ಧಾರ್ಮಿಕ
Bhanu Saptami 2023 : ಇಂದು ವೈವಸ್ವತ ಸಪ್ತಮಿ, ಭಾನು ಸಪ್ತಮಿ; ಬಹಳ ವಿಶೇಷವಾದ ದಿನ ಏಕೆ?
ಜೂನ್ 23 ರ ಭಾನುವಾರ ವೈವಸ್ವತ ಸಪ್ತಮಿ, ಭಾನು ಸಪ್ತಮಿಯ ದಿನ (Bhanu Saptami 2023). ಪಾತಾರ್ಕ ಯೋಗದ ದಿನವೂ ಹೌದು. ಬಹಳ ಮಹತ್ವ ಪಡೆದ ಈ ದಿನದ ವಿಶೇಷತೆಯನ್ನು ತಿಳಿಸುವ ಲೇಖನ ಇಲ್ಲಿದೆ.
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಭಾರತೀಯ ಪ್ರಾಚೀನ ಋಷಿಪರಂಪರೆಯಲ್ಲಿ ಸಮಸ್ತ ಮನುಕುಲದ ಕಲ್ಯಾಣಕ್ಕಾಗಿ ಅನೇಕ ವ್ರತಗಳ ಬಗ್ಗೆ, ವಿಶೇಷ ಆಚರಣೆಗಳ ಬಗ್ಗೆ ಹೇಳಲಾಗಿದೆ. ಅವುಗಳಲ್ಲಿ ವಿವಸ್ವಾನ್ ಸಪ್ತಮಿ (Vivasvat Saptami 2023) ಅಥವಾ ವೈವಸ್ವತ ಸಪ್ತಮಿ ಕೂಡ ಒಂದು. ಇಂದು ಎಂದರೆ ಆಷಾಢ-ಶುಕ್ಲ-ಸಪ್ತಮಿಯ ದಿನವಾದ ಈ ಭಾನುವಾರ (ಜೂನ್ 25) (Bhanu Saptami 2023) ವಿವಸ್ವಾನ್ ಸಪ್ತಮಿ ಎಂದು ಆಚರಿಸಲ್ಪಡುತ್ತಿದೆ. ಇಂದು ಅನೇಕ ಮಹಾಯೋಗಗಳು ಕೂಡಿ ಬಂದಿದ್ದು ವಿಶೇಷವಾಗಿದೆ.
ಮೊದಲನೆಯದಾಗಿ ಪೂರ್ವಾ ನಕ್ಷತ್ರದಿಂದ ಯುಕ್ತವಾದ ಸಪ್ತಮೀ ಇರುವ ಕಾರಣ ಈ ದಿನ ವಿವಸ್ವಾನ್ ಸಪ್ತಮಿಯ ದಿನವಾಗಿದ್ದು ವಿಶೇಷತೆ ಪಡೆದಿದೆ. ಎರಡನೆಯದಾಗಿ ಭಾನುವಾರ ಸಪ್ತಮೀ (Bhanu Saptami 2023) ಇರುವ ಕಾರಣ ಭಾನು ಸಪ್ತಮೀಯಾಗಿದೆ. ಮೂರನೆಯದಾಗಿ, ವ್ಯತೀಪಾತ ಯೋಗದಿಂದ ಯುಕ್ತವಾದ ಸಪ್ತಮಿ ಇರುವ ಕಾರಣ, ʻಪಾತಾರ್ಕ ಯೋಗʼ ಇಂದು ಸೃಷ್ಟಿಯಾಗಿದೆ. ಈ ಪಾತಾರ್ಕ ಯೋಗ ಮಹಾ ಪರ್ವವು ಬಹಳ ವಿರಳವಾಗಿರುವುದರಿಂದ ಈ ದಿನ ಬಹಳ ವಿಶೇಷವಾದದ್ದು.
ಈ ಪಾತಾರ್ಕ ಯೋಗಕ್ಕೆ ಸಾವಿರ ಸೂರ್ಯಗ್ರಹಣದ ಫಲವನ್ನು ಕೊಡುವಂಥ ಶಕ್ತಿಯಿದೆ ಎಂದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ.
ಭಾನೋರ್ವಾರ ವ್ಯತೀಪಾತ ಯೋಗಃ ಸಂಪದ್ಯತೆ ಯದಿ,
ತದಾ ಪಾತಾರ್ಕ ಯೊಗೋಯಂ ಸಹಸ್ರಾರ್ಕಗ್ರಹೈಃ ಸಮಃ
(ವ್ರತನಿರ್ಣಯಕಲ್ಪವಲ್ಲಿ,)
ವಿಶೇಷವಾಗಿ ಈ ದಿನದಂದು ಸೂರ್ಯಭಗವಂತನಿಗೆ ಪ್ರೀತಿ ಕಾರಕವಾದಂಥ ಸಮುದ್ರ ಸ್ನಾನ, ನದಿ ಸ್ನಾನ, ಸೂರ್ಯ ಮಂತ್ರ ಜಪ, ಸೂರ್ಯ ಸ್ತೋತ್ರ, ಆದಿತ್ಯ ಹೃದಯ, ಅಕ್ಷುಪನಿಷತ್ ಪಾರಾಯಣ, ಸೂರ್ಯ ಯಾಗವನ್ನು ಇನ್ನಿತರ ಸೂರ್ಯ ಮಂತ್ರಗಳ ಪಾರಾಯಣವನ್ನು ಯಥಾಶಕ್ತಿ ಆಚರಿಸಿದಲ್ಲಿ ಪಾಪಕ್ಷಯವು, ಶ್ರೇಯೋಭಿವೃದ್ಧಿಯು ಆಗುತ್ತದೆ. ಜನ್ಮನಕ್ಷತ್ರದವರಿಗೆ ಈ ಸಮಯದಲ್ಲಿ ಗ್ರಹಣದಂತಹ ಯಾವುದೇ ದೋಷಗಳು ಇರುವುದಿಲ್ಲ. ಈ ವಿಶೇಷ ಪುಣ್ಯ ಪರ್ವಕಾಲವು ಸೂರ್ಯೋದಯದಿಂದ ಸೂರ್ಯಸ್ತದ ಸಮಯದವರೆಗೂ ಇರುತ್ತದೆ.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಭಾನು ಸಪ್ತಮಿ ಕೂಡ ಹೌದು!
ಭಾನುವಾರದ ದಿನದಂದು ಸಪ್ತಮಿ ತಿಥಿ ಬಂದರೆ ಅದನ್ನು ಭಾನು ಸಪ್ತಮಿ (Bhanu Saptami 2023) ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯ ಏಳು ಕುದುರೆಗಳ ರಥದ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡನು. ಭಾನು ಸಪ್ತಮಿಯನ್ನು ಅತ್ಯಂತ ಮಂಗಳಕರ ಸಪ್ತಮೀ ಎಂದು ಪರಿಗಣಿಸಲಾಗಿದೆ. ಭಾನು ಎನ್ನುವುದು ಸೂರ್ಯನ ಇನ್ನೊಂದು ಹೆಸರು.
