Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ! - Vistara News

ಕ್ರೈಂ

Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ!

Assault Case: ಜೈಲಿನ ನಿಯಮಾವಳಿ ಉಲ್ಲಂಘಿಸಿ ನಡೆದುಕೊಳ್ಳುತ್ತಿದ್ದ ಕೈದಿ ರಾಹಿಲ್ ಅಲಿಯಾಸ್ ರೋಹನ್ ಎಂಬವನಿಗೆ ರೂಲ್ಸ್ ಫಾಲೋ ಮಾಡು ಎಂದು ಹೇಳಿದ್ದಕ್ಕೆ ವಾರ್ಡರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕೈದಿ ರಾಹಿಲ್ ಹಾಸನದಿಂದ ಗಡೀಪಾರಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದು, ಅತೀ ಭದ್ರತೆ ವಿಭಾಗದಲ್ಲಿದ್ದಾನೆ.

VISTARANEWS.COM


on

hindalaga jail assault case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ (Hindalaga Jail) ಸಿಬ್ಬಂದಿಗಳಿಗೇ ರಕ್ಷಣೆ ಇಲ್ಲದಂತಾಗಿದೆ. ಕೈದಿಗಳು (Prisoners) ಸೃಷ್ಟಿಸಿರುವ ಜೀವಭಯದಲ್ಲಿ ಸಿಬ್ಬಂದಿಗಳೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ರೂಲ್ಸ್ ಫಾಲೋ ಮಾಡು ಎಂದಿದ್ದಕ್ಕೆ ಕೈದಿಗಳಿಂದ ಸಿಬ್ಬಂದಿ ಮೇಲೆ ಗೂಂಡಾಗಿರಿ (Assault Case) ನಡೆದಿದ್ದು, ಮಾರಣಾಂತಿಕವಾಗಿ ಹಲ್ಲೆಗೊಳಗಾದ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದಾರೆ.

ಒಂದೆರಡಲ್ಲ, ಕಳೆದ ಕೆಲವು ದಿನಗಳಿಂದ ನಾಲ್ಕೈದು ಬಾರಿ ಸಿಬ್ಬಂದಿ ಮೇಲೆ ಕೈದಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಪ್ರಕರಣ ಬೆಳಕಿಗೆ ಬಂದಿದೆ. ಹಿಂಡಲಗಾ ಜೈಲಿನ ವಾರ್ಡರ್ ವಿನೋದ್ ಲೋಕಾಪುರ್ ಎಂಬವರ ಮೇಲೆ ಹಲ್ಲೆಯಾಗಿದೆ. ಹಲ್ಲೆಗೊಳಗಾದ ವಿನೋದ್ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೈಲಿನ ನಿಯಮಾವಳಿ ಉಲ್ಲಂಘಿಸಿ ನಡೆದುಕೊಳ್ಳುತ್ತಿದ್ದ ಕೈದಿ ರಾಹಿಲ್ ಅಲಿಯಾಸ್ ರೋಹನ್ ಎಂಬವನಿಗೆ ರೂಲ್ಸ್ ಫಾಲೋ ಮಾಡು ಎಂದು ಹೇಳಿದ್ದಕ್ಕೆ ವಾರ್ಡರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕೈದಿ ರಾಹಿಲ್ ಹಾಸನದಿಂದ ಗಡೀಪಾರಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದು, ಅತೀ ಭದ್ರತೆ ವಿಭಾಗದಲ್ಲಿದ್ದಾನೆ.

ಈತ ಆಸ್ಪತ್ರೆಗೆ ಹೋಗಲು ಸ್ಥಳೀಯ ಸಿಬ್ಬಂದಿಯ ಅನುಮತಿ ಬೇಕಿದ್ದು, ತಡವಾಗಿ ಅನುಮತಿ ನೀಡಿದರು ಎನ್ನುವ ಕಾರಣಕ್ಕೆ ಹೊರ ಬಂದು ವಿನೋದ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಾಲಿನಿಂದ ಒದ್ದು ಕೈಯಿಂದ ಹಿಗ್ಗಾಮಗ್ಗಾ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ವಿನೋಸ್‌ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ತೋರಿಸಿದ್ದಾರೆ. ಕೈದಿಗಳ ಗೂಂಡಾಗಿರಿಗೆ ಬೇಸತ್ತು ಕೆಲಸಕ್ಕೆ ಬರಲು ಭಯ ಪಡುವ ಸ್ಥಿತಿ ಸಿಬ್ಬಂದಿಯದ್ದಾಗಿದೆ. ಈ ಹಿಂದೆಯೂ ಸಿಬ್ಬಂದಿ ಮೇಲೆ‌ ಹಲ್ಲೆಯಾಗಿದೆ, ಆದರೆ ಕ್ರಮ ಆಗಿಲ್ಲ‌ ಎಂದು ವಿನೋದ್ ದೂರಿದ್ದಾರೆ. ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ಸಿಬ್ಬಂದಿ ವಿನೋದ್ ಮನವಿ ಮಾಡಿದ್ದಾರೆ.

