Self Harming: ಐಶ್ವರ್ಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಪಿಪಿ ನೇಮಕ, ತಡೆಯಾಜ್ಞೆ ತಂದ ಪ್ರಕರಣಕ್ಕೆ ಮರುಜೀವ - Vistara News

ಕ್ರೈಂ

Self Harming: ಐಶ್ವರ್ಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಪಿಪಿ ನೇಮಕ, ತಡೆಯಾಜ್ಞೆ ತಂದ ಪ್ರಕರಣಕ್ಕೆ ಮರುಜೀವ

Aishwarya Self harming Case: ಡೆತ್‌ ನೋಟ್‌ನಲ್ಲಿ ತನ್ನ ಸಾವಿಗೆ ಕಾರಣರೆಂದು ಅತ್ತೆ, ಮಾವ, ಸೋದರತ್ತೆ, ಸೋದರ ಮಾವ ಸೇರಿ ಒಂಬತ್ತು ಜನರ ಹೆಸರನ್ನು ಐಶ್ವರ್ಯ ಬರೆದಿಟ್ಟಿದ್ದರು. ಚಾರಿತ್ರ್ಯವಧೆ ಮಾಡಿ ಕಿರುಕುಳ ನೀಡಿದ್ದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದರು.

VISTARANEWS.COM


on

self harming Aishwarya case
ಪತಿ ಜೊತೆಗೆ ಐಶ್ವರ್ಯ. ಒಳಚಿತ್ರದಲ್ಲಿ ನೂತನ ಪಿಪಿ ಶ್ಯಾಮ್ ಸುಂದರ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹೈಕೋರ್ಟ್‌ನಿಂದ (High Court) ತನಿಖೆಗೆ ತಡೆಯಾಜ್ಞೆ (Stay order) ತರಲಾದ ಮಹಿಳೆ ಆತ್ಮಹತ್ಯೆ (Self Harming) ಪ್ರಕರಣದಲ್ಲಿ ನೂತನ ಪಬ್ಲಿಕ್‌ ಪ್ರಾಸಿಕ್ಯೂಟರ್‌ (Public Prosecutor) ನೇಮಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಬಿಇ ಪದವೀಧರೆ, ವಿವಾಹಿತೆ ಐಶ್ವರ್ಯ ಆತ್ಮಹತ್ಯೆ (Aishwarya Self harming Case) ಪ್ರಕರಣದಲ್ಲಿ ಸರ್ಕಾರದ ಪರ ಹೈಕೋರ್ಟ್‌ಗೆ ಹಿರಿಯ ವಕೀಲ ಶ್ಯಾಮ್ ಸುಂದರ್ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ರಾಜ್ಯ ಸರ್ಕಾರ ನೇಮಿಸಿದೆ.

2023ರ ಅಕ್ಟೋಬರ್ 26ರಂದು ಐಶ್ವರ್ಯ ಗೋವಿಂದರಾಜ ನಗರದ ತಮ್ಮ ತಂದೆಯ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಕ್ಷಿಣೆ ಕಿರುಕುಳ ಆರೋಪದಡಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಡೆತ್‌ ನೋಟ್‌ನಲ್ಲಿ ತನ್ನ ಸಾವಿಗೆ ಕಾರಣರೆಂದು ಅತ್ತೆ, ಮಾವ, ಸೋದರತ್ತೆ, ಸೋದರ ಮಾವ ಸೇರಿ ಒಂಬತ್ತು ಜನರ ಹೆಸರನ್ನು ಐಶ್ವರ್ಯ ಬರೆದಿಟ್ಟಿದ್ದರು. ಚಾರಿತ್ರ್ಯವಧೆ ಮಾಡಿ ಕಿರುಕುಳ ನೀಡಿದ್ದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದರು.

ಮಾವ ಗಿರಿಯಪ್ಪ, ಅತ್ತೆ ಸೀತಮ್ಮ, ಪತಿ ರಾಜೇಶ್, ನಾದಿನಿ ತಸ್ಮೇ, ಸೋದರತ್ತೆ ಗೀತಾ, ಸೋದರ ಮಾವ ರವೀಂದ್ರನಾಥ್, ಸೋದರ ಅತ್ತೆ ಮಗಳು ಲಿಪಿ, ಚಿಕ್ಕಮ್ಮ ಶಾಲಿನಿ ಓಂಪ್ರಕಾಶ್, ಚಿಕ್ಕಪ್ಪ ಓಂಪ್ರಕಾಶ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಒಂಬತ್ತು ಆರೋಪಿಗಳು ಹೈಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದರು. ಆತ್ಮಹತ್ಯೆ ಪ್ರಕರಣದ ತನಿಖೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದರು.

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ತಂದೆಯ ಬಂಧನ

ಮೂಡುಬಿದಿರೆ: ಅಪ್ರಾಪ್ತ ವಯಸ್ಸಿನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪದ ಮೇರೆಗೆ ವಿಕೃಕಾಮಿ ತಂದೆಯೊಬ್ಬನನ್ನು ಮೂಡುಬಿದಿರೆ ಪೋಲಿಸರು ಬಂಧಿಸಿದ್ದಾರೆ.

55 ವರ್ಷ ಪ್ರಾಯದ ಕೂಲಿ ಕಾರ್ಮಿಕ ಬಂಧಿತನಾಗಿದ್ದು, ಈತ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಗಳ ಮೇಲೆ ಆರು ತಿಂಗಳ ಹಿಂದೆ ಮನೆಯಲ್ಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಗಳು 6 ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ.