ಭಗವಾನ್ ಶ್ರೀ ಸೂರ್ಯನಾರಾಯಣ ಸ್ವಾಮಿ ಎಲ್ಲಾ ಗ್ರಹಗಳ ರಾಜ. ಇದು ಸೌರವ್ಯೂಹದ ಪ್ರಮುಖ ಗ್ರಹವಾಗಿದೆ. ಈ ದಿನದಂದು ಸೂರ್ಯನ ಕಿರಣಗಳು ಸೂರ್ಯ ಯಂತ್ರದ ಮೇಲೆ ಬಿದ್ದ ನಂತರ ಭಗವಾನ್ ಸೂರ್ಯನ ಮಹಾಭಿಷೇಕವನ್ನು ನಡೆಸಲಾಗುತ್ತದೆ. ಆಸ್ತಿಕರು ಈ ದಿನ ಸೂರ್ಯದೇವನನ್ನು ವಿಶೇಷ ರೀತಿಯಲ್ಲಿ ಪೂಜಿಸುತ್ತಾರೆ. ಭಾನು ಸಪ್ತಮಿಯಂದು ಮಹಾಭಿಷೇಕ ಮಾಡುವ ಮೂಲಕ ಸೂರ್ಯನನ್ನು ಪೂಜಿಸಲಾಗುತ್ತಿದೆ. ಶಾಶ್ವತವಾಗಿ ಆರೋಗ್ಯಕರ ಜೀವನವನ್ನು ಪಡೆಯಲು ಸೂರ್ಯ ದೇವನನ್ನು ಮೆಚ್ಚಿಸಲು ಭಕ್ತರು ಆದಿತ್ಯ ಹೃದಯಂ ಮತ್ತು ಇತರ ಸೂರ್ಯ ಸ್ತೋತ್ರಗಳನ್ನು ಪಠಿಸುತ್ತಾರೆ.
ಈ ದಿನದಂದು ಭಕ್ತರು ವಿವಿಧ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಹೆಚ್ಚಾಗಿ ಜ್ಞಾನವನ್ನು ಪಡೆಯಲು ಮತ್ತು ಸದ್ಗುಣಗಳನ್ನು ಪಡೆಯಲು ಮಹಿಳೆಯರು ಉಪವಾಸವನ್ನು ಮಾಡುತ್ತಾರೆ. ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡುವ ಭಕ್ತರು ಗಂಗಾನದಿಯಂತೆ ಪವಿತ್ರರಾಗುತ್ತಾರೆ ಮತ್ತು ಎಂದಿಗೂ ಬಡವರಾಗಲು ಸಾಧ್ಯವಿಲ್ಲ ಎಂದು ನಂಬಲಾಗಿದೆ.
ಆಚರಣೆಗಳೇನು?
ಉತ್ತರ ಭಾರತದಲ್ಲಿ ಇದರ ಆಚರಣೆ ಜೋರಾಗಿದೆ. ಸೂರ್ಯೋದಯಕ್ಕೆ ಮುನ್ನ ಜನರು ನದಿಯಲ್ಲಿ ಸ್ನಾನ ಮಾಡಿ ನಂತರ ಸೂರ್ಯನನ್ನು ಪೂಜಿಸುತ್ತಾರೆ. ಸೂರ್ಯನ ಕಿರಣಗಳನ್ನು ಸ್ವಾಗತಿಸಲು ಮಹಿಳೆಯರು ತಮ್ಮ ಮನೆಗಳ ಮುಂದೆ ರಂಗೋಲಿಗಳನ್ನು ಬಿಡಿಸುತ್ತಾರೆ. ಮುಖ್ಯ ಬಾಗಿಲಿನ ಮುಂದೆ ರಂಗೋಲಿ ಬಿಡಿಸಿ ಮಧ್ಯದಲ್ಲಿ ದನದ ಸಗಣಿಯನ್ನು ಸುಡಲಾಗುತ್ತದೆ. ಸೂರ್ಯನ ಕಡೆಗೆ ಮುಖಮಾಡಿದ ಮಣ್ಣಿನ ಪಾತ್ರೆಯಲ್ಲಿ ಹಾಲನ್ನು ಕುದಿಸಲಾಗುತ್ತದೆ. ಹಾಲು ಕುದಿಯುವಾಗ ಅದು ಸೂರ್ಯನನ್ನು ತಲುಪುತ್ತದೆ ಎಂದು ನಂಬಲಾಗಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ನಂತರ, ಪಾಯಸ, ಗೋಧಿ ಮತ್ತು ನವಗ್ರಹಗಳ ಧಾನ್ಯಗಳನ್ನು ಸೂರ್ಯ ದೇವರಿಗೆ ಅರ್ಪಿಸಲಾಗುತ್ತದೆ. ಈ ಧಾನ್ಯಗಳನ್ನು ದಾನ ಮಾಡಲಾಗುತ್ತದೆ. ʻಭವಿಷ್ಯ ಪುರಾಣʼದಲ್ಲಿ ಸೂರ್ಯನ ಆರಾಧನೆಯ ವಿಶೇಷ ಮಹತ್ವವನ್ನು ಹೇಳಲಾಗಿದೆ. ಸೂರ್ಯ ಸಪ್ತಮಿಯ ದಿನದಂದು ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.
- ಈ ದಿನ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ, ಇತ್ಯಾದಿಗಳಿಂದ ನಿವೃತ್ತರಾಗಬೇಕು.
- ಸೂರ್ಯನಿಗೆ ನೀರನ್ನು ಅರ್ಪಿಸಲು, ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿ ಅದಕ್ಕೆ ಕೆಂಪು ಚಂದನ, ಅಕ್ಕಿ ಮತ್ತು ಕೆಂಪು ಹೂವುಗಳನ್ನು ಸೇರಿಸಿ ನಂತರ ಸೂರ್ಯನಿಗೆ ನೀರನ್ನು ಅರ್ಪಿಸಿ.
- ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವಾಗ, ‘ಓಂ ರವಯೇ ನಮಃ’ ಎಂಬ ಮಂತ್ರವನ್ನು ಪಠಿಸಿ. ಇದರ ನಂತರ, ಸೂರ್ಯ ದೇವರನ್ನು ಧೂಪ ಮತ್ತು ದೀಪಗಳಿಂದ ಪೂಜಿಸಿ.
- ಈ ವಿಧಾನಗಳಿಂದ ಸೂರ್ಯನನ್ನು ಪೂಜಿಸುವುದರಿಂದ, ಭಗವಾನ್ ಸೂರ್ಯ ದೇವರ ಕೃಪೆಯಿಂದ ಓರ್ವ ವ್ಯಕ್ತಿಯು ಆತ್ಮಶುದ್ಧಿ ಮತ್ತು ಶಕ್ತಿಯನ್ನು ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ.
- ಸೂರ್ಯ ಸಪ್ತಮಿಯಂದು ತಾಮ್ರದ ಪಾತ್ರೆಗಳು, ಬೆಲ್ಲ, ಕೆಂಪು ಚಂದನ, ಬಟ್ಟೆ ಮತ್ತು ಗೋಧಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
- ನೀರನ್ನು ಯಾವಾಗಲೂ ಪೂರ್ವಾಭಿಮುಖವಾಗಿ ಕುಳಿತು ನೀಡಬೇಕು. ನೀವು ಸೂರ್ಯನನ್ನು ನೋಡದಿದ್ದರೂ ಪೂರ್ವ ದಿಕ್ಕಿಗೆ ನೋಡುವ ಮೂಲಕ ಆಚರಣೆಯನ್ನು ಮಾಡಿ.
- ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯವನ್ನು ನೀಡುವಾಗ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ.
ಇದನ್ನೂ ಓದಿ : Prerane : ಮೋಹ ಮುಕ್ತರಾಗುವುದು ಹೇಗೆ? ಇರುವ ದಾರಿಗಳಾದರೂ ಯಾವುವು?
