Kumble Sridhara Rao: ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನಿಧನ - Vistara News

ಶ್ರದ್ಧಾಂಜಲಿ

Kumble Sridhara Rao: ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನಿಧನ

Kumble Sridhara Rao: ಇರಾ ಸೋಮನಾಥೇಶ್ವರ ಮೇಳದ ಮೂಲಕ ಯಕ್ಷಗಾನ ವೃತ್ತಿಜೀವನ ಆರಂಭಿಸಿದ್ದ ಶ್ರೀಧರ ರಾವ್‌ ಯಕ್ಷಗಾನ ಕ್ಷೇತ್ರದ ದಿಗ್ಗಜ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ಟರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿಯಾಗಿ, ತಾರೆಯಾಗಿ ಸಾಥ್ ನೀಡಿದ್ದರು.

VISTARANEWS.COM


on

kumble sridhara rao
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗಳೂರು: ತಮ್ಮ ಸ್ತ್ರೀಪಾತ್ರಗಳಿಂದ ವಿಖ್ಯಾತರಾಗಿದ್ದ ಹಿರಿಯ ಯಕ್ಷಗಾನ ಕಲಾವಿದ (senior yakshagana artist) ಕುಂಬ್ಳೆ ಶ್ರೀಧರ ರಾವ್‌ (76) (Kumble Sridhara Rao) ಶುಕ್ರವಾರ ನಿಧನರಾದರು. ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದ ಅವರು ಸುಂದರ ಪಾತ್ರನಿರ್ವಹಣೆಯಿಂದ ಯಕ್ಷರಸಿಕರ ಮನದಲ್ಲಿ ನೆಲೆ ನಿಂತಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳದಲ್ಲೇ ನಿರಂತರ 50 ವರ್ಷಗಳಿಗೂ ಹೆಚ್ಚು ಕಾಲ ಅವರು ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದೆ ಮೇಳದಿಂದ ನಿವೃತ್ತರಾಗಿದ್ದರು. ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆಯವರಾದ ಶ್ರೀಧರ ರಾವ್ ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ವಾಸವಿದ್ದರು.

ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರನಾಗಿ 1948ರಲ್ಲಿ ಜನಿಸಿದ ಶ್ರೀಧರ ರಾವ್, ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಒಟ್ಟು 60 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

ಇರಾ ಸೋಮನಾಥೇಶ್ವರ ಮೇಳದ ಮೂಲಕ ಯಕ್ಷಗಾನ ವೃತ್ತಿಜೀವನ ಆರಂಭಿಸಿದ್ದ ಶ್ರೀಧರ ರಾವ್‌ ಯಕ್ಷಗಾನ ಕ್ಷೇತ್ರದ ದಿಗ್ಗಜ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ಟರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿಯಾಗಿ, ತಾರೆಯಾಗಿ ಸಾಥ್ ನೀಡಿದ್ದರು. ವೃತ್ತಿಜೀವನದ ಆರಂಭದಲ್ಲಿ ಸ್ತ್ರೀ ವೇಷಗಳಿಂದಲೇ ಪ್ರಸಿದ್ಧರಾದರು. ಶ್ರೀಧರ ರಾವ್​ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮುದೇವಿ, ನಳ ದಮಯಂತಿಯ ದಮಯಂತಿ, ಭೀಷ್ಮ ವಿಜಯದ ಅಂಬೆ ಇತ್ಯಾದಿ ಪಾತ್ರಗಳಲ್ಲಿ ಜನಮನ ಗೆದ್ದಿದ್ದರು.

ರಂಭಾ ರೂಪ ರೇಖಾ ಪ್ರಸಂಗದ ರಂಭೆಯಾಗಿ ಶ್ರೀಧರ ರಾವ್ ಅವರ ಅಭಿನಯವನ್ನು ಈಗಲೂ ಯಕ್ಷಗಾನ ಪ್ರೇಮಿಗಳು ಕೊಂಡಾಡುತ್ತಾರೆ. ಪುರುಷ ವೇಷಗಳಲ್ಲಿ ಈಶ್ವರ, ಲಕ್ಷ್ಮಣ, ಸುದರ್ಶನ ವಿಜಯದ ವಿಷ್ಣು ಇತ್ಯಾದಿ ಪಾತ್ರಗಳೂ ಅವರಿಗೆ ಖ್ಯಾತಿ ತಂದುಕೊಟ್ಟಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಬೆಂಗಳೂರಿನ ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಇದನ್ನೂ ಓದಿ: Lacchi Poojarthi: ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ನಿಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಲಬುರಗಿ

Swamiji Death: ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ವಿಧಿವಶ

Swamiji Death: ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಈ ವಿರಕ್ತ ಮಠವಿದ್ದು, ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ.

