ವಾಣಿಜ್ಯ
TCS CEO Resigns : ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ರಾಜೀನಾಮೆ
ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು ರಾಜೀನಾಮೆ ನೀಡಿದ್ದಾರೆ. ಇತರ ಹಿತಾಸಕ್ತಿ ಸಲುವಾಗಿ ಪದತ್ಯಾಗ ಮಾಡುತ್ತಿರುವುದಾಗಿ (TCS CEO Resigns) ತಿಳಿಸಿದ್ದಾರೆ.
ಮುಂಬಯಿ: ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನ (TCS) ಸಿಇಒ ರಾಜೇಶ್ ಕೃಷ್ಣನ್ ಅವರು ರಾಜೀನಾಮೆ ನೀಡಿದ್ದಾರೆ. ಟಿಸಿಎಸ್‌ನಲ್ಲಿ 22 ವರ್ಷಗಳ ಕಾಲ ಸೇವೆ (TCS CEO Resigns) ಸಲ್ಲಿಸಿದ್ದ ಅವರು, ಇತರ ಹಿತಾಸಕ್ತಿ ದೃಷ್ಟಿಯಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ರಾಜೇಶ್ ಗೋಪಿನಾಥನ್ ರಾಜೀನಾಮೆ ಬಗ್ಗೆ ಟಿಸಿಎಸ್, ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ವಿವರಣೆಯಲ್ಲಿ ತಿಳಿಸಿದೆ. ಟಿಸಿಎಸ್‌ನ ನಿಯೋಜಿತ ಸಿಇಒ ಆಗಿ ಕೆ. ಕೃತಿವಾಸನ್ ಅವರು ನೇಮಕವಾಗಿದ್ದಾರೆ. ಕೃತಿ ವಾಸನ್ ಅವರು ಟಿಸಿಎಸ್‌ನ ಬಿಎಫ್‌ಎಸ್‌ಐ ಘಟಕದ ಮುಖ್ಯಸ್ಥರಾಗಿದ್ದಾರೆ. ಕೃತಿವಾಸನ್ 1989ರಲ್ಲಿ ಟಿಸಿಎಸ್‌ಗೆ ಸೇರಿದ್ದರು.
ಕಳೆದ 6 ವರ್ಷಗಳಲ್ಲಿ ರಾಜೇಶ್ ಅವರು ಟಿಸಿಎಸ್‌ಗೆ ಉತ್ತಮ ನಾಯಕತ್ವ ನೀಡಿದ್ದಾರೆ. ಅವರ ಭವಿಷ್ಯಕ್ಕೆ ಶುಭ ಕೋರುವುದಾಗಿ ಟಿಸಿಎಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ತಿಳಿಸಿದ್ದಾರೆ.
ಪ್ರಮುಖ ಸುದ್ದಿ
PPF Investment : ಪಿಪಿಎಫ್ ಸೇರಿ ಸಣ್ಣ ಉಳಿತಾಯ ಹೂಡಿಕೆಗಳ ನಿಯಮ ಸಡಿಲ, ಪ್ಯಾನ್ ಬದಲಿಗೆ ಆಧಾರ್ ಬಳಕೆ ಶೀಘ್ರ
ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ, ಪ್ಯಾನ್ ಬದಲಿಗೆ ಆಧಾರ್ ಬಳಕೆಗೆ ಅನುಮತಿ ನೀಡುವುದರಿಂದ, ಗ್ರಾಮೀಣ ಭಾಗದಲ್ಲಿ ಹೂಡಿಕೆ ಹೆಚ್ಚಳವಾಗುವ (PPF Investment) ನಿರೀಕ್ಷೆ ಉಂಟಾಗಿದೆ.
