Twitter layoff | ಟ್ವಿಟರ್‌ನಲ್ಲಿ ಅಲ್ಲೋಲಕಲ್ಲೋಲ, ಮತ್ತೆ 1,200 ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ - Vistara News

ಪ್ರಮುಖ ಸುದ್ದಿ

Twitter layoff | ಟ್ವಿಟರ್‌ನಲ್ಲಿ ಅಲ್ಲೋಲಕಲ್ಲೋಲ, ಮತ್ತೆ 1,200 ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮತ್ತೆ 1200 ಉದ್ಯೋಗಿಗಳ ರಾಜೀನಾಮೆಯ ಪರಿಣಾಮ ಅಲ್ಲೋಲಕಲ್ಲೋಲ ಸಂಭವಿಸಿದೆ. ಹೀಗಿದ್ದರೂ, ( ‌Twitter layoff) ತೊಂದರೆ ಇಲ್ಲ ಎಂದಿದ್ದಾರೆ ಎಲಾನ್‌ ಮಸ್ಕ್.

VISTARANEWS.COM


on

elon musk
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ಯಾನ್‌ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ನಲ್ಲಿ ಮತ್ತೆ 1,200 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಂಪನಿಯ (Twitter layoff) ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದೆ.

ಕಂಪನಿಯಲ್ಲಿ ಕೆಲಸ ಮಾಡಲು ಪೂರಕ ವಾತಾವರಣ ಇಲ್ಲ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ.

ನ್ಯೂಯಾರ್ಕ್‌ ಟೈಮ್ಸ್‌ ಪ್ರಕಾರ, ಟ್ವಿಟರ್‌ನ ಪ್ರಮುಖ ತಂಡಗಳೇ ಕಂಪನಿಯಿಂದ ನಿರ್ಗಮಿಸಿವೆ. ಈ ನಡವೆ ಎಲಾನ್‌ ಮಸ್ಕ್‌, ಉದ್ಯೋಗಿಗಳಗೆ ಕಳಿಸಿರುವ ಇ-ಮೇಲ್‌ನಲ್ಲಿ, ಯಾರಾದರೂ ನಿಜವಾಗಿಯೂ ಟ್ವಿಟರ್‌ನ ಸಾಫ್ಟ್‌ವೇರ್‌ ರಚಿಸುವವರು ಹಾಗೂ ಕಳೆದ ಆರು ತಿಂಗಳುಗಳಲ್ಲಿ ಈ ಬಗ್ಗೆ ಬದ್ಧತೆಯಿಂದ ಕೆಲಸ ಮಾಡಿದವರು ಕೂಡಲೇ ರಿಪೋರ್ಟ್‌ ಮಾಡಬೇಕು. ಕೋಡ್‌ನ ಲೈನ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತರಬೇಕು ಎಂದು ಸೂಚಿಸಿದ್ದಾರೆ.

ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನ 50% ಉದ್ಯೋಗಿಗಳನ್ನು (ಸುಮಾರು 3,500) ಉದ್ಯೋಗಿಗಳನ್ನು ಈಗಾಗಲೇ ವಜಾಗೊಳಿಸಿದ್ದಾರೆ. ಅನೇಕ ಹಿರಿಯ ಅಧಿಕಾರಿಗಳು ರಾಜೀನಾಮೆ ಕೊಟ್ಟಿದ್ದಾರೆ.

ಹೀಗಿದ್ದರೂ, ನಾನೇನು ಚಿಂತೆ ಮಾಡುತ್ತಿಲ್ಲ, ಒಳ್ಳೆಯ ಉದ್ಯೋಗಿಗಳು ಈಗಲೂ ಇದ್ದಾರೆ ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ದೇಶ ಬಿಟ್ಟು ಹೋಗಲು ಸಜ್ಜಾದರೇ ಎಚ್.ಡಿ. ರೇವಣ್ಣ? ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ SIT!

Prajwal Revanna Case: ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್‌ ಕೇಸ್‌ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.

VISTARANEWS.COM


on

Prajwal Revanna Case HD Revanna ready to leave the country SIT issues lookout notice
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಎಚ್‌.ಡಿ. ರೇವಣ್ಣ (HD Revanna) ವಿರುದ್ಧವೂ ಈಗ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ದೇಶ ಬಿಟ್ಟು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ (Lookout Notice) ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಎಚ್.ಡಿ. ರೇವಣ್ಣ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್‌ ಅನ್ನು ಜಾರಿ ಮಾಡಿದ್ದಾರೆ.

ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್‌ ಕೇಸ್‌ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.

ಇದರ ಜತೆಗೆ ರೇವಣ್ಣ ಅವರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್‌ ನೀಡುತ್ತಲೇ ಬರಲಾಗಿದೆ. ಇಷ್ಟಾದರೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದೆ.

ಏನಿದು ಲುಕ್ ಔಟ್ ನೋಟಿಸ್? ಜಾರಿ ಅಧಿಕಾರ ಯಾರಿಗೆ? ಇದಕ್ಕೂ ತಡೆ ತರಬಹುದಾ?