VISTARANEWS.COM


on

swamiji death kalaburagi viraktha math
Koo

ಕಲಬುರಗಿ: ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (35) ತೀವ್ರ ಹೃದಯಾಘಾತದಿಂದ (heart attack) ಇಂದು (Swamiji Death) ವಿಧಿವಶರಾಗಿದ್ದಾರೆ. ಕಲಬುರಗಿ (Kalaburagi news) ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಈ ವಿರಕ್ತ ಮಠವಿದ್ದು, ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (Viraktha Math Siddarama Swamy) ಲಿಂಗೈಕ್ಯರಾಗಿದ್ದಾರೆ.

ನಿನ್ನೆ ರಟಕಲ್ ಗ್ರಾಮದಲ್ಲಿ ನಡೆದಿದ್ದ ಅದ್ಧೂರಿ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು. ವಚನ ಸಂಗಮ ಕಾರ್ಯಕ್ರಮದಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ಬಿ.ಆರ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸೋರಿಕೆ

ಕಲಬುರಗಿ: ಕಲಬುರಗಿ ಜಿಲ್ಲೆಯ (Kalaburagi News) ಚಿಂಚೊಳ್ಳಿ‌ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ (Oxygen leakage) ಆಗಿದೆ ಎಂಬ ಸುದ್ದಿ ಕೇಳಿ ರೋಗಿಗಳು ಶಾಕ್‌ ಆಗಿದ್ದರು. ಆಸ್ಪತ್ರೆ ಹಿಂಭಾಗದಲ್ಲಿದ್ದ ಆಕ್ಸಿಜನ್ ಘಟಕದಿಂದ ಸೋರಿಕೆಯಾಗಿ ಅರ್ಧ ಕಿಮೀ ವ್ಯಾಪ್ತಿವರೆಗೂ ವಾಸನೆ ಮೂಗಿಗೆ ಬಡಿದಿತ್ತು.

ನೋಡನೋಡುತ್ತಿದ್ದ ಒಬ್ಬರಿಂದ ಒಬ್ಬರಿಗೆ ಆಕ್ಸಿಜನ್‌ ಸೋರಿಕೆ ಸುದ್ದಿ ಹರಿದಾಡಿದೆ. ಬಳಿಕ ಆಸ್ಪತ್ರೆಯೊಳಗೆ ಇದ್ದ ಸಿಬ್ಬಂದಿ, ರೋಗಿಗಳು ಭಯಭೀತರಾಗಿ ಹೊರಗೆ ಓಡಿ ಬಂದು ಆವರಣದೊಳಗೆ ಬಂದು ಕುಳಿತುಕೊಳ್ಳುವಂತಾಯಿತು. ಇತ್ತ ಆಕ್ಸಿಜನ್‌ ಟ್ಯಾಂಕ್‌ ಸ್ಫೋಟಗೊಂಡಿದೆ ಎಂಬ ಸುದ್ದಿಯಿಂದಾಗಿ ವೈದ್ಯರು ಮತ್ತು ಸಿಬ್ಬಂದಿ ತಗ್ಗಿದ ವಸತಿಗೃಹಗಳನ್ನು ಖಾಲಿ ಮಾಡಿದ್ದವು.

