ಕ್ರೈಂ
ಅಜಾಗರೂಕ ಚಾಲನೆ, ಪೊಲೀಸರ ಜತೆ ಶಾಸಕ ಲಿಂಬಾವಳಿ ಪುತ್ರಿಯ ಕಿರಿಕ್
ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಅಜಾಗರೂಕ ವಾಹನ ಚಾಲನೆಗಾಗಿ ದಂಡ ತೆರಲು ಒಪ್ಪದೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿರುವ ವಿಡಿಯೊ ಈಗ ವೈರಲ್ ಆಗಿದೆ.
ಬೆಂಗಳೂರು: ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿರುವ ವಿಡಿಯೊ ವೈರಲ್ ಆಗಿದೆ. ಈ ಪ್ರಕರಣ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ಬಳಿ ನಡೆದಿದೆ.
ಸೀಟ್ ಬೆಲ್ಟ್ ಧರಿಸದೆ ಅತಿವೇಗದ ಚಾಲನೆ ಮಾಡಿದ್ದು ಹಾಗೂ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಟ್ರಾಫಿಕ್ ಪೋಲಿಸರು ಈಕೆಯನ್ನು ತಡೆದು ದಂಡ ವಿಧಿಸಿದ್ದರು. ಸೀಟ್ ಬೆಲ್ಟ್ ಧರಿಸದೆ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾರನ್ನು ತಡೆಯಲಾಗಿತ್ತು. ಆದರೆ ಕಾರನ್ನು ನಿಲ್ಲಿಸದೆ ಮುಂದೆ ಚಲಾಯಿಸಿ ಸಿಗ್ನಲ್ ಜಂಪ್ ಕೂಡ ಮಾಡಿದ್ದರು. ನಂತರ ಪೊಲೀಸರು ಕಾರನ್ನು ಮುಂದಿನ ಹಂತದಲ್ಲಿ ತಡೆದು ದಂಡ ಹಾಕಿದ್ದರು. ಆದರೆ ಅವರು ಅದನ್ನು ಒಪ್ಪದೆ ಪೊಲೀಸರ ಜತೆ ಜೋರಾಗಿ ವಾಗ್ಯುದ್ಧ ನಡೆಸಿದರು.
ʼಇದು ಎಂಎಲ್‌ಎ ಗಾಡಿ, ನಾನು ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಗೊತ್ತಾ..ʼ ಎಂದು ಅವರು ಪೊಲೀಸರಿಗೆ ಆವಾಜ್ ಹಾಕಿದರು. ಪೊಲೀಸರು ತಡೆದರೂ ತಮ್ಮ ಕಾರನ್ನು ಚಲಾಯಿಸಿಕೊಂಡು ಹೋಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಜತೆಗೂ ಅವರು ಕಿರಿಕ್ ಮಾಡಿಕೊಂಡದ್ದು ಕಂಡುಬಂತು.
ಆದರೆ ಪೊಲೀಸರು ಯಾವುದೇ ರಾಜಿ ಮಾಡಿಕೊಳ್ಳದೆ ಲಿಂಬಾವಳಿ ಪುತ್ರಿಯಿಂದ 10,000 ರೂ. ದಂಡ ವಸೂಲಿ ಮಾಡಿದ್ದಾರೆ. ಈ ಹಿಂದಿನ ದಂಡದ ಮೊತ್ತ 9000 ರೂ. ಹಾಗೂ ಈ ಸಲದ ದಂಡ 1000 ರೂ ಸೇರಿಸಿ ಹತ್ತು ಸಾವಿರ ರೂ. ಆಗಿದೆ.
