Dina Bhavishya : ಈ ರಾಶಿಯವರು ಹಣಕಾಸಿನ ಹೂಡಿಕೆ ಮಾಡುವುದು ಬೇಡ! - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರು ಹಣಕಾಸಿನ ಹೂಡಿಕೆ ಮಾಡುವುದು ಬೇಡ!

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷದ
ತ್ರಯೋದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಮಂಗಳವಾರವೂ ಸಿಂಹ ರಾಶಿಯಲ್ಲೆ ಇರಲಿದ್ದಾನೆ. ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ ಸಿಗಲಿದ್ದು, ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಮಿಥುನ ರಾಶಿಯವರ ಕೋಪದಿಂದ ಇತರರ ಮೇಲೆ ಒತ್ತಡ ಹೇರುವುದು ಬೇಡ. ಕನ್ಯಾ ರಾಶಿಯವರು ನಕಾರಾತ್ಮಕ ಆಲೋಚನೆಗಳಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಕುಂಭ ರಾಶಿಯವರು ಟೀಕಿಸುವವರ ಮಾತುಗಳಿಗೆ ಕಿವಿ ಕೊಡದೆ ಕಾರ್ಯದಲ್ಲಿ ಮುನ್ನುಗ್ಗಿ. ಮೀನ ರಾಶಿಯವರು ಅನುಮಾನದಿಂದ ಯಾವುದೇ ಕೆಲಸದಲ್ಲಿ ತೊಡಗುವುದು ಬೇಡ. ಹೊಸ ಅವಕಾಶಗಳು ಒದಗಿ ಬಂದಾವು. ಇತರೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (12-09-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ:
ತ್ರಯೋದಶಿ 26:20 ವಾರ: ಮಂಗಳವಾರ
ನಕ್ಷತ್ರ: ಆಶ್ಲೇಷಾ 23:00 ಯೋಗ: ಶಿವ 25:09
ಕರಣ: ಗರಜ 13:05 ಅಮೃತಕಾಲ: ರಾತ್ರಿ 09:13 ಯಿಂದ 11:01 ವರೆಗೆ
ದಿನದ ವಿಶೇಷ: ಮಂಗಳಗೌರೀ ವ್ರತ