kalaburagi News

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಿಂಚೊಳ್ಳಿ ಪೊಲೀಸರು ದೌಡಾಯಿಸಿದ್ದರು. ಪರಿಶೀಲನೆ ನಡೆಸಿದಾಗ ಆಕ್ಸಿಜನ್‌ ಟ್ಯಾಂಕ್ ತುಂಬಿದ್ದರಿಂದ ಅದರ ಒತ್ತಡವನ್ನು ಹೊರಹಾಕಿದೆ ಎಂದು ಗೊತ್ತಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಲಬುರಗಿ ಡಿ.ಎಚ್.ಓ ಡಾ.ರತಿಕಾಂತ್ ಸ್ವಾಮಿ, ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂಬುದು ಸುಳ್ಳು ಸುದ್ದಿ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಆಕ್ಸಿಜನ್‌ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಆಗಿದೆ. ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ಆಮ್ಲಜನಕ ಭರ್ತಿ ಮಾಡಿದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಎ, ಬಿ, ಸಿ ಎಂಬ ಸುರಕ್ಷತೆಯ ವಾಲ್‌ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಹೀಗಾಗಿ ಸಾರ್ವಜನಿಕರು ಯಾರು ಆತಂಕ ಪಡಬೇಕಾಗಿಲ್ಲಾ ಎಂದರು.

ಇದನ್ನೂ ಓದಿ: Leopard attack : ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ!

Continue Reading

ಕರ್ನಾಟಕ

Lacchi Poojarthi: ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ನಿಧನ

Lacchi Poojarthi: ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿ (97) ಅವರು ವಯೋಸಹಜ ಕಾಯಿಲೆಯಿಂದ ಕೊನಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಹಲವು ರಾಜಕೀಯ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

VISTARANEWS.COM


on

Lacchi Poojarthi
Koo

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಅವರಿಗೆ ಮಾತೃ ವಿಯೋಗವಾಗಿದೆ. ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿ (97) (Lacchi Poojarthi) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನರಾದರು.

ಮೃತರಿಗೆ ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಲಚ್ಚಿ ಪೂಜಾರ್ತಿ ಕೃಷಿಕರಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಏರಿದ ಪ್ರತಿ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು, ತಾಯಿ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು. ಅಲ್ಲದೇ ಚುನಾವಣೆ ವೇಳೆ ತಾಯಿಯೊಂದಿಗೆ ತೆರಳಿ ಮತ ಚಲಾಯಿಸುತ್ತಿದ್ದರು. ಇನ್ನು ತಮ್ಮ ಯಶಸ್ಸಿನಲ್ಲಿ ತಾಯಿಯವರ ಪಾತ್ರ ಮಹತ್ವದ್ದು ಎಂದು ಯಾವಾಗಲೂ ಸ್ಮರಿಸುತ್ತಿದ್ದರು.

ಲಚ್ಚಿ ಪೂಜಾರ್ತಿ ಅವರ ನಿಧನಕ್ಕೆ ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಲಿ, ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ವೀರಪ್ಪ ಮೊಯ್ಲಿ ಪುತ್ರಿ ಹಂಸ ಮೊಯ್ಲಿ ವಿಧಿವಶ

Hamsa Moily Veerappa Moily's daughter passed away

ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರಿ (Veerappa Moily’s daughter ) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ (Hamsa Moily) ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಪುತ್ರಿ ಹಂಸ ಮೊಯ್ಲಿ ಸಾವಿನ ಸುದ್ದಿ ತಿಳಿದು ಛತ್ತೀಸ್‌ಘಡದಲ್ಲಿದ್ದ ವೀರಪ್ಪ ಮೊಯ್ಲಿ ರಾತ್ರಿಯೇ ವಾಪಾಸ್ ಆಗಿದ್ದಾರೆ.

ಹಂಸ ಮೊಯ್ಲಿ ಅವರು ಭರತನಾಟ್ಯ ಕಲಾವಿದೆ ಆಗಿದ್ದರು. 46 ವರ್ಷದ ಹಂಸ ಮೊಯ್ಲಿ ಅವರು ಇತ್ತೀಚೆಗೆ ಅಸೌಖ್ಯದಿಂದ ಬಳಲುತ್ತಿದ್ದರು. ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಸಿನಿಮಾʻ ಶೃಂಗಾರಂʼನಲ್ಲಿ ನಟಿಸಿದ್ದರು.