ಗಾಯತ್ರಿ ಮಂತ್ರದ ಹೊರತಾಗಿ ನೀವು ಸೂರ್ಯನ ಈ ಕೆಳಗಿನ ಹೆಸರುಗಳನ್ನು ಸಹ ಪಠಿಸಬಹುದು:
ಓಂ ಮಿತ್ರಾಯ ನಮಃ, ಓಂ ರವಯೇ ನಮಃ, ಓಂ ಸೂರ್ಯಾಯ ನಮಃ , ಓಂ ಭಾನವೇ ನಮಃ, ಓಂ ಖಗಾಯ ನಮಃ, ಓಂ ಪೂಷ್ಣೇ ನಮಃ, ಓಂ ಹಿರಣ್ಯಗರ್ಭಾಯ ನಮಃ, ಓಂ ಮರೀಚಯೇ ನಮಃ, ಓಂ ಆದಿತ್ಯಾಯ ನಮಃ, ಓಂ ಸವಿತ್ರೇ ನಮಃ, ಓಂ ಅರ್ಕಯಾ ನಮಃ, ಓಂ ಭಾಸ್ಕರಾಯ ನಮಃ, ಓಂ ಸೂರ್ಯಕೃಪಾ ಪ್ರಸಾದ ಸಿದ್ಧಿರಸ್ತು.
– ಲೇಖಕರು ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಕರ್ನಾಟಕ
Letter to friend : ಹಾಯ್ ಪುಟ್ಟಾ.. ಹೇಗಿದಿಯಾ?; ದೇವರ ಹುಂಡಿಯಲ್ಲಿ ಓಡಿ ಹೋದ ಗೆಳತಿಗೊಂದು ಪತ್ರ!
Letter to Friend: ದೇವರ ಹುಂಡಿಯಲ್ಲಿ ಕಂಡುಬಂದ ಈ ಒಂದು ಪತ್ರ ನಿಜಕ್ಕೂ ಗೆಳತಿಗೆ ಬರೆದದ್ದಾ? ಮನಸಿನೊಳಗೆ ಅಡಗಿದ್ದ ಸುಪ್ತ ಪ್ರೀತಿ ದೇವರ ಮುಂದೆ ಅನಾವರಣಗೊಂಡಿತಾ? ಅಂತೂ ಹದಿಹರೆಯದ ತಲ್ಲಣಗಳ ಒಂದು ಮಾಸ್ಟರ್ ಪೀಸ್ ಪತ್ರ ಇಲ್ಲಿದೆ.
ಚಾಮರಾಜನಗರ: ದೇವರು ಅಂದರೆ ನಮ್ಮ ಮನಸ್ಸಿನ ನೋವುಗಳನ್ನು ಪರಿಹರಿಸಿ ಬದುಕುವ ದಾರಿ ತೋರಿಸುವ ಮಹಾಮಹಿಮ (God is supreme, ultimate saviour) ಎನ್ನುವುದು ಎಲ್ಲರ ನಂಬಿಕೆ. ದೇವರ ಮುಂದೆ ಕುಳಿತು ನಾವು ನಮ್ಮ ಕಷ್ಟಗಳನ್ನೆಲ್ಲ ಹೇಳುತ್ತೇವೆ, ಕೈಹಿಡಿದು ನಡೆಸೆನ್ನನು ಅಂತ ಬೇಡುತ್ತೇವೆ. ಈ ಒಂದು ಕಷ್ಟದಿಂದ ಪಾರು ಮಾಡು ಎಂದು ಕಣ್ಣೀರು ಹಾಕುತ್ತೇವೆ, ಹರಕೆ ಹೊರುತ್ತೇವೆ. ದೇವರು ಎಂದರೆ ಜಗತ್ತಿನ ಅತಿದೊಡ್ಡ ನೋವು ನಿವಾರಕ… Greatest Pain reliever. ಅಂತ ದೇವರ ಮುಂದೆ ಭಕ್ತರು ಹೇಳಿಕೊಳ್ಳುವ ಬಗೆ ಬಗೆಯ ಬೇಡಿಕೆ, ನೋವುಗಳ ಒಂದು ಸಣ್ಣ ಚಿತ್ರಣ ಚಾಮರಾಜ ನಗರದ ಚಾಮರಾಜೇಶ್ವರ (Chamarajeshwara Temple) ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆಯಿತು. ಇಲ್ಲಿ ಯಾರೋ ಗೆಳತಿಗೊಂದು ಪತ್ರ (Letter to friend) ಬರೆಯುತ್ತಾರೆ, ತಪ್ಪು ಮಾಡುತ್ತಿದ್ದೇನೆ ಎಂದು ಹಳಹಳಿಸುತ್ತಾರೆ. ಇನ್ನೊಬ್ಬರು ಪ್ರಧಾನಿಯನ್ನು ಭೇಟಿ ಮಾಡಿಸು ಅಂತಾರೆ.
ದೇವಸ್ಥಾನದಲ್ಲಿ ನಡೆದ ಹುಂಡಿ ಎಣಿಕೆಯ (Hundi Counting) ವೇಳೆ ಒಬ್ಬ ಯುವಕ ತನ್ನ ಓಡಿ ಹೋದ ಗೆಳತಿಗಾಗಿ ಬರೆದಿರುವ ಎರಡು ಪುಟಗಳ ಸುದೀರ್ಘ ಪತ್ರ ಎಲ್ಲರ ಗಮನ ಸೆಳೆದಿದೆ.
ನೀನು ನನ್ನನ್ನು ಮಿಸ್ ಮಾಡ್ಕೊತಿದಿಯಾ ಪುಟ್ಟ?
ಹಾಯ್ ಪುಟ್ಟಾ, ಹೇಗಿದ್ದೀಯಾ. ನೀನು ನಮ್ಮನ್ನು ಮಿಸ್ ಮಾಡ್ಕೋತಿದಿಯಾ ಅನ್ಕೊಂಡಿದೀವಿ, ನೀನು ಹೀಗೆಲ್ಲ ಮಾಡಬಾರದಿತ್ತು… ಎಂದು ಆರಂಭವಾಗುವ ಪತ್ರದಲ್ಲಿ ಅವರಿಬ್ಬರ ಸಂಬಂಧ, ಆಕೆ ಎಂದರೆ ಅವನಿಗೆಷ್ಟು ಇಷ್ಟ, ಆಕೆ ಇಲ್ಲದ ಬದುಕು ಈಗ ಎಷ್ಟು ನೋವಿನಲ್ಲಿದೆ. ಖುಷಿಯನ್ನು, ದುಃಖವನ್ನು ಹಂಚಿಕೊಳ್ಳಲು ಯಾರೂ ಇಲ್ಲ ಎನ್ನುವ ಅನಾಥ ಭಾವ ಎಲ್ಲವೂ ವ್ಯಕ್ತವಾಗಿದೆ.
ಇಲ್ಲಿ ಪತ್ರ ಬರೆದವನು ಮತ್ತು ಆ ಹುಡುಗಿ ಬೆಸ್ಟ್ ಫ್ರೆಂಡ್ಸ್ ಆಗಿದ್ದವರು. ಒಂದೇ ಕಾಲೇಜು. ಒಂದೇ ಕ್ಲಾಸ್ ಕೂಡಾ ಇರಬಹುದು ಅನಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಜತೆಯಾಗಿ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಅವರ ನಡುವಿನ ಸ್ನೇಹ ಇನ್ನೂ ಪ್ರೀತಿಯಾಗಿ ಬದಲಾಗಿಲ್ಲ ಅನಿಸುತ್ತದೆ. ಅಥವಾ ಬದಲಾದ ಪ್ರೀತಿಯನ್ನು ಅವರಿಬ್ಬರು ಹೇಳಿಕೊಂಡಿಲ್ಲ.