ಈ ನಡುವೆ ಪ್ರಕರಣದ ಮಾಹಿತಿ ಪಡೆದ ಶಾಸಕ ಅರವಿಂದ ಲಿಂಬಾವಳಿ ಅವರು, ಪುತ್ರಿಯ ವರ್ತನೆಗಾಗಿ ಕ್ಷಮೆ ಯಾಚಿಸಿದ್ದಾರೆ. ಪುತ್ರಿ ಜತೆಗೆ ಇದ್ದ ಸ್ನೇಹಿತ ತರುಣ್ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದು, ಇದಕ್ಕೆ ಸಂಬಂಧಿಸಿ ದಂಡ ಕಟ್ಟಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮಲತಂದೆಯಿಂದ ರೇಪ್, ತಾಯಿಯಿಂದ ಮಗಳ ಅಂಡ ಮಾರಾಟ: ತಮಿಳುನಾಡಿನಲ್ಲಿ ರಾಕ್ಷಸೀ ಕೃತ್ಯ
ಕರ್ನಾಟಕ
Anganawadi worker: ತಂಗಿಗೆ ನನ್ನ ಕೆಲಸ ಕೊಡಿ ಎಂದು ತನ್ನ ಬದುಕಿಗೆ ದುರಂತ ಅಂತ್ಯ ಹಾಡಿದ ಅಂಗನವಾಡಿ ಕಾರ್ಯಕರ್ತೆ!
ಕೃಷಿ ಹೊಂಡಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತೆ (Anganawadi worker) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ತನ್ನ ಕೆಲಸವನ್ನು ತಂಗಿಗೆ ಕೊಡಿ ಎಂದು ಡೆತ್‌ನೋಟ್ (Death note) ಬರೆದಿದ್ದಾರೆ.
ಚಿಕ್ಕಬಳ್ಳಾಪುರ: ಇಲ್ಲಿನ ದಿಬ್ಬೂರು ಗ್ರಾಮದ ಕೃಷಿ ಹೊಂಡಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತೆ (Anganawadi worker) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಲಾವತಿ (35) ಆತ್ಮಹತ್ಯೆ ಮಾಡಿಕೊಂಡವರು.
ಕಲಾವತಿ ದಿಬ್ಬೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಆದರೆ ಡೆತ್‌ನೋಟ್ ಬರೆದಿಟ್ಟು ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ತನ್ನ ಕೆಲಸವನ್ನು ಮೈದುನ ಪತ್ನಿ ಅಂದರೆ ತನ್ನ ತಂಗಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ನನ್ನ ಸಾವಿಗೆ ನಾನೇ ಕಾರಣ, ಯಾರು ಹೊಣೆಯಲ್ಲ. ನನ್ನ ಮೈದುನ ಪತ್ನಿಗೆ (ತಂಗಿ) ನನ್ನ ಕೆಲಸ ಕೊಡಿ. ಆಕೆ ಚೆನ್ನಾಗಿ ಕೆಲಸ ಮಾಡುತ್ತಾಳೆ. ಬಾಲವಿಕಾಸ ಸಮಿತಿಯನ್ನು ಅಧ್ಯಕ್ಷರ ಮತ್ತು ಕಾರ್ಯಕರ್ತೆ ಹೆಸರಲ್ಲಿ ಜಂಟಿ ಖಾತೆ ತೆರಯಬೇಕು. ಜತೆಗೆ ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತಿಗೆ ಮನವಿ ಮಾಡಿದ್ದಾರೆ. ಜತೆಗೆ ತಾನು ಕೊಡಬೇಕಾಗಿರುವ ಸಾಲದ ವಿವರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಕೃಷಿ ಹೊಂಡದಿಂದ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕ್ರೈಂ
Apsara Murder: ಪತ್ನಿ ಇದ್ದರೂ ಅರ್ಚಕನಿಗೆ ಬೇಕು ಲವ್ವರ್; ಆಕೆ ಮದುವೆಯಾಗು ಎಂದಿದ್ದಕ್ಕೆ ಆದ ಕಿಲ್ಲರ್
Apsara Murder: ತೆಲಂಗಾಣದ ಸರೂರ್ ನಗರದಲ್ಲಿ ಅರ್ಚಕನೊಬ್ಬ ಈಗಾಗಲೇ ಮದುವೆಯಾಗಿದ್ದರೂ ಮತ್ತೊಬ್ಬ ಮಹಿಳೆಯ ಸಹವಾಸ ಮಾಡಿದ್ದಾನೆ. ಪ್ರೀತಿಸುತ್ತಿದ್ದೀಯ, ಮದುವೆಯಾಗು ಎಂದು ಮಹಿಳೆ ಒತ್ತಾಯ ಮಾಡಿದ್ದಕ್ಕೆ ಪ್ರೇಯಸಿಯನ್ನೇ ಅರ್ಚಕ ಕೊಂದಿದ್ದಾನೆ.
