Murder Case: ತಾಯಿ, ಹೆಂಡತಿಯನ್ನು ಕೊಂದು ಪರಾರಿಯಾದ ಆಸ್ಪತ್ರೆ ನೌಕರ - Vistara News

ಕ್ರೈಂ

Murder Case: ತಾಯಿ, ಹೆಂಡತಿಯನ್ನು ಕೊಂದು ಪರಾರಿಯಾದ ಆಸ್ಪತ್ರೆ ನೌಕರ

Murder Case: ಮುದ್ಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರನಾದ ದುರಗಪ್ಪನ ಕುಟುಂಬ ಇಲ್ಲಿನ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು. ಪ್ರತಿನಿತ್ಯ ಮನೆಯಲ್ಲಿ ಕಲಹ ನಡೆಯುತ್ತಿತ್ತು. ದುರಗಪ್ಪ ಮದ್ಯ ಸೇವಿಸಿ ಬಂದು ತಾಯಿ ಹಾಗೂ ಹೆಂಡತಿಗೆ ಮನಸೋಇಚ್ಛೆ ಥಳಿಸುತ್ತಿದ್ದ ಎಂದು ಗೊತ್ತಾಗಿದೆ.

VISTARANEWS.COM


on

raichur double murder case
ಕೊಲೆ ಆರೋಪಿ ದುರಗಪ್ಪ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯಚೂರು: ಕೌಟುಂಬಿಕ ಕಲಹ ಉಲ್ಬಣಿಸಿ ತನ್ನ ತಾಯಿ ಹಾಗೂ ಹೆಂಡತಿಯನ್ನು (Double Murder Case) ಬರ್ಬರವಾಗಿ ಹತ್ಯೆ ಮಾಡಿ ವ್ಯಕ್ತಿ ಪರಾರಿಯಾಗಿದ್ದಾನೆ. ರಾಯಚೂರು (Raichur news) ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣದಲ್ಲಿ ದುರ್ಘಟನೆ ನಡೆದಿದೆ.

ದ್ಯಾಮಮ್ಮ (66) ಹಾಗೂ ಜ್ಯೋತಿ (23) ಕೊಲೆಯಾದ ದುರ್ದೈವಿಗಳು. ದುರಗಪ್ಪ ಇಬ್ಬರನ್ನೂ ಹತ್ಯೆಗೈದ ಆರೋಪಿ. ಮುದ್ಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರನಾದ ದುರಗಪ್ಪನ ಕುಟುಂಬ ಇಲ್ಲಿನ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು. ಪ್ರತಿನಿತ್ಯ ಮನೆಯಲ್ಲಿ ಕಲಹ ನಡೆಯುತ್ತಿತ್ತು. ದುರಗಪ್ಪ ಮದ್ಯ ಸೇವಿಸಿ ಬಂದು ತಾಯಿ ಹಾಗೂ ಹೆಂಡತಿಗೆ ಮನಸೋಇಚ್ಛೆ ಥಳಿಸುತ್ತಿದ್ದ ಎಂದು ಗೊತ್ತಾಗಿದೆ. ಕೊಲೆ ಬಳಿಕ ಸ್ಥಳದಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಮುದ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟೀ ಕುಡಿಯಲು ಹೋದವ ಹಾಲು ತರಲು ಬಂದಿದ್ದವನಿಂದ ಹತ್ಯೆಯಾದ! ರೋಡ್‌ ರೇಜ್‌ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೆ ರೋಡ್ ರೇಜ್ (Road Rage) ಕೇಸ್‌ಗಳು ಹೆಚ್ಚಾಗುತ್ತಿವೆ ಎಂಬ ಕಳವಳದ ನಡುವೆಯೇ, ಇಂಥದೇ ಒಂದು ಪ್ರಕರಣದಲ್ಲಿ ರಸ್ತೆಯ ಮೇಲೆ ಒಂದು ಕೊಲೆ (Murder Case) ನಡೆದಿದೆ. ರೋಡ್‌ ರೇಜ್‌, ಮರ್ಡರ್‌ ಆಗಿ ಪರಿವರ್ತನೆ ಆಗಿದೆ. ಇಲ್ಲಿಯವರೆಗೆ ರಸ್ತೆ ಮೇಲೆ ಹಲ್ಲೆ ಪ್ರಕರಣ, ಗಲಾಟೆ ನಡೆದದ್ದನ್ನು ನಾವು ನೋಡಿದ್ದೇವೆ. ಆದರೆ ನಿನ್ನೆ ನಡೆದ ಒಂದು ರೋಡ್ ರೇಜ್ ಘಟನೆಯಿಂದ ಒಬ್ಬ ಯುವಕನ ಕೊಲೆಯಾಗಿದೆ.