ನಿರ್ಲಕ್ಷ್ಯ ಚಾಲನೆ ಪ್ರಶ್ನಿಸಿದ ಹಿಂದೂ ಯುವಕರಿಗೆ ಮುಸ್ಲಿಂ ಗುಂಪಿನಿಂದ ಹಲ್ಲೆ

ಮಂಡ್ಯ : ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದ ಅಭಿಲಾಷ್​ ಎಂಬುವರ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕರ ಗುಂಪೊಂದು ಹಲ್ಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ (Mandya News) ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ. ಘಟನೆ ಬಳಿಕ ಬೆಳ್ಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಟಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮ ವಹಿಸುತ್ತಿದ್ದಾರೆ. ಗಂಭೀರವಾಗಿ ಪೆಟ್ಟು ತಿಂದಿರುವ ಅಭಿಲಾಷ್​ ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಶುಕ್ರವಾರ ಮುಸ್ಲಿಂ ಯುವಕರ ಗುಂಪು ಬೆಳ್ಳೂರಿನ ಸಂತೆ ಬೀದಿಯಲ್ಇ ಅತಿ ವೇಗದಲ್ಲಿ ಪಟ್ಟಣದೊಳಗೆ ಕಾರು ಓಡಿಸಿಕೊಂಡು ಹೋಗಿದೆ. ಅಪಾಯಕಾರಿ ರೀತಿಯಲ್ಲಿ ವಾಹನ ಓಡಿಸಿದ್ದನ್ನು ಹಲ್ಲೆಗೆ ಒಳಗಾಗಿರುವ ಅಭಿಲಾಷ್ ಹಾಗೂ ಅವರ ಜತೆಗಾರ ನಾಗೇಶ್​ ಎಂಬುವರು ಪ್ರಶ್ನಿಸಿದ್ದರು. ಮಿತಿ ಮೀರಿದ ವೇಗದಲ್ಲಿ ಕಾರು ಓಡಿಸದಂತೆ ಆ ಗುಂಪಿಗೆ ಬುದ್ಧಿವಾದ ಹೇಳಿದ್ದರು. ಈ ವೇಳೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯುವಕರ ಗುಂಪಿ ಇನ್ನಷ್ಟು ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದು ಸೋಮವಾರ ಸಂಜೆ ಹಲ್ಲೆ ಮಾಡಿದ್ದಾರೆ.

ದೊಡ್ಡ ಗುಂಪಿನಿಂದ ಏಟು ತಿಂದಿರುವ ಅಭಿಲಾಷ್​ ಅವರಿಗೆ ಬಹು ವಿಧದಲ್ಲಿ ಗಾಯಗಳಾಗಿವೆ ಎಂದು ಅವರ ಆಪ್ತರು ಹೇಳಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸುದ್ದಿಯಾದ ಬಳಿಕ ಬೆಳ್ಳೂರು ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ. ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದು ಗಲಾಟೆ ಸಂಭವಿಸುವ ಸಾಧ್ಯತೆಗಳನ್ನು ಮನಗಂಡಿರುವ ಪೊಲೀಸರು ಬೆಳ್ಳೂರು ಪಟ್ಟಣ ಹಾಗೂ ಬಿಜಿಎಸ್ ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ. ಒದಗಿಸಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Bomb Threat: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; 26/11 ರೀತಿ ದಾಳಿಗೆ ಸಂಚು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

Self Harming : ಮನೆ ಯಜಮಾನನ ಸಾವಿನಿಂದ ಕಂಗಲಾದ ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

VISTARANEWS.COM


on

By

Self Harming
Koo

ಬೆಂಗಳೂರು: ಬೆಂಗಳೂರಿನ ಯಲಹಂಕದ ಆರ್‌ಎನ್‌ಜೆಡ್ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರು ಆತ್ಮಹತ್ಯೆ (Self Harming)ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಭಾರ್ಗವ್ ಪುಲಿವರ್ತ (13), ತಾಯಿ ರಮ್ಯಾ (40) ಮೃತ ದುರ್ದೈವಿಗಳು.