ಸೂರ್ಯೋದಯ : 06: 14  ಸೂರ್ಯಾಸ್ತ : 06:45

ರಾಹುಕಾಲ: ಸಾಯಂಕಾಲ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ:
9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಇಂದು ಉತ್ಸಾಹದ ದಿನವಿದು. ಪ್ರಭಾವಿ ವ್ಯಕ್ತಿಗಳ ಬೆಂಬಲ ಸಿಗಲಿದೆ. ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ನಿಮ್ಮ ಆಕರ್ಷಕ ವರ್ತನೆ ಗಮನ ಸೆಳೆಯುತ್ತದೆ. ಆರ್ಥಿಕವಾಗಿ ಇಂದು ನೀವು ಸಾಕಷ್ಟು ಬಲವಾಗಿ ಕಾಣುವಿರಿ. ಸಂಗಾತಿಯೊಂದಿಗೆ ಮಾತಿಗೆ ಇಳಿಯುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಜನರ ಸಹಕಾರ ಸಿಗಲಿದೆ. ನಿಮ್ಮ ಕೋಪದಿಂದ ಇತರರ ಮೇಲೆ ಒತ್ತಡ ಹೇರುವುದು ಬೇಡ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಪ್ರಭಾವಿ ವ್ಯಕ್ತಿಗಳ ಬೆಂಬಲ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಹೊಸ ಯೋಜನೆ, ಯೋಚನೆಗಳು ಫಲ ನೀಡಲಿವೆ. ಹಣಕಾಸು ವ್ಯವಹಾರದಲ್ಲಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ ಕಾಳಜಿ ವಹಿಸಿ. ಕುಟುಂಬದ ಬೆಂಬಲ ಸಿಗಲಿದೆ. ಆತುರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ನಕಾರಾತ್ಮಕ ಆಲೋಚನೆಗಳಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಅದರಿಂದ ದೂರ ಇರಿ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅತಿಯಾದ ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡುವದು. ಆಲಸ್ಯದಿಂದ
ಕೆಲಸ ಕಾರ್ಯಗಳನ್ನು ಮುಂದೂಡುವುದು ಬೇಡ. ಅತಿಥಿಗಳ ಆಗಮನ ಸಂತಸ ತಂದೀತು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ಆತ್ಮವಿಶ್ವಾಸದಿಂದ ಮಾಡಿದ ಕಾರ್ಯವು ಯಶಸ್ಸು ಸಿಗುವುದು. ಅನುಮಾನವು ಸಂಬಂಧಗಳನ್ನು ಹಾಳು ಮಾಡುವುದು. ಕುಟುಂಬದಲ್ಲಿ ಮಾತಿಗೆ ಮಾತು ಬೆಳೆಸುವುದು ಬೇಡ. ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಕೆಲವು ಅನಿವಾರ್ಯ ಸಂದರ್ಭಗಳು ನಿಮಗೆ ಅಹಿತಕರವೆನಿಸಬಹುದು. ಆತುರದಲ್ಲಿ ಅತಿರೇಕದ ಮಾತುಗಳು ಬೇಡ. ಹೂಡಿಕೆಯಲ್ಲಿ ತೊಡಗಿಸಿದ ಹಣ ಇಮ್ಮಡಿ ಲಾಭ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಕರ: ಜೀವನದಲ್ಲಿ ಹೊಸ ಭರವಸೆ ಸಿಗಲಿದೆ . ಅನಿರೀಕ್ಷಿತವಾಗಿ ಹಣ ಖರ್ಚು ಮಾಡುವಿರಿ. ಸಂಬಂಧಿಗಳಿಂದ ಕುಟುಂಬಕ್ಕೆ ಶುಭ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ದಿನದ ಕೊನೆಯ ಗಳಿಗೆಯಲ್ಲಿ ಸ್ವಲ್ಪ ಒತ್ತಡ ಉಂಟಾಗವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಅನೇಕ ವಿಷಯಗಳು ನಿಮಗೆ ಸಂತಸ ತರುವುದು. ದೀರ್ಘಕಾಲದ ಕೆಲಸ ಇಂದು ಪೂರ್ಣ ಗೊಳ್ಳುವ ಸಾಧ್ಯತೆ. ಆರ್ಥಿಕ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಟೀಕಿಸುವವರ ಮಾತುಗಳಿಗೆ ಕಿವಿ ಕೊಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

Horoscope Today

ಮೀನ: ಅನುಮಾನದಿಂದ ಯಾವುದೇ ಕೆಲಸದಲ್ಲಿ ತೊಡಗುವುದು ಬೇಡ. ಹೊಸ ಅವಕಾಶಗಳು ಒದಗಿ ಬಂದಾವು. ಮಕ್ಕಳ ಆರೋಗ್ಯದ ಕಡೆಗೆ ಗಮನ ಇರಲಿ. ಕುಟುಂಬದಲ್ಲಿ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗುವ ಮುಂಚೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ರಾಹುಲ್‌ ಗಾಂಧಿ, ಕೇಜ್ರಿವಾಲ್‌ಗೆ ಪಾಕ್‌ ಬೆಂಬಲ; ತನಿಖೆಯಾಗಲಿ ಎಂದ ಮೋದಿ

