Delhi crime | ಶ್ರದ್ಧಾ ತಲೆಯನ್ನು ಫ್ರಿಜ್ಜಿನಲ್ಲಿಟ್ಟು ಪ್ರತಿದಿನ ನೋಡುತ್ತಿದ್ದ ಸೈಕೋ ಅಫ್ತಾಬ್ - Vistara News

ಕ್ರೈಂ

Delhi crime | ಶ್ರದ್ಧಾ ತಲೆಯನ್ನು ಫ್ರಿಜ್ಜಿನಲ್ಲಿಟ್ಟು ಪ್ರತಿದಿನ ನೋಡುತ್ತಿದ್ದ ಸೈಕೋ ಅಫ್ತಾಬ್

ತಾನು ಹತ್ಯೆ ಮಾಡಿದ ಶ್ರದ್ಧಾಳ ತಲೆಯನ್ನು ಫ್ರಿಜ್‌ನಲ್ಲಿ ಇಟ್ಟುಕೊಂಡಿದ್ದು ಪ್ರತಿದಿನ ತೆಗೆದು ನೋಡುತ್ತಿದ್ದೆ ಎಂದು ಪಾತಕಿ ಅಫ್ತಾಬ್‌ ಪೂನಾವಾಲಾ ಪೊಲೀಸರಿಗೆ ತಿಳಿಸಿದ್ದಾನೆ. ಮಿಸ್ಸಿಂಗ್ ತಲೆಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ.

VISTARANEWS.COM


on

shraddha walker Skull Found
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಒಂದು ಕಡೆ ಬರ್ಬರವಾಗಿ ಹತ್ಯೆಯಾದ ಶ್ರದ್ಧಾಳ ತಲೆಬುರುಡೆ ಎಲ್ಲಿದೆ ಎಂದು ಪೊಲೀಸರು ಹುಡುಕಾಡುತ್ತಿದ್ದರೆ, ತಾನು ಆಕೆಯ ತಲೆಯನ್ನು ಫ್ರಿಜ್‌ನಲ್ಲಿ ಇಟ್ಟುಕೊಂಡಿದ್ದೆ, ಪ್ರತಿದಿನ ತೆಗೆದು ಅದನ್ನು ನೋಡುತ್ತಿದ್ದೆ ಎಂದು ಪಾತಕಿ ಅಫ್ತಾಬ್‌ ಪೂನಾವಾಲಾ ಪೊಲೀಸರಿಗೆ ತಿಳಿಸಿದ್ದಾನೆ.

ದಿನೇ ದಿನೆ ದೆಹಲಿಯ ಶ್ರದ್ಧಾ ಹತ್ಯೆಯ ಭೀಕರ ವಿವರಗಳು ಬಿಚ್ಚಿಕೊಳ್ಳುತ್ತಿವೆ. ಶ್ರದ್ಧಾ ದೇಹವನ್ನು ಆಕೆಯ ಸೈಕೋ ಪ್ರಿಯಕರ 35 ತುಂಡುಗಳಾಗಿ ಕತ್ತರಿಸಿ ಎಸೆದಿದ್ದು, ಅದರಲ್ಲಿ ಕೆಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನೂ ಹಲವಾರು ತುಣುಕುಗಳಿಗಾಗಿ ಹುಡುಕಾಟ ನಡೆದಿದೆ. ಆಕೆಯ ತಲೆ ಇನ್ನೂ ಸಿಕ್ಕಿಲ್ಲ. ಅದು ದೊರೆತರೆ ಅಪರಾಧವನ್ನು ಸಾಕ್ಷೀಕರಿಸುವ ಗುರುತರ ಪುರಾವೆ ಲಭ್ಯವಾದಂತಾಗಲಿದೆ. ತುಣುಕುಗಳನ್ನು ಎಸೆದ ಪ್ರದೇಶಗಳಲ್ಲಿ ಅಫ್ತಾಬ್‌ನನ್ನು ಕರೆದುಕೊಂಡು ಹೋಗಿ ಪೊಲೀಸರು ತಲಾಶೆ ನಡೆಸುತ್ತಿದ್ದಾರೆ.

