prerane morning spiritual thoughts in kannada about avatars of godPrerane : ದೇವರ ಅವತಾರ; ಏನಿದೆ ಇದರ ಹಿಂದಿನ ವಿಚಾರ? - Vistara News

ಧಾರ್ಮಿಕ

Prerane : ದೇವರ ಅವತಾರ; ಏನಿದೆ ಇದರ ಹಿಂದಿನ ವಿಚಾರ?

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ದೇವರು ಅವತಾರ ಎತ್ತುವುದು ಎಂದರೆ ಏನು? ಎಂದು ತಿಳಿಸುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

hindu god Avatar spiritual meaning
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
prerane 
suresh tharodi
prerane suresh tharodi

ತಾರೋಡಿ ಸುರೇಶ
ಶ್ರೀರಾಮ ಮತ್ತು ಶ್ರೀಕೃಷ್ಣ ಹಾಗೂ ಇನ್ನೂ ಅನೇಕ ಮಹಾಪುರುಷರನ್ನು ಅವತಾರಪುರುಷರೆಂದು ಆರಾಧಿಸುವ ಪರಂಪರೆ ನಮ್ಮ ದೇಶದಲ್ಲಿದೆ. ಅವರ ಪುಣ್ಯಕಥೆಗಳನ್ನು ಪುನಃಪುನಃ ಕೇಳಿ ಧನ್ಯರಾಗಬೇಕೆಂದು ಬಯಸುವ ಭಕ್ತರೂ ಅಸಂಖ್ಯ. ಒಟ್ಟಾರೆ ಅವತಾರದ ಪರಿಕಲ್ಪನೆಯು ನಮ್ಮ ಭಾರತೀಯ ಜೀವನದ ಒಂದು ಅವಿಭಾಜ್ಯ ಅಂಗ.

ಆದರೆ ಅವತಾರದ ಯತಾರ್ಥತೆಯ ಬಗ್ಗೆಯೇ ಪ್ರಶ್ನೆಗಳೂ ಇಲ್ಲದಿಲ್ಲ.

1. ವಿಶ್ವವ್ಯಾಪಕನಾದ ದೇವರಿಗೆ ಅವತಾರವೆನ್ನುವುದು ಸರಿಯಲ್ಲ. ಅವತರಿಸುವುದು ಎಂದರೆ ಇಳಿದುಬರುವುದು ಎಂದರ್ಥ. ಹಾಗೆ ಇಳಿದು ಬಂದರೆ ಅವನು ಹಿಂದೆ ಇದ್ದ ಜಾಗವು ಬರಿದಾಗುವುದೇ? ಅವನು ಇಲ್ಲದ ಜಾಗವೇ ಇಲ್ಲ. ಆಗ ಅವನು ಒಂದೆಡೆಯಿಂದ ಇನ್ನೊಂದೆಡೆಗೆ ಇಳಿದುಬರುವುದು ಎಂದರೆ ಅರ್ಥಹೀನವಲ್ಲವೇ? ಹಾಗಾಗಿ ಭಗವಂತನಿಗೆ ಆಗಮನ ನಿರ್ಗಮನಗಳಿಲ್ಲ.

2. ಅವತಾರವೆಂದರೆ ಮನುಷ್ಯ ಇತ್ಯಾದಿ ಜನ್ಮಗಳನ್ನು ತಾಳುವುದು. ಆದರೆ ಹಾಗೆ ಹೇಳುವುದು ಭಾರತೀಯ ಶಾಸ್ತ್ರಚಿಂತನೆಗೇ ವಿರುದ್ಧವಾದದ್ದು. ಏಕೆಂದರೆ ಹುಟ್ಟು-ಸಾವುಗಳು ವಿಕಾರಗಳು. ಅವತಾರವಾದವನ್ನು ಒಪ್ಪಿದರೆ ಭಗವಂತನಿಗೆ ವಿಕಾರವನ್ನು ಆರೋಪಿಸಿದಂತಾಗುತ್ತದೆ. ಅದು ಸರಿಯಲ್ಲ. ಅವಿಕಾರಾಯ ಶುದ್ಧಾಯ ಎಂದು ಅವನನ್ನು ಸ್ತುತಿಸುತ್ತೇವೆ.

3. ಭಗವಂತನು ಎಲ್ಲರೊಳಗೂ ಇರುವ ಅಂತರ್ಯಾಮಿ. ಆದ್ದರಿಂದ ದುಷ್ಟನಿಗ್ರಹ, ಅಧರ್ಮದ ನಾಶವನ್ನು ಅವತರಿಸಿಯೇ ಮಾಡಬೇಕೆಂದಿಲ್ಲ. ಅವನು ಸರ್ವಶಕ್ತ,ಸರ್ವಜ್ಞ. ಒಳಗಿನಿಂದಲೇ ದುಷ್ಟರ ಬುದ್ಧಿಯಲ್ಲಿ ಪರಿವರ್ತನೆ ತರಬಲ್ಲ. ಆದ್ದರಿಂದ ಅವತಾರದ ಆವಶ್ಯಕತೆಯೇ ಇಲ್ಲವಲ್ಲ ?

4. ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ಆದರ್ಶ ಮಾನವರೆಂದು ಗೌರವಿಸಿ ಅನುಸರಿಸಿದರೆ ಸಾಲದೇ? ಎನ್ನುವುದು ಕೆಲವರ ವಾದ.

ಆದರೆ ದೈವತ್ವವನ್ನು ಅಳೆಯಲು ಅತೀಂದ್ರಿಯ ದೃಷ್ಟಿ ಬೇಕು ಎನ್ನುವುದು ಋಷಿಗಳ ಅನುಭವಾತ್ಮಕವಾದ ನಿರ್ಣಯ. “ದೃಶ್ಯತೇ ಜ್ಞಾನಚಕ್ಷುರ್ಭಿಃ ತಪಶ್ಚಕ್ಷುರ್ಭಿರೇವಚ….” ಜೊತೆಗೆ, ಪ್ರತ್ಯಕ್ಷಾನುಭವ, ಯುಕ್ತಿ-ತರ್ಕ ಮತ್ತು ಆಪ್ತವಾಕ್ಯ (ಅನುಭವಿಗಳ ನೈಜಕಥನ) ಇವುಗಳನ್ನು ಆಧರಿಸಿಯೇ ನಾವು ನಿಜವನ್ನು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ.

ಅವತಾರದ ವಿಷಯದಲ್ಲಿ ಜ್ಞಾನಿಗಳ ಅನುಭವದ ಗಾಥೆಯನ್ನೂ, ಆ ಅನುಭವಕ್ಕೆ ಹೊಂದುವ ಯುಕ್ತಿಯನ್ನೂ, ಇವೆರಡನ್ನೂ ಆಧರಿಸಿರುವ ಆಪ್ತ(ಸತ್ಯ)ವಚನಗಳನ್ನೂ ಭಾರತೀಯ ಸಾಹಿತ್ಯದಲ್ಲಿ ವಿಪುಲವಾಗಿ ಕಾಣುತ್ತೇವೆ. ಜೊತೆಗೆ ಭಿನ್ನ ಭಿನ್ನ ಕಾಲ-ದೇಶಗಳಲ್ಲಿ ಅವತಾರಪುರುಷರ ದರ್ಶನಾದಿ ಅನುಭವಗಳು ಸಾಧಕರಲ್ಲಿ ಕಂಡುಬಂದಿರುವ ಇತಿಹಾಸ ಕೂಡ ಇದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತತಮವಾಗಿ ಮೇಲಿನ ಪ್ರಶ್ನೆಗಳ ಸಮಾಧಾನಕ್ಕೆ ಯತ್ನಿಸೋಣವಂತೆ. ಭಗವಂತನಿಗೆ ಪಾರಮಾರ್ಥಿಕವಾಗಿ ಏರಿಕೆ, ಇಳಿಕೆ ಯಾವುದೂ ಇಲ್ಲ. ಅವನು ಸರ್ವತ್ರ ಸದಾ ಪರಿಪೂರ್ಣನು. ಕರ್ಮಸಂಬಂಧದಿಂದ ಉಂಟಾಗುವ ಹುಟ್ಟೂ ಅವನಿಗೆ ವಾಸ್ತವವಾಗಿ ಇಲ್ಲ. ಅವನಿಗೆ ಅವತಾರವನ್ನು ಹೇಳಿರುವುದು ಔಪಚಾರಿಕ ಅರ್ಥದಲ್ಲಿ ಮಾತ್ರ. ಅವನು ತನ್ನ ಸಂಕಲ್ಪದಿಂದ ಇಲ್ಲಿ ಯಾವಾಗ ಜೀವಿಗಳಿಗೆ ವ್ಯಕ್ತಪಡುತ್ತಾನೆಯೋ ಆಗ ಅದು ಅವನ ‘ಅವತಾರ’ ಎಂದು ಕರೆಯಲಾಗಿದೆ. ಹೀಗೆ ಭಗವಂತನ ಅವತಾರವು ಅಭಿವ್ಯಕ್ತಿಯೇ ಹೊರತು ವಾಸ್ತವವಾದ ಇಳಿತವಲ್ಲವಾದ್ದರಿಂದ ಅವನ ಪೂರ್ಣತೆ ವ್ಯಾಪಕತೆಗಳಿಗೆ ವಿರೋಧವೇನೂ ಇಲ್ಲ.

ಇದನ್ನೂ ಓದಿ : Guru Purnima 2023 : ʻಗುರುʼ ಎಂದರೆ ʻಲಘುʼ ಅಲ್ಲ; ಗುರುವೇ ದೇವರು

ಹುಟ್ಟುಸಾವುಗಳನ್ನು ವಿಕಾರವೆಂದು ಕರೆಯುವ ಶಾಸ್ತ್ರಗಳು ಭಗವಂತನನ್ನು ಅಜಾಯಮಾನೋ ಬಹುಧಾ ವಿಜಾಯತೇ-ಅಂದರೆ ಹುಟ್ಟದೆಯೇ ಹುಟ್ಟುತ್ತಾನೆ ಎನ್ನುತ್ತವೆ. ಅಂದರೆ ಅವನು ತನ್ನ ಸಂಕಲ್ಪಕ್ಕೆ ಅನುಗುಣವಾಗಿ ಅಭಿವ್ಯಕ್ತನಾಗುತ್ತಾನೆಯೇ ಹೊರತು ಜನ್ಮಾಂತರದ ಕರ್ಮಗಳ ಕಾರಣದಿಂದಲ್ಲ. ಆದ್ದರಿಂದ ವಿಕಾರವೆಂಬುದು ಅವನಿಗೆ ಅನ್ವಯಿಸುವುದಿಲ್ಲ.

