Sensex crash : ಅಮೆರಿಕದ ರೇಟಿಂಗ್‌ ಇಳಿಸಿದ ಫಿಚ್‌, ಸೆನ್ಸೆಕ್ಸ್‌ 1000 ಅಂಕ ಪತನ Vistara News

ವಾಣಿಜ್ಯ

Sensex crash : ಅಮೆರಿಕದ ರೇಟಿಂಗ್‌ ಇಳಿಸಿದ ಫಿಚ್‌, ಸೆನ್ಸೆಕ್ಸ್‌ 1000 ಅಂಕ ಪತನ

Sensex crash ಅಮೆರಿಕದ ಕ್ರೆಡಿಟ್‌ ಗ್ರೇಡ್‌ ಅನ್ನು ರೇಟಿಂಗ್‌ ಏಜೆನ್ಸಿ ಫಿಚ್‌ ಇಳಿಸಿದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತತ್ತರಿಸಿತು. ಭಾರತೀಯ ಷೇರು ಪೇಟೆ ಸೂಚ್ಯಂಕಗಳೂ ಕುಸಿಯಿತು. ವಿವರ ಇಲ್ಲಿದೆ.

VISTARANEWS.COM


on

stock trader
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತದ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ ಮಧ್ಯಂತರ ವಹಿವಾಟಿನಲ್ಲಿ 1000 ಕ್ಕೂ ಹೆಚ್ಚು ಅಂಕಗಳ ಇಳಿಕೆ ದಾಖಲಿಸಿತು. ಎನ್‌ಎಸ್‌ಸಿ ಸೂಚ್ಯಂಕ ನಿಫ್ಟಿ 19,434 ಅಂಕಗಳ ಕುಸಿತಕ್ಕೀಡಾಯಿತು. ( Sensex crash) ಅಮೆರಿಕ, ಯುರೋಪ್‌ ಮತ್ತು ಚೀನಾದಲ್ಲಿ ಎಕಾನಮಿ ಕುರಿತ ದುರ್ಬಲ ಅಂಕಿ ಅಂಶಗಳು ಭಾರತೀಯ ಷೇರು ಪೇಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ಮಧ್ಯಾಹ್ನ 2.18 ರ ವೇಳೆಗೆ ಸೆನ್ಸೆಕ್ಸ್‌ 1000 ಅಂಕ ನಷ್ಟದಲ್ಲಿ 65,454 ರ ಮಟ್ಟದಲ್ಲಿತ್ತು. ನಿಫ್ಟಿ 305 ಅಂಕ ನಷ್ಟಕ್ಕೀಡಾಗಿ 19,428 ರ ಮಟ್ಟದಲ್ಲಿತ್ತು.

ಸೆನ್ಸೆಕ್ಸ್‌ ಕುಸಿತಕ್ಕೆ ಕಾರಣವೇನು? ಅಂತಾರಾಷ್ಟ್ರೀಯ ರೇಟಿಂಗ್‌ ಏಜೆನ್ಸಿ ಫಿಚ್‌ ರೇಟಿಂಗ್ಸ್‌ ಅಮೆರಿಕದ ಕ್ರೆಡಿಟ್‌ ಗ್ರೇಡ್‌ ಅನ್ನು (credit grade) AAA ಯಿಂದ AA+ ಮಟ್ಟಕ್ಕೆ ಇಳಿಸಿದೆ. ಇದು ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ನಿಫ್ಟಿ 19,500 ರ ಸಪೋರ್ಟ್‌ ಲೆವೆಲ್‌ಗಿಂತ ಕೆಳಕ್ಕಿಳಿಯಿತು. ಹೀಗಾಗಿ ನಿಫ್ಟಿ 20,000 ಅಂಕಗಳ ಗಡಿಯನ್ನು ಶೀಘ್ರ ದಾಟಲಿದೆ ಎಂದು ನಿರೀಕ್ಷಿಸುತ್ತಿದ್ದವರಿಗೆ ನಿರಾಸೆ ಆಗಿದೆ. ಫಿಚ್‌ ರೇಟಿಂಗ್ಸ್‌ ಅಮೆರಿಕದ ರೇಟಿಂಗ್‌ ಅನ್ನು ಮಂಗಳವಾರ ಇಳಿಸಿದ ಬಳಿಕ ಬಾಂಡ್‌ ಮತ್ತು ಕರೆನ್ಸಿ ಮಾರ್ಕೆಟ್‌ ಮೇಲೆ ಪ್ರಭಾವ ಬೀರಿತು.