ಎರಡು ತಿಂಗಳ ಹಿಂದೆ ಆ ಹುಡುಗಿಗೆ ಮದುವೆಯಾಗಿದೆ. ಮದುವೆಯಾಗಿದೆ ಅಂದರೆ ಆಕೆ ತಾನು ಮೆಚ್ಚಿದ ಇನ್ನೊಬ್ಬ ಹುಡುಗನ ಜತೆಗೆ ಮನೆಯವರಿಗೂ ಹೇಳದೆ ಓಡಿ ಹೋಗಿದ್ದಾಳೆ. ಈಗ ಅವಳು ಇವನ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಈ ವೇದನೆಯಿಂದ ಆತ ದೇವರಿಗೆ ಪತ್ರ ಬರೆದಿದ್ದಾನೆ. ನಿನ್ನನೊಮ್ಮೆ ನೋಡಬೇಕು, ನಿನ್ನಲೊಮ್ಮೆ ಮಾತನಾಡಬೇಕು, ನನ್ನ ಮನಸಿನ ಭಾವನೆ ಹೇಳಿಕೊಳ್ಳಬೇಕು ಎನ್ನುವುದು ಅವನ ಆಸೆ. ನಿನ್ನನ್ನು ಮಿಸ್ ಮಾಡ್ಕೊತೀನಿ ಅಂತ ಪದೇಪದೆ ಹೇಳುತ್ತಾನೆ. ನೀನು ನನ್ನ ಮಿಸ್ ಮಾಡ್ಕೊತಿದಿಯಾ ಅಂತ ಕೇಳ್ತಾನೆ.
ನಿಜವೆಂದರೆ, ಆಕೆ ಓಡಿ ಹೋದ ಮೇಲೆ ಆತನಿಗೆ ಆ ಹುಡುಗಿಯ ಮೇಲಿದ್ದ ಪ್ರೀತಿಯ ಭಾವನೆ ಜಾಗೃತವಾಗಿದೆ ಅನಿಸುತ್ತದೆ. ʻಎಲ್ಲರೂ ಬಿಟ್ಟು ಹೋದ ಮೇಲೂ ನಾವಿಬ್ಬರು ಜತೆಯಾಗಿರಬೇಕುʼ ಅಂತ ಅವರು ಹಿಂದೆಲ್ಲ ಮಾತನಾಡಿಕೊಂಡಿದ್ದರು. ಆದರೆ, ಪ್ರೀತಿ ಮಾಡಬೇಕು, ಮದುವೆಯಾಗಬೇಕು ಅಂತ ಹೇಳಿಕೊಂಡಂತಿಲ್ಲ. ಹೀಗಾಗಿ ಪತ್ರದ ಆರಂಭದಲ್ಲಿ ಗೆಳತಿಗೊಂದು ಪತ್ರ, ಬೆಸ್ಟ್ ಫ್ರೆಂಡ್‌ಗೊಂದು ಪತ್ರ ಅನ್ನುವ ರೀತಿಯಲ್ಲೇ ಇದೆ.
ಅವನಿಗೆ ಈಗಲೂ ಒಂದು ಸಂಶಯ, ಒಂದು ಸಣ್ಣ ಆಸೆ!
ಈ ಪತ್ರ ಬರೆದ ಯುವಕನಿಗೆ ಒಂದು ಸಣ್ಣ ಸಂಶಯ. ʻʻನೀನು ಪ್ರೀತಿಸಿದವನನ್ನೇ ಮದುವೆ ಆಗುವುದಿದ್ದರೆ ಮನೆಯವರನ್ನೆಲ್ಲ ಒಪ್ಪಿಸಬಹುದಿತ್ತು. ದೊಡ್ಡ ತಪ್ಪು ಮಾಡಿಬಿಟ್ಟೆʼʼ ಎಂದು ಪತ್ರದಲ್ಲಿ ಬರೆದಿದ್ದಾನೆ. ಅಂದರೆ ಆಕೆ ಪ್ರೀತಿ ಮಾಡುತ್ತಿದ್ದ ವಿಷಯ ಇವನಿಗೆ ಗೊತ್ತಿರಲೇ ಇಲ್ಲ. ಈಗಲೂ ಆಕೆ ನಿಜವಾಗಿ ಪ್ರೀತಿಸಿಯೇ ಓಡಿ ಹೋದಳಾ ಅಥವಾ ಅವನೇನಾದರೂ ಬ್ಲ್ಯಾಕ್‌ಮೇಲ್ ಮಾಡಿ ಆಕೆಯನ್ನು ಹೆದರಿಸಿ ಓಡಿಸಿಕೊಂಡು ಹೋಗಿ ಮದುವೆಯಾದನಾ ಎನ್ನುವ ಬಗ್ಗೆ ಅವನಿಗೆ ಸಣ್ಣ ಸಂಶಯ. ಹೀಗಾಗಿ ಆತ ಆಕೆಯಲ್ಲೊಮ್ಮೆ ಮಾತನಾಡಬೇಕು. ಆಕೆ ಕಷ್ಟದಲ್ಲಿದ್ದಾಳಾ ಎಂದು ತಿಳಿಯಬೇಕು ಎನ್ನುವ ಆಸೆಯನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾನೆ.
ಉಳಿದಂತೆ ಪತ್ರದ ತುಂಬ ಭಾವನೆಗಳ ಮಹಾಪೂರವಿದೆ. ಅವಳನ್ನು ಕಂಡಾಗ ಇವನಲ್ಲಿ ಬೆಳಗುತ್ತಿದ್ದ ಸಾವಿರ ಕ್ಯಾಂಡಲ್‌ಗಳ ಮನಸ್ಸಿನ ಬಲ್ಬು,, ಅವಳ ಸಮ್ಮುಖದಲ್ಲಿ ಸಿಗುತ್ತಿದ್ದ ಸಮಾಧಾನ, ಮನಸ್ಸಿನ ಭಾವನೆ, ಸಂಕಟಗಳನ್ನು ಹೇಳಿಕೊಂಡು ನಿರಾಳವಾಗುತಿದ್ದ ಆ ದಿನಗಳು, ಈಗ ಅನುಭವಿಸುತ್ತಿರುವ ಒಂಟಿತನ, ಯಾರೂ ಇಲ್ಲ ಎಂಬ ಅನಾಥ ಭಾವಗಳೆಲ್ಲ ಪತ್ರದಲ್ಲಿ ಉಕ್ಕಿ ಹರಿಯುತ್ತಿವೆ. ಹದಿಹರೆಯದ ತಲ್ಲಣಗಳ ಅದ್ಭುತ ಕ್ಷಣಗಳು ಈ ಪತ್ರದಲ್ಲಿ ಜಾಗೃತವಾಗಿವೆ. ಒಂದು ಹೇಳಲಾಗದ ಪ್ರೀತಿ, ಹೇಳದೇ ಹೋದ ಪ್ರೀತಿಯ ಚಡಪಡಿಕೆಗಳು ಹೇಗಿರುತ್ತವೆ ಎನ್ನುವುದನ್ನು ಈ ಪತ್ರ ಹೇಳುತ್ತದೆ. ಅಂದ ಹಾಗೆ ಈ ಪತ್ರದಲ್ಲಿ ಎಲ್ಲೂ ಇವನ್ಯಾರು, ಅವಳ್ಯಾರು ಎನ್ನುವ ಐಡೆಂಟಿಟಿ ಬಯಲಾಗುವುದಿಲ್ಲ. ಮಧ್ಯದಲ್ಲಿ ಕೆಲವು ಗೆಳತಿಯರ ಹೆಸರು ಬರುತ್ತದೆ ಅಷ್ಟೆ.
