯುವೆಲ್ಲರಿ ರಫ್ತು: ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-19 ಬರುವುದಕ್ಕೆ ಮುನ್ನ ೧೨.೪ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.
ಇದನ್ನೂ ಓದಿ: Gold rate : ಚಿನ್ನದ ದರದಲ್ಲಿ 170 ರೂ. ಇಳಿಕೆ, ಬೆಳ್ಳಿ 1,000 ರೂ. ಏರಿಕೆ, ಪ್ರಮುಖ ನಗರಗಳಲ್ಲಿ ಇಂದಿನ ದರದ ಡಿಟೇಲ್ಸ್
-
ಪ್ರಮುಖ ಸುದ್ದಿ12 mins ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಅಂಕಣ23 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕ್ರಿಕೆಟ್20 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್19 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ16 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್17 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ15 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema17 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