ಹೀಗಾಗಿ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅಂತಾರಾಷ್ಟ್ರೀಯ ಸೂಚ್ಯಂಕಗಳ ಕುಸಿತ ಯಾವ ಪರಿಣಾಮ ಬೀರಲಿದೆ ಎಂಬ ಜಿಜ್ಞಾಸೆ ಉಂಟಾಗಿದೆ. ಸೆನ್ಸೆಕ್ಸ್‌ ಸ್ಟಾಕ್ಸ್‌ಗಳ ಪೈಕಿ ಟಾಟಾ ಸ್ಟೀಲ್‌, ಎಲ್&ಟಿ, ಜೆಎಸ್‌ಡಬ್ಲ್ಯು ಸ್ಟೀಲ್‌, ಬಜಾಜ್‌ ಫಿನ್‌ಸರ್ವ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಟಿಸಿಎಸ್‌, ಟಾಟಾ ಮೋಟಾರ್ಸ್‌ ಷೇರು ದರ ಇಳಿಯಿತು. ಹೀರೊ ಮೊಟೊ ಕಾರ್ಪ್‌ ಷೇರು ದರ 3% ಇಳಿಯಿತು. ವಲಯಾವಾರು ಲೆಕ್ಕದಲ್ಲಿ ಲೋಹ ವಲಯ 0.95% ತಗ್ಗಿತು.

ಅಮೆರಿಕ, ಯುರೋಪ್‌, ಏಷ್ಯಾದ್ಯಂತ ಷೇರು ಮಾರುಕಟ್ಟೆ ಬುಧವಾರ ಮುಗ್ಗರಿಸಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign institutional investors-FII) 92.85 ಕೋಟಿ ರೂ. ಮೌಲ್ಯದ ಷೇರುಗಳನ್ನು ಬುಧವಾರ ಮಾರಾಟ ಮಾಡಿದರು. ಇದೇ ವೇಳೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (domestic institutional investors) 1,036 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದರು.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬುಧವಾರ 1% ಏರಿಕೆ ದಾಖಲಿಸಿತು. ಕಳೆದ ಏಪ್ರಿಲ್‌ ನಂತರ ಗರಿಷ್ಠ ಮಟ್ಟ ತಲುಪಿತು. ಅಮೆರಿಕದಿಂದ ಹೆಚ್ಚಿನ ಬೇಡಿಕೆ ಬಂದಿರುವುದರಿಂದ ದರ ಹೆಚ್ಚಳವಾಯಿತು. ಬ್ರೆಂಟ್‌ ಮಾದರಿಯ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 82.13 ಡಾಲರ್‌ಗೆ ಏರಿತು. ಫೊರೆಕ್ಸ್‌ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆ ಇಳಿದು 82.40 ರೂ. ನಷ್ಟಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2023-24ರಲ್ಲಿ ಇದುವರೆಗೆ 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುವ ಪ್ರವೃತ್ತಿಯೂ ಕಂಡು ಬರುತ್ತಿದೆ. ಹೂಡಿಕೆದಾರರು ಕೆಲ ಪ್ರಾಫಿಟ್‌ ಬುಕಿಂಗ್‌ (profit booking) ಮಾಡುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Fact Check

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

Fact Check: ಸ್ಟಾರ್ ಗುರುತಿರುವ 500 ರೂ. ನೋಟು ನಕಲಿ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಆರ್‌ಬಿಐ ಏನು ಹೇಳಿದೆ?

VISTARANEWS.COM


on

Is 500 note with star symbol is fake, What Fact Check says?
Koo

ಬೆಂಗಳೂರು: ಚುಕ್ಕೆ(ಸ್ಟಾರ್) ಗುರುತು ಇರುವ (Star Symbol) 500 ರೂ. ನೋಟುಗಳು ನಕಲಿ (Fake Rs 500 notes), ಆ ನೋಟುಗಳನ್ನು ಬ್ಯಾಂಕ್‌ಗೆ ವಾಪಸ್ ಮಾಡಿ (Return to Bank) ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ಜೋರಾಗಿದೆ. ಹಲವರು ಈ ಸುದ್ದಿಯನ್ನು ನಂಬಿ ನೋಟುಗಳನ್ನು ವಾಪಸ್ ಮಾಡಲು ಮುಂದಾದ ಉದಾಹರಣೆಗಳಿವೆ. ಈ ಸುದ್ದಿ ಕಳೆದ ಐದಾರು ತಿಂಗಳಿಂದ ಚಾಲ್ತಿಯಲ್ಲಿದ್ದು, ಈ ಕುರಿತು ಆಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಣೆ ನೀಡಿದೆ(Reserve bank of India). ಆದರೂ ಈ ವದಂತಿ ನಿಲ್ಲುತ್ತಿಲ್ಲ. ಪಿಐಬಿ ಫ್ಯಾಕ್ಟ್ ಚೆಕ್(PIB Fact Check), ಸ್ಟಾರ್‌ ಗುರುತಿರುವ ನೋಟುಗಳು ನಕಲಿ ಅಲ್ಲ; ಅಸಲಿ ಎಂದು ಈಗ ಮತ್ತೆ ಟ್ವೀಟ್ ಮಾಡಿದೆ.

500 ರೂ. ನೋಟು ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಕುರಿತು ಆರ್‌ಬಿಐ ಈ ಹಿಂದೆಯೇ ಮಾಹಿತಿ ನೀಡಿದೆ. ಸ್ಟಾರ್ ಗುರುತು ಈ ನೋಟುಗಳು ಚಲಾವಣೆಯ ಒಂದು ಭಾಗವಾಗಿದೆ. ನಕ್ಷತ್ರ ಚಿಹ್ನೆಯು ಸರಳವಾಗಿ ಗುರುತಿಸುವಿಕೆಯ ಭಾಗವಾಗಿದೆ. ಅಂದರೆ, ಈ ನೋಟು ಮರುಮುದ್ರಣಗೊಂಡ ಅಥವಾ ಬದಲಿಸಲಾದ ನೋಟಿಗೆ ಬದಲಿಯಾಗಿ ಚಲಾವಣೆಯಾಗುತ್ತಿರುವ ನೋಟು ಎಂದು ಆರ್‌ಬಿಐ ಹೇಳಿದೆ.