ಅಂತರ್ಯಾಮಿಯಾಗಿ ತನ್ನ ಸಂಕಲ್ಪವನ್ನು ಪೂರೈಸಿಕೊಳ್ಳುವುದು ಸರ್ವಶಕ್ತನಾದ ಅವನಿಗೆ ಅಸಾಧ್ಯವೇನಲ್ಲ. ಹಾಗೆಂದು ಭಕ್ತರ ಅಂತರ್ಬಾಹ್ಯ ದೃಷ್ಟಿಗೆ ಗೋಚರನಾಗಿ, ಪರಮನಯನೋತ್ಸವಕಾರಣನಾಗಿ ಅವರನ್ನು ಉದ್ಧಾರ ಮಾಡುವ ಸ್ವಾತಂತ್ರ್ಯ ಅವನಿಗಿಲ್ಲವೆ?

ಮೋಕ್ಷ ಪಡೆಯಲು ಏನು ಮಾಡಬೇಕು? ಈ ವಿಡಿಯೋ ನೋಡಿ.

ಅವತಾರಪುರುಷರು ಧ್ಯಾನಕ್ಕೆ ಶುಭಾಶ್ರಯರಾಗಿ ಉಪಾಸಕರಿಗೆ ಭೋಗ-ಮೋಕ್ಷಗಳನ್ನು ಅನುಗ್ರಹಿಸುವ ಶಕ್ತಿಯುಳ್ಳವರಾಗಿರುತ್ತಾರೆ. ಅವತಾರಕ್ಕೆ ಪೂರ್ವದಲ್ಲೂ, ಅವತಾರಕಾಲದಲ್ಲೂ ಮತ್ತು ಉಪಸಂಹಾರದ ನಂತರವೂ ಅವರ ಸತ್ತೆಯು-ಪ್ರಭಾವವು ಒಂದೇ ತೆರನಾಗಿರುತ್ತದೆ. ಅದೇ ತಾನು ಒಬ್ಬ ಜೀವಿಯಾಗಿದ್ದು ತನ್ನ ಸಾಧನೆಯಿಂದ ಸಿದ್ಧಿಯನ್ನು ಪಡೆದವನಿಗೆ ಆ ಮಟ್ಟದ ಸಾಮರ್ಥ್ಯವಿರುವುದಿಲ್ಲ. ಇನ್ನು ಆದರ್ಶವಾದ ಜೀವನವನ್ನು ನಡೆಸಿರುವ ನಾಯಕನಾಗಿದ್ದಲ್ಲಿ ಅವನ ಅನುಕರಣೆಯಿಂದ ಜನರು ಧಾರ್ಮಿಕರಾಗಬಹುದು ಅಷ್ಟೆ.

ಹೀಗೆ ಅವತಾರದ ಪರಿಕಲ್ಪನೆಯು ಅತೀಂದ್ರಿಯ ಅನುಭವಸಂಪನ್ನರ ಕಾರಣದಿಂದ ಭಾರತೀಯರ ಜೀವನವನ್ನು ಹಾಸುಹೊಕ್ಕಾಗಿ ವ್ಯಾಪಿಸಿಕೊಂಡಿದೆ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Navaratri: ನವರಾತ್ರಿಯಂದು ಬಣ್ಣಕ್ಕೂ ಎಲ್ಲಿಲ್ಲದ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಒಂದೇ ತರಹ ಬಟ್ಟೆ ಧರಿಸಿ ಮಿಂಚಿದ್ದಾರೆ.

VISTARANEWS.COM


on

By

navaratri
Koo

ಬೆಂಗಳೂರು: ನವರಾತ್ರಿಯ(Navaratri) ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ. ದೇವಿಯನ್ನು ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಇನ್ನೊಂದು ವಿಶೇಷ ಎಂದರೆ 9 ದಿನಗಳಿಗೆ 9 ಬಣ್ಣದ ಬಟ್ಟೆ. ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸುವುದು ವಾಡಿಕೆ. ಹೀಗೆ ನವರಾತ್ರಿಯ ವೈಭವ ಜೋರಾಗಿದ್ದು, ಹೆಂಗಳೆಯರು ಒಂದೇ ತರಹದ ಸೀರೆಯನ್ನುಟ್ಟು ಮಿಂಚಿದ್ದಾರೆ.

ಜೆ.ಎಸ್.ಎಸ್ ಪದವಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಮಹಿಳಾ ಸಿಬ್ಬಂದಿ ಶರನ್ನವರಾತ್ರಿ ಸಂಭ್ರಮದ ಮೊದಲ ದಿನ .

