Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಫೆಬ್ರವರಿ 12 ರಿಂದ 18 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಮೇಷ: ನಿಮಗೆ ರವಿ ಗ್ರಹದ ದಿವ್ಯ ಬೆಂಬಲ

Weekly Horoscope

ಯಾವುದೋ ಅಡೆತಡೆಗಳಿಗೂ ತಲೆ ಕೆಡಿಸಿಕೊಳ್ಳದ ಹಾಗೆ ರಾಶಿಯ ಅಧಿಪತಿ ಕುಜನು ಅರಿಷ್ಟದ ಕಿಲುಬನ್ನೆಲ್ಲ ನಿವಾರಿಸುವ ಚೈತನ್ಯ ನೀಡುತ್ತಾನೆ. ಮಕ್ಕಳ ಬಗೆಗೆ ಗಮನವಿರಲಿ. ಸುಖದ ವಿಚಾರದಲ್ಲಿ ಈ ವಾರ ಅದೃಷ್ಟದಿಂದಲೇ ನಿಮ್ಮ ಸಂಪನ್ನತೆ ದೊರಕುತ್ತದೆ. ಆದರೆ ನಿಮ್ಮ ವಿರುದ್ಧ ಕತ್ತಿ ಮಸೆಯುವ ವಿರೋಧಿಗಳು ಮಕ್ಕಳ ಮೂಲಕ ಕೆಟ್ಟ ಹೆಸರು ತರಲು ಎಲ್ಲ ರೀತಿಯ ಪ್ರಯತ್ನ ನಡೆಸಬಹುದಾಗಿದೆ, ಎಚ್ಚರವಿರಲಿ. ರಾಜಕೀಯದಲ್ಲಿ ಅದರಲ್ಲೂ ಹೊಸದೇ ಆದ ಸ್ಥಾನಮಾನ ಪಡೆಯುವಲ್ಲಿ ರವಿ ಗ್ರಹದ ದಿವ್ಯ ಬೆಂಬಲವಿದೆ. ಶ್ರೀ ನರಸಿಂಹನನ್ನು ಆರಾಧಿಸಿ.
ಶುಭ ಸಂಖ್ಯೆ: 6 ಶುಭ ದಿಕ್ಕು: ವಾಯವ್ಯ

ವೃಷಭ: ಪ್ರಮೋಷನ್‌ ವಿಳಂಬವಾಗಬಹುದು!

Weekly Horoscope

ದೋಷಮಯನಾದ ಕುಜನು ಮನಸ್ಸಿನ ಶಾಂತಿಯನ್ನು ಹಾಳು ಮಾಡಬಹುದು. ಕೆಟ್ಟ ಹೆಸರು ತರುವ ಯಾವುದೇ ರೀತಿಯ ಅತಿರೇಕಗಳಿಗೆ ಹೆಜ್ಜೆ ಇರಿಸದಿರಿ. ಹೀಗೆ ಎಚ್ಚರದ ಹೆಜ್ಜೆ ಇರಿಸುವಿರಾದರೆ ನಿಮ್ಮ ಬೌದ್ಧಿಕ ಕ್ರಿಯಾಶೀಲತೆಯಿಂದ ಅನೇಕ ರೀತಿಯ ಯಶಸ್ಸು ಸಂಪಾದಿಸುವಿರಿ. ಕೆಲಸದ ಸ್ಥಳದಲ್ಲಿ ಒತ್ತಡ ಇದ್ದೇ ಇದೆ. ನಿಶ್ಚಿತವಾದ ಪ್ರಮೋಷನ್‌ ಸಿಗಬೇಕಾದದ್ದು ತುಸು ವಿಳಂಬವಾಗುವಂತೆ ಮುಂದೂಡಲ್ಪಡುವ ಸಾಧ್ಯತೆಗಳು ಜಾಸ್ತಿಯಾಗಿದೆ. ಭೂಮಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ ಇದೆ. ಶಿವನನ್ನು ಆರಾಧಿಸಿ, ಗೆಲುವಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ನೈಋತ್ಯ