ಇದರರ್ಥ ನೋಟು ಮೂಲತಃ ದೋಷದಿಂದ ಮುದ್ರಿಸಲ್ಪಟ್ಟಿರುತ್ತದೆ. ಆ ನೋಟನ್ನು ಸ್ಟಾರ್ ಗುರುತಿನ ಚಿಹ್ನೆ ಹೊಸ ನೋಟಿನೊಂದಿಗೆ ಬದಲಾಯಿಸಲಾಗಿರುತ್ತದೆ. ಈ ನೋಟುಗಳು ಮೌಲ್ಯವು ಕಾನೂನುಬದ್ಧವಾಗಿರುತ್ತದೆ. ನಕ್ಷತ್ರ ಚಿಹ್ನೆಯೊಂದಿಗೆ ನೋಟುಗಳ ಮೊದಲ ಸರಣಿಯು 2006 ರಲ್ಲಿ ಚಲಾವಣೆ ಆಗಲಾರಂಭಿಸಿದವು ಎಂದು ಆರ್‌ಬಿಐ ಹೇಳಿದೆ.

ಸ್ಟಾರ್ ಗುರುತಿರುವ ಈ ನೋಟುಗಳು ನಕಲಿ ಎಂಬ ಕುರಿತು ಸಾಕಷ್ಟು ಪೋಸ್ಟ್‌ಗಳು ಐದಾರು ತಿಂಗಳ ಹಿಂದೆ ಟ್ವಿಟರ್ ಮತ್ತು ಫೇಸ್‍‌ಬುಕ್‌ನಲ್ಲಿ ಹರಿದಾಡಿದ್ದವು. ಜನರು ಈ ಕೂಡ ನಕಲಿ ಸುದ್ದಿಯನ್ನು ನಿಜವೆಂದೇ ನಂಬಿದ್ದರು. ಈಗ ಮತ್ತೆ ಅಂಥದ್ದೇ ಪುಕಾರುಗಳು ಎದ್ದಿವೆ. ಆದರೆ, ಸ್ಟಾರ್ ಗುರುತಿರುವ ನೋಟುಗಳು ಖಂಡಿತವಾಗಿಯೂ ನಕಲಿಯಲ್ಲ, ಅಸಲಿಯಾಗಿದ್ದು, ಕಾನೂನು ಬದ್ಧ ಮಾನ್ಯತೆ ಇದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ: Fact Check Cell : ಸರ್ಕಾರದ ಫ್ಯಾಕ್ಟ್‌ ಚೆಕ್‌ ಪ್ರಯತ್ನಕ್ಕೆ ಹಿನ್ನಡೆ; ಮಾನ್ಯತೆ ಪಡೆದ ಚೆಕರ್ಸ್‌ ನಿರಾಸಕ್ತಿ, ಯಾಕೆ?

Continue Reading

ಮನಿ-ಗೈಡ್

Money Guide: ತೆರಿಗೆ ಕಡಿತ ಇಲ್ಲದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: ಸಣ್ಣ ಉಳಿತಾಯ ಯೋಜನೆಗಳ ಸಾಲಿನಲ್ಲಿ ಅತ್ಯಂತ ಜನಪ್ರಿಯ ಯೋಜನೆ ಪಿಪಿಎಫ್‌. ಇದರಲ್ಲಿ ಹೂಡಿಕೆ ಮಾಡಿದರೆ ಯಾವುದೇ ತೆರಿಗೆ ಕಡಿತವಾಗುವುದಿಲ್ಲ ಎನ್ನುವುದೇ ಇದರ ಪ್ಲಸ್‌ ಪಾಯಿಂಟ್.

VISTARANEWS.COM


on

ppf
Koo

ಬೆಂಗಳೂರು: ಸಣ್ಣ ಉಳಿತಾಯ ಯೋಜನೆಗಳ ಸಾಲಿನಲ್ಲಿ ಅತ್ಯಂತ ಜನಪ್ರಿಯ ಯೋಜನೆ ಪಿಪಿಎಫ್‌. ಅಂದರೆ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (Public Provident Fund). ಇದು ಹಲವು ಹೂಡಿಕೆದಾರ ಸ್ನೇಹಿ ಫೀಚರ್‌ಗಳನ್ನು ಒಳಗೊಂಡಿದೆ. ದೀರ್ಘಕಾಲೀನ ಹೂಡಿಕೆಯ ಯೋಜನೆಯಾದ ಇದನ್ನು ಲಾಂಗ್‌ ಟರ್ಮ್‌ಗೆ ಸ್ಥಿರವಾದ ಸಂಪತ್ತು ಸೃಷ್ಟಿಸಿಕೊಳ್ಳಲು, ದೀರ್ಘಾವಧಿಯಲ್ಲಿ ಸಂಪತ್ತನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಪಿಪಿಎಫ್‌ ಕುರಿತದ ಹೆಚ್ಚಿನ ವಿವರ ಇಲ್ಲಿದೆ (Money Guide).