ಶರನ್ನವರಾತ್ರಿ ಸಂಭ್ರಮದ ಎರಡನೇ ದಿನ ಹಸಿರು ಸೀರೆಯಲ್ಲಿ ಮಿಂಚಿ ಸಂಭ್ರಮಿಸಿ ಮಹಿಳಾಮಣಿಯರು

ತರ್ಮಾಕೋಲ್‌ನಲ್ಲಿ ಮೂಡಿ ಬಂತು ಅಂಬಾರಿ

ನಾಡ ಹಬ್ಬ ದಸರಾ ಹಾಗೂ ನವರಾತ್ರಿ ಸಂಭ್ರಮ ಶುರುವಾಗಿದೆ. ವಿಜಯ ದಶಮಿಯಂದು ಗರ್ಜಿಸಲು ತರ್ಮಾಕೋಲ್ ಆನೆಗಳು, ಅಂಬಾರಿ ಸಹ ರಗಡ್ಡಗಿದ್ದು, ಗತಿಸಿ ಹೋದ ಇತಿಹಾಸ ಇಲ್ಲಿ ಕಾಣಸಿಗುತ್ತಿವೆ. ಒಂಬತ್ತು ದಿನಗಳ ನವರಾತ್ರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹೆಂಗಳೆಯರು ಕಲರ್ ಕಲರ್ ಸೀರೆಯುಟ್ಟು ಮಸ್ತಿ ಮಾಡುತ್ತಿದ್ದರೆ, ಇತ್ತ ವಿಜಯದಶಮಿ ದಿನಕ್ಕೆ ತರ್ಮಾಕೋಲ್‌ನಲ್ಲಿ ಅಂಬಾರಿ ಮೂಡಿ ಬಂದಿದೆ. ಇದನ್ನು ನೋಡಿದರೆ ಸೇಮ್‌ ಮೈಸೂರು ಅಂಬಾರಿಯಂತೆ ಭಾಸವಾಗುತ್ತದೆ.

ಅಂದಹಾಗೆ ವುಡ್‌ನಲ್ಲಿ ಬೇಕಾದಂತಹ ಐಟಮ್ಸ್ ತಯಾರಿಸೋದು ಕಷ್ಟವಲ್ಲ ಆದರೆ ಅದನ್ನು ಮೆಂಟೇನ್ ಮಾಡೋದು ಕಷ್ಟಕರವೆಂದು ಜನರು ತರ್ಮಾಕೋಲ್ ಗೊಂಬೆಗಳಿಗೆ ಮೊರೆ ಹೋಗಿದ್ದಾರೆ. ತರ್ಮಾಕೋಲ್‌ನಲ್ಲಿ ಅಂಬಾರಿ, ಜೋಡಿ ಗೊಂಬೆಗಳು, ಹಂಪಿಯ ದೇವಸ್ಥಾನ, ಯಕ್ಷಗಾನದ ಮಂಟಪ, ಆನೆ, ಕಮಲದ ಹೂಗಳು ಮಾತ್ರವಲ್ಲ ಮೈಸೂರು ಅರಮನೆ ಸೇರಿದಂತೆ ಹಲವಾರು ವಿಭಿನ್ನವಾದ ಕಲೆಗಳು ಮೂಡಿ ಬಂದೀವೆ. ಸಿಲಿಕಾನ್ ಸಿಟಿ ಜನರಿಗೆ ಹಬ್ಬದ ಸಂಭ್ರಮಕ್ಕೆ ತರ್ಮಾಕೋಲ್‌ನಿಂದ ಮಾಡಿರುವ ವಸ್ತುಗಳು ಗಮನ ಸೆಳೆಯುತ್ತಿವೆ.

Continue Reading

ಕೊಡಗು

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

VISTARANEWS.COM


on

By

Kodagu News
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್
Koo

ಮಡಿಕೇರಿ: ನಮ್ಮ ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯವಾಗಿ ಬದುಕುವ ಹಕ್ಕನ್ನು ನೀಡಿದೆ. ನಮ್ಮ ಇಂದಿನ ಆಚರಣೆಗಳಿಂದ ನಾಳಿನ ಬದುಕಿಗೆ ತೊಂದರೆಯಾಗಬಾರದು. ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಿರುವುದು ಕೂಡ ಇದೇ ಉದ್ದೇಶದಿಂದಲೇ ಹೊರತು, ನಮ್ಮ ಸಂಸ್ಕೃತಿ , ಸಂಪ್ರದಾಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟ ಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕೊಡಗು (Kodagu News) ಪ್ರೆಸ್ ಕ್ಲಬ್ ವತಿಯಿಂದ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಸರಾದಲ್ಲಿ ನಿಗಧಿಗಿಂತ ಹೆಚ್ಚಿನ ಡೆಸಿಬಲ್ ಡಿಜೆ ಬಳಸದಂತೆ ನಿಯಮವೇ ಇದೆ. ಈ ಕಾನೂನನ್ನು ನಾವೂ ಗೌರವಿಸಬೇಕು. ಡಿಜೆಯಿಂದ ಯುವಕರಿಗೆ ಹೆಚ್ಚಿನ ತೊಂದರೆ ಇಲ್ಲ. ಆದರೆ ವಯೋವೃದ್ಧರು, ಮಂಟಪದ ರಕ್ಷಣೆಗೆ ಇರುವ ಪೊಲೀಸರು, ಸಣ್ಣ ಮಕ್ಕಳು, ಪ್ರಾಣಿ ಪಕ್ಷಿಗಳಿಗೆ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ದೇಶದ ಕಾನೂನಿನಂತೆ ಇಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆ ಸ್ವಾತಂತ್ರ್ಯಕ್ಕೆ ಯಾರೂ ತೊಂದರೆ ಮಾಡಬಾರದು ಎಂಬ ಉದ್ದೇಶಕ್ಕೆ ಕಾನೂನು ಜಾರಿ ಮಾಡಲಾಗಿದೆ.

