Dina Bhavishya : ಈ ರಾಶಿಯವರಿಗೆ ಈ ಹಿಂದೆ ಮಾಡಿದ ಹೂಡಿಕೆಯು ಇಂದು ದ್ವಿಗುಣ ಲಾಭ ತರಲಿದೆ! - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರಿಗೆ ಈ ಹಿಂದೆ ಮಾಡಿದ ಹೂಡಿಕೆಯು ಇಂದು ದ್ವಿಗುಣ ಲಾಭ ತರಲಿದೆ!

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ ಬಿದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya investment returns and Astrology prediction 2023 august 18
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಚಂದ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಬುಧವಾರ ಪ್ರವೇಶಿಸಿದ್ದಾನೆ. ಶನಿವಾರದವರೆಗೂ ಕನ್ಯಾರಾಶಿಯಲ್ಲಿಯೇ ಇರಲಿದ್ದು, ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಇಂದು ಕಾರಣಾಂತರಗಳಿಂದ ಮೋಸ ಹೋಗುವ ಸಾಧ್ಯತೆ ಇದೆ. ಮಕರ ರಾಶಿಯವರು ಈ ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವ ಸಾಧ್ಯತೆಗಳು ಹೆಚ್ಚಿದೆ. ಕುಂಭ ರಾಶಿಯವರು ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅಗತ್ಯ. ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ಇವು ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (18-08-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಬಿದಿಗೆ 20:00 ವಾರ: ಶುಕ್ರವಾರ
ನಕ್ಷತ್ರ: ಹುಬ್ಬಾ 22:55 ಯೋಗ: ಶಿವ 20:25
ಕರಣ: ಬಾಲವ 06:48 ಅಮೃತ ಕಾಲ: ಮಧ್ಯಾಹ್ನ 03:45 ರಿಂದ 05:33 ರವರೆಗೆ

