ಮಗುವನ್ನೂ ಬಿಟ್ಟು ಪ್ರಿಯತಮನ ಜತೆ ಶಿಕ್ಷಕಿ ಪರಾರಿ, ಲವ್‌ ಜಿಹಾದ್‌ ಆರೋಪ - Vistara News

ಕ್ರೈಂ

ಮಗುವನ್ನೂ ಬಿಟ್ಟು ಪ್ರಿಯತಮನ ಜತೆ ಶಿಕ್ಷಕಿ ಪರಾರಿ, ಲವ್‌ ಜಿಹಾದ್‌ ಆರೋಪ

ರಾಯಚೂರಿನಲ್ಲಿ ವಿವಾಹಿತ ಶಿಕ್ಷಕಿಯೊಬ್ಬರು ೭ ವರ್ಷದ ಮಗುವನ್ನೂ ತೊರೆದು ನಾಪತ್ತೆಯಾಗಿದ್ದು, ಇದರ ಹಿಂದೆ ಲವ್ ಜಿಹಾದ್ ನಡೆದಿದೆ ಎಂದು ಶಿಕ್ಷಕಿಯ ತಾಯಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.

VISTARANEWS.COM


on

love jihad
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯಚೂರು: ರಾಯಚೂರಿನಲ್ಲಿ ವಿವಾಹಿತ ಶಿಕ್ಷಕಿಯೊಬ್ಬರು ೭ ವರ್ಷದ ಮಗುವನ್ನೂ ತೊರೆದು ನಾಪತ್ತೆಯಾಗಿದ್ದು, ಇದರ ಹಿಂದೆ ಲವ್ ಜಿಹಾದ್ ನಡೆದಿದೆ ಎಂದು ಶಿಕ್ಷಕಿಯ ತಾಯಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.

ಯರಮರಸ್ ಕ್ಯಾಂಪ್ ನಿವಾಸಿ ಶಿಕ್ಷಕಿ ಸುಹಾಸಿನಿ (29) ಅ.20ರಂದು ಹೊರಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ನಾಪತ್ತೆಯಾಗಿದ್ದಾಳೆ. ಸಲೀಂ ಎಂಬ ಮುಸ್ಲಿಂ ಯುವಕನ ಜೊತೆ ಈಕೆ ಹೋಗಿರುವುದಾಗಿ ಆರೋಪಿಸಲಾಗಿದೆ. ಸುಹಾಸಿನಿ ತಾಯಿ ನಿರ್ಮಲಾ ಅವರು ಈ ಕುರಿತು ಗಂಭೀರ ಆರೋಪ ಮಾಡಿದ್ದಾರೆ.

ತಾನು ಸುಹಾಸಿನಿಯ ಕ್ಲಾಸ್‌ಮೇಟ್ ಎಂಬ ನೆಪವೊಡ್ಡಿ ಸಲೀಂ ಪದೇ ಪದೆ ಮನೆಗೆ ಬರುತ್ತಿದ್ದ. ಯಾರೂ ಇಲ್ಲದ ವೇಳೆ ಮನೆಗೆ ಬಂದು ಸರಸವಾಡುತ್ತಿದ್ದ. ಮದುವೆ ಆಗಿ ಮಕ್ಕಳಿದ್ದರೂ ಶಿಕ್ಷಕಿ ಸುಹಾಸಿನಿ ಜೊತೆ ಸಲೀಂ ಸಂಪರ್ಕ ಹೊಂದಿದ್ದಾನೆ. ಒಂದು ತಿಂಗಳ ಹಿಂದೆ ಮನೆಯಲ್ಲಿ ವಿಚಾರ ಗೊತ್ತಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

10 ವರ್ಷಗಳ ಹಿಂದೆ ಲಿಂಗರಾಜ ಎಂಬವರ ಜೊತೆ ಸುಹಾಸಿನಿಯ ಮದುವೆಯಾಗಿತ್ತು. ಈಕೆ ಯರಮರಸ್ ಬಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಳೆ. ಸುಹಾಸಿನಿಗೆ 7 ವರ್ಷದ ಮಗುವಿದ್ದು, ಪುಟ್ಟ ಮಗುವನ್ನೂ ಬಿಟ್ಟು ಪರಾರಿಯಾಗಿದ್ದಾಳೆ.