ಮೂಲತಃ ಆಂಧ್ರ ಪ್ರದೇಶದ ರಮ್ಯಾ ಶ್ರೀಧರ್ ಎಂಬುವವರನ್ನು ಪ್ರೀತಿಸಿ, ಅಂತರ್ಜಾತಿ ವಿವಾಹವಾಗಿದ್ದರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಶ್ರೀಧರ್ ಪುಲಿವರ್ತ ಮೂರು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಫ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳಿಬ್ಬರ ಶಾಲೆ ಫೀಸ್, ಮನೆ ನಿರ್ವಹಣೆ ಖರ್ಚು ಅಂತ ತಿಂಗಳಿಗೆ ಲಕ್ಷ ಲಕ್ಷ ಹಣ ಬೇಕಿತ್ತು. ಇತ್ತ ಹಣ ಹೊಂದಿಸುವುದು ರಮ್ಯಾಳಿಗೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಖಿನ್ನತೆಗೊಳಗಾಗಿದ್ದರು. ಪತಿ ಸತ್ತ ನಂತರ ತಾವು ಸಾಯೋದಾಗಿ ರಮ್ಯಾ ಹಾಗೂ ಮಗ ಭಾರ್ಗವ್ ಹೇಳಿ ಕೊಂಡಿದ್ದರಂತೆ.

ರಮ್ಯಾಳಿಗೆ 19 ವರ್ಷದ ಮಗಳು ಇದ್ದು, ಆಕೆ ಪಿಜಿಯಲ್ಲಿದ್ದುಕೊಂಡು ಓದುತ್ತಿದ್ದಾಳೆ. ಕಳೆದ 9ರ ರಾತ್ರಿ ಮಗಳ ಜತೆಗೆ ಮಾತನಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಸಾವಿನ ನಂತರ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಟುಂಬವು ಕುಗ್ಗಿ ಹೋಗಿತ್ತು.

ಇದನ್ನೂ ಓದಿ: Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

ಮೊದಲು ಮಗ ಆತ್ಮಹತ್ಯೆ ಮಾಡಿಕೊಂಡ ಬಳಿಕ ರಮ್ಯಾ ನೇಣಿನ ಕುಣಿಕೆಯಿಂದ ಬಿಡಿಸಿ ಬೆಡ್ ಮೇಲೆ ಮಲಗಿಸಿದ್ದಾರೆ. ನಂತರ ತಾವು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸತ್ತು ನಾಲ್ಕು ದಿನದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಪೊಲೀಸ್‌, ಡಾಕ್ಟರ್‌ ಮತ್ತು ಮಗಳಿಗೆ ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ.

ಎರಡ್ಮೂರು ದಿನದಿಂದ ಮನೆಯಿಂದ ಫೋನ್‌ ಬಾರದ ಹಿನ್ನೆಲೆಯಲ್ಲಿ ನಿನ್ನೆ ಶುಕ್ರವಾರ ಮಗಳು ಪಿಜಿಯಿಂದ ಮನೆಗೆ ಬಂದಿದ್ದಾಳೆ. ಮನೆ ಬಾಗಿಲು ಎಷ್ಟೇ ತಟ್ಟಿದ್ದರು ತೆರೆಯದೇ ಇದ್ದಾಗ, ತನ್ನ ಬಳಿ ಇದ್ದ ಇನ್ನೊಂದು ಕೀಯಿಂದ ಮನೆಯ ಬಾಗಿಲು ತೆಗೆದಿದ್ದಾಳೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

YouTuber Dhruv Rathee: ಇತ್ತೀಚೆಗಷ್ಟೇ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದಾದ ಬಳಿ ಧೃವ್‌ ರಥೀ ಅವರ ಪರೋಡಿ ಎಂಬ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಒಂದು ಪ್ರಕಟವಾಗಿತ್ತು. ಪೋಸ್ಟ್‌ನಲ್ಲಿ ಅಂಜಲಿ ಪರೀಕ್ಷೆಗೆ ಬರೆಯದೆಯೇ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದರು. ಅದೂ ಅಲ್ಲದೇ ಅಂಜಲಿಯವರ ಫೋಟೋವನ್ನು ಕೂಡ ಅವರ ಅನುಮತಿ ಇಲ್ಲದೇ ಪೋಸ್ಟ್‌ ಮಾಡಿದ್ದರು.