ಲುಕ್‌ಔಟ್ ನೋಟಿಸ್‌ಗಳನ್ನು ಲುಕ್‌ಔಟ್ ಸರ್ಕ್ಯುಲರ್‌ಗಳು (LOC) ಎಂದೂ ಕರೆಯಲಾಗುತ್ತದೆ. ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಇವುಗಳನ್ನು ಇಶ್ಯೂ ಮಾಡಲಾಗುತ್ತದೆ. ಇದನ್ನು ದೇಶದ ವಲಸೆ ಬ್ಯೂರೋ (Bureau of Immigration) ಹಾಗೂ ಗೃಹ ಸಚಿವಾಲಯ (MHA) ಮಾತ್ರ ನೀಡಬಹುದು. ವಿಮಾನ ನಿಲ್ದಾಣ (Airport) ಮತ್ತಿತರ ಸಂಚಾರ ಪಾಯಿಂಟ್‌ಗಳಲ್ಲಿ ಕಾನೂನು ಜಾರಿ ಅಧಿಕಾರಿಗಳಿಗೆ ಅಗತ್ಯವಿರುವ ವ್ಯಕ್ತಿಗಳ ಪ್ರವೇಶ ಮತ್ತು ನಿರ್ಗಮನದ ಮೇಲೆ ನಿಗಾ ಇಡಲು, ಪರಿಣಾಮಕಾರಿಯಾಗಿ ತಡೆಗಟ್ಟಲು ಇದನ್ನು ಹೊರಡಿಸಲಾಗುತ್ತದೆ.

ಒಂದು ದೇಶದ ವಲಸೆ ಅಧಿಕಾರಿಗಳು ಯಾವುದೇ ತಲೆಮರೆಸಿಕೊಂಡಿರುವ ಅಪರಾಧಿಯ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿದರೆ, ಆ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಬಹುದು. ಅಪರಾಧಿಗಳು ಇದರಿಂದಾಗಿ ವಿಮಾನ ನಿಲ್ದಾಣ ಅಥವಾ ಬಂದರಿನಲ್ಲಿ ಸಿಕ್ಕಿಬಿದ್ದಿರುವ ಸುದ್ದಿಯನ್ನು ನಾವು ಆಗಾಗ ಕೇಳುತ್ತಿರುತ್ತೇವೆ.

ಮಾರ್ಗಸೂಚಿಗಳು

ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಈ ಸರ್ಕ್ಯುಲರ್‌ಗಳ ಮೂಲ ಮಾರ್ಗಸೂಚಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯ (MHA) ಹೊರಡಿಸಿದೆ. ಈ ಮಾರ್ಗಸೂಚಿಗಳು ಹೀಗಿವೆ:

1) LOC ನೀಡುವ ವಿನಂತಿಯನ್ನು ಭಾರತ ಸರ್ಕಾರದ ಉಪ ಕಾರ್ಯದರ್ಶಿ, ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ, ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಪೊಲೀಸ್ ವರಿಷ್ಠಾಧಿಕಾರಿಗಳ ಶ್ರೇಣಿಯ ಅಧಿಕಾರಿಗಳು ಮಾತ್ರ ಮಾಡಬಹುದು.

2) ಯಾವುದೇ ಭಾರತೀಯ ವ್ಯಕ್ತಿಯ ವಿರುದ್ಧ ಎಲ್ಲಾ ವಲಸೆ ಚೆಕ್‌ಪೋಸ್ಟ್‌ಗಳಿಗೆ ಲುಕ್‌ಔಟ್ ನೋಟೀಸ್ ಅನ್ನು ಗೃಹ ಸಚಿವಾಲಯ ಸಿದ್ಧಪಡಿಸಿದ ಸ್ವರೂಪದಲ್ಲಿ ಮಾತ್ರ ನೀಡಬಹುದು.

3) ನೋಟಿಸ್ ನೀಡುವ ಏಜೆನ್ಸಿಯು ಆರೋಪಿಯ ಸಂಪೂರ್ಣ ಗುರುತಿನ ವಿವರಗಳನ್ನು ನಿಗದಿತ ನಮೂನೆಯಲ್ಲಿ ನೀಡಬೇಕು. ಆರೋಪಿಯ ಹೆಸರನ್ನು ಹೊರತುಪಡಿಸಿ ಮೂರಕ್ಕಿಂತ ಕಡಿಮೆ ಗುರುತಿನ ಮಾನದಂಡಗಳಿದ್ದಲ್ಲಿ LOC ನೀಡಲಾಗುವುದಿಲ್ಲ.

4) ಸಾಮಾನ್ಯವಾಗಿ ಲುಕ್‌ಔಟ್ ನೋಟೀಸ್ ವಿತರಣೆಯ ದಿನಾಂಕದಿಂದ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಏಜೆನ್ಸಿಯು ಈ ಸೂಚನೆಯ ಅವಧಿಯನ್ನು ಹೆಚ್ಚಿಸಲು ಬಯಸಿದರೆ, ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮಾಡಬಹುದು. ಒಂದು ವರ್ಷದ ನಿಗದಿತ ಅವಧಿಯೊಳಗೆ LOCಯನ್ನು ವಿಸ್ತರಿಸಲು ಯಾವುದೇ ವಿನಂತಿ ಮಾಡದಿದ್ದರೆ, LOC ಅನ್ನು ಅಮಾನತುಗೊಳಿಸಲು ಸಂಬಂಧಿಸಿದ ವಲಸೆ ಅಧಿಕಾರಿಗೆ ಅಧಿಕಾರವಿದೆ.

ಕೋರ್ಟ್ ಮತ್ತು ಇಂಟರ್‌ಪೋಲ್‌ನಿಂದ ಲುಕ್‌ಔಟ್ ನೋಟಿಸ್‌ಗಳನ್ನು ನೀಡಿದರೆ, ಲುಕ್‌ಔಟ್ ನೋಟೀಸ್‌ಗಳು ಒಂದು ವರ್ಷದೊಳಗೆ ಮುಕ್ತಾಯಗೊಳ್ಳುವುದಿಲ್ಲ.