ಪ್ರತಿದಿನ ರಾತ್ರಿ 2 ಗಂಟೆಗೆ ಹೊರಗೆ ಹೋಗಿ ಶ್ರದ್ಧಾ ದೇಹದ ಒಂದೆರಡು ತುಣುಕನ್ನು ಎಸೆದು ಬರುತ್ತಿದ್ದ ಅಫ್ತಾಬ್‌, ತಲೆಯನ್ನು ಕತ್ತರಿಸಲು ಸಫಲನಾಗಿರಲಿಲ್ಲ. ಹೀಗಾಗಿ ಅದನ್ನು ಫ್ರಿಜ್‌ನಲ್ಲಿಟ್ಟಿದ್ದು. ʼʼಪ್ರತಿದಿನ ಅದನ್ನು ತೆಗೆದು, ನಮ್ಮ ಸಂಬಂಧದ ನೆನಪಿಗಾಗಿ ನೋಡಿಕೊಳ್ಳುತ್ತಿದ್ದೆʼʼ ಎಂದು ಪೊಲೀಸರಿಗೆ ಹೇಳಿದ್ದಾನೆ. ಎಲ್ಲ ತುಣುಕುಗಳನ್ನೂ ಎಸೆದ ಬಳಿಕ ಕೊನೆಯದಾಗಿ ತಲೆಯನ್ನು ಈತ ಬಿಸಾಡಿದ್ದ.

ತಲೆಬುರುಡೆ ದೊರೆತ ಬಳಿಕ ʼskull superimposition technologyʼ ಮೂಲಕ ಹತ್ಯೆಯಾದವಳ ಗುರುತನ್ನು ರುಜುವಾತುಪಡಿಸಲು ಪೊಲೀಸರಿಗೆ ಸಾಧ್ಯವಾಗಲಿದೆ. ಸದ್ಯ ಪೊಲೀಸರ ಬಳಿ ಇರುವ ಪುರಾವೆ ಎಂದರೆ ದೇಹದ ತುಣುಕುಗಳಿಗೂ ಶ್ರದ್ಧಾ ತಂದೆ ವಿಕಾಸ್‌ ವಾಕರ್‌ಗೂ ಇರುವ ಡಿಎನ್‌ಎ ಹೋಲಿಕೆ ಮಾತ್ರ. ಮೂಳೆಗಳನ್ನು ಡಿಎನ್‌ಎ ಸ್ಯಾಂಪಲಿಂಗ್‌ಗೆ ಕಳಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಇದನ್ನೂ ಓದಿ | Delhi Crime | ದೆಹಲಿ ಹಲವೆಡೆ ಶ್ರದ್ಧಾ ದೇಹದ 10 ಭಾಗ ಪತ್ತೆ, ಕೃತ್ಯದ ಸ್ಥಳಕ್ಕೆ ಅಫ್ತಾಬ್‌ನನ್ನು ಕರೆದೊಯ್ದ ಪೊಲೀಸರು

ಕೃತ್ಯ ನಡೆಸಿದ ಬಳಿಕ ಮನೆಯನ್ನು ಕ್ಲೀನ್‌ ಮಾಡಲು, ದೇಹದ ತುಂಡುಗಳನ್ನು ಶೇಖರಿಸಲು ಕೀಚಕ ಅಫ್ತಾಬ್‌ ಬೋರಿಕ್‌ ಪೌಡರ್‌, ಫಾರ್ಮಾಲ್ಡಿಹೈಡ್‌, ಸಲ್ಫ್ಯೂರಿಕ್‌ ಆಮ್ಲ ಮತ್ತಿತರ ಕೆಮಿಕಲ್‌ಗಳನ್ನು ಬಳಸಿದ್ದಾನೆ. ಕೃತ್ಯ ನಡೆದು ಆರು ತಿಂಗಳಾಗಿರುವುದರಿಂದ ಸ್ಥಳ ಮಹಜರಿನಲ್ಲಿ ಗುರುತರ ಸಾಕ್ಷ್ಯಗಳಿಗಾಗಿ ಫಾರೆನ್ಸಿಕ್‌ ತಂಡವನ್ನು ಪೊಲೀಸರು ಅವಲಂಬಿಸಿದ್ದಾರೆ. ಅಫ್ತಾಬ್‌ ಕೂಡ ಕ್ಷಣಕ್ಕೊಂದು ಹೇಳಿಕೆ ನೀಡಿ, ಕೆಲವನ್ನು ಮರೆತುಬಿಟ್ಟಂತೆ ನಟಿಸಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಗೊತ್ತಾಗಿದೆ.

ಎರಡು ಮೂರು ದಿನಗಳಿಂದ ಪೊಲೀಸ್‌ ಕಸ್ಟಡಿಯಲ್ಲಿರುವ ಅಫ್ತಾಬ್‌, ಹೊಟ್ಟೆ ತುಂಬಾ ಆಹಾರ ಸೇವಿಸಿ ಯಾವುದೇ ಪಶ್ಚಾತ್ತಾಪದ ಸುಳಿವೂ ಇಲ್ಲದೇ ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತಿದ್ದಾನೆ ಎಂದು ಆತನ ಸಹಕೈದಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Delhi Crime | ಕೊಲೆ ಹಿಂದೆ ಲವ್‌ ಜಿಹಾದ್‌, ಹಂತಕ ಅಫ್ತಾಬ್‌ನನ್ನು ಗಲ್ಲಿಗೇರಿಸಿ ಎಂದು ಶ್ರದ್ಧಾ ತಂದೆ ಒತ್ತಾಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Assault Case : ಹೋಮ್‌ ವರ್ಕ್‌ ಮಾಡದ್ದಕ್ಕೆ ಬಾಲಕಿಗೆ ಬಾಸುಂಡೆ ಬರುವಂತೆ ಬಾರಿಸಿದ ಮುಖ್ಯ ಶಿಕ್ಷಕಿ