ಹೈದರಾಬಾದ್: ಮನೆಯಲ್ಲೊಬ್ಬಳು ಮಡದಿ ಇದ್ದರೂ ಲವ್ವರ್ ಇರಬೇಕು ಎಂಬ ಅರ್ಚಕನೊಬ್ಬನ ಶೋಕಿಗಾಗಿ ತೆಲಂಗಾಣದಲ್ಲಿ 30 ವರ್ಷದ ಮಹಿಳೆಯೊಬ್ಬರ (Apsara Murder) ಜೀವವೇ ಬಲಿಯಾಗಿದೆ. ಹೌದು, ಶಂಷಾಬಾದ್ ಜಿಲ್ಲೆಯ ಸರೂರ್‌ನಗರದಲ್ಲಿ ಅರ್ಚಕನು ತನ್ನ ಗರ್ಲ್‌ಫ್ರೆಂಡ್‌ಅನ್ನು ಮದುವೆಯಾಗಬೇಕಾಗುತ್ತದೆ ಎಂದು ಆಕೆಯನ್ನು ಕೊಂದು, ದೇಹವನ್ನು ಚರಂಡಿ ಗುಂಡಿಗೆ (Manhole) ಎಸೆದಿದ್ದಾನೆ.
ಸರೂರ್ ನಗರದ ದೇವಾಲಯದಲ್ಲಿ ಅರ್ಚಕನಾಗಿರುವ ವೆಂಕಟ ಸೂರ್ಯ ಸಾಯಿ ಕೃಷ್ಣನಿಗೆ ಈಗಾಗಲೇ ಮದುವೆಯಾಗಿದೆ. ಮದುವೆ, ಸಂಸಾರ ಎಂದು ಸುಮ್ಮನಿರದ ಈತನು ಅಪ್ಸರಾ ಎಂಬ ಮಹಿಳೆಯ ಜತೆ ಸಂಬಂಧ ಬೆಳೆಸಿದ್ದಾನೆ. ಇಬ್ಬರ ಪ್ರೀತಿ ಗಾಢವಾದ ಮೇಲೆ ನನ್ನನ್ನು ಮದುವೆಯಾಗು ಎಂದು ಅಪ್ಸರಾ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಮದುವೆಯಾದ ಕಾರಣ ಮತ್ತೊಂದು ಮದುವೆಯಾಗಲು ಒಪ್ಪದ ವೆಂಕಟಸೂರ್ಯ ಸಾಯಿ ಕೃಷ್ಣ, ಆಕೆಯನ್ನು ಕೊಂದು, ಚರಂಡಿಯ ಗುಂಡಿಯಲ್ಲಿ ಎಸೆದಿದ್ದಾನೆ.