ನವ ದೆಹಲಿ: ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳಲ್ಲಿನ (PPF Investment ) ಹೂಡಿಕೆ ಕುರಿತ ಕೆವೈಸಿ (KYC) ನಿಯಮಾವಳಿಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಪ್ಯಾನ್ ಬದಲಿಗೆ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿಟ್ಟುಕೊಂಡು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. (small savings schemes)
ಕೆವೈಸಿ ನಿಯಮ ಸಡಿಲಗೊಳಿಸುವ ಭಾಗವಾಗಿ ಮೂರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೊದಲನೆಯದಾಗಿ ಪ್ಯಾನ್ ಕಾರ್ಡ್ ಬದಲು ಆಧಾರ್ ಬಳಸಿಯೂ ಹೂಡಿಕೆಯನ್ನು ಮಾಡಬಹುದು. ಏಕೆಂದರೆ ಭಾರತದಲ್ಲಿ ಪ್ಯಾನ್ ಕಾರ್ಡ್ ಬಳಕೆದಾರರಿಗಿಂತ ಹೆಚ್ಚು ಆಧಾರ್ ಕಾರ್ಡ್‌ದಾರರು ಇದ್ದಾರೆ. ಈ ನೀತಿ ಸಡಿಲಗೊಳಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಠೇವಣಿಗಳು ಲಭಿಸುವ ಸಾಧ್ಯತೆ ಇದೆ.
ಎರಡನೆಯದಾಗಿ ಯಾವುದೇ ವಿವಾದ ಇಲ್ಲದೆ ಮೃತಪಟ್ಟಿರುವ ಠೇವಣಿದಾರರ ಹಣವನ್ನು ಅವರ ಉತ್ತರಾಧಿಕಾರಿಗಳಿಗೆ ಸರಾಗವಾಗಿ ಹಸ್ತಾಂತರಿಸಲು ಪ್ರಕ್ರಿಯೆ ಸುಗಮವಾಗಲಿದೆ. ಮೂರನೆಯದಾಗಿ ನಾಮಿನೇಶನ್ ಪ್ರಕ್ರಿಯೆ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗೆ (National small savings fund) ಹೂಡಿಕೆಯ ಹರಿವು ಹೆಚ್ಚಲಿದೆ. ಸಾರ್ವಜನಿಕ ಭವಿಷ್ಯನಿಧಿ, ಸುಕನ್ಯಾಸಮೃದ್ಧಿ, ಎನ್‌ಎಸ್‌ಸಿ ಇತ್ಯಾದಿಗಳು ಸಣ್ಣ ಉಳಿತಾಯ ಯೋಜನೆಗಳಾಗಿವೆ.
ಪ್ರಮುಖ ಸುದ್ದಿ
Private sector : ಖಾಸಗಿ ವಲಯದಿಂದ ಭಾರಿ ಹೂಡಿಕೆ ಶೀಘ್ರ, ಯಾವ ಕಂಪನಿಯಿಂದ ಎಷ್ಟು ಕೋಟಿ ಹೂಡಿಕೆ?
ಖಾಸಗಿ ವಲಯದ ಕಾರ್ಪೊರೇಟ್ ಕಂಪನಿಗಳು ಮುಂಬರುವ ದಿನಗಳಲ್ಲಿ ಭಾರಿ ಹೂಡಿಕೆಗೆ ನಿರ್ಧರಿಸಿವೆ. (Private sector) ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.
ನವ ದೆಹಲಿ: ಖಾಸಗಿ ವಲಯದ ಕಾರ್ಪೊರೇಟ್ ಕಂಪನಿಗಳು (Private sector) ದೇಶದಲ್ಲಿ ತಮ್ಮ ಹೂಡಿಕೆಯನ್ನು ಶೀಘ್ರದಲ್ಲಿಯೇ ಗಣನೀಯವಾಗಿ ಏರಿಸಲು ಉದ್ದೇಶಿಸಿವೆ. ಕೇಂದ್ರ ಸರ್ಕಾರವು ಮೂಲಸೌಕರ್ಯ ವಲಯಕ್ಕೆ ಮಾಡುತ್ತಿರುವ ವೆಚ್ಚ, ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಗಳ ಪರಿಣಾಮ ಖಾಸಗಿ ವಲಯದ ಕಂಪನಿಗಳು ತಮ್ಮ ಹೂಡಿಕೆಯನ್ನು ಮುಂಬರುವ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ನಿರ್ಧರಿಸಿವೆ.