ಇದನ್ನೂ ಓದಿ | Road Accident: ಚನ್ನರಾಯಪಟ್ಟಣದಲ್ಲಿ ಭೀಕರ ಅಪಘಾತ; ಬಸ್-ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣ

ಅನಾರೋಗ್ಯದಿಂದಾಗಿ ಏಕಾಏಕಿ ಬಳಲಿದ್ದ ಅವರು, ನಿನ್ನೆ ಸಂಜೆ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೀರಪ್ಪಮೊಯ್ಲಿ ಅವರ ಮೂರನೇ ಪುತ್ರಿಯಾಗಿದ್ದ ಹಂಸ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ʻಜನಾನುರಾಗಿʼ ಎಂಬ ಹೆಸರು ಪಡೆದಿದ್ದ ಅವರು, ತಮದೇ ಆದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಭರತ ನಾಟ್ಯ ಕಲಾವಿದರಾಗಿದ್ದ ಹಂಸ ಮೊಯ್ಲಿ ಅವರು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದರು.

Continue Reading

ಕರ್ನಾಟಕ

Kamala Hampana: ಖ್ಯಾತ ಸಾಹಿತಿ ನಾಡೋಜ ಕಮಲಾ ಹಂಪನಾ ಇನ್ನಿಲ್ಲ

Kamala Hampana: ನಾಡಿನ ಖ್ಯಾತ ಸಾಹಿತಿ, ನಾಡೋಜ ಪ್ರೊ. ಕಮಲಾ ಹಂಪನಾ (89) ಅವರು ಇಂದು (ಜೂನ್‌ 22) ನಿಧನ ಹೊಂದಿದರು. ಪತಿ, ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅನೇಕ ಬಂದು ಮಿತ್ರರು, ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ. ಸಂಜೆಯ ತನಕ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

VISTARANEWS.COM


on

Kamala Hampana
Koo

ಬೆಂಗಳೂರು: ನಾಡಿನ ಖ್ಯಾತ ಸಾಹಿತಿ, ನಾಡೋಜ ಪ್ರೊ. ಕಮಲಾ ಹಂಪನಾ (Kamala Hampana) (89) ಅವರು ಇಂದು (ಜೂನ್‌ 22) ನಿಧನ ಹೊಂದಿದರು. ಪತಿ, ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅನೇಕ ಬಂಧು ಮಿತ್ರರು, ಅಪಾರ ಸಾಹಿತ್ಯಾಭಿಮಾನಿಗಳನ್ನು ಅವರು ಅಗಲಿದ್ದಾರೆ. ಸಂಜೆಯ ತನಕ ರಾಜಾಜಿನಗರದ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.

60 ವರ್ಷಗಳ ಕಾಲ ಸಾಹಿತ್ಯ ಕೃಷಿ

ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಕರ್ನಾಟಕ ಸರ್ಕಾರ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ ಲಭಿಸಿದೆ.

ಡಾ.ಕಮಲಾ ಹಂಪನಾ ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಸುಮಾರು 60ಕ್ಕೂ ಹೆಚ್ಚು ಕೃತಿಗಳು ಇದುವರೆಗೆ ಪ್ರಕಟವಾಗಿದ್ದು, ಇದರಲ್ಲಿ ಸೃಜನಕೃತಿಗಳೂ ಇವೆ. ʼಬಿಂದಲಿʼ, ʼಬುಗುಡಿʼ ಹಾಗೂ ʼಬಯಲುʼ ಇವು ಕಮಲಾ ಹಂಪನಾ ಅವರ ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ಬರೆದಿದ್ದಾರೆ.