Assault case : ವಿಜಯನಗರದಲ್ಲಿ ವಿದ್ಯಾರ್ಥಿನಿ ಹೋಮ್‌ ವರ್ಕ್‌ (Home Work) ಮಾಡದ್ದಕ್ಕೆ ಮುಖ್ಯ ಶಿಕ್ಷಕಿ ಮನಬಂದಂತೆ ಥಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಾಲಕಿ ಪೋಷಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

VISTARANEWS.COM


on

By

assault case
Koo

ವಿಜಯನಗರ : ಹೋಮ್‌ ವರ್ಕ್ (Home Work) ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಾಲು ಊತ ಬರುವಂತೆ ಮುಖ್ಯ ಶಿಕ್ಷಕಿ (Assault Case) ಬಾರಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.

ವಿಜ್ಞಾನ ವಿಷಯದ ಹೋಂ ವರ್ಕ್ ಮಾಡದಿದ್ದಕ್ಕೆ ಮುಖ್ಯ ಶಿಕ್ಷಕಿ ವಾಣಿ ಎಂಬುವವರು ವಿದ್ಯಾರ್ಥಿನಿಗೆ ಮನಬಂದಂತೆ ಹೊಡೆದಿದ್ದಾರೆ. ಮಾನಸ ಎಂಬಾಕೆಗೆ ಈ ಮೊದಲು ಅಪಘಾತ ಆಗಿದ್ದರಿಂದ ಕಾಲಿಗೆ ರಾಡ್ ಅಳವಡಿಸಲಾಗಿತ್ತು. ಮತ್ತೆ ಅದೇ ಕಾಲಿಗೆ ಶಿಕ್ಷಕಿ ವಾಣಿ ಸ್ಕೇಲ್‌ನಿಂದ ಜೋರಾಗಿ ಹೊಡೆದಿದ್ದಾರೆ. ಜೋರಾಗಿ ಹೊಡೆತದಿಂದಾಗಿ ಕಾಲು ಊದಿಕೊಂಡು ಬಾಲಕಿಗೆ ನಡೆದಾಡುವುದಕ್ಕೂ ಸಾಧ್ಯವಾಗಿಲ್ಲ.

ಇನ್ನೂ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ ವಾಣಿಯೇ ಬಾಲಕಿಯನ್ನು ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಲುಬು ಮತ್ತು ಮೂಳೆ ತಜ್ಞರಿಂದ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಕಾಲಿಗೆ ಬ್ಯಾಂಡೇಜ್ ಹಾಕಿ ಸೂಕ್ತ ಚಿಕಿತ್ಸೆ ನೀಡಿ ವೈದ್ಯರು ಕಳಿಸಿದ್ದಾರೆ. ಇತ್ತ ಬಾಲಕಿಯನ್ನು ನೋಡಲೆಂದು ಪಾಲಕರು ಭಾನುವಾರ ಶಾಲೆಗೆ ಬಂದಿದ್ದಾರೆ. ಆಗಲೇ ಮಗಳ ಕಾಲಿನ ಸ್ಥಿತಿ ನೋಡಿ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಪೋಷಕರು ಬಳಿಕ ಮುಖ್ಯ ಶಿಕ್ಷಕಿ ವಾಣಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Murder case : ಭೂ ವಿವಾದಕ್ಕಾಗಿ ಪರಸ್ಪರ ಹೊಡೆದಾಡಿಕೊಂಡ ಅಣ್ಣ-ತಮ್ಮ ಮೃತ್ಯು

ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರಗಳ ರಕ್ಷಣೆ

ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರಗಳ ರಕ್ಷಣೆ ಮಾಡಲಾಗಿದೆ. ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 7 ಹಸುಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಚಿತ್ರದುರ್ಗದಿಂದ ಮಧುಗಿರಿ ಮೂಲಕ ಗೌರಿಬಿದನೂರಿನ ಅಲ್ಲಿಪುರಕ್ಕೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಬ್ಬಿನ ಗದ್ದೆಯಲ್ಲಿ ಬಲೆಗೆ ಬಿದ್ದ ಚಿರತೆ

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಂಟೂರ ಗ್ರಾಮದಲ್ಲಿ ಕಳೆದೊಂದು ವಾರದಿಂದ ಆತಂಕ ಸೃಷ್ಟಿಸಿದ್ದ ಚಿರತೆಯು ಕೊನೆಗೂ ಕಬ್ಬಿನ ಗದ್ದೆಯಲ್ಲಿ ಬೋನಿಗೆ ಬಿದ್ದಿದೆ. ಬೋನಿಗೆ ಹಾಕಿ ಟ್ಯಾಕ್ಟರ್ ಮೂಲಕ ಸಾಗಾಟ ಮಾಡುವಾಗ ಚಿರತೆ ಎಸ್ಕೇಪ್ ಆಗಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಮಂಟೂರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೋನು ಇಟ್ಟಿದ್ದರು.