ಮನಸಿನ ಗೊಂದಲ ಪರಿಹರಿಸು, ಮೋದಿಯನ್ನು ಭೇಟಿ ಮಾಡಿಸು
ದೇವರ ಹುಂಡಿಯಲ್ಲಿ ಕಂಡ ಚಿತ್ರ ಪತ್ರಗಳು ಇನ್ನೂ ಇವೆ. ʻʻದೇವರೆ ನಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಿಲ್ಲ, ಆದರೆ ತುಂಬಾ ತಪ್ಪು ಮಾಡುತ್ತಿದ್ದೇನೆ. ಇನ್ನು ಮುಂದೆ ಆ ರೀತಿ ಗೊಂದಲ ಆಗದಂತೆ ನೋಡಿಕೋʼʼ ಎಂದು ಮನಸಿನ ಸಂಕಟದ ಭಾರವನ್ನು ದೇವರ ಮೇಲೆ ಹೊರಿಸಿ ನಿರಾಳವಾದ ಪತ್ರವೊಂದು ಗಮನ ಸೆಳೆದಿದೆ.
ಏಪ್ರಿಲ್ 9ರಂದು ಬಂಡಿಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಆಸೆಪಟ್ಟಿದ್ದ ವ್ಯಕ್ತಿಯೊಬ್ಬರು ದೇವರಲ್ಲಿ ಮೊರೆ ಇಟ್ಟ ಪತ್ರ ಈಗ ಬಯಲಿಗೆ ಬಂದಿದೆ. ದೇವರಿಗೆ ಆಗಲೇ ತಲುಪಿರಬಹುದು!
ಇನ್ನೊಂದು ಪತ್ರದಲ್ಲಿ ಕೆಲವು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಇವರು ನಮಗೆ ತೊಂದರೆ ಕೊಡದಂತೆ ಮಾಡು ಎಂದೂ ಕೆಲವರ ಹೆಸರು ಉಲ್ಲೇಖಿಸಿ, ಇವರು ನಮ್ಮ ಪರವಾಗಿ ನಿಲ್ಲುವಂತೆ ಮಾಡು ಎಂದೂ ಮನವಿ ಮಾಡಲಾಗಿದೆ. ಅಂದರೆ ಒಟ್ಟಾರೆಯಾಗಿ ಅವರದೊಂದು ಜಾಗ ಅವರಿಗೇ ಸಿಗುವಂತೆ ಮಾಡಬೇಕು ಎನ್ನುವುದು ದೇವರಲ್ಲಿ ಅವರು ಮಾಡಿದ ಪ್ರಾರ್ಥನೆ.
ಇದನ್ನೂ ಓದಿ: Viral News: ಖಾತೆಯಲ್ಲಿ ಇದ್ದಿದ್ದೇ 17 ರೂ. ಆದ್ರೆ ಹುಂಡಿಗೆ 100 ಕೋಟಿ ರೂ. ಚೆಕ್ ಹಾಕಿದ್ದ ಭಕ್ತ!
ಕರ್ನಾಟಕ
ಗಣಪತಿ ವಿಸರ್ಜನೆ ಮಾಡುವಾಗ ನೀರಲ್ಲಿ ಮುಳುಗಿ ಬಾಲಕ ಸಾವು
Drowned in River : ಸ್ನೇಹಿತರೊಂದಿಗೆ ಗಣೇಶ ವಿಸರ್ಜನೆ (Ganesha chaturthi) ಮಾಡುವಾಗ ಬಾಲಕನೊರ್ವ ಹಳ್ಳದಲ್ಲಿ ನೀರಿನ ಆಳ ಅರಿಯದೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ : ಇಲ್ಲಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕುಂಟೆ ಹಳ್ಳದಲ್ಲಿ (Drowned) ಗಣಪತಿ ವಿಸರ್ಜನೆ (Ganesha chathurthi) ಮಾಡಲು ಹೋಗಿ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಡಶೀಗೇನಹಳ್ಳಿ ಗ್ರಾಮದ ನಿಶಾಲ್ ತೇಜ್ (12) ಮೃತ ಬಾಲಕ.
ಸೆ.29ರಂದು ಸ್ನೇಹಿತರೊಂದಿಗೆ ನಿಶಾಲ್ ತೇಜ್ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಗಣೇಶ ವಿಸರ್ಜನೆ ಮಾಡುವ ಉತ್ಸಾಹದಲ್ಲಿ ಹಳ್ಳದ ಆಳ ಅರಿಯದೇ ನೀರಿಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಆತನ ಮೃತದೇಹವು ಕೂಗಳತೆ ದೂರದಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್ ಪತ್ತೆ!
ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿ ದಾರುಣ ಸಾವು
ಹಾಸನ: ಇಲ್ಲಿನ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲು ಜಾರಿ ನಾಲೆ ಬಿದ್ದು (Drowned In Canal) ಮೃತಪಟ್ಟಿರುವ ಘಟನೆ ನಡೆದಿದೆ. ಸುಪ್ರೀತಾ (5) ಮೃತ ದುರ್ದೈವಿ.
ಗ್ರಾಮದ ರೇವಣ್ಣ-ಭಾಗ್ಯ ದಂಪತಿ ಪುತ್ರಿ ಸುಪ್ರೀತಾ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಸುಪ್ರೀತಾ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್ ಆಗಿ ಕಾಲುಜಾರಿ ನಾಲೆಗೆ ಬಿದ್ದಿದ್ದಾಳೆ. ನಾಲೆಯಲ್ಲಿ ಹರಿಯುತ್ತಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.
ಹಾರಂಗಿ ಬಲದಂಡೆ ನಾಲೆಯಲ್ಲಿ ಮುಳುಗಿರುವ ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ 6 ಕಿ.ಮೀವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಮೃತದೇಹವು ಪತ್ತೆಯಾಗಿಲ್ಲ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಅಂಕಣ
ಜೋಕುಮಾರ ಸ್ವಾಮಿ ಹಬ್ಬ: ಜನರ ಮನಸ್ಸಿನಿಂದ ಹುಟ್ಟಿ ಬಂದ ಸೊಗಸುಗಾರ
ಉತ್ತರ ಕರ್ನಾಟಕದಲ್ಲಿ ಜನರ ಜೀವನಕ್ಕೆ ಬಹು ಹತ್ತಿರವಾದ, ಕೃಷಿ ಸಂಸ್ಕೃತಿಗೆ ಸಂಬಂಧಿಸಿದ ಹಬ್ಬ ಜೋಕುಮಾರಸ್ವಾಮಿ ಹಬ್ಬ. ಇದರ ರೂಢಿ, ಆಚರಣೆಗಳೆಲ್ಲ ವಿಶಿಷ್ಟ.
