ವಿಸ್ತಾರ ಸಂಪಾದಕೀಯ: ನ್ಯಾಯದಾನ ವ್ಯವಸ್ಥೆ ಚುರುಕಾಗಲಿ, ನ್ಯಾಯಾಂಗಕ್ಕೇ ಕಳಂಕ ಅಂಟದಿರಲಿ - Vistara News

ದೇಶ

ವಿಸ್ತಾರ ಸಂಪಾದಕೀಯ: ನ್ಯಾಯದಾನ ವ್ಯವಸ್ಥೆ ಚುರುಕಾಗಲಿ, ನ್ಯಾಯಾಂಗಕ್ಕೇ ಕಳಂಕ ಅಂಟದಿರಲಿ

ತನಿಖಾ ಸಂಸ್ಥೆಗಳು ಇನ್ನಷ್ಟು ಚುರುಕಾಗಿ ಕೇಸ್‌ ಫೈಲ್‌ ಮಾಡುವುದು ಅಗತ್ಯ. ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಮನ್ವಯ ಸಾಧಿಸಿ ಪ್ರಕರಣಗಳ ತ್ವರಿತ ವಿಚಾರಣೆಗೆ ದಾರಿ ಮಾಡಿ ಕೊಡಬೇಕು. ಇಲ್ಲವಾದರೆ ಅಪರಾಧಿಗಳನ್ನು ರಕ್ಷಿಸಿದ, ಸಂತ್ರಸ್ತರನ್ನು ಮತ್ತಷ್ಟು ಪೀಡಿಸಿದ ಕಳಂಕ ನ್ಯಾಯಾಂಗಕ್ಕೇ ಮೆತ್ತಿಕೊಳ್ಳುತ್ತದೆ.

VISTARANEWS.COM


on

Court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಳೆದ 30 ವರ್ಷಗಳಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 71 ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸುಮಾರು 1.01 ಲಕ್ಷ ಪ್ರಕರಣಗಳು 30ಕ್ಕೂ ಅಧಿಕ ವರ್ಷಗಳಿಂದ ಕೆಳ ನ್ಯಾಯಾಲಯಗಳಲ್ಲಿ ಹಾಗೇ ಇವೆ ಎಂದು ಕೇಂದ್ರದ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌, 25 ಹೈಕೋರ್ಟ್‌ಗಳು ಹಾಗೂ ಇನ್ನಿತರ ಕೆಳ ನ್ಯಾಯಾಲಯಗಳಲ್ಲಿ ಒಟ್ಟಾರೆ 5.02 ಕೋಟಿ ಪ್ರಕರಣಗಳು ಬಾಕಿ ಇವೆಯಂತೆ. ಇಂಟಿಗ್ರೇಟೆಡ್‌ ಕೇಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಡೇಟಾ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ 69,766 ಪ್ರಕರಣಗಳು ಬಾಕಿ ಇವೆ. ಇದು ನಮ್ಮ ದೇಶದ ನ್ಯಾಯದಾನ ವ್ಯವಸ್ಥೆಯ ಕಳವಳಕಾರಿ ಚಿತ್ರಣ.

ಇದಕ್ಕೆ ಅನೇಕ ಕಾರಣಗಳಿರಬಹುದು. ನ್ಯಾಯಮೂರ್ತಿಗಳ- ನ್ಯಾಯವಾದಿಗಳ ಅಲಭ್ಯತೆ, ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆ, ಮೂಲಸೌಕರ್ಯ ಕೊರತೆ, ಸಾಕ್ಷಿಗಳ ಸ್ವರೂಪ ಹಾಗೂ ಕೊರತೆ, ವಕೀಲರು- ತನಿಖಾ ಸಂಸ್ಥೆಗಳು- ದೂರುದಾರರು- ಸಾಕ್ಷಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆ, ನಿಯಮಾವಳಿಗಳ ಸಮರ್ಪಕ ಅನ್ವಯದ ಕೊರತೆ ಇತ್ಯಾದಿಗಳೆಲ್ಲಾ ಈ ವಿಳಂಬಕ್ಕೆ ಕಾರಣವಾಗಿವೆ. ಏನೇ ಕಾರಣವಿದ್ದರೂ ಸಂತ್ರಸ್ತರಿಗೆ ಸಕಾಲದಲ್ಲಿ ನ್ಯಾಯ ದೊರೆಯುತ್ತಿಲ್ಲ ಎಂಬುದು ಮಾತ್ರ ನಿಜ. ʼವಿಳಂಬ ನ್ಯಾಯದಾನ, ಸಂತ್ರಸ್ತನಿಗೆ ನ್ಯಾಯವನ್ನು ನಿರಾಕರಿಸಿದಂತೆಯೇ ಸರಿʼ ಎಂಬ ಮಾತೇ ಇದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಹೆಚ್ಚಾಗಿ ʼʼನೂರು ಅಪರಾಧಿಗಳಿಗೆ ಶಿಕ್ಷೆ ತಪ್ಪಿದರೂ ಚಿಂತೆಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದುʼʼ ಎಂಬ ಸೂತ್ರವನ್ನೇ ಕೇಂದ್ರೀಕರಿಸಿದೆ. ಹೀಗಾಗಿ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯ ಅಪರಾಧವನ್ನು ರುಜುವಾತುಪಡಿಸಲು ಸಂತ್ರಸ್ತರ ಕಡೆಯ ನ್ಯಾಯವಾದಿಗಳು ಹೆಣಗಾಡಿದಷ್ಟು, ತಪ್ಪಿಸಿಕೊಳ್ಳಲು ಆರೋಪಿಯ ಕಡೆಯವರು ಪ್ರಯತ್ನಿಸಬೇಕಿಲ್ಲ.