ಲುಕ್‌ಔಟ್ ನೋಟಿಸ್‌ನ ದುರ್ಬಳಕೆ

ಹಲವು ಪ್ರಕರಣಗಳಲ್ಲಿ ಲುಕ್‌ಔಟ್‌ ನೋಟಿಸ್‌ ದುರ್ಬಳಕೆಯಾಗಿದೆ. ಯಾರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿದೆಯೋ ಅವರಿಗೂ ಲುಕ್‌ಔಟ್ ನೋಟಿಸ್ ಬಗ್ಗೆ ಕೆಲವೊಮ್ಮ ತಿಳಿದಿರುವುದಿಲ್ಲ. ವ್ಯಕ್ತಿ ತನ್ನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವುದನ್ನು ನಿರೀಕ್ಷಿಸದೇ ಇರಬಹುದು. ವಿಮಾನ ನಿಲ್ದಾಣ/ಗಡಿ ಇತ್ಯಾದಿಗಳಲ್ಲಿ ವಲಸೆ ಅಧಿಕಾರಿಗಳು ತಡೆದಾಗ ಅಥವಾ ಬಂಧಿಸಿದಾಗ ಮಾತ್ರ ಆರೋಪಿಗೆ ತಿಳಿಯುತ್ತದೆ.

ಆದರೆ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಯುಗದಲ್ಲಿ ಹೀಗಾಗದು. ಕೆಲವೊಮ್ಮೆ ಲುಕ್‌ಔಟ್ ನೋಟಿಸ್‌ಗಳನ್ನು ಎಲ್ಲಾ ನಿಯಮಗಳ ಪಾಲನೆಯಾಗದೆ ನೀಡಲಾಗುತ್ತದೆ. ಈ ಪ್ರಕರಣಗಳು ಶಂಕಿತ ವ್ಯಕ್ತಿಗಳು, ದೇಶ ವಿರೋಧಿ ಅಂಶಗಳು ಇತ್ಯಾದಿಗಳೊಂದಿಗೆ ಸಂಬಂಧ ಹೊಂದಿವೆ. ಇಂತಹ ಪ್ರಕರಣಗಳಿಂದ ಬಾಧಿತರಾದ ಯಾವುದೇ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಪರಿಹಾರ ಪಡೆಯಲು ಮಾನವ ಹಕ್ಕುಗಳ ಆಯೋಗ ಅಥವಾ ಹೈಕೋರ್ಟ್‌ಗಳನ್ನು ಸಂಪರ್ಕಿಸಬಹುದು. ಆದರೆ ಈ ಪ್ರಕ್ರಿಯೆ ಹಲವು ವರ್ಷಗಳನ್ನು ತೆಗೆದುಕೊಳ್ಳಬಹುದು ಮತ್ತು ತುಂಬಾ ದುಬಾರಿಯಾಗಬಹುದು.

ಇದನ್ನೂ ಓದಿ: Prajwal Revanna Case: ವಿಡಿಯೊದಲ್ಲಿ ಪ್ರಜ್ವಲ್‌ ಮುಖ ಕಾಣಲ್ಲ; ಗಂಡಸ್ತನವಿದ್ದರೆ ರಾಹುಲ್‌ ಗಾಂಧಿಗೆ ನೋಟಿಸ್‌ ಕೊಡಿ: ಸಿಎಂಗೆ ಎಚ್‌ಡಿಕೆ ಸವಾಲು

ಲುಕ್‌ಔಟ್ ನೋಟಿಸ್‌ಗಳು ಅಪರಾಧಿಗಳಲ್ಲಿ ಭಯವನ್ನು ಉಂಟುಮಾಡುತ್ತವೆಯೇ? ಅನೇಕ ಪ್ರಕರಣಗಳಲ್ಲಿ ಅನೇಕ ಅಪರಾಧಿಗಳು ಮತ್ತು ಆರೋಪಿಗಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ವಿರುದ್ಧ ಭಾರತದಲ್ಲಿ ಲುಕ್‌ಔಟ್ ನೋಟಿಸ್‌ಗಳನ್ನು ಹೊರಡಿಸಲಾಗಿದೆ. ಆದರೆ ಇದರಿಂದ ಅವರು ವಿಚಲಿತರಾದಂತಿಲ್ಲ. ಇಲ್ಲಿಯವರೆಗೆ ಎಷ್ಟು ಲುಕ್‌ಔಟ್ ನೋಟಿಸ್‌ಗಳನ್ನು ನೀಡಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