ನಮ್ಮ ಹಿರಿಯ ತಲೆಮಾರಿನವರು ಹಿಂದೆ ಹದಿನಾಲ್ಕು, ಹದಿನಾರು ವಯಸ್ಸಿಗೆ ಮದುವೆಯಾಗುತ್ತಿದ್ದರು. ನಾವೂ ಸಂಪ್ರದಾಯದ ಹೆಸರಿನಲ್ಲಿ ಅದನ್ನು ಮುಂದುವರೆಸಿದ್ದೇವು. ಕ್ರಮೇಣ ಕಾನೂನು ಬದಲಾವಣೆಯಿಂದ ಈ ಪದ್ಧತಿಗೆ ಕಡಿವಾಣ ಹಾಕಲಾಗಿದ್ದು, ಇಂದು ಈ ಪದ್ಧತಿಯನ್ನು ಕೈ ಬಿಡಲಾಗಿದೆ. ಡಿಜೆ ನಿರ್ಬಂಧ ಹಿಂದಿನ ಉದ್ದೇಶವೂ ಇದೆ. ನಾವು ನಮ್ಮ ಹಿಂದಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳಬೇಕು. ಹಿರಿಯರು ಸಂಪ್ರದಾಯವನ್ನು ಬಿಡದೇ ಆಚರಿಸಿದ್ದಾರೆ. ಅವರು ಉಳಿಸಿ ಬೆಳೆಸಿರುವ ಸಂಪ್ರದಾಯವನ್ನು ಅದೇ ರೀತಿಯನ್ನೇ ಮುನ್ನಡೆಸಿಕೊಂಡು ಮುನ್ನಡೆಯಬೇಕಾದ ಜವಾಬ್ದಾರಿ ನಮ್ಮ ಮುಂದಿದೆ. ದಸರಾದಲ್ಲೂ ನಮ್ಮ ಸಂಪ್ರದಾಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಳೆದ ಬಾರಿ ಡೆಸಿಬಲ್‌ ಡಿಜೆ ಬಳಕೆ

ಇಂದು ಎಲ್ಲ ಕಡೆ ಪಬ್‌ಗಳಲ್ಲಿ ಡಿಜೆ, ಲೇಸರ್ ಲೈಟ್ ಕಾಣಸಿಗುತ್ತದೆ. ಆದರೆ ಕೊಡಗಿನ ಒಲಗ ಮೈಸೂರು ದಾಟಿದರೆ ಎಲ್ಲಿ ಇದೆ. ಇಂತಹ ವೈವಿಧ್ಯಮಯ ಸಂಸ್ಕೃತಿ ನಮ್ಮದಾಗಿರುವಾಗ ಬೇರೆ ಅನುಕರಣೆ ಯಾಕೆ ಬೇಕೆಂದು ಪ್ರಶ್ನಿಸಿದರು.
ಡಿಜೆ ಬಳಸುವಾಗ 55 – 75 ಡೆಸಿಬಲ್ ಒಳಗೆ ಮಾತ್ರ ಇರಬೇಕು. ಇದಕ್ಕಿಂತ ಜಾಸ್ತಿ ಮಾಡಬಾರದು. ಇದಕ್ಕಿಂತ ಹೆಚ್ಚಿನ ಡೆಸಿಬಲ್‌ ಬಳಸಿದ್ದಲ್ಲಿ ಶಬ್ದ ಮಾಲಿನ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಹೀಗಾಗಿ ಅದು ಹಾನಿಕಾರಕವಾಗಲಿದೆ. ಕಳೆದ ಬಾರಿ ದಸರಾದಲ್ಲಿ ನಿಗಧಿತ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್‌ನಲ್ಲಿ ಡಿಜೆ ಬಳಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಶಬ್ದಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದು, ಅವರು ಈ ಬಗ್ಗೆ ಕ್ರಮ ವಹಿಸುತ್ತಾರೆಂದು ಹೇಳಿದರು.