:: ಪ್ರೊ. ವಿದ್ವಾನ್ ನವೀನ ಶಾಸ್ತ್ರಿ ರಾ. ಪುರಾಣಿಕ, ಲೇಖಕರು ಸಂಸ್ಕೃತ ಉಪನ್ಯಾಸಕರು, ಜ್ಯೋತಿಷಿ
ಜನಪದ ಸಂಪ್ರದಾಯದ ಆಚರಣೆಗಳು ಜನರ ಮನಸ್ಸಿನಿಂದ ಆವಿರ್ಭವಿಸುವಂತಹವು. ಅವುಗಳ ಕುರಿತಾಗಿ ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಆಯಾ ಸಮಾಜದ ರೀತಿ-ನೀತಿಗಳನ್ನು ಆಚಾರ-ವಿಚಾರಗಳನ್ನು ವರ್ತನ ಪದ್ಧತಿಯನ್ನು, ನಡಾವಳಿಯ ರೂಪುರೇಷೆಗಳನ್ನೇ ಒಟ್ಟಾರೆಯಾಗಿ ಸಂಪ್ರದಾಯವೆನ್ನುತ್ತಾರೆ. ಇಂತಹ ಪರಂಪರೆಯಲ್ಲಿ ಜೋಕುಮಾರನನ್ನು ಹೊತ್ತು ತರುವುದು, ಜೋಕುಮಾರಸ್ವಾಮಿ ಹಬ್ಬ (jokumaraswamy festival) ಒಂದು ವಿಶಿಷ್ಟ ಆಚರಣೆ.
ಜೋಕುಮಾರನ ಕಥೆ ಹೀಗಿದೆ:
ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ “ಜೋಕ” ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ. ಆತನು ಶಿವನ ಗಣಗಲ್ಲಿರುವವನು, ಆತ ಗಣಪತಿಯೊಂದಿಗೆ ಬರುವನು, ಆದರೆ ಆತನಿಗೆ ಏಳು ದಿನಗಳ ಆಯಸ್ಸು- ಹೀಗೆ ಅನೇಕ ಕಥೆಗಳಿವೆ.
ಒಮ್ಮೆ ಮಳೆ ಹೋಗಿ ಬೆಳೆ ಒಣಗುತ್ತದೆ. ಆಗ ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ. ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂಬದು ಜನಪದ ಕಥೆಯಲ್ಲಿ ಉಲ್ಲೇಖವಾಗಿದೆ.
ಜೀವಿತದ ಏಳು ದಿನಗಳಲ್ಲಿ ಏಳು ಅವತಾರ ಪಡೆದು ಸ್ತ್ರೀಯರನ್ನು ಮೋಹಿಸುತ್ತಾನೆ. ಒಮ್ಮೆ ಮಡಿವಾಳ ಸಮುದಾಯದ ಯುವತಿ ಅವನನ್ನು ಇಷ್ಟಪಡುತ್ತಾಳೆ. ಜೋಕುಮಾರನನ್ನು ಸಹಿಸದ ಆ ಯುವತಿಯ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ. ಆ ತಲೆಯು ಒಬ್ಬ ಬೆಸ್ತರಿಗೆ ಸಿಗುತ್ತದೆ. ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸಿದರು ಎಂದು ಕಥೆಯಲ್ಲಿ ಇವನನ್ನು ವರ್ಣಿಸಲಾಗುತ್ತದೆ.
ಮೂರ್ತಿ ನಿರ್ಮಾಣ:
ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮ ಪಾಂಚಾಲರ ಮನೆಯಲ್ಲಿ. ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವದೊಂದಿಗೆ ದಕ್ಷಿಣೆ ಎಲೆ, ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ, ರವೆ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.
ಮೆರವಣಿಗೆ:
ವಾಲ್ಮೀಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ” ಎಲ್ಲವೂ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.
ಶಾಪ (ಚೌತಿ ಚಂದ್ರನ ರೀತಿ):
ಮಧ್ಯರಾತ್ರಿಯ ನಂತರವೇ ಜೋಕುಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಪ್ರಕೃತಿಯಿಂದ ವ್ಯಕ್ತನಾಗಿ ಅವ್ಯಕ್ತದ ಮಾರ್ಗ ತೋರುವ ಮೂರ್ತಿ: ಮೃಣ್ಮಯಿ
ಸಾವು:
ಮಹಿಳೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ “ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ” ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ. ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒನಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ.
ಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ. ಮರಳಿ ಕಣ್ಣು ಕಳೆದುಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಪಟ್ಟಣದ ಜಾಪಾನ್ ತೋಟದಲ್ಲಿ ಬಾವಿಯಲ್ಲಿ ಎಸೆಯುವುದು ಸಂಪ್ರದಾಯ.
ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು.
ಆತನ ಅಳಲು (ಶ್ರಾದ್ಧ)
ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ. ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡುಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ-ವಾಹನ ಖರೀದಿಸುವಂತಿಲ್ಲ, ಶುಭಕಾರ್ಯ ಮಾಡುವಂತಿಲ್ಲ ಎಂಬುದು ಜನಪದರ ಸ್ವಯಂಘೋಷಿತ ಸಂವಿಧಾನ.
ಜೋಕುಮಾರನ ಮರೆಯುವುದು:
ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.
ಹಾಡು:
ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ !
ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ!
ಮುಡಿತುಂಬಾ ಹೂವ ಮುಡಿದಂತ ಚೆಲುವಿನ ತನ್ನ ಮಡಿಯಂದಾ ಜೋಕುಮಾರ!
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Ganesh Chaturthi: ಶುದ್ಧ ಭಕ್ತಿಗೆ ಒಲಿಯುವ ಕರುಣಾಮಯ ಮೂರ್ತಿ
ಕರ್ನಾಟಕ
Eid Milad : ಡಿಜೆ ನಿಷೇಧ, ಪೂಜಾಸ್ಥಳಗಳ ಮುಂದೆ ಘೋಷಣೆ ಕೂಗುವಂತಿಲ್ಲ; ಈದ್ ಮೆರವಣಿಗೆಗೆ ಕಠಿಣ ನಿರ್ಬಂಧ
Eid Milad : ಈದ್ ಮಿಲಾದ್ ಹಬ್ಬದ ನಿಮಿತ್ತ ಬೆಂಗಳೂರು ಪೊಲೀಸರು ಮೆರವಣಿಗೆಗೆ ಕೆಲವೊಂದು ನಿರ್ಬಂಧ ವಿಧಿಸಿದ್ದಾರೆ. ಸಂಚಾರಿ ಪೊಲೀಸರು ಮಾರ್ಗ ಬದಲಾವಣೆ ವಿವರ ನೀಡಿದ್ದಾರೆ.
ಬೆಂಗಳೂರು: ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಮಿಲಾದ್‌ನ್ನು ( Eid milad festival) ಸೆಪ್ಟೆಂಬರ್ 28ರಂದು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಈದ್ ಹಬ್ಬದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕಡೆ ಮೆರವಣಿಗೆಗಳು (Eid Procession) ನಡೆಯಲಿವೆ. ಈ ವೇಳೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಿಂದ ಪೊಲೀಸ್ ಇಲಾಖೆ ಕೆಲವೊಂದು ನಿಬಂಧನೆಗಳನ್ನು ಜಾರಿ (Conditions from police department) ಮಾಡಿದೆ. ಅದರ ಜತೆಗೆ ಮೆರವಣಿಗೆಗಳು ಸುಗಮವಾಗಿ ಸಾಗುವಂತೆ ಸಂಚಾರದಲ್ಲೂ (Road traffic advisory) ವ್ಯತ್ಯಾಸ ಮಾಡಲಾಗಿದೆ. ಮಸೀದಿಗಳಲ್ಲಿ ಪ್ರಾರ್ಥನೆ (Prayer at Mosques) ಸಲ್ಲಿಸಿದ ಬಳಿಕ ಸಂಜೆ ಮೂರು ಗಂಟೆಯ ಹೊತ್ತಿಗೆ ಮೆರವಣಿಗೆ ಶುರುವಾಗಲಿದೆ.