Continue Reading

Latest

IPL 2024 : ಕೊಹ್ಲಿಯ ಸ್ಟ್ರೈಕ್ ರೇಟ್ ಪ್ರಶ್ನಿಸುವವರಿಗೆ ತಕ್ಕ ಪಾಠ ಹೇಳಿದ ಕೈಫ್​, ಪಠಾಣ್​​

Virat kohli: ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರವರು ಆಡುತ್ತಾರೆ. ಉತ್ತಮ ಬೌಲಿಂಗ್ ಮತ್ತು ಎಲ್ಲವೂ ಇದಕ್ಕೆ ಸೇರ್ಪಡೆಯಾಗುತ್ತದೆ. ಏನೇ ಹೇಳಿದರೂ ಪ್ರತಿಯೊಬ್ಬ ಕ್ರಿಕೆಟಿಗನನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಇರ್ಫಾನ್ ವೀಕ್ಷಕವಿವರಣೆಯ ಸಮಯದಲ್ಲಿ ಹೇಳಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್​ 2024ರ (IPL 2024) ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ (SRH) ತಂಡದ ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್ (Travis Head)) 44 ಎಸೆತಗಳಲ್ಲಿ 58 ರನ್ ಗಳಿಸಿದ್ದಾರೆ. ಸಾಮಾನ್ಯವಾಗಿ, ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಆಟಗಾರ ಆರಂಭದಿಂದಲೂ ಬೌಲರ್​ಗಳನ್ನು ದಂಡಿಸುತ್ತಾರೆ. ಪವರ್​ಪ್ಲೇನಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ. ಆದಾಗ್ಯೂ, ಅವರು ತಮ್ಮ ಪಾಲುದಾರರಾದ ಅಭಿಷೇಕ್ ಶರ್ಮಾ ಮತ್ತು ಅನ್ಮೋಲ್​ಪ್ರೀತ್​ ಸಿಂಗ್ ಅವರನ್ನು ಬೇಗನೆ ಕಳೆದುಕೊಂಡಿದ್ದರಿಂದ ಹೆಡ್ ಇನ್ನಿಂಗ್ಸ್ ಕಟ್ಟಲು ನಿರ್ಧರಿಸಿದ್ದರು. ಹೀಗಾಗಿ ಅವರು ಸ್ಟ್ರೈಕ್​​ರೇಟ್ (Strike Rate)​ ಕುಸಿಯಿತು.

ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಮೊಹಮ್ಮದ್ ಕೈಫ್ ಇದನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಕೊಹ್ಲಿಯ ಸ್ಟ್ರೈಕ್​ರೇಟ್​ ಬಗ್ಗೆ ಮಾತನಾಡುವವರಿಗೆ ಪಾಠ ಹೇಳಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಅಂತಹ ಇನ್ನಿಂಗ್ಸ್ ಆಡಿದ್ದರೆ ಅವರ ಸ್ಟ್ರೈಕ್ ರೇಟ್ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿದ್ದವು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಕಷ್ಟು ರನ್ ಗಳಿಸಿ, ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಐಪಿಎಲ್ 2024 ರಾದ್ಯಂತ ಕೊಹ್ಲಿ ಅವರ ಸ್ಟ್ರೈಕ್ ರೇಟ್​ ಕಾರಣಕ್ಕೆ ಟೀಕೆ ಎದುರಿಸಿದ್ದಾರೆ. ಹೆಡ್ ಅವರ ಇನ್ನಿಂಗ್ಸ್ ಅನ್ನು ನೋಡಿದ ಪಠಾಣ್ ಮತ್ತು ಕೈಫ್ ಕೊಹ್ಲಿಯ ರಕ್ಷಣೆಗೆ ಧಾವಿಸಿದ್ದಾರೆ. ಪ್ರತಿಯೊಬ್ಬ ಕ್ರಿಕೆಟಿಗನನ್ನು ಸಮಾನವಾಗಿ ಪರಿಗಣಿಸಬೇಕು ಎಂದು ವಾದ ಮಂಡಿಸಿದ್ದಾರೆ.

ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರವರು ಆಡುತ್ತಾರೆ. ಉತ್ತಮ ಬೌಲಿಂಗ್ ಮತ್ತು ಎಲ್ಲವೂ ಇದಕ್ಕೆ ಸೇರ್ಪಡೆಯಾಗುತ್ತದೆ. ಏನೇ ಹೇಳಿದರೂ ಪ್ರತಿಯೊಬ್ಬ ಕ್ರಿಕೆಟಿಗನನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಇರ್ಫಾನ್ ವೀಕ್ಷಕವಿವರಣೆಯ ಸಮಯದಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೈಫ್​​ “ನೀವು ಹೇಳಿದ್ದು ಸರಿ. ಇದು ವಿರಾಟ್ ಕೊಹ್ಲಿ ಆಗಿದ್ದರೆ, ಜನರು 44 ಎಸೆತಗಳಲ್ಲಿ ಕೇವಲ 58 ರನ್ ಗಳಿಸುತ್ತಿದ್ದಾರೆ ಎಂದು ಟೀಕಿಸುತ್ತಿದ್ದರು. ಅದು ಕಡಿಮೆ ಎಂದು ಅವರು ಹೇಳುತ್ತಿದ್ದರು ಮತ್ತು ಅವರ ಸ್ಟ್ರೈಕ್ ರೇಟ್ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. ಇದು ಹೆಡ್ ಅವರ ಉತ್ತಮ ಇನ್ನಿಂಗ್ಸ್ ಎಂದು ನಾನು ನಂಬುತ್ತೇನೆ,” ಎಂದು ಕೈಫ್ ಹೇಳಿದರು.

ಇದನ್ನೂ ಓದಿ: IPL 2024 : ರಾಜಸ್ಥಾನ್​ ಸೋಲಿನ ಬಳಿಕ ಮೊಹಮ್ಮದ್ ಕೈಫ್​ ಟ್ರೋಲ್ ಮಾಡಿದ ವಾಸಿಮ್ ಜಾಫರ್​!

“ಆದರೆ ವಿರಾಟ್ ಕೊಹ್ಲಿ ಇದ್ದಿದ್ದರೆ, ಜನರು ಸ್ಟ್ರೈಕ್ ರೇಟ್​​ಗೆ ಅಂಟಿಕೊಳ್ಳುತ್ತಿದ್ದರು. ಆದರೆ ಇಲ್ಲಿ ನಾವು ತಂಡದ ಗೆಲುವಿನ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೇವೆ. ಆದ್ದರಿಂದ ದಯವಿಟ್ಟು ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ” ಎಂದು ಇರ್ಫಾನ್ ಅಭಿಪ್ರಾಯ ಮಂಡಿಸಿದರು.