ಮಿಥುನ: ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳಿಲ್ಲ

Weekly Horoscope

ಆರೋಗ್ಯದ ಬಗೆಗೆ ಎಚ್ಚರ ಇರಲಿ. ಹಣಕಾಸಿನ ವಿಚಾರ ಸಮಸ್ಯೆ ತರಲಾರದು. ಮಕ್ಕಳ ವಿಷಯದಲಲಿ ತುಸು ಕಿರಿಕಿರಿ ಇರಬಹುದಾಗಿದೆ. ತಾಯಿ ರಾಜರಾಜೇಶ್ವರಿಯನ್ನು ಸ್ತುತಿಸಿ ಈ ದುಗಡಗಳಿಗೆ ತಡೆ ತನ್ನಿ. ನಿಮ್ಮ ಮನೆಯ ಜೀರ್ಣೋದ್ಧಾರ ಅಥವಾ ಏನೇ ಮರು ನಿರ್ಮಾಣದ ವಿಷಯಗಳ ಬಗ್ಗೆ ಯೋಚನೆ ಇಟ್ಟುಕೊಂಡಿದ್ದರೆ ಸೂಕ್ತವಾದ ಯೋಜನೆಗಳನ್ನು ನಿಖರವಾಗಿ ರೂಪಿಸಿಕೊಂಡು ಮುಂದಡಿ ಇಡಿ. ಸಿನಿಮಾ ತಯಾರಿಕೆ ಅಥವಾ ಡಿಸ್ಟ್ರಿಬ್ಯುಷನ್‌ ವಿಷಯಗಳಲ್ಲಿ ತೊಡಗಿಸಿಕೊಂಡವರಿಗೆ ಸರಳವಾದ ಹೆಜ್ಜೆಗಳಿಂದಲೇ ಲಾಭವಿದೆ. ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಕಟಕ: ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಇರಲಿ

Weekly Horoscope

ಚಂದ್ರನು ತತ್ತರಿಸಿದ ಸಂದರ್ಭ ಇದಾಗಿದೆ. ನಿರಂತರವಾದ ಸಂಘರ್ಷ ಶನೈಶ್ವರನ ಜತೆಯಲ್ಲಿ ಕೊಂಡಿಕೂಡಿಸಿಕೊಂಡ ಚಂದ್ರನಿಂದಾಗಿ ಆರೋಗ್ಯ, ಲವಲವಿಕೆ, ಉತ್ಸಾಹಗಳೆಲ್ಲ ಕೈಗೂಡುವ ಸಾಧ್ಯತೆಗಳು ಅಧಿಕ. ಇಂದ್ರಿಯ ನಿಗ್ರಹ ಶಕ್ತಿ ಪ್ರದಾಯಕ ಮಾರುತಿಯನ್ನು ಆರಾಧಿಸಿ. ಆರ್ಥಿಕ ವಿಚಾರಗಳಲ್ಲಿ ಎಚ್ಚರ ಬೇಕೇಬೇಕು. ಕೊಡುವ ಯಾ ಪಡೆಯುವ ಹಣದ ವಿಚಾರ ಬಿಕ್ಕಟ್ಟುಗಳನ್ನು ಸೃಷ್ಟಿಸುವ ದಿನಗಳು ಇವು, ಜಾಗೃತವಾಗಿರಿ. ಬಾಳ ಸಂಗಾತಿಯ ವಿಚಾರದಲ್ಲಿ ಶಾಂತತೆಯಿಂದ ಇರಿ, ಜಗಳ ಬೇಡ. ರಾಮರಕ್ಷಾ ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಈಶಾನ್ಯ