ಜೀವಪರ ಸಂವೇದನೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ಕಾಳಜಿಯನ್ನು ಪ್ರಭಾವಶಾಲಿಯಾಗಿ ಬಿಂಬಿಸುವ ಕಮಲಾ ಹಂಪನಾ ಅವರ ಸಾಕ್ಷ್ಯಚಿತ್ರವನ್ನು ಕರ್ನಾಟಕ ಸರ್ಕಾರ ಸಿದ್ಧಪಡಿಸಿದೆ. ಜಗತ್ತಿನ ಅಯ್ದು ಆದರ್ಶ ಜೋಡಿಗಳನ್ನು ಆಧರಿಸಿ ಜರ್ಮನಿಯ ಯಾಸೇಮಿನ್ ನಿರ್ದೇಶಿಸಿರುವ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರಕ್ಕೆ ಇಡೀ ಭಾರತದಿಂದ ಕಮಲಾ-ಹಂಪನಾ ಜೋಡಿ ಆಯ್ಕೆಯಾಗಿದ್ದು ವಿಶೇಷ. ʼಬೇರು ಬೆಂಕಿ ಬಿಳಲುʼ ಎನ್ನುವುದು ಕಮಲಾ ಹಂಪನಾ ಅವರ ಜೀವನಯಾನದ ಹೃದಯಸ್ಪರ್ಶಿ ಸಂಕಥನ. ಕಮಲಾ ಹಂಪನಾ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Sagri Raghavendra Upadhyaya: ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ನಿಧನ

Continue Reading

ಪ್ರಮುಖ ಸುದ್ದಿ

Death News: “ಕಾಂಗ್ರೆಸ್‌ ಶವಯಾತ್ರೆ….” ಭಾಷಣ ಮುಗಿಸಿ ಬಿಜೆಪಿ ನಾಯಕ ಭಾನುಪ್ರಕಾಶ್ ಸ್ಥಳದಲ್ಲೇ ನಿಧನ

Death News: ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌, ಭಾಷಣ ಮುಗಿಸಿದ ಕೂಡಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು.

VISTARANEWS.COM


on

death news bhanuprakash petrol diesel price hike
Koo

ಶಿವಮೊಗ್ಗ: ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ (Petrol Diesel Price hike) ಪ್ರತಿಭಟಿಸಿ ಬಿಜೆಪಿ (BJP protest) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾದ ಬಿಜೆಪಿ ನಾಯಕ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್‌ (MB Bhanuprakash) ಅವರು ಭಾಷಣ ಮುಗಿಸಿದ ತಕ್ಷಣವೇ ಹೃದಯಾಘಾತಕ್ಕೊಳಗಾಗಿ (Heart Attack) ಮೃತಪಟ್ಟಿದ್ದಾರೆ (Death News).

ಬಿಜೆಪಿ ಪ್ರತಿಭಟನೆಯಲ್ಲಿ ಅವರು ʼಕಾಂಗ್ರೆಸ್‌ನ ಶವಯಾತ್ರೆ ಮಾಡಬೇಕುʼ ಎಂದು ನೀಡಿದ ಭಾಷಣ ಇದೀಗ ವೈರಲ್‌ (Viral speech) ಆಗುತ್ತಿದೆ. ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌, ಭಾಷಣ ಮುಗಿಸಿದ ಕೂಡಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಕೂಡಲೇ ಅವರನ್ನು ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಭಾನುಪ್ರಕಾಶ್‌ ಅವರು ಕೊನೆಯುಸಿರು ಎಳೆದರು.

“ಕಾಂಗ್ರೆಸ್ ಶವಯಾತ್ರೆ ಮಾಡಲು ನೀವು ಇಲ್ಲಿಗೆ ಬರಬೇಕು ಎಂದು ಹೇಳಿದರು. ಯಾವಾಗ, ಎಷ್ಟು ಹೊತ್ತಿಗೆ, ಯಾಕೆ ಡಾಕ್ಟರ್ ಬಳಿ ತೋರಿಸಿಲ್ಲವೆ, ಸಂಬಂಧಿಕರಿಗೆ ತಿಳಿಸಿದ್ದೀರಾ ಎಂದು ಕೇಳಿದೆ. ಶವಯಾತ್ರೆಗೆ ಕಾಂಗ್ರೆಸ್ ಪರವಾಗಿ ಸಿದ್ದು, ಡಿಕೆಶಿ ಬರುತ್ತಾರೆ ಎಂದರು. ಸರ್ಕಾರ ಆರಿಸಿ ಬರಲಿಕ್ಕೆ ಬೇಕಾಗಿ ಭರವಸೆ ಕೊಡುವ ಗ್ಯಾರಂಟಿ ನೀಡಿದರು. ಅದನ್ನು ನಾವು ಸ್ವಾಗತಿಸಿದ್ದೇವೆ. ಅದನ್ನು ಮಾಡಬಾರದು ಎಂದಿದ್ದರೆ ನಾವು ಬಡವರ ವಿರೋಧಿಗಳಾಗುತ್ತಿದ್ದೆವು. ನಾವು ಬಡವರ ಪರ, ನಾವೆಲ್ಲ ದೀನ ದಲಿತರ ಪರವಾಗಿಯೆ ಇದ್ದೆವು. ಆದರೆ ಬರೀ ಬಾಯಿಮಾತಿನಲ್ಲಿ ಹೇಳದೆ ನಾವು ಅದನ್ನು ಮಾಡುತ್ತಾ ಬಂದಿದ್ದೇವೆ” ಎಂದು ಭಾನುಪ್ರಕಾಶ್‌ ಭಾಷಣದಲ್ಲಿ ಹೇಳಿದ್ದರು.