ಗೋಶಾಲೆಗೆ ಭೇಟಿ ನೀಡುವ ನೆಪದಲ್ಲಿ ಕೊಲೆ
ಗೋಶಾಲೆಗೆ ಭೇಟಿ ನೀಡೋಣ ಎಂದು ವೆಂಕಟಸೂರ್ಯ ಸಾಯಿ ಕೃಷ್ಣ,ನು ಅಪ್ಸರಾ ಅವರನ್ನು ಕರೆಸಿದ್ದಾನೆ. ವೆಂಕಟೇಶ್ವರ ಕಾಲೋನಿ ನಿವಾಸಿಯಾದ ಅಪ್ಸರಾ, ವೆಂಕಟಸೂರ್ಯ ಸಾಯಿ ಕೃಷ್ಣನ ಮಾತು ಕೇಳಿ ಸುಲ್ತಾನ್‌ಪಳ್ಳಿಯಲ್ಲಿರುವ ಗೋಶಾಲೆಗೆ ಹೋಗಿದ್ದಾರೆ. ಇದೇ ವೇಳೆ, ನರ್ಕುಡಾ ಗ್ರಾಮದ ಹೊರವಲಯದಲ್ಲಿ ವೆಂಕಟಸೂರ್ಯ ಸಾಯಿ ಕೃಷ್ಣನು ಅಪ್ಸರಾ ತಲೆಮೇಲೆ ಬಂಡೆಗಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಚರಂಡಿ ಗುಂಡಿಯಲ್ಲಿ ಎಸೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Murder Case: ಕೋಪದಿಂದ ಅಜ್ಜಿಯ ಕೊಲೆ ಮಾಡಿದ, ಹೆಣ ಕಾರಿನಲ್ಲಿ ಇಟ್ಟುಕೊಂಡು ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ!
ಜೂನ್ 3ರಿಂದ ಅಪ್ಸರಾ ಕಾಣೆಯಾದ ಕಾರಣ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಪೊಲೀಸರು ತನಿಖೆ ನಡೆಸಿದ್ದು, ಅಪ್ಸರಾ ಕಾಲ್ ರೆಕಾರ್ಡ್ಸ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವೆಂಕಟಸೂರ್ಯ ಸಾಯಿ ಕೃಷ್ಣನನ್ನು ಬಂಧಿಸಿದ್ದಾರೆ. ಬಂಧಿಸಿದ ಬಳಿಕ ಅರ್ಚಕನು ತಾನು ನಡೆಸಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮದುವೆಯಾಗು ಎಂಬುದಾಗಿ ಅಪ್ಸರಾ ಪೀಡಿಸಿದ ಕಾರಣ ಕೊಲೆ ಮಾಡಿದೆ ಎಂಬುದಾಗಿ ವೆಂಕಟಸೂರ್ಯ ಸಾಯಿ ಕೃಷ್ಣ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನು ಚರಂಡಿಯಲ್ಲಿ ಬಿದ್ದಿರುವ ಶವವನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಮಹಿಳೆಯೊಬ್ಬರು ಕಾಣೆಯಾದ ಪ್ರಕರಣವು ಆಕೆಯ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಮದುವೆಯಾದರೂ ಮತ್ತೊಬ್ಬ ಮಹಿಳೆಯ ಸಹವಾಸ ಮಾಡುವ ಜತೆಗೆ ಆಕೆಯನ್ನು ಕೊಲೆಗೈದ ಅರ್ಚಕನು ಕಂಬಿ ಎಣಿಸುತ್ತಿದ್ದಾನೆ.
ಕರ್ನಾಟಕ
Road Accident: ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ಮರಣ; ಶಿವಮೊಗ್ಗ, ಕೊಡಗಿನಲ್ಲೂ ಹಾರಿಹೋಯ್ತು ಪ್ರಾಣ
Road Accident: ಊಟಿ ಪ್ರವಾಸಕ್ಕೆ ಹೋಗಿದ್ದ ಬಿಜೆಪಿ ಮುಖಂಡರೊಬ್ಬರ (BJP leader) ಕಾರು (Car Accident) ಅಪಘಾತಕ್ಕೀಡಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಆಟೋಗೆ ಬೊಲೆರೋ ವಾಹನ ಡಿಕ್ಕಿಯಾಗಿ ವೃದ್ಧ ಮೃತಪಟ್ಟಿದ್ದರೆ, 12 ಮಂದಿ ಗಾಯಗೊಂಡಿದ್ದಾರೆ.