ಕಡಿಮೆ ರಿಸ್ಕ್‌ ಬಯಸುವ ಸಣ್ಣ ಹೂಡಿಕೆದಾರರಿಗೆ ಪಿಪಿಎಫ್‌ ಸೂಕ್ತ. ಸರ್ಕಾರವೇ ಇದನ್ನು ನಿರ್ವಹಿಸುತ್ತದೆ. ಖಾತರಿಯ ಆದಾಯ ನೀಡುತ್ತದೆ ಎನ್ನುವುದೇ ಇದರ ವಿಶೇಷತೆ. ತ್ರೈಮಾಸಿಕದ ಆಧಾರದ ಮೇಲೆ ಬಡ್ಡಿದರಗಳನ್ನು ನಿರ್ಧರಿಸಲಾಗುತ್ತದೆ.

ವೈಶಿಷ್ಟ್ಯ

ನೀವು ಪಿಪಿಎಫ್ ಖಾತೆಗಳಲ್ಲಿ ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಮಾರ್ಗಸೂಚಿಗಳ ಪ್ರಕಾರ, ನೀವು ಹಣವನ್ನು ಪಿಪಿಎಫ್ ಖಾತೆಯಲ್ಲಿ ಸತತ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಒಂದು ವೇಳೆ 15 ವರ್ಷಗಳ ಕೊನೆಯಲ್ಲಿ ಹಣದ ಅಗತ್ಯವಿಲ್ಲದಿದ್ದರೆ ಪಿಪಿಎಫ್ ಖಾತೆಯ ಅವಧಿಯನ್ನು ಅಗತ್ಯವಿರುವಷ್ಟು ವರ್ಷಗಳವರೆಗೆ ವಿಸ್ತರಿಸಬಹುದಾದ ಆಯ್ಕೆಯೂ ಇದೆ. ಇದಕ್ಕಾಗಿ ಪಿಪಿಎಫ್ ಖಾತೆ ವಿಸ್ತರಣೆ ಫಾರ್ಮ್ ಸಲ್ಲಿಸಬೇಕಾಗುತ್ತದೆ. ಇದು ಸಂಪೂರ್ಣ ತೆರಿಗೆ ಮುಕ್ತ ಉಳಿತಾಯ ಯೋಜನೆ ಎನ್ನುವುದು ವಿಶೇಷ. ಅಂದರೆ ಅಸಲು, ಲಾಭ ಮತ್ತು ಹಿಂಪಡೆಯುವಾಗ ಸಂಗ್ರಹವಾದ ಮೊತ್ತದ ಮೇಲೆ ಯಾವುದೇ ತೆರಿಗೆ ಕಡಿತ ಇರುವುದಿಲ್ಲ.

ಯಾರೆಲ್ಲ ತೆರೆಯಬಹುದು?

ಯಾವುದೇ ಭಾರತೀಯ ನಾಗರಿಕ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. ಅಪ್ರಾಪ್ತ / ಮಾನಸಿಕ ಅಸ್ವಸ್ಥ ವ್ಯಕ್ತಿಯ ಪರವಾಗಿ ಪೋಷಕರು ಸಹ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ. 5 ವರ್ಷಗಳ ಹೆಚ್ಚುವರಿ ಅವಧಿ ಇರುವುದಿಲ್ಲ. ಬಡ್ಡಿಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈಗ 7.1% ಬಡ್ಡಿ ಇದೆ. 

ಪಿಪಿಎಫ್ ಹಣವನ್ನು ಹಿಂಪಡೆಯುವುದು ಹೇಗೆ?

ಮೊದಲೇ ಹೇಳಿದಂತೆ ಒಂದು ಪಿಪಿಎಫ್‌ ಅಕೌಂಟ್‌ಗೆ 15 ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ಅದಕ್ಕೂ ಮುನ್ನ ಫಂಡ್‌ ಅನ್ನು ಪೂರ್ಣಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 15 ವರ್ಷಗಳ ನಂತರ, ಪಿಪಿಎಫ್ ಚಂದಾದಾರರು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ಖಾತೆ ಮುಕ್ತಾಯ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ಮೆಚ್ಯೂರಿಟಿ ಪಾವತಿಯನ್ನು ಹಿಂಪಡೆಯಬಹುದು. ಸಂಬಂಧಿತ ಅಂಚೆ ಕಚೇರಿಯಲ್ಲಿ ನಿಗದಿತ ವಿಸ್ತರಣಾ ನಮೂನೆಯನ್ನು ಸಲ್ಲಿಸುವ ಮೂಲಕ ಚಂದಾದಾರರು ತಮ್ಮ ಖಾತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು (ಗಮನಿಸಿ ಇದನ್ನು ಮೆಚ್ಯೂರಿಟಿಯ ಒಂದು ವರ್ಷದೊಳಗೆ ಸಲ್ಲಿಸಬೇಕು).