“ಕಾಂಗ್ರೆಸ್‌ ಸರಕಾರ ತುಘ್ಲಕ್‌ ಸರಕಾರದಂತಾಗಿದೆ. ಸಾವಿರಾರು ಜನ ಸತ್ತರೂ ಆತ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬೆಲೆ ಏರಿಕೆ, ಹಿಂದೂಗಳ ದಮನ ಆಗುತ್ತಿದ್ದರೂ ಕಾಂಗ್ರೆಸ್‌ ಸರಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಂಧನ ಬೆಲೆ‌ ಹೆಚ್ಚುತ್ತಾ ಹೋದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚುತ್ತಾ ಹೋಗುತ್ತದೆ. ಸರಕಾರದಲ್ಲಿನ ವ್ಯಕ್ತಿಗಳ ಬೆಲೆ, ಯೋಗ್ಯತೆ ಇಳಿಯುತ್ತದೆ. ನಾವು ಪ್ರತಿಭಟನೆ ಮೂಲಕ ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯುವ ಎಚ್ಚರಿಕೆ ನೀಡುತ್ತಿದ್ದೇನೆ. ಇವತ್ತು ನಡೆದಿರುವುದು ಸಾಂಕೇತಿಕ ಪ್ರತಿಭಟನೆ ಮಾತ್ರ. ನಿಮ್ಮ ಭ್ರಷ್ಟ ಆಡಳಿತ ತೊಲಗಿಸುವ ತನಕ ನಾವು ವಿಶ್ರಮಿಸುವುದಿಲ್ಲ” ಎಂದು ಭಾನುಪ್ರಕಾಶ್‌ ಭಾಷಣ ಮುಗಿಸಿದರು.

ತದನಂತರ ಅವರು ಅಸ್ವಸ್ಥರಾದರು. ಕೂಡಲೇ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಭಾನುಪ್ರಕಾಶ್ ಅವರ ಮೃತದೇಹವನ್ನು ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ಸ್ವಗೃಹಕ್ಕೆ ಕೊಂಡೊಯ್ಯಲಾಗಿದೆ.

ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಸಿದ (Petrol Diesel Price Hike) ರಾಜ್ಯ ಸರಕಾರದ (Karnataka Govt) ಕ್ರಮವನ್ನು ಖಂಡಿಸಿದ ಪ್ರತಿಪಕ್ಷ ಬಿಜೆಪಿ (BJP protest) ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom park) ಬಿಜೆಪಿಯ ರಾಜ್ಯ ಪದಾಧಿಕಾರಿಗಳು ಹಾಗೂ ಇತರ ನಾಯಕರು ಪ್ರತಿಭಟಿಸಿ ಭಾಷಣ ಮಾಡಿದರು. ಪ್ರತಿಭಟನೆ ಮಾಡಿ ಸಿಎಂ ಸಿದ್ದರಾಮ‌ಯ್ಯ (CM Siddarmaiah) ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಆರ್.‌ ಅಶೋಕ್‌ (R Ashok) ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರು.

ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಬಳಿಕ ಎತ್ತಿನಗಾಡಿ ಮೂಲಕ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ. ಅಶೋಕ್ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ತಡೆದರು. ʼʼಪೆಟ್ರೋಲ್ ರೇಟ್‌ ಹೆಚ್ಚಾಗಿದೆ. ಬಸ್‌ವರೆಗೂ ಎತ್ತಿನಗಾಡಿ ಬಿಡಿ” ಎಂದು ಅಶೋಕ್ ಆಗ್ರಹಿಸಿದರು. ಪೊಲೀಸರು ಮತ್ತು ಅಶೋಕ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಬಸ್‌ವರೆಗೂ ಎತ್ತಿನ ಗಾಡಿ ಬಿಟ್ಟು ನಂತರ ಅವರನ್ನು ಬಂಧಿಸಿದ ಪೊಲೀಸರು, ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು.

ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಚಟ್ಟ ಕಟ್ಟಿ ರಾಜ್ಯ ಸರ್ಕಾರದ ಹೆಣದ ಮೆರವಣಿಗೆ ಮಾಡಿದರು. ʼಐದು ಗ್ಯಾರಂಟಿಗಳ ಗೋವಿಂದ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೋವಿಂದʼ ಎಂದು ಚಟ್ಟ ಹಿಡಿದು ಮೆರವಣಿಗೆ ಮಾಡಿದರು.

ಇದನ್ನೂ ಓದಿ: Petrol Diesel Price Hike: ಬಿಜೆಪಿಯವರು ಪ್ರತಿಭಟನೆ ಮಾಡಬೇಕಿರೋದು ಕೇಂದ್ರದ ವಿರುದ್ಧ: ಸಿಎಂ ತಿರುಗೇಟು

Continue Reading
Advertisement
ಕರ್ನಾಟಕ3 mins ago

Rain Affected areas: ಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

Murder Case
Latest26 mins ago

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

road Accident
ಕೊಪ್ಪಳ27 mins ago

Road Accident : ಕೊಪ್ಪಳದಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಸಾವು

Abhishek Sharma
ಪ್ರಮುಖ ಸುದ್ದಿ28 mins ago

Abhishek Sharma : ಅಭಿಷೇಕ್​ ಶತಕಕ್ಕೆ ಸಹೋದರಿಯ ಚಪ್ಪಾಳೆ, ವಿಡಿಯೊ ಶೇರ್ ಮಾಡಿದ ಕೋಮಲ್​ ಶರ್ಮಾ

MUDA site scandal
ಕರ್ನಾಟಕ45 mins ago

MUDA site scandal: ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಮುಡಾ ಸೈಟ್‌ಗೂ ತಡೆ!

steel flyover bridge shivananda circle
ಪ್ರಮುಖ ಸುದ್ದಿ52 mins ago

Steel Flyover: ಬೆಂಗಳೂರಿನ ಮೊದಲ ಸ್ಟೀಲ್‌ ಫ್ಲೈಓವರ್‌ ಸೇತುವೆಯಲ್ಲಿ ಬಿರುಕು

Gurdaspur attack
ವಿದೇಶ54 mins ago

Gurdaspur Attack: ಗುರುದಾಸಪುರ ಉಗ್ರ ದಾಳಿಯ ರೂವಾರಿ, ಐಎಸ್ಐ ಅಧಿಕಾರಿಯನ್ನು ಕರಾಚಿಯಲ್ಲಿ ಫಿನಿಷ್ ಮಾಡಿದ ‘ಅಪರಿಚಿತರು’!

Karnataka Rain
ಮಳೆ55 mins ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Haveri accident Shivanna couple helped the money to families
ಸ್ಯಾಂಡಲ್ ವುಡ್1 hour ago

Shiva Rajkumar: ಹಾವೇರಿ ಅಪಘಾತ; ಮೃತಪಟ್ಟ ಕುಟುಂಬಗಳಿಗೆ ಧನ ಸಹಾಯ ಮಾಡಿದ ಶಿವಣ್ಣ ದಂಪತಿ

Mumbai Cricket Association
ಪ್ರಮುಖ ಸುದ್ದಿ1 hour ago

Mumbai Cricket Association : ಮುಂಬೈನಲ್ಲಿ ನಿರ್ಮಾಣವಾಗಲಿದೆ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಮ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ55 mins ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ2 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

karnataka weather Forecast
ಮಳೆ18 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ21 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ22 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಟ್ರೆಂಡಿಂಗ್‌