ಆದರೆ, ನ್ಯಾಯದಾನ ಕೇಳಿ ಕೋರ್ಟಿಗೆ ಹೋದ ವ್ಯಕ್ತಿ ವಯಸ್ಸಾಗಿ ನಿಧನ ಹೊಂದಿದ ಬಳಿಕವೂ ಕೆಲವೊಮ್ಮೆ ನ್ಯಾಯ ಸಿಗುವುದಿಲ್ಲ ಎಂದರೇನರ್ಥ? ಇದು ಪ್ರಜಾಪ್ರಭುತ್ವದ ಒಂದು ಅಂಗ ಊನಗೊಂಡಿರುವುದರ ದ್ಯೋತಕ. ಇಲ್ಲಿ ನಾಲ್ಕೂ ಅಂಗಗಳೂ ಸರಿಯಾಗಿ ಕಾರ್ಯಾಚರಿಸಬೇಕು. ನ್ಯಾಯದಾನ ವಿಳಂಬವಾದಷ್ಟೂ ಸಾಕ್ಷಿಗಳು, ಕಕ್ಷಿದಾರರು ಕೇಸ್‌ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲವು ದಾಖಲೆ ಪತ್ರಗಳು ನಾಶವಾಗಬಹುದು, ಸಾಕ್ಷಿಗಳು ಇಲ್ಲವಾಗಬಹುದು. ಕಾಲದ ಹೊಡೆತಕ್ಕೆ ಸಿಲುಕಿ, ಪ್ರತಿ ತಿಂಗಳೂ ಕೋರ್ಟಿಗೆ ಅಲೆದು ಹೈರಾಣಾಗುವ ಪರಿಸ್ಥಿತಿಯಿಂದ ರೋಸಿಹೋಗಿ ರಾಜಿ ಮಾಡಿಕೊಂಡ ಎಷ್ಟೋ ಪ್ರಕರಣಗಳು ಇವೆ. ಇದು ನ್ಯಾಯ ಬೇಡವೆಂದಲ್ಲ, ಶಿಕ್ಷೆಗಿಂತಲೂ ನಿಷ್ಕರುಣಿಯಾಗಿರುವ ಕಟಕಟೆಯ ಸಹವಾಸ ಬೇಡವೆಂದು. ಜತೆಗೆ, ಭಾರತದಲ್ಲಿ ಜೈಲುಗಳಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳ ಪ್ರಮಾಣವೂ ಲಕ್ಷಗಳ ಸಂಖ್ಯೆಯಲ್ಲಿದೆ. ಇದರಲ್ಲಿ ವಿಚಾರಣೆ ಸಾಂಗವಾಗಿ ನಡೆದು ಪ್ರಕರಣ ಇತ್ಯರ್ಥವಾಗುವವರೆಗೂ ಆರೋಪಿತನು ಅಪರಾಧಿಯೆಂದು ನಿರ್ಣಯವಾಗುವಂತಿಲ್ಲ. ಪ್ರಕರಣ ಇತ್ಯರ್ಥವಾಗದೆ ವರ್ಷಗಳ ಕಾಲ ಎಳೆದರೆ ಅನ್ಯಾಯವಾಗಿ ಆರೋಪಿಯ ಆಯುಷ್ಯ ಸರಳುಗಳ ನಡುವೆ ವ್ಯರ್ಥ. ಆತ ಅಪರಾಧಿಯಲ್ಲದೇ ಇದ್ದರೆ, ನಿಜಕ್ಕೂ ಅದು ಅವನ ಮೇಲೆ ಈ ವ್ಯವಸ್ಥೆ ನಡೆಸುವ ಕ್ರೌರ್ಯವೇ ಸರಿ. ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ, ಆರೋಪವನ್ನು ಹೊತ್ತುಕೊಂಡು ವರ್ಷಗಳ ಕಾಲ ಓಡಾಡುವುದು ಯಾರಿಗೂ ಹಿತವಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮೌಢ್ಯಕ್ಕೆ ಮಗು ಬಲಿ, ಗೊಲ್ಲರಹಟ್ಟಿಯ ಮಹಿಳೆಯರ ಸಂಕಟ ಇಲ್ಲಿಗೇ ಕೊನೆಯಾಗಲಿ