ಈ ಬಗ್ಗೆ ಬಾಲಕಿಯ ತಂದೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ಬೇರೆಯವರ ಹೆಸರು ಹೇಳಿದ್ದನೆನ್ನಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿ ಮೂಲತಃ ಕಾರ್ಕಳದವನಾಗಿದ್ದು ದಶಕಗಳ ಹಿಂದೆ ಮೂಡುಬಿದಿರೆ ತಾಲೂಕಿನ ಗ್ರಾಮವೊಂದರ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ನೆಲೆಸಿದ್ದ.

ಇದನ್ನೂ ಓದಿ: Murder Case: ಇನ್ಶೂರೆನ್ಸ್‌ ಹಣಕ್ಕಾಗಿ ದಂಪತಿಯ ಖತರ್ನಾಕ್ ಪ್ಲಾನ್, ತನ್ನನ್ನೇ ಹೋಲುವ ವ್ಯಕ್ತಿಯ ಕೊಲೆ ಮಾಡಿ ಡ್ರಾಮಾ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan : ಕೊಲೆ ಕೇಸ್‌ನಲ್ಲಿ ದರ್ಶನ್‌ ಮೂಲಕವೇ ಪವಿತ್ರಾಗೌಡ ಲಾಕ್‌; ಜತೆಗೆ ಇದ್ದ ಹುಡುಗರನ್ನು ನಂಬಿ ಕೆಟ್ಟೆ ಎಂದ ನಟ!

Actor Darshan : ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ ಬಂಧನವಾಗಿದೆ. ಈ ಮಧ್ಯೆ ನಟನ ಗೆಳತಿ ಪವಿತ್ರಾ (Pavithra Gowda) ಲಾಕ್‌ ಆಗಿದ್ದೆ ರೋಚಕವಾಗಿದೆ. ಇನ್ನೂ ತನ್ನ ಜತೆಗೆ ಇದ್ದ ಹುಡುಗರನ್ನು ನಂಬಿಯೇ ನಾನು ಕೆಟ್ಟಿದ್ದು ಎಂದು ದರ್ಶನ್‌ ಅಳಲು ತೊಡಿಕೊಂಡಿದ್ದಾರೆ. ಇಷ್ಟಕ್ಕೂ ಬಂಧನದ ದಿನ ಏನೆಲ್ಲ ಆಯಿತು ಎಂಬ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

VISTARANEWS.COM


on

By

Actor darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌(Actor Darshan) ಗ್ಯಾಂಗ್‌ ಜೈಲುಪಾಲಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪೊಲೀಸರು ಶುರು ಮಾಡಿದ್ದಾರೆ. ಈ ಮಧ್ಯೆ ಪೊಲೀಸರ ಬಳಿ ದರ್ಶನ್‌ ಆಪ್ತೆ ಪವಿತ್ರಾಗೌಡ ಲಾಕ್ ಆಗಿದ್ದೆ ರೋಚಕವಾಗಿದೆ.

ದರ್ಶನ್ ಬಂಧನಕ್ಕೆ ಹೊರಟಿದ್ದ ವೇಳೆಯೇ ಪೊಲೀಸರು ಪವಿತ್ರಾಗೂ ಬಲೆ ಬೀಸಿದ್ದರು. ಜೂನ್ 11ರ ಬೆಳಗ್ಗೆ ದರ್ಶನ್ ಬಂಧಿಸಲು ಮೈಸೂರಿಗೆ ತೆರಳಿದ್ದಾಗ, ಈ ವೇಳೆ ಎರಡು ತಂಡ ರಚಿಸಿ ಪವಿತ್ರಾ ಗೌಡಗೂ ಬಲೆ ಬೀಸಿದ್ದರು. ಆದರೆ ಪೊಲೀಸರ ಎರಡೂ ತಂಡಕ್ಕೂ ಚಾಲಾಕಿ ಪವಿತ್ರಾ ಸಿಕ್ಕಿರಲಿಲ್ಲ.

ಹೀಗಾಗಿ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದ ಪೊಲೀಸರು ಮೈಸೂರಿನಲ್ಲೇ ದರ್ಶನ್ ಮೂಲಕವೇ ಪವಿತ್ರಾಳನ್ನು ಸಂಪರ್ಕಿಸಿದ್ದರು. ದರ್ಶನ್ ಫೋನ್‌ನಿಂದಲೇ ಪವಿತ್ರಾಗೌಡಗೆ ಫೋನ್ ಮಾಡಿಸಿ ಎಲ್ಲೂ ಹೋಗದಂತೆ ಸೂಚನೆ ನೀಡಲಾಗಿತ್ತು. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗು ಎಂದು ದರ್ಶನ್‌ ಪವಿತ್ರಾಗೆ ಹೇಳಿದ್ದರು. ಹೀಗಾಗಿ ದರ್ಶನ್ ಮಾತಿನಂತೆ ಪೊಲೀಸ್ ಠಾಣೆಗೆ ಪವಿತ್ರಾ ಹಾಜರಾಗಿದ್ದರು. ಪವಿತ್ರಾ ಕಾಮಾಕ್ಷಿಪಾಳ್ಯ ಠಾಣೆಯ ಬದಲು ಆರ್ ಆರ್ ನಗರ ಠಾಣೆಗೆ ಹಾಜರಾಗಿದ್ದಳು. ತದನಂತರ ಕಾಮಾಕ್ಷಿಪಾಳ್ಯ ಪೊಲೀಸರು ಕರೆತಂದು ಬಂಧಿಸಿದ್ದರು.