ಸಿಂಹ: ನೀವಂದುಕೊಂಡಿದ್ದನ್ನು ಸಾಧಿಸಬಹುದು

Weekly Horoscope

ಗಣಪತಿಯ ಆಶೀರ್ವಾದವನ್ನು ಹೊಂದಿದ್ದೀರಿ. ನಿರ್ವಿಘ್ನವಾಗಿ ಕೆಲಸ ಕಾರ್ಯಗಳನ್ನು ನೆರವೇರಿಸುವ ಸೌಭಾಗ್ಯ ನಿಮ್ಮದಾಗಿದೆ. ಸೂರ್ಯನು ಶನೈಶ್ವರನ ಹಿಡಿತದಲ್ಲಿ ಬಂಧಿ ಎಂಬುದು ಕಾರಣವಾಗಿ, ಕೆಲವು ಸಲ ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳು ಇವೆ. ತಾರುಣ್ಯದ ಬಿಸಿ ರಕ್ತದ ಜನ ಬೇಕಾಬಿಟ್ಟಿಯಾಗಿ ಹೆಜ್ಜೆ ಇಡಲು ಮುಂದಾಗದಿರಿ. ವಿವಾಹದ ಬಗೆಗಾಗಿನ ದಾರಿ, ದಾಂಪತ್ಯದ ದಾರಿ ಚೆಲ್ಲಾಪಿಲ್ಲಿ ಆದೀತು. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ ಅಥವಾ ಕೆಲಸದ ಬದಲಾವಣೆಯಿಂದಾಗಿ ಸಂಬಳ ಏರಿಕೆಯಾಗಲು ಉತ್ತಮ ಅವಕಾಶಗಳಿವೆ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ

ಕನ್ಯಾ: ಶಾರದಾಂಬೆಯ ಬೆಂಬಲ ನಿಮಗಿದೆ

Weekly Horoscope

ಮಾತಿನ ಮೇಲೆ ಹಿಡಿತವಿರಲಿ. ಅನಾವಶ್ಯಕವಾದ ಘರ್ಷಣೆಗೆ ಅವಕಾಶ ಮಾಡಿಕೊಳ್ಳದಿರಿ. ಜಗನ್ಮಾತೆ ಶ್ರೀ ಶೃಂಗೇರಿಯ ಶಾರದಾಂಬೆಯ ಅಭಯ ಹಸ್ತ ನಿಮ್ಮ ಪಾಲಿಗಿದೆ. ಬಿಸಿಲಿನ ದಾರಿಯಿದ್ದರೂ ನಿಮ್ಮ ಮಕ್ಕಳಿಂದ ಬಿಸಿಲಿಗೂ ತಂಪು ಒದಗುವ ಸೌಕರ್ಯ ನಿಮಗೆ ಒದಗಿ ಬರುವ ಬಹು ಒಳಿತಿನ ಸಂದರ್ಭವಾಗಿದೆ ಇದು. ಮಹಾಕಾಳಿಯನ್ನು ಆರಾಧಿಸಿ. ಕಾರಣವಿರದೆ ಎದ್ದೇಳುವ ತಳಮಳ, ಬೇಸರ, ದಿಗಿಲುಗಳೆಲ್ಲ ಕರಿಗಿ ಮನದಲ್ಲಿ ನೆಲೆ ನಿಲ್ಲುವ ಶಾಂತಿ ಸಮಾಧಾನ ನಿಮ್ಮ ಅದೃಷ್ಟವಾಗಿದೆ. ಕಾಳಿಕಾಳನ್ನು ಸ್ತುತಿಸಿ, ಒಳಿತಿದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ದಕ್ಷಿಣ