Narendra Modi: ಅರವಿಂದ ಕೇಜ್ರಿವಾಲ್‌ ಹಾಗೂ ರಾಹುಲ್‌ ಗಾಂಧಿ ಅವರಿಗೆ ಪಾಕಿಸ್ತಾನದ ನಾಯಕರು ಬಾಹ್ಯ ಬೆಂಬಲ ನೀಡುತ್ತಿರುವ ಕುರಿತು ತನಿಖೆಯಾಗಬೇಕಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇತ್ತೀಚೆಗೆ, ಪಾಕಿಸ್ತಾನದ ಕೆಲ ನಾಯಕರು ಇಬ್ಬರ ಪರವಾಗಿ ಪೋಸ್ಟ್‌ ಮಾಡಿದ್ದರು. ಹಾಗಾಗಿ, ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದರೂ ರಾಜಕೀಯ ನಾಯಕರ ಅಬ್ಬರದ ಹೇಳಿಕೆ, ಟೀಕೆ, ವ್ಯಂಗ್ಯ, ವಾಗ್ವಾದಗಳು ನಿಲ್ಲುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ (Arvind Kejriwal) ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. “ಅರವಿಂದ ಕೇಜ್ರಿವಾಲ್‌ ಹಾಗೂ ರಾಹುಲ್‌ ಗಾಂಧಿ ಅವರಿಗೆ ಪಾಕಿಸ್ತಾನದ ನಾಯಕರು ಬೆಂಬಲ ನೀಡುತ್ತಿರುವ ಕುರಿತು ತನಿಖೆಯಾಗಬೇಕಿದೆ” ಎಂಬುದಾಗಿ ಪ್ರಧಾನಿ ಹೇಳಿದ್ದಾರೆ.

ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ಸಂದರ್ಶನ ನೀಡುವ ವೇಳೆ ಮೋದಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನದ ನಾಯಕರ ಬೆಂಬಲದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, “ನಾನು ಪ್ರಧಾನಿ ಸ್ಥಾನ ಹೊಂದಿದ್ದು, ಅಂತಹ ವಿಷಯಗಳ ಬಗ್ಗೆ ಮಾತನಾಡಬಾರದು. ಆದರೆ, ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ. ಕೆಲವರು ನಮ್ಮ ವಿರುದ್ಧ ದ್ವೇಷ ಕಾರುತ್ತಾರೆ. ಆ ದ್ವೇಷ ಕಾರುವವರೇ ನಮ್ಮ ನಾಯಕರಿಗೆ ಬೆಂಬಲ ಸೂಚಿಸುತ್ತಾರೆ. ಆಯ್ಕೆಯ ಆಧಾರದ ಮೇಲೆಯೇ ದ್ವೇಷ ಕಾರುವವರು ಬೆಂಬಲ ನೀಡುತ್ತಾರೆ. ಈ ಕುರಿತು ತನಿಖೆಯಾಗಬೇಕಿದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದರು.

ಏನಿದು ಪ್ರಕರಣ?

ಮೇ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್‌ ಅವರು ರಾಹುಲ್‌ ಗಾಂಧಿ ಅವರ ಪೋಸ್ಟ್‌ಅನ್ನು ಹಂಚಿಕೊಂಡು, ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ಸಿಕ್ಕಾಗಲೂ ಚೌಧರಿ ಫವಾದ್‌ ಪ್ರತಿಕ್ರಿಯಿಸಿದ್ದರು. ಆಗ ಅವರು, “ಅರವಿಂದ್‌ ಕೇಜ್ರಿವಾಲ್‌ ಬಿಡುಗಡೆಯಾಗಿದ್ದಾರೆ. ಇದರಿಂದ ಮೋದಿ ಮತ್ತೊಂದು ಯುದ್ಧ ಸೋತಂತಾಗಿದೆ. ಇದು ಭಾರತಕ್ಕೆ ಶುಭ ಸುದ್ದಿ” ಎಂದಿದ್ದರು. ಚುನಾವಣೆ ವೇಳೆಯೂ, “ದ್ವೇಷ ಹಾಗೂ ತೀವ್ರವಾದದ ವಿರುದ್ಧ ಶಾಂತಿ ಹಾಗೂ ಸಾಮರಸ್ಯ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ” ಎಂದು ಚೌಧರಿಯು ಕೇಜ್ರಿವಾಲ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದರು.