ಇದನ್ನೂ ಓದಿ:Actor Darshan: ದರ್ಶನ್‌ಗೆ ಸದ್ಯಕ್ಕಿಲ್ಲ ಮನೆಯೂಟದ ಭಾಗ್ಯ; ಅರ್ಜಿ ವಿಚಾರಣೆ ಸೆ.5ಕ್ಕೆ ಮುಂದೂಡಿದ ಹೈಕೋರ್ಟ್

ಠಾಣೆಗೆ ಬಂದ ಕೂಡಲೇ ಪೊಲೀಸರ ಮುಂದೆ ದರ್ಶನ್ ಹೇಳಿದ್ದೇನು?

ಮೈಸೂರಿನಲ್ಲಿ ಬಂಧಿಸಿ ದರ್ಶನ್‌ನನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಠಾಣೆಗೆ ಬರುತ್ತಿದ್ದಂತೇ ದರ್ಶನ್ ಹೇಳಿದ ಮೊದಲ ಮಾತೇನು ಗೊತ್ತಾ? ನನ್ನ ಜತೆ‌ ಇದ್ದ ಈ ಹುಡುಗರಿಂದ ನಾನು ಹಾಳಾದೆ ಎಂದಿದ್ದರಂತೆ. ಹುಡುಗರನ್ನು ನಂಬಿ ನಾನು ಕೆಟ್ಟೆ ಎಂದು ಹೇಳಿಕೊಂಡಿದ್ದರಂತೆ.

ಚಾರ್ಜ್‌ಶೀಟ್‌ ಸಲ್ಲಿಸಲು ತಯಾರಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಂದ ತಯಾರಿ ನಡೆದಿದೆ. ಇಲ್ಲಿಯವರೆಗೆ ಸಾಕ್ಷ್ಯ ಕಲೆ‌ ಹಾಕಿ,ಸ್ಥಳ ಮಹಜರು ನಡೆಸಿ,ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಬರೋಬ್ಬರಿ 52 ಸ್ಥಳ ಮಹಜರು,150 ಜನರ ಹೇಳಿಕೆ ದಾಖಲಿಸಿದ್ದಾರೆ. ಚಿತ್ರದುರ್ಗದ ಕಿಡ್ನ್ಯಾಪ್ ಜಾಗದಿಂದ ಹಿಡಿದು ಮೃತದೇಹ ಎಸೆದಿದ್ದ ಜಾಗದವರೆಗೆ ಮಹಜರ್ ಮಾಡಲಾಗಿದೆ.

ಪಟ್ಟಣಗೆರೆ ಶೆಡ್, ದರ್ಶನ್ ನಿವಾಸ, ಪವಿತ್ರಾ ಗೌಡ ನಿವಾಸ ಸೇರಿದಂತೆ ಸ್ಟೋನಿ ಬ್ರೂಕ್ ಪಬ್, ಮೃತ ದೇಹ ಎಸೆದ ಸತ್ವ ಅಪಾರ್ಟ್ ಮೆಂಟ್ ಎದುರಿನ‌ ಕಾಲುವೆ ಸೇರಿದಂತೆ ಕೊಲೆಯ ನಂತರದ‌ ಮಾತುಕತೆ ಜಾಗಗಳು ಸೇರಿ 52 ಕಡೆ ಸ್ಥಳ ಮಹಜರು ಮಾಡಲಾಗಿದೆ. ಪ್ರಕರಣದಲ್ಲಿ ಸಾಕ್ಷಿಯಾಗಿರುವ 150 ಜನರ‌ ಹೇಳಿಕೆ‌ ದಾಖಲಾಗಿದೆ.

ಘಟನೆ ಸಂಬಂಧಿಸಿದಂತೆ ಆರೋಪಿಗಳು ಎಲ್ಲೆಲ್ಲಿ ತೆರಳಿದ್ದರು. ಯಾರ್ಯಾರ ಸಂಪರ್ಕ ಮಾಡಿದ್ದರು? ಪೆಟ್ರೋಲ್ ಬಂಕ್ ಸಿಬ್ಬಂದಿ‌, ಹೋಟೆಲ್ ಸಿಬ್ಬಂದಿ, ಸಹಚರರ ಹೇಳಿಕೆ ಸೇರಿ ಒಟ್ಟಾರೆಯಾಗಿ ಬರೋಬ್ಬರಿ 150 ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಾಗಿದೆ.

ಪುಸ್ತಕದ ಮೊರೆ ಹೋದ ದರ್ಶನ್‌

ನಟ ದರ್ಶನ್ ಜೈಲಿನಲ್ಲಿ ಕಳೆದ 64 ದಿನದಿಂದ ಮಂಕಾಗಿ ಕಾಲ ಕಳೆಯುತ್ತಿದ್ದಾರೆ. ನಿಧಾನವಾಗಿ ಜೈಲಿನ ಪರಿಸರಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಬೇಜಾರು ಕಳೆಯೋದಕ್ಕೆ ವಾಲಿಬಾಲ್ ಆಟಕ್ಕೆ ಇಳಿದಿದ್ದಾರೆ. ಈಗಾಗಲೇ ಜೈಲೊಳಗಡೆ ಪುಸ್ತಕದ ಮೊರೆ ಹೋಗಿದ್ದು, ಜತೆಗೆ ಬೇಜಾರು ಕಳೆಯಲು ವಾಲಿಬಾಲ್ ಕೂಡ ಆಡುತ್ತಿದ್ದಾರೆ. ಜೈಲಿನ‌ ಇತರೆ ಖೈದಿಗಳ‌ ಜತೆ ಸೇರಿ ವಾಲಿಬಾಲ್ ಆಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Karkala Shocker: ಹಿಂದೂ ಯುವತಿ ಮೇಲೆ ಅತ್ಯಾಚಾರ ಎಸಗಿದ ಅಲ್ತಾಫ್‌ಗೆ ಕಠಿಣ ಶಿಕ್ಷೆಯಾಗಲಿ ಎಂದ ಮುಸ್ಲಿಂ ಒಕ್ಕೂಟ