ತುಲಾ: ತೊಳಲಾಟ ತಾಕಲಾಟಗಳ ವಾರ

Weekly Horoscope

ಕೇತು ಗ್ರಸ್ತ ರಾಶಿಯಲ್ಲಿ ಅಸಂಖ್ಯ ತೊಳಲಾಟಗಳನ್ನು ಸೃಷ್ಟಿಸುವ ತಾಕಲಾಟಗಳಿವೆ. ಕೆಲಸದ ಸ್ಥಳದಲ್ಲಿ ಹಲವು ರೀತಿಯ ಬಿಕ್ಕಟ್ಟುಗಳು ನಿಮ್ಮ ವರ್ತಮಾನವಾಗಿ ಎದ್ದೇಳುತ್ತವೆ. ಆದರೂ ಭಾಗ್ಯದಾಯಕ ಬುಧನು ಕೆಲಸದ ಸ್ಥಳದಲ್ಲಿ ನಿಮಗಾಗಿ ಸಹಾಯ ಹಸ್ತ ಚಾಚಿ ಒತ್ತಡಗಳ ನಡುವೆಯೂ ಮಿಂಚಿ ಮೇಲಾಧಿಕಾರಿಗಳ ಪ್ರಶಂಸೆಗೆ ನೀವು ಪ್ರಾಪ್ತರಾಗುತ್ತೀರಿ. ಸಾಲದ ಸುಳಿಯಲ್ಲಿ ಪರಿತಪಿಸುವ ವರ್ತಮಾನವನ್ನು ನಿರ್ಮಿಸಿಕೊಳ್ಳದಿರಿ. ಕಾರಣವಿರದೇ ವ್ಯಾಜ್ಯಗಳಲ್ಲಿ ಸಿಲುಕಿಹಾಕಿಕೊಳ್ಳುವ ಸಾಧ್ಯತೆ ಅಧಿಕ. ಶನೈಶ್ವರ, ಚಂದ್ರ ಪೀಡಾ ನಿವಾರಣಾ ಸ್ತೋತ್ರ ಓದಿದರೆ ಕ್ಷೇಮ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ

ವೃಶ್ಚಿಕ: ಷಣ್ಮುಖನನ್ನು ಆರಾಧಿಸಿದರೆ ಒಳಿತು

Weekly Horoscope

ದಾಂಪತ್ಯದ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಇರಲಿ. ಶಂಖಪಾಲ ಎನ್ನು ವಿಶೇಷ ಸರ್ಪದ ನೆರವಿನಿಂದ ಹಲವು ನಿಗೂಢ ಶಕ್ತಿಗಳನ್ನು ಸಂಪಾದಿಸಿಕೊಳ್ಳುವಿರಿ. ಆದರೆ ಈ ನಿಗೂಢ ಶಕ್ತಿಯ ನೆರವು ನಿಮ್ಮ ಆಧ್ಯಾತ್ಮಿಕ ಕ್ರಿಯಾಶೀಲತೆ ಹಾಗೂ ಚಿಂತನಗಳನ್ನು ಸಂವರ್ಧಿಸುವ ನೆಲೆಯಲ್ಲಿ ಸಹಾಯಕ್ಕೆ ಬರಬಹುದೇ ಹೊರತೂ ಲೌಖಿಕ ಸಂಗತಿಗಳಲ್ಲಿ ವಿಶೇಷ ಬೆಂಬಲಕ್ಕೆ ಒದಗಲಾರದು. ಹಲವು ಯಶಸ್ಸುಗಳಿಗಾಗಿನ ವಿಚಾರದಲ್ಲಿ ಕಾಲದ ನೆರವಿದೆ ಸದ್ಯ. ನಿಮ್ಮ ಆರಾಧ್ಯ ದೈವವನ್ನೂ, ಷಣ್ಮುಖ ದೇವರನ್ನೂ ಸ್ತುತಿಸಿ, ಒಳಿತಿನ ದಾರಿ ತೆರೆಯಲಿದೆ.
ಶುಭ ಸಂಖ್ಯೆ : 9 ಶುಭ ದಿಕ್ಕು: ವಾಯ್ಯವ