ಲವ್ ಜಿಹಾದ್ ಆರೋಪ ಹೊತ್ತಿರುವ ಸಲೀಂ, ರಾಯಚೂರು ನಗರದ ಹೊರವಲಯದ ಪೊತಗಲ್ ಗ್ರಾಮದ ನಿವಾಸಿ. ಈತ ಗಂಜ್‌ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ. ಸಲೀಂಗೆ ಮದುವೆಯಾಗಿ ಒಂದು ಹೆಣ್ಣು ಮಗು ಇದೆ. ಆದರೂ ಈತ ಶಿಕ್ಷಕಿ ಸುಹಾಸಿನಿ ಹಿಂದೆ ಬಿದ್ದಿದ್ದ.

ಸುಹಾಸಿನಿ ಮಿಸ್ಸಿಂಗ್ ಬಗ್ಗೆ ತಾಯಿ ನಿರ್ಮಲಾ ಹೇಳಿರುವ ಹೇಳಿಕೆ ಹೀಗಿದೆ: ಸಲೀಂ ನನಗೆ ಇಷ್ಟ, ಅವನನ್ನು ಮದುವೆಯಾಗುವುದಾಗಿ ಹೇಳಿದ್ದಳು. ನಿನಗೆ ಮದುವೆಯಾಗಿ ಮಗುವೂ ಇರುವಾಗ ಇದು ಬೇಡ ಎಂದೆವು. ಸಲೀಂ ಕಾಲ್ ಮಾಡಿ, ನಾವಿಬ್ಬರೂ ಮದುವೆಯಾಗುತ್ತೇವೆ ಎಂದ. ಆಕೆಗೆ ಡೈವೋರ್ಸ್ ನೀಡದೆ ಹೇಗೆ ಮದುವೆ ಆಗಲು ಸಾಧ್ಯ ಎಂದೆವು. ಅ.20ರಂದು ಮನೆಯಲ್ಲಿ ಜಗಳ ಮಾಡಿ ಮನೆಬಿಟ್ಟು ಹೋದಳು. ನಮ್ಮ ಸಂಬಂಧಿಕರಿಗೆ ಕರೆ ಮಾಡಿ ತಾವು ಮದುವೆ ಆಗಿದ್ದೇವೆಂದು ಹೇಳಿದ್ದಾರೆ. ಅಲ್ಲಿ ನಮ್ಮ ಮಗಳ ಜೊತೆ 58 ವರ್ಷ ಒಬ್ಬಳು ಹೆಣ್ಣು ಮಗಳು, ಸಲೀಂ ಹೊರತುಪಡಿಸಿ ಇನ್ನೊಬ್ಬ ವ್ಯಕ್ತಿ ಸಹ ಇದ್ದಾರೆ. ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಇದನ್ನೂ ಓದಿ | ಕ್ರೈಸ್ತ ಧರ್ಮಕ್ಕೆ ಸೇರಲು ಗಂಡನಿಗೆ ಪತ್ನಿ ಒತ್ತಾಯ; ಹುಬ್ಬಳ್ಳಿಯಲ್ಲಿ ಮತಾಂತರ ಜಾಲದ ವಿರುದ್ಧ ಹಿಂದುಗಳ ಆಕ್ರೋಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

Obscene Act: ಯುವತಿಯನ್ನು ಕಾರು ಚಾಲನೆಯ ನೆಪದಲ್ಲಿ ಕೂರಿಸಿಕೊಂಡು ಕರೆದುಕೊಂಡು ಖಾಸಗಿ ಅಂಗ ಪ್ರದರ್ಶಿಸಿ ಟ್ರೇನರ್‌ ಅಸಭ್ಯ ವರ್ತನೆ ತೋರಿದ್ದಾನೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಫ್ಲೈಓವರ್‌ನಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಯುವತಿಯ ಜೊತೆ ಕಾರ್ ಡ್ರೈವಿಂಗ್ ಟ್ರೈನರ್ ಅಸಭ್ಯ ವರ್ತನೆ ತೋರಿದ್ದಾನೆ.