ಸೂರ್ಯೋದಯ : 06:08  ಸೂರ್ಯಾಸ್ತ : 06:39

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಕಾರಣಾಂತರಗಳಿಂದ ಮೋಸ ಹೋಗುವ ಸಾಧ್ಯತೆ ಇದೆ. ಹಣಕಾಸು ಪ್ರಗತಿಯಲ್ಲಿ ಸಾಧಾರಣ ಫಲ ಇದೆ. ಹೊಸದೊಂದು ವಸ್ತು ಖರೀದಿಯಿಂದ ಸಂತೋಷ ಆಗಲಿದೆ. ಆರೋಗ್ಯದಲ್ಲಿ ಉತ್ತಮ ಸ್ಥಿತಿ ಇರಲಿದ್ದು, ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಶಾಂತ ಮನಸ್ಥಿತಿಯಿಂದ ಉತ್ಸಾಹ ತುಂಬಿ ಕಾರ್ಯದಲ್ಲಿ ಯಶಸ್ಸು ಸಿಗುವುದು. ದಿನದ ಮಟ್ಟಿಗೆ ಖರ್ಚು ಹೆಚ್ಚಲಿದೆ. ಪ್ರೀತಿ ಪಾತ್ರರಿಂದ ಕಿರಿಕಿರಿ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣಲಿದೆ. ದಿನದ ಕೊನೆಯಲ್ಲಿ ಯಾವುದಾದರೂ ಸುದ್ದಿ ದುಃಖ ತರುವುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಜೀವನದಲ್ಲಿ ಅಭದ್ರತೆಯು ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಹೂಡಿಕೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕಚೇರಿ ಕೆಲಸಗಳು ನಿಧಾನವಾಗಿ ಸಾಗುವುದು. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕಟಕ: ಬಿಡುವಿಲ್ಲದ ಕೆಲಸದಿಂದ ಆಯಾಸವಾಗಲಿದೆ. ಕುಟುಂಬದ ಸಂತಸ ಹೆಚ್ಚಿಸಲು ಪ್ರಯತ್ನ ಮಾಡುವಿರಿ. ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಸ್ವಲ್ಪ ಖರ್ಚಿನ ದಿನ ನಿಮ್ಮದಾಗಲಿದೆ. ಬಹುದಿನಗಳ ಕನಸು ನನಸಾಗುವ ಸಮಯ ಬಂದಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಆಪ್ತರು ನಿಮ್ಮ ತಾಳ್ಮೆ ಪರೀಕ್ಷಿಸಲಿದ್ದು, ಈ ಬಗ್ಗೆ ಗಮನ ಇರಲಿ. ಯಾವುದೇ ವಿಷಯಗಳಲ್ಲಿ ದೃಢ ನಿರ್ಧಾರ, ರಾಜಿಯಾಗದ ಗುಣ ನಿಮ್ಮದಾಗಲಿ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ದಿನದ ಮಧ್ಯಭಾಗದಲ್ಲಿ ಸ್ವಲ್ಪ ಮನಸ್ಸಿಗೆ ಒತ್ತಡ ಆಗಲಿದೆ. ಉದ್ಯೋಗ ಮತ್ತು ಆರೋಗ್ಯದಲ್ಲಿ ಉತ್ತಮ ಸ್ಥಿತಿ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಆಪ್ತರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುವಿರಿ. ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ ದೊರೆಯಲಿದೆ.
ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯ ಉತ್ತಮವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಸಾಧ್ಯತೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ನಿಮ್ಮ ಹಿಂದೆ ಪಿತೂರಿ ಮಾಡುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆಹಾರದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಆಪ್ತರೊಂದಿಗಿನ ಮಾತುಕತೆಯಲ್ಲಿ ವ್ಯತ್ಯಾಸವಾಗಬಹುದಾಗಿದ್ದು, ಜಗಳವಾಗುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಮಾತು ನಿಯಂತ್ರಣದಲ್ಲಿರಲಿ. ಇದರ ಮಧ್ಯೆ ಉದ್ಯೋಗದ ಸ್ಥಳದಲ್ಲಿ ಮಾಡುವ ಕೌಶಲ್ಯದ ಕೆಲಸವು ನಿಮಗೆ ಯಶಸ್ಸು ತಂದು ಕೊಡುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಅತಿಯಾದ ಒತ್ತಡದ ಕಾರ್ಯ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ಆಪ್ತರೊಂದಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಯೋಗಿಯಿಂದ ಏನೆಲ್ಲ ಬದಲಾಯಿತು..? 

Horoscope Today

ಮಕರ: ನಿಸ್ಪೃಹ ಮನೋಭಾವದಿಂದ ಕಾರ್ಯ ಸಿದ್ಧಿ ಮಾಡುವುದು. ಈ ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವ ಸಾಧ್ಯತೆಗಳು ಹೆಚ್ಚು. ಅನಗತ್ಯವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅಗತ್ಯ. ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ. ಹೊಸದಾಗಿ ಕಾರ್ಯ ಪ್ರಾರಂಭಿಸುವುದು ದಿನದ ಮಟ್ಟಿಗೆ ಬೇಡ. ಜೀವನದ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸಿ ಮನಸ್ಥಿತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

Horoscope Today

ಮೀನ: ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯದಿಂದ ಮಾನಸಿಕ ಅಸಮತೋಲನ ಆಗಬಹುದು. ನಡೆದು ಹೋದ ಘಟನೆಗಳ ಬಗ್ಗೆ ಚಿಂತಿಸಿ ಫಲವಿಲ್ಲ. ಅತಿಥಿಗಳ ಆಗಮನ ಹರ್ಷ ತರಲಿದೆ. ಉದ್ಮೋಗದಲ್ಲಿ ಸಾಧಾರಣ ಪ್ರಗತಿ ಕಾಣುವಿರಿ. ಕೌಟಂಬಿಕ ವ್ಯಾಜ್ಯಗಳು ಉಂಟಾಗಬಹುದು. ಕೌಟಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ ಎಂದಿದ್ದೇಕೆ ಮಮತಾ ಬ್ಯಾನರ್ಜಿ?