ದಸರಾ ಭದ್ರತೆಗೆ ಹೆಚ್ಚಿನ ಕ್ರಮ

ಈ ಬಾರಿ ದಶಮಂಟಪ ಸಮಿತಿಗಳು ಡಿಜೆ ಸಂಬಂಧದ ನಿಯಮ ಪಾಲಿಸುವ ಭರವಸೆ ಇದೆ. ಲೇಸರ್ ಬಳಕೆಯಿಂದ ತೊಂದರೆ ಆಗುತ್ತದೆ ಎಂಬ ಬಗ್ಗೆಯೂ ಸಮಿತಿಯವರೇ ಗಮನ ಹರಿಸಬೇಕು ಎಂದರು. ದಸರಾ ಭದ್ರತೆಗೆ ಈ ಬಾರಿ ಹೆಚ್ಚಿನ ಕ್ರಮ ವಹಿಸಲಾಗಿದೆ. ಸಾವಿರಕ್ಕೂ ಅಧಿಕ ಪೊಲೀಸರು, ಜಂಬೋ ಟೀಮ್ ದಸರಾ ಸಂದರ್ಭ ಹೆಚ್ಚಿನ ನಿಗಾ ವಹಿಸಲಿದೆ. ವಿಶೇಷವಾಗಿ ಹದಿನೈದು ಮಂದಿಯ, ಆರೇಳು ಜಂಬೋ ತಂಡವನ್ನು ತಯಾರಿ ಮಾಡಲಾಗಿದೆ.

ಗುಂಪಿನಲ್ಲಿ ಗಲಾಟೆ, ಮಹಿಳೆಯರಿಗೆ ಕಿರಿಕಿರಿ ಮಾಡುವುದನ್ನು ತಪ್ಪಿಸುವ ಕಾರ್ಯವನ್ನು ಈ ತಂಡ ಮಾಡಲಿದೆ. ಹಲವು ಪೊಲೀಸರು ದ್ವಿಚಕ್ರ ವಾಹನದಲ್ಲಿಯೂ ನಗರದಲ್ಲಿ ವೀಕ್ಷಣೆಯಲ್ಲಿರುತ್ತಾರೆ. ಟ್ರಾಫಿಕ್ ನಿಯಂತ್ರಣ, ಹೆಲ್ಪ್‌ಲೈನ್‌ ಬಗ್ಗೆಯೂ ಗಮನ ಹರಿಸಲಾಗಿದೆ. ಕಳೆದ ಬಾರಿಯ ಅನುಭವದೊಂದಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ದಸರಾಗೆ ಬಂದೋಬಸ್ತ್‌ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಕಳ್ಳರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಇದಕ್ಕಾಗಿಯೇ ಹೆಚ್ಚು ಲೈಟ್ ಅಳವಡಿಕೆ, ಸಿಸಿ ಕ್ಯಾಮೆರಾ ಅಳವಡಿಕೆ ಮೇಲೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಪ್ರತಿಯೊಂದು ಮಂಟಪಕ್ಕೂ 1 ಪೊಲೀಸ್‌ ಆಫೀಸರ್‌ ಸೇರಿದಂತೆ 8 ಮಂದಿ ಸಿಬ್ಬಂದಿ ಕಾವಲಿರುತ್ತಾರೆ ಎಂದು ಕೆ.ರಾಮರಾಜನ್ ಹೇಳಿದರು. ದಸರಾ ಸಂದರ್ಭ ಯಾವುದೇ ಅಂಗಡಿಯಲ್ಲಿಯೂ ಮುಖವಾಡ ಮಾರಾಟಕ್ಕೆ ಅವಕಾಶ ಇಲ್ಲ. ಮುಖವಾಡ ಮಾರಾಟ ಕಂಡು ಬಂದಲ್ಲಿ ನಗರಸಭೆ ವಶಕ್ಕೆ ಪಡೆಯುತ್ತದೆ ಹಾಗೂ ದಸರಾ ನಂತರ ಹಿಂತಿರುಗಿಸುವ ಕೆಲಸವಾಗುತ್ತದೆ ಎಂದು ಹೇಳಿದರು.

ಬಾಂಗ್ಲಾ ದೇಶಿಯರು ಇದ್ದ ಬಗ್ಗೆ ಸಂಶಯವಿದ್ದಲ್ಲಿ ಮಾಹಿತಿ ಕೊಡಿ

ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ. ತೋಟಗಳ ನಿರ್ವಹಣೆಗೆ ಹೊರ ರಾಜ್ಯದ ಕಾರ್ಮಿಕರ ಅಗತ್ಯವೂ ಇದೆ. ದೇಶದಲ್ಲಿ ಯಾರೂ ಎಲ್ಲಿಗೆ‌ಬೇಕಾದರೂ ತೆರಳಿ ಉದ್ಯೋಗ ಮಾಡುವ ಅವಕಾಶವಿದೆ. ಆದರಿಂದ ಅವರನ್ನು ಬರಬಾರದು ಎನ್ನಲು ಸಾಧ್ಯವಿಲ್ಲ ಅಥವಾ ಅವರ ಮೇಲೆ ಹೆಚ್ಚಿನ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದರಿಂದ ನೈಜ ಕಾರ್ಮಿಕರಿಗೆ ಇರುಸು ಮುರುಸು ಉಂಟಾಗುತ್ತದೆ. ಹಾಗಾಗೀ ಕಾರ್ಮಿಕರನ್ನು ನೇಮಿಸುವ ಮುನ್ನ ತೋಟದ ಮಾಲೀಕರೇ ಎಚ್ಚರ ವಹಿಸಬೇಕು. ಅವರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೇಂದು ಬಂಗ್ಲಾದೇಶದಿಂದ ಬಂದರೆ ಅವರಿಗೆ ಇಲ್ಲಿರಲು ಅವಕಾಶ ಇಲ್ಲ. ಬಾಂಗ್ಲಾ ದೇಶಿಯರು ಇದ್ದ ಬಗ್ಗೆ ಸಂಶಯವಿದ್ದಲ್ಲಿ ನಮಗೆ ಮಾಹಿತಿ ಕೊಡಿ. ನಾವೂ ಪರಿಶೀಲನೆ ನಡೆಸುತ್ತೇವೆ ಎಂದು ಕೆ.ರಾಮರಾಜನ್ ಹೇಳಿದರು.