ಮೈಸೂರು/ಶಿವಮೊಗ್ಗ/ಕೊಡಗು: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಸಾವು-ನೋವಿಗೆ ಕಾರಣವಾಗಿದೆ. ಕಾರು ಅಪಘಾತದಲ್ಲಿ ಮೈಸೂರಿನ ಬಿಜೆಪಿ ಮುಖಂಡ ಮೃತಪಟ್ಟಿರುವ ದುರ್ಘಟನೆ ಊಟಿಯಲ್ಲಿ ನಡೆದಿದೆ. ಮೈಸೂರಿನ ನರಸಿಂಹರಾಜ ಕ್ಷೇತ್ರದ ಬಿಜೆಪಿ ಮುಖಂಡ ಸ್ವಾಮಿಗೌಡ ಎಂಬುವವರು ಮೃತಪಟ್ಟಿದ್ದಾರೆ.
ಸ್ವಾಮಿಗೌಡ ಅವರು ನರಸಿಂಹರಾಜ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸ್ನೇಹಿತರೊಂದಿಗೆ ಊಟಿ ಪ್ರವಾಸಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಸ್ವಾಮಿಗೌಡ ಅವರ ತಲೆಗೆ ಗಂಭೀರ ಪೆಟ್ಟಾಗಿದೆ. ತೀವ್ರ ರಕ್ತಸ್ರಾವವಾಗಿ ಸ್ವಾಮಿಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಉಳಿದ ಮೂವರಿಗೆ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಲಗೇಜು ಆಟೋಗೆ ಡಿಕ್ಕಿ ಹೊಡೆದ ಬೊಲೆರೋ
ಶಿವಮೊಗ್ಗದ ಶಿಕಾರಿಪುರದ ಜಕ್ಕನಹಳ್ಳಿ ಸಮೀಪ ಲಗೇಜು ಆಟೋಗೆ ಹಿಂಬದಿಯಿಂದ ಬಂದ ಬೊಲೆರೋ ವಾಹನವು ಡಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧರೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಬಿದರಕೊಪ್ಪ ತಾಂಡ ವಾಸಿ ರಾಮ್‌ಜಿ ನಾಯ್ಕ (72) ಮೃತ ದುರ್ದೈವಿ.
ತೊಟ್ಟಿಲು ಶಾಸ್ತ್ರ ಕಾರ್ಯಕ್ರಮಕ್ಕಾಗಿ ಆಟೋದಲ್ಲಿ ಬಿದರಕೊಪ್ಪ ತಾಂಡದಿಂದ ಎಳನೀರುಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ 12 ಮಂದಿ ಗಾಯಗೊಂಡಿದ್ದು, ಆಟೋದಲ್ಲಿದ್ದವರೆಲ್ಲ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ, ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಇನ್ನು ಆಟೋದಲ್ಲಿ ಕಾಲು ಹೊರಕ್ಕೆ ಹಾಕಿ ಕುಳಿತಿದ್ದವರ ಕಾಲಿಗೆ ಬೊಲೆರೋ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದಾರೆ. ಹಲವರನ್ನು ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: Road Accident: ಕಾರಿಗೆ ಗುದ್ದಿ ಪರಾರಿಯಾದ ಲಾರಿ ಚಾಲಕ, ಬೈಕ್‌ಗೆ ಗುದ್ದಿ ಮೂವರ ಜೀವ ತೆಗೆದ
ಭೀಕರ ಅಪಘಾತದಲ್ಲಿ ಸವಾರ ಸಾವು
ಕೊಡಗಿನ ನಾಪೋಕ್ಲು-ಮೂರ್ನಾಡು ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸ್ಕೂಟರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೂರ್ನಾಡು ರಸ್ತೆಯ ಹೊದವಾಡ ಗ್ರಾಮದ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ. ನಾಪೋಕ್ಲುವಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಪ್ಪಾಜಿ (19) ಮೃತ ದುರ್ದೈವಿ. ಸ್ಕೂಟರ್‌ನ ಹಿಂಬದಿ ಸವಾರನಿಗೂ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಾಫೋಕ್ಲು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕ್ರೈಂ
Me too case: ಮೀಟೂ ಪ್ರಕರಣದಲ್ಲಿ ನಟಿ ಶೃತಿ ಹರಿಹರನ್‌ಗೆ ನೋಟಿಸ್
ತಮ್ಮ ಮೀಟೂ ಪ್ರಕರಣದಲ್ಲಿ ಪೊಲೀಸರು ನೀಡಿದ ಬಿ ರಿಪೋರ್ಟ್ ಚಾಲೆಂಜ್ ಮಾಡಿದ್ದ ಶೃತಿ ಹರಿಹರನ್‌ಗೆ, ಸಾಕ್ಷ್ಯಾಧಾರ ನೀಡುವಂತೆ ನೋಟಿಸ್ ಕೊಡಲಾಗಿದೆ.