ಬೋನಿನಿಂದ ಪರಾರಿಯಾದ ಚಿರತೆಗೆ ಮತ್ತೆ ಮೂರು ತಾಸು ಕಾರ್ಯಾಚರಣೆ ನಡೆಸಿದ್ದರು. ನಾಪತ್ತೆಯಾಗಿದ್ದ ಚಿರತೆ ಮತ್ತೆ ಮಂಟೂರ ಗ್ರಾಮಸ್ಥರ ಸಹಕಾರದೊಂದಿಗೆ ಸೆರೆಯಾಗಿದೆ. ಚಿರತೆ ಸೆರೆಯಿಂದ ಮಂಟೂರ, ಕಿಶೋರಿ, ಹಲಗಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Suraj Revanna Case: ಸಲಿಂಗ ಕಾಮ ಪ್ರಕರಣ; ಸೂರಜ್‌ ರೇವಣ್ಣ ಜೈಲಿನಿಂದ ರಿಲೀಸ್‌

Suraj Revanna Case: ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ದಾಖಲಾಗಿದ್ದ ಎರಡು ಪ್ರಕರಣದಲ್ಲೂ ಎಂಎಲ್‌ಸಿ ಸೂರಜ್‌ ರೇವಣ್ಣಗೆ ಒಂದು ತಿಂಗಳ ಜೈಲು ವಾಸದ ಬಳಿಕ ಮುಕ್ತಿ ಲಭಿಸಿದೆ. ಇಂದು ಅಪರಾಹ್ನ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ.

VISTARANEWS.COM


on

Suraj Revanna Case
Koo

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ದಾಖಲಾಗಿದ್ದ ಎರಡು ಪ್ರಕರಣದಲ್ಲೂ ಎಂಎಲ್‌ಸಿ ಸೂರಜ್‌ ರೇವಣ್ಣಗೆ (Suraj Revanna Case) ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಒಂದು ತಿಂಗಳ ಜೈಲು ವಾಸದ ಬಳಿಕ ರಿಲೀಸ್‌ ಆಗಿದ್ದಾರೆ. ತನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ, ಶೀಘ್ರ ಸತ್ಯ ಹೊರ ಬರಲಿದೆ. ಎಲ್ಲದಕ್ಕೂ ಎರಡು-ಮೂರು ದಿನಗಳಲ್ಲಿ ಉತ್ತರ ನೀಡುವುದಾಗಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಅಪರಾಹ್ನ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್‌ ರೇವಣ್ಣ ವಿರುದ್ಧ 2 ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಹೊಳೆನರಸೀಪುರ ಟೌನ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮೊದಲಿಗೆ ಸೂರಜ್‌ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು‌ ಮಂಜೂರು ಮಾಡಿತ್ತು. ಬಳಿಕ ಸೋಮವಾರ ಎರಡನೇ ಪ್ರಕರಣದಲ್ಲೂ ನಿರೀಕ್ಷಣಾ ಜಾಮೀನು ನೀಡಿತ್ತು.

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣಗೆ ಜುಲೈ 3ರಂದು ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿತ್ತು. ಸಿಐಡಿ ಕಸ್ಟಡಿ ಮುಕ್ತಾಯಗೊಂಡ ನಂತರ 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಲಾಗಿತ್ತು. ಇದರಿಂದ ಸೂರಜ್‌ ರೇವಣ್ಣ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದರು. ಜೂನ್‌ 23ರಂದು ಬಂಧನವಾಗಿದ್ದ ಸೂರಜ್‌ ರೇವಣ್ಣ ಪರಪ್ಪನ ಅಗ್ರಹಾರ ಸೇರಿದ್ದರು. ಪ್ರಕರಣ ನಡೆದು 30 ದಿನಗಳ ನಂತರ ಈಗ ಸೂರಜ್‌ ಹೊರ ಬಂದಿದ್ದಾರೆ.

ಏನಿದು ಪ್ರಕರಣ?

ಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸೂರಜ್‌ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ದೂರು ಸಲ್ಲಿಸಿದ್ದರು. ಬಳಿಕ ಜೂನ್‌ 22ರಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್‌ ರೇವಣ್ಣ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ದೌರ್ಜನ್ಯದ ಆರೋಪ

ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಉದ್ಯೋಗಿಯಾದ ಜೆಡಿಎಸ್ ಕಾರ್ಯಕರ್ತ, ಜೂನ್ 16ರಂದು ಸೂರಜ್ ತನಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ಉದ್ಯೋಗ ನೀಡುವ ಭರವಸೆ ನೀಡಿ ತನ್ನನ್ನು ಕರೆಸಿಕೊಂಡು, ಸಲಿಂಗಕಾಮಕ್ಕೆ ಒತ್ತಾಯಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದರಿಂದ ನನ್ನ ದೇಹದ ಮೇಲೆ ಗಾಯಗಳಾಗಿದ್ದು, ಈ ಬಗ್ಗೆ ಎಲ್ಲಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದರು.

ಐದು ಕೋಟಿ ರೂ. ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಸಂತ್ರಸ್ತನ ವಿರುದ್ಧ ಸಾಕ್ಷ್ಯ ನೀಡಲು ಸೂರಜ್, ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ತೆರಳಿದ್ದಾಗ ಸುದೀರ್ಘ ವಿಚಾರಣೆ ಬಳಿಕ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸೂರಜ್ ರೇವಣ್ಣಗೆ ಜಾಮೀನು ಮಂಜೂರು

Continue Reading

ಕಲಬುರಗಿ

Road Accident : ಕಲಬುರಗಿಯಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಬಿದ್ದ ಬೈಕ್‌ ಸವಾರ ಸ್ಥಳದಲ್ಲೇ ಸಾವು

Road Accident : ಪ್ರತ್ಯೇಕ ಕಡೆಗಳಲ್ಲಿ ಅಪಘಾತ ನಡೆದಿದೆ. ಕಲಬುರಗಿಯಲ್ಲಿ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಲ್ಲೂ ಬಸ್‌-ಟ್ಯಾಂಕರ್‌ ನಡುವೆ ಅಪಘಾತ ಸಂಭವಿಸಿದೆ.

VISTARANEWS.COM


on

By

road Accident
Koo

ಕಲಬುರಗಿ: ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದ (Road Accident) ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿಯ ತಾವರಗೇರಾ ಕ್ರಾಸ್ ಬಳಿ ಘಟನೆ ನಡೆದಿದೆ. ಕಲಬುರ್ಗಿಯ ಇಸ್ಲಾಮಬಾದ್ ಕಾಲೋನಿ ನಿವಾಸಿ ಪೈಜಾನ್ ಜಮಾದರ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.

ಬೈಕ್‌ನಲ್ಲಿದ್ದ ಹಿಂಬದಿ ಸವಾರನಿಗೂ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಸಂಚಾರಿ 2 ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂಚಾರಿ- 2 ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Road Accident
Road Accident

ಹದಗೆಟ್ಟ ರಸ್ತೆಯಲ್ಲಿ ಬಸ್‌-ಟ್ಯಾಂಕರ್‌ ಡಿಕ್ಕಿ

ಚಿಕ್ಕಮಗಳೂರು: ಮಳೆಯಿಂದ ಹದಗೆಟ್ಟ ರಸ್ತೆ ಗುಂಡಿ ದಾಟಲು ಹೋಗಿ ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನಜ್ಜುಗಜ್ಜಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಶಿರವಳಲು ಗ್ರಾಮದ ಬಳಿ ಘಟನೆ ನಡೆದಿದೆ.

ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿರವಳಲು ಗ್ರಾಮದಲ್ಲಿ ಅಪಘಾತ ಸಂಭವಿಸಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗ್ಯಾಸ್‌ ಸಿಲಿಂಡರ್‌ ಸ್ಫೋಟ

ಹಾಸನ: ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಮನೆಯಲ್ಲಿದ್ದ ದಂಪತಿ ಗಾಯಗೊಂಡಿದ್ದಾರೆ. ಹಾಸನ ತಾಲೂಕಿನ ಕಬ್ಬತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ರಘು-ಭವ್ಯ ದಂಪತಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಳ್ಳುವ ಮುನ್ನ ಮಕ್ಕಳು ಶಾಲೆಗೆ ತೆರಳಿದ್ದರು. ಅದೃಷ್ಟವಶಾತ್ ಅನಾಹುತ ತಪ್ಪಿದೆ. ಗ್ರಾಮಸ್ಥರು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ.