Karkala Shocker: ಕಾರ್ಕಳದಲ್ಲಿ ಹಿಂದೂ ಯುವತಿಗೆ ಮತ್ತು ಬರಿಸುವ ಔಷಧ ನೀಡಿ ಮುಸ್ಲಿಂ ಯುವಕ ಅತ್ಯಾಚಾರ ಎಸಗಿದ ಪ್ರಕರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವೂ ಪ್ರಕರಣವನ್ನು ಖಂಡಿಸಿದೆ. ಹಿಂದೂ ಸಹೋದರಿ ಮೇಲಿನ ಅತ್ಯಾಚಾರವನ್ನು ಖಂಡಿಸುತ್ತೇವೆ ಎಂದು ಮುಸ್ಲಿಂ ಜಿಲ್ಲಾ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Karkala Shocker
Koo

ಉಡುಪಿ: ಕಾರ್ಕಳದಲ್ಲಿ (Karkala News) ಹಿಂದೂ ಯುವತಿಗೆ (Hindu Girl) ಮತ್ತು ಬರಿಸುವ ಔಷಧ ನೀಡಿ ಮುಸ್ಲಿಂ ಯುವಕ ಅತ್ಯಾಚಾರ ಎಸಗಿದ (Physical Abuse) ಪ್ರಕರಣದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವೂ ಪ್ರಕರಣವನ್ನು ಖಂಡಿಸಿದೆ. ಹಿಂದೂ ಸಹೋದರಿ ಮೇಲಿನ ಅತ್ಯಾಚಾರವನ್ನು ಖಂಡಿಸುತ್ತೇವೆ ಎಂದು ಮುಸ್ಲಿಂ ಜಿಲ್ಲಾ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಪ್ರತಿಕ್ರಿಯಿಸಿದ್ದಾರೆ.

ʼʼಯುವತಿಯನ್ನ ಕರೆದುಕೊಂಡು ಹೋಗಿ ಮಾದಕ ದ್ರವ್ಯ ನೀಡಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರ ಮಾಡಿದ ವಿಕೃತ ಮನಸ್ಸಿನ ಕಾಮುಕ ಅಲ್ತಾಫ್ ಕಠಿಣ ಶಿಕ್ಷೆಯಾಗಲಿ. ಕಾರ್ಕಳದಲ್ಲಿ ನಾವು ಸೌಹಾರ್ದತೆಯನ್ನು ಬಯಸುತ್ತೇವೆ. ಕಾರ್ಕಳಕ್ಕೆ ಸೌಹಾರ್ದತೆಯ ಇತಿಹಾಸವಿದೆʼʼ ಎಂದು ಅವರು ತಿಳಿಸಿದ್ದಾರೆ.

ʼʼಇದುವರೆಗೂ ಕಾರ್ಕಳದಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದೇವೆ. ಮುಂದೆಯೂ ಕಾಪಾಡಿಕೊಳ್ಳುತ್ತೇವೆ. ಹೊರ ಜಿಲ್ಲೆಯಿಂದ ಬಂದಂತಹ ಅಲ್ತಾಫ್‌ನಂತಹ ವ್ಯಕ್ತಿಗಳು ಬಾಡಿಗೆ ಮನೆಯಲ್ಲಿ ಉಳಿದು ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ತಾಫ್ ಈ ಹಿಂದೆ ಬಂಗ್ಲೆ ಗುಡ್ಡೆ ಪ್ರದೇಶದಲ್ಲಿ ಇಂತಹದ್ದೇ ಕೃತ್ಯ ಎಸಗಲು ಹೋಗಿ ಯುವಕರಿಂದ ಪೆಟ್ಟು ತಿಂದಿದ್ದ. ಇದೀಗ ಮತ್ತೆ ನೀಚ ಕೃತ್ಯ ಎಸಗಿದ್ದಾನೆʼʼ ಎಂದು ಮೊಹಮ್ಮದ್ ಶರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼʼಈ ಕೃತ್ಯ ಮಾನವ ಸಮುದಾಯಕ್ಕೆ ಮಾಡಿದಂತಹ ಘೋರ ಅನಾಚಾರ. ಕೇವಲ ಹಿಂದೂ ಸಮಾಜವಲ್ಲ ಪೂರ್ಣ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಪ್ರಕರಣದಲ್ಲಿ ಮಾದಕ ದ್ರವ್ಯ ಬಳಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸುಲಭದಲ್ಲಿ ಸಿಗುವಂತಿದೆ. ಮಾದಕ ದ್ರವ್ಯ ಜಾಲದ ತಂಡವನ್ನ ಪತ್ತೆ ಹಚ್ಚಿ ಅವರಿಗೂ ಕಠಿಣ ಶಿಕ್ಷೆಯನ್ನು ನೀಡಬೇಕುʼʼ ಎಂದು ಆಗ್ರಹಿಸಿದ್ದಾರೆ.

ʼʼಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನ ಪತ್ತೆ ಹಚ್ಚಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ಇಂದು ನಾವು ನಮ್ಮ ಸಮುದಾಯದಿಂದಲೇ ಅಲ್ತಾಫ್‌ನನ್ನು ಹೊರಗಿಡುವ ನಿರ್ಣಯವನ್ನು ಕೈಗೊಂಡಿದ್ದೇವೆ. ಇಂತಹ ವ್ಯಕ್ತಿಗಳಿಂದ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು. ಇನ್ನು ನಮ್ಮ ಸಮುದಾಯದ ಯಾವುದೇ ವಕೀಲರು ಆರೋಪಿಯ ಪರವಾಗಿ ವಾದ ಮಾಡಬಾರದು. ಇದು ನಮ್ಮ ಮನವಿ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕುʼʼ ಎಂದು ಮೊಹಮ್ಮದ್ ಶರೀಫ್ ಹೇಳಿದ್ದಾರೆ.

ಇದನ್ನೂ ಓದಿ: Love Jihad: ಹಿಂದೂ ಯುವತಿಯ ಕರೆದೊಯ್ದ ಮುಸ್ಲಿಂ ಯುವಕ; ಕಾರ್ಕಳ ಪ್ರಕ್ಷುಬ್ಧ

ಏನಿದು ಪ್ರಕರಣ?

ಇನ್‌ಸ್ಟಾಗ್ರಾಂನಲ್ಲಿ (Instagram) ಸ್ನೇಹ ಬೆಳೆಸಿ ಹಿಂದೂ ಯುವತಿಯನ್ನು ಕರೆದೊಯ್ದ ಮುಸ್ಲಿಂ ಯುವಕ ಅಲ್ತಾಫ್, ಆಕೆಗೆ ಬಿಯರ್‌ನಲ್ಲಿ ಮತ್ತು ಬರಿಸುವ ಔಷಧ ಸೇರಿಸಿ ಕುಡಿಸಿ ಅತ್ಯಾಚಾರ ಎಸಗಿದ್ದ. ಇದಕ್ಕೆ ಆತನ ಇಬ್ಬರು ಸ್ನೇಹಿತರು ಸಹಕರಿಸಿದ್ದು, ಸಾಮೂಹಿಕ ಅತ್ಯಾಚಾರ ನಡೆದಿದೆಯೇ ಎಂಬುದು ಇನ್ನೂ ದೃಢಪಡಬೇಕಿದೆ. ಸದ್ಯ ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಅಲ್ತಾಫ್ ಮತ್ತು ಇಬ್ಬರ ವಿರುದ್ಧ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ರೇಪ್ ಮಾಡಿದ ಆರೋಪ ಪ್ರಕರಣ ದಾಖಲಾಗಿದೆ. ಮಧ್ಯಾಹ್ನ ಆಕೆಯನ್ನು ಕರೆದೊಯ್ದಿದ್ದ ಅಲ್ತಾಫ್, ಮಾದಕ ಪಾನೀಯ ಕುಡಿಸಿ ಮತ್ತು ಬರಿಸಿ ಸಂಜೆಯವರೆಗೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

Continue Reading

ಕ್ರೈಂ

Chain snatching Case: ಆನ್‌ಲೈನ್‌ ಬೆಟ್ಟಿಂಗ್ ಚಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿದ; ಚೈನ್ ಸ್ನಾಚಿಂಗ್‌ಗೆ ಇಳಿದು ಸಿಕ್ಕಿಬಿದ್ದ

Chain snatching Case: ಆನ್‌ಲೈನ್‌ ಬೆಟ್ಟಿಂಗ್ ಚಟ ಮೈಗೂಡಿಸಿಕೊಂಡು ಮೈತುಂಬ ಸಾಲ ಮಾಡಿಕೊಂಡಿದ್ದವನೊಬ್ಬ ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದು ಇದೀಗ ಸಿಕ್ಕಿಬಿದ್ದಿದ್ದಾನೆ. ಕತ್ರಿಗುಪ್ಪೆ ನಿವಾಸಿ ಕುಮಾರ್ ಬಂಧಿತ. ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಗೇಮ್ ಆಡುತ್ತಿದ್ದ ಆರೋಪಿ ಕುಮಾರ್ ಈ ವೇಳೆ ಸಾಕಷ್ಟು ಹಣ ಕಳೆದುಕೊಂಡಿದ್ದ. ಬೆಟ್ಟಿಂಗ್‌ ಕಾರಣಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲ ತೋರಿಸಲು ಸರಗಳ್ಳತನಕ್ಕೆ ಇಳಿದಿದ್ದ.

VISTARANEWS.COM


on

Chain snatching Case
Koo

ಬೆಂಗಳೂರು: ಆನ್‌ಲೈನ್‌ ಬೆಟ್ಟಿಂಗ್ ಚಟಕ್ಕೆ ಬಿದ್ದವರು ಹಣಕ್ಕಾಗಿ ಯಾವ ಅಡ್ಡ ದಾರಿಯನ್ನಾದರೂ ಹಿಡಿಯಲು ತಯಾರಿರುತ್ತಾರೆ ಎನ್ನುವುದಕ್ಕೆ ಈತನೇ ಉತ್ತಮ ನಿದರ್ಶನ. ಹೌದು, ಆನ್‌ಲೈನ್‌ ಬೆಟ್ಟಿಂಗ್ ಚಟ ಮೈಗೂಡಿಸಿಕೊಂಡು ಮೈತುಂಬ ಸಾಲ ಮಾಡಿಕೊಂಡಿದ್ದವನೊಬ್ಬ ಮಾಡಿದ ಸಾಲ ತೀರಿಸಲು ಸರಗಳ್ಳತನಕ್ಕೆ (Chain snatching case)  ಇಳಿದು ಇದೀಗ ಸಿಕ್ಕಿಬಿದ್ದಿದ್ದಾನೆ. ಕತ್ರಿಗುಪ್ಪೆ ನಿವಾಸಿ ಕುಮಾರ್ ಬಂಧಿತ ಆರೋಪಿ.

ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಗೇಮ್ ಆಡುತ್ತಿದ್ದ ಆರೋಪಿ ಕುಮಾರ್ ಈ ವೇಳೆ ಸಾಕಷ್ಟು ಹಣ ಕಳೆದುಕೊಂಡಿದ್ದ. ಬೆಟ್ಟಿಂಗ್‌ ಕಾರಣಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಹಣ ಸಾಲ ಕೊಟ್ಟವರು ವಾಪಾಸ್ ನೀಡುವಂತೆ ಕೇಳತೊಡಗಿದಾಗ ಕುಮಾರ್‌ ಸರಗಳ್ಳತನಕ್ಕೆ ಇಳಿದಿದ್ದ.

ವಿಳಾಸ ಕೇಳುವ ನೆಪ

ಸರಗಳ್ಳತನಕ್ಕೆ ಕುಮಾರ್‌ ಖತರ್ನಾಕ್‌ ಯೋಜನೆ ರೂಪಿಸಿದ್ದ. ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಸರಕಳವು ಮಾಡುತ್ತಿದ್ದ. ಗಿರಿನಗರದ ಬೈರಪ್ಪ ಲೇಔಟ್‌ನಲ್ಲಿ ಕೃತ್ಯ ಎಸಗಿದ್ದ ವೇಳೆ ಸಿಕ್ಕಿಬಿದ್ದಿದ್ದ. ಸದ್ಯ ಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರಿಂದ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಕುಮಾರ್‌ ಮಾಡಿದ ಸಾಲ ತೀರಿಸಲು ಆಟೋವನ್ನೂ ಅಡವಿಟ್ಟಿದ್ದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಸಾಲದ ಸಂಗತಿ ಬೆಳೆಕಿಗೆ ಬಂದಿದ್ದು, ತನಿಖೆ ಮುಂದುವರಿದಿದೆ.

ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದವ ಬಂಧನ

ಬೆಂಗಳೂರು: ಸುಲಭವಾಗಿ ಹಣ ಮಾಡಲು ಖತರ್ನಾಕ್ ಪ್ಲ್ಯಾನ್‌ ಮಾಡಿದ್ದ ವಂಚಕನೊಬ್ಬ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದು ಕಾರು ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಜಮೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಖತರ್ನಾಕ್ ಪ್ಲ್ಯಾನ್‌?

ಹಾಗಾದರೆ ಈತ ಮಾಡುತ್ತಿದ್ದ ಖತರ್ನಾಕ್ ಕೆಲಸ ಏನು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಕಾರು ಚಾಲಕರೇ ಈತನ ಟಾರ್ಗೆಟ್. ಕಾರಿಗೆ ಬೇಕಂದೇ ಬೈಕ್ ಟಚ್ ಮಾಡಿ ಹಣ ಕೀಳುತ್ತಿದ್ದ. ʼʼಕಾರು ಹೋಗುವಾಗ ಜಮೀಲ್‌ ತನ್ನ ಬೈಕ್‌ ಅನ್ನು ಬೇಕಂತಲೇ ಟಚ್ ಮಾಡುತ್ತಿದ್ದ. ಬಳಿಕ ದೂರು ಕೊಡುತ್ತೇನೆ ಎಂದು ಬೆದರಿಸಿ ಚಾಲಕರಿಂದ ಹಣ ಕೀಳುತ್ತಿದ್ದʼʼ ಎಂದು ಪೊಲೀಸರು ತಿಳಿಸಿದ್ದಾರೆ. ʼʼಕಾರು ಟಚ್ ಅಗಿದೆ ಎಂದು ಮಧ್ಯ ರಸ್ತೆಯಲ್ಲಿ ಅಡ್ಡ ಹಾಕುತ್ತಿದ್ದ. ಡ್ಯಾಮೇಜ್ ಸರಿಪಡಿಸಲು ದುಡ್ಡು ಕೊಡಿ ಎಂದು ಬಲ ಪ್ರಯೋಗ ಮಾಡುತ್ತಿದ್ದ. ದುಡ್ಡು ಕೊಡದೆ ಹೋದ್ರೆ ದೂರು ಕೊಡ್ತೀನಿ ಎಂದು ಹೆದರಿಸುತ್ತಿದ್ದʼʼ ಎಂದು ಹೇಳಿದ್ದಾರೆ.

ಈತನ ಮೇಲೆ ಇದುವರೆಗೆ ಒಟ್ಟು 17 ಪ್ರಕರಣ ದಾಖಲಾಗಿದೆ. ರಾಜ್ಯದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ವಿವಿಧ ಪ್ರಕರಣಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಕ್ಕಿ ಬಿದ್ದಿದ್ದು ಹೇಗೆ?