VISTARANEWS.COM


on

YouTuber Dhruv Rathee
Koo

ಮುಂಬೈ: ಸದಾ ಮೋದಿ ವಿರೋಧಿ ವಿಡಿಯೋಗಳ ಮೂಲಕ ಸುದ್ದಿಯಲ್ಲಿರುವ ಯೂಟ್ಯೂಬರ್‌ ಧೃವ್‌ ರಥೀ(YouTuber Dhruv Rathee) ಸಂಕಷ್ಟಕ್ಕೀಡಾಗಿದ್ದಾರೆ. ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ(Om Birla) ಪುತ್ರಿ ವಿರುದ್ಧ ಜನರನ್ನು ದಾರಿತಪ್ಪಿಸುವಂತಹ ಪೋಸ್ಟ್‌ ಮಾಡಿರುವ ಆರೋಪದಲ್ಲಿ ಧೃವ್‌ ರಥೀ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇತ್ತೀಚೆಗಷ್ಟೇ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ(Anjali Birla) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ತಪ್ಪಾದ ಪೋಸ್ಟ್‌ವೊಂದು ರಥೀ ಅವರ ಎಕ್ಸ್‌ ಖಾತೆಯಿಂದ ಪೋಸ್ಟ್‌ ಆಗಿತ್ತು.

ಏನಿದು ಪ್ರಕರಣ?

ಇತ್ತೀಚೆಗಷ್ಟೇ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದಾದ ಬಳಿ ಧೃವ್‌ ರಥೀ ಅವರ ಪರೋಡಿ ಎಂಬ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಒಂದು ಪ್ರಕಟವಾಗಿತ್ತು. ಪೋಸ್ಟ್‌ನಲ್ಲಿ ಅಂಜಲಿ ಪರೀಕ್ಷೆಗೆ ಬರೆಯದೆಯೇ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದರು. ಅದೂ ಅಲ್ಲದೇ ಅಂಜಲಿಯವರ ಫೋಟೋವನ್ನು ಕೂಡ ಅವರ ಅನುಮತಿ ಇಲ್ಲದೇ ಪೋಸ್ಟ್‌ ಮಾಡಿದ್ದರು.

ಪರೀಕ್ಷೆ ಬರೆಯದೇ ನೀವು UPSC ಅನ್ನು ತೇರ್ಗಡೆ ಮಾಡುವ ಏಕೈಕ ದೇಶ ಭಾರತ. ಆದರೆ ಅದಕ್ಕಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಮಗಳಾಗಿ ಹುಟ್ಟಬೇಕು. ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಯಾವುದೇ ಪರೀಕ್ಷೆಯನ್ನು ನೀಡದೆ UPSC ತೇರ್ಗಡೆಯಾಗಿದ್ದಾರೆ, ಅವರು ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ಮೋದಿ ಸರ್ಕಾರ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಅಂಜಲಿಯ ಸೋದರ ಸಂಬಂಧಿ ನಮನ ಮಹೇಶ್ವರಿ ಅವರು ದೂರು ದಾಖಲಿಸಿದ್ದಾರೆ. 2019 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಅಂಜಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾಳೆ ಎಂದು ನಮನ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ರಾಥೀ ಅವರ ಟ್ವೀಟ್‌ಗಳು ಅಂಜಲಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಅಪಖ್ಯಾತಿಗೊಳಿಸಿವೆ ಎಂದು ಅವರು ದೂರಿದ್ದಾರೆ.ಈ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಶೀಘ್ರದಲ್ಲೇ ಧ್ರುವ ರಥಿಯನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.

17.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಧ್ರುವ ರಥಿ ಪ್ರಸಿದ್ಧ ಭಾರತೀಯ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಪ್ರವಾಸದ ವಿಷಯದ ಕುರಿತೂ ಅವರು ಸದಾ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದ ಶಾಲೆಯಲ್ಲಿ ಪೂರ್ಣಗೊಳಿಸಿದರು. ಜರ್ಮನಿಯಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದ ಅವರು ನವೀಕರಿಸಬಹುದಾದ ಇಂಧನ ವಿಷಯದಲ್ಲಿ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.