VISTARANEWS.COM


on

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೀನಾಯವಾಗಿ ಸೋಲನುಭವಿಸಿದರೂ ತಾನು ಮಾತ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಇಂದು ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ನಾವು ಪಶ್ಚಿಮ ಬಂಗಾಳದಲ್ಲಿ ಸೋತಿಲ್ಲ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆದಿಲ್ಲ. ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಆದರೆ ಈಗ ರಾಜಭವನಕ್ಕೆ ಹೋಗುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಇವಿಎಂಗಳ ಲೂಟಿ ಮಾಡಲಾಗಿದೆ. ಚುನಾವಣಾ ಆಯೋಗ ಬಿಜೆಪಿ ಜೊತೆ ಸೇರಿಕೊಂಡಿದೆ. ಆದರೆ ನೈತಿಕವಾಗಿ ನಾವು ಗೆಲುವನ್ನು ಸಾಧಿಸಿದ್ದೇವೆ ಎಂದಿದ್ದಾರೆ.

Continue Reading

Latest

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

VISTARANEWS.COM


on

ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷೆಯ ಟ್ರೆಂಡ್‌ ಪಕ್ಕದ ಬಾಂಗ್ಲಾದೇಶಕ್ಕೆ ಆತಂಕ ಉಂಟುಮಾಡಿದೆ. ಎಂಟು ಎಕ್ಸಿಟ್‌ ಪೋಲ್‌ಗಳ ಪೈಕಿ ಆರು ಸಮೀಕ್ಷೆಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮುನ್ಸೂಚನೆ ನೀಡಿವೆ. ಈ ಮುನ್ಸೂಚನೆಯೇ ಬಾಂಗ್ಲಾದೇಶದ ಆತಂಕಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಸಂಸದ ಆಖ್ತರ್‌ ಹೊಸೈನ್‌ ಈ ವಿಷಯವನ್ನು ಅಲ್ಲಿನ ಸಂಸತ್ತಿನಲ್ಲಿ ಎತ್ತಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ಅಲ್ಲಿನ ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗಟ್ಟುತ್ತದೆ. ಇದು ಬಾಂಗ್ಲಾದೇಶದಲ್ಲಿ ಅತಿದೊಡ್ಡ ಮಾನವೀಯ, ಅರ್ಥಿಕ ಹಾಗೂ ನಿರಾಶ್ರಿತರ ಬಿಕ್ಕಟ್ಟನ್ನು ಸೃಷ್ಟಿಸಲಿದೆ. ಇದು ನಮ್ಮ ಅತಿದೊಡ್ಡ ಆತಂಕಕ್ಕೆ ಕಾರಣವಾಗಿದೆʼʼ ಎಂದು ಹೇಳಿದ್ದಾರೆ.
ಗಡಿದಾಟಿ ಭಾರತಕ್ಕೆ ಬಂದಿರುವ ಅಕ್ರಮ ಬಾಂಗ್ಲಾ ದೇಶಿ ನುಸುಳುಕೋರರನ್ನು ಬಿಜೆಪಿ ಹೊರಗಟ್ಟಿದರೆ ಅವರಿಗೆ ಹೊಸ ನೆಲೆ ಕಲ್ಪಿಸುವುದು ಹೇಗೆ ಎಂಬ ಚಿಂತೆ ಬಾಂಗ್ಲಾದೇಶವನ್ನು ಕಾಡುತ್ತಿದೆ. ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಸಮಸ್ಯೆಯೇ ಪಶ್ಚಿಮ ಬಂಗಾಳದ ಅತಿದೊಡ್ಡ ಚುನಾವಣಾ ವಿಷಯವಾಗಿತ್ತು. ಅಧಿಕಾರಕ್ಕೇರಿದ ತಕ್ಷಣವೇ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವುದಾಗಿ ಬಿಜೆಪಿ ಹೇಳಿತ್ತು.