VISTARANEWS.COM


on

odscene act driver
Koo

ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯರಿಗೆ ಪುಂಡ ಪೋಕರಿಗಳ‌ ಕಿರುಕುಳ ಹೆಚ್ಚಾಗುತ್ತಿದೆ ಎಂಬ ದೂರುಗಳ ನಡುವೆ, ಇನ್ನೊಂದು ಅಂಥದೇ ಘಟನೆ ನಡೆದಿದೆ. ಕಾರ್ ಡ್ರೈವಿಂಗ್ (Car driving) ಹೇಳಿಕೊಡುವ‌ ನೆಪದಲ್ಲಿ ಟ್ರೈನರ್ (Driving trainer) ಒಬ್ಬ ಅಸಭ್ಯ ವರ್ತನೆ (Obscene Act) ತೋರಿಸಿದ್ದಾನೆ.

ಯುವತಿಯನ್ನು ಕಾರು ಚಾಲನೆಯ ನೆಪದಲ್ಲಿ ಕೂರಿಸಿಕೊಂಡು ಕರೆದುಕೊಂಡು ಖಾಸಗಿ ಅಂಗ ಪ್ರದರ್ಶಿಸಿ ಟ್ರೇನರ್‌ ಅಸಭ್ಯ ವರ್ತನೆ ತೋರಿದ್ದಾನೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಫ್ಲೈಓವರ್‌ನಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಯುವತಿಯ ಜೊತೆ ಕಾರ್ ಡ್ರೈವಿಂಗ್ ಟ್ರೈನರ್ ಅಸಭ್ಯ ವರ್ತನೆ ತೋರಿದ್ದಾನೆ.

ಬಸವೇಶ್ವರ ನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನಲ್ಲಿ ಯುವತಿ ಟ್ರೈನಿಂಗ್‌ಗೆ ಸೇರಿದ್ದರು. ಈ ವೇಳೆ ಅಣ್ಣಪ್ಪ ಎಂಬಾತ ಪರ್ಸನಲ್ ಟ್ರೈನರ್ ಆಗಿ ಡ್ರೈವಿಂಗ್ ಕಲಿಸಿಕೊಡಲು ಮುಂದಾಗಿದ್ದ. ಆದರೆ ಕಳೆದ ವಾರ ಬೆಳಗ್ಗೆ 6.30ಕ್ಕೆ ಕಾರ್‌ನಲ್ಲಿದ್ದ ಅಣ್ಣಪ್ಪ ಅಸಭ್ಯ ವರ್ತನೆ ತೋರಿದ್ದಾನೆ. ಯುವತಿ ಪಕ್ಕದಲ್ಲಿ ಕೂತು ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾನೆ. ಈ ಬಗ್ಗೆ ಬಸವೇಶ್ವರ ನಗರ ಠಾಣೆಗೆ ಯುವತಿ ದೂರು ನೀಡಿದ್ದಾರೆ. ಅಣ್ಣಪ್ಪನ ವಿರುದ್ಧ FIR ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

ಬೆಂಗಳೂರು: ತಮ್ಮ ಐಷಾರಾಮಿ ಫಾರ್ಚುನರ್ ಕಾರು (Fortuner Car) ಹೋಗೋಕೆ ದಾರಿ ಬಿಡಲಿಲ್ಲ ಎಂದು ಬಾಡಿಗೆ ಇನೋವಾ ಕಾರಿನ (Innova Car) ಚಾಲಕನ ಮೇಲೆ ಒಂದು ತಂಡ ಯದ್ವಾತದ್ವಾ ಹಲ್ಲೆ (Assault Case) ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ರೋಡ್‌ ರೇಜ್‌ (Road Rage) ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ.

ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಾಲಕನ ಮೇಲೆ ತಂಡ ಹಲ್ಲೆ ನಡೆಸಿದೆ. ಕಾಲಿನಿಂದ ತುಳಿದು, ಕರಾಟೆ ಕಿಕ್‌ ನೀಡಿ ಡ್ರೈವರ್‌ನನ್ನು ಗಾಯಗೊಳಿಸಲಾಗಿದೆ. ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಡಾ. ಪ್ರಜ್ವಿತ್ ರೈ ಎಂಬವರು ಪೋಸ್ಟ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಾಯಕನ ಮೇಲೆ ಹೀಗೆ ಹಲ್ಲೆ ಮಾಡಲಾಗಿದೆ. ಈ ರೀತಿ ಅಸಹಾಯಕರ ಮೇಲೆ ದರ್ಪ ತೋರುವವರಿಗೆ ಶಿಕ್ಷೆ ಆಗಬೇಕು ಎಂದು ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ಗೆ ʼದರ್ಶನ್ʼ ಮತ್ತು ʼರೇಣುಕಾಸ್ವಾಮಿʼ ಹೆಸರಿನ ಹ್ಯಾಶ್‌ಟ್ಯಾಗ್ ಹಾಕಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: Shiradi Ghat: ಭೂಕುಸಿತ; ಶಿರಾಡಿ ಘಾಟ್​ನಲ್ಲಿ ಸಂಚಾರ ನಿಷೇಧ ​; ಬೆಂಗಳೂರು- ಮಂಗಳೂರು ಸಂಪರ್ಕ ಬಹುತೇಕ ಕಟ್​

Continue Reading

ಬೆಳಗಾವಿ

Road Accident: ಬೈಕ್‌ಗಳು ಮುಖಾಮುಖಿ ಡಿಕ್ಕಿ, ಇಬ್ಬರು ಸಾವು, ಇಬ್ಬರು ಗಂಭೀರ

Road Accident: ಮೃತರನ್ನು ಬಸವರಾಜ ಪ್ರಭುನವರ್(48), ಯಲ್ಲಪ್ಪ ಕೊರವಿನಕೊಪ್ಪ( 46) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಬೈಕ್ ಸವಾರರಿಗೆ ಗಂಭೀರ ‌ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

VISTARANEWS.COM


on

road accident savadatti belagavi news
Koo

ಬೆಳಗಾವಿ: ಬೈಕ್‌ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ‌ಇಬ್ಬರು ಸವಾರರು ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಬಳಿ ಘಟನೆ ನಡೆದಿದೆ.

ಮೃತರನ್ನು ಬಸವರಾಜ ಪ್ರಭುನವರ್(48), ಯಲ್ಲಪ್ಪ ಕೊರವಿನಕೊಪ್ಪ( 46) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಬೈಕ್ ಸವಾರರಿಗೆ ಗಂಭೀರ ‌ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Road Rage: ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

ಬೆಂಗಳೂರು: ತಮ್ಮ ಐಷಾರಾಮಿ ಫಾರ್ಚುನರ್ ಕಾರು (Fortuner Car) ಹೋಗೋಕೆ ದಾರಿ ಬಿಡಲಿಲ್ಲ ಎಂದು ಬಾಡಿಗೆ ಇನೋವಾ ಕಾರಿನ (Innova Car) ಚಾಲಕನ ಮೇಲೆ ಒಂದು ತಂಡ ಯದ್ವಾತದ್ವಾ ಹಲ್ಲೆ (Assault Case) ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ರೋಡ್‌ ರೇಜ್‌ (Road Rage) ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ.

ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಾಲಕನ ಮೇಲೆ ತಂಡ ಹಲ್ಲೆ ನಡೆಸಿದೆ. ಕಾಲಿನಿಂದ ತುಳಿದು, ಕರಾಟೆ ಕಿಕ್‌ ನೀಡಿ ಡ್ರೈವರ್‌ನನ್ನು ಗಾಯಗೊಳಿಸಲಾಗಿದೆ. ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಡಾ. ಪ್ರಜ್ವಿತ್ ರೈ ಎಂಬವರು ಪೋಸ್ಟ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಾಯಕನ ಮೇಲೆ ಹೀಗೆ ಹಲ್ಲೆ ಮಾಡಲಾಗಿದೆ. ಈ ರೀತಿ ಅಸಹಾಯಕರ ಮೇಲೆ ದರ್ಪ ತೋರುವವರಿಗೆ ಶಿಕ್ಷೆ ಆಗಬೇಕು ಎಂದು ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ಗೆ ʼದರ್ಶನ್ʼ ಮತ್ತು ʼರೇಣುಕಾಸ್ವಾಮಿʼ ಹೆಸರಿನ ಹ್ಯಾಶ್‌ಟ್ಯಾಗ್ ಹಾಕಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು, ಮರಣ ಮೃದಂಗ ಬಾರಿಸುತ್ತಿರುವ ಜ್ವರ

ದಾವಣಗೆರೆ: ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ಡೆಂಗ್ಯು ಜ್ವರದಿಂದ ಸಾವನ್ನಪ್ಪಿರುವ ಶಂಕೆ ಇದ್ದು, ಪರೀಕ್ಷಾ ವರದಿ ಬರಬೇಕಿದೆ.

ರೇಖಾ ಎನ್ (19) ಸಾವನ್ನಪ್ಪಿದ ಯುವತಿ. ದಾವಣಗೆರೆ ಜಿಲ್ಲೆಯ‌ ಜಗಳೂರ ಪಟ್ಟಣದ ರಾಮಾಲಯ ರಸ್ತೆ ನಿವಾಸಿ ರೇಖಾ ಕಳೆದ ಕೆಲ ದಿನಗಳ ಹಿಂದೆ ನಾಮಕರಣ ಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ತೀವ್ರ ಜ್ವರದಿಂದ ಬಳಲಿದ್ದ ರೇಖಾಗೆ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಬಳ್ಳಾರಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಧಿಕೃತ ವರದಿ‌ ನಿರೀಕ್ಷಿಸಲಾಗಿದೆ. ಈ ಬಗ್ಗೆ ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sexual Abuse : ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು

Continue Reading

ಬೆಂಗಳೂರು

Road Rage: ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

Road Rage: ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

VISTARANEWS.COM


on

road rage bangalore
Koo

ಬೆಂಗಳೂರು: ತಮ್ಮ ಐಷಾರಾಮಿ ಫಾರ್ಚುನರ್ ಕಾರು (Fortuner Car) ಹೋಗೋಕೆ ದಾರಿ ಬಿಡಲಿಲ್ಲ ಎಂದು ಬಾಡಿಗೆ ಇನೋವಾ ಕಾರಿನ (Innova Car) ಚಾಲಕನ ಮೇಲೆ ಒಂದು ತಂಡ ಯದ್ವಾತದ್ವಾ ಹಲ್ಲೆ (Assault Case) ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ರೋಡ್‌ ರೇಜ್‌ (Road Rage) ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ.

ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಾಲಕನ ಮೇಲೆ ತಂಡ ಹಲ್ಲೆ ನಡೆಸಿದೆ. ಕಾಲಿನಿಂದ ತುಳಿದು, ಕರಾಟೆ ಕಿಕ್‌ ನೀಡಿ ಡ್ರೈವರ್‌ನನ್ನು ಗಾಯಗೊಳಿಸಲಾಗಿದೆ. ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಡಾ. ಪ್ರಜ್ವಿತ್ ರೈ ಎಂಬವರು ಪೋಸ್ಟ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಾಯಕನ ಮೇಲೆ ಹೀಗೆ ಹಲ್ಲೆ ಮಾಡಲಾಗಿದೆ. ಈ ರೀತಿ ಅಸಹಾಯಕರ ಮೇಲೆ ದರ್ಪ ತೋರುವವರಿಗೆ ಶಿಕ್ಷೆ ಆಗಬೇಕು ಎಂದು ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ಗೆ ʼದರ್ಶನ್ʼ ಮತ್ತು ʼರೇಣುಕಾಸ್ವಾಮಿʼ ಹೆಸರಿನ ಹ್ಯಾಶ್‌ಟ್ಯಾಗ್ ಹಾಕಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಮಾಹಿತಿ ಪಡೆದಿದ್ದಾರೆ.

Dengue fever: ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು

ದಾವಣಗೆರೆ: ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ಡೆಂಗ್ಯು ಜ್ವರದಿಂದ ಸಾವನ್ನಪ್ಪಿರುವ ಶಂಕೆ ಇದ್ದು, ಪರೀಕ್ಷಾ ವರದಿ ಬರಬೇಕಿದೆ.

ರೇಖಾ ಎನ್ (19) ಸಾವನ್ನಪ್ಪಿದ ಯುವತಿ. ದಾವಣಗೆರೆ ಜಿಲ್ಲೆಯ‌ ಜಗಳೂರ ಪಟ್ಟಣದ ರಾಮಾಲಯ ರಸ್ತೆ ನಿವಾಸಿ ರೇಖಾ ಕಳೆದ ಕೆಲ ದಿನಗಳ ಹಿಂದೆ ನಾಮಕರಣ ಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ತೀವ್ರ ಜ್ವರದಿಂದ ಬಳಲಿದ್ದ ರೇಖಾಗೆ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಬಳ್ಳಾರಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಧಿಕೃತ ವರದಿ‌ ನಿರೀಕ್ಷಿಸಲಾಗಿದೆ. ಈ ಬಗ್ಗೆ ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Rage Case: ಬೆಂಗಳೂರಲ್ಲಿ ಕಿಡಿಗೇಡಿಗಳಿಂದ ಕಾರು ಮಾಲೀಕನ ಕಾಪಾಡಿದ ಡ್ಯಾಶ್‌ ಕ್ಯಾಮೆರಾ; ವಿಡಿಯೊ ಇದೆ

Continue Reading

ದೇಶ

Sexual Harassment: ಪೋರ್ನ್‌ ವಿಡಿಯೋ ತೋರಿಸಿ ಕಿರುಕುಳ; ಜಿಂದಾಲ್‌ ಕಂಪನಿಯ ಹಿರಿಯ ಅಧಿಕಾರಿ ವಿರುದ್ಧ ಮಹಿಳೆ ಆರೋಪ

Sexual Harassment: ಮಹಿಳೆಯ ಬಗ್ಗೆ ವಿಚಾರಿಸುತ್ತಾ ಆಕೆಯ ಹವ್ಯಾಸಗಳ ಬಗ್ಗೆ ಕೇಳುತ್ತಾನೆ. ಆಗ ಸಿನಿಮಾ ವೀಕ್ಷಣೆ ತನ್ನ ಹವ್ಯಾಸ ಎಂದು ಮಹಿಳೆ ಹೇಳಿದ್ದಾಳೆ. ಅದಕ್ಕೆ ನನ್ನ ಬಳಿ ಕೆಲವು ಸಿನಿಮಾಗಳಿವೆ ಎಂದು ಹೇಳುತ್ತಾ ಪೋರ್ನ್‌ ವಿಡಿಯೋಗಳನ್ನು ತೋರಿಸಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.