ಇದು ಕ್ರಿಮಿನಲ್‌ ಪ್ರಕರಣಗಳ ವಿಚಾರವಾದರೆ, ಸಿವಿಲ್‌ ಪ್ರಕರಣಗಳೂ ಹೀಗೇ ನ್ಯಾಯವಂಚಿತ ಭಾವವನ್ನು ಸಂತ್ರಸ್ತರಲ್ಲೂ, ಅನ್ಯಾಯದ ಸಮರ್ಥನೆಯ ಭಾವವನ್ನು ಅಪರಾಧಿಗಳಲ್ಲೂ ಮೂಡಿಸುತ್ತದೆ. ಇವೆಲ್ಲವನ್ನೂ ಸರಿಪಡಿಸಬೇಕಾದ್ದು ಹೇಗೆ? ನ್ಯಾಯದಾನ ಚುರುಕಾಗಲು ನ್ಯಾಯಮೂರ್ತಿಗಳೂ ಸೇರಿದಂತೆ ಸಾಕಷ್ಟು ಸಿಬ್ಬಂದಿ ಬೇಕು. ಆದರೆ ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗ ನಡುವಿನ ಸಂಘರ್ಷವೂ ನ್ಯಾಯಾಂಗ ಸಿಬ್ಬಂದಿ ನೇಮಕ ವಿಳಂಬಕ್ಕೆ ಕಾರಣವಾಗುತ್ತಿದೆ. ಇದನ್ನು ಸರಿಪಡಿಸಬೇಕು. ತನಿಖಾ ಸಂಸ್ಥೆಗಳು ಇನ್ನಷ್ಟು ಚುರುಕಾಗಿ ಕೇಸ್‌ ಫೈಲ್‌ ಮಾಡುವುದು ಅಗತ್ಯ. ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಮನ್ವಯ ಸಾಧಿಸಿ ಪ್ರಕರಣಗಳ ತ್ವರಿತ ವಿಚಾರಣೆಗೆ ದಾರಿ ಮಾಡಿ ಕೊಡಬೇಕು. ಇಲ್ಲವಾದರೆ ಅಪರಾಧಿಗಳನ್ನು ರಕ್ಷಿಸಿದ, ಸಂತ್ರಸ್ತರನ್ನು ಮತ್ತಷ್ಟು ಪೀಡಿಸಿದ ಕಳಂಕ ನ್ಯಾಯಾಂಗಕ್ಕೇ ಮೆತ್ತಿಕೊಳ್ಳುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Jammu Kashmir: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸೇನೆಯ ವಾಹನವೊಂದು ಗುರುವಾರ ಸಂಜೆ ಕಂದಕಕ್ಕೆ ಉರುಳಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಬಿದ್ದಿದೆ. ವಾಹನದಲ್ಲಿದ್ದ ಐವರು ಯೋಧರ ಪೈಕಿ ಒಬ್ಬ ಯೋಧ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳು ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

VISTARANEWS.COM


on

Jammu Kashmir
Koo

ಶ್ರೀನಗರ: ಕಳೆದ ಕೆಲ ದಿನಗಳಿಂದ ಉಗ್ರರ ದಾಳಿಗೆ ನಲುಗಿ ಹೋಗಿರುವ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಮತ್ತೊಂದು ದುರಂತ ಸಂಭವಿಸಿದೆ. ರಾಜೌರಿ ಜಿಲ್ಲೆಯಲ್ಲಿ ಗುರುವಾರ (ಜೂನ್‌ 13) ಸೇನೆಯ ವಾಹನವೊಂದು (Army Vehicle) ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರೆ, ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ನೌಶೇರಾ ಸೆಕ್ಟರ್‌ ಬಳಿಯ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಭವಾನಿ ಗ್ರಾಮದ ಮೂಲಕ ಸೇನಾ ವಾಹನವು ಗುರುವಾರ ಸಂಜೆ ತೆರಳುತ್ತಿತ್ತು. ವಾಹದಲ್ಲಿ ಐವರು ಯೋಧರು ಇದ್ದರು. ಇದೇ ವೇಳೆ, ವಾಹನವು ಚಾಲಕನ ನಿಯಂತ್ರಣ ತಪ್ಪಿದ್ದು, ಕಂದಕಕ್ಕೆ ಉರುಳಿದೆ. ದುರಂತ ಸಂಭವಿಸುತ್ತಲೇ ಐವರೂ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಒಬ್ಬ ಯೋಧ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುರುವಾರವೇ ಶ್ರೀನಗರದಲ್ಲಿ ಸಿಆರ್‌ಪಿಎಫ್‌ ವಾಹನವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ವಾಹನ ಸುಟ್ಟಿತ್ತು. ಅದೃಷ್ಟವಶಾತ್‌, ವಾಹನದಲ್ಲಿದ್ದ ಯೋಧರಿಗೆ ಯಾವುದೇ ತೊಂದರೆ ಆಗಿರಲಿಲ್ಲ.

ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಜಾಸ್ತಿಯಾಗಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿ ಹಲವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಕಾಶ್ಮೀರದಲ್ಲಿ ಉಗ್ರರ ನಿರ್ನಾಮಕ್ಕೆ ಸೂಚಿಸಿದ್ದಾರೆ. ಹಾಗೆಯೇ, ಎಲ್ಲ ಸೈನಿಕರನ್ನು ಗಡಿಯಲ್ಲಿ ನಿಯೋಜಿಸುವ ಮೂಲಕ ಉಗ್ರರಿಗೆ ತಿರುಗೇಟು ನೀಡುವಂತೆ ಸೂಚನೆ ನೀಡಿದ್ದಾರೆ.

ಜಮ್ಮು-ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಎನ್‌ಎಸ್‌ಎ ಅಜಿತ್‌ ದೋವಲ್‌ ಸೇರಿ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ ಅವರು ಕಣಿವೆಯ ಭದ್ರತೆಯನ್ನು ಪರಿಶೀಲಿಸಿದರು. ಕಣಿವೆಯಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಉಗ್ರರ ದಾಳಿಗಳನ್ನು ನಿಗ್ರಹಿಸಬೇಕು. ಗಡಿಯುದ್ದಕ್ಕೂ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸೂಕ್ಷ್ಮ ನೆಲೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು ಎಂದು ಸೂಚಿಸುವ ಜತೆಗೆ ಆಧುನಿಕ ತಂತ್ರಜ್ಞಾನದ ಬಳಕೆ, ಉಗ್ರರ ನಿಗ್ರಹಕ್ಕೆ ಇದುವರೆಗೆ ತೆಗೆದುಕೊಂಡ ಕ್ರಮಗಳ ಕುರಿತು ಕೂಡ ಮೋದಿ ಅವರು ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪಾಕಿಸ್ತಾನದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಉಗ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ, ಉಗ್ರನ ಕುರಿತು ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Terrorist Attack : ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಯೋಧ ಹುತಾತ್ಮ , ಆರು ಯೋಧರಿಗೆ ಗಾಯ

Continue Reading

ಕರ್ನಾಟಕ

ದೇಶದ ಪ್ರತಿ ಜಿಲ್ಲೆಗೂ ಉಗ್ರರ ನೇಮಿಸಲು ಬಳ್ಳಾರಿಯಲ್ಲಿ ಸಂಚು; ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

ಉಗ್ರರು 2025ರ ವೇಳೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಸ್ಲೀಪರ್‌ಸೆಲ್‌ಗಳನ್ನು ನೇಮಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರುವ ಉದ್ದೇಶ ಹೊಂದಿದ್ದರು. ಧಾರ್ಮಿಕ ಮುಖಂಡರು, ದೇಶದ ಯೋಧರು, ಪೊಲೀಸರು ಸೇರಿ ಹಲವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದುಬಂದಿದೆ. ಎಲ್ಲ ಚಟುವಟಿಕೆಗಳಿಗೂ ಉಗ್ರರು ಬಳ್ಳಾರಿಯನ್ನೇ ಪ್ರಮುಖ ಕೇಂದ್ರವನ್ನಾಗಿಸಿಕೊಂಡಿದ್ದರು ಎಂದು ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

VISTARANEWS.COM


on

ISIS Terrorists
Koo

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕುಳಿತು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಐಸಿಸ್‌ ಉಗ್ರರ ಜಾಲ (Bellary ISIS Module) ರೂಪಿಸಬೇಕು ಎಂದು ಸಂಚು ಹೆಣೆದಿದ್ದ ಏಳು ಶಂಕಿತ ಉಗ್ರರನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು (NIA Officials) ಅವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಜನರನ್ನು ಬೆಚ್ಚಿಬೀಳಿಸಿವೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಯುವಕರನ್ನು ಐಸಿಸ್‌ ಉಗ್ರ ಸಂಘಟನೆಗೆ ನೇಮಿಸಬೇಕು ಎಂಬುದು ಉಗ್ರರ ಉದ್ದೇಶವಾಗಿತ್ತು ಅಂಶವು ಚಾರ್ಜ್‌ಶೀಟ್‌ನಿಂದ (NIA Chargesheet) ಬಯಲಾಗಿದೆ.