ಇದನ್ನೂ ಓದಿ: Money Guide: ಆನ್‌ಲೈನ್‌ ಸಾಲದ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು?

ಸಾಲ ಪಡೆಯಬಹುದು

ಪಿಪಿಎಫ್ ಹೂಡಿಕೆಯ ಮೇಲೆ ನೀವು ಸಾಲವನ್ನು ಪಡೆಯುವ ಸೌಲಭ್ಯವೂ ಇದೆ. ಖಾತೆಯ 3-6ನೇ ವರ್ಷದಲ್ಲಿ ಮಾತ್ರ ಸಾಲ ಪಡೆಯಬಹುದು. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು ಮಾತ್ರ. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕಾಗಿ ಕ್ಲೇಮ್‌ ಮಾಡಿಕೊಳ್ಳಬಹುದು.‌

ಇನ್ನಷ್ಟು ಮನಿಗೈಡ್‌ ಓದಲು ಇಲ್ಲಿ ಕ್ಲಿಕ್‌ ಮಾಡಿ

Continue Reading

ದೇಶ

ಬೆಂಗಳೂರು ಸೇರಿ ದೇಶದ ಟಾಪ್ 7 ನಗರಗಳಲ್ಲಿ ಕಚೇರಿ ಬಾಡಿಗೆ ಹೆಚ್ಚಳ!

Bengaluru: ಬೆಂಗಳೂರು ಸೇರಿದಂತೆ ದೇಶದ 7 ನಗರಗಳಲ್ಲಿ ಕಚೇರಿ ಜಾಗ ಬಾಡಿಗೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಈ ದರ ಅತ್ಯಧಿಕ ಇದೆ ಎಂದು ವರದಿ ತಿಳಿಸಿದೆ.

VISTARANEWS.COM


on

Office Rental Rises in top 7 cities including bengaluru
Koo

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲು ಆರು ತಿಂಗಳು ಬೆಂಗಳೂರು (Bengaluru) ಸೇರಿದಂತೆ ದೇಶದ ಟಾಪ್ 7 ನಗರಗಳಲ್ಲಿ (Top 7 Cities) ವಾಣಿಜ್ಯ ಕಚೇರಿ ಸ್ಥಳಾವಕಾಶದ ಚಟುವಟಿಕೆಗಳು ಅಷ್ಟೇನೂ ಪೂರಕವಾಗಿರಲಿಲ್ಲ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಕಷ್ಟು ಚಟುವಟಿಕೆಗಳು ಮಂದಗತಿಯಲ್ಲಿದ್ದವು ಎಂದು ಅನಾರಾಕ್ ತನ್ನ ಹೇಳಿಕೆಯಲ್ಲಿ ಹೇಳಿದೆ. ಈ ಮಧ್ಯೆ, ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳಲ್ಲಿ ಕಚೇರಿ ಬಾಡಿಗೆಯು ಶೇ.7ರಷ್ಟು ಹೆಚ್ಚಳವಾಗಿದೆ(Office Rental Rises). ಈ ಪೈಕಿ, ಚೆನ್ನೈ ನಗರವು (Chennai City) ಭಾರೀ ಬೆಳವಣಿಗೆ ಕಂಡಿದೆ.

ಸರಾಸರಿ ಮಾಸಿಕ ಕಚೇರಿ ಬಾಡಿಗೆ ಮೌಲ್ಯಗಳಲ್ಲಿ ಚೆನ್ನೈ ಅತ್ಯಧಿಕ ಶೇ.10 ರಷ್ಟು ವಾರ್ಷಿಕ ಏರಿಕೆಯನ್ನು ದಾಖಲಿಸಿದೆ. ಪ್ರತಿ ಚದರ ಅಡಿಗೆ 62 ರೂ. ರಿಂದ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಚದರ ಅಡಿಗೆ 68 ರೂ. ಇತ್ತು. ವಾರ್ಷಿಕ ಶೇ.8ರ ಬೆಳವಣಿಗೆಯೊಂದಿಗೆ ಹೈದರಾಬಾದ್ ನಂತರದ ಸ್ಥಾನದಲ್ಲಿದೆ. ನಗರದಲ್ಲಿನ ಸರಾಸರಿ ಮಾಸಿಕ ಕಚೇರಿ ಬಾಡಿಗೆ ಮೌಲ್ಯವು 61 ರೂ.ನಿಂದ 66 ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ, ಬೆಂಗಳೂರು ಮತ್ತು ಪುಣೆ, ಕೋಲ್ಕೊತಾ ನಗರಗಳಲ್ಲಿ ವಾರ್ಷಿಕ ಶೇ.7 ಬೆಳವಣಿಗೆಯನ್ನು ದಾಖಲಾಗಿದೆ. ಮತ್ತೊಂದೆಡೆ ಮುಂಬೈ ಮತ್ತು ಎನ್‌ಸಿಆರ್‌ನಲ್ಲಿ ಈ ಪ್ರಮಾಣ ಶೇ.5ರಷ್ಟು ಏರಿಕೆಯಾಗಿದೆ.