VISTARANEWS.COM


on

Sexual harassment
Koo

ಹೊಸದಿಲ್ಲಿ: ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಜಿಂದಾಲ್‌ ಗ್ರೂಪ್‌ ಕಂಪನಿಯ ಉನ್ನತಾಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಕೋಲ್ಕತ್ತಾದಿಂದ ಅಬುದಾಬಿಗೆ ತೆರಳುತ್ತಿದ್ದ ವಿಮಾನದಲ್ಲಿ ದಿನೇಶ್‌ ಕೆ ಸರೌಗಿ ಎಂಬಾತ ಮಹಿಳೆಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಕಿರುಕುಳ(Sexual Harassment) ನೀಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಇದಕ್ಕೆ ಖುದ್ದು ಜಿಂದಾಲ್‌ ಗ್ರೂಪ್‌(Jindal Group)ನ ಮುಖ್ಯಸ್ಥ ನವೀನ್‌ ಜಿಂದಾಲ್‌(Naveen Jindal) ಪ್ರತಿಕ್ರಿಯಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಘಟನೆ ವಿವರ:

ಎಕ್ಸ್‌ನಲ್ಲಿ ಅನೇಕ ಪೋಸ್ಟ್‌ಗಳನ್ನು ಮಾಡುವ ಮೂಲಕ ಮಹಿಳೆ ಘಟನೆ ಬಗ್ಗೆ ವಿವರಿಸಿದ್ದಾಳೆ.ಅವಳು ಬೋಸ್ಟನ್‌ಗೆ ಹೋಗುತ್ತಿದ್ದಳು ಮತ್ತು ಎತಿಹಾದ್ ಏರ್‌ವೇಸ್‌ನಲ್ಲಿ ಅಬುಧಾಬಿಗೆ ಸಾರಿಗೆ ವಿಮಾನವನ್ನು ತೆಗೆದುಕೊಂಡಿದ್ದಳು, ಅವಳ ಪಕ್ಕದಲ್ಲಿ ಕುಳಿತಿದ್ದ 65ವರ್ಷದ ದಿನೇಶ್‌ ಅವಳೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸಿದನು. ತನ್ನನ್ನು ತಾನು ಜಿಂದಾಲ್ ಗ್ರೂಪ್ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡಿದ್ದ ಆತ ಒಮನ್‌ನಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದ. ಇದಾದ ಬಳಿಕ ಮಹಿಳೆಯ ಬಗ್ಗೆ ವಿಚಾರಿಸುತ್ತಾ ಆಕೆಯ ಹವ್ಯಾಸಗಳ ಬಗ್ಗೆ ಕೇಳುತ್ತಾನೆ. ಆಗ ಸಿನಿಮಾ ವೀಕ್ಷಣೆ ತನ್ನ ಹವ್ಯಾಸ ಎಂದು ಮಹಿಳೆ ಹೇಳಿದ್ದಾಳೆ. ಅದಕ್ಕೆ ನನ್ನ ಬಳಿ ಕೆಲವು ಸಿನಿಮಾಗಳಿವೆ ಎಂದು ಹೇಳುತ್ತಾ ಪೋರ್ನ್‌ ವಿಡಿಯೋಗಳನ್ನು ತೋರಿಸಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.

ಇನ್ನು ಈ ನವೀನ್‌ ಜಿಂದಾಲ್‌ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ಮಹಿಳೆ, ಈ ಕಿಡಿಗೇಡಿ ತನ್ನ ಮಹಿಳಾ ಉದ್ಯೋಗಿಗಳನ್ನು ಕೆಲಸದ ಸ್ಥಳದಲ್ಲಿ ಹೇಗೆ ನಡೆಸಿಕೊಳ್ಳುತ್ತಿರಬಹುದು ಎಂಬ ಭಯವೂ ನನಗಿದೆ. ನಾನು ಚೆನ್ನಾಗಿದ್ದೇನೆ, ಸ್ವಲ್ಪ ಗಲಾಟೆ ಮತ್ತು ತೊಂದರೆಗೀಡಾಗಿದ್ದೇನೆ. ಆದರೆ ಇನ್ನೊಬ್ಬ ಮಹಿಳೆಗೆ ಇದು ಎಂದಿಗೂ ಸಂಭವಿಸಬಾರದು ಎಂದು ನಾನು ಬಯಸುತ್ತೇನೆ ಎಂದಿದ್ದಾಳೆ.