ಧನಸ್ಸು: ಶರಣಾಗತಿ ಒಂದೇ ಒಳಿತಿಗೆ ದಾರಿ

Weekly Horoscope

ಸಾಡೇಸಾತಿ ತೊಂದರೆಯಿಂದ ನೀವು ಹೊರ ಬಂದಿದ್ದೀರಿ. ಆದರೆ ಸಮಸ್ಯಾತ್ಮಕವಾದ ರಾಹುವು ನಿಮ್ಮ ಪುಣ್ಯದ ಬಲವನ್ನು ಹೊಸೆದು ಚೆಲ್ಲುತ್ತಿದ್ದಾನೆ. ನಿರೀಕ್ಷಿತವಾದ, ಗುರುತುರ ಯಶಸ್ಸಿನ ದಾರಿಯಲ್ಲಿ ಕೆಂಡದ ಮಳೆದಸುರಿಯಲು ಇದೀಗ ನಿಮ್ಮ ಕನಸು ಬಾಡಬಹುದಾದ ದುಸ್ತರವಾದ ಸ್ಥಿತಿ ಇನ್ನೂ ಚಾಲನೆಯಲ್ಲಿದೆ. ಪ್ರಬಲದವಾದ ನಾರಾಯಣಾಸ್ತ್ರವನ್ನು ಪಾಂಡವರ ವಿರುದ್ಧ ಪ್ರಯೋಗಿಸಿದಾಗ ನಾರಾಯಣ ಧ್ಯಾನವೇ ಅವರನ್ನು ಅಪಾಯದಿಂದ ಪಾರು ಮಾಡಿತಂತೆ. ನೀವೂ ನಾರಾಯಣನನ್ನು ಸ್ತುತಿಸಿ, ಗೆಲ್ಲಿ. ಶರಣಾಗತಿ ಒಂದೇ ಒಳಿತಿಗೆ ದಾರಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಶಿವ ಶಿವ ಎಂದರೆ ಭಯವಿಲ್ಲ…

Weekly Horoscope

ಸಮುದ್ರ ತೀರದಲ್ಲಿ ಅಥವಾ ಬೆಟ್ಟ ಗುಡ್ಡಗಳಲ್ಲಿರುವ ಪಾವನಮಯ ಶಿವ ಕ್ಷೇತ್ರಗಳ ದೊರೆಯಾದ ಶಿವನನ್ನು ಸ್ತುತಿಸಿ, ತಾಪಸ್ಸಯದಾಯಕನಾದ ಶನೈಶ್ವರನನ್ನು ಒಲಿಸಿಕೊಳ್ಳಿ. ಆರ್ಥಿಕ ಸಿದ್ಧಿಗೆ ಸ್ವತಃ ರಾಶ್ಯಾಧಿಪತಿಯಾದ ಶನೈಶ್ವರನೇ ದಾರಿ ನಿರ್ಮಿಸುವನಾದರೂ ಖರ್ಚಿನ ದಾರಿಗೆ ಅಡಿಗಲ್ಲು ಇಡುವ ಸೂರ್ಯ ನಿಮ್ಮ ಪರಮ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಸೂರ್ಯ ಪೀಡಾ ನಿವಾರಣಾ ಸ್ತ್ರೋತ್ರ ಓದಿ. ಗೋದಿ ಕಾಳುಗಳನ್ನು ಹೂ ಗಿಡದ ತಳದಲ್ಲಿ, ಯಾರೂ ತುಳಿಯದ ಜಾಗೆಯಲ್ಲಿ ಚೆಲ್ಲಿ, ಇದರಿಂದ ಒಳಿತಿದೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ಆಗ್ನೇಯ

ಕುಂಭ: ಮೃದು ಮಾತಿನಿಂದ ಮಾರು ಗೆಲ್ಲಿ!

Weekly Horoscope

ಸಾಡೇಸಾತಿ ಶನಿ ಕಾಟದ ದಟ್ಟ ಕಾರ್ಮೋಡದ ದಿನಗಳು. ಮನದ ಶಾಂತಿಯನ್ನು ಅಲ್ಲೋಲ ಕಲ್ಲೋಲಗೊಳಿಸುವ ಚಂದ್ರ ಬಾಧಕನಾಗಿದ್ದಾನೆ. ಶತ್ರುಗಳ ಕಸುವನ್ನು, ಶಕ್ತಿಯನ್ನು ಸಂವರ್ಧಿಸಿ ನಿಮ್ಮನ್ನು ದುರ್ಬಲವಾಗಿಸುವ ಅತಿರೇಕಗಳಿಗೆ ಕೈ ಹಾಕುತ್ತಾನೆ. ಅದರೆ ಪ್ರಬಲವಾದ ಕಾರ್ಕೋಟಕ ಶಕ್ತಿಯು ಶ್ರೀ ಹರಿಯ ರೂಪದಲ್ಲಿ ನಿಮ್ಮನ್ನು ಕಾಪಾಡುವ ಸಂಜೀವಿನಿಯೂ ಆಗಿರುತ್ತದೆ. ಐಟಿ, ಬಿಟಿ, ಟೆಕ್ಕಿಗಳು ಮಾತಿನ ಮೇಲಿನ ನಿಯಂತ್ರಣ ಸೂಕ್ತವಾಗಿ ಸಾಧಿಸಿ, ಪರಿಣಾಮಕಾರಿಯಾದ ಮಾತುಗಳನ್ನು ಮೃದುವಾಗಿ ಆಡಿದರೆ ಹಲವನ್ನು ಗೆಲ್ಲುವಿರಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪೂರ್ವಾ