ಖಾಸಗಿ ಕಂಪನಿಗಳು ಮತ್ತು ಬ್ಯಾಂಕ್‌ಗಳ ಬ್ಯಾಲೆನ್ಸ್‌ಶೀಟ್ ಆರೋಗ್ಯ ಸುಧಾರಿಸಿರುವುದು ಕೂಡ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಫಿಚ್ ರೇಟಿಂಗ್ಸ್ ವರದಿ ತಿಳಿಸಿದೆ.
ಯಾವೆಲ್ಲ ಕಂಪನಿಗಳಿಂದ ಹೂಡಿಕೆ?
ರಿಲಯನ್ಸ್ ಇಂಡಸ್ಟ್ರೀಸ್ ಭಾರಿ ಮತ್ತು ಸಾಧಾರಣ ಗಾತ್ರದ ಹೂಡಿಕೆಯನ್ನು ನಾನಾ ವಲಯಗಳಲ್ಲಿ ಹೂಡಿಕೆ ಮಾಡಲಿದೆ. ತೈಲ, ರಾಸಾಯನಿಕ, ಹಸಿರು ಇಂಧನ, ಡಿಜಿಟಲ್ ಸೇವೆ ವಲಯದಲ್ಲಿ ಹೂಡಿಕೆ ಮಾಡಲಿದೆ ಎಂದು ವರದಿ ತಿಳಿಸಿದೆ.
ಭಾರ್ತಿ ಏರ್‌ಟೆಲ್ ಕೂಡ ದೂರಸಂಪರ್ಕ ವಲಯದಲ್ಲಿ ಭಾರಿ ಹೂಡಿಕೆಗೆ ನಿರ್ಧರಿಸಿದೆ. ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಅಲ್ಟ್ರಾ ಟೆಕ್ ಸಿಮೆಂಟ್ ಕೂಡ ಹೂಡಿಕೆ ಮಾಡಲಿದೆ. ಪ್ರಮುಖ ಕಂಪನಿಗಳು 6.11 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿವೆ. ಲೋಹ, ವಿದ್ಯುತ್, ಟೆಲಿಕಾಂ, ಬಂದರು, ಆಟೊಮೊಬೈಲ್, ಸಿಮೆಂಟ್ ವಲಯದಲ್ಲಿ ಹೂಡಿಕೆ ಆಗಲಿದೆ.
ಕಂಪನಿಗಳಿಂದ ಹೂಡಿಕೆ ವೆಚ್ಚದ ಯೋಜನೆಗಳು ಇಂತಿವೆ.
ಕಂಪನಿ | ಹೂಡಿಕೆ (ಕೋಟಿ ರೂ.ಗಳಲ್ಲಿ) |
ರಿಲಯನ್ಸ್ ಇಂಡಸ್ಟ್ರೀಸ್ | 2,15,448 |
ಅದಾನಿ ಎಂಟರ್‌ಪ್ರೈಸಸ್ | 18,226 |
ಟಾಟಾ ಸ್ಟೀಲ್ | 32,300 |
ಜೆಎಸ್‌ಡಬ್ಲ್ಯು | 31,700 |
ಹಿಂಡಾಲ್ಕೊ ಇಂಡಸ್ಟ್ರೀಸ್ | 30,300 |
ವೇದಾಂತ ಲಿಮಿಟೆಡ್ | 26,200 |
ಜಿಂದಾಲ್ ಸ್ಟೀಲ್ & ಪವರ್ | 12,600 |
ಭಾರ್ತಿ ಏರ್‌ಟೆಲ್ | 79,800 |
ವೊಡಾಫೋನ್ ಐಡಿಯಾ | 16,800 |
ಅದಾನಿ ಟ್ರಾನ್ಸ್‌ಮಿಶನ್ | 9,500 |
ಟಾಟಾ ಪವರ್ | 16,000 |
ಅಂಬುಜಾ ಸಿಮೆಂಟ್ | 5,400 |
ಅಲ್ಟ್ರಾಟೆಕ್ ಸಿಮೆಂಟ್ | 15,700 |
ದಾಲ್ಮಿಯಾ ಭಾರತ್ | 6,400 |
ಶ್ರೀ ಸಿಮೆಂಟ್ | 5,200 |
ಟಾಟಾ ಮೋಟಾರ್ಸ್ | 48,500 |
ಎಂ&ಎಂ | 14,000 |
ಮಾರುತಿ ಸುಜುಕಿ | 13,500 |
ಅದಾನಿ ಪೋರ್ಟ್ಸ್&ಸೆಜ್ | 14,300 |
ಒಟ್ಟು | 6,11,874 |
ಖಾಸಗಿ ಕಂಪನಿಗಳ ಹೂಡಿಕೆ ಹೆಚ್ಚಳಕ್ಕೆ ಕಾರಣವೇನು?