ಹೆಡ್ ಅವರ 58 ಮತ್ತು ನಿತೀಶ್ ರೆಡ್ಡಿ ಅವರ 76* ರನ್​ಗಳ ನೆರವಿನಿಂದ ಎಸ್​ಆರ್​ಎಚ್​ ರಾಜಸ್ಥಾನ್ ವಿರುದ್ಧ 201 ರನ್ ಗಳಿಸಲು ನೆರವಾಯಿತು. ಚೇಸಿಂಗ್ ವಿಷಯಕ್ಕೆ ಬಂದಾಗ, ಸಂಜು ಸ್ಯಾಮ್ಸನ್ ನೇತೃತ್ವದ ತಂಡವು ಹೆಚ್ಚಿನ ಸಮಯ ಗೆಲುವಿಗಾಗಿ ಹಂಬಲಿಸಿತು. ಆದರೆ ಕೊನೆಯಲ್ಲಿ ಕೇವಲ ಒಂದು ರನ್​ನಿಂದ ಸೋತಿತು. ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರೆ, ರಾಜಸ್ಥಾನ ಅಗ್ರಸ್ಥಾನದಲ್ಲಿದೆ.

Continue Reading

ದೇಶ

2026ರಲ್ಲಿ ಭಾರತ ಪೀಸ್‌ ಪೀಸ್‌ ಆಗುತ್ತದೆ ಎಂದ ಪಾಕ್‌ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!

ಫೈಸಲ್‌ ರಾಜಾ ಅಬಿದಿ ಎಂಬ ಪಾಕಿಸ್ತಾನದ ಮಾಜಿ ಸಂಸದನು ಭಾರತದ ಕುರಿತು ದುರಹಂಕಾರದ ಮಾತುಗಳನ್ನಾಡಿದ್ದಾನೆ. “ಭಾರತದ ಸಂಸತ್ತಿನಲ್ಲಿ ಅಖಂಡ ಭಾರತ ಕಲ್ಪನೆಯ ನಕ್ಷೆ ಹಾಕಲಾಗಿದೆ. ಈ ನಕ್ಷೆಯಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್‌ ಹಾಗೂ ಪಾಕಿಸ್ತಾನವೂ ಸೇರಿದೆ. ಆದರೆ, ಒಂದು ಮಾತು ನೆನಪಿರಲಿ. 2026ರ ನವೆಂಬರ್‌ನಲ್ಲಿ ಭಾರತವು ಚೂರು ಚೂರಾಗುತ್ತದೆ” ಎಂದು ಟಿವಿ ಸಂದರ್ಶನದ ವೇಳೆ ಹೇಳಿದ್ದಾನೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

VISTARANEWS.COM


on

Faisal Raza Abidi
Koo

ಇಸ್ಲಾಮಾಬಾದ್:‌ ಅಸಮರ್ಥ ನಾಯಕತ್ವ, ಉಗ್ರರ ಪೋಷಣೆ, ರಾಜಕೀಯ ಅರಾಜಕತೆ, ಧಾರ್ಮಿಕ ಮೂಲಭೂತವಾದ, ಸೇನೆಯ ಸರ್ವಾಡಳಿತ ಸೇರಿ ಹಲವು ಕಾರಣಗಳಿಂದಾಗಿ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ಹಣಕಾಸು ನೆರವಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಇಷ್ಟಿದ್ದರೂ ಅಲ್ಲಿನ ನಾಯಕರು ಮಾತ್ರ ಅಹಂಕಾರದ ಮಾತುಗಳನ್ನಾಡುವುದು, ಭಾರತದ ವಿರುದ್ಧ ಉದ್ಧಟತನದ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, “2026ರ ನವೆಂಬರ್‌ನಲ್ಲಿ ಭಾರತವು (India) ತುಂಡು ತುಂಡಾಗುತ್ತದೆ” ಎಂಬುದಾಗಿ ಪಾಕಿಸ್ತಾನದ (Pakistan) ಮಾಜಿ ಸಂಸದನೊಬ್ಬ (Pakistan ex Senator) ನಾಲಗೆ ಹರಿಬಿಟ್ಟಿದ್ದಾನೆ.

ಸುದ್ದಿವಾಹಿನಿಯೊಂದರ ಜತೆ ಮಾತನಾಡುವ ವೇಳೆ ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಫೈಸಲ್‌ ರಾಜಾ ಅಬಿದಿ (Faisal Raza Abidi) ಎಂಬ ಮಾಜಿ ಸಂಸದನು ದುರಹಂಕಾರದ ಮಾತುಗಳನ್ನಾಡಿದ್ದಾನೆ. “ಭಾರತದ ಸಂಸತ್ತಿನಲ್ಲಿ ಅಖಂಡ ಭಾರತ ಕಲ್ಪನೆಯ ನಕ್ಷೆ ಹಾಕಲಾಗಿದೆ. ಈ ನಕ್ಷೆಯಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್‌ ಹಾಗೂ ಪಾಕಿಸ್ತಾನವೂ ಸೇರಿದೆ. ಆದರೆ, ಒಂದು ಮಾತು ನೆನಪಿರಲಿ. 2026ರ ನವೆಂಬರ್‌ನಲ್ಲಿ ಭಾರತವು ಚೂರು ಚೂರಾಗುತ್ತದೆ. ನರೇಂದ್ರ ಮೋದಿ ಅವರ ಹಿಂದುತ್ವ ಅಜೆಂಡಾ ಕೂಡ ಪತನವಾಗುತ್ತದೆ” ಎಂದು ಹೇಳಿದ್ದಾನೆ.