ಜಯನಗರ ಠಾಣಾ ವ್ಯಾಪ್ತಿಯಲ್ಲೂ ಕೂಡ ಇದೇ ರೀತಿ ಮಾಡಿ 30,000 ರೂ. ಪಡೆದಿದ್ದ ಜಮೀಲ್‌ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಈ ಬಗ್ಗೆ ಜಯನಗರ ಠಾಣೆಗೆ ಕಾರು ಚಾಲಕ ದೂರು ಕೊಟ್ಟಿದ್ದ. ಹೀಗಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Chain snatching Case : ಜಾಬ್‌ಗೆ ಹೋಗುವ ಹೆಣ್ಮಕ್ಕಳೇ ಟಾರ್ಗೆಟ್‌‌ ; ಸರಗಳ್ಳರ ಗ್ಯಾಂಗ್‌ಗೆ ಸಖತ್ ಗೂಸಾಇದನ್ನೂ ಓದಿ:

Continue Reading

ಕರ್ನಾಟಕ

Wild Animals Attack: ಶಿವಮೊಗ್ಗದಲ್ಲಿ ಕಾಡಾನೆ ದಾಳಿಗೆ ರೈತ ಬಲಿ

Wild Animals Attack: ರಾಜ್ಯದ ವಿವಿಧ ಭಾಗಗಳಲ್ಲಿ ಕಾಡಾನೆ ದಾಳಿ ಹೆಚ್ಚಾಗಿದ್ದು, ಇದೀಗ ಶಿವಮೊಗ್ಗದಲ್ಲಿ ರೈತರೊಬ್ಬರು ಬಲಿಯಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಆಲದೇವರಹೊಸೂರು ಗ್ರಾಮದ ಹನುಮಂತಪ್ಪ (40) ಎಂಬವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಅಡಿಕೆ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ.

VISTARANEWS.COM


on

Wild Animals Attack
ಸಾಂದರ್ಭಿಕ ಚಿತ್ರ
Koo

ಶಿವಮೊಗ್ಗ: ರಾಜ್ಯದ ವಿವಿಧ ಭಾಗಗಳಲ್ಲಿ ಕಾಡಾನೆ ದಾಳಿ ಹೆಚ್ಚಾಗಿದ್ದು, ಇದೀಗ ಶಿವಮೊಗ್ಗದಲ್ಲಿ ರೈತರೊಬ್ಬರು ಬಲಿಯಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಆಲದೇವರಹೊಸೂರು ಗ್ರಾಮದ ಹನುಮಂತಪ್ಪ (40) ಎಂಬವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ (Wild Animals Attack).

ಅಡಿಕೆ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಹನುಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೆಟ್ಟಿಹಳ್ಳಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಟ್ಯಾಂಕರ್-ಲಾರಿ ನಡುವೆ ಭೀಕರ ಅಪಘಾತ; ಓರ್ವ ಸಾವು

ಕೊಡಗು: ಟ್ಯಾಂಕರ್ ಹಾಗೂ ಲಾರಿ ನಡುವೆ ಶನಿವಾರ ನಡೆದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಅಪಘಾತ ಸಂಭವಿಸಿದ್ದು, ಲಾರಿಯಲ್ಲಿದ್ದ ಸುಂಟಿಕೊಪ್ಪ ನಿವಾಸಿ ಲೋಡರ್ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಯಲ್ಲಿದ್ದ ಮತ್ತೋರ್ವನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕುಶಾಲನಗರ ಕಡೆಯಿಂದ ಸುಂಟಿಕೊಪ್ಪಕ್ಕೆ ಬರುತ್ತಿದ್ದ ಲಾರಿ ಮತ್ತು ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಪರಸ್ಪರ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಲಾರಿ ಚಾಲಕ 7ನೇ ಹೊಸಕೋಟೆಯ ಜಬ್ಬಾರ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇವರನ್ನು ಕುಶಾಲನಗರ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ, ಕುಶಾಲನಗರ ತಾಲೂಕಿನ ಗುಡ್ಡೆಹೊಸೂರಿನಲ್ಲಿ ಈ ಅಪಘಾತ ನಡೆದಿದೆ.

ಸರಗಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ

ಮಂಡ್ಯ: ಹಾಡಹಗಲೇ ಸರಗಳ್ಳತನಕ್ಕೆ ಯತ್ನಿಸಿ ಸರಗಳ್ಳನೊಬ್ಬ ಸಿಕ್ಕಿಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಕೆ‌.ಆರ್‌.ಪೇಟೆ ಪಟ್ಟಣದಲ್ಲಿ ನಡೆದಿದೆ. ಕೃಷ್ಣಾಪುರ ಗ್ರಾಮದ ಶ್ರೀನಿವಾಸ ಸಿಕ್ಕಿ ಬಿದ್ದ ಸರಗಳ್ಳ‌. ಅಂಗಡಿಗೆ ಸಿಗರೇಟ್ ಕೊಳ್ಳುವ ನೆಪದಲ್ಲಿ ಬಂದಿದ್ದ ಶ್ರೀನಿವಾಸ ಸರಗಳ್ಳತನಕ್ಕೆ ಯತ್ನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಅಂಗಡಿಯಲ್ಲಿದ್ದ ಮಹಿಳೆ ಕತ್ತಿನಿಂದ ಸರ ಕದ್ದ ಶ್ರೀನಿವಾಸ ಪರಾರಿಗೆ ಯತ್ನಿಸಿದ್ದ. ಈ ವೇಳೆ ಮಹಿಳೆಯ ಚೀರಾಟ ಕೇಳಿ ಸ್ಥಳದಲ್ಲಿದ್ದ ಜನರು ಸಹಾಯಕ್ಕೆ ಧಾವಿಸಿದರು. ಬಳಿಕ ಪರಾರಿಗೆ ಯತ್ನಿಸುತ್ತಿದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸಿಕ್ಕಿಬಿದ್ದ ಸರಗಳ್ಳನಿಗೆ ಗೂಸಾ ಕೊಟ್ಟು ಪೊಲೀಸರ ವಶಕ್ಕೆ ನೀಡಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಡಿಕೇರಿಯಲ್ಲಿ ಕಾರು-ಬಸ್‌ ಡಿಕ್ಕಿ