ವ್ಯವಸ್ಥೆಯಲ್ಲಿ ರಚನಾತ್ಮಕ ಬೇಡಿಕೆಯಲ್ಲಿ ಹೆಚ್ಚಳ
ಮೂಲಸೌಕರ್ಯ ವಲಯಕ್ಕೆ ಖರ್ಚು ಹೆಚ್ಚಳ
ಕೇಂದ್ರ ಸರ್ಕಾರದ ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆ
ಕಾರ್ಪೊರೇಟ್ ಕಂಪನಿ, ಬ್ಯಾಂಕ್ ಬ್ಯಾಲೆನ್ಸ್‌ಶೀಟ್ ಸುಸ್ಥಿತಿ
ಉತ್ಪಾದನಾ ಚಟುವಟಿಕೆ ಚುರುಕಾಗಿರುವುದು
ಸಂಭವನೀಯ ರಿಸ್ಕ್: ಸರಕುಗಳ ದರ ಏರಿಕೆ, ಜಾಗತಿಕ ದುರ್ಬಲ ಆರ್ಥಿಕ ಬೆಳಣಿಗೆ, ಬಡ್ಡಿ ದರ ಏರಿಕೆ
ಪ್ರಮುಖ ಸುದ್ದಿ
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್‌ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
ಯುಪಿಐನ ಬಳಕೆಯ ಮೇಲೆ ಗ್ರಾಹಕರಿಗೆ ಯಾವುದೇ ಶುಲ್ಕ ಇರುವುದಿಲ್ಲ, ಸಾಮಾನ್ಯ ಹಾಗೂ ಬಹುತೇಕ ಯುಪಿಐ ಪಾವತಿ ಉಚಿತವಾಗಿದೆ ಎಂದು (UPI transactions ) ಎನ್‌ಪಿಸಿಐ ಹೇಳಿದೆ. ಹಾಗಾದರೆ ಯಾರಿಗೆ, ಯಾವುದಕ್ಕೆ
ಇತ್ತೀಚಿನ ಇಂಟರ್‌ಚೇಂಜ್ ಶುಲ್ಕ ಅನ್ವಯವಾಗುತ್ತದೆ? ಇಲ್ಲಿದೆ ವಿವರ.
ನವ ದೆಹಲಿ: ಬ್ಯಾಂಕ್ ಖಾತೆಗೆ ಲಿಂಕ್ ಹೊಂದಿರುವ ಯುಪಿಐ ಬಳಕೆಗೆ (UPI transactions) ಸಂಬಂಧಿಸಿ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದು ಉಚಿತ ಎಂದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಬುಧವಾರ ಸ್ಪಷ್ಟೀಕರಣ ನೀಡಿದೆ. ಇದರದೊಂದಿಗೆ ಯುಪಿಐ ಮೂಲಕ ಹಣ ಪಾವತಿಗೆ ಶುಲ್ಕ ( Interchange fee ) ವಿಧಿಸಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಎಳೆದಿದೆ.
ಸಾಮಾನ್ಯವಾಗಿ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಆಧರಿತ ಆ್ಯಪ್ ಮೂಲಕ ನಡೆಯುವ ಹಣಕಾಸು ವರ್ಗಾವಣೆಗಳು ಬ್ಯಾಂಕ್ ಖಾತೆಗೆ ಲಿಂಕ್ ಹೊಂದಿರುತ್ತವೆ. 99.9% ವರ್ಗಾವಣೆಗಳು ಇಂಥದ್ದೇ ಆಗಿರುತ್ತವೆ. ಹಾಗೂ ಇವುಗಳು ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಎನ್‌ಪಿಸಿಐ ತಿಳಿಸಿದೆ.
ಪ್ರಿ-ಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್‌ಗಳಿಗೆ ಮಾತ್ರ ಶುಲ್ಕ:
ಇತ್ತೀಚೆಗೆ ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್‌ಗಳಿಗೆ (PPI Wallets) ಯುಪಿಐ ಇಕೊಸಿಸ್ಟಮ್ ಭಾಗವಾಗಲು ಅನುಮತಿ ನೀಡಲಾಗಿದೆ. ಹೀಗಾಗಿ ಪಿಪಿಐ ಮರ್ಚೆಂಟ್ ಹಣಕಾಸು ವರ್ಗಾವಣೆಗೆ ಮಾತ್ರ ಇಂಟರ್‌ಚೇಂಜ್ ಶುಲ್ಕ ವಿಧಿಸಲು ಅವಕಾಶ ಇದೆ. ಇಲ್ಲೂ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಎನ್‌ಪಿಸಿಐ ತಿಳಿಸಿದೆ. ಹಾಗಾದರೆ ಯಾರು ಶುಲ್ಕ ಕೊಡಬೇಕು?
1.1 % ಶುಲ್ಕ ಪಾವತಿಸುವವರು ಯಾರು?
ಗಿಫ್ಟ್ ವೋಚರ್, ವ್ಯಾಲೆಟ್ ಇತ್ಯಾದಿ ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್‌ಗಳ ಮೂಲಕ 2,000 ರೂ.ಗಿಂತ ಹೆಚ್ಚಿನ ಯುಪಿಐ ವರ್ಗಾವಣೆಗಳಿಗೆ ಸಂಬಂಧಿಸಿ ಗ್ರಾಹಕರು ಅಥವಾ ವ್ಯಾಪಾರಿಗಳಿಗೆ 1.1% ಶುಲ್ಕ ಅನ್ವಯವಾಗುವುದಿಲ್ಲ. ಬದಲಿಗೆ ಈ ಗಿಫ್ಟ್ ವೋಚರ್, ವ್ಯಾಲೆಟ್ ನೀಡುವ ಪೇಟಿಎಂ, ಓಲಾ ಫೈನಾನ್ಷಿಯಲ್ ಸರ್ವೀಸ್ ಮೊದಲಾದ ಕಂಪನಿಗಳು ಅಥವಾ ಸಂಸ್ಥೆಗಳು ಈ 1.1% ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ವಿವಾದ ಸೃಷ್ಟಿಯಾಗಿದ್ದೇಕೆ?