ಮಣಿಶಂಕರ್‌ ಅಯ್ಯರ್‌ಗೆ ಟಾಂಗ್‌ ಕೊಟ್ಟಿದ್ದ ಮೋದಿ

ಕೆಲ ದಿನಗಳ ಹಿಂದೆ ಇಂಡಿಯಾ ಟಿವಿ ಚಾನೆಲ್‌ ಜತೆ ಸಂವಾದ ನಡೆಸುವ ವೇಳೆ, ಮಣಿಶಂಕರ್‌ ಅಯ್ಯರ್‌ ಹೇಳಿಕೆ ಕುರಿತು ಸಂದರ್ಶಕ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಅವರು ಮಾರ್ಮಿಕವಾಗಿ ಉತ್ತರ ನೀಡಿದರು. “ನಾನೇ ಲಾಹೋರ್‌ಗೆ ತೆರಳಿ ಆ ಪಾಕಿಸ್ತಾನದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ. ನನ್ನನ್ನು ನೋಡಿ, ಪಾಕಿಸ್ತಾನದ ಒಬ್ಬ ಪತ್ರಕರ್ತ ಆಶ್ಚರ್ಯದಿಂದ ಕೇಳಿದ. ‘ವೀಸಾ ಇಲ್ಲದೆ ನೀವೇಗೆ ಇಲ್ಲಿಗೆ ಬಂದಿದ್ದೀರಿ’ ಎಂದ. ಅದಕ್ಕೆ ನಾನು, ‘ಪಾಕಿಸ್ತಾನ ಒಂದು ಕಾಲಕ್ಕೆ ನಮ್ಮದೇ ದೇಶದ ಭಾಗವಾಗಿತ್ತು’ ಎಂಬುದಾಗಿ ಉತ್ತರಿಸಿದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ವ್ಯಂಗ್ಯವಾಗಿಯೇ ಉತ್ತರ ಕೊಟ್ಟಿದ್ದರು.

ಇದನ್ನೂ ಓದಿ: Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Continue Reading

ದೇಶ

INDIA Bloc: ಜೂನ್‌ 1ರಂದು ‘ಇಂಡಿಯಾ’ ಸಭೆಗೆ ಮಮತಾ ಬ್ಯಾನರ್ಜಿ ಗೈರು; ಆದ್ಯತೆ ಬೇರೆ ಎಂದ ದೀದಿ

INDIA Bloc: ಜೂನ್ 4ರಂದು‌ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಇದಕ್ಕಾಗಿ ಜೂನ್‌ 1ರ ಸಭೆಯು ಮಹತ್ವ ಪಡೆದುಕೊಂಡಿದೆ. ಇನ್ನು, 1ರಂದು ಇಂಡಿಯಾ ಒಕ್ಕೂಟದ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ ಮೊದಲೇ ತಿಳಿದಿತ್ತು. ಆದರೆ, ಸಭೆ ನಡೆಯುವ ದಿನವೇ ಬೇರೆ ರಾಜ್ಯಗಳಂತೆ ಪಶ್ಚಿಮ ಬಂಗಾಳದಲ್ಲೂ ಮತದಾನ ನಡೆಯುವ ಕಾರಣ ಬರಲು ಆಗುವುದಿಲ್ಲ ಎಂಬುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

VISTARANEWS.COM


on

INDIA Bloc
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದು ನಿಂತಿದೆ. ಆರು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನದ ಮೂಲಕ ಸಾರ್ವತ್ರಿಕ ಚುನಾವಣೆ ಮುಗಿಯಲಿದೆ. ಇನ್ನು, ಕೊನೆಯ ಹಂತದ ಮತದಾನದ ದಿನವಾದ ಜೂನ್‌ 1ರಂದೇ ಇಂಡಿಯಾ ಒಕ್ಕೂಟದ (INDIA Bloc) ಪಕ್ಷಗಳ ಸಭೆ ನಡೆಯಲಿದೆ. ಆದರೆ, ಇಂಡಿಯಾ ಒಕ್ಕೂಟದ ಮಹತ್ವದ ಸಭೆಗೆ ಗೈರಾಗಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತಿಳಿಸಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಇಂಡಿಯಾ ಒಕ್ಕೂಟದ ಪಕ್ಷಗಳ ಸಭೆಗೆ ಗೈರಾಗುವ ಕುರಿತು ಕೋಲ್ಕೊತಾದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ ಅವರೇ ಹೇಳಿದ್ದಾರೆ. “ಜೂನ್‌ 1ರಂದು ಇಂಡಿಯಾ ಒಕ್ಕೂಟದ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ ಮೊದಲೇ ತಿಳಿದಿತ್ತು. ಆದರೆ, ಜೂನ್‌ 1ರಂದು ಬೇರೆ ರಾಜ್ಯಗಳಂತೆ ಪಶ್ಚಿಮ ಬಂಗಾಳದಲ್ಲೂ ಮತದಾನ ನಡೆಯುವ ಕಾರಣ ಬರಲು ಆಗುವುದಿಲ್ಲ ಎಂಬುದಾಗಿ ತಿಳಿಸಿದ್ದೇನೆ. ಈಗ ರೆಮಾಲ್‌ ಚಂಡಮಾರುತವು ಕೂಡ ರಾಜ್ಯವನ್ನು ಬಾಧಿಸುತ್ತಿದೆ. ಇಂಡಿಯಾ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳುವ ಬದಲು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ರಾಜ್ಯದ ಜನರೇ ನನ್ನ ಮೊದಲ ಆದ್ಯತೆ” ಎಂಬುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇಂಡಿಯಾ ಒಕ್ಕೂಟದ ಸಭೆ ಏಕೆ?