ಮೀನ: ನಿಮಗೀಗ ಮಾತೇ ಮಾಣಿಕ್ಯ

Weekly Horoscope

ಬುಧನೇ ಸಂರಕ್ಷಕ ಎಂಬುದನ್ನು ಅರಿತಿರಿ. ಸಾಡೇಸಾತಿ ಕಾಟದಿಂದ ಮನಸ್ಸು ರೋಸಿ ಹೋಗಿ ಇನ್ನಿಲ್ಲದ ತಾಪತ್ರಯಗಳಿಗೆ ದಾರಿ ಮಾಡಿಕೊಳ್ಳದಂತೆ ವಿವೇಕ ಚಾತುರ್ಯ, ಬುದ್ಧಿವಂತಿಕೆ, ತಾಳ್ಮೆಯಿಂದ ಸನ್ನಿವೇಶಗಳನ್ನು ಗೆಲ್ಲಿ. ಬುಧನು ಈ ವಿಚಾರದಲ್ಲಿ ನಿಮಗೆ ಸಹಾಯಕ. ಭಗವಾನ್‌ ಮಹಾವಿಷ್ಣುವನ್ನು ಆರಾಧಿಸಿ. ಅನಂತನೂ, ಶುಭಾಂಗನೂ ಆದ ಮಹಾವಿಷ್ಣುವು ಭಗವತಿಯಾದ ಶ್ರೀ ಲಲಿತೆಯನ್ನು ನಿಮ್ಮ ಸೌಭಾಗ್ಯಕ್ಕಾಗಿ ಪ್ರೇರೇಪಿಸುತ್ತಾನೆ. ಅರ್ಥಿಕ ವಿಚಾರವನ್ನೂ, ನಾಲಿಗೆಯ ಮೇಲಿನ ಹಿಡಿತವನ್ನೂ ಸೂಕ್ತವಾಗಿ ನಿಯಂತ್ರಿಸಿ.
ಶುಭ ಸಂಖ್ಯೆ :5 ಶುಭ ದಿಕ್ಕು: ನೈಋತ್ಯ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