ಇದನ್ನೂ ಓದಿ: Karnataka Rain : ಹಾವೇರಿಯಲ್ಲಿ ಮಳೆಯಾರ್ಭಟಕ್ಕೆ ಮರ ಬಿದ್ದು ಬಲಿಯಾದ ಹಸು; ಮಹಾರಾಷ್ಟ್ರ- ಕರ್ನಾಟಕ‌ ಸಂಪರ್ಕ‌ ಸೇತುವೆ ಬಂದ್

ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್‌ಗೆ ಯುವಕ ಬಲಿ

ಬೆಂಗಳೂರು: ಹಿಟ್ ಆ್ಯಂಡ್ ರನ್‌ಗೆ (Hit And Run Case) ಯುವಕನೊರ್ವ ಬಲಿಯಾಗಿದ್ದಾನೆ. ಬೆಂಗಳೂರಿನ ಹೈ ಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ (Road Accident) ನಡೆದಿದೆ. ಕನ್ನಿಂಗ್ ಹಾಮ್ ರಸ್ತೆಯಲ್ಲಿ ನಿನ್ನೆ ಸೋಮವಾರ ರಾತ್ರಿ 10.30ಕ್ಕೆ ಅಪಘಾತ ನಡೆದಿದೆ. ಆಯುಷ್ ಅಪ್ಪಯ್ಯ (21) ಮೃತ ದುರ್ದೈವಿ.

ಆಯುಷ್‌ ಕಲ್ಪನಾ ಜಂಕ್ಷನ್ ಕಡೆಯಿಂದ ಚಂದ್ರಿಕಾ ಜಂಕ್ಷನ್ ಕಡೆಗೆ ಡಿಯೋ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ವಕ್ಫ್ ಬೋರ್ಡ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಚಾಲಕ ವಾಹನ ಸಮೇತ ಎಸ್ಕೇಪ್‌ ಆಗಿದ್ದಾನೆ. ಘಟನೆಯಲ್ಲಿ ಆಯುಷ್ ತಲೆಗೆ ಗಂಭೀರ ಪೆಟ್ಟಾಗಿತ್ತು. ಈ ವೇಳೆ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಾಗ ಆಯುಷ್ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಅಪಘಾತ ಮಾಡಿ ಎಸ್ಕೇಪ್‌ ಆಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

National Anthem: ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ; ಕ್ಷಮೆಯಾಚಿಸಿದ ಮುಸ್ಲಿಂ ದಂಪತಿ

National Anthem: ಮೈಸೂರಿನ ಜಯಲಕ್ಷ್ಮೀಪುರಂನಲ್ಲಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಮುಸ್ಲಿಂ ದಂಪತಿ ಎದ್ದು ನಿಲ್ಲದೆ ಅಗೌರವ ತೋರಿದ್ದರು. ಬಳಿಕ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ.

VISTARANEWS.COM


on

National Anthem
Koo

ಮೈಸೂರು: ರಾಷ್ಟ್ರಗೀತೆಗೆ ಅಗೌರವ ತೋರಿರುವ ಘಟನೆ ನಗರದ ಜಯಲಕ್ಷ್ಮೀಪುರಂನಲ್ಲಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ (National Anthem) ಪ್ರಸಾರವಾದ ವೇಳೆ ಮುಸ್ಲಿಂ ದಂಪತಿ ಎದ್ದು ನಿಲ್ಲದೆ ಅಗೌರವ ತೋರಿದ್ದರು. ಇದನ್ನು ಪಕ್ಕದಲ್ಲಿದ್ದವರು ಪ್ರಶ್ನಿಸಿದ ಬಳಿಕ ತಪ್ಪಿನ ಅರಿವಾಗಿ ಮುಸ್ಲಿಂ ದಂಪತಿ ಕ್ಷಮೆಯಾಚಿಸಿದ್ದಾರೆ.

ಭಾನುವಾರ ರಾತ್ರಿ ಬ್ಯಾಡ್ ನ್ಯೂಸ್ ಸಿನಿಮಾ ವೀಕ್ಷಿಸಲು ಮುಸ್ಲಿಂ ದಂಪತಿ ಡಿಆ‌ರ್‌ಸಿ ಚಿತ್ರಮಂದಿರಕ್ಕೆ ತೆರಳಿದ್ದರು. ಚಿತ್ರ ಆರಂಭವಾಗುವ ಮೊದಲೇ ಚಿಪ್ಸ್, ಪಾಪ್ ಕಾರ್ನ್ ಸೇರಿ ಇನ್ನಿತರ ತಿಂಡಿ ಇರಿಸಿಕೊಂಡು ಕುಳಿತಿದ್ದರು. ಈ ವೇಳೆ ಸಿನಿಮಾ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಪ್ರಸಾರ ಮಾಡಿದಾಗ, ಮುಸ್ಲಿಂ ದಂಪತಿ ಎದ್ದು ನಿಂತಿಲ್ಲ. ಇದಕ್ಕೆ ಅವರ ಪಕ್ಕದಲ್ಲಿದ್ದ ಹಿಂದು ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಚಿತ್ರಮಂದಿರದ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಧಾವಿಸಿದ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು, ಮುಸ್ಲಿಂ ದಂಪತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ.