ಇಲ್ಲಿ ರೋಡ್ ರೇಜ್‌ನಲ್ಲಿ ಕೊಲೆಯಾದವನು ಮಹೇಶ್ ಎಂಬಾತ. ಕೊಂದವನು ಅರವಿಂದ್. ವೃತ್ತಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ಮಹೇಶ್ ಆತನ ಗೆಳೆಯರಾದ ಬಾಲಾಜಿ ಮತ್ತು ನಿಕಿಲ್ ಜೊತೆಗೆ ಟೀ ಕುಡಿಯಲು ಹೋಗಿದ್ದಾರೆ. ಟೀ ಕುಡಿದು ಬೈಕ್‌ನಲ್ಲಿ ರಸ್ತೆಯಲ್ಲಿ ಬರುತ್ತಿದ್ದಾಗ, ಅರವಿಂದ್‌ ಚಲಾಯಿಸುತ್ತಿದ್ದ ಕಾರು ಸ್ಪೀಡ್ ಆಗಿ ಬಂದಿದೆ. ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹತ್ತಿರಕ್ಕೆ ಬಂದು ಹಾರ್ನ್ ಮಾಡಿದ್ದಾನೆ.

ಇದೇ ವೇಳೆ ಬೈಕು, ಕಾರ್‌ಗೆ ಸ್ವಲ್ಪ ಟಚ್ ಆಗಿದೆ ಎಂದು ಕಾರು ಚಾಲಕ ಅರವಿಂದ್ ಬೈಕ್ ಸವಾರರನ್ನು ವೇಗವಾಗಿ ಚೇಸ್ ಮಾಡಲು ಮುಂದಾಗಿದ್ದಾನೆ. ದಾರಿಯಲ್ಲಿ ಇಬ್ಬರು ಯುವಕರು ಮೇನ್ ರೋಡ್‌ನಿಂದ ಸಣ್ಣ ರೋಡ್‌ಗೆ ಬಂದಾಗ ಕೆಳಗೆ ಬಿದ್ದಿದ್ದಾರೆ. ಬೈಕ್ ಸವಾರನನ್ನು ಫಾಲೋ ಮಾಡಿ ವೇಗವಾಗಿ ಬಂದ ಕಾರು ಚಾಲಕ ಜಿ.ಕೆ.ವಿ.ಕೆ ಲೇಔಟ್‌ಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಮುಂದೆ ಇದ್ದ ಮನೆಗೆ ರಭಸವಾಗಿ ಬೈಕ್ ಗುದ್ದಿ ಸ್ಥಳದಲ್ಲೆ ಬೈಕ್‌ ಸವಾರ ಮಹೇಶ್ ಮೃತಪಟ್ಟಿದ್ದಾನೆ.

ಕೊಲೆಯಾದ ಮಹೇಶ್ ನಿನ್ನೆ ಸಂಜೆ ಆತನ ಗೆಳೆಯರ ಜೊತೆಗೆ ಟೀ ಕುಡಿಯಲು ಹೋಗಿದ್ದ. ಇತ್ತ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುವ ಅರವಿಂದ್ ಆತನ ಗೆಳೆಯ ಕೇಶವ್ ಜೊತೆಗೆ ಹಾಲು ತರಲು ಹೋಗಿದ್ದನಂತೆ. ಸಂಬಂಧವೇ ಇಲ್ಲದ ಇಬ್ಬರು ಅವರವರ ಕೆಲಸ ಮುಗಿಸಿ ಮನೆಗೆ ಬಂದಿದ್ದರೆ ಇವತ್ತು ಪರಿಸ್ಥಿತಿ ಹೀಗಿರುತ್ತಿರಲಿಲ್ಲ! ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ಕೇಶವ್ ಮತ್ತು ಅರವಿಂದರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್‌ಗೆ ಹಿಗ್ಗಾಮುಗ್ಗ ಥಳಿತ

ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ಸಮೀಪ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಫುಡ್‌ ಡೆಲಿವರಿ ಬಾಯ್‌ಗೆ ನಾಲ್ಕೈದು ಮಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸೌತ್ ಎಂಡ್ ಸರ್ಕಲ್ ಸಿಗ್ನಲ್ ಬಳಿಯೇ‌ ಮನಸೋ ಇಚ್ಚೆ ಹಲ್ಲೆ ಮಾಡಿದ್ದು, ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೂ ಘಟನೆ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಬಿಎಂಟಿಸಿ ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಮೊಬೈಲ್‌ನಲ್ಲಿ ಗಲಾಟೆ ವಿಡಿಯೋ ಸೆರೆಯಾಗಿದೆ. ಸದ್ಯ ಹೊಡೆದಾಟದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌ ಕಿರಿಕ್‌; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉಡುಪಿ

Murder Case : ಉಡುಪಿಯಲ್ಲಿ ಪತ್ನಿಯನ್ನು ಕಡಿದು ಕೊಂದು ಹಾಕಿದ ಪತಿ!