ಕೊಡಗು: ಮಡಿಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 275ರ ಬೋಯಿಕೇರಿಯಲ್ಲಿ ಅಪಘಾತ (Road Accident) ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು‌ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ತಾಯಿ ಮಗುವಿಗೆ ಗಾಯವಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ವೊಂದು ಪ್ರಯಾಣಿಕರನ್ನು ಹೊತ್ತು ಮೈಸೂರಿನಿಂದ ಮಡಿಕೇರಿಗೆ ಬರುತ್ತಿತ್ತು. ಇತ್ತ ಕಾರಿನಲ್ಲಿ ಒಟ್ಟು ಆರು ಮಂದಿ ಕೇರಳದಿಂದ ಊಟಿಗೆ ತೆರಳುತ್ತಿದ್ದರು. ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿದ್ದು, ಕಾರು ಹಾಗೂ ಬಸ್‌ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Wild Animals Attack : ಅತ್ತೆ ಮನೆಗೆ ಬಂದ ಅಳಿಯನ ಅಟ್ಟಾಡಿಸಿದ ಕಾಡಾನೆ! ಮುಂದೇನಾಯ್ತು

Continue Reading
Advertisement
Actor darshan
ಸ್ಯಾಂಡಲ್ ವುಡ್5 mins ago

Actor Darshan : ಕೊಲೆ ಕೇಸ್‌ನಲ್ಲಿ ದರ್ಶನ್‌ ಮೂಲಕವೇ ಪವಿತ್ರಾಗೌಡ ಲಾಕ್‌; ಜತೆಗೆ ಇದ್ದ ಹುಡುಗರನ್ನು ನಂಬಿ ಕೆಟ್ಟೆ ಎಂದ ನಟ!

Western Ghats
ಕರ್ನಾಟಕ30 mins ago

Western Ghats: ಭೂ ಕುಸಿತ ಹಿನ್ನೆಲೆ; ಪಶ್ಚಿಮ ಘಟ್ಟಗಳಲ್ಲಿನ ರೆಸಾರ್ಟ್, ಹೋಮ್ ಸ್ಟೇ, ತೋಟ, ಬಡಾವಣೆ ತೆರವಿಗೆ ಸರ್ಕಾರದ ಆದೇಶ

Israel vs Hezbollah War
ವಿದೇಶ48 mins ago

Israel vs Hezbollah War: ಹೆಜ್ಬುಲ್ಲಾ ಉಗ್ರರ ಅಟ್ಟಹಾಸ; ಲೆಬನಾನ್‌ ಮೇಲೆ ರಾಕೆಟ್​ ದಾಳಿ ಆರಂಭಿಸಿದ ಇಸ್ರೇಲ್​; ಭಯಾನಕ ವಿಡಿಯೊ ಇಲ್ಲಿದೆ

Dhanya Ramkumar-Vicky Varun starrer Kaalapathar to release on September 13
ಸಿನಿಮಾ1 hour ago

Dhanya Ramkumar: ತೆರೆಗೆ ಸಿದ್ಧವಾಯ್ತು ಕಾಲಾಪತ್ಥರ್‌; ಸೆ.13ಕ್ಕೆ ಧನ್ಯಾ ರಾಮ್‌ಕುಮಾರ್- ವಿಕ್ಕಿ ವರುಣ್‌ ನಟನೆ ಮೋಡಿ

Karkala Shocker
ಕರ್ನಾಟಕ1 hour ago

Karkala Shocker: ಹಿಂದೂ ಯುವತಿ ಮೇಲೆ ಅತ್ಯಾಚಾರ ಎಸಗಿದ ಅಲ್ತಾಫ್‌ಗೆ ಕಠಿಣ ಶಿಕ್ಷೆಯಾಗಲಿ ಎಂದ ಮುಸ್ಲಿಂ ಒಕ್ಕೂಟ

Pavel Durov Arrest
ವಿದೇಶ1 hour ago

Pavel Durov Arrest: ಟೆಲಿಗ್ರಾಂ ಸಿಇಒ ಪಾವೆಲ್‌‌ ಫ್ರಾನ್ಸ್‌‌ನಲ್ಲಿ ಬಂಧನ; ಕಾರಣ ಏನು?

CBI Raid
ದೇಶ2 hours ago

CBI Raid: ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸದ ಮೇಲೆ ಸಿಬಿಐ ದಾಳಿ

Israel strike
ವಿದೇಶ2 hours ago

Israel strike: ರಾಕೆಟ್ ದಾಳಿ; ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Rohit Sharma
ಕ್ರೀಡೆ3 hours ago

Rohit Sharma: ಪಾರ್ಕ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್​; ವಿಡಿಯೊ ವೈರಲ್​

Chain snatching Case
ಕ್ರೈಂ3 hours ago

Chain snatching Case: ಆನ್‌ಲೈನ್‌ ಬೆಟ್ಟಿಂಗ್ ಚಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿದ; ಚೈನ್ ಸ್ನಾಚಿಂಗ್‌ಗೆ ಇಳಿದು ಸಿಕ್ಕಿಬಿದ್ದ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ21 hours ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