“ಅಖಂಡ ಭಾರತ ಕಲ್ಪನೆಯ ಕುರಿತು ಪಾಕಿಸ್ತಾನ ಮಾತನಾಡಿದರೆ ತಮಾಷೆ ಮಾಡುತ್ತಾರೆ. ಆದರೆ, 2026ರ ನವೆಂಬರ್‌ 26ರಂದು ಅಲ್ಲಾ ಪಾಕಿಸ್ತಾನದ ಪರವಾಗಿರುತ್ತಾನೆ. ಅಂದು ನಡೆಯುವ ಘಟನೆಯು ನಿಮ್ಮನ್ನು ಅಚ್ಚರಿಯ ಮಡುವಿನಲ್ಲಿ ಬೀಳಿಸುತ್ತದೆ. ಮೋದಿ ಹಿಂದುತ್ವದಿಂದ ಹೊರಗೆ ಬರಲಿರುವ ಜನ, ಪ್ರಾಣ ಉಳಿದರೆ ಸಾಕು ಎಂದು ಹೇಳುತ್ತಾರೆ. ಪಾಕಿಸ್ತಾನದ ಶಸ್ತ್ರಾಸ್ತ್ರಗಳು ಹಾಗೂ ಮಾನವ ಸಂಪನ್ಮೂಲವು ಭಾರತದ ನಾಶಕ್ಕೆ ಸಿದ್ಧವಾಗಿದೆ. ನರೇಂದ್ರ ಮೋದಿ ಆಡಳಿತದಲ್ಲಿಯೇ ಭಾರತ ತುಂಡು ತುಂಡಾಗುವುದೇ ಮುಖ್ಯ” ಎಂಬುದಾಗಿ ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದಾನೆ.

“ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಅವರ ಪ್ರತಿಪಾದನೆಗೆ ಜನರಿಂದ ಅಪಾರ ಬೆಂಬಲವೂ ವ್ಯಕ್ತವಾಗುತ್ತಿದೆ. ಹಾಗಾಗಿ, ಭಾರತವು ಚೂರು ಚೂರು ಆಗುವುದು ಮುಖ್ಯ” ಎಂಬುದಾಗಿ ಅಬಿದಿ ಹೇಳಿದ್ದಾನೆ. ಆ ಮೂಲಕ ಭಾರತದ ಮೇಲೆ ಪಾಕಿಸ್ತಾನವು ಶಸ್ತ್ರಾಸ್ತ್ರಗಳ ಸಮೇತ ದಾಳಿ ಮಾಡುತ್ತದೆ ಎಂಬುದರ ಮುನ್ಸೂಚನೆ ನೀಡಿದ್ದಾನೆ. ಇದುವರೆಗೆ ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧಕ್ಕಿಳಿದಿರುವ ಪಾಕಿಸ್ತಾನವು, ನಾಲ್ಕಕ್ಕೆ ನಾಲ್ಕು ಬಾರಿಯೂ ಹೀನಾಯವಾಗಿ ಸೋಲುಂಡಿದೆ. ಇನ್ನು ಮೋದಿ ಆಡಳಿತದಲ್ಲಿ 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, 2019ರ ಪುಲ್ವಾಮ ದಾಳಿಗೆ ಪ್ರತಿಯಾಗಿ ಬಾಲಾಕೋಟ್‌ ವಾಯುದಾಳಿ ಮೂಲಕ ಪಾಕಿಸ್ತಾನದ ಉಗ್ರರನ್ನು ಹಿಮ್ಮೆಟ್ಟಿಸಲಾಗಿದೆ. ಹೀಗಿದ್ದರೂ, ಪಾಕಿಸ್ತಾನದ ನಾಯಕರು ಭಾರತದ ವಿಚಾರದಲ್ಲಿ ಹಗುರವಾಗಿ ಮಾತನಾಡುವುದನ್ನು ಬಿಟ್ಟಿಲ್ಲ ಎಂಬುದಕ್ಕೆ ಇದೇ ನಿದರ್ಶನವಾಗಿದೆ.

ಇದನ್ನೂ ಓದಿ: Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

Continue Reading

ಕ್ರೀಡೆ

IPL 2024 : ರಾಜಸ್ಥಾನ್​ ಸೋಲಿನ ಬಳಿಕ ಮೊಹಮ್ಮದ್ ಕೈಫ್​ ಟ್ರೋಲ್ ಮಾಡಿದ ವಾಸಿಮ್ ಜಾಫರ್​!

IPL 2024: ಐಸಿಸಿ ವಿಶ್ವಕಪ್ 2023 ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ ಮೊಹಮ್ಮದ್ ಕೈಫ್ ಅವರ ಹೇಳಿಕೆಗಳು ಸಾಕಷ್ಟು ಟ್ರೋಲ್​​ಗೆ ಒಳಗಾಗಿದ್ದವು. ಪಂದ್ಯಾವಳಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದರೂ ರೋಹಿತ್ ಶರ್ಮಾ ನೇತೃತ್ವದ ತಂಡವು ಫೈನಲ್ ಪಂದ್ಯದಲ್ಲಿ ಸೋತಿತ್ತು. ಆ ಸೋಲನ್ನು ಒಪ್ಪಿಕೊಳ್ಳವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಸಿದ್ಧರಿರಲಿಲ್ಲ.