ಕರ್ನಾಟಕದಲ್ಲಿ ಬಂಧಿತರಾಗಿದ್ದ ಮೊಹಮ್ಮದ್‌ ಮುನಿರುದ್ದೀನ್‌, ಸೈಯದ್‌ ಅಮೀರ್‌, ಎಂ.ಡಿ.ಮುಜಮಿಲ್‌ ಹಾಗೂ ಮಹಾರಾಷ್ಟ್ರದ ನಾಲ್ವರು ಉಗ್ರರ ವಿರುದ್ಧ ನ್ಯಾಯಾಲಯಕ್ಕೆ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಸಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ 50 ಯುವಕರನ್ನು ಸ್ಲೀಪರ್‌ಸೆಲ್‌ಗಳನ್ನಾಗಿ ನೇಮಕ ಮಾಡಿಕೊಂಡು, ದೇಶಾದ್ಯಂತ ಐಸಿಸ್‌ ಉಗ್ರ ಸಂಘಟನೆಯ ಜಾಲವನ್ನು ವಿಸ್ತರಣೆ ಮಾಡಬೇಕು ಎಂಬುದು ಇವರ ಉದ್ದೇಶವಾಗಿತ್ತು. ಬಳ್ಳಾರಿಯ ಮೂವರು ಹಾಗೂ ಮಹಾರಾಷ್ಟ್ರದ ನಾಲ್ವರು ಶಂಕಿತರು ಇಂತಹ ಸಂಚು ರೂಪಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

Manipur violence

ಐಸಿಸ್‌ ಉಗ್ರ ಸಂಘಟನೆಯ ಸುಲೇಮಾನ್‌ ಅಲಿಯಾಸ್‌ ಮಿನಾಜ್‌ ಎಂಬಾತನಿಂದ ಏಳು ಉಗ್ರರು ಪ್ರತಿಜ್ಞೆ ಪಡೆದುಕೊಂಡಿದ್ದರು. ಭಾರತದಾದ್ಯಂತ ಐಸಿಸ್‌ ಜಾಲವನ್ನು ವಿಸ್ತರಿಸುವುದಾಗಿ ಇವರು ಪ್ರತಿಜ್ಞೆ ಸ್ವೀಕರಿಸಿದ್ದರು. ಐಸಿಸ್‌ ಉಗ್ರ ಸಂಘಟನೆಯ ಜತೆ ನಿರಂತರವಾಗಿ ಇವರು ಸಂಪರ್ಕದಲ್ಲಿದ್ದರು. ಜಿಲ್ಲೆಗಳಲ್ಲಿ ಸ್ಲೀಪರ್ ಸೆಲ್‌ಗಳನ್ನು ಬಳಸಿ ಗೆರಿಲ್ಲಾ ಮಾದರಿಯ ದಾಳಿಗೆ ಷಡ್ಯಂತ್ರ ಮಾಡಿದ್ದರು. ಸುಧಾರಿತ ಸ್ಫೋಟಕ ಸಾಧನಗಳ (IED) ಮೂಲಕ ದಾಳಿ ನಡೆಸುವುದು, ಬಳ್ಳಾರಿಯನ್ನು ಉಗ್ರ ಸಂಘಟನೆಯ ಜಾಲದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು, ಇಲ್ಲಿಯೇ ಪ್ರಾಯೋಗಿಕವಾಗಿ ಸ್ಫೋಟಿಸುವುದು ಸೇರಿ ಹಲವು ಕುತಂತ್ರಗಳನ್ನು ಹೆಣೆದಿದ್ದರು ಎಂದು ಎನ್‌ಐಎ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬಂಧಿತ ಉಗ್ರರು 2025ರ ವೇಳೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಸ್ಲೀಪರ್‌ಸೆಲ್‌ಗಳನ್ನು ನೇಮಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರುವ ಉದ್ದೇಶ ಹೊಂದಿದ್ದರು. ಧಾರ್ಮಿಕ ಮುಖಂಡರು, ದೇಶದ ಯೋಧರು, ಪೊಲೀಸರು ಸೇರಿ ಹಲವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದುಬಂದಿದೆ. ಇವರ ಬಳಿಯಿಂದ ಹಲವು ಡಿವೈಸ್‌ಗಳ ಜತೆಗೆ ಜಿಹಾದ್‌ ಕುರಿತ ಪುಸ್ತಕಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: NIA Raid: ಮಧ್ಯಪ್ರದೇಶದಲ್ಲಿ ಐಸಿಸ್‌ ಉಗ್ರರ ಜಾಲ ಬಯಲು; ಮಸೀದಿಗಳಲ್ಲೇ ಸಂಚು ರೂಪಿಸುತ್ತಿದ್ದ ಮೂವರ ಬಂಧನ

Continue Reading

ದೇಶ

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Reliance Retail: ರಿಲಯನ್ಸ್ ರೀಟೇಲ್‌ಗೆ ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್‌ ಆದ “ಅಕೈಂಡ್” (Akind) ಬಿಡುಗಡೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್‌ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್ ಅವರು ಅಕೈಂಡ್ ಅನ್ನು ಅನಾವರಣ ಮಾಡಿದರು.