Murder Case : ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಂದಿರುವ ಆರೋಪ ಕೇಳಿ ಬಂದಿದ್ದು, ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Murder case
Koo

ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು (Murder Case ) ಹರಿದಿದೆ. ಪತಿಯೇ ತನ್ನ ಪತ್ನಿಯನ್ನು ಕಡಿದು ಕೊಲೆ ಮಾಡಿರುವ ಶಂಕೆ ಇದೆ. ಜಯಶ್ರೀ (28) ಕೊಲೆಯಾದವಳು. ಕಿರಣ್ ಉಪಾಧ್ಯ(30) ಕೊಲೆ ಆರೋಪಿಯಾಗಿದ್ದಾನೆ.

ಉಡುಪಿಯಲ್ಲಿ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆದ್ದಾರಿ ಬಳಿ ಘಟನೆ ನಡೆದಿದೆ. ಈ ಜೋಡಿ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಮುಂಜಾನೆ ಪತ್ನಿಯನ್ನು ಕಿರಣ್ ಉಪಾಧ್ಯ ಕೊಲೆ ಮಾಡಿದ್ದ ಎನ್ನುವ ಮಾಹಿತಿ ಇದೆ.

ಶಂಕೆ ಮೇರೆಗೆ ಪತಿ ಕಿರಣ್ ಉಪಾಧ್ಯ ಗುಂಡ್ಮಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು,ಈ ಕುರಿತು ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Assault Case : ಹುಡುಗಿ ವಿಷ್ಯಕ್ಕೆ ನಡುರಸ್ತೆಯಲ್ಲಿ ಲಾಂಗ್‌ ಝಳಪಿಸಿದ ಯುವಕರು

ಮಂಡ್ಯದಲ್ಲಿ ದಾಯಾದಿಗಳ ಕಲಹ

ದೇವಸ್ಥಾನದ ವಿಚಾರವಾಗಿ ದಾಯಾದಿಗಳ ನಡುವೆ ಕಲಹ ಉಂಟಾಗಿದೆ. ಸ್ನೇಹಿತರೊಂದಿಗೆ ಬಂದ ಯುವಕನೊಬ್ಬ ಬುಕ್ ಸ್ಟೋರ್‌ಗೆ ನುಗ್ಗಿ ದೊಡ್ಡಪ್ಪನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಪರಶಿವಮೂರ್ತಿ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಪರಶಿವಮೂರ್ತಿ ಅವರ ಸೋದರನ ಮಗ ಲಿಖಿತ್ ಕುಮಾರ್ ಎಂಬಾತನಿಂದ ಹಲ್ಲೆ ನಡೆದಿದೆ. ಗಾಯಾಳು ಪರಶಿವಮೂರ್ತಿ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಾರ್ಟಿ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ಅವಾಜ್

ಬೆಂಗಳೂರಿನ ಲೇಕ್ ವ್ಯೂ ಅಪಾರ್ಟ್ಮೆಂಟ್‌ ಎದುರು ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದರು. ಕಂಟ್ರೋಲ್ ರೂಂಗೆ ಕರೆ ಬಂದ ಹಿನ್ನೆಲೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಮಹಿಳಾ ಜಾಗೃತಿ ಸಂಬಂಧಿಸಿದಂತೆ ಪಾರ್ಟಿ ಮಾಡುವಂತಿಲ್ಲ ಮನೆಗೆ ಹೋಗಿ ಎಂದು ಮೈಕ್ ಮೂಲಕ ಅನೌನ್ಸ್ ಮಾಡಿದ್ದರು.

ಈ ವೇಳೆ ಪೊಲೀಸರೊಂದಿಗೆ ಜಗಳಕ್ಕೆ ಇಳಿದಿದ್ದ ಯುವಕನೊಬ್ಬ ನಮಗೆ ಡಿಸಿಪಿ ಹಾಗೂ ಇನ್‌ಸ್ಪೆಕ್ಟರ್‌ ಪರಿಚಯ ಎಂದು ಅವಾಜ್‌ ಹಾಕದ್ದಾನೆ. ಪೊಲೀಸರ ಮೇಲೆ ಅಟ್ರಾಸಿಟಿ ಹಾಗು ಲೈಂಗಿಕ ದೌರ್ಜನ್ಯ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲದೇ ಪೊಲೀಸರನ್ನು ತಳ್ಳಿ ಎಳೆದಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

ಡಿಸಿಪಿ ಸಾರಾಫಾತೀಮಾ, ಇನ್‌ಸ್ಪೆಕ್ಟರ್ ಮಹೇಶ್ ಅವರ ಹೆಸರು ಹೇಳಿ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಸುನೀಲ್ ಹಾಗು ಇನ್ನಿತರ ಯುವಕರಿಂದ ಕೃತ್ಯ ನಡೆದಿದೆ. ಅಮೀನ ಸಾ ಬಿರಾದರ್ , ವೆಂಕಟೇಶ್ , ಹಸಿಂ ಪಟೇಲ್ ದೀಪು ಆರ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಪೊಲೀಸರಿಂದಲೇ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Student Missing: ಓದಿಲ್ಲ ಎಂದು ಬೈದದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ

Student Missing: ನಂದಿನಿ ಲೇಔಟ್‌ ಜೈಮಾರುತಿ ನಗರದಲ್ಲಿ ಘಟನೆ ನಡೆದಿದ್ದು, 8 ವರ್ಷದ ಮಿಥುನ್ ಮನೆ ಬಿಟ್ಟು ಹೋಗಿರುವ ಬಾಲಕ. ಈತ ದೇವರಾಜ್ ಹಾಗೂ ಜಯಲಕ್ಷ್ಮಿ ಎಂಬ ದಂಪತಿಯ ಮಗ. ಮಿಥುನ್‌ ಹೋಮ್ ವರ್ಕ್, ಕ್ಲಾಸ್ ವರ್ಕ್ ಕಂಪ್ಲೀಟ್ ಮಾಡಿಲ್ಲ ಎಂದು ಈತನ ಸ್ಕೂಲ್ ಡೈರಿಯಲ್ಲಿ ಮಿಸ್‌ ಬರೆದು ಕಳಿಸಿದ್ದರು.

VISTARANEWS.COM


on

student missing
Koo

ಬೆಂಗಳೂರು: ಸರಿಯಾಗಿ ಗಮನ ಕೊಟ್ಟು ಓದುತ್ತಿಲ್ಲ (Study), ಹೋಮ್‌ ವರ್ಕ್‌ (Home Work) ಮಾಡುತ್ತಿಲ್ಲ ಎಂದು ತಾಯಿ (mother) ಬೈದದ್ದಕ್ಕೆ ಮಗ (Son) ಮುನಿಸಿಕೊಂಡು ಮನೆ ಬಿಟ್ಟು ಹೋದ (student missing) ಪ್ರಕರಣ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದೆ.

ನಂದಿನಿ ಲೇಔಟ್‌ ಜೈಮಾರುತಿ ನಗರದಲ್ಲಿ ಘಟನೆ ನಡೆದಿದ್ದು, 8 ವರ್ಷದ ಮಿಥುನ್ ಮನೆ ಬಿಟ್ಟು ಹೋಗಿರುವ ಬಾಲಕ. ಈತ ದೇವರಾಜ್ ಹಾಗೂ ಜಯಲಕ್ಷ್ಮಿ ಎಂಬ ದಂಪತಿಯ ಮಗ. ಮಿಥುನ್‌ ಹೋಮ್ ವರ್ಕ್, ಕ್ಲಾಸ್ ವರ್ಕ್ ಕಂಪ್ಲೀಟ್ ಮಾಡಿಲ್ಲ ಎಂದು ಈತನ ಸ್ಕೂಲ್ ಡೈರಿಯಲ್ಲಿ ಮಿಸ್‌ ಬರೆದು ಕಳಿಸಿದ್ದರು.

ಮಿಥುನ್‌ ತಾಯಿ ಇದರಿಂದ ಅಸಮಾಧಾನಗೊಂಡು, ರಾತ್ರಿ ಎಲ್ಲ ಹೋಮ್‌ ವರ್ಕ್‌ ಬರೆದು ಮುಗಿಸಿ ಮಲಗಬೇಕು ಎಂದು ಕಟ್ಟುನಿಟ್ಟು ಮಾಡಿದ್ದರು. ಇದರಿಂದ ನೊಂದು ಮಿಥುನ್‌ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ನಿನ್ನೆ ಸಂಜೆ 6 ಗಂಟೆಗೆ ಈತ ಮನೆ ಬಿಟ್ಟು ತೆರಳಿದ್ದಾನೆ. ಸ್ಕೂಲ್‌ನಿಂದ ಬಂದ ಕೂಡಲೇ ಬಟ್ಟೆ ಹಾಗೂ ಮೊಬೈಲ್ ತೆಗೆದುಕೊಂಡು ಹೊರಟುಹೋಗಿದ್ದಾನೆ. ಬಾಲಕನಿಗಾಗಿ ಎಲ್ಲಾ ಕಡೆ ಹುಡುಕಿದ ಪೋಷಕರು ಬಳಿಕ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Valmiki Corporation Scam: ವಾಲ್ಮೀಕಿ ನಿಗಮ ಹಗರಣದ ಚಾರ್ಜ್‌ಶೀಟ್‌ ಸಲ್ಲಿಕೆ, ನಾಗೇಂದ್ರಗೆ ಕ್ಲೀನ್‌ ಚಿಟ್!‌

ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Corporation Scam) ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ತನಿಖೆಗಾಗಿ ರಚಿಸಲಾಗಿರುವ ಎಸ್‌ಐಟಿ ಚಾರ್ಜ್‌ಶೀಟ್‌ (SIT Charge Sheet) ಸಲ್ಲಿಸಿದೆ. ಇದರಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರನ್ನು ಹೊಣೆಯಾಗಿಸಲಾಗಿದೆ. ಆದರೆ ಮಾಜಿ ಸಚಿವ ನಾಗೇಂದ್ರ (EX Minister Nagendra) ಹೆಸರೇ ಇಲ್ಲ!