VISTARANEWS.COM


on

ದ್ರಾವಿಡ ದಂಗಲ್‌ನಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆಯೊಂದನ್ನು ಎಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಟಿಸಿದೆ. ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆ ನಾಯಕ ವಿಜಯ್‌ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ತಮಿಳುನಾಡಿನ ಎಲ್ಲಾ ಸಮೀಕ್ಷೆಗಳು ಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಹೇಳುತ್ತಿರುವಾಗಲೇ, ಆಕ್ಸಿಸ್‌ ಮೈ ಇಂಡಿಯಾ ಮಾತ್ರ ಈ ಸಲ ವಿಜಯ್‌ ನಿಜವಾದ ಜನನಾಯಗನ್‌ ಎಂದಿದೆ.
ತಮಿಳುನಾಡಿನ ಸಾರಥ್ಯ ವಿಜಯ್‌ಗೆ?
ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆಗೆ 98 ರಿಂದ 120 ಸೀಟುಗಳು ಸಿಗಲಿವೆ. ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ 92ರಿಂದ 110 ಹಾಗೂ 22ರಿಂದ 32 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆಗಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ 117 ಸೀಟು ಗೆಲ್ಲುವ ಪಕ್ಷದ ನಾಯಕ ಮುಖ್ಯಮಂತ್ರಿ ಆಗ್ತಾರೆ. ಸಮೀಕ್ಷೆ ಪ್ರಕಾರ ಟಿವಿಕೆ ಗರಿಷ್ಠ 120 ಸೀಟು ಗೆಲ್ಲುವ ಸಾಧ್ಯತೆಗಳಿವೆ.̇̇̇
ವೋಟ್‌ ಶೇರ್‌ನಲ್ಲೂ ಟಿವಿಕೆ ದಿಗ್ವಿಜಯ?
ಆಕ್ಸಿಸ್‌ ಮೈ ಇಂಡಿಯಾ ವೋಟ್‌ ಶೇರ್‌ ಸಮೀಕ್ಷೆಯನ್ನೂ ಪ್ರಕಟಿಸಿದೆ. ಅದರ ಪ್ರಕಾರ ಟಿವಿಕೆಗೆ ಶೇಕಡಾ 35ರಷ್ಟು ಮತ ಸಿಗಲಿದೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೂ ಶೇ. 35ರಷ್ಟು ವೋಟ್‌ ಶೇರ್‌ ಸಿಗಲಿದೆ. ಎನ್‌ಡಿಎಗೆ 23 ಶೇಕಡಾ ಮತ ಸಿಗುವ ಸಾಧ್ಯತೆಗಳಿವೆ.
ಸಿಎಂ ಸ್ಥಾನಕ್ಕೆ ವಿಜಯ್‌ ಬೆಸ್ಟ್‌?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಉತ್ತಮ ಅಭ್ಯರ್ಥಿ ಎಂಬ ಪ್ರಶ್ನೆಯನ್ನೂ ಆಕ್ಸಿಸ್‌ ಮೈ ಇಂಡಿಯಾ ಜನರ ಮುಂದಿಟ್ಟಿದೆ. ಅದರ ಪ್ರಕಾರ ಶೇ. 37ರಷ್ಟು ಮತದಾರರು ವಿಜಯ್‌ ಪರ ಒಲವು ತೋರಿದ್ದಾರೆ. ಶೇ. 35ರಷ್ಟು ಮಂದಿ ಮಾತ್ರ ಸ್ಟಾಲಿನ್‌ ಬೆಸ್ಟ್‌ ಅಂದಿದ್ದಾರೆ.
ವಿಜಯ್‌ಗೆ ಯುವ ಸಮೂಹದ ಬೆಂಬಲ
ಸರ್ವೇ ಪ್ರಕಾರ ಶೇ. 68ರಷ್ಟು ಹೊಸ ವೋಟರ್ಸ್‌ ವಿಜಯ್‌ಗೆ ಬೆಂಬಲ ನೀಡಿದ್ದಾರೆ. 20ರಿಂದ 29 ವಯೋಮಾನದ ಶೇ. 59ರಷ್ಟು ಯುವಕರು ಟಿವಿಕೆಗೆ ಜೈ ಎಂದಿದ್ದಾರೆ. 30-39 ವಯೋಮಾನದ ಶೇ. 45 ಮಂದಿ ದಳಪತಿಯನ್ನು ದಡಮುಟ್ಟಿಸಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

Continue Reading

Latest

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

VISTARANEWS.COM


on

ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುವ ಮೂಲಕ ನಾಯಕತ್ವ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕಲಬುರಗಿಯಲ್ಲಿ ಇಂದು ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಸಿಎಂ ಇದ್ದಾರೆ. ಹೀಗಾಗಿ ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಭವಿಷ್ಯದಲ್ಲಿ ಅಂಥ ಪರಿಸ್ಥಿತಿ ಬಂದರೆ ನಾವು ಎಲ್ಲರೂ ಕೂಡಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಪಕ್ಷದ ಐಡಿಯಾಲಜಿ ಮತ್ತು ಹಲವು ವರ್ಷಗಳ ಪರಿಶ್ರಮ ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದ ಮಹತ್ವದ ನಿರ್ಧಾರಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