ಜೂನ್‌ 1ರಂದು ಲೋಕಸಭೆ ಚುನಾವಣೆ ಸಮಾರೋಪಗೊಳ್ಳಲಿದೆ. ಕಾಂಗ್ರೆಸ್‌, ಸಿಪಿಎಂ ಸೇರಿ ಹಲವು ಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ರಚಿಸಲಾಗಿದೆ. ಜೂನ್‌ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಇದಕ್ಕಾಗಿ ಜೂನ್‌ 1ರ ಸಭೆಯು ಮಹತ್ವ ಪಡೆದುಕೊಂಡಿದೆ. ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಹೆಚ್ಚು ಸ್ಥಾನಗಳನ್ನು ಗೆದ್ದರೆ ಮುಂದೆ ಹೇಗೆ ತೀರ್ಮಾನ ತೆಗೆದುಕೊಳ್ಳಬೇಕು? ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೇಗೆ ಇರಬೇಕು? ಹಿನ್ನಡೆಯಾದರೆ ಏನು ಮಾಡಬೇಕು ಎಂಬುದು ಸೇರಿ ಹಲವು ವಿಷಯಗಳ ಕುರಿತು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳ ನಾಯಕರು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಫಲೋಡಿ ಸಟ್ಟಾ ಬಜಾರ್‌ ಸಮೀಕ್ಷೆ ಪ್ರಕಟಿಸಿದೆ. ಬಿಜೆಪಿಯೊಂದೇ 304-306 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್‌ ಪಕ್ಷವು 60-62 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂಬುದಾಗಿ ಸಮೀಕ್ಷಾ ವರದಿ ತಿಳಿಸಿದೆ. ಹಾಗಾಗಿ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬುದು ವರದಿಯ ಸಾರಾಂಶವಾಗಿದೆ.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಉಳಿದುಕೊಂಡಿದ್ದ ಹೋಟೆಲ್ ಬಿಲ್ ಪಾವತಿಸಲು ರಾಜ್ಯ ಸರ್ಕಾರ ನಿರ್ಧಾರ; ಎಷ್ಟು ಖರ್ಚಾಗಿತ್ತು?

Continue Reading

ದೇಶ

Bomb Threat: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; 26/11 ರೀತಿ ದಾಳಿಗೆ ಸಂಚು?

Bomb Threat: ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್‌ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್‌, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಈಗ ತಾಜ್‌ ಹೋಟೆಲ್‌ ಹಾಗೂ ವಿಮಾನ ನಿಲ್ದಾಣಕ್ಕೂ ಬೆದರಿಕೆ ಒಡ್ಡಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

VISTARANEWS.COM


on

Bomb Threat
Koo

ಮುಂಬೈ: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿರುವ ಶಾಲೆಗಳು, ವಿಮಾನ ನಿಲ್ದಾಣಗಳನ್ನು ಬಾಂಬಿಟ್ಟು ಸ್ಫೋಟಿಸುವ ಕುರಿತು ಕೆಲ ತಿಂಗಳಿಂದ ಬೆದರಿಕೆ ಕರೆಗಳು (Bomb Threat) ಬರುತ್ತಲೇ ಇವೆ. ಇದರ ಬೆನ್ನಲ್ಲೇ, ಮುಂಬೈನಲ್ಲಿರುವ ತಾಜ್‌ ಹೋಟೆಲ್‌ (Taj Hotel) ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣವನ್ನು (Chhatrapati Shivaji Maharaj International Airport) ಸ್ಫೋಟಿಸುವ ಕುರಿತು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ. ಹಾಗಾಗಿ, ಮುಂಬೈ ತಾಜ್‌ ಹೋಟೆಲ್‌ ಹಾಗೂ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

“ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿದೆ. ತಾಜ್‌ ಹೋಟೆಲ್‌ ಹಾಗೂ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಲಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಬ್ಲಾಸ್ಟ್‌ ಆಗಬಹುದು” ಎಂದಷ್ಟೇ ಹೇಳಿ ಕರೆ ಕಟ್ ಮಾಡಿದ್ದಾನೆ. ಇದಾದ ಬಳಿಕ ಪೊಲೀಸರು ಅಲರ್ಟ್‌ ಆಗಿದ್ದಾರೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ತಾಜ್‌ ಹೋಟೆಲ್‌ ಮೇಲೆ 26/11ರ ಮಾದರಿಯಲ್ಲಿ ದಾಳಿ ನಡೆಯುವ ಭೀತಿಯಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು ಎನ್ನಲಾಗಿದೆ.

Police

ಬಾಂಬ್‌ ಬೆದರಿಕೆ ಕರೆ ಬರುತ್ತಲೇ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ಹೋಟೆಲ್‌ ಹಾಗೂ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಎರಡೂ ಕಡೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಉತ್ತರ ಪ್ರದೇಶದಿಂದ ಕರೆ ಬಂದಿದೆ ಎಂಬುದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್‌ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್‌, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ನಕಲಿ ಬಾಂಬ್‌ ಬೆದರಿಕೆ ಎಂಬುದಾಗಿ ತಿಳಿದುಬಂದಿತ್ತು.

ಮುಂಬೈ ದಾಳಿ ಕರಾಳ ಅಧ್ಯಾಯ

ಮುಂಬೈನಲ್ಲಿರುವ ತಾಜ್​ ಹೋಟೆಲ್​ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದರು.

ಇದನ್ನೂ ಓದಿ: Bomb Threat : ಶಾಲೆಗೆ ಬಾಂಬ್​ ಬೆದರಿಕೆ ಮೇಲ್ ಕಳುಹಿಸಿದ ವಿದ್ಯಾರ್ಥಿಗಳು!

Continue Reading

ದೇಶ

Balkar Singh: ಕೆಲಸ ಕೇಳಿಕೊಂಡು ಬಂದ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡ ಆಪ್‌ ಸಚಿವ; ವಿಡಿಯೊ ವೈರಲ್

Balkar Singh: ಬಲ್ಕಾರ್‌ ಸಿಂಗ್‌ ಅವರು ಕೆಲಸ ಕೇಳಿಕೊಂಡು ಬಂದ 21 ವರ್ಷದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲಸ ಕೊಡಿಸುವ ಆಸೆ ಹುಟ್ಟಿಸಿದ ಅವರು ವಿಡಿಯೊ ಕಾಲ್‌ ಮಾಡಿ ನಿನ್ನ ಬಟ್ಟೆ ಬಿಚ್ಚು ಎಂಬುದಾಗಿ ಒತ್ತಾಯಿಸಿದ್ದಾರೆ. ಅವರೂ ಯುವತಿಗೆ ಕಾಣುವಂತೆ ಹಸ್ತಮೈಥುನ ಮಾಡಿಕೊಂಡಿದ್ದಾರೆ ಎಂಬುದಾಗಿ ಬಿಜೆಪಿಯ ತಜಿಂದರ್‌ ಬಗ್ಗಾ ಆರೋಪಿಸುವ ಜತೆಗೆ ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.