ಲೆಕ್ಕಪರಿಶೋಧಕ ಚಂದ್ರಶೇಖರ್ (Chandrashekhar) ಆತ್ಮಹತ್ಯೆ (Sucied) ಪ್ರಕರಣ ಸಂಬಂಧ ಸಿಐಡಿ (CID) ಅಧಿಕಾರಿಗಳು ಸಲ್ಲಿಸರುವ ಚಾರ್ಜ್‌ಶೀಟ್‌ನಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಎಸ್‌ಐಟಿ (SIT) ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್‌ಶೀಟ್ ಅನ್ನು ಶಿವಮೊಗ್ಗ ಕೋರ್ಟ್‌ಗೆ ಸಲ್ಲಿಸಿದೆ. ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ನಾಗೇಂದ್ರ ಹೆಸರನ್ನು ಕೈ ಬಿಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರಶೇಖರ್ ಅವರ ಡೆತ್ ನೋಟ್ ಹಾಗೂ ನಾಗೇಂದ್ರ ಪತ್ನಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿರುವ ಎಸ್‌ಐಟಿ ತಂಡ 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಗರಣದಲ್ಲಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ (52) ಅವರು ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್.ಪಿ ಬರೆದಿರುವ ಡೆತ್‌ ನೋಟ್‌ನಲ್ಲಿ ಹೆಸರು ಹೇಳದೆ ಸಚಿವ ಬಿ.ನಾಗೇಂದ್ರ ಅವರ ಬಗ್ಗೆ ಉಲ್ಲೇಖ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಕ್ರೋಶ ಎದ್ದ ಪರಿಣಾಮ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆತ್ಮಹತ್ಯೆಗೆ ಪ್ರಚೋದನೆಗೆ ನಿಗಮದ ಎಂಡಿ ಪದ್ಮನಾಭ್ ಮತ್ತು ಪರುಶರಾಮ್ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿ ಒತ್ತಡ ನೀಡಿದ್ದಾರೆ ಎಂದು ಇಬ್ಬರ ಹೆಸರು ಉಲ್ಲೇಖಿಸಿದ್ದಾರೆ. ನಿಗಮದ ಹಗರಣದಲ್ಲಿ ಒಂದಿಷ್ಟು ಹಣವನ್ನು ಚಂದ್ರಶೇಖರ್ ಪಡೆದಿರುವುದಾಗಿ, ಪ್ರಕರಣ ಬೆಳಕಿಗೆ ಬಂದರೆ ಸಿಕ್ಕಿಬೀಳುವ ಭಯದಿಂದಾಗಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪದ್ಮನಾಭ್ ಅವರು ಗೋವಾ ಮತ್ತು ಹೈದ್ರಾಬಾದ್‌ಗೆ ಕರೆದುಕೊಂಡು ಹೋಗಿ ಒತ್ತಡ ಹಾಕಿದ್ದರು. ನೀನು ಹಣ ಪಡೆದಿದ್ದೀಯ, ಪ್ರಕರಣ ಬೆಳಕಿಗೆ ಬಂದ್ರೆ ನೀನೊಬ್ಬನೇ ಜೈಲಿಗೆ ಹೋಗ್ತಿಯಾ ಎಂದು ಬೆದರಿಕೆ ಹಾಕಿದ್ದರು. ನಿನ್ನ ವಿರುದ್ಧ ನಾನೇ ದೂರು ಕೊಡ್ತೀನಿ ಎಂದು ಚಂದ್ರಶೇಖರ್‌ಗೆ ಬೆದರಿಸಿದ್ದರು. ಹೀಗಾಗಿ ಪದ್ಮನಾಭ್ ಮತ್ತು ಪರುಶರಾಮ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: R Ashok: ವಾಲ್ಮೀಕಿ ಹಗರಣ; ಮುಖ್ಯಮಂತ್ರಿ ಏನು ಕತ್ತೆ ಕಾಯುತ್ತಿದ್ದರೇ ಎಂದ ಆರ್‌. ಅಶೋಕ್‌

Continue Reading

ದೇಶ

Triple Talaq: ಯೋಗಿ ಆದಿತ್ಯನಾಥ್‌, ಮೋದಿಯನ್ನು ಹೊಗಳಿದ ಮಹಿಳೆಗೆ ಘೋರ ಶಿಕ್ಷೆ; ಬೆಂಕಿ ಹಚ್ಚಿ, ತ್ರಿವಳಿ ತಲಾಖ್‌ ನೀಡಿದ ಪಾಪಿ ಪತಿ