VISTARANEWS.COM


on

Reliance Retail Tira unveils skin care brand Akind
Koo

ಮುಂಬೈ: ರಿಲಯನ್ಸ್ ರೀಟೇಲ್‌ಗೆ (Reliance Retail) ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ (Tira) ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್ ಆದ “ಅಕೈಂಡ್” (Akind) ಬಿಡುಗಡೆ ಬಗ್ಗೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್‌ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್, ಅಕೈಂಡ್ ಅನ್ನು ಅನಾವರಣ ಮಾಡಿದರು.

ಚರ್ಮದ ಆರೈಕೆಗೆ ಅಕೈಂಡ್

ಪ್ರತಿ ವ್ಯಕ್ತಿಯೂ ತನ್ನ ಚರ್ಮದ ಆರೈಕೆ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಚರ್ಮವು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತದೆ. ವೈಯಕ್ತಿಕವಾಗಿ ಪ್ರತ್ಯೇಕ ಆರೈಕೆ ಮಾಡಬೇಕಾಗುತ್ತದೆ. ಈ ಸಂಗತಿ “ಅಕೈಂಡ್” ಅರ್ಥ ಮಾಡಿಕೊಳ್ಳುತ್ತದೆ. ಇನ್ನು ಪ್ರತಿ ವ್ಯಕ್ತಿಯ ಚರ್ಮದ ಅಗತ್ಯಗಳನ್ನು ಅರಿತು, ಆರೈಕೆಯನ್ನು ಸರಳಗೊಳಿಸಲಾಗುತ್ತದೆ. ಈ ನಿಶ್ಚಿತ ಗುರಿಯ ವಿಧಾನದ ಮೂಲಕವಾಗಿ ಈ ಬ್ರ್ಯಾಂಡ್ ಪ್ರತಿ ವ್ಯಕ್ತಿಯ ಚರ್ಮ ಕಾಳಜಿಯ ಗುರಿಯನ್ನು ಸಾಧಿಸಲು ಬಲ ತುಂಬುತ್ತದೆ. ಅಕೈಂಡ್‌ನಲ್ಲಿ ಇರುವಂಥ ಪ್ರತಿ ಸೂತ್ರವು ವಿಶಿಷ್ಟ ಉದ್ದೇಶವನ್ನು ಈಡೇರಿಸಿ, ಚರ್ಮದ ಆರೋಗ್ಯಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಅದು ಮೂರು ವರ್ಗಗಳ ಅಡಿಯಲ್ಲಿ ಬರುತ್ತದೆ.