2023ರ ವಿತ್ತ ವರ್ಷದ ಮೊದಲ ಅರ್ಧ ವರ್ಷಕ್ಕೆ ಹೋಲಿಸಿದರೆ, 2024ರ ವಿತ್ತ ವರ್ಷದ ಮೊದಲ ಆರ್ಥಿಕ ವರ್ಷದಲ್ಲಿ ದೇಶದ 7 ನಗರಗಳಲ್ಲಿ ಹೊಸ ಕಚೇರಿಯ ಬೇಡಿಕೆ ಪೂರೈಕೆಯ ಕೇವಲ ಶೇ.5ರಷ್ಟು ಏರಿಕೆಯಾಗಿದೆ. ಇದೇ ವೇಳೆ, ವಾರ್ಷಿಕ ಬೇಡಿಕೆಯಲ್ಲಿ ಶೇ.1ರಷ್ಟು ಕುಸಿತವಾಗಿದೆ.

ಟಿಎಂಎಫ್ ಜಾಗತಿಕ ಸುಸ್ಥಿರ ನಗರಗಳ ಚಾಲೆಂಜ್; ಬೆಂಗಳೂರು, ವಾರಾಣಸಿ ಶಾರ್ಟ್ ಲಿಸ್ಟ್

ಟೊಯೊಟಾ ಮೊಬಿಲಿಟಿ ಫೌಂಡೇಶನ್ (Toyota Mobility Foundation – TMF) 9 ಮಿಲಿಯನ್ ಡಾಲರ್ ಸುಸ್ಥಿರ ನಗರಗಳ ಚಾಲೆಂಜ್ ನಲ್ಲಿ ಅಗ್ರ 10 ನಗರಗಳಲ್ಲಿ ಬೆಂಗಳೂರು (Bengaluru) ಮತ್ತು ವಾರಣಾಸಿಯನ್ನು (Varanasi) ಶಾರ್ಟ್ ಲಿಸ್ಟ್ (Shortlisted) ಮಾಡಲಾಗಿದೆ ಎಂದು ಘೋಷಿಸಿದೆ. ಟೊಯೊಟಾ ಮೊಬಿಲಿಟಿ ಫೌಂಡೇಶನ್, ಚಾಲೆಂಜ್ ವರ್ಕ್ಸ್ ಮತ್ತು ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್‌ನ ಬೆಂಬಲದೊಂದಿಗೆ ಜೂನ್ 2023 ರಲ್ಲಿ ಈ ಚಾಲೆಂಜ್ ಅನ್ನು ಪ್ರಾರಂಭಿಸಲಾಗಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯದೊಂದಿಗೆ ಚಲನಶೀಲತೆ ಕೇಂದ್ರಿತ ನಾವೀನ್ಯತೆಯನ್ನು ಬೆಂಬಲಿಸುವ ಮೂಲಕ ನಗರಗಳು ಭವಿಷ್ಯಕ್ಕಾಗಿ ಸಿದ್ಧವಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಈ ಪ್ರವೇಶ ಅವಧಿಯಲ್ಲಿ ಜಾಗತಿಕವಾಗಿ 46 ದೇಶಗಳ 150 ಕ್ಕೂ ಹೆಚ್ಚು ನಗರಗಳಿಂದ 200 ಕ್ಕೂ ಹೆಚ್ಚು ನಮೂದುಗಳನ್ನು ಸ್ವೀಕರಿಸಲಾಗಿದೆ. 1) ಚಾಲೆಂಜ್ ಫೋಕಸ್ 2) ನಾವೀನ್ಯತೆ 3) ಪರಿಣಾಮ 4) ಪಾಲುದಾರ ಸಾಮರ್ಥ್ಯದ ನಾಲ್ಕು ಪ್ರಮುಖ ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲಾಯಿತು. ಬ್ರೆಜಿಲ್, ಕೊಲಂಬಿಯಾ, ಭಾರತ, ಇಟಲಿ, ಮಲೇಷ್ಯಾ, ಮೆಕ್ಸಿಕೊ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ನಗರಗಳು ಈ ಪಟ್ಟಿಯಲ್ಲಿವೆ.

ಈ ಸುದ್ದಿಯನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆಗಾಗಿ ಇನ್ನು ಮೊಬೈಲ್, ಲ್ಯಾಪ್‌ಟ್ಯಾಪ್‌ ಟ್ರೇನಲ್ಲಿ ಇಡಬೇಕಿಲ್ಲ!

Continue Reading

ಕರ್ನಾಟಕ

2000 Note Exchange : 2000 ರೂ. ನೋಟು ಬದಲಾವಣೆ ದಂಧೆ; ವಿಸ್ತಾರ ನ್ಯೂಸ್‌ನಲ್ಲಿ ಬಯಲು

2000 Note Exchange : 2000 ರೂ. ನೋಟುಗಳನ್ನು ಬದಲಾಯಿಸಲು ಜನ ಸಾಮಾನ್ಯರಿಗೆ ಇನ್ನೂ ಅವಕಾಶವಿದೆ. ಹೀಗಾಗಿ ಜನಸಾಮಾನ್ಯರನ್ನು ಬಳಸಿಕೊಂಡು ವಿನಿಮಯ ಮಾಡುವ ದಂಧೆಯೊಂದು ಹುಟ್ಟಿಕೊಂಡಿದೆ. ಇದನ್ನು ವಿಸ್ತಾರ ನ್ಯೂಸ್‌ ಬಯಲಿಗೆಳೆದಿದೆ.