Triple Talaq: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕಾಗಿ ಮುಸ್ಲಿಂ ಮಹಿಳೆಗೆ ಪತಿ ಬೆಂಕಿ ಹಚ್ಚಿ ನಂತರ ತ್ರಿವಳಿ ತಲಾಖ್ ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆ ಇದೀಗ ತನ್ನ ಪತಿ ಅರ್ಷದ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಯೋಧ್ಯೆ ಮತ್ತು ಬಹ್ರೈಚ್ ಜಿಲ್ಲೆಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

VISTARANEWS.COM


on

Triple Talaq
Koo

ಲಖನೌ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಹೊಗಳಿದ್ದಕ್ಕಾಗಿ ಮುಸ್ಲಿಂ ಮಹಿಳೆಗೆ ಪತಿ ಬೆಂಕಿ ಹಚ್ಚಿ ನಂತರ ತ್ರಿವಳಿ ತಲಾಖ್ (Triple Talaq) ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೂಲತಃ ಉತ್ತರ ಪ್ರದೇಶದ ಬಹ್ರೈಚ್ ಮೂಲದ ಮಹಿಳೆ ಅಯೋಧ್ಯೆಯ ಅರ್ಷದ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯ ನಂತರ ಅಯೋಧ್ಯೆಗೆ ಬಂದ ಮಹಿಳೆ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರ ಉತ್ತಮ ಕೆಲಸಗಳಿಂದ ಪ್ರಭಾವಿತರಾಗಿ ಈ ಇಬ್ಬರು ನಾಯಕರ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಇದರಿಂದ ಕೆರಳಿದ ಅರ್ಷದ್ ಬೆಂಕಿ ಹಚ್ಚಿ ತ್ರಿವಳಿ ತಲಾಖ್‌ ನೀಡಿದ್ದಾನೆ ಎಂದು ಮೂಲಗಳು ತಿಳಿಸಿದ್ದಾರೆ. ಕೊಟ್ವಾಲಿ ನಗರದ ದೆಹಲಿ ದರ್ವಾಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಇದೀಗ ಅರ್ಷದ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಯೋಧ್ಯೆ ಮತ್ತು ಬಹ್ರೈಚ್ ಜಿಲ್ಲೆಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಲ್ಲದೆ ಅರ್ಷದ್ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ ಎಂಬ ಆರೋಪವೂ ಇದೆ.

ಸಂತ್ರಸ್ತೆ ಹೇಳಿದ್ದೇನು?

ಹಳ್ಳಿ ಪ್ರದೇಶದಲ್ಲಿ ಬೆಳೆದ ಸಂತ್ರಸ್ತೆ ತಾನು ಮದುವೆಯಾದ ಬಳಿಕ ಅಯೋಧ್ಯೆಗೆ ಆಗಮಿಸಿ ಇಲ್ಲಿನ ವ್ಯವಸ್ಥೆ ಕಂಡು ಪ್ರಭಾವಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ʼʼಹೀಗಾಗಿ ಪತಿಯ ಬಳಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರನ್ನು ಹೊಗಳಿದ್ದೆ. ಇದರಿಂದ ಕೆರಳಿದ ಆತ ಅವಹೇಳನಕಾರಿಯಾಗಿ ನಿಂದಿಸಿದ. ಬಳಿಕ ಮನೆಯೊಂದ ಹೊರ ಹಾಕಿದ. ಮಾತುಕತೆಯ ನಂತರ ಅತ್ತೆ ಮನೆಗೆ ಹಿಂದಿರುಗಿದೆ. ಆಗ ಅರ್ಷದ್‌ ತ್ರಿವಳಿ ತಲಾಖ್ ನೀಡಿದ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ. ಜೀವ ಉಳಿಸಿಕೊಳ್ಳಲು ಅತ್ತೆ ಮನೆಯಿಂದ ಹೊರಬಂದೆʼʼ ಎಂದು ಮಹಿಳೆ ತಿಳಿಸಿದ್ದಾರೆ.

ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ!

ಕೆಲವು ದಿನಗಳ ಹಿಂದೆ ಈ ಮಾದರಿಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿತ್ತು. ಮಹಿಳೆಯೊಬ್ಬರು ಬಿಜೆಪಿಯನ್ನು ಬೆಂಬಲಿಸಿ ವೋಟ್ ಹಾಕಿದ್ದಕ್ಕೆ ಕೋಪಗೊಂಡ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಳಿಕ ಈ ಬಗ್ಗೆ ಮಹಿಳೆ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ದೂರಿನಲ್ಲಿ ಮಹಿಳೆ, ತಾನು ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಸ್ವಲ್ಪ ಸಮಯದ ನಂತರ ಅತ್ತೆ, ಪತಿ ಹಾಗೂ ನಾದಿನಿಯರು ಹಿಂಸೆ ನೀಡಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಒಂದೂವರೆ ವರ್ಷದಿಂದ ಪತಿಯ ಜತೆ ಆಕೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಆದರೆ ಬಿಜೆಪಿಯನ್ನು ಬೆಂಬಲಿಸಿ ಅದರ ಪರವಾಗಿ ಮತ ಹಾಕಿದ್ದಕ್ಕೆ ಕೋಪಗೊಂಡ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ತಿಳಿಸಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಪತಿ, ಅತ್ತೆ ಹಾಗೂ ನಾದಿನಿಯರ ವಿರುದ್ಧ ವರದಕ್ಷಿಣ ನಿಷೇಧ ಕಾಯಿದೆ, ಮುಸ್ಲಿಂ ಮಹಿಳೆಯರ ಕಾಯ್ದೆ ಮತ್ತು ಭಾರತೀಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: Triple Talaq : ತ್ರಿವಳಿ ತಲಾಖ್​​ಗೆ ಶಿಕ್ಷೆ ಆಗಲೇಬೇಕು; ಸುಪ್ರೀಂ ಕೋರ್ಟ್​ಗೆ ಹೊಸ ಅಫಿಡವಿಟ್​ ಸಲ್ಲಿಸಿ ಕಾನೂನನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

Continue Reading

ರಾಮನಗರ

Assault Case : ಹುಡುಗಿ ವಿಷ್ಯಕ್ಕೆ ನಡುರಸ್ತೆಯಲ್ಲಿ ಲಾಂಗ್‌ ಝಳಪಿಸಿದ ಯುವಕರು

Assault Case : ಯುವಕರಿಬ್ಬರು ಒಬ್ಬಳನ್ನೇ ಪ್ರೀತಿ ಮಾಡುತ್ತಿದ್ದು, ಅದರಲ್ಲೊಬ್ಬ ಯುವತಿಗೆ ಮಸೇಜ್‌ ಮಾಡಿದ್ದಕ್ಕೆ ಸಿಟ್ಟಾಗಿ ನಡುರಸ್ತೆಯಲ್ಲಿ ಲಾಂಗ್‌ ಹಿಡಿದು ಕಿತ್ತಾಡಿಕೊಂಡಿದ್ದಾರೆ.

VISTARANEWS.COM


on

By

assault case
Koo

ರಾಮನಗರ: ರಾಮನಗರ ಪಟ್ಟಣದ ಐಜೂರು ಸರ್ಕಲ್‌ನಲ್ಲಿಯೇ ಯುವಕರು ಲಾಂಗ್ ಹಿಡಿದು (Assault Case) ಝಳಪಿಸಿದ್ದಾರೆ. ಇಬ್ಬರು ಯುವಕರ ಮೇಲೆ ನಾಲ್ವರಿಂದ ಅಟ್ಯಾಕ್ ನಡೆದಿದೆ. ಬೈಕ್‌ನಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಅಪ್ರಾಪ್ತರು ಭಾಗಿಯಾಗಿದ್ದಾರೆ.

ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಹುಡುಗರ ನಡುವೆ ಜಗಳ ಶುರುವಾಗಿದೆ ಎನ್ನಲಾಗಿದೆ. ಯುವಕರಿಬ್ಬರು ಒಬ್ಬಳನ್ನೇ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ನನ್ನ ಹುಡುಗಿಗೆ ಹೇಗೆ ಮೆಸೇಜ್ ಮಾಡುತ್ತೀಯಾ ಎಂದು ಎದುರಾಳಿ ಯುವಕನೊಬ್ಬ ಲಾಂಗು ಬೀಸಿ ಹಲ್ಲೆ ನಡೆಸಿದ್ದಾನೆ.

assault case
assault case

ಇದೇ ಆಗಸ್ಟ್‌ 18ರಂದು ಗಲಾಟೆ ನಡೆದಿದ್ದು, ಯುವಕರ ಮಾರಾಮಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ಯುವಕರು ಮಚ್ಚು-ಲಾಂಗು ಹಿಡಿದು ಕಿತ್ತಾಡುತ್ತಿರುವುದು ಕಂಡೊಡನೆ ಸ್ಥಳೀಯರು ಬಿಡಿಸಲು ಯತ್ನಿಸಿದ್ದಾರೆ.

ಇದನ್ನೂ ಓದಿ: Hasin Jahan: ‘ಹೆಣ್ಣು ಎಂದರೆ ನಿಮಗೆ ಮಜಾ​ ಮಾಡೋ ವಸ್ತು’; ಗಂಗೂಲಿ ವಿರುದ್ಧ ಹರಿಹಾಯ್ದ ಶಮಿ ಮಾಜಿ ಪತ್ನಿ

ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ

ಇತ್ತ ಬೆಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಜನರು ಮಚ್ಚು, ಲಾಂಗ್‌ಗಳಿಂದ ರೌಡಿಶೀಟರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಂಜುನಾಥ್ @ ಹೂ ಮಂಜ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಬೆಂಗಳೂರಿನ ಯಲಹಂಕ ನ್ಯೂಟೌನ್ ಬಳಿ ನಡೆದ ಘಟನೆ ನಡೆದಿದೆ.

ಹಾಡುಹಗಲೇ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿ ಎದುರಾಳಿ ಗ್ಯಾಂಗ್‌ ಪರಾರಿ ಆಗಿದೆ. ದುಷ್ಕರ್ಮಿಗಳು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೆ ಯತ್ನಿಸಿದ್ದಾರೆ. ನೆಲಕ್ಕುರುಳಿದವನು ಸಾವನ್ನಪ್ಪಿದ್ದಾನೆ ಎಂದು ತಿಳಿದು ಆರೋಪಿಗಳು ಎಸ್ಕೇಪ್ ಆಗಿದ್ದರು. ಆದರೆ ಸ್ಥಳೀಯರು ತಕ್ಷಣ ರೌಡಿಶೀಟರ್ ಹೂ ಮಂಜನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿನ್ನೆಯಷ್ಟೆ ಕೊಡಿಗೇಹಳ್ಳಿಯಲ್ಲಿ ವಿಜಯ್ ಎಂಬ ರೌಡಿ ಮೇಲೆ ಕೊಲೆ ಯತ್ನ ನಡೆದಿತ್ತು. ಸದ್ಯ ಯಲಹಂಕ ನ್ಯೂಟೌನ್‌ನಲ್ಲಿ ರೌಡಿ ಕೊಲೆಗೆ ಯತ್ನ ಮಾಡಲಾಗಿದೆ. ಯಲಹಂಕ ನ್ಯೂಟೌನ್ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Gold Rate Today
ಚಿನ್ನದ ದರ13 mins ago

Gold Rate Today: ಆಭರಣ ಪ್ರಿಯರಿಗೆ ಗೋಲ್ಡನ್‌ ಟೈಮ್‌; ಚಿನ್ನದ ದರ ಇಂದು ಕೂಡ ಇಳಿಮುಖ

Cheteshwar Pujara
ಕ್ರೀಡೆ20 mins ago

Cheteshwar Pujara: ಕೌಂಟಿಯಿಂದಲೂ ಹೊರಬಿದ್ದ ಚೇತೇಶ್ವರ ಪೂಜಾರ

Murder case
ಉಡುಪಿ20 mins ago

Murder Case : ಉಡುಪಿಯಲ್ಲಿ ಪತ್ನಿಯನ್ನು ಕಡಿದು ಕೊಂದು ಹಾಕಿದ ಪತಿ!

student missing
ಬೆಂಗಳೂರು34 mins ago

Student Missing: ಓದಿಲ್ಲ ಎಂದು ಬೈದದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ

Triple Talaq
ದೇಶ41 mins ago

Triple Talaq: ಯೋಗಿ ಆದಿತ್ಯನಾಥ್‌, ಮೋದಿಯನ್ನು ಹೊಗಳಿದ ಮಹಿಳೆಗೆ ಘೋರ ಶಿಕ್ಷೆ; ಬೆಂಕಿ ಹಚ್ಚಿ, ತ್ರಿವಳಿ ತಲಾಖ್‌ ನೀಡಿದ ಪಾಪಿ ಪತಿ

assault case
ರಾಮನಗರ55 mins ago

Assault Case : ಹುಡುಗಿ ವಿಷ್ಯಕ್ಕೆ ನಡುರಸ್ತೆಯಲ್ಲಿ ಲಾಂಗ್‌ ಝಳಪಿಸಿದ ಯುವಕರು

Hasin Jahan
ಕ್ರೀಡೆ1 hour ago

Hasin Jahan: ‘ಹೆಣ್ಣು ಎಂದರೆ ನಿಮಗೆ ಮಜಾ​ ಮಾಡೋ ವಸ್ತು’; ಗಂಗೂಲಿ ವಿರುದ್ಧ ಹರಿಹಾಯ್ದ ಶಮಿ ಮಾಜಿ ಪತ್ನಿ

bwssb water price hike
ಪ್ರಮುಖ ಸುದ್ದಿ1 hour ago

Water Price Hike: ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ವೇಗ; ನಿಮಗೆ ಎಷ್ಟಾಗುತ್ತೆ ಚೆಕ್‌ ಮಾಡಿ

Bulldozer Action
ದೇಶ2 hours ago

Bulldozer Action: ಅಯೋಧ್ಯೆಯಲ್ಲಿ ಬುಲ್ಡೋಜರ್‌ ಸದ್ದು; ಅಪ್ರಾಪ್ತೆಯ ಅತ್ಯಾಚಾರ ಆರೋಪಿ ಮೊಯೀದ್‌ ಖಾನ್‌ಗೆ ಸೇರಿದ ಕಟ್ಟಡ ಪುಡಿಪುಡಿ

Viral Video
Latest2 hours ago

Viral Video: ಹರಿದ ಬಟ್ಟೆ ಧರಿಸಿ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದ ಮಹಿಳೆ; ಅಸಲಿಗೆ ಆಗಿದ್ದೇನು?

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