Continue Reading

Latest

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

VISTARANEWS.COM


on

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌
ಐದು ರಾಜ್ಯಗಳ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದೆ. ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಯುಡಿಎಫ್‌, ಪುದುಚೇರಿಯಲ್ಲಿ ಎನ್‌ಡಿಎ ಜಯಭೇರಿ ಬಾರಿಸಲಿದೆ ಎಂದು ಎಲ್ಲಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಆದರೆ, ಪ.ಬಂಗಾಳ ಮತ್ತು ತಮಿಳುನಾಡು ಮತದಾನೋತ್ತರ ಸಮೀಕ್ಷೆಗಳು ಮಾತ್ರ ಭಿನ್ನ ಫಲಿತಾಂಶ ನೀಡಿವೆ.
ಅಸ್ಸಾಂನಲ್ಲಿ ಕಮಲ ಕಿಲಕಿಲ:
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಸಾಧ್ಯತೆಯನ್ನು ಎಲ್ಲಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಹಿಮಂತ ಬಿಸ್ವ ಶರ್ಮಾ ಎರಡನೇ ಅವಧಿಗೆ ಸಿಎಂ ಆಗುವ ಸಾಧ್ಯತೆ ಹೆಚ್ಚಿವೆ. ಆಕ್ಸಿಸ್‌ ಮೈ ಇಂಡಿಯಾ, ಪಿ-ಮಾರ್ಕ್‌, ಮಾಟ್ರಿಜ್‌, ಜೆವಿಸಿ ಮತ್ತು ಚಾಣಕ್ಯ ಸ್ಟ್ರಾಟಜಿಸ್‌ ಬಿಜೆಪಿ ಭಾರೀ ಬಹುಮತ ದಾಖಲಿಸಲಿದೆ ಎಂದು ಭವಿಷ್ಯ ನುಡಿದಿವೆ. ಕಾಂಗ್ರೆಸ್‌ ಪ್ರತಿಪಕ್ಷಕ್ಕೆ ಸೀಮಿತಗೊಳ್ಳಲಿದೆ.
ಕೇರಳಂನಲ್ಲಿ ಯುಡಿಎಫ್‌ಗೆ ಅಧಿಕಾರ?:
ಕೇರಳಂ ವಿಧಾನಸಭೆಯ ಬಲ 140. ಬಹುಮತಕ್ಕೆ 71 ಸೀಟುಗಳು ಬೇಕು. ಕೇರಳಂನಲ್ಲಿ ಹ್ಯಾಟ್ರಿಕ್‌ ದಾಖಲಿಸುವ ಎಲ್‌ಡಿಎಫ್‌ ಕನಸು ನುಚ್ಚುನೂರಾಗುವ ಸಾಧ್ಯತೆಗಳಿವೆ. ಈ ಸಲ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಾಟಿಕ್‌ ಫ್ರಂಟ್‌ – ಯುಡಿಎಫ್‌, ಜಯಭೇರಿ ಬಾರಿಸಲಿದೆ ಎಂದು ಆಕ್ಸಿಸ್‌ ಮೈ ಇಂಡಿಯಾ, ಪಿ-ಮಾರ್ಕ್‌, ಮಾಟ್ರಿಜ್‌, ಮನೋರಮಾ ನ್ಯೂಸ್‌ ಸಿವೋಟರ್ಸ್‌ ಮತ್ತು ಜೆವಿಸಿ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಕೇರಳಂನಲ್ಲಿ ಮೂರರಿಂದ ಏಳು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.
ಪುದುಚೇರಿಯಲ್ಲಿ ಎನ್‌ಡಿಎ?:
ಪುದುಚೇರಿ ವಿಚಾರದಲ್ಲಿ ಎಕ್ಸಿಟ್‌ ಪೋಲ್‌ ಏಜೆನ್ಸಿಗಳಿಗೆ ಯಾವುದೇ ಅನುಮಾನ ಇಲ್ಲ. 30 ಸದಸ್ಯಬಲದ ಪುದುಚೇರಿ ಅಸೆಂಬ್ಲಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದಿಗ್ವಿಜಯ ಬಾರಿಸಲಿದೆ ಎಂದು ಎಲ್ಲಾ ಚುನಾವಣೋತ್ತರ ಭವಿಷ್ಯ ನುಡಿದಿವೆ.
ಪ. ಬಂಗಾಳದಲ್ಲಿ ದೀದಿಯೋ, ಮೋದಿಯೋ?
ಪಶ್ಚಿಮ ಬಂಗಾಳದ ಎಕ್ಸಿಟ್‌ ಪೋಲ್‌ನಲ್ಲಿ ಏಕಮತ ಇಲ್ಲ. 6 ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, 4 ಸಮೀಕ್ಷೆಗಳು ಬಿಜೆಪಿ ಗೆಲುವಿನ ಭವಿಷ್ಯ ನುಡಿದಿವೆ. 2 ಸಮೀಕ್ಷೆಗಳು ಟಿಎಂಸಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿವೆ. ಪಿ-ಮಾರ್ಕ್‌, ಮಾಟ್ರಿಜ್‌, ಜೆವಿಸಿ, ಚಾಣಕ್ಯ ಈ ನಾಲ್ಕು ಸಮೀಕ್ಷೆಗಳಲ್ಲಿ ಬಿಜೆಪಿ ಸರಿಸುಮಾರು 150ಕ್ಕೂ ಅಧಿಕ ಸೀಟು ಗಳಿಸುವ ಸಾಧ್ಯತೆಗಳಿವೆ ಎಂದು ಹೇಳಿವೆ. ಪೀಪಲ್ಸ್‌ ಪಲ್ಸ್‌, ಜನಮತ ಪೋಲ್ಸ್‌ ಈ ಎರಡೂ ಸಮೀಕ್ಷೆಗಳ ಪ್ರಕಾರ ಟಿಎಂಸಿ 170ರಿಂದ 200 ಸೀಟು ಗೆದ್ದು ಅಧಿಕಾರದಲ್ಲಿ ಮುಂದುವರಿಯಲಿದೆ. ಅಂದ ಹಾಗೆ, 294 ಸದಸ್ಯ ಬಲದ ಪ.ಬಂಗಾಳ ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 147 ಸೀಟುಗಳನ್ನು ಗೆಲ್ಲಲೇ ಬೇಕು.
ದ್ರಾವಿಡ ದಂಗಲ್‌ನಲ್ಲಿ ಅಚ್ಚರಿ ಫಲಿತಾಂಶ?:
ತಮಿಳುನಾಡಿನಲ್ಲಿ ಬಹುತೇಕ ಎಲ್ಲಾ ಎಕ್ಸಿಟ್‌ ಪೋಲ್‌ಗಳು ಡಿಎಂಕೆ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದಿವೆ. ಎಐಎಡಿಎಂಕೆ ನೇತೃತ್ವದ ಎನ್‌ಡಿಎ 50 ರಿಂದ 80 ಸ್ಥಾನಗಳನ್ನು ಗಳಿಸುವ ಸಾಧ್ಯತೆಗಳಿವೆ. ಆದರೆ, ಇಲ್ಲೊಂದು ಟ್ವಿಸ್ಟ್‌ ಇದೆ. ಆಕ್ಸಿಸ್‌ ಮೈ ಇಂಡಿಯಾ ಮಾತ್ರ ವಿಜಯ್‌ ನೇತೃತ್ವದ ಟಿವಿಕೆಗೆ ಬಹುಮತ ಸಿಗಲಿದೆ ಎಂದು ಹೇಳಿದೆ. ದಳಪತಿ ವಿಜಯ್‌ ನೇತೃತ್ವದ ಟಿವಿಕೆ ತನ್ನ ಚೊಚ್ಚಲ ಯತ್ನದಲ್ಲೇ 98ರಿಂದ 120 ಸ್ಥಾನ ಗಳಿಸುವ ಸಾಧ್ಯತೆಗಳಿವೆ ಎಂದು ಆಕ್ಸಿಸ್‌ ಮೈ ಇಂಡಿಯಾ ಹೇಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 117 ಸೀಟುಗಳು ಬೇಕು.