ಧ್ರುವ ರಥಿ ಅವರು ಕಂಠದಾನ ಮಾಡುತ್ತಾರೆ ಮತ್ತು ಆಗಾಗ ಯೂಟ್ಯೂಬ್‌ನಲ್ಲಿ ತಮ್ಮ ಅನುಭವ, ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರ ನಿವ್ವಳ ಸಂಪತ್ತು ಸುಮಾರು 4 ಮಿಲಿಯನ್ ಡಾಲರ್ ಅಂದರೆ, ಸುಮಾರು 33 ಕೋಟಿ ರೂ. ಆಗಿದೆ. ಯೂಟ್ಯೂಬ್ ಚಾನಲ್ ಮತ್ತು ವಿವಿಧ ಬ್ರ್ಯಾಂಡ್‌ಗಳ ಸಹಯೋಗವೇ ಅವರ ಪ್ರಾಥಮಿಕ ಆದಾಯದ ಮೂಲವಾಗಿದೆ.

ಇದನ್ನೂ ಓದಿ: Divyanka Tripathi: ವಿದೇಶದಲ್ಲಿ ದರೋಡೆಗೆ ಒಳಗಾದ ಕಿರುತೆರೆ ದಂಪತಿ; ಕಾರಿನ ಗಾಜುಗಳೆಲ್ಲ ಪೀಸ್‌ ಪೀಸ್‌!

Continue Reading

ಹಾವೇರಿ

Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

Murder case : ಶಿರಾಳಕೊಪ್ಪದಲ್ಲಿ ಯುವಕನನ್ನು ಕೊಂದು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಹಾನಗಲ್‌ ಪೊಲೀಸರು ನ್ಯಾಯಾಲಯಕ್ಕೆ ಚಾಜ್೯ ಶೀಟ್ ಸಲ್ಲಿಸಿದ್ದಾರೆ.

VISTARANEWS.COM


on

By

Murder case
Koo

ಹಾವೇರಿ/ಶಿವಮೊಗ್ಗ: ಕಳೆದ ಮಾರ್ಚ್‌ 15ರಂದು ಪ್ರೀತಿ ವಿಷ್ಯಕ್ಕೆ (Love Case) ಯುವತಿ ಕುಟುಂಬಸ್ಥರು, ಯುವಕನನ್ನು ಕೊಂದು ಭೀಕರವಾಗಿ (Murder case) ಸುಟ್ಟಾಕಿದ್ದರು. ಇದೀಗ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾಜ್೯ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಈ ಭೀಕರ ಕೃತ್ಯವು (Youth Burnt and Killed) ಶಿವಮೊಗ್ಗದ (Shivamogga News) ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ (Murder Case) ನಡೆದಿತ್ತು. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಆನಂತರ ಹಾವೇರಿಯ ಹಾನಗಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ಆರೋಪಿಗಳಾದ ಪ್ರವೀಣ, ಆದರ್ಶ, ರವಿಚಂದ್ರ, ಚಂದ್ರಶೇಖರ, ಶಶಿಕುಮಾರ್ ಹಾಗೂ ಗೌತಮ್, ನಾಗಪ್ಪ, ಪರಸಪ್ಪ ಎಂಬುವವರ 8 ಜನರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಯುವತಿಯ ಇಬ್ಬರು ಸಹೋದರರು, ಚಿಕ್ಕಪ್ಪ, ತಂದೆ ಹಾಗೂ ಕಾರ್ಮಿಕರ ವಿರುದ್ಧ ಚಾಜ್೯ಶೀಟ್ ಸಲ್ಲಿಸಲಾಗಿದೆ.

ಏನಿದು ಪ್ರಕರಣ?

ಕಳೆದ ಮಾರ್ಚ್‌ 15ರಂದು ಕಾರಿಗೆ ಬೆಂಕಿ ಹಚ್ಚಿ ಯುವಕನೊಬ್ಬನನ್ನು ಭೀಕರವಾಗಿ ಸುಟ್ಟು ಹಾಕಿದ (Youth Burnt and Killed) ಘಟನೆ ಶಿವಮೊಗ್ಗದ (Shivamogga News) ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ (Murder Case) ನಡೆದಿತ್ತು.

ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಎಂಬಾತ ಬರ್ಬರವಾಗಿ ಕೊಲೆಯಾಗಿದ್ದ. ಮಿಸ್ಸಿಂಗ್‌ ಆಗಿದ್ದ ವೀರೇಶ್‌, ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಇನ್ನೋವಾ ಕಾರಿನ ಡಿಕ್ಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ತನಿಖೆಗಿಳಿದ ಪೊಲೀಸರಿಗೆ ಇದೊಂದು ಪ್ರೇಮ ಪ್ರಕರಣಕ್ಕೆ (Love case) ನಡೆದ ಕೊಲೆ ಎಂದು ತಿಳಿದು ಬಂದಿತ್ತು.

ಗಾಡಿಕೊಪ್ಪದ ನಿವಾಸಿ ವೀರೇಶ್‌, ಶಿಕಾರಿಪುರದ ಸಂಬಂಧಿ ಯುವತಿ ಅಂಕಿತಾಳನ್ನು ಪ್ರೀತಿಸುತ್ತಿದ್ದ. ಆದರೆ ವೀರೇಶ್‌ ಹಾಗೂ ಅಂಕಿತಾಳ ಮದುವೆಗೆ ಸಹೋದರ ಪ್ರವೀಣ್‌ಗೆ ಇಷ್ಟವಿರಲಿಲ್ಲ. ಹೀಗಾಗಿ ಆತನನ್ನು ಮುಗಿಸಿಬಿಡುವ ಪ್ಲ್ಯಾನ್‌ ಮಾಡಿಕೊಂಡಿದ್ದರು.

ಇದನ್ನೂ ಓದಿ: Road Accident: ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಸ್ಪಾಟ್‌ ಡೆತ್‌; ಕಿತ್ತು ಬಂತು ಸವಾರನ ಕಣ್ಣು ಗುಡ್ಡೆ

ಅದರಂತೆ ಮಾ.15ರ ಶುಕ್ರವಾರದಂದು ಗಾಡಿಕೊಪ್ಪದಲ್ಲಿರುವ ವೀರೇಶ್ ಮನೆಗೆ ಪ್ರವೀಣ್‌ ಬಂದಿದ್ದ. ನನ್ನ ತಂಗಿ ಅಂಕಿತಾಳನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದು ನಾಟಕವಾಡಿದ್ದರು. ಆದರೆ ಆಕೆಯೊಟ್ಟಿಗೆ ಇದ್ದ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡು. ಅವಳಿನ್ನು ಕಾಲೇಜು ಹುಡುಗಿ ಸೋಶಿಯಲ್‌ ಮೀಡಿಯಾದಲ್ಲಿ ಅವುಗಳನ್ನು ಹಾಕಿದರೆ ಕಾಲೇಜಿನಲ್ಲಿ ಆಕೆ ಮಾರ್ಯಾದೆ ಹೋಗುತ್ತದೆ ಎಂದಿದ್ದರು. ಮದುವೆ ಮಾಡಿಸುವ ಭರವಸೆ ಕೊಟ್ಟಿದ್ದರಿಂದ ವೀರೇಶ್‌ ಫೋಟೊ ಡಿಲೀಟ್‌ ಮಾಡಿದ್ದ .

ಇದಾನಂತರ ಆ ದಿನವೇ ತಡರಾತ್ರಿ ವೀರೇಶ್‌ಗೆ ಫೋನ್‌ ಮಾಡಿದ ಪ್ರವೀಣ್‌, ಅಂಕಿತ ಅಳುತ್ತಿದ್ದಾಳೆ, ಮನೆಗೆ ಬಾ ನಿನ್ನ ನೋಡಬೇಕು ಅಂತಿದ್ದಾಳೆ ಎಂದು ಕರೆಸಿಕೊಂಡಿದ್ದ. ಇವರ ಯಾವ ದುರುದ್ದೇಶವೂ ತಿಳಿಯದ ವೀರೇಶ್‌ ಆತುರದಲ್ಲಿ ತನ್ನ ಸ್ನೇಹಿತನ ಇನ್ನೋವಾ ಕಾರನ್ನು ತೆಗೆದುಕೊಂಡು ಬಂದಿದ್ದ. ಹೊರಡುವಾಗ ತನ್ನ ತಾಯಿಗೆ ಅಂಕಿತಾಳ ಮನೆಯಿಂದ ಫೋನ್‌ ಬಂದಿದೆ ಹೋಗಿ ಬರುವುದಾಗಿ ಹೇಳಿದ್ದ. ಆದರೆ ದಿನ ಕಳೆದರೂ ವಾಪಸ್‌ ಆಗಿರಲಿಲ್ಲ. ಹೀಗಾಗಿ ಗಾಬರಿಯಾಗಿ ಮರುದಿನ ವೀರೇಶ್‌ ತಾಯಿ ಪೊಲೀಸ್‌ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಆದರೆ, ಶನಿವಾರ ಬೆಳಗ್ಗೆ ವೀರೇಶ್‌ ಶವ ಕಾರಿನ ಡಿಕ್ಕಿಯೊಳಗೆ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ವೀರೇಶ್ ತಾಯಿ ಮಹಾದೇವಿ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರವೀಣ್‌ ಮನೆಯವರೇ ವೀರೇಶ್‌ನನ್ನು ಪುಸಲಾಯಿಸಿ ಕರೆಸಿಕೊಂಡು ಮನಬಂದಂತೆ ಥಳಿಸಿ, ನಂತರ ಡಿಕ್ಕಿಯೊಳಗೆ ಕೂಡಿಹಾಕಿ ಕಾರು ಸಮೇತ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Sexual Assault: ಐಸ್‌ಕ್ರೀಂ ಕೊಳ್ಳಲು ಬಂದ ಬಾಲಕಿಯ ಗುಪ್ತಾಂಗ ಮುಟ್ಟಿ ದೌರ್ಜನ್ಯ; ಮೊಹಮ್ಮದ್ ಖಾನ್ ಬಂಧನ