ರಾಷ್ಟ್ರಗೀತೆ ಪ್ರಸಾರದ ವೇಳೆ ತಮ್ಮ ಮಡಿಲಲ್ಲಿ ತಿಂಡಿ ಇದ್ದಿದ್ದರಿಂದ ಮೇಲೇಳಲು ಆಗಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ಮುಸ್ಲಿಂ ದಂಪತಿ ಕ್ಷಮೆ ಕೋರಿದ್ದಾರೆ. ಹೀಗಾಗಿ, ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ದಂಪತಿಯನ್ನು ಕಳುಹಿಸಿದ್ದಾರೆ.

ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದ ಪ್ರತಾಪ್‌ ಸಿಂಹ

ಚಿತ್ರಮಂದಿರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಘಟನೆ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಯಾರಲ್ಲಿ ದೇಶದ ಬಗ್ಗೆ ಜನ್ಮ ಭೂಮಿ, ಪವಿತ್ರ ಭೂಮಿ ಎಂಬ ಭಾವನೆ ಇರುವುದಿಲ್ಲವೋ ಅಂತಹವರಿಂದ ಈ ರೀತಿ ಆಗುತ್ತದೆ. ಹೋಲಿ ಲ್ಯಾಂಡ್ ಅರಬ್‌ನಲ್ಲಿ ಇದೆ ಎಂದು ಭಾವಿಸುತ್ತಾರೋ ಅವರಿಂದ ಈ ರೀತಿ ಆಗುತ್ತದೆ. ಚಿತ್ರಮಂದಿರದಲ್ಲಿದ್ದ ಇತರರು ಕಿವಿ ಹಿಂಡುವ ಕೆಲಸ ಮಾಡಬೇಕಿತ್ತು. ಆದರೆ, ಯಾರೂ ಆ ಕೆಲಸ ಮಾಡಿಲ್ಲ. ಇನ್ನು ಮುಂದೆಯಾದರೂ ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ | Sexual Abuse: ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನ ಅತ್ಯಾಚಾರ ಎಸಗಿ ಪೊಲೀಸ್‌ ಠಾಣೆ ಮುಂದೆಯೇ ಬಿಟ್ಟು ಹೋದರು!

ಅಡ್ಡಗಟ್ಟಿದ ಪೊಲೀಸ್‌ ಜೀಪ್‌ ಮೇಲೆ ಕಲ್ಲು ತೂರಿ ಆಂಧ್ರದ ಡೆಡ್ಲಿ ಕಳ್ಳರ ಗ್ಯಾಂಗ್‌ ಎಸ್ಕೇಪ್‌!

theft case
theft case

ಚಿತ್ರದುರ್ಗ: ಪೊಲೀಸರ ಮೇಲೆ ಕಳ್ಳರು (Theft Case) ಕಲ್ಲು ತೂರಿ ಆಂಧ್ರದ ಡೆಡ್ಲಿ ಕಳ್ಳರ ಗ್ಯಾಂಗ್‌ವೊಂದು ಎಸ್ಕೇಪ್‌ ಆಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಪೊಲೀಸ್‌ ಜೀಪ್ ಮೇಲೆ ಕಲ್ಲು ತೂರಿ ಕಳ್ಳರು ಕಾಲ್ಕಿತ್ತಿದ್ದಾರೆ. ಪೊಲೀಸರು ಏರ್ ಫೈರ್ ಮಾಡಿದರೂ ಜಗ್ಗದೆ ತಪ್ಪಿಸಿಕೊಂಡಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ಕಳ್ಳರನ್ನು ಹಿಡಿಯಲು ಪೊಲೀಸರು ಬೊಲೆರೋ ವಾಹನವನ್ನು ಅಡ್ಡ ಹಾಕಿದ್ದರು. ಈ ವೇಳೆ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಏಕಾಏಕಿ ಕಳ್ಳರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಏರ್ ಫೈರಿಂಗ್ ಮಾಡಿದ್ದಾರೆ.

ಇನ್ನೂ ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸರ ಜೀಪಿನ ಗ್ಲಾಸ್ ಡ್ಯಾಮೇಜ್ ಆಗಿದೆ. ಸುಮಾರು 7 ಮಂದಿ ಗ್ಯಾಂಗ್‌ ಆಂಧ್ರಪ್ರದೇಶದ ರಿಜಿಸ್ಟ್ರೇಷನ್‌ ಹೊಂದಿದ್ದ ಬೊಲೆರೋ ವಾಹನದಲ್ಲಿ ಬಂದಿದ್ದರು. ಇದನ್ನೂ ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು, ತಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಗಾಡಿ ನಿಲ್ಲಿಸದೇ ಖತರ್ನಾಕ್‌ ಕಳ್ಳರು, ಪೊಲೀಸರಿಗೆ ಕಲ್ಲು ತೂರಿದ್ದಾರೆ.