ಈದ್ ಮಿಲಾದ್ ಹಬ್ಬದ ಪ್ರಯುಕ ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗಿದೆ. ಮುಖ್ಯವಾಗಿ ಮೆರವಣಿಗೆಯಲ್ಲಿ ಹೋಗುವಾಗ ಹರಿತವಾದ ಆಯುಧ ಹಿಡಿದುಕೊಂಡು ಹೋಗುವಂತಿಲ್ಲ, ಡಿಜೆ ಬಳಸುವಂತಿಲ್ಲ, ಅನ್ಯ ಧರ್ಮದ ಪೂಜಾ ಸ್ಥಳಗಳ ಮುಂದೆ ಘೋಷಣೆ ಕೂಗುವಂತಿಲ್ಲ ಎಂದು ಸೂಚಿಸಲಾಗಿದೆ.
ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ, ಮೆರವಣಿಗೆಯಲ್ಲಿ ಸ್ಥಬ್ದ ಚಿತ್ರಗಳು, ಧ್ವನಿವರ್ಧಕಗಳನ್ನು ಉಪಯೋಗಿಸಿಕೊಂಡು, ನಡಿಗೆಯಲ್ಲಿ ವೈ.ಎಂ.ಸಿ.ಎ. ಮೈದಾನ, ಮಿಲ್ಲರ್‌ರಸ್ತೆ ಬುದ್ದುಸಾಬ್ ಈದ್ಧಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್‌ಜೀ ಗುಂಟಾ ಮೈದಾನಗಳಲ್ಲಿ ಹಾಗೂ ಇತರೆಡೆ ಕಾರ್ಯಕ್ರಮಗಳ ನಡೆಯವ ಹಿನ್ನಲೆ ಹಬ್ಬದ ದಿನದಂದು ಈ ಕೆಳಕಂಡ ಸೂಚನೆಗಳನ್ನು ಅನುಸರಿಸಬೇಕು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಮೆರವಣಿಗೆ ಸಾಗುವ ಹಾದಿಯಲ್ಲಿ ಸಾರ್ವಜನಿಕರಿಗೆ ಆಡಚಣೆ ಉಂಟಾಗದಂತೆ ಸ್ವಯಂಸೇವಕರು ಹಾಗೂ ಆಯೋಜಕರು ರಸ್ತೆಯ ಎರಡು ಬದಿಯಲ್ಲಿ ನಿಂತು ಮೆರವಣಿಗೆಗಾರರಿಗೆ ಸೂಕ್ತ ನಿರ್ದೇಶನವನ್ನು ನೀಡಿ ಮೆರವಣಿಗೆಯನ್ನು ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸುವುದು ಹಾಗೂ ಸಾರ್ವಜನಿಕ ಸಂಚಾರ ಸುಗಮವಾಗಿ ಸಾಗಲು ಅನುವು ಮಾಡುವುದು.
- ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಹರಿತವಾದ ವಸ್ತುಗಳನ್ನು ಹೊಂದಿರಬಾರದು.
- ಈದ್ ಹಬ್ಬದ ದಿನದಂದು ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದು.
- ಈದ್ ಹಬ್ಬದ ಪ್ರಯುಕ್ತ ಸ್ತಬ್ದ ಚಿತ್ರಗಳು ಯಾವುದೇ ಕೋಮು ಗಲಭೆಗೆ ಅವಕಾಶ ನೀಡದಂತೆ ಇರಬೇಕು.
- ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ ಚರ್ಚ್‌ಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.
- ಮೆರವಣಿಗೆಯ ಸಮಯದಲ್ಲಿ ಆಯೋಜಕರು ವಿದ್ಯುತ್ ಇಲಾಖೆಯಿಂದ ಸಿಬ್ಬಂದಿಯನ್ನು ನೇಮಿಸಿಕೊಂಡು ಯಾವುದೇ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳತಕ್ಕದ್ದು.
- ಈದ್ ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ಅಯೋಜಕರು ಬೆಂಕಿನಿಂದಿಸುವ ಸಾಮಗ್ರಿಯನ್ನು ಹೊಂದಿರಬೇಕು.
- ರಾತ್ರಿ ಮೆರವಣಿಗೆ ಮುಗಿದ ನಂತರ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಇರಬಾರದು.
ಗಮನಿಸಿ, ಈದ್ ಮೆರವಣಿಗೆ ನಿಮಿತ್ತ ಸಂಚಾರ ನಿರ್ಬಂಧ, ಮಾರ್ಗ ಬದಲು
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ಬೆಂಗಳೂರಿನ ಕೆಲವೆಡೆ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ನಗರ ಸಂಚಾರ ಪೊಲೀಸರು ಮಾರ್ಗಸೂಚಿ (Bangalore Traffic Advisory) ಬಿಡುಗಡೆ ಮಾಡಿದ್ದಾರೆ. ನೃಪತುಂಗ, ಅಂಬೇಡ್ಕರ್ ರಸ್ತೆ, ನಾಯಂಡಹಳ್ಳಿ ಜಂಕ್ಷನ್, ಕಿಂಕೋ ಜಂಕ್ಷನ್, ಬಾಪೂಜಿನಗರ, ಮಾರ್ಕೆಟ್ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಬದಲಿ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಪೊಲೀಸರು ಸೂಚಿಸಿದ್ದಾರೆ.
ನಗರದ ನಾಗವಾರ ಜಂಕ್ಷನ್, ನೇತಾಜಿ ಜಂಕ್ಷನ್, ಲಾಜರ್ ರಸ್ತೆ, MM ರಸ್ತೆ ಜಂಕ್ಷನ್, HM ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಹಿನ್ನೆಲೆ ದರ್ಗಾಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: Salwar Suit Fashion: ಈದ್ ಮಿಲಾದ್ ಫೆಸ್ಟಿವ್ ಸಂಭ್ರಮಕ್ಕೆ ಎಂಟ್ರಿ ನೀಡಿದ ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್ಸ್
ಈ ಕುರಿತು ಬೆಂಗಳೂರು ಪೊಲೀಸರು ನೀಡಿರುವ ಮಾರ್ಗಸೂಚಿಗಳು ಹೀಗಿವೆ
ನೃಪತುಂಗ ರಸ್ತೆಗೆ ಬದಲಿ : ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನ ಸವಾರರು ಕೆ.ಆರ್ ಸರ್ಕಲ್ ಬಳಿ ಎಡ ತಿರುವು ಪಡೆದು ಡಾ. ಅಂಬೇಡ್ಕರ್ ರಸ್ತೆಯಲ್ಲಿ ಸಾಗಿ ಬಾಳೇಕುಂದ್ರಿ ಸರ್ಕಲ್ ಕ್ವೀನ್ಸ್ ರಸ್ತೆ ಮೂಲಕ ಮುಂದಕ್ಕೆ ತೆರಳುವುದು.
ಡಾ.ಎ.ಆರ್. ಅಂಬೇಡ್ಕರ್ ರಸ್ತೆ: ಬಾಳೇಕುಂದ್ರಿ ಸರ್ಕಲ್‌ನಿಂದ ಸಿಟಿ ಮಾರ್ಕೆಟ್ ಕಡೆಗೆ ಸಂಚರಿಸುವ ಸವಾರರು ಕ್ವೀನ್ಸ್ ರಸ್ತೆ, ಸಿದ್ದಲಿಂಗಯ್ಯ ಸರ್ಕಲ್ ಮೂಲಕ ಸಂಚರಿಸುವುದು.