VISTARANEWS.COM


on

Balkar Singh
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಸೇರಿ ಆಮ್‌ ಆದ್ಮಿ ಪಕ್ಷದ ಹಲವು ನಾಯಕರು, ಸಚಿವರು ಜೈಲುಪಾಲಾಗಿದ್ದಾರೆ. ಇದರ ಬೆನ್ನಲ್ಲೇ, ಪಂಜಾಬ್‌ನಲ್ಲಿ ಆಪ್‌ ಸಚಿವ ಬಲ್ಕಾರ್‌ ಸಿಂಗ್‌ (Balkar Singh) ಅವರ ಕಾಮಕೇಳಿಯೊಂದು ಬಯಲಾಗಿದೆ. ಕೆಲಸ ಕೇಳಿಕೊಂಡು ಬಂದಿದ್ದ ಯುವತಿ ಜತೆ ಪಂಜಾಬ್‌ ಸಚಿವ ಬಲ್ಕಾರ್‌ ಸಿಂಗ್‌ ಹಸ್ತಮೈಥುನ ಮಾಡಿಕೊಂಡಿದ್ದಾರೆ” ಎಂಬುದಾಗಿ ಬಿಜೆಪಿ ನಾಯಕ ತಜಿಂದರ್‌ ಬಗ್ಗಾ ಆರೋಪಿಸುವ ಜತೆಗೆ, ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ. ಇದು ಈಗ ಭಾರಿ ವೈರಲ್‌ ಆಗಿದೆ.

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ತಜಿಂದರ್‌ ಬಗ್ಗಾ ಅವರು ಬಲ್ಕಾರ್‌ ಸಿಂಗ್‌ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಆಮ್‌ ಆದ್ಮಿ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ, ಗೌರವ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಈಗ ಆಪ್‌ ಸಚಿವ ಬಲ್ಕಾರ್‌ ಸಿಂಗ್‌ ಅವರು ಕೆಲಸ ಕೇಳಿಕೊಂಡು ಬಂದ 21 ವರ್ಷದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲಸ ಕೊಡಿಸುವ ಆಸೆ ಹುಟ್ಟಿಸಿದ ಅವರು ವಿಡಿಯೊ ಕಾಲ್‌ ಮಾಡಿ ನಿನ್ನ ಬಟ್ಟೆ ಬಿಚ್ಚು ಎಂಬುದಾಗಿ ಒತ್ತಾಯಿಸಿದ್ದಾರೆ. ಅವರೂ ಯುವತಿಗೆ ಕಾಣುವಂತೆ ಹಸ್ತಮೈಥುನ ಮಾಡಿಕೊಂಡಿದ್ದಾರೆ” ಎಂಬುದಾಗಿ ತಜಿಂದರ್‌ ಬಗ್ಗಾ ಆರೋಪಿಸಿದ್ದಾರೆ.

“ಕರ್ತಾರ್‌ಪುರ ಸಾಹಿಬ್‌ ವಿಧಾನಸಭೆ ಕ್ಷೇತ್ರದ ಶಾಸಕ, ಸ್ಥಳೀಯ ಸಂಸ್ಥೆಗಳ ಸಚಿವ ಬಲ್ಕಾರ್‌ ಸಿಂಗ್‌ ಅವರನ್ನು ಮುಂದಿನ 24 ಗಂಟೆಗಳಲ್ಲಿಯೇ ವಜಾಗೊಳಿಸಬೇಕು. ಇಲ್ಲದಿದ್ದರೆ, ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನ ಜನರು ಆಮ್‌ ಆದ್ಮಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಹೇಳಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಲ್ಕಾರ್‌ ಸಿಂಗ್‌ ವಿಡಿಯೊ ವೈರಲ್‌ ಆಗುತ್ತಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಅವರು ಕೂಡ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌, ಅಕಾಲಿದಳ ಟೀಕೆ