Continue Reading

ಮೈಸೂರು

Mysuru Dasara 2024: ವೈಭವದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ

Mysuru Dasara 2024: ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವವನ್ನು ಉದ್ಘಾಟಿಸಲಾಗಿದೆ. ಉದ್ಘಾಟನೆಯ ಸುಂದರ ಘಳಿಗೆಯ ಚಿತ್ರಣ ಇಲ್ಲಿದೆ

VISTARANEWS.COM


on

By

Mysuru Dasara 2024
Koo

ಮೈಸೂರು: ವಿಶ್ವವಿಖ್ಯಾತ 417ನೇ ಮೈಸೂರು ದಸರಾ (Mysore Dasara 2024) ಮಹೋತ್ಸವ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ನಾಡಿನ ದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಗಿದೆ.

Mysuru Dasara 2024

ಗುರುವಾರ ಬೆಳಗ್ಗೆ 9:15 ರಿಂದ 9:40 ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಅವರಿಂದ ದಸರಾ ಮಹೋತ್ಸವ ಉದ್ಘಾಟನೆಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಸೇರಿದಂತೆ ಹಲವು ಸಚಿವರು, ಶಾಸಕರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಚಾಲನೆ

ಇಂದು ಇಡೀ ದಿನ ಕಾರ್ಯಕ್ರಮಗಳು

-ಗುರುವಾರ ಬೆಳಗ್ಗೆ 9.15 ರಿಂದ 9.45ನಡುವೆ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆ
-ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿ ಚಾಮುಂಡಿ ಬೆಟ್ಟದಲ್ಲಿ ಕಾರ್ಯಕ್ರಮ.
-ಬೆಳಗ್ಗೆ 11.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆ.
-ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ.
-ಸಂಜೆ 4ಕ್ಕೆ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ.
-ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ.
-ಸಂಜೆ 4.30ಕ್ಕೆ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಉದ್ಘಾಟನೆ.
-ಚಾಮುಂಡಿ ವಿಹಾರ ಕ್ರೀಡಾಂಗಣ.
-ರಾತ್ರಿ 6ಕ್ಕೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ.
-ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಅರಮನೆ ಆವರಣ.
-ರಾತ್ರಿ 7.30 ದಸರಾ ವಸ್ತು ಪ್ರದರ್ಶನ ಉದ್ಘಾಟನೆ.

Mysuru Dasara 2024
ದಸರಾ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ
Mysuru Dasara 2024

ವಿಶ್ವವಿಖ್ಯಾತ ದಸರಾ ಮಹೋತ್ಸವ

Mysuru Dasara 2024

ವಿಶ್ವವಿಖ್ಯಾತ ದಸರಾ ಮಹೋತ್ಸವ

ವಿಶ್ವವಿಖ್ಯಾತ ದಸರಾ ಮಹೋತ್ಸವ

ವಿಶ್ವವಿಖ್ಯಾತ ದಸರಾ ಮಹೋತ್ಸವ

Continue Reading

ಬೆಂಗಳೂರು

Gali Anjaneya Temple : ಗಾಳಿ ಆಂಜನೇಯ ದೇಗುಲದಲ್ಲಿ ಹಣ ಲಪಟಾಯಿಸಲು ಹತ್ತಾರು ತಂತ್ರ; ಟ್ರಸ್ಟಿಗಳು, ಅರ್ಚಕರಿಂದಲೇ ದೇವರ ಹಣಕ್ಕೆ‌ ಕನ್ನ!

Gali Anjaneya Temple : ಗಾಳಿ ಆಂಜನೇಯ ದೇಗುಲದಲ್ಲಿ ಹಣ ಲಪಟಾಯಿಸಲು ಟ್ರಸ್ಟಿಗಳು, ಅರ್ಚಕರೇ ಹತ್ತಾರು ತಂತ್ರ ಮಾಡಿ ದೇವರ ಹಣಕ್ಕೆ‌ ಕನ್ನ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

VISTARANEWS.COM


on

By

Gali Anjaneya Temple
Koo

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ದೇಗುಲದಲ್ಲಿ ಮತ್ತೊಂದು ಅವ್ಯವಹಾರ ಬೆಳಕಿಗೆ ಬಂದಿದೆ. ಗಾಳಿ ಆಂಜನೇಯ ದೇಗುಲದಲ್ಲಿ (Gali Anjaneya Temple) ಹಣ ಲಪಟಾಯಿಸಲು ಹತ್ತಾರು ತಂತ್ರ ಮಾಡಿರುವ ಆರೋಪ ಕೇಳಿ ಬಂದಿದೆ. ದೇಗುಲದ ಟ್ರಸ್ಟಿಗಳು, ಅರ್ಚಕರಿಂದ ದೇಗುಲದ ಹಣಕ್ಕೆ‌ ಕನ್ನ ಹಾಕಲಾಗಿದೆ. ಈ ಹಿಂದೆ ಹುಂಡಿ ಎಣಿಕೆ ವೇಳೆ ಹಣ ಕಳ್ಳತನ ವಿಚಾರ ಬಯಲಾಗಿತ್ತು. ಈಗ ದೇವಸ್ಥಾನದ ಮತ್ತೊಂದು ಅನಾಚಾರ ಬೆಳಕಿಗೆ ಬಂದಿದೆ.