ಗಿಫ್ಟ್ ಕಾರ್ಡ್, ವ್ಯಾಲೆಟ್ ಮತ್ತಿತರ ಪ್ರಿಪೇಯ್ಡ್ ಇನ್‌ಸ್ಟ್ರುಮೆಂಟ್‌ಗಳಲ್ಲಿ (Prepaid payment instruments transactions) 2000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ವರ್ಗಾವಣೆಗಳಿಗೆ 2023ರ ಏಪ್ರಿಲ್ 1ರಿಂದ 1.1% ಇಂಟರ್‌ಚೇಂಜ್ ಶುಲ್ಕ ಅನ್ವಯವಾಗುತ್ತದೆ ಎಂದು ವರದಿಯಾಗಿತ್ತು. ಆದರೆ ಈ ಶುಲ್ಕ ಯಾರಿಗೆ ಅನ್ವಯವಾಗುತ್ತದೆ ಎಂಬುದರ ಬಗ್ಗೆ ಗೊಂದಲ ಉಂಟಾಗಿತ್ತು. ಪ್ರತಿ ತಿಂಗಳೂ ಸರಾಸರಿ 800 ಕೋಟಿಗೂ ಹೆಚ್ಚು ಹಣಕಾಸು ವರ್ಗಾವಣೆಗಳು ಯುಪಿಐ ಮೂಲಕ ನಡೆಯುತ್ತಿರುವುದರಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗಿತ್ತು. ಇದೀಗ ಎನ್‌ಪಿಸಿಐ ಗೊಂದಲಕ್ಕೆ ತೆರೆ ಎಳೆದಿದೆ. ಎನ್‌ಪಿಸಿಐ 2008ರಲ್ಲಿ ಸ್ಥಾಪನೆಯಾಗಿದ್ದು, ರಿಟೇಲ್ ಪೇಮೆಂಟ್ ಮತ್ತು ಸೆಟ್ಲ್‌ಮೆಂಟ್ ವ್ಯವಸ್ಥೆಗಳ ಒಕ್ಕೂಟ ವ್ಯವಸ್ಥೆಯಾಗಿದೆ. ಭಾರತದ ಡಿಜಿಟಲೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಪ್ರಮುಖ ಸುದ್ದಿ
DCGI : ನಕಲಿ ಔಷಧ ತಯಾರಿಸಿದ 18 ಕಂಪನಿಗಳ ಲೈಸೆನ್ಸ್ ರದ್ದು
ನಕಲಿ ಔಷಧ ಉತ್ಪಾದಿಸಿದ 18 ಕಂಪನಿಗಳ ಲೈಸೆನ್ಸ್ ಅನ್ನು ಡಿಸಿಜಿಐ (DCGI) ರದ್ದುಪಡಿಸಿದೆ. ಆದರೆ ಕಂಪನಿಗಳ ಹೆಸರು ಬಹಿರಂಗವಾಗಿಲ್ಲ.
ನವ ದೆಹಲಿ: ನಕಲಿ ಔಷಧಗಳನ್ನು ತಯಾರಿಸಿದ 18 ಔಷಧ ಕಂಪನಿಗಳ ಲೈಸೆನ್ಸ್ ಅನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ರದ್ದುಪಡಿಸಿದೆ. ಔಷಧ ಮಾರಾಟ ವಲಯದ ನಿಯಂತ್ರಕವು 20 ರಾಜ್ಯಗಳಲ್ಲಿ 76 ಕಂಪನಿಗಳ ಉತ್ಪನ್ನಗಳ ಬಗ್ಗೆ ತಪಾಸಣೆ ನಡೆಸಿತ್ತು. ಬಳಿಕ ಈ ಕ್ರಮ ಕೈಗೊಂಡಿದೆ. ಲೈಸೆನ್ಸ್ ಕಳೆದುಕೊಂಡ ಕಂಪನಿಗಳ ಹೆಸರು ಬಹಿರಂಗವಾಗಿಲ್ಲ.
ನಕಲಿ ಔಷಧ ಉತ್ಪಾದನೆ, ಕಲಬೆರಕೆಯ ಪ್ರಕರಣಗಳನ್ನು ಈ ಕಂಪನಿಗಳ ವಿರುದ್ಧ ದಾಖಲಿಸಲಾಗಿದೆ. ಇದರ ಜತೆಗೆ 26 ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶದಲ್ಲಿ ಈ ಕಂಪನಿಗಳು ಇವೆ. ಕಳೆದ ಫೆಬ್ರವರಿಯಲ್ಲಿ ತಮಿಳುನಾಡು ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್, ತನ್ನ ಐ ಡ್ರಾಪ್ ಔಷಧವನ್ನು ಹಿಂತೆಗೆದುಕೊಂಡಿತ್ತು. ಇದನ್ನು ಅಮೆರಿಕದಲ್ಲಿ ಬಳಸಿದವರಿಗೆ ಕಣ್ಣಿನ ದೃಷ್ಟಿಯೇ ಹೋಗಿತ್ತು ಎಂದು ಆರೋಪಿಸಲಾಗಿದೆ.
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್‌ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?