ಬಲ್ಕಾರ್‌ ಸಿಂಗ್‌ ಅವರು ಅನುಚಿತವಾಗಿ ವರ್ತಿಸುವ ವಿಡಿಯೊ ವೈರಲ್‌ ಆಗಿರುವ ಬಗ್ಗೆ ಶಿರೋಮಣಿ ಅಕಾಲಿ ದಳ ಹಾಗೂ ಕಾಂಗ್ರೆಸ್‌ ಟೀಕೆ ವ್ಯಕ್ತಪಡಿಸಿವೆ. “ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಬಲ್ಕಾರ್‌ ಸಿಂಗ್‌, ಲಾಲ್‌ ಚಾಂದ್‌ ಕಟರುಚಾಕ್‌ ಅವರಂತಹ ನಾಚಿಕೆ ಇಲ್ಲದ ಸಚಿವರನ್ನು ರಕ್ಷಣೆ ಮಾಡುತ್ತಿರುವುದು ಖಂಡನೀಯ. ಕೂಡಲೇ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿವೆ. ಆದಾಗ್ಯೂ, ಬಲ್ಕಾರ್‌ ಸಿಂಗ್‌ ವಿರುದ್ಧ ಯಾವುದೇ ಯುವತಿಯು ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Aam Aadmi Party: ಆಪ್‌ಗೆ ಬರ್ತಿದ್ಯಾ ಖಲಿಸ್ತಾನಿ ಫಂಡಿಂಗ್ಸ್?‌ BKI ಉಗ್ರನ ಜೊತೆ ಪಕ್ಷ ಮುಖಂಡ ಫೊಟೋ

Continue Reading
Advertisement
Prajwal Revanna Case
ಕರ್ನಾಟಕ31 mins ago

Prajwal Revanna Case: ಪ್ರಜ್ವಲ್‌ ಬಂದ್ರೆ ಎಸ್‌ಐಟಿ ಮುಂದೆ ನಾನೂ ಹಾಜರಾಗುವೆ: ಆರೋಪಿ ನವೀನ್‌ ಗೌಡ

Narendra Modi
ದೇಶ55 mins ago

Narendra Modi: ರಾಹುಲ್‌ ಗಾಂಧಿ, ಕೇಜ್ರಿವಾಲ್‌ಗೆ ಪಾಕ್‌ ಬೆಂಬಲ; ತನಿಖೆಯಾಗಲಿ ಎಂದ ಮೋದಿ

INDIA Bloc
ದೇಶ1 hour ago

INDIA Bloc: ಜೂನ್‌ 1ರಂದು ‘ಇಂಡಿಯಾ’ ಸಭೆಗೆ ಮಮತಾ ಬ್ಯಾನರ್ಜಿ ಗೈರು; ಆದ್ಯತೆ ಬೇರೆ ಎಂದ ದೀದಿ

Bomb Threat
ದೇಶ1 hour ago

Bomb Threat: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; 26/11 ರೀತಿ ದಾಳಿಗೆ ಸಂಚು?

Suspicious Death
ಕರ್ನಾಟಕ1 hour ago

Suspicious Death: ಕಾಂಗ್ರೆಸ್ ಮುಖಂಡನ ಸಾವಿಗೆ ಕೊನೆಗೂ ಸಿಕ್ತು ಟ್ವಿಸ್ಟ್; ನಿಗೂಢ ಸಾವನ್ನು ಭೇದಿಸಿದ ಖಾಕಿ

MLC North East Graduate Constituency Non Party Candidate Nara Pratap Reddy election campaign in Vijayanagara District
ರಾಜಕೀಯ2 hours ago

MLC Election: ಕ್ಷೇತ್ರದೆಲ್ಲೆಡೆ ಪದವೀಧರ ಮತದಾರರಿಂದ ಉತ್ತಮ ಸ್ಪಂದನೆ: ನಾರಾ ಪ್ರತಾಪ್‌ ರೆಡ್ಡಿ

Python spotted in Chikkasandra village of Shira taluk
ಕರ್ನಾಟಕ2 hours ago

Snake Rescue: ಶಿರಾದಲ್ಲಿ ಹೆಬ್ಬಾವು ರಕ್ಷಿಸಿದ ಮಾಜಿ ಸೈನಿಕ

Fortis Hospital doctors team performed complex surgery for three different diseases simultaneously
ಕರ್ನಾಟಕ2 hours ago

Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

New Financial Rules
ವಾಣಿಜ್ಯ2 hours ago

New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

Balkar Singh
ದೇಶ2 hours ago

Balkar Singh: ಕೆಲಸ ಕೇಳಿಕೊಂಡು ಬಂದ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡ ಆಪ್‌ ಸಚಿವ; ವಿಡಿಯೊ ವೈರಲ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ5 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