VISTARANEWS.COM


on

IPL 2024
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ(IPL 2024) ಗುರುವಾರ (ಮೇ 3) ಸನ್​ರೈಸರ್ಸ್​ ಹೈದರಾಬಾದ್ (SRH) ವಿರುದ್ಧ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಸೋತ ನಂತರ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ (Wasim Jafar) ಅವರು ಐಸಿಸಿ ವಿಶ್ವಕಪ್ 2023 ರ ಫೈನಲ್ ಕುರಿತ ಹೇಳಿಕೆಗಳನ್ನು ಮತ್ತೊಬ್ಬ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರನ್ನು ಟ್ರೋಲ್ ಮಾಡಿದ್ದಾರೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆದಿತ್ತು.

ಐಸಿಸಿ ವಿಶ್ವಕಪ್ 2023 ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ ಮೊಹಮ್ಮದ್ ಕೈಫ್ ಅವರ ಹೇಳಿಕೆಗಳು ಸಾಕಷ್ಟು ಟ್ರೋಲ್​​ಗೆ ಒಳಗಾಗಿದ್ದವು. ಪಂದ್ಯಾವಳಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದರೂ ರೋಹಿತ್ ಶರ್ಮಾ ನೇತೃತ್ವದ ತಂಡವು ಫೈನಲ್ ಪಂದ್ಯದಲ್ಲಿ ಸೋತಿತ್ತು. ಆ ಸೋಲನ್ನು ಒಪ್ಪಿಕೊಳ್ಳವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಸಿದ್ಧರಿರಲಿಲ್ಲ. ಅತ್ಯುತ್ತಮ ತಂಡ ಭಾರತದ ಸೋಲನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಮೊಹಮ್ಮದ್ ಕೈಫ್ ಹೇಳಿಕೊಂಡಿದ್ದರು.

ಕಪ್​ ಗೆದ್ದಿರುವ ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು. ಆದರೆ ಅತ್ಯುತ್ತಮ ತಂಡವು ವಿಶ್ವಕಪ್ ಗೆದ್ದಿದೆ ಎಂದು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ. ಈ ಭಾರತೀಯ ತಂಡವು ಅತ್ಯುತ್ತಮ ತಂಡವಾಗಿತ್ತು. ಅವರು ಇಂದು ಸೋತರು. ಇದು ಆ ಕೆಟ್ಟ ದಿನಗಳಲ್ಲಿ ಒಂದಾಗಿದೆ ಎಂದು ವಿಶ್ವ ಕಪ್​ ಬಳಿಕ ಕೈಫ್​ ಹೇಳಿಕೆ ನೀಡಿದ್ದರು.

ಇದೀಗ ಕೆಲವು ತಿಂಗಳುಗಳ ನಂತರ, ಮೊಹಮ್ಮದ್ ಕೈಫ್ ಅವರನ್ನು ಟ್ರೋಲ್ ಮಾಡಲು ವಾಸಿಮ್ ಜಾಫರ್ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡರು. ಸನ್ರೈಸರ್ಸ್​​ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 1 ರನ್ ಸೋತ ನಂತರ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಚಿತ್ರ ಪೋಸ್ಟ್ ಮಾಡಿದ್ದಾರೆ. “ಕಾಗದದ ಮೇಲಿನ ಬಲಿಷ್ಠ ತಂಡವು ಪಂದ್ಯ ಕಳೆದುಕೊಂಡಾಗ ಮೊಹಮ್ಮದ್ ಕೈಫ್” ಎಂಬ ಉಲ್ಲೇಖ ನೀಡಿ ಚಿತ್ರ ಪೋಸ್ಟ್ ಮಾಡಿದ್ದಾರೆ.

ಐಪಿಎಲ್ 2024 ರಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ನಿರಾಶಾದಾಯಕ ಸೋಲು ಅನುಭವಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಯ ಎಸೆತದಲ್ಲಿ ಫಲಿತಾಂಶವನ್ನು ನಿರ್ಧಾರಗೊಂಡಿತು. ಇದು ಪಂದ್ಯಾವಳಿಯ ಅತ್ಯಂತ ರೋಮಾಂಚಕಾರಿ ಆಟಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: IPL 2024 : ನನ್ನ ನಿದ್ದೆಗೆಡಿಸಿದ್ದ ರೋಹಿತ್​ ಶರ್ಮಾ; ಗಂಭೀರ್​ ಹೀಗೆ ಹೇಳಲು ಕಾರಣವೇನು?

202 ರನ್ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಆರಂಭಿಕ ವಿಕೆಟ್​​ಗಳನ್ನು ಬೇ ಕಳೆದುಕೊಂಡಿತು. ಆದರೆ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ, ರೋವ್ಮನ್ ಪೊವೆಲ್ ಆಟವನ್ನು ಕೌತುಕಕ್ಕೆ ಕೊಂಡೊಯ್ದರು. ತ್ತು ಕೊನೆಯ ಎಸೆತದಲ್ಲಿ 2 ರನ್​ಗಳ ಅಗತ್ಯವಿದ್ದಾಗ ಅವರು ಔಟಾಗಿದ್ದರಿಂದ ಸನ್​ರೈಸರ್ಸ್​ ಹೈದರಾಬಾದ್ ಪಂದ್ಯವನ್ನು 1 ರನ್​ಗಳಿಂದ ಗೆದ್ದುಕೊಂಡಿತು.