Continue Reading

Latest

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

VISTARANEWS.COM


on

ಬೆಂಗಳೂರು: ಇಂದು ಸಂಜೆ ನಗರದಲ್ಲಿ ಸುರಿದ ಭಾರಿ ಮಳೆಗೆ ಶಿವಾಜಿನಗರ ಬಸ್‌ ನಿಲ್ದಾಣದ ಸಮೀಪವಿರುವ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಗೋಡೆ ಕುಸಿದು 7 ಜನ ಸಾವನ್ನಪ್ಪಿದ್ದಾರೆ. ಮೃತರು ಬೀದಿಬದಿ ವ್ಯಾಪಾರಿಗಳು ಎಂದು ತಿಳಿದುಬಂದಿದೆ. 11 ಜನ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಮತ್ತಷ್ಟು ಜನ ಸಿಲುಕಿರುವ ಶಂಕೆಯಿದ್ದು, ರಕ್ಷಣಾಕಾರ್ಯ ಮುಂದುವರೆಸಲಾಗಿದೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Continue Reading

ಕರ್ನಾಟಕ

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

VISTARANEWS.COM


on

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಶಾಲೆಗಳಲ್ಲಿ ಇನ್ನು ಮುಂದೆ ಅಶ್ಲೀಲ ಹಾಡು ಮತ್ತು ಅಸಭ್ಯ ನೃತ್ಯಗಳಿಗೆ ಅವಕಾಶ ನೀಡದಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ದ್ವಂದ್ವಾರ್ಥದ ಸಿನಿಮಾ ಹಾಡು ಹಾಗೂ ನೃತ್ಯಗಳನ್ನು ಪ್ರದರ್ಶಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಶಾಲಾ ಕಾರ್ಯಕ್ರಮಗಳಲ್ಲಿ ಕೇವಲ ಜಾನಪದ, ದೇಶಭಕ್ತಿ ಗೀತೆಗಳು, ಪರಿಸರ ಕಾಳಜಿಯ ಹಾಡುಗಳು ಮತ್ತು ಸಮಾಜಮುಖಿ ಚಿಂತನೆಯುಳ್ಳ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಬೇಕು. ನೃತ್ಯದ ಸಮಯದಲ್ಲಿ ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಕೂಡ ಸಭ್ಯವಾಗಿರಬೇಕು ಹಾಗೂ ಅರೆಬರೆ ವಸ್ತ್ರಗಳನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನರಂಜನೆಯ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಅಥವಾ ಮಕ್ಕಳ ನೈತಿಕ ಹಾಗೂ ಮಾನಸಿಕ ಆರೋಗ್ಯ ಕೆಡಿಸುವ ಯಾವುದೇ ಹಾಡುಗಳನ್ನು ಬಳಸದಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಜಾರಿಗೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗೆ ವಹಿಸಲಾಗಿದೆ.

Continue Reading
Advertisement
Latest5 minutes ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest2 hours ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

Latest2 hours ago

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

Latest3 hours ago

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

Latest20 hours ago

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

Latest21 hours ago

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

Latest21 hours ago

ಜಪಾನ್‌ಗೆ ಲಗ್ಗೆ ಇಡಲು ಸಜ್ಜಾದ ʼಧುರಂಧರ್’

bigbreaking21 hours ago

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಾ ಮೇ ಕ್ಲೈಮ್ಯಾಕ್ಸ್‌?

Latest23 hours ago

ಡಾಲಿ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದಂಪತಿ!

Latest1 day ago

ಶಿಸ್ತು ಮರೆತರಾ ರಿಯಾನ್ ಪರಾಗ್? ಕಾನೂನು ಸಂಕಷ್ಟಕ್ಕೆ ಸಿಲುಕುತ್ತಾರಾ ರಾಜಸ್ಥಾನ ರಾಯಲ್ಸ್ ಆಟಗಾರ?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