ದರೋಡೆಕೋರರು ಎಂಬ ಅನುಮಾನದಿಂದ ಪೊಲೀಸರು ಅಲರ್ಟ್ ಆಗಿದ್ದಾರೆ. ಬೊಸೇ ದೇವರಹಟ್ಟಿ, ಕೋಟೆ ನಗರ ಒಳ ಮಾರ್ಗದಲ್ಲಿ ಕುದಾಪುರ ಕಡೆ ಬರುತ್ತಿದ್ದ ಕಳ್ಳರಿಗೆ, ಪೊಲೀಸರು ಮನಮಯ್ಯನಹಟ್ಟಿ ಕುದಾಪುರ ಒಳ ಮಾರ್ಗದಲ್ಲಿ ಎದುರಾಗಿದ್ದರು. ನಾಯಕನಹಟ್ಟಿ ಠಾಣೆ ಪಿಎಸ್‌ಐ ಶಿವಕುಮಾರ್ ತಂಡ ಬುಲೇರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬುಕ್ಕಂಬೂದಿ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಮುಂದುವರಿದ ಸಾವು-ನೋವು; ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ಸ್ಥಳಕ್ಕೆ ಚಿತ್ರದುರ್ಗ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ನಡೆದ ಘಟನೆ ಕುರಿತು ಸ್ಟಲಿತರುಲ್ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಪೊಲೀಸರ ಮೇಲೆ ಕಳ್ಳರ ದಾಳಿ ಸುದ್ದಿ ತಿಳಿದು ಸ್ಥಳೀಯರು ಆತಂಕಗೊಂಡಿದ್ದಾರೆ.

Continue Reading
Advertisement
Union Budget 2024
ಬಜೆಟ್ 202411 seconds ago

Union Budget 2024: ಇನ್ನೊಂದು ವರ್ಷದಲ್ಲಿ ಹಳೇ ತೆರಿಗೆ ಪದ್ಧತಿ ರದ್ದು? ಕೇಂದ್ರ ವಿತ್ತ ಸಚಿವೆ ಹೇಳಿದ್ದಿಷ್ಟು

Union Budget 2024
ಕರ್ನಾಟಕ2 mins ago

Union Budget 2024: ಪ್ರಧಾನಿ ಮೋದಿ ಕುರ್ಚಿ ಉಳಿಸೋಕೆ ಆಂಧ್ರ, ಬಿಹಾರಕ್ಕೆ ವಿಶೇಷ ಅನುದಾನ: ಸಿಎಂ ಕಿಡಿ

NEET UG 2024
ದೇಶ6 mins ago

NEET UG 2024: ನೀಟ್‌ ಮರು ಪರೀಕ್ಷೆ ನಡೆಸುವುದಿಲ್ಲ; ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು

Amy Jones-Piepa Cleary
ಕ್ರೀಡೆ14 mins ago

Amy Jones-Piepa Cleary: ನಿಶ್ಚಿತಾರ್ಥ ಮಾಡಿಕೊಂಡ ಇಂಗ್ಲೆಂಡ್​-ಆಸ್ಟ್ರೇಲಿಯಾ ತಂಡದ ಮಹಿಳಾ ಆಟಗಾರ್ತಿಯರು

Union Budget 2024
ದೇಶ21 mins ago

Union Budget 2024 : ಹೂಡಿಕೆಗಳನ್ನು ಉತ್ತೇಜಿಸಲು ‘ಏಂಜಲ್ ಟ್ಯಾಕ್ಸ್’ ರದ್ದು ಮಾಡಿದ ಕೇಂದ್ರ ಸರ್ಕಾರ

Viral Video
Latest24 mins ago

Viral Video: ಎರಡು ಮುಖ, ನಾಲ್ಕು ತೋಳು, ನಾಲ್ಕು ಕಾಲುಗಳ ಮಗು ಜನನ!

Udupi News
ಉಡುಪಿ27 mins ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

ರಾಜಕೀಯ45 mins ago

BJP Padayatra: ಮುಡಾ ಹಗರಣ ಖಂಡಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧಾರ

Parashuram D
ಕರ್ನಾಟಕ54 mins ago

Parashuram D : ವಿಸ್ತಾರ ಮೀಡಿಯಾದ ನೂತನ ಜಿ.ಎಮ್ ಆಗಿ ಪರಶುರಾಮ ಡಿ

Train Tragedy
Latest59 mins ago

Train Tragedy: ರೈಲ್ವೆ ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ತಂದೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Udupi News
ಉಡುಪಿ27 mins ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ5 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ4 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ5 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

ಟ್ರೆಂಡಿಂಗ್‌