ಬೆಂಗಳೂರು: ನಟಿ ಶೃತಿ ಹರಿಹರನ್ (sruthi hariharan) ಅವರ ಮೀಟೂ ಕೇಸ್‌ಗೆ (Me too case) ಮತ್ತೆ ಟ್ವಿಸ್ಟ್ ದೊರೆತಿದೆ. ಬಿ ರಿಪೋರ್ಟ್ ಚಾಲೆಂಜ್ ಮಾಡಿದ್ದ ಶೃತಿ ಹರಿಹರನ್‌ಗೆ, ಸಾಕ್ಷ್ಯಾಧಾರ ನೀಡುವಂತೆ ನೋಟಿಸ್ ಕೊಡಲಾಗಿದೆ.
2018ರಲ್ಲಿ ಅರ್ಜುನ್ ಸರ್ಜಾ (arjun sarja) ವಿರುದ್ಧ ನಟಿ ಶೃತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು. ತನಿಖೆ ನಡೆಸಿದ್ದ ಕಬ್ಬನ್ ಠಾಣೆಯ ಪೊಲೀಸರು, ಅರ್ಜುನ್ ಸರ್ಜಾ ವಿರುದ್ಧ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು.
ಪೊಲೀಸರು ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಶೃತಿ ಹರಿಹರನ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ನಲ್ಲಿ ಅರ್ಜಿ ಕುರಿತ ವಿಚಾರಣೆ ಬಳಿಕ, ಪೊಲೀಸರಿಗೆ ಈ ಬಗೆಗಿನ ಸಾಕ್ಷ್ಯಾಧಾರ ನೀಡುವಂತೆ ಸೂಚನೆ ನೀಡಲಾಗಿದೆ.
ಏನಿದು ಪ್ರಕರಣ?
‘ವಿಸ್ಮಯ’ ಸಿನಿಮಾ ಚಿತ್ರೀಕರಣ ವೇಳೆ ಲೈಂಗಿಕ ಕಿರುಕುಳ ಆಗಿತ್ತು ಎಂದು ನಟಿ ಶೃತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪಿಸಿದ್ದರು. ವಿಸ್ಮಯ ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಇಬ್ಬರೂ ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ಶೃತಿ ಹರಿಹರನ್ ಆರೋಪ ಹೊರಿಸಿದ ಬಳಿಕ ಸ್ಯಾಂಡಲ್ವುಡ್ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಕೆಲವರು ನಟಿ ಶೃತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಯೂ ಕೂಡ ಈ ಬಗ್ಗೆ ಸಭೆ ನಡೆಸಲಾಗಿತ್ತು.
ಇದನ್ನೂ ಓದಿ: Tanushree Dutta | ಮೀಟೂ ನಂತರ ಕೊಲೆ ಯತ್ನದ ಬಗ್ಗೆ ಭಯಾನಕ ಸತ್ಯ ಬಾಯ್ಬಿಟ್ಟ ನಟಿ ತನುಶ್ರೀ ದತ್ತಾ!
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ದೇಶ18 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
South Cinema24 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ23 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ10 hours ago
Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್ ವರ್ಲ್ಡ್ʼ