ರೋಹಿತ್ ಶರ್ಮಾಗೆ ದೊಡ್ಡ ಅವಕಾಶ

ಮೊಹಮ್ಮದ್ ಕೈಫ್ ಇತ್ತೀಚೆಗೆ 2024 ರ ಟಿ 20 ವಿಶ್ವಕಪ್​​ ನಲ್ಲಿ ಭಾರತದ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಪಂದ್ಯಾವಳಿಯು ನಾಯಕನಾಗಿ ರೋಹಿತ್ ಶರ್ಮಾಗೆ ಉತ್ತಮ ಅವಕಾಶವಾಗಿದೆ ಎಂದು ಅವರು ನುಡಿದಿದ್ದಾರೆ. ಐಸಿಸಿ ವಿಶ್ವಕಪ್ 2023 ರಲ್ಲಿ ಭಾರತವು ಅನುಭವಿಸಿದಂತಹ ಬೇಸರವನ್ನು ಎದುರಿಸುವುದಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

“ರೋಹಿತ್ ಶರ್ಮಾ ಅವರು ಮುಂದಿನ 2 ರಿಂದ 3 ವರ್ಷಗಳವರೆಗೆ ಹೆಚ್ಚು ಕಾಲ ಆಡುವುದಿಲ್ಲ ಎಂದು ತಿಳಿದಿದೆ. ವಿರಾಟ್ ಕೊಹ್ಲಿ ಕೂಡ ಅದೇ ಹಾದಿಯಲ್ಲಿದ್ದಾರೆ. ನಾಯಕನಾಗಿ ರೋಹಿತ್​ಗೆ ಇದು ದೊಡ್ಡ ಅವಕಾಶ. ಪಂದ್ಯವು ಭಾರತದ ಕೈಯಲ್ಲಿದ್ದ ನಂತರ ಅವರು ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಸೋತಿದ್ದಾರೆ. 10 ಪಂದ್ಯಗಳನ್ನು ಗೆದ್ದರೂ 1 ಪಂದ್ಯವನ್ನು ಸೋತಿತು.. ಟಿ 20 ವಿಶ್ವಕಪ್​​ನಲ್ಲಿ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ, “ಎಂದು ಅವರು ಹೇಳಿದರು.

Continue Reading
Advertisement
Prajwal Revanna Case HD Revanna ready to leave the country SIT issues lookout notice
ಕ್ರೈಂ15 mins ago

Prajwal Revanna Case: ದೇಶ ಬಿಟ್ಟು ಹೋಗಲು ಸಜ್ಜಾದರೇ ಎಚ್.ಡಿ. ರೇವಣ್ಣ? ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ SIT!

IPL 2024
Latest20 mins ago

IPL 2024 : ಕೊಹ್ಲಿಯ ಸ್ಟ್ರೈಕ್ ರೇಟ್ ಪ್ರಶ್ನಿಸುವವರಿಗೆ ತಕ್ಕ ಪಾಠ ಹೇಳಿದ ಕೈಫ್​, ಪಠಾಣ್​​

Faisal Raza Abidi
ದೇಶ26 mins ago

2026ರಲ್ಲಿ ಭಾರತ ಪೀಸ್‌ ಪೀಸ್‌ ಆಗುತ್ತದೆ ಎಂದ ಪಾಕ್‌ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!

Wonderla Bengaluru
ಕರ್ನಾಟಕ33 mins ago

Wonderla Bengaluru: ಬೇಸಿಗೆ ರಜೆಯನ್ನು ಇನ್ನಷ್ಟು ಮಜವಾಗಿಸಲು ವಂಡರ್‌ಲಾದಲ್ಲಿ ʼಸಮ್ಮರ್‌ಲಾ ಫಿಯೆಸ್ಟಾ-2024ʼ: ಭರಪೂರ ಆಫರ್ಸ್‌

training for election duty staff in Karwar
ಉತ್ತರ ಕನ್ನಡ37 mins ago

Lok Sabha Election 2024: ಗೊಂದಲಕ್ಕೆ ಅವಕಾಶವಿಲ್ಲದೆ ಚುನಾವಣೆ ನಡೆಸಲು ಉ.ಕ ಡಿಸಿ ಸೂಚನೆ

IPL 2024
ಕ್ರೀಡೆ51 mins ago

IPL 2024 : ರಾಜಸ್ಥಾನ್​ ಸೋಲಿನ ಬಳಿಕ ಮೊಹಮ್ಮದ್ ಕೈಫ್​ ಟ್ರೋಲ್ ಮಾಡಿದ ವಾಸಿಮ್ ಜಾಫರ್​!

Rohith Vemula
ದೇಶ1 hour ago

Rohith Vemula: ರೋಹಿತ್‌ ವೇಮುಲ ದಲಿತನೇ ಅಲ್ಲ ಎಂದ ಪೊಲೀಸರು; ಕೇಸ್‌ ಕ್ಲೋಸ್‌, ಸ್ಮೃತಿ ಇರಾನಿ ಸೇರಿ ಹಲವರಿಗೆ ಕ್ಲೀನ್‌ ಚಿಟ್

IPL 2024
Latest1 hour ago

IPL 2024 : ನನ್ನ ನಿದ್ದೆಗೆಡಿಸಿದ್ದ ರೋಹಿತ್​ ಶರ್ಮಾ; ಗಂಭೀರ್​ ಹೀಗೆ ಹೇಳಲು ಕಾರಣವೇನು?

Vidyashree HS
ಬೆಂಗಳೂರು1 hour ago

Vidyashree HS: ಬೆಂಗಳೂರಿನಲ್ಲಿ ಮೇ 4ರಂದು ವಿದ್ಯಾಶ್ರೀ ಎಚ್.ಎಸ್. ಭರತನಾಟ್ಯ ರಂಗಪ್ರವೇಶ

Prajwal Revanna Case
ಕರ್ನಾಟಕ2 hours ago

Prajwal Revanna Case: ರೇವಣ್ಣ ಮನೆ ಕೆಲಸದ ಮಹಿಳೆ ಕಿಡ್ನ್ಯಾಪ್‌ ಕೇಸ್; 2ನೇ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ4 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ16 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