ಭೋಪಾಲ್ ನಲ್ಲಿ ಐಸ್ ಕ್ರೀಮ್ ಮಾರಾಟಗಾರ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Sexual Assault) ಹಾಕಿದ ವ್ಯಕ್ತಿಯನ್ನು ಮತ್ತು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಐಸ್ ಕ್ರೀಮ್ ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ ವಿವರ.

VISTARANEWS.COM


on

By

Sexual Assault
Koo

ಭೋಪಾಲ್: ಐಸ್‌ಕ್ರೀಂ ಮಾರಾಟಗಾರನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ (Sexual Assault) ನೀಡಿದ ಘಟನೆ ಮಧ್ಯಪ್ರದೇಶದ (madhyapradesh) ಭೋಪಾಲ್‌ನಲ್ಲಿ (bhopal) ನಡೆದಿದ್ದು, ಇದರ ವಿಡಿಯೋ (video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎರಡು ವಾರಗಳ ಹಿಂದೆ ನಡೆದ ಘಟನೆ ಇದಾಗಿದೆ. ಐಸ್ ಕ್ರೀಮ್ ಮಾರಾಟಗಾರ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಸ್ ಕ್ರೀಮ್ ಮಾರಾಟಗಾರ ಮೊಹಮ್ಮದ್ ಖಾಲಿದ್ ಖಾನ್ (52) ಎಂಬಾತನನ್ನು ಬಂಧಿಸಲಾಗಿದೆ.

ಪ್ಯಾರೆ ಎಂದು ಕರೆಯಲ್ಪಡುವ ಮೊಹಮ್ಮದ್ ಖಾಲಿದ್ ಖಾನ್ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ನಿವಾಸಿ. ಜಹಾಂಗೀರಾಬಾದ್‌ನಲ್ಲಿ ರಾತ್ರಿ ವ್ಯಕ್ತಿಯೊಬ್ಬ ತನ್ನ ಬಾಲ್ಕನಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.

ಖಾಲಿದ್ 11 ವರ್ಷದ ಬಾಲಕಿಯ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದ್ದು, ಬಾಲಕಿ ಐಸ್‌ಕ್ರೀಂ ಕಾರ್ಟ್‌ನಲ್ಲಿ ಐಸ್‌ಕ್ರೀಂ ಆಯ್ಕೆ ಮಾಡಿಕೊಳ್ಳುತ್ತಿದ್ದಳು. ಆರೋಪಿಯು ಬಾಲಕಿಯನ್ನು ಹಿಡಿದಿದ್ದು, ಆಕೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಬಾಲಕಿ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಸ್ವಲ್ಪ ಸಮಯದ ಅನಂತರ ಹುಡುಗಿಗೆ ಐಸ್ ಕ್ರೀಂ ಅನ್ನು ಹಸ್ತಾಂತರಿಸುತ್ತಾನೆ. ಈ ವಿಡಿಯೋವನ್ನು ರಮೇಶ್ ಸಾಹು ಎಂಬಾತ ರೆಕಾರ್ಡ್ ಮಾಡಿದ್ದು, ಅದನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದಾನೆ. ಇದು ಸಾಕಷ್ಟು ವೈರಲ್ ಆಗಿದೆ.