Continue Reading

Latest

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

VISTARANEWS.COM


on

ದ್ರಾವಿಡ ದಂಗಲ್‌ನಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆಯೊಂದನ್ನು ಎಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಟಿಸಿದೆ. ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆ ನಾಯಕ ವಿಜಯ್‌ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ತಮಿಳುನಾಡಿನ ಎಲ್ಲಾ ಸಮೀಕ್ಷೆಗಳು ಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಹೇಳುತ್ತಿರುವಾಗಲೇ, ಆಕ್ಸಿಸ್‌ ಮೈ ಇಂಡಿಯಾ ಮಾತ್ರ ಈ ಸಲ ವಿಜಯ್‌ ನಿಜವಾದ ಜನನಾಯಗನ್‌ ಎಂದಿದೆ.
ತಮಿಳುನಾಡಿನ ಸಾರಥ್ಯ ವಿಜಯ್‌ಗೆ?
ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆಗೆ 98 ರಿಂದ 120 ಸೀಟುಗಳು ಸಿಗಲಿವೆ. ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ 92ರಿಂದ 110 ಹಾಗೂ 22ರಿಂದ 32 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆಗಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ 117 ಸೀಟು ಗೆಲ್ಲುವ ಪಕ್ಷದ ನಾಯಕ ಮುಖ್ಯಮಂತ್ರಿ ಆಗ್ತಾರೆ. ಸಮೀಕ್ಷೆ ಪ್ರಕಾರ ಟಿವಿಕೆ ಗರಿಷ್ಠ 120 ಸೀಟು ಗೆಲ್ಲುವ ಸಾಧ್ಯತೆಗಳಿವೆ.̇̇̇
ವೋಟ್‌ ಶೇರ್‌ನಲ್ಲೂ ಟಿವಿಕೆ ದಿಗ್ವಿಜಯ?
ಆಕ್ಸಿಸ್‌ ಮೈ ಇಂಡಿಯಾ ವೋಟ್‌ ಶೇರ್‌ ಸಮೀಕ್ಷೆಯನ್ನೂ ಪ್ರಕಟಿಸಿದೆ. ಅದರ ಪ್ರಕಾರ ಟಿವಿಕೆಗೆ ಶೇಕಡಾ 35ರಷ್ಟು ಮತ ಸಿಗಲಿದೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೂ ಶೇ. 35ರಷ್ಟು ವೋಟ್‌ ಶೇರ್‌ ಸಿಗಲಿದೆ. ಎನ್‌ಡಿಎಗೆ 23 ಶೇಕಡಾ ಮತ ಸಿಗುವ ಸಾಧ್ಯತೆಗಳಿವೆ.
ಸಿಎಂ ಸ್ಥಾನಕ್ಕೆ ವಿಜಯ್‌ ಬೆಸ್ಟ್‌?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಉತ್ತಮ ಅಭ್ಯರ್ಥಿ ಎಂಬ ಪ್ರಶ್ನೆಯನ್ನೂ ಆಕ್ಸಿಸ್‌ ಮೈ ಇಂಡಿಯಾ ಜನರ ಮುಂದಿಟ್ಟಿದೆ. ಅದರ ಪ್ರಕಾರ ಶೇ. 37ರಷ್ಟು ಮತದಾರರು ವಿಜಯ್‌ ಪರ ಒಲವು ತೋರಿದ್ದಾರೆ. ಶೇ. 35ರಷ್ಟು ಮಂದಿ ಮಾತ್ರ ಸ್ಟಾಲಿನ್‌ ಬೆಸ್ಟ್‌ ಅಂದಿದ್ದಾರೆ.
ವಿಜಯ್‌ಗೆ ಯುವ ಸಮೂಹದ ಬೆಂಬಲ
ಸರ್ವೇ ಪ್ರಕಾರ ಶೇ. 68ರಷ್ಟು ಹೊಸ ವೋಟರ್ಸ್‌ ವಿಜಯ್‌ಗೆ ಬೆಂಬಲ ನೀಡಿದ್ದಾರೆ. 20ರಿಂದ 29 ವಯೋಮಾನದ ಶೇ. 59ರಷ್ಟು ಯುವಕರು ಟಿವಿಕೆಗೆ ಜೈ ಎಂದಿದ್ದಾರೆ. 30-39 ವಯೋಮಾನದ ಶೇ. 45 ಮಂದಿ ದಳಪತಿಯನ್ನು ದಡಮುಟ್ಟಿಸಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