VISTARANEWS.COM


on

2000 Rupees Note RBI
Koo
VISTARA-EXCLUSIVE

ಬೆಂಗಳೂರು: 2000 ರೂ. ಮುಖಬೆಲೆಯ ನೋಟುಗಳನ್ನು (2000 Rupee Notes) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India) ವ್ಯವಹಾರದಿಂದ ಹಿಂದೆ ಪಡೆದಿದೆ. ನೋಟುಗಳ ವಿನಿಮಯಕ್ಕೆ ಆರ್‌ಬಿಐ ವಿಧಿಸಿದ ಗಡುವುಗಳು (RBI Deadlines) ಬಹುತೇಕ ಮುಕ್ತಾಯಗೊಂಡಿವೆ. ಆದರೆ, ಈಗ ಕೊಟ್ಟಿರುವ ಕೆಲವೊಂದು ಆಯ್ಕೆಗಳನ್ನು ಬಳಸಿಕೊಂಡು ಅಡ್ಡ ದಾರಿಯಲ್ಲಿ ಪಿಂಕ್‌ ನೋಟ್‌ಗಳ ವಿನಿಮಯ (2000 Note Exchange) ಭರ್ಜರಿಯಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಂದರೆ, ಕೆಲವೊಂದು ಮಾಫಿಯಾಗಳು ಸಾರ್ವಜನಿಕರಿಗೆ ಇರುವ ವಿನಿಮಯ ಆಯ್ಕೆಯನ್ನು ಬಳಸಿಕೊಂಡು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ವಿಸ್ತಾರ ನ್ಯೂಸ್‌ ಈ ದಂಧೆಯನ್ನು ಬಯಲಿಗೆಳೆದಿದೆ.

2 ಸಾವಿರ ಮುಖಬೆಲೆಯ ನೋಟುಗಳನ್ನು ವ್ಯವಹಾರದಿಂದ ಹಿಂಪಡೆದಿರುವುದಾಗಿ ಮೇ 19ರಂದು ಘೋಷಿಸಿತ್ತು. ಆದರೆ, ಅಕ್ಟೋಬರ್‌ 8ರವರೆಗೆ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಆರ್‌ಬಿಐಗೆ 2 ಸಾವಿರ ಮುಖಬೆಲೆಯ ಶೇ.97.26ರಷ್ಟು ನೋಟ್ ವಾಪಸ್ ಬಂದಿದೆ. ಉಳಿದ 9,760 ಕೋಟಿ ರೂಪಾಯಿ ವಾಪಸ್‌ ಬಂದಿಲ್ಲ.

ಈ ನಡುವೆ, ಆರ್‌ಬಿಐ ಸಾರ್ವಜನಿಕ ವ್ಯಕ್ತಿಗಳು 2000 ರೂ. ನೋಟು ವಿನಿಮಯಕ್ಕೆ ಅವಕಾಶವನ್ನು ಬೆಂಗಳೂರು ಸೇರಿದಂತೆ ದೇಶ 19 ಆರ್‌ಬಿಐ ಕಚೇರಿಗಳಲ್ಲಿ ಮುಂದುವರಿಸಿದೆ. ಅಂದರೆ, ಒಬ್ಬ ವ್ಯಕ್ತಿ ಒಮ್ಮೆಗೆ 10 ನೋಟುಗಳನ್ನು ವಿನಿಮಯ ಮಾಡಬಹುದಾಗಿದೆ. ಆದರೆ, ಈ ರೀತಿ ವಿನಿಮಯಕ್ಕೆ ಅವಕಾಶ ನೀಡಿರುವುದು ದಂಧೆಗೆ ಅವಕಾಶ ನೀಡಿದಂತಾಗಿದೆ ಎಂಬ ಆರೋಪವಿದೆ.

ಈಗ ಯಾರೇ ಆದರೂ ಒಮ್ಮೆಗೆ 10 ನೋಟುಗಳನ್ನು ಅಂದರೆ 20000 ರೂ. ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ನೋಟ್ ಎಕ್ಸ್‌ಚೇಂಜ್‌ಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯವಿದೆ. ಹೀಗೆ ಜನ ಸಾಮಾನ್ಯರಿಗೆ ಇರುವ ಅವಕಾಶವನ್ನು ಬೆಂಗಳೂರಿನ ಕೆಲವು ಮಾಫಿಯಾಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ.