ಸಂತ್ರಸ್ತೆಯ ತಾಯಿ ತನ್ನ ಮಗಳನ್ನು ಆಕೆಯ ಬಟ್ಟೆ ಮತ್ತು ವಿಡಿಯೋದಲ್ಲಿ ಸ್ವಲ್ಪ ಗೋಚರಿಸುವ ಮುಖದ ಭಾಗದಿಂದ ಗುರುತಿಸಿದ್ದಾರೆ. ಅನಂತರ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ಘಟನೆ ವರದಿಯಾಗಿದೆ.

ಜೂನ್ 28ರಂದು ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿ ಎರಡು ದಿನಗಳ ಅನಂತರ ವಿಡಿಯೋವನ್ನು ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆರೋಪಿ ತನ್ನ ಊರಿಗೆ ಪರಾರಿಯಾಗಿದ್ದ ಆರೋಪಿಯನ್ನು ಆತನ ಗ್ರಾಮವಾದ ಕಲ್ಪಿಯಿಂದ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Viral Video: ಬೆಂಗಳೂರಿನ ಹೋಟೆಲ್‌ನಲ್ಲಿ ಫ್ಯಾನ್‌ ಬದಲು ಪುರಾತನ ಕಾಲದ ಬೀಸಣಿಕೆ! ವಿಡಿಯೊ ನೋಡಿ

ಅಪ್ರಾಪ್ತ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಪೋಲಿಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ರಮೇಶ್ ಸಾಹು ಅವರನ್ನೂ ಬಂಧಿಸಿದ್ದಾರೆ ಎನ್ನಲಾಗಿದೆ.

Continue Reading
Advertisement
T20 World Cup 2024
ಕ್ರೀಡೆ26 seconds ago

T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ​; ತೆರೆಮರೆಯಲ್ಲಿ ಜೋರು ಚರ್ಚೆ

Anant Ambani Wedding
ಪ್ರಮುಖ ಸುದ್ದಿ21 mins ago

ಅಂಬಾನಿಯನ್ನು ಟೀಕಿಸುತ್ತಿದ್ದ ದೀದಿ, ಅಖಿಲೇಶ್‌, ಲಾಲು ಸೇರಿ ಹಲವು ರಾಜಕಾರಣಿಗಳು ಅನಂತ್‌ ಮದುವೆಯಲ್ಲಿ ಭಾಗಿ

Self Harming
ಬೆಂಗಳೂರು28 mins ago

Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

Shiva Rajkumar 131 cinema Look out
ಸ್ಯಾಂಡಲ್ ವುಡ್42 mins ago

Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

YouTuber Dhruv Rathee
ದೇಶ44 mins ago

YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

Kapil Dev
ಪ್ರಮುಖ ಸುದ್ದಿ49 mins ago

Kapil Dev : ಅಂಶುಮಾನ್ ಗಾಯಕ್ವಾಡ್​ಗೆ ಕ್ಯಾನ್ಸರ್​, ಬೇಸರ ವ್ಯಕ್ತಪಡಿಸಿದ ಕಪಿಲ್​ ದೇವ್​

Smriti Singh
ದೇಶ56 mins ago

Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್;‌ ಅಹ್ಮದ್‌ ವಿರುದ್ಧ ಎಫ್‌ಐಆರ್

Murder case
ಹಾವೇರಿ1 hour ago

Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

Sexual Assault
ವೈರಲ್ ನ್ಯೂಸ್2 hours ago

Sexual Assault: ಐಸ್‌ಕ್ರೀಂ ಕೊಳ್ಳಲು ಬಂದ ಬಾಲಕಿಯ ಗುಪ್ತಾಂಗ ಮುಟ್ಟಿ ದೌರ್ಜನ್ಯ; ಮೊಹಮ್ಮದ್ ಖಾನ್ ಬಂಧನ

a poor fisherman family student Kalpana Masti Mogera passed the CA exam
ಉತ್ತರ ಕನ್ನಡ2 hours ago

Uttara Kannada News: ಬಡ ಮೀನುಗಾರನ ಮಗಳು ಸಿಎ ಪರೀಕ್ಷೆಯಲ್ಲಿ ಪಾಸ್‌; ಸ್ಫೂರ್ತಿಯುತ ಸಾಧನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ5 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ4 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ5 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

ಟ್ರೆಂಡಿಂಗ್‌