Continue Reading
Advertisement
ದೇಶ59 minutes ago

ಬಂಗಾಳದಲ್ಲಿ ಬಿಜೆಪಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ, ಯಾರ ಪಾಲಾಗಲಿದೆ ಮುಖ್ಯಮಂತ್ರಿ ಗದ್ದುಗೆ?

ರಾಜಕೀಯ1 hour ago

ವಿಜಯ್‌ ಪ್ರಮಾಣವಚನಕ್ಕೆ ಬ್ರೇಕ್‌, ರಾಷ್ಟ್ರಪತಿಗೆ ಟಿವಿಕೆ ಪತ್ರಚೆನ್ನೈ

ರಾಜಕೀಯ4 hours ago

ತಮಿಳುನಾಡು ರಾಜಕೀಯಕ್ಕೆ ರೋಚಕ ಟ್ವಿಸ್ಟ್‌, ದಳಪತಿ ಪ್ರಮಾಣವಚನಕ್ಕೆ ಬ್ರೇಕ್‌, ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ

ಕ್ರೈಂ5 hours ago

ಪ.ಬಂಗಾಳ ಶೂಟೌಟ್‌ಗೆ ಟ್ವಿಸ್ಟ್‌, ಅಸಲಿಗೆ ಸುವೇಂದು ಟಾರ್ಗೆಟ್‌ ಆಗಿದ್ರಾ?

ಕ್ರೈಂ5 hours ago

ಪಶ್ಚಿಮ ಬಂಗಾಳದಲ್ಲಿ ರಕ್ತದೋಕುಳಿ, ಸುವೇಂದು ಅಧಿಕಾರಿ ಪಿಎ ಚಂದ್ರನಾಥ್‌ ಶೂಟೌಟ್‌‌..!

Latest1 day ago

ಪಶ್ಚಿಮ ಬಂಗಾಳದಲ್ಲಿ ಕೇಸರಿ ಪರ್ವ: ಯಾರಾಗಲಿದ್ದಾರೆ ʼಸಿಎಂʼ?

Latest1 day ago

ದಳಪತಿʼ ಪಟ್ಟಾಭಿಷೇಕಕ್ಕೆ ಕ್ಷಣಗಣನೆ : ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿ

Latest2 days ago

ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ ಎಂದಿದ್ದೇಕೆ ಮಮತಾ ಬ್ಯಾನರ್ಜಿ?

Latest2 days ago

ಬಿಜೆಪಿ ಬಂಗಾಳ ಗೆದ್ದಾಯ್ತು, ಸಿಎಂ ರೇಸ್‌ನಲ್ಲಿ ಯಾರು?

Latest2 days ago

ತಮಿಳುನಾಡು: ಬಹುಮತ ಪಡೆಯಲು ದಳಪತಿ ಮುಂದಿರುವ ತಂತ್ರಗಳೇನು?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