3 ಹಂತಗಳಲ್ಲಿ ಚರ್ಮದ ರಕ್ಷಣೆ

ಬಿಲ್ಡ್, ಬ್ಯಾಲೆನ್ಸ್ ಹಾಗೂ ಡಿಫೆನ್ಸ್ ಹೀಗೆ ಮೂರು ಶ್ರೇಣಿಗಳಿವೆ. ಅದರಲ್ಲಿ ಮೊದಲನೆಯ ಶ್ರೇಣಿಯಾದ ಬಿಲ್ಡ್ ಚರ್ಮದ ಅಡೆತಡೆಗಳನ್ನು ನಿವಾರಿಸಿ, ಅದರ ಸಹಜ ಸ್ಥಿತಿಗೆ ತರುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಇನ್ನು ಎರಡನೆಯ ಶ್ರೇಣಿ ಚರ್ಮದ ಅಡೆತಡೆಗಳನ್ನು ನಯವಾಗಿ ನಿರ್ವಹಿಸುತ್ತದೆ, ಯಥಾ ಸ್ಥಿತಿಯಲ್ಲಿ ಇರಿಸುತ್ತದೆ, ಅದರ ಫಲಿತವಾಗಿ ಆರೋಗ್ಯಪೂರ್ಣವಾಗಿ, ಹೊಳೆಯುವಂಥ ಚರ್ಮವನ್ನು ಕಾಪಾಡುತ್ತದೆ. ಇನ್ನು ಮೂರನೆಯ ಶ್ರೇಣಿಯು ಮಾಲಿನ್ಯ, ಜೀವನಶೈಲಿ ಸಂಗತಿಗಳು ಹಾಗೂ ಸೂರ್ಯನ ಕಿರಣದಿಂದ ಆಗುವಂಥ ಹಾನಿಯಿಂದ ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಈ ಕುರಿತು ಮಾತನಾಡಿ, “ಟಿರಾದ ಮೊದಲ ಚರ್ಮ ಆರೈಕೆ ಬ್ರ್ಯಾಂಡ್ ಆದ ಅಕೈಂಡ್ ಅನ್ನು ಸ್ವಂತ ಬ್ರಾಂಡ್‌ಗಳ ಪೋರ್ಟ್‌ಫೋಲಿಯೊದಲ್ಲಿ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಈಗ ಮಾಡಿರುವ ಉತ್ಪನ್ನದ ಬಿಡುಗಡೆಯು ಟಿರಾದ ಪಯಣದಲ್ಲಿ ಮಹತ್ವದ ಮೈಲುಗಲ್ಲು ಎನಿಸುತ್ತದೆ. ನಾವು ವಿಸ್ತರಿಸುವುದನ್ನು ಮತ್ತು ವಿಕಸನಗೊಳ್ಳುವುದನ್ನು ಮುಂದುವರಿಸಿದಂತೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ಬದ್ಧರಾಗಿರುತ್ತೇವೆ. ಪ್ರತಿ ಕೊಡುಗೆಯು ನಮ್ಮ ಗ್ರಾಹಕರ ಸೌಂದರ್ಯದ ಅನುಭವವನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಅಕೈಂಡ್ ಸಹ-ಸಂಸ್ಥಾಪಕಿ ಮೀರಾ ಕಪೂರ್ ಮಾತನಾಡಿ, ಬಹಳ ಹಿಂದೆಯೇನೂ ಅಲ್ಲ, ನನ್ನದೇ ಚರ್ಮ ರಕ್ಷಣೆಯ ಬಗ್ಗೆ ಪ್ರಶ್ನೆ ಕೇಳಿಕೊಳ್ಳುತ್ತಾ ಚರ್ಮದ ರಕ್ಷಣೆಯ ಈ ಪ್ರಯಾಣವು ನಿಜವಾಗಿಯೂ ಪ್ರಾರಂಭವಾಯಿತು. ಅಕೈಂಡ್ ಶ್ರೇಣಿಯು ಎಚ್ಚರಿಕೆಯಿಂದ, ಪ್ರಯೋಗಗಳಿಂದ ಮತ್ತು ತಪ್ಪುಗಳಿಂದ ಹಾಗೂ ನಿರ್ದಿಷ್ಟ ಸಮಸ್ಯೆಗಳಿಗೆ ಉದ್ದೇಶಿತ ಪರಿಹಾರವಾಗಿ ಕಾರ್ಯನಿರ್ವಹಿಸುವ ಉನ್ನತ-ಪರಿಣಾಮಕಾರಿ ಪದಾರ್ಥಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯೊಂದಿಗೆ ನಿಖರವಾಗಿ ರೂಪಿಸಲಾಗಿದೆ ಮತ್ತು ಕ್ಯುರೇಟೆಡ್‌ ಬ್ರ್ಯಾಂಡ್‌ಗಳ ಪಾಲಿ ಅಂತಿಮ ತಾಣದಂತೆ ಇರುವ ಟಿರಾ ಮೂಲಕ ನಾವು ತಲುಪುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದಿದೆ. ಇದರಿಂದ ನಮ್ಮ ದೃಷ್ಟಿ ಹೆಚ್ಚು ವ್ಯಾಪಿಸುತ್ತದೆ ಹಾಗೂ ಉದ್ದೇಶವನ್ನು ಜೀವಂತ ಇರಿಸುತ್ತದೆ. ಅಕೈಂಡ್ ಜತೆಗೆ, ಹೇಗೆ ನನಗೆ ಅತ್ಯುತ್ತಮ ಚರ್ಮ ರಕ್ಷಣೆಯ ಮಾರ್ಗ ದೊರೆಯಿತೋ ಅದು ಎಲ್ಲರ ಜತೆಗೂ ಈ ಚರ್ಮರಕ್ಷಣೆ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಟಿರಾ ಟೂಲ್ಸ್ (Tira Tools) ಯಶಸ್ವಿ ಬಿಡುಗಡೆಯ ನಂತರ, ಖಾಸಗಿ ಲೇಬಲ್ ಅಡಿಯಲ್ಲಿ ಪ್ರೀಮಿಯಂ ಕ್ಯುರೇಟೆಡ್ ಸೌಂದರ್ಯ ಪರಿಕರಗಳು ಮತ್ತು ನೈಲ್ಸ್ ಅವರ್ ವೇ, ರೋಮಾಂಚಕ ಉಗುರು ಬಣ್ಣಗಳು ಮತ್ತು ಕಿಟ್‌ಗಳ ವಿಶೇಷ ಶ್ರೇಣಿಯ ಮೂಲಕವಾಗಿ ರಿಲಯನ್ಸ್ ರಿಟೇಲ್ ಲಿಮಿಟೆಡ್ (RRL) ತನ್ನ ನವೀನ ಕೊಡುಗೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದೆ.

ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

ಅದರ ಮೊದಲ ಚರ್ಮರಕ್ಷಣೆ ಬ್ರಾಂಡ್‌ನ ಸೇರ್ಪಡೆ, ಅಕೈಂಡ್ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ವಿಭಾಗಗಳಾದ್ಯಂತ ಗ್ರಾಹಕರಿಗೆ ಉತ್ತಮ-ಗುಣಮಟ್ಟದ, ವೈವಿಧ್ಯಮಯ ಮತ್ತು ಟ್ರೆಂಡ್-ಸೆಟ್ಟಿಂಗ್ ಉತ್ಪನ್ನಗಳನ್ನು ಒದಗಿಸುವ ಟಿರಾ ಬದ್ಧತೆಯನ್ನು ಒತ್ತಿ‌ ಹೇಳುತ್ತದೆ.

Continue Reading

ದೇಶ

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

Union Budget 2024: ಜೂನ್‌ 24ರಿಂದ ಜುಲೈ 3ರವರೆಗೆ ಸಂಸತ್‌ ಅಧಿವೇಶನ ನಡೆಯಲಿದ್ದು, ಲೋಕಸಭೆ ಸ್ಪೀಕರ್‌ ಆಯ್ಕೆ, ನೂತನ ಸಂಸದರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ಅಂದರೆ, ಜುಲೈ ಮೂರನೇ ವಾರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Union Budget 2024
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು, ನೂತನ ಸರ್ಕಾರ ರಚನೆಯಾಗುತ್ತಲೇ ಮೊದಲ ಬಜೆಟ್‌ ಮಂಡನೆ (Union Budget 2024) ಮಾಡಲಾಗುತ್ತದೆ. ಅದರಂತೆ, ಜುಲೈ 15-21ರ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವಾರದಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವಾಲಯದ ಅಧಿಕಾರಿಗಳು ಸೇರಿ ಹಲವರೊಂದಿಗೆ ಸಭೆ, ಸಮಾಲೋಚನೆ ನಡೆಸುವ ಮೂಲಕ ಬಜೆಟ್‌ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಿದ್ದಾರೆ. ಅಷ್ಟೇ ಅಲ್ಲ, ಜೂನ್‌ 22ರಂದು ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ 53ನೇ ಜಿಎಸ್‌ಟಿ ಸಮಿತಿ ಸಭೆ ನಡೆಯಲಿದ್ದು, ಅಧಿಕಾರಿಗಳ ಸಲಹೆ-ಸೂಚನೆಗಳನ್ನೂ ಸಚಿವೆ ಪಡೆಯಲಿದ್ದಾರೆ. ಬಜೆಟ್‌ ಮಂಡನೆ ದೃಷ್ಟಿಯಿಂದ ಜಿಎಸ್‌ಟಿ ಸಮಿತಿ ಸಭೆಯು ಕೂಡ ಪ್ರಾಮುಖ್ಯತೆ ಪಡೆದಿದೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಜುಲೈನಲ್ಲಿ ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಇದನ್ನೂ ಓದಿ: G7 Summit: ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ; ಇಟಲಿಯ ಜಿ7 ಶೃಂಗಸಭೆಯಲ್ಲಿ ಭಾಗಿ

Continue Reading
Advertisement
Jammu Kashmir
ದೇಶ2 hours ago

Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Forest department agrees to give 500 acres for yEttina hole project work says DCM DK Shivakumar
ಕರ್ನಾಟಕ2 hours ago

DK Shivakumar: ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ

Maharaj
ಸಿನಿಮಾ3 hours ago

Maharaj: ಹಿಂದುಗಳಿಗೆ ಅವಮಾನ; ಆಮೀರ್‌ ಖಾನ್‌ ಪುತ್ರನ ‘ಮಹಾರಾಜ್’‌ ಸಿನಿಮಾ ಬಿಡುಗಡೆಗೆ ಕೋರ್ಟ್‌ ತಡೆ

ISIS Terrorists
ಕರ್ನಾಟಕ4 hours ago

ದೇಶದ ಪ್ರತಿ ಜಿಲ್ಲೆಗೂ ಉಗ್ರರ ನೇಮಿಸಲು ಬಳ್ಳಾರಿಯಲ್ಲಿ ಸಂಚು; ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

Actress Ramya
ಕರ್ನಾಟಕ5 hours ago

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Namma Clinic
ಕರ್ನಾಟಕ5 hours ago

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Maruti Suzuki
ಆಟೋಮೊಬೈಲ್6 hours ago

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

Reliance Retail Tira unveils skin care brand Akind
ದೇಶ6 hours ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Union Budget 2024
ದೇಶ6 hours ago

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

AIDSO protest demanding investigation into corruption in NEET entrance exam
ರಾಯಚೂರು6 hours ago

Raichur News: ನೀಟ್ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾನ್ವಿಯಲ್ಲಿ ಎಐಡಿಎಸ್ಒ ಪ್ರತಿಭಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