ಹುಂಡಿ‌ ಹಣ ಕದಿಯುವುದಲ್ಲದೇ ಟೆಕ್ನಾಲಜಿ ಬಳಸಿ ಭಕ್ತರ ಕಾಣಿಕೆಗಳಿಗೂ ಕನ್ನ ಹಾಕುತ್ತಿದ್ದಾರೆ. QR ಕೋಡ್ ಮೂಲಕ ದೇಗುಲಕ್ಕೆ ಸೇರಬೇಕಿದ್ದ ಹಣ ಪೂಜಾರಿ ಖಾತೆಗೆ ಸೇರುತ್ತಿದೆ. ದೇಗುಲದಲ್ಲಿ ಇಟ್ಟಿರೋ QR ಕೋಡ್ ಬ್ಯಾಂಕ್ ಖಾತೆ ಅರ್ಚಕ ಶ್ರೀನಿವಾಸ್ ವೈಯಕ್ತಿಕ ಖಾತೆಗೆ ಲಿಂಕ್ ಮಾಡಲಾಗಿದೆ. ಇದರಿಂದ ಸೇವೆಗಳ ಶುಲ್ಕ, ಕಾಣಿಕೆ ರೂಪದ ಹಣ ನೇರವಾಗಿ ಪೂಜಾರಿ ಖಾತೆಗೆ ಹೋಗುತ್ತಿದೆ. ದೇಗುಲದ ಬ್ಯಾಂಕ್ ಖಾತೆ ಬದಲಿಗೆ ಅರ್ಚಕ ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯ ಖಾತೆಗೆ ಹಣ ಸೇರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ದೇಗುಲದ ಭಕ್ತರಾದ ಮೋಹನ್ ಪಿ.ವಿ ಈ ಬಗ್ಗೆ ಬ್ಯಾಟರಾಯನಪುರ ಠಾಣೆಗೆ ದೂರು‌ ನೀಡಿದ್ದಾರೆ. ಅಷ್ಟಲ್ಲದೇ ಟ್ರಸ್ಟಿಗಳು, ಪೂಜಾರಿಗಳಿಂದ ದೇಗುಲದ ಟ್ರಸ್ಟ್ ಆಸ್ತಿ ದುರುಪಯೋಗವಾಗುತ್ತಿದೆ. ದೇಗುಲದ ಚಿನ್ನಾಭರಣ, ಬೆಳ್ಳಿ ಆಭರಣಗಳು, ಹುಂಡಿ ಹಣಕೆ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದಾರೆ.

ಒಟ್ಟು 8 ಮಂದಿ ವಿರುದ್ಧ ಮೋಹನ್ ಪಿ. ವಿ ದೂರು ನೀಡಿದ್ದಾರೆ. ದೂರು ಆಧರಿಸಿ ಟ್ರಸ್ಟಿಗಳಾದ ಡಿ.ಎಂ.ಹನುಮಂತಪ್ಪ, ಬಿ.ಪಿ.ನಾಗರಾಜ್ @ ಅಶೋಕ್, ಬಿ.ವಿ.ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯ, ಎ.ಎಚ್.ಗೋಪಿನಾಥ್, ಅರ್ಚಕರಾದ ಬಿ.ಕೆ.ರಾಮನುಜ ಭಟ್ಟಾಚಾರ್ಯ, ಸುರೇಶ್, ರಾಘವೇಂದ್ರ, ಮಲ್ಲಿಕಾರ್ಜುನ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ದೂರಿನ ಸಂಬಂಧ ದೂರುದಾರ ಅಗತ್ಯ ಮಾಹಿತಿ ಒದಗಿಸಲು ಸಿದ್ದ ಎಂದಿದ್ದಾರೆ. 2 ತಿಂಗಳ ಹಿಂದೆ ಹಣ ಕಳ್ಳತ‌ನ‌ ಸಂಬಂಧ ಎಫ್‌ಐಆರ್‌ ದಾಖಲಾಗಿತ್ತು. ಈಗ ಹಣ ದುರುಪಯೋಗ ಸಂಬಂಧ ಮತ್ತೊಂದು ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
navaratri
ಬೆಂಗಳೂರು6 ಗಂಟೆಗಳು ago

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Mysuru News
ಮೈಸೂರು6 ಗಂಟೆಗಳು ago

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Kodagu News
ಕೊಡಗು6 ಗಂಟೆಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು7 ಗಂಟೆಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು7 ಗಂಟೆಗಳು ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು8 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ9 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು10 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Murder case
ಬೆಂಗಳೂರು11 ಗಂಟೆಗಳು ago

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

murder case
ಬೆಂಗಳೂರು11 ಗಂಟೆಗಳು ago

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ದಿನ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