ನಾಯಂಡನಹಳ್ಳಿ ಜಂಕ್ಷನ್: ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲ ನಾಯಂಡನಹಳ್ಳಿ ಅಂಗ್ಲಸ್ ನಲ್ಲಿ ಎಡ ತಿರುವು ಪಡೆದು ನಾಗರಭಾವಿ ರಿಂಗ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ ಹಾಗೂ ಚಂದ್ರಲೇಔಟ್ ವಿಜಯನಗರ ಮುಖೇನ ಸಂಚರಿಸಬಹುದಾಗಿರುತ್ತದೆ.
ಕಿಂಕೋ ಜಂಕ್ಷನ್: ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣಿ ಹೆಚ್ಚಾದಲ್ಲಿ ಕಿಂಕೋ ಜಂಕ್ಷನ್‌ನಲ್ಲ ಎಡತಿರುವು ಪಡೆದು ವಿಜಯನಗರ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ
ಬಾಪೂಜಿ ನಗರ: ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲಿ ವಿಜಯನಗರದ ಕಡೆಯಿಂದ ಬರುವ ವಾಹನಗಳು ಮೈಸೂರು ಕಡೆಗೆ ಚಲಿಸಲು ಚಂದ್ರಲೇಔಟ್‌ನಿಂದ ಬಲ ತಿರುವು ಪಡೆದು ನಾಗರಭಾವಿ ಸರ್ಕಲ್ ಹಾಗೂ ರಿಂಗ್ ರಸ್ತೆ ಮುಖಾಂತರ ಕೆಂಗೇರಿ ಉಪ ನಗರ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ
ಮಾರ್ಕೆಟ್ ಸರ್ಕಲ್: ಟೌನ್ ಹಾಲ್ ಕಡೆಗೆ ಸಂಚಾರ ದಟ್ಟಣೆ ಉಂಟಾದಲ್ಲಿ ಬಸಪ್ಪ ಸರ್ಕಲ್ ಕಡೆಗೆ ಬಲತಿರುವು ನೀಡಿ ಅಥವಾ ಅವಿನ್ಯೂ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗುವುದು.
'ಸಂಚಾರ ಸಲಹೆ'
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) September 27, 2023
'Traffic advisory'
ದಿನಾಂಕ 28/09/2023 ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ, ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ನೃಪತುಂಗ ರಸ್ತೆಯ ವೈ.ಎಂ.ಸಿ.ಎ ಮೈದಾನದಕ್ಕೆ ಮದ್ಯಾಹ್ನ 03-00 ರಿಂದ ರಾತ್ರಿ 09-00 ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಸ್ಥಳಗಳಿಂದ ಆಗಮಿಸುವುದರಿಂದ ವಾಹನ ಸವಾರರು /… pic.twitter.com/fN36vyVkyz
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳು ಇಂತಿವೆ
1.ಥಣಿಸಂದ್ರ ಕಡೆಯಿಂದ ಶಿವಾಜಿನಗರ ಕಡಗ ಬರುವ ವಾಹನಗಳು ನಾಗವಾರ ಜಂಕ್ಷನ್‌ನಿಂದ ಎಡತಿರುವು – ಹೆಣ್ಣೂರು ಜಂಕ್ಷನ್ – ಬಲತಿರುವು – ಸಿದ್ಧಪ್ಪ ರೆಡ್ಡಿ ಜಂಕ್ಷನ್ – ಅಯೋಧ್ಯ ಜಂಗ್ಟನ್-ಅಂಗರಾಜಪುರಂ ಹೈ ಓವರ್ ಮೂಲಕ ರಾಬರ್ಟ್‌ಸನ್ ರಸ್ತೆ ಜಂಕ್ಷನ್‌ನಲ್ಲ ಬಲ ತಿರುವು – ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪುವುದು.
2. ಶಿವಾಜನಗರದ ಕಡೆಯಿಂದ ನಾಗವಾರ ಅಂಕ್ಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು – ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಡ್ ರಸ್ತೆ ತಲುಪಿ ವೀಲರ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಬಹುದು.
3. ಆರ್.ಅರ್. ನಗರದಿಂದ ಮತ್ತು ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಟಾಕೀಸ್ ಬಳಿ ಎಡ ತಿರುವು ವರದು ವೀರಣ್ಣ ಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ಕಡೆಗೆ ಸಂಚರಿಸಬಹುದು.
4. ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗವಾರ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನೇತಾಜಿ ಜಂಕ್ಷನ್‌ನಿಂದ – ಬಲತಿರುವು ಮಾಸ್ಕ್ ಜಂಕ್ಷನ್ ಲಾಟರ್ ರಸ್ತೆ ಎಂ.ಎಂ.ರಸ್ತೆ ಜಂಕ್ಷನ್ – ಎಡತಿರುವು – ನಾಟರಿ – ರಸ್ತೆ ಹೆಣ್ಣೂರು ರಸ್ತೆ ಜಂಕ್ಷನ್ – ಬಲತಿರುವು – ಎಚ್.ಎಂ.ರಸ್ತೆ ಡೇವಿಸ್ ರಸ್ತೆ ಜಂಕ್ಷನ್ ಮೂಲಕ ಲಿಂಗರಾಜಪುರಂ ಫ್ಲೈಓವರ್ ಮುಖೇನ ಹೆಣ್ಣೂರು ಕಡೆಗೆ ಸಂಚರಿಸಬಹುದು.
5. ಲಾಜರ್ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ನಲ್ಲಿ ಮಾಸ್ಕ್ ಸರ್ಕಲ್ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಲಾಜರ್ ರಸ್ತೆಯಲ್ಲಿ ಮುಂದುವರೆದು ಸಿಂಧಿ ಕಾಲೋನಿ ಜಂಕ್ಷನ್ –ವೀಲರ್ ರಸ್ತೆ ಮೂಲಕ ಕೀರ್ತಿ ಸಾಗರ್ ಥಾಮಸ್ ಬೇಕರಿ – ಥಾಮಸ್ ಜಂಕ್ಷನ್ – ಬಲತಿರುವು – ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹಡ್ಸನ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
6. ಎಚ್.ಎಂ.ರಸ್ತೆ ಮೂಲಕ ವಾಟರಿ ರಸ್ತೆ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಹೆಚ್.ಎಂ.ರಸ್ತೆಯಲ್ಲಿ ‘ಕಡ್ಡಾಯವಾಗಿ ಎಡ ತಿರುವು ಪಡೆದು ಲಾಜರ್ ರಸ್ತೆ – ಸಿಂಧಿ ಕಾಲೋನಿ ಜಂಕ್ಷನ್ – ವೀಲರ್ ರಸ್ತೆ ಮೂಲಕ ಕೀರ್ತಿ – ಸಾಗರ್ – ಥಾಮಸ್ ಬೇಕರಿ – ಥಾಮಸ್ ಕಫ ಅಂಗ್ಟನ್ – ಬಲತಿರುವು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹನ್ನ = ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
-
ಪ್ರಮುಖ ಸುದ್ದಿ24 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಕಿರುತೆರೆ14 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ದೇಶ19 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕರ್ನಾಟಕ15 hours ago
Namma Metro: ಮೆಟ್ರೋ ಟ್ರ್ಯಾಕ್ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
-
ಕ್ರೈಂ20 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?
-
ಕರ್ನಾಟಕ13 hours ago
Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ವೆಹಿಕಲ್; ಎಂದಿನಂತೆ ಮೆಟ್ರೋ ಓಡಾಟ
-
ಉತ್ತರ ಕನ್ನಡ15 hours ago
Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!
-
ಕರ್ನಾಟಕ11 hours ago
Lecturer Death : ಬಿಜಿಎಸ್ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