ಅದೆಷ್ಟೋ ಮಂದಿ ಕಪ್ಪು ಹಣವನ್ನು ತಂದು ಜನಸಾಮಾನ್ಯರ ಮುಖಾಂತರ ಬದಲಾವಣೆ ಮಾಡಿಕೊಳ್ಳುತ್ತಿವೆ. ಈ ದಂಧೆಗೆ 10 ಪರ್ಸೆಂಟ್‌ ಕಮಿಷನ್‌ ನೀಡಲಾಗುತ್ತಿದೆ. ಅಂದರೆ, ಯಾರಾದರೂ ಒಬ್ಬ ವ್ಯಕ್ತಿಯ ಕೈಗೆ 2000 ರೂ.ಗಳ ಹತ್ತು ನೋಟುಗಳನ್ನು ನೋಡಿ ಅವುಗಳನ್ನು ವಿನಿಯಮ ಮಾಡಿಕೊಂಡು ಬರುವಂತೆ ಸೂಚಿಸಲಾಗುತ್ತದೆ. ಅವನು ವಿನಿಮಯ ಮಾಡಿಕೊಂಡು ಬಂದರೆ ಅವನಿಗೆ 2000 ರೂ.ಯನ್ನು ಕಮಿಷನ್‌ ರೂಪದಲ್ಲಿ ನೀಡಲಾಗುತ್ತಿದೆ.

ಬ್ಯಾಂಕ್‌ ಮುಂದೆ ಸಾಲು ಸಾಲು ಜನ

ಈ ರೀತಿಯ ದಂಧೆ ಶುರುವಾದ ಹಿನ್ನೆಲೆಯಲ್ಲಿ ಆರ್‌ಬಿಐ ಕಚೇರಿಯ ಮುಂದೆ ಜನರ ಸಾಲೇ ಕಂಡುಬರುತ್ತಿದೆ. ನಿಜವೆಂದರೆ, ಹಿಂದೆ ಆರ್‌ಬಿಐ ನೀಡಿದ್ದ ಗಡುವಿನಲ್ಲಿ ಇಲ್ಲದಷ್ಟು ಜನಸಂದಣಿ ಈಗ ಕಂಡುಬರುತ್ತಿದೆ. ಅಂದು ಕೂಡಾ ಜನಸಾಮಾನ್ಯರಿಗೆ ನೋಟು ವಿನಿಮಯಕ್ಕೆ ಅವಕಾಶವಿತ್ತು. ಆಗ ಬಾರದೆ ಜನರೆಲ್ಲ ಈಗ ಬರುತ್ತಿದ್ದಾರೆ, ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದರೆ ಇದರ ಹಿಂದೆ ಕರಾಮತ್ತು ಇರುವುದು ಸ್ಪಷ್ಟ ಎಂದು ತಿಳಿದ ವಿಸ್ತಾರ ನ್ಯೂಸ್‌ ಸ್ಟಿಂಗ್‌ ಆಪರೇಷನ್‌ ನಡೆಸಿತ್ತು. ಈ ಸಂದರ್ಭದಲ್ಲಿ ದಂಧೆಯ ಬೇರೆ ಬೇರೆ ಮುಖಗಳು ಕಂಡುಬಂದಿವೆ.

ಹೇಗೆ ನಡೆಯುತ್ತಿದೆ ವಿನಿಮಯ ಕಾರ್ಯಾಚರಣೆ?

ಬೆಂಗಳೂರಿನ ಕೆಲವೊಂದು ಮಾಫಿಯಾಗಳು ಹಣ ವಿನಿಮಯ ದಂಧೆಯಲ್ಲಿ ತೊಡಗಿದಂತೆ ಕಾಣುತ್ತಿದೆ. ಅದು ಸಾರ್ವಜನಿಕರನ್ನು ಬಳಸಿಕೊಂಡು ಹಣ ವಿನಿಮಯಕ್ಕೆ ವ್ಯವಸ್ಥೆ ಮಾಡಿದೆ. ಅಂದರೆ ಯಾರೋ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಅವರ ಕೈಯಲ್ಲಿ 2000 ರೂ.ಗಳ 10 ನೋಟುಗಳನ್ನು ಕೊಟ್ಟು ಅವುಗಳನ್ನು ವಿನಿಮಯ ಮಾಡಿಸಲಾಗುತ್ತದೆ. ಬಳಿಕ ಅವರು ಹೊರಬರುತ್ತಿದ್ದಂತೆಯೇ ಅವರ ಕೈಯಿಂದ ವಿನಿಮಯ ಮಾಡಿದ ಹಣವನ್ನು ಪಡೆದು ಅವರಿಗೆ 2000 ರೂ.ಗಳನ್ನು ನೀಡಲಾಗುತ್ತದೆ.

ಇಲ್ಲಿ ಅತ್ಯಂತ ಬಡವರು, ಕೂಲಿ ಕೆಲಸದವರು ಬಂದು ಹಣ ಎಕ್ಸ್‌ ಚೇಂಜ್‌ ಮಾಡಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಹಣ ನೀಡುವುದು ಮತ್ತು ಮರಳಿ ಪಡೆಯುವ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದೆ. ಆದರೆ, ಯಾರೂ ಇದನ್ನು ಪ್ರಶ್ನಿಸುತ್ತಿಲ್ಲ!

Continue Reading
Advertisement
Vistara Editorial, Government should conduct exam without any lapse
ಕರ್ನಾಟಕ31 seconds ago

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Raja Marga Father and Daughter
ಅಂಕಣ14 mins ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ31 mins ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ1 hour ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ2 hours ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್2 hours ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ8 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್8 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್8 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ13 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ14 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ19 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