ನವೀನ್‌ ಜಿಂದಾಲ್‌ ಪ್ರತಿಕ್ರಿಯೆ

ಇನ್ನು ಮಹಿಳೆಯ ಪೋಸ್ಟ್‌ಗೆ ನವೀನ್‌ ಜಿಂದಾಲ್‌ ಪ್ರತಿಕ್ರಿಯಿಸಿದ್ದಾರೆ. ನಮ್ಮನ್ನು ಗಮನಕ್ಕೆ ಈ ವಿಚಾರವನ್ನು ತಂದಿದ್ದಕ್ಕೆ ಧನ್ಯವಾದಗಳು! ನೀವು ಮಾಡಿದ್ದನ್ನು ಮಾಡಲು ಸಾಕಷ್ಟು ಧೈರ್ಯ ಬೇಕು ಮತ್ತು ಅಂತಹ ವಿಷಯಗಳಿಗೆ ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ. ಈ ವಿಷಯವನ್ನು ತಕ್ಷಣವೇ ತನಿಖೆ ಮಾಡಲಾಗುತ್ತದೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಜಿಮ್‌ ಸಾಧನದಲ್ಲೇ ಯುವಕನ ತಲೆಗೆ ಹೊಡೆದ ಟ್ರೈನರ್‌; ಭೀಕರ ದೃಶ್ಯ ಫುಲ್‌ ವೈರಲ್‌

Continue Reading
Advertisement
Mohammed Shami
ಕ್ರೀಡೆ7 mins ago

Mohammed Shami: ಕೊಹ್ಲಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಮಿ; ವಿಡಿಯೊ ವೈರಲ್​

Kannada New Movie Moorane Krishnappa in OTT
ಸಿನಿಮಾ8 mins ago

Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

odscene act driver
ಕ್ರೈಂ19 mins ago

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

Vicky Kaushal box office collection Movie Collects Only 8 Crore
ಬಾಲಿವುಡ್29 mins ago

Vicky Kaushal: ವಿಕ್ಕಿ ಕೌಶಲ್ ಅಭಿನಯದ ‘ಬ್ಯಾಡ್ ನ್ಯೂಸ್’ ಚಿತ್ರಕ್ಕೆ ಕಳಪೆ ಕಲೆಕ್ಷನ್ ; ಮೊದಲ ದಿನದ ಗಳಿಕೆ ಎಷ್ಟು?

Paris Olympics
ಕ್ರೀಡೆ47 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

bangladesh protests dhaka
ಪ್ರಮುಖ ಸುದ್ದಿ54 mins ago

Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

Music Composer Hamsalekha Ask Apology To Jain Community controversial
ಸಿನಿಮಾ58 mins ago

Music Composer Hamsalekha : ಜೈನ ಫಿಲಾಸಫಿ ಬುಲ್‌‌ಶಿಟ್ ಎಂದು ಅವಮಾನಿಸಿದ ಹಂಸಲೇಖ ಈಗ ಕ್ಷಮಿಸಿ ಅಂತಿದ್ದಾರೆ!

road accident savadatti belagavi news
ಬೆಳಗಾವಿ2 hours ago

Road Accident: ಬೈಕ್‌ಗಳು ಮುಖಾಮುಖಿ ಡಿಕ್ಕಿ, ಇಬ್ಬರು ಸಾವು, ಇಬ್ಬರು ಗಂಭೀರ

road rage bangalore
ಬೆಂಗಳೂರು2 hours ago

Road Rage: ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

Pets in Designer Outfits
Latest2 hours ago

Pets in Designer Outfits : ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬದ ನಾಯಿಗಳ ಸಂಭ್ರಮ ನೋಡಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ20 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ21 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